ಪುಟ:ಪ್ರಬಂಧಮಂಜರಿ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦ4 ಪ್ರಬಂಧಮಂಜರಿ.ಮೊದಲನೆಯ ಭಾಗ ) _2, ಪಂತದವರ್ಣನೆ: ತಾರೀಕು-ಸ್ಥಳ-ನೋಡಲು ಬಂದಿದ್ದ ವರು--ಬೆಂಗಳೂರವರೇ ಮೊದಲು ಆಡುವಂತ ಆದುದು-ಆಟದ ಮುಖ್ಯ ಸಂಗತಿಗಳು : ಬಹಳ ಹೊತ್ತಾಡಿದರೂ ಮುಗಿಯದಿರುವುದು ಬೆಂಗಳೂರವರು ಶಕ್ತರಾದುದರಿಂದ ಗೆದ್ದುದು 3, ಸಮಾ (Conclusion):ಇಂಥ ಆಟಗಳು ಚಟವಟಿಕೆ, ಸ್ಪರ್ಧೆ, ಐಕಮತ್ಯ ಇವುಗಳನ್ನು ಹೆಚ್ಚಿಸುವುವು-ಮೈಸೂರಿನವರಲ್ಲಿ ಸ್ವಲ್ಪ ಒಗ್ಗಟ್ಟು ಕಡಮೆ-ಅದರಿಂದ ಅವರ ಸೋಲು-ಅವರು ಸ್ವಾರ್ಥಪರತೆಯನ್ನು ಬಿಟ್ಟು ಎಲ್ಲರೂ ಒಟ್ಟಾಗಿ ನಡೆದುಕೊಳ್ಳಬೇಕು. ಸೂಚನೆ:-ಒಂದು ಕಟ್ಟಡವನ್ನು ಕಟ್ಟುವಾಗ ಕಾಲಾವಧಿ ಬೇಕು ಕಟ್ಟಡವು ಮುಗಿದಮೇಲೆ ಅದು ಬೇಡ. ಹಾಗೆಯೇ ಮೇಲೆ ಹೇಳಿದ ಹೆಗ್ಗುರುತುಗಳು ಪ್ರಬಂಧವನ್ನು ಸರಿಯಾಗಿ ಬರೆವುದಕ್ಕೆ ಮೊದಲು ಬೇಕೇ ಹೊರತು, ಅದನ್ನು ಬರೆದಮೇಲೆ ಇವುಗಳಿಂದ ಪ್ರಯೋಜನವಿಲ್ಲ. ಈ ಹೆಗ್ಗುರುತುಗಳನ್ನೂ ಪ್ರಬಂಧದಲ್ಲಿ ಬರೆಯಕೂಡದು. ಈ ಪಟ್ಟಿಯನ್ನು ಸ್ವಲ್ಪವೂ ತಪ್ಪದೆ ಅನುಸರಿಸಬೇಕಾದುದೂ ಇಲ್ಲ. ಪ್ರಬಂಧವನ್ನು ಬರೆವಾಗ ಈ ಪಟ್ಟಿಯಲ್ಲಿಲ್ಲದ ಹೊಸವಿಷಯಗಳನ್ನೂ ತಕ್ಕ ಕಡೆ ಸೇರಿಸಬಹುದು. ಮಾದರಿಗಾಗಿ ಕಾಂಡಿನ ಪಂತದ ವಿಷಯಕ್ಕೆ ಪಟ್ಟಿ - ಯನ್ನು ಕೊಟ್ಟಿದೆ. ಉಳಿದ ವಿಷಯಗಳಿಗೂ ಹೀಗೆಯೇ ಪಟ್ಟಿಯನ್ನು ನಿರ್ಮಿಸಿಕೊಳ್ಳಬೇಕು. (c) ಯಾವುದಾದರೂ ಕಾಳಗವನ್ನು ಕುರಿತ ಪ್ರಬಂಧವು ಈ ಮುಂದಣ ಸಂಗತಿಗಳನ್ನು ಒಳಗೊಂಡಿರಬೇಕು: 1. ಕಾಳಗ ನಡೆದ ಕಾಲ. 2, ಪೀಠಿಕೆ: _ಕಾರಣ-ಸಾಮಾನ್ಯ ಕಾರಣ-ತಾತ್ಕಾಲಿಕ ಕಾರಣ-ಯಾವ ವಿಷಯಗಳಲ್ಲಿ ಜಗಳ ಹುಟ್ಟಿದುದು ? 3. ಕಾಳಗ ನಡೆವುದಕ್ಕೆ ಮುಂಚೆಯಿದ್ದ ಸಂದರ್ಭಗಳು (೨) ಯುದ್ಧರಂಗ: ಇದು ಮೈದಾನವೇ, ಕಾಡೇ-ಬೆಟ್ಟದ ಜರಿಯೇ, ತಟ್ಟಿಯಾದ ನೆಲವೇ? (2) ಹೋರಾಡುವ ಕಕ್ಷೆಗಳು : ಅವರ ಜಾತಿ, ಸ್ಥಿತಿ, ಸಂಖ್ಯೆ-ಕಾಲಾಳು, ರಾವುತರು, ಆಯುಧಪಾಣಿಗಳು ಸೇನಾನಾಯಕರು, (3) ಸೈನ್ಯಗಳು ಆಕ್ರಮಿಸಿಕೊಂಡ ಭೂಮಿ-ಇದರ ಗುಣಾವಗುಣಗಳು, 4. ಕಾಳಗ:-(a) ದಿನದಲ್ಲಿ ಯಾವಾಗ, ಕಾಲಸ್ಥಿತಿ-ಎಷ್ಟು ಹೊತ್ತಿನವರೆಗೆ ? (8) ಯುದ್ಧದ ವಿವರ. ಅದರ ಫಲಿತಾಂಶಕ್ಕೆ ಮೂಲ ಕಾರಣವಾದ ಸಂಗತಿ. (c) ಎರಡು ಕಡೆಯ ಆದ ನಷ್ಟ,