ಪುಟ:ಪ್ರಬಂಧಮಂಜರಿ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಬಂಧಮಂಜರಿ-ಮೊದಲನೆಯ ಭಾಗ, ಪ್ರಬಂಧವನ್ನು ಬರೆವುದಕ್ಕೆ ಮುಂಚೆ ವಿಷಯವನ್ನು ಚನ್ನಾಗಿ ಪರ್ಯಾಲೋಚಿಸಬೇಕು. ತೋರಿದ ಅಭಿಪ್ರಾಯಗಳನ್ನು ಸಂಕ್ಷೇಪದಿಂದ ಪ್ರಕರ ಣಗಳಾಗಿ ವಿಂಗಡಿಸಿ ಬೇರೊಂದು ಕಡೆ ವಿರಳವಾಗಿ ಬರೆದಿಟ್ಟು ಕೊಳ್ಳಬೇಕು. ಪ್ರಕರಣಗಳಲ್ಲಿ ಒಂದಾದ ಮೇಲೊಂದು ಸಹಜವಾಗಿ ತೋರುವಂತೆ ಕ್ರಮವಿರಬೇಕು. ಹೀಗೆ ಪ್ರಬಂಧದಲ್ಲಿ ವಿವರಿಸಬೇಕಾದ ಮುಖ್ಯಾಂಶಗಳನ್ನು ಸೂಚಿಸಿದ ಮೇಲೆ ಪ್ರತಿಪ್ರಕರಣದ ಕಳಗೆ ಬಿಟ್ಟಿರುವ ಜಾಗದಲ್ಲಿ ಇನ್ನೂ ಹೆಚ್ಚಾಗಿ ತೋರಿಬರುವ ದೃಷ್ಟಾಂತವೇ ಮೊದಲಾದ ಸಣ್ಣ ಸಣ್ಣ ಭಾಗ ಗಳನ್ನು ಕಾಣಿಸಬೇಕು. ಹೀಗೆಮೊದಲೇ ಒಂದು ಕಟ್ಟಿ (Outline)ಯನ್ನೂ ಬರೆದಿಟ್ಟು ಕೊಂಡು ಅದನ್ನ ನುಸರಿಸಿ ಪ್ರಬಂಧವನ್ನು ಬರೆವುದರಿಂದ ಪುನರುಕ್ತಿ, ಸಂದೇಹವಾಗುವಂತೆ ಭಿನ್ನಾಭಿಪ್ರಾಯಗಳ ಸೇರುವಿಕೆ, ಇವೇ ಮೊದಲಾದ ದೋಷಗಳು ತಪ್ಪಿ, ಪ್ರಬಂಧವಿಷಯದ ಬೇರೆ ಬೇರೆ ಭಾಗಗಳಿಗೆ ಪರಸ್ಪರ ಸಂಬಂಧವಿರುವಂತೆ ವರ್ಣಿಸಲವಕಾಶವಾಗುವುದು. ವಿಷಯಭೇದದಿಂದ ಪ್ರಬಂಧವು ಸಾಮಾನ್ಯವಾಗಿ ಮೂರು ವಿಧ:- ವಸ್ತು ವರ್ಣನ, ವೃತ್ತಾಂತಕಥನ, ವಿಮರ್ಶನ. ಇಷEv== _I, ವಸ್ತು ವರ್ಣನ (Descriptive Composition), ಯಾವುದಾದರೂ ಒಂದು ವಸ್ತುವನ್ನು ಕುರಿತು ಬರೆವುದು. ವರ್ಣನೀಯವಾದ ವಸ್ತುಗಳ ಪಟ್ಟಿ. ೧. ಪ್ರಾಣಿ: ಹಸು, ಆನೆ, ಒಂಟೆ, ನಾಯಿ ಇತ್ಯಾದಿ. ೨, ವನಸ್ಪತಿ: ತೆಂಗು, ಅಡಕೆ, ಬಾಳೆ, ಮಾವು. ೩. ಖನಿಜ: ಚಿನ್ನ, ಬೆಳ್ಳಿ, ಕಬ್ಬಿಣ, ಕಲ್ಲಿದ್ದಲು. ೪. ಯಂತ್ರ: ಬಾರಾಮಿಟರ್‌, ರೈಲಿಂಜಿನ್, ಗಡಿಯಾರ. ೫, ಕೈಗಾರಿಕೆ: