ಅಂಗ ಲಿಂಗ, ಲಿಂಗ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗ ಲಿಂಗ
ಲಿಂಗ ಅಂಗವೆಂದೆಂಬಿರಿ; ಅಂಗ ಸೂತಕವ ಹೇಳುವಿರಿ. ಪ್ರಾಣವೆ ಪ್ರಸಾದ
ಪ್ರಸಾದವೆ ಪ್ರಾಣವೆಂದೆಂಬಿರಿ; ಪ್ರಕೃತಿ ಭಾವವ ಕಲ್ಪಿಸಿಕೊಂಬಿರಿ; ಇದು ಲಿಂಗಾಂಗ ಪ್ರಾಣಲಿಂಗ ಪ್ರಸಾದಭಾವವೆ? ಅಲ್ಲ ಕಾಣಿರೋ. ಲಿಂಗಾಂಗ ಪ್ರಾಣಲಿಂಗ ಪ್ರಸಾದಭಾವ ಭರಿತವಾದರೆ
ಲಿಂಗವ ಮುಟ್ಟಿ ಅರ್ಪಿಸಲ್ಲಮ್ಮೆವೆಂಬುದು ಅಜ್ಞಾನ ನೋಡ. ಈ ಅಜ್ಞಾನಿಗಳ ಅಂಗದಲ್ಲಿ ಲಿಂಗವುಂಟೇ? ಮನದಲ್ಲಿ ಮಂತ್ರವುಂಟೇ? ಪ್ರಾಣದಲ್ಲಿ ಪ್ರಸಾದವುಂಟೇ? ಈ ಅಶುದ್ಧ ಜೀವಿಗಳಿಗೆ ಶುದ್ಧವಹ ಶಿವಪ್ರಸಾದ ಸಂಬಂಧ ಎಂದೂ ಇಲ್ಲ ಕಾಣ. ಲಿಂಗ ಸೋಂಕಿದ ಅಂಗದಲ್ಲಿ ಶುದ್ಧಾಶುದ್ಧ ಉಂಟೇ? ಇಲ್ಲ; ಈ ಅನಂಗಸಂಗಿಗಳ ಮುಖ ತೋರದಿರಾಯೆನಗೆ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.