ಪುಟ:ನಿರ್ಮಲೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೩ ನಿರ್ಮಲೆ [ದೇವದತ್ತನು ಪ್ರವೇಶಿಸುವನು. ] | ದೇವ :- ಈಗ ನನ್ನ ಮನೆಯೆಂದು ನಾನೇ ಗುರುತಿಸುವಂತಿಲ್ಲ. ಅವನ ನೃತ್ಯರು ಸಂಪೂರ್ಣವಾಗಿಯ ಕುಡಿದು ಬಿದ್ದಿರುವರು, ವಿಜಯ ಪಾಲನೊಡನೆ ನನಗಿರುವ ಮೈತ್ರಿಗೋಸ್ಕರ ನಾನು ಸುಮ್ಮನಿರಬೇಕಾಗಿದೆ. (ರಾಮವರ್ಮನನ್ನು ನೋಡಿ ತಲೆಬ್ಬಾಗಿಸಿ) ಮಹಾಸ್ವಾಮಿ, ಏನಪ್ಪಣೆ ? ಇಗೋ, ತಮ್ಮ ಪಾದಸೇವಕನು ಕಾದುಬಿದ್ದಿರುವನು. ರಾಮ:-ಹಾಗುಂಟೆ? ನಾನೇ ತಮ್ಮ ಸೇವಕನು (ಸ್ವಗತ೦) ಇನ್ನೇ ನು ತಮಾಷೆಗಳು ಕಾದಿವೆಯೋ ? - ದೇವ:-ನಿಮ್ಮಪ್ಪನ ಮಗನಿಗಿಂತಲೂ ಹೆಚ್ಚಾಗಿ ಮತ್ತಾರನ್ನೂ ನಾನು ಪ್ರೀತಿಸುವುದಿಲ್ಲ ವೆಂದು ನಿನ್ನ ಬುದ್ದಿಗೆ ತೋರಿರಬಹುದಲ್ಲವೆ ? ರಾಮ ;-ಸಂದೇಹವೇನು ? ನನಗೆ ಯಾವ ವಿಧವಾದ ಉಪಚಾರ ವೂ ಬೇಡ, ನಮ್ಮಪ್ಪನ ಮಗನು ತಾನು ಹೋದಲ್ಲೆಲ್ಲಾ ಮರಾದೆಯನ್ನು ಹೊಂದಬಲ್ಲ ನು. ದೇವ :-ಅಡ್ಡಿಯೇನು? ನಿನ್ನ ನಡತೆಯ ವಿಚಾರದಲ್ಲಿ ನಾನೇನೂ ಹೇಳುವುದಿಲ್ಲ ; ಆದರೆ ನಿನ್ನ ಸೇವಕರ ನಡತೆಯ ವಿಚಾರದಲ್ಲಿ ಬಹಳ ಅಸ ಮಾಧಾನವಾಗಿದೆ. ಅವರ ಹಾವಳಿಯನ್ನು ತಡೆಯಲಾಗುವುದಿಲ್ಲ, ಅವರ ಸಹವಾಸದಿಂದ ನಮ್ಮ ಸೇವಕರೂ ಕೆಡುವ ಸಂಭವವುಂಟು. ರಾಮ:- ಅದು ನನ್ನ ತಪ್ಪಲ್ಲ. ನನ್ನ ಅಪ್ಪಣೆಯಂತೆ ಅವರು ಕೈಲಾದಷ್ಟು ಕುಡಿದಿರುವರು' (ಒಂದು ಮಗ್ಗಲಿಗೆ ತಿರುಗಿ) ಯಾರಲ್ಲಿ ? ನನ್ನ ಸೇವಕರಲ್ಲೊಬ್ಬನು ಬರಲಿ, ' (ದೇವದತನನ್ನು ನೋಡಿ) ನಾನು ಎಂದೂ ಮದ್ಯಪಾನ ಮಾಡುವುದಿಲ್ಲ, ಆ ಲೋಪವನ್ನು ಹೋಗಲಾಡಿಸು ವುದಕ್ಕಾಗಿ ಅವರು ಬೇಕಾದಷ್ಟು ಕುಡಿಯಲು ಆಜ್ಞೆ ಕೊಟ್ಟಿರುವೆನು. ದೇವ:-ಇಷ್ಟು ಕುಡಿಯಲು ಅವರಿಗೆ ನಿನ್ನ ಅಪ್ಪಣೆಯಿದ್ದಿ ತೊ ? ಸರಿ, ಸರಿ, ಹಾಗಾದರೆ ನನಗೂ ತೃಪ್ತಿಯೆ.