ಪುಟ:ನಿರ್ಮಲೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ೨೧ ರಕ್ತಾಕ್ಷನೆ!ನೀನು ನನ್ನ ಬೆನ್ನಿನ ಹಿಂದೆಯೇ ಇರಬೇಕು, (ರಕ್ತಾಕ್ಷನು ತಲೆ ಯಮೇಲೆ ಕಯ್ಯನ್ನು ಇಟ್ಟು ಕೊಂಡು ನಿಂತಿರುವನು) ಚಿಃ! ಹಾಗೆ ಕಯ್ಯನ್ನು ಇಟ್ಟು ಕೊಂಡಿರಬಾರದು, ಎಲೋ, ಮಡೆಯಾ! ತಲೆಯಮೇಲಿನ ಕಯ್ಯನ್ನು ತೆಗೆ! ಅಲ್ಲಿನೋಡು, ಚ೦ಡಗುಪ್ತನು ಕಯ್ಯನ್ನು ಹೇಗೆ ಇಟ್ಟು ಕೊಂಡಿರುವನು? ಆ ರೀತಿ ಕಟ್ಟಿಗೆಯಂತೆಯೂ ಇರಬಾರದು, ಆದರೂ ಚಿಂತೆಯಿಲ್ಲ. ಚಂಡ:-ನೋಡಿರೋ! ನಾನು ನನ್ನ ಕಗ್ಗ ಳನ್ನು ಹೇಗೆ ಇಟ್ಟು ಕೊಂಡಿ ರುವೆನು, ನಾನು ಸಿಪಾಯಿಕೆಲಸದಲ್ಲಿದ್ದಾಗ, ಕವಾಯಿತುಮಾಡಿ ಕಲಿತಿರು ವೆನಪ್ಪಾ ! ಇವೆಲ್ಲ ಸುಮ್ಮನೆ ಬರುವುದಿಲ್ಲ ವಪ್ಪಾ, ಕವಾಯಿತು ಮಾಡುತ್ತೆ ಬ ದೇವ:ಚಂಡನೆ! ನೋಡಿದಿಯಾ ? ನೀನು ಅಷ್ಟೊಂದು ಹರಟಬಾ ರದು, ಮನೆಗೆ ಬಂದಿರುವರು ಏನನ್ನು ಹೇಳುವರೋ, ಅದನ್ನು ಕೇಳಲು ಬಹಳ ಎಚ್ಚರಿಕೆಯಿಂದಿರಬೇಕು, ನಾವು ಆಡುವ ಮಾತುಗಳನ್ನು ಕೇಳುತ್ತಿರಬೇಕ ಇದೆ, ನೀನೇ ಮಾತನಾಡುವ ಆಲೋಚನೆಯನ್ನು ಮಾಡಬಾರದು, ನಾವು ಕುಡಿಯುತ್ತಿದ್ದರೆ, ನೀನು ಸುಮ್ಮನೆ ನೋಡುತ್ತಿರಬೇಕು, ನೀನೂ ಕುಡಿ ಯುವ ಆತುರದಲ್ಲಿರಬಾರದು, ನಾವು ಊಟಮಾಡುತ್ತಿದ್ದರೆ, ಸುಮ್ಮನೆ ನೋಡುತ್ತಿರಬೇಕೇ ಹೊರತು, ನೀನೂ ಊಟಮಾಡಲು ಆಶೆಪಡಬಾರದು. ತಿಳಿಯಿತೊ ? ಚ: ಡ:-ದೇವರಾಣೆಗೂ ಅದು ಅಸಾಧ್ಯವಾದ ಕೆಲಸ, ಭೋಜನ ವಾಗುವ ಎಡೆಯಲ್ಲಿ ನಾನಿದ್ದರೆ ನನಗೂ ಒಂದು ತುತ್ತು ಸಿಕ್ಕಲೆಂದೇ ಇರು ವೆನು, ಆಸೆಪಡದೆ ಇರಲು ನನಗೆ ಸಾಧ್ಯವೇ ಇಲ್ಲ. ದೇವ:ಅಯ್ಯೋ! ಮರುಳೆ!! ಅಡುಗೆಯ ಮನೆಯಲ್ಲಿ ಊಟಮಾಡಿ ದರೂ ಹಜಾರದಲ್ಲಿ ನಮ್ಮೊಡನೆ ಊಟಮಾಡುವಂತೆಯೇ ಹೊಟ್ಟೆಯು ತುಂಬು ವದಲ್ಲವೆ ? ಹಾಗೆ ತಿಳಿದುಕೊಂಡು ನಿನ್ನ ಹಸಿವನ್ನೂ ತಿಂಡಿಪೋತತನವನ್ನೂ ಸಹಿಸಿಕೊಂಡಿರು,