ಪುಟ:ನಿರ್ಮಲೆ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ನಿರ್ಮಲೆ ಅವನೇ ಬಂದನು, ಪ್ರಾಯಶಃ, ಕಮಲೆಯ ವರ್ತಮಾನವನ್ನೇನಾದರೂ ತಂದಿರಬಹುದು. (ಮೈಯೆಲ್ಲಾ ಕೆಸರುಮಾಡಿಕೊಂಡು ದುರ್ಮತಿಯು ಬರುವನು ) ಪ್ರಿಯ:-ಪ್ರಿಯಮಿತ್ರನೆ, ನೀನು ಸತ್ಯವಂತನು, ವಾಕ್ಯ ಪರಿಪಾಲ ಕನು, ಸ್ನೇಹಧರ್ಮಕ್ಕೆ ಇದೇ ಚಿಹ್ನೆ ಯಲ್ಲವೆ ? - ದುರ್ಮ:-ಓಹೋ, ನಾನೇ ನಿನ್ನ ಮಿತ್ರನೊ ? ಎಲ್ಲವೂ ನನಗೆ ಗೊತ್ತುಂಟು, ಕೆಲಸಗಳಾದರೆ, ನನ್ನಂತಹ ಮಿತ್ರನು ಜಗತ್ತಿನಲ್ಲೇ ಬೇರೆ ಬ್ಬನಿಲ್ಲ ವೆಂದು ಒಪ್ಪಿ ಕೊಳ್ಳುವಿ, ರಾತ್ರೆಯ ಕಾಲದಲ್ಲಿ ಕುದುರೆಯ ಸವಾ ರಿಯನ್ನು ಮಾಡುವುದು ಸುಖದ ಕೆಲಸವಲ್ಲ. ಗಾಡಿಯ ಕುಲುಕಾಟಕ್ಕಿಂತ ಲೂ ಇದರ ವ್ಯಥೆಯು ಹೆಚ್ಚಾದುದು. ಆ ಗೋಳು ನಿನಗೆ ಗೊತ್ತೆ ? ಪ್ರಿಯ:- ಅದಿರಲಿ, ನಿನ್ನ ಜತೆಯವರೆಲ್ಲಿ ? ಸುಖವಾಗಿರುವರಷ್ಟೆ ? ಅವರನ್ನು ಮನೆಗೆ ಬಿಟ್ಟು ಬಂದೆಯೋ ? ದುರ್ಮ:-ಸರಿ, ಸರಿ. ಅದಿರಲಿ, ಸ್ವಲ್ಪ ತಡೆ, ಎರಡು ಘಂಟೆಗಳ ಕಾಲದಲ್ಲಿ ಇಪ್ಪತ್ತೈದು ಮೈಲಿ ಪ್ರಯಾಣವು, ಕಡಮೆಯ ಸವಾರಿಯೊ ? ಕುದುರೆಗಳ ಬಾಯಿನಲ್ಲಿ ನೊರೆಯು ಹರಿಯುತ್ತಲಿದೆ. ನರಿಯ ಬೇಟೆಗಾಗಿ ನಲ್ವತ್ತು ಮೈಲಿಯಾದರೂ ನಿರಾಯಾಸವಾಗಿ ಸವಾರಿಮಾಡಬಹುದು, ಈ ಹಾಳು ಹೆಂಗಸರ ಜತೆಯಲ್ಲಿ ಹತ್ತೇ ಮೈಲಿ ಪ್ರಯಾಣಮಾಡಿದರೆ ಜೀವವೇ ಔದಂತಾಗುವುದು. - ಪ್ರಿಯ :-ನಿಜ, ಹೆಂಗಸರನ್ನು ಎಲ್ಲಿ ಬಿಟ್ಟು ಬಂದಿರುವೆ ? ನಾನು ಆತುರದಿಂದ ಸಾಯುತ್ತಿರುವೆನು, ಬೇಗೆ ಹೇಳು. ದುರ್ಮ:-ಬಿಡುವುದೆ ? ಎಲ್ಲಿಗೆ? ಅವರು ಮೊದಲಿದ್ದ ಕಡೆಯೇ ಅವ ರನ್ನು ಬಿಟ್ಟಿರುವೆನು. ಪ್ರಿಯ:-ಇದೊಂದು ಒಗಟೆಯಾಯಿತು, ಮನೆಯಲ್ಲಿ ? ದುರ್ಮ:-ಅಲ್ಲ, ಎಲ್ಲಿ? ಮತ್ತೊಂದು ಒಗಟಿಗೆ ಉತ್ತರವನ್ನು ಹೇಳು.