ಅಂಗವಿಡಿದು, ಅಂಗ ಅನಂಗವೆಂಬೆರಡನೂ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಂಗವಿಡಿದು
ಅಂಗ ಅನಂಗವೆಂಬೆರಡನೂ ಹೊದ್ದದ ಮಹಿಮನ ನೋಡಾ ! ಅಂಗವೆ ಆಚಾರವಾಗಿರಬಲ್ಲ
ಆಚಾರವೆ ಅಂಗವಾಗಿರಬಲ್ಲನಾಗಿ ಅಂಗವಿಲ್ಲದಪ್ರತಿಮ ನೋಡಾ ! ಆಚಾರವೆ ಸ್ವಾಯತ
ಆಚಾರವೆ ಪ್ರಾಣ ! ಗುಹೇಶ್ವರಲಿಂಗದಲ್ಲಿ ನಿನ್ನ ಆಚಾರಭಿಕ್ಷವನಿಕ್ಕಾ ಚನ್ನಬಸವಣ್ಣಾ.