ಪುಟ:ಪ್ರಬಂಧಮಂಜರಿ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಪ್ರಬಂಧಮಂಜರಿ.ಮೊದಲನೆಯ ಭಾಗ (3) ಆತನು ಮೊದಲು ಮನಸ್ಸಿನಲ್ಲಿ ಮಾಡಿಕೊಂಡಿದ್ದ ವೃತ್ತಿ ಅದಕ್ಕೆ ಯೋಗ್ಯತ- ಕೊನೆಗೆ ಯಾವ ಕಾರಣಗಳಿಂದ ಹೇಗೆ ಪರಿಣಾಮ ? (4) ಜೀವಮಾನ-ಯಾವ ದೊಡ್ಡ ಕೆಲಸಗಳಿಂದ ಹೆಸರುಗೊಂಡದ್ದು ? (6) ಕೊನೆಗಾಲ-ಸತ್ತ ಸ್ಥಲ ಮತ್ತು ಕಾಲ. (6) ಸಾಮಾನ್ಯ ವಿಚಾರ : ಸ್ವಭಾವ, ಸಾಮರ್ಥ್ಯಗಳ ವಿಷಯಗಳಲ್ಲಿ ಲೇಖಕನಿಗೆ ತರು. ವುದು-ಹೋಲಿಕಗಳು-ಆತನ ಕಾಲದಲ್ಲಿದ್ದವರು, ಆ ಮೇಲೆ ಬಂದವರು, ಇವರಿಗೆ ಆತನ ಜೀವ, ಮಾನದಿಂದ ಫಲ. (7) ಉಚಿತವಾದ ಗ್ರಂಥಸ್ಥ ವಚನ ಸೂಚನೆ:=ಒಬ್ಬನ ಜೀವನಚರಿತಯನ್ನು ಬರವಾಗ ಅವನು” ಅಥವಾ ಆತನು” ಎಂಬ ಪದವನ್ನು ಪ್ರತಿವಾಕ್ಯದ ಆದಿಯಲ್ಲಿಯೂ ಒಂದೇ ವಿಧವಾಗಿ ಬರೆಯಬಾರದು, =೫೫ III, ವಿಮರ್ಶನ (Reflective Composition). ಇದುವರೆಗೂ ಚರ್ಚಿಸಿದ ವಿಷಯಗಳು ಇಂದ್ರಿಯಗೋಚರವಾದ ವಸ್ತುಗಳನ್ನೂ ವೃತ್ತಾಂತಗಳನ್ನೂ ಕುರಿತವುಗಳು; ಇದು ಮನೋಭಾವಗಳನ್ನೂ ವಸ್ತು ಧರ್ಮಗಳನ್ನೂ ಕುರಿತದ್ದು. ಸ್ನೇಹ, ದಯೆ, ಧೈರ್ಯ, ತಾಳ್ಮೆ, ಕೋಪ, ದ್ವೇಷ, ಅಹಂಕಾರ, ಭಯ, ನೀತಿ ಮುಂತಾದುವು ಕಣ್ಣಿಗೆ ಕಾಣುವುದಿಲ್ಲವಷ್ಟೆ. ಇವುಗಳ ವಿಷಯವಾಗಿ ಬರೆಯಲು ಬಹಳ ಅನುಭವ ಬೇಕು. ಏಕೆಂದರೆ, ಇದು ನಡೆದ ಸಂಗತಿಯನ್ನು ನಡೆದಹಾಗೂ, ಇದ್ದ ಸ್ಥಿತಿಯನ್ನು ಇದ್ದ ಹಾಗೂ ಬರೆವಂತೆಯಲ್ಲ. ಸ್ವಬುದ್ದಿ ಬಲದಿಂದಲೇ ಬಹಳ ವಿಚಾರಮಾಡಿ, ತೋರಿದ ಅಭಿಪ್ರಾಯಗಳನ್ನು ಬರೆಯಬೇಕು. ಆದುದರಿಂದ ಈ ತರದ ಪ್ರಬಂಧವನ್ನು ಬರೆವುದು ಕಠಿನವು. ಪರೀಕ್ಷೆಗಳಲ್ಲಿ ಕೊಡತಕ್ಕ ವಿಷಯಗಳು ವಿಶೇಷವಾಗಿ ಇಂಥವುಗಳೇ, ಇಂಥ ವಿಷಯಗಳಲ್ಲಿ ಯಾವುದನ್ನು ಕೊಟ್ಟರೂ ಅನುಕೂಲಿಸುವಂತೆ ಒಂದೇ ವಿಧವಾದ ಪಟ್ಟಿಯನ್ನು ಹಿಂದಿನಂತೆ ಇಲ್ಲಿಯೂ ಹೇಳಿಕೊಡಲಾಗುವುದಿಲ್ಲ; ಏಕೆಂದರೆ, ಒಂದೊಂದು ವಿಷಯ. ನನ್ನ ಕುರಿತು ಒಂದೊಂದು ಕ್ರಮವನ್ನನುಸರಿಸಿ ಬರೆಯಬೇಕಾಗುವುದು. ಆದರೂ ಈ ಕೆಳಗೆ ಬರೆದಿರುವ ಅಂಶಗಳನ್ನು ಇಂತಹ ಪ್ರಬಂಧಗಳೆಲ್ಲ ಪ್ರಾಯಶಃ ಒಳಗೊಂಡಿರಬೇಕು: