ಅಂಗ ಹಲವರ ಮೇಲೇ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗ ಹಲವರ ಮೇಲೇ ನಿಂದಾತನ ಕಾಣುವ ಕಂಗಳು ಒಂದೇ ನೋಡಾ. ಆ ಕಾಣುವ ಕಂಗಳು ತನ್ನ ಕಣ್ಣೋ
ಬೇರೊಂದು ಬಿನ್ನಾಣದ ಕಣ್ಣೋ ಎಂಬ ಬೆಡಗನರಿದು
ತನ್ನ ಕಣ್ಣ ಕಳದು ಬಿನ್ನಾಣದ ಕಣ್ಣನಳಿಯಲು ತನ್ನ ಮುನ್ನಿನ ಕಣ್ಣು ಕಾಣಬಂದಿತ್ತು ನೋಡಾ. ಅದು ನಿನ್ನ ಕಣ್ಣೆಂದರಿದ ಮಾತ್ರದಲ್ಲಿ ಎನ್ನ ನುಂಗಿತ್ತು. ನಿನ್ನಲ್ಲಿ ಅಡಗತ್ತು; ಅದು ಅಡಗಿದ ಠಾವಿನಲ್ಲಿ ನಾನಡಗಿ ನಿರ್ವಯಲಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.