ಪುಟ:ನಿರ್ಮಲೆ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ୫୮ ವನ್ನು ಮಾಡಿದಂತಾಗುವುದೋ, ಅದನ್ನು ನಾನು ಈಗ ಹೇಳಲಾರೆನು. ನೀನು ಆ ಸ್ವಾರಸ್ಯವನ್ನು ಬಲ್ಲೆಯಾ ? ಚಂಡಿ :-ಅವೆಲ್ಲಾ ವುರಾತನ ಒಡವೆಗಳು ನೀನು ಧರಿಸಿದರೆ ಚೆನ್ನಾಗಿರುವುದಿಲ್ಲ ; ಅಲ್ಲದೆ, ಅವು ಎಲ್ಲಿಯೋ ಬಿದ್ದಿವೆ, ಹುಡುಕಬೇಕು. ಹುಡುಕಿದರೇನು ಸಿಕ್ಕುವುದೆ ? ಅವುಗಳು ಹಾಳಾಗಿ ಹೋಗಿದ್ದರೂ ಹೋಗಿರ ಬಹುದು. ದುರ್ಮ:-(ಚಂಡಿಯನ್ನು ಕುರಿತು, ಮತ್ತಾರಿಗೂ ಕೇಳದಂತೆ) ಒಡವೆಗಳು ಎಲ್ಲಿಯೋ ಹೋದುವೆಂದು ಹೇಳಿಬಿಡು, ಅವಳಿಗೆಷ್ಟು ಆಶೆ ? ಅವು ಕಳುವಾಗಿ ಹೋಗಿವೆಯೆಂದು ಹೇಳು. ಅವಳನ್ನು ಸುಮ್ಮನಿಡಬೇಕಾ ದರೆ, ಅದೇ ಸರಿಯಾದ ಉಪಾಯವು, ತಿಳಿಯಿತೆ ? ಅವು ಕಳುವಾಗಿ ಹೋ ಯಿತೆಂದು ನೀನು ಹೇಳಿದರೆ ನಾನು ಸಾಕ್ಷಿ ಹೇಳುವೆನು, ನನ್ನ ಸಾಕ್ಷ್ಯ ನನ್ನೆ ಕೋರು. ಚಂಡಿ:-(ದುರ್ಮತಿಗೆ) ಮಗು, ನಿನಗಾಗಿಯೇ ನಾನು ಅವಳನ್ನು ಪ್ರೇಮದಿಂದ ಸಲಹುತ್ತಿರುವೆನು, ಅವು ಹಾಳಾಯಿತೆಂದರೆ ನಿಜವಾಗಿಯೂ ಸಾಕ್ಷಿ ನುಡಿಯುವಿಯಷ್ಟೆ ? ದುರ್ಮ:-ನೀನು ಹೆದರಬೇಡ, ಕಳುವಾದುದನ್ನು ನಾನು ಕಣ್ಣಾರ ಕಂಡೆನೆಂದು ಬೇಕಾದರೂ ಹೇಳುವೆನು, ಆಷ್ಟು ಹೇಳಿದರೆ ಸಾಕೆ ? ಕಮ:-(ಚಂಡಿಯನ್ನು ಕುರಿತು, ಅಮ್ಮ, ಒಂದು ದಿನದ ಮಟ್ಟಿಗೆ ಕೊಟ್ಟಿರಮ್ಮ, ನಾನು ಅವರಿಗೆ ಅವೆಲ್ಲವೂ ಪೂರ್ವಕಾಲದ ವಸ್ತುಗಳೆಂದು ತೋರಿಸಿದ ಕೂಡಲೇ ಹಿಂದಕ್ಕೆ ಕೊಟ್ಟು ಬಿಡುವೆನು. ಚಂಡಿ :-ಕಮಲೆ, ನಿನ್ನಲ್ಲಿ ಮುಚ್ಚು ಮರೆಯ 2 ಸಿಕ್ಕಿದರೆ ನಿಜವಾ ಗಿಯೂ ಕೊಡುವೆನು, ಸತ್ಯವಾಗಿಯೂ ಅವೆಲ್ಲೋ ಮಾಯವಾಗಿವೆ. ಅವೆಲ್ಲಿದ್ದರೇನು ? ನಾವು ಶಾಂತಚಿತ್ತರಾಗಿದ್ದರಾಯಿತು. ಕಮಲೆ :- ನಾನು ನಿನ್ನ ಮಾತುಗಳನ್ನು ನಂಬಲಾರೆನು, ಕೊಡುವ