ಅಂಥ ಮುನ್ನೂರಾ ಬ್ರಹ್ಮಾಂಡವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಥ
ಬ್ರಹ್ಮಾಂಡವ
ಮೂವತ್ತು
ಮೂರುಲಕ್ಷದ
ಮೇಲೆ
ಸಾವಿರದ
ಮುನ್ನೂರಾ
ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು
ದೌಷ್ಟ್ರಿಯೆಂಬ
ಭುವನ.

ಭುವನದೊಳು
ಶಂಭುವೆಂಬ
ಮಹಾರುದ್ರಮೂರ್ತಿ
ಇಹನು.

ರುದ್ರಮೂರ್ತಿಯ
ಓಲಗದಲ್ಲಿ
ಆರುನೂರರವತ್ತು
ಕೋಟಿ
ಇಂದ್ರ
ಬ್ರಹ್ಮ
ನಾರಾಯಣರಿಹರು.
ಆರುನೂರರವತ್ತು
ಕೋಟಿ
ರುದ್ರರು
ವೇದಪುರುಷರು
ಮುನೀಂದ್ರರು
ಚಂದ್ರಾದಿತ್ಯರು
ದೇವರ್ಕಳಿಹರು
ನೋಡಾ
ಅಪ್ರಮಾಣಕೂಡಲಸಂಗಮದೇವಾ.