ಪುಟ:ಕುರುಕ್ಷೇತ್ರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಲೇಬೋಧಿನಿ ನೆಯಲ್ಲಿಯೇ ಇದಾಳ, ನಿನ್ನ ತಂಗಿ ರಾಧೆಯು ಗಳಿಗೆಗೊಂದುಸಲ ಹೊರ ಗಿನಿಂದ ಅಣ್ಣಯ್ಯನೆಲ್ಲಿ ಎಂದು ಕೇಳಿಕೊಂಡುಬಂದು, ಆಟವನ್ನು ಬಿಟ್ಟು ಬಳಲಿದಂತೆ ಮಲಗಿಕೊಳ್ಳುತಾಳ, ನೀನು ಬೊಂಬೆ ತರುತಿಯೆಂದು . ಆದಾಗ ಬೊಂಬೆಯೇ ಬೇಡ, ನೀನು ಬಂದರೆ ಸಾಕೆನ್ನು ತಾಳ ಇದೆ ಲ್ಲಾ ಬರೆಯುವುದು ನೀನು ಮನೆಯಕಡೆಯ ಯೋಚನೆಯನ್ನು ಹತ್ತಿ ಸಿಕೊಂಡು ಓದುವುದರಲ್ಲಿ ಹಿಂದೆ ಬೀಳಬೇಕೆಂದಲ್ಲ, ನಿನಗೆ ಮಾತ್ರವೇ ಅಲ್ಲದೆ ಮನೆಯವರಿಗೆಲ್ಲಾ ಇಷ್ಟು ಕಷ್ಟವನ್ನುಂಟುಮಾಡಿ, ನೀನಲ್ಲಿಗೆ ಹೋಗುವುದನ್ನು ಯೋಚಿಸಿ, ಇದಕ್ಕೆ ತಕ್ಕ ಫಲವುಂಟಾಗುವಂತೆ ಅತ್ಯಾಸಕ್ತಿಯಿಂದ ಓದಬೇಕೆಂದು ಬರೆದಿದ್ದೇನೆ.” ಆದರೂ ಶರೀರಕ್ಕೆ ಸ್ವಲ್ಪವೂ ಆಲಸ್ಯವಾಗದಂತೆ ಅತಿಜಾಗ್ರತೆಯಾ ಗಿರಬೇಕು, ಮನೆಯಲ್ಲಿ ಆಹರ್ನಿಶಿಯೂ ನಿನ್ನ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತಿದ್ದರು. ದುಡ್ಡಿಗೋಸ್ಕರ ಮಾಡುತಿರುವ ಪರ ಜನರು ಅಷ್ಟು ಆಸಕ್ತಿಯಿಂದ ನಿನ್ನ ವಿಷಯವನ್ನು ವಿಚಾರಿಸಿಕೊಳ್ಳಲಾರರು. ನಿಮ್ಮ ಮುಖ್ಯೋಪಾಧ್ಯಾಯರು ಬಹಳ ದೊಡ್ಡ ಮನುಷ್ಯರೆಂದೂ ಹೊ ರಗಿನಿಂದ ಬರುವ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚಾ ಗಿ ನೋಡಿಕೊಳ್ಳುತ್ತಾರೆಂದೂ ಕೇಳದೇನೆ ಸಮಸ್ತ ವಿಷಯಗಳಲ್ಲಿಯ ಅವರು ಹೇಳುವಂತೆ ನಡೆದುಕೊಂಡು ಸರಿಯಾಗಿರುವೆಯಂದು ಕೋರು ತೇನೆ, ಮುಖ್ಯವಾಗಿ ಒಬ್ಬನೇ ದೂರದಲ್ಲಿರುವುದರಿಂದ ಬುದ್ದಿಯಾಗಿ ನಡೆ ದುಕೊಳ್ಳಬೇಕು, ನಿನ್ನ ಚಿಂತೆಯನ್ನು ಒಂದು ನಿಮಿಷವಾದರೂ ಮರೆಯುವುದಕ್ಕೆ ಆಗುವುದಿಲ್ಲವಾಗಿ ಪದೇಪದೇ ಬರೆಯುತಿರಬೇಕು, ಇಂತಿ ಅನೇಕ ಆಶೀರ್ವಾದಗಳು,