ಪುಟ:ಪ್ರಬಂಧಮಂಜರಿ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಾಲಿತ್ಯ, وا ೧ | ಕನ್ನಡ, ಸಂಸ್ಕೃತ, ಆಡಿದಮಾತಿಗೆ ತಪ್ಪದಿರುವುದು =ಸತ್ಯಸಂಧತ. ಇದು ಒಳ್ಳೆಯದು. ಇದು ಕೆಟ್ಟು ದು ಎಂಬ ಅರಿವುಳ್ಳವನು =ವಿವೇಕಿ ಮಾಡಿದ ಉಪಕಾರವನ್ನು ಸ್ಮರಿಸುವ, =ಕೃತಜ್ಞ, ಸನ್ಮಾರ್ಗದಲ್ಲಿ ನಡೆದುಕೊಳ್ಳುವವರಿಗೆ ಈ ಕಾಲದಲ್ಲಿ ಒಳ್ಳೆಯ ಹೆಸರು ಬರುವುದಿಲ್ಲ. =ಧರ್ಮಕ್ಕೆ ಇದುಕಾಲವಲ್ಲ, (2) ಸಮಾಸಗಳನ್ನು ಮಾಡುವುದು. ಉದಾ:- ಬಡವನಾದ ಹುಡುಗನ್ನು =ಬಡಹುಡುಗ ಮನೆಯಲ್ಲಿ ಮಾಡಬೇಕಾದ ಕೆಲಸ, =ಮನೆಗೆಲಸ ದೇವಪೂಜಕನಾದ ಬ್ರಾಹ್ಮಣ | =ದೇವಬ್ರಾಹ್ಮಣ ಓರೆಯಾದ ಕಣ್ಣು ಯಾರಿಗುಂಟೋ ಅವನು, =ಓರೆಗಣ್ಣ, ಕುಟುಂಬದೊಡನೆ ಕೂಡಿದವನು =ಸಕುಟುಂಬ 4 ಆ ಕಲ್ಲೆದೆಯ ಚಪ್ಪಟೆಮನಿಗಿನ ಕೊಳಕಟಾರ್ಟರನ್ನೂ ಅವರ ಗಂಟುಮೂತಿಯ ಕೂರ. ಗಣ್ಣಿನ ಸಿಟ್ಟುದನಿಯ ಕೇಳಿ ಕಾಲಿನ ಕುಂಟದೊರಯನ್ನೂ ಹಿಂದೂ ಜನರು ಬಹುಕಾಲದವರೆಗೂ ಮರೆಯಲಿಲ್ಲ” (3) ಮಿಶ್ರವಾಕ್ಯ, ಸಂಯೋಜಿತವಾಕ್ಯಗಳಿಗೆ ಬದಲಾಗಿ ಸಾಮಾನ್ಯ ವಾಕ್ಯವನ್ನು ಉಪಯೋಗಿಸುವುದು. ಉದಾ ಅವನು ಹೇಗೆ ಯುದ್ಧ ಮಾಡಬೇಕೆಂದು ಹೇಳುತ್ತಿದ್ದನೋ ಹಾಗೆ ಯುದ್ಧ ಮಾಡುತ್ತಿದ್ದರು= ಅವನ ಹೇಳಿಕೆಯ ಮೇಲೆ ಯುದ್ಧ ಮಾಡುತ್ತಿದ್ದರು, ಸೋತವರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವರಲ್ಲದೆ, ಉತ್ಸಾಹವನ್ನೂ ಜಾತಿಮರ್ಯಾದೆಯನ್ನೂ ಹಾಳುಮಾಡಿಕೊಳ್ಳುವರು. =ಸೋತವರ ಸ್ವಾತಂತ್ರ ದ ಸಂಗಡ ಅವರ ಉತ್ಸಾಹವೂ ಜಾತಿಮರ್ಯಾದೆಯೂ ಹೋಗುವುವು.” ಪುನರುಕ್ತಿಯಿಂದಲೂ ಶಬ್ಯಾಧಿಕ್ಯದಿಂದಲೂ ಸಂಕ್ಷೇಪವೆಂಬ ಗುಣಕ್ಕೆ ಭಂಗವು ಬಲದು, ವಾಕ್ಯಗಳಿಗೆ ಬಿಗಿ ತಪ್ಪಿ ಅರ್ಥವು ವಿಶದವಾಗುವುದಿಲ್ಲ. (1) ಪುನರುಕ್ತಿ (Pleonasm):- ಒಂದು ಶಬ್ದವನ್ನು ಹಲವು ಬಾರಿ ಪ್ರಯೋಗಿಸುವುದು, ಒಂದೇ ಅರ್ಥವುಳ್ಳ ಬೇರೆ ಬೇರೆ ಶಬ್ದಗಳನ್ನು ಪ್ರಯೋಗಿಸುವುದು. ಹೇಳಿದ ತಾತ್ಪರ್ಯವನ್ನೇ ಬೇರೆ ಮಾತುಗಳಲ್ಲಿ ಮತ್ತೆ ತಿಳಿಯಪಡಿಸುವುದು. ಉದಾ:-