ಪುಟ:ಬತ್ತೀಸಪುತ್ತಳಿ ಕಥೆ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಸಪುತ್ತಳಿ ಕಥೆ F ಕಂಡು, ಅವನಿಗೆ ಮನಸೋತು ಅವನ ಕರೆದು-ಎಲೈ ಪುರುಷನೇ ! ನನ್ನ ಮನೆಯಲ್ಲಿ ಬಹಳ ದ್ರವ್ಯವಿದೆ. ಅದ ತೆಗೆದುಕೊಂಡು ಬರುತ್ತೇನೆ. ನೀನೂ ನಾನೂ ಗಂಡಹೆಂಡರಾಗಿ ದೂರದೇಶದಲ್ಲಿ ಕುವ-ಎಂದು ಹೇಳಿದ ಮಾತಿಗೆ ಒಡಂಬಟ್ಟು ದರಿಂದ ನಾನು ಬರುವ ತನಕ ನೀನು ಊರಮುಂದೆ ಇರುವ ಕಾಳಿಕಾದೇವಿಯ ಗುಡಿಯಲ್ಲಿ ರು, ಎಂದು ಹೇಳಿ, ಅವನ ಕಳು ಹಿಸಿ, ಅರಮನೆಗೆ ಹೋಗಿ, ಅರಸಿನ ಸಂಗಡ ಮೋಸಗಾರಿಕೆಯಲ್ಲಿದ್ದು, ಅರಸು ಮನೆತು ಮಲಗಿರುವ ವೇಳ ನೋಡಿ, ದೊಡ್ಡ ಕಲ್ಪ ಶಿರದ ಮೇಲೆ ಎತ್ತಿ ಹಾಕಿ, ಅರಸನ ಕೊಂದು, ಬಂಡಾರದಲ್ಲಿ ಇದ್ದ ಒಡವೆ ಹಣ ಮೊದ ಲಾಗಿ ಬೇಕಾದಷ್ಟು ತೆಗೆದುಕೊಂಡು, ಊರ ಮುಂದಣ ಕಾಳಿಕಾದೇವಿಯ ಗುಡಿಗೆ ಬಂದು, ಆ ಪುರುಷನ ನೋಡಲಾಗಿ-ಅವನು ಹಾವು ಮುಟ್ಟಿ ಮೃತ ನಾಗಿರುವುದ ಕಂಡು ನಾನು ಊರೊಳಗೆ ಹೋಗಿ ಮನೆಯಲ್ಲಿ ಇದ್ದರೆ ಅರಸನ ಕೊಂದವಳ್ವಳೆಂದು ದೂತಿಯರು ದೂಖುನಾಡಿಯಾರು ಎಂದು ಆ ಪಟ್ಟಣವ ಬಿಟ್ಟು, ರತ್ನಾವತಿಯಂಟಿ ಪಟ್ಟಣವ ಸೇರಿ, ಅಲ್ಲಿ ದೇಸಿ ಯಾಗಿರಲಾಗಿ ; ಅತ್ಯಲಾಬಳಿಕ ಅರಸು ಸತ್ತ ಸುದ್ದಿಯ ದೂರದಲ್ಲೇ ಕೇಳಿ, ನನ್ನ ಗಂಡನಾದ ರತ್ನದತ್ತ ಆಸಟ್ಟಣಕ್ಕೆ ಬಂದು, ಮನೆಯಲ್ಲಿ ನನ್ನ ಕಾಣದೆ, ವಿಚಾರಿಸಿ, ಬಳಿಕ ಮತ್ತೊಬ್ಬಳ ಮದುವೆಯಾಗಿ, ನನ್ನ ಮಗ ಸಹಿತ ಇರುತಿದ್ದನು. ಕೆಲವು ದಿನದ ಮೇಲೆ ಆ ಮಗ ದೊಡ್ಡವ ನಾಗಿ ಬಲು ಜಾಣನಾಗಿ ಅನೇಕ ದ್ರವ್ಯ ಸಂಪಾದಿಸಿ ಅಲ್ಲಿಂದ ವ್ಯಾಪಾರ ನಿಮಿತ್ತ ರತ್ನವತಿಗೆ ಬಂದು, ನನ್ನ ಕಂಡು, ನನ್ನ ಮನೆಗೆ ಬಂದು, ಬಹಳ ದ್ರವ್ಯವ ಕೊಟ್ಟು, ಮಂಚದ ಮೇಲೆ ಕುಳಿತುಕೊಳ್ಳಲಾಗಿ; ನಾನು ಸವಿ ಪದಲ್ಲಿ ಕುಳಿತುಕೊಂಡು ವೀಳ್ಯ ಮಡಿಸಿಕೊಟ್ಟು, ಮುದ್ದು ಗೈದು, ಆಲಿಂಗನ ಮಾಡಿದಲ್ಲಿ ನನ್ನ ಸ್ತನಗಳಿಗೆ ಹಾಲುದುಂಬಲಾಗಿ-ಮಕ್ಕಳ ಮೇಲಿನ ಮೋ ಹದಂತೆ ಇದೇನಾತ್ಮರವೆಂದು, ಕಡೆಗೆ ಸೇರಿ, ಕುಳಿತು, ಇಂತೆಂದು ಕೇಳಿದೆನು:- ನೀನು ಯಾವ ದೇಶ ? ಯಾರ ಮಗ ? ಇಲ್ಲಿಗೆ ಏನು ಕಾರಣ ಬಂದೆ? ಎನ್ನಲಾಗಿ ; ಅವನು-ನಾನು ಹೇಮಾವತಿಯೆಂಬ ಪಟ್ಟ ಇದ ವರ್ತಕನಾದ ರತ್ನ ದತ್ತನ ಮೊದಲನೆಯ ಹೆಂಡತಿಯ ಮಗ, ವ್ಯಾಪಾ ರನಿಮಿತ್ತವಾಗಿ ಇಲ್ಲಿಗೆ ಬಂದೆ-ಎಂದ ಮಾತ ಕೇಳಿ, ಅವ ನನ್ನ ಮಗನೆಂದು 13