ಪುಟ:ಪ್ರಬಂಧಮಂಜರಿ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೫ ಕಲ್ಲಿದ್ದಲು, ಔಷಧವಾಗಿಯೂ ತೆಗೆದುಕೊಳ್ಳಬಹುದು. ನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸಿಕೊಟ್ಟರೆ ವಾಂತಿಯಾಗುವುದು. ಸಸ್ಯ ಸಂಬಂಧವಾದ ವಿಷವನ್ನು ಉಪ್ಪು ನಾಶಮಾಡುತ್ತದೆ. ಮಣ್ಣು ಪಾತ್ರೆಗಳಿಗೆ ಹೊಳಪು ಕೊಡುವುದು, ಉಕ್ಕನ್ನು ಗಟ್ಟಿ ಮಾಡುವುದು, ಸೋಡಾ ಮಾಡುವುದು ಇವು ಮೊದಲಾದ ಕೈಗಾರಿಕೆಯ ಕೆಲಸಗಳಲ್ಲಿ ಉಪ್ಪನ್ನು ಬಹಳವಾಗಿ ಉಪಯೋಗಿಸುವರು. ಆಫ್ರಿಕಾ, ಅರೇಬಿಯಾ ಸೀಮೆಗಳಲ್ಲಿ ಉಪ್ಪಿನ ಹಲಗೆಗಳಿಂದ ಮನೆಗಳನ್ನು ಕಟ್ಟುತ್ತಾರೆ: 17. ಕಲ್ಲಿದ್ದಲು ಸಾವಿರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಬೆಳೆಯುತ್ತಿದ್ದ ಮರ ಗಳು ಭೂಮಿಯೊಳಗೆ ಹೂತುಹೋಗಿ, ಅವುಗಳ ಮೇಲೆ ಬಿದ್ದ ವಸ್ತುಗಳ ಭಾರದಿಂದಲೂ ಭೂಮಿಯೊಳಗಣ ಶಾಖದಿಂದಲೂ ಬದಲಾವಣೆ ಹೊಂದಿ ಕಲ್ಲಿದ್ದಲಾದುವೆಂದು ಶಾಸ್ತ್ರಜ್ಞರು ನಿರ್ಧರಿಸಿರುತ್ತಾರೆ. ಒಂದು ಕಲ್ಲಿದ್ದಲ ಚೂರನ್ನು ಸೀಳಿ ನೋಡಿದರೆ ಮರದ ರೆಂಬೆಗಳ ಮತ್ತು ಎಲೆಗಳ ಗುರುತುಗಳು ಕಾಣಿಸುವುವು. ಮುಖ್ಯವಾದ ಖನಿಜಗಳಲ್ಲಿ ಕಲ್ಲಿದ್ದಲೊಂದಾಗಿದೆ. ಸುಲಭವಾಗಿ ಹತ್ತಿಕೊಂಡು ಜ್ವಾಲೆಯೊಡನೆ ಉರಿವದೆಂತಲೂ, ಸುಲಭವಾಗಿ ಹತ್ತದೆ ಬಹು ಶಾಖವನ್ನು ಕೊಡುತ್ತಾ ಜ್ವಾಲೆಯಿಲ್ಲದಿರುವುದೆಂತಲೂ ಕಲ್ಲಿದ್ದಲಿನಲ್ಲಿ ಎರಡು ಬಗೆಗಳುಂಟು. ಕಲ್ಲಿದ್ದಲು ಇಂಗ್ಲೆಂಡ್, ಐರ್ಲೆಂಡ್, ಅಮೆರಿಕಾ ಖಂಡದ ಸಂಯುಕ್ತ ರಾಜ್ಯ, ಚೀನಾ, ಜಪಾನ್ ಮೊದಲಾದ ಅನೇಕ ದೇಶಗಳಲ್ಲಿ ದೊರೆವುದು, ಇಂಡಿಯಾದಲ್ಲಿ ಹೈದರಾಬಾದ್, ಮಧ್ಯಪ್ರಾಂತ್ಯ, ಆಸಾಂ ಸೀಮೆಗಳಲ್ಲಿ ಮಿತವಾಗಿಯೂ ಬಂಗಾಳದಲ್ಲಿ ಹೇರಳವಾಗಿಯೂ ಸಿಕ್ಕುತ್ತದೆ. ಒ೦ಗಾಳದ ರಾಣಿಗಂಜ್ ಎಂಬಲ್ಲಿ ಅತ್ಯಧಿಕವಾಗಿ ಸಿಕ್ಕುವುದು; ಆದರೆ ಆಸಾಂದೇಶದ ಕಲ್ಲಿದ್ದಲು ಶ್ರೇಷ್ಠವಾದುದು. ಕಲ್ಲಿದ್ದಲು ಇಂಡಿಯಾದೇಶದಲ್ಲಿರುವಷ್ಟು ಬೇರೆ ಸೀಮೆಗಳಲ್ಲಿಲ್ಲ. ಇಲ್ಲಿ ಎರಡು ಸಾವಿರ ಕೋಟಿ ಟನ್ ತೂಕ ಕಲ್ಲಿದ್ದಲು ಭೂಮಿಯೊಳಗಿದೆಯೆಂದು ಒಬ್ಬ ದೊಡ್ಡ ಶಾಸ್ತ್ರಜ್ಞನು ಗೊತ್ತು. ಮಾಡಿದ್ದಾನೆ. ಹೀಗಿದ್ದರೂ ಈ ದೇಶದಲ್ಲಿ ಕಲ್ಲಿದ್ದಲನ್ನು ಭೂಮಿಯಿಂದ ಎತ್ತುವುದಕ್ಕೆ ಬೇಕಾದ ಯಂತ್ರಗಳ ಸಹಾಯವಿಲ್ಲದಿರುವುದರಿಂದಲೂ, ಸ್ಥಳ