ಪುಟ:ಪ್ರಬಂಧಮಂಜರಿ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಪ್ರಬಂಧಮಂಜರಿ.ಮೊದಲನೆಯ ಭಾಗ ವಾಕ್ಯ ಬೃಂದದ ಸ್ವರೂಪ I. ಪ್ರತಿವಾಕ್ಯಕ್ಕೂ ಅದರ ಹಿಂದಿನ ವಾಕ್ಯದ ಸಂಬಂಧವು ಚೆನ್ನಾಗಿ ತೋರುತ್ತಿರಬೇಕು. ಒಂದಕ್ಕೊಂದಕ್ಕೆ ಅರ್ಥದಲ್ಲಿ ಸಂಬಂಧವಿಲ್ಲದೆ ಎಷ್ಟು ಶಬ್ದ ಗಳನ್ನು ಸೇರಿಸಿದರೂ ವಾಕ್ಯವು ಹೇಗೆ ಆಗಲಾರದೋ, ಹಾಗೆಯೇ ಪರಸ್ಪರ ಸಂಬಂಧವಿಲ್ಲದಂತೆ ಎಷ್ಟು ವಾಕ್ಯಗಳನ್ನು ಒಟ್ಟುಗೂಡಿಸಿದರೂ ವಾಕ್ಯ ಬೃಂದವಾಗಲಾರದು. (I) ವಾಕ್ಯಗಳಿಗೆ ಪರಸ್ಪರ ಸಂಬಂಧವನ್ನು ತೋರಿಸಲು ತಕ್ಕ ಶಬ್ದ-. ಗಳನ್ನು ಪ್ರಯೋಗಿಸಬೇಕು. ಸಮುಚ್ಚಯಸೂಚಕ:-ಮತ್ತು, ಮತ್ತೆ, ಕೂಡ,, ಹಾಗೆಯೇ, ಹೀಗೆಯೇ, ಇದಲ್ಲದೆ, ಅಲ್ಲದೆ. ವಿರೋಧಸೂಚಕ:- ಆದರೆ, ಆದರೂ, ಆದಾಗ್ಯೂ, ಕಾರಣಸೂಚಕ:+ಆದುದರಿಂದ, ಆದಕಾರಣ, ಇದರಿಂದ, ಈ ಕಾರಣದಿಂದ, ಈ ರೀತಿಯಲ್ಲಿ, ಏಕೆಂದರೆ, ಪಕ್ಷಾ೦ತರಸೂಚಕ:-ಅಥವಾ, ಇಲ್ಲವೆ, ಆಗಲಿ, ಇಲ್ಲದಿದ್ದರೆ, ಅಲ್ಲದಿದ್ದರೆ, ಇಲ್ಲದೆಹೋದರೆ, ಅಲ್ಲದೆಹೋದರೆ. ನಿತ್ಯ ಸಂಬಂಧಸೂಚಕ:-ಎಲ್ಲಿ-ಅಲ್ಲಿ, ಹೇಗೆ-ಹಾಗೆ, ಎಂಥ ಅಂಥ ಯಾವುದು-ಅದು, ಎಷ್ಟು-ಅಷ್ಟು, ಯಾವಾಗ ಆಗ, ಮಿಶ್ರವಾಕ್ಯಗಳಲ್ಲಿ ಬರುವುವು:-ಎಂಬುದು, ಎಂಬ, ಎನ್ನುವ, ಎಂಬದಾಗಿ, ಎಂದು, ಎನ್ನುತ್ತಾ, ಎನ್ನಲಾಗಿ, ಎನ್ನು ವಾಗ, ಎನ್ನು ವಲ್ಲಿ. - ಕೆಲವೆಡೆ ಸಂಬಂಧಕ ಶಬ್ದ ಗಳಿಗೆ ಲೋಪ ಬಂದಿರುವುದುಂಟು. ಅಲ್ಲಿ ಅವುಗಳನ್ನು ಅಧ್ಯಾಹಾರ ಮಾಡಿಕೊಳ್ಳಬೇಕು. ಉದಾ:- “ರಾಜಪುತ್ರನು ವೀರಧರ್ಮವನ್ನು ಬಲ್ಲವನು, ಆಪತ್ಕಾಲದಲ್ಲಿ ಪ್ರಭುವನ್ನೆಂದಿಗೂ ಕೈಬಿಡನು, ” ಇಲ್ಲಿ ಆದುದರಿಂದ” ಎಂಬುದನ್ನೂ, ಇಂಗ್ಲಿಷರು ರಾಜ್ಯದಾಡಳಿತದಲ್ಲಿ ಪ್ರವೇಶಿಸುತ್ತಿರಲಿಲ್ಲ ; ಅದರ ರಕ್ಷಣಾರ್ಥವಾಗಿ ಸೈನ್ಯವನ್ನು ಮಾತ್ರ ಇಟ್ಟು ಕೊಂಡಿದ್ದರು ಎಂಬಲ್ಲಿ ಆಆದರೆ ಎಂಬುದನ್ನೂ ಅಧ್ಯಾಹರಿಸಿಕೊಳ್ಳಬೇಕು