ಅಂಗದ ಭ್ರಮೆಯುಡುಗದೆ, ಗುಣವಳಿಯದೆ,
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಂಗದ ಗುಣವಳಿಯದೆ
ಪ್ರಾಣದ ಪ್ರಪಂಚು ಹಿಂಗದೆ
ಭಾವದ ಭ್ರಮೆಯುಡುಗದೆ
ಮನದ ಮಾಯವಡಗದೆ
ಆತ್ಮನ ಅಹಂಮಮತೆ ಕೆಡದೆ
ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ ಕಾಕುಮಾನವರನೇನೆಂಬೆನಯ್ಯಾ ಅಖಂಡೇಶ್ವರಾ.