ಪುಟ:ನಿರ್ಮಲೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ೫೭ ದುರ್ಮ:- ನಿಮ್ಮ ಪ್ರಯಾಣದ ವೆಚ್ಚಕ್ಕಾಗಿ, ಇಗೋ, ತೆಗೆದು ಕೊಳ್ಳಿರಿ.- ಪೆಟ್ಟಿಗೆಯನ್ನು ಕೊಟ್ಟು ನಿನ್ನ ಪ್ರೀತಿಪಾತ್ರಳಾದ ಸತಿಯ ಜವಾಹಿರಿಗಳೆಲ್ಲವೂ ಇದರಲ್ಲಿವೆ. ಇದನ್ನು ಅಪಹರಿಸಿದ ಮಸಿಯು ಹಾಳಾಗಲಿ ! ನನಗೇನು ? ಪ್ರಿಯ:-ನಿಮ್ಮತ್ತೆಯಿಂದ ಇದನ್ನು ನೀನು ಪಡೆದ ಒಗೆಯು ಹೇಗೆ? ದುರ್ಮ:--ನೀನು ನನ್ನ ನ್ನು ಪ್ರಶ್ನೆ ಸಕೂಡದು, ತಿಳಿಯಿತೆ ? ನಾನು ಸುಳ್ಳನ್ನು ಹೇಳುವ ಪದ್ಧತಿಯಿ, ಎಂದೂ ಸುಳ್ಳಾಡುವುದಿಲ್ಲ. ಆದ ಕೆಲ್ಲಾ ನಮ್ಮಲ್ಲಿ ನಿಯಮಗಳುಂಟು. ತಿಳಿಯಿತೊ ? ನಮ್ಮತ್ತೆಯ ಪೆಟ್ಟಿಗೆ ಗಳನ್ನು ತೆರೆಯಲು ನನಗೆ ಬಾರದಿದ್ದರೆ, ನಾನು ಆನಂದಮಂದಿರದಲ್ಲಿ ಆನಂದ ವಾಗಿರುವುದೆಂತು? ಬೇಕಾದಾಗಲೆಲ್ಲಾ ನನಗೆ ಆವ ಅಭ್ಯಂತರವೂ ಇಲ್ಲವಷ್ಟೆ? ಪ್ರಿಯ:-ಪ್ರತಿದಿನವೂ ಸಾವಿರಾರು ಜನರು ಆ ರೀತಿ ಮಾಡುವರು. ಸಧ್ಯದ ವಿಷಯವನ್ನು ಕೇಳು. ಆ ಕಮಲೆಯು ,ಜವಾಹಿರಿಗಾಗಿ ನಿಮ್ಮ ಯನ್ನು ಕಾಡುತ್ತಿರುವಳು, ನಿಮ್ಮ ತನು ಕೊಡಲೊಪ್ಪಿದರೆ, ಇದನ್ನು ಕಷ್ಟ ಎಲ್ಲ ದಂತೆಯೇ ಪಡೆದಂತಾಗುವುದಿಲ್ಲ ವೆ ? ದುರ್ಮ:-ಮುಂದೆ ನಡೆಯುವುದನ್ನು ಹೇಳಬಲ್ಲವರಾರು ? ಅದು ತಿಳಿಯುವವರೆಗೂ ಇದು ನಿನ್ನಲ್ಲೇ ಇರಲಿ, ನಮ್ಮತ್ತೆಯು ಒವಾಹಿನಿಯನ್ನು ಕೊಡುವದೆ? ಅಬ್ಬಾ! ಬಾಯಿನಲ್ಲಿ ಗಟ್ಟಿಯಾಗಿರುವ ಒಂದು ಹಲ್ಲ ನ್ನಾದರೂ +ಳಿಸಿಕೊಳ್ಳಲು ಒಪ್ಪುವಳಲ್ಲದೆ, ಆಭರಣಗಳನ್ನು ಕೊಡಲೊಪ್ಪುವುದಿಲ್ಲ. ಖಂಡಿತವಾಗಿಯೂ ಕೊಡಲೊಪ್ಪುವದಿಲ್ಲ. ಪ್ರಿಯ: ಆಭರಣಗಳು ಕಳುವಾಯಿತೆಂದು ಅವಳಿಗೆ ತಿಳಿದರೆ ಅವಳ ಆಗ್ರಹದಿಂದ ಅನರ್ಥವಾದೀತೆಂದು ನನಗೆ ಹೆದರಿಕೆಯಾಗುವುದು. ದುರ್ಮ:- ಅವಳ ಆಗ್ರಹದ ಚಿಂತೆಯು ನಿನಗೇಕೆ ? ಅದೆಲ್ಲವನ್ನೂ ನಾನು ಸರಿಪಡಿಸುತ್ತೇನೆ. ಅವಳ ಆಗ್ರತಕ್ಕೆ ನಾನು ಒಂದುಕಾಸಿನಲ್ಲಿ ಎಳ್ಳಷ್ಟನ್ನೂ ಸಹ ಬೆಲೆಕಟ್ಟುವುದಿಲ್ಲ, ನಿನಗೇಕೆ ಅದರಚಿಂತೆ ? ಅಗೊ | ಅವರೇ ಬರುತ್ತಿರುವರು.