ಪುಟ:ನಿರ್ಮಲೆ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

KN ನಿರ್ಮಳ ಅಹಂಕಾರದ ಹರಟೆಯ ನಾಯಿಯನ್ನು ಕಂಡಿರಲಿಲ್ಲ. ನಿಮ್ಮ :-ನೀನು ಹೇಳುವುದು ಆಶ್ಚರ್ಯವಾಗಿದೆ. ರಾಮವರ್ಮರು ತಲೆಯನ್ನು ಬೊಗ್ಗಿಸಿಕೊಂಡೇ ನನ್ನ ನ್ನು ಇದಿರ್ಗೊಂಡರು. ಮಾತು ಪೂರೈ ಸುವವರೆಗೂ ಭೂಮಿಯ ಮೇಲಿಟ್ಟಿದ್ದ ದೃಷ್ಟಿಯನ್ನು ಅತ್ತಿತ್ತ ಚಲಿಸಲೇ ಇಲ್ಲ, ಮಾತನಾಡಲು ಆರಂಭಿಸಿದರೆ ಅವರಿಗೆ ಬಿಕ್ಕಲು ಬರುತ್ತಿತ್ತು, ದೇವ :- ನನ್ನ ನ್ನು ಮರಾದೆಯಿಂದ ಇದಿರ್ಗೊಂಡ ವಿಷಯವನ್ನು ಹೇಳುವೆನು ; ಕೇಳು, ಮೊದಲು ನೋಡಿದೊಡನೆಯೇ ಆರ್ಭಟಿಸಿ, ಸಾರ್ವ ಭೌಮನಂತೆ ಆಜ್ಞೆಯನ್ನು ಕೊಟ್ಟನು. ಅವನು ಮೊಟ್ಟಮೊದಲೇ ವಹಿಸಿದ ಸಲಿಗೆಯನ್ನೂ ಅಟ್ಟಹಾಸವನ್ನೂ ನೋಡಿ ನಾನು ಸ್ತಂಭೀಭೂತನಾದೆನು. ನಿರ್ಮ :-ನನ್ನೂ ಡನೆ ಬಹು ಸಂಕೋಚದಿಂದಲೂ ನಾಚುಕೆಯಿಂ ದಲೂ ಅವರು ಮಾತನಾಡಿದರು. ನವನಾಗರಿಕರ ಹುಚ್ಚಾಟವನ್ನು ದೂಷಿ ಸಿದರು. ನಗದೆಯೇ ಇರುವ ಹುಡುಗಿಯ ವಿವೇಕವನ್ನು ಕೊಂಡಾಡಿದರು. ನನ್ನ ಮನಸ್ಸಿಗೆ ಎಲ್ಲಿ ಬೇಸರವಾದೀತೊ ಎಂದು ನನ್ನನ್ನು ಗಳಿಗೆಗಳಿಗೆಗೂ ಕ್ಷಮಾಪಣೆಯನ್ನು ಬೇಡಿಬೇಡಿ ಬೇಸರಪಡಿಸಿದರು. ಕೊನೆಗೆ ತಲೆಯನ್ನು ಬಾಗಿ ಸಿಕೊಂಡೇ - ನಿರ್ಮಲೆ, ಅರಗಳಿಗೆಯೂ ನಿನ್ನ ಕಾರ್ಯಕ್ಕೆ ನಾನು ಅಡ್ಡಿಯಾ ಗುವುದಿಲ್ಲ.' ಎನ್ನು ತ ಹೊರಟುಹೋದರು. , ದೇವ :-ಹತ್ತಿಪ್ಪತ್ತು ವರ್ಷಗಳಿಂದಲೂ ನನ್ನನ್ನು ಬಲ್ಲ ವನಂತೆ ನನ್ನೊಡನೆ ವರ್ತಿಸಿದನಲ್ಲ ? ನೂರಾರು ಪ್ರಶ್ನೆಗಳನ್ನು ಅವನು ಕೇಳಿದನು. ನಾನು ಉತ್ತರವನ್ನು ಕೊಡುತ್ತಿದ್ದರೂ, ಅದನ್ನು ಲಕ್ಷಿಸದೆ ತನ್ನ ಮನಸ್ಸಿಗೆ ಬಂದಂತೆ ಹರಟುತಿದ್ದನು, ನಾನು ಸ್ವಾರಸ್ಯವಾಗಿ ಮಾತನಾಡಲಾರಂಭಿ ಸಿದರೆ ಕುಚೇಷ್ಟೆ ಮಾಡುತಿದ್ದನು, ಸೇನಾಧೀಶ ವೀರವರ್ಮನ ಕಥೆಯನ್ನು ಹೇಳಲು ಆರಂಭಿಸಿದರೆ, ಷರಬತ್ತನ್ನು ಮಾಡುವುದರಲ್ಲಿ ನೀನು ಜಾಣನೊ?' ಎಂದು ಕೇಳಿದನು, ನಿಮ್ಮಲೆ, ನೋಡಿದಿಯೋ ? ನಿಮ್ಮಪ್ಪನನ್ನು ಷರಬ ಇನ್ನು ಮಾಡಲು ನಿನ್ನಲ್ಲಿ ಜಾಣ್ನೆಯಿದೆಯೊ ?” ಎಂದು ಪ್ರಶ್ನೆ ಮಾಡಿದನಲ್ಲ ?