ಪುಟ:Vimoochane.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪರಾಯಣರು, ಅನಿವಾರ್ಯವಾಗಿ ಬೀದಿತಿರುಗುವ ಪೋಲಿ ಹುಡುಗರು,
ಜೇಬುಗಳ್ಳರು, ನಮ್ಮ ಡಾಕ್ಟರು...ಲಾಯರು, ಸಮಾಜದ ದೃಷ್ಟಿಯಲ್ಲಿ
ಕಲಂಕಿನಿಯಾದ ಸ್ತ್ರೀ, ಅದರೆ ದೃಷ್ಟಿಯಲ್ಲಿ ಪ್ರತಿಷ್ಠಿತರ ಮಗಳು,
ಸಮಾಜದ ಹಸಿದವರು-ಕಸಿದವರು, ಅನುನಯದ ದಂಪತಿಗಳು,
ವೈಷಮ್ಯದ ಗಂಡ ಹೆಂಡಿರು, ದೇಹ ಮಾರುವ ಸೂಳೆಯರು ... ಹೀಗೆ
ಈ ಕಾದಂಬರಿಯಲ್ಲಿ ಬರುವ ವ್ಯಕ್ತಿಗಳು ಒಬ್ಬರೆ-ಇಬ್ಬರೆ? ಅವರೆಲ್ಲರ
ಜೀವನದ ವಿಭಿನ್ನ ಇಣಿಕು ನೋಟ ಇಲ್ಲಿದೆ. ಅದರ ಸಮಗ್ರ ಚಿತ್ರವೇ ನಮ್ಮ ಸಮಾಜ."
"ಮುಂದಕ್ಕೆ ಹೇಳಿ."
" ಈ ಕಾದಂಬರಿಯ ವ್ಯಕ್ತಿಗಳು ಹುಟ್ಟಿ ಬೆಳೆಯುತ್ತಾರೆ.
ವಿಧ ವಿಧವಾಗಿ ರೂಪುಗೊಳ್ಳುತ್ತಾರೆ-ನಮ್ಮೆಲ್ಲರನ್ನೂ ನಿಯಂತ್ರಿಸುತ್ತಿ
ರುವ ಈ ಲೋಕದ ಸೂತ್ರಕ್ಕೆ ಅನುಸಾರವಾಗಿ. ನಾನು ಬೇಕು
ಬೇಕೆಂದೇ ಅವರನ್ನು ಕುಣಿಸುವುದಿಲ್ಲ. ಸಮಾಜದಲ್ಲಿ ಕೇಳಬರುವ
ರಾಗತಾಳಕ್ಕೆ ಮೇಳೈಸುವಂತೆ ಆ ಪಾತ್ರಗಳೆ ಕುಣಿಯುತ್ತವೆ."
"ಮುಂದೆ?"
"ಇಲ್ಲಿನ ಪಾತ್ರಗಳು ಬಾರಿಬಾರಿಗೂ ಮುಖ ತೋರಿಸುತ್ತಲೇ
ಇರುವುದಿಲ್ಲ.ಜೀವನ ಇರುವುದು ಒಂದು ಪ್ರವಾಹದ ಹಾಗೆ. ಚಂದ್ರ
ಶೇಖರ ಆರು ವರ್ಷದ ಹುಡುಗನಾಗಿದ್ದಾಗ ಜೀವನದ ದೊಡ್ಡ ದೋಣಿ
ಯಲ್ಲೊಬ್ಬ ಪ್ರವಾಸಿಯಾಗುತ್ತಾನೆ. ಆದರೆ ಒಬ್ಬಂಟಿಗರಾಗಿ ಯಾರೂ
ಪ್ರವಾಸ ಮಾಡುವುದಿಲ್ಲ ಅಲ್ಲವೆ? ಸಹ ಪ್ರವಾಸಿಗಳಿರುತ್ತಾರೆ.
ಪ್ರವಾಸ ಒಂದೊಂದು ಘಟ್ಟಕ್ಕೆ ಬಂದಾಗಲೂ ಕೆಲವರಿಳಿಯುತ್ತಾರೆ.
ಹೊಸಬರು ಬರುತ್ತಾರೆ. ಒಬ್ಬಿಬ್ಬರು, ಅಥವಾ ಮೂವರು ನಾಲ್ವರು,
ಪ್ರವಾಸದುದ್ದಕ್ಕೂ ಬರುವುದು ಸ್ವಾಭಾವಿಕ ಚಂದ್ರಶೇಖರ ಹೀಗೆ
ಪ್ರಯಾಣ ಬೆಳೆಸುತ್ತಾನೆ.ಮೂವತ್ತೆಂಟನೆಯ ವಯಸ್ಸಿನವರೆಗೂ
ಅವನ ಪ್ರಯಾಣ..."
"ಸರಿಯಾಗಿದೆ."
"ಅಷ್ಟೇ ಅಲ್ಲ. ಚಾರಿತ್ರಿಕ ಕಾಲಾವಧಿಯ ಬೆಳವಣಿಗೆಯೂ