ವಿಷಯಕ್ಕೆ ಹೋಗು

ಅಂಗಸಂಬಂಧ ಲಿಂಗವಾದ ಬಳಿಕ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಂಗಸಂಬಂಧ ಲಿಂಗವಾದ ಬಳಿಕ ಲಿಂಗೋಪಜೀವಿಯಾಗಿರಬೇಕು. ಲಿಂಗಸಂಬಂಧ ಅಂಗವಾದ ಬಳಿಕ ಲಿಂಗೋಪಜೀವಿಯಾಗಿರಬೇಕು
ಇದಾವ ಸಂಬಂಧವಿಲ್ಲದೆ ಆಶ್ರಯ ಗುಣದಿಂದ ಲಾಂಛನವಾದುದೇನಯ್ಯಾ ? ಲಾಂಛನಂ ದುರ್ಲಭಂ ಚೈವ ಸ್ವಾನುಭಾವೋಹ್ಯತಃ ಪರಂ ದುರ್ಲಭಂ ಶಿವತತ್ವಂ ಚ ಪ್ರಾಣಲಿಂಗಮತಃ ಪರಂ ಎಂದುದಾಗಿ
ಆಶ್ರಯದ ಪರಿಯಲ್ಲ; ನಿರಾಶ್ರಯದ ಪರಿಯಲ್ಲ
ಲಿಂಗಸಾರಾಯ ಶರಣ. ಇದು ಕಾರಣ
ಕೂಡಲಚೆನ್ನಸಂಗಯ್ಯನಲ್ಲಿ