ಪುಟ:ನಿರ್ಮಲೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ನಿರ್ಮಲೆ ಬಂದರೆ, ಅವಳು ನನ್ನನ್ನು ತನ್ನ ತಂಗಿಯ ಮನೆಗೆ ಬಂದಿಯನ್ನಾಗಿ ಮಾಡಿ ಕಳುಹಿಸುವಳು. ಆ ಮನೆಯ ವಾಸವು ಕಾರಾಗಾರಕ್ಕಿಂತಲೂ ಕಷ್ಟವಾದುದು. ದುರ್ಮ :-ನಮ್ಮ ಅತ್ತೆಯು ಕೆಟ್ಟವಳು, ಅದಕ್ಕೆ ನಾನೇನು ಮಾ .ಡಲಿ ? ಹಕ್ಕಿಗಳಂತೆ ಹಾರಬಲ್ಲ ಕುದುರೆಗಳನ್ನು ಸಿದ್ಧ ಪಡಿಸಿರುವೆನು. ನಮ್ಮ ತ್ರೆಯೆದುರಿಗೆ ನಿನ್ನನ್ನು ಪ್ರೀತಿಸುವಂತೆಯೂ ನಟಿಸುತ್ತೇನೆ, ಇನ್ನೇನು ಮಾಡಲಿ ? ಒಡವೆಯನ್ನೂ ಕದ್ದು ಕೊಟ್ಟಿದ್ದೆನು ! ಅದೋ, ಅವಳೇ ಬರುತ್ತಿ ರುವಳು, ನಾವು ಈಗ ಅವಳೆದುರಿಗೆ ಸ್ವಲ್ಪ ನಾಟಕವಾಡಬೇಕು. ಇಲ್ಲ ವಾದರೆ ಅವಳಿಗೆ ಅನುಮಾನವು ಹುಟ್ಟುವುದು. (ಮರೆಯಾಗಿ ಹೋಗಿ ಪ್ರಣಯಿಗಳಂತೆ ನಟಿಸುವರು.) [ಚಂಡಿಯು ಬರುವಳು.]. ಚಂಡಿ :-(ಸ್ವಗತಂ) ನನಗೇನೋ ಬಹಳ ಗಾಬರಿಯಾಗಿತ್ತು, ಇದೆ ಲವೂ ಸೇವಕರ ತಪ್ಪಿನಿಂದ ಆದುದೆಂದು ದುರ್ಮತಿಯು ಹೇಳುವನು. ದುರ್ಮ ತಿಗೂ ಕಮಲೆಗೂ ವಿವಾಹವಾಗುವವರೆಗೂ ನಾನು ಶಾಂತಳಾಗಿರೆನು, ಅನಂ ತರ ಕಮಲೆಯು ತನ್ನ ಜವಾಹಿರಿಯನ್ನು ಇಟ್ಟು ಕೊಂಡಿರಬಹುದು, ಓಹೋ, ಇದೇನು ? ಇತ್ತ ಪ್ರಣಯಕಲಹ ! (ದುರ್ಮತಿಯ ಕಡೆಗೆ ತಿರುಗಿ, ಪ್ರಕಾಶ೦) ಎಲಾ, ದುರ್ಮತಿ! ಈಗಲಾದರೂ ಸಿಕ್ಕಿ ಬಿದ್ದೆ ಯೊ, ಇಲ್ಲ ವೊ? ನಿಮ್ಮ ಗುಟ್ಟು ರಟ್ಟಾಯಿತು. ನೀವಿಬ್ಬರೂ ಬಲು ಜಾಣರು, ನನ್ನ ಪ್ರೇಮದ ಮುದ್ದು ಗಿಣಿಗಳು, ಅದೇನು ಪಿಸಪಿಸಗುಟ್ಟುತಿದ್ದಿರಿ ? ದುರ್ಮ :-ಅದನ್ನು ನಿನಗೇಕೆ ಹೇಳಬೇಕು. ಕಮ :-ದುರ್ಮತಿಯು ಇನ್ನು ಮೇಲೆ ನನ್ನನ್ನು ಎಡೆಬಿಡುವುದಿಲ್ಲ ವಂತೆ, ಅದೇ ನಮ್ಮ ರಹಸ್ಯ. ದುರ್ಮ:-ನೀನು ಯಾವಾಗಲೂ ನನ್ನ ಬಳಿಯಲ್ಲಿಯೇ ನಗುತ ಇರುವುದಾದರೆ, ನನಗೆ ಪ್ರಪಂಚವೇ ಬೇಡ, ನಿನ್ನ ಮುಖವು ಅರಳಿದ ತಾವರೆ ಥಸಕ್ಕರೆಯಂತೆ, ರುಚಿಯಾಗಿರುವುದು.( ಚುಂಬಿಸಲು ಪ್ರಯತ್ನ ಪಡುವನು.)