ಪುಟ:ನಿರ್ಮಲೆ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ - ಚಂಡಿ:-ಅದು ನನ್ನ ತಪ್ಪೆ ? ಹುಟ್ಟಿದಂದಿನಿಂದಲೂ ಅವನು ರೋಗದಿಂದ ನರಳಿನರಳಿ ಒಡವಾಗಿರುವನು. ಪಾಠಶಾಲೆಯೆಂದರೆ ಅವನಿಗೆ ಪ್ರಾಣವೇ ಹೋಗುವುದು, ಅವನು ಸ್ವಲ್ಪ ಒಷ್ಟನಾಗಲಿ, ಒಂದೆರಡುವರ್ಷ ಗಳಕಾಲ ಓದುವದರೊಳಗೇ ಅವನ ಜ• ನಾಗುವುದರಲ್ಲಿ ಸಂಶಯವಿಲ್ಲ. ಗೇವ:-ಓಗೆ? ಬೆಕ್ಕು ' ಪಿಟೀಲು !! ಇದೇ ಅವನಿಗೆ ಓದು. ಸರಿ, ಸರಿ, ತಬೇಲಿ, ಸುರಾಗೃಹಗಳು ತಾನೆ ಅವನು ಪಾಠವನ್ನು ಕಲಿಯಲು ಹೋಗುವ ಶಾಲೆ. ಚಂಡಿ:-ಅಯ್ಯೋ! ಪಾಪ!! ಆ ಬಡ ಪಾಪಿಯನ್ನು ನಾವೇಕೆ ಬೆದ ರಿಸಿ ಪೀಡಿಸಬೇಕು? ಇನ್ನೆಷ್ಟು ವರುಷಗಳತಾ ಅವನು ಜೀವಿಸುವನು? ಮುಖವನ್ನು ನೋಡಿದವರಿಗೆಲ್ಲ ಅವನಿಗೆ ಕ್ಷಯರೋಗವೆಂದ: ಬೋಧೆಯಾಗು ವುದಿಲ್ಲವೆ? ದೇವ:-- ದಿನೇದಿನೇ ಸ್ಫೂ ಲಕಾಯನಾಗುವದೂ ಒಂದು ವಿಧವಾದ ಚಿನ್ನೆ ಯಾದರೆ.... ಚ೦ಡಿ:-ಅವನು ಆಗಾಗ ಕೆಮ್ಮು ವನು. ದೇವ:-ಅಹುದು, ದ್ರಾಕ್ಷಾರಸವ್ರ ನೆತ್ತಿಗೆ ಹತ್ತಿದಾಗಲೆಲ್ಲಾ.. .. ಚಂಡಿ:-ಅವನ ಸಕೋಶಗಳು ಕೆಟ್ಟು ಹೋಗಿರಬಹುದೆಂದು ನನಗೆ ಬಹು ಭಯವಾಗಿದೆ, ದೇವ:-ಅಹುದು, ನಿಜವಾಗಿಯೂ ನನಗೂ ಅದೇ ಭಯ, ಏಕೆಂದರೆ, ಅವನು ತುತ್ತೂರಿಯ ಧ್ವನಿಯಂತೆ ಆರ್ಭಟಿಸುತ್ತಾನೆ, (ದುರ್ಮತಿಯ ಹಿಂಭಾ ಗದಲ್ಲಿ ಗಲಭೆಮಾಡುತ್ತಿರುವನು.) ಅದೊ, ನೋಡು, ಅಯ್ಯೋ ಪಾಪ! ಅದು ಕ್ಷಯರೋಗದ ಆಸ್ತಿ ಯಲ್ಲವೆ ? ದುರ್ಮತಿಯು ಬರುವನು? ಚಂಡಿ:-ಮಗು ! ಎಲ್ಲಿಗೆ ಹೋಗುವಿ ? ನನ್ನ ಕಂದ, ಬಾ, ನಿಮ್ಮ ಅತ್ತೆಮಾವಂದಿರ ಜತೆಯಲ್ಲಿ ಅರೆಗಳಿಗೆಯಾದರೂ ಇರಲೊಲ್ಲೆಯಾ?