ಪುಟ:ರಾಣಾ ರಾಜಾಸಿಂಹ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣಾ ರಾಜಸಿಂಹ [ಪ್ರಕರಃ wwwswswxxxxxxxxxxxx ಓದಿ ಸುಮ್ಮನೆ ಕೂಡುವ ವೀರನಲ್ಲ, ” ಹೀಗೆ ಮನಸ್ಸಿನಲ್ಲಿ ನಿಶ್ಚಯಿಸಿ ಜಯಸಿಂಹನು ರೂಪನಗರಕ್ಕೆ ಬಂದನು ಅಲ್ಲಿ ಮೊಗಲರಸೈನ್ಯವು ಎರಡು ಸಾವಿರವಿತ್ತು. ಗಜಪೂತರ ಸೇನೆಯು ತೀರ ಸ್ವಲ್ಪವಿತ್ತು ನಾಳೆಬೆಳಿಗ್ಗೆ ಮೊಗಲರು ಕನ್ನೆ ಯನ್ನು ತೆಗೆದುಕೊಂಡು ಹೋಗುವರೆಂಬ ಸುದ್ದಿಯು ಆತನಿಗೆ ಹತ್ತಿತು. ಆಮೇಲೆ ಅವನು ದಿಲ್ಲಿಗೆ ಹೋಗುವ ಮಾರ್ಗದಿಂದ ಹೊರಟನು ಮಾರ್ಗದಲ್ಲಿ ಲಕ್ಷ್ಮಪೂರ್ವಕವಾಗಿ ನಿರೀಕ್ಷಣಮಾಡುತ್ತ ಹೋದನು. ರಜ ಪೂತ ಸವಾರರು ದಿಲ್ಲಿಯ ಮಾರ್ಗದಮೇಲೆ ಯೋಗ್ಯಸ್ಥಳದಲ್ಲಿ ಹೊಂಚು ಹಾಕಿಕೊಂಡು ಕುಳಿತಿರಬಹುದೆಂದು ಆತನು ಗೊತ್ತುಮಾಡಿದನು ಮೊದ ಮೊದಲು ಆತನಿಗೆ ನಿರಾಶೆಯಾಯಿತು ಮುಂದೆ ಹೋದಂತೆ ಮಾರ್ಗದಲ್ಲಿ ಒಂದು ಇಕ್ಕಟ್ಟಾದ ಪ್ರದೇಶವನ್ನು ಕಂಡನು ಅಲ್ಲಿ ಮಾರ್ಗವು ತೀರ ಕಿರಿದಾಗಿತ್ತು, ಎರಡೂ ಬದಿಗೆ ಎತ್ತರವಾದ ಪರ್ವತಗಳು , ಮಧ್ಯದಲ್ಲಿ ಇಕ್ಕಟ್ಟಾ ದದಾರಿ; ಬಲಗಡೆಯ ಪರ್ವತವು ಬಹಳ ಎತ್ತರ, ಅದರಮೇಲೆ ಹತ್ತುವದು ಯಾರಿಗೂ ಅಸಾಧ್ಯ ಎರಡನೆಯ ಪರ್ವತವು ಅಷ್ಟು ಎತ್ತರ ವಾಗಿರಲಿಲ್ಲ, ಮತ್ತು ಪಾವಟಿಗೆಗಳ ಹಾಗೆ ಇತ್ತು ಅದರಮೇಲೆ ಏರು ವದು ಅಷ್ಟು ಕಷ್ಟವಲ್ಲ, ಈ ಎಡಗಡೆಯ ಮಗ್ಗಲ ಪರ್ವತದಲ್ಲಿ ಒಂದು ಸಣ್ಣ ಖಿಂಡಿ, ಆಖಿಂಡಿಯಿಂದ ಒಂದು ಕಾಲುದಾರಿಯು ಆಚೆಗೆ ಹೋಗು ವಂತಿತ್ತು. ಆಎರಡು ಪರ್ವತಗಳ ನಡುವಿನ ಇಕ್ಕಟ್ಟಾದ ಮಾರ್ಗವನ್ನು ನೋಡಿ ರಾಣಾನು ಇರುವದಾದರೆ ಇಲ್ಲಿಯೆ ಇರಬೇಕೆಂದು ನಿಶ್ಚಯಿ ಸಿದನು. ಮೊಗಲರ ಸೈನ್ಯವು ಈ ಇಕ್ಕಟ್ಟಿನ ಸ್ಥಳಕ್ಕೆ ಒಂದಕೂಡಲೆ ಪರ್ವ ತದ ಮೇಲ್ಬಾಗದಿಂದ ರಜಪೂತಸವಾರರು ಅವರ ಮೈಮೇಲೆ ಹರಿದು ಹೋಗಿ, ಅವರನ್ನು ತುಂಡರಿಸಬಹುದಾಗಿತ್ತು, ಬಲಗಡೆಯ ಮಗ್ಗಲು ಪರ್ವತದಮೇಲೆ ಹತ್ತುವಂತಿದ್ದಿಲ್ಲ, ಅದರಮೇಲೆ ಕುದುರೆಗಳು ಏರಿ .. ೬-೨, ೨೨, .೨೨೨-೨ --- , .೨ •••• ೨ --