ಅಂಗದಮೇಲೊಂದು ಲಿಂಗವ ಕಂಡೆ;

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗದಮೇಲೊಂದು ಲಿಂಗವ ಕಂಡೆ; ಲಿಂಗದಮೇಲೊಂದಂಗವ ಕಂಡೆನು ನೋಡಾ. ಅಂಗವೆಂದರೆ ಆತ್ಮನು; ಲಿಂಗವೆಂದರೆ ಪರಮನು. ಶಿವಜೀವರೊಂದಾದಲ್ಲಿ
ಪ್ರಾಣಾಪಾನ
ವ್ಯಾನ
ಉದಾನ
ಸಮಾನ
ನಾಗ
ಕೂರ್ಮ
ಕೃಕರ
ದೇವದತ್ತ
ಧನಂಜಯ[ವೆ]ಂಬ ದಶವಾಯುಗಳ ಗಮನಾಗಮನದ ವಿಷಯವ್ಯಾಪ್ತಿಯಡಗಿ ಆತ್ಮಲಿಂಗಸಂಬಂಧಿಯಾಗಿರ್ದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.