ವಿಷಯಕ್ಕೆ ಹೋಗು

ಅಂಗ ಗುರುವಿಂಗೆ ಆಪ್ತ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಅಂಗ
ಆಪ್ತ
ಸ್ಥಾನ
ಸದ್ಭಾವ
ಎಂಬ
ಚತುರ್ವಿಧಭಕ್ತಿಯಿಂದೆ
ಗುರುವಿಂಗೆ
ತನುವ
ಸವೆಸಿದಡೆ

ತನುವಿನಲ್ಲಿ
ದೀಕ್ಷಾ
ಶಿಕ್ಷಾ
ಸ್ವಾನುಭಾವಜ್ಞಾನಸ್ವರೂಪವಾದ
ಶ್ರೀಗುರುದೇವನು
ನೆಲೆಗೊಂಬನು
ನೋಡಾ.
ಮಂತ್ರ
ಜ್ಞಾನ
ಜಪ
ಸ್ತೋತ್ರವೆಂಬ
ನಾಲ್ಕು
ತೆರದ
ಭಕ್ತಿಯಿಂದೆ
ಲಿಂಗಕ್ಕೆ
ಮನವ
ಸವೆಸಿದಡೆ

ಮನದಲ್ಲಿ
ಇಷ್ಟ
ಪ್ರಾಣ
ಭಾವಸ್ವರೂಪವಾದ
ಪರಶಿವಲಿಂಗವು
ನೆಲೆಗೊಂಬುದು
ನೋಡಾ.
ಅನ್ನ
ವಸ್ತ್ರ
ಆಭರಣಾದಿ
ಹದಿನೆಂಟು
ತೆರದ
ಭಕ್ತಿಯಿಂದೆ
ಜಂಗಮಕ್ಕೆ
ಧನವ
ಸವೆಸಿದಡೆ

ಧನದಲ್ಲಿ
ಸ್ವಯ
ಚರ
ಪರಸ್ವರೂಪವಾದ
ಮಹಾಘನ
ಜಂಗಮವು
ನೆಲೆಗೊಂಬುದು
ನೋಡಾ.
ಇಂತೀ
ತ್ರಿವಿಧಸಂಪತ್ತು
ನಿಮ್ಮ
ಶರಣರಿಗಲ್ಲದೆ
ಉಳಿದವರಿಗಳವಡದಯ್ಯ
ಅಖಂಡೇಶ್ವರಾ.