ಪುಟ:ನಿರ್ಮಲೆ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ೧೧೧ ರಾಮ :-ದೇವರಾಣೆಗೂ, ನೀನು ದಯಮಾಡಿ ಅನುಗ್ರಹಿಸದಿದ್ದರೆ ನನಗೆ ಸುಖವೆಂಟು ? ನಿನ್ನ ಗುಣಾತಿಶಯಗಳು ಮೊದಲೇ ತಿಳಿಯಲಿಲ ವೆಂದು ಪರಿತಾಪಪಡಬೇಕಾಗಿದೆಯಲ್ಲದೆ, ಮತ್ತೇತಕ್ಕೂ ಇಲ್ಲ, ನಿನ್ನ ಇಷ್ಟ ಕ್ಕೆ ವಿರೋಧವಾಗಿ ಇಲ್ಲಿಯೇ ಇದ್ದು, ಹಟ ಮಾಡಿ, ನೀನು ನನ್ನನ್ನು ತಿರಸ್ಕ ರಿಸುತ್ತಿದ್ದರೂ, ನನ್ನ ಪೂತ್ವದ ಚಾಪಲ್ಯದ ನಡತೆಗೋಸ್ಕರ ಈಗ ಅತ್ಯಂತ ಮತ್ಯಾದೆಯಿಂದ ನಿನ್ನ ದಯೆಯನ್ನು ಕೋರುವುದರ ಮೂಲಕ ಪ್ರಾಯಶ್ಚಿತ್ರ ವನ್ನು ಮಾಡಿಕೊಳ್ಳುವೆನು. ನಿಮ್ಮ :- ಹಾಗೆ ಮಾಡದಿರಬೇಕೆಂದು ಬೇಡುವೆನು. ದಯವಿಟ್ಟು ಹಾಗೆ ಮಾಡಬೇಡಿ, ನಮ್ಮ ಪರಿಚಯವು ಅಸಡ್ಡೆಯಿಂದ ಮೊದಲಾದಂತೆ ಯೇ ಅಸಡ್ಡೆ ಯಿಂದಲೇ ಕೊನೆಗಾಣಲಿ, ನಾನು ಒಂದೆರಡು ಘಂಟೆಗಳಕಾಲ ಚಪಲಚಿತ್ತಳಾಗಿ ಇದ್ದಿದ್ದರೂ ಇರಬಹುದು, ಆದರೂ, ನಾನು ಹಣದಾಶೆ ಯವಳೂ ನಿಮ್ಮ ಗೌರವಕ್ಕೆ ಹಾನಿ ತರತಕ್ಕವಳೂ ಆದುದರಿಂದ ಈ ಬಾಂಧ ವ್ಯಕ್ಕೆ ಎಂದಿಗಾದರೂ ಸಮ್ಮತಿಯನ್ನು ಕೊಟ್ಟೇನೆ ? ಇನ್ನೊ ಬ್ಬಳನ್ನು ವರಿ ಸಲು ನಿಶ್ಚಸಿ, ಅಥೈಲ್ಯದಿಂದ ನನ್ನನ್ನು ಹೊಗಳುತ್ತಿದ್ದರೆ, ನಾನು ನಂಬುವೆನೆ? ನಿಜವೆಂದು ನಂಬಲೆಂತು ? ರಾಮ :- (ಮಂಡಿಯೂರಿ ಕುಳಿತು) ನನಗಿರುವುದು ಧೈರವೋ, ನಿಶ್ಚಯಚಿತ್ರವೊ, ನೀನೇ ಪರೀಕ್ಷಿಸು. ಎಲ್ ರಮಣಿ, ಗಳಿಗೆ ಗಳಿಗೆಗೂ ನಿನ್ನ ಮಹಾತ್ಮಿಯು ಗೋಚರವಾಗುತ್ತಿದೆ. ನನಗೆ ಶಂಕೆಯ ಲಜ್ಜೆ ಯ ಹೆಚ್ಚುತ್ತಲಿದೆ. ಹೀಗೆಯೇ ನಾನು ನಿನ್ನ ....... ... .. ವಿಜ :-(ಹಿಂದೆಯೇ) ನಾನು ಇನ್ನು ನಿಜವಾಗಿಯೂ ಸಹಿಸಲಾ ರೆನು. (ಮುಂದೆ ಬಂದು) ರಾಮವರ್ಮನೆ, ಇದೇಯೋ ನಿನ್ನ ಅಸಡ್ಡೆ? ಸ್ವಾ ರಸ್ಯವಿಲ್ಲದ ಸಂಭಾಷಣೆ ? ದೇವ :-ಇದೆಯೋ ನಿನ್ನ ತಿರಸ್ಕಾರ ! ಇದೇನೋ ಲೋಕ ಮತ್ಯಾ ದೆಯಿಂದ ಇದಿರೊ ೦ಡುದು ! ಸತ್ಯವಾಕ್ಯ ! ಈಗೇನು ಹೇಳುವಿ ?