ಪುಟ:ಪ್ರಬಂಧಮಂಜರಿ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ವಾಕ್ಕಬೃಂದದ ಸ್ವರೂಪ (2) ಹಿಂದಿನ ವಾಕ್ಯದ ಒಂದೆರಡು ಶಬ್ದ ಗಳನ್ನಾಗಲಿ ಅವುಗಳ ತಾತ್ಪರ್ಯವನ್ನಾಗಲಿ ಮತ್ತೆ ಹೇಳುವುದರಿಂದಲೂ ವಾಕ್ಯ ಸಂಬಂಧವನ್ನು ತೋರಿಸಬಹುದು. ಉದಾ:- “ಆ ಕೋಣೆಯಲ್ಲಿ ನೋಟಕರ ಕಣ್ಣುಗಳಿಗೆ ಸೊಗಸನ್ನು ಬೀರಿ ಮನವನ್ನು ಎಳೆದುಕೊಳ್ಳುವ ಅನೇಕ ಪದಾರ್ಥಗಳಿದ್ದುವು. ಅಂಥ ಪದಾರ್ಥಗಳನ್ನು ಅವರು ಕೊಟ್ಟಿದಂದಿನಿಂದ ಎಂದೂ ನೋಡಿರಲಿಲ್ಲ.” - “ಮಾನಸಿಂಹನು ಬರುವ ವರ್ತಮಾನವನ್ನು ಕೇಳಿ ಅವನ ಅಭ್ಯರ್ಥಿನ ನಿಮಿತ್ತವಾಗಿ ಆ ದು: ರ್ಗದ ಸವಿಾಪದಲ್ಲಿದ್ದ ಉದಯಸಾಗರಕ್ಕೆ ಹೋದನು, ಈ ಸರೋವರದ ತೀರದಲ್ಲಿ ಪ್ರತಾಪನ ಮಗನು ಮಾನಸಿಂಹನಿಗೆ ಔತನ ಮಾಡುವುದಕ್ಕೆ ಬೇಕಾದುದನ್ನೆಲ್ಲಾ ಅಣಿಮಾಡಿದನು? (3) ಶಬ್ದ ಕ್ರಮದಲ್ಲಿ ವ್ಯತ್ಯಾಸಮಾಡುವುದರಿಂದ ಸಂಬಂಧವನ್ನು ತೋರಿಸಬಹುದು. ಉದಾ. “ಮಹಮ್ಮದೀಯರು ದಕ್ಷಿಣದೇಶಕ್ಕೆ ದಂಡೆತ್ತಿ ಬಂದ ಮುತ್ತಿನ ಮೊದಲನೆಯ ಮುತ್ತಿಗೆಂದೇ” ಎನ್ನುವುದಕ್ಕಿಂತ ಇದೇ ಮಹಮ್ಮದೀಯರು ದಕ್ಷಿಣದೇಶಕ್ಕೆ ದಂಡೆತ್ತಿ ಬಂದು ಮುತ್ತಿದ ಮೊದಲ ನೆಯ ಮುತ್ತಿಗೆ” ಎನ್ನುವುದು, ಹಿಂದಿನ ವಾಕ್ಯದೊಡನೆ ಸಂಬಂಧವನ್ನು ಸ್ಪಷ್ಟ ಪಡಿಸುತ್ತದೆ. - “ದಕ್ಷಿಣದೇಶದಲ್ಲಿ ನರ್ಮದಾ ಕೃಷ್ಣಾ ನದಿಗಳಿಗೆ ಮಧ್ಯದಲ್ಲಿದ್ದ ಸೀಮೆಯೆಲ್ಲಾ ಬಾಸಿಸಂಸ್ಥಾನಕ್ಕೆ ವಳಿತವಾಗಿದ್ದಿತು. ಈ ಸಂಸ್ಥಾನವು ಮಹಮ್ಮದ್ ತೊಗ್ಲಾಕಿನ ಸೇನಾನಾಯಕನಾಗಿದ್ದ ಒಬ್ಬ ಆಫ್ಘಾನರವನಿಂದ ಸ್ಥಾಪಿತವಾಯಿತು.” ಇಲ್ಲಿ 4 ಈ ಸಂಸ್ತಾನವು” ಎಂಬುದು 4 ಸ್ಥಾಪಿತವಾಯಿತು” ಎಂಬುದರ ಹಿಂದೆ ಇದರ ಪೂರ್ವ ವಾಕ್ಯದ ಸಂಬಂಧವು ಅಷ್ಟು ವ್ಯಕ್ತವಾಗುವುದಿಲ್ಲ, - II, ಸಾಮಾನ್ಯವಾಗಿ ವಾಕ್ಯವೃಂದದ ಮೊದಲನೆಯ ವಾಕ್ಯವು ಅದರಲ್ಲಿ ವರ್ಣಿಸುವ ಮುಖ್ಯಾಭಿಪ್ರಾಯವನ್ನು ಸೂಚಿಸುವಂತಿರಬೇಕು. ಅದು ಪೀಠಿಕೆಯಾಗಿಯೂ ಇರುವುದುಂಟು, ಇದಕ್ಕುದಾಹರಣೆಗಳು ಮುಂದೆ ಬರೆದಿರುವ ಪ್ರಬಂಧಗಳಲ್ಲಿ ದೊರೆಯುವುವು. ಹೇಗೆಂದರೆ: ಇಂಥ ಎಷ್ಟು ನಿಬಂಧನೆಗಳನ್ನು ಮಾಡಿಕೊಂಡರೂ ಯುದ್ಧವಿರುವವರೆಗೂ ಅದರ ಅಸಂಖ್ಯಾತವಾದ ಕೆಡಕುಗಳು ತಪ್ಪುವುದಿಲ್ಲ.” (ಪ್ರಬಂಧ 39, ವಾಕ್ಯ ಬೃಂದ 3.) ಈ ವಾಕ್ಯವು ಆ ವಾಕ್ಯವೃಂದದಲ್ಲಿ ಯುದ್ಧದ ಕಡಕುಗಳು ವರ್ಣಿಸಲ್ಪಟ್ಟಿವೆಯೆಂದು ಸೂಚಿಸುವುದು,