ಪುಟ:ಪ್ರಬಂಧಮಂಜರಿ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಬ್ದ ಸೌಷ್ಟವ, (5) ಅಚ್ಚಗನ್ನಡದ ಮಾತುಗಳು ಅಥವಾ ಕನ್ನಡದಲ್ಲಿ ನೆಲೆಗೊಂಡಿರುವ ಸಂಸ್ಕೃತ ಶಬ್ದ ಗಳು ಇದ್ದರೂ ಅವುಗಳನ್ನು ಬಿಟ್ಟು ಅನ್ಯಭಾಷೆಯ ಮಾತುಗಳನ್ನು ಪ್ರಯೋಗಿಸುವುದು ಸರಿಯಲ್ಲ-ಬುಕ್, ರೋಡ್, ಟೌನ್,ಲೀವ್, ಪೇಪರ್, ಇಂಕ್, ಬಾಟಲ್, ಗ್ಯಾಸ್, ಕೋಟ್, ಬಿಲ್ಲಿಂಗ್, ಕಂಡಿಷನ್, ಜಡ್ಜ್ ಮೆಂಟ್ ಮುಂತಾದ ಇಂಗ್ಲಿಷು ಮಾತುಗಳಿಗೂ ; ದುಸ್ಸಾ, ಫಕತ್, ಐನ್, ಮೋಪ್, ಹುಕ್ಕು೦, ಫಾಯಿಷ್, ಜಾಸ್ತಿ, ವಾಪಸ್, ಬಿನ್ ಪುಕಾರ್‌, ಮೊಕರೂರ್, ಜವಾಬ್, ಮಾಲ್, ಮಾಘ, ಬಾಜು, ತಯಾರ್,ರು- ಷುವತ್ತು, ತಕ್ಕೀರ್, ಖುಲಾಸ್ ,ತಪ್ಪಿಲ್, ಸುಫದೆ೯, ತನಿಖೆ, ಪರವಾ, ಉಡಾಫೆ, ಇವೇ ಮೊದಲಾದ ಹಿಂದುಸ್ಥಾನಿ ಮಾತುಗಳಿಗೂ ಕನ್ನಡದಲ್ಲಿ ಬೇರೆ ಮಾತು ಗಳುಂಟು. ಮುಸಲ್ಮಾನರ ಆಳಿಕೆಯಲ್ಲಿ ಅವರಭಾಷೆಯ ಕೆಲವು ಮಾತು ಗಳು ಕನ್ನಡಕ್ಕೆ ಬಂದುವು. ಈಗ ಇಂಗ್ಲಿಷರ ರಾಜ್ಯಭಾರದಲ್ಲಿ ಹಲವು ಆಂಗ್ಲೆಯ ಶಬ್ದಗಳು ಬಂದು ಸೇರಿವೆ; ಸೇರುತ್ತಲೂ ಇವೆ. ಇಂಗ್ಲಿಷನ್ನು ಕಲಿತಿರುವ ಕನ್ನಡಿಗರು ತಮ್ಮ ಭಾಷೆಯನ್ನಾಡುತ್ತಿರುವಾಗ ಈ ಭಾಷೆಯ ಮಾತುಗಳಿಗೆ ಬದಲಾಗಿ ಇಂಗ್ಲಿಷ್ ಮಾತು ಗಳನ್ನೇ ಉಪಯೋಗಿಸಿ, ಅವಕ್ಕೆ ಕನ್ನಡದ ವಿಭಕ್ತಿ, ವಚನ, ಮೊದಲಾದುದನ್ನು ಸೇರಿಸುವುದು ಬಹಳ ಸಾಮಾನ್ಯವಾಗಿದೆ. ಅಲ್ಲದೆ ಕನ್ನಡದ ಭಾಷಾರೀತಿಯನ್ನು ಉಲ್ಲಂಘಿಸಿ ಆಂಗ್ಲೀಯ ಭಾಷಾ ಪದ್ದತಿಯನ್ನನುಸರಿಸಿ ಬರೆವುದೂ ವಾಡಿಕೆಯಾಗಿದೆ. ಸ್ವರು ಬೇರೆ ಸ್ಟೇಚ್ಛೆಯಾಗಿ ಕನ್ನಡವನ್ನು ಉಪಯೋಗಿಸುತ್ತಿರುವರು. ಈ ಕಾರಣಗಳಿಂದ ಕನ್ನಡವು ಬಹಳ ಕ್ಷೀಣದಶೆಗೆ ಬಂದಿದೆ. ಉದಾ - 4 ಅಲ್ಲಿ ನೆರೆದಿದ್ದವರೆಲ್ಲಾರೂ ಧೈರ್ಯದಿಂದೆದ್ದು ಬಂದು ಆಕ್ಷೇಪಿಸುವುದಕ್ಕೆ ಸಾಹಸವುಳ್ಳವರಾಗಲಿಲ್ಲ.”

  • ಉಳಿದವರು ಅರಣ್ಯಗಳಲ್ಲಿಯೂ ಪರ್ವತಗಳಲ್ಲಿಯೂ ಆಶ್ರಯವನ್ನು ತೆಗೆದುಕೊಂಡು ತಮ್ಮ ಸ್ವಾಧೀನತೆಯನ್ನು ಕಾಪಾಡಿಕೊಳ್ಳಲಾರಂಭಿಸಿದರು.”

ಈ ರುದ್ವೇದದಲ್ಲಿ ಆರ್ಯ, ಅನಾರ್ಯ ಎಂಬ ಈ ಎರಡು ಜಾತಿಯ ಪರಿಚಯವುಂಟಾಗುತ್ತದೆ.”