ವಿಷಯಕ್ಕೆ ಹೋಗು

ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು

ವಿಕಿಸೋರ್ಸ್ದಿಂದ

pages ೬–೨೫೩

ಶ್ರೀ
ಲಕ್ಷ್ಮೀ ನರಸಿಂಹ ಪ್ರಸನ್ನ,


ಅಕಬರಬೀರಬಲ ಚಾತುರ್ಯ
ವಾದ ವಿನೋದ ಕಥೆಗಳು.

ಭೀಮಾಚಾರ್ಯ ಸುಬ್ರಮ್ಹಣ್ಣಾಚಾರ್ಯ ಕಿತ್ತೂರ
ಇವರಿಂದ ರಚಿಸಲ್ಪಟ್ಟು
ಅದರ ವಿಶಿಷ್ಟ ಹಕ್ಕು ಪಡೆದು
ಬಳ್ಳಾರಿ, ಕರ್ನಾಟಕ ಬುಕ್ ಏಜಂಟ್,
ಶ್ರೀ. ಕನ್ನಯ್ಯ ಶೆಟ್ಟಿ ಇವರಿಗಾಗಿ
ಕರ್ನಾಟಕ ಬುಕ್ ಡಿಪೋ ಮುದ್ರಾಯಂತ್ರದಲ್ಲಿ
ಮುದ್ರಿಸಲ್ಪಟ್ಟಿತು.

ಬಳ್ಳಾರಿ
1915.
ರಿಜಿಸ್ಟರ್ಡ್ ಕಾಪಿರೈಟ್


-(ಪ್ರಸ್ತಾವನೆ)-


ಈ ಅತಿಪುಣ್ಯ ಭೂಮಿಯಾದ ಭಾರತ ವರ್ಷದಲ್ಲಿ ಮೊಗಲ ಬಾದಾಶಹನಾದ ನಾದ ಆಕಬರನ ಮತ್ತು ಅವನ ಕೃಪಾ ಪಾತ್ರನಾದ ಬೀರಬಲನ ಹೆಸರು ಗಳನ್ನು ಕೇಳಿದ ಒಬ್ಬ ಮನುಷ್ಯನಾದರೂ ಸಹ ದೊರಯಲಿಕ್ಕಿಲ್ಲ ಬಾದಶ ಹನ ಸಮ್ಮುಖದಲ್ಲಿ ನೀತಿ ರಸಯುಕ್ತವಾದ ಭಾಷಣಗಳಿಂದಲೂ, ಹಾಸ್ಯ ರಸ ಪ್ರಧಾನವಾದ ಕಥೆಗಳಿಳದಲೂ, ಜನರ ಮನಸ್ಸನ್ನು ಹರಣ ಮಾಡಿ ಕೊಂಡಂಥ, ಈಗ ಸಹಾ ಬೀರಬಲನ ಕಥೆಗಳನ್ನು ಕೇಳಿದ ಕೂಡಲೆ ಅವ ನಲ್ಲಿದ್ದ ಪ್ರಸಂಗಾವಧಾನತೆಯು ಎಷ್ಷು ತೀವ್ರವಾಗಿತ್ತೆಂಬದನ್ನು ಮನಸ್ಸಿ ನಲ್ಲಿ ಕಲ್ಲನೆಯನ್ನು ಸಹಾ ಮಾಡಲು ಸಾಧ್ಯವಿಲ್ಲ; ಇಂಥ ಅಕಬರ ಬೀರಬ ಲ್ಲರ ವಿಷಯಲ್ಲಿ ಇದ್ದಂಥ ಚಮತ್ಕಾರ ಕಥಗಳುಳ್ಳ ಪುಸ್ತಕವು ನಮ್ಮ ಮಾ ತೃ ಭಾಷೆಯಾದ ಕನ್ನಡದಲ್ಲಿ ಇಲ್ಲದ್ದನ್ನು ಕಂಡು, ನಮ್ಮಮ. ರಾ|| ರಾ|| ಕೇ. ಕೃಷ್ಣಸ್ವಾಮಿ ಶೆಟ್ಟಿ, ಮತ್ತು ಕನ್ನಯ್ಯ ಶೆಟ್ಟ, ಕರ್ನಾಟಕ ಏಜೆ೦ಟ್ ಬಳ್ಳಾರಿ. ಇವರು ನನಗೆ ಮಾತೃ ಭಾಷೆಯಲ್ಲಿ ಬರೆ ಪ್ರೋತ್ಸಾಹಿಸಿದ್ದರಿಂದ ಹಿಂದುಸ್ತಾನಿ ( ಭಾಷೆ ಯಲ್ಲಿದ್ದ ಎರಡು ಮೂ ರು ಗ್ರಂಥಗಳನ್ನು ಪರಿಶೋಧಿಸಿ, ರಚಿಸಿಯಿರುವೇನು.

ತಮ್ಮ ಕೃಪಾಭಿಲಾಷಿಯಾದ

ಲೇಖಕ

ಭೀಮಾಚಾರ್ಯ. ಸುಬ್ರಮ್ಹಣ‍್ಣಾಚಾರ್ಯ, ಕಿತ್ತೂರ.

--(ಅ ಕ ಬ ರ ಬೀ ರ ಬ ಲ ರ)--

ವಿಷಯಾನುಕ್ರಮಣಿಕೆ.

ಸಂಖ್ಯೆ
ವಿಷಯ.
ಪುಟಸಂಖ್ಯೆ
೧. ಪೂರ್ವಜನ್ಮ ವೃತ್ತಾಂತ
೨. ಜಾತಿ, ಜನ್ಮ, ಭೂಮಿ, ಮತ್ತು ಪ್ರಾಕಟ್ಯ
೩. ಬೀರಬಲನ ವೃದ್ಧಿಯೂ, ಪ್ರತಿಷ್ಟಿತೆಯೂ ಮತ್ತು ವಿಶೇಷ ಇತಿಹಾಸ ಸಂಗತಿಯೂ
೪. ಬೀರಬಲನ ಮರಣದವಾರ್ತೆಯನ್ನು ಕೇಳಿ ಬಾದಶಹನು ದುಃಖಪಟ್ಟದ್ದು
೧೬
೫. ವೇಷಧಾರಿಯಾದ ಬೀರಬಲ
೧೯
೬. ಬೀರಬಲನ ಕವಿತಾ ಚಾತುರ್ಯ
೨೧
೭. ನ್ಯಾಯ ಪರಾಯಣೆಯು
೨೨
೮. ನಡಾವಳಿ
೨೨
೯. ದಾತೃತ್ವ
೨೩
೧೦. ಬೀರಬಲನ ಸಂತತಿ
೨೬
೧೧. ರಾಜಬೀರಬಲನ ರಾಣೀಜನರು
೨೬
೧೨. ಬೀರಬಲನ ಉಪದೇಶಪರ ಮತ್ತು ಹಾಸ್ಯರಸೋತ್ಪಾದಕ ಸಣ್ಣ ಸಣ್ಣ ಕಥೆಗಳು
೨೬
೧೩. ಬೀರಬಲನ ವಿಷಯದಲ್ಲಿ ಉಂಟಾದ ಅಕ್ಷೇಪಗಳ ನಿರ್ಣಯ
೨೭

-(ಕ ಥೆ ಗ ಳು.)-

೧. ಚಾತುರ್ಯದಿಂದ ದೇವರನ್ನು ಗುರುತಿಸಬೇಕು.
೨೮
೨. ಗೋಮಹಿಮ
೩೦
೩. ಎರಡು ತಿಂಗಳು ಕೂಡಿಸಿ ಒಂದೇ ತಿಂಗಳು
೩೦
೪. ಇದಾದರೂ ನಮ್ಮದೇ ಅದೆ.
೩೦
೫. ತಾವು ಬಾದಶಹರು ಹ್ಯಾಗಾಗುತ್ತಿದ್ದೀರಿ;
೩೧


ಸಂಖ್ಯೆ
ವಿಷಯ.
ಪುಟಸಂಖ್ಯೆ
೬ ಶೂರ ಮತ್ತು ಅಂಜಗುಳಿ
೩೧
೭ ನಿಜವಾದ ಮೈಗಳ್ಳ
೩೦
೮ ಕಡುಲೋಭಿಯಾದ ಮನುಷ್ಯ
೩೦
೯ ಕನ್ನಡಿಯಲ್ಲಿ ಚಿತ್ರ
೩೫
೧೦ ವ್ಯಸನಿಯಾದವನ ವ್ಯಸನ
೩೭
೧೧ ಬೀರಬಲನ ವರ್ಣ
೩೯
೧೨ ನ್ಯಾಯದ ಗಂಟೆ
೪೦
೧೩ ಸ್ವಪ್ನದ ಅರ್ಥ
೪೩
೧೪ ನಾಲ್ಕೂ ಪ್ರಶ್ನೆಗಳಿಗೆ ಒಂದೇ ಉತ್ತರ
೪೪
೧೫ ಮಾವಿನ ಹಂಣಿನ ಸಿಪ್ಪೆ
೪೪
೧೬ ಕೈಯೊಳಗಿನ ಕಂಕಣಗಳೂ ಗಡ್ಡದೊಳಗಿನ ಕೂದಲುಗಳೂ
೪೫
೧೭ ನೂತನ ದಿವಾನ
೪೬
೧೮ ನಾಲ್ಕು ಜನ ವರ್ತಕರೂ ಮತ್ತು ಬಾದಶಹನು
೫೧
೧೯ ವಿಶ್ವಾಸವು ಅಧಿಕವೋ ಅಧಿಕವೋ !
೫೨
೨೦ ತುಪ್ಪದ ವ್ಯಾಪಾರ
೫೭
೨೧ ಬಾದಶಹ ಮತ್ತು ಗಂಗಕವಿ
೬೦
೨೨ ವೇಶ್ಯೆಯ ಗೃಹದಲ್ಲಿದ್ದ ಬಡವನ ಮಗಳು
೭೦
೨೩ ಸಂತೋಷದಿಂದ ಅಸಂತೋಷದಿಂದಲೋ
೭೩
೨೪ ಹನ್ನೆರಡರಲ್ಲಿ ನಾಲ್ಕು ಹೋದರೆ ಎಷ್ಟು!
೭೪
೨೫ ಕಾಲಿಕಾದೇವತೆಗೆ ಮಾಡಿದಚೇಷ್ಟೆ
೨೪
೨೬ ಸುವರ್ಣಕಾರರ ಚತುರತೆ
೭೫
೨೭ ಎಲ್ಲಕ್ಕಿಂತ ಅಧಿಕವಾದ ಪ್ರಿಯವಸ್ತು
೭೭
೨೮ ಮಾವಿನ ಹಂಣಿನ ಕಳವು
೩೯
೨೯ ಪ್ರಾರಬ್ಬವು ಹೆಚ್ಚೋ ಅಥವಾ ಉದ್ಯೋಗವೋ !
೪೨
೩೦ ಈರ್ವರು ಕೂಡಿಕೊಂಡೇ ಬರುವೆವು
೪೫
೩೧ ಬೀರಬಲನ ನಿಂದೆ
೪೯
೩೦ ಚಾತುರ್ಯದ ಪರೀಕ್ಷೆ
೪೯
೩೩ ತೊಗರಿಯಲ್ಲಿ ನವಿಲು
೯೦
೩೪ ಬಲೆಯೊಳಗಿನ ಹಂಣೂ, ಮತ್ತು ಮಲವಿಸರ್ಜನೆಯ ಕಾಲದಲ್ಲಿ ಬಂದ ದೇವರು
೩೫ ಅರ್ಧಬಿಸಿಲೂ ಅರ್ಧ ನೆರಳೂ
೩೬ ನೀನು ದೊಡ್ಡಕತ್ತೆಯಾಗಿರುವಿ
೩೭ ಯಾತರಮೇಲೆ ಹತ್ತುವಿರಿ!
೩೮ ಮುಂದೆ ಹೋಗಿ ಸಾಯಬೇಕೆನ್ನುವಿಯಾ !
೩೯ "ಮನೋಚಂದ್ರ ಕೋಬೇರ ಕುಸುಮಚುವಾಯೋ.."
೪೦ "ಕಿಹಿಕರಣ ಡೌಲಮೆ ಹಾಲತವಾನೀ.."
೪೧ "ನಿಕಸ್ಯೋ ರವಿ ಘೋಡಪಹಾಡಕೆತಾ ಈ.."
೪೨ ದೀಪದ ಬುಡದಲ್ಲಿ ಕತ್ತಲೆ
೪೩ ಯಾವಕಾಲವು ಹಿತಕರವಾದದ್ದು
೪೪ ಲೋಟಾ ನಥಾ
೪೫ ನಾಲ್ಕು ಪ್ರಶ್ನೆಗಳು
೪೬ ಯಾರು ಏನನ್ನು ಮಾಡಲಾರರು
೪೭ ನೂರು ಗೋವುಗಳನ್ನು ರಕ್ಷಿಸುವದೂ ಅಥವಾ ಕೊಲ್ಲಿಸುವದೂ ನಿಮ್ಮ ಕೈಯಲ್ಲಿಯೇ ಅದೆ
೪೮ ಖುರಾನ ಎಂಬ ಗ್ರಂಥಕ್ಕೆ (o) ಬಿಂದುವಿಲ್ಲದೆ ಇರುವ ಕಬ್ದಗಳಿಂದಮಾಡಿದ ಟೀಕೆಯು
೪೯ ಯಾತರದು ಒಳ್ಳೇದು !

೫೦ ದಂಡನೆಗೆ ಪ್ರತಿಯಾಗಿ ಪಾರಿತೋಷಕವು
೫೧ ಚತುರ ಮತ್ತು ಮೂರ್ಖ
೫೨ ಯಾವನು ಸುಖಿಯಾಗಿರುವನು
೫೩ ಸ್ವರ್ಗ ಮತ್ತು ನರಕ
೫೪ (ಚೌಬೇ) ಎಂಬ ಜಾತಿಯ ಜನರು 'ಕಬರ'(ಗೋರಿಗಳನ್ನು) ಅಗಿದದ್ದು
೫೫ ಎಲ್ಲ ವಸ್ತುಗಳಿಗಿಂತಲೂ ಉಜ್ವಲವಾದ ವಸ್ತುವು ಯಾವದು
೫೬ ನನ್ನ ಧರಣಿಯ ಮೇಲೆ ನೀನು ಸ೦ಚರಿಸಲಾಗದು
೫೭ ನನ್ನನ್ನು ಬ್ರಾಹ್ಮಣನನ್ನಾಗಿ ಮಾಡು
೫೮ ವ್ಯವಭ ಕ್ಷೀರ
೫೯ ಪರುಷರತ್ನದ ಸ್ಪರ್ಶ
೬೦ ನೌಕಾನ್ಯಾಯ
೬೧ ನನ್ನ ಮನಸ್ಸಿಗೆ ಬಂದದ್ದನ್ನು ನಾನು ಕೊಡುವೆನು
೬೦ ಭೃತ್ಯನ ತಲೆಹೊಡ !
೬೩ ಪಂಡಿತನೆಂಬ ಪದವಿ
೬೪ ವೃಕ್ಷದ ಸಾಕ್ಷಿಯು
೬೫ ಈ ಜಗತ್ತಿನಲ್ಲಿ ಕುರುಡರು ಬಹಳ ಮಂದಿ ಇರುವರೋ ! ಕಂಣು ಇದ್ದವರು ಬಹಳಮಂದಿ ಇರುವರೋ !
೬೭ ಕಡಿಮೆ ಹೆಚ್ಚು
೬೮ ಕವಚ ಪರೀಕ್ಷೆ
೬೯ ಸ್ವಾಭಾವಿಕ ಮತ್ತು ಕೃತ್ರಿಮ
೭೦ ಆಕಾಶ ಗೃಹವು
೧೩೩
೭೧ ಬೀರಬಲ ಮತ್ತು ಮದ್ಯ
೧೩೬
೭೦ ಸಿಂಹಾಸನದಮೇಲೆ ಮಲವಿಸರ್ಜನೆ.
೧೩೯
೭೩ ಬೀರಬಲನ ಏಕಾಂತವಾಸವು
೧೪೩

೩೪ ನಿರಪರಾಧಿಗಳ ಉಸುರ್ಗರೆ
೯೬ ವಾದ,ಔರ್,ರಸ್ತೆ.
೧೬೯

28 ನಿರಪರಾಧಿಗಳ ಉಸುರ್ಗರೆ ಯುವಿಕೆ. ೧೫೫ ೭೫ ನಗಬೇಕೋ ಮತ್ತೆ ಅಳಬೇಕೊ ೭೬ ಮೃಗಯಾವಿಹಾರದ ವ್ಯಸನ ೧೪೬ ೭೭ ಬಾದಶಹನ ಮೂಲ್ಯ ೭೪ ದರ್ಪಣದಲ್ಲಿಯ ವರಹಗಳು ೧೫೦ ೭೯ ಆಕಾಶದಲ್ಲಿಯ ತಾರೆಗಳೆಷ್ಟು ೧೫೦ V೦ ಅಂಗೈಯೊಳಗೆ ಕೂದಲುಗಳು ಯಾಕೆ ಬರುವದಿಲ್ಲ ? v ಯಾರಸಂತತಿಯು ಸುಂದರ ವಾದದ್ದು ! Vo ಮಾಲಾದೇ ! ೧೫೩ "" ೧೫ v೩ ಬಾದಶಹನಿಗೆ ಮೋಸಗೊಳಿಸಿದ್ದು,, v8 ಖೀರಬಲನ ಮನೆಯ ಜನರ ಪರೀಕ್ಷೆ 0&F ೯೬ ಪಾದ, ಔರ ದಸ್ತ. ೯೭ ರಖಪತ ಮತ್ತು ರಖಾಪತ ಫೂಲಕರ ಚಗತ್ತಾ ಹೋಜಾ ಯಗಾ,, F ಅಹುದು ಮೆಹರ್ಬಾನ ೧೦೦ ಪೌರ್ಣಿಮೆಯ ಚಂದ್ರ ೧೦೧ ಒಂದು ಸೇರು ಮಾಂಸ ೧೦೦ ಬಲಾತ್ಕಾರ ೧೦ ನೆರೆಹೊರೆಯವರಾದ ಈರ್ವರು ಸ್ತ್ರೀಯರು 1೦8 ಮಕದ ಬೆಳೆ ೧೦೫ ಶಿರ ಮು೦ಡನ ೧೦೬ ಎರಡು ಕತ್ತೆಗಳ ಒಜ್ಜೆ ೧೦೭ ಸಂಶಯ ನಿವೃತ್ತಿ ಪರಪುಷ್ಮನೂ ಮತ್ತು ಅರಸು ಪರೀಕ್ಷೆ. ೧೦ V೫ ಅಕಬರೀ ರಾಮಾಯಣ ೧೬೧ v೬ ಗುಂಜಾಭರಣ ೧೬೩ ೪೭ ನಾಲ್ಕು ಜನ ಮೂರ್ಖರು w ಯಲ್ಲ ಪುರುಷನಲ್ಲ; v ಶಹಾಜಾದೇ (ಅರಸುಮಗಳ) ಪುತ್ಥಳ ೧೬೫ ೯೦ ಅರ್ಧ ಒಳಗೆ ಅರ್ಧ ಹೊರಗೆ ೧೬೬ ೯೧ ಜಾಡಾ ಕಿತನಾ ಹೈ ! ಅಂದರೆ ಛಳಿಯು ಎಷ್ಟು ಅದೆ ೯೦ ಗಡ್ಡವನ್ನು ಜಗ್ಗಿದವರಿಗೆ ಮಿಠಾ ಯಿಯನ್ನು ಕೊಡಬೇಕು ೯೩ ರಾಮನಾಮವನ್ನು ಬರೆಯುವ ಸ್ಥಳದಲ್ಲಿ ನನ್ನ ನಾಮವನ್ನು ಬರೆಯುವಂತೆ ಮಾಡು ! ೯೪ ಈ ಜಗತ್ತಿನಲ್ಲಿ ಪುರುಷರು ಅಧಿ ಕವಾಗಿರುವರೆ ! ಸ್ತ್ರೀಯರು ಅಧಿಕವಾಗಿರುವರೋ ! ೯೫ ತಂಬಾಕವನ್ನು ಗಾರ್ದಭವು ಸಹಾ ತಿನ್ನುವದಿಲ್ಲ " ಮಗಳು ೧೦೯ ಬೇಗಮ್ಮಳ ರೋಷ ೧೧೦ ಇಪ್ಪತ್ತೇಳರಲ್ಲಿ ಒಂಭತ್ತು ಹೋ " " 020 ೧೭ 022 Ove OVH ove " ದರ ಎಷ್ಟು ಉಳಿಯುವದು ೧೦ ಪ್ರತ್ಯಕ್ಷವಾಗಿ ನೋಡಿದ ಸಂ 2000 ಗತಿಯು ಎಂದಾದರೂ ಅಸ ತ್ಯವಾಗುವ ದುಂಟಿ ! ೧೧೨ ಬ್ರಾಹ್ಮಣ ಯಮೇಲೆ ಮಾಂಸಭಕ್ಷಣ ಮಾಡಿದಳೆಂಬ ಆರೋಪ ಬಂದದು ೧೧೬ ಕತಾಂತ ೧೧8 ಪಾದರಕ್ಷೆಗಳಿ ಸೆಟ್ಟು ೧೧೫ ಬಾದಶಹನ ಇರ ಪಕ್ಷಿ ೧೧೬ ನನ್ನ ಪಾದಗಳು ಸುಂದರ ವಾಗಿವೆ ೧೧೭ ಹತ್ತಿಯ ಕಳವು ೧೯ ಚೋರರನ್ನು ಹಿಡಿಯುವ ಹೊ ಸ ಹ೦ಚಿಕೆ ೧೧೯ ವಾದವನ್ನು ಈನರಿ ಸಸರಿಸಿ 030 320 BOC 600 ೨೦೩ ವಿ ಷ ಯಾ ನು ಕ್ರಮ ಣಿ ಕೆ. ದರೆ ಎಷ್ಟುಚಾದರಗಳಾದರೂ ಪೂರಯಿಸಲಿಕ್ಕಿಲ್ಲ ೧೦೦ ಪೂರಜನ್ಮದ ಸ್ಥಾನವು ೧೦೧ ಯಾವನಿಗೆ ಪರಮೇಶ್ವರನು ಕಿಂಚಿತ್ತಾದರೂ ಶೀಕ್ಷಿಸಲಸ ಅಂಥವನಿಗೆ ನಾ ಮರ್ಥನೋ ನು ಶೀಕ್ಷಿಸಬಲ್ಲೆನು 8ܘܩ ೨೦೫ ೨೦೬ ೧೦೩, ದೂಧಬಾಯಿ (ಉಪಾವರದ) ೨೦೭ ೧೨೪ ಸೇವಕನು ಸುಂಣವನ್ನು ತಿಂದನು ೧೫ ತಾವು ನನ್ನ ಮೈಯನ್ನು ನೆಕ್ಕ ಹತ್ತಿದಿರಿ, ನಾನು ನಿಮ್ಮ ಮೈ ಯನ್ನು ನೆಕ್ಕ ಹತ್ತಿದೆನು 605 600 ೧೨೬ ಪುತ್ರಿಯನ್ನು ಕೊಡಿರಿ; ಮೌ ತ್ರಿಯನ್ನು ಕೊಡಿಸಿರಿ ೧೦೭ ಅರ್ಧ ತಮ್ಮದು ೧೨೯ ಝಖ ಮತ್ಸ)ಮಾರ ಹೈ ೦೧೦ >> ೧೨೯ ಬಹುರೂಪಿಯು ಸಿಂಹವಾದನು ೧೩. ೧೩೦ ಎಲ್ಲರ ದೃಷ್ಟಿಯು ತಮ್ಮ ಮೇ ಲೆಯೇ ಇತ್ತು ೧೩೧ ಮಿತ್ರರಲ್ಲಿ ದ್ವೇಷವನ್ನು ಹು ೧೩ ಕರೆದುಕೊಂಡು ಬನ ! ಟ್ಟಿಸಿದ್ದು ೧೩೩ ಸತ್ಯಕ್ಕೂ ಅಂತರವು ಅಸತ್ಯಕ್ಕೂ ಎಷ್ಟು ೧೩೪ ಮನಂ ಪಂಡಿತ ಕ್ಷಣಂ ೧೩೫ ಗೋಚರದ ವಾದರಣೆ ೧೩೬ ನೇತ್ರಯುಕ್ತ ಅಂಧ, ವ್ಯಾಪಾ ರದ ರಹಸ್ಯ, ಅಂಗೈಯೊಳಗಿನ ಮಣಿ, ಬಾಜಾರ ಒಸವಿ ನರ ಈದ ಮಾರ್ಗ ೧೩೩ ನಾನು ಶ್ರೇನೋ ಇಂದ ನು ವ್ಯನೋ ! ೧೩೮ ಸಜ (ಕಾಮ ಕಸ್ತೂರಿ) 8089 "" 002 ני Sov "" 0.02 ಅಕ್ಕಿ ಮತ್ತು ಭಸ್ಮ, ೧೩೯ ಗಜದ ಪದ ಚಿಹ್ನವೂ ಮತ್ತು ಕರಗಳ ವಿವಾಹವೂ ೧೫೦ ಹೂ ಆಜಾ ಎಂಬವನ ಮಂ ಡಾಸ. ೧೪೧ ಹೂ ಮತ್ತೇನು ! ಭು‌ ೧೬೨ ಮತ್ತೇನು ! ಮಜ್ಜಿಗೆ ೧೪೩ ಕಾರೀ,, ನ್ಯಾಮತ 582 ೧88 ಬೀರಬಲನಿಗೆ ದಂಡ ೧೬೫ ಬಾದಶಹನ ಕಾಲಕನು ಮಂತ್ರಿ ܘܩ ೨೩೩. ೨೩೬ ಪದದಲ್ಲಿ ನಿಯಮಿಸಲ್ಪಟ್ಟನು ೨೩ ೧೮೬ ಜವಾಹರಚಂದ್ರ ಮತ್ತು ಮಾನಕಚಂದ್ರ) 8ܩ ೧೫೭ ವಿಶ್ವಾಸಘಾತಕಿಯಾದತ ಅರ್ತಿ ೧೬v ಅಪ್ರಮಾಣಿಕನಾದಕಾಜಿಯು ೨೫೩, ೧೮೯ ದಿಲ್ಲಿಯಲ್ಲಿ ಕಾಕಪಕ್ಷಿಗಳು ಎದ್ದು ಅವ ೫೦ ಅ೦ಧಕಾರ ೧೫೧ ರೇಷ್ಮೆಯು ಚಿಕ್ಕದಾಯಿತು ೧೫೦ ಬಾದಶಹನು ನಗುವಂತೆ ಮಾ ಡಿದ್ದು, ೧೫೩ ಪ್ರಸಂಗಾವಧಾನವು ಅಧಿಕ ವಾದದ್ದು ೫ ಯಾವಪುಷ್ಪವು ವ್ಯವ ದದ್ದು ! ಯಾವ ದಂತವು ಶ್ರೀ “ವಾದದ್ದು ! ಯಾವ ಪುತ್ರ ನು ಬ್ರಹ್ಮನು; ರಾಜರಲ್ಲಿ ವ್ಯತೆಯನ್ನು ಪಡೆದವನುಯಾ ವನು || ಯಾವಗುಣವು ಪ್ರಶಂ ಸಾರ್ಹವಾದದ್ದು ೧೫೫ ಎಲ್ಲರಕಿಂತಲೂ ಹೆಚ್ಚಿ ನವನು ಯಾರು ! ೨೬೦ ೧೫೬ ಬೀರಬಲ್ಲ ಶಾಂಧತಗಾಯ ೨೬೧ ೧೫೭ ಫಕೀರನು ನಿಸ್ಪೃಹತೆಯನ್ನು ತೋರಿಸಿದ್ದು ವಿ ವಿ ಯಾ ನು ಕ ಮ ಣಿ ಕೆ. ೧೫ ಕೃಪಣನ ಸಂಪಾದನೆ ೨೬೫ ೧೫೯ ಬೀರಬಲನು ಯೋಗಿಯಾದ್ದು '೧೬೦ ಅಂಗುಲಿ ಸಂಕೇತ ೧೬೧ ಸಯಾನೋಕಾ ಏಕಮತ ೦೭೦ ೧೬ ಜಲಾಶಯದಲ್ಲಿ ಬ್ರಾಹ್ಮಣನು ೨೭೫ ೧೬೩ ಚಾತುರ್ಯ ಗರ್ಭಿತವಾದ ಮೃತ್ತಿಕೆಯ ಘಟ ೧೬8 ಜೀವವು ಅತ್ಯಂತ ಪ್ರಿಯ ವಾದದ್ದು ೧೬೫ ಅತ್ಯದ್ಭುತ ಚಮತ್ಕಾರ ೧೬೬ ಅಕಬರ ಭಾರತ ೧೬೭ ಬೀರಬಲನು ಸ್ಪಧವ್ಯವನ್ನು ರಕ್ಷಿಸಿಕೊಂಡದ್ದು ೧೬ ನದಿಯು ಯಾಕೆ ರೋದಿಸು ತಿರುವದು ೧೬೯ ಏನು ನಡೆಯುತ್ತಿರುವದು ೧೭೦ ಕಲ್ಲುಸಕ್ಕರೆಯ ಹರಳನರತ್ನ ೧೭೧ ಬೀರಬಲನ ಮತ್ತು ಕ್ಷೌರ ಕನ ೧೭ ಮೂರ್ಖನೊಡನೆ ಕೆಲಸವು 021 0129 220 ೧೭೪ ಮೂಟ್, ಫೂಟೆ, ಸಡೇಕೊ, ಕೈವಿಧಿ ಸರಾಹಿಯೇ ೧೭೯ ( ಕೇಹಿಕಾರಣ ಪ್ರಾತ ಬವಾತ ಹೈ ಪಾನೀ,, ೧v೦ ಶೌಚಕೂಪದಲ್ಲಿಯ ಚಿತ್ರ ೩88 ೧೪೧ ಇಹದಲ್ಲಿ ಸುಖವುಂಟು, ಪರದಲ್ಲಿ ಇಲ್ಲ. ಪರದಲ್ಲಿ ಸುಖವುಂಟು ಇಹದಲ್ಲಿ ಇಲ್ಲ. ಇಹಪರಗಳೆರಡ ರಲ್ಲಿಯೂ ಸುಖವಿಲ್ಲ, ಮತ್ತು ಇಹಪರಗಳೆರಡರಲ್ಲಿಯೂ ಸುಖ ವುಂಟು, ಇಂಥ ಮನುಷ್ಯರು ಯಾರು ! ೧೯೨ ( ಚಂಚಲ ನೈನ ಅಪೈನ ಅ " ೧೪ ೩ ಬಾದಶಹನ ನಖ ovü 205 ಉಂಟಾದರೆ ಏನುಮಾಡಬೇಕು ಸುಮ್ಮನಿರಬೇಕು ೧೭೩ ತಾನಸೇನ ಮತ್ತು ಬೀರಬ ೮ರ ಪರೀಕ್ಷೆ ೩೧೬ ೩೦೧ ೧೭೪ ಚಿಕ್ಕ ಮಗುವು ಅಳುತ್ತಿತ್ತು ೩೨೯ ೧೭೫ ಗಾಣಿಗ ಮತ್ತು ಕಟು ಕನ

  • ಮಣಿಪುರದ ದೊರೆಯು ಬೀರ

ಬಲನ ನ್ಯಾಯಚಾತುರವನ್ನು ಪರೀಕ್ಷಿಸಿದ್ದು ೩೩.೩. ಮ ಅಸಲಕಾ ಅಸು, ಅಸಲ ಕಾಕಮ ಅಸಲ, ಗದ್ದಿಕಾ ಗ ಧಾ ಔರ ಖಾಜಾರಕಾಕುತ್ತಾ೩೩೫ ಹಾಥನಕ ಯುವಕೆ ಊ ಬೆರ, ನಖಾಯಗೊ ೧೪ ೫ ಮಾರ್ಗವು ಎಲ್ಲಿಗೆ ಹೋಗು ಇದೆ ! ort " 288 até ಸೂರನು ಪತ್ನಿ ಮದಲ್ಲಿ ಯಾಕೆ ಮುಳುಗುತ್ತಾನೆ ! ೧ ಹುಜೂರ ಗಥೆ ಆತ್ಮಹ " ೧೪೯ ೦ಟೆಯ ಡೊಂಕ ಕುತ್ತಿಗೆಯು,, ೧೯ ಜೋಯಾ ಸೂ ಚಕಾ ೧೯೦ ಸಹಸ್ರ ಪಾದರಕ್ಷೆ ೧೯೦ ಬೀರಬಲನು ಪರುಷಮಣಿಯಾ ಗಿದ್ದಾನೆ ೧೯೦ ದೌಲತ ಹಾರ ಹೈ OF2 ನಹಿರಾಂಚ್ ರಹಿಮಾನ ೧ ಬದನಿಕಾಯಿ ಪಲ್ಲ ೧೯೫ ಅಪ್ಸರೆಯ ಡಾಕಿನಿಯ ೧೯೬ ಯಾವನದಿಯ ಜಲವು ಉತ್ತ ಮವಾದದ್ದು ! ೧2 : ದಾದಃ ಹುಜೂರ,, " 23134 " " ನಿ ಪ ಯಾ ನು ಕಮಣಿ ಕೆ. ೧೯V ಕಂಪು (ಮೀಸಿಗೆ ಹಚ್ಚಿಕೊಳ್ಳು ವ ಬಂಣ) ಹಚ್ಚಿಕೊಳ್ಳುವದರಿಂ ದ ಸುಂದರವುಬರುವದಿಲ್ಲ ೩೫೭ ೧೯೯ ಉದ್ಯಾನದ ವೃಕ್ಷವೂ ಮತ್ತು ಅರಣ್ಯದ ವೃಕ್ಷವೂ ೨೦೦ ಅಂತ್ಯಜನು ಮುಸಲ್ಮಾನ ನಾಗಲ್ಲ ೨೦೧ ವನಸ್ಪತಿಯ ಬೀಜ ೨೦೨ ಪ್ರಜೆಗಳಲ್ಲಿ ಕೆಲವರು ರಾಜರು, ಕೆಲವರು ದರಿದ್ರರು ಯಾಕೆ ಇರುವರು 285 " 227 ೨೦೩ ಬೀರಬಲನು ಕುನಕನ ವೈದ್ಯನು,, ಎ08 ಕಳ್ಳನ ಗಡ್ಡದಲ್ಲಿ ಎಳ್ಳಿನ ಕಾಳು ಅದೆ ೨೦೫ ಅತ್ಯದ್ಭುತ ಪ್ರಹೇಲಿಕಾ ೨೦೬ ಡೋಣಿಯನ್ನು ಗೊತ್ತು ಮಾಡಿ ಕೊಂಡು ಬರುತ್ತೇನೆ ೧೦೭ ಜೂತೇಕೆ ಮಾರೆ ಖಡೇ ೨೦ ಮೂರ್ಖರ ಪತ್ರಿಕೆ ೨೦೯ ಕೃತ ತಜ್ಞ ಮತ್ತು ಕೃತಘ್ನು ೨೧೦ : ಫಾಚ ಢಗಯಾ,, ೨೧೧ ಬ್ರಾಹ್ಮಣನನ್ನು ಮರಣದಂಡ ನೆಯಿಂದ ತಪ್ಪಿಸಿದ್ದು ೨೧೨ ಒಂದು ಬಿದ್ದದೆ ೨೧೩ ಹೌದಿನಲ್ಲಿಯ ತತ್ತಿ ೩೬೦ >> ೩೬೧ ೩೬೩ " 8:8 ೨೧೪ ಕಾಳಗದಲ್ಲಿ ಜಯವೋ ! ಪರಾ ಜಯವೋ ೨೧೫ ದೇವರು, ಮಾಕನಿವೃತ್ತಿ ಮಾ ಡುವವ, ಜಲವಾಹಕ, ಬಾರ ವಾಹಕ, ೨೧೬ ನಾನು ಅವಳನ್ನು ಮರೆತು ಬಿಟ್ಟೆನು. " ೩೬೬ ೨೧೭ ಶ್ರೇವ್ಯಪ‌ವು ಯಾವದು ೩೬೭

  • ೧ ಯುವರಾಜನಾದ ಸಲೀಮನ

ಪ್ರತಿಸ್ಪರ್ಧಿ ೨೧೯ ತಾವು ಜಗತೃಗಳಾಗಿ ರುವಿರಿ ! ೨೧೦ ಬೀರಬಲನು ನಕ್ಕರೆ ಅವನು ನಿಂತುಕೊಂಡಸ್ಥಲವು ಜಲ ಮಯವಾಗುವದು ೨೦೧ : ಕಿಸಕಾರಣ ಯಹ ನಾಣ್ಯ ಗದಹಾ ,, ೧೦೨ ಕತ್ತೆಯ ಭಾರ ೨೩ ಅವರು ಮೂವರ ಅಳು ತ್ತಿದ್ದರು 220 ೩೭೧ مة " ೧೦೪ ಕಾಜಿಗೆ ಮದ್ಯವನ್ನು ಕುಡಿಸು ೩೭೩ ೨೨೫ ನೀನು ಹಲಾಲಖೋರನೋ ವಾ ಹರಾಮರ ೨೨೬ ವೈಕುಂಠ ದರುಶನ ೨೦೬ ಹ೦ಚಿಕೆಯ ಇಡಿಗಂಟು ಅಥ ೩೭8 " ೩೬೬ ೨೨೪ ಎರಡುಸಾವಿರ ಮೂರರು ೩೭೭ ೨೨೯ ಬೀರಬಲನ ದಾಸಿ ೨೩೦ ಈ ಬೀಗದಕೈಗಳು ಯಾವ ರ್ತಹದವು ಅಂ ೨೩೧ ಬೀರಬಲನ ಪುತ್ರಿಯೂ, ಬಾದ ಸಹನ ೧೨ ಹಿಂದೂಗಳಲ್ಲಿ ಯಾವಜಾತಿಯ ವರು ಚತುರರು ೨೩೩ ಬ್ರಾಹ್ಮಣನ ತಪಸ್ಸು ೨೩೬ ಮುಸಲ್ಮಾನರ ಇಸ್ಲಂಜಾ ೨೩೫ ಬಾದಶಹನ ಜಾಮಾತ ೨೩೬ ನಾನು ಮಾತಾಡಿಸಿಕೊ ಳುವೆನು ೨೩೭ ನಾವಕೀ ರಕ್ಷ ೨೩v ಅತ್ತರ (ಸೌಗಂಧಿಕ ತ್ರೈ ವೂ, ನಶ್ಯವೂ ೨೩೯ ನನ್ನವಾದ್ಯವು ಪೃಧಕ್ಕಾ ನುಡಿಯುವದಿಲ್ಲ " ೩೭ " 250 " ವಿ ( ಯಾ ನು ಕಮಣಿ ಕೆ. ೨೪೦ ವರ್ತಕನ ಚತುರನಾದ ಮಗನು ೨೪೧ ಚತುರನಾದ ಚೌಬೆ avė ೨8೨ ದಂಡನೆಯಲ್ಲಿ ನ್ಯೂನಾಧಿಕ್ಯ ೩೫ ೨೪೩ ಬ್ರಾಹ್ಮಣರ ಚತುರತೆ 88 ಎರಡು ಪ್ರಶ್ನೆಗಳಿಗೆ ಒಂದೇ ಉತ್ತರ ೨೫ ಫಾರಸೀ ವಿದ್ಯೆಯನ್ನು ಕಲಿತ ಅಹೀರನು ೨೪೬ ಮಲವನ್ನು ಭಕ್ಷಿಸುತ್ತಿದ್ದ ವೃಷಭವು ೨೪೭ ಮಲ, ಮತ್ತು ವೇಗ (ಬೇಗ) ೨೫೮ ಏರಡು ಪ್ರಶ್ನೆಗಳಿಗೆ ಒಂದೇ ಉತ್ತರ ೨೯ ಕಲಾಕೌಶಲ್ಯ ಬಲ್ಲವನ ಕುಶ ಲತನ >> "" Ce ೪೦೦ ೨೫೦ ಕಲಾವಂತನಿಗೆ ಪಾರಿತೋಷಕ೩೯೦ ೨೫೧ ವೇಶ್ಯೆಯರ ಚಾತುರ್ಯ ೨೫೦ ಅಮರಸಿಂಹ ರಾಠೋಡ ೨೫೩ ಬಲೆಗಾರನ ಕೇಲೀವಿಲಾಸ ೨೫೫ ಸಮಸ್ಯಾ ಪೂರ್ತಿ ೨೫೫ ಪ್ರಹೇಲಿಕಾ ( ಢಾಲ ) ೨೫೬ ಪ್ರಹೇಲಿಕಾ (ದರ್ಪಣ) ೨೫೭ ಪ್ರಹೇಲಿಕಾ (ಅನನಸ) ೨೫ ಎರಡು ಪ್ರಶ್ನೆಗಳಿಗೂ ಕೂಡಿ ಒಂದೇ ಉತ್ತರ ೨೫೯ ಜಗತ್ತಿನ ಅಹಮೇಕತನ ೧೬೦ ನಿಮ್ಮ ವಿವಾಹವು ಯಾವಾಗ " ಆಗಿತ್ತು ! ೨೬೧ ಪ್ರಾರಬ್ಧವೇ ಪ್ರಾಧಾನ್ಯ ವಾದದ್ದು ೨೬೦ ಪ್ರಹೇಲಿಕಾ (ನಖ) ೨೬೩ ಪ್ರಹೇಲಿಕಾ (ತಬಲಾ) ೨೬೪ ಪ್ರಹೇಲಿಕಾ (ದೌತಿ) ೨೬೫ ಪ್ರಹೇಲಿಕಾ (ಸಿಂಪು) ೨೬೬ ಪ್ರಹೇಲಿಕಾ (ಪಂಜರ) ೨೬೨ ಪ್ರಹೇಲಿಕಾ (ಪಲ್ಲಕ್ಕಿ) ೨೬v ಪ್ರಹೇಲಿಕಾ (ರತ್ನ ದುಂಗುರ) ೨೬೯ ಪ್ರಹೇಲಿಕಾ (ಬಾಗಿಲು) ೨೭೦ ಪ್ರಹೇಲಿಕಾ (ಬಂದೂಕು) ೭೧ ಎರಡು ಪ್ರಶ್ನೆಗಳಿಗೆ ಒಂದೇ ಶಬ್ದದಿಂದ ಉತ್ತರ ೨೭೦ ಎರಡು ಪ್ರಶ್ನೆಗಳಿಗೆ ಸಮ‌ರ್ಪಕ ವಾಗಿರುವ ಒಂದೇ ಉತ್ತರ 2೩ ಎರಡು ಪ್ರಶ್ನೆಗಳಿಗೆ ಒಂದೇ ಶಬ್ದದಿಂದ ಉತ್ತರ 802. ४०४ " " " " " " ೨೭೪ ಉತ್ತರದಲ್ಲಿ ಚಮತ್ಕಾರ ೨೭೫ ಅದ್ಭುತ ಪ್ರಶ್ನೋತ್ತರ ೨೭೬ ಪ್ರಹೇಲಿಕಾ (ಅನನಸ) ೭೭ ಪಾರಿವಾಳ ಹಕ್ಕಿಗಳ ಚಮತ್ಕಾರ , ೨೩೪ ಪಟ್ಟಣದ ಜನಗಳು ಚತುರರೋ ಅಥವಾ ಚಿಕ್ಕ ಗ್ರಾಮಗಳ ಜನ ಗಳು ಚತುರರೋ ! ೨೭೯ ಬೀರಬಲನ ಮಡಿವಾಳ ೨೦ ಬಾದಶಹನ ಸ್ವಪ್ನ -( ವಿಷಯಾನು ಕ್ರಮಣಿಕೆ ಸಂಪೂರ್ಣ ಮಾದುದು.) -

8ov

-*( ಕ ಥೆ ಗ ಳ ವಿ ಷ ಯ ಗ ಳು. )*-

ಸಚಿತ್ರ ಸ್ತ್ರೀಚರಿತ್ರ ೪೦ ಕಥೆಗಳು ... ...
೨ ೦ ೦
ಮೋಹನಾಂಗಿಯ ಕಥೆ. ... ...
೦ ೪ ೦
ಸಚಿತ್ರ ಅರಬಿಯನ್ ನೈಟ್ಸ್ ಕಥೆಗಳು. ... ...
೨ ೦ ೦
ಸಚಿತ್ರ ಶಿವಶರಣರ ಕಥೆಗಳು .... ...
೧ ೧೨ ೦
ಸಚಿತ್ರ ಭಾಗವತ ಕಥಾಸಂಗ್ರಹ ೧೨ ಸ್ಕಂಧಗಳು ಶೇರಿಧೆ ಕಥಾರೂಪ...
೧ ೪ ೦
ಶೃಂಗಾರ ಸ್ತ್ರೀ ಶುಕಸಪ್ತತಿ ೩೨ ಕಥೆಗಳು. ... ...
೦ ೮ ೦
ಸತ್ಯ ಹರಿಶ್ಚಂದ್ರ ಮಹಾರಾಯನ ಕಥೆ. ... ...
೦ ೪ ೦
ಕುಶಲವರ ಕಥೆ. ... ...
೦ ೩ ೦
ಕನಕಾಂಗಿ ಕಥೆ. ... ...
೦ ೪ ೦
ಕಾಳಿದಾಸಪ್ರಣೀತ ಸಟೀಕಾ ಭೋಜಮಹಾರಾಯನ ಚರಿತ್ರೆ, ೬೮ ಶ್ಲೋಕದ್ದು ಕದ್ದು (ಶೃಂಗಾರ ರಸ)
೦ ೮ ೦
ಕಥಾಸಾಗರ (ಚಮತ್ಕಾರ ಕಥೆಗಳು.) ... ...
೦ ೩ ೦
ಕೃಷ್ಣ ಬೋಧಾಮೃತವೆಂಬ ೧೨ ರಾಜಪುತ್ರರ ಕಥೆಗಳು,
ಇದರಲ್ಲಿ ವೇದಾಂತ ವಿಷಯವನ್ನು ತಿಳಿಸುವ ಬಹಳ ಆಶ್ಚರ್ಯವಾದ ಕಥೆಗಳು. ... ...
೦ ೧೦ ೦
ಸಟೀಕಾ ವಿಷ್ಣುಶರ್ಮ ಪಂಚತಂತ್ರ ಕಥೆಗಳು. ... ...
೦ ೮ ೦
ತೆನ್ನಾಲಿ ರಾಮಕೃಷ್ಣನ ಕಥೆಗಳು. (ಹಾಸ್ಯರಸ) ... ...
೦ ೨ ೦
ನಳದಮಯಂತಿ ಪುಣ್ಯಚರಿತ್ರೆ ಕಥಾರೂಪ ದೊಡ್ಡಕ್ಷರ ದಪ್ಪ ಕಾಗದ. ... ...
೦ ೬ ೦
ಹುಚ್ಚು ಮುಂಡೆಯರ ಕಥೆಗಳು. ... ...
೦ ೪ ೦
ಪತಿವ್ರತಾಮಹಾತ್ಮ ಕಥೆಗಳು ದೊಡ್ಡಕ್ಷರ. ... ...
೦ ೪ ೦
ಸಿಹ್ಮಾಸನ ಬತ್ತಿಸಪುತ್ಥಳಿ ಕಥೆಗಳು. ... ...
೦ ೪ ೦
ನಗದವರನ್ನು ನಗಿಸುವ ಕಥೆ. (ಎಲ್ಲಾನಗುವೆ) ... ...
೦ ೨ ೦
ಸಚಿತ್ರ ಶ್ರೀವಿಷ್ಣುದಶಾವತಾರ ಕಥೆಗಳು, ಮತ್ತು ಷಟ್ಕಾಂಡ ಶ್ರೀರಾಮಾಯಣ ಕಥಾಸಂಗ್ರಹವು.......
೦ ೧೨ ೦
೧೪ ಪರ್ವ ಮಹಾಭಾರತ ಕಥಾರೂಪ. ... ...
೦ ೬ ೦
೩೪ ಸಂಧಿ ಜೈಮಿನಿಭಾರತ ಕಥಾರೂಪ ದೊಡ್ಡಕ್ಷರ. ... ...
೦ ೧೨ ೦


ಇನ್ನು ಕನ್ನಡ ವೇದಾಂತಗ್ರಂಥಗಳು ಕಾವ್ಯಗ್ರಂಥಗಳು, ಶಿವಪುರಾಣಗಳ ಚಾತುರ್ಯವಾದ ಕಥೆಗಳು, ಜ್ಯೋತಿಷ್ಯಗ್ರಂಥಗಳು, ವೈದ್ಯಗ್ರಂಥಗಳು, ಯಕ್ಷಗಾನ ಗ್ರಂಥಗಳು, ವೀರಶೈವ ಮತಗ್ರಂಥಗಳು, ನಾಟಕಗಳು, ಕನ್ನಡ ಸಂಸ್ಕೃತಗ್ರಂಥಗಳು ಶಿಗುವವು. ಬೇಕಾದರು ಬರೆದು ತರಿಸಿಕೊಳ್ಳಬಹುದು.

ನಮ್ಮ ವಿಳಾಸ:- ಶ್ರೀ. ಕ ನ್ನ ಯ್ಯ ಶೆ ಟ್ಟ.
ಕರ್ನಾಟಕ ಬುಕ್ ಡಿಪೋ ಏಜಂಟ್ ಬಳ್ಳಾರಿ.

ಪೂರ್ವಜನ್ಮದ ವೃತ್ತಾಂತ.


ಚೀನಕಾಲದಲ್ಲಿ ಈ ಆರ್ಯವರ್ತ ದೇಶದಲ್ಲಿ ಬೈಜರವೆಂಬ ಒಂದು ಗ್ರಾಮವಿತ್ತು. ಅಲ್ಲಿ ಮಹಾಪಂಡಿತನೂ ಸದಾ ಚಾರ ಸಂಪನ್ನನೂ ಆದಂಥ ಸುಕರ್ಮನೆಂಬ ಬ್ರಾಹ್ಮ ಣನು ಇದ್ದನು. ಇವನಿಗೆ ಸುದಾಸನೆಂಬ ಒಬ್ಬ ಪರಮ ಸ್ನೇಹಿತನಿದ್ದನು. ಈ ಸುದಾಸನು ಜಾತಿಯಲ್ಲಿ ತಲವಾ ರನಿದ್ದನು. ಇವರಿಬ್ಬರು ಏನಾದರೊಂದು ಕಾರ್ಯವನ್ನು ಮಾಡುವದಿದ್ದರೆ ಪರಸ್ಪರರ ಸಮ್ಮತಿಯಿಲ್ಲದೆ ಮಾಡುತ್ತಿದ್ದಿಲ್ಲ. ಹೀಗೆ ಎ ಷ್ಟೋ ವರುಷಗಳು ಕಳೆದು ಹೋದಮೇಲೆ ಸುಕರ್ಮನ ಮನಸ್ಸಿನಲ್ಲಿ ರಾಜ ನಾಗಬೇಕೆಂಬ ಅಭಿಲಾಷೆಯು ಹುಟ್ಟಿತು. ಆಗ ಅದನ್ನು ಸಂಪಾದಿಸಬೇ ಕೆಂಬ ಇಚ್ಛೆಯಿಂದ ಘೋರ ತಪಶ್ಚರ್ಯವನ್ನು ಮಾಡಿ ಜಗದೀಶನನ್ನು ಒಲಿ ಸಿಕೊಳ್ಳಬೇಕೆಂದು ನಿಶ್ಚಯಿಸಿ, ಈ ಸಂಗತಿಯನ್ನು ತನ್ನ ಪರಮಸ್ನೇಹಿತ ನಾದ ಸುದಾಸನಿಗೆ ತಿಳಿಸಿದನು. ಈ ಮಾತು ಅವನ ಮನಸ್ಸಿಗೂ ಬಂತು,



ನಮ್ಮಲ್ಲಿ ಕನ್ನಡ ವೇದಾಂತಗ್ರಂಥಗಳು ಕಾವ್ಯಗ್ರಂಥಗಳು, ಶಿವಪುರಾಣಗಳು ಚಾತುರ್ಯವಾದ ಕಥೆಗಳು, ಗ್ರಂಥಗಳು, ವೈದ್ಯಗ್ರಂಥಗಳು, ಯಕ್ಷಗಾನ ಗ್ರಂಥಗಳು, ವೀರಶೈವ ಮತಗ್ರಂಥಗಳು, ನಾಟಕಗಳು, ಕನ್ನಡ ಸಂಸ್ಕೃತ ಗ್ರಂ ಥಗಳು ಸಿಗುವವು, ಬೇಕಾದವರು ಬರದು ತರಿಸಿಕೊಳ್ಳಬಹುದು.

ನಮ್ಮ ವಿಳಾಸ:- ಶ್ರೀ. ಕ ನ್ನ ಯ್ಯ ಶೆ ಟ್ಟ.

ಕರ್ನಾಟಕ ಬುಕಡಿಪೋ ಏಜಂಟ್ ಬಳ್ಳಾರಿ. ಆಗ ಸುದಾಸನು ಅನ್ನುತ್ತಾನೆ; - ( ಮಿತ್ರನೇ ನಾನಾದರೂ ನನ್ನ ಧರ್ಮಾ ನುಸಾರವಾಗಿ ನಿನ್ನ ಸೇವಾವೃತ್ತಿಯಲ್ಲಿದ್ದು, ನನ್ನ ಮನೋಭಿಲಾಷೆಯನ್ನು ಪೂರ್ಣಮಾಡಿಕೊಳ್ಳುವೆನು, ಈ ಮಾತಿಗೆ ನೀನು ಸಮ್ಮತಿಸು ” ಎಂದು ವಿನಂತೀಮಾಡಿಕೊಂಡನು. ಆಗ ಸುಕರ್ಮನು ಮಿತ್ರನ ಮಾತಿಗೆ ಆನಂದ ದಿಂದ ಒಪ್ಪಿಕೊಂಡನು. ಈರ್ವರೂ ಕೂಡಿಕೊಂಡು ಪ್ರಯಾಗ ಕ್ಷೇತ್ರಕ್ಕೆ ಹೋಗಿ ಜಾನ್ಹ ವೀತಟಾಕದಲ್ಲಿ ಒಂದು ಸಣ ಕುಟೀರವನ್ನು ನಿರ್ಮಾಣಮಾ ಡಿಕೊಂಡು ವಾಸಮಾಡಹತ್ತಿದರು. ಬ್ರಾಹ್ಮಣನು ಹನ್ನೆರಡುವರುವ ಪರಿ ಯಂತರ ತಪವನ್ನಾಚರಿಸಿದನು; ಆದರೂ ಜಗದೀಶನು ಪ್ರಸನ್ನ ನಾಗಲಿಲ್ಲ. ಆಗ ಅವನು ಖಿನ್ನ ಮನನಾಗಿ ಸನ್ಯಾಸಾಕ್ರನನ್ನು ಕರಿಸಿ ಪುನಃ ತಪ ವನ್ನಾರಂಭಿಸಿದನು.
ಸುವಾಸನಾದರೂ ತನ್ನ ಧರಾನುಸಾರವಾಗಿ ಆ ಬ್ರಾಹ್ಮಣನ ಜೊ ತೆಯಲ್ಲಿಯೇ ಇದ್ದುಕೊಂಡು ತನ್ನ ಮನೋಭಿಷ್ಟ್ಯವನ್ನು ಹೊಂದಬೇಕೆಂ ದು ಬಗೆದು. ಆ ಸನ್ಯಾಸಿಯ ಸೇವೆಯನ್ನು ಮಾಡುತ್ತ ಕಾಲಹರಣ ಮಾಡ ಹತ್ತಿದನು.
ಈ ಪ್ರಕಾರ ತಪವನ್ನು ಆಚರಿಸುವದರಲ್ಲಿಯೇ ಪುನಃ ಹನ್ನೆರಡುವರು ನಗಳು ಕಳೆದುಹೋದವು; ಆದರೆ ಜಗದೀಶನು ಕರುಣಿಸಲಿಲ್ಲ ಇದರಿಂದ ಸು ಕರನು ಖಿನ್ನಾಂತಕರುಣವಾಗಿ ತನ್ನ ಮಿತ್ರನನ್ನು ಕುರಿತು ಅನ್ನುತ್ತಾನೆ

  • ಎ ಪರಮಪ್ರಿಯ ಮಿತ್ರನಾದ ಸುದಾಸನೆ ? ನಾನು ತಪಸ್ಸನ್ನು ಮಾ

ಡಹತ್ತಿ ಇಪ್ಪತ್ತುನಾಲ್ಕು ವರುಷಗಳಾದವು, ಆದರೂ ಜಗನ್ನಿಯಂತನು ಕ ರುಣಿಸಲಿಲ್ಲ. ಇನ್ನು ಪುನಃ ಸಂಸಾರವಾರದಲ್ಲಿ ಸಿಲುಕಿಕೊಂಡು ಅನುಯಾ ಮಿಗಳಲ್ಲಿ ಮುಖವನ್ನೆತ್ತಿ ಸಂಚಾರಮಾಡಲಿಕ್ಕೆ ನನ್ನ ಮನಸ್ಸು ಹಿಂಜರಿಯು ತದೆ, ಅದರಿಂದ ಈ ಲೋಕಪಾವನೆಯಾದ ಭಾಗೀರಥಿಯಲ್ಲಿ ದೇಹವಾತವ ನ್ನು ಮಾಡಿಕೊಳ್ಳಬೇಕೆಂದು ನಿಶ್ಚಯಿಸಿದ್ದೇನೆ” ಆದರೆ ಆತ್ಮಘಾತವು ನಾನ ಗಳಲ್ಲಿ ನಿಮ್ಮಿದ್ದವೆಂದು ಹೇಳಲ್ಪಟ್ಟಿದೆ. ಇಷ್ಟೇ ಅಲ್ಲ: ಪೂರ್ವಜರು ಹಿಗೆ ಹೇಳಿರುವರಲ್ಲಾ “ಹಿಂದೆ ಮಾಡಿದ್ದನ್ನು ಮರೆತು, ಮುಂದೆ ಮಾಡತಕ್ಕದ್ದೆ ನಾದರೂ ಸರಿಯಾಗಿ ಆಚರಿಸು” ಎಂದು ಹೇಳಿದ್ದಾರೆ ಅದರಿಂದ ಮನಸ್ಸು ಭೀತಿಯುಕ್ತವಾಗಿದೆ.
ಆಗ ಸುದಾಸನು ಅನ್ನುತ್ತಾನೆ;- “ಅಹುದು ಆತ್ಮಘಾತಮಾಡಿಕೊ ಳ್ಳುವದು ನನ್ನ ಮನಸ್ಸಿಗೂ ಬರುವದಿಲ್ಲ. ಆದರೆ ಈ ತ್ರಿವೇಣಿ ಸಂಗಮದಲ್ಲಿ ದೇಹವಾತ ಮಾಡಿಕೊಂಡರೆ ಪಾಪವು ತಟ್ಟುವದಿಲ್ಲವೆಂತಲೂ, ಮನೋಭೀ ಷ್ಟವು ಲಭಿಸುವದೆಂತಲೂ ಎಷ್ಟೋ ಜನ ಶಾಸ್ತ್ರಜ್ಞರ ಮುಖದಿಂದ ಕೇಳಿದ್ದೇನೆ” ಎಂದು ಹೇಳಿದನು.

ಈ ಮಾತನ್ನು ಕೇಳಿದ ಕೂಡಲೆ ಸುಶರ್ಮನಿಗೆ ಪರಮಾನಂದವಾಯಿತು. ಕೂಡಲೆ ಅವರೀರ್ವರು ತಮ್ಮ ತಮ್ಮ ಸಾಮಾನುಗಳನ್ನು ಬೇರೆಬೇರೆಯಾಗಿ ಕಟ್ಟಿ ಒಂದು ಗುಡ್ಡದ ಓರೆಯಲ್ಲಿ ಹುಗಿದು, ಜಾನ್ಹವೀತಟಾಕಕ್ಕೆ ಬಂದರು. ಆಗ ಸುಶರ್ಮನು ವರಜನ್ಮದಲ್ಲಿ ಸಾರ್ವಭೌಮನಾಗಬೇಕೆಂಬ ಇಚ್ಛೆಯಿಂದಲು ಸುದಾನನು ಉತ್ತಮಕುಲದಲ್ಲಿ ಜನ್ಮವನ್ನು ಹೊಂದಿ ತನ್ನ ಮಿತ್ರನ ಪ್ರಧಾನಮಂತ್ರಿಯಾಗಬೇಕೆಂಬ ಇಚ್ಛೆಯಿಂತಲೂ, ದೇಹತ್ಯಾಗ ಮಾಡಿದರು. ಮತ್ತು ಪರಜನ್ಮದಲ್ಲಿ ಪೂರ್ವಜನ್ಮದ ವೃತ್ತಾಂತವು ಸ್ಮರಣೆ ಯಲ್ಲಿ ಇರಬೇಕೆಂಬ ಅಭಿಲಾಷೆಯು ಸಹಾ ಇತ್ತು.

ಮುಂದೆ ಅವರವರ ಇಚ್ಛಾನುಸಾರವಾಗಿ ಸುಶರ್ಮನ ಜನ್ಮವು ಹೂಮಾಯೂನ ಬಾದಶಹನಲ್ಲಿ ಆಯಿತು. ಸನ್ ೧೫೪೩-ನೇ ಇಸ್ವಿಯಲ್ಲಿ ಹೂಮಾಯೂನನ ಬೇಗಮ್ಮನ ಹೊಟ್ಟೆಯಲ್ಲಿ ಹುಟ್ಟಿದ ಅಕಬರಬಾದಶಹನ ಸುಶರ್ಮನ ಅವತಾರವು, ಸುಶರ್ಮನ ಇಚ್ಛೆಯಾದರೂ ಶ್ರೇಷ್ಟ ವರ್ಣದಲ್ಲಿಯೇ ಜನ್ಮತಾಳಬೇಕೆಂದು ಇತ್ತು, ಆದರೆ ತಪಸ್ಸನ್ನು ಆಚರಿಸುತ್ತಿರುವಕಾಲದಲ್ಲಿ ಕೇವಲ ಲಕ್ಷ್ಮೀರವನ್ನು ಪ್ರಾರ್ಥನೆ ಮಾಡಿ ಇರಹತ್ತಿದ್ದರಿಂದ ಮುಸಲ್ಮಾನಕುಲದಲ್ಲಿ ಜನ್ಮಧಾರಣ ಮಾಡಬೇಕಾಗಿ ಬಂತು. ಆದರೆ ಇವನು ಪೂರ್ವಜನ್ಮದಲ್ಲಿ ಹಿಂದುವಾಗಿಯೂ ತಪವನ್ನು ಮಾಡುತ್ತಿದ್ದರಿಂದ ಅವನಿಗೆ ಹಿಂದೂ ಧರ್ಮದಮೇಲೆ ವಿಶ್ವಾಸವುಂಟಾಗಿತ್ತು.

ಅದೇ ಪಟ್ಟಣದಲ್ಲಿಯೇ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಸುದಾನನ ಜನ್ಮವಾಯಿತು. ಬ್ರಾಹ್ಮಣನು ಆ ಕೂಸಿಗೆ ಸ್ವಪ್ನನಾಥ,ನೆಂದು ಹೆಸರಿಟ್ಟನು. ಆ ಬಾಲಕನು ಸುಂದರನಾಗಿದ್ದು ಚತುರನಾಗಿದ್ದನು. ಅವನು ಸ್ವಲ್ಪ ದಿವಸಗಳಲ್ಲಿಯೇ ಅನೇಕ ಶಾಸ್ತ್ರಗಳನ್ನೊದಿಕೊಂಡನು, ಇದರಿಂದ ಬಾದಶಹನು ಸಂತುಷ್ಟನಾಗಿ ಅವನಿಗೆ " ಬೀರಬಲ,", ಎಂದು ಕರೆಯಹತ್ತಿದನು. ಇವರಿಬ್ಬರ ಪೂರ್ವಜನ್ಮದ ಒಂದು ಆಖ್ಯಾಯಿಕೆಯು ಇದೇ ಗ್ರಂಥದಲ್ಲಿ ೧೨೦-ನೇದರಲ್ಲಿ ಬಂದದೆ.

ಜಾತಿ, ಜನ್ಮಭೂಮಿ, ಮತ್ತು ಪ್ರಾಕಟ್ಯ

ರಾಜಾ ಬೀರಬಲ್ಲನ ಜಾತಿಯು ನಿಃಸಂದೇಹವಾಗಿ ಗೊತ್ತಾಗಿರುವದಿಲ್ಲ; ಕೆಲವರು ಇವನು “ ಕಾನ್ಯ ಕುಬ್ಜ ", ಬ್ರಾಹ್ಮಣನೆಂದು ಹೇಳುತ್ತಾರೆ. ಕೆಲವರು " ಚೌಬೇ " ಕುಲದವನೆಂದು ಹೇಳುತ್ತಾರೆ. ಯಾಕಂದರೆ ಚೌಬೇ ಕುಲದವರು ಕೇವಲ ಹಾಸ್ಯಗಾರರೂ, ಪರರ ಮನಸ್ಸನ್ನು ಒಲಿಸಿಕೊಳ್ಳುವ ದರಲ್ಲಿ ಕುಶಲರೂ ಇರುವರು, ಅದರಂತೆಯೇ ಈ ಬೀರಬಲನಲ್ಲಿ ಮೇಲೆಹೇ ಳಿದ ಗುಣಗಳು ಇದ್ದದರಿಂದ ಅವರು ತಮ್ಮ ಕುಲದವನೆಂದು ಹೇಳುತ್ತಿರಬ ಹುದು. ಈ ವಿಷಯದಲ್ಲಿ ಇನ್ನೊಂದು ಅಖ್ಯಾಯಿಕೆಯುಂಟು ಅದೇನಂದರೆ- ( ಬೀರಬಲನು ( ಈ ಜಗತ್ತಿನಲ್ಲಿ ಪ್ರಸಿದ್ಧನಾಗುವ ಪೂರ್ವದಲ್ಲಿ ತನ್ನ ಕವಿ ತದಿಂದಲೂ, ಗಾಯನದಿಂದಲೂ ದುರ್ಗಾದೇವಿಯನ್ನು ಒಲಿಸಿಕೊಂಡು, “ ನೀನು ಆರಂಭದಲ್ಲಿ ಯಾವ ವ್ಯಾವಾರವನ್ನು ಮಾಡುವಿಯೋ ಅದರಲ್ಲಿ ನಿನಗೆ ಅಧಿಕಲಾಭವಾಗುವದು ” ಎಂಬ ವಾಗ್ದಾನವನ್ನು ಹೊಂದಿದ್ದನಂತೆ ಅದರಂತೆ ಅವನು ಉಪ್ಪನ್ನು ತುಂಬಿಕೊಂಡು ಬಂದು ಹೊಲೆಯನಿಗೆ ಮಾರ ಲಿಕ್ಕೆ ಕೊಟ್ಟನು, ಅದನ್ನು ಕಂಡು ದೇವಿಯು ಪುನಃ ವರವನ್ನು ಕೊಟ್ಟಳು ಏನಂದರೆ, “ ನಿನಗೆ ಇನ್ನು ಮುಂದೆ ಹಾಸ್ಯದಿಂದಲೇ ವಿಶೇವಲಾಭವುಂಟಾ ಗುವದು? ಆಕಾಲದಿಂದ ಇವನಲ್ಲಿ ಚಾತುರವು ಹೆಚ್ಚಾಯಿತು ಎಂಬದಂಥ ಕಥೆಯೂ ಉಂಟು.

ಮಾರವಾಡ ದೇಶದಲ್ಲಿ ಬೀರಬಲನು "ಮಕರ ”ವೆಂಬ ಗ್ರಾಮದಲ್ಲಿ ಜನ್ಮತಾಳಿದವನೆಂದು ಹೇಳುತ್ತಾರೆ, ಆ ಗ್ರಾಮದಲ್ಲಿ ಇದ್ದ ಸಂಗಮರವರೀ ಕಲ್ಲಿನ ಖಣಿಯನ್ನು ಸಾಂಬರವೆಂಬ ಊರಿನಲ್ಲಿದ್ದ ಒಬ್ಬ ವೈದ್ಯನಿಗೆ ಗೊತ್ತು ಹಚ್ಚಿಕೊಟ್ಟನೆಂತಲೂ ಆ ಖಣಿಯೊಳಗಿನ ಕಲ್ಲಿನಿಂದಲೇ ಬಾದಶಹನ ಅರ ಮನೆಯು ಕಟ್ಟಲ್ಪಟ್ಟಿತೆಂತಲೂ, ಈ ಕಾರಣದಿಂದಲೇ ಬಾದಶಹನವರೆಗೆ ಇವನ ಹೆಸರು ಹೋಯಿತೆಂತಲೂ ಒಂದು ಆಖ್ಯಾಯಿಕೆಯುಂಟು.

ಜಯಪುರ ಪ್ರಾಂತದವರು ಬೀರಬಲನ ಜನ್ಮವು ಅಜಮೀರದ ಹತ್ತಿರ ಒಂದು ಸಂಣ ಜನವಸತಿಯಲ್ಲಿ ಹುಟ್ಟಿದನೆಂತಲೂ ಹೇಳುತ್ತಾರೆ; ಇವನು ಬಾದಕಹನ ಆಶ್ರಯವನ್ನು ಹೊಂದಲಿಕ್ಕೆ ಈ ಕಳಗೆ ಹೇಳಿದ ಕಾರಣವೇ ಉಂಟಾಯಿತೆಂತಲೂ ವರ್ಣನೆಮಾಡಿದ್ದಾರೆ. ಆ ಕಾರಣವು ಯಾವದೆಂದರೆ- ( ಬೀರಬಲನ ಮಾತಾಪಿತೃಗಳು ಕೇವಲ ದರಿದ್ರರಾಗಿದ್ದು, ಒಂದು ಗುಡ್ಡದ ಓರೆಯಲ್ಲಿ ಕುಟೀರವನ್ನು ಕಟ್ಟಿಕೊಂಡು ಇದ್ದರಂತೆ, ಬೀರಬಲನು ಚಿಕ್ಕವ ನಿದ್ದಾಗ್ಗೆ ಗುಡ್ಡದಮೇಲೆ ಹೋಗಿ ಉರುವಲಗಳನ್ನು ತರುತ್ತಿದ್ದನಂತೆ, ಒಂ ದಾನೊಂದು ದಿನ ಅವನು ಉರುವಲಗಳನ್ನು ತರುವದಕ್ಕೆ ತನ್ನ ಗೃಹದ ಹಿಂ ಭಾಗದಲ್ಲಿದ್ದ ಗುಡ್ಡದಮೇಲೆ ಹೋಗಿ ಕಟ್ಟಿಗೆಗಳನ್ನು ಕೂಡ ಹಾಕಿದನು. ಅವುಗಳನ್ನು ಕಟ್ಟಲಿಕ್ಕೆ ಹಗ್ಗವನ್ನು ತೆಗೆದುಕೊಂಡು ಹೋಗಿದ್ದಿಲ್ಲ, ಆಗ ಅವನು ತನ್ನ ತಾಯಿಯನ್ನು ಕೂಗಿ “ ನಾನು ಹಗ್ಗವನ್ನು ಮನೆಯಲ್ಲಿ ಮ ರೆತುಬಂದಿದ್ದೇನೆ ಅದನ್ನು ಕಳುಹಿಕೊಡು ” ಎಂದು ಹೇಳಿದನು. ಅದಕ್ಕೆ ಅವನತಾಯಿಯು " ಹಗ್ಗವು ಮನೆಯಲ್ಲಿಯೇ ಅದೆ, ಆದರೆ ಅದನ್ನು ಯಾರ ಸಂಗಡ ಕಳುಹಿಕೊಡಲಿ ” ಎಂದು ಪ್ರಶ್ನೆ ಮಾಡಿದಳು. ಅದಕ್ಕೆ ಬೀರಬಲನು “ ನಾಯಿಯ ಕೊರಳಿಗೆ ಕಟ್ಟಿ ಕಳುಹಿಕೊಡು ಎಂದು ಹೇಳಿದನು. ಅದ ರಂತೆ ನಾಯಿಯ ಕೊರಳಿಗೆ ಹಗ್ಗವನ್ನು ಕಟ್ಟಲು, ಆ ನಾಯಿಯನ್ನು ತನ್ನ ಹತ್ತಿರ ಬರುವಂತೆ ಕೂಗಲು ಅದು ಅವನ ಬಳಿಯಲ್ಲಿ ಹೋಯಿತು. ಕೂಡಲೆ ಆ ಹಗ್ಗದಿಂದ ಕಟ್ಟಿಗೆಗಳನ್ನು ಕಟ್ಟಿಕೊಂಡು ಕೆಳಗೆ ಇಳಿಯುತ್ತಿದ್ದನಂತೆ, ಆ ಸಮಯದಲ್ಲಿ ಬೇಟೆಯಾಡುತ್ತ ಬಂದಿದ್ದ ಅಕಬರನ ಕಿವಿಗೆ ಅವನಚಾತುರ್ಯ ಯುಕ್ತ ಭಾಷಣವು ಕೇಳಲು, ಅವನು ಹಾಗೇ ಅವನ ಕುಟೀರದೆಡೆಗೆ ಹೋದನು ಅಷ್ಟರಲ್ಲಿ ಮಾರ್ಗದಲ್ಲಿದ್ದ ಪ್ರವಾಹದ ಸಂಗಡ ವೇಗವಾಗಿ ಬರು ತ್ತಿದ್ದ ಬೀರಬಲ್ಲನನ್ನು ಕಂಡು ಅವನಿಗೆ ಅತ್ಯಾನಂದವಾಯಿತು. ಅವನು ಬಂದು ಕಟ್ಟಿಗೆಯ ಹೊರೆಯನ್ನು ಇಳಿಸಿ ನಿಂತುಕೊಳ್ಳಲು, ಬಾದಶಹನು ಅವನ ಸಮೀಪಕ್ಕೆ ಹೋಗಿ ಆನಂದದಿಂದ ಅವನ ಬೆನ್ನು ಚಪ್ಪರಿಸಿದನು. ಮತ್ತು ಇನ್ನೊಂದು ಸಾರೆ ಈ ಪ್ರವಾಹವನ್ನು ದಾಟಿ ಹೋಗು ಎಂದು ಆಪ್ಪಣೆಮಾಡಿದನು. ಆಗ ಬೀರಬಲನಿಗೆ ಮೊದಲಿನಕಿಂತಲೂ ಹೆಚ್ಚು ಹೊತ್ತು ಬೇಕಾಯಿತು ಅದಕ್ಕೆ ಬಾದಶಹನು ಪುನಃ ಪ್ರಶ್ನೆ ಮಾಡಿದನು. ಏನಂದರೆ- "ಎಲೈ ಬಾಲಕನೇ ! ನೀನು ಮೊದಲು ಬರುವಾಗ್ಗೆ ಶೀಘ್ರವಾಗಿ ಬಂದಿದ್ದಿ? ಈಗ ಪುನಃ ಪ್ರವಾಹವನ್ನು ದಾಟಲೆಕ್ಕ ಇಷ್ಟು ವೇಳೆಯು ಯಾಕ ಹತ್ತಿತು? ಎಂದು ಪ್ರಶ್ನೆ ಮಾಡಲು. ಬೀರಬಲನು ತಕ್ಷಣಕ್ಕೆ ಪ್ರಾರ್ಥಿಸಿದ್ದೇನಂದರೆ‍- "ಪೃಥ್ವೀನಾಥ ನಾನು ಮೊದಲುಬರುವಾಗ್ಗೆ ನನ್ನ ಶರೀರವು ಹಗುರಾಗಿತ್ತು ಆದರೆ ಹಿಂದಿರುಗಿ ಹೋಗುವ ಕಾಲದಲ್ಲಿ ತಮ್ಮ ಕೃಪಾಭಾರವು ನನ್ನ ಮೇಲೆ ಬಹಳವಾಯಿತು, ಅದರಿಂದ ನನಗೆ ಪ್ರವಾಹವನ್ನು ದಾಟುವದಕ್ಕೆ ಬಹಳ ಹೊತ್ತು ಹಿಡಿಯಿತು” ಎಂದು ಉತ್ತರಕೊಟ್ಟನು. ಆಗ ಬಾದಶಹನು ತನ್ನ ಮನಸ್ಸಿನಲ್ಲಿ ಅನ್ನುತ್ತಾನೆ;. " ಈ ಹುಡುಗನು ಕೇವಲ ಅಕೃತನಾಗಿದ್ದರೂ ಸಮಯೋಚಿತವಾದ ಉತ್ತರವನ್ನು ಹೇಳುವದರಲ್ಲಿ ಚತುರನಿದ್ದಾನೆ ” ಎಂ ದು ತಿಳಿದುಕೊಂಡು ಬೀರಬಲನ ಮಾತಾಪಿತೃಗಳ ಸಮ್ಮತಿಯನ್ನು ಪಡೆದು ತನ್ನ ಸಂಗಡಲೇ ಕರೆದುಕೊಂಡು ಹೋದನು.

ಮತ್ತೂ ಕೆಲವರು ಈ ಪ್ರಕಾರ ಹೇಳುತ್ತಾರೆ "ಇವನು ದಿಲ್ಲಿಯಲ್ಲಿ ಯಲ್ಲಿಯೇ ಇದ್ದ ಒಬ್ಬ ಬ್ರಾಹ್ಮಣ ಪುತ್ರನು, ಬೀರಬಲನು ಚಿಕ್ಕವನಿದ್ದ ಕಾ

ಲದಲ್ಲಿ ಒಂದುದಿನ ಪಾಠಶಾಲೆಗೆ ಹೋಗಿ, ವಿದ್ಯೆಯನ್ನು ಕಲಿತು ಹಿಂದಿರುಗಿ

ಮನೆಗೆ ಬರುತ್ತಿದ್ದನು. ಆ ಸಮಯದಲ್ಲಿ ಬಾದಶಹನ ಅರಮನೆಯ ಎದುರಿಗೆ ಬಹುರೂಪಿಯು ಆಟವನ್ನು ಆಡಹತ್ತಿದ್ದನು. ಅದನ್ನು ನೋಡಲಿಕ್ಕೆ ದೊಡ್ಡ ದೊಡ್ಡ ಸರದಾರರೂ, ದರಕದಾರರೂ, ರಾಜರೂ, ಮಹಾರಾಜರೂ ಕೂಡಿ ದ್ದರು. ಅದರಂತೆ ನಗರವಾಸಿಗಳೂ ಬಹುಮಂದಿ ಮಿಲಿತರಾಗಿದ್ದರು. ಅವರಲ್ಲಿ ಬೀರಬಲನೂ ಆಟವನ್ನು ನೋಡಲಿಕ್ಕೆ ಹೋಗಿ ನಿಂತು ಕೊಂಡಿದ್ದನು ಬಹು ರೂಪಿಯು ಎತ್ತಿನ ವೇಷವನ್ನು ಹಾಕಿಕೊಂಡು ತನ್ನ ಚತುರತೆಯನ್ನು ಬಾದಶಹನ ಎದುರಿಗೆ ಪ್ರಕಟಮಾಡಿ ತೋರಿಸಿದನು ಆಗ ನೆರೆದವರೆಲ್ಲರೂ ಮತ್ತು ಬಾದಶಹನೂ ಸಹ ಆ ಬಹುರೂಪಿಯ ಚತುರತನವನ್ನು ಕಂಡು ಸಹ ಬಾಸ, ವಾಹಾವ್ವಾ, ಎಂದು ಹೊಗಳಹತ್ತಿದರು. ಪ್ರಸನ್ನ ಚಿತ್ರನಾದ ಬಾದ ಶಹನು ತನ್ನ ಮೈಮೇಲಿನ ಬಹು ಬೆಲೆಯುಳ್ಳವಸ್ತ್ರವನ್ನು ಪಾರಿತೋಷಕ ವಾಗಿ ಕೊಟ್ಟು ಬಿಟ್ಟನು ಆ ಆಟವನ್ನು ನೋಡುತ್ತ ನಿಂತಿದ್ದ ಬೀರಬಲನು ಆ ಬಹುರೂಪಿಯನ್ನು ಪರೀಕ್ಷಿಸಬೇಕೆಂದು ಒಂದು ಸಣ್ಣಕಲ್ಲು ಹರಳನ್ನು ತೆಗೆದುಕೊಂಡು ಎತ್ತಿನ ವೇಷವನ್ನು ಧರಿಸಿದ್ದ ಬಹುರೂಪಿಗೆ ಒಗೆದನು ಕೂ ಡಲೆ ಅವನು ಸ್ವಾಭಾವಿಕ ಎತ್ತಿನಂತ ಮೈಯನ್ನು ಅಲುಗುಡಿಸಿದನು. ಅದ ನ್ನು ಕಂಡು ಬಾಲಕನಾದ ಬೀರಬಲನು ಅತ್ಯಾನಂದಿತನಾಗಿ ಈ ವಾರವಾ ಶಹಬಾಸ ” ಎಂದು ಹೊಗಳಿ ತನ್ನ ತಲೆಯಮೇಲಿದ್ದ ಟೊಪ್ಪಿಗೆಯನ್ನು ಪಾರಿ ತೋಪಕವಾಗಿ ಕೊಟ್ಟುಬಿಟ್ಟನು ಅದನ್ನು ಕಂಡು ಬಹುರೂಪಿಯು ನೃತ್ಯಮಾನವನಾಗಿ ಆಟೊಪ್ಪಿಯನ್ನು ಕೈಯಲ್ಲಿ ಹಿಡಿದುಕೊಂಡು ಬಾದ ಶಹನ ಸಮೀಪಕ್ಕೆ ಹೋಗಿ ಆಹುಡುಗನ ಚಾತುರ್ಯವನ್ನೂ ಗುಣಗ್ರಾಹ ದಂತೆಯನ್ನೂ ಹೊಗಳಿ " ಪೃಥ್ವಿನಾಥ ಈ ಟೊಪ್ಪಿಗೆಯ ಒಡೆಯನು ಒಳ್ಳೆ ಚತುರನಾಗಿದ್ದು ಗುಣಗ್ರಾಹಿಯಾಗಿದ್ದಾನೆ ನೀವು ಕೊಟ್ಟ ಸಾವಿರಾ ರುರೂಪಾಯಿಗಳ ಪಾರಿತೋಷಕ್ಕಿಂತಲೂ ಈ ಟೊಪ್ಪಿಗೆಯು ನನಗೆ ಬಹುಮಾನ ವಾಗಿ ಸಿಕ್ಕುದ್ದರಿಂದ ಅತ್ಯಾನಂದವಾಗಿದೆ ಅವನು ಕೇವಲ ದರಿದ್ರನಾಗಿ ದ್ದರೂ ತನ್ನ ಹತ್ತಿರ ಇದ್ದವಸ್ತುವನ್ನು ಹಿಂದುಮುಂದು ನೋಡದೆ ಕೊಟ್ಟು ಬಿಟ್ಟನು ಎಂದು ವರ್ಣನೆ ಮಾಡಿದನು.

ಆಗ ಬಾದಶಹನು ಆ ಹುಡುಗನನ್ನು ತನ್ನ ಸಮೀಪಕ್ಕೆ ಕರಿಸಿಕೊಂಡು ದಯೆಯಿಂದ ಅವನ ಅದ್ಯೋವಾಂತ ವೃತ್ತಾಂತವನ್ನೆಲ್ಲ ಕೇಳಿಕೊಂಡನು, ನಿರ್ಭಯದಿಂದ ಉತ್ತರ ಕೊಡುತ್ತಿದ್ದ ಆ ಬಾಲಕನ ಮೇಲೆ ಪ್ರೀತಿಯುಳ್ಳವ ನಾಗಿ ಉತ್ತಮವಾದ ವಸ್ತ್ರಗಳನ್ನು ಹಾಕಿಕೊಳ್ಳುವದಕ್ಕೆ ಕೊಟ್ಟು ಪ್ರತಿದಿನ

ದಲ್ಲಿ ತನ್ನ ಸಭೆಯಲ್ಲಿ ಬಂದು ಕುಳಿತುಕೊಳ್ಳಬೇಕೆಂದು ಅಪ್ಪಣೆ ಮಾಡಿದನು

ಬುಂದೇಲಖಂಡದವರು ಬೀರಬಲನು ತಮ್ಮ ದೇಶದವನೆಂದು ಹೇಳು ತ್ತಾರೆ ಬೀರಬಲನು - ಟೆಹರಿ ” ಪಟ್ಟಣದ ನಿವಾಸಿಯೆಂದೂ ಚಿಕ್ಕಂದಿನಲ್ಲಿ ಯೇ ಬಹುಬುದ್ದಿವಂತನಿದ್ದನೆಂದೂ ಹೇಳುತ್ತಾರೆ. ಬೀರಬಲನ ಸ್ಮರಣಶಕ್ತಿ ಯು ಅಧಿಕವಾಗಿತ್ತು ಅವನು ಕಲಿತದ್ದನ್ನು ಎಂದೂ ಮರೆಯಲಿಲ್ಲ ಟಿಹರಿ ಯಲ್ಲಿ ಕೆಲವು ದಿವಸ ವಿದ್ಯಾಭ್ಯಾಸಮಾಡಿ ಆಮೇಲೆ ಕಾಶೀಪಟ್ಟಣಕ್ಕೆ ಹೋ ಗಿ ವಿದ್ಯೆಯನ್ನು ಕಲಿಯಹತ್ತಿದನು. ಇವನ ಬುದ್ಧಿಸಾಮರ್ಥ್ಯವನ್ನು ಕಂ ಡು ಗುರುಗಳು ಅತ್ಯಾನಂದಿತರಾಗಿ ಕೆಲವು ವರುಷಗಳಲ್ಲಿಯೆ ಅದ್ವಿತೀಯ ಪಂಡಿತನನ್ನಾಗಿ ಮಾಡಿಬಿಟ್ಟರು ಆಮೇಲೆ ಬೀರಬಲನು ದಿಲ್ಲಿಗೆ ಬಂದು ಅರ ಬೀ ಪಾರಸಿ ವಿದ್ಯೆಯನ್ನು ಕಲಿತುಕೊಂಡನು ದಿಲ್ಲಿಯಲ್ಲಿ ಇರುವಕಾಲದಲ್ಲಿ ಬೀರಬಲನ ದೇಹದಲ್ಲಿ ಯಾವದೋ ಒಂದು ಜಾಡ್ಯವು ಉತ್ಪನ್ನ ವಾಗಲು ಅವನು ಒಬ್ಬ ವೈದ್ಯನ ಬಳಿಗೆ ಹೋದನು ಅವನು ಬೀರಬಲನಿಗೆ ಸರಿಯಾದ ಔಷಧವನ್ನು ಕೊಟ್ಟು ರೋಗಮುಕ್ತನನ್ನಾಗಿಮಾಡಿ ರಾಜಾತೋಡರಮಲ್ಲನ ಸಮೀಪಕ್ಕೆ ಕರದೊಯ್ದನು ತೊಡರಮಲ್ಲನು ಇವನ ಚತುರತನವನ್ನು ಪ ರೀಕ್ಷಿಸಿ ಬಾದಶಹನಿಗೆ ಬೆಟ್ಟ ಮಾಡಿಸಿದನು ಬಾದಶಹನು ಇವನ ರಸಭರಿತ ವಾದ ವಾಕ್ಚಾತುರ್ಯಕ್ಕೆ ಮೆಚ್ಚಿ ತನ್ನ ಹತ್ತಿರ ಇಟ್ಟುಕೊಂಡನು.
ಕೆಲಕೆಲವರ ಮತದಿಂದ ಬೀರಬಲನು ಕಾಶಿಯಲ್ಲಿ ಬ್ರಹ್ಮಘಾಟನಲ್ಲಿದ್ದ ಬ್ರಾಹ್ಮಣನೆಂದೂ ಇವನು ವಿಕ್ರ ಮಾರ್ಕ ಸಂವತ್ ೧೬೧೭ ನೇದರಲ್ಲಿ ಜನ್ಮ ತಾಳಿದನೆಂದ ಹೇಳುತ್ತಾರೆ .ಬೀರಬಲನು ಬರೆದ ಕೆಲವು ಗ್ರಂಥಗಳಲ್ಲಿ ತನ್ನ ಉಪನಾಮವು ಈ ಬ್ರಹ್ಮಶಿಖಾ ” ಎಂದು ಉಲ್ಲೇಖಿಸಿದ್ದಾನೆ ಮೇಲೆಹೇಳಿದ ಶಕದಲ್ಲಿ ಏನೋ ಹೆಚ್ಚುಕಡಿಮೆಯಿದ್ದಂತೆಕಂಡು ಬರುತ್ತದೆ ಯಾಕೆಂದರೆ ಸಂವತ್‌ ೧೬೨೬ ನೇದರಲ್ಲಿ ಇವನು ಬಾದಶಹನ ದರಬಾರದಲ್ಲಿ ಪ್ರತಿಷ್ಟಿತ ನಾಗಿದ್ದಂತೆಯೂ, ಅದೇ ವರುಷ ಅವನು ಅವನು ಮಲಬಾರದ ರಾಜನ ಮತ್ತು ಬಾದಶಹನ ನಡುವೆ ಇದ್ದ ನ್ಯಾಯವನ್ನು ತೀರಿಸಿದನೆಂತಲೂ ಕಂಡು ಬರುತ್ತದೆ.
ದೇವೀಪ್ರಸಾದಜೀ ಮುನಸೀಫ ರಾಜಚೋಧಪುರ ಎಂಬವರು ತಮ್ಮ ಗ್ರಂಥದಲ್ಲಿ ಹೀಗೆ ಉಲ್ಲೇಖಿಸಿರುವರಲ್ಲಾ “ ಬೀರಬಲನ ನಿಜವಾದ ಹೆಸರು ಬ್ರಹ್ಮದಾಸನೆಂದೂ ಅದೇಜಾತಿಯ ಬ್ರಾಹ್ಮಣನೆಂದೂ ಬರೆದಿದ್ದಾರೆ ಇವನು ಸಂಸ್ಕೃತ ಭಾಷೆಯಲ್ಲಿ ಅಸಾಧಾರಣ ಪಂಡಿತನಿದ್ದನೆಂತಲೂ ಪಾರಸಿ ಅರಬ್ಬಿ ಭಾಷೆಗಳನ್ನು ಸಹಾ ಅರಿತಿದ್ದನೆಂತಲೂ ಹೇಳಿರುವರು ಯಾವಾಗ ಇ

ವನು ಅಕಬರ ಬಾದಶಹನ ಬಳಿಯಲ್ಲಿ ಬಂದು ನಿಂತುಕೊಂಡನೋ ಆಮೇಲೆ

ಅತ್ಯಲ್ಪ ಕಾಲದೊಳಗಾಗಿ ತನ್ನ ಬುದ್ಧಿಸಾಮಥ್ಯದಿಂದಲೂ ಸಮಯೋಚಿತ ಮಾತು ಕಥೆಗಳಿಂದಲೂ ಬಾದಶಹನನ್ನು ಪ್ರಸನ್ನೀಕರಿಸಿಕೊಂಡನೆಂತಲೂ ಇವನ ಅಗಲುವಿಕೆಯಿಂದ ಬಾದಶಹನಿಗೆ ವ್ಯಸನವುಂಟಾಗುತ್ತಿತ್ತೆಂತಲೂ, ಉಲ್ಲೇಖಿಸಿದ್ದಾರೆ.
ಬೀರಬಲನ ವೃದ್ಧಿಯಾ, ಪ್ರತಿಷ್ಠಿತೆಯ ಮತ್ತು ವಿಶೇಷ ಇತಿಹಾಸಸಂಗತಿಯಾ,
ಬೀರಬಲನು ಕೇವಲ ಸಭಾಚತುರನೂ ಕೇಳಿದ ಪ್ರಶ್ನೆಗೆ ತಕ್ಷಣ ದಲ್ಲಿ ಸಮರ್ಪಕ ಉತ್ತರಕೊಡುವದರಲ್ಲಿ ಧುರೀಣನೂ ಇದ್ದದ್ದಲ್ಲದೆ ಅವನಲ್ಲಿ ಕವಿತಾಚಾತುರ್ಯವೂ ಇತ್ತೆಂಬಂತೆ ಕಂಡು ಬರುತ್ತದೆ ಅವನು ಸಮಯಾ ನುಸಾರವಾಗಿ ತನ್ನ ಸಣ್ಣ ಸಣ್ಣ ಮನೋಹರವಾದ ಕವಿತೆಗಳಿಂದ ಬಾದ ಶಹನನ್ನು ಪ್ರಸನ್ನನ್ನಾಗಿ ಮಾಡಿಬಿಡುತ್ತಿದ್ದನು ಅವನ ಕವಿತೆಗಳನ್ನು ಕೇಳಿ ಆಕಾಲದಲ್ಲಿದ್ದ ಕವಿಗಳೆಲ್ಲರೂ ತಲೆದೂಗೂತ್ತಿದ್ದರೂ ಬಾದಶಹನು ಇವನ ಕವಿತಾಚಾತುರ್ಯವನ್ನು ಕಂಡು ಮೊದಲು " ಕವಿರಾಯನೆಂದು ಪದ ವಿಯನ್ನು ಕೊಟ್ಟನು ಆಮೇಲೆ ಇವನ ನ್ಯಾಯವಿಮರ್ಶೆಯನ್ನು ಕಂಡು "ರಾಜ" ನೆಂಬ ಪದವಿಯನ್ನಿತ್ತು ತನ್ನ ಅಮಾತ್ಯಗಣದಲ್ಲಿ ಸೇರಿಸಿಕೊಂಡನು ಮತ್ತು ನಗರಕೋಟದ ಸುತ್ತ ಮುತ್ತಲಿನ ಪ್ರದೇಶವನ್ನು ಜಹಾಗೀರಾಗಿ ಕೊಟ್ಟು ಬಿಟ್ಟನು ಆ ಮೇಲೆ ಕೆಲವು ಕಾಳಗಗಳಲ್ಲಿ ಬೀರಬಲನು ತನ್ನ ಕೌ ರ್ಯವನ್ನು ಪ್ರಕಟಪಡಿಸಿದ್ದರಿಂದ ಬಾದಶಹನು “ ವೀರವರ ” ನೆಂಬ ಬಹು ಮಾನದ ಪದವಿಯನ್ನಿತ್ತನು.
ಆ ಸಮಯದಲ್ಲಿ ನಗರಕೋಟದಲ್ಲಿ ಕಟೋಚ' ಜಾತಿಯ ರಜಪೂತ ನಾದ ಜಯಚಂದನೆಂಬವನು ಆಳುತ್ತಿದ್ದನು ಅವನು ಪ್ರಾಯಶಃ ಬಾದಶಹ ನ ಅಂಕಿತನಾಗಿಯೇ ಇದ್ದನು ಸಂವತ್ ೧೬೨೯ ನೇದರಲ್ಲಿ ಬಾದಶಹನು ಯಾವದೋ ಒಂದು ಕಾರಣದಿಂದ ಕ್ರುದ್ದನಾಗಿ ಪಂಜಾಬದ ಸುಭೇದಾರ ನಾದ ಹುಸೇನ ಕುಲೀಖಾ ಎಂಬವನಿಗೆ ಒಂದು ಹುಕುಮನ್ನು ಬರೆದು ಕಳು ಹಿಸಿ “ ನಗರಕೋಟದ ರಾಜನನ್ನು ಬಂದಿಯನ್ನಾಗಿ ಮಾಡಿ, ಆರಾಜ್ಯವ ನ್ನು ಬೀರಬಲ್ಲನ ಸ್ವಾಧಿನ ಪಡಿಸಬೇಕೆಂದು ಅಪ್ಪಣಿಯನ್ನಿತ್ತನು.
ಆಗ ರಾಜಾ ಬೀರಬಲನು ಬಾದಶಹನ ಅನುಜ್ಞೆಯನ್ನು ಹೊಂದಿ ಲಾಹೋರಕ್ಕೆ ಹೋಗಿ ಹುಸೇನ ಕುಲೀಖಾನನಿಗೆ ಭೆಟ್ಟಿಯಾದನು ಆಗಖಾ ನನು ತನ್ನ ಸೈನ್ಯವನ್ನು ತೆಗೆದುಕೊಂಡು ಬೀರಬಲನ ಸಹಾಯಕ್ಕೆ ಹೊರ

ಟನು. ಇವರಿಬ್ಬರೂ ಕೂಡಿಕೊಂಡು ಅರಣ್ಯವನ್ನು ಕಡಿಯುತ್ತಾ ರಜಪೂತ

ಸೈನ್ಯದೊಡನೆ ಹೋರಾಡುತ್ತಾ "ಕಾಂಗಡೆ' ಎಂಬ ಗ್ರಾಮಕ್ಕೆ ತಲುಪಿದರು ಆಗ ಜಯಚಂದನ ಮಗನಾದ ವಿಧಿಚಂದ್ರನು ಕೋಟೆಯ ಹೊರಮಗ್ಗಲಿಗೆ ಬಂದು ಕಾಳಗಮಾಡಹತ್ತಿದನು, ಸ್ವಲ್ಪ ಹೊತ್ತಿನವರೆಗೆ ಉಭಯಪಕ್ಷದಲ್ಲಿ ನಿಕರದ ಕಾಳಗವೆಸಗಿತು, ಕೋಟೆಯು ಕೈವಶವಾಕುವ ಸಮಯವು ಬಂದು ಒದಗಿತು ಅಪ್ಪರಲ್ಲಿ ಮಿರಜಾ ಇಬ್ರಾಹಿಮಾನನು ಲಾಹೋರದ ಮೇಲೆ ದಂಡೆತ್ತಿ ಬರಹತ್ತಿದ್ದಾನೆಂಬ ವಾರ್ತೆಯು ಸೈನ್ಯದೊಳಗೆ ಪಸರಿಸಿತು. ಆಗ ಹುಸೇನ ಕುಲೀಖಾನನು ಬೀರಬಲ್ಲನಿಗೆ ಕೇಳುತ್ತಾನೆ;- " ಈಗ ಏನು ಮಾಡಬೇಕು ಎಂದನು. ಆಗ ಬೀರಬಲ್ಲನು ಉತ್ತರಕೊಟ್ಟಿದ್ದೇನಂದರೆ "ಬಾದಶಹನ ಅಪ್ಪಣೆಯನ್ನು ಮೊದಲು ಪಾಲಿಸಲಿಕ್ಕೆಬೇಕು " ಎಂದು ಹೇಳಿದನು ಆಗ ಕುಲೀಖಾನನು ವಿಧಿಚಂದ್ರನಿಗೆ " ಈ ರಾಜ್ಯವು ಬಾದಶಹನ ಅಪ್ಪಣೆಯಮೇರೆಗೆ ಬೀರಬಲನಿಗೆ ಕೊಡಲ್ಪಟ್ಟಿದೆ, ಆದ್ದರಿಂದ ನೀನು ಅವನನ್ನು ಪ್ರಸನ್ನಿಕರಿಸಿಕೊಂಡರೆ ನಾನು ಹಿಂದಿರುಗಿ ಹೊಗುವೆನು ” ಎಂದು ಹೇಳಲು ವಿಧಿಚಂದ್ರನು ಇದು ಉತ್ತಮವಾದ ಪಕ್ಷವೆಂದು ತಿಳಿದು ಬಿರಬಲನು ಕೇಳಿದಷ್ಟು ಹಣವನ್ನು ಕೊಟ್ಟು, ಐದಮಣ ಬಂಗಾರವನ್ನು ಬಾದಶಹನಿಗೆ ಕಾಣಿಕೆಯಾಗಿ ಕೊಟ್ಟು ಕಳಿಸಿದನು.
ಆ ಸೈನ್ಯದಲ್ಲಿ ಮುಸಲ್ಮಾನ ಜನರೇ ಅಧಿಕರಾಗಿದ್ದರು ಅವರು ಕಾಂ ಗಡಾ ಪ್ರದೇಶದಲ್ಲಿ ಅತಿ ಅತ್ಯಾಚಾರವನು ನಡೆಯಿಸಿದರು ಮಹಾಮಾಯೆಯ ದೇವಸ್ಥಾನವನ್ನು ಸುಲಿದು ಪೂಜಾರಿಗಳನ್ನೂ ಬ್ರಾಹ್ಮಣರನ್ನೂ ಬಹು ಪರಿಯಾಗಿ ಪೀಡಿಸಿ ಗೋವಧವನ್ನು ಮಾಡಿ, ಪಾದರಕ್ಷಗಳಲ್ಲಿ ಗೊರಕ್ತವನ್ನು ತುಂಬಿ, ಪಟ್ಟಣದಲ್ಲಿ ಒಗೆಯಹತ್ತಿದರು ಇದರಿಂದ ಹಿಂದೂ ಜನರು ಬೀರಬಲನನು ಬಹಪ್ರಕಾರವಾಗಿ ನಿಂದಿಸಹತ್ತಿದರು, ಅದರಿಂದ ಬೀರು ಬಲನಿಗೆ ಬಹುವ್ಯಸನವಾಯಿತು ಅವನು ತಿರುಗಿ ತನ್ನ ಜಹಾಗೀರಿಯ ಪ್ರದೇಶಕ್ಕೆ ಹೋಗಲೇ ಇಲ್ಲ, ಅದರಿಂದ ಬಾದಶಹನು ಪಂಜಾಬದಲ್ಲಿ ಕಾಲಿಂಜರ ಪರಗಣೆಯನ್ನು ರಾಜಾ ಬೀರಬಲನಿಗೆ ಜಹಾಗಿರಿಯನ್ನಾಗಿ ಹಾಕಿಕೊಟ್ಟನು.

ನಗರಕೋಟದಿಂದ ಹೊರಟು ರಾಜಾ ಬಿರಬಲನೂ, ಹುಸೇನ ಕು ಲೀಖಾನನೂ, ಮಿರಜಾ ಇಬ್ರಾಹಿಮನ ಬೆನ್ನು ಹತ್ತಿದರು. ಈ ವಾರ್ತೆಯನ್ನು ಕೇಳಿ ಮಿರಜಾ ಇಬ್ರಾಹೀಮನು ಲಾಹೊರಕಡೆಗೆ ಸಾಗಹತ್ತಿದನು ಉಭಯ ಪಕ್ಷದವರಿಗೆ ಮುಲ್ತಾನದಲ್ಲಿ ಕಾಳಗವಾಯಿತು, ಮಿರಜಾನು ಕಾಳಗವನ್ನು ಬಿಟ್ಟು ಪಲಾಯನಮಾಡಿದನು. ಅವನ ತಮ್ಮನಾದ ಮಸಾಉ

ನೆಂಬವನು ಕೈಸೆರೆಸಿಕ್ಕನು. ಆಗ ಇವರಿಬ್ಬರು ಅವನನ್ನು ತೆಗೆದುಕೊಂಡು ಬಾದಶಹನ ಹತ್ತಿರ ಹೋದರು. ಬಾದಶಹನು ಪ್ರಸನ್ನನಾಗಿ ಹುಸೇನ ಕು ಲೀಖಾನನಿಗೆ "ಖಾಜಹಾ ” ಎಂಬ ಪದವಿಯನ್ನೂ ಬೀರಬಲನಿಗೆ - ಮು ಸಾಹಿಬ ದಾನಿಕವರ ” ಅಂದರೆ ಬುದ್ದಿವಂತನಾದ ಮಂತ್ರಿ ಎಂಬ ಪದವಿಯ ನ್ನು ಕೊಟ್ಟನು.
ಮರುವರುಷ ಮಿರಜಾ ಇಬ್ರಾಹೀಮನ ತಮ್ಮನಾದ ಮಹಮ್ಮದ ಹು ಸೇನನು ದಂಡಾಳುಗಳನ್ನು ಕೂಡಿಕೊಂಡು ಗುಜರಾಥದ ಸುಭೇದಾರನಾದ ಖಾನ ಅಜಮನನ್ನು ಅಹಮ್ಮದಾಬಾದಿನಲ್ಲಿ ಮುತ್ತಿದನು ಆಗ ಅವನ ಸಹಾ ಯಕ್ಕೆ ಬಾದಶಹನು ಸ್ವತಃ ತಾನೆ ಮಂತ್ರಿಗಳನ್ನು ಕರೆದು ಕೊಂಡು. ಒಂ ಭತ್ತು ದಿವಸಗಳಲ್ಲಿ ಅಹಮದಾಬಾದಕ್ಕೆ ಮುಟ್ಟಿದನು, ಆ ಸಮಯದಲ್ಲಿ ಬಿ ರಬಲನೂ ಬಾದಶಹನ ಜೊತೆಯಲ್ಲಿದ್ದನು.
ಬಾದಶಹನು ತನ್ನ ಮಹಲಿನ ಸಮೀಪಕ್ಕೆ ಬೀರಬಲನಿಗೊಸುಗ ಒಂದು ಮಂದಿರವನ್ನು ಕಟ್ಟಿಸಿಕೊಟ್ಟನು, ಅದು ಸಂವತ್ ೧೬೩೯ನೇ ವರುಷ ಪೂರ್ಣವಾಯಿತು. ಆಗ ಬೀರಬಲನು ಆ ಗೃಹಕ್ಕೆ ಹೋಗುವಪೂರ್ವದಲ್ಲಿ ಬಾದಶಹನಿಗೆ ಆಮಂತ್ರಣವನ್ನು ಕೊಟ್ಟನು, ಬಾದಶಹನು ಅವನ ಆಮಂ ತ್ರನವನ್ನು ಸ್ವೀಕರಿಸಿ ಆ ಗೃಹದಲ್ಲಿ ಹೋಗಿ ಭೋಜನ ಮಾಡಿದನು.
ಮರುವರುವ ಬಾದಶಹನು ಪ್ರಯಾಗದಲ್ಲಿ ಒಂದು ಕೋಟೆಯನ್ನು ಕಟ್ಟಿಸಿದನು, ಆ ಕೋಟೆಯನ್ನು ಪ್ರವೇಶಿಸುವ ಸಮಾರಂಭದ ಕಾಲದಲ್ಲಿ ಬೀರಬಲನು ಬಾದಶಹನಿಗೆ ಬಹು ಅಮೂಲ್ಯವಾದ ರತ್ನಗಳನ್ನು ಕಾಣಿಕೆ ಯನ್ನಾಗಿ ಸಮರ್ಪಿಸಿದನು, ಇದರಿಂದ ಬಾದಶಹನು ಬಹು ಹೃದ್ವಮಾನಸ ನಾದನು
. ರೇವಾದೇಶದ ಅರಸನಾದ ರಾಮಚಂದ್ರನಿಗೆ ಬಹಳ ಗರ್ವವಿತ್ತು. ಅವನು ಒಂದು ದಿವಸ ತಾನಸೇನನಿಗೆ ಒಂದುಕೊಟಿ ರೂಪಾಯಿಗಳನ್ನು ಪಾರಿತೋಷಕವಾಗಿ ಕೊಟ್ಟನು. ಮತ್ತು ಲೊದೀವಂಶದ ಸುಲ್ತಾನ ಇ ಬ್ರಾಹೀಮ ಶಹನಿಗೆ ಒಂದು ಅಮೂಲ್ಯವಾದ ಉಡುಪನ್ನು ಕಾಣಿಕೆಯಾಗಿ ಸಮರ್ಪಿಸಿದ್ದನು, ಈ ಎಲ್ಲ ಕಾರಣಗಳಿಂದ ಅವನು ಬಹುದಾತೃವೆಂದು ಪ್ರ ಸಿದ್ಧನಾಗಿದ್ದನು. ಆದರೆ ಅವನಿಗೂ ಅಕಬರಬಾದಶಹನಿಗೂ ಸಮಾಗಮವಾ ಗಿದ್ದಿಲ್ಲ, ರಾಮಚಂದ್ರನು ಬಾದಶಹನ ಕಾಣಿಕೆಯನ್ನು ತನ್ನ ಪುತ್ರನ ಕೈ

ಯಲ್ಲಿ ಕೊಟ್ಟು ಕಳಿಹಿಸುತ್ತಿದ್ದನು ಪ್ರಯಾಗದಲ್ಲಿ ಕೋಟೆಯು ಸಿದ್ದವಾದ ನಂತರ ಅಕಬರ ಬಾದಶಹನು ಅಲ್ಲಿಯೇ ವಾಸಮಾಡಹತ್ತಿದನು ಆಗ ರೇವಾಸ

ಟ್ಟಣದ ಅರಸನ ಸ್ಮರಣೆಯಾಯಿತು, ಪ್ರಯಾಗಕ್ಕೆ ರೇವಾರಾಜ್ಯವು ಅತಿನಿ ಕಟವಾಗಿ ಇತ್ತು, ಬಾದಶಹನು ಅವನಮೇಲೆ ಸೈನ್ಯವನ್ನು ಕಳಿಸಬೇಕೆಂದು ಯೋಚನೆಮಾಡಿದನು ಆ ಸಮಯದಲ್ಲಿ ಆ ರಾಮಚಂದ್ರನ ಮಗನು ಬಾದಶ ಹನ ದಬಾ೯ರದಲ್ಲಿಯೇ ಇದ್ದನು, ಆಗ ಅವನು ಎದ್ದು ನಿಂತು ನಿವೇದನಮಾ ಡಿಕೊಂಡ್ಡಿದ್ದೇನೆಂದರೆ;" ಇಷ್ಟು ಅತ್ಯಲ್ಪ ಕಾರ್ಯಕ್ಕೊಸುಗ ಸೈನ್ಯವನ್ನ ಕಳುಹಿಸಿಕೊಡುವ ಅವಶ್ಯಕತೆಯಿಲ್ಲ, ಯಾವನಾದರೊಬ್ಬ ಮಂತ್ರಿಯನ್ನು ಕಳುಹಿಸಿಕೊಟ್ಟರೆ ಸಾಕು ಅವನ ಸಂಗಡಲೇ ನನ್ನ ತಂದೆಯು ಬಂದೇಬರು ತ್ತಾನೆ ” ಎಂದು ಅರುಹಿದನು. ಆಗ ಭಾದಶಹನು ಆ ರಾಜನ ಪ್ರತಿಷ್ಟೆಗೆ ಸರಿಯಾಗಿ ಬೀರಬಲನನ್ನೆ ಕಳುಹಿಕೊಟ್ಟರೆ ಉತ್ತಮವೆಂದು ಯೋಚಿಸಿ ಬೀರಬಲನನ್ನೇ ಆ ಕಾರ್ಯಕ್ಕೆ ನಿಯಮಿಸಿದನು ಬೀರಬಲನು ಬಾಂಧವಗಡಕ್ಕೆ ತಲಪುವದರೊಳಗಾಗಿ ರಾಜಾ ರಾಮಚಂದ್ರನಿಗೆ ಈ ವರ್ತಮಾನವು ತಿಳಿದು ಬಂದದ್ದರಿಂದ ಅವನು ತನ್ನ ಪರಿವಾರದಸಮೇತನಾಗಿ ಬಂದು ಬೀರಬಲನನ್ನು ಎದುರುಗೊಂಡು ಕರೆದುಕೊಂಡು ಹೋಗಿ ಬಹಳ ಸನ್ಮಾನಮಾಡಿದನು. ಆ ಮೇಲೆ ಬೀರಬಲನ ಜೊತೆಯಲ್ಲಿಯೇ ದಿಲ್ಲಿಗೆ ಬಂದು ಬಾದಶಹನಿಗೆ ಭೇಟಿ ಯಾದನು.

ರಾಜಾ ಬೀರಬಲನು ಬಾದಶಹನ ಮನಸ್ಸನ್ನು ಒಲಿಸಿಕೊಂಡುಬಿಟ್ಟಿ ದ್ದನು, ಒಂದರೆಕ್ಷಣಾ ಸಹಾ ಬಾದಶಹನು ಬೀರಬಲನನ್ನು ಕಣ್ಮರೆಯಾಗ ಗೊಡುತ್ತಿದ್ದಿಲ್ಲ. ಆದರೆ ಬೀರಬಲನ ಮೃತ್ಯುವೇ ಸಮೀಪಿಸಿದ್ದರಿಂದ ಅಥಗಾ ನಿಸ್ತಾನದಲ್ಲಿ ಬಂಡಾಯವನ್ನು ಎಬ್ಬಿಸಿದ ಯಸಫಜಯೀ” ಎಂಬ ಪಠಾ ಣನಮೇಲೆ ಕಳುಹಿಸಿಕೊಡಬೇ ಕೆಂದು ಬಾದಶಹನ ಮನಸ್ಸಿನಲ್ಲಿ ಬಂತು, ಆದರೂ ಅವನನ್ನು ಕಳುಹಿಸದೆ ಬೈನಾಕೊಕಾ ಎಂಬ ಸರದಾರನನ್ನು ಕೊಟ್ಟು ಕಳುಹಿಸಿದನು. ಯೂಸಫಜಯಿಯು ಬುನೇರ, ಮತ್ತು ಬಾಜೋರ ಎಂಬಲ್ಲಿ ಒಳ್ಳೆ ಪುಂಡತನವನ್ನು ನಡೆಸಿದ್ದನು, ಅವನಲ್ಲಿ ಕ್ರೂರರಾದ ಎಷ್ಟು ಜನ ಪಠಾಣರಿದ್ದರು, ಜೈನಾನು ಪ್ರಥಮದಲ್ಲಿಯೇ ಪರಾಜಯಪಟ್ಟನು . ಆಗ ಅವನು ಬಾದಶಹನಿಗೆ ತನ್ನ ಸಹಾಯಕ್ಕೆ ಇನ್ನೂ ಹೆಚ್ಚಾಗಿ ಸೈನ್ಯವನ್ನು ಕಳುಹಿಸಿಕೊಡಬೇಕೆಂದು ಪತ್ರ ಮುಖದಿಂದ ತಿಳಿಸಿದನು ಅದ ರಂತ ಎಷ್ಟೋ ಸಾರೇ ದಂಡನ್ನು ಕೊಟ್ಟು ಕಳುಹಿಸಿದನು, ಆದರೆ ಅದರಿಂದ ಏನೂ ಫಲವಾಗದೆ ಹೋಯಿತು ಕಟ್ಟಕಡೆಗೆ ಸಂವತ ೧೬೪೨-ನೇ ವರುವ ದಲ್ಲಿ ನಿರ್ವಾಹವಿಲ್ಲದೆ ಬೀರಬಲನನ್ನು ಕೊಟ್ಟು ಕಳುಹಿಸಬೇಕಾಯಿತು, ಆ

ನಿಷಯವನ್ನು ಸವಿಸ್ತಾರವಾಗಿ ಕೆಳಗೆ ವಿವರಿಸಿದೆ,

ಯೂಸಫಜಯಿಯು ಬಹು ದಿವಸಗಳಾದರೂ ಪರಾಜಿತನಾಗದಿರಲು, ಪುನಃ ಸೈನ್ಯದೊಡನೆ ಯಾರನ್ನು ಕಳುಹಿಸಬೇಕೆಂದು ಬಾದಶಹನು ಆಲೋ ಚನೆ ಮಾಡತೊಡಗಿದನು. ಆಗ ಅಬುಲಫಜಲ್ಲನು ನಾನು ಹೋಗುವೆನೆಂದು ಹೇಳಿದನು, ಬೀರಬಲನು ನಾನು ಹೋಗುತ್ತೇನೆಂದು ಇಚ್ಛೆಯನ್ನು ತೋ ರಿಸಿದನು. ಆಗ ಬಾದಶಹನು ಅವರೀರ್ವರ ಹೆಸರನ್ನು ಬರೆದು ಚೀಟಿಯನ್ನು ಹಾಕಿದನು ಅದರಲ್ಲಿ ಬೀರಬಲನ ಬೇಟಿಯೇ ಹೊರಟಿತು ಆಗ ಬಾದಶಹನು ಕಾನಮಖ್ಯಾತಾ, ಗದಾಬೇಗ, ಆಹಮದಬೇಗ, ಹಾಜಿತಾಶಬೇಗ, ಹಿಜಾ ಮುದ್ದಿನಖಾನ ಮೊದಲಾದ ಸರದಾರರನ್ನು ಕೊಟ್ಟು, ಬೀರಬಲನನ್ನು ಅಫಗಾನಿಸ್ಥಾನಕ್ಕೆ ಕಳುಹಿಕೊಟ್ಟನು.

ರಾಜಾ ಬೀರಬಲನು ಅಫಗಾನಿಸ್ಥಾನದಲ್ಲಿ ಬಂಡಾಯವೆದ್ದ ಸ್ಥಲಕ್ಕೆ ಹೋಗಿ ತಲುಪಿ ಪಠಾಣರನ್ನು ಹೊಡಿಯುತ್ತ ಹಿಂದಕ್ಕೆ ಸರಿಸುತ್ತ ಗುಡ್ಡದ ಕೆಣಿವೆಯಲ್ಲಿ ಪ್ರವೇಶಮಾಡಿದನು ಆ ಪ್ರದೇಶವು ಕೇವಲ ಗುಡ್ಡಗಾಡು, ಬೀರಬಲನ ಸೈನ್ಯವು ಒಳ್ಳೇ ಇಕ್ಕಟ್ಟಾದ ಸ್ಥಳದಲ್ಲಿ ಹೋಗಹತ್ತಿರ ಪಠಾಣ ಸೈನ್ಯವು ಹಿಂದೆಮುಂದೆ ಬಂದು ಮಾರ್ಗವನ್ನು ಕಟ್ಟಿ ಯುದ್ಧ ಮಾಡುತ್ತಿತು ಆ ಯುದ್ಧದಲ್ಲಿ ಬಾದಶಹನ ಸೈನ್ಯವು ಹಾನಿಯಾಯಿತು, ಅಂತೂ ಇಂತೂ ಮರುದಿವಸ ಬೀರಬಲನು ಉಳಿದ ಸೈನ್ಯದೊಂದಿಗೆ ಬಯಲು ಪ್ರದೇಶವನ್ನು ಸೇರಿದನು ಆಗ ಬಾದಶಹನು ಕಳುಹಿಸಿಕೊಟ್ಟಿದ್ದ ಹಕೀಮ ಅಬ್ದುಲ್‌ಫಾಹ ಎಂಬ ಸರದಾರನು ಕೆಲವು ಸೈನ್ಯದೊಡನೆ ಬಂದು ತಲುಪಿದನು, ಅವರಿಬ್ಬರೂ ಕೂಡಿಕೊಂಡು ಬಾಜೋರ ಎಂಬ ಸ್ಥಳಕ್ಕೆ ಹೋದರು, ಮುಂದೆ ಒಂದೆರಡು ದಿವಸಗಳಲ್ಲಿಯೇ ಆ ಸ್ಥಳವು ಇವರ ಕೈವಶವಾಯಿತು. ಅಲ್ಲಿಂದ ಜಗದೇರದ ಲಿದ್ದ ಕೋಕಾನ ಸಹಾಯಕ್ಕೆ ಹೊರಟರು, ಅಲ್ಲಿ ಹೋದ ಮರುದಿವಸವೇ ಈ ತ್ರಿವರ್ಗದಲ್ಲಿ ವೈಮನಸ್ಸುಂಟಾಯಿತು ಮನಸ್ಸಿನಲ್ಲಿದ್ದ ದ್ವೇಷಬುದ್ಧಿಯು ಪ್ರಕಟವಾಯಿತು ಬಾದಶಹನ ಕಾರ್ಯವು ಕೆಟ್ಟು ಹೋದೀತೆಂಬ ಚಿಂತೆಯು ಯಾರಮನಸ್ಸಿನಲ್ಲಿಯೂ ಬರಲಿಲ್ಲ, ಕೊಕಾನು ಮಾಡಿದ ಪ್ರಯತ್ನವೆಲ್ಲಾ ನಿಷ್ಪಲವಾಯಿತು ರಾಜಾ ಮತ್ತು ಹಕೀಮ ಇವರೀರ್ವರಲ್ಲಂತೂ ವಿರೋ ಧಭಾವವು ಅಧಿಕವಾಯಿತು ಆದರೂ ಬೀರಬಲನು ಸಮಾಧಾನವನ್ನು ತಂ ದುಕೊಂಡು ಕೋಕಾ ಮತ್ತು ಹಕೀಮ ಇವರಿಬ್ಬರಿಗೂ ಹೇಳಿದ್ದೇನಂದರೆ- "ನೀವೀರ್ವರೂ ಕೆಲವುಸೈನ್ಯವನ್ನು ಇಟ್ಟು ಕೊಂಡು ಜಗದೇರ ಕೋಟಿಯ ನ್ನು ಕೈವಶಮಾಡಿಕೊಳ್ಳಿರಿ, ನಾನು ಪಠಾಣರಮೇಲೆ ಸಾಗಿಹೋಗುತ್ತೇನೆ

ಇದು ನಿಮ್ಮ ಮನಸ್ಸಿಗೆ ಬರದಿದ್ದರೆ ನೀವೇ ಪಠಾಣರಮೇಲೆಹೋಗಿರಿ ನಾನೂ

ಬ್ಬನೇ ಈ ಕೋಟೆಯನ್ನು ಕೈವಶಮಾಡಿಕೊಳ್ಳುವ ಪ್ರಯತ್ನವನ್ನು ಮಾಡು ತ್ತೇನೆ, ಆದರೆ ಈಮಾತು ಹಕೀಮನ ಮನಸ್ಸಿಗೆ ಬರಲಿಲ್ಲ ಆಗ ಹಕೀಮನು ಅಂದದ್ದೇನಂದರೆ;- ಈ ದೇಶವನ್ನು ಲೂಟಿಮಾಡಿ ಹಾಳುಮಾಡಿ ಬಿಡಬೇಕೆಂ ದು ಬಾದಶಹನ ಅಪ್ಪಣೆಯಾಗಿದೆಯೇ ಹೊರ್ತು ಈ ಪ್ರದೇಶವನ್ನು ಕೈವಶ ಮಾಡಿಕೊಂಡು ಆ ಬಂಡುಗಾರನನ್ನು ಹಳ್ಳಿಗೆ ತರಬೇಕೆಂದು ಬಾದಶಹನು ಹೇಳಿರುವದಿಲ್ಲ ಅದರಿಂದ ನಾವೆಲ್ಲರೂ ಕೂಡಿಕೊಂಡು ಶತ್ರುಗಳನ್ನು ಕೊಲ್ಲು ತ್ತಬೆನ್ನಟ್ಟಿ ಅವರ ಮೂಲಸ್ಥಾನದವರೆಗೆ ಹೋಗೋಣ ಎಂದು ಹೇಳಿದನು,

ಅದಕ್ಕೆ ಜೈನಖಾನು ಅಂದದ್ದೇನಂದರೆ;- ಇದು ಒಳ್ಳೆ ದುಃಖದ ಪ್ರ ಸಂಗವು, ಯಾಕಂದರೆ ಅತಿಸಾಹಸಮಾಡಿ ಕೈವಶಮಾಡಿಕೊಂಡಂಥ ದೇಶವ ನ್ನು ಅನ್ಯಾಕ್ರಾಂತವಾಗಿ ಮಾಡಿ ಹೋಗುವದೆಂದರೆ ದು:ಖದಸಂಗತಿಯಲ್ಲವೆ ವೇ ಆದ್ದರಿಂದ ಇಲ್ಲಿಂದಲೇ ಹಿಂದಿರುಗಿದರೆ ಮನುಷ್ಯಹಾನಿಯಾದರೂ ಆಗ ಲಿಕ್ಕಿಲ್ಲ.

ರಾಜಾ ಬೀರಬಲನು ಇವರ ಮಾತುಗಳಾವನ್ನೂ ಕಿವಿಯ ಮೇಲೆ ಹಾಕಿಕೊಳ್ಳದೆ ಮರುದಿವಸವೇ ಪ್ರಯಾಣಸನ್ನದ್ಧನಾದನು ಅದನ್ನು ಕಂ ಡು ಉಳಿದ ಸರದಾರರೆಲ್ಲರೂ ನಿರುಪಾಯರಾಗಿ ತಮ್ಮ ದಂಡಾಳುಗಳನ್ನೂಳ ಗೊಂಡು ಅವನ ಸಂಗಡಲೇ ಹೊರಟರು ಆ ದಿವಸ ಐದುಹರದಾರಿ ಮಾರ್ಗ ವು ಸಾಗಿತು ಮರುದಿವಸದ ಮಾರ್ಗವು ಕಠಿಣತರವಿದ್ದರಿಂದ ಅರ್ಧಹರದಾರಿ ಸಹಸಾಗಲಿಲ್ಲ ಆಗ ಬೀರಬಲನು ಕೆಲವು ಜನದಂಡಾಳುಗಳನ್ನು ಒಡಗೊಂ ಡು ಒಬ್ಬನೇ ಘಟ್ಟದ ಮಾರ್ಗವನ್ನು ನಡೆಯಹತ್ತಿ ಕತ್ತಲೆಯಾಗುವದರೊ ಳಗೆ ಘಟ್ಟವನ್ನೇರಿ ಹೋಗಿ ನಿಂತುಕೊಂಡನು ಕೂಡಲೆ ಅಲ್ಲಿ ವಾಸಮಾಡಿ ಕೊಂಡಿದ್ದ ಕೆಲವು ಪಠಾಣರು ಇವರ ಮೇಲೆ ಹಲ್ಲಾ ಮಾಡ ಹತ್ತಿದರು ದಂ ಡಾಳುಗಳು ಮಾರ್ಗಾಯಾಸದಿಂದ ಕಂಗೆಟ್ಟವರಾದ್ದರಿಂದಲೂ, ಕತ್ತಲೆಯ ದಿವಸವಿದ್ದದರಿಂದಲೂ ದಂಡಾಳುಗಳು ನಿಂತಲ್ಲೆ ನಿಂತುಕೊಳ್ಳಲ ಸಮರ್ಥರಾ ಗಿ ಹಿಂದಕ್ಕೆ ಹಿಂದಕ್ಕೆ ಕಾಲ್ದೆಗೆಯ ಹತ್ತಿದರು ಆಸಮಯದಲ್ಲಿ ಪಠಾಣರು ನಡುವೇ ಬಂದು ಯುದ್ಧ ಮಾಡ ಹತ್ತಿದ್ದರಿಂದ ಬೀರಬಲನ ಸೈನ್ಯವು ಇಬ್ಬಾ ಗವಾಯಿತು ಚೈನಖಾನನು ಒಂಟಿಗನಾಗಿ ಬಂದು ಬೀರಬಲನನ್ನು ಕೂಡಿ ಕೊಂಡನು ಈಪ್ರಕಾರ ಅತಿ ಬಿಕ್ಕಟ್ಟಾದ ಸ್ಥಳದಲ್ಲಿ ಸೈನ್ಯವು ಬಂದು ನಿಂ ತುಕೊಳ್ಳುವರಲ್ಲಿ ಹಿಂದೆಯೂ ಮುಂದೆಯೂ ಮಾರ್ಗವನ್ನು ಆವರೋ ಧ ಮಾಡಿಕೊಂಡು ನಿಂತು ಕಾದಹತ್ತಿದರು ಎತ್ತುಗಳಮೇಲೆಯೂ ಒಂಟೆಗಳ

ಮೇಲೆಯೂ ಹೇರಿರುವ ಆಹಾರ

ಕೊಂಡು ಬಿಟ್ಟರು ಈ ಪ್ರಕಾರ ಅಂತೂ ಇಂತೂ ಜೀವದಿಂದ ಪಾರಾಗಿ ಆ ರಹರದಾರಿಯ ಮೇಲೆ ಇದ್ದ ಕೋಕಾನಸೈನ್ಯವನ್ನು ಕೂಡಿಕೊಂಡನು ಆ ಗ ಕೊಕಾನು ಬೀರಬಲನ ಹತ್ತಿರ ಬಂದು ಹೇಳಿದ್ದೇನಂದರೆ, "ನಮ್ಮ ಹಿಂದೆಯೂ ಮುಂದೆಯೂ ಹತ್ತಲ ಸಾಧ್ಯವಾದ ಘಟ್ಟಗಳು ಆವೆ; ನಮ್ಮ ಸೈ ನ್ಯವು ನಿರ್ಬಲವಾಗಿ ಹೋಗಿದೆ ಇದಲ್ಲದೆ ಪಠಾಣ ಸಿಪಾಯಿಗಳು ಮಾರ್ಗಾವ ರೋಧ ಮಾಡಿಕೊಂಡು ಕುಳಿತು ಬಿಟ್ಟಿದ್ದಾರೆ; ಇಲ್ಲಿ ನೀರು ಹುಲ್ಲು ಮೊದ ಲಾದವುಗಳ ಕೊರತೆ ಇಲ್ಲ ಆದ್ದರಿಂದ ಇಲ್ಲಿಯೇ ಕೆಲವುದಿವಸ ನಿಂತುಕೊಂ ಡು, ದಿಲ್ಲಿಯಿಂದ ಹೊಸಸೈನ್ಯವನ್ನು ಸಹಾಯಕ್ಕೆಕರೆಸಿಕೊಂಡು ಪಠಾಣರ ಲೆ ಏರಿಹೋಗಿ ಅವರನ್ನು ನಿರ್ಮೂಲಮಾಡಿ ಬಿಡಬೇಕು ಈಮಾತಿಗೆ ಸಮ್ಮ ತಿಯು ಇಲ್ಲದೆ ಇದ್ದ ಪಕ್ಷದಲ್ಲಿ ಪಠಾಣರ ಮುಖ್ಯಸ್ಥನೊಡನೆ ಸಂಧಿಯನ್ನು ಮಾಡಿಕೊಂಡು ನಾವು ಕೈಸೆರೆಹಿಡಿದಿರುವ ಅವರದಂಡಾಳುಗಳನ್ನು ಬಿಟ್ಟು ಕೊಟ್ಟು ಹಿಂದಿರುಗುವದು ಲೇಸೆಂದು ತೋರುತ್ತದೆ ನಾನುಹೇಳಿದ ಈ ಎರ ಡು ಮಾರ್ಗಗಳಲ್ಲಿ ಸುಗಮವಾಗಿರುವದನ್ನು ಕೈಗೊಳ್ಳಬೇಕು ಎಂದು ವಿನಂ ತಿಮಾಡಿಕೊಂಡನು.

ಪ್ರಾರಬ್ಧದಲ್ಲಿ ಇದ್ದದ್ದು ಎಂದೂ ತಪ್ಪುವದಿಲ್ಲ ಕೋಕಾ ಸರದಾರ ನು ಹೇಳಿದ ಸತ್ ಕಾರ್ಯವು ಯಾರ ಮನಸ್ಸಿಗೂ ಬರಲಿಲ್ಲ ಮರುದಿನವೇ ಅಲ್ಲಿಂದ ಪ್ರಯಾಣೋನ್ಮುಖರಾದರು ಕೂಡಲೆ ಕಾಳಗಕ್ಕೆ ಆರಂಭವಾಯಿ ತು ಕೊಕಾನು ಸೈನ್ಯದ ಹಿಂಭಾಗವನ್ನು ಕಾಯ್ದು ಕೊಂಡು ವೈರಿಗಳಿಂದ ಬರುತ್ತಿರುವ ಬಾಣಗಳ ಹೊಡೆತವನ್ನು ತಪ್ಪಿಸಿಕೊಳ್ಳತ್ತ ಬರಹತ್ತಿದನು, ಮಾರ್ಗವು ಕಠಿಣತರವಾಗುತ್ತಬಂತು ಸಾಯಂಕಾಲವು ಸಮೀಪಿಸಿತು ಇಬ್ಬ ರುಕೂಡಿಕೊಂಡು ಹೋಗುವಷ್ಟು ಸಹಾ ಮಾರ್ಗವಿದಿಲ್ಲ; ಇಂಥ ಇಕ್ಕಟ್ಟಾ ದಮಾರ್ಗದಲ್ಲಿ ನಿಲುಕಿಕೊಂಡ ಬೀರಬಲನ ಸೈನ್ಯದ ಮೇಲೆ ಪಠಾಣರು ಬಾ ಣಗಳ ಮತ್ತು ಕಲ್ಲುಗಳ ಮಳೆಗರೆಯಹತ್ತಿದರು ಆನೆ, ಕುದುರೆ, ಒಂಟೆಗಳು ಒಂದರಮೇಲೊಂದು ಒಳಹತ್ತಿದವು ಆ ಕಾಳಗವು ಕೇವಲ ಅಂತಕನ ವಾಸ ಸ್ಥಳದಂತೆ ತೋರ ಹತ್ತಿತು ಜೈನಖಾನು ಲಜ್ಜಿತನಾಗಿ ರಣದಲ್ಲಿಯೇ ಮಡಿ ಯಬೇಕೆಂದು ನಿಶ್ಚಯಿಸಿದನು ಆದರೆ ನಾಲ್ವತ್ತು ಜನ ಸಿಪಾಯಿಗಳು ಅವನ ನ್ನು ಸುತ್ತುಗಟ್ಟಿಕೊಂಡು ಹಿಂದಕ್ಕೆ ಕರೆದು ತಂದರು ಮಾರ್ಗದಲ್ಲಿ ಸತ್ತು ಬಿದ್ದ ಆನೆ, ಒಂಟೆಗಳಲೆಕ್ಕವೇ ಹತ್ತದಂತಾಯಿತು ಕುದುರೆಯ ಮೇಲೆ ಕು ಳಿತುಕೊಂಡು ಹೋಗುವದಕ್ಕೆ ಬರದಂತಾಗಿತ್ತು ಅಂತೂ ಇಂತೂ ಏಳುತ್ತ

ಬೀಳುತ ಮಂಜಿಲ ಎಂಬಸ್ಥಳಕ್ಕೆ ಬಂದು ಮುಟ್ಟಿದರು ಮಾರ್ಗದಲ್ಲಿ ಮತ್ತೆ

ಎಷ್ಟೋಜನ ದಂಡಾಳುಗಳು ಮಡಿದರು ಕೆಲವರು ಪಠಾಣರಕೈಗೆ ಸಿಕ್ಕರು ಹಕೀಮ ಅಬದುಲ್ಲ ಘತಹನು ಕಷ್ಟಪಟ್ಟು ಜೀವದಿಂದ ಉಳಿದುಬಂದು ಜೈ ನಖಾನನನ್ನು ಕೂಡಿಕೊಂಡನು ಆದರೆ ಬೀರಬಲನು ಉಳಿದಿರುವನೋ, ಅಥವಾ ಮರಣ ಹೊಂದಿದನೋ ಎಂಬ ವರ್ತಮಾನವೇ ತಿಳಿಯದೆ ಹೋ ಯಿತು ಈ ಕಾಳಗದಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ಜನರು ಯಮಪುರಿ ಯನ್ನು ಸೇರಿದರು ಸತ್ತುಹೋದವರಲ್ಲಿ ಹಸನಾ, ಸನಿಗದಾಬೇಗ, ರಾಜಾ ಧರ್ಮಾಂಗದ ಮುಲ್ಲಾರಿ ಸಂಗ್ರಾಮಖಾ ಮೊದಲಾದವರ ಶವಗಳು ಸಿಕ್ಕ ವು ಬೀರಬಲನ ಗುರುತು ಸಹಾ ಹತ್ತದೆ ಹೋಯಿತು.

ಶೇಖ ಅಬುಲ್ಲ ಫಜಲ್ಲನು “ ಅಕಬರ ನಾಮ, ಎಂಬ ಗ್ರಂಥದಲ್ಲಿ ಬಾ ದಶಹನ ಮೂವತ್ತನೇ ವರುಷದ ಹುಟ್ಟಿದ ದಿವಸದ ಸಮಾರಂಭದ ವರ್ಣನೆ ಮಾಡಿದ್ದರಲ್ಲಿ ಹೀಗೆ ಉಲ್ಲೇಖಿಸಿರುವನಲ್ಲಾ “ ಅಫಗಾನಿಸ್ತಾನದ ಕಾಳಗವ ನ್ನು ಬೇಗನೆ ಸಮಾಪ್ತವನ್ನಾಗಿ ಮಾಡಬೇಕೆಂದು ತಿಳಿದು ಕೇವಲ ವಿಶ್ವಾ ಸಿಕನಾದ ಯಾವ ಸರದಾರನೊಡನೆ ಸೈನ್ಯವನ್ನು ಕಳಿಸಬೇಕೆಂಬ ಯೋ ಚನೆಯಲ್ಲಿರಲು, ನಾನು "ಅಬುಲ ಫಜಲ್ಲನು ನೀವೇದಿಸಿಕೊಂಡನ್ನೇನಂದರೆ ನಾನು ನಿಮ್ಮ ಸನ್ನಿಧಾನದ. ಸುಖಸಮಾಧಾನದಿಂದಲೂ ಪ್ರತಿಷ್ಠೆಯಿಂ ದಲೂ ಇದ್ದೇನೆ; ಆದರೆ ನಿಮ್ಮನ್ನು ಒಟ್ಟು ದೂರ ಹೊಗಿ ಕೆಲವು ಅಲ್ಪ ಸ್ವಲ್ಪ ಕಾರ್ಯವನ್ನು ಸಫಲಗೊಳಿಸುವದರಿಂದ ಇದಕ್ಕೂ ಹೆಚ್ಚಾಗಿ ಪ್ರತಿಷ್ಠೆ ಯುಂಟಾಗ ಬಹುದೆಂದು ಯೋಚಿಸಿದ್ದೇನೆ” ಎಂದು ಹೇಳಲು, ಅದಕ್ಕೆ ಬಾದಶಹನು ಉತ್ತರಕೊಟ್ಟದ್ದೇನಂದರೆ- "ನಾನು ನಿನ್ನನು ಶೂರರಾದ ಎಷ್ಟೋ ಜನ ದಂಡಾಳುಗಳೊಡನೆ ಕಳಿಸಬೇಕೆಂದು ಯೋಚಿಸಿದ್ದೇನೆ,, ಎಂ ದುಹೇಳಿದನು. ನಾನು, ಪ್ರಯಾಣ ಸನ್ನಾಹದಲ್ಲಿರು ಹೊರಡುವದಿವಸ ಮೂರನೇ ಪ್ರಹರದಲ್ಲಿ ಬಾದಶಹನು, ನನ್ನ ಮತ್ತು ಬೀರಬಲನ ಹೆಸರಿನಿಂದ ಚೀಟಿಯನ್ನು ಹಾಕಿಸಿದನು ಅದರಲ್ಲಿ ಬೀರಬಲನ ಹೆಸರು ಹೊರಟಿತು ಅದ ರಿಂದ ನನ್ನ ಮತ್ತು ಬಾದಶಹನಮನಸ್ಸಿಗೆ ವಿಷಾದವಾಯಿತು ನಿರ್ವಾಹವಿಲ್ಲದೆ ಮಾಘ ಶುಕ್ಲ ದ್ವಾದಶಿ ದಿವಸ ಬಾದಶಹನು ಬೀರಬಲನಿಗೆ ಅನುಜ್ಞೆಯನ್ನಿ ತ್ತನು ಅವನೊಡನೆ ಕಾಸಮಾಜಾಗದಾ ಬೇಗ ಹಾಜೀ ಸಮೂಕ, ಆಹ ಮ್ಮದಬೇಗ, ತಾಸಬೇಗ, ಹಿಜಾಮುದ್ದೀನ ಖಾಜಾ ಮೊದಲಾದ ಸರದಾರರ ನ್ನು ಕಳುಹಿಸಿದನು ಆದಿವಸ ಪ್ರಾತಃಕಾಲದಲ್ಲಿ ಎದ್ದು ಬಾದಶಹನ ದರ್ಶನ ತೆಗೆದುಕೊಂಡು ಹೊರಟು ಹೋದನು.

"ತಬಕಾತ ಅಕಬರೀ ” ಎಂಬ ಗ್ರಂಥದಲ್ಲಿ ರಾಜಾ ಬೀರಬಲನನ್ನು ಕಳಿಸಿಕೊಟ್ಟ ದಿನವು ಸಫರ, ತಿಂಗಳ ೧೦ನೇ ತಾರೀಖು ಎಂದು ಬರೆದದೆ.

ಆದಿಸವು ಚಂಡೂ ಪಂಚಾಂಗದ ಅನುಸಾರವಾಗಿ ಮಾಘಶುಕ್ಲ ದ್ವಾದಶೀ ಶುಕ್ರವಾರವೇ ಆಗುತ್ತದೆ.
ರಾಜಾ ಬೀರಬಲನು ಸ್ವಾತ ಮೈದಾನಕ್ಕೆ ತಲುಪಿ ಪಠಾಣರನ್ನು ಒಳಿತಾಗಿ ಹಣ್ಣಿಗೆ ತಂದನು ಅವರಿಗೆ ಸ್ಥಳವನ್ನು ಕೈವಶಮಾಡಿಕೊಂಡು, ಅವರನ್ನು ಅಲ್ಲಿಂದ ಓಡಿಸಿದನು ಅವರನ್ನು ಕೇವಲ ಕೈಶಸ್ತ್ರಗಳಿಂದಲೇ ಪರಾ ಜಿತರನ್ನಾಗಿ ಮಾಡಿದನು ಆಗ ಪಠಾಣರ ಸೈನ್ಯದಲ್ಲಿ ಘಟ್ಟದ ಮಾರ್ಗಗಳ ನ್ನು ಕಾಯ್ದುಕೊಂಡು ಇದ್ದ ಕೆಲವು ಸೈನಿಕರು ಮಾತ್ರ ಉಳಿದಿದ್ದರು ಅವ ರನ್ನು ಕೈವಶ ಮಾಡಿಕೊಳ್ಳುವುದು ಅತಿದುವರವಾದದ್ದೆಂದು ಯೋಚಿಸಿ ಜೈ ನಖಾನು ಮತ್ತೆ ಕೆಲವು ಸೈನ್ಯವನ್ನು ಸಹಾಯಕ್ಕೆ ಕಳುಹಿಸಬೇಕೆಂದು ಪತ್ರವನ್ನು ಬರೆದನು ಬಾದಕಹನು ಬೀರಬಲನನ್ನು ಕಳುಹಿಸಿಕೊಟ್ಟ ಒಂಭ ತು ದಿವಸದ ಮೇಲೆ ಪುನಃ ಹಮ ಅಬುಲ್ಲತಹನನ್ನು ಕಳಿಸಿಕೊಟ್ಟನು ಬೀರಬಲ್ಲ ಮತ್ತು ಕೋಕಾ ಇವರಿಬ್ಬರ ನಡುವೆ ಬಹುದಿವಸದಿಂದ ದೀರ್ಘ ವಾದ ದ್ವೇಷವಿತ್ತು ಅದರಂತೆ ಹಕೀಮ ಮತ್ತು ರಾಜಾ ಬೀರಬಲ್ಲ ಇವರ ನಡುವೆಯೂ ಅಸೂಯೆಯು ಇತ್ತು. ರಾಜಾ ಬೀರಬಲನ ಮೇಲೆ ಬಾದ ಕಹನು ದಿನದಿನಕ್ಕೆ ಹೆಚ್ಚು ಹೆಚ್ಚು ಪ್ರೀತಿ ಮಾಡ ಹತ್ತಿದಂತೆ ಕೋ ಕಾ ಮತ್ತು ಹಕೀಮ ಇವರಿ ವರ ಮನಸ್ಸಿನಲ್ಲಿ ಅಸೂಯಾಗ್ನಿಯು ಪ್ರಬ ಲವಾಗಹತ್ತಿತು ಈಪ್ರಕಾರ ಒಬ್ಬರನ್ನೊಬ್ಬರು ದೇಪಿಸುತ್ತಿದ್ದ ಈ ಮೂ ವರು ಸರದಾರರು ಒಂದೇ ಕೆಲಸದಮೇಲೆ ನಿಯಮಿಸಲ್ಪಡಲು ತೀನತೇರಾ ನೌ, ಅಥರಾ ” ಎಂಬ ಸಾವತಿಯಂತೆ ಅಯಿತು.
ಬೀರಬಲ್ಲನ ಮರಣದ ವಾರ್ತೆಯನ್ನು ತಿಳಿದು ಬಾದಶಹನು ದುಃಖಪಟ್ಟದ್ದು,
" ಅಕಬರನಾಮಾ ” ಎಂಬ ಗ್ರಂಥದಲ್ಲಿ ಬರೆದದ್ದೇನಂದರೆ;- "ಬಾದ ಕಹನಿಗೆ ಬೀರಬಲನ ಮರಣವಾರ್ತೆಯು ತಿಳಿದಕೂಡಲೆ ಬಹು ಖೇದವಾಯಿ ತು ಬಾದಕಹನು ಎರಡು ದಿವಸ ಅನ್ನವನ್ನು ಸಹಾಮುಟ್ಟಲಿಲ್ಲ ಒಂದುಮೂಲೆಯಲ್ಲಿ ಕುಳಿತು ಶೋಕಮಾಡಹತ್ತಿದನು ಕಡೆಗೆ ಅವನ ತಾಯಿಯೂ, ದರಬಾರದ ಮುತ್ಸದ್ದಿಗಳೂ ಬಹು ಪರಿಯಾಗಿ ಹೇಳಿಕೊಂಡದ್ದರಿಂದ ಎರಡು ದಿವಸದಮೇಲೆ ಎದ್ದು ಭೋಜನ ಮಾಡಿ ಬೀರಬಲನನ್ನು ಕೊಂದ ಮನುಷ್ಯ ನಿಗೆ ನಾನೇ ಯೋಗ್ಯ ಪ್ರಾಯಶ್ಚಿತ್ತವನ್ನುಂಟು ಮಾಡುತ್ತೇ ನೆಂದು ತಿಜ್ಞೆಯನ್ನು ಮಾಡಿ ಅಫಗಾನಿಸ್ತಾನಕ್ಕೆ ಹೊರಡಲನುವಾದನು ಆದರೆ ಕು ಭಚಿಂತಕರಾದ ಕೆಲವು ಸರದಾರರು ಅವನನ್ನು ಹೋಗಗೊಡಲಿಲ್ಲ. "ಮುಂತ ಖಬುಲ್" ಎಂಬ ಗ್ರಂಥದಲ್ಲಿ ಹೀಗೆ ಬರೆದಿರುವದಲ್ಲಾ;- ಬಾದಸಹನಿಗೆ ಬೀರಬಲನ ಹೊರತು ಯುದ್ಧದಲ್ಲಿ ಎಷ್ಟೋಜನ ಸರದಾರರು ಸತ್ತು ಹೋಗಿದ್ದರೂ ಸಹ ಅವನಿಗೆ ಅಮ್ಮ ವ್ಯಸನವಾಗಿದ್ದಿಲ್ಲ; ಆದರೆ ಬೀರ ಬಲನ ಮರಣದಿಂದ ಬಾದಶಹನಿಗೆ ಹೇಳಕೂಡದಷ್ಟು ವ್ಯಸನವಾಯಿತು, ಅವನು ಒಂದೊಂದುಸರತಿ “ ಬೀರಬಲನ ಕವವನ್ನು ಯಾವನಾದರೂ ಸರ ದಾರನು ಆ ಇಕ್ಕಟ್ಟಾದ ಘಟ್ಟದೊಳಗಿಂದ ಹೊರಗೆ ತೆಗೆದುಕೊಂಡು ಬಂದು ನನಗೆ ಹೇಳಿಕಳುಹಿಸಿದ್ದರೆ ನಾನು ಅವನ ದಹನ ಕ್ರಿಯೆಯನ್ನು ಯಥಾವಿ ಧಿಯಾಗಿ ನೆರವೇರಿಸಿ, ಅವನ ಋಣದೊಳಗಿಂದ ಅಲ್ಪ ಸ್ವಲ್ಪ ಮಟ್ಟಿಗೆ ಬಿಡು ಗಡೆಯಾಗುತ್ತಿದ್ದೆನಲ್ಲಾ ” ಎಂದು ಹಂಬಲಿಸುತ್ತಿದ್ದನು. ಒಂದೊಂದು ಸರತಿ ಬೀರಬಲನು ಯಾವತ್ತು ಸಂಸಾರ ಬಂಧನದೊಳಗಿಂದ ಪಾರಾಗಿ ಜೀವನ್ಮು ಕನಾಗಿ ಹೋದನು. ಅವನ ಕೀರ್ತಿಯು ಈ ನರವಾದ ಜಗತ್ತಿನಲ್ಲಿ ಅಜ ರಾಮರಣವಾಗಿ ನಿಂತುಕೊಂಡದೆ, ಎಂದು ಸಂತೋಷಪಡುತ್ತಿದ್ದನು.
ಗುಜರಾಥದ ಸುಭೇದಾರನಾದ ಖಾನಖಾನನಿಗೆ ಬರೆದ ಆಜ್ಞಾಪತ್ರ ದಲ್ಲಿ ಬೀರಬಲನ ಮೃತ್ಯುವಿನ ವಿಷಯದಲ್ಲಿ ಅಕರಬಾದಹನು ಬರೆದ ಆಸೆ ಯವನ್ನು ( ಅಬುಲ್ ಫಜಲನು ” ತನ್ನ “ ಆಬುಲ್‌ಜಲ್ ಮನಕಿಯಾತ್ ಎಂಬ ಗ್ರಂಥದಲ್ಲಿ ಸಾದ್ಯಂತವಾಗಿ ಬರೆದು ಇಟ್ಟಿದ್ದಾನೆ. ಅದರ ಸಾರಾಂಶ ವೇನಂದರೆ;-
"ಆ ದಿವಸ ಮೇಲಿಂದಮೇಲೆ ಜಯವಾದ ವರ್ತಮಾನಗಳೇ ಬರಹ ತ್ತಿದ್ದವು. ಅಷ್ಟರಲ್ಲಿ ಸ್ವಾತ ಮತ್ತು ಬಾಜೋರ ಎಂಬ ಸ್ಥಲಗಳನ್ನು ಜಯಿ ಸಲಿಕ್ಕೆ ಕಳುಹಿಸಿದ ಸೈನ್ಯವು ಬಹಳವಾಶವಾಗಿ ಆ ಪ್ರಾಂತಗಳು ಕೈವಶವಾ ಗುವ ಸುಸಮಯವು ಸಮೀಪಿಸಿತು, ಪಠಾಣ ಸೈನ್ಯವು ಸರ್ವತದ ಕಂದರಗ ಳಲ್ಲಿ ಹೊಗಿ ಜೀವ ಉಳಿಸಿಕೊಳ್ಳುವ ಹವ್ಯಾಸದಲ್ಲಿದ್ದರು. ಸೈನ್ಯದ ನಾಯ ಕನು (ಅಫಸರ) ಒಡಂಬಡಿಕೆಯನ್ನು ಮಾಡಿಕೊಳ್ಳಬೇಕೆಂದು ಯೋಚಿಸು ತಿದ್ದನು. ಆದರೆ ಈ ಅಕಬರ ಬಾದಕಹನು ಕಳುಹಿಸಿಕೊಟ್ಟ ಈ ನಾಲ್ಕು ಜನ ಸರದಾರರು ಮಿಲಿತರಾದ ಸಮಯವು ಕುಮುಹೂರ್ತವಾಗಿತ್ತು, ಅದ ರಿಂದ ಬಾದಕಹನ ಸೈನ್ಯವು ಪರಾಜಿತವಾಗಿ ಹಿಂದಿರುಗಿಬಂತು, ಈ ಯುದ್ಧ ದಲ್ಲಿ ನಮ್ಮ ಸಭಾರತವೂ, ನಮ್ಮ ದರಬಾರದ ಆಧಾರಸ್ತಂಭವೂ, ಬುದಿ ವಂತನಾದ ಮಂತ್ರಿಯೂ ಆದ ನನ್ನ ಪರಮಮಿತ್ರನಾದ ಬೀರಬಲನು ನಕ್ಷ ರವಾದ ಜಗತ್ತನ್ನು ತ್ಯಾಗಮಾಡಿ ಪರಲೋಕಕ್ಕೆ ಹೊರಟುಹೋದನು.

ನನ್ನ ಸಂತೋಷವೆಲ್ಲ ಲಯವಾಗಿ ರಸಾತಳಕ್ಕೆ ಹೋಯಿತು ಈ ಸಂಸಾರವು

ಕೇವಲ ದುಃಖದಿಂದಲೇ ತುಂಬಿದ್ದಾಗಿದೆ ಸುಖದ ಹಿಂದೆ ದುಃಖವು ಇದ್ದೇಯಿ ರುವದು ಅಂಥಾ ಪರಮ ಮಿತ್ರನು ನನಗೆ ಇನ್ನು ಮೇಲೆ ದೊರೆಯಲಾರನು, ಅವನ ವಿಷಯದಲ್ಲಿ ನಾನು ಎಷ್ಟು ದುಃಖಪಟ್ಟರೂ ಅದು ಅತ್ಯಲ್ಪವೇ ಆಗಿದೆ ಈ ಜಗತ್ತಿನಲ್ಲಿ ಜನ್ಮ ಹೊಂದಿದವನು ಎಂದಾದರೂ ಒಂದುದಿವಸ ಮರಣ -ಹೊಂದತಕ್ಕವನೇ ಎಂಬದನ್ನು ತಿಳಿದುಕೊಂಡು ಕಾಂತತೆಯನ್ನು ಧರಿಸು ವದೇ ಮೇಲುವಾಯವು. ಇಂಥ ಸ್ಥಿತಿಯಲ್ಲಿ ಈಶ್ವರನ ಸಂಕಲ್ಪದಂತೆ ಮನ ಸ್ಸನ್ನು ಸ್ಥಿರಪಡಿಸಿಕೊಂಡು ಇರಲಿಕ್ಕೇಬೇಕು, ಈ ಪ್ರಕಾರ ಅನಾಹುತವ ನ್ನುಂಟುಮಾಡಿದ ಪಠಾಣರನ್ನು ಜಯಿಸಲಿಕ್ಕೆ ತೋಡರಮಲ್ಲನೊಡನೆ ಬಹ ಳಸೈನ್ಯವನ್ನು ಕೊಟ್ಟು ಕಳಿಸಿದ್ದೇನೆ ಅವನು ಒಳ್ಳೆ ವೀರತನದಿಂದ ಕಾದಿ ಪಠಾಣರನ್ನು ಸೋಲಿಸಿ ಹಿಂದಿರುಗಿ ಬರಬಹುದು ನಾನು ಇನ್ನು ಸ್ವಲ್ಪದಿ ವಸದೊಳಗಾಗಿ ನಿಮ್ಮ ದೇಶದಕಡೆಗೆ ಬರುವೆನು. ”

ರಾಜಾ ಬೀರಬಲನಮೇಲೆ ಅಕಬರನಪ್ರೀತಿಯು ಎಷ್ಟಿತ್ತೆಂಬದನ್ನು " ಜುಲೂಸ ಉಂತೀಸ” ಎಂಬ ಗ್ರಂಥದಲ್ಲಿ ಈಪ್ರಕಾರ ವರ್ಣಿಸಿದ್ದಾನೆ.
"ಸಂವತ್‌ ೧೬೪೦ ರಲ್ಲಿ ಒಂದುದಿವಸ ಬಾದಶಹನೂ ಬೀರಬಲನೂ ಕೂಡಿ ಆನೆಯ ಕಾಳಗವನ್ನು ನೋಡುತ್ತ ಕುಳಿತುಕೊಂಡಿದ್ದರು, ಆ ಆನೆಗಳಲ್ಲಿ "ದಲಚಾತುರ ” ಎಂಬ ಆನೆಯು ಮನುಷ್ಯರನ್ನು ಕೊಲ್ಲುವದರಲ್ಲಿ ಒಳ್ಳೆ ಹೆಸರಾಗಿತ್ತು, ಅದು ಒಮ್ಮಿಂದೊಮ್ಮೆ ಹಿಂದಿರುಗಿ ಬೀರಬಲನ ಕಡೆಗೆ ತಿರುಗಿತು, ಮತ್ತು ಆ ಕೂಡಲೆ ಬೀರಬಲನನ್ನು ತನ್ನ ಸೊಂಡೆಯಿಂದ ಹಿಡಿ ದು ತಿರುಗಿಸಿ ಹೊಡೆಯಬೇಕೆನ್ನುವಷ್ಟರಲ್ಲಿ ಬಾದಶಹನು ತನ್ನ ಹತ್ತಿರ ನಿಂತಿದ್ದ ತಿವಾಯಿಯ ಕೈಯೊಳಗಿನ ಕತ್ತಿಯನ್ನು ಕಿತ್ತುಕೊಂಡು ಆ ಆನೆ ಯ ಕುಂಡಾಗ್ರದಲ್ಲಿ ಹೊಡೆದು ಬೀರಬಲನನ್ನು ಬದುಕಿಸಿಕೊಂಡನು. ಬೀರ ಬಲನು ಸತ್ತುಹೋದಮೇಲೆ ಕೆಲವು ದಿವಸ ಬಾದಶಹನು ದರಬಾರಕ್ಕೆ ಹೋ ಗುವದನ್ನೂ ಪರದೇಶದ ವಕೀಲರೊಡನೆ ಸಂಭಾಷಣೆ ಮಾಡುವದನ್ನೂ ಟ್ಟು ಬಿಟ್ಟಿದ್ದನು. ”

"ಇಕಬಾಲ ಜಹಾಂಗಿರಿ ” ಎಂಬ ಗ್ರಂಥದಲ್ಲಿ ಬರದದ್ದೇನಂದರೆ;- "ಅಕಬರನು ಸಿಂಹಾಸನಾರೂಢನಾದ ದಿವಸದಿಂದ ಬೀರಬಲನ ಮರಣದ ವಾರ್ತೆಯನ್ನು ಕೇಳಿದ ದಿವಸದತನಕ ಅವನಮೇಲೆ ಒಂದು ದಿವಸವಾದರು ದುಃಖದ ಪ್ರಸಂಗವು ಬಂದಿದ್ದಿಲ್ಲ, ಬಾದಶಹನು ಬೀರಬಲನ ಮೃತ್ಯುವಿನ ಶೋಕದಲ್ಲಿ ಕೆಲವು ಕವಿತೆ (ಮರಸಿ) ಗಳನ್ನು ಮಾಡಿದ್ದಾನೆ ಅವುಗಳಲ್ಲಿ ಎರಡು ಶ್ಲೋಕಗಳನ್ನು ಇದರಡಿಯಲ್ಲಿ ಬರೆದಿರುವೆನು.

"ದೀನಜಾನ ಸಬದೀನ ಎಕದುರಾಯೋ ದುಸಹ ದುಖ
ಸೋ ಅಬಹಮಕೋ ದಿನ, ಕಛನಹಿ ರಾಜ್ಯೋಬೀರಬರ
ಪೀಥಲ ಸೋಮಜಲಿನ ಗಯಿ, ತಾನಸೇನಸೋ ರಾಗ
ಹಸಿಬೋ ರಮಿಬೋ ಬೋಲಿಬೋ, ಗಯೋಬೀರಬಲನಾಥ ||೨||

ಬೀರಬಲನ ಮರಣದ ವಾರ್ತೆಯು ಫಾಲ್ಗುಣ ಶುಕ್ಲ ದ್ವಿತೀಯಾ ಗುರು ವಾರ ದಿವಸ ಬಂದುಮುಟ್ಟಿತು. ಮುಂದೆ ಶುಕ್ಲಪಕ್ಷ ಸಪ್ತಮಿಯ ದಿವಸ ಕೊಕಾ ಮತ್ತು ಹಕೀಮ ಇವರಿಬ್ಬರು ಮೋರೆಯನ್ನು ಒಣಗಿಸಿಕೊಂಡು ಲಜ್ಜಿತರಾಗಿ ಬಾದಶಹನಿಗೆ ಬಂದು ಬೆಟ್ಟಿಯಾದರು. ಆಗ ಬಾದಸಹನು ಬ ಹುಕೃದ್ಧನಾಗಿ ಕೆಲವು ದಿವಸ ಅವರನ್ನು ದರಬಾರಕ್ಕೆ ಕರಿಸದೆ ಬಿಟ್ಟುಬಿ ಟ್ಟಿದ್ದನು.
ಬಾದಶಹನ ಅಪ್ಪಣೆಯ ಮೇರೆಗೆ ರಾಜಾ ಮಾನಸಿಂಹನು ಖೈಬರಘ ಟ್ಟದಲ್ಲಿದ್ದ ಪಠಾಣರೊಡನೆ ಹೋರಾಡುತ್ತಿರಲು, ತೋಡರ ಮಲ್ಲನು “ ಸ್ವಾ ತಬುನೇರೆ ” ಎಂಬ ಸ್ಥಳವನ್ನು ಕೈವಶಮಾಡಿಕೊಂಡು ಹಿಂದಿರುಗಿ ಬಂದು ಖೈಬರ ಘಟ್ಟದಲ್ಲಿ ಯುದ್ಧ ಮಾಡುತ್ತಿದ್ದ ಮಾನಸಿಂಹನ ಸಹಾಯಕ್ಕೆ ಬಂದ ನು, ಎರಡೂ ಕಡೆಯಿಂದ ಬರುವ ಶರವೃಷ್ಟಿಗಳನ್ನು ತಾಳಲಾರದೇ ಪಠಾ ಣರು ಕೈಸೆರೆಸಿಕ್ಕರು ಅವರನ್ನು ತುರ್ಕಸ್ಥಾನಕ್ಕೆ ಕಳಿಸಿ ಗುಲಾಮರಂತೇ ವಿಕ್ರಯಿಸಿ ಬಿಟ್ಟರು.
ಈಪ್ರಕಾರ ಬಾದಶಹನು ಇಂಥ ಅನನ್ವಿತ ಕೃತ್ಯಕ್ಕೆ ಹಿಂದೆ ಎಂದೂ ಅಪ್ಪಣೆಕೊಟ್ಟಿದ್ದಿಲ್ಲ, ಆದರೆ ಬೀರಬಲನ ಮರಣದ ಸೇಡು ತೀರಿಸಿಕೊಳ್ಳಬೇ ಕೆಂದು ಈಪ್ರಕಾರ ಅಪ್ಪಣೆಯನ್ನು ಕೊಟ್ಟನು, ಇದರಹೊರ್ತು ಅನ್ಯಥಾ ಕಾರಣವಿದ್ದಿಲ್ಲ.

ವೇಷಧಾರಿಯಾದ ಬೀರಬಲ,

ಅಕಬರ ಬಾದಶಹನಿಗೆ ಸಂತೋಷವಾಗಬೇಕೆಂದು ಕೆಲವು ಜನರು ಬೀರಬಲನು ಸತ್ತಿಲ್ಲವೆಂತಲೂ, ಕಾಳಗದಲ್ಲಿ ಫಾಯಪಟ್ಟು ಬದುಕಿಕೊಂಡಿ ರುವನೆಂತಲೂ, ಅನೃತ ವರ್ತಮಾನವನ್ನು ಹುಟ್ಟಿಸಿದ್ದರು. ಮತ್ತೆ ಕೆಲವರು ಅವನನ್ನು ಹುಡುಕಿಕೊಂಡು ಬರುವೆವೆಂತಲೂ ವಚನವನ್ನು ಕೊಟ್ಟಿದ್ದರು. ಒಬ್ಬ ಮೋಸಗಾರನು ತಾನೇ ಬೀರಬಲನೆಂದು ಪ್ರಕಟವಾಗಿದ್ದನು.
ಬೀರಬಲನು ಸ್ವರ್ಗಸ್ಥನಾಗಿ ಎರಡು ವರುಷಗಳಾದಮೇಲೆ ಸೀಧೇ ಎಂಬ ಗ್ರಾಮದಲ್ಲಿ ಇದ್ದ ಒಬ್ಬ ಬ್ರಾಹ್ಮಣನು ತಾನೇ ಬೀರಬಲನೆಂದೂ, ಪಠಾಣರ ಸಂಗಡ ಕಾಳಗಮಾಡುವಾಗ ಫಾಯಹೊಂದಿ ಬಿದ್ದಿರುವಾಗ ಒಬ್ಬ . ಸಾಧುಪುರುಷನು ತನ್ನನ್ನು ಬದುಕಿಸಿದನೆಂತಲೂ ಹೇಳುತ್ತಿದ್ದನು. ಬೀರ ಬಲ್ಲ ಮತ್ತು ಆ ಬ್ರಾಹ್ಮಣನ ರೂಪದಲ್ಲಿ ಸಾಮ್ಯತೆಯಿತ್ತು, ಮತ್ತು ಅವನು ಬೀರಬಲನು ಮಾಡಿದ ಕೆಲಸಗಳನ್ನೆಲ್ಲ ಅರಿತುಕೊಂಡದ್ದರಿಂದ ಹಿಂದಿನ ಎಲ್ಲ ಕೃತಿಗಳನ್ನು ಜನರಿಗೆ ನಂಬಿಗೆಯಾಗುವಂತೆ ಹೇಳುತ್ತಿದ್ದನು. ಈ ಎಲ್ಲಾ ಕಾರಣಗಳಿಂದ ಬೀರಬಲನು ಜೀವಂತನಾಗಿರುವನೆಂದು ಜನರೊಳಗೆಲ್ಲ ಪ್ರ ಚಾರವಾಯಿತು. ಈ ರ್ವತಮಾನವು ಬಾದಶಹನ ಕಿವಿಯವರೆಗೆ ಹೋಗಲು ಅವನು ಆ ಬ್ರಾಹ್ಮಣನನ್ನು ಕರೆಯಿಸಿಕೊಂಡನು. ಅವನು ಮಾರ್ಗದಲ್ಲಿ ಬ ರುತ್ತಿರುವಾಗ ಯಾವದೋ ಒಂದು ವ್ಯಾಧಿಯಿಂದ ಪರಲೋಕವನ್ನ್ನೈದಿದನು ಈ ಸಂಗತಿಯು " ಅಕಬರನಾಮಾ" ಎಂಬ ಗ್ರಂಥದಲ್ಲಿ ಬರೆದಿದೆ.
ಇದರಂತೆಯೇ ಮುಂತಖಬುಲ ತವಾರೀಖ” ಎಂಬ ಗ್ರಂಥದಲ್ಲಿಯೂ ಈ ಸಂಗತಿಯನ್ನು ಈಪ್ರಕಾರ ಬರೆದಿದ್ದಾನೆ; " ಹಿಜರಿ ನನ್ ೯೯೬-ನೇ ವ ರುಷ ಅಂದರೆ (ಸಂವತ್ ೧೬೪೪) ನೇದರಲ್ಲಿ ಬೀರಬಲನು ಕಾಳಗದಲ್ಲಿ ಘಾ ಯಹೊಂದಿ ವ್ಯಾಧಿಯಿಂದಬಳಲುತ್ತ ನಗರಕೋಟದ ಹತ್ತಿರಬಂದು ಸನ್ಯಾಸಿ ನಿಯ ವೇಷಧಾರಣೆ ಮಾಡಿಕೊಂಡು ವಾಸವಾಗಿದ್ದಾನೆ” ಎಂದು ಹುಟ್ಟಿದ ವರ್ತಮಾನವನ್ನು ಕೇಳಿ, ಬಾದಶಹನು ಯೋಚಿಸಿದ್ದೇನಂದರೆ - " ಕಾಳಗ ದಲ್ಲಿ ಪರಾಜಿತನಾದ್ದರಿಂದ ಮುಖತೋರಿಸಲಿಕ್ಕೆ ನಾಚಿಕೆಪಟ್ಟು, ಅಲ್ಲಿ ವಾಸ ವಾಗಿದ್ದರೂ ಆಗಿರಬಹುದು ” ಎಂದು ನಿಶ್ಚಯಿಸಿ, ನಗರಕೋಟಕ್ಕೆ ಒಬ್ಬ ಮನುಷ್ಯನನ್ನು ಕಳಿಸಿ ನಿಜಸಂಗತಿಯನ್ನು ತಿಳಿದುಕೊಳ್ಳಬೇಕೆಂದು ಯೋ ಚಿಸಿದನು, ಆದರೆ ಅದು ಅನೃತವಾದ ವರ್ತಮಾನವೆಂದು ಒಬ್ಬ ನಂಬಿಗಸ್ತ ಮನುಷ್ಯನ ಮುಖದಿಂದ ತಿಳಿದುಬಂತು. ಮತ್ತೊಂದುಸಾರೆ ಬೀರಬಲನು ತನಗೆ ಜಹಾಗೀರಿಯಾಗಿ ಕೊಟ್ಟ ಕಾಲಿಂಜರವೆಂಬಲ್ಲಿ ಅಡಗಿಕೊಂಡು ಕುಳಿ ತುಕೊಂಡಿದ್ದಾನೆಂದು ವರ್ತಮಾನಹುಟ್ಟಿತು ಆಗ ಕಾಲಿಂಜರದಲ್ಲಿದ್ದ ಕಿಲ್ಲೆ ದಾರನಿಗೆ “ ಪ್ರಚ್ಛನ್ನನಾಗಿದ್ದ ಬೀರಬಲನನ್ನು ಕಳುಹಿಕೊಡಬೇಕೆಂದು " ಆಜ್ಞಾಪತ್ರವನ್ನು ಬರೆದನು ಆ ಕಿಲ್ಲೆದಾರನು ಒಬ್ಬಯಾತ್ರಿಕನನ್ನು ಬೀ ರಬಲನೆಂದು ತಿಳಿದು ತನ್ನ ಬಳಿಯಲ್ಲಿ ಇಟ್ಟುಕೊಂಡಿದ್ದನು. ಬಾದಶಹನ ಆಜ್ಞಾಪತ್ರವು ಬಂದು ತಲ್ಪಿದಕೂಡಲೆ ಬಾದಶಹನು ತನಗೆ ಏನುಶಾಸನವ ನ್ನು ಮಾಡುವರೋ ಎಂಬ ಭೀತಿಯಿಂದ ಅವನನ್ನು ಕೊಂದು ಬಾದಶಹನಿಗೆ "ನಮ್ಮಲ್ಲಿ ಬೀರಬಲನಿದ್ದದ್ದು ನಿಜ, ಆದರೆ ಈಗ ಕೆಲವು ದಿವಸಗಳ ಹಿಂದೆ, ಅವನು ಅಕಸ್ಮಾತ್ತಾಗಿ ಮರಣಹೊಂದಿದನು. ” ಎಂದು ರಿಪೋರ್ಟೆನ್ನು ಬ ರೆದು ಬಾದಶಹನ ಸನ್ನಿಧಿಗೆ ಕಳುಹಿಸಿದನು. ಇದನ್ನು ಕೇಳಿದಮೇಲೆ ಬಾದ ಶಹನಿಗೆ ಪರಮಾವಧಿ ದುಃಖವಾಯಿತು, ಆಗ ಈ ವರ್ತಮಾನವನ್ನು ತನಗೆ ಮೊದಲು ಯಾಕೆ ತಿಳಿಸಲಿಲ್ಲೆಂಬ ಅಪರಾಧವನ್ನು ಹೊರಿಸಿ, ಆ ಕಿಲ್ಲೇದಾರನಿಗೆ ದಂಡಮಾಡಿದನು.

           ಬೀರಬಲನ ಕವಿತಾಚಾತುರ್ಯ.

ಬೀರಬಲನು ಕಾವ್ಯಮಾಡುವದರಲ್ಲಿ ಬಹು ಪ್ರವೀಣನಿದ್ದನು. ಸಮ ಸ್ಯಾ ಪೂರ್ತಿಯನ್ನು ಬಹುಬೇಗ ಮಾಡುತ್ತಿದ್ದನು. ಅವನು ತಾನುಮಾಡಿದ ಗ್ರಂಥಗಳ ಮೇಲೆ ತನ್ನ ಹೆಸರಿನ ಸ್ಥಳದಲ್ಲಿ "ಬ್ರಹ್ಮ” ಎಂಬ ಶಬ್ದವನ್ನುಪ ಯೋಗಿಸುತ್ತಿದ್ದನು. ಅವನುಮಾಡಿದ ಪದ್ಯಗಳು ಅರ್ಥ ಗೌರವವುಳ್ಳವಾಗಿ, ಮನೋರಂಜನೆಯಾಗುವಂತೆ ಇರುತ್ತಿದ್ದವು. ಆದರೆ ಅವನು ಬರೆದ ಗ್ರಂಥ ಗಳು ಪ್ರಚುರದಲ್ಲಿ ಇಲ್ಲ. ಆದರೂ ಕೆಲಕೆಲವು ಪದ್ಯಗಳುಮಾತ್ರ ಕೇಳಿಕೆಯ ಲ್ಲಿರುವವು ಅವುಗಳಲ್ಲಿ ಒಂದೆರಡನ್ನು ಕೆಳಗೆ ವಿವರಿಸಿದ್ದೇನೆ.

             ನವಾಯಿ.

"ಪೂತಕುಪೂತ ಕುಲಕ್ಷಣನಾರೀಲರಾಕ ಸರೋಸ ಲಜಾವ ನಸಾರೋ : ಭಾಯಿ ಅದೇಖ ಹಿತೂ ಕಚಲಂಪಟ ಕಪಟೀ ಮೀತ ಅತೀತ ಧುತಾರೋ! ಸಾಹಬನೂನುಕಿಸಾನ ಕಠೋರಾ ಔಮಾಲಿಕ ಚೋರದಿವಾನನಕಾರೋ ಬ್ರಹ್ಮಭನೈಸುನುಶಾ ಹ ಅಕಬ್ಬರ ಬಾರಹು ಬಾಂಧಿ ಸಮುದ್ರ ಮಡಾರೋ | ೧ | ಗರ್ಭಚಡೀ ಪುಸಿಸೂಚಢಿ ಪಲನಾಚಢ ಚಢಗೋದಘನಾ ಕೆ| ಹಾಫಿಚ ಫಿರ ಅಶೌಚ ಸುಖಪಾಲಚಚಢ ಜೋ ಮಧನಾಕ | ವೈರಿ ಔಮಿತ್ರಚಿತ್ತಚ, ಕವಿಬ್ರಹ್ಮಭನೈದಿ ನಬೀತನಾಕ || ಈಶಪಾಲುಕೊ ಜಾನ ನಿಹಿಅಬ ಕಾಂಥೆಚಢ ಚಲಿಚಾರಜಾನುಕ||೨|| ಜಬದಾಂತನಧಿ ತಬದೂ ಧದಯೋ ಜಬದಾಂತಭಯತೋ ಅನಾಜಹುದಕ್ಕೆ ಜೀವ ಬಸೈಥಲ ಔಜಲಮೆ ತಿನಕೀ ಸುಧಿಲೇತ ಸೂರಿಹುಲೈ ಹೈ| ಕ್ಯೂ ಅಬಸೋಚಕರೈ ಮನಮೂರಖ ಸೋಚಕರೈಕು ಛಹಾಥನಿಹೈ ||೩|| ಯದ್ಯವಿದ್ರವ್ಯಾಕೋ ಸೋಚಕರೈಕಹು ಗರ್ಬಮೆಕೇತ ಹೂಗಾಂಠಿತಖಾಯೋ | ಜಾಟನಜನ್ಮಲ ಯೋಜಗಮೆಜಬಕೇತಿಕ ಕೋಟಿಲಿಯೆನಗ ಆಯೋ ! ವಾ ಕೋಭರೋಸೋತ್ಯೋಛಾಡೆಅರೆಮನಜಾನೋಆಹಾರ ಆಚೇ ತಮೆವಾಯೋ | ಬ್ರಹ್ಮಭನೈಜನಿಸೋಚಕರೈವಹಿ ಸೋಚಿ ಹೈಜೋಬಿರುಲಾವುಲಹಾಯೋ ॥ ೪ |

ನ್ಯಾಯಪರಾಯಣತೆಯು.

ರಾಜಾ ಬೀರಬಲನು ನ್ಯಾಯ ವಿಮರ್ಶೆ ಮಾಡುವದರಲ್ಲಿ ಅದ್ವಿತೀಯ ನಾಗಿದ್ದನು ಅವನುತನ್ನ ಬುದ್ಧಿ ಬಲದಿಂದ ಅಕಬರಬಾದಶಹನ ಮೇಲೆ ವರ್ಚಸ್ಸ ನ್ನುಂಟು ಮಾಡಿದ್ದನು ಒಂದೊಂದು ಸಮಯದಲ್ಲಿ ಬಾದಶಹನು ಇವನ ನ್ಯಾಯ ವಿಮರ್ಶೆಯಜಾಣತನವನ್ನು ಕಂಡು ಬೆರಗಾಗಿ ಹೋಗುತ್ತಿದ್ದನು.
"ಅಕಬರ ನಾಮಾ ” ಎಂಬ ಗ್ರಂಥದಲ್ಲಿ ಹೀಗೆ ಉಲ್ಲೇಖವಿರುವದು, ಎಂತೆಂದರೆ "ಜಲೂನಿ ಸನ್ ೨೭ (ಸಂವತ್ ೧೬೩೮) ನೇದರಲ್ಲಿ ನೂತನ ವರುಷಾರಂಭದ ಉತ್ಸವದಲ್ಲಿ ಬಾದಶಹನು ತನ್ನ ಮುತ್ಸದ್ಧಿಗಳನ್ನು ಕುರಿ ತು “ ರಾಜಾ ಮತ್ತು ಪ್ರಜೆಗಳಿಗೆ ಹಿತನಾಗುವಂಥ ಒಂದೊಂದು ಸಂಗತಿ ಯನ್ನು ನಿವೇದಿಸಿರಿ ” ಎಂದು ಅಪ್ಪಣೆಯನ್ನಿತ್ತನು ಆ ಸಮಯದಲ್ಲಿ ರಾಜಾ ಬೀರಬಲನು ನಿವೇದಿಸಿದ್ದೇನಂದರೆ " ನ್ಯಾಯ ವಿಮರ್ಶೆ ಮಾಡತಕ್ಕ ಮನು ಷ್ಯನು ಯಾವಾಗಲೂ ಪ್ರಜೆಗಳಲ್ಲಿ ಕೂಡಿಕೊಂಡು ಹೋಗತಕ್ಕದ್ದು; ಅಂ ದರೆ- ಪ್ರಜೆಗಳು ತಮಗೆ ಉಂಟಾಗುವ ಸುಖದುಃಖಗಳನ್ನು ನಿರ್ಭಯದಿಂದ ಹೇಳಿಬಿಡುವರು” ಎಂದು ಹೇಳಿದ ಬೀರಬಲನ ಯುಕ್ತ ಯುಕ್ತವಾದ ಮಾ ತುಗಳಿಂದ ಬಾದಶಹನು ಪ್ರಸನ್ನನಾಗಿ ಆ ಕೆಲಸವನ್ನು ಬೀರಬಲನಿಗೆ ಒಪ್ಪಿ ಸಿದನು, ಮುಂದೆ ಎರಡು ವರುಷಗಳಾದ ಮೇಲೆ " ಕಾಸಮಖಾ, ಹಕೀಮು ಹಮಾಮ, ಮತ್ತು ಶಮಶೇರಖಾ, ಕೊತವಾಲ, ಅಬುಲಫಜಲ್ ಮೊದಲಾದ ಕಾರಭಾರಿಗಳನ್ನು ಬೀರಬಲನ ಆಂಕಿತರನ್ನಾಗಿ ಮಾಡಿ ಅವರಿಗೆ ಆಜ್ಞಾಪಿ ನಿದ್ದೇನೆಂದರೆ. " ಶಪಥ ಮತ್ತು ಸಾಕ್ಷಿಗಳಮೇಲೆ ವಿಶ್ವಾಸವನ್ನಿಡದ ಕುಕಾ ಗ್ರಬುದ್ಧಿಯಿಂದಲೂ ಅನುಭವದಿಂದಲೂ ನ್ಯಾಯ ವಿಮರ್ಶೆಯನ್ನು ಮಾಡಿರಿ ಮತ್ತು ಅಭಿಯೋಗಿಗಳ ವಿಚಾರಣೆ ಮಾಡುವದರಲ್ಲಿ ಅಧಿಕ ಕಾಲಹರಣ ಮಾಡಬೇಡಿರಿ:-

ನ ಡಾ ವ ಳಿ .

ಬೀರಬಲನ ಸ್ವಭಾವವು ಬಹಳ ಉತ್ತಮವಾದದ್ದಿ ತ್ತು ಜನರನ್ನು ಒಲಿ ಸಿಕೊಳ್ಳುವದರಲ್ಲಿ ಯಂತೂ ಅಪ್ರತಿಮನಾಗಿದ್ದನು ಇವನು ಬಾದಶಹನ ದರ ಬಾರದಲ್ಲಿ ಉಚ್ಚಪದವಿಯನ್ನು ಹೊಂದಿ ಸದ್ವ್ಯವಹಾರದಿಂದ ವರ್ತಿಸಿ ಪ್ರ ಚೆಗಳಿಗೆಲ್ಲರಿಗೂ ಮಹದುಪಕಾರವನ್ನು ಮಾಡಿದನ್ನು ಸಮಯೋಚಿತವಾ ಸಂಭಾಷಣೆಗಳನ್ನು ಮಾಡುವವರಲ್ಲಿ ಇವನ ಹೆಸರು ಪ್ರಥಮದಲ್ಲಿತ್ತು ಬ್ರಾ ಹ್ಮಣರಿಗೆ ಎಷ್ಟೋಗ್ರಾಮಗಳಲ್ಲಿ " ಚೌಥಾಯಿ ” ಎಂಬ ಹಕ್ಕನ್ನು ಕೊಡಿ " ಸಿದನು ಗೋವಧೆಯನ್ನು ನಿಲ್ಲಿಸಿದನು ಹಿಂದುಮುಸಲ್ಮಾನರಲ್ಲಿ ಇದ್ದ ದ್ವೇಷಬುದ್ಧಿಯನ್ನು ಕಡಿಮೆ ಮಾಡಿದನು ಇದರಿಂದ ಎರಡೂ ಪಕ್ಷದವರಲ್ಲಿಯ ವೈರಭಾವವು ನಿರ್ಮೂಲವಾಗಿ ಹೋಯಿತು. ಯಾವತ್ತೂ ಭಾರತ ವರ್ಷದಲ್ಲಿ ಶಾಂತತೆಯ ಸಾಮಾಜ್ಯವು ನೆಲೆಗೊಂಡಿತ್ತು.

ದಾ ತೃ ತ್ಯ

ಅಕಬರ ಬಾದಶಹನ ಕಾಲದಲ್ಲಿ ಬೀರಬಲನು ದಾತೃಗಳಲ್ಲಿ ಮೇಲಾದವನೆಂದು ಖ್ಯಾತಿಗೊಂಡಿದ್ದನು. ಹಿಂದುಗಳಲ್ಲಿಯಂತೂ ಅನೇಕ ಕವಿಗಳು ಇವನ ದಾತೃತ್ವವನ್ನು ವರ್ಣಿಸಿದ್ದಾರೆ ಇಷ್ಟೇ ಅಲ್ಲ; ಮುಸಲ್ಮಾನ ಕವಿಗಳು ರಚಿಸಿದ ಅನೇಕ ಗ್ರಂಥಗಳಲ್ಲಿ ಇನನ ದಾತೃತ್ವವು ವರ್ಣಿಸಲ್ಪಟ್ಟಿದೆ. "ಮಃಆಸಿರುಲ್ ಉಮರಾ" ಎಂಬ ಗ್ರಂಥದಲ್ಲಿ ಬರೆದಿರುವದೇನಂದರೆ;- "ರಾಜಾ ಬೀರಬಲನು ಆ ಕಾಲದಲ್ಲಿ ದಾನಿಗಳೆಂದು ಖ್ಯಾತಿಗೊಂಡವರಲ್ಲಿ ಮೊದಲನೆಯವನೆಂದೂ, ಪಾರಿತೋಷಕ, ಮತ್ತು ಉಪಹಾರಗಳನ್ನು ಕೊಡುವದರಲ್ಲಿ ಪ್ರಸಿದ್ಧನಾಗಿದ್ದನೆಂದೂ ವರ್ಣಿಸಿದ್ದಾರೆ” ಆಕಾಲದಲ್ಲಿದ್ದ ಕವಿಗಳು ಇವನ ಉದಾರತ್ವವನ್ನು ಅತ್ಯಧಿಕವಾಗಿ ಪ್ರಶಂಸೆ ಮಾಡಿದ್ದಾರೆ ಗಂಗಕವಿಯೆಂಬವನು ಈಪ್ರಕಾರ ವರ್ಣಿಸಿದ್ದಾನೆ.

ಶ್ಲೋಕ|| ದಿಲ್ಲಿಸೇನ ತಖ್ತ ತಖ್ತ ಬಖ್ತ ಮುಗಲನಸೆ ಹೋಯೇಹೈ | ಹೋ
ಯೇಹೈ ನಗರ ನಕರೂ ಆಗದೆ ನಗರಸೆ ಖಾನನವೆ ಖಾನ
ಖಾನಾ ರಾಜನಮೆ ರಾಜಾ ಮಾನ, ಹೌಹೈನ ಬಜೀರ ಕಹೂ
ಟನಡನ ಟೋಡರಸೆ ! ಕವಿಗಂಗಸೆ ಗುನೀ ನತಾನಸೇನ ತಾ
ನಧಾರೀ, ಬೂಚನಸೆ ನಕಾನುಗೊ ನದಾತಾ ಬೀರಬರಸೆ
ಸಾತದ್ಯೀಪಕೆ ಮಝೂರ ಸಾತವೂ ಸಮಂದ್ರವಾರ ಹೌಹೈ
ನಜಲಾಲ ದೀನ ಗಾಜೀ ಅಕಬರಸೆ ||

ಕೇಶವದಾಸನೆಂಬ ಕವಿಯು ಉರ್ಚ್ಛಾ ಪಟ್ಟಣದ ಅರಸನಾದ ಇಂದ್ರಜಿತನೆಂಬವನ ಓಲಗದಲ್ಲಿದ್ದನು ಅವನು ಯಾವದೋ ಒಂದು ಕಾರ್ಯದ ನಿಮಿತ್ತವಾಗಿ ಅಕಬರ ಬಾದಶಹನ ಓಲಗಕ್ಕೆ ಬಂದಿದ್ದನು. ಆಗ ಕೇಶವದಾಸನಿಗೆ ದ್ರವ್ಯದ ಅನಾನುಕೂಲತೆಯುಂಟಾಯಿತು. ಆಗ ಅವನು ಬೀರಬಲನ ಹತ್ತರ ಕೇಳಬೇಕೆಂದು ಬಂದನು. ಆಗ ಬೀರಬಲನು ತನ್ನ ಗೃಹದ ಹಿಂಭಾಗದಲ್ಲಿ ಕುಳಿತುಕೊಂಡಿದ್ದನು. ಆಗ ಕೇಶವದಾಸನಿಗೆ ಹೇಳಿ ಕಳುಹಿಸಿದ್ದೇನಂದರೆ; "ತಿರುಗಿ ಬರಬೇಕು, ಯಾಕಂದರೆ ನನಗೆ ಈಗ ಅಜೀರ್ಣವಾಗ ಹತ್ತಿದೆ, ಆದ್ದರಿಂದ ಹೊರಗೆ ಬರುವದಕ್ಕೆ ಅನುಕೂಲ್ಯವಿಲ್ಲ, ಕೇಶವ ದಾಸನು ಈ ಮಾತನ್ನು ಕೇಳಿ ಈ ಕೆಳಗೆ ಬರೆದ "ದೋಹಾ" ಹೇಳಿದನು.

"ಯಕಜಾರ್‌ಯೋ ಸಬ ಜಗತ್‌, ಭಯೋ ಆಜೀರನ
ತೋಯ, ಅವಯಶಕೀ ಗೋಲೀ ದೇಊ ತತಕಾಲಹಿ ಶುಧ
ಹೋಯ ||೧||

ಈ ಮೇಲೆ ಬರೆದ ಕವಿತ್ವವನ್ನು ಓದಿಕೊಂಡ ಕೂಡಲೆ ಬೀರಬಲನು ಹೊರಗೆ ಬಂದನು ಕೇಶವದಾಸನು ಅವನನ್ನು ನೋಡಿದ ಕೂಡಲೆ ಈ ಸವಾಯಿಯನ್ನು ಹೇಳಿದನು. ಚ್ಯಿ

"ಭೂ ರವಿ ಪಚ್ಯಿಬಸೂ ನದನಾಗೆ ನವೀನದ ಲೋಕರಚೆ ದಶ
ಚಾರೀ | ಕೇಶವ ದೇವ ಅದೇವರಚೆ ನರದೇವರಚೆ ರಚನಾನಿ
ವಾರಿ ರಚಿಕೆ ನೃಪನಾಥ ಬಲೀ ಬಲಬೀರ ಭಯೋಕೃತಕೃತ್ಯ
ಮಹಾ ವೃತಧಾರಿ| ದೈಕರತಾರವನೋ ಕರತೋಹಿದ ಈ ಕ
ರತಾರದುಹೂಕರತಾರೀ||

ಈ ಪ್ರಕಾರ ಕೇಶವದಾಸನ ಕವಿತ್ವವನ್ನು ಕೇಳಿ ರಾಜಾ ಬೀರಬಲನು ಪ್ರಸನ್ನನಾಗಿ ತನ್ನ ಹತ್ತರ ಬರೆದು ಇಟ್ಟುಕೊಂಡಿದ್ದ ಆರುಕ್ರೋಡದಾಮ (ಹನ್ನೆರಡುವರಿಲಕ್ಷ ರೂಪಾಯಿಯ) ಹುಂಡೀ ಕಾಗದವನ್ನು ಆ ಕವೀಶ್ವರನಿಗೆ ಕೊಟ್ಟು ಬಿಟ್ಟನು. ಆಗ ಆ ಕವಿಯು ಎರಡನೇ ಸವಾಯಿಯನ್ನು ಹೇಳಿದನು.

"ಕೇಶವದಾಸಕೆ ಭಾಲ ಲಿಖ್ಯೋವಿಧಿ, ರಂಕಕೊ ಅಂಕಬನಾ
ಯ ಸವಾರ್‌‍ಯೊ| ದೊಯೆಧುಪ್ಯೊ ನಹಿಛೋಡೆ ವುಟ್ಯೋ
ಬಹುತೀರಥಕೆ ಜಲಜಾಯ ಪಖಾರ್ಯೋ| ಹ್ವೈಗಯೋ ರಂ
ಕಕೊ ರಾವ ತಬೈಜಬ ಬೀರಬಲೀ ನೃಪನಾಥನಿಹಾಹ್ಯೋ|
ಭೂಲಿಗೆಯೋ ಜಗಕೀ ರಚನಾ, ಚತುರಾನನ ಘಾರಿ ರಹ್ಯೋ
ಮುಖಚಾರ್‌ಯೋ || ೧ ||

ರಾಜಾ ಬೀರಬಲನು ದಿವಂಗತನಾಗಲು, ಆಕಾಲದಲ್ಲಿ ದುಃಖಿತರಾದ ಕೆಲವು ಕವಿಗಳು, ಕೆಲವು "ಮರ್ಸಿ" ಎಂಬ ಕವಿತೆಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಸಹಾ ಬೀರಬಲನ ದಾತೃತ್ವವನ್ನು ವರ್ಣಿಸಿದ್ದಾರೆ. ಸ್ವತಃ ಅಕಬರ ಬಾದಶಹನು ರಚಿಸಿದ "ಮರ್ಸಿ"ಗಳಲ್ಲಿ ಪ್ರಥಮ ದೋಹಾದಲ್ಲಿ ಈಪ್ರಕಾರ ವರ್ಣವು ಬಂದಿರುವದು ಕವಿಕೇಶವದಾಸನು ಸ್ಪಷ್ಟವಾಗಿ ತನ್ನ ಕವಿತ್ವದಲ್ಲಿ ಹೇಳಿದ್ದಾನೆ. ಬೀರಬಲನ ಮರಣದಿಂದ ದರಿದ್ರರಾದವರ ಗೃಹದಲ್ಲಿ ಸಹಾ ಶೋಕವು ಕೇಳಿ ಬರಹತ್ತಿತು ಆಶೋಕೋಕ್ತಿಗಳು ಈ ಪ್ರಕಾರವಿರುವವು.

ಸ ವಾ ಯಿ.

"ವಾವಕೆ ಮಂಜ ವಖಾವಜ ಕೇಶವ, ಶೋಕಕೆ ಶಂಖ ಸುನೆ
ಸುಖಮಾಮೆ | ಝಾಂಠಕೀ ಝಾಲರ ಝಾಂಝ ಅಲೋಕ
ಕೀ, ಕೌತುಕ ಭೋಕಲಿಕೆ ಶುರಮಾಮೆ | ಭೇದಕಿ ಭೇರಿ ಬಡೆ
ಡರಕೇ ಡಫ ಆವಜ ಯುತ್ಥನಜಾನೀ ಜಮಾಮೇ | ಜೂಝ
ತಹೀ ಬಲಬೀರ ಬಜೇಬಹು ದಾರಿದಕೆ ದರಬಾರ ದಮಾ
ಮೆ ||೧||

ರಾಜಾ ಬೀರಬಲನ ಈಪ್ರಕಾರದ ಉದಾರತೆಯ ವರ್ಣನವನ್ನು ಕೇಳಿ ಮನಸ್ಸಿನಲ್ಲಿ ಒಂದು ಪ್ರಕಾರದ ಸಂದೇಹವುಂಟಾಗುತ್ತದೆ. ಏನಂದರೆ, ರಾಜಾ ಬೀರಬಲನು ವಂಶ ಪರಂಪರಾಗತವಾಗಿ ನಡೆದು ಬಂದ ಅಮೀರರ ವಂಶದವನಲ್ಲ; ಬಾದಶಹನು ಕೇವಲಪ್ರೀತನಾಗಿ ರಾಜನೆಂಬ ಪದವಿಯನ್ನು ಕೊಟ್ಟಿದ್ದನು. ಅವನಿಗೆ ಎರಡು ಸಾವಿರ ಸವಾರರನ್ನು ಇಟ್ಟುಕೊಳ್ಳುವಷ್ಟು ಮನಸಬದಾರಿಯಿತ್ತು. ಈ ಸವಾರರಖರ್ಚು ನಡಿಸುವದು ಅಸಾಮಾನ್ಯರ ಕೆಲಸವಲ್ಲ. ಹೀಗಿದ್ದು ಒಂದೊಂದು ಸಮಯದಲ್ಲಿ ಆರು ಆರು ಕರೋಡ ರೂಪಾಯಿಗಳನ್ನು ಕೇಶವದಾಸನಂಥ ಕವಿಗಳಿಗೆ ಕೊಡುವದೆಂದರೆ ಎಂಥ ಆಶ್ಚರ್ಯದ ಸಂಗತಿಯು ! ಆದರೆ ಈ ಸಂಗತಿಯು ಅಸಂಭಾವ್ಯವಾದದಲ್ಲ: ರಾಜಾಬೀರಬಲನಿಗೆ ಎರಡು ಸಾವಿರ ಸವಾರರ ಮನಸಬದಾರಿ ಇದ್ದದ್ದಲ್ಲದೆ ಬಾದಶಹನ ಕೃಪಾಛತ್ರವು ಇವನ ಮೇಲೆ ಪೂರ್ಣವಾಗಿತ್ತು. ಬಾದಶಹನು ಇವನ ಹೇಳಿಕೆಯಂತೆಯೇ ವರ್ತಿಸುತ್ತಿದ್ದನು ತನ್ನ ಮನಸ್ಸಿಗೆ ಬಂದದ್ದನ್ನು ಮಾಡಲು ಪೂರ್ಣಸಮರ್ಥನಾಗಿದ್ದನು. "ಮುಂತಬಿಬುಲ ಲುಬಾಬ” ಎಂಬಗ್ರಂಥದಲ್ಲಿ ಬರೆದಿರುವದೇನಂದರೆ ರಾಜಾಬೀರಬಲನಿಗೆ ಎರಡುಸಾವಿರ ಮನಸಬದಾರಿಯಿತ್ತು, ಆದರೆ ಅವನು ತನ್ನ ಚಾತುರ್ಯದಿಂದಲೂ ಸಮಯೋಚಿತ ಉತ್ತರವನ್ನು ಕೊಡುವ ನೈಪುಣ್ಯದಿಂದಲೂ ಬಾದಶಹನ ಮನವನ್ನು ಪೂರ್ಣವಾಗಿ ಒಲಿಸಿಕೊಂಡು ಬಿಟ್ಟನು. ಇದರಿಂದ ಪ್ರತಿಮಾಸದಲ್ಲಿ ಲಕ್ಷ ಲಕ್ಷ ರೂಪಾಯಿಗಳನ್ನು ಪಾರಿತೋಷಕವಾಗಿ ತೆಗೆದುಕೊಳ್ಳುತಿದ್ದನು ಮತ್ತು ದೂರ ದೂರಿನ ಅಮೀರ ಉಮರಾವರು ಬಹು ಮೂಲ್ಯವಾದ ಕಾಣಿಕೆಗಳನ್ನು ಕಳುಹಿಸಿ ಕೊಡುತ್ತಿದ್ದರು. ಇದಲ್ಲದೆ ಬಾದಶಹನ ರಾಣೇವಾಸದಿಂದ ಸಹಾ ಅನರ್ಘ್ಯವಾದ ಪಾರಿತೋಷಕಗಳು ಮೇಲಿಂದ ಮೇಲೆ ಬರುತ್ತಿದ್ದವು.

ಬೀ ರ ಬ ಲ ನ ಸಂ ತ ತಿ.

ರಾಜಾ ಬೀರಬಲನಿಗೆ ಎಷ್ಟು ಮಂದಿ ಮಕ್ಕಳಿದ್ದರೆಂಬ ಸಂಗತಿಯು ನಿಶ್ಚಯಾತ್ಮಕವಾಗಿ ತಿಳಿದು ಬರುವದಿಲ್ಲ. ಆದರೆ ಅಕಬರ ಮತ್ತು ಜಹಂಗಿರ ಇವರ ಚರಿತ್ರಗಳಲ್ಲಿ ಲಾಲಾ ಮತ್ತು ಹರಿಹರರಾಯ ಎಂಬ ಈರ್ವರು ಪುತ್ರರು ಇದ್ದಂತೆ ವ್ಯಕ್ತವಾಗುತ್ತದೆ. "ಅಕಬರನಾಮಾ” ಎಂಬ ಗ್ರಂಥದಲ್ಲಿ ಲಾಲಾನ ವಿಷಯವಾಗಿ ಈ ಪ್ರಕಾರ ಉಲ್ಲೇಖವಿರುವುದು ಲಾಲಾನು ತನ್ನ ಆದಾಯಕ್ಕಿಂತ ಹೆಚ್ಚು ವ್ಯಯವನ್ನು ಮಾಡುತ್ತಿದ್ದನು ಇದರಿಂದ ಸ್ಪಲ್ಪ ದಿವಸಗಳಲ್ಲಿಯೇ ದಿಲ್ಲಿಯನ್ನು ಬಿಟ್ಟು ಹೊರಟು ಹೋಗುವ ಪ್ರಸಂಗ ವು ಬಂತು. ಆದರಿಂದ ಅವನು ಬಾದಶಹನ ಅಪ್ಪಣೆಯನ್ನು ಹೊಂದಿ ಸನ್ ೪೭ ಜುಲಾಸೀ (ಸಂವತ್ ೧೬೫೮ ) ನೇದರಲ್ಲಿ ಪ್ರಯಾಗಕ್ಕೆ ಹೋಗಿ ಅಲ್ಲಿ ಜಹಾಂಗೀರನ ಆಶ್ರಯದಲ್ಲಿ ಇರಹತ್ತಿದನು.

ಹರಿಹರ ರಾಯನು ಬಾದಶಹನ ಸೇವೆಯಲ್ಲಿಯೇ ಇದ್ದನು. ಇವನು ಒಂದುಸಾರೆ ಸನ್ ೪೮ ಜುಲಾಸೀ (ಸಂವತ್ ೧೬೫೯) ನೇ ವರುಷ ಆಗ್ರಾದಿಂದ ದಕ್ಷಿಣಕ್ಕೆ ಹೊರಟಿರುವ ಶಹಾಜಾದಾ ದಾನಿಯಲನ ಕೂಡ ಹೋದಂತೆ ಕಂಡು ಬರುತ್ತದೆ.

ರಾಜಾ ಬೀರಬಲನ ರಾಣಿ ಜನರು.

ರಾಜಾ ಬೀರಬಲನ ಮರಣಾನಂತರ ಬಾದಶಹನು ಬೀರಬಲನ ಹೊಟ್ಟೆಯ ಗಂಡು ಮಕ್ಕಳಲ್ಲಿ ಸುಸಂಸ್ಕೃತನಾದವನನ್ನು ಕುರಿತು “ ಬೀರಬಲನ ಸಂಗಡ ಎಷ್ಟುಜನರಾಣಿಯರು ಸತಿಹೋದರು?” ಎಂದು ಪ್ರಶ್ನೆ ಮಾಡಿದನು. ಆಗ ಅವನು - "ವೀರತಾಬುದ್ಧಿವಂತಿಕೆ, ಉದಾರತಾ ಎಂಬ ಮೂರುಜನ ಸತಿಯರು ಸಹ ಗಮನಮಾಡಿದರು. ಕೀರ್ತಿ ಎಂಬ ಸ್ತ್ರೀಯು ಮಾತ್ರ ಬದುಕಿರುವಳು.” ಎಂದು ಉತ್ತರಕೊಟ್ಟನು. ಬಾದಶಹನು ಅವನ ಉತ್ತರವನ್ನು ಕೇಳಿ ಸಂತುಷ್ಟನಾಗಿ ಅಂದದ್ದೇನಂದರೆ -"ನೆಟ್ಟಗಾಯಿತು, ಅವಳು ಇರಲಿಕ್ಕೇಬೇಕು ಯಾಕಂದರೆ ಅವಳು ಹೋಗಿ ಬಿಟ್ಟಿದ್ದರೆ ದೋಷವು ಬರುತ್ತಿತ್ತು.

ಬೀರಬಲನ ಉಪದೇಶಪರ, ಮತ್ತು ಹಾಸ್ಯರಸೋತ್ಪಾದಕ ಸಣ್ಣ ಸಣ್ಣ ಕಥೆಗಳು.

ಇವನ ಸ್ವಭಾವದಲ್ಲಿ ಹಾಸ್ಯವು ಮನಪ್ರಸನ್ನ ಮಾಡಿಬಿಡುವಂಥ ಮಾತುಗಳೂ, ಸಮಯೋಚಿತ ಉತ್ತರಗಳನ್ನು ಕೊಡುವಂಥ ಶಕ್ತಿಯೂ ಅವರ್ಣನೀಯವಾಗಿತ್ತು. ಇವನ ಉಪದೇಶ ಪರವಾದ ವಾಕ್ಯಗಳೂ, ಮನ ಇನ್ನು ಪ್ರಸನ್ನವಾಗಿ ಮಾಡಿಬಿಡುವಂಥ ಸಣ್ಣ ಸಣ್ಣ ಹಾಸ್ಯರಸೋತ್ಪಾದಕ ಕಥೆಗಳೂ, ಸಮರ್ಪಕವಾಗಿ ಕೇಳಿದಪ್ರಶ್ನೆಗೆ ಉತ್ತರಕೊಟ್ಟಂಥ ಸಂ ಗತಿಗಳೂ, ಈ ಭಾರತವರ್ಷದ ಪ್ರತಿಯೊಂದು ಜನವಸತಿಯಲ್ಲಿ ಪ್ರಸಿದ್ಧ ವಾಗಿವೆ ಈ ಪುಸ್ತಕದಲ್ಲಿ ಬೀರಬಲನ ಉಪದೇಶ ಪರವಾದ ನೀತಿ ರಸಭರಿತ ವಾದ ನಗಿಯನ್ನು ಹುಟ್ಟಿಸುವ ಅನೇಕ ಸಂಗತಿಗಳನ್ನು ವರ್ಣಿಸಿದ್ದೇನೆ ಬೀರಬಲನಿಗೆ ಸರಸ್ವತೀದೇವಿಯು ಪ್ರಸನ್ನಳಾಗಿದ್ದಳೆಂದೂ ಅವನಬುದ್ಧಿಗೆ ಹರಿಯದೆ ಇದ್ದ ಸಂಗತಿಗಳನ್ನು ತಾನು ಸ್ವತಃ ತಿಳಿಸಿ ಇವನಮುಖದಿಂದ ಹೊರಬೀಳಿಸುತ್ತಿದ್ದಳೆಂದೂ ಜನರಲ್ಲಿ ವಾಡಿಕೆಯುಂಟು ಒಂದು ಸಾರೆ ಬಾದ ಶಹನು ಒಂದು ಜಲಭರಿತವಾದ ಜಲಾಶಯವನ್ನು ಕಂಡು "ಬೀರಬಲ ಇದ ರಲ್ಲಿ ಏನು ತುಂಬಿದೆ? ” ಎಂದು ಪ್ರಶ್ನೆ ಮಾಡಿದನು ಅದಕ್ಕೆ ಬೀರಬಲನ ತತ್‌ಕ್ಷಣದಲ್ಲಿ " ಮಳಲು ತುಂಬಿದೆ” ಎಂದು ಹೇಳಿಬಿಟ್ಟನು ಈ ಮಾತನ್ನು ಸತ್ಯವನ್ನಾಗಿಮಾಡಿ ತೋರಿಸಬೇಕೆಂದು ತಿಳಿದು ಸರಸ್ವತೀದೇವಿಯು ಅ ಜ ಲಾಶಯದಲ್ಲಿದ್ದ ಜಲವನ್ನೆಲ್ಲ ಶೋಷಿಸಿ , ಮಳಲನ್ನುಂಟುಮಾಡಿ ತೋರಿಸಿ ದಳು ಆದಿವಸದಿಂದ ಸರಸ್ವತೀದೇವಿಯ ಬೀರಬಲನಮೇಲೆ ಅಪ್ರಸನ್ನತೆ ಯುಳ್ಳವಳಾಗಿ ಇವನ ಮಗಳ ಮುಖದಿಂದ ಬೀರಬಲನಿಗೆ ತಿಳಿಯದೆ ಇದ್ದ ಮಾತುಗಳನ್ನು ಹೇಳಿಸುತ್ತಿದ್ದಳಂತೆ.
ಬೀರಬಲನ ವಿಷಯದಲ್ಲಿ ಉಂಟಾದ ಆಕ್ಷೇಪಗಳ ನಿರ್ಣಯ,
ಎಷ್ಟೋ ಜನ ಅಲ್ಪಬುದ್ಧಿಗಳಾದ ಮುಸಲ್ಮಾನರು ತಮ್ಮ ಮತಾನು ಯಾಯಿಗಳನ್ನು ಪ್ರಸನ್ನೀಕರಿಸಿಕೊಳ್ಳುವದಕ್ಕಾಗಿ, "ಮುಲ್ಲಾ ದುವ್ಯಾಜಿ " ಎಂಬವನು ಬೀರಬಲನನ್ನು ಮಾತಿನಲ್ಲಿ ಸೋಲಿಸಿರುವನೆಂದು ಹೇಳುತ್ತಾರೆ ಆದರೆ ಈ ಸಂಗತಿಯು ಪೂರ್ಣ ನಿರಾಧಾರವಾಗಿದೆ ಯಾಕಂದರೆ ಅಕಬರ ಬಾದಶಹನ ಕಾಲದಲ್ಲಿಯ ಯಾವಗ್ರಂಥಗಳಲ್ಲಿಯಾ “ಮುಲ್ಲಾದುವ್ಯಾಜಾ" ಎಂಬ ಮನುಷ್ಯನ ನಾಮನಿರ್ದೆಶವೇ ಇರುವದಿಲ್ಲ,


೧. ಚಾತುರ್ಯದಿಂದ ದೇವರನ್ನ ಗುರುತಿಸಬೇಕು.

ಅಕಬರ ಬಾದಶಹನ ಕಾಲದಲ್ಲಿ ಒಬ್ಬಾನೊಬ್ಬ ಚಿತ್ರಕಾರನು ಚಿತ್ರಕಲೆಯಲ್ಲಿ ಒಳ್ಳೆ ನಿಪುಣತೆಯನ್ನು ಹೊಂದಿದ್ದನು. ಪ್ರತಿಯೊಂದು ಭಾವವಟವನ್ನು ಸಿದ್ಧಪಡಿಸಬೇಕಾದರೆ ಐದುಸಹಸ್ರ ರೂಪಾಯಿಗಳ ಬೆಲೆಯನ್ನು ಹೇಳುತಿದ್ದನು. ಇವನ ಚಾತುರ್ಯವನ್ನು ಪರೀಕ್ಷಿಸಬೇಕೆಂದು ದೇವರು ಸಾವುಕಾರನ ವೇಷವನ್ನು ಧರಿಸಿಕೊಂಡು, ಅ ಚಿತ್ರಕಾರನ ಬಳಿಗೆ ಬಂದು ನುಡಿದದ್ದೇನಂದರೆ; - "ನೀನು ನನ್ನ ಭಾವಚಿತ್ರವನ್ನು ನನ್ನ ಪ್ರತಿಯೊಂದು ಅವಯವವಿದ್ದಂತೆ ಬರೆದು ಕೊಟ್ಟರೆ ನಿನಗೆ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಕೊಡುತ್ತೇನೆ" ಎಂದು ಹೇಳಿದನು. ಆಗ ಚಿತ್ರಕಾರನು ಆ ಸಾವುಕಾರನ ಮಾತಿಗೆ ಸಂತೋಪದಿಂದ ಒಪ್ಪಿಕೊಂಡನು ಮುಂದೆ ಸ್ವಲ್ಪದಿವಸಗಳ ಮೇಲೆ ಒಂದು ಚಿತ್ರವನ್ನು ಬರೆದುಕೊಂಡು ಬಂದು ಆ ಸಾಹುಕಾರನಿಗೆ ತೋರಿಸಿದನು. ಆಗ ಆ ಸಾವುಕಾರನು ತನ್ನ ಭಾವಚಿತ್ರವನ್ನು ಪರೀಕ್ಷಿಸ ಹತ್ತಲು ಒಂದು ಕಿವಿಯು ಸ್ವಲ್ಪ ಉದ್ದವಾಗಿದ್ದಂತೆ ಕಂಡು ಬಂತು ಕೂಡಲೆ ಇದು ಸರಿಯಾಗಿ ಇಲ್ಲವೆಂದು ಹೇಳಿ ಅದರೊಳಗಿನ ನ್ಯೂನತೆ

ನಮ್ಮಲ್ಲಿ ಕನ್ನಡ ವೇದಾಂತಗ್ರಂಥಗಳು ಕಾವ್ಯಗ್ರಂಥಗಳು, ಶಿವಪುರಾಣಗಳು ಚಾತುರವಾದ ಕಥೆಗಳು, ಜ್ಯೋತಿಷ್ಯಗ್ರಂಥಗಳು, ವೈದ್ಯಗ್ರಂಥಗಳು, ಯಕ್ಷಗಾನ ಗ್ರಂಥಗಳು, ವೀರಶೈವ ಮತಗ್ರಂಥಗಳು, ನಾಟಕಗಳು, ಕನ್ನಡ ಸಂಸ್ಕೃತ ಗ್ರಂಥಗಳು ಸಿಗುವವು, ಬೇಕಾದವರು ಬರದು ತರಿಸಿಕೊಳ್ಳಬಹುದು.

ನಮ್ಮ ವಿಳಾಸ;- ಶ್ರೀ. ಕ ನ್ನ ಯ್ಯ ಶೆ ಟ್ಟಿ

ಕರ್ನಾಟಕ ಬುಕ್ ಡಿಪೋ ಏಜಂಟ್ ಬಳ್ಳಾರಿ.

ಯನ್ನು ತೋರಿಸಿದನು ಆಗ ಚಿತ್ರಕಾರನು ಹಿಂದಕ್ಕೆ ಹೋಗಿ ನಾಲ್ಕಾರು

ದಿವಸದಲ್ಲಿ ಮತ್ತೊಂದು ಭಾವಪಟವನ್ನು ಬರೆದುಕೊಂಡು ಬಂದನು ಆಗ ಆ ಸಾವುಕಾರನು ಅದನ್ನು ನಿರೀಕ್ಷಿಸಹತ್ತಲು ಕೈಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಯುಂಟಾಗಿದ್ದಂತೆ ಕಂಡು ಬಂತು ಕೂಡಲೆ ಆಪಟವನ್ನು ಚಿತ್ರಕಾರನಿಗೆ ಕೊಟ್ಟನು ಈಪಕಾರ ಚಿತ್ರಕಾರನು ಅತಿಪ್ರಯಾಸ ಪಟ್ಟು ಸಿದ್ಧಪಡಿಸಿ ಕೊಂಡು ಬಂದಂಥ ಭಾವಚಿತ್ರದಲ್ಲಿ ಯಾವದಾದರೊಂದು ನ್ಯೂನತೆಯನ್ನು ತೋರಿಸ ಹತ್ತಲು. ಚಿತ್ರಕಾರನು ಉತ್ಸಾಹ ಹೀನವಾಗಿ ತನಗೆ ಆಪಯೆಶಸುಂಟಾ ಗುದೆಂಬ ಭೀತಿಯಿಂದ ಯಮುನಾನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ನಿಶ್ಚಯದಿಂದ ಯಮುನಾ ತಟಾಕಕ್ಕೆ ಹೋದನು. ಆಗ ದೈವಸಂಕಲ್ಪದಿಂದ ಬೀರಬಲನೆಂಬ ಒಬ್ಬ ಬಡಬ್ರಾಹ್ಮಣನು ಅಲ್ಲಿಗೆ ಬಂದನು. ವ್ಯಾಕುಲ ಚಿತ್ರನಾದ ಚಿತ್ರಕಾರನನ್ನು ಕಂಡು ಬೀರಬಲನು ಎಲೈ ಸದ್ಗೃಹಸ್ಥನೆ ನೀನು ಇಲ್ಲಿ ಈಪರಿ ಉದಾಸೀನನಾಗಿ ಕುಳಿತ ಕಾರಣವೇ ನು?” ಎಂದು ಪ್ರಶ್ನೆ ಮಾಡಿದನು ಆಗ ಚಿತ್ರಕಾರನು ತನ್ನ ಸಮಗ್ರವೃ ತ್ತಾoತವನ್ನು ಹೇಳಿದನು ಅದಕ್ಕೆ ಬೀರಬಲನು - ನೀನು ಏನೂ ಚಿಂತೆಮಾ ಡಬೇಡ ನಾನು ಆಸಾವುಕಾರನ ಇಚ್ಛಾನುಸಾರವಾಗಿ ಒಂದು ಚಿತ್ರವನ್ನು ಬರೆದು ಕೊಡುವೆನು ನನಗೆ ಒಂದು ಸಾರೆ ಆ ಸಾವುಕಾರನನ್ನು ತೋರಿಸು ಎಂದು ಹೇಳಿದನು.
ಬೀರಬಲನ ಮಾತಿಗೆ ಆಚಿತ್ರಲೇಖಕನು ಸಂತೋಷದಿಂದ ಸಮ್ಮತಿಸಿ ಅವನನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಅಸಾವುಕಾರನ ಬಳಿಗೆ ಹೋ ಗಹತ್ತಿದನು ಆಗ ಬೀರಬಲನು ಪೇಟೆಯಲ್ಲಿ ಒಂದು ದರ್ಪಣವನ್ನು ಕ್ರಯ ಕೈ ತೆಗೆದುಕೊಂಡು ಚಿತ್ರಕಾರನ ಬೆನ್ನು ಹತ್ತಿದನು ಇವರಿಬ್ಬರು ಅಸಾವು ಕಾರನ ಮನೆಯನ್ನು ಹೊಕ್ಕ ಕೂಡಲೆ ಅವನು ಇವರನ್ನು ನೋಡಿ " ಭಾವಪಟವು ಸಿದ್ಧವಾಯಿತೋ??” ಎಂದು ಪ್ರಶ್ನೆ ಮಾಡಿದನು ಆಗ ಬೀರಬಲನು ಮುಂದೆ ಬಂದು " ಅಹುದು. ಸಿದ್ಧವಾಗಿದೆ ” ಎಂದು ಉತ್ತರ ಕೊಟ್ಟು ತಾನು ತೆಗೆದುಕೊಂಡು ಬಂದ ದರ್ಪಣವನ್ನು ಆಸಾವುಕಾರನ ಎದುರಿಗೆ ಹಿಡಿ ದನು ಕೂಡಲೆ ಅವನ ಪ್ರತಿಬಿಂಬವು ದರ್ಪಣದಲ್ಲಿ ಕಾಣಹತ್ತಿತು ಆಗ ಸಾವುಕಾರನು ನಿರುಪಾಯನಾಗಿ ಆಚಿತ್ರಕಾರನಿಗೆ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಕೊಟ್ಟನು ಅವುಗಳನ್ನು ತೆಗೆದುಕೊಂಡು ಸಂತೋಷದಿಂದ ಚಿತ್ರಕಾರನು ಹೊರಟು ಹೋದನು. ಅವನು ಹೋದ ಮೇಲೆ ಬೀರಬಲನು ಆ ಸಾವುಕಾರನ ಪಾದಗಳಮೇಲೆ ಅಡ್ಡಬಿದ್ದು " ಮಹಾರಾಜ ! ನೀವು ಮ ನುಷ್ಯರಲ್ಲಿ ಮನುಷ್ಯರೂಪದಿಂದ ಪ್ರಕಟವಾದ ದೇವರಿದ್ದೀರಿ. ಆದ್ದರಿಂದ ನಾನು ನಿಮ್ಮ ಪಾದವನ್ನು ಬಿಡುವದಿಲ್ಲ.” ಎಂದು ನುಡಿಯಲು ದೇವರು ಇವನ ಚಾತುರ್ಯಕ್ಕೆ ಮೆಚ್ಚಿ ಪ್ರಕಟವಾಗಿ ಈ ದಿವಸದಿಂದ ನಿನ್ನ ಬುದ್ದಿಸಾಮರ್ಧ್ಯವು ಹೆಚ್ಚಾಗಲಿ ಎಂದು ವರವನ್ನು ಕೊಟ್ಟು ಅಂತರ್ಧಾನನಾದನು. ಆ ದಿವಸದಿಂದ ಬೀರಬಲನ ಕೀರ್ತಿಯು ಜಗತ್ತಿನಲ್ಲಿ ಪಸರಿಸ ಹತ್ತಿತು ಆಚಿ ತ್ರಪಟದಲ್ಲಿ ಒಂದಿಲ್ಲ ಒಂದು ನ್ಯೂನತೆಯನ್ನು ಮೇಲಿಂದ ಮೇಲೆ ತೋರಿಸ ಹತ್ತಿದ್ದರಿಂದ ಬೀರಬಲನು ತನ್ನ ಬುದ್ಧಿ ಚಾತುರ್ಯದಿಂದ ಇವನು ಸಾಮಾ ನ್ಯ ಮನುಷ್ಯನಲ್ಲ ದೇವರೇ ಈ ರೂಪದಿಂದ ಅವತರಿಸಿದ್ದಾನೆಂದು ನಿಶ್ಚಯಿ ಸಿಕೊಂಡು ಅವನ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡನು ಆ ದಿವಸ ದಿಂದ ಈ ಬುದ್ಧಿಚಾತುರ್ಯದಿಂದ ದೇವರನ್ನು ಕಂಡು ಹಿಡಿದನು ಎಂದು ಬಿ ರಬಲನ ಖ್ಯಾತಿಯು ಜಗತ್ತಿನಲ್ಲೆಲ್ಲ ಪಸರಿಸಿತು.

೨ ಗೋಮಹಿಮೆ.

ಒಂದು ದಿವಸ ಬಾದಶಹನ ದರಚಾರದಲ್ಲಿ ಗೋಪ್ರಶಂಸೆಯ ಮಾತು ಹೊರಟಿತು ಆಗ ಒಬ್ಬ ಮುಸಲ್ಮಾನನು ಎದ್ದು ನಿಂತು “ ನಮ್ಮ ಮತ ಗ್ರಂ ಥಗಳಲ್ಲಿ ಗೋಕ್ಷೀರವು ಸ್ವಾಸ್ಥ್ಯವನ್ನುಂಟು ಮಾಡುವದೆಂತಲೂ ಮಾಂಸ ವು ದೇಹದಲ್ಲಿ ಅಸ್ವಾಸ್ಥ್ಯತೆಯನ್ನು ಹೆಚ್ಚಿಸುವದೆಂತಲೂ ಹೇಳಿರುವರು ಎಂದನು ಆಗ ಬೀರಬಲನು ತಕ್ಷಣಕ್ಕೆ ನುಡಿದದ್ದೇನಂದರೆ ನಿಮ್ಮ ಹೇ ಆಕೆಯಂತೆ ಗೋರವು ಪ್ರಶಂಸಾರ್ಹವಾದದ್ದರಿಂದಲೇ ನಿಮ್ಮ ಕುರಾನ ಗ್ರಂಥದ ಆರಂಭದಲ್ಲಿ, ಬಕರ ಪ್ರಾಣಿಯ ಚಿತ್ರವನ್ನು ಬರೆದಿದ್ದಾರೆ” ಎಂ ದು ಹೇಳಿದನು ಈಮಾತನ್ನು ಕೇಳಿ ಬಾದಶಹನಿಗೆ ನಗೆಯುಬಂತು.
ಪಾರಸಿಭಾಷೆಯಲ್ಲಿ ಗೋವಿಗೆ ಬಕರ” ವೆಂದು ಅನ್ನುತ್ತಾರೆ.

೩ ಎರಡುತಿಂಗಳು ಕೂಡಿಸಿ ಒಂದೇ ತಿಂಗಳು.

ಒಂದು ದಿವಸ ಬಾದಶಹನು ಬೀರಬಲನನ್ನು ಕುರಿತು “ ನಾನು ಈದಿ ವಸದಿಂದ ಎರಡುತಿಂಗಳು ಕೂಡಿಸಿ ಒಂದೇ ತಿಂಗಳನ್ನು ಮಾಡಬೇಕೆಂದು ನಿಶ್ಚಯಿಸಿದ್ದೇನೆ” ಎಂದು ಹೇಳಿದನು ಆಗ ಬೀರಬಲನು ಖಾವಿಂದ ಹಾಗೆ ಮಾಡಿದರೆ ಬಹಳೇ ನೆಟ್ಟಗಾಗುವದು; ಯಾಕಂದರೆ ಸಂಪೂರ್ಣ ಒಂ ದುತಿಂಗಳಮಟ್ಟಿಗೆ ಬೆಳದಿಂಗಳು ಇರುವಂತಾಯಿತು” ಈ ಮಾತನ್ನು ಕೇಳಿ ಬಾದಶಹನು ಲಜ್ಜಿತನಾದನು,

೪ ಇದಾದರೂ ನಮ್ಮದೇ ಅದೆ.

ಒಂದುದಿವಸ ಬೀರಬಲನು ಭೋಜನಾನಂತರ ಹೊಟ್ಟೆಯಮೇಲೆ ಕೆ

ಯಾಡಿಸಿಕೊಳ್ಳುತ್ತ ಕುಳಿತಿದ್ದನು ಅದನ್ನು ಒಬ್ಬ ಬೋದದಾರನು ಕಂಡು

ಅನ್ನುತ್ತಾನೆ; ಎಂಥಾ ಉತ್ತಮವಾದ ಹೊಟ್ಟೆಯಿರುವುದು? ” ಬೀರಬಲನು ಅನ್ನುತ್ತಾನೆ; -ನೀನೂ ಇಟ್ಟುಕೊ ನಾನು ನೋಡುತ್ತೇನೆ” ಆಗ ಚೋಪದಾರನು ನಕ್ಕು- ಇದಾದರೂ ನಮ್ಮದೇ ಅದೆ ನಾನೇ ಹಾಗೆ ಮಾಡಿಟ್ಟುಕೊಳ್ಳುವ ಕಾರಣವಿಲ್ಲ” ಎಂದನು ಬಿರುಬಲನು ನಗುತ್ತ ಎದ್ದು ಹೋದನು.

೫ ತಾವು ಬಾದಶಹರು ಹ್ಯಾಗಾಗುತ್ತಿದ್ದೀರಿ

ಅಕಬರ ಬಾದಶಹನು ಅನ್ನುತ್ತಾನೆ; ಈ ಅರಸುತನವು ಬಾದ ಸಾಹಿತ್ಯವು ಎಂದೂ ನಷ್ಟವಾಗದಿದ್ದರೆ ಎಂಥಾ ಉತ್ತಮವಾಗುತ್ತಿತು? ? ಬೀರಬಲನು ಅನ್ನುತ್ತಾನೆ; ಹಾಗಾಗಿದ್ದರೆ ತಮಗೆ ಬಾದಶಹರಾಗುವ ಸಂಧಿಯು ಹ್ಯಾಗೆ ದೊರೆಯುತ್ತಿತ್ತು? ”

೬ ಕೂರ ಮತ್ತು ಅಂಜುಗುಳಿ.

ಒಂದು ದಿವಸ ಬಾದಶಹನು ಬೀರಬಲನಿಗೆ ಹೇಳಿದ್ದೇನಂದರೆ - ಒಬ್ಬ ಕೂರನನ್ನೂ ಮತ್ತು ಒಳ್ಳ ಅಂಜುಗುಳಿಯನ್ನೂ ಈ ಪಟ್ಟಣದಲ್ಲಿ ಹು ಡಿಕಿಕೊಂಡು ಕರೆದುಕೊಂಡು ಬಾ' ಎಂದು ಅಪ್ಪಣೆಯನ್ನಿತ್ತನು ಕೂಡಲೆ ಬೀರಬಲನು ಪೇಟೆಯೊಳಗೆ ಹೋಗಿ ಒಬ್ಬಸ್ತ್ರೀಯನ್ನು ಕರೆದುಕೊಂಡುಬಂ ದನು ಆಗ ಬಾದಶಹನು ಕೇಳುತ್ತಾನೆ? ನಾನು ಇಬ್ಬರನ್ನು ಕರೆದುಕೊಂ ಡು ಬಾ, ಎದು ಹೇಳಿದ್ದು ನೀನು ಒಬ್ಬಳನ್ನೇ ಯಾಕೆ ಕರಿದುಕೊಂಡು ಬಂದಿ ?
ಬೀರಬಲನು ಅನ್ನುತ್ತಾನೆ;-ಪೃಥ್ವಿನಾಥ ! ಈ ಸ್ತ್ರೀಯು ಕೂ ರಳ, ಮತ್ತು ಅಂಜುಗುಳಿಯೂ ಆಗಿದ್ದಾಳೆ.
ಬಾದಶಹ-ಅದು ಹ್ಯಾಗೆ ?
ಬೀರಬಲ ವರ್ಷಾಕಾಲದ ಅಂಧಕಾರಯುಕ್ತವಾದ ಅರ್ಧರಾತ್ರಿಯ ಸಮ ಯದಲ್ಲಿ ಇವಳು ಹೆದರದೆ ತನ್ನ ಪ್ರಾಣದಾಸೆಯನ್ನುಳಿದು ನಗರ ರಕ್ಷ ಕರ ಕಾವಲಿನೊಳಗಿಂದ ತಪ್ಪಿಸಿಕೊಳ್ಳುತ್ತ ತನ್ನ ಪ್ರಿಯನ ಮನೆಗೆ ಹೋಗುತ್ತಿರುವಳು; ಅಂದಮೇಲೆ ಇವಳಂಥರಳು ದೊರಕುವದೆಲ್ಲಿ ಮತ್ತು ತನ್ನ ಮನೆಯಲ್ಲಿದ್ದಾಗ ರಾತ್ರಿಯಲ್ಲಿ ಮೂಷಕಗಳ ಓಡಾಟದ

ಸಪ್ಪಳವನ್ನು ಕೇಳಿದ ಕೂಡಲೆ ಭೀತಿಗ್ರಸ್ತಳಾಗಿ ನಡುಗ ಹತ್ತುವಳು ಅಂದಮೇಲೆ ಇವಳಂಥ ಭೀರುವು ಎಲ್ಲಿಯಾದರೂ ದೊರಕುವಳೇ

೬ ನಿಜವಾದ ಮೈಗಳ್ಳ.

ಒಂದುಸಾರೆ ಬಾದಶಹನು ಡಿಲ್ಲಿಯೊಳಗಿದ್ದ ಎಲ್ಲ ಮೈಗಳ್ಳರನ್ನು ಕೂ ಡಿಸಿ, ಇವರಿಗೆ " ನನ್ನ ಬೊಕ್ಕಸದೊಳಗಿಂದ ಊಟ ಉಡಿಗೆಗಳನ್ನು ಕೊಡ ಬೇಕು ಮತ್ತು ಇಂಥ ಅನ್ಯಜನ ರಾರಾದರೂ ಬಂದರೆ ಅವರನ್ನು ಸಹಾ ಪೋಷಣೆ ಮಾಡತಕ್ಕದ್ದು” ಎಂದು ಕಟ್ಟಪ್ಪಣೆ ಮಾಡಿದನು ಆಗ ಈವಾರ್ತೆ ಯನ್ನು ಕೇಳಿದವರೆಲ್ಲರೂ ನಾನೂ ಮೈಗಳ್ಳ ನೀನೂ ಮೈಗಳ ಎಂದು ಆನ್ನು ತ, ದಿಲ್ಲಿಯಲ್ಲಿ ಬಂದು ಕೂಡಹತ್ತಿದರು ಇದನ್ನು ಕಂಡು ಬಾದಶಹನಿಗೆ ಅತ್ಯಾಶ್ಚರ್ಯವಾಯಿತು ಆಗ ಬಾದಶಹನು ಬೀರಬಲನನ್ನು ಕರೆದು ಇವರಲ್ಲಿ ನಿಜವಾದ ಮೈಗಳ್ಳರು ಎಷ್ಟು ಮಂದಿ ಇರುವರೆಂಬದನ್ನು ಹುಡಿಕಿ ತೆಗೆ” ಎಂದು ಅಪ್ಪಣೆ ಮಾಡಿದನು ಆಗ ಬೀರಬಲನು ಪಟ್ಟಣದ ಬಹಿರ್ಭಾಗದಲ್ಲಿ ಒಂ ದುಹುಲ್ಲಿನ ಚಪ್ಪರವನ್ನು ಹಾಕಿಸಿ ಮೈಗಳ್ಳರೆಲ್ಲರೂ ಆಚಪ್ಪರದಲ್ಲಿ ಹೋಗಿ ಇರಬೇಕು ಎಂದು ಅಪ್ಪಣೆಮಾಡಿದನು ಮುಂದೆ ಕೆಲವು ದಿವಸಗಳಾದಮೇಲೆ ರಾತ್ರಿಯಲ್ಲಿ ಅವರೆಲ್ಲರೂ ಮಲಗಿಕೊಂಡಿರುವಸಮಯದಲ್ಲಿ ಆಚಪ್ಪರಕ್ಕೆ ಬೆಂಕಿಯನ್ನು ಹಚ್ಚಿಸಿ ಬಿಟ್ಟನು ಆಗ ಮೈಗಳ್ಳರೆಂದು ಕೂಡಿಕೊಂಡಿದ್ದ ಎಷ್ಟೋ ಜನರು ಗಾಬರಿಯಾಗಿ ತಮ್ಮ ತಮ್ಮ ಜೀವವನ್ನುಳಿಸಿಕೊಳ್ಳಬೇಕೆಂದು ಸಿ ಕ್ಕಸಿಕ್ಕ ಕಡೆಗೆ ಓಡಿಹೋದರು ಅಲ್ಲಿ ನಿಜವಾದ ಮೈಗಳ್ಳರು ಇಬ್ಬರೇ ಉಳಿದ ರು ಅವರನ್ನು ಕರೆದುಕೊಂಡು ಬಾದಶಹನಬಳಿಗೆ ಬಂದನು. ಬೀರಬಲನ ಈ ಚಾತುರ್ಯದಿಂದ ಬಾದಶಹನು ಸಂತುಷ್ಟನಾದನು.

೮ ಕಡುಲೋಭಿಯಾದ ಮನುಷ್ಯ.

ದಿಲ್ಲಿಯಲ್ಲಿ ಒಬ್ಬ ಕಡುಲೋಭಿಯಾದ ಮನುಷ್ಯನಿದ್ದನು. ಒಬ್ಬ ಕವಿ ಯು ಆ ಮನುಷ್ಯನ ಸ್ತುತಿಯುಕ್ತವಾದ ಒಂದು ಕವಿತೆಯನ್ನು ರಚಿಸಿ ಕೊಂಡು ಆ ಲೋಭಿಯಾದ ಮನುಷ್ಯನ ಮನೆಗೆ ಬಂದನು. ಆಗ ಲೋಭಿಯು ತನ್ನ ಮನಸ್ಸಿನಲ್ಲಿ ತಿಳಿದುಕೊಂಡದ್ದೇನಂದರೆ ಈ ಮನುಷ್ಯನು ನನ್ನನ್ನು ಪ್ರಸನ್ನೀಕರಿಸಿಕೊಂಡು ಏನಾದರೂ ಪಾರಿತೋಷಕವನ್ನು ಹೊಂದ ಬೇಕೆಂಬ ಆಸೆಯಿಂದ ಬಂದಂತೆ ಕಾಣುತ್ತದೆ, ಇರಲಿ ನಾನು ನನ್ನ ಸ್ತುತಿಪ ರವಾದ ಕವನವನ್ನು ಕೇಳಿ ಸಂತೋಷಯುಕ್ತನಾದ ಮೇಲೆ ಬರಿಯ ಮಾತಿ ನಿಂದಲೇ ಇವನನ್ನು ತೃಪ್ತಿಗೊಳಿಸಿ ಹಿಂದಿರುಗಿ ಕಳುಹಿಸಿಬಿಟ್ಟರಾಯಿತು ಎಂದು ಯೋಚಿಸಿಕೊಂಡು, ಆ ಕವಿಯನ್ನು ಒಳ್ಳೆ ಮರ್ಯಾದೆಯಿಂದ ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡು, ಬಂದಕಾರ್ಯವೇನೆಂದು ಪ್ರಶ್ನೆ ಮಾಡಿದನು ಆಗ ಕವಿಯು ತಾನುಮಾಡಿದ ಕವಿತ್ವವನ್ನು ಹೇಳಿದನು ಆಗ ಲೋಭಿಯು " ಅಂದದ್ದೇನಂದರೆ- “ ವಾಹಾವ್ವಾ  ? ಕವಿರಾಜ ಬಹಳೇ ಉತ್ತಮವಾದ ಪಠ್ಯ ವನ್ನು ರಚಿಸಿರುವಿರಿ ಪ್ರಾಸಗಳೂ ಅನುಪ್ರಾಸಗಳೂ ಸರಿಯಾಗಿ ಕೂಡಿವೆ, ನೀವು ನಾಳೆ ನನಗೆ ಬೆಟ್ಟಿಯಾಗಿರಿ ಅಂದರೆ ನಿಮ್ಮ ಮನಸ್ಸನ್ನು ತೃಪ್ತಿ ಬಡಿ ಸುವೆನು ” ಎಂದು ಮಧುರವಚನಗಳಿಂದ ಸತ್ಕರಿಸಿ,ಕವಿಯನ್ನು ಕಳುಹಿಸಿ ಕೊಟ್ಟನು ಆ ಕವಿಗೆ ತುಂಬಾ ಆನಂದವಾಯಿತು.
ಮರುದಿವಸ ಆ ಕವಿಯು ಪುನಃ ಆ ಲೋಭಿಯ ಬಳಿಗೆಬಂದನು ಆಗ ಲೋಭಿಯು ಏನೂ ಅರಿಯದವನಂತೆ ನಟಿಸಿ, “ ನೀವು ಯಾರು ? ಇಲ್ಲಿಗೆ ಯಾತಕ್ಕೆ ಬಂದಿರಿ ” ಎಂದು ಪ್ರಶ್ನೆ ಮಾಡಿದನು, ಆಗ ಕವಿಯು ನಾನುನಿನ್ನೆ ತಮ್ಮ ಸ್ತುತಿಯುಕ್ತವಾದ ಒಂದು ಪದ್ಯವನ್ನು ರಚಿಸಿ ತಮ್ಮೆದುರಿಗೆ ಹೇಳಿ ದ್ದೆನು, ಆ ಕವನದಿಂದ ತಾವು ಹರ್ಷಚಿತ್ತರಾಗಿ ನಾಳಿಗೆ ಬರಬೇಕೆಂದು ಅಪ್ಪ ಣೆಮಾಡಿದಿರಿ ಇವರಲ್ಲಿ ನನ್ನ ಪರಿಚಯವನ್ನು ಮರೆತುಬಿಟ್ಟರಾ ! ಎಂದು ಕೇಳಿದನು. ಕೂಡಲೆ ಲೋಭಿಯು ಅನ್ನುತ್ತಾನೆ:- ನಿನ್ನಿನ ಮಾತು ನಿನ್ನೆ ಆಗಿಹೋಯಿತು, ಈ ದಿವಸ ಆ ಮಾತಿನಿಂದ ಪ್ರಯೋಜನವೇನು ? ನೀವು ನಿನ್ನೆ ಪದ್ಯವನ್ನು ಹೇಳಿ ನನ್ನ ಮನಸ್ಸನ್ನು ಸಂತೋಷಪಡಿಸಿದಂತೆ ನಾನಾ ದರೂ ಮಾತಿನಿಂದಲೇ ನಿಮ್ಮನ್ನು ತೃಪ್ತಿಗೊಳಿಸಿ ಅಪ್ಪಣೆ ಕೊಟ್ಟು ಬಿಟ್ಟಿದ್ದೆನು, ನೀವು ಮಾಡಿದಂತೆ ನಾನಾದರೂ ಮಾಡಿಬಿಟ್ಟಿದ್ದೇನೆ. ” ಎಂದು ನುಡಿಯಲು ಭಗ್ನ ಮನೋರಥನಾಗಿ ಕವಿಯು ಹಿಂದಕ್ಕೆ ಬಂದನು.
ಮುಂದೆ ಒಂದುದಿವಸ ಆ ಕವಿಯ ಸ್ನೇಹಿತನೊಬ್ಬನು ದಿಲ್ಲಿಗೆ ಬಂದನು, ಅವನೆದುರಿಗೆ ಆ ಲೋಭಿಯ ಸಂಗತಿಯನ್ನು ಹೇಳುತ್ತ ನಿಂತುಕೊಂಡಿದ್ದನು ಅಷ್ಮರಲ್ಲಿ ಬೀರಬಲನು ಅಲ್ಲಿಗೆ ಬಂದನು, ಅವರು ಮಾತಾಡುತ್ತಿರುವ ಮಾತುಗಳೆಲ್ಲ ಇವನಿಗೆ ಕೇಳಬಂದವು ಆಗ ಅವನು ಮುಂದೆಬಂದು, ನೀವಿ ಬ್ಬರೂ ಕೂಡಿಕೊಂಡು ಏನೇನು ಮಾತಾಡುತ್ತಿರುವಿರಿ ! ನನ್ನೆದುರಿಗೆ ಹೇ ಳುವದಕ್ಕೆ ಸಾಧ್ಯವಿದ್ದರೆ ಹೇಳಬಹುದು " ಎಂದು ಕೇಳಿದನು ಅವರಿಬ್ಬರೂ ಬೀರಬಲನನ್ನು ಗುರುತಿಸಿದರು ಅವನೆದುರಿಗೆ ಯಾವತ್ತೂ ಸಂಗತಿಯನ್ನು ವಿಶದಪಡಿಸಿದರು, ಆಗ ಅವರಿಬ್ಬರನ್ನೂ ಕರೆದುಕೊಂಡು ಬೀರಬಲನು ತನ್ನ ಮನೆಗೆ ಬಂದನು.
ಮನೆಗೆ ಬಂದಮೇಲೆ ಬೀರಬಲನು ಆ ಕವಿಯನ್ನು ಕುರಿತು, “ ಕವಿ ರಾಜ ! ನೀನು ಈ ದಿವಸದಿಂದ ನಾಲ್ಕೈದು ದಿವಸಗಳಾದಮೇಲೆ ಈ ನಿಮ್ಮ ಮಿತ್ರನನ್ನು ಲೋಭಿಮನುಷ್ಯನ ಮನೆಗೆ ಕಳುಹಿಕೊಡಿರಿ ಇವರು ಹೋ ಗಿ ಅವನೊಡನೆಯೇ ಸಲಿಗೆಯನ್ನು ಬೆಳೆಸಲಿ, ಈಪ್ರಕಾರ ಪರಸ್ಪರರಲ್ಲಿ ಸ್ನೇಹವು ವೃದ್ಧಿಯಾದಮೇಲೆ ಅವನನ್ನು ನಿಮ್ಮ ಮನೆಗೆ ಭೋಜನಕ್ಕೆ ಬರ ಬೇಕೆಂದು ಆಮಂತ್ರಣ ಕೊಡಿರಿ; ಅಂದರೆ ಅವನು ಬಂದೇಬರುವನು ಆ ದಿವಸ ನನಗೂ ಭೋಜನಕ್ಕೆ ಹೇಳಿರಿ ಅಂದರೆ ಮುಂದಿನ ಯಾವತ್ತೂ ಸಂಗತಿ ಯನ್ನು ವಿಚಾರಮಾಡೋಣ ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟನು.
ಆ ಕವಿಗಳಿಬ್ಬರೂ ಚತುರರಿದ್ದರು ಬೀರಬಲನ ಆಶಯವು ತಿಳಿದುಬಂದಿತು, ಮುಂದೆ ಸ್ವಲ್ಪದಿವಸಗಳಾದ ಮೇಲೆ ಆ ಎರಡನೇ ಕವಿಯ ಆ ಲೋಭಿಯೊಡನೆ ಸ್ನೇಹವನ್ನು ಬೆಳಿಸಿ ದಿನಾಲು ಅವನಮನೆಗೆ ಹೋಗಿ ಬರಹತ್ತಿ ದನು, ಈಪ್ರಕಾರ ಕೆಲವು ದಿವಸಗಳಲ್ಲಿ ಅವರಿಬ್ಬರ ನಡುವೆ ದೃಢವಾದ ಮೈತ್ರಿಯುಂಟಾಯಿತು, ಎರಡನೇಕವಿಯು ಆ ಲೋಭಿಗೆ ಒಂದುದಿವಸ ಔತಣ ಕೊಟ್ಟನು, ಅದರಂತೆ ಬೀರಬಲನಿಗೂ ತನ್ನ ಮಿತ್ರನಿಗೂ ಔತಣಕೊಟ್ಟನು ಅವರಿಬ್ಬರೂ ತಮ್ಮ ವೇಷವನ್ನು ಮರೆಮಾಚಿಕೊಂಡು ಊಟಕ್ಕೆ ಬಂದರು, ಸ್ವಲ್ಪ ಹೊತ್ತಿನೊಳಗಾಗಿ ಆ ಲೋಭಿಯೂ ಅಲ್ಲಿಗೆ ಬಂದನು. ಕವಿಯು ಆ ಲೋಭಿಗೆ ವಿಶೇಪವಾಗಿ ಆದರದ ಸತ್ಕಾರ ಮಾಡಿದನು; ಆ ಲೋಭಿಯು ಇವರನ್ನು ಗುರುತಿಸಲಿಲ್ಲ ಎಲ್ಲರೂ ಮಾತಾಡುತ್ತ ಕುಳಿತುಕೊಂಡರು ಸಂಜೆಯಾ ಗುತ್ತ ಬಂತು, ಆದರೆ ಭೋಜನದ ಮಾತೇ ಹೊರಡಲಿಲ್ಲ ಲೋಭಿಯಹೊರತು ಉಳಿದವರೆಲ್ಲರೂ ತಮ್ಮ ತಮ್ಮ ಮನೆಯಲ್ಲಿ ಊಟವನ್ನು ತೀರಿಸಿಕೊಂಡೇ ಬಂದಿದ್ದರು, ಲೋಭಿಯುಮಾತ್ರ ಉಪವಾಸವಾಗಿಯೇ ಇದ್ದನು ಇದರಿಂದ ಅವನುಬೇಸತ್ತು ಕಟ್ಟ ಕಡೆಗೆ " ಇನ್ನೂ ಭೋಜನವಾಗಬೇಕಾದರೆ ಎಷ್ಟು ಸಮಯವುಬೇಕು ? ಏನಾದರೂ ಸಿದ್ಧತೆಯನ್ನು ಮಾಡಿರುವಿರೋ ” ಎಂದು ಪ್ರಶ್ನೆ ಮಾಡಿದನು. ಆಗ ಕವಿಯ ಮಿತ್ರನು - ಯಾತರಸಿದ್ಧತೆ ? ” ಎಂದು ಕೇಳಿದನು. ಲೋಭಿಯು ಅನ್ನುತ್ತಾನೆ; - ನೀವು ನನಗೆ ಭೋಜನಕ್ಕೆ ಆಮಂತ್ರಣ ಕೊಟ್ಟಿಲ್ಲವೋ ? ” ಎಂದು ಕೇಳಿದನು. ಆಗ ಬೀರಬಲನು “ ನಾನು ನಿಮ್ಮನ್ನು ಪ್ರಸನ್ನಿಕರಿಸಿಕೊಳ್ಳಬೇಕೆಂದು ಆಮಂತ್ರಣವನ್ನು ಹೇಳಿದ್ದೆನು, ಇಷ್ಟೇ ಹೊರತು ಅನ್ಯಥಾ ಇಲ್ಲ. ನಾವೆಲ್ಲರೂ ಭೋಜನ ತೀರಿಸಿಕೊಂಡೇ ಕುಳಿತಿದ್ದೇವೆ” ಎಂದು ಹೇಳಿದಕೂಡಲೆ ಲೋಭಿಯ ಕಣ್ಣು ಕೆಂಪಗಾದವು ಅವರೊಡನೆ ಲೋಭಿಯು ಹೊಡೆದಾಡಹತ್ತಿದನು. ಆಗ ಬೀರ ಬಲನು ತನ್ನ ವೇಷವನ್ನು ತೆಗೆದುಚೆಲ್ಲಿ ಅವರೆದುರಿಗೆ ನಿಂತುಕೊಂಡು “ಸದ್ಗ್ರ ಹಸ್ಥನೇ ನೀನು ಹಿಂದಕ್ಕೆ ಇದೇ ಪ್ರಕಾರವಾಗಿ ಒಬ್ಬ ಕವಿಗೆ ಚೇಷ್ಠೆಯನ್ನು ನ್ನು ಮಾಡಿದ್ದಿಲ್ಲವೇ ? ಅವನಿಗೆ ಅದರಿಂದ ಎಷ್ಟು ಕಷ್ಟವಾಗಿದ್ದೀತು ? ?? ಎಂದು ಕೇಳಿದನು. ಅದಕ್ಕೆ ಲೋಭಿಯು ಆ ಕವಿಯು ಯಾರು ? ನಾನುಚೆ ಷ್ಟೆ ಮಾಡಿದ್ದೆಲ್ಲಿ ? ಕಷ್ಟವುಂಟಾದದ್ದು ಯಾರಿಗೆ ? ಎಲ್ಲವೂ ಚಮತ್ಕಾರವಾಗಿಯೇ ಕಾಣುತ್ತದೆ, ಈಪ್ರಕಾರ ಕೇಳುವವನು ನೀನು ಯಾರು ?" ಎಂದು ಸಿಟ್ಟಿಗೆದ್ದು ಕೇಳಿದನು. ಆಗ ಬೀರಬಲನು ಹೇಳುತ್ತಾನೆ;- "ನಾನು ಬೀರಬಲನು, ಇದೋ ನಿನ್ನಿಂದ ಅವಮಾನಿತನಾದ ಕವಿಯೇ ಇವನು, ಇವನನ್ನು ನೀನು ಈಗ ಪ್ರಸನ್ನೀಕರಿಸಿಕೊಳ್ಳದಿದ್ದರೆ ನಿನಗೆ ಯೋಗ್ಯವಾದ ದಂಡನೆಯನ್ನು ವಿಧಿಸುವೆನು” ಎಂದು ಹೇಳಿದ ಕೂಡಲೆ ಲೋಭಿಯು ಕೆಲವು ರೂಪಾಯಿಗಳನ್ನು ಆ ಕವಿಗೆ ಕೊಟ್ಟು ಪ್ರಸನ್ನನಾಗಿ ಮಾಡಿಕೊಂಡನು

-(೯. ಕನ್ನಡಿಯಲ್ಲಿ ಚಿತ್ರ)-

ದಿಲ್ಲಿಯಲ್ಲಿ ಒಬ್ಬ ಧನವಂತನಾದ ಗೃಹಸ್ಥನಿದ್ದನು. ಅವನು ತನ್ನ ಅವಯವಗಳನ್ನು ಬೇಕಾದ ಹಾಗೆ ಹೆಚ್ಚು ಕಡಿಮೆ ಮಾಡಿಕೊಳ್ಳುವ ಸಾಧನೆಯನ್ನು ಅರಿತವನಾಗಿದ್ದನು. ಅವನು ಒಂದು ದಿವಸ ಒಬ್ಬ ಚತುರನಾದ ಚಿತ್ರಲೇಖನನ್ನು ಕರೆದು ತನ್ನ ಭಾವಪಟವನ್ನು ಸರಿಯಾಗಿ ತೆಗೆದುಕೊಂಡುಬಾ ಎಂದು ಅಪ್ಪಣೆಯನ್ನಿತ್ತನು. ಆ ಚಿತ್ರಗಾರನು ಅದರ ಮೌಲ್ಯವನ್ನು ಗೊತ್ತು ಮಾಡಿಕೊಂಡು ಸ್ವಲ್ಪ ದಿವಸಗಳಲ್ಲಿಯೇ ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೊರಟುಹೋದನು. ಮುಂದೆ ಕೆಲವು ದಿವಸಗಳಾದ ಮೇಲೆ ಚಿತ್ರವನ್ನು ಸಿದ್ಧಪಡಿಸಿಕೊಂಡು ಆ ಧನವಂತನ ಬಳಿಗೆ ಬಂದನು. ಆಗ ಸಾವುಕಾರನು ತನ್ನ ರೂಪದಲ್ಲಿ ಹೆಚ್ಚು ಕಡಿಮೆ ಮಾಡಿಕೊಂಡು ತನ್ನ ರೂಪಕ್ಕೂ ಆ ಚಿತ್ರಕ್ಕೂ ಸರಿಯಾಗಿಲ್ಲವೆಂದು ಹೇಳಿದನು. ಆಗ ಚಿತ್ರಗಾರನಿಗೆ ಅತ್ಯಾಶ್ಚರ್ಯವಾಯಿತು ಕೂಡಲೆ ಅವನು ತನ್ನ ತಪ್ಪನ್ನು ಒಪ್ಪಿಕೊಂಡು ಎರಡನೆ ಭಾವಪಟವನ್ನು ತೆಗೆದುಕೊಂಡು ಬರುತ್ತೇನೆಂದು ಹೇಳಿ ಮನೆಗೆ ಬಂದನು. ಮುಂದೆ ನಾಲ್ಕಾರು ದಿವಸಗಳಲ್ಲಿ ಒಳ್ಳೆ ಶ್ರಮಪಟ್ಟು ಮತ್ತೊಂದು ಚಿತ್ರವನ್ನು ಬರೆದುಕೊಂಡು ಬಂದನು. ಆಗ ಸಹ ತನ್ನ ಮುಖಚಹರೆಯನ್ನು ಪರಿವರ್ತನ ಮಾಡಿಕೊಂಡು ಸರಿಯಾಗಿಲ್ಲವೆಂದು ಹೇಳಿ ಹಿಂದಕ್ಕೆ ಕಳುಹಿಬಿಟ್ಟನು. ಈಪ್ರಕಾರ ಚಿತ್ರಗಾರನು ಯಾವ ಯಾವಾ ಚಿತ್ರವನ್ನು ತಂದು ತೋರಿಸಹತ್ತಿದನೋ ಆಗ ತನ್ನ ರೂಪದಲ್ಲಿ ಪರಿವರ್ತನಮಾಡಿಕೊಂಡು ಸರಿಯಾಗಿಲ್ಲ ಎಂದು ಹೇಳಿ ಹಿಂದಕ್ಕೆ ಕಳುಹಿಸುತ್ತಿದ್ದನು. ಈಪ್ರಕಾರ ತನ್ನ ಪ್ರಯತ್ನವು ನಿಷ್ಪಲವಾಗ ಹತ್ತಿದ್ದನ್ನು ಕಂಡು ಚಿತ್ರಗಾರನು ಬೇಸತ್ತು, ತನ್ನ ಶ್ರಮದ ಫಲವನ್ನು ಕೊಡಬೇಕೆಂದು ಕೇಳಿದನು. ಆಗ ಧನವಂತನು - ನೀನು ಭಾವಪಟವನ್ನೇ ಸರಿಯಾಗಿ ಲೇಖನಮಾಡಿಕೊಂಡು ಬರಲಿಲ್ಲ, ನಾನು ಕ್ರಯ ವನ್ನು ನಿನಗೆ ಹ್ಯಾಗೆ ಕೊಡಬೇಕು!” ಎಂದನು. ಆಗ ಅವರಿಬ್ಬರ ನಡುವೆ ವಾದ ವಿವಾದವಾಗಿ ಕಡೆಗೆ ಚಿತ್ರಗಾರನು ಬೀರಬಲನ ಕಡೆಗೆ ಬಂದು ತನ್ನ ಸಂಗತಿಯನ್ನೆಲ್ಲ ಅರಿಕೆಮಾಡಿಕೊಂಡನು, ಆಗ ಬೀರಬಲನು ಚಿತ್ರಗಾರನಿಂದ ಲೇಖಿಸಲ್ಪಟ್ಟ ಐದು ಚಿತ್ರಗಳನ್ನು ಚೆನ್ನಾಗಿ ಪರಿಶೀಲನಮಾಡಿ ನೋಡಿ ಆ ಮನುಷ್ಯನಲ್ಲಿ ತನ್ನ ರೂಪದಲ್ಲಿ ಪರಿವರ್ತನಮಾಡಿಕೊಳ್ಳುವ ಶಕ್ತಿಯುಳ್ಳ ವನಾಗಿರ ಬಹುದೆಂದು ನಿಶ್ಚಯಿಸಿ ಆ ಚಿತ್ರಗಾರನನ್ನು ಕುರಿತು ಅನ್ನುತ್ತಾನೆ;- ನೀನು ಇನ್ನು ಮೂರು ದಿವಸಗಳಾದ ಮೇಲೆ ಒಂದು ನಿಲುಗನ್ನಡಿಯ ನ್ನು ತೆಗೆದುಕೊಂಡು ಆ ಮನುಷ್ಯನ ಹತ್ತಿರಹೋಗು ? ನಾನು ನಿನ್ನ ಬೆಂಬಲಕ್ಕೆ ಇಬ್ಬರು ಜವಾನರನ್ನು ಗುಪ್ತರೀತಿಯಿಂದ ಕಳುಹಿಸಿಕೊಡುವೆನು, ನೀನು ಅವನಬಳಿಗೆ ಹೋಗಿ ಈಸಾರೆ ತಮ್ಮ ಚಿತ್ರವನ್ನು ಸರಿಯಾಗಿ ತೆಗೆದುಕೊಂಡು ಬಂದಿದ್ದೇನೆ ಪರಿಶೀಲಿಸಬೇಕು ಎಂದು ಹೇಳು ? ಎಂದು ಕಳುಹಿಸಿಕೊಟ್ಟನು. ಅದರಂತೆ ಆ ಚಿತ್ರಗಾರನು ಆ ಧನವಂತನ ಬಳಿಗೆ ಹೋಗಿ ದರ್ಪಣವನ್ನು ತೋರಿಸಿದನು, ಆಗ ಆ ಧನವಂತನು ತನ್ನ ರೂಪದಲ್ಲಿ ಹ್ಯಾಗೆ ಹ್ಯಾಗೆ ಪರಿವರ್ತನ ಮಾಡಿಕೊಳ್ಳಹತ್ತಿದನೋ ಹಾಗೆ ಹಾಗೆ ಆ ದರ್ಪಣ ದಲ್ಲಿ ಕಾಣಹತ್ತಿತು. ಆಗ ಆ ಧನವಂತನು ಅನ್ನುತ್ತಾನೆ;- ಏನಯ್ಯಾ ಈ ಬರೀಕನ್ನಡಿಯನ್ನು ನನಗೆ ಯಾಕೆ ತೋರಿಸುತ್ತೀ ? ನೀನು ತೆಗೆದ ಭಾವ ಚಿತ್ರವು ಎಲ್ಲಿ ಅದೆ ? ” ಎಂದು ಕೇಳಿದನು. ಅದಕ್ಕೆ ಚಿತ್ರಗಾರನು ನಿಮ್ಮ ರೂಪ ಸದೃಶವಾದ ಭಾವಚಿತ್ರವೇ ಇದು ? ” ಎಂದು ಹೇಳಿದನು. ಆಗ ಧನವಂತನು “ ನಾನು ನಿನಗೆ ನನ್ನ ಭಾವಪಟವನ್ನು ತೆಗೆಯಲಿಕ್ಕೆ ಎಂದು ಹೇಳಿದ್ದೆನು ? ” ಎಂದು ಕೇಳಿದನು. ಆಗ ಚಿತ್ರಗಾರನು;- “ ನೀವು ಹೀಗೆ ವಚನದಲ್ಲಿ ಯಾಕೆ ಪರಿವರ್ತನ ಮಾಡುವಿರಿ ? ನಾನು ನಿಮ್ಮ ಹೇಳಿಕೆಯಂತೆ ಐದು ಸಾರೆ ಚಿತ್ರವನ್ನು ತೆಗೆದುಕೊಂಡು ಬಂದು ತೋರಿಸಿದನು ಆಗ ನೀವು ಅವುಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವನ್ನು ತೋರಿಸಿದ್ದರಿಂದ ಹಿಂದಕ್ಕೆ ತೆಗೆದುಕೊಂಡು ಹೋಗಿ ಈಸಾರೆ ಸ್ವಲ್ಪಾದರೂ ವ್ಯತ್ಯಾಸವಿಲ್ಲದಂತೆ ತೆಗೆದುಕೊಂಡು ಬಂದಿದ್ದೇನೆ ಆದ್ದರಿಂದ ನೀವು ಆಡಿ ಗೊತ್ತು ಮಾಡಿದ ಮೂಲ್ಯವನ್ನು ಕೊಟ್ಟು ಕಳುಹಿಸಬೇಕು ” ಎಂದನು. ಧನವಂತನು ಅವನಮಾತಿಗೆ ಒಪ್ಪಿಕೊಳ್ಳಲಿಲ್ಲ ಆಗ ಕರ್ಮಚಾರಿಗಳಿಬ್ಬರು ಮುಂದೆ ಬಂದು, ಅಯ್ಯಾ ಬ್ರಷ್ಟ ಪ್ರತಿಜ್ಞನಾದ ಶ್ರೀಮಂತನೇ ? ಈ ಮನುಷ್ಯನು ಅತಿಕಷ್ಟಪಟ್ಟು ಐದುಸಾರೆ ತೆಗೆದು ಕೊಂಡುಬಂದ ಚಿತ್ರಗಳನ್ನು ನಿರಾಕರಿಸಿ ಬಿಟ್ಟು ಆರನೇಸಾರೆ ಸರಿಯಾಗಿ ಚಿತ್ರವನ್ನು ಲೇಖಿಸಿಕೊಂಡು ಬಂದು ತೋರಿಸಿದರೂ ನಿರಾಕರಿಸುತ್ತಿರುವಿ ಯಾ ಈಮಾತು ನಿನಗೆ ಲಾಂಛನಾಸ್ಪದವಲ್ಲವೇ? ಹೀಗೆಮಾಡಬೇಡ ಇವನ ಶ್ರಮದ ಫಲವನ್ನು ಸರಿಯಾಗಿ ಮುಟ್ಟಿಸು? ಇಲ್ಲವಾದರೆ ನ್ಯಾಯಾಧೀಶನ ಬಳಿಗೆನಡೆ?" ಎಂದು ಒತ್ತಾಯಮಾಡಿದರು. ಆಗ ಆ ಠಕ್ಕನು ಅನ್ನುತ್ತಾನೆ

"ನನ್ನನ್ನು ನ್ಯಾಯಾಸ್ಥಾನಕ್ಕೆ ಕರೆದೊಯ್ಯುವದಕ್ಕೆ ನೀವುಯಾರು?" ಎಂ ದು ಕೇಳಿದನು. ಆಗ ಅವರಿಬ್ಬರು ತಮ್ಮ ಮೇಲುಹೊದಿಕೆಗಳನ್ನು ತೆಗೆದುಚಲ್ಲಿ ಕೊಟ್ಟು ನಿಂತುಕೊಂಡರು. ಆಗ ಅವರನ್ನು ನೋಡಿ ಗಾ ಬರಿಯಾಗಿ ಧನ ವಂತನು ಹಣವನ್ನು ಕೊಡುತ್ತೇನೆಂದು ಬಹುಸರಿಯಾಗಿ ಹೇಳಿಕೊಳ್ಳಹತ್ತಿ ದನು, ಅದಕ್ಕೆ ಕಣ್ಮಚಾರಿಗಳಿಬ್ಬರೂ ಸಮ್ಮತಿಸದೆ, ಅವನನ್ನು ಬೀರಬಲನ ಕಡೆಗೆ ಕರೆದುಕೊಂಡು ಹೋದರು, ಕೂಡಲೆ ಬೀರಬಲನು. " ಇವನ ಬೆನ್ನ ಮೇಲೆ ವೃಣಗಳಾಗುವಂತೆ ಒಳಿತಾಗಿ ಹೊಡೆಯಿರಿ" ಎಂದು ಅಪ್ಪಣೆ ಮಾಡ ಲು, ಇಬ್ಬರು ಕಣ್ಮಚಾರಿಗಳು ಕೈಯೊಳಗೆ ಕ್ಷೇತ್ರಾಯುಧವನ್ನು ಹಿಡಿದು ಕೊಂಡುಬಂದು ನಿಂತರು. ಸಾವುಕಾರನು ಭಯಗ್ರಸ್ತನಾಗಿ ತನ್ನ ತಪ್ಪಿತ ವನ್ನೊಪ್ಪಿಕೊಂಡನು. ಕೂದಲೇ ಅವನಿಗೆ ಕಾರಾಗೃಹದ ತೀಕ್ಷೆಯನ್ನು ಕೊಟ್ಟು ಚಿತ್ರಗಾರನಿಗೆ ಸರಿಯಾ ಮೂಲ್ಯವನ್ನು ಕೊಡಿಸಿ, ಕಳುಹಿಸಿ ಕೊಟ್ಟನು.

( ೧೦. ವ್ಯಸನಿಯಾದವನ ವ್ಯಸನ )

ಒಂದುದಿವಸ ಸಾಯಂಕಾಲದ ಮುಂದೆ ಬಾದಶಹನೂ ಬೀರಬಲನ ಪ್ರಚ್ಛನ್ನ ವೇಷದಾರಿಗಳಾಗಿ ನಗರಸಂಚಾರಕ್ಕೆ ಹೊರಟರು, ಆಗ ಒಂದು ಒಣಿಯಲ್ಲಿ ಒಬ್ಬ ಭಿಕ್ಷೆಯವಳು ನಿಂತುಕೊಂಡಿದ್ದಳು, ಅವಳ ಸಮೀಪಕ್ಕೆ ಯಾರಾದರೂ ಹಾಯ್ದು ಹೋದರೆ ದುರ್ವಾಸನೆಯು ಬರದೆ ಇರುತ್ತಿದ್ದಿಲ್ಲ. ಅವಳು ಅತಿಕುರೂಪಿಣಿ ಯಾದದ್ದಲ್ಲದೇ ಗರ್ಭಿಣಿಯಾಗಿದ್ದಳು. ಅವಳನ್ನು ನೋಡಿ ಬಾದಶಹನು ಆರಾತನಾಗಿ ಬೀರಬಲನಿಗೆ;- ಕಾಮದೇವನ ಲೀಲೆಯು ಅತಿ ಪ್ರಬಲತರದಾದದ್ದು? ಈ ಸ್ತ್ರೀಯಳಸಮೀಪಕ್ಕೆ ಹಾಯ್ದು ಹೋದರೆ ದುರ್ಗಂಧಿಯು ಪ್ರಾಂಣೇಂದ್ರಿಯಕ್ಕೆ ತಗಲುತ್ತದೆ; ಹೀಗಿದ್ದು ಇವಳೊಡನೆ ವಿಲಾಸವನ್ನು ಅನುಭೋಗಿಸಿದ ಪ್ರಾಣಿಯು ಯಾವನಿರ ಬಹುದು?

ಅದಕ್ಕೆ ಬೀರಬಲನು ಅನ್ನು ತಾನೆ, ಮನುಷ್ಯನು ಒಮ್ಮೆ ವ್ಯಸನಾ ಧೀನನಾದ ನಂದರೆ ಆ ವ್ಯಸನವು ಅವನನ್ನು ಯಾವಜೀವ ಪರಿಯಂತರ ಬಿಡುವದಿಲ್ಲ. ಹ್ಯಾಗಂದರೆ ಬುಧುಕ್ಷಿತನಾದವರಿಗೆ ಹಳಸಿದ ಅನ್ನವು ಸಂ ಚ ಭಕ್ಷ್ಯ ಪರಮಾನ್ನದಂತೆಯೂ ನಿದ್ರೆ ಇಲ್ಲದ ಮನುಷ್ಯನಿಗೆ ಹಾಸಿಗೆ ಅಥವಾ ಭೂಮಿ ಇವುಗಳ ಪರಿಜ್ಞಾನವು ಉಂಟಾಗುವದಿಲ್ಲವೋ ತದ್ವತ್ಕಾಮೀ ಪುರುಷನಿಗೆ ಸುಜಾತಿ ಕುಜಾತಿಗಳ ವಿಚಾರವೂ ಬರುವದಿಲ್ಲ ಇಂಥ ವ್ಯಸನಾಧೀನರಾದ ಎಷ್ಟೋ ಜನರನ್ನು ನಾನು ಕಂಡಿದ್ದೇನೆ. ಬಾದಶಹನು ಅನ್ನುತ್ತಾನೆ " ಕದಾಚಿತ್ ಹೀಗಿದ್ದರೂ ಇರಬಹುದು ನೀನು ಇವಳೊಡನೆ ರಮಮಾಣನಾದ ಪುರುಷನನ್ನು ಕಂಡು ಹಿಡಿಯ ಬಲ್ಲೆಯಾ ” ಬೀರಬಲನು ಅನ್ನುತ್ತಾನೆ. " ಕದಾಚಿತ್ ನಾವು ಇಲ್ಲಿಯೇ ಸ್ವಲ್ಪ ಹೊತ್ತು ಸಂಚಾರ ಮಾಡಹತ್ತಿದರೆ, ಅವನು ಯಾರಿರಬಹುದೆಂದು ಸಹಜವೇ ಗೊತ್ತಾಗುವದು "
ಈ ಪ್ರಕಾರ ಅವರಿಬ್ಬರೂ ಮಾತಾಡುತ್ತ ಸ್ವಲ್ಪದೂರ ಹೋದರು ಬೀರಬಲನು ಹಿಂದು ಮುಂದು ನೋಡುತ್ತಾ ಹೋಗುತ್ತಿದ್ದನು ಆರಲ್ಲಿ ಮಾರ್ಗದಲ್ಲಿ ಒಬ್ಬ ನಿಲಾಸಿಯಾದ ಪುರುಷನು ಬರಹತ್ತಿದ್ದನು ಆವನು ಶ್ರೇಷ್ಟ ಕುಲೋತ್ಪನ್ನ ನಾಗಿದ್ದನು, ಆದರೆ ಅತಿವ್ಯಭಿಚಾರಿಯಾಗಿದ್ದನು ಬೀರ ಬಲನು ಅವನನ್ನು ಚೆನ್ನಾಗಿ ನೋಡಿ ಬಾದಶಹನಿಗೆ ಹೇಳುತ್ತಾನೆ, “ಪೃಥ್ವಿ ನಾಥ ಬಹಳಮಾಡಿ ಈ ಮನುಷ್ಯನೇ ಆ ಸ್ತ್ರೀಯೊಡನೆ ಕಾಮವಿಲಾಸವನ್ನು ಅನುಭವಿಸಿದವನಾಗಿರ ಬಹುದೆಂಬಂತೆ ಕಾಣುತ್ತದೆ.
ಬಾದಶಹ- ಅಯಾತರ ಮೇಲಿಂದ !
ಬೀರಬಲ-ಇವನನ್ನು ನೋಡುತ್ತ ಸ್ಪಲ್ಪ ಹೊತ್ತು ಇಲ್ಲಿಯೇ ಗುಪ್ತವಾ ಗಿ ನಿಂತುಕೊಳ್ಳೋಣ ಅಂದರೆ ನಿಜಸ್ಥಿತಿಯು ಹೊರಬೀಳುವದು.
ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ಆ ವಿಲಾಸಿ ಪುರುಷನು ಆ ಸ್ತ್ರೀಯಳ ಸಮೀಪಕ್ಕೆ ಹೋಗಿ ಏನೋ ಒಂದು ಸಂಕೇತವನ್ನು ಮಾಡಿ ಮುಂದೆ ಹೋರಟು ಹೋದನು ಅವನು ಮುಂದೆ ಹೋಗಹತ್ತಲು ಆ ಸ್ತ್ರೀಯು ಮೆಲ್ಲಗೆ ಅವನ ಬೆನ್ನು ಹತ್ತಿದಳು ಆಗ ಬಾದಶಹನಿಗೆ ಆ ಸ್ತ್ರೀಯನ್ನು ಅನುಭೋಗಿ ಸಿದ ಪುರುಷನು ಇವನೇ ಇಂದು ನಿಶ್ಚಯವಾಯಿತು.
ಈ ಸಂಗತಿಯು ವಿದಿತವಾದ ಸ್ವಲ್ಪ ಹೊತ್ತಿನ ಮೇಲೆ ಇಬ್ಬರೂ ತಮ್ಮ ತಮ್ಮ ಗೃಹವನ್ನು ಕುರಿತು ಹೊರಟು ಹೋದರು ಮರುದಿವಸದ ಓಲಗದಲ್ಲಿ ಬಾದಶಹನು ಬೀರಬಲನಿಗೆ ಪ್ರಶ್ನೆ ಮಾಡಿದನು - ಬೀರಬಲ, ನೀನು ನಿನ್ನೆ ತೋರಿಸಿದ ಪುರುಷನು ಆ ಸ್ತ್ರೀಯಳನ್ನು ಅನುಭವಿಸಿದವನೆಂದು, ನಿನಗೆ ಹ್ಯಾಗೆ ಗೊತ್ತಾಯಿತು ಅದಕ್ಕೆ ಬೀರಬಲನು ಪೃಥ್ವಿನಾಥ ! ಇದನ್ನು ತಿಳಿದು ಕೊಳ್ಳುವದು ಸ್ವಲ್ಪ ಕಠಿಣವದೆ ! ನಿನ್ನೆ ನಾವಿಬ್ಬರೂ ಅಲ್ಲಿ ನಿಂತು ಕೊಂಡಿರಲು, ದೂರಿನಿಂದ ಬರುತ್ತಿರುವ ಇಲ್ಲಿನಮೇಲೆ ನನ್ನ ದೃಷ್ಟಿಯು ಬಿತ್ತು ಆಗ ಇವನ ಕೈಯಲ್ಲಿ ತಂಬಾಕವಿತ್ತು ಆದರೆ ಸುಣ್ಣವಿದ್ದ್ಲಿಲ್ಲ, ಅಷ್ಟರಲ್ಲಿ ಅದೇ ಸುಣ್ಣವನ್ನು ಹಚ್ಚಿದ ಒಂದು ಪಾಯಖಾನೆಯ ಗೋಡೆಯು ದೃಪ್ಟಿಗೆ ಬಿತ್ತು. ಕೂಡಲೆ ಇವನು ತ್ಯರ್ಯದಿಂದ ಅಲ್ಲಿಗೆ ಹೋಗಿ ಬೆರಳಿನಿಂದ ಗೋಡೆಯನ್ನು ಕೆದರಿ ತಂಬಾಕಕ್ಕೆ ಹಚ್ಚಿಕೊಂಡು ಬಾಯಿಯೊಳಗೆ ಹಾಕಿಕೊಂಡನು. ಇಂಥ ಹೊಲಸು ಸ್ಥಳದಲ್ಲಿಯ ಸುಣ್ಣವನ್ನು ತೆಗೆದುಕೊಳ್ಳಲಿಕ್ಕೆ ಯಾವ ಮನುಷ್ಯನು ಹಿಂದು ಮುಂದು ನೋಡಲಿಲ್ಲವೋ, ಅಂಥ ಮನುಷ್ಯನು ಎಂಥ ಸ್ತ್ರೀಯ ಮೇಲಾದರೂ ಲಂಪಟನಾಗಬಹುದೆಂದು ಯೋಚಿಸಿದೆನು ಎಂದು ಹೇಳಿದನು.

ಬಾರಹನು ಬೀರಬಲನ "ಅವಲೋಕನಾ ಚಾತುರ್ಯ"ಕ್ಕೆ ಬೆರಗಾಗಿ ಸಂತೋಷವನ್ನು ಪ್ರಕಟಪಡಿಸಿದನು.

-( ೧೧. ಬೀರಬಲನ ವಣ೯.)-

ಬೀರಬಲನು ಸ್ವಲ್ಪ ಶ್ಯಾಮ ವರ್ಣದವನಿದ್ದನು. ಒಂದು ದಿವಸ ಓಲಗದಲ್ಲಿ ಮನುಷ್ಯರ ಸುಂದರತನದ ವಿಷಯವಾಗಿ ಚರ್ಚೆಯು ನಡೆದಿತ್ತು. ಆಗ ಬೀರಬಲನು ಓಲಗಕ್ಕೆ ಬರಲು, ಎಲ್ಲರೂ ಅವನನ್ನು ನೋಡಿ ಹಾಸ್ಯ ಮಾಡಹತ್ತಿದರು, ಇದರ ಕಾರಣವನ್ನು ತಿಳಿದುಕೊಳ್ಳಬೇಕೆಂಬ ಯೋಚನೆ ಬಂತು, ಆದರೂ ಮನಸ್ಸನ್ನು ಸ್ಥಿರಪಡಿಸಿಕೊಂಡು ಸಮಯ ನೋಡಿಕೊಂಡು ಬಾದಶಹನಿಗೆ ಅನ್ನುತ್ತಾನೆ:-"ಪೃಧ್ವಿನಾಥ, ಈ ಹೊತ್ತು ಬಹಳೇ ಆನಂದದಲ್ಲಿ ಇದ್ದಂತೆ ಕಂಡುಬರುತ್ತದೆ”. ಬಾದಶಹನು ಸ್ವಲ್ಪ ನಕ್ಕು "ನಿಮ್ಮ ಕುರೂಪತೆಯನ್ನು ನೋಡಿ ಇವರೆಲ್ಲರೂ ಹಾಸ್ಯವಾಡಹತ್ತಿದ್ದಾರೆ. ನಾವೆಲ್ಲರೂ ಗೌರಾಂಗರಾಗಿದ್ದು ನೀನು ಮಾತ್ರ ಶ್ಯಾಮಾಂಗನಾಗಿರುವದು ಯಾಕೆ ?" ಎಂದು ಪ್ರಶ್ನೆ ಮಾಡಿದನು.

ಬೀರಬಲ - "ಇದರ ಕಾರಣವು ನಿಮಗೆ ವಿದಿತವಾಗಿರುವದಿಲ್ಲವೋ"

ಬಾದಶಹ - "ನನಗೆ ಈ ಕಾರಣವು ವಿದಿತವಾಗಿಲ್ಲ. ಹೀಗಾಗಿದ್ದ ಕಾರಣವೇನು ?"

ಬೀರಬಲ- "ಪರಮೇಶ್ವರನು ಸೃಷ್ಟಿಯ ನಿರ್ಮಾಣ ಮಾಡಲು ಸಿದ್ಧನಾಗಿ ಪ್ರಥಮದಲ್ಲಿ ವೃಕ್ಷಗಳನ್ನು ನಿರ್ಮಿಸಿದನು. ಅದರಿಂದ ಅವನ ಮನಸ್ಸು ತೃಪ್ತವಾಗಲಿಲ್ಲ. ಆಮೇಲೆ ಪಕ್ಷಿಗಳನ್ನು ನಿರ್ಮಾಣ ಮಾಡಿದನು. ಅದರಿಂದ ಅವನಿಗೆ ಸ್ವಲ್ಪ ಕಾಲ ಆನಂದವುಂಟಾಯಿತು. ಮುಂದೆ ಈ ಪ್ರಾಣಗಳಲ್ಲಿ ಇನ್ನೂ ಕೆಲವು ಶ್ರೇಷ್ಠವಾದ ಪ್ರಾಣಗಳನ್ನು ಸೇರಿ

೪೦
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.

ಸಬೇಕೆಂದು ತಿಳಿದು ಮನುಷ್ಯವರ್ಗವನ್ನು ನಿರ್ಮಿಸಿದನು. ಆ ಮೇಲೆ ಮನುಷ್ಯನಿಗೆ ಅವಶ್ಯವಾಗಿ ಬೇಕಾಗಿರುವ ರೂಪ, ಧನ, ಬುದ್ಧಿ,ಸಾಮರ್ಥ್ಯ ಎಂಬವುಗಳನ್ನು ನಿರ್ಮಿಸಿ, ಅವುಗಳನ್ನು ಪ್ರತ್ಯೆ ಪ್ರತ್ಯೇಕವಾಗಿ ಇಟ್ಟು, ಈ ನಾಲ್ಕು ಪದಾರ್ಥಗಳಲ್ಲಿ ನಿಮ್ಮ ನಿಮ್ಮ ಮನಸ್ಸಿಗೆಬಂದ ಪದಾರ್ಥಗಳನ್ನು ತೆಗೆದು ಕೊಳ್ಳಿರಿ ? ಎಂದು ಆಜ್ಞೆಯಿತ್ತನು. ನಾನು ಮಟ್ಟ ಮೊದಲು ಹೋಗಿ ಬುದ್ಧಿಯನ್ನು ತೆಗೆದು ಕೊಂಡೆನು; ಆ ಮೇಲೆ ಎರಡನೇ ಪದಾರ್ಥಗಳನ್ನು ತೆಗೆದುಕೊಳ್ಳಬೇಕೆಂದು ಹೋಗುವಷ್ಟರಲ್ಲಿಯೇ ನೀವೆಲ್ಲರೂ ನಿಮ್ಮ ನಿಮ್ಮ ಮನಸ್ಸಿಗೆ ಬಂದ ಉಳಿದ ಪದಾರ್ಥಗಳನ್ನು ತೆಗೆದು ಕೊಂಡು ಬಿಟ್ಟಿದ್ದರಿಂದ ನನಗೆ ಬುದ್ಧಿಯ ಹೊರತು ಅನ್ಯಪದಾರ್ಥಗಳು ಸಿಕ್ಕಲೇ ಇಲ್ಲ ಇದರಿಂದ ನನ್ನ ದೇಹವು ಕೃಷ್ಣವರ್ಣವುಳ್ಳದ್ದಾಯಿತು ” ಎಂದು ಹೇಳಿದನು.
ಬೀರಬಲನ ಸಮಯೋಚಿತವಾದ ಸಂಭಾಷಣೆಯಿಂದ ಬಾದಶಹನು ಹರುಷ ನಿರ್ಭರವಾದನು. ಆವನು ಮನಸ್ಸಿನಲ್ಲಿ ಯೋಚಿಸಿದ್ದೇನಂದರೆ "ಬೀರಬಲನು ನಮ್ಮನ್ನು ಕೇವಲ ರೂಪಧಾರಿಗಳಾದ ಮೂರ್ತಿಗಳನ್ನಾಗಿ ಮಾಡಿ ಬುದ್ಧಿಹೀನರೆಂದು ಹೇಳಿ ತಾನು ಬುದ್ಧಿವಂತನೆಂದು ಹೇಳಿಕೊಂಡಂತಾಯಿತು ” ಬೀರಬಲನು ಹೇಳಿದ ಯುಕ್ತಿ ಯುಕ್ತವಾದ ಮಾತುಗಳಿಂದ ಸಭಿಕರೆಲ್ಲರೂ ಪ್ರಸನ್ನರಾಗಿ, ತಾವು ನಿಷ್ಕಾರಣವಾಗಿ ಬೀರಬಲನನ್ನು ಪರಿಹಾಸ ಮಾಡಿದೆವೆಂದು ಲಜ್ಜಿತರಾಗಿ ಕುಳಿತು ಕೊಂಡರು. ಅವರೆಲ್ಲರನ್ನು ಬೀರಬಲನು ತನ್ನ ಚಾತುರ್ಯದಿಂದ ವಶಪಡಿಸಿಕೊಂಡನು.

-(೧೨. ನ್ಯಾಯ ದ ಗ೦ಟೆ .)-

ಅಕಬರ ಬಾದಶಹನ ಮನಸ್ಸಿನಲ್ಲಿ, ತನ್ನ ರಾಜ್ಯದಲ್ಲಿ ಭಿಕ್ಷುಕನಿಂದ ಮೊದಲುಮಾಡಿ ಆಗರ್ಭ ಶ್ರೀಮಂತನವರೆಗೂ ಸರಿಯಾದ ನ್ಯಾಯ ಸಿಗಬೇಕೆಂಬ ಅಪೇಕ್ಷೆಯಿತ್ತು, ಅದಕ್ಕೊಸುಗವಾಗಿ ಅವನು ಮಧ್ಯವಸತಿಯಲ್ಲಿ ಒಂದು ಎತ್ತರವಾದ ಸ್ತಂಭವನ್ನು ನಿರ್ಮಿಸಿ, ಅದಕ್ಕೆ ಒಂದು ಕಬ್ಬಿಣದವಂಕಿಯನ್ನು ಕೂಡಿಸಿ, ಅದರೊಳಗೆ ಒಂದು ಹಗ್ಗವನ್ನು ಹಾಕಿ ಕೆಳಗೆ ಬಿಟ್ಟು ಅದರ ಎರಡನೇ ತುದಿಗೆ ಒಂದು ಗಂಟೆಯನ್ನು ಕಟ್ಟಿ ತನ್ನ ಮಹಲಿನೊಳಗೆ ಒಯ್ದಿದ್ದನು. ಯಾರಾದರೂ ನ್ಯಾಯವಿಮರ್ಶೆಗೋಸುಗ ಬಂದು ಆ ಹಗ್ಗವನ್ನು ಜಗ್ಗಿದಕೂಡಲೆ ಬಾದಶಹನು ಹೊರಗೆ ಬಂದು ವಿಚಾರಣೆಯನ್ನು ಮಾಡುತ್ತಿದ್ದನು. ಅದಕ್ಕೆ ಪ್ರಾತಃಕಾಲ ಮತ್ತು ಸಾಯಂಕಾಲದ ಒಂದೆರಡುತಾ ಸುಗಳನ್ನು ನಿಯಮಿಸಿದ್ದನು.

ಜ್ಯೇಷ್ಠಮಾಸದಲ್ಲಿ ಒಂದುದಿವಸ ಒಳ್ಳೆಬಿಸಿಲು ಬಿದ್ದಿತ್ತು, ಶೆಕೆಯು ಅಧಿಕವಾಗಿತ್ತು, ಬಾದಶಹನು ಅಂತಃಪುರದಲ್ಲಿ ಮಲಗಿಕೊಂಡಿದ್ದನು. ಇಬ್ಬರು ಪರಿಚಾರಿಕೆಯರು ಎಡಬಲದಲ್ಲಿ ನಿಂತುಕೊಂಡು ಬೀಸಣಿಕೆಯಿಂದ ಗಾಳಿಯನ್ನು ಬೀಸುತ್ತಿದ್ದರು, ಇಬ್ಬರು ಸೇವಕರು ಚರಣಸೇವೆಯನ್ನು ಮಾಡುತ್ತ ಕುಳಿತುಕೊಂಡಿದ್ದರು. ಅಪ್ಪರಲ್ಲಿ ಗಂಟೆಯು ಬಾರಿಸಿತು ಕೂಡಲೇ ಬಾದಶಹನು ಎಚ್ಚತ್ತು ಹೊರಗೆ ಯಾರು ಬಂದಿರುವರು ನೋಡಿಕೊಂಡು ಬಾ ? ಎಂದು ಹೇಳಿ ಕಳುಹಿಸಿಕೊಟ್ಟನು. ಆ ಸೇವಕನು ಹೊರಗೆ ಹೋಗಿ ಬಂದು, ಒಂದು ಎತ್ತು ಗಂಟೆಯ ಹಗ್ಗವನ್ನು ತನ್ನ ಕೋಡಿಗೆ ಸಿಕ್ಕಿಸಿಕೊಂಡು ಜಗ್ಗಾಡಿದ್ದರಿಂದ ಗಂಟೆಯು ಬಾರಿಸಿತು ಎಂದು ಹೇಳಿದನು. ಬಾದಶಹನು ಮತ್ತೆ ಶಯನಮಾಡಿದನು. ಸ್ವಲ್ಪ ಹೊತ್ತಿನಲ್ಲಿ ಪುನಃ ಗಂಟೆಯ ಸಪ್ಪಳವುಂಟಾಯಿತು ಮತ್ತೆ ಸೇವಕನನ್ನು ಕಳುಹಿಸಿಕೊಟ್ಟನು. ಆಗಲೂ ಸಹ ಮೊದಲಿನಂತೆ ಅ ಗೂಳಿಯೇ ಹಗ್ಗವನ್ನು ಜಗ್ಗಿತೆಂದು ಹೇಳಿದನು. ಅದಕ್ಕೆ ಬಾದಶಹನು ಯೋಚಿಸುತ್ತ ಕುಳಿತುಕೊಂಡಿರುವಾಗಲೇ ಪುನಃ ಗಂಟೆಯು ಬಾರಿಸಿತು, ಆಗ ಬಾದಶಹನು ಅಂದದ್ದೇನಂದರೆ; "ಗಂಟೆಯನ್ನು ಬಾರಿಸಿದವನು ಮನುಷ್ಯನೇ ಆಗಲಿ, ಎತ್ತೇ ಆಗಲಿ ಕರೆದುಕೊಂಡು ಬಾ ?” ಎಂದು ಅಪ್ಪಣೆ ಮಾಡಿದನು ಸೇವಕರು ಒಡುತ್ತ ಹೋಗಿ ಹಗ್ಗದಿಂದ ಬಂಧನಮಾಡಿ ಎತ್ತನ್ನು ಹಿಡಿದುಕೊಂಡು ಬಂದು ಬಾದಶಹನ ಎದುರಿಗೆ ತಂದು ನಿಲ್ಲಿಸಿದರು. ಆಗ ಬಾದಶಹನು ಸಭಿಕರನ್ನು ಕುರಿತು “ಈ ಎತ್ತಿನ ಪ್ರಾರ್ಥನೆಯು ಏನಿರುವದೆಂಬದನ್ನು ವಿಚಾರಿಸರಿ” ಎಂದು ಅಪ್ಪಣೆಮಾಡಿದನು. ಎತ್ತಿನ ಪ್ರಾರ್ಥನೆಯನ್ನು ಹ್ಯಾಗೆ ಕೇಳಿ ತಿಳಿಯಬೇಕೆಂಬ ಯೋಚನೆಯಿಂದ ಯೆಲ್ಲರೂ ಸ್ತಂಭಿತರಾಗಿ ಕುಳಿತುಕೊಂಡಿದ್ದರು. ಅಷ್ಟರಲ್ಲಿ ಬೀರಬಲನು ಓಲಗಕ್ಕೆ ಬರಲು ಬಾದಶಹನು ಈ ಎತ್ತಿನ ಸಂದೇಶವೇನಿರುವದೆಂಬದನ್ನು ತಿಳಿದುಕೊಂಡು ಹೇಳು ಎಂದು ಅಪ್ಪಣೆಮಾಡಿದನು. ಬೀರಬಲನು ಆ ಎತ್ತಿನ ಹತ್ತರ ಹೋಗಿ ಅದರ ಮೈ ಮೇಲೆ ಕೈಯಾಡಿಸಿ ಹೇಳಿದ್ದೇನಂದರೆ, " ಜಹಾಪನಾ, ಈ ಎತ್ತು ತಮ್ಮ ಸನ್ನಿಧಿಯಲ್ಲಿ ಅರಿಕೆಮಾಡಿಕೊಳ್ಳುವದೇನಂದರೆ;- ನಾನು ಪ್ರಾಯಸ್ಥನಿದ್ದಾಗ್ಗೆ ಒಡೆಯನ ಹೇಳಿಕೆಯಂತೆ ಎಲ್ಲ ಕಾರ್ಯವನ್ನು ಜರಗಿಸುತ್ತಿದ್ದೆನು, ಆದರೆ ಈಗ ನಿರ್ಬಲತೆಯು ನನ್ನನ್ನು ಆವರಿಸಿಕೊಂಡಿರುವದರಿಂದ ಯಾವಕೆಲಸವೂ ನನ್ನಿಂದ ಸಾಗದಹಾಗಾಯಿತು, ಅದರಿಂದ ನನ್ನ ಸ್ವಾಮಿಯು ಕೋಪಿತನಾಗಿ ನನ್ನನ್ನು ಮನೆಬಿಡಿಸಿ ಹೊರಗೆ ಹಾಕಿದ್ದಾನೆ," ಎಂದು ತಮ್ಮಡಿಯಲ್ಲಿ ಪ್ರಾರ್ಥನೆ ಮಾಡಲಿಕ್ಕೆ ಬಂದದೆ ಎಂದು ಹೇಳಿದನು.

ಕೂಡಲೆ ಬಾದಶಹನು. "ಬೀರಬಲ ನಿನ್ನ ಹೇಳಿಕೆಯು ನಿಜವೆಂಬಂತೆ ತೋರುತ್ತದೆ, ಈ ಎತ್ತಿನ ನಿಜವಾದ ಕಷ್ಟವನ್ನು ದೂರಮಾಡಲಿಕ್ಕೆ ಬೇಕು. ಆದ್ದರಿಂದ ಈ ಎತ್ತಿನ ಒಡೆಯನು ಯಾವನೆಂಬುದನ್ನು ಗೊತ್ತು ಹಚ್ಚಿಕೊಂಡು ನನ್ನೆಡೆಗೆ ಕರೆದುಕೊಂಡು ಬಾ” ಎಂದು ಅಪ್ಪಣೆಮಾಡಿದನು.

ಕೂಡಲೆ ಆ ಎತ್ತಿನಹಿಂದೆ ನಾಲ್ಕಾರು ಜನ ಜವಾನರನ್ನು ಕಳುಹಿಸಿಕೊಟ್ಟನು, ಆ ಎತ್ತು ನೆಟ್ಟಗೆ ತನ್ನ ಯಜಮಾನನ ಮನೆಯ ಮುಂದೆ ಹೋಗಿ ನಿಂತುಕೊಳ್ಳಲು, ಸಿಪಾಯಿಗಳು ಅವನನ್ನು ಹಿಡಿದುಕೊಂಡು ಬಂದು ಬಾದಶಹನ ಎದುರಿಗೆ ನಿಲ್ಲಿಸಿದರು.

ಆಗ ಬೀರಬಲನು- ಯಾಕೆ ಸೆಟ್ಟರೇ ಈ ಎತ್ತು ನಿಮ್ಮದೋ !

ಸೆಟ್ಟಿ-ಅಹುದು ನನ್ನದಾಗಿದೆ.

ಬೀರಬಲ -ಇದು ನಿಮ್ಮದಾಗಿದ್ದರೆ ಇದನ್ನು ಹೀಗೆ ಯಾಕೆ ಬಿಟ್ಟಿರುವಿರಿ.

ಸೆಟ್ಟಿ-ಮಹಾರಾಜ ? ಈಗ ಇದು ಮುಪ್ಪಿನವಾಗಿದ್ದು, ಇದರಿಂದ ಯಾವ ಕೆಲಸವೂ ಆಗುವದಿಲ್ಲ, ಅದರಿಂದ ಇದನ್ನು ಬಿಟ್ಟುಬಿಟ್ಟಿದ್ದೇನೆ.

ಬೀರಬಲ-ನಿಮ್ಮ ಮನೆಯೊಳಗೆ ಯಾವನಾದರೂ ಒಬ್ಬ ಮನುಷ್ಯನು ವೃದ್ಧನಾಗಿ ಅವನ ಕಡೆಯಿಂದ ಏನೂ ಕಾರ್ಯವು ಆಗದಿದ್ದರೆ, ಅವನನ್ನಾದರೂ ಹೀಗೇ ಬಿಟ್ಟು ಬಿಡುತ್ತೀರಲ್ಲವೇ.

ಸೆಟ್ಟಿ- ಮನೆಯೊಳಗಿನ ಮನುಷ್ಯನನ್ನು ಹ್ಯಾಗೆ ಬಿಡುವದಕ್ಕೆ ಬಂದೀತು.

ಬೀರಬಲ- ಅಂದಮೇಲೆ ಈ ಮೂಕಪ್ರಾಣಿಯನ್ನು ಹ್ಯಾಗೆ ಬಿಟ್ಟಿ ನೋಡು. ಇದು ತನ್ನ ಪ್ರಾಯದಕಾಲದಲ್ಲಿ ಎಂಥ ಎಂಥ ಕೆಲಸಗಳನ್ನು ಮಾಡಿತು. ಹಸಿವೆ ನೀರಡಿಕೆಗಳ ಪರಿವೆಯಿಲ್ಲ ನಿನ್ನ ಮನೆಯಲ್ಲಿ ದುಡಿಯಲಿಲ್ಲವೇ ? ನಿನಗೆ ಪರರಸುಖದುಃಖಗಳ ಪರಿವೆ ಇಲ್ಲವೆಂಬಂತೆ ಕಾಣುತ್ತದೆ ನೀನು ಬಹಳೇ ನಿರ್ದಯನಾದ ಮನುಷ್ಯನೆಂಬಂತೆ ಕಂಡುಬರುತ್ತದೆ, ಈಗ ಈ ಎತ್ತು ಸರಕಾರದ ಪಶುರಕ್ಷಣ ಗೃಹಕ್ಕೆ ಕಳಿಸಿಕೊಡುತ್ತೇನೆ ಇದರ ಹೊಟ್ಟೆಯ ಖರ್ಚಿನ ಸಲುವಾಗಿ ವರುಷಕ್ಕೆ ಐದುನೂರು ರೂಪಾಯಿಗಳು ಬೇಕಾಗುತ್ತವೆ ಅದನ್ನು ನೀನೇ ಕೊಡಬೇಕು.

ಸೆಟ್ಟಿ-(ಆಶ್ಚರ್ಯದಿಂದ) ಇನ್ನು ಎಷ್ಟು ವರುಷ ಈ ಎತ್ತು ಒದುಕಬಹುದು ? ಇದರಹೊಟ್ಟೆಯ ಖರ್ಚಿಗೆ ವರುಷಕ್ಕೆ ಐದುನೂರು ರೂಪಾಯಿಗಳೆಂದರೆ ಬಹಳವಾಯಿತು; ನಾನೇ ಇದನ್ನು ಮನೆಗೆ ಒಯ್ದು ಪಾಲಿಸುತ್ತೇನೆ. ಬೀರಬಲ--ಇನ್ನು ಹಾಗೆ ಮಾಡಲಿಕ್ಕೆ ಬರುವದಿಲ್ಲ; ರಾಜಾಜ್ಞೆಯ ಮೇರೆಗೆ ಐದುನೂರು ರೂಪಾಯಿಗಳನ್ನು ಕೊಡಲಿಕ್ಕೇಬೇಕು. ಈ ಮಾತಿನ ವಿಷಯವಾಗಿ ನೀನು ಮೊದಲೇ ಎಚ್ಚರಗೊಳ್ಳಬೇಕಾಗಿತ್ತು, ದಂಡದ ಹಣವನ್ನು ಬೇಗನೇ ಕಳುಹಿಸಿಕೊಡು. ಎಂದು ಅಪ್ಪಣೆಮಾಡಿ ಆ ಎತ್ತನ್ನು ಸರಕಾರದಿಂದ ಇಡಲ್ಪಟ್ಟ "ಪಶುರಕ್ಷಣ ಗೃಹ"ಕ್ಕೆ ಕಳುಹಿಸಿಕೊಟ್ಟನು. ಆಮೇಲೆ ಇಬ್ಬರು ಕರ್ಮಚಾರಿಗಳನ್ನು ಕರೆದು "ಈ ಸೆಟ್ಟಿಯ ಕಡೆಯಿಂದ ಐದುನೂರು ರೂಪಾಯಿಗಳನ್ನು ವಸೂಲ ಮಾಡಿರಿ, ಒಂದುವೇಳೆ ಇವನು ಹಣವನ್ನು ಕೊಡದಿದ್ದರೆ ಆರು ತಿಂಗಳ ಮಟ್ಟಿಗೆ ಕಠಿಣವಾದ ಕಾರಾಗೃಹದಲ್ಲಿ ಹಾಕಿಬಿಡಿರಿ” ಎಂದು ಅಪ್ಪಣೆ ಮಾಡಿದನು.

ಕಾರಾಗೃಹವಾಸದಿಂದ ತನ್ನ ಪ್ರತಿಷ್ಠೆಯು ಕಡಿಮೆಯಾಗುವದೆಂದು ತಿಳಿದು ರಾಜಾಜ್ಞೆಯ ಮೇರೆಗೆ ಐದುನೂರು ರೂಪಾಯಿಗಳನ್ನು ಕೊಡಲೊಪ್ಪಿಕೊಂಡನು. ಬೀರಬಲನ ನ್ಯಾಯನಿಮರ್ಶೆಯನ್ನು ಕಂಡು ಬಾದಶಹನಿಗೆ ಅತ್ಯಾನಂದವಾಯಿತು.

--( ೧೩. ಸ್ವಪ್ನದ ಅರ್ಥ. )--

ಒಂದುಸಾರ ಸ್ವಪ್ನದಲ್ಲಿ ಬಾದಶಹನ ಎಲ್ಲಾ ಹಲ್ಲುಗಳು ಬಿದ್ದಂತಾಗಿ ಒಂದೇ ಹಲ್ಲು ಉಳಿದಂತೆ ಕಂಡುಬಂತು, ಮರುದಿವಸ ಬಾದಶಹನು ರಮಲಕಾಸ್ತ್ರವನ್ನು ಬಲ್ಲಂಥ ಒಬ್ಬ ಮನುಷ್ಯನನ್ನು ಕರೆಯಿಸಿ, ಸ್ವಪ್ನ ಫಲವೇನೆಂದು ಕೇಳಿದನು. ಅದಕ್ಕೆ ಅವನು “ರಾಜಾಧಿರಾಜ ನಿಮ್ಮ ಸಂಬಂಧಿಗಳೆಲ್ಲರೂ ನಿಮ್ಮಕ್ಕಿಂತಲೂ ಮೊದಲೇ ಮರಣಹೊಂದುವರು” ಎಂದು ಹೇಳಿದನು. ಈತರದ ಅಪ್ರಿಯವಾದ ವಚನಗಳನ್ನಾಲಿಸಿ ಚಾದಶಹನು ಕ್ರುದ್ಧನಾಗಿ, ಆ ರಮಲಕಾಸ್ತ್ರಜ್ಞನನ್ನು ಹೊರಗೆ ದೂಡಿಸಿ ಬಿಟ್ಟನು.

ಮುಂದೆ ಸ್ವಲ್ಪ ಹೊತ್ತಿನಲ್ಲಿ ಬೀರಬಲನು ಬಂದನು; ಆಗ ಬಾದಶಹನು ಅವನಿಗೆ ಅದೇ ಪ್ರಶ್ನೆಯನ್ನು ಮಾಡಿದನು, ಕೂಡಲೆ ಬೀರಬಲನು ಉತ್ತರ ಕೊಟ್ಟದ್ದೇನಂದರೆ; ಮಹಾರಾಜ, ಇದರ ಸುಪರಿಣಾಮವು ಸ್ಪಷ್ಟವಾಗಿ ಕಂಡುಬರುತ್ತದೆ, ತಾವು ತಮ್ಮ ಎಲ್ಲ ಆಪ್ತ ಇಷ್ಟರಕಿಂತಲೂ ಹೆಚ್ಚು ಕಾಲ ಈ ಭೂಮಿಯಲ್ಲಿ ಬಾಳುವಿರಿ ಆದರೆ ಒಬ್ಬನು ಮಾತ್ರ ನಿಮ್ಮಕಿಂತಲು ಹೆಚ್ಚು ಆಯುಷ್ಯವಂತನಾಗಿ ಬಾಳುವನು.”

ಬೀರಬಲನ ನಮ್ರತೆಯಿಂದ ಯುಕ್ತವಾದ ಮತ್ತು ವಿದ್ವತ್ತು ಪ್ರಚು
೪೪
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.

ರವಾದ ಉತ್ತರವನ್ನು ಕೇಳಿ ಬಾದಹನು ತುಷ್ಟನಾದನು.

-(೧೪) ನಾಲ್ಕೂ ಪ್ರಶ್ನೆಗಳಿಗೆ ಒಂದೇ ಉತ್ತರ. -

ಒಂದು ದಿವಸ ಬಾದಶಹನು ಬೀರಬಲನಿಗೆ ಕೇಳುತ್ತಾನೆ;- ಒಬ್ಬಾನೊಬ್ಬಗುರುವು ತನ್ನ ಶಿಷ್ಯನಿಗೆ ನಾಲ್ಕು ಪ್ರಶ್ನೆಗಳನ್ನು ಮಾಡಿದನು ಅದಕ್ಕೆ ಶಿಷ್ಯನು ಒಂದೇ ಉತ್ತರವನ್ನು ಕೊಟ್ಟು ಗುರುವಿನ ಮನಸ್ಸನ್ನು ತೃಪ್ತಿಬಡಿಸಿದನು, ಆ ಪ್ರಶ್ನೆಗಳು ಯಾವವೆಂದರೆ;-

"ವಾನಸಡೈ ಘೋಡಾ ಅಡೈ ವಿದ್ಯಾಬೀಸರ ಜಾಯ
ಜಗರೇಪರಬಾಟ ಜಲೈ ಚೇಲಾಕೌನ ಉಪಾಯ"

ನೀನು ಈ ಪ್ರಶ್ನೆಗಳಿಗೆ ಸರಿಯಾದ ಒಂದೇ ಉತ್ತರವನ್ನು ಕೊಡಬಲ್ಲಿಯಾ ! ಎಂದು ಕೇಳಿದನು ಬೀರಬಲನು ಅಂದದ್ದೇನಂದರೆ - ಪೃಥ್ವೀನಾಥ ಆ ಶಿಷ್ಯನು ಹೇಳಿದ ಉತ್ತರವು ಯಾವದೆಂದರೆ;- “ ಗುರುವರ್ಯ ? ತಿರುಗಾಟವಿಲ್ಲ ?” ಎಂದು ಹೇಳಿದಂತೆ ಕಾಣುತ್ತದೆ.
ಬಾದಕಹನು ಪುನಃ ಪ್ರಶ್ನೆ ಮಾಡುತ್ತಾನೆ; - ಈ ಉತ್ತರದ ವಿವರಣೆಯನ್ನು ಸ್ಪಷ್ಟವಾಗಿ ವಿಕದಪಡಿಸು

ಬೀರಬಲ ಎಲೆಗಳನ್ನು ತಿರುವಿಹಾಕದಿದ್ದರೆ ಕೊಳೆತುಹೋಗುತ್ತವೆ,ಕುದುರೆಯನ್ನು ದಿನಾಲು ತಿರುವದಿದ್ದರೆ ಅದು ಚನ್ನಾಗಿ ನಡೆಯಲಾರದು, ಭೂಮಿಯನ್ನು ಚೆನ್ನಾಗಿ ತಿರುವಿಹಾಕದಿದ್ದರೆ, ಬಿತ್ತಿದ ಪೈರುಗಳು ನಷ್ಟವಾಗಿ ಹೋಗುತ್ತಿವೆ. ವಿದ್ಯೆಯನ್ನು ಮೇಲಿಂದಮೇಲೆ ಪುನಶ್ಚರಣ ಮಾಡದಿದ್ದರೆ ಮರೆತುಹೋಗುತ್ತದೆ. ಬಾರಶಹನು ಬೀರಬಲನ ವಿವರಣೆಯಿಂದ ಹೃಷ್ಟಮಾನಸನಾದನು.
-೧೫, ಮಾವಿನ ಹಣ್ಣಿನ ಸಿಪ್ಪೆ)-

ಒಂದುದಿವಸ ಒಬ್ಬನು ಬಾದಶಹನಿಗೆ ಕೆಲವು ಉತ್ತಮವಾದ ಮಾವಿನ ಹಣ್ಣುಗಳನ್ನು ಕಾಣಿಕೆಯಾಗಿ ಕಳುಹಿಕೊಟ್ಟಿದ್ದನು, ಬಾದಶಹನು ಅವುಗಳಲ್ಲಿಯ ಕೆಲವು ಹಣ್ಣುಗಳನ್ನು ತನ್ನ ರಾಣೀವಾಸದ ಜನರಿಗೆಲ್ಲ ಹಂಚಿಕೊಟ್ಟು ಉಳಿದವುಗಳನ್ನು ತನ್ನ ಮುಖ್ಯ ರಾಣಿಯಬಳಿಗೆ ಕಳುಹಿಕೊಟ್ಟು ಹಿಂದಿನಿಂದ ತಾನೂ ಹೋಗಿ ಇಬ್ಬರೂ ಕೂಡಿಕೊಂಡು ತಿನ್ನ ಹತ್ತಿದರು, ಬಾದಕಹನು ಹಣ್ಣುಗಳನ್ನು ತಿಂದು ಸಿಪ್ಪೆಗಳನ್ನೂ ಬೀಜವನ್ನು ರಾಣಿಯ ಬೆನ್ನ ಹಿಂದೆ ಚೆಲ್ಲಹತ್ತಿದನು, ಅದನ್ನು ರಾಣಿಯುನೋಡಿ ಮನಸ್ಸಿನಲ್ಲಿ "ನನ್ನ ಕಿಂ

ಅಕಬರ ಬೀರಬಲ ಚಾತುರವಾದ ಏನೋದ ಕಥೆಗಳು.
೪೫

ತಲೂ ತಾನು ಹೆಚ್ಚು ತಿಂದೆನೆಂಬದನ್ನು ತೋರಿಸಬೇಕೆಂದು ನನ್ನ ಹಿಂದೆ ಚಲ್ಲುತ್ತಿರಬಹುದು” ಎಂದು ಕಲ್ಪನೆಮಾಡಿಕೊಂಡು ಸುಮ್ಮನಿದ್ದಳು.
ಮುಂದೆ ಸ್ವಲ್ಪ ಹೊತ್ತಿನಲ್ಲಿ ಬೀರಬಲನು ಅವರಿಬ್ಬರು ಕುಳಿತುಕೊಂಡ ಅಂತಪುರಕ್ಕೆ ಬಂದನು. ಆಗ ಬಾದಶಹನು ಬೇಗಮನಿಗೆ ಹಾಸ್ಯ ಮಾಡಬೇಕೆಂದು ಯೋಚಿಸಿ ಬೀರಬಲನಿಗೆ ಅನ್ನುತ್ತಾನೆ- "ಬೀರಬಲ ಇವಳು ಎಷ್ಟು ತಿನ್ನಾಸಕಳು ಇದ್ದಾಳೆ ನೋಡಿದಿಯಾ: ? ನಾನು ಇಷ್ಟು ಹೊತ್ತಾದರೂ ಒಂದು ಹಣ್ಣನ್ನು ಸಹ ತಿನ್ನಲಿಲ್ಲ, ಆದರೆ ಇವಳು ಬಹಳ ಹಣ್ಣುಗಳನ್ನು ತಿಂದು ಸಿಪ್ಪೆಯನ್ನೂ ಬೀಜಗಳನ್ನೂ ರಾಶಿರಾಶಿಯಾಗಿ ಹಾಕಿಬಿಟ್ಟಿದ್ದಾಳೆ ” ಎಂದು ಪರಿಹಾಸಮಾಡಿದನು. ಅದಕ್ಕೆ ಸಮರ್ಪಕವಾದ ಉತ್ತರವನ್ನು ಕೊಡಲಸಮರ್ಥಳಾಗಿ ರಾಣಿಯು ಮುಖವನ್ನು ತಗ್ಗಿಸಿಕೊಂಡು ಕುಳಿತುಬಿಟ್ಟಳು, ಬೀರಬಲನು ಬೇಗಮ್ಮನ ದುರ್ದೆಶೆಯನ್ನು ಕಂಡು ಅವಳ ಪಕ್ಷವನ್ನು ವಹಿಸಿ, ಬಾದಶಹನಿಗೆ ಅನ್ನುತ್ತಾನೆ; “ ಪೃಥ್ವಯೊಡೆಯನೇ! ! ರಾಜಿನಿಯವರು ಬಹುತಿನ್ನಾಸಕರಿದ್ದಾರೆಂಬ ಸಂಗತಿಯು ಸ್ಪಷ್ಟವಾಗಿ ಕಂಡುಬರುತ್ತದೆ, ಆದರೆ ತಾವು ಅವರಕಿಂತಲೂ ಅಧಿಕವಾದ ತಿನ್ನಾಸಕರಿದ್ದಂತೆ ಕಂಡುಬರುತ್ತದೆ; ಅದು ಹ್ಯಾಗಂದರೆ, ರಾಜಿನಿಯವರು ಹಣ್ಣುಗಳನ್ನು ತಿಂದುತಿಂದು ಬೀಜಗಳನ್ನೂ ಸಿಪ್ಪೆಯನ್ನೂ ಚೆಲ್ಲಿಕೊಟ್ಟಿರುವರು ತಾವು ಅವುಗಳನ್ನು ಸಹಾ ತಿಂದುಬಿಟ್ಟಿದ್ದೀರಿ, ಇದರಮೇಲಿಂದ ಯಾರುಹೆಚ್ಚು ಬುಭುಕ್ಷಿತರಿರುವರೆಂಬದು ಸಹಜವೇ ವ್ಯಕ್ತವಾಗುತ್ತದೆ.
ಬೀರಬಲನ ಸಮಯೋಚಿತ ಉತ್ತರವನ್ನು ಕೇಳಿ ಬಾದಶಹನು ನಿರುತ್ತರನಾಗಿ ಕುಳಿತುಕೊಂಡನು, ಬೇಗಮ್ಮಳಿಗೆ ಪರಮಾನಂದವಾಯಿತು.

-(೧೬ ಕೈಯೊಳಗಿನ ಕಂಕಗಳೂ ಗಡ್ಡದೊಳ ಕೂದಲುಗಳು.)-

ಒಂದು ದಿವಸ ಬಾದಶಹನ ಮತ್ತು ಬೀರಬಲನೂ ಕೂಡಿಕೊಂಡು ಏಕಾಂತಗೃಹದಲ್ಲಿ ಮಾತನಾಡುತ್ತ ಕುಳಿತುಕೊಂಡಿದ್ದರು. ಆ ಸಮಯದಲ್ಲಿ ಬಾದಶಹನು ಅನ್ನುತ್ತಾನೆ, ನೀನು ಬಹಳಮಾಡಿ ನಿನ್ನ ಪತ್ನಿಯ ಹಸ್ತಸ್ಪರ್ಶವನ್ನು ಪ್ರತಿದಿನದಲ್ಲಿ ಎಷ್ಟೋ ಸಾರೆ ಮಾಡುತ್ತಿರಬಹುದು ಅಂದಮೇಲೆ ಅವಳ ಕೈಯಲ್ಲಿದ್ದ ಕಂಕಣಗಳು ಎಷ್ಟಿರುತ್ತವೆಂಬ ಸಂಗತಿಯು ನಿನಗೆ ಗೊತ್ತು ಇರಬಹುದು; ಇದ್ದರೆ ಅವುಗಳ ಸಂಖ್ಯೆಯನ್ನು ತಿಳಿಸು," ಎಂದು ಕೇಳಿದನು.
ಬಾದಶಹನ ಪ್ರಶ್ನೆಯನ್ನು ಕೇಳಿ ಬೀರಬಲನು ವಿಚಾರದಲ್ಲಿ ಬಿದ್ದನು ಅವನು ಮಿಥ್ಯಾವಾದಿಯಾಗಿದ್ದಿಲ್ಲ ಆಗ ಅವನು ಹೇಳಿದ್ದೇನಂದರೆ, ಪೃಥ್ವಿನಾಥ, ನಾನು ನನ್ನ ಪತ್ನಿಯ ಹಸ್ತಸ್ಪರ್ಶವನ್ನು ದಿವಸಕ್ಕೆ ಒಂದೆರಡು ಸಾರೆಮಾತ್ರ ಮಾಡುತ್ತಿರುವೆನು ಆದರೆ ತಮ್ಮ ಕೈಗಳು ನೂರಾರು ಸರತಿಗಡ್ಡವನ್ನು ಹಿಡಿದುಕೊಳ್ಳುತ್ತವೆ, ಹೀಗಾದಮೇಲೆ ತಮ್ಮ ಗಡ್ಡದಲ್ಲಿರುವ ಕೂದಲುಗಳ ಸಂಖ್ಯೆಯು ತಮಗೆ ವಿದಿತವಾಗಿರಬಹು. ಆದರಿಂದ ಆಕೂದಲುಗಳ ಸಂಖ್ಯೆಯು ಎಷ್ಟಿರುವದೆಂಬುದನ್ನು ದಯಮಾಡಿ ಹೇಳಬೇಕು.
ಬೀರಬಲನ ಈ ಪ್ರಶ್ನೆಯಿಂದ ಬಾದಶಹನು ಕೆಲವು ಹೊತ್ತು ಸ್ತಬ್ಧನಾಗಿ ಕುಳಿತುಕೊಂಡು ಆಮೇಲೆ ಪುನಃ ನುಡಿದದ್ದೇನಂದರೆ, ಗಡ್ಡದೊಳಗಿನ ಕೂದಲುಗಳನ್ನು ಎಣಿಸಲು ಯಾರಿಗೂ ಸಾಧ್ಯವಲ್ಲ, ಆದರೆ ಕಂಕಣಗಳನ್ನು ನೀನು ಸಹಜವಾಗಿ ಲೆಕ್ಕ ಮಾಡಿರಬಹುದು ” ಬೀರಬಲನು ಅನ್ನು ತ್ತಾನೆ; “ ಮಹಾರಾಜ ಸ್ತ್ರೀಯರ ಮನಸ್ಸು ಚಂಚಲವಾದದ್ದು ಒಂದೊಂದುಸಾರೆ ಅವರು ಹೆಚ್ಚು ಕಂಕಣಗಳನ್ನು ಇಟ್ಟು ಕೊಳ್ಳುತ್ತಾರೆ ಒಂದೊಂದು ಸಾರೆ ಕಡಿಮೆ ಇಟ್ಟುಕೊಳ್ಳುತ್ತಾರೆ. ಆದರೆ ನೀವು ದಿನಾಲು ಅಂತಪುರಕ್ಕೆ ಎಷ್ಟೋ ಸಾರೆ ಹೋಗಿಬರುತ್ತಿರುತ್ತೀರಿ; ಅದರಿಂದ ಅಂತಃಪುರಕ್ಕೆ ಹತ್ತಿ ಹೋಗುವ ಸ್ಥಳದಲ್ಲಿ ಪಾವಟಿಗೆ (ಮೆಟ್ಟು) ಗಳು ಎಷ್ಟಿರುತ್ತವೆಂಬದನ್ನು ಲೆಕ್ಕಮಾಡಿರಬಹುದು "
ಬಾದಶಹನು ಅನ್ನುತ್ತಾನೆ: . ಬೀರಬಲ ? ನಾನು ಆ ಪಾವಟಿಗೆಗೆ ಳನ್ನು ಎಂದೂ ಎಣಿಸಿ ನೋಡಿಲ್ಲ.
ಬೀರಬಲನು ಆ ಮಾತಿಗೆ ಅನ್ನುತ್ತಾನೆ: “ ನೀವು ಸ್ಥಿರವಾದ ಪಾವಟಿಗೆಗಳನ್ನೇ ಎಣಿಸಿದಿದ್ದ ಮೇಲೆ, ನಾನು ಅನಿಯಮಿತವಾಗಿರುವ ಕಂಕಣಗಳನ್ನು ಎಣಿಸಿರುವ ಸಂಭವವು ಹೇಗೆ "
ಬಾದಶಹನು ಬೀರಬಲನ ಚಾತುರ್ಯದಿಂದ ಆನಂದವುಳ್ಳವನಾದನು

-( ೧೭ ನೂತನ ದಿವಾನ. )-

ಒಂದು ದಿವಸ ಬಾದಶಹನೂ ಬೀರಬಲನೂ ವಿನೋದದ ಮಾತುಗಳ ನಾಡುತ್ತ ಕುಳಿತುಕೊಂಡಿರಲು, ಬೀರಬಲನು ಬಾದಶಹನ ಚೇಷ್ಟೆಮಾಡಿ ನಕ್ಕನು, ಆಗ ಬಾದಶಹನ ಮನಸ್ಸು ಬೇರೆಕಡೆಗೆ ಇದ್ದದರಿಂದ, ಇವನು ನಗುವ ಧ್ವನಿಯನ್ನು ಕೇಳಿ, ಕೋಪವು ಬಂತು ಕೂಡಲೆ ಬಾದಶಹನು ಬೀರಬಲನ ಮನಸಿಗೆ ಹತ್ತುವಂತೆ ಮಾತಾಡಿದನು ಮೊದಲು ಅದು ಪರಿಹಾಸ ವೆಂದೇ ಬೀರಬಲನು ತಿಳಿದುಕೊಂಡನು ಆದರೆ ಬಾದಶಹನ ನೇತ್ರಗಳು ಹೆ ಚ್ಚು ಹೆಚ್ಚು ಆರಕ್ತ ವರ್ಣವುಳ್ಳವುಗಳಾಗುವದನ್ನು ನೋಡಿ ಸುಮ್ಮನೆ ಕುಳಿತುಕೊಂಡನು ಈಕಾರಣದಿಂದಂತೂ ಬಾದಶಹನ ಕೋಪವು ಮಿತಿಮಾರಿತು ಆಗ ಬಾದಶಹನು, “ ಬೀರಬಲ ! ನೀನು ನನ್ನೊಡನೆ ವಾದಮಾಡುತ್ತಿಯಲ್ಲವೆ ? ನೀನು ಈ ದಿವಸದಿಂದ ನನ್ನ ಓಲಗಕ್ಕೆ ಬರಬೇಡ ಹೊರಟು ಹೋಗು ? ” ಎಂದು ಹೇಳಿದನು. ಆಗ ಬೀರಬಲನು; ಬಾದಶಹನಿಗೆ ಅತಿಶಯಕೋಪವುಂಟಾಗಿರುವದರಿಂದ ಏನೂ ಮಾತಾಡದೆ ಸುಮ್ಮನೆ ಹೊರಟು ಹೋದನು.
ಒಂದುತಿಂಗಳು ಕಳೆದು ಹೋಯಿತು ಬಾದಶಹನು ಬೀರಬಲನ ಹೆಸರನ್ನೇ ಎತ್ತಲಿಲ್ಲ ದಿವಾನ ಪದವಿಯನ್ನು ಬೇರೊಬ್ಬನಿಗೆ ಕೊಟ್ಟುಬಿಟ್ಟನು.
ಬೀರಬಲನು ತನ್ನ ಕೆಲಸದಿಂದ ದೂರವಾದ ಮೇಲೆ ಒಂದು ತಿಂಗಳ ವರೆಗೆ ಗೃಹದಲ್ಲಿಯೇ ವಾಸಮಾಡಿಕೊಂಡಿದ್ದನು. ಆ ಮೇಲೆ ಎಲ್ಲಿಯೋ ಹೊರಟು ಹೋದನು. ಈ ಸಂಗತಿಯು ಅವನ ಮನೆಯವರಿಗೆ ಸಹಾ ತಿಳಿಯದೆ ಹೋಯಿತು ಅವರು ಸ್ವಸ್ಥವಾಗಿ ದಿಲ್ಲಿಯಲ್ಲಿಯೆ ಇದ್ದು ಬಿಟ್ಟರು. ಈ ಪ್ರಕಾರ ಮೂರು ತಿಂಗಳುಗಳು ಕಳೆದು ಹೋದವು.
ನೂತನವಾಗಿ ಬಂದ ದಿವಾನನ ಮೇಲೆ ಬಾದಶಹನ ನಂಬಿಗೆಯು ಪೂರ್ಣವಾಗಿಲ್ಲ, ಅದರಿಂದ ಮತ್ತೊಬ್ಬ ದಿವಾನನ್ನು ನಿಯಮಿಸಿಕೊಳ್ಳ ಬೇಕೆಂದು ಯೋಚಿಸಿ; “ ಯಾವ ಮನುಷ್ಯನು, ದಿಲ್ಲಿಯ ಓಲಗದಲ್ಲಿ ಕೇಳಲ್ಪ ಡುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಗಳನ್ನು ಹೇಳುವನೋ ಅವನಿಗೆ ದಿವಾನಗಿರಿಯನ್ನು ಕೊಡುತ್ತೇನೆ, ಯಾವನಿಂದ ಎಲ್ಲ ಪ್ರಶ್ನೆಗಳ ಉತ್ತರವನ್ನು ಹೇಳಲಿಕ್ಕೆ ಆಗುವದಿಲ್ಲವೋ ಅಂಥವನನ್ನು ನಾವು ಸ್ಪೀಕರಿನ ಲಾರೆವು ” ಎಂದು ಬರೆದು ಜಾಹೀರ ಪತ್ರಿಕೆಗಳನ್ನು ದೇಶದೇಶಗಳಿಗೆ ಕಳು ಹಿಕೊಟ್ಟನು ಮುಂದೆ ಒಂದು ತಿಂಗಳಾದರೂ ಯಾರೂ ಬರಲಿಲ್ಲ ಆಗ ಬಾದ ಶಹನು ಪುನಃ “ ಈಗ ನನ್ನ ದರಬಾರದಲ್ಲಿರುವವರು ಯಾರಾದರೂ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಕೊಟ್ಟರೆ; ಅವರಿಗೆ ಸಹಾ ದಿವಾ ನಗಿರಿಯ ಉಚ್ಚ ಪದವಿಯನ್ನು ಕೊಡುತ್ತೇನೆಂಬದಾಗಿ ” ಹೇಳಿದನು ಆದ ರೂ ಯಾರೂ ಮುಂದೊರೆಯಲಿಲ್ಲ.
ಈ ಪ್ರಕಾರ ಷಣ್ಮಾಸಗಳು ಕಳೆದು ಹೋದವು ಆ ಮೇಲೆ ನಾಲ್ಕಾರು ಜನರು ದಿವಾನಗಿರಿಯನ್ನು ಹೊಂದಬೇಕೆಂಬ ಆಸೆಯಿಂದ ಬಂದು ಬಾದ ಶಹನಿಗೆ ಬೆಟ್ಟಿಯಾದರು ಕೂಡಲೆ ಒಂದು ಮಹಾಸಭೆಯು ನೆರಸಲ್ಪಟ್ಟಿತು. ಆಸಭೆಗೆ ದರಬಾರೀ ಜನರ ಹೊರತು ಬೇರೆಯವರಿಗೆ ಬರುವದಕ್ಕೆ ಪ್ರತಿಬಂ ಧವಿತ್ತು ದಿವಾನ ಪದವಿಯನ್ನು ಹೊಂದಬೇಕೆಂದು ಬಂದನಾಲ್ಕಾರು ಜನರು ಸಭೆಗೆ ಬಂದರು ಅವರಲ್ಲಿ ಒಬ್ಬನು ಅತಿ ಸಡಿಲವಾದ ಚಲ್ಲಣವನ್ನು ಹಾಕಿ ಕೊಂಡು ಬಿಗಿಯಾಗಿರುವ ಅಂಗಿಯನ್ನು ತೊಟ್ಟುಕೊಂಡಿದ್ದನು. ತಲೆಗೆ ಒಂ ದು ರುಮಾಲವನ್ನು ಒಂದುಕಣ್ಣು ಮುಚ್ಚುವಂತೆ ಸುತ್ತಿಕೊಂಡಿದ್ದನು ಅವನಗಡ್ಡದ ಕೂದಲುಗಳಲ್ಲಿ ಅರ್ಧಕರೇ ಕೂದಲುಗಳೂ, ಅರ್ಧಬಿಳೇಕೂದಲುಗಳೂ ಇದ್ದವು ಮೋರೆಯು ಕಾಂತಿಯುಕ್ತವಾಗಿತ್ತು. ಇಂಥ ಮನುಷ್ಯನನ್ನು ಕಂಡು ದರಬಾರಿಗಳೆಲ್ಲರಿಗೂ ನಗೆಯು ಬರಹತ್ತಿತು ಪರೀಕ್ಷಕರು ಆ ಜನರನ್ನು ಮುಂದಕ್ಕೆ ಕರೆದು ಪ್ರಶ್ನೆಗಳನ್ನು ಮಾಡುತ್ತಿದರು.
ಪ್ರಥಮದಲ್ಲಿ ಜಗನ್ನಾಥ ಪಂಡಿತನು ಪ್ರಶ್ನೆ ಮಾಡಿದನು ಈದಿವಸದ ಸಭೆಯಲ್ಲಿ ನಾವು ಮಾಡಿದ ಯಾವತ್ತು ಪ್ರಶ್ನೆಗಳಿಗೆ ಯಾವನು ಸಮರ್ಪಕವಾದ ಉತ್ತರಗಳನ್ನು ಕೊಡುವನೋ ಅವನಿಗೆ ದಿವಾನ ಪದವಿಯು ಕೊಡಲ್ಪಡುವದು. ನಾನು ಈಗ ಪ್ರಥಮದಲ್ಲಿ ಮಾಡಿದ ಪ್ರಶ್ನೆಗೆ ಉತ್ತರವನ್ನು ಹೇಳದಿದ್ದರೆ, ಅವರಿಗೆ ಎರಡನೇ ಪ್ರಶ್ನೆಯನ್ನು ಕೇಳಲಾರೆವು ನಾನು ಕೇಳುವ ಪ್ರಥಮ ಪ್ರಶ್ನೆಯೇನಂದರೆ “ ಈ ಸೃಷ್ಟಿಯಲ್ಲಿರುವ ಯಾವತ್ತು ಸಮುದ್ರಗಳಲ್ಲಿ ಕೂಡಿ ಎಷ್ಟು ಮುತ್ತಿನ ಸಿಂಪುಗಳಾಗುವವು ?
ಈ ಪ್ರಶ್ನೆ ಉತ್ತರವನ್ನು ಹೇಳಲಿಕ್ಕೆ ಆ ಗಡ್ಡದ ಮನುಷ್ಯನೊಬ್ಬನೇ ಮುಂದೆ ಬಂದು, ಈ ಸಂಸಾರದಲ್ಲಿಯ ಯಾವತ್ತು ಮನುಷ್ಯರ ಕಣ್ಣುಗಳು ಎಷ್ಟು ಸಂಖ್ಯೆಯಾಗುವ ಅಷ್ಟು ನಿಂಪುಗಳು ಸಮುದ್ರದಲ್ಲಿರುವವು ,, ಎಂದು ಉತ್ತರಕೊಟ್ಟನು ಕೂಡಲೆ ಎಲ್ಲ ಕಡೆಯಿಂದಲೂ ವಾಹವಾ ಶಹಬಾಸ, ಧನ್ಯ ಧನ್ಯ,, ಎಂಬ ಆನಂದೋದಾರವು ಕೇಳಬರಹತ್ತಿತು ಆಮೇಲೆ ಜಗನ್ನಾಥ ಪಂಡಿತನು ಎರಡನೇ ಪ್ರಶ್ನೆಯನ್ನು ಮಾಡಿದನು ಶರೀರಕ್ಕೆ ಪ್ರಥಮ ಸುಖವ್ಯಾವದು ? ” " ಆರೋಗ್ಯವು, ಎಂದು ಉತ್ತರಕೊಟ್ಟನು
ಆಮೇಲೆ ಖಾನಖಾನನೆಂಬ್ಬವನು “ಎಲ್ಲಕ್ಕೂ ಶ್ರೇಷ್ಠವಾದ ಶಸ್ತ್ರವು ಯಾವದು ಎಂದು ಹೇಳಿದನು. ಅದಕ್ಕೆ " ಬುದ್ಧಿಯು, ಯಾವತ್ತು ಶಸ್ತ್ರಗ ಳಿಗಿಂತಲೂ ಮಿಗಿಲಾದದ್ದೆಂದು ,, ಉತ್ತರ ಕೊಟ್ಟನು.
ರಾಜಾ ತೋಡರಮಲ್ಲನು (( ತೌಡು, ಮತ್ತು ಮಳಲು, ಎರಡೂ ಒಂದಕ್ಕೊಂದು ಬೆರತುಕೊಳ್ಳಲು ಆ ಮಿಶ್ರಣವನ್ನು ನೀರಿನಲ್ಲಿ ಹಾಕದೆ, ಬೇರೆ ಯಾವ ಉದಾಯದಿಂದ ಪೃಥಕ್ಕರಣ ಮಾಡಲಿಕ್ಕೆ ಬರುವದು ಎಂದು ಕೇಳಿದನು. ಅದಕ್ಕೆ ಅವನು ( ಆಮಿಶ್ರಣವನ್ನು ಭೂಮಿಯ ಮೇಲೆ ಆಗಲವಾಗಿ ಹರವಬೇಕು ಅಂದರೆ ತೌಡನ್ನು ಗುಬ್ಬಿಗಳು ತಿಂದು ಬಿಡುತ್ತವೆ ಕಡೆಗೆ ಮಳಲೇ " ಯೋಗ್ಯನಾದವನು ಬೀರಬಲನು, ಪಾಮರನಾದ ನನ್ನಿಂದ ಈ ಅಧಿಕಾರವು ಸುಯಂತ್ರವಾಗಿ ಸಾಗಲಾರದು"
ಅದಕ್ಕೆ ಬಾದಶಹನು ಹೇಳುತ್ತಾನೆ; - ನಾನು ಬೀರಬಲನನ್ನು ಅಧಿ ಕಾರದಿಂದ ದೂರಮಾಡಿದೆನು ಅವನು ಎಲ್ಲಿರುವನೆಂಬ ಸಂಗತಿಯು ಇದುವ ರೆಗೆ ತಿಳಿಯದೆ ಹೋಯಿತು ಈ ಕಾರಣದಿಂದ ಹೊಸ ಮನುಷ್ಯನನ್ನು ಅವ ಕ್ಯವಾಗಿ ನಿಯಮಿಸಿಕೊಳ್ಳಬೇಕಾಯಿತು, ಇನ್ನು ಮೇಲೆ ಅವನು ಇರುವಸ್ಥ ಳವು ವಿದಿತವಾದರೆ ಅವನನ್ನು ಅವಶ್ಯವಾಗಿ ಕರೆಯಿಸಿಕೊಳ್ಳುವೆನು ಅಲ್ಲಿಯೆ ತನಗೆ ನೀನು ಕೆಲಸವನ್ನು ಸಾಗಿಸು ?
ಅದಕ್ಕೆ ನೂತನಮಂತ್ರಿಯು ಅನ್ನುತ್ತಾನೆ . "ದೊರೆಯೇ ತಾವು ಮನಸ್ಸುಗೊಟ್ಟು ಅವನನ್ನು ಶೋಧಮಾಡಿಸಿದ್ದರೆ ನಿಶ್ಚಯವಾಗಿ ಸಿಕ್ಕೇಸಿ ಗುತ್ತಿದ್ದನು.
ಬಾದಶಹನು -ಇಲ್ಲ ಇಲ್ಲ; ನಾನು ಬಹುವಿಧದಿಂದ ಶೋಧಮಾಡಿಸಿದೆನು, ಇನ್ನು ಮಾಡತಕ್ಕ ಪ್ರಯತ್ನವು ಒಂದೇ ಉಳಿದಿರುವದು. ಅದನ್ನಷ್ಟು ಮಾಡಿಬಿಟ್ಟರೆ ಅವನು ಸಿಗುವದೆಂದು ನಾನು ನಂಬಿದ್ದೇನೆ.
ನೂತನ ಮಂತ್ರಿ-ಆದರೆ ಜಹಾವನಾ ? ಅವನು ಇನ್ನು ಕೆಲವು ದಿವಸಗಳ ಮೇಲೆ ಬಂದು ಬೆಟ್ಟಿಯಾದರೆ ಅವನಿಗೆ ಮೊದಲಿನ ಕೆಲಸವನ್ನು ಕೊ ಡುವಿರಾ !
ಬಾದಶಹ ಕೊಡುವೆನು, ಅವನನ್ನು ಆದಷ್ಟು ಸಾಹಸಪಟ್ಟು ಶೋಧಮಾ ಡಿ ಕರಿಸಿಕೊಳ್ಳಬೇಕೆಂಬ ಆತುರತೆಯುಂಟು.
ನೂತನ ಮಂತ್ರಿ-ಅವನು ವಾಸಮಾಡಿಕೊಂಡಿರುವ ಸ್ಥಳವು ನನಗೆ ವಿದಿತ ವದೆ ?
ಬಾದಶಹ ಆ ಸ್ಥಳವನ್ನು ನೀನು ನನಗೆ ತಿಳುಹಿಸಿದರೆ ನಾನು ನಿನ್ನವುಪ ಕಾರವನ್ನು ಯಾವ ಜನ್ಮ ಪರಿಯಂತರ ಮರೆಯಲಾರೆನು. ಈಪ್ರಕಾರ ಬಾದಶಹನಿಗಿರುವ ಆತುರತೆಯನ್ನು ಕಂಡು, ತಾನು ಧರಿಸಿ ರುವ ಕೃತ್ರಿಮವೇಷವನ್ನು ತೆಗೆದು ಚೆಲ್ಲಿ ನಿಂತುಕೊಂಡನು. ಬಾದಶಹನಿಗೆ ಆತಿಸಂತೋಷವಾಗಿ ಅವನನ್ನು ಆಲಿಂಗನಮಾಡಿಕೊಂಡನು, ಸಭಿಕರೆಲ್ಲರು ಆನಂದದಿಂದ ಚಪ್ಪಾಳೆಗಳನ್ನು ಹೊಡೆಯಹತ್ತಿದರು,
ಆಮೇಲೆ ಬಾದಶಹನು ನೀನು ಇಷ್ಟು ದಿವಸಗಳವರೆಗೆ ಎಲ್ಲಿ ಇದ್ದೆ! ಎಂದು ಪ್ರಶ್ನೆ ಮಾಡಿದನು. ಆಗ ಬೀರಬಲನು ಹೇಳುತ್ತಾನೆ; ನಾನು ತಮ

ಸನ್ನಿಧಿಯಿಂದ ಹೊರಟುಬಂದು ಒಂದು ಮಾಸವರಿಯಂತರ ಗುಪ್ತವಾ
ಅಕಬರ ಬೀರಬಲ ಚಾತುರವಾದ ವಿನೋದ ಕಥೆಗಳು.
೫೧

ಮನೆಯಲ್ಲಿಯೇ ಇದ್ದೆನು, ಆಮೇಲೆ ಪ್ರಚ್ಛನ್ನ ವೇಷಧಾರಿಯಾಗಿ ಹಗಲು ರಾತ್ರಿಗಳಲ್ಲಿ ಪಟ್ಟಣದೊಳಗೆ ಸಂಚರಿಸಹತ್ತಿದೆನು ರಾತ್ರಿಯಲ್ಲಿ ನಾನುಕಳ್ಳರನ್ನು ಹಿಡಿಯುವಕೆಲಸವನ್ನು ಕೈಕೊಂಡಿದ್ದೆನು. ಇಷ್ಟಾದರೂ ನನ್ನನ್ನು ಯಾರೂ ಗುರುತಿಸಲಿಲ್ಲ ಆಮೇಲೆ ಈ ವೇಷದಲ್ಲಿ ನನ್ನನ್ನು ಯಾರೂ ಗುರುತಿಸಲಾರರೆಂದು ನಿಶ್ಚಯವಾದಮೇಲೆ ಪ್ರತಿದಿವಸ ಸಭೆಗೆ ಬಂದು ಅಲ್ಲಿಯ ವರ್ತಮಾನಗಳನ್ನು ತಿಳಿಯಹತ್ತಿದೆನು, ಈಸಭೆಯ ವರ್ತಮಾನವು ತಿಳಿಯೆ ಬರಲಾಗಿ ಈದಿವಸ ಇಲ್ಲಿಗೆ ಪ್ರಾಪ್ತನಾದೆನು.
ನೂತನ ಮಂತ್ರಿಗೆ ಕೊಡಬೇಕೆಂದು ತರಿಸಿಕೊಂಡಿದ್ದ ಉಡುಪುಗಳನ್ನೆಲ್ಲ ಬೀರಬಲನಿಗೇ ಕೊಟ್ಟು ಅವನ ಮೊದಲಿನಕೆಲಸ ನಿಯಮಿಸಿದನು. ಆದರಿಂದ ಎಲ್ಲ ಸಭಿಕರಿಗೂ ನಗರವಾಸಿಗಳಿಗೂ ಅತ್ಯಾನಂದವಾಯಿತು.

-(೧೮) ನಾಲ್ಕುಜನ ವರ್ತಕರೂ ಮತ್ತು ಬಾದಶಹನು.)-

ಗ್ರೀಷ್ಮಕಾಲವು ಆರಂಭವಾಗಿತ್ತು, ಸುಳಿಗಾಳಿಯು ಮೆಲ್ಲಮೆಲ್ಲಗೇ ಸುಳಿದಾಡುತ್ತಿತ್ತು, ಋತುಮಾನಕ್ಕನುಸರಿಸಿ ತೆಳ್ಳಗಿನ ವಸ್ತ್ರಗಳನ್ನು ಹೊದ್ದುಕೊಂಡು ಬಾದಶಹನೂ ಬೀರಲನೂ ಉದ್ಯಾನವನದಲ್ಲಿ ಸಂಚರಿಸುತ್ತಿದ್ದರು. ಆಗ ಬಾದಶಹನು ಬೀರಬಲನಿಗೆ ಕೇಳುತ್ತಾನೆ;- " ಬೀರಬಲ ವರ್ತಕರು ತಾವು ಚತುರತಾಯಿಯ ಮಕ್ಕಳು ” ಎಂದು ಹೇಳಿಕೊಳ್ಳುತ್ತಾರೆ. ಇದು ನಿಜವೇ ?
ಬೀರಬಲ-ನಿಜವು.
ಹೀಗಿದ್ದರೆ ಅದನ್ನು ಸಿದ್ಧಮಾಡಿ ತೋರಿಸು! ಎಂದು ಬಾದಶಹನು ಹೇಳಿದನು. ಆಗ ಬೀರಬಲನು ಪೇಟೆಯೊಳಗಿಂದ ಉದ್ದಿನಕಾಳುಗಳನ್ನು ತರಿಸಿ ನಾಲ್ಕು ಜನ ವರ್ತಕರನ್ನು ಕರೆಯಿಸಿ ಅವರೆದುರಿಗೆ ಆ ಕಾಳುಗಳನ್ನಿಟ್ಟು " ವರ್ತಕರೇ ಈ ಕಾಳಿನ ಹೆಸರನ್ನು ಹೇಳಿರಿ ” ಎಂದು ಅಪ್ಪಣೆಮಾಡಿದನು.
ಆಗ ಚತುರತಾಯಿಯ ಮಕ್ಕಳಾದ ವರ್ತಕರಿಗೆ ವಿಚಾರವು ಬಿತ್ತು, ಈ ಉದ್ದಿನಕಾಳುಗಳನ್ನು ಅರಿಯದವರಾರು ? ಇದರ ಹೆಸರನ್ನು ಹೇಳುವದು ಸುಲಭಸಾಧ್ಯವದೆ; ಹೀಗಿದ್ದರೂ ಇದರ ಹೆಸರನ್ನು ಬಾದಶಹನು ಕೇಳಿ ತಿಳಿದುಕೊಳ್ಳಬೇಕಾದರೆ ಇದರಲ್ಲಿ ಏನೋ ಒಂದು ಗೂಢವಿರಬೇಕು, ಆದ್ದರಿಂದನಾವು ಇದರವಿಷಯದಲ್ಲಿ ಚನ್ನಾಗಿ ವಿಚಾರಮಾಡಿ ಹೇಳಬೇಕು ಎಂದು ಯೋಚಿಸತೊಡಗಿದರು. ಈಪ್ರಕಾರ ವಿಚಾರಮಗ್ನರಾದ ಆ ವರ್ತಕರನ್ನು

೫೨
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,

ಕುರಿತು ಬಾದಶಹನು ಅನ್ನುತ್ತಾನೆ;-ನೀವು ಇಷ್ಟು ವಿಚಾರಮಗ್ನರಾದದ್ದು ಯಾಕೆ ! ಇದರ ಹೆಸರನ್ನು ಹೇಳುವಿರೋ ಇಲ್ಲವೋ ? ಎಂದು ಕೇಳಿದನು. ಅಷ್ಟರಲ್ಲಿ ಒಬ್ಬ ವರ್ತಕನು ಮುಂದೆಬಂದು ಸ್ವಲ್ಪ ಉದ್ದಿನಕಾಳುಗಳನ್ನು ಕೈಯಲ್ಲಿ ತೆಗೆದುಕೊಂಡು ಹೇಳಿದ್ದೇನಂದರೆ ಈ ಕಾಳುಗಳು ಬಹಳಮಾಡಿ ಜೋಳವಾಗಿರಬಹುದು ” ಎಂದನು. ಮತ್ತೊಬ್ಬನು. “ ಛೇ ಅಲ್ಲ ಮೆಣಸಿನ ಕಾಳುಗಳು” ಎಂದು ಹೇಳಿದನು. ಮೂರನೆಯವನು. ( ಸುಳ್ಳು ಇವುಕಡಲೆಯ ಕಾಳಿಗಿಂತ ಸಣ್ಣವಾಗಿವೆ; ಇವುಗಳ ಹೆಸರು ನೆನಪಿಗೆ ಬರಲೊಲ್ಲದು? ಎಂದು ಅನ್ನ ಹತ್ತಿದನು. ಇವರ ಮಾತುಗಳನ್ನು ಕೇಳಿ ಬಾದಶಹನು “ ನೀ ಎಲ್ಲರೂ ಭ್ರಾಂತರಾದಂತೆ ಕಾಣುತ್ತದೆ, ಇವು ಉಪ್ಪಿನಕಾಳುಗಳಲ್ಲವೇ ? ಎಂದನು. ಆಗ ವರ್ತಕನೊಬ್ಬನು ಅನ್ನುತ್ತಾನೆ ( ಹಾ ಹಾ ? ಖಾವಿಂದ ಅದೇ ಅದೇ, ಬಾದಕಹನು ( ಅದೇ ?” ಎಂದರೇನು ! ಹೆಸರು ಹೇಳಬಾರದೆ ಎಂದನು, ಅದಕ್ಕೆ ವರ್ತಕನು ಶ್ರೀನಾಥ ! ಇದೇ ಈಗನೀವು ಹೇಳದಿರಲ್ಲಾ; ಅದೇ ” ಅದಕ್ಕೆ ಬಾದಶಹನು ಪುನಃ ನಾನು ಈಗ ಯಾವಹೆಸರನ್ನು ಹೇಳಿದೆನು ? ವರ್ತಕನು ಖಾನಿಂದ ಆ ಹೆಸರು ಮರೆತುಹೋಯಿತು, ಬಾದಶಹನು “ ಏನು ? ಉದ್ದು ” ವರ್ತಕರು ಜಹಾಪನಾ ದೇ ? ಎಂದನು. ಇಷ್ಟಾದರೂ ಆ ವರ್ತಕರು " ಉದ್ದು ” ಎಂಬ ಹೆಸರನ್ನು ಹೇಳಲಿಲ್ಲ, ಇದನ್ನು ಕಂಡು ಬಾದಶಹನು ಸಂತುಷ್ಟನಾದನು.

-( ೧೯. ವಿಜ್ಞಾನವು ಅಧಿಕವೋ ! ದೇವರು ಅಧಿಕವೋ ? ) - -

ಒಂದು ಸಾರೆ ಅಕಬರ ಬಾದಶಹನ ಓಲಗದಲ್ಲಿ ಅನೇಕದೇಶದ ರಾಯಭಾರಿಗಳು ಕಪ್ಪವನ್ನು ಕೊಡಲೋಸುಗ ಮಿಲಿತರಾಗಿದ್ದರು. ಎಲ್ಲ ದರಬಾರದ ಜನರು ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿ ಕುಳಿತುಕೊಂಡಿದ್ದರು,ಬಾದಶಹನ ಸಮ್ಮುಖದಲ್ಲಿ ವಾರಾಂಗನೆಯರ ನೃತ್ಯಗಾಯನಾದಿಗಳು ನಡೆದಿದ್ದವು ಪರದೇಶದ ರಾಯಭಾರಿಗಳು ಅನೇಕ ದುರ್ಮಿಳವಾದ ಪದಾರ್ಥಗಳನ್ನು ಕಾಣಿಕೆಯಾಗಿ ಸಮರ್ಪಿಸುತ್ತಿದ್ದರು. ಆ ದಿವಸ ಬಾದಶಹನು ಸಾವಿರಾರುಜನ ಫಕ್ಕೀರರಿಗೂ, ಮುಲ್ಲಾ ಮೌಲವಿಗಳಿಗೂ ದಾನವನ್ನು ಕೊಟ್ಟನು. ಅಷ್ಯರಲ್ಲಿ ಬಾದಶಹನ ಮುಖ್ಯಗುರುವು ಬಂದನು, ಅವನಿಗೆ ಅನರ್ಘ್ಯವಾದ ಅನೇಕ ವಸ್ತುಗಳನ್ನು ಕಾಣಿಕೆಯಾಗಿ ಸಮರ್ಪಿಸಿದನು ಎಲ್ಲ ಜನರು ಆಶೀರ್ವಾದಮಾಡಿ ತಮ್ಮ ತಮ್ಮ ಸ್ಥಳಗಳನ್ನು ಕುರಿತು ಹೊರಟುಹೋದರು ಇದನ್ನೆಲ್ಲ ನೋಡಿ ಬೀರಬಲನಿಗೆ ಸ್ವಲ್ಪನಗೆಯು ಬಂತು, ಎಲ್ಲ ಕಾರ್ಯವು ಸಮಾಪ್ತಿಯಾದ ಮೇಲೆ ಬಾದಶಹನು- "ಬೀರಬಲ ದೇವರು ಅಧಿಕವೋ? ಅಥವಾ ವಿಶ್ವಾಸವು ಅಧಿಕವಾದದ್ದೋ" ಎಂದು ಪ್ರಶ್ನೆ ಮಾಡಿದನು. ಬೀರಬಲನು ಆಕ್ಷಣಕ್ಕೆ ಎದ್ದು ನಿಂತುಕೊಂಡು: "ಸ್ವಾಮಿಯೇ, ವಿಶ್ವಾಸವು ಅಧಿಕವಾದದ್ದು" ಎಂದು ಉತ್ತರಕೊಟ್ಟನು. ಬಾದಶಹ-- ವಿಶ್ವಾಸವು ಎಂದೂ ಅಧಿಕವಾಗಲಾರದು, ದೇವರಿದ್ದರೆ ವಿಶ್ವಾಸವುಂಟಾಗುವದು. ಬೀರಬಲ--ಹಾಗಲ್ಲ; ವಿಶ್ವಾಸದಿಂದಲೇ ದೇವರಲ್ಲಿ ಮಹತ್ವವುಂಟಾಗಿದೆ. ಬಾದಶಹ--(ಸ್ವಲ್ಪ ಕೃದ್ಧನಾಗಿ) ಬೀರಬಲ್ಲ ! ನೀನು ಹೇಳುವದು ಅಸಂಭಾವ್ಯವು, ದೇವರನ್ನು ಭಜನೆ ಮಾಡಿದರೆ ಅವನು ಪ್ರಸನ್ನನಾಗುವದಿಲ್ಲವೆ?

ಬೀರಬಲ-- ಅಹುದು, ನಿಜ; ನಾವು ದೇವರನ್ನು ವಿಶ್ವಾಸದಿಂದ ಭಜನೆ ಮಾಡಿದರೇ ಅವನು ಪ್ರಸನ್ನನಾಗುವನು. ಹಿಂದುಗಳಾದ ನಾವು ಮೂರ್ತಿ ಪೂಜಕರಾಗಿದ್ದೇವೆ, ಆದರೆ ಆ ಮೂರ್ತಿಗಳು ನಮಗೆ ಇಷ್ಟಾರ್ಥವನ್ನು ಕೊಡುವದಿಲ್ಲ. ನಾವು ಅವುಗಳಲ್ಲಿ ವಿಶ್ವಾಸವನ್ನಿಟ್ಟು ಪೂಜೆಮಾಡಿದರೇ ನಮ್ಮ ಮನೋಬಯಕೆಗಳು ಪೂರ್ಣವಾಗುವವು, ಇಲ್ಲದಿದ್ದರೆ ಇಲ್ಲಾ ?

ಈ ಮಾತಿಗೆ ಬಾರಹನು ಸಮ್ಮತಿಸದೇ. "ನೀನು ದೇವರಕಿಂತಲೂ ವಿಶ್ವಾಸವು ಅಧಿಕವಾದದ್ದೆಂದು ಪ್ರತ್ಯಕ್ಷ ಪ್ರಮಾಣದಿಂದ ತೋರಿಸುವಿಯಾ? ಎಂದು ಕೇಳಿದನು.

ಅದಕ್ಕೆ ಬೀರಬಲನು ಸ್ವಾಮೀ, ಈ ಕೆಲಸವು ಒಂದೆರಡು ದಿವಸಗಳಲ್ಲಿ ಸಾಧಿಸತಕ್ಕದ್ದಲ್ಲ.

ಬಾದಶಹ--ನಿನಗೆ ನಾನು ಒಂದು ತಿಂಗಳ ಅವಧಿಯನ್ನು ಕೊಡುತ್ತೇನೆ.
ಅಷ್ಟರಲ್ಲಿ ನೀನು ನಿನ್ನ ಮಾತನ್ನು ಸಿದ್ಧಮಾಡಿ ತೋರಿಸದಿದ್ದರೆ ನಿನ್ನ ಶಿರವು ನಿನ್ನ ದೇಹದಮೇಲೆ ನಿಲ್ಲಲಾರದು ಎಂಬ ಮಾತನ್ನು ಲಕ್ಷ್ಯದಲ್ಲಿ ಇಟ್ಟುಕೋ.

ಬೀರಬಲ-ಒಳ್ಳೇದು; ಹಾಗೇ ಆಗಲಿ.

ಈ ಸಂಗತಿಯು ನಡೆದು ನಾಲ್ಕಾರು ದಿವಸಗಳಾದಮೇಲೆ ಬೀರಬಲನು ಬಾದಶಹನ ಅಂತಃಪುರಕ್ಕೆ ಹೋಗಿ ಅವನದೊಂದು ಪಾದರಕ್ಷೆಯನ್ನು ಕದ್ದುಕೊಂಡು ಬಂದು, ಅದನ್ನು ಒಂದು ಉತ್ತಮವಾದ ರೇಶಿಮೆವಸ್ತ್ರದಲ್ಲಿ ಸುತ್ತಿ ನಗರದ ಬಹಿರ್ಭಾಗದಲ್ಲಿ ಗುಪ್ತರೀತಿಯಿಂದ ಒಂದು ಕಬರ(ಗೋರಿ)ವನ್ನು ಸಿದ್ಧಪಡಿಸಿ ಅದರಲ್ಲಿ ಆ ಪಾದರಕ್ಷೆಯ ಗಂಟನ್ನು ಯಿಟ್ಟು ಅದರಮೇಲೆ ಒಂದುಹಾಸುಗಲ್ಲನ್ನು ಭದ್ರವಾಗಿ ಕೂಡಿಸಿ ಅದರಮೇಲೆ ಒಬ್ಬ ಮುಸಲ್ಮಾನನನ್ನು ನಿಯಮಿಸಿ ಅವನಿಗೆ ಈ ಗೋರಿಯು ಯಾರದು ? ಎಂದು ಯಾರಾದರೂ ಪ್ರಶ್ನೆ ಮಾಡಿದರೆ ನೀನು ಇದು " ಯಕೀನ ಶಾಹಪೀರ ” ಎಂಬ ಸಾಧುಪುರುಷನ ಗೋರಿಯೆಂದು ಹೇಳು, ಮತ್ತು ನಿನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಜನರವಿಶ್ವಾಸವು ಇದರಮೇಲೆ ಉಂಟಾಗುವಂತೆ ಪ್ರಯತ್ನ ಮಾಡು ಎಂದು ಅಪ್ಪಣೆಯಿತ್ತನು.
ಅವನು ಬೀರಬಲನ ತೀಕ್ಷಾನು ಸಾರವಾಗಿ " ಜನರೊಳಗೆ ಅದರಪ್ರ ಶಂಸೆಯನ್ನು ಮಾಡಹತ್ತಿದನು ಅದರಿಂದ ಮುಂದೆ ನಾಲ್ಕಾರು ದಿವಸಗಳಾಗುವದರೊಳಗೆ ಜನ ಸಮುದಾಯವು ಆ ಗೋರಿಯದರ್ಶನಕ್ಕೆ ಹೋಗಿ ಬರ ಹತ್ತಿದರು. ಯಂತ್ರ, ಮಂತ್ರ, ತಂತ್ರಗಳನ್ನು ಮಾಡಹತ್ತಿದನು ದಿನಒಂದಕ್ಕೆ ಅಲ್ಲಿ ಜನಸಮುದಾಯವು ಹೆಚ್ಚು ಹೆಚ್ಚು ಕೂಡ ಹತ್ತಿತು ನನಗೆ ಯಂತ್ರ ಮಾಡಿ ಕೊಡಿರಿ, ನನಗೆ ದಾರವನ್ನು ಮಂತ್ರಿಸಿ ಕೊಡಿರಿ, ನನ್ನ ಮ ಗಳಿಗೆ ಭೂತಬಾಧೆಯಾಗಿದೆ, ಅದನ್ನು ಪರಿಹಾರ ಮಾಡಿಕೊಡಿರಿ ” ಎಂಬ ಜನರು ನಾಮುಂದೆ, ಮುಂದೆ, ಎಂದು ಹಾತೊರೆಯ ಹತ್ತಿದರು ಸ್ವಲ್ಪದಿವಸಗಳೊಳಗೆ ಯಕೀನಶಾಹಪೀರನ ವರ್ತಮಾನವು ದರಬಾರದವರೆಗೆ ಬಂದು ಮುಟ್ಟಿತು, ದರಬಾರಿ ಜನರೆಲ್ಲರೂ ಚಾದರ ಹಸ ಮುಂದೆ ಆ ನೀರನನ್ನು ಸ್ತೋತ್ರ ಮಾಡಹತ್ತಿದರು ಅವರಲ್ಲಿ ಒಬ್ಬನಂತೂ,"ಜಹಪನಾ ! ಹೂಮಾಯೂನ ಬಾದಶಹದವರು ಈ ಯಕೀನ ಶಹಾಪೀರನನ್ನು ಭಕ್ತಿಯಿಂದ ಪೂಜಿಸಿದ್ದರಿಂದಲೇ ಪುನಃ ಅವರಿಗೆ ರಾಜ್ಯ ಪ್ರಾಪ್ತವಾಯಿತು, ” ಎಂದು ಹೊಗಳಿದನು ಈ ಪ್ರಕಾರ ಪಟ್ಟಣದ ಜನರೆಲ್ಲರೂ ಆ ವೀರನನ್ನು ಹೊಗಳ ಹತ್ತಲು, ಬಾದಶಹನ ಮನಸ್ಸಿನಲ್ಲಿ ದರ್ಶನ ತೆಗೆದುಕೊಂಡು ಬರಬೇಕೆಂಬ ಇಚ್ಛೆಯು ಪ್ರಬಲವಾಯಿತು.
ಮರುದಿವಸ ಬಾದಶಹನು ತನ್ನ ಮಂತ್ರಿ ಮಂಡಲದವರನ್ನೂ ಮುತ್ಸ ದಿಗಳನ್ನೂ, ಸರದಾರರನ್ನೂ ಕರೆದುಕೊಂಡು ಪಾದಚಾರಿಯಾಗಿ ವೀರನ ದರ್ಶನಕ್ಕೆ ಹೋದನು. ಅಲ್ಲಿ ಜನಸಮುದಾಯವು ಬಹಳಕೂಡಿತ್ತು ಆನೇಕ ಪ್ರಕಾರದ ವಸ್ತುಗಳ ಕ್ರಯವಿಕ್ರಯವು ಭರದಿಂದ ನಡೆಯ ಹತ್ತಿತ್ತು ಬಾದಶಹನು ಅದನ್ನೆಲ್ಲ ನೋಡಿ ಸಂತೋಷಪಟ್ಟನು. ಹಿಂದೂ ಮತ್ತು ಮುಸಲ್ಮಾನ ಮುತ್ಸದ್ಧಿಗಳ ಸಹಿತವಾಗಿ ಗೋರಿಯಸಮೀಪಕ್ಕೆ ಹೋಗಿ ಪ್ರಾಣಾಮ ಮಾಡಿದನು ಆ ಜನರಲ್ಲಿ ಬೀರಬಲನೂ ಇದ್ದನು ಬಾಧಶಹನು ವೀರನ ಗೋರಿಗೆ ನಮಸ್ಕಾರ ಮಾಡು ಎಂದು ಆಗ್ರಹ ಮಾಡಿದನು ಆಗಬೀರಬಲನು ಅನ್ನುತ್ತಾನೆ; ಪೃಥ್ವಿನಾಥ, ತಾವು ದೇವರಕಿಂತಲೂ, ವಿಶ್ವಾಸವು ಅಧಿಕವಾದದ್ದೆಂದು ಒಪ್ಪಿಕೊಂಡರೆ ನಾನು ಪ್ರಣಾಮ ಮಾಡುತ್ತೇನೆ ” ಎಂದನು.
ಆಗ ಬಾದಶಹನು ಅನ್ನುತಾನೆ; ನಾನು ಈಗ ಸದ್ಯಕ್ಕೆ ವಿಶ್ವಾಸ ಕ್ಕಿಂತಲೂ, ದೇವರೇ ಶ್ರೇಷ್ಟವಾದದ್ದೆಂದು ಅನ್ನುತ್ತೇನೆಯೇ ಹೊರತು, ನಿನ್ನ ಮಾತಿಗೆ ಸಮ್ಮತಿಸಲಾರೆನು ನಾನು ಈ ವೀರಸಾಹೀಬನಿಗೆ ಪ್ರಾರ್ಥಿಸುವದೇನಂದರೆ, - “ ನನ್ನ ಮಗನು ಪ್ರತಾಪ ಸಿಂಹನನ್ನು ಜಯಿಸಿಕೊಂಡು ಬಂದರೆ, ಈ ಗೋರಿಯ ಮೇಲೆ ಸಂಗಮರವರೀ ಕಲ್ಲಿನ ಮಸೂತಿಯನ್ನು ಕಟ್ಟಿಸುವೆನು. ” ಎಂದು ಹೇಳಿದನು.

ಈ ಪ್ರಕಾರ ಅವರಿಬ್ಬರ ನಡುವೆ ವಾದವಿವಾದವು ನಡೆದಿರಲು ಒಬ್ಬ ಕುದುರೆಯ ಸವಾರನು ಕುದರೆಯನ್ನು ಓಡಿಸುತ್ತ ಒಂದು ಮುಜರೆ ಮಾಡಿ ನಿಂದದ್ದೇನಂದರೆ; - “ ತಮ್ಮ ಜೇಷ್ಟಪುತ್ರರಾದ ಸೇಲಿಮ ಬಾದಶಹರು ಹೇಳಿ ಕಳುಹಿಸಿರುವದೇನಂದರೆ;. " ಮೇವಾಡದ ರಾಣಾಪ್ರತಾಪ ಸಿಂಹನು ನಿರ್ಬಲವಾಗಿ, ನಮ್ಮ ಕೈವಶವಾಗುವದಕ್ಕೆ ಒಪ್ಪಿಕೊಂಡಿದ್ದಾನೆ: ಇನ್ನು ಸ್ವಲ್ಪ ದಿವಸಗಳಲ್ಲಿಯೇ ಅವನನ್ನು ಕರೆದುಕೊಂಡು ಸನ್ನಿಧಿಗೆ ಬರುತ್ತೇನೆ” ಎಂಬದಾಗಿ ವಿಜ್ಞಾಪನೆ ಮಾಡಿಕೊಂಡಿದ್ದಾರೆ. ” ಎಂದು ಉಸುರಿದನು.

ಈ ಆನಂದದ ವಾರ್ತೆಯನ್ನು ಕೇಳಿದ ಕೂಡಲೇ ಬಾದಶಹನಿಗೆ ಅ ತ್ಯಾನಂದವಾಯಿತು. ಆಗ ಅವನು ಬೀರಬಲನ ಕಡೆಗೆ ತಿರುಗಿ, “ ಬೀರಬಲ್ಲ ಈಗಾದರೂ ವಿಶ್ವಾಸಕ್ಕಿಂತಲೂ ದೇವರು ಅಧಿಕನೆಂದು ತಿಳಿಯ ಬಂತೋ? ನಾನು ಪೀರಶಾಹನಿಗೆ ಬೇಡಿಕೊಳ್ಳುವಷ್ಟರಲ್ಲಿಯೇ ಈ ಆನಂದದವಾರ್ತೆಯು ಬಂದುತಲ್ಪಿತು , ನೋಡಿದಿಯಾ !
ಆಗ ಬೀರಬಲನು ಅನ್ನುತ್ತಾನೆ: ಸ್ವಾಮೀ! ಈಪೀರನ ಮೇಲೆತಮ್ಮ ವಿಶ್ವಾಸವು ಹುಟ್ಟಿ ಪ್ರಾರ್ಥಿಸಿಕೊಂಡದ್ದರಿಂದಲೇ ಈಗಿ ನಂದದ ವಾರ್ತೆಯು ಬಂತಪ್ಪೇ ? ಇದರ ಮೇಲಿಂದ ವಿಶ್ವಾಸವೆಂಬದೇ ಅಧಿಕವಾದದ್ದೆಂದು ಸ್ಪಷ್ಟವಾಗಿ ಕಂಡು ಬರುತ್ತದೆ.

ಬಾದಶಹನು ಅನುತ್ತಾನೆ;- " ಈ ನಿನ್ನ ವಿಶ್ವಾಸವು ಒತ್ತಟ್ಟಿಗಿರಲಿ ನನಗಂತೂ ಅದು ಅಧಿಕವೆಂದು ಕಂಡು ಬರುವದಿಲ್ಲ ? ನೀನು ಮಾಡಿದ ಪ್ರತಿಜ್ಞೆಯಂತೂ ನಿಷ್ಪಲವಾಯಿತು ಆದ್ದರಿಂದ ಮರಣಕ್ಕೆ ಸಿದ್ಧನಾಗು" ಎಂದನು.
ಅದಕ್ಕೆ ಬೀರಬಲನು;- “ ಪೃಥ್ವಿನಾಥ ! ನಾನು ಇಷ್ಟು ತಮಗೆ ಪ್ರ ಮಾಣಗಳನ್ನು ತೋರಿಸಿ ಕೊಟ್ಟರೂ, ಅವುಗಳಮೇಲೆ ತಮ್ಮ ವಿಶ್ವಾಸವುಂ ಟಾಗಲಿಲ್ಲ ಉಪಾಯವಿಲ್ಲ ?” ಎಂದನು.
ಆಗ ಬಾದಶಹನು ಕ್ರುದ್ಧನಾಗಿ ಇನ್ನು ನಿನಗೆ ಮರಣವು ತಪ್ಪದು, ನಿನ್ನ ಮೃತ್ಯವು ಸಮೀಪಿಸಿತು ಎಲೈ ಅಲ್ಲಿ ಯಾರಿದ್ದೀರಿ ? ತಲೆಹೊಡೆಯುವವರನ್ನು ಕರೆ, ಎಂದು ಅಪ್ಪಣಿಮಾಡಿದನು ಆಗ ಬೀರಬಲನು ಇನ್ನುಈ ಪ್ರಸಂಗವನ್ನು ಹೆಚ್ಚು ಬಲಿಯ ಗೊಡಬಾರದು ಅದರಿಂದ ಏನೂ ಪ್ರಯೋಜನವಾಗುವದಿಲ್ಲ ” ಎಂದು ನಿಶ್ಚಯಿಸಿ, ಆ ವೀರನ ಗೋರಿಗೆ ಅಡ್ಡಬಿದ್ದು, “ ಯಕೀನಶಾಹ ಪೀರನೇ ಈ ದಿವಸ ನಾನು ಜೀವದಿಂದ ಪಾರಾಗಿ ಬದುಕಿ ಕೊಂಡರೆ, ನಿನ್ನ ಮಕಾನವನ್ನು ಕಟ್ಟಿಸಿ ಕೊಡುವೆನು ” ಎಂದು ಬೇಡಿಕೊಂಡನು ಬೀರಬಲನು ಪ್ರಾರ್ಥಿಸಿ ಕೊಂಡದ್ದನ್ನು ಕೇಳಿಬಾದಶಹನಿಗೆ ನಗೆಯು ಬಂತು ನಕ್ಕನು. ಆಮೇಲೆ ಬೀರಬಲನನ್ನು ಕುರಿತು “ ಯಾಕೆಬೀರಬಲ ! ಈಗ ತಿಳುವಳಿಕೆಯುಂಟಾದಂತೆ ಕಾಣುತ್ತದೆ, ಕಡೆಗೆ ನಾನು ಹೇಳಿದ ಮಾತು ಸಿದ್ಧವಾಯಿತವೆ ? ಎಂದನು ಆಗ ಬೀರಬಲನು ಜೀಹಾ? ನಾನು ಅಂತ್ಯದಲ್ಲಿ ಯಕೀನಶಾಹನನ್ನು ಬೇಡಿಕೊಳ್ಳಬೇಕಾಗಿಬಂತು ಎಂದು ಹೇಳಿ ಆ ಗೋರಿಯ ಸಮೀಪಕ್ಕೆ ಹೋಗಿ, ಮಧ್ಯದಲ್ಲಿ ಕೂಡ್ರಿಸಿದ ಹಾಸುಗಲ್ಲನ್ನು ಮೇಲಕ್ಕೆಬ್ಬಿಸಿ, ಅದರೊಳಗಿಂದ ಆ ರೇಶಿಮೆಯ ವಸ್ತ್ರದ ಗಂಟನ್ನು ಹೊರಗೆ ತೆಗೆದನು ಅದನ್ನು ನೋಡಿ ಬಾದಶಹನಿಗೆ ಅತ್ಯಾಶ್ಚ ವಾಯಿತು ಆಗ ಬಾದಶಹನು ಪ್ರಶ್ನೆ ಮಾಡುತ್ತಾನೆ. " ಬೀರುಬಲ ! ಇದು ಏನು ” ಬೀರಬಲನು ಉತ್ತರಕೊಡುತ್ತಾನೆ, “ಇದು ತಮ್ಮ ಯಕೀನಶಹಾ ಪೀರನು “ ಎಂದು ಹೇಳಿ ಸುತ್ತಿದವಸ್ತ್ರವನ್ನು ಬಚ್ಚಿದನು. ಆಗ ಅದರಲ್ಲಿ ಹೊರಟ ಪಾದರಕ್ಷೆಯನ್ನು ಕಂಡು ಲಜ್ಜಿತನಾದನು ಆಗ ಬೀರಬಲನು ಕೇಳುತ್ತಾನೆ, “ಮಹಾರಾಜ ಯಾಕೆ ಮುಖವನ್ನು ತಗ್ಗಿಸಿದಿರಿ ದೇವರು ಅಧಿಕವಾದದ್ದೋ ಅಥವಾ ವಿಜ್ಞಾನವು ಅಧಿಕವಾದದ್ದೋ ? ಎಂಬದನ್ನು ಹೇಳಿರಿ ನಮ್ಮಲ್ಲಿ ವಿಶ್ವಾಸವೇ ಹುಟ್ಟದಿದ್ದ ಮೇಲೆ ಯಾವ ದೇವರು ಏನು ಮಾಡು ವನು ? ಆದ್ದರಿಂದ ವಿಶ್ವಾಸವು ಅಧಿಕವಾದದ್ದು “ ಭಕ್ತಿಯೇ ಮುಕ್ತಿಯ ಸಾಧನ ?” ವೆಂಬ ನಾಣ್ಣುಡಿಯು ಇದಕ್ಕೋಸುಗವೆ ಉಂಟಾಗಿದೆ ಎಂದು ಹೇಳಿದನು.

ಈ ಮಾತಿಗೆ ಬಾದಶಹನು ಒಪ್ಪಿಕೊಂಡಿದ್ದನು ಯಕಿಶಾಹನ ಹೆಸರಿನಮೇಲೆ ಅಲ್ಲಿ ಬಹಳ ದ್ರವ್ಯಸಂಚಯವಾಗಿತ್ತು ಆ ಹಣದಿಂದ ಅಲ್ಲಿ ಬೀರಬಲನು ಅದೇವರ ಹೆಸರನ್ನಿಟ್ಟು ಒಂದು ಮಸೀದಿಯನ್ನು ಕಟ್ಟಿಸಿದನು.

-( ೨೦-ತುಪ್ಪದ ವ್ಯಾಪಾರ.) -

__________
__________

ಒಬ್ಬ ವರ್ತಕನು ಒಂದು ದಿವಸ ಬೀರಬಲನ ಹತ್ತಿರ ಬಂದು ಪ್ರಾರ್ಥನೆ ಮಾಡಿ ಕೊಂಡದ್ದೇನಂದರೆ:- ನಾನು ಒಬ್ಬ ವರ್ತಕನಿಗೆ ಐದು ನೂರು ರೂಪಾಯಿಗಳನ್ನು ಕೈಗಡವಾಗಿ ಕೊಟ್ಟಿದ್ದೆನು ಈಗ ಅವನು ಅವುಗಳನ್ನು ಕೊಡುವದಕ್ಕೆ ನಿರಾಕರಿಸುತ್ತಾನೆ: ನನ್ನ ಹತ್ತಿರ ಅವನ ಕಡೆಯಿಂದ ಯಾವ ಪ್ರಕಾರದ ಲೇಖವೂ ಇಲ್ಲ ಮತ್ತು ಸಾಕ್ಷಿಗಳೂ ಇಲ್ಲ ಆದ್ದರಿಂದ ತಾವು ಅವನನ್ನು ಕರೆಯಿಸಿಕೊಂಡು ಯೋಗ್ಯ ವಿಚಾರಮಾಡಿ ನನ್ನ ರೂಪಾಯಿಗಳನ್ನು ಕೊಡಿಸುವಂತೆ ಮಾಡಬೇಕು"
ಈ ಪ್ರಕಾರ ಪ್ರಾರ್ಥಿಸಿಕೊಂಡ ವರ್ತಕನ ಮಾತುಗಳನ್ನು ಕೇಳಿ ಬೀರಬಲನು ಆ ಎರಡನೇ ವರ್ತಕನನ್ನು ಕರೆಯಿಸಿಕೊಂಡು ಎಲ್ಲಸಂಗತಿಯನ್ನು ವಿಚಾರಿಸಿದನು ಆಗ ಆ ಎರಡನೆ ವರ್ತಕನು ಹೇಳಿದ್ದೇನಂದರೆ ಮಹಾರಾಜ, ಇವನು ನನ್ನ ಮೇಲೆ ವೃಥಾರೋಪವನ್ನು ಹೊರಿಸುತ್ತಾನೆ ನಾವಿಬ್ಬರೂ ಒಂದೇ ಪ್ರಕಾರದ ವ್ಯಾಪಾರವನ್ನು ಮಾಡುತ್ತಿರುವದರಿಂದ ಇವನಿಗೆ ಸಹನವಾಗಲೊಲ್ಲದು ಪ್ರಭುಗಳು ಯೋಗ್ಯ ವಿಚಾರಣಿಯನ್ನು ಮಾಡಬೇಕು ಅಂದರೆ; ಇವನ ಮೋಸವು ತಾನೇ ವ್ಯಕ್ತವಾಗುವದು ??
ಬೀರಬಲನು ಎದುರಾಳಿಯಾದ ವರ್ತಕನ ಮಾತುಗಳಿಗೆ ಸಮ್ಮತಿಸಿದವನಂತೆ ತೋರಿಸಿ ಅವನನ್ನು ಹಿಂದಿರುಗಿ ಮನೆಗೆ ಕಳುಹಿಸಿಬಿಟ್ಟನು ಆ ಮೇಲೆ ಮೊದಲನೇ ವರ್ತಕನನ್ನು ಕರೆದು ಹೇಳಿದ್ದೇನಂದರೆ ನೀನು ಅಲ್ಪಕಾಲ ಧೈರ್ಯವಾಗಿರು ಆ ಮೇಲೆ ಸಮಯವನ್ನು ಸಾಧಿಸಿಕೊಂಡು ನನ್ನೆಡೆಗೆ ಬಾ ! ಹಿಂದೆ ನಡೆದ ಸಂಗತಿಯನ್ನೆಲ್ಲ ಮರೆತು ಬಿಟ್ಟವನಂತೆ ತೋರಿಸುತ್ತ ನಿನ್ನ ಎದುರಾಳಿಯೊಡನೆ ಸ್ನೇಹವನ್ನು ಬೆಳೆಯಿಸು ” ಎಂದು ಹೇಳಿ ಕಳುಹಿಸಿಕೊಟ್ಟನು.
ಮುಂದೆ ಏಳೆಂಟು ದಿವಸಗಳಾದ ಬಳಿಕ ಬೀರಬಲನು ನಾಲ್ಕು ತುಪ್ಪದ ಕೊಡಗಳನ್ನು ತರಿಸಿ ಎರಡುಕೊಡಗಳಲ್ಲಿ ಒಂದೊಂದು ವರಹವನ್ನು ಹಾಕಿದನು. ಆಮೇಲೆ ವಾದಿ ಪ್ರತಿವಾದಿಯನ್ನೂ ಮತ್ತು ಬೇರೆ ಎರಡು ಜನ ವರ್ತಕರನ್ನೂ ಕರೆಯಿಸಿ, “ ನನ್ನ ಹತ್ತಿರ ನಾಲ್ಕು ತುಪ್ಪದ ಕೊಡಗಳು ಅವೆ ಇವುಗಳಲ್ಲಿಯ ತುಪ್ಪವು ಸ್ವಲ್ಪ ಕೆಟ್ಟಿದೆ, ನೀವು ಪ್ರತಿಯೊಬ್ಬಬ್ಬರು ಒಂದೊಂದು ಕೊಡವನ್ನು ತೆಗೆದುಕೊಂಡು ಹೋಗಿ ವ್ಯಾಪಾರಮಾಡಿರಿ ಲಾಭವಾದ ಹಣವನ್ನು ನೀವು ತೆಗೆದುಕೊಂಡು ನನ್ನ ಹಣವನ್ನು ನನಗೆ ಮುಟ್ಟ ಸಿರಿ ” ಎಂದು ಹೇಳಿದನು. ಬೀರಬಲನು ಹೇಳಿದ ಮಾತುಗಳನ್ನು ಕೇಳಿ ಪ್ರತಿವಾದಿಯು, " ಮಹಾರಾಜ ? ಈ ಕೆಲಸಕ್ಕೆ ನಾಲ್ಕು ಜನರು ಯಾಕೆಬೇಕು ಯಾವನಾದರೊಬ್ಬನಿಗೆ ಈ ನಾಲ್ಕೂ ಕೊಡಗಳನ್ನು ಒಪ್ಪಿಸಿಬಿಡಿರಿ, ಅಂದರೆ ಅವನು ಅವುಗಳನ್ನು ಮಾರಿ ಹಣವನ್ನು ನಿಮಗೆ ತಂದು ಒಪ್ಪಿಸುವನು, ” ಎಂದುಸುರಿದನು. ಆ ಮಾತಿಗೆ ಬೀರಬಲನು ಹಾಗೆಬೇಡ ಎಲ್ಲರೂ ನನಗೆ ಪ್ರಿಯರಾದವರೇ ಇರುವರು, ಇಂಥ ಅಲ್ಪ ಕಾರ್ಯದಲ್ಲಿ ಮನುಷ್ಯನ ಮನಸ್ಸನ್ನು ನೋಯಿಸುವದು ನ್ಯಾಯವಲ್ಲ; ಎಂದು ಹೇಳಿ ಒಂದೊಂದು ಕೊಡವನ್ನು ಒಬ್ಬೊಬ್ಬನ ಸ್ವಾಧೀನಪಡಿಸಿದನು. ಅವರಲ್ಲಿ ವಾದಿ ಪ್ರತಿವಾದಿಗಳಿಗೆ ಮಾತ್ರ ವರಹವನ್ನು ಹಾಕಿದ ಕೊಡವನ್ನೇ ಕೊಡಿಸಿದನು.

ವರ್ತಕರೆಲ್ಲರೂ ತಮ್ಮ ತಮ್ಮ ಕೊಡಗಳನ್ನು ತೆಗೆದುಕೊಂಡು ಹಿಂದಿರುಗಿ ಮನೆಗೆಬಂದರು, ತುಪ್ಪವು ಸ್ವಲ್ಪ ಕೆಟ್ಟದ್ದರಿಂದ ಅದನ್ನು ಕಾಯಿಸಲಿಕ್ಕಿಟ್ಟರು. ವಾದಿಯಾದ ವರ್ತಕನು ತುಪ್ಪವನ್ನು ಚೆನ್ನಾಗಿ ಕಾಯಿಸಿ, ಬೇರೆ ಕೊಡಕ್ಕೆ ಸುರುವುತ್ತಿರಲು ಅದರೊಳಗಿಂದ ವರಹವು ಕೆಳಗೆ ಬಿತ್ತು. ಆಗ ಅವನು ಕೂಡಲೆ ಅದನ್ನು ತೆಗೆದುಕೊಂಡು ಹೋಗಿ ಬೀರಬಲನ ವಶಕ್ಕೆ ಕೊಟ್ಟನು. ಅದರಿಂದ ವಾದಿಯು ಸತ್ಯವಂತನಿರುವನೆಂದು ಬೀರಬಲನ ಮನಸ್ಸಿನಲ್ಲಿ ನಂಬಿಗೆಯುಂಟಾಯಿತು, ಇದರಂತೆ ಪ್ರತಿವಾದಿಯಾದ ವರ್ತಕನ ಕೊಡದಲ್ಲಿಯೂ ಒಂದು ವರಹವು ಹೊರಡಲು ಅವನು ಆಶಾಬದ್ಧನಾಗಿ ಅದನ್ನು ಬೀರಬಲನಿಗೊಪ್ಪಿಸದೆ ತನ್ನ ಮಗನ ವಶಕ್ಕೆ ಕೊಟ್ಟು, ನಾನು ಬೇಡಿದಾಗ ಇದನ್ನು ನನಗೆ ಕೊಡು ಎಂದು ಅಪ್ಪಣೆಮಾಡಿ ಮಾರಿಬಂದಹಣವನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡನು.

ನಾಲ್ಕನೇ ದಿವಸ ನಾಲ್ವರೂ ವರ್ತಕರು ತಮ್ಮ ಹತ್ತಿರ ಬಂದಷ್ಟು ಹಣವನ್ನು ತೆಗೆದುಕೊಂಡು ಬೀರಬಲನಿಗೆ ಒಪ್ಪಿಸುವದರ ಸಲುವಾಗಿ ಅವನ ಮನೆಗೆ ಬಂದರು ಮೂವರೂ ತಮ್ಮ ತಮ್ಮ ಹಣವನ್ನು ಕೊಟ್ಟು ಬಿಟ್ಟರು ಪ್ರತಿವಾದಿಯು ಹಣವನ್ನು ಕೊಡಹೋದನು ಆಗ ಬೀರಬಲನು ಅನ್ನುತ್ತಾನೆ;- ನೀನು ತೆಗೆದುಕೊಂಡು ಹೋದ ಕೊಡದಲ್ಲಿ ಒಂದೂ ಕಾಲುಮಣ ತುಪ್ಪವಿತ್ತು. ಪ್ರತಿವಾದಿ-ಮಹಾರಾಜ ನನ್ನ ಕೊಡದಲ್ಲಿ ಒಂದುಮಣಕ್ಕಿಂತ ಹೆಚ್ಚು ತುಪ್ಪವಿದ್ದಿಲ್ಲ.
ಬೀರಬಲ-ನೀನು ಅದನ್ನು ಸರಿಯಾಗಿ ತೂಕಮಾಡಿದಿಯೋ ! ಪ್ರತಿವಾದಿ-ಅಹುದು: ನಾವೇ ಸ್ವತಃ ತೂಕಮಾಡಿ ನೋಡಿದ್ದೇನೆ, ಆಕಾಲಕ್ಕೆ ನನ್ನ ಹಿರಿಯಮಗನೂ ಸಹ ಅಲ್ಲಿಯೇ ನಿಂತುಕೊಂಡಿದ್ದನು.

ಅಷ್ಟರಲ್ಲಿ ಬೀರಬಲನು ಯಾವದೋ ಒಂದು ಬೇರೆಕಾರ್ಯಕ್ಕೆ ಹೋಗುವವನಂತೆ ಒಲಗದಿಂದ ಎದ್ದು ಬೇರೆಕಡೆಗೆ ಹೋಗಿ ಕರ್ಮಚಾರಿಯೋರನನ್ನು ಕರೆದು ಪ್ರತಿವಾದಿಯಾದ ವರ್ತಕನಮನೆಗೆ ಹೋಗಿ ಅವನ ಹಿರಿಯಮಗನಿಗೆ ಹೇಳಬೇಕಲ್ಲಾ - " ತುಪ್ಪವನ್ನು ಕಾಸಿ ಎರಡನೇ ಕೊಡಕ್ಕೆ ಹಾಕುವಕಾಲದಲ್ಲಿ ಹೊರಟ ವರಹವನ್ನು ತೆಗೆದುಕೊಂಡು ಓಲಗಕ್ಕೆ ಬರಬೇಕೆಂದು ನಿಮ್ಮ ತಂದೆಯು ಹೇಳಿ ಕಳುಹಿಸಿದ್ದಾನೆ, ಅವರಿಂದ ಬೇಗನೇ ಬಾ ಎಂದು ಹೇಳಿ, ಅವನನ್ನು ಕರೆದುಕೊಂಡು ಬಾ ” ಎಂದು ಅಪ್ಪಣೆಮಾಡಿದನು.

ಕರ್ಮಚಾರಿಯು ಕೂಡಲೆ ಆ ವರ್ತಕನಮನೆಗೆ ಹೋಗಿ ವರಹ ಸಹಿತವಾಗಿ ಅವನ ಹಿರಿಯಮಗನನ್ನು ಕರೆದುಕೊಂಡು ನ್ಯಾಯಾಸ್ಥಾನಕ್ಕೆ ಬಂದನು, ತನ್ನ ಮಗನು ನ್ಯಾಯಾಸ್ಥಾನಕ್ಕೆ ಬಂದದ್ದನ್ನು ನೋಡಿ ಆಶ್ಚರ್ಯಚಕಿತನಾದನು. ಆದರೆ ಬೀರಬಲನ ಕಟ್ಟಪ್ಪಣೆಯಿಂದ ಇಬ್ಬರಿಗೂ ಮಾತನಾಡಲು ಸಂಧಿಯು ದೊರೆಯಲಿಲ್ಲ.

ಬೀರಬಲನು ವರ್ತಕನ ಮಗನನ್ನು ಕುರಿತು, ನಿನ್ನ ತಂದೆಯು ಕೊಟ್ಟಂಥ ವರಹವನ್ನು ತಂದಿರುವಿಯೋ ! ಎಂದು ಪ್ರಶ್ನೆ ಮಾಡಲು ಆ ಹುಡುಗನು ಅಹುದು, ತೆಗೆದುಕೊಳ್ಳಬೇಕು ಎಂದು ಕೊಟ್ಟನು. ಆಗ ಬೀರಬಲನು ಪುನಃ ಅನ್ನುತ್ತಾನೆ; " ನಿನ್ನ ತಂದೆಯು ತುಪ್ಪದಕೊಡದಲ್ಲಿ ನಾಲ್ಕು ಮೋಹರುಗಳು ಹೊರಟಿರುವವೆಂದು ಹೇಳಿದ್ದಾನೆ, ನೀನು ಒಂದೇ ಮೊಹರನ್ನು ತಂದುಕೊಟ್ಟಿಯಲ್ಲಾ ?
ಆಗ ಆ ಹುಡುಗನು ತನ್ನ ತಂದೆಯಕಡೆಗೆ ನೋಡಿ- ( ಪಿತನೇ ! ನಾಲ್ಕು ವರಹಗಳು ಯಾವಾಗಹೊರಟಿದ್ದವು ? ನೀವು ನನ್ನ ಕೈಯಲ್ಲಿ ಒಂದನ್ನೇ ಕೊಡಲಿಲ್ಲವೇ ?” ಎಂದು ಕೇಳಿದನು. ಆ ಮಾತಿಗೆ ಆ ವರ್ತಕನು ಅಂದದ್ದೇನೇಂದರೆ; - ವರಹವು ಯಾವಾಗ ಹೊರಟಿತ್ತು!

ಮಗನು ಸರಲತೆಯಿಂದ “ ನೀವು ತುಪ್ಪವನ್ನು ಕಾಯಿಸಿ ಬೇರೆ ಕೊಡಕ್ಕೆ ಹಾಕುವಾಗ ಹೊರಡಲಿಲ್ಲವೇ ??
ವರ್ತಕನು. ಇವನಿಗೆ ಏನೂ ಬುದ್ಧಿಯಿಲ್ಲ, ಇವನಿಗೆ ಯಾವಾಗ ಬುದ್ದಿ ಬರುವದೋ ಕಾಣೆ ? ಎಂದು ಗುಣಗುಟ್ಟ ಹತ್ತಿದನು. ಪಿತಾಪುತ್ರರಲ್ಲಿ ನಡೆದ ಸಂಭಾಷಣೆಯನ್ನು ಕೇಳಿ ಸಭಿಕರೆಲ್ಲರಿಗೂ ಆಶ್ಚರ್ಯಪುಂಟಾಯಿತು, ಆಗ ಬೀರಬಲನು ಅನ್ನುತ್ತಾನೆ:- ನೀನು ಆ ವರ್ತಕನಿಗೆ ರೂಪಾಯಿಗಳನ್ನು ಕೊಡತಕ್ಕದ್ದು ನಿಜವೋ ಅಥವಾ ಸುಳ್ಳೋ ! ಎಂದು ಕೇಳಲು, ಆ ವರ್ತಕನು ಏನೂ ಮಾತಾಡದೆ ಸುಮ್ಮನೇ ನಿಂತುಕೊಂಡನು. ಆಗ ಬೀರಬಲನು ಪುನಃ ಯಾವಮನುಷ್ಯನು ಒಂದು ವರಹಕ್ಕೋಸುಗ ಅನೃತವನ್ನು ಹೇಳಲಿಕ್ಕೆ ಹಿಂದುಮುಂದು ನೋಡಲಿಲ್ಲವೋ ಅಂಥಮನುಷ್ಯನು ಐದುನೂರು ರೂಪಾಯಿಗಳನ್ನು ಕೊಡಲಿಕ್ಕೆ ಹ್ಯಾಗೆ ಒಪ್ಪಿಕೊಂಡಾನು ? ಎಂದನು. ಈಮಾತಿಗೂ ಪ್ರತಿವಾದಿಯು ಏನೂ ಉತ್ತರಕೊಡಲಿಲ್ಲ, ಆಗ ಒಬ್ಬ ಕರ್ಮಚಾರಿಯನ್ನು ಕರೆದು ಇವನ ಬೆನ್ನ ಮೇಲೆ ಒಳಿತಾಗಿ ವೆಟ್ಟುಗಳನ್ನು ಹಾಕು; ಎಂದು ಅಪ್ಪಣೆಮಾಡಿದನು. ಆಗ ಆ ವರ್ತಕನ ಮಗನು ಅನ್ನುತ್ತಾನೆ- "" ಪಿತನೇ ? ನೀನು ಹಿಂದಕ್ಕೆ ಒಂದು ದಿವಸ ಈ ವರ್ತಕನಿಗೆ ಐದುನೂರು ರೂಪಾಯಿಗಳನ್ನು ಕೊಡಬೇಕಾಗಿದೆ ಎಂದು ಹೇಳಿದ್ದಿಲ್ಲವೇ ? ಈಗ ಹ್ಯಾಗಾದರೂ ರೂಪಾಯಿಗಳು ಮನೆಯಲ್ಲಿ ಅವೆ, ಕೊಟ್ಟುಬಿಡಬೇಕು. ” ಈ ಪ್ರಕಾರ ಮಗನು ಸತ್ಯವನ್ನು ನುಡಿದದ್ದರಿಂದಲೂ ಬೆನ್ನ ಮೇಲೆ ಪೆಟ್ಟುಗಳು ಬೀಳುವವೆಂಬ ಹೆದರಿಕೆಯಿಂದಲೂ ತನ್ನ ಅಪರಾಧವನ್ನೊಪ್ಪಿಕೊಂಡನು. ಆಗ ಬೀರಬಲನು ಪ್ರತಿವಾದಿಯ ಕಡೆಯಿಂದ ಐದುನೂರು ರೂಪಾಯಿಗಳನ್ನು ವಾದಿಗೆ ಕೊಡಿಸಿ ಪ್ರತಿವಾದಿಯನ್ನು ಕಾರಾಗೃಹದಲ್ಲಿಡುವಂತೆ ಆಜ್ಞಾಪಿಸಿ, ಪುನಃ ಅಂದನೆಂದರೆ;- ವರ್ತಕರಾದವರೆಲ್ಲರೂ ತಮ್ಮ ತಮ್ಮ ನಡಾವಳಿಯಲ್ಲಿಯೂ ಮಾತು ಕಥೆಗಳಲ್ಲಿಯೂ ಸತ್ಯದಿಂದಲೇ ವರ್ತಿಸತಕ್ಕದ್ದು, ಇದರಿಂದ ಅವರಿಗೆ ಮೇಲುಂಟಾಗುವದು. ಅಸತ್ಯವನ್ನು ನುಡಿದರೆ ಅದು ಮೊದಲು ಸುಖಕರವಾಗಿ ತೋರುತ್ತದೆ; ಆದರೆ ಅಂತ್ಯದಲ್ಲಿ ಅದರ ದುಷ್ಪರಿಣಾಮವು ಕಂಡುಬರುತ್ತದೆ. ಮಾತಾಪಿತೃಗಳಾದವರು ತಮ್ಮ ಮಕ್ಕಳಿಗೆ ಸತ್ಯವನ್ನೇ ಹೇಳುವಂತೆ ಕಲಿಸಬೇಕು. ಈ ಪ್ರತಿವಾದಿಯ ಮಗನು ಇಲ್ಲಿಯವರೆಗೆ ಸತ್ಯವನ್ನೇ ಅವಲಂಬಿಸಿದ್ದಾನೆ, ಇದರಂತೆ ಕಡೆತನಕ ಸತ್ಯದಿಂದಲೇ ಇದ್ದರೆ ಸುಖದಿಂದಲೇ ಜೀವಿಸಬಹುದು, ಹೀಗೆ ಇರದೆ ತಂದೆಯ ಗುಣವನ್ನು ಅವಲಂಬಿಸಿದರೆ ಮಾತ್ರ ಗುರಿಯಾಗುವದು ಎಂದು ಹೇಳಿ ಎಲ್ಲರಿಗೂ ಅಪ್ಪಣೆಕೊಟ್ಟು ಕಳಿಸಿದನು.

- (೨೧, ಬಾದಶಹ ಮತ್ತು ಗಂಗಕವಿ.)-

ಒಂದುದಿವಸ ಬೇಗಮ್ಮ ಜನರೂ, ಮತ್ತು ಅವರ ಹೆಣ್ಣು ಮಕ್ಕಳೂ, ಎಲ್ಲರೂ ಒಂದು ಅಂತಪುರದಲ್ಲಿ ಕೂಡಿದ್ದರು ಗಾಯನವಾದನವು ನಡೆದಿತ್ತು. ಆ ಸಮೂಹದಲ್ಲಿ ಪುರುಷನೆಂದರೆ ಬಾದಶಹನೊಬ್ಬನೇ ಇದ್ದನು. ಬಾದಶಹನನ್ನು ಎಂದೂ ಹೊರಗೆ ಬಿಡಗೊಡಬಾರದೆಂದು ಬೇಗಮ್ಮ ಜನರೆಲ್ಲರೂ ಈ ಯುಕ್ತಿಯನ್ನು ತೆಗೆದಿದ್ದರು, ಅವರ ಈಸಾಹಸವು ಸ್ವಲ್ಪಸ್ವಲ್ಪ ಕೈಗೂಡುತ್ತ ಬಂದಿತ್ತು, ಆ ಸಮಯದಲ್ಲಿ ಒಬ್ಬ ಬೇಗಮ್ಮಳು ಕೋಮಲಸ್ವರದಿಂದ ವಿ ರಹವ್ಯಥೆಯನ್ನು ವರ್ಣಿಸತಕ್ಕ ಪಠ್ಯವನ್ನು ಹಾಡತೊಡಗಿದಳು. ಆಗ ಬಾದಶಹನು "ಇಂಥ ಪದ್ಯದಿಂದ ಏನುಪ್ರಯೋಜನ ” ಎಂದು ಪ್ರಶ್ನೆ ಮಾಡಿದನು, ಈ ಸುಸಮಯವನ್ನು ಎದುರು ನೋಡುತ್ತ ಕುಳಿತ ಒಬ್ಬತರುಣ ಬೇಗಮ್ಮಳು, ಸ್ವಾಮಿ ತಾವು ಸಕಾಲದಲ್ಲಿ ಯುದ್ಧಾಸಕ್ತರಾಗಿ ನಮ್ಮನ್ನು ಮರೆತುಬಿಟ್ಟಿರುವಿರಲ್ಲಾ ! ಇದು ಎಂಥಾ ಅನ್ಯಾಯ; ತಾವು ಯಾವಯಾವ ಕಾಲದಲ್ಲಿ ಯುದ್ಧಕ್ಕೆ ಹೊರಟು ಹೋಗುವಿರೋ ಆ ಆ ಕಾಲದಲ್ಲಿ ನಮ್ಮೆಲ್ಲರಿಗೂ ಎಷ್ಟು ವಿರಹವ್ಯಥೆಯನ್ನು ಅನುಭೋಗಿಸಬೇಕಾಗುತ್ತದೆಂಬ ಸಂಗತಿಯನ್ನು ಈಶ್ವರನಹೊರತು ಅನ್ಯರಾರಿಗೂ ತಿಳಿಯುವದಕ್ಕೆ ಕಠಿಣವು, ತಾವು ಈಗ ಎಷ್ಟೋಮಾಸಗಳಿಂದ ಯುದ್ಧಾಸಕ್ತರಾಗಿ ಹೋಗಿಬಿಡೋಣವಾಗಿತ್ತು ಈಗ ನಾಲ್ಕಾರು ದಿವಸದಿಂದ ತಮ್ಮ ದರ್ಶನಸುಖವು ದೊರೆಯ ಹತ್ತಿದೆ, ಆದ್ದರಿಂದ ಇನ್ನು ಕೆಲವುದಿವಸ ನಮ್ಮ ಬಳಿಯಲ್ಲಿಯೇ ಇದ್ದು ನಮಗೆ ಸಂತೋಷವನ್ನುಂಟು ಮಾಡಬೇಕು ಈಗರಾಜ್ಯದಲ್ಲಿ ಯಾವಪ್ರಕಾರದ ತೊಂದರೆಗಳು ಇದ್ದಂತೆ ಕಂಡು ಬರುವುದಿಲ್ಲ ” ಎಂದು ವಿನಯ ಪೂರ್ವಕ ವಾಗಿ ಬೇಡಿಕೊಂಡಳು ಆಗ ಬಾದಶಹನು ಅನ್ನುತ್ತಾನೆ- ಪ್ರಾಣೇಶ್ವರೀ ಯುದ್ಧಗಳು ಸರ್ವಕಾಲದಲ್ಲಿ ನಡೆಯುತ್ತಿರುಯ್ಯವೇ ಹ್ಯಾಗೆ ! ವರ್ಷದಲ್ಲಿ ಎರಡು ಮೂರು ತಿಂಗಳು ಹೋಗುವ ಪ್ರನಂಗವು ಬರುತ್ತದೆ. ನಾನು ಈ ಸುಖವಿಲಾಸದಲ್ಲಿ ಮಗ್ನನಾಗಿ, ಅಂತಃಪುರದಲ್ಲಿ ವಾಸಮಾಡ ಹತ್ತಿದರೆ ನನ್ನ ಪ್ರಜೆಗಳಿಗೆ ಎಷ್ಟು ದುಃಖಗಳು ಉಂಟಾಗುತ್ತವೆಂಬುದನ್ನು ಹೇಳಲಸಾಧ್ಯವು ನನ್ನ ರಾಜ್ಯವು ಸುಯಂತ್ರವಾಗಿ ಹ್ಯಾಗೆ ನಡೆದೀತು ? ನಾನು ಸಂಪಾದಿಸಿದ ಕೀರ್ತಿಯೆಲ್ಲವು ಮಣ್ಣು ಪಾಲಾಗಿ ಹೋದೀತು ? ಹತ್ತು ಹದಿನೈದು ದಿವಸಗಳ ಮಟ್ಟಿಗೆ ಹ್ಯಾಗಾದರೂ ನಡೆದೀತು, ಆದರೆ ನೀವು ಆಜನ್ಮ ಪರಿಯಂತರ ಅಂತಃಪುರದಲ್ಲಿಯೇ ಇರಬೇಕೆಂದು ಆಗ್ರಹ ಮಾಡುತ್ತಿರುವಿರಿ ಇದು ಸಮಂಜಸವಾದ ಮಾತಲ್ಲ ನನ್ನ ಮಕ್ಕಳು ಮತ್ತು ಸರದಾರರು ನನ್ನೊಡನೆ ವೈರವನ್ನು ಬೆಳೆಯಿಸಿ ನನ್ನನ್ನು ರಾಜ್ಯಾಧಿಕಾರದಿಂದ ದೂರ ಮಾಡಿ ಬಿಟ್ಟರೆ ಎಷ್ಟು ಕಠಿಣವಾದೀತು; ಎಂಬದ ರಕಡೆಗೆ ನಿಮ್ಮ ಲಕ್ಷ್ಯವು ಇದ್ದಂತೆ ಕಂಡು ಬರುವದಿಲ್ಲ ಇರಲಿ ನನ್ನ ರಾಜ್ಯಕಾವ್ಯಗಳೆಲ್ಲ ನಿವೃತ್ತವಾದಮೇಲೆ ನಾನು ಮೃಗಯಾ ವಿಹಾರದ ಸಲುವಾಗಿ ಎಷ್ಟು ಸಮಯವನ್ನು ವ್ಯಯ ಮಾಡುವೆನೋ ಆ ಸಮಯವನ್ನೆಲ್ಲ ನಿಮ್ಮ ಸಮಾಗಮ ಸುಖದಲ್ಲಿಯೇ ವ್ಯಯಮಾಡುವೆನು, ಅಂದರೆ ನಿಮ್ಮ ವಾಂಛಿತವು ಈಡೇರಿದಂತಾಗುವದಿಲ್ಲವೇ ಎಂದನು, ಈ ಮಾತುಗಳನ್ನಾಲಿಸಿ ಮುಖ್ಯ ಬೇಗಮ್ಮಳು ಅನ್ನುತ್ತಾಳೆ:- ಸ್ವಾ ಮಿ ! ತಾವು ನುಡಿದ ಮಾತುಗಳೆಲ್ಲ ಸತ್ಯವಾಗಲಿ ! ಆದರೆ ನಮ್ಮ ಜನ್ಮವ ಪಶುಗಳಿಗಿಂತ ನಿಂದ್ಯವಾದದ್ದು ಎಂದು ತಿಳಿದುಕೊಳ್ಳುತ್ತೇವೆ ಇದು ನಮ್ಮ ದುರ್ದೈವವೇಸರಿ.
ಮತ್ತೊಬ್ಬ ಬೇಗಮ್ಮಳು ಅನ್ನುತ್ತಾಳ:- "ಜಹಾಪನಾ! ತಾವು ರಾಜ್ಯದಲ್ಲಿಯ ಒಬ್ಬಯಕಶ್ಚಿತ ಮನುಷ್ಯನ ಪಾರ್ಥನೆಯನ್ನು ಸಹಾ ಮನಸುಗೊಟ್ಟು ಕೇಳಿಕೊಳ್ಳುತ್ತೀರಿ ಹೀಗಿದ್ದು ನಮ್ಮ ಪ್ರಾರ್ಥನೆಯನ್ನು ಕಿವಿಯ ಮೇಲೆ ಸಹಾ ಹಾಕಿ ಕೊಳ್ಳುವದಿಲ್ಲವಲ್ಲಾ ? ಇರಲಿ; ನೀವು ಇನ್ನು ಈ ರಾಣಿವಾಸದಿಂದ ಹ್ಯಾಗೆ ಪಾರಾಗಿ ಹೋಗುವಿರೋ ! ನೋಡುತ್ತೇನೆ" ಎಂದಳು.
ಮೂರನೆಯವಳೊಬ್ಬಳು ಮುಂದೆಬಂದು, ಈ ಛೇ ! ಯಜಮಾನರು ಅಷ್ಟು ಕಠಿಣ ಹೃದಯರಲ್ಲ ! ಇವರು ಇನ್ನು ಮೇಲೆ ನಮ್ಮನ್ನು ವಿರಹ ವ್ಯಥೆಗೆ ಗುರಿಮಾಡಿ, ಎಂದೂ ಹೋಗಲಾರರು ಎಂದು ನಾನು ನಿಶ್ಚಯವಾಗಿ ಹೇಳುತ್ತೇನೆ ” ಎಂದಳು
ನಾಲ್ಕನೆಯವಳೊಬ್ಬಳು ತನ್ನ ನೇತ್ರ ಕಟಾಕ್ಷಗಳನ್ನು ಬೀರುತ್ತ ಮುಂದೆ ಬಂದು, " ನಾವು ಇಷ್ಟು ಸಮಯದ ವರೆಗೆ ಪ್ರಾರ್ಥನೆ ಮಾಡಿಕೊ ಡರೂ ಸಹಾ ಅವರಿಂದ ಸಮ್ಮತಿಯ ಒಂದು ಶಬ್ದವಾದರೂ ಹೊರಡಲಿಲ್ಲ ಅವರ ಮುಖದಲ್ಲಿ ಸೂಸುತ್ತಿರುವ ಮುಗುಳು ನಗೆಯೇ ನಮ್ಮ ಮಾತಿಗೆ ಒಪ್ಪಿಕೊಂಡಿರುವರೆಂಬ ಸಂಗತಿಯನ್ನು ಸೂಚಿಸುತ್ತದೆ” ಎಂದುನುಡಿದಳು.
ಬಾದಶಹನು ಆ ಮೊಹಿನೀಮೂರ್ತಿಗಳ ನೇತ್ರಕಟಾಕ್ಷದಿಂದ ಮೋಹಿತನಾಗಿ ಹೋದನು ಅವರಿಗೆ ಉತ್ತರಕೊಡಬೇಕೆಂಬ ಪ್ರಜ್ಞೆಯು ಸಹಾ ಇಲ್ಲದಂತಾಯಿತು ಸ್ವಲ್ಪ ಹೊತ್ತಿನ ಮೇಲೆ ಅನ್ನುತ್ತಾನೆ, “ ಪ್ರಿಯಸಹಚರಿಯರೇ ನಾನು ನಿಮ್ಮೆಲ್ಲರ ಅತ್ಯಂತ ಆಗ್ರಹಕ್ಕೆ ಸಿಲುಕಿ ಬಿದ್ದು ನಿಮ್ಮ ಸಮಾಗಮ ಸುಖದಲ್ಲಿಯೇ ಕಾಲಹರಣ ಮಾಡಬೇಕೆಂದು ನಿಶ್ಚಯಿಸಿದ್ದೇನೆ ಎಂದನು.
ಬಾದಶಹನ ಮುಖದಿಂದ ಹೊರಟ ಮಧುರವಾಣಿಯನ್ನು ಕೇಳಿ ಬೇಗಮ್ಮರಿಗೆಲ್ಲ ಉಂಟಾದ ಆನಂದಕ್ಕೆ ಪಾರವೇ ಇಲ್ಲದಾಯಿತು ಅವರೆಲ್ಲರು ತಮ್ಮ ತಮ್ಮ ಶೃಂಗಾರಚೇಷ್ಟೆಗಳಿಂದ ಬಾದಶಹನನ್ನು ಹೆಚ್ಚು ಹೆಚ್ಚು ಮೋಹಪಾಶಬದ್ಧನನ್ನಾಗಿ ಮಾಡಿಬಿಟ್ಟರು ಬಾದಶಹನಿಗೆ ತನ್ನ ರಾಜ್ಯದ ಪರಿವೆಯು ಸಹಾ ಇಲ್ಲದೆ ಹೋಯಿತು ಇದೇ ಪ್ರಕಾರ ಎಂಟು ಹತ್ತು ಮಾ ” ಳು ಕಳೆದು ಹೋದವು ದರಬಾರದ ಜನರೆಲ್ಲರೂ ಬಾದಶಹನ ಶೋಧವ ನಡೆಯಿಸಿದರು ಬಾದಶಹನು ರಾಣಿವಾಸದಲ್ಲಿರುವನೆಂಬದು ಯಾರಿ ತಿಳಿಯಲಿಲ್ಲ. ರಾಜ್ಯದಲ್ಲಿ ಅರಾಜ ಕತೆಯು ಪ್ರಬಲವಾಗಹತ್ತಿತು ಮಂದಿ ಗಳೆಲ್ಲರೂ ಭಯಗ್ರಸ್ತರಾಗಿ ಹೋದರು. ಈ ವರ್ತಮಾನವು ಬಾದಶಹಗೆ ಸ್ವಲ್ಲಾದರೂ ತಿಳಿಯಗೊಡಬಾರದೆಂದು ಬೇಗಮ್ಮ ಜನರೆಲ್ಲರೂ ಎ ರದಿಂದಲೇ ಇರಹತ್ತಿದರು ಬಾದಶಹನಿಗೆ ಹಗಲು ರಾತ್ರಿಗಳು ಸಹಾ ಯದೆ ಹೋದವು ಬೇಗಮ್ಮರೆಲ್ಲ ತಿಳಿದುಕೊಂಡದ್ದೇನಂದರೆ, " ಬಾದಶಹ ಅಂತಃಪುರದಲ್ಲಿ ವಾಸವಾಗಿದ್ದಾನೆಂಬ ಸಂಗತಿಯು ಬೀರಬಲ್ಲ ಅಥವಾ ಕವಿ ಈ ಎರಡು ಜನರಕಿವಿಗೆ ಬಿದ್ದರೆ, ಅವರು ಬಾದಶಹನನ್ನು ಆಕಾಶ ಪಾತಾಳದಲ್ಲಿದ್ದರೂ ಸಹಾ ಗೊತ್ತು ಹಚ್ಚದೆ ಬಿಡಲಾರರು ” ಎಂಬದನ್ನು ದುಕೊಂಡು ಯಾರನ್ನೂ ಅಂತಃ ಪುರದೊಳಗೆ ಬಿಡಬಾರದೆಂದು ದಾಸಿ ರಿಗೂ, ಹೊರಗಿನ ಕಾವಲಿನ ಜನರಿಗೂ ಕಟ್ಟಪ್ಪಣೆ ಮಾಡಿಬಿಟ್ಟಿದ್ದರು, ದರಚಾರದಲ್ಲಿ ಎಷ್ಟೋ ಕಾಗದ ಪತ್ರಗಳು, ಬಾದಶಹನ ಸಹಿ ಇಲ್ಲ ದ್ದು ಬಿಟ್ಟದ್ದವು. ಬಾದಶಹನ ಆ ಕೈಯಿಂದಲೇ ನಡೆಯತಕ್ಕ ಕಾರ್ಯವು ನಿಂತು ಹೋಗಿದ್ದವು ಪರದೇಶದಿಂದ ಬಂದರಾಯಭಾರಿಗಳೆಲ್ಲರೂ ಬರಿ ದಾಗಿರುವ ಸಿಂಹಾನವನ್ನು ನೋಡಿ ಆಶ್ಚರ್ಯ ಪಡಹತ್ತಿದರು ಜನರಲ್ಲಿ ಕ ಪ್ರಕಾರದ ಕಲ್ಪನೆಗಳು ಪಸರಿಸಹತ್ತಿದವು. ಈ ಸಂಧಿಯಲ್ಲಿ ಪರಸ ಗಳು ಯಾರಾರೂ ಂದು ರಾಜ್ಯವನ್ನು ಎಲ್ಲಿಹರಣ ಮಾಡಿಕೊಂಡು ಗುವರೋ, ಎಂಬ ಭೀತಿಯ ಮುತ್ಸದ್ಧಿಗಳಲ್ಲಿ ಉತ್ಪನ್ನವಾಯಿತು ಎಲ್ಲ ಅರಾಜಕತ್ವದ ಲಕ್ಷಣಗಳು ತಲೆದೋರ ಹತ್ತಿದ್ದರಿಂದ ಬಾದಶಹನ ಹ್ಯಾಗಾದರೂ ಮಾಡಿ ಗೊತ್ತು ಹಚ್ಚಬೇಕೆಂದು ಬೀರಲನು ನಿ ದನು. ಅವನು ಒಂದು ದಿವಸ ತನ್ನ ವಿಶ್ವಾಸಿಕರಾಗಿದ್ದ ಅನೇಕ ಜನ ಅನದರನ್ನು ತನ್ನೆಡೆಗೆ ಬರಮಾಡಿಕೊಂಡು ಅವರ ಸಮ್ಮುಖದಲ್ಲಿ ಅಂದ ನಂದರೆ:- “ ರಾಜ್ಯವು ನವ್ಯವಾಗಲಿಕ್ಕೆ ಇನ್ನು ಕಾಲಾವಧಿಯು ಇಲ್ಲ ರಕಹನು ಗುಪ್ತವಾಗಿರುವನೆಂಬ ಸಂಗತಿಯು ರಾಜ್ಯದೊಳಗೆಲ್ಲ ವಸರಿಸ ದೆ ಪರದೇಶದ ರಾಯಭಾಗರಿಗಳೆಲ್ಲರೂ ದಂಗೆಯನ್ನು ಎಬ್ಬಿಸಬೇಕೆಂಬ ಣಿಕೆಯಲ್ಲಿದ್ದಾರೆ. ತ್ರುಗಳಾದವರು ಬಂದು ಪ್ರತ್ಯಕ್ಷನಿಂತು ಕೊಂದರೆ ತಿಂಗವು ಬಹಳೇ ಕಠಿಣವಾದೀತು ಒಬ್ಬನೇ ಕತ್ರುವನ್ನು ಹ್ಯಾಗಾದರೂ ಡಿ ಜಯಿಸಬಹುದು ಆದರೆ ಈಗ ನಾಲ್ಕೂ ಕಡೆಯಿಂದಲೂ, ವೈರಿಗಳು ವ ಸಂಭವವದೆ ಆದ್ದರಿಂದ ಏನಾದರೂ ಸಾಹಸಮಾಡಿ, ಬಾದಶಹನ 66 ಅನ್ವೇಷಣ ಮಾಡಲಿಕ್ಕೇ ಬೇಕು ” ಎಂದನು.

ಆಗ ತೋಡರ ಮಲ್ಲನು ಅನ್ನುತ್ತಾನೆ, ಮಂತ್ರಿವರ್ಯನೇ ! ತಮಗೆ ಅಂತಃಪುರದಲ್ಲಿ ಪ್ರವೇಶಮಾಡಲಿಕ್ಕೆ ಆತಂಕವಿಲ್ಲವಷ್ಟೇ ! ಅಂದಮೇಲೆ ನಿಮಗೆ ಸಾಧ್ಯವಾದಷ್ಟು ಅನ್ಯರಿಂದ ಸಾಧಿಸಲಾಗುವದಿಲ್ಲ,, ಅದಕ್ಕೆ ಬೀರ ಬಲನು. “ ನೀವು ಹೇಳುವದಕ್ಕಿಂತ ಪೂರ್ವದಲ್ಲಿಯೇ ನಾನು ಶೋಧಮಾಡಿ ನೋಡಿದ್ದೇನೆ, ನನಗೆ ಬಾದಶಹನ ಇರುವಿಕೆಯು ಅವಗತವಾಗದೆ ಹೋದ್ರ ರಿಂದ, ನಾನು ನಿಮ್ಮೆಲ್ಲರ ಮುಂದೆ ಈ ಮಾತನ್ನು ತೆಗೆದೆನು,, ಎಂದುತ್ತರ ಕೊಟ್ಟನು. ಆಗ ಗಂಗಕವಿಯು ಅನ್ನುತ್ತಾನೆ, ಅಮಾತ್ಯವರ್ಯರೇ ನನಗೆ ಬಾದಶಹನ ದರ್ಶನವು ಇಷ್ಟರಮಟ್ಟಿಗೆ ಅತ್ಯವಶ್ಯಕ ವಿರುವದೆಂಬ ಸಂಗತಿಯನ್ನು ನೀವು ಅರಿತಿರುವಿರಷ್ಟೇ ? ನಾನು ಪ್ರಯಾಸವಟ್ಟು ನಿನ್ನೆ ಬಾದ ಶಹನನ್ನು ದೂರಿಂದಲೇ ನೋಡಿದೆನು, ಎಂದನು ಆಗ ಸಭಾಸದರೆಲ್ಲರೂ ಒಂದೇಧ್ವನಿಯಿಂದ ಕವಿರಾಜ ! ತಾವು ಬಾದಶಹರವರನ್ನು ಎಲ್ಲಿನೋಡಿದರಿ ? ” ಎಂದು ಪ್ರಶ್ನೆ ಮಾಡಿದರು ಆಗ ಗಂಗಕವಿಯು, ದಿಲರಾಮ ಬೇಗಮ್ಮಳ ಅಂತಃಪುರದಲ್ಲಿ,, ಎಂದುತ್ತರಕೊಟ್ಟೆನು. ಆಗ ಬೀರಬಲನು ಅನ್ನು ತ್ತಾನೆ, “ ಬೇಗಮ್ಮ ಜನರ ಮೋಹ ಪಾಠದಿಂದ ಬಂಧಿಸಲ್ಪಟ್ಟ ಬಾದಶಹ ನನ್ನು ಹೊರಗೆ ಕರೆತರುವದಕ್ಕೆ ಏನು ಹಂಚಿಕೆಯನ್ನು ಮಾಡಬೇಕು ?, ಎಂದನು ಆಗ ಪುನಃ ಗಂಗಕವಿಯು ಅನ್ನುತ್ತಾನೆ ! " ನಾನಂತೂ ನನ್ನ ಪ್ರಾಣವನ್ನು ಸಂಕಟಕ್ಕೆ ಗುರಿಮಾಡಿ ಬಾದಾಶಹನನ್ನಂತೂ ಗೊತ್ತು ಹಚ್ಚಿ ಕೊಟ್ಟಿದ್ದೇನೆ ಆದರೆ ಅವನನ್ನು ಹೊರಗೆ ತೆಗೆಯುವದು ಮಾತ್ರ ಕಠಿಣವು, ಎಂದನು.
ಬೀರಬಲ ಕವಿರಾಜ ! ಬಾದಶಹನನ್ನು ಓಲಗಕ್ಕೆ ಕರೆತರುವ ಕೆಲಸವು ನಿಮ್ಮಿಂದಲೇ ಸಾಧ್ಯವಾಗುವದಲ್ಲದೆ ಅನ್ಯರಿಂದಾಗಲಾರದು.

ತೋಡರಮಲ್ಲ-ತಾವು ಈ ಅಮರಕೀರ್ತಿಯನ್ನು ತಮ್ಮ ಪಾಲಿಗೆ ತೆಗೆದು ಕೊಳ್ಳಬೇಕು, ಸಾವಿರಾರು ಜನರ ಮೇಲೆ ಉಪಕಾರಮಾಡಿದಂತಾ ಗುತ್ತದೆ. ಆದ್ದರಿಂದ ತಾವೇ ಈ ಕಾರ್ಯವನ್ನು ಕೈಗೊಳ್ಳಬೇಕು. ವಿಲಂಬವು ಹಿತಕರವಲ್ಲ.

ಗಂಗಕವಿ- ನೀವೆಲ್ಲರೂ ನನ್ನ ಪ್ರಾಣವನ್ನು ತೆಗೆದುಕೊಳ್ಳಬೇಕೆನ್ನು ವಿರೋ ?

ಖಾನಖಾನ-ಕವಿರಾಜ ! ಇದರಲ್ಲಿ ಜೀವದಮೇಲಿನ ಪ್ರಸಂಗವೇನಿರುವದು ಬಂದವೇಳೆ ಬಾದಶಹನಿಗೆ ಕೋಪವು ಬಂದರೆ ನಿಮ್ಮನ್ನು ಕಂಡಮಾ ತ್ರದಿಂದಲೇ ಪ್ರಸನ್ನನಾಗಿ ಹೋಗುವನು ಈ ಕೆಲಸವು ಸಾಮಾನ್ಯ ವಾದದ್ದಲ್ಲ, ಇದರಿಂದ ತಮ್ಮ ಕೀರ್ತಿಯು ಜಗತ್ತಿನಲ್ಲೆಲ್ಲ ಪ್ರಸಿದ್ಧ ವಾಗುವದು.
ಗಂಗಕವಿ-ಬೇಗಮ್ಮರೆಲ್ಲರೂ ಬಾದಶಹನ ಮನಸ್ಸನ್ನು ಮೃದುವಾಣಿಗಳಿಂ ದ ಪ್ರಸನ್ನೀಕರಿಸಿಕೊಂಡು ಬಿಟ್ಟದ್ದಾರೆ; ವ್ಯರ್ಥವಾಗಿ ನನ್ನ ಸತೀ ಸುತರು ಪ್ರಾಣಕ್ಕೆ ಎರವಾದಾರು ಈಗ ನಾನು ಕೈಕೊಳ್ಳಬೇಕೆಂಬ ಕಾರ್ಯವು ಸಿಂಹದಕೂಡ ಸರಸವಾಡಿದಂತೆ ಇರುವದು.

ಬೀರಬಲ_ ಬೇಗಮ್ಮ ಜನರ ಪಾಶದೊಳಗಿಂದ ಬಾದಶಹನು ಒಮ್ಮೆ ಸುರ ಕ್ಷಿತವಾಗಿ ದಾಟಿ ಬಂದಮೇಲೆ ಪುನಃ ಎಂದಿಗೂ ಮೋಸ ಹೋಗಲಾ ರನು, ಹೀಗೆನಾನು ನಿಶ್ಚಯವಾಗಿ ನಂಬಿದ್ದೇನೆ ಈಗಲಾದರೂ ಹ್ಯಾಗೆ ಮೋಸ ಹೋದನೋ ತಿಳಿಯದು.

ರಾಜಾ ಮಾನಸಿಂಹ _ ಕವೀಶ್ಯರರೇ ! ನೀವೇ ಇಂಥಕಾರ್ಯದಲ್ಲಿ ಹಿಂದೆಮುಂದೆ ನೋಡಹತ್ತಿದರೆ ಹ್ಯಾಗಾದೀತು ? ಕವಿಗಳು ತಮ್ಮ ಕವಿತಾಶಕ್ತಿ ಯಿಂದ ಪರರ ಮನಸ್ಸನ್ನು ಹರಣಮಾಡಿಕೊಳ್ಳುವಷ್ಷು ಸಾಮಥ್ಯವುಳ್ಳವರೆಂಬ ಕೀರ್ತಿಯು ಜಗತ್ತಿನಲ್ಲಿ ಪಸರಿಸಿರುವದು. ಎಷ್ಷೋ ಯುದ್ಧಗಳಲ್ಲಿ ಕವಿಗಳ ವೀರರಸ ಪರಿಪ್ಲುತವಾದ ಪದ್ಯಗಳನ್ನು ಶ್ರವಣಮಾಡಿವೀರರು ಜಯಾಂಗನೆಯನ್ನು ಒಲಿಸಿಕೊಂಡಿರುವರೆಂಬ ಆಖ್ಯಾಯಿಕೆಗಳನ್ನು ಕೇಳಿದ್ದೇನೆ. ನೀವು ಈಗ ಹತಸಾಹಸಿಗಳಾದರೆ ಭಾರತವರ್ಷವೆಲ್ಲವೂ ದುಖಃಕ್ಕೆ ಗುರಿಯಾಗುವಪ್ರಸಂಗವು ಸಮೀಪಿಸಿರುವದೆಂದು ತಿಳಿಯಬೇಕಾಗುತ್ತದೆ,

ಬೀರಬಲ _ ಕವಿರಾಜ ? ನೀವು ಈ ಪ್ರಕಾರ ಧೈರ್ಯ ಹೀನರಾದದ್ದನ್ನು ಕಂಡು ನನಗೂ ಪರಮಾಶ್ಚರ್ಯವಾಗುವದು ; ರಾಜ್ಯದ ದೈವಗತಿಯೇ ವಿಪರೀತವಾಗಿರುವದೋ ಏನೋ ಪರಮೇಶ್ವರನಿಗೇ ಗೊತ್ತು.

ಗಂಗಕವಿ_ಬೀರಬಲ ? ನೀವು ಇನ್ನು ಮೇಲೆ ಮಾತಾಡಬೇಡಿರಿ; ಯಾಕಂದರೆ ನಿಮ್ಮ ವಾಕ್ಯಗಳು ಶ್ರವಣಪಥದಲ್ಲಿ ಪ್ರವೇಶಿಸಿದಕೂಡಲೆ ಮನಸ್ಸು ತಾತ್ಕಾಲಕ್ಕೇ ಉಲ್ಹಾಸಿತವಾಗುತ್ತದೆ ನಿಮ್ಮ ವಾಕ್ ಸಾಮಥ್ಯದಲ್ಲಿ ಏನು ಮೋಹಿನಿಯು ತುಂಬಿರುವದೋ ಜಗನ್ನಿಯಂತನೇ ಬಲ್ಲನು.

ತೋಡರಮಲ್ಲ_ ಮೋಹಿನಿ ? ಮೋಹಿನಿ ? ಎಂದು ಅನ್ನುತ್ತ ಯಾಕೆಸುಮ್ಮನೇ ಕಾಲಹರಣ ಮಾಡುವಿರಿ ? ನಿಮ್ಮಲ್ಲಿ ಸಾಹಸವಿದ್ದರೇ ಈ ಕಾರ್ಯಕ್ಕೆ ಉದ್ಯುಕ್ತರಾಗಿರಿ, ಇಲ್ಲದಿದ್ದರೆ ಆಗುವದಿಲ್ಲವೆಂದು ಸ್ಪಷ್ಷವಾಗಿ ಹೇಳಿಬಿಡಿರಿ.

ಗಂಗಕವಿ- ನಿರ್ವಾಹವಿಲ್ಲದೆ ನಿಮ್ಮೆಲ್ಲರ ಮಾತುಗಳಿಗೆ ಒಪ್ಪಿಕೊಳ್ಳಬೇಕಾಗುತ್ತದೆ, ಈಕಾರ್ಯದಲ್ಲಿ ಒಂದು ವೇಳೆ ನನ್ನ ಜೀವದಮೇಲೆ ಏನಾದರೂ ಪ್ರಸಂಗವಬಂದರೆ ನೀವು ನನ್ನನ್ನು ರಕ್ಷಿಸಿಕೊಳ್ಳುವಿರಾ?

ಬೀರಬಲನು ಕೂಡಲೆ ನೇತ್ರಸಂಕೇತ ಮಾಡಿದನು. ಆಗ ಎಲ್ಲಾ ಸಭಾಸದರು ಮುಕ್ತಕಂಠದಿಂದ "ನಾವು ಹ್ಯಾಗಾದರೂ ಮಾಡಿ ನಿನ್ನ ಜೀವವನ್ನು ರಕ್ಷಿಸಿಕೊಳ್ಳುವೆವು ” ಎಂದು ಹೇಳಿದರು.

ಬೀರಬಲ -ಕವಿರಾಜ ! ಇವರೆಲ್ಲರ ಹಿತವು ನಿಮ್ಮನ್ನೇ ಅವಲಂಬಿಸಿರುವದು, ಈ ಜನರೆಲ್ಲರು ಹೇಳಿರುವ ಮಾತುಗಳನ್ನು ನೀವು ಬಾದಶಹನ ಸಮ್ಮುಖದಲ್ಲಿ ಹೇಳಿದರೆ ಅವನ ಮನಸ್ಸು ತಿರುಗದೆ ಹೋದೀತೇ ?

ತೋಡರಮಲ್ಲ-ಕವಿರಾಜ ! ನಿಮ್ಮ ಭಾಷಣವು ಬಾದಶಹನ ಕರ್ಣಪ್ರದೇಶಕ್ಕೆ ಬಿದ್ದ ಕೂಡಲೆ ದರಬಾರಕ್ಕೆ ಬಂದೇ ತೀರಬೇಕು. ಹೀಗೆ ಏನಾದರೂ ಒಂದು ಹಂಚಿಕೆಯನ್ನು ಹುಡುಕಿ ತೆಗೆಯಿರಿ.

ಗಂಗಕವಿ-ನೀವು ಹೇಳುವದೆಲ್ಲಾ ನಿಜವು, ಆದರೆ ಈಕಾರ್ಯಕ್ಕೆ ನನ್ನ ಮನಸ್ಸು ಹಿಂದುಮುಂದು ನೋಡುತ್ತದೆ. ಇಂಥ ಅಮರಕೀರ್ತಿಯು ಪ್ರಾಪ್ತವಾಗುವದೆಂದಮೇಲೆ ಉಳಿದ ಸಭಾಸದರು ಯಾಕೆ ಹಿಂದು ಮುಂದುನೋಡುತ್ತಾರೆ ? ಬೀರಬಲ, ತೋಡರಮಲ್ಲ, ಖಾನಖಾನ, ಮಾನಸಿಂಹ ಮೊದಲಾದ ಪ್ರಭೃತಿಗಳು ಈ ಕಾರ್ಯಭಾರವನ್ನು ತಮ್ಮ ಶಿರಸ್ಸಿನಮೇಲೆ ಯಾಕೆ ತೆಗೆದುಕೊಳ್ಳಬಾರದು ! ಯಾರಾದರೂ ಇದನ್ನು ಕೈಕೊಳ್ಳುವದಕ್ಕೆ ಸಿದ್ಧರಿದ್ದರೆ ನಾನು ಆನಂದದಿಂದ ಹಿಂದಕ್ಕೆ ಸರಿಯುತ್ತೇನೆ.

ರಾಜಾ ಮಾನಸಿಂಹನು ನಾವು ಸಾಹಸಪಟ್ಟು ಇಷ್ಟು ಹೊತ್ತಿನವರೆಗೆ ಬೋಧಮಾಡಿದ್ದೆಲ್ಲವೂ ವ್ಯರ್ಥವಾಗುವದೆಂದು ತಿಳಿದು ಅನ್ನುತ್ತಾನೆ "ಕವಿರಾಜ ! ಈಕಾರ್ಯವು ನಮ್ಮಂಥ ಪಾಮರರಿಂದ ಅಸಾಧ್ಯವು, ಈ ಕಾರ್ಯವು ಕವಿಗಳಿಂದ ಜರಗತಕ್ಕದ್ದೇ ಹೊರತು ಅನ್ಯರಿಂದಾಗತಕ್ಕದ್ದಲ್ಲ."

ಈಮಾತಿಗೆ ಮರುಳಾಗಿ ಗಂಗಕವಿಯು ಮೋಸಹೋದನು ಆಗ ಅವನು ಬಾದಹನನ್ನು ಹ್ಯಾಗಾದರೂ ಮಾಡಿ ದರಬಾರಕ್ಕೆ ಬರುವಹಾಗೆ ಮಾಡುತ್ತೇನೆ ಇದರಲ್ಲಿ ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ ಎಂದು ಪ್ರತಿಜ್ಞೆ ಮಾಡಿ ಹೇಳಿದನು ಸಭಾಸದರಿಗೆಲ್ಲರಿಗೂ ಅತ್ಯಾನಂದವಾಯಿತು, ಎಲ್ಲರೂ ತಮ್ಮ ತಮ್ಮ ಗೃಹಗಳಿಗೆ ತೆರಳಿದರು. ಆಮೇಲೆ ಗಂಗಕವಿಯು ಮನಸ್ಸಿನಲ್ಲಿ ಯೋಚಿಸಿದ್ದೇನಂದರೆ; - "ಈ ಕಾರ್ಯಭಾರವಂತೂ ನನ್ನ ಮೇಲೆಯೇ ಬಿತ್ತು, ಇನ್ನು ವಿಲಂಬಮಾಡಿ ಪ್ರಯೋಜನವಿಲ್ಲ, ಈ ದಿವಸವೇ ಉದ್ಯುಕ್ತನಾಗಲಿಕ್ಕೇ ಬೇಕು ನಾಳಿಗೆ ಮಾಡಿದರೆ ತೀರಿತು ಎಂಬುವಹಾಗೆ ಇಲ್ಲ; ಯಾಕಂದರೆ ಈವಾರ್ತೆಯು ಕರ್ಣೋಪಕಣ೯ವಾಗಿ ಬೇಗಮ್ಮ ಜನರಿಗೆ ತಿಳಿದುಬಂದರೆ ಅವರು ಬಾದಶಹನನ್ನು ಮೊದಲಿನ ಸ್ಥಳದಿಂದ ಬೇರೆ ಕಡೆಗೆ ಇರಿಸಬಹುದು, ಹೀಗಾದರೆ ಯಾವಕಾರ್ಯವೂ ಸಾಧಿಸದೇ ಹೋದೀತು."

ಕವಿರಾಜನು ಈಪ್ರಕಾರ ಯೋಚಿಸಿದ್ದೂ ಸತ್ಯವೇ ಅರ್ಧರಾತ್ರಿಯ ಸಮಯದಲ್ಲಿ ಗಂಗಕವಿಯು ಆಪಾದಮಸ್ತಕವರಿಯಂತರ ಕೃಷ್ಣವಸ್ತ್ರಪರಿಧಾನ ಮಾಡಿಕೊಂಡು, ತಲೆಯಮೇಲೆ ಎರಡುಮೊಳ ಎತ್ತರವಾಗಿರುವ ಒಂದು ಶಿರಸ್ತ್ರಾಣವನ್ನು ಧರಿಸಿಕೊಂಡು, ಕೈಯೊಳಗೆ ಗಟ್ಟಿ ಮುಟ್ಟಾದ ಒಂದು ಡೊಣ್ಣೆಯನ್ನು ಹಿಡಿದುಕೊಂಡು, ಮತ್ತೊಂದು ಕೈಯಲ್ಲಿ ಜಪಮಾಲೆಯನ್ನು ತಕ್ಕೊಂಡು ಮನೆಬಿಟ್ಟು ಹೊರಬಿದ್ದನು. ಮಾರ್ಗದಲ್ಲಿ ಎಷ್ಟೋ ಜನರು ಹೋಗಿಬರುತ್ತಿದ್ದರು. ಅವರೆಲ್ಲರನ್ನು ತಪ್ಪಿಸುತ್ತ ಹೊರಟನು, ಗಾಡಾಂಧಕಾರದಲ್ಲಿ ಇವನ ವೇಷವು ರಾಕ್ಷಸನಂತೆಯೇ ಕಾಣುತ್ತಿತ್ತು; ಈಪ್ರಕಾರ ಅವನು ರಾಣಿವಾಸದ ಉದ್ಯಾನದ ಪರಿಯಂತರ ತಲುವಿದನು. ಮಹಾದ್ವಾರದಲ್ಲಿ ಕಾವಲುಗಾರರು ಎಚ್ಚರದಿಂದ ಕುಳಿತುಕೊಂಡಿದ್ದರು. ಅದನ್ನು ಕಂಡು ಒಂದುಗುಪ್ತ ದ್ವಾರದಿಂದ ಒಳಗೆ ಪ್ರವೇಶ ಮಾಡಿದನು. ಪ್ರಾತಃಕಾಲಕ್ಕೆ ಸ್ವಲ್ಪ ಸಮಯ ಉಳಿದಿತ್ತು. ಆಗ ಅವನು ಅಲ್ಲಿ ಅಲ್ಲಿ ನಿಂತುಕೊಳ್ಳುತ್ತ, ಅಡಗಿಕೊಳ್ಳುತ್ತ ದೀಪದಪ್ರಕಾಶವು ಕಾಣಬರುತ್ತಿದ್ದ ಅಂತಃಪುರದ ಸಮೀಪಕ್ಕೆ ಹೋಗಿ ನಿಂತುಕೊಂಡನು. ಆ ಸಮಯದಲ್ಲಿ ಬಾದಹನು ಎದ್ದು ಕುಳಿತುಕೊಂಡು ದಂತಧಾವನ ನಡೆಸಿದ್ದನು, ಅವನ ಎಡಬಲದಲ್ಲಿ ಚಂದ್ರವದನೆಯರಿಬ್ಬರು ಜಲವನ್ನು ಹಿಡಿದುಕೊಂಡು ಸಿದ್ಧರಾಗಿ ನಿಂತುಕೊಂಡಿದ್ದರು. ಒಬ್ಬಳು ಕರವಸ್ತ್ರವನ್ನು ಹಿಡಿದುಕೊಂಡು ನಿಂತಿದ್ದಳು. ಈ ವೈಭವವನ್ನೆಲ್ಲ ನೋಡಿ ಗಂಗಕವಿಯು ಮನಸ್ಸಿನಲ್ಲಿ ಅನ್ನುತ್ತಾನೆ. "ಅಹಹಾ ಇಂಥ ಸ್ವರ್ಗಸುಖವನ್ನು ಬಿಟ್ಟು ಬರುವದಕ್ಕೆ ಯಾವನ ಮನಸ್ಸು ಆದೀತು ? ಇಂಥಾ ಸುಖದಿಂದ ಬಾದಶಹನನ್ನು ದೂರೀಕರಿಸಿ ಕರೆದುಕೊಂಡು ಹೋಗುವದು ಸಹಾ ಪಾಪದಕೆಲಸವು. ಆದರೆ ನಾನು ಕರ್ತವ್ಯಬದ್ಧನಾಗಿದ್ದೇನೆ; ನನ್ನ ಹಣೇಬರಹದಲ್ಲಿ ಇದ್ದಂತೆ ಆಗಲಿ” ಎಂದು ನಿಶ್ಚಯಿಸಿಕೊಂಡು, ಗವಾಕ್ಷದ ಕೆಳಗೆ ನಿಂತುಕೊಂಡು ಬಾದಶಹನಿಗೆ ಕೇಳಬರುವಂತೆ ಉಚ್ಚಸ್ವರದಿಂದ "ಬಾದಶಹನೇ, ನೀನು ನನಗೆ ಮನುಷ್ಯನ ಹಾಗೆ ಕಾಣಿಸುವಿ. ಆದರೇ ಕೆಲವರು ನಿನಗೆ ಕುದುರೆಯೆಂದೂ, ಕೆಲವರು ಕತ್ತೆಯೆಂದೂ ಅನ್ನುತ್ತಾರೆ. ಆದರೆ ಹೀಗೆ ಯಾಕೆ ಅನ್ನುತ್ತಿರುವರೆಂಬದನ್ನು ನೀನೇ ವಿಚಾರಮಾಡಿ ತಿಳಿದುಕೊ” ಎಂದು ಕೂಗಿ, ಅಲ್ಲಿಂದ ಶೀಘ್ರವಾಗಿ ಪಲಾಯನ ಮಾಡಹತ್ತಿದನು. ಆಗ ಬಾದಶಹನು- “ ಎಲೈ ಅಲ್ಲಿ ಯಾರಿದ್ದೀರಿ ? ಆ ಓಡಿಹೋಗುವನ ಮನುಷ್ಯನನ್ನು ಹಿಡಿದು ಬಂಧಿಸಿ ಯಮಸದನಕ್ಕೆ ಕಳುಹಿಸಿರಿ ? ಎಂದು ಅಪ್ಪಣೆಮಾಡಿದನು. ಆದರೆ ಬಾದಶಹನಿಗೆ ಕೂಗಿದವನ ಸ್ವರವು ಗಂಗಕವಿಯ ಸ್ವರದ ಹಾಗೆ ಕೇಳಿಸಿತು; ಗುರುತುಮಾತ್ರ ಹತ್ತಲಿಲ್ಲ, ಕೂಗಿದವನ ಆಶಯವೂ ತಿಳಿಯಬಂತು, ಯಾವ ಅಂತಪುರದಲ್ಲಿ ಪಶುಪಕ್ಷಿಗಳಿಗೆ ಬರುವದಕ್ಕೆ ಅಸಾಧ್ಯವೋ ಅಂಥ ಸ್ಥಳದಲ್ಲಿ ಪರ ಮನುಷ್ಯನುಬರುವದೆಂದರೆ ಎಂಥಾ ಆಶ್ಚರ್ಯದ ಮಾತು ! ಗಂಗಕವಿಯಂತೂ ಜೀವವನ್ನು ಎಡಗೈಯಲ್ಲಿ ಹಿಡಿದುಕೊಂಡು ಪಲಾಯನಮಾಡ ಹತ್ತಿದನು, ಆದರೆ ಉದ್ಯಾನವನ್ನು ದಾಟಿ ಹೋಗಲು ಸಮರ್ಥನಾಗಲಿಲ್ಲ. ಹಿಂದಿನಿಂದ ಕಾವಲುಗಾರರುಬಂದು ಹಿಡಿದುಕೊಂಡುಬಿಟ್ಟರು. ಅವನು ಧರಿಸಿಕೊಂಡಿದ್ದ ಉಡುಪುಗಳನ್ನೆಲ್ಲ ಕಿತ್ತು ಹಾಕಿದರು. ಗಂಗಕವಿ ಎಂದು ತಿಳಿಯಬಂತು, ಕೂಡಲೆ ಅವನ ಕೈಕಾಲುಗಳನ್ನು ಕಟ್ಟಿದರು, ಬಾದಶಹನ ಅಪ್ಪಣೆಯಂತೆ ಕೊಲ್ಲಲಿಲ್ಲ. ಬಾದಶಹನು ಕೃದ್ಧನಾಗಿ ಅಂತಃಪುರದಿಂದ ಹೊರಬಿದ್ದನು. ಬೇಗಮ್ಮ ಜನರೆಲ್ಲರೂ ಬಾದಶಹನು ಹೊರಗೆ ಹೋಗದ ಹಾಗೆ ಅನೇಕ ಪ್ರಯತ್ನಗಳನ್ನು ಮಾಡಿದರು ಆದರೆ ಅವು ಸಾಧ್ಯವಾಗಲಿಲ್ಲ. ಬಾದಶಹನಿಗೆ "ಕತ್ತೆ, ಕುದುರೆ” ಎಂದ ಮನುಷ್ಯನ ಆಶಯವೂ ಸ್ಪಷ್ಟವಾಗಿ ತಿಳಿಯಿತು. ಬೇಗಮ್ಮ ಜನರು ಸಭಾಸದರಿಗೆಲ್ಲ ಅನೇಕ ಶಾಪಗಳನ್ನು ಕೊಟ್ಟರು. ಈಶಾಪಗಳಿಂದ ಬಾದಶಹನಿಗೆ ಏನೂ ತೊಂದರೆಯುಂಟಾಗಲಿಲ್ಲ. ಬಾದಶಹನು ಕೃದ್ಧನಾಗಿ ಆ ಮನುಷ್ಯನಿಗೆ ಪ್ರಾಣದಂಡನೆಯನ್ನು ಮಾಡದೆ ಬಿಡಲಿಕ್ಕಿಲ್ಲ, ಆ ಮನುಷ್ಯನಿಗುಂಟಾದ ದುರವಸ್ಥೆಯನ್ನು ಕಂಡು ಇತರರಾರೂ ಇಂಥ ಕೆಲಸಕ್ಕೆ ಮುಂದೆಯಾದರೂ ಪ್ರವೃತ್ತರಾಗಲಾರರು, ಎಂದು ಬೇಗಮ್ಮ ಜನರೆಲ್ಲರೂ ತಮ್ಮ ತಮ್ಮೊಳಗೆ ಸಂತೋಷಪಡಹತ್ತಿದರು.

ಬಾದಶಹನು ಪ್ರಕಟನಾದ ವರ್ತಮಾನವು ಪ್ರಾತಃಕಾಲದೊಳಗಾಗಿ ಪಟ್ಟಣದ ಎಲ್ಲೆಡೆಯಲ್ಲಿಯೂ ಪಸರಿಸಿತು ರಾಜನಿಷ್ಟರಾದ ಪ್ರಜೆಗಳಿಗೆ ಅತ್ಯಾನಂದವೂ, ಅತ್ಯಾಚಾರಿಗಳಾದವರಿಗೆ ಭಯವೂ ಉಂಟಾದವು. ಅಪರಾಹ್ನಕಾಲದಲ್ಲಿ ಸಭೆಯು ಕೂಡಿತು. ಕ್ರೋಧಯುಕ್ತವಾದ ಮುಖದಿಂದ ಬಾದಶಹನು ಬಂದು ಸಿಂಹಾಸನಾರೂಢನಾದನು. ಸರದಾರರೂ ಮುತ್ಸದ್ಧಿಗ ಳೂ,ಬಾದಶಹನಿಗೆ ಕುರ್ನಿಸಾತವನ್ನು ಮಾಡಿ ತಮ್ಮ ತಮ್ಮ ಸ್ಥಾನಗಳಲ್ಲಿ ಹೋಗಿ ಕುಳಿತು ಕೊಂಡರು. ಬಾದಶಹನನ್ನು ಕಣ್ಣೆತ್ತಿ ನೋಡುವದಕ್ಕೆ ಯಾರಿಂದಲೂ ಎದೆಯಾಗಲಿಲ್ಲ, ಮುಂದೆಸ್ವಲ್ಪ ಹೊತ್ತಿನೊಳಗಾಗಿ ಗಂಗಕ ವಿಯನ್ನು ರಾತ್ರಿಯಲ್ಲಿದ್ದ ವೇಪದಿಂದಲೇ ಕಟ್ಟಿಕೊಂಡು ಕರ್ಮಚಾರಿಗಳು ಸಭೆಯಲ್ಲಿ ತಂದು ನಿಲ್ಲಿಸಿದರು ಬಾದಶಹನು ಗಂಗಕವಿಯನ್ನು ಗುರುತಿಸದೆ ಅನ್ನುತ್ತಾನೆ; ಇದು ಭೂತವೋ ಅಥವಾ ಪ್ರೇತವೋ ಇಲ್ಲವೆ ಪಿಶಾಚಾವೋ ಏನಿರುವದು ? ಇವನು ಯಾರು ? ” ಎಂದು ಪ್ರಶ್ನೆ ಮಾಡಿದನು ಆಗ ಗಂಗ ಕವಿಯು ಅವನತನಾಗಿ ಬಾದಶಹನಿಗೆ ಸಲಾಮು ಮಾಡಿದನು. ಆಗ ಅವನ ತಲೆಯ ಮೇಲಿಗೆ ಆಚ್ಛಾದನವು ಕೆಳಗೆ ಬಿತ್ತು ಆಗ ಬಾದಶಹನು ಅವನ ನ್ನು ಗುರುತಿಸಿ ಅನ್ನುತ್ತಾನೆ- " ನನ್ನ ರಾಣೀವಾಸದಲ್ಲಿ ಬರುವದಕ್ಕೆ, ನಿನಗೆ ಧೈರ್ಯವು ಹ್ಯಾಗೆ ಬಂತು ? ನಿನಗೆ ಮರಣದಂಡನೆಯೇ ಯೋಗ್ಯವಾದದ್ದು ಎಂದು ನುಡಿದನು ಈ ಮಾತಿಗೆ ಗಂಗಕವಿಯು ಪ್ರತ್ಯುತ್ತರವನ್ನು ಕೊಡದೆ ಸುಮ್ಮನೆ ನಿಂತುಕೊಂಡು ಬಿಟ್ಟನು. ವಾಧಿಕರು ತಮ್ಮ ತಮ್ಮ ಆಯುಧಗಳ ನ್ನು ಹಿಡಿದುಕೊಂಡು ಸಿದ್ಧರಾಗಿ ನಿಂತುಕೊಂಡರು ಗಂಗಕವಿಯು ಸಭಾಸ ದರನ್ನೆಲ್ಲ ನೋಡಿದನು ತನ್ನನ್ನು ಬದುಕಿಸಿಕೊಳ್ಳರೆಂದು ಸಂಕೇತದಿಂದಲೇ ಪ್ರಾರ್ಥಿಸಿದನು. ಆದರೆ ಒಬ್ಬನಾದರೂ ತಲೆಯೆತ್ತಿ ಇವನನ್ನು ನೋಡಲಿಲ್ಲ, ಎಲ್ಲರೂ ಬಾದಶಹನ ಕ್ರೋದ ಮುದ್ರೆಯಿಂದ ಸ್ತಂಭೀಭೂತನಾಗಿ ಕುಳಿತು ಕೊಂಡು ಬಿಟ್ಟರು ಇದನ್ನೆಲ್ಲಕಂಡು ಬಾದಶಹನಿಗೂ ಸ್ವಲ್ಪಸ್ವಲ್ಪ ಆಶ್ಚರ್ಯವುಂಟಾಗಹತ್ತಿತು ಆಗ ಅನ್ನುತ್ತಾನೆ. - “ ಗಂಗನೇ ! ಇದು ಏನು ನಡೆಯಿಸಿರುವಿ ! ಇದು ದರಬಾರವು ? ಗೊಂಬೆಯಾಟವಲ್ಲ ? ” ಎಂದು ಬೆದರಿಸಿದ ನು. ಆಗ ಗಂಗನು ಮನಸ್ಸಿನಲ್ಲಿ ಅನ್ನುತ್ತಾನೆ, ನಿನ್ನೆ ನನ್ನನ್ನು ಹ್ಯಾಗಾ ದರೂ ಮಾಡಿ ರಕ್ಷಿಸಿಕೊಳ್ಳುವೆವೆಂದು ಹೇಳಿದ ಈ ಸಭಾಸದರೆಲ್ಲರೂ ಈದಿನ ಸ ನನ್ನ ಕಡೆಗೆ ಕಣ್ಣೆತ್ತಿ ಸಹಾ ನೋಡದೆ, ಸ್ವಸ್ಥರಾಗಿ ಕುಳಿತುಕೊಂಡು ಬಿಟ್ಟಿರುವರಲ್ಲಾ ! ನನಗಂತೂ ಮರಣವು ಸಿದ್ಧವಾಗಿಯೇ ಇರುವದು ಆದರೆ ಈ ಅವಿಶ್ವಾಸಿಗಳ ಕೃತ್ಯವನ್ನು ಬೈಲಿಗೆ ಎಳೆದುಬಿಡೋಣ ಬಾದಶಹನು ಪುನಃ ಪ್ರಶ್ನೆಯನ್ನೂ ಮಾಡಿದ್ದಾನೆ, ಅದದ್ದಾಗಲಿ : ” ಎಂದು ನಿಶ್ಚಯಿಸಿ ಕೊಂಡು ಆ ಸಭಾಸದರನ್ನೆಲ್ಲ ತೋರಿಸಿ, ಅನ್ನುತ್ತಾನೆ, " ನಾನು ಇವರ ಮಾತುಗಳ ಮೇಲೆ ವಿಶ್ವಾಸವನಿಟ್ಟು ಈ ದಂಡನೆಗೆ ಪಾತ್ರವಾಗಬೇಕಾಯಿ ತು” ಎಂದು ನುಡಿದು ತನ್ನ ಸಮಗ್ರ ವೃಂತ್ತಾಂತವನ್ನೆಲ್ಲ ನಿರೂಪಿಸಿದನು ಇವನ ಸಂಗತಿಯನ್ನು ಕೇಳಕೇಳಿದ ಹಾಗೆ ನಗೆಯು ಬರಹತ್ತಿತು ಗಂಗನ

ಪ್ರಾಣರಕ್ಷಣೆಯ ವಿಷಯದಲ್ಲಿ ನಂಬಿಗೆಯನ್ನಿತ್ತಿದ್ದ ಸಭಾಸದರ ಹೀನಸ್ಥಿತಿಯನ್ನು ಕಂಡ ಮೇಲಂತೂ, ಬಾದಶಹನಿಗೆ ಅತಿಶಯ ನಗೆಯು ಬಂತು ಎಲ್ಲವೃತ್ತಾಂತವನ್ನು ಕೇಳಿದಮೇಲೆ ಕವಿ ಗಂಗನಿಗೆ ಕ್ಷಮಿಸಿ ಬಿಟ್ಟನು. ಮೃ ತ್ಯುವಿನ ಬದಲು ಪಾರಿತೋಷಕವು ಸಿಕ್ಕಿತು. ಅಗ ಬಾದಶಹನು ಅನ್ನುತ್ತಾನೆ, "ಕವಿರಾಜ ! ಇನ್ನು ಮೇಲಾದರೂ, ಪರರು ಹೇಳಿದ ಸವಿಮಾತುಗಳನ್ನು ನಂಬದೆ ಅದರಲ್ಲಿ ಯೋಗ್ಯವಾದದ್ದು ಯವುದು ಅಯೋಗ್ಯವಾದದ್ದು ಯಾವದು ? ಎಂಬ ಸಂಗತಿಯನ್ನು ಚನ್ನಾಗಿ ವಿಚಾರಮಾಡಿಕೊಂಡು ಯಾವದಾದರೂ ಕಾರ್ಯಕ್ಕೆ ಕೈಹಾಕಬೇಕು ” ಎದು ಬುದ್ಧಿವಾದವನ್ನು ಹೇಳಿ ಸಭಾಸದರನ್ನು ಕುರಿತು ಹೇಳಿದ್ದೇನಂದರೆ, "ನಿರಪರಾಧಿಯಾದ ಈ ಕವಿಯನ್ನು ಸಂಕಟಕ್ಕೆ ಗುರಿಮಾಡಿದ್ದಿರಿ ! ಅವನನ್ನು ಬದುಕಿಸಿಕೊಳ್ಳುವ ಯತ್ನವು ನಿಮಗೆ ತಿಳಿಯಿದೆ ಹೋಯಿತು ” ಎಂದನು ಆಗ ಬೀರಬಲನು ಅನ್ನುತ್ತಾನೆ- “ ಪೃಥ್ವಿನಾಥ ! ಗಂಗಕವಿಯು ಮಹಾ ಪರೋಪಕಾರಿಯಾಗಿದ್ದಾನೆ; ಇವನು ಸಾವಿರಾರು ಜನರ ಪ್ರಾಣವನ್ನು ರಕ್ಷಿಸುವದಕ್ಕಾಗಿ ತನ್ನ ಪ್ರಾಣವನ್ನು ಸಂಕಟಕ್ಕೆ ಗುರಿ ಮಾಡಿದ್ದನು ಇದಲ್ಲದೆ ನೀವು ಒಳ್ಳೇ ವಿಚಾರ ಪರರಾಗಿರುವಿರಿ ! ಪರಿಣಾಮದ ಕಡೆಗೆ ಲಕ್ಷ್ಯ ಕೊಡುವವರು ಆಗಿರುವಿರಿ ! ನೀವು ಬಂದೂ ಗಂಗಕವಿಯ ಮೇಲೆ ಸಿಟ್ಟಾಗಲಾರಿರಿ; ಎಂಬ ಸಂಗತಿಯನ್ನು ನಾವು ತಿಳಿದು ಕೊಂಡದ್ದರಿಂದಲೇ ನಾವು ನಡುವೆ ಬಾಯಿ ಹಾಕಲಿಲ್ಲ ನಾವು ಈ ವಿಷಯದಲ್ಲಿ ಏನಾದರೊಂದು ಮಾತಾಡಿದ್ದರೆ, ನಿಮಗೆ ಅಧಿಕವಾದ ಕೋಪವು ಉಂಟಾಗುತ್ತಿತ್ತು. ಅದರಿಂದಲೇ ನಾವು ಒಂದು ತು ಟಿಯನ್ನು ಎರಡು ಮಾಡಲಿಲ್ಲ ” ಎಂದು ಹೇಳಿದನು ಆ ದಿವಸದಿಂದ ಬಾದಶಹನು ನಿತ್ಯದಲ್ಲಿ ದರಬಾರಕ್ಕೆ ಬರಹತ್ತಿದನು.

- (೨೨. ವೇಶ್ಯಯ ಗೃಹದಲ್ಲಿದ್ದ ಬಡವನ ಮಗಳು )-

ದಿಲ್ಲಿಯಲ್ಲಿ ಒಬ್ಬ ಬಡವನಾದ ಮನುಷ್ಯನಿದ್ದನು. ಅವನಿಗೆ ಎಂಟು ವರುಪದ ಒಬ್ಬ ಮಗಳಿದ್ದಳು. ಆ ಹುಡುಗಿಯನ್ನು ಒಬ್ಬ ಮೋಸಗಾರನು ಮೋಸದಿಂದ ಎತ್ತಿಕೊಂಡು ಹೋದನು ಕೆಲವು ದಿವಸ ಆ ಹುಡುಗಿಯನ್ನು ತನ್ನ ಮನೆಯಲ್ಲಿಟ್ಟುಕೊಂಡು ಆ ಮೇಲೆ ಅವಳನ್ನು ಒಬ್ಬ ವೇಶಾ ಸ್ತ್ರೀಯಳಿಗೆ ಮಾರಿಕೊಂಡು ಬಿಟ್ಟುನು ಅವಣ್ಯಾಂಗನೆಯು ಆ ಹುಡುಗಿಯನ್ನು ಚನ್ನಾಗಿ ಜೋಪಾನ ಮಾಡಹತ್ತಿದಳು. ಅದರಿಂದ ಆ ಹುಡುಗಿಯು ಕೆಲವು ದಿವಸಗಳಲ್ಲಿ ತನ್ನ ತಂದೆಯನ್ನು ಮರೆತು ಬಿಟ್ಟಳು. ಆ ಹುಡುಗಿಯ ತಂದೆ ಯು, ನಗರದ ಯಾವತ್ತು ಬಾಗಗಳಲ್ಲಿ ಚೆನ್ನಾಗಿ ಶೋಧಮಾಡಿ ನೋಡಿದನು ಎಲ್ಲಿಯೂ ಸಿಗಲಿಲ್ಲ ಕಡೆಗೆ ನಿರಾಸೆಯಿಂದ ಸ್ವಸ್ಥ ಕುಳಿತುಕೊಂಡು ಬಿಟ್ಟನು. ಆ ವಾರಾಂಗನೆಯು ಆ ಬಾಲಕಿಗೆ ಚನ್ನಾಗಿ ನೃತ್ಯಗಾಯನಾದಿಗಳನ್ನು ಕಲಿಸಿ, ಚತುರಳನ್ನಾಗಿ ಮಾಡಿಬಿಟ್ಟಳು. ಅವಳ ನೃತ್ಯಗಾಯನದ ಪ್ರಶಂಸೆಯು ದಿಲ್ಲಿಯಲ್ಲಿ ಎಲ್ಲಕಡೆಗೂ ಪಸರಿಸಿತು. ಒಂದು ದಿವಸ ಒಬ್ಬ ಸರದಾರನ ಗೃಹದಲ್ಲಿ ಆ ಬಾಲಕಿಯ ನೃತ್ಯವು ನಡೆದಿತ್ತು. ಆಕಾಸ್ಮಾತಾಗಿ ಆ ಬಾಲಕಿಯ ತಂದೆಯು ಅಲ್ಲಿಗೆ ಬಂದನು. ಆಗ ಅವನಿಗೆ ತನ್ನ ಪುತ್ರಿಯ ಪರಿಚಯವು ಹತ್ತಿತು. ಆಗ ಅವನು ಅಲ್ಲಿ ನೆರೆದಿರುವ ಜನಸಮೂಹದಲ್ಲಿ ವಿಚಾರ ಮಾಡಹತ್ತಲು ಆ ಬಾಲಕಿಯು ಒಬ್ಬ ವಾರಾಂಗನೆಯ ಗೃಹದಲ್ಲಿರುವಂತೆ ತಿಳಿಯಬಂತು ಆಗ ಅವನು ತನ್ನ ಮನಸ್ಸಿನಲ್ಲಿ ವಿಚಾರಮಾಡಿ ತಿಳಿದುಕೊಂ ಡದ್ದೇನಂದರೆ; - ನಾನು ಈಗ ಇವಳನ್ನು ನನ್ನ ಸಂಗಡ ಬಾ ಎಂದು ಕರೆದರೆ ಎಂದಿಗೂ ಬರಲಾರಳು ಇವಳು ಇಲ್ಲಿ ಒಳ್ಳೆ ಸೌಖ್ಯದಿಂದ ಇದ್ದಾಳೆ ನನ್ನ ಬಳಿಯಲ್ಲಿ ಕಷ್ಪ ಪಡುವದಕ್ಕೆ ಯಾಕೆ ಬಂದಾಳು ? ಇದು ಸರಿಯಾಗಿ ತೋರುವದಿಲ್ಲ, ಬಾದಶಹನ ಸನ್ನಿಧಿಯಲ್ಲಿ ಅರಿಕೆಮಾಡಿಕೊಂಡರೆ ಅವನು ನನ್ನ ಪುತ್ರಿಯನ್ನು ನನ್ನ ಸ್ವಾಧೀನಕ್ಕೆ ಕೊಡಿಸಬಹುದು ಎಂದು ನಿಶ್ಚಯಿಸಿ ಕೊಂಡು ಬೀರಬಲನ ಕಡೆಗೆ ಹೋಗಿ ಯಾವತ್ತು ಸಂಗತಿಯನ್ನು ಅರಿಕೆ ಮಾಡಿಕೊಂಡನು ಬೀರಬಲನು ಆ ಸಂಗತಿಯನ್ನು ಬಾದಶಹನ ಕಿವಿಯ ಮೇಲೆ ಹಾಕಿದನು. ಬಾದಶಹನು ಒಬ್ಬ ಕರ್ಮಚಾರಿಯನ್ನು ಕಳುಹಿಸಿ ಆ ವಾರಾಂಗನೆಯನ್ನೂ ಆ ಬಾಲಕಿಯನ್ನೂ ತನ್ನೆಡೆಗೆ ಬರಮಾಡಿಕೊಂಡನು, ಆಗ ಬೀರಬಲನು ಬಾದಶಹನ ಆಜ್ಞೆಯ ಪ್ರಕಾರ ಆ ವಾರಾಂಗನೆಯನ್ನು ಕುರಿತು, " ಈ ಬಾಲಕಿಯು ಯಾರ ಮಗಳು ? ಎಂದು ಪ್ರಶ್ನೆ ಮಾಡಿದನು. ಆ ವೇಶ್ಯೆಯಾದರೂ ಒಳ್ಳೇಚತುರಳಿದ್ದಳು. ಆಬಾಲಕಿಗೆ ಮನೆಯಿಂದಲೇ ಕಲಿಸಿಕೊಂಡು ಬಂದಿದ್ದಳು. ಆ ವೇಶ್ಯೆಯು ಬೀರಬಲನ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನಂದರೆ;- ಇವಳು ಒಬ್ಬ ಫಕೀರನ ಮಗಳು, ಇವಳ ತಂದೆಯು ಇವಳನ್ನು ತೀರ ಅಜ್ಞಾನದೆಶೆಯಲ್ಲಿದ್ದಾಗಲೇ ನನಗೆ ವಿಕ್ರಯಿಸಿ ಬಿಟ್ಟನು. ಆಗ ಇವಳಿಗೆ ಇನ್ನೂ ಮಾತಾಡಲಿಕ್ಕೆ ಸಹ ಬರುತ್ತಿದಿಲ್ಲ " ಬೀರಬಲನು ಆ ಬಾಲಿಕೆಯನ್ನು ಕುರಿತು;- ನಿನ್ನ ತಾಯಿ ತಂದೆಗಳು ಯಾರು ? ಎಂಬ ಸಂಗತಿಯನ್ನು ಬಲ್ಲಿಯಾ ? ಎಂದು ಕೇಳಿದನು ಅದಕ್ಕೆ ಅವಳು ( ಮಹಾರಾಜ ಇಲ್ಲ ; ನಾನು ನನ್ನ ಮಾತಾಪಿತೃಗಳು ಎಂಥವರಿದ್ದರೆಂಬದೂ ಸಹಗೊತ್ತು ಇಲ್ಲ, ನಾನು ಇವಳನ್ನೇ ತಾಯಿಯೆಂದು ತಿಳಿದುಕೊಂಡಿದ್ದೇನೆ ಇವಳೇನ ನ್ನ ಪಾಲನೆ ಪೋಷಣೆಯನ್ನು ಮಾಡಿದವಳು ” ಎಂದು ಉತ್ತರ ಕೊಟ್ಟಳು ಆ ಮೇಲೆ ಬೀರಬಲನು, " ಈ ಹುಡುಗಿಯ ಹೆಸರೇನು ? ?"ಎಂದು ಆ ವಾರಾಂಗನೆಗೆ ಕೇಳಿದನು. ಆಗ ಅವಳು. - ಇವಳ ಹೆಸರು ' ಕಾಶಿ " ಎಂದು ಹೇಳಿದಳು. ಆಮೇಲೆ ನೀವಿಬ್ಬರೂ ನಾಳೆಯದಿನ ಇಲ್ಲಿಗೆ ಬರಬೇಕೆಂದು ಆಜ್ಞಾಪಿಸಿ ಅಪ್ಪಣೆ ಕೊಟ್ಟು ಕಳುಹಿಸಿದನು.
ಮರುದಿವಸ ಆ ಬಾಲಿಕೆಯ ಪಿತನನ್ನು ಮೊದಲೇಕರಿಸಿಕೊಂಡು “ನಿನ್ನ ಮಗಳ ನಾಮಧೇಯವೇನು ? ” ಎಂದು ಕೇಳಿದ್ದಕ್ಕೆ ಅವನು “ ನಾನು ಇವಳಿಗೆ " ಲಕ್ಷ್ಮಿ ” ಎಂದು ಹೆಸರಿಟ್ಟಿದ್ದೆನು ಈ ಸಂಗತಿಯು ನನ್ನ ಮನೆಯ ನೆರೆ ಹೊಯಲ್ಲಿದ್ದವರಿಗೆಲ್ಲ ಗೊತ್ತು ಅದೆ ” ಎಂದು ಉತ್ತರಕೊಟ್ಟನು, ಬೀರಲನಿಗೆ ನೆರೆಹೊರೆಯವರನ್ನು ಕರಿಸಿ ಕೇಳಿಕೊಳ್ಳುವ ಅವಶ್ಯಕತೆಯೇ ಇದ್ದಿಲ್ಲ ಅವರಲ್ಲಿ ಆ ವಾರಾಂಗನೆಯು ಆ ಬಾಲಿಕೆಯನ್ನೊಡಗೊಂಡು ಬೀರಬಲನ ಒಲಗಕ್ಕೆ ಬಂದಳು ಈ ವ್ಯಾಜ್ಯದ ನಿರ್ಣಯವು ಏನಾಗುತ್ತದೆಂಬದನ್ನು ಅರಿತುಕೊಳ್ಳುವದಕ್ಕೆ ಎಷ್ಟೋ ಜನರು ಕೂಡಿದ್ದರು, ಆಗ ಬೀರಬಲನು ಒಬ್ಬ ಸಿಪಾಯಿಯನ್ನು ಕರೆದು, - ನೀನು ಈ ಜನಸಮೂಹದಲ್ಲಿ ಹೋಗಿ ಲಕ್ಷ್ಮಿ, ಲಕ್ಷ್ಮಿ ” ಎಂದು ಕೂಗು, ಈ ಧ್ವನಿಯನ್ನು ಕೇಳಿ ಯಾರು ಮುಂದೆ ಬರುವರೋ, ಅವರನ್ನು ನನ್ನೆಡೆಗೆ ಕರೆದುಕೊಂಡು ಬಾ ” ಎಂದು ಅಪ್ಪಣೆ ಮಾಡಿದನು ಸಿವಾಯಿಯು ಕೂಗಿದ ಕೂಡಲೆ ಒಬ್ಬ ಹುಡುಗಿಯು ಮುಂದೆ ಬಂದಳು ಅವನು ಅವಳನ್ನು ಕರೆದುಕೊಂಡು ಬೀರಬಲನ ಹತ್ತಿರ ಬಂದನು ಆ ವಾರಾಂಗನೆಯೂ ಆ ಬಾಲಿಕೆಯ ಬೆನ್ನ ಮೇಲೆಯೇ ಬಂದಳು ಆ ಬಾಲಿಕೆಯನ್ನು ನೋಡಿ ಬೀರಬಲನು ಅನ್ನುತ್ತಾನೆ:- " ನಿನ್ನ ಹೆಸರು " ಕಾಶಿ ” ಎಂದು ಹೇಳಿದ್ದಿಲ್ಲವೇ ? ಹೀಗಿದ್ದು “ ಲಕ್ಷ್ಮಿ ” ಎಂದು ಕೂಗಿದರೆ, ನೀನು ಯಾಕೆ ಬಂದಿ ? ” ಅದಕ್ಕೆ ಆ ಬಾಲಿಕೆಯು ಗಾಬರಿಯಾಗಿ,- ನನ್ನ ತಂದೆಯು ನನಗೆ ಲಕ್ಷ್ಮಿ ಎಂದು ಕರೆಯುತ್ತಿದ್ದನು. ಆಮೊದಲಿನ ಹೆಸರು ಕಿವಿಗೆ ಬಿದ್ದರಿಂದ, ದಿಗ್ಬ್ರಮೆಯುಳ್ಳವಳಾಗಿ ಮುಂದೆ ಬಂದು ಬಿಟ್ಟೆನು ” ಎಂದು ಹೇಳಿದಳು. ಆಮೇಲೆ ಬೀರಬಲನು. ನಿನ್ನೆ ನೀನು " ನನಗೆ ಮಾತಾ ಪಿತೃಗಳ ಪರಿಚಯವಿಲ್ಲವೆಂದು ಹೇಳಿದವಳು ” ಈ ಹೊತ್ತು ಹೀಗೆ ವಿಪರೀತವಾಗಿ ಯಾಕೆ ಹೇಳುತ್ತೀ ? ” ಎಂದು ಪ್ರಶ್ನೆ ಮಾಡಿದನು. ಆಬಾಲಿಕೆಗೆ ಏನೂ ಉತ್ತರ ಕೊಡುವದಕ್ಕೆ ತಿಳಿಯದೆ ಹೋಯಿತು. ಸುಮ್ಮನೆನಿಂತು ಕೊಂಡು ಬಿಟ್ಟಳು. ಅಗ ಆ ವಾರಾಂಗನೆಯು ಮುಂದೆಬಂದು ಮಾತನಾಡ ಹತ್ತಿದಳು. ಆಗ ಅವಳಿಗೆ ಮಾತನಾಡಗೊಡದೆ ಬೀರಬಲನು ಅನ್ನುತ್ತಾನೆ; “ ನೀನು ನಿನ್ನೆ ಹೇಳಿದ ಸಂಗತಿಗೂ, ಈದಿವಸ ಹೇಳುತ್ತಿರುವ ಸಂಗತಿಗೂ ಬಹಳೇ ಅಂತರವದೆ; ನೀನು ಬಹಳೇ ಮೋಸಗಾರಳಿದ್ದಂತೆ ಕಂಡುಬರುತ್ತದೆ, ಆದ್ದರಿಂದ ನಿನಗೆ ಯೋಗ್ಯ ಶಿಕ್ಷೆಯನ್ನು ಮಾಡುತ್ತೇನೆ” ಎಂದು ಹೇಳಿ ಒಬ್ಬ ಕರ್ಮಚಾರಿಗೆ ನೇತ್ರ ಸಂಕೇತ ಮಾಡಿದನು. ಕೂಡಲೆ ಅವನು ಆಯುಧ ಪಾಣಿಯಾಗಿ ಮುಂದೆ ಬಂದು ನಿಲ್ಲಲು, ವೇಶ್ಯೆಯು ಗಾಬರಿಯಾಗಿ ಅನ್ನುತ್ತಾಳೆ “ ನಾನು ಸತ್ಯವನ್ನೇ ಹೇಳುತ್ತೇನೆ, ನಾನು ಈ ಬಾಲಿಕೆಯನ್ನು ಮೂರು ವರುಷದ ಹಿಂದೆ ಕ್ರಯಕ್ಕೆ ತೆಗೆದುಕೊಂಡದ್ದು ನಿಜವು ಯಾವನೋ ಒಬ್ಬನು ಇವಳನ್ನು ನನಗೆ ಕೊಟ್ಟು ಹೊರಟು ಹೋಗಿರುವದು ಸತ್ಯವು ನನ್ನ ಅಪರಾಧವನ್ನು ಕ್ಷಮಿಸಬೇಕು ” ಎಂದು ಪ್ರಾರ್ಥನೆಮಾಡಿಕೊಂಡಳು. ವೇಶ್ಯೆಯು ಹೇಳಿದ ಸಂಗತಿಯನ್ನು ಕೇಳಿದಕೂಡಲೆ ಆ ಬಾಲಿಕೆಯ ಪಿತನು ಮುಂದೆ ಬಂದನು, ಬೀರಬಲನು ಆ ಬಾಲಿಕೆಯನ್ನು ಕುರಿತು ಇವನು ನಿನ್ನ ಪಿತನಲ್ಲವೇ ! ಎಂದು ಪ್ರಶ್ನೆ ಮಾಡಿದಳು, ಮೊದಲೇ ಆ ಬಾಲಿಕೆಯು ಗಾಬರಿಯಾಗಿದ್ದಳು ಸುಳ್ಳು ಹೇಳಿದರೆ ಶಿಕ್ಷೆಯಾಗುವದೆಂಬ ಅಂಜಿಕೆಯೂ ಹುಟ್ಟಿತು, ಅದರಿಂದ ಅವಳು ಅಹುದು, ಇವನೇ ನನ್ನ ಪಿತನು ? ಎಂದು ಸತ್ಯವನ್ನೇ ಹೇಳಿ ಬಿಟ್ಟಳು. ಆಮೇಲೆ ಎದುರಿಗೆ ನಿಂತುಕೊಂಡಿದ್ದ ತಂದೆಯನ್ನು ಆಲಿಂಗನೆ ಮಾಡಿಕೊಂಡಳು, ಬೀರಬಲನು ಆ ವಣ್ಯಾoಗನೆಯನ್ನು ಕುರಿತು ಅನ್ನುತ್ತಾನೆ “ನಿನ್ನ ಮೇಲೆ ಮೂರು ಅಪರಾಧಗಳುಂಟು; ಮೊದಲನೆದು ಅಜ್ಞಾನಿಯಾದ ಬಾಲಿಕೆಯನ್ನು ಮೋಸಗೊಳಿಸಿದ್ದು, ಎರಡನೇದು ದಾಸಿಯಂತೆ ಇವಳನ್ನು ಕ್ರಯಕ್ಕೆ ತೆಗೆದುಕೊ೦ಡದ್ದು, ಮೂರನೇದು ಸತ್ಯವನ್ನು ಮರೆಮಾಚಿ ಶಿಕ್ಷೆ ಯಾಗುವದೆಂಬ ನಂಬಿಕೆಯು ಹುಟ್ಟಿದಮೇಲೆ ಅಪರಾಧವನ್ನು ಸ್ವೀಕರಿಸಿದ್ದು ಹೀಗೆ ಮೂರು ಅಪರಾಧಗಳನ್ನು ಮಾಡಿದ್ದರಿಂದ ನಿನಗೆ ಕಠಿಣವಾದ ಕಾರಾ ಗೃಹವಾಸವು ತಪ್ಪದು ” ಎಂದು ಹೇಳಿದಕೂಡಲೆ ಸಿಪಾಯಿಗಳು ಒಂದು ಅವಳನ್ನು ಬಂಧನಮಾಡಿ ಕಾರಾಗೃಹಕ್ಕೆ ಎಳೆದೊಯ್ದರು. ಬೀರಬಲನು ಆ ವೃದ್ದ ಮನುಷ್ಯನಿಗೆ ಅನ್ನುತ್ತಾನೆ- ಈ ನಿನ್ನ ಪುತ್ರಿಯು ನಿನಗೆ ಸಿಕ್ಕಳು ಆದರೆ ಇವಳು ಇನ್ನು ಮುಂದೆ ನಿನ್ನ ಬಳಿಯಲ್ಲಿ ಸುಖಸಮಾಧಾನದಿಂದ ಇರಲಾರಳು, ಆದ್ದರಿಂದ ಇವಳನ್ನು ಯೋಗ್ಯನಾದ ಒಬ್ಬ ವರನಿಗೆಕೊಟ್ಟು ವಿವಾಹ ಮಾಡಿಕೊಡು ! ” ಎಂದು ಬುದ್ಧಿವಾದವನ್ನು ಹೇಳಿ ಮನೆಗೆ ಕಳುಹಿಸಿಕೊಟ್ಟನು.

-(೨೩. ಸಂತೋಷದಿಂದಲೋ ಅಥವಾ ಅಸಂತೋಷದಿಂದಲೋ.. ಒಂದುದಿನ ಅಕಬರ ಬಾದಶಹನು ಬೀರಬಲನಿಗೆ ಪ್ರಶ್ನೆ ಮಾಡಿದನು,

೭೪
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.

ಏನಂದರೆ;- "ಬೀರಬಲ ! ರಮಜಾನ ತಿಂಗಳು ಸಂತೋಷದಿಂದ ಹೋಗುವದೋ, ಅಥವಾ ಅಸಂತೋಷದಿಂದ ಹೋಗುವದೋ ” ಎಂದು ಕೇಳಿದಕ್ಕೆ ಬೀರಬಲನು " ಸಂತೋಷದಿಂದ ” ಎಂದುತ್ತರವಿತ್ತನು. ಅದಕ್ಕೆ ಬಾದಶಹನು ಪುನಃ ಅದು ಹ್ಯಾಗೆ ! ಎಂದು ಕೇಳಿದನು. ಆಗ ಬೀರಬಲನು; “ ಅದು ಸಂತೋಷದಿಂದ ಹೋಗದಿದ್ದರೆ ಪ್ರತಿವರುಷ ಅದು ಕರೆಯಿಸಿಕೊಳ್ಳದೆ ಯಾಕೆಬರುತ್ತಿತ್ತು” ಎಂದು ಉತ್ತರಕೊಟ್ಟನು ಬಾದಶಹನು ಪ್ರಸನ್ನನಾದನು.

-(೨೪. ಹನ್ನೆರಡರಲ್ಲಿ ನಾಲ್ಕು ಹೋದರೆ ಎಷ್ಟು ? -

ಒಂದು ದಿವಸ ಬಾದಶಹನು ಬೀರಬಲನಿಗೆ;- " ಹನ್ನೆರಡರಲ್ಲಿ ನಾಲ್ಕು ಹೋದರೆ ಎಷ್ಟು ಉಳಿಯಿತು ” ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಬೀರಬಲನು- “ ಏನೂ ಉಳಿಯಲಿಲ್ಲ ” ಎಂದು ಉತ್ತರಕೊಟ್ಟನು. ಅದುಹ್ಯಾಗೆ ? ಎಂದು ಬಾದಶಹನು ಪುನಃ ಪ್ರಶ್ನೆ ಮಾಡಿದನು ಆಗ ಬೀರಬಲನು ಸರಕಾರ ಹನ್ನೆರಡು ತಿಂಗಳುಗಳಲ್ಲಿ ವರ್ಷಾಕಾಡದ ನಾಲ್ಕು ತಿಂಗಳು ಹೋದರೆ ಉಳಿದತಿಂಗಳುಗಳಲ್ಲಿ ಏನು ಅರ್ಥವಿರುವರು ಎಂದು ಉತ್ತರ ಕೊಡಲು, ಬಾದಶಹನು ಪರಮ ಸಂತೋಷಪಟ್ಟನು.

-೨೫- ಕಾಳಿಕಾದೇವತೆಗೆ ಮಾಡಿದಚೇಷ್ಟೇ.

ಒಂದುದಿವಸ ಕಾಳಿಕಾದೇವತೆಯು ಬೀರಬಲನನ್ನು ಹೆದರಿಸಬೇಕೆಂದು ಸಹಸ್ರ ಶಿರಗಳನ್ನು ಧಾರಣಮಾಡಿಕೊಂಡು ದರ್ಶನಕೊಟ್ಟಳು, ದೇವಿಯ ಈಪ್ರಕಾರದ ರೂಪವನ್ನು ನೋಡಿ ಬೀರಬಲನು ನಗುತ್ತ ನಮಸ್ಕಾರ ಮಾಡಿ ಖಿನ್ನನಾಗಿ ಕುಳಿತುಕೊಂಡನು. ದೇವಿಯು, ಬೀರಬಲನು ಹೆದರದೇ ಇದ್ದದ್ದನ್ನೂ ನಗುತ್ತ ನಮಸ್ಕಾರಮಾಡಿದ್ದನ್ನೂ ಆಮೇಲೆ ಖಿನ್ನನಾಗಿ ಕುಳಿತುಕೊಂಡದ್ದನ್ನೂ ನೋಡಿ ವಿಚಾರಗ್ರಸ್ತಳಾಗಿ ಸ್ವಲ್ಪ ಹೊತ್ತಿನಮೇಲೆ ಬೀರಬಲನಿಗೆ “ ಭಕ್ತಾಗ್ರಣಿಯೇ ! ನೀನು ಮೊದಲು ನಕ್ಕದ್ದುಯಾಕೆ, ಆ ಮೇಲೆ ಉದಾಸೀನನಾದದ್ದು ಯಾಕೆ ?” ಎಂದು ಪ್ರಶ್ನೆ ಮಾಡಿದಳು, ಬೀರಬಲನು ಬದ್ಧಾಂಜಲಿಯಾಗಿ ವಿಜ್ಞಾಪನೆಮಾಡಿಕೊಂಡನು. ಏನಂದರೆ- " ಜಗಜ್ಜನನೀ ! ನಿನ್ನ ದರುಶನವು ಲಭಿಸಿದ್ದರಿಂದ ಹರುಷಿತನಾಗಿ ಮೊದಲು ನಕ್ಕೆನು, ಆಮೇಲೆ ಖಿನ್ನತೆಯುಂಟಾದ ಕಾರಣವನ್ನು ಮಾತ್ರ ನಾನು ಹೇಳಲಾರೆನು ನನ್ನ ಅಪರಾಧವನ್ನು ಕ್ಷಮಿಸಬೇಕು” ಎಂದನು. ಅದರ ಕಾರಣವನ್ನು ಹೇಳಲಿಕ್ಕೇಬೇಕೆಂದು ದೇವಿಯು ಅತಿ ಆಗ್ರಹಮಾಡಿದ್ದರಿಂದ ಬೀರುಲನು- “ ಎಲೈ ಜಗನ್ಮಾತೆಯೇ ! ನೀನು ಎಲ್ಲರ ಮನಸ್ಸಿನಲ್ಲಿದ್ದದ್ದನ್ನು ತಿಳಿ

ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,
೭೫

ದುಕೊಳ್ಳುವಷ್ಟು ಶಕ್ತಿಯುಳ್ಳವಳಾಗಿರುವಿ? ನಿನ್ನನ್ನು ಮರೆಮಾಜಿಸುವಷ್ಟು ಶಕ್ತಿಯು ಅಲ್ಪನಾದ ನನ್ನಲ್ಲಿ ಇರುವದಿಲ್ಲ. ಆದರೆ ನೀವು ಅತ್ಯಾಗ್ರಹಮಾಡಿದ್ದರಿಂದ ಹೇಳುತ್ತೇನೆ ಕ್ಷಮಿಸಬೇಕು, “ ನನಗೆ ಎರಡುಕೈಗಳೂ, ಒಂದು ನಾಸಿಕವೂ ಇರುವದು. ನನಗೆ ಯಾವಾಗಾದರೊಮ್ಮೆ ಸೀತಬಾಧೆಯಾಗಲು ನಾಸಿಕವನ್ನು ಸ್ವಚ್ಛ ಮಾಡಿಕೊಳ್ಳಬೇಕಾದರೆ ಬೇಸತ್ತು ಹೋಗುವೆನು. ಆದರೇ ನಿಮಗೆ ಒಂದುಸಹಸ್ರ ನಾಸಿಕಗಳು ಇರುವವು ಹಸ್ತಗಳಾದರೆ ಎರಡೇ ಇರುವವು, ನಿಮಗೆ ನನ್ನಂತೆ ಸೀತಬಾಧೆಯಾದರೆ ಹ್ಯಾಗೆ ಸಹಿಸಿಕೊಳ್ಳುವಿರೋ ? ” ಎಂಬ ಚಿಂತೆಯುತ್ಪನ್ನವಾದ್ದರಿಂದ ಉದಾಸೀನನಾಗಿ ಕುಳಿತು ಕೊಂಡೆನು ಇಷ್ಟೇಸರಿ ಎಂದು ಉತ್ತರಕೊಟ್ಟನು. ಅದನ್ನು ಕೇಳಿ ಜಗಜ್ಜನನಿಯು ಬೀರಬಲನ ಬುದ್ಧಿ ಚಾತುರ್ಯಕ್ಕೆ ಹರುಷಿತಳಾಗಿ ಆಶೀರ್ವದಿಸಿ ಅದ್ಭಶ್ಯಳಾಗಿ ಹೊರಟುಹೋದಳು.

-(೨೬. ಸುವರ್ಣಕಾರರ ಚತುರತೆ.)-

ಒಂದು ಸಾರೆ ಬಾದಶಹನು ಬೀರಬಲನಿಗೆ ಕೇಳುತ್ತಾನೆ:- "ಕಸಬುದಾರರು ತಮ್ಮ ಕಡೆಗೆ ಮಾಡಲಿಕ್ಕೆ ಹಾಕಿದ ಪದಾರ್ಥಗಳಲ್ಲಿ ಅಲ್ಪಸ್ವಲ್ಪಾದರೂ ಕಳ್ಳತನಮಾಡಿ ಉಳಿಸಿಕೊಳ್ಳುತ್ತಾರೆ " ಎಂದು ಲೋಕದಲ್ಲಿ ವಾಡಿಕೆಯಿರುವದು, ಈಮಾತು ಸತ್ಯವಾದದ್ದೇ ಹ್ಯಾಗೆ !
ಬೀರಬಲ-ಪೃಥ್ವೀನಾಥ ? ಪ್ರತಿಯೊಬ್ಬ ಕಸಬುದಾರನು ತನ್ನ ತನ್ನ ಕಸಬಿನಲ್ಲಿ ಅಲ್ಪಸ್ವಲ್ಪಾದರೂ ಚತುರತೆಯನ್ನು ತೋರಿಸುತ್ತಿರುವದು ನಿಜವು.
ಬಾದಶಹ - ಸಿಂಪಿಗರು, ಅಕ್ಕಸಾಲಿಗರು ಸಹ ತಮ್ಮ ತಮ್ಮ ಕೆಲಸಗಳಲ್ಲಿ ಕಳ್ಳತನ ಮಾಡುತ್ತಿರುವರೇ !
ಬೀರಬಲ- ಎಲ್ಲರೂ ಕಳ್ಳತನ ಮಾಡುತ್ತಿರುವರೆಂದು ನಾನು ಹೇಳುವದಿಲ್ಲ, ಸುವರ್ಣಕಾರರ ವಿಷಯದಲ್ಲಿ ಮಾತ್ರ ಜನರಲ್ಲಿ ಈಪ್ರಕಾರ ಪ್ರಸಿದ್ಧಿ ಇರುವದು. ಏನಂದರೆ- ವಸ್ತುಗಳನ್ನು ಮಾಡಲಿಕ್ಕೆ ಹಾಕಿದವನು ಅವನಮುಂದೆ ಕುಳಿತು, ಕಣ್ಣೊಳಗೆ ಕಣ್ಣಿಟ್ಟು ನೋಡುತ್ತಿದ್ದರೂ ಸಹಸ್ವಲ್ಪಾದರೂ ಬಂಗಾರವನ್ನು ಕದ್ದು ಕೊಳ್ಳದೆ ಬಿಡಲಾರನು, ಅವನ ಚಾತುರ್ಯವು ಕಣ್ಣೊಳಗಿನ ಕಾಡಿಗೆಯನ್ನು ಕದ್ದುಕೊಳ್ಳುವಷ್ಟು ಚಾತುರ್ಯಕ್ಕೆ ಸರಿಯಾದದ್ದೆಂತಲೂ ಅವರು ತಮ್ಮ ಅಕ್ಕತಂಗಿಯರ ಬಂಗಾರದಲ್ಲಿ ಸಹ ಕದ್ದುಕೊಳ್ಳದೆ ಬೆಡಲಾರರು; ಈ ವಿಷಯದಲ್ಲಿ ನನಗೆ ಗೊತ್ತುಯಿದ್ದ ಒಂದು ಆಖ್ಯಾಯಿಕೆಯನ್ನು ಹೇಳುತ್ತೇನೆ ಕೇಳಬೇಕು.

ಒಂದು ಊರಲ್ಲಿ ಒಬ್ಬ ಸುವರ್ಣಕಾರನಿದ್ದನು. ಅವನಿಗೆ ಒಬ್ಬ ಮಗನಿದ್ದನು. ತಂದೆಯು ವೃದ್ಧನಾದ್ದರಿಂದ ಅವನ ಮಗನೆ ಯಾವತ್ತು ಕೆಲಸಗಳನ್ನು ನೋಡಿಕೊಂಡು ಹೋಗುತ್ತಿದ್ದನಂತೆ, ವೃದ್ಧನು ಅಂಗಡಿಯ ಒಂದು ಮೂಲೆಯಲ್ಲಿ ಕುಳಿತುಕೊಂಡು "ರಾಮ ರಾಮ” ಎಂದು ಜಪಮಾಡುತ್ತ ಮಗನಿಗೆ ಆಭರಣಗಳನ್ನು ಮಾಡಲಿಕ್ಕೆ ಕಲಿಸುತ್ತ ಕಾಲಹರಣ ಮಾಡಹತ್ತಿದನು. ಒಂದು ದಿವಸ ಆ ವೃದ್ಧಸುವರ್ಣಕಾರನ ಮಗಳು, ಅತ್ತೆ ಮನೆಯಿಂದ ತವರುಮನೆಗೆ ಬರುವಾಗ ಆಭರಣಗಳನ್ನು ಮಾಡಿಸಬೇಕೆಂದು ಬಂಗಾರವನ್ನು ತೆಗೆದುಕೊಂಡು ಬಂದಿದ್ದಳು. ಅದನ್ನು ಎರಡನೇಯವರ ಹತ್ತರ ಆಭರಣಗಳನ್ನು ಮಾಡಿಸಲಿಕ್ಕೆ ಮನ ಒಪ್ಪದೇ ತನ್ನ ಅಣ್ಣನ ಹತ್ತರವೇ ಕೊಟ್ಟು ತಾನು ಅವನಯೆದುರಿಗೆ ಸ್ವಸ್ಥವಾಗಿ ಕುಳಿತುಕೊಂಡು ಬಿಟ್ಟಳು. ವೃದ್ಧನ ಮನಸ್ಸಿನಲ್ಲಿ ಆಗ ಒಂದು ಕಲ್ಪನೆಯು ಹುಟ್ಟಿತು ಏನಂದರೆ:- “ನನ್ನ ಮಗನು ತನ್ನ ತಂಗಿಯ ಬಂಗಾರದಲ್ಲಿ ಸ್ವಲ್ಪಾದರೂ ಕಳವು ಮಾಡಲಿಕ್ಕಿಲ್ಲ; ಅದರಿಂದ ಅವನಿಗೆ ಕದ್ದುಕೊ, ಎಂದು ಹೇಳಬೇಕು” ಎಂದು ಯೋಚಿಸಿ ಪ್ರಕಟವಾಗಿ ಹೇಳಲಿಕ್ಕೆ ಬರದಹಾಗೆ ಇದ್ದದರಿಂದ ಸಾಂಕೇತಿಕಕಶಬ್ದಗಳಿಂದ ಅವನಿಗೆ ತಿಳಿಯಬರುವಂತೆ- " ಎಲೈ ರಾಮನೇ! ನಿನಗೆ ಎಲ್ಲ ಪ್ರಾಣಿಗಳು ಸಮಾನರಷ್ಟೇ" ಎಂದು ಮೇಲಿಂದ ಮೇಲೆ ನುಡಿಯಹತ್ತಿದನು. ಮಗನಿಗೆ ವೃದ್ಧನ ಸಂಕೇತವು ತಿಳಿಯಿತು. ಆದರೆ ಆಗ ಯಾವ ಪ್ರಕಾರದಿಂದಲೂ ಪ್ರತ್ಯುತ್ತರವನ್ನು ಕೊಡದೆ ತನ್ನ ಕೈಯೊಳಗಿನ ಕೆಲಸವನ್ನೇ ಮಾಡಹತ್ತಿದನು. ಅವನ ತಂಗಿಯು ತಾನು ಕುಳಿತುಕೊಂಡೇ ಅವನ ಸಂಗಡ ಮಾತನಾಡಲಾರಂಭಿಸಿದಳು. ಈ ಪ್ರಕಾರ ಮಗನು ಪ್ರತ್ಯುತ್ತರವನ್ನೀಯದೆ ಕುಳಿತಿದ್ದರಿಂದ ತಾನು ಮಾಡಿದ ಸಂಕೇತವು ಮಗನಿಗೆ ತಿಳಿಯಲಿಲ್ಲವೆಂಬಂತೆ ಕಂಡುಬರುತ್ತದೆ ಆದ್ದರಿಂದ ಮತ್ತೊಂದುಸಾರೆಯಾದರೂ ತಿಳಿಸಿಹೇಳೋಣ ಎಂದು ಯೋಚಿಸಿ "ರಾಮನೆ ನಿನಗೆ ಎಲ್ಲಾ ಪ್ರಾಣಿಗಳು ಸಮಾನರೇ?” ಎಂಬ ವಾಕ್ಯವನ್ನು ಮೇಲಿಂದಮೇಲೆ ಅನ್ನ ಹತ್ತಿದನು. ಇದನ್ನು ಕೇಳಿಕೇಳಿ ಮಗನಿಗೆ ಬೇಸರಿಕೆಯು ಬಂತು. ತಾನು ಪ್ರತ್ಯುತ್ತರವನ್ನು ಕೊಡದೆಹೋದರೆ ಇವನು ಸುಮ್ಮನಾಗಲಾರನು ಎಂದು ತಿಳಿದು ಅಂದದ್ದೇನಂದರೆ, "ತಂದೆಯೇ, ಮೇಲಿಂದಮೇಲೆ ರಾಮ ರಾಮ ಎಂದು ಯಾಕೆ ಕೂಗಿಕೊಳ್ಳುತ್ತೀ; ರಾಮನು ಲಂಕೆಯನ್ನು ಸುಲಿಗೆ ಮಾಡಿ ಎಷ್ಟೋ ದಿವಸಗಳಾಗಿ ಹೋದವು ಈಗ ಅಲ್ಲಿ ಇರುವದಾದರೂ ಏನು?" ಎಂದು ನುಡಿದಕೂಡಲೇ ವೃದ್ಧನು ಸುಮ್ಮನೇ ಕುಳಿತುಕೊಂಡನು. ಅವನು ತಂದೆಯು ಹೇಳುವದಕ್ಕಿಂತ ಮೊದಲೇ ಬಂಗಾರವನ್ನು ಕದ್ದು ಬೂದಿಯಲ್ಲಿ ಮುಚ್ಚಿಟ್ಟು ಬಿಟ್ಟಿದ್ದನು. ಸ್ವಾಮಿ! ಕಸಬುದಾರರು ಒಳ್ಳೆ ಕುಶಲರಾದ ಕಳ್ಳರಿರುತ್ತಾರೆ, ಅವರು ಕಳವು ಮಾಡಿದ್ದು ಯಾರಿಗೂ ಗೊತ್ತು ಆಗುವದಿಲ್ಲ. ಈಕಾರಣದಿಂದ ಶಾಸ್ತ್ರಕಾರರು ಸುವರ್ಣಕಾರರಿಗೆ "ಪಶ್ಯತೋಹರ" ಅ೦ದರೆ ನೋಡನೋಡುವ ಹಾಗೆ ಕಳವು ಮಾಡುವವರು, ಎಂದು ಹೆಸರು ಕೊಟ್ಟಿದ್ದಾರೆ.

-( ೨೭. ಎಲ್ಲಕ್ಕಿಂತ ಅಧಿಕವಾದ ಪ್ರಿಯವಸ್ತು )-


ಒಂದು ದಿವಸ ಬಾದಕಹನು ತನ್ನ ಪ್ರೇಮ ಮಾತ್ರಳಾದ ರಾಣಿಯ ಮೇಲೆ ಸಿಟ್ಟಾಗಿ; "ನೀನು ಈಗಿಂದೀಗ ನನ್ನ ಅಂತಃವುರವನ್ನು ಬಿಟ್ಟು ಹೊರಗೆ ಹೋಗು, ತಡಮಾಡಿದರೆ ನಾನು ಕ್ಷಮಿಸಲಾರೆನು" ಎಂದು ಅಜ್ಞಾಪಿಸಿದನು. ಬಾದಶಹನ ಕ್ರೂರವಾದ ಆಯ್ಕೆಯನ್ನು ಕೇಳಿ ರಾಣಿಯು ಗಾಬರಿಯಾಗಿ, ಆನೇಕ ವಿಧದಿಂದ ಪ್ರಾರ್ಥನೆ ಮಾಡಿಕೊಂಡಳು. ಆದರೂ ಬಾದಶಹನ ಕ್ರೋಧವು ಕಡಿಮೆಯಾಗಲಿಲ್ಲ. ಆದ್ದರಿಂದ ಅವಳು ಬೀರಬಲನನ್ನು ತನ್ನೆಡೆಗೆ ಬರಮಾಡಿಕೊಂಡು ತನ್ನ ವೃತ್ತಾಂತವನ್ನೆಲ್ಲ ತಿಳಿಸಿದಳು. ಅವನು ಅವಳಿಗೆ ಒಂದು ಹಂಚಿಕೆಯನ್ನು ಹೇಳಿಕೊಟ್ಟು ತನ್ನ ಮನೆಗೆ ಬಂದನು. ಆ ಹಂಚಿಕೆಯು ಅವಳ ಮನಸ್ಸಿಗೆ ಬಂತು. ಅವಳು ಆ ಕೂಡಲೆ ಒಬ್ಬ ಪರಿಚಾರಕನನ್ನು ಕರೆದು ಕೆಲವು ಸಾಮಾನುಗಳ ಗಂಟನ್ನು ಕಟ್ಟಿಸಿಟ್ಟು ಬಾದಶಹನನ್ನು ಕರೆಯಿಸಿಕೊಂಡಳು. ಅವನು ಬರುವದರೊಳಗೆ ಒಂದು ಬಂಗಾರದ ವೇತಿಯಲ್ಲಿ ಸ್ವಲ್ಪ ಮದ್ಯವನ್ನು ಬೆರಿಸಿ ಒಂದು ಸ್ವಾದಿಷ್ಟವಾದ ಪೇಯವನ್ನು ಸಿದ್ಧಪಡಿಸಿಕೊಂಡಿದ್ದಳು. ಬಾದಶಹನು ಬಂದಕೂಡಲೆ ಅವನೊಡನೆ ಕೆಲವು ವಿನೋದದ ಮಾತುಗಳನ್ನಾಡಹತ್ತಿದಳು. ಆದರಿಂದಲೂ ಬಾದಶಹನು ಪ್ರಸನ್ನನಾಗದಿರಲು, ಅಂತ್ಯದಲ್ಲಿ "ನಾನು ತಮ್ಮ ಆಜ್ಞೆಯನ್ನು ಕಾಲತ್ರಯಗಳಲ್ಲಿಯೂ ಮೀರಲಾರೆನು" ಎಂದು ರೋದನವಾಡ ತೊಡಗಿದಳು. ಆಗ ಬಾದಶಹನು ಅನ್ನುತ್ತಾನೆ, ಇಂಥ ಹಟಮಾರಿತನದಿಂದ ನನ್ನ ಜ್ಞೆಯು ತಿರುಗಲಾರದು, ಬೇಕಾದರೆ ಈಗೃಹದಲ್ಲಿ ನಿನಗೆ ಅಧಿಕವಾಗಿ ಪ್ರಿಯವಾಗಿರುವ ಯಾವತ್ತು ಒಡವೆಗಳನ್ನು ತೆಗೆದುಕೊಂಡು ಹೋದರೂ ಸಹ ಅಡ್ಡಿಯಿಲ್ಲ, ಎಂದನು. ಆಗ ಅವಳು ಅತಿ ಖಿನ್ನತೆಯಿಂದ "ಖಾವಿಂದ, ನಿಮ್ಮ ಅಪ್ಪಣಿಯೇ ನನಗೆ ಮಾನ್ಯವು, ಆದರೆ ನನ್ನದೊಂದು ವಿಜ್ಞಾಪನೆಯುಂಟು; ಅದೇನಂದರೆ, "ಈ ಪೇಯವನ್ನು ತಾವು ಸ್ವೀಕರಿಸಬೇಕು. ಇನ್ನು ತಮ್ಮ ದರ್ಶನ ಲಾಭವು ಎಂದಿಗಾಗುವದೋ ದೇವರೇ ಬಲ್ಲನು" ಎಂದು ವಿಜ್ಞಾಪಿಸಿದಳು ಬಾದಶಹನು ಸ್ತ್ರೀಚರಿತ್ರಕ್ಕೆ ಮರುಳಾಗಿ ಆ ಪೇಯವನ್ನು ಪ್ರಾಶನ ಮಾಡಿದನು. ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ಬಾದಶಹನಿಗೆ ಅದರಿಂದ ಪ್ರಜ್ಞೆಯು ತಪ್ಪಿ ಮಲಗಿಕೊಂಡು ಬಿಟ್ಟನು. ಆಗ ಅವಳು ಬಾದಶಹನನ್ನು ಒಂದು ಮಣೆಯಲ್ಲಿ ಮಲಗಿಸಿ ತಾನೊಂದು ಮೇಣೆಯಲ್ಲಿ ಕುಳಿತುಕೊಂಡು ತನ್ನ ತಂದೆಯ ಮನೆಗೆ ಬಂದು ಬಾದಶಹನನ್ನು ಒಂದು ಮಂಚದಮೇಲೆ ಮಲಗಿಸಿ, ತಾನು ಎಚ್ಚರದಿಂದ ಕಾಯುತ್ತ ಕುಳಿತುಕೊಂಡಳು. ಮದ್ಯದ ಮದವು ಇಳಿದಮೇಲೆ ಬಾದಶಹನು ಎಚ್ಚತ್ತು ಕುಳಿತುಕೊ೦ಡು ಸುತ್ತುಮುತ್ತ ನೋಡಿ ತನ್ನ ಅಂತಃಪುರದಂತೆ ಕಾಣದೆ ಹೋಗಲು ಆಶ್ಚಯಾಣ್ವಿತನಾಗಿ ಕುಳಿತುಕೊಂಡನು. ಮುಂದೆ ಸ್ವಲ್ಪ ಹೊತ್ತಿನಮೇಲೆ ಮೇಲಕ್ಕೆ ತಲೆಯೆತ್ತಿ ನೋಡಹತ್ತಲು ರಾಣಿಯು ಕಂಡುಬಂದಳು. ಆಗ ಅವಳನ್ನು ಕುರಿತು; "ನಾನು ಜಾಗ್ರದಾವಸ್ಥೆಯಲ್ಲಿರುವೆನೋ? ಅಥವಾ ಸುಷುಪ್ತಾವಸ್ಥೆಯಲ್ಲಿರುವನೋ?" ಎಂದು ಪ್ರಶ್ನೆ ಮಾಡಿದನು. ಆಗ ಬೇಗಮ್ಮನು ಅನ್ನುತ್ತಾಳೆ;- "ಸ್ವಾಮಿ! ತಾವು ಇಷ್ಟು ಹೊತ್ತಿನವರೆಗೆ ಮಲಗಿಕೊಂಡೇ ಇದ್ದಿರಿ; ಪ್ರಾತಃಕಾಲವು ಸಮೀಪಿಸಲು ತಮಗೆ ಎಚ್ಚರವಾಗಿದೆ! ಮೋರೆಯನ್ನು ತೊಳೆದುಕೊಂಡು ದೇವರ ಪ್ರಾರ್ಥನೆಯನ್ನು ಮಾಡಿರಿ!

ಬಾದಶಹ- ಇದು ನನ್ನ ಅಂತಃಪುರದಂತೆ ಕಾಣುವದಿಲ್ಲ ! ನಾನು ಇಲ್ಲಿಗೆ ಹ್ಯಾಗೆ ಬಂದೆನು ? ಎಂಬ ಸಂಗತಿಯನ್ನು ಮೊದಲು ತಿಳಿಸು ;

ಬೇಗಮ್ಮ (ಕೈಮುಗಿದುಕೊಂಡು ನಿಂತು) ಸ್ವಾಮೀ ! ಇದು ನನ್ನ ತಂದಯಗೃಹವು, ತಮ್ಮ ಆಜ್ಞಾನುಸಾರವಾಗಿ ನಾನು ತಮ್ಮನ್ನು ಇಲ್ಲಿಗೆ ಕರೆತಂದಿದ್ದೇನೆ. ಯಾಕಂದರೆ, ತಾವು ನನಗೆ ನಿನ್ನೆಯ ದಿವಸ, "ನಿನಗೆ ಪ್ರಿಯವಾದ ವಸ್ತುವನ್ನು ತೆಗೆದುಕೊಂಡು ಹೋಗು!" ಎಂಬುದಾಗಿ ಆಜ್ಞಾಪಿಸಿದಷ್ಟೇ? ಇದರಂತೆ ಈ ಪ್ರಪಂಚದಲ್ಲಿ ನನಗೆ ಅತ್ಯಧಿಕ ಪ್ರಿಯವಾಗಿದ್ದ ತಮ್ಮನ್ನೇ ತೆಗೆದುಕೊಂಡು ಬಂದಿದ್ದೇನೆ. ಕ್ಷಮೆ ಇರಬೇಕು .. ಎಂದಳು.

ಬಾದಶಹನು ಬೇಗಮ್ಮಳ ಚಾತುರ್ಯಕ್ಕೆ ಮೆಚ್ಚಿ ಆಗಳಿಗೆ ಕ್ಷಮೆಯನ್ನು ಮಾಡಿ ತನ್ನ ಸ್ವಶುರನಿಗೆ ಬೆಟ್ಟಿಯಾಗಿ ಅವನ ಆಪ್ಪಣೆಯನ್ನು ಪಡೆದುಕೊಂಡು ಬೇಗಮ್ಮಳನ್ನೊಡಗೊಂಡು ತನ್ನ ಅರಮನೆಗೆ ಬಂದನು.

ಮುಂದೆ ಕೆಲವು ದಿವಸಗಳಾದ ಮೇಲೆ ಬೇಗಮ್ಮಳು, "ನಾನು ತಮ್ಮನ್ನು ತೆಗೆದುಕೊಂಡು ಹೋಗಿದ್ದ ಯುಕ್ತಿಯನ್ನು ತಿಳಿಸಿ ಇದನ್ನು ಬೀರಬಲ ನು ತನಗೆ ಹೇಳಿಕೊಟ್ಟನೆಂದು ಹೇಳಿದಳು" ಅದರಿಂದ ಬಾದಶಹನು ಬೀರಬಲನ ಚಾತುರ್ಯಕ್ಕೆ ಮೆಚ್ಚಿ, ಧನ್ಯವಾದವನ್ನು ಕೊಟ್ಟನು.

-( ೨೮. ಮಾವಿನ ಹಣ್ಣಿನ ಕಳವು. )-

——

ಒಂದು ದಿವಸ ಕೇಶವದಾಸನೆಂಬ ವರ್ತಕನು ಓಲಗಕ್ಕೆ ಬಂದು ವಿಜ್ಞಪ್ತಿ ಮಾಡಿಕೊಂಡದ್ದೇನಂದರೆ;- "ಈ ಪಟ್ಟಣದಿಂದ ಅರ್ಧ ಹರದಾರಿಯ ಮೇಲೆ ನನ್ನದೊಂದು ಮಾವಿನ ತೋಪು ಅದೆ. ಅಲ್ಲಿರುವ ವೃಕ್ಷಗಳಿಗೆ ನಾನು ನೀರನ್ನು ಹಾಕಿ, ಬೆಳೆಯಿಸಿದೆನು. ಅವುಗಳನ್ನು ಜೋಪಾನ ಮಾಡಹತ್ತಿ ಏಳು ವರುಷಗಳಾದವು. ಈ ವರುಷ ಆ ವೃಕ್ಷಗಳು ಫಲಭರಿತವಾಗಿರುವದನ್ನು ಕಂಡು ನನ್ನ ನೆರೆಯಲ್ಲಿದ್ದ ಪ್ರೇಮಳದಾಸನಿಗೆ ಹೊಟ್ಟೇಕಿಚ್ಚು ಬಿದ್ದು ಈ ಗಿಡಗಳು ತನ್ನವೆಂದು ಹೇಳಿಕೊಳ್ಳಹತ್ತಿದ್ದಾನೆ; ಆದ್ದರಿಂದ ದಯಾಳುಗಳಾದ ತಾವು ಯೋಗ್ಯ ನಿರ್ಣಯವನ್ನು ಮಾಡಬೇಕು" ಈ ಪ್ರಕಾರ ವಿಜ್ಞಾಪನೆ ಮಾಡಿಕೊಂಡ ಮೇಲೆ ಬೀರಬಲನು, ಅವನಿಗೆ ನಾಳೆಯ ದಿವಸ ಓಲಗಕ್ಕೆ ಬರಬೇಕೆಂದು ಅಪ್ಪಣೆಯಿತ್ತು ಕಳುಹಿಸಿದನು.

ಕೇಶವ ದಾಸನು ಹೊರಟು ಹೋದ ಮೇಲೆ ಬೀರಬಲನು ಪ್ರೇಮಳದಾಸನನ್ನು ಕರೆಯಿಸಿಕೊಂಡು ಕೇಳಿದನು. ಅದಕ್ಕೆ ಪ್ರೇಮಳದಾಸನು ಹೇಳುತ್ತಾನೆ, "ಸ್ವಾಮೀ, ಆ ವೃಕ್ಷಗಳು ನನ್ನವು ನಾನೇ ಅವುಗಳನ್ನು ಹಚ್ಚಿ ಪ್ರತಿದಿನಲ್ಲಿ ನೀರು ಹಾಕಿ ಬೆಳೆಯಿಸಿದೆನು. ಈ ಹೊತ್ತಿಗೆ ಏಳು ವರುಷಗ೪ಾದವು. ಈಗ ಅವುಗಳು ಫಲಭರಿತವಾಗಿವೆ. ಅದನ್ನು ಕಂಡು ಕೇಶವದಾಸನಿಗೆ ಮನಸ್ಸು ವಿಗಲಿತವಾಗಿದೆ. ತಾವು ತಂದೆತಾಯಿಗಳಂತೆ ಇರುವಿರಿ! ಯೋಗ್ಯವಾದ ನಿರ್ಣಯವನ್ನು ಮಾಡಬೇಕು.

ಬೀರಬಲ--ಅವುಗಳನ್ನು ಕಾಯುವವರು ಯಾರಿದ್ದಾರೆ ;

ಪ್ರೇಮಳ--ಒಬ್ಬ ಮನುಷ್ಯನನ್ನು ಕಾಯುವದಕ್ಕೆ ಇಟ್ಟದ್ದಲ್ಲದೆ, ನಾನೂ ಮತ್ತು ಕೇಶವದಾಸನೂ ಸಹ ಒಮ್ಮೊಮ್ಮೆ ಕಾಯಲಿಕ್ಕೆ ಹೋಗುತ್ತಿರುತ್ತೇವೆ.

ಬೀರಬಲನು ಕಾಯುವವನ್ನು ಕರೆಯಿಸಿ,-ನೀನು ಯಾರ ಮಾವಿನಗಿಡಗಳನ್ನು ಕಾಯುತ್ತಿರುವಿ? ಆಗಿಡಗಳ ಒಡೆಯನು ಯಾರು ! ಎಂದು ಪ್ರಶ್ನೆ ಮಾಡಿದನು. ಆಗ ಅವನು. "ನಾನು ಆಗಿಡಗಳನ್ನು ರಕ್ಷಣಮಾಡ ಹತ್ತಿ ಎರಡು ತಿಂಗಳಾದವು. ಆ ಗಿಡಗಳು ಯಾರವು ಎಂಬ ಸಂಗತಿಯನ್ನು ನಾನರಿಯೆನು. ಕೇಶವದಾಸನ, ಪ್ರೇಮಳದಾಸನೂ ಕೂಡಿಯೇ ನನ್ನನ್ನು ಕಾಯಲಿಕ್ಕೆ ಇಟ್ಟಿದ್ದಾರೆ" ಎಂದು ಉತ್ತರಕೊಟ್ಟನು. ಆಗ ಬೀರಬಲನು ಆ ವೃಕ್ಷ ರಕ್ಷಕನಿಗೆ ಅಲ್ಲಿಯೇ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿ ಪ್ರೇಮಳದಾಸನಿಗೆ ಹೋಗು! ಎಂದು ಅಪ್ಪಣೆಕೊಟ್ಟು ಕಳಿಸಿದನು. ಸಾಯಂಕಾಲವಾದ ಮೇಲೆ ಕಾವಲುಕಾರನನ್ನು ಕರೆದು. ಈ ದಿವಸ ನೀನು ಅರ್ಧರಾತ್ರಿಯ ಸುಮಾರಕ್ಕೆ ಕೇಶವದಾಸ ಮತ್ತು ಪ್ರೇಮಳದಾಸ ಇವರಿಬ್ಬರ ಮನೆಗೆ ಹೋಗಿ, "ಕೆಲವು ಶಸ್ತ್ರಧಾರಿಗಳಾದ ಜನರು ಬಂದು ಆಮ್ರಫಲಗಳನ್ನು ಕೊಯ್ಯಹತ್ತಿದ್ದಾರೆ. ಅವರನ್ನು ನನ್ನೊಬ್ಬನಿಂದಲೇ ತಡೆಯುವದು ಅಸಾಧ್ಯವು, ಆದರಿಂದ ನೀವು ಬೇಗನೆ ಬರ್ರಿ" ಎಂದು ಹೇಳಿ ನಿನ್ನ ಮನೆಗೆ ಹೊರಟು ಹೋಗು ! ನಾನು ಹೇಳಿದ್ದರಲ್ಲಿ ಸ್ವಲ್ಪಾದರೂ ಹೆಚ್ಚು ಕಡಿಮೆ ಮಾಡಬೇಡ. ನಿನ್ನ ಸಂಗಡ ನಮ್ಮ ಕಡೆಯ ಇಬ್ಬರು ಸಿಪಾಯರನ್ನು ಕಳುಹಿಸಿಕೊಡುತ್ತೇನೆ.

ಈ ಪ್ರಕಾರ ಹೇಳಿ ಆ ಕಾವಲುಗಾರನನ್ನು ಸಿಪಾಯರ ಸ್ವಾಧೀನ ಮಾಡಿದನು. ಆ ಸಿಪಾಯಿಗಳಿಗೆ ಆಜ್ಞಾಪಿಸಿದ್ದೇನಂದರೆ - "ನೀವು ಪ್ರತಿಯೊಬ್ಬರು ಅವರಿಬ್ಬರ ದ್ವಾರದಲ್ಲಿ ಕುಳಿತುಕೊಂಡು ಅಲ್ಲಿ ಯಾವ ಯಾವ ಮಾತುಗಳು ನಡೆಯುವವು ಎಂಬದನ್ನು ಕೇಳಿಕೊಂಡು, ನನಗೆ ಬಂದು ತಿಳಿಸಬೇಕು" ಎಂದು ಹೇಳಿ ಕಳುಹಿಸಿ ಕೊಟ್ಟನು.

ರಾತ್ರಿಯಾದ ಕೂಡಲೆ ಆ ಮೂವರೂ ಮೊದಲು ಕೇಶವದಾಸನ ಮನೆಗೆ ಹೋದರು. ಆಗ ಕೇಶವದಾಸನು ಮನೆಯಲ್ಲಿ ಇದ್ದಿಲ್ಲ ಅದರಿಂದ ಕಾವಲುಗಾರನು ಕೇಶವದಾಸನ ಪತ್ನಿಗೆ ಹೇಳಿದ್ದೇನಂದರೆ - "ನಿಮ್ಮ ಯಜಮಾನರು ಮನೆಗೆ ಬಂದಕೂಡಲೆ ತೋಟಕ್ಕೆ ಕಳುಹಿಸಿಕೊಡಿರಿ. ಯಾಕಂದರೆ:- ಕಸ್ತ್ರಧಾರಿಗಳಾದ ಕೆಲವು ಜನರು ಬಂದು ಹಣ್ಣುಗಳನ್ನು ಕೊಯ್ದುಕೊಂಡು ಹೋಗಹತ್ತಿದ್ದಾರೆ" ಎಂದು ತಿಳುಹಿಸಿ ಪ್ರೇಮಳದಾಸನ ಮನೆಗೆ ಹೋದನು. ಅಲ್ಲಿಯೂ ಎರಡನೇ ಸಿಪಾಯಿಯು ಅಡಗಿಕೊಂಡು ಕುಳಿತನು.

ಕಾವಲುಗಾರನು ಪ್ರೇಮಳದಾಸನ ಮನೆಗೆ ಹೋಗಿ ಅಲ್ಲಿಯೇ ಮೊದಲಿನಂತೆ ಹೇಳಿ ಮನೆಗೆ ಹೊರಟುಹೋದನು. ಅಲ್ಲಿಯು ಎರಡನೆ ಸಿವಾಯಿಯು ಅಡಗಿಕೊಂಡು ಕುಳಿತನು.

ಮುಂದೆ ಸ್ವಲ್ಪ ಹೊತ್ತಾದಮೇಲೆ ಕೇಶವದಾಸನು ಮನೆಗೆ ಬಂದನು. ಅವನ ಸ್ತ್ರೀಯು ಕಾವಲುಗಾರನು ಹೇಳಿದಸಂಗತಿಯನ್ನೆಲ್ಲ ತಿಳಿಸಿದಳು. ಆಗ ಕೇಶವದಾಸನು ಅನ್ನುತ್ತಾನೆ; "ಮಾವಿನಗಿಡಗಳು ನನ್ನವಲ್ಲ, ಬೇಕಾದವರು ಹಂಣುಗಳನ್ನು ಕೊಯಿದುಕೊಂಡು ಹೋಗಲಿ ! ನಾನಂತೂ ಪ್ರೇಮಳದಾಸನ ಮೇಲೆ ಸರಕಾರದಲ್ಲಿ ಫಿರ್ಯಾದಿಯನ್ನು ಮಾಡಿದ್ದೇನೆ, ಅದರಲ್ಲಿ ಯೋಗ್ಯನಿ ರ್ಣಯವಾಗಿ ನನ್ನ ಸ್ವಾಧೀನಕ್ಕೆ ಗಿಡಗಳು ಬಂದರೆ ಹಣ್ಣುಗಳು ಸಿಗುತ್ತವೆ. ಇಲ್ಲವಾದರೆ ಇಲ್ಲ; ಇದರಲ್ಲಿ ನನಗೆ ಹಾನಿಯು ತಪ್ಪುವಂತೆಯಿಲ್ಲ. ಅಂಧಕಾರಮಯವಾದ ರಾತ್ರಿಯಲ್ಲಿ ಯಾರು ಅಲ್ಲಿಗೆ ಕಾಯಲಿಕ್ಕೆ ಹೋಗಬೇಕು" ಎಂದು ಸುಮ್ಮನೆ ಕುಳಿತುಕೊಂಡನು. ಹೊರಗೆ ಕುಳಿತುಕೊಂಡಿದ್ದ ಸಿಪಾಯಿಯು ಅವನ ಮಾತುಗಳನ್ನೆಲ್ಲ ಕೇಳಿಕೊಂಡು ಸುಮ್ಮನೇ ಬೀರಬಲನ ಮನೆಗೆ ಬಂದನು.

ಪ್ರೇಮಳದಾಸನು ಮನೆಗೆ ಬಂದಕೂಡಲೆ ಅವನ ಸ್ತ್ರೀಯು ಕಾವಲುಗಾರನು ಹೇಳಿದ ಸಮಾಚಾರವನ್ನೆಲ್ಲ ತಿಳಿಸಿದಳು. ಆಗ ಪ್ರೇಮಳದಾಸನು ಆಯುಧವಾಣಿಯಾಗಿ ಹೊರಟನು, ಅವನ ಸ್ತ್ರೀಯು, "ಊಟಮಾಡಿಕೊಂಡು ಹೋಗಬೇಕು” ಎಂದು ಹೇಳಿದಳು. ಆಗ ಪ್ರೇಮಳದಾಸನು- "ಊಟ ಮಾಡುತ್ತ ಕುಳಿತುಕೊಂಡರೆ ಮಾವಿನ ಹಣ್ಣುಗಳೆಲ್ಲವನ್ನು ಕೊಯಿದುಕೊಂಡು ಹೋದಾರು ! ಅದರಿಂದ ಮೊದಲು ತೋಟಕ್ಕೆ ಹೋಗಿ ಅಲ್ಲಿಯ ಸಮಾಚಾರವನ್ನೆಲ್ಲ ತಿಳಿದುಕೊಂಡು ಬಂದಮೇಲೆ ಊಟಮಾಡಬಹುದು. ಸತತ ಏಳುವರುಷಗಳವರೆಗೆ ಜೋಪಾನಮಾಡಿದ ಶ್ರಮವು ಸ್ವಲ್ಪದರಲ್ಲಿ ನಿಷ್ಫಲವಾಗಿ ಹೋಗಬಹುದು." ಎಂದು ಹೇಳಿ ಅರ್ಧ ರಾತ್ರಿಯಲ್ಲಿಯೇ ಮಾವಿನತೋಪಿನ ಕಡೆಗೆ ಹೋದನು. ಅವನು ಹೊರಟುಹೋದಮೇಲೆ ಅಲ್ಲಿ ಕುಳಿತುಕೊಂಡಿದ್ದ ಸಿವಾಯಿಯೂ ಹಿಂದಿರುಗಿ ಬೀರಬಲನ ಬಳಿಗೆ ಬಂದನು. ಮರುದಿವಸ ಕೇಶವದಾಸನೂ ಪ್ರೇಮಳದಾಸನೂ ಓಲಗಕ್ಕೆ ಬಂದರು ಆಗ ಬೀರಬಲನು ಅವರಿಬ್ಬರನ್ನೂ ಕುರಿತು ಹೇಳಿದ್ದೇನಂದರೆ- “ನಾನು ನಿಮ್ಮ ನಿಮ್ಮ ಹೇಳಿಕೆಯಂತೆ ಎಲ್ಲ ಸಂಗತಿಗಳನ್ನು ಪೂರ್ಣವಾಗಿ ವಿಚಾರಮಾಡಿ ನೋಡಲಾಗಿ ಆ ವೃಕ್ಷಗಳಲ್ಲಿ ಆಗಿರುವ ಫಲಗಳಿಗೆ ನೀವಿಬ್ಬರೂ ಸಮಭಾಗಿಗಳಾಗಿರುವಿರಿ. ಆದ್ದರಿಂದ ಈಗಿಂದೀಗ ಆ ಫಲಗಳನ್ನೆಲ್ಲ ಕೊಯಿದು ಸರಿಯಾಗಿ ಹಂಚಿಕೊಳ್ಳಿರಿ" ಎಂದು ಆಜ್ಞಾಪಿಸಿದನು.

ಈ ನಿರ್ಣಯವನ್ನು ಕೇಳಿ ಕೇಶವದಾಸನಿಗೆ ಬಹಳ ಸಂತೋಷವಾಯಿತು, ಆದರೆ ಪ್ರೇಮಳದಾಸನಿಗೆ ಬಹಳದುಃಖವಾಯಿತು. ಆಗ ಅವನು ಕೈಮುಗಿದು ಪ್ರಾರ್ಥಿಸಿಕೊಂಡದ್ದೇನಂದರೆ- "ಸ್ವಾಮಿ ! ಮಾವಿನಕಾಯಿಗಳು ಇನ್ನೂ ಬಲಿಯದೇ ಇದ್ದದರಿಂದ ಯಾವ ಕೆಲಸಕ್ಕೂ ಉಪಯೋಗವಾಗುವಂತೆ ಇಲ್ಲ, ಅವುಗಳನ್ನು ಈಗಲೇ ಕೊಯ್ಯುವದರಿಂದ ಪ್ರಯೋಜನವೇನು. ತಮ್ಮ ಇಚ್ಛೆಯಿದ್ದರೆ ಅವುಗಳನ್ನು ಕೇಶವದಾಸನಿಗೆ ಕೊಟ್ಟುಬಿಡಿರಿ. ನನ್ನಿಂದಂತೂ ಅವುಗಳನ್ನು ಕೊಯ್ಯುವದಕ್ಕೆ ಆಗಲಾರದು” ಎಂದು ಹೇಳಿ ಸುಮ್ಮನಾದನು. ಆಗ ಬೀರಬಲನಿಗೆ ಗಿಡಗಳು ಪ್ರೇಮಳದಾಸನವೇ ಎಂದು ಗೊತ್ತಾಯಿತು, ಕೂಡಲೆ ಕೇಶವದಾಸನನ್ನು ಒಳಿತಾಗಿ ತಳಿಸಿರಿ ಎಂದು ಕರ್ಮಚಾರಿಗಳಿಗೆ ಹೇಳಿದನು. ಆಗ ಕೇಶವದಾಸನು ಬೀರಬಲನ ಪಾದಗಳ ಮೇಲೆ ಅಡ್ಡಬಿದ್ದು, ಮಹಾರಾಜ, ನನ್ನನ್ನು ಹೊಡೆಸಬೇಡಿರಿ ಮಾವಿನಗಿಡಗಳು ಪ್ರೇಮಳದಾಸನವೇ ಅಹುದು ಎಂದು ಹೇಳಿದನು. ಆಗ ಬೀರಬಲನು ಆ ಗಿಡಗಳನ್ನು ಪ್ರೇಮಳದಾಸನ ವಶಕ್ಕೆ ಕೊಡಿಸಿ, ಕೇಶವದಾಸನಿಗೆ ದಂಡನೆಯನ್ನು ವಿಧಿಸಿದನು.

-(೨೯. ಪ್ರಾರಬ್ಧವು ಹೆಚ್ಚೋ, ಅಥವಾ ಉದ್ಯೋಗವೋ ? )-


ಒಂದುದಿವಸ ಬಾದಶಹನು ತನ್ನ ದರಬಾರದ ಈ "ಮುತ್ಸದ್ದಿಗಳಿಗೆ ಪ್ರಾರಬ್ಧವು ಅಧಿಕವಾದದ್ದೋ ! ಅಥವಾ ಉದ್ಯೋಗವು ಶ್ರೇಷ್ಠವಾದದ್ದೋ" ಎಂದು ಪ್ರಶ್ನೆ ಮಾಡಿದನು. ಆಗ ಅವರೆಲ್ಲರೂ ಒಂದೇಸ್ವರದಿಂದ "ಉದ್ಯೋಗವು ಶ್ರೇಷ್ಠವಾದದ್ದು" ಎಂದುತ್ತರಕೊಟ್ಟರು. ಆಗ ಬೀರಬಲನಿಗೆ ಪುನಃ ಇದೇ ಪ್ರಶ್ನೆಯನ್ನು ಮಾಡಿದನು. ಆಗ ಬೀರಬಲನು "ಮಹಾರಾಜ ! ಉದ್ಯೋಗಕ್ಕಿಂತ ಪ್ರಾರಬ್ಧವು ಬಲವಾದದ್ದು" ಎಂದು ಹೇಳಿದನು.

ಬಾದಶಹ-ಯಾವ ಮನುಷ್ಯನು ಪ್ರಾರಬ್ಧವನ್ನು ನಂಬಿ ಏನೂ ಉದ್ಯೋಗ ಮಾಡದೆ ಕುಳಿತುಕೊಂಡರೆ ಅವನಿಗೆ ಉದರಂಭರಣೆಯು ಹ್ಯಾಗಾಗುವದು ?

ಬೀರಬಲ-ಪ್ರಭುಗಳೇ ? ಮನುಷ್ಯನು ಬೇಕಾದ ಉದ್ಯೋಗವನ್ನು ಮಾಡಲಿ, ಅದು ಅವನ ಪ್ರಾರಬ್ಧದಲ್ಲಿ ಲಭಿಸುವದೇ ಇಲ್ಲದಿದ್ದರೆ ಏನೂಫಲ ದೊರೆಯಲಾರದು; ಆದ್ದರಿಂದ ಪ್ರಾರಬ್ಧವೇ ಶ್ರೇಷ್ಠವಾದದ್ದು.

ಉಳಿದ ಸಭಾಸದರು-ಪೃಧ್ವೀನಾಥ ? ಬೀರಬಲನು ಪ್ರಾರಬ್ಧವೇ ಶ್ರೇಷ್ಠವಾದದ್ದೆಂದು ಹೇಳುತ್ತಿರುವನಷ್ಟೇ! ಈಮಾತಿಗೆ ತಕ್ಕ ಪ್ರಮಾಣಗಳಾದರೂ ಅವನ ಬಳಿಯಲ್ಲಿರಬಹುದು.

ಬೀರಬಲ-ಇಂಥ ಪ್ರಮಾಣಗಳನ್ನು ಯಾರೂ ಸಂಗಡಕಟ್ಟಿಕೊಂಡು ಬಂದಿರಲಾರರು, ಸ್ವಲ್ಪಾವಕಾಶವನ್ನು ಕೊಟ್ಟರೆ ಪ್ರಮಾಣವನ್ನು ತೋರಿಸಿಕೊಡುವೆನು.

ಈಪ್ರಕಾರ ಮಾತು ಕಥೆಗಳಾದಮೇಲೆ ಸಭೆಯು ವಿಸರ್ಜನವಾಯಿತು. ಆಮೇಲೆ ಮುಂದೆ ಕೆಲವು ದಿವಸಗಳು ಗತಿಸಿಹೋದಮೇಲೆ ಬಾದಶಹನು ತನ್ನ ಮುಖ್ಯಮುಖ್ಯ ಮಂತ್ರಿಗಳನ್ನು ಸಂಗಡ ಕರೆದುಕೊಂಡು ಯಮುನಾತೀ ರಕ್ಕೆ ವಾಯುದಸೇವನಾರ್ಥವಾಗಿ ಹೋದನು ಎಲ್ಲರೂ ಒಂದು ನಾವೆಯನ್ನೆರಿ ಕುಳಿತುಕೊಂಡರು, ಸ್ವಲ್ಪ ಹೊತ್ತು ಆಕಡೆಯ ಈಕಡೆಯ ವರ್ತಮಾನಗಳು ಹೊರಟುಹೋದಮೇಲೆ ಬಾದಶಹನು ಪ್ರಾರಬ್ದ ಮತ್ತು ಉದ್ಯೋಗದ ಪ್ರಶ್ನೆಯನ್ನು ತೆಗೆದನು, ಮತ್ತು ಬೀರಬಲನಿಗೆ ಅನ್ನುತ್ತಾನೆ “ ಬೀರಬಲ ನೀನು ಪ್ರಾರಬ್ಧವೇ ಅಧಿಕವಾದದ್ದೆಂದು ಹೇಳಿದಮಾತು ನಿನ್ನ ಸ್ಮರಣೆಯ ಲ್ಲಿರುವದಷ್ಟೆ ? ” ಎಂದು ಕೇಳಿದನು. ಅದಕ್ಕೆ ಬೀರಬಲನು : ಅಹುದು ?? ಎಂದು ಹೇಳಿದನು. ಆಗ ಬಾದಶಹನಿಗೆ ಕ್ರೋಧವು ಬಂತು, ಅವನು ತನ್ನ ಅಂಗುಲಿಯಲ್ಲಿದ್ದ ಸುವರ್ಣದುಂಗುರವನ್ನು ನದಿಯಲ್ಲಿ ಒಗೆದು ಹೇಳುತ್ತಾನೆ ಬೀರಬಲ ! ನೀನು ಪ್ರಾರಬ್ಧ ಬಲದಿಂದ ಈ ಉಂಗುರವನ್ನು ಒಂದು ಮಾಸದೊಳಗಾಗಿ ಸಂಪಾದಿಸಿ ತೋರಿಸದಿದ್ದರೆ ನಿನಗೆ ಪ್ರಾಣದಂಡನೆಯನ್ನು ವಿಧಿಸುವೆನು' ಎಂದು ಅಪ್ಪಣೆ ಕೊಟ್ಟ ಕೂಡಲೆ ಸಭಾಸದರೆಲ್ಲರೂ ನಡುಗಹತ್ತಿದರು, ಬೀರಬಲನು ಸ್ವಸ್ಥ ಕುಳಿತುಕೊಂಡನು. ಮುದ್ರಿಕೆಯನ್ನು ಒಗೆದ ಸ್ಥಳದಲ್ಲಿ ನೀರು ಬಹಳ ಆಳವಾಗಿತ್ತು; ಮಂತ್ರಿಗಳೆಲ್ಲರೂ ಇಲ್ಲಿಂದ ಮುದ್ರಿಕೆಯು ಹೊರಹೊರಡುವ ಅಸಂಭವವು ಇದರಲ್ಲಿ ಬೀರಬಲನು ಸಾಯುವದೇ ನಿಶ್ಚಯವು ” ಎಂದು ತಿಳಿದುಕೊಂಡುಬಿಟ್ಟರು, ಬಾದಶಹನು ತಿರುಗಿಮನೆಗೆ ಹೋಗುವಮುಂದೆ ಅಲ್ಲಿ ಕೆಲವುಜನ ಸಿಪಾಯರನ್ನು ಕಾವಲಿಟ್ಟು ಬೀರಬಲನು ಇಲ್ಲಿಂದ ಮುದ್ರಿಕೆಯನ್ನು ತೆಗೆದುಕೊಂಡು ಹೋಗದಂತೆ ಜೋಕೆ ಯಿಂದ ಹಗಲು ಇರುಳು ಕಾಯುತ್ತಿರಬೇಕು” ಎಂದು ಆಜ್ಞಾಪಿಸಿ ಹಿಂದಿರುಗಿ ಅರಮನೆಗೆ ಬಂದುಬಿಟ್ಟನು ಬೀರಬಲನು ಪ್ರಾರಬ್ಧವನ್ನು ನಂಬಿಕೊಂಡು ಸ್ವಸ್ಥ ಚಿತ್ತದಿಂದ ಮನೆಯಲ್ಲಿ ಕುಳಿತುಕೊಂಡು ಬಿಟ್ಟನು, ಒಂದುಮಾಸವು ಕಳೆದುಹೋಯಿತು ಆಮೇಲೆ ಬಾದಶಹನು: - ಬೀರಬಲ್ಲ ! ಈಗಲಾದರೂ ಉದ್ಯೋಗವು ಶ್ರೇಷ್ಠವಾದದ್ದೆಂದು ಒಪ್ಪಿಕೋ ? ಅಂದರೆ ಜೀವದಿಂದ ಉಳಿದುಕೊಳ್ಳುತ್ತೀ ? ಒಂದುಮಾಸವು ಪೂರ್ತಿಯಾಗುವದಕ್ಕೆ ಇನ್ನು ಮೂರೇ ದಿವಸಗಳ ಅವಧಿಯು ಉಳಿದಿರುವದು ಎಂದು ಹೇಳಿದನು.

ಬೀರಬಲ-ಪ್ರಭುವೇ ? ಪ್ರಾರಬ್ಧ ಕ್ಕಿಂತ ಉದ್ಯೋಗವು ಎಂದೂ ಶ್ರೇಷ್ಟ ವಾಗಲಾರದು ಇನ್ನು ಮೂರುದಿವಸಗಳಲ್ಲಿ ಆ ಉಂಗುರವು ಯಾಕೆ ಸಿಗಬಾರದು !
ಈ ಉತ್ತರದಿಂದ ಬಾದಶಹನು ಅತಿ ಸಂತಪ್ತನಾದನು. ನಾಲ್ಕನೇದಿವಸ ಬಾದಶಹನು ಬೀರಬಲನನ್ನು ಕರೆಯಿಸಿ ಉಂಗುರವನ್ನು ಕೊಡುಯೆಂದು ಕೇಳಿದನು ಬೀರಬಲ:- ಪೃಥ್ವಿನಾಥ ನನ್ನ ದುರ್ದೈವದಿಂದ ಮುದ್ರಿಕೆಯು ದೊರೆಯಲಿಲ್ಲ.

ಬಾದಶಹ-(ಕ್ರೋಧದಿಂದ) ಹಾಗಾದರೆ ಮರಣಕ್ಕೆ ಸಿದ್ಧನಾಗು.
ಬೀರಬಲನು ಮರಣಕ್ಕೆ ಸಿದ್ಧನಾದನು, ಅವನ ಕೈಕಾಲುಗಳನ್ನು ಕಟ್ಟಿ ದರು ಅದನ್ನು ನೋಡಿ ಬಾದಶಹನು ಕಳವಳಪಟ್ಟು - " ಬೀರಬಲ ಈಗಲಾದರೂ ನಿನ್ನ ಮಾತನ್ನು ತಿರುಗಿಸು” ಎಂದನು.
ಬೀರಬಲ-ಪ್ರಭುವೇ ! ಮರಣಕ್ಕೆ ಸಿದ್ಧನಾದ ನನ್ನನ್ನು ವ್ಯರ್ಥವಾಗಿಯಾಕೆ ಪೀಡಿಸುವಿರಿ, ತಲೆಹೊಡೆಯುವದಕ್ಕೆ ಬೇಗನೆ ಅಪ್ಪಣೆಯನ್ನು ಕೊಡಿರಿ

ಬಾದಶಹ:- ಅದಕ್ಕೇನು ಬಹಳ ಅವಕಾಶವು ಹತ್ತುವಂತೆಯಿಲ್ಲ.
ಬಾದಶಹನ ಅಪ್ಪಣೆಯಮೇರೆಗೆ ಬೀರಬಲನನ್ನು ವಧಸ್ಥಾನಕ್ಕೆ ಕರೆ ದುಕೊಂಡು ಹೋದರು ಪ್ರಜೆಗಳಿಗೆಲ್ಲರಿಗೂ ಅದನ್ನು ನೋಡಿ ಬಹಳ ದುಃಖ ವಾಯಿತು ಸಾವಿರಾರುಜನರು ನೆರೆದರು, ಬೀರಬಲನ ಆಪ್ತರು ರೋದಿಸಹತ್ತಿದರು, ಬೀರಬಲನು ವಧಸ್ತಂಭದ ಕೆಳಗಿರುವ ಹಲಿಗೆಯನ್ನು ಹತ್ತಿ ನಿಂತುಕೊಂಡನು, ಆಗ ವಧಿಕರು - “ ನಿಮ್ಮ ಅಂತ್ಯಾಪೇಕ್ಷೆಯು ಏನಿರುವದು? ” ಎಂದು ಪ್ರಶ್ನೆ ಮಾಡಿದರು, ಅವನು ಉತ್ತರಕೊಡಬೇಕೆನ್ನುವಷ್ಟರಲ್ಲಿ ಒಬ್ಬ ಫಕೀರನು ಅಕಸ್ಮಾತ್ತಾಗಿ ಆ ಜನಸಮುದ್ರದೊಳಗಿಂದ ಪರಮೇಶ್ವರನ ನಾಮೋಚ್ಛಾರಣೆಯನ್ನು ಮಾಡುತ್ತ ಬೀರಬಲನ ಸಮೀಪಕ್ಕೆ ಬಂದು ಬೀರಬಲ್ಲ ! ಪ್ರಾರಬ್ಧಯೋಗದಿಂದ ನಿನಗೆ ಮರಣದಂಡನೆಯು ಪ್ರಾಪ್ತ ವಾಯಿತು, ಆಗಲಿ ? ಮೃತ್ಯುವು ನಿನ್ನನ್ನು ಗ್ರಾಸಮಾಡುವದರೊಳಗಾಗಿ ಒಂದು ಪುಣ್ಯದಕಾರ್ಯವನ್ನು ಮಾಡು? ಪ್ರಾತಃಕಾಲವು ಸಮೀಪಿಸಿದೆ, ಈ ಸಮಯದಲ್ಲಿ ಅನ್ನದಾನಮಾಡಿದರೆ ಬಹಳ ಪುಣ್ಯವು ಲಭಿಸುವದು, ನನಗಂತೂ ಕ್ಷುದ್ಭಾಧೆಯು ಅತಿಶಯವಾಗಿರುವದು ? ಒಂದು ಮತ್ಸ್ಯವನ್ನು ತಂದು ನೀನೇ ಅದನ್ನು ಕೊಯಿದು, ನನಗೆ ಅಡಿಗೆಯನ್ನು ಮಾಡಿ ಉಣಿಸು” ಎಂದು ಕೇಳಹತ್ತಿದನು.
ಆ ಮಾತಿಗೆ ಬೀರಬಲನು, ಫಕೀರಸಾಹೇಬ ? ನೀವು ಎಂಥ ಅನುಚಿತ ವಾದ ಕಾರ್ಯವನ್ನು ಹೇಳಿದಿರಿ; ನಾನು ಉಚ್ಚ ಕುಲದ ಬ್ರಾಹ್ಮಣನಾಗಿದ್ದು, ಇಂಥ ನಿಕೃಷ್ಟ ಕೆಲಸವನ್ನು ಹ್ಯಾಗೆ ಮಾಡಲಿ !

ಫಕೀರ:- ನೀನು ಸಾಯುವಮೊದಲು ನನ್ನ ಇಚ್ಛೆಯನ್ನು ಪೂರ್ಣಮಾಡಿದರೆ ನಿನಗೂ ನಿನ್ನ ಮಕ್ಕಳು ಮರಿಗಳಿಗೂ ಕಲ್ಯಾಣವಾಗುವದು.
ಈ ಪ್ರಕಾರ ಫಕೀರನು ಹೇಳಲಾಗಿ, ಅಲ್ಲಿ ನೆರೆದವರೆಲ್ಲರೂ ಫಕೀರನ ಅಪೇಕ್ಷೆಯನ್ನು ಪೂಣ೯ಮಾಡು ಎಂದು ಹೇಳಿದರು, ಸ್ವಲ್ಪ ಹಿಂದು ಮುಂದೆ ನೋಡಿ ಬೀರಬಲನು ಆ ಮಾತಿಗೆ ಸಮ್ಮತಿಸಿದನು. ಒಬ್ಬನು ಮೀನವನ್ನು ಹಿಡಿದುಕೊಂಡು ಬರುವದಕ್ಕೆ ಯಮುನಾನದಿಗೆ ಓಡಿದನು. ಸ್ವಲ್ಪ ಹೊತ್ತಿ ನೊಳಗಾಗಿ ಒಂದು ಮೀನವನ್ನು ಹಿಡಿದುಕೊಂಡು ಬಂದು ಬೀರಬಲನಿಗೆ ಕೊಟ್ಟನು. ಆಗ ಅವನು ಚೂರಿಯಿಂದ ಆ ಮೀನದ ಹೊಟ್ಟೆಯನ್ನು ಸೀಳಲು ಅದರೊಳಗಿಂದ ಬಾದಶಹನ ಸುವರ್ಣ ಮುದ್ರಿಕೆಯು ಹೊರಬತ್ತು ಬಾದಶಹನು ಮೇಲುಪ್ಪರಿಗೆಯಲ್ಲಿ ಗವಾಕ್ಷದೊಳಗಿಂದ ವಧಸ್ಥಾನದ ಕಡೆಗೆ ನೋಡುತ್ತ ನಿಂತುಕೊಂಡಿದ್ದನು. ಆಗ ಬೀರಬಲನು ಮೀನವನ್ನು ಕೊಯ್ಯು ವದು ಅವನ ದೃಷ್ಟಿಗೆ ಬಿತ್ತು ಆದರೆ ಬೀರಬಲನಿಗೂ ಫಕೀರನಿಗೂ ನಡೆದ ಸಂಭಾಷಣವು ಮಾತ್ರ ಕೇಳಿಸಲಿಲ್ಲ ಮುದ್ರಿಕೆಯು ಹೊರಟ ಕೂಡಲೆ ಬಿರಬಲನು ಆ ಮತ್ಸ್ಯವನ್ನು ಕೆಳಗ ಚೆಲ್ಲಿ ಎದ್ದು ನಿಂತುಕೊಂಡು ಫಕೀರನನ್ನು ನೋಡಿದನು ಆದರೆ ಅವನು ಕಾಣಿಸಲಿಲ್ಲ ಆಗ ಬೀರಬಲನು ತನ್ನ ಸುತ್ತು ಮುತ್ತುಕೊಂಡಿದ್ದ ಕರ್ಮಚಾರಿಗಳನ್ನು ನೋಡಿ: ನನಗೆ ಇನ್ನೊಂದು ಸಾರೆ ಬಾದಶಹನನ್ನು ಕಾಣಬೇಕೆಂಬ ಇಚ್ಛೆಯು ” ಎಂದನು ಕೂಡಲೆ ಅವರು ಅವನನ್ನು ಕರೆದುಕೊಂಡು ಬಾದಶಹನ ಹತ್ತಿರ ಬಂದರು ಆಗ ಬಾದಶಹನು ತನ್ನ ಮನಸ್ಸಿನಲ್ಲಿ ಇವನು ಪ್ರಯತ್ನವು ಶ್ರೇಷ್ಟವಾದದ್ದು ಎಂದು ಒಪ್ಪಿಕೊಳ್ಳುವದಕ್ಕೆ ಬಂದಂತೆ ತೋರುತ್ತದೆ. ಆಗಲಿ ನಾನಂತೂ ಇವನಿಗೆ ಕ್ಷಮೆಯನ್ನು ಮಾಡಬಾರದು ಎಂದು ಯೋಚಿಸುತ್ತ ಕುಳಿತುಕೊಂಡನು ಬೀರಬಲನು ಬಾದಶಹನ ಸಮ್ಮುಖದಲ್ಲಿ ನಿಂತುಕೊಂಡು ಕೈಮುಗಿದನು.

ಆಗ ಬಾದಶಹನು-ಯಾಕೆ ಬೀರಬಲ್ಲ ! ಈಗ ಉದ್ಯೋಗವು ಶ್ರೇಷ್ಟವಾದದ್ದೆಂದು ಒಪ್ಪಿಕೊಳ್ಳುವದಕ್ಕೆ ಬಂದಂತೆ ತೋರುತ್ತದೆ ಈಗ ನಿನ್ನ ಪ್ರಾರ್ಥನೆಯು ಸಫಲವಾಗಲಾರದು.

ಬೀರಬಲ-ಪೃಥ್ವಿನಾಥ ? ನಾನು ಉದ್ಯೋಗವು ಶ್ರೇಷ್ಟವಾದದ್ದೆಂದು
ಒಪ್ಪಿಕೊಳ್ಳುವದಕ್ಕೆ ಬಂದಿರುವದಿಲ್ಲ ಈಗಲಾದರೂ ಪ್ರಾರಬ್ಧವೇ
ಅಧಿಕವಾದದ್ದೆಂದು ಹೇಳಲಿಕ್ಕೆ ಬಂದಿದ್ದೇನೆ.

ಬಾದಶಹ-(ಆಶ್ಚರ್ಯದಿಂದ) ಹಾಗಿದ್ದರೆ, ಪುನರಪಿ ನೀನು ನನ್ನ ದರ್ಶನಕ್ಕೆ ಬಂದದ್ದು ಯಾಕೆ !

ಬೀರಬಲ :-ಪ್ರಾರಬ್ಬವು ಶ್ರೇಷ್ಠವಾದದ್ದಿರುವದು ಎಂದು ನಿಮ್ಮನ್ನು ಒಡಂಬಡಿಸುವದಕ್ಕೆ.
ಬಾದಶಹ:- ಹೂ ಹೀಗೋ ?
ಬೀರಬಲ:- (ಮುದ್ರಿಕೆಯನ್ನು ಮುಂದಿಟ್ಟು )ಪ್ರಭುವೇ ! ತಮ್ಮ ಮುದ್ರಿಕೆ ಯನ್ನು ಸ್ವೀಕರಿಸಬೇಕು.
ಬಾದಶಹನು ಆಶ್ಚರ್ಯದಿಂದ ಆಮುದ್ರಿಕೆಯನ್ನು ಕೈಯಲ್ಲಿ ತೆಗೆದುಕೊಂಡು ನೋಡಿದನು. ಅದುತನ್ನದೇ ಆಗಿತ್ತು ಯಾವ ಮುದ್ರಿಕೆಯನ್ನು ನಾನು ಗಂಭೀರವಾದ ಯಮುನಾ ಪ್ರವಾಹದಲ್ಲಿ ಚಲ್ಲಿ ಕೊಟ್ಟಿದ್ದು ಈಗ ಇವನಿಗೆ ಹ್ಯಾಗೆ ದೊರಕಿತು ? ” ಎಂದು ಆಶ್ಚರ್ಯಪಡುತ್ತ, “ ಬೀರಬಲ್ಲ ! ನಿನಗೆ ಈ ಮುದ್ರಿಕೆಯು ಹ್ಯಾಗೆ ದೊರಕಿತು” ಎಂದು ಕೇಳಿದನು.
ಆಗ ಬೀರಬಲನು-ಪೃಥ್ವಿನಾಥ ! ನನ್ನ ಪ್ರಾರಬ್ಧವಶದಿಂದಲೇ ಲಭಿಸಿತು. ನನ್ನ ಪ್ರಾರಬ್ಬವು ಬಲವತ್ತರವಾಗಿರದಿದ್ದರೆ ಇದು ನನಗೆ ಹ್ಯಾಗೆ ದೊರಕುತ್ತಿತು ? ” ಎಂದು ನುಡಿದು ಯಾವತ್ತೂ ಸಮಾಚಾರವನ್ನು ತಿಳಿ ಸಿದನು. ಆಗ ಬಾದಶಹನಿಗೆ ಪರಮಾನಂದವಾಯಿತು. ಅದರಿಂದ ಅವನು ಬೀರಬಲನಿಗೆ ಹತ್ತು ಸಾವಿರ ಮೋಹರುಗಳನ್ನೂ ಬಹು ಮೂಲ್ಯವುಳ್ಳ ಒಂದು ಜರತಾರಿಯ ಕಾಲನ್ನೂ ಪಾರಿತೋಷಕವಾಗಿ ಕೊಟ್ಟು ಸನ್ಮಾನಿಸಿದನು. ಈವರ್ತಮಾನವು ನಗರದ ಯಾವತ್ತೂ ಭಾಗಗಳಲ್ಲಿ ಪಸರಿಸಿದ್ದರಿಂದ ನಗರ ವಾಸಿಗಳೆಲ್ಲರಿಗೂ ಪರಮಾನಂದವಾಯಿತು ಬಾದಶಹನು ಬೀರಬಲನ ಮನೆಯ ಜನರಿಗೆಲ್ಲ ಒಂದೊಂದು ವಸ್ತ್ರವನ್ನು ಉಡುಗರೆಯಾಗಿ ಕೊಟ್ಟು ಕಳಿಸಿದನು ಮತ್ತು ಎಲ್ಲ ಸಭಾಸದರ ಸಹಿತವಾಗಿ ಪ್ರಾರಬ್ಧವು ಶ್ರೇಷ್ಟವಾದದ್ದೆಂ ದು ಒಪ್ಪಿಕೊಂಡನು.

-(೩೦ ಈರ್ವರೂ ಕೂಡಿಕೊಂಡೇ ಬರುವೆವು,)-

ದಿಲ್ಲಿಯಲ್ಲಿದ್ದ ಇಬ್ಬರು ಮೋಸಗಾರರು ಒಬ್ಬ ಸಾವುಕಾರನನ್ನು ಮೋಸಗೊಳಿಸ ಬೇಕೆಂದು ಮೊದಲು ಬಹು ಮೂಲ್ಯವುಳ್ಳ ಕೆಲವು ಆಭರಣಗಳನ್ನು ತೆಗೆದುಕೊಂಡುಹೋದರು ಆಮೇಲೆ ಆವರ್ತಕನಿಗೆ ಆ ಆಭರಣಗಳನ್ನು ತೋರಿಸಿ “ನಾವು ಇವುಗಳನ್ನು ಮಾರಬೇಕೆಂದು ಬಂದಿದ್ದೇವೆ ಇವುಗಳನ್ನು ನೀವು ವಿಕ್ರಯ ಮಾಡಿಕೊಟ್ಟರೆ ನಮ್ಮ ಮೇಲೆ ಬಹಳೇ ಉಪಕಾರ ಮಾಡಿ ದಂತಾಗುತ್ತದೆ ” ಎಂದರು.
ಆ ಸಾವುಕಾರನು ಆ ಆಭರಣಗಳನ್ನೆಲ್ಲ ನೋಡಿ, “ ಒಳ್ಳೇದು ; ಇವುಗಳನ್ನು ನನ್ನ ಬಳಿಯಲ್ಲಿ ಇಟ್ಟು ಹೋಗಿರಿ ! ನಾಲ್ಕಾರು ಜನರಿಗೆ ತೋರಿಸಿ ಇದರ ಮೂಲ್ಯವನ್ನು ನಿಶ್ಚಯಿಸಿ ಇಟ್ಟಿರುತ್ತೇನೆ ನೀವು ನಾಳೆ ಮಧ್ಯಾಹ್ನ ಕಾಲದಲ್ಲಿ ಬರ್ರಿ ! ಎಂದು ಹೇಳಿದನು.

ಮೋಸಗಾರರು-ಈ ಆಭರಣಗಳನ್ನು ಇಟ್ಟುಕೊಳ್ಳಿರಿ ! ನಾವು ನಾಳೆ ಮ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೮೭

ಧ್ಯಾಹ್ನದಲ್ಲಿ ಬರುತ್ತೇವೆ ಕದಾಚಿತ್ ನಮ್ಮಿಬ್ಬರಲ್ಲಿ ಯಾವನಾದರೂ ಒಬ್ಬನೇ ಬಂದ ಪಕ್ಷದಲ್ಲಿ ಇವುಗಳನ್ನು ಕೊಡಬೇಡಿರಿ ! ನಾವಿಬ್ಬರೂ ಕೂಡಿಕೊಂಡೇ ಬಂದರೆ ಕೊಡಿರಿ:
ಆವರ್ತಕನು ಆ ಆಭರಣಗಳನ್ನು ತನ್ನ ಪೆಟ್ಟಿಗೆಯಲ್ಲಿ ಇಟ್ಟು ಕೊಂಡನು ಆಮೇಲೆ ಆ ಮೋಸಗಾರರು ಸ್ವಲ್ಪ ದೂರ ಹೋಗಿ ನಿಂತುಕೊಂಡರು ಮುಂದೆ ಸ್ವಲ್ಪ ಅವಕಾಶವನ್ನು ಬಿಟ್ಟು ಅವರೊಳಗಿನವನೊಬ್ಬನು ಆವತಕನ ಹತ್ತಿರ ಬಂದು;- “ ಸೇಟಸಾಹೇಬ ! ನಮ್ಮ ಆಭರಣಗಳನ್ನು ಕೊಟ್ಟು ಬಿಡಿರಿ ! ನಾಳ ನಾವು ಮಧ್ಯಾನ್ಹಕ್ಕೆ ಬರುವ ಮುಂದೆ ಅವುಗಳನ್ನು ತೆಗೆದುಕೊಂಡು ಬರುತ್ತೇವೆ ” ಎಂದು ಕೇಳಿದನು.
ವರ್ತಕ-ನಿಮ್ಮ ಸಂಗಡಿಗನು ಎಲ್ಲಿ ಇದ್ದಾನೆ ! ಮೋಸಗಾರ -(ಅಲ್ಲಿ ನಿಂತುಕೊಂಡಿದ್ದ, ಎರಡನೇ ಮೋಸಗಾರನನ್ನು ಬೆರಳಿನಿಂದ ತೋರಿಸಿ) ಅಗೋ, ಅಲ್ಲಿನಿಂತು ಕೊಂಡಿದ್ದಾನೆ ನೋಡಿರಿ. ಆಗ ಆ ವರ್ತಕನು ದೂರದಲ್ಲಿ ನಿಂತುಕೊಂಡಿದ್ದವನನ್ನು ನೋಡಿದನು. ಆ ಮೋಸಗಾರನು ಯಾವನ ಸಂಗಡಲೋ ಮಾತ ನಾಡುತ್ತ ನಿಂತುಕೊಂಡಂತೆ ಕಂಡಿತು ಆಗ ಅವನು ಅಂಗಡಿಯೊಳಗೆ ಬಂದು ಪೆಟ್ಟಿಗೆಯಲ್ಲಿ ಇಟ್ಟದ್ದ ಆಭರಣಗಳನ್ನು ತೆಗೆದು ವಿಶ್ವಾಸದಿಂದ ಆ ಮೋಸ ಗಾರನ ಕೈಯಲ್ಲಿ ಕೊಟ್ಟನು.
ಮರುದಿವಸ ಮಧ್ಯಾಹ್ನದಲ್ಲಿ ಆ ಎರಡನೇ ಠಕ್ಕನು, ಆವರ್ತಕನ ಬಳಿಗೆ ಬಂದು ಆಭರಣಗಳನ್ನು ಕೊಡಿರಿ ! ಎಂದು ಕೇಳಹತ್ತಿದನು. ಆಗ ಆ ವರ್ತಕನು ಅನ್ನುತಾನೆ;- "ನಿಮ್ಮ ಜೊತೆಗಾರನು ಆಕೂಡಲೇ ಬಂದು, ಆಭರಣಗಳನ್ನು ತೆಗೆದುಕೊಂಡು ಹೋದನು ಈಗ ನೀನೇಕೆ ಕೇಳಲಿಕ್ಕೆ ಬಂದಿ ? ಅವನು ಈ ಸಂಗತಿಯನ್ನು ನಿನಗೆ ತಿಳಿಸಲಿಲ್ಲವೋ ?
ಮೋಸಗಾರ-"ಇಂಥ ಮೋಸದ ಮಾತುಗಳನ್ನು ನನ್ನೆದುರಿಗೆ ಹೇಳಬೇಡ ನಾವಿಬ್ಬರೂ ಕೂಡಿಕೊಂಡು ಬಂದರೇ ಆಭರಣಗಳನ್ನು ಕೊಡಿರಿ ಎಂದು ನಾವು ಮೊದಲೇ ಹೇಳಿದ್ದಿಲ್ಲವೇ ? ಹೀಗಿದ್ದು ಬುದ್ಧಿವಂತನೆಂದು ಹೆಸರಾಗಿರುವನು, ಅವನೊಬ್ಬನೇ ಬಂದಕಾಲದಲ್ಲಿ ಯಾಕೆ ಕೊಟ್ಟ ! ನಾನೇನು ಹೀಗೆ ಹೋಗತಕ್ಕವನಲ್ಲ ! ಆಭರಣಗಳನ್ನು ಕೊಟ್ಟುಬಿಡು !!
ವರ್ತಕ-ನೀನು ನಮ್ಮ ಅಂಗಡಿಯಿಂದ ಸ್ವಲ್ಪದೂರದಲ್ಲಿ ನಿಂತುಕೊಂಡಿದ್ರಿ ಆಗ ನಿನ್ನ ಜತೆಗಾರನು ಬಂದು ಆಭರಣಗಳನ್ನು ತೆಗೆದುಕೊಂಡು ಹೋದನು.
ಮೋಸಗಾರ:- ನಾನೇನು ಅವುಗಳನ್ನು ತೆಗೆದುಕೊಂಡು ಬಾ ಎಂದು ಹೇಳಿ ದ್ದಿಲ್ಲ ಇಂಥ ಒಣಮಾತುಗಳಿಂದ ಪ್ರಯೋಜನವಿಲ್ಲ ನನ್ನ ಆಭರಣಗಳನ್ನು ನನಗೆ ಕೊಟ್ಟು ಬಿಡು ! ಇಲ್ಲದಿದ್ದರೆ ನ್ಯಾಯಾಧೀಶನ ಎದುರಿಗೆ ನಿನ್ನನ್ನು ನಿಲ್ಲಿಸುವೆನು.
ಈ ಪ್ರಕಾರ ಅವರಿಬ್ಬರ ನಡುವೆ ಕೆಲವು ಹೊತ್ತು ವಾದವಿವಾದ ಮೇಲೆ ವರ್ತಕನು ಸಿಟ್ಟಿಗೆದ್ದು"ನಾನಂತೂ ಈ ಮೊದಲೇ ಆಭರಣಗಳನ್ನು ಕೊಟ್ಟು ಬಿಟ್ಟಿದ್ದೇನೆ. ಎಂದು ಸತ್ಯವಾಗಿ ಹೇಳುತ್ತೇನೆ. ಇದರಮೇಲೆ ನೀನು ಬೇಕಾದಲ್ಲಿ ಹೋಗಿ ಹೇಳು ! ಎಂದು ನುಡಿದನು.
ಆ ಕೂಡಲೆ ಆ ಎರಡನೇ ಮೋಸಗಾರನು ಬೀರಬಲನ ಹತ್ತಿರಹೋಗಿ ತನ್ನ ವೃತ್ತಾಂತವನ್ನು ತಿಳಿಸಿದನು. ಬೀರಬಲನು ಆ ಠಕ್ಕನ ಯಾವತ್ತು ಸಂಗತಿಯನ್ನು ಕೇಳಿಕೊಂಡ ಮೇಲೆ ಆ ಸಾವುಕಾರನನ್ನು ತನ್ನ ಹತ್ತಿರ ಕರಿಸಿಕೊಂಡನು ಆಗ ಆವರ್ತಕನು ಬಂದು ತನ್ನ ಅಂಗಡಿಯಲ್ಲಿ ನಡೆದ ಯಾವತ್ತು ಸಂಗತಿಯನ್ನು ತಿಳಿಸಿ ತನ್ನ ನೆರೆ ಹೊರೆಯ ನಾಲ್ಕು ಜನ ಪ್ರತಿಷ್ಟಿತರಾದ ವರ್ತಕರ ಸಾಕ್ಷಿಯನ್ನು ಕೊಟ್ಟನು. ಈ ವೃತ್ತಾಂತವನ್ನೆಲ್ಲ ಕೇಳಿಕೊಂಡ ಮೇಲೆ ವಾದಿಯು ಮೋಸಗಾರ ನಾಗಿದ್ದಾನೆಂಬ ನಂಬಿಕೆಯ ಹುಟ್ಟಿತು ಈ ವರ್ತಕನ ಮೇಲೆ ಸುಮ್ಮನೆ ಅಪವಾದವನ್ನು ಹೊರಿಸಿದ್ದಾನೆ ಎಂದು ಮನವರಿಕೆ ಮಾಡಿಕೊಂಡು ಆ ಮೋಸಗಾರನನ್ನು ಕುರಿತು " ಈವ೯ರೂ ಕೂಡಿಕೊಂಡು ಬಂದರೇ ಆಭರಣಗಳನ್ನು ಕೊಡಬೇಕೆಂದು ?” ಹೇಳಿ ದ್ದಿಯಷ್ಟೆ ಎಂದು ಪ್ರಶ್ನೆ ಮಾಡಿದನು. ಆಗ ಆ ಠಕ್ಕನು ಮಹರಾಜ ಅಹುದು, ಹೀಗೆ ನಾವು ಹೇಳಿದ್ದೆವು” ಎಂದನು. ಆಗ ಬೀರಬಲನು;- ಹಾ ಗಾದರೆ ಆಭರಣಗಳನ್ನು ತೆಗೆದುಕೊಂಡು ಹೋಗಲಿಕ್ಕೆ ನೀನೊಬ್ಬನೇ ಯಾ ಕೆಬಂದಿ ? ಎಂದು ಪುನಃ ಪ್ರಶ್ನೆ ಮಾಡಿದನು.
ಆಗ ಮೋಸಗಾರನು ಏನೂ ಮಾತಾಡದೆ ಅಲ್ಲಿಂದ ಹೊರಟು ಹೋದನು. ಆ ಮೇಲೆ ಬೀರಬಲನು ಆ ವರ್ತಕನಿಗೆ "ಇನ್ನು ಮೇಲೆ ಆ ಆಭರಣ ಬೇಡಲಿಕ್ಕೆ ಯಾರಾದರೂ ಬಂದರೆ ಅವರನ್ನು ನನ್ನ ಹತ್ತಿರ ಕರೆದುಕೊಂಡು ಬಾ ಎಂದು ಹೇಳಿ ಆ ವರ್ತಕನನ್ನು ಕಳುಹಿಸಿಕೊಟ್ಟನು. ಆದಿನ ಮೊದಲ್ಗೊಂಡು ಆ ಮೋಸಗಾರರು ಆ ವರ್ತಕನಿಗೆ ತಮ್ಮ ಕೃಷ್ಣ ಪದನವನ್ನು ಬಂದೂ ತೋರಿಸಲಿಲ್ಲ. ಒಂದುನಾರೆ ಬೀರಬಲನ ಯಾವನೋ ಒಬ್ಬವೈರಿಯು ಬೀರಬಲ್ಲನ ಮಾನಹಾನಿಯನ್ನು ಮಾಡಬೇಕೆಂದು ಯೋಚಿಸಿ, ಎಷ್ಟೇ ನಿಂದಾಯುಕ್ತವಾದ ಮಾತುಗಳನ್ನು ಒಂದು ಕಾಗದದಮೇಲೆ ಬರೆದು ಒಂದುಗೋಡೆಗೆ ಹಚ್ಚಿ ಇಟ್ಟಿದ್ದನು. ಈ ಸುದ್ದಿಯು ಬೀರಬಲನಿಗೆ ತಿಳಿದಕೂಡಲೇ ತನ್ನ ಸಂಗಡ ಕೆಲವು ಜನರನ್ನು ಕರೆದುಕೊಂಡು ಆ ಸ್ಥಳಕ್ಕೆ ಬಂದನು ಅಲ್ಲಿ ಎಷ್ಟೋ ಜನರು ನೆರೆದಿದ್ದರು ಅವರಲ್ಲಿ ಬೀರಬಲನಿಗೆ ಸ್ನೇಹಿತರಾದವರೂ ಇದ್ದರು; ವೈರಿಗಳಾ ದವರೂ ಇದ್ದರು ಆ ಕಾಗದವು ಸ್ವಲ್ಪ ಎತ್ತರದ ಮೇಲೆ ಹಚ್ಚಿತ್ತು ಜನರಿಗೆ ನೆಟ್ಟಗೆ ಓದಲಿಕ್ಕೆ ಬರುತ್ತಿದ್ದಿಲ್ಲ ಅದರಿಂದ ಬೀರಬಲನು " ಆ ಕಾಗದವನ್ನು ತೆಗೆದು ಕೆಳಗೆ ಹಚ್ಚು” ಎಂದು ಒಬ್ಬ ಸೇವಕನಿಗೆ ಆಜ್ಞಾಸಿದನು ಆಗ ಅವನ ಅಪ್ಪಣೆಯ ಮೇರೆಗೆ ಆ ಕಾಗದವನ್ನು ಓದಲಿಕ್ಕೆ ಯಾವಾರಿಗೂ ಕಾಣಿಸು ವಂತೆ ಹಚ್ಚಿದನು. ಆಮೇಲೆ ಅದನ್ನು ಎಲ್ಲರಿಗೂ ಕೇಳಿಸುವಂತೆ ಗಟ್ಟಿಯಾಗಿ ಓದಿತೋರಿಸಿದನು, ಬಳಿಕ ಅಲ್ಲಿ ನೆರೆದಿದ್ದ ಎಲ್ಲ ಜನರನ್ನುದ್ದೇಶಿಸಿ ಅಂದದ್ದೇ ನಂದರೆ- " ಈ ಸ್ಥಳದಲ್ಲಿ ಏಕತ್ರರಾಗಿದ್ದ ಜನರು ಹೀಗೆ ತಿಳಿದುಕೊಳ್ಳಬೇಕಲ್ಲಾ ! ಈ ಕಾಗದವು ನನ್ನ ಮತ್ತು ನಿಮ್ಮೆಲ್ಲರನಡುವೆ ಆದ ಒಪ್ಪಂದದ ಕಾಗದವು, ಇದು ಈ ಗೋಡೆಯಮೇಲೆ ಎತ್ತರವಾಗಿ ಹಚ್ಚಲ್ಪಟ್ಟಿತ್ತು ಅದರಿಂದ ಎಲ್ಲರಿಗೂ ಚನ್ನಾಗಿ ಓದಲಿಕ್ಕೆ ಬರುತ್ತಿಲ್ಲ, ಅದರಿಂದ ಅದನ್ನು ಈಗ ಕೆಳಗೆ ಹಚ್ಚಿಸಿದ್ದೇನೆ ಈಗಮಾತ್ರ ಎಲ್ಲರಿಗೂ ಓದಲಿಕ್ಕೆ ಬರುವಂತಾಯಿತು ಇನ್ನು ನನಗೆ ಕತೃಗಳಾಗಿದ್ದವರು ತಮ್ಮ ಇಚ್ಚಾಪ್ರಕಾರ ನನ್ನ ಸಂಗಡ ವರ್ತಿಸ ಬೇಕು, ನಾನು ನನ್ನ ಮನಸ್ಸಿಗೆ ಬಂದಹಾಗೆ ಅವರಸಂಗಡ ನಡೆದುಕೊಳ್ಳು ವೆನು. ” ಎಂದು ಹೇಳಿ ಬೀರಬಲನು ಅಲ್ಲಿಂದ ಹೊರಟನು. ಅವನು ಆಡಿದ ಭಾವಗಳನ್ನು ಕೇಳಿ ಜನರಿಗೆಲ್ಲ ಬಹಳ ಭಯವುಂಟಾಯಿತು. ಅದರಿಂದ ಎಲ್ಲರೂ ಕೂಡಿ ಆ ಕಾಗದವನ್ನು ಹರಿದು ಬಿಸುಟಬಿಟ್ಟರು. ಅಂದಿನಿಂದ ಶತ್ರು ಗಳಾಗಿದ್ದವರು ತಮ್ಮ ಶತೃತ್ವವನ್ನು ಬಿಟ್ಟು ಬಿಟ್ಟರು.

-(೩೨, ಚಾತುರ್ಯದ ಪರೀಕ್ಷೆ)-

ಒಂದು ಸಾರೆ ಬೀರಬಲನು ರೋಗಪೀಡಿತನಾಗಿದ್ದನು, ಆಗ ಅವನಿಗೆ ಮೂರುದಿವಸ ಅನ್ನ ನೀರು ಸಹ ಹೋಗಿದ್ದಿಲ್ಲ; ನಾಲ್ಕನೇ ದಿವಸ ಔಷಧವಿಂದ ಸ್ವಲ್ಪಗುಣವಾಯಿತು. ಆಗ ಬಾದಶಹನು ಅವನಯೋಗಕ್ಷೇಮವನ್ನು ತಿಳಿದು ಕೊಳ್ಳಬೇಕೆಂದು ಸ್ವತಃ ಬೀರಬಲನ ಮನೆಗೆ ಬಂದನು, ಕ್ಷೇಮಸಮಾಚಾರದ ಮಾತುಕಥೆಗಳು ನಡೆದವು, ಸ್ವಲ್ಪ ಹೊತ್ತಾದಮೇಲೆ ಬೀರಬಲನಿಗೆ ಮೂತ್ರ ಬಾಧೆಯಾದ್ದರಿಂದ ಅಲ್ಲಿಂದಯೆದ್ದು ಬೇರೆಕಡೆಗೆಹೋದನು ಆಗ ಬಾದಶಹನ ಮನಸ್ಸಿನಲ್ಲಿ.. " ಈ ಬೇನೆಯಿಂದ ಬೀರಬಲನ ಚಾತುರ್ಯದಲ್ಲಿ ಏನಾದರೂ ನ್ಯೂನಾಧಿಕವಾಗಿದೆಯೋ ಹ್ಯಾಗೆ ? ” ಎಂಬದನ್ನು ಪರೀಕ್ಷಿಸಿ ನೋಡಬೇಕೆಂದು ಯೋಚನೆಯು ಹುಟ್ಟಿತು. ಆ ಕೂಡಲೆ ಒಬ್ಬ ಸೇವಕನನ್ನು ಕರೆದು ನಾಲ್ಕು ಕಾಗದದ ಚೂರುಗಳನ್ನು ಅವನ ಕೈಯಲ್ಲಿ ಕೊಟ್ಟು ಇವುಗಳನ್ನು ಒಂದೊಂದು ಮಂಚದ ಕಾಲಿನಕೆಳಗೆ ಇಡು ಎಂದು ಹೇಳಿದನು. ಅದರಂತೇ ಆ ಸೇವಕನು ಬೀರಬಲನ ಮಂಚದ ಕಾಲಿನ ಕೆಳಗೆ ಒಂದೊಂದು ಚೂರನ್ನು ಇಟ್ಟನು, ಸ್ವಲ್ಪ ಹೊತ್ತಿನಮೇಲೆ ಬೀರಬಲನು ಬಂದು ಆ ಮಂಚದಮೇಲೆ ಮಲಗಿಕೊಂಡನು. ಆಗ ಬಾದಶಹನು ಏನೂ ಅರಿಯದವನಂತೆ ಆಕಡೆಯ ಈಕಡೆಯ ವರ್ತಮಾನಗಳನ್ನು ಹೇಳುತ್ತ ಕುಳಿತುಕೊಂಡನು. ಆಗ ಬೀರ ಬಲನು ಬಾದಶಹನ ಸಂಗಡ ಮಾತಾಡುತ್ತಿದ್ದರೂ ಅವನ ಕಣ್ಣುಗಳು ಸುತ್ತು ಮುತ್ತು ಮೇಲೆ ಕೆಳಗೆ ನೋಡುತ್ತಿದ್ದವು. ಆಗ ಬಾದಶಹನು ನಿನ್ನ ಮನಸ್ಸು ಸ್ವಸ್ಥವಾಗಿದ್ದಂತೆ ಕಾಣುವದಿಲ್ಲ ನೀನು ಒಂದೇ ಸವನೆ ಮೇಲೆಕೆಳಗೆ ಯಾಕೆ ನೋಡುತ್ತಿರುವಿ ” ಎಂದು ಪ್ರಶ್ನೆ ಮಾಡಿದನು; ಆಗ ಬೀರಬಲನು ಅನ್ನು ತಾನೆ:- ( ಖಾವಿಂದ ನಾನುಮಲಗಿರುವ ಮಂಚವು ಮೊದಲು ಇದ್ದ ಹಾಗೆ ಇಲ್ಲ, ಏನೋ ಹೆಚ್ಚು ಕಡಿಮೆಯಾದಂತೆ ಕಂಡುಬರುತ್ತದೆ."

ಬಾದಶಹ-ಏನು ಹೆಚ್ಚು ಕಡಿಮೆ ಯಾಗಿದೆ !
ಬೀರಬಲ-ಈ ಮಂಚವು ಕಾಗದದಚೂರಿನಷ್ಟು ಎತ್ತರವಾದಂತೆ ಕಾಣುತ್ತೆ.
ಬಾದಶಹ-ನಿನ್ನ ದೇಹದಲ್ಲಿಯ ನಿರ್ಬಲತೆಯಿಂದ ಹಾಗೆ ಕಾಣುತ್ತಿರಬಹುದು.
ಬೀರಬಲ-ಪೃಥ್ವಿನಾಥ ! ನನ್ನ ದೇಹವು ನಿರ್ಜಲವಾಗಿದ್ದರೂ ಬುದ್ದಿಯು ನಿರ್ಬಲವಾಗಿಲ್ಲ.
ಈಪ್ರಕಾರ ಬೀರಬಲನ ಚಾತುರ್ಯವನ್ನು ಪರೀಕ್ಷಿಸಿ ನೋಡಿದಮೇಲೆ ಬಾದಶಹನಿಗೆ ಅತ್ಯಾನಂದವುಂಟಾಯಿತು, ಆಗ ತಾನುಮಾಡಿದ ಯುಕ್ತಿಯನ್ನು ಬೀರಬಲನಿಗೆ ತಿಳಿಸಿದನು.

-(೩೩, ತೊಗರಿಯಲ್ಲಿ ನವಿಲು.)-

ಒಂದುದಿವಸ ಬಾದಶಹನೂ, ಮತ್ತು ಬೀರಬಲನೂ ಕೂಡಿಕೊಂಡು ವಾಯುಸೇವಾರ್ಥವಾಗಿ ಹೋಗಹತ್ತಿದ್ದರು; ಆಗ ತೊಗರೆಯ ಹೊಲದಲ್ಲಿ ಹೋಗುತ್ತಿರುವ ಒಂದು ನವಿಲನ್ನು ಕಂಡು “ಬೀರಬಲ್ಲ ! ತೋರಮೆ ಮೋರ

ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,
೯೧

ಘುಸತಾ ಹೈ ! ( ತೊಗರಿಯಲ್ಲಿ ನವಿಲು ಹೋಗುವದೇ ! ) ಎಂದನು. ಆಗ ಬೀರಬಲನು "ಅಹುದು ! ತೋರಫಟತಹೈ, ಮೊರಘುನತಹೈ (ತೊಗರೆಯಕಾಳು ಒಡೆಯುತ್ತದೆ, ಇರಿವೆಯು ಹೋಗುತ್ತದೆ) ಎಂದು ಉತ್ತರಕೊಟ್ಟನು, ಅದನ್ನು ಕೇಳಿ ಬಾದಕಹನಿಗೆ ನಗೆಯುಬಂತು.
ಫಾರ್ಸೀಭಾಷೆಯಲ್ಲಿ ಮೋರ ಎಂದರೆ ಇರಿವೆಯೆಂದು ಅರ್ಥವಾಗುತ್ತದೆ.

೩೪. ಬಲೆಯೊಳಗಿನ ಹಣ್ಣೂ, ಮತ್ತು ಮಲವಿಸರ್ಜನೆಯ ಕಾಲದಲ್ಲಿ ಬಂದ ದೇವರು.

ಒಂದುದಿವಸ ಬಾದಶಹನ ಮನಸ್ಸಿನಲ್ಲಿ; "ಬೀರಬಲನು ಯಾವಾಗ ನೋಡಿದರೂ ಆಗ ನನ್ನನ್ನು ಮಾತಿನಲ್ಲಿ ಸೋಲಿಸುತ್ತಿರುವನು ಆದ್ದರಿಂದ ಏನಾದರೂ ಮಾಡಿ ಅವನು ಲಜ್ಜಿತನಾಗುವಂತೆ ಮಾಡಬೇಕು,” ಎಂದು ಯೋಚಿಸಿ ಯಾವನಾದರೂ ಕೈಮುಟ್ಟಿದಕೂಡಲೆ ಅವನಕೈಯಂ ಸಿಕ್ಕಿಹೋಗಬೇಕು ಇಂಥಪ್ರಕಾರದ ಒಂದು ಬಲೆಯನ್ನು ನಿದ್ಧಪಡಿಸಿ ಅದರೊಳಗೆ ಒಂದು ಹಣ್ಣನ್ನು ಇಡಿಸಿ, ಅದನ್ನು ಒಂದುಕೋಣೆಯಲ್ಲಿ ಇಡಿಸಿದನು. ಪ್ರತಿದಿವಸದಂತೆ ಬೀರಬಲನುಬಂದು ಬಾದಶಹನಿಗೆ ನಮಸ್ಕಾರಮಾಡಿ ನಿಂತುಕೊಂಡನು. ಆಗ ಬಾದಶಹನು "ಬೀರಬಲ್ಲ ! ಆ ಬಲೆಯೊಳಗಿನ ಹಣ್ಣನ್ನು ತೆಗೆದುಕೊಂಡು ಬಾ” ಎಂದು ಹೇಳಿದನು, ಆಜ್ಞಾನುಸಾರವಾಗಿ ಬೀರಬಲನು ಆ ಹಣ್ಣನ್ನು ತೆಗೆದುಕೊಳ್ಳುವದಕ್ಕೆ ಆ ಬಲೆಯೊಳಗೆ ಕೈಹಾಕಲು ಅದು ಸಿಕ್ಕಿ ಕೊಂಡಿತು, ಅದನ್ನು ಬಿಡಿಸಿಕೊಳ್ಳಬೇಕೆಂದು ಎರಡನೆ ಕೈಯನ್ನು ಹಾಕಲು ಆ ಎರಡನೇ ಕೈಯೂ ಸಿಕ್ಕಿಕೊಂಡಿತು ಎಷ್ಟು ಹಿಂದುಮುಂದು ಜಗ್ಗಾಡಿದರೂ ಈ ಕೈಗಳು ಹೊರಗೆಬರಲಿಲ್ಲ; ಅದರಿಂದ ಬೀರಬಲನು ಲಜ್ಜಿತನಾಗಿ ಮೋರೆಯನ್ನು ಕೆಳಗೆ ಮಾಡಿದನು, ಅಡ್ಡಾಡುತ್ತ ಬಾದಶಹನು ಅಲ್ಲಿಗೆ ಬಂದನು, ಬೀರಬಲನ ಅವಸ್ಥೆಯನ್ನು ಕಂಡು ಬಾದಶಹನು ಅನ್ನುತ್ತಾನೆ- " ಈಕೋಣೆಯಲ್ಲಿದ್ದ ಸಾಮಾನುಗಳು ಹಗಲೆಲ್ಲ ಕಳವಾಗಿ ಹೋಗುತ್ತಿದ್ದವು ಅವುಗಳನ್ನು ಕದ್ದೊಯ್ಯುವ ಮನುಷ್ಯನು ಈಹೊತ್ತು ಸಿಕ್ಕಂತಾಯಿತು ಈದಿವಸ ನಾನು ಅಂತಃಕರುಣದಿಂದ ನಿನ್ನನ್ನು ಬಿಟ್ಟು ಬಿಡುತ್ತೇನೆ ಇನ್ನು ಮೇಲೆಮಾತ) ಇಂಥಕೆಲಸವನ್ನು ಮಾಡಬೇಡ" ಬೀರಬಲನು ಏನೊಂದು ಉತ್ತರವನ್ನು ಕೊಡಲಿಲ್ಲ, ಆಮೇಲೆ ಬಾದಕಹನು ಆ ಕೈಯನ್ನು ತೆಗಿಸಿಬಿಟ್ಟನು.
ಮರುದಿವಸ ನೇಮದಂತೆ ಬೀರಬಲನು ಒಲಗಕ್ಕೆ ಬರಲಾಗಿ ಬಾದಶಕಹನು "ಬೀರಬಲ್ಲ ? ಬಲೆಯೊಳಗಿನ ಹಣ್ಣು ಹ್ಯಾಗೆಯಿತ್ತು ! ” ಎಂದು ಕೇಳಿ

ದನು, ಬೀರಬಲನು ಏನೊಂದುತ್ತರವನ್ನೂ ಕೊಡದೆ ಮುಖತಗ್ಗಿಸಿದನು. ಇದರಂತೆ ಪ್ರತಿದಿವಸ ತಪ್ಪದೆ ಬಾದಶಹನು ಅನ್ನ ಹತ್ತಿದನು; ಕಡೆಗೆ ಬೀರಬಲನು ಕೆಲವು ದಿವಸಗಳವರೆಗೆ ಇಲ್ಲಿಂದ ಹೊರಟು ಹೋಗಬೇಕು; ಎಂದು ನಿಶ್ಚಯಿಸಿದನು.
ಮುಂದೆ ಕೆಲವು ದಿವಸಗಳಾದಮೇಲೆ ಸಮಯವನ್ನು ನೋಡಿಕೊಂಡು “ ಶ್ರೀ ಜಗನ್ನಾಥನ ಯಾತ್ರೆಗೆ " ಹೋಗುವೆನೆಂದು ಹೇಳಿ ಎರಡು ತಿಂಗಳ ಮಟ್ಟಿಗೆ ಬಾದಶಹನ ಅಪ್ಪಣೆಯನ್ನು ಕೇಳಿದನು. ಬಾದಶಹನು ಸಂತೋಷದಿಂದ ಅಪ್ಪಣೆಕೊಟ್ಟನು. ಬೀರಬಲನು ಮನೆಗೆಬಂದು ಯತಿಯ ವೇಷವನ್ನು ಧಾರಣಮಾಡಿಕೊಂಡು ಯಾತ್ರಾರ್ಥವಾಗಿ ಹೊರಟವನಂತೆ ನಟಿಸಿ, ಬಾದಶಹನು ಮೃಗಯಾವಿಹಾರಕ್ಕಾಗಿ ಕಾದುಯಿಟ್ಟದ್ದ ಅಡವಿಯೊಳಗೆ ಹೋಗಿ ಇರಹತ್ತಿದನು.
ಮುಂದೆ ಹತ್ತೆಂಟು ದಿವಸಗಳಾದ ಬಳಿಕ ಬಾದಶಹನು ಸಾಯಂಕಾಲದ ಸಮಯದಲ್ಲಿ ಮೃಗಯಾ ವಿಹಾರಕ್ಕೊಸುಗ ಆ ಅರಣ್ಯಕ್ಕೆ ಹೋದನು ಅಲ್ಲಿ ಅಕಸ್ಮಾತ್ತಾಗಿ ಒಂದು ಹರಿಣವು ( ಚಿಗರೆಯು ) ದೃಷ್ಟಿಗೆ ಬೀಳಲು, ಅದರ ಬೆನ್ನು ಹತ್ತಿ ಕುದುರೆಯನ್ನು ಓಡಿಸಿದನು, ಅಷ್ಟರಲ್ಲಿ ಮಬ್ಬುಗತ್ತಲಾದ್ದರಿಂದ ಚಿಗರೆಯು ಕಾಣದೆಹೋಯಿತು ಬಾದಶಹನಿಗೆ ಮಾರ್ಗವು ತಿಳಿಯದೇ ಹೋಯಿತು ಸೈನ್ಯದವರೆಲ್ಲರು ಹಿಂದುಳಿದುಬಿಟ್ಟರು ಆ ಸಮಯದಲ್ಲಿ ಬಾದಶಹನಿಗೆ ದೀರ್ಘಶಂಕೆ (ಮಲವಿಸರ್ಜನೆ) ಗೆ ಹೋಗಬೇಕಾಗಿ ಬಂತು ಆಗ ಅವನು ಕುದುರೆಯನ್ನು ಒಂದುಗಿಡಕ್ಕೆ ಕಟ್ಟಿ ಹಾಕಿ, ಮತ್ತೊಂದು ಮರದಬುಡಕ್ಕೆ ಮಲವಿಸರ್ಜನೆಗೆ ಕುಳಿತುಕೊಂಡನು. ಇಂಥ ಸಮಯ ನಿರೀಕ್ಷಣ ಮಾಡುತ್ತ ಕುಳಿತುಕೊಂಡಿದ್ದ ಬೀರಬಲನು;-" ದೀರ್ಘದಂತ, ಕಪ್ಪಾದ ಮೋರೆ, ಉದ್ದವಾದ ತುಟಿಗಳುಳ್ಳ ಅಕರಾಳವಿಕರಾಳ ” ಸ್ವರೂಪವನ್ನು ಧಾರಣೆ ಮಾಡಿಕೊಂಡು ಆ ವೃಕ್ಷದ ಹಿಮ್ಮಗ್ಗಲಿನಿಂದ ಒದರುತ್ತ, ಕೂಗುತ್ತ, ಕುಣಿದಾಡುತ್ತ ಬಾದಶಹನನ್ನು ಅಂಜಿಸಬೇಕೆಂದು ಎದುರಿಗೆ ಬಂದು ನಿಂತು ಕೊಂಡನು. ಇಂಥ ಭಯಾನಕ ಸ್ವರೂಪವನ್ನು ನೋಡಿ ಬಾದಶಹನು ಗಡಗಡನೇ ನಡುಗಹತ್ತಿದನು. ಆಗ ವೇವಧಾರಿಯಾಗಿದ್ದ ಬೀರಬಲನು ಚೀತ್ಕಾರ ಮಾಡುತ್ತ. ಎಲೈ ನರಾಧಮನೇ ? ನೀನು ನಿನ್ನ ಪ್ರಜೆಗಳ ಮೇಲೆ ಬಹಳೇ ಬಲಾತ್ಕಾರವನ್ನು ನಡಿಸಿರುತ್ತಿ ! ಅದರಿಂದ ಅನ್ಯಾಯವರ್ತನವುಳ್ಳ ನಿನ್ನನ್ನು ತಿಂದುಬಿಡುತ್ತೇನೆ” ಎಂದು ಹೇಳಿದನು. ಆಗ ಬಾದಶಹನ ಮೈಮೇಲಿನ ಪ್ರಜ್ಞೆಯು ತಪ್ಪಿ ಹೋಯಿತು, ನಾಲಿಗೆಯು ತತ್ತರಿಸಹತ್ತಿತು. ಆಗ ಅವನು ರಾಕ್ಷಸನಿಗೆ ನಮಸ್ಕಾರಮಾಡಿ ಹೆ ದೇವ? ನನ್ನ ಅಪರಾಧವನ್ನು, ಕ್ಷಮಿಸು ನಿನ್ನ ಅಪ್ಪಣೆಯಮೇರೆಗೆ ನಡೆದುಕೊಳ್ಳುತ್ತೇನೆ. ” ಎಂದು ಬೇಡಿ ಕೊಳ್ಳಹತ್ತಿದನು. ಆಗ ಆ ರಾಕ್ಷಸರೂಪಿಯಾದ ಬೀರಬಲನು - ನಾನು ಹೇಳಿದಂತೆ ಕೇಳುವಿಯಾ? ಹಾಗಾದರೆ ನೀನು ಮೈಮೇಲಿನ ಎಲ್ಲ ವಸ್ತ್ರಗಳನ್ನು ತೆಗೆದುಚೆಲ್ಲಿ ನಗ್ನನಾಗಿ ಈ ನನ್ನ ಪಾದರಕ್ಷೆಗಳನ್ನು ತಲೆಯಮೇಲೆ ಹೊತ್ತು ಕೊಂಡು ಒಂದುನೂರು ಮೊಳದೂರ ಹೋಗಬೇಕು ಅಂದರೆ ನಾನು ನಿನಗೆ ಜೀವದಾನಕೊಡುತ್ತೇನೆ ” ಎಂದು ಹೇಳಿದನು ಬಾದಶಹನು ಆ ಮಾತಿಗೆ ಸಮ್ಮತಿಸಿದನು, ಆಮಾತು ಕೇಳಿ ರಾಕ್ಷಸ ರೂಪಿಯಾದ ಬೀರಬಲನ ಮನಸ್ಸಿನಲ್ಲಿ ದಯೆಹುಟ್ಟಿ ಹಾಗೆಯೇ ಹೋಗೆಂದು ಹೇಳಿ ಬಿಟ್ಟು ಬಿಟ್ಟನು. ಬಾದಶಹನು ಅಲ್ಲಿಂದ ಏಳುತ್ತ ಬೀಳುತ್ತ ಬಂದು ಪಟ್ಟಣಕ್ಕೆ ತಲುಪಿದನು, ಆದರೂ ಅವನ ಮನಸಿನೊಳಗಿಂದ ಆ ರಾಕ್ಷಸನ ಭಯವು ಕಡಿಮೆಯಾಗಲಿಲ್ಲ ಅದರಿಂದ ಅವನು ಅನ್ನ ನೀರುಗಳುನ್ನು ಸಹಾ ಬಿಟ್ಟು ಬಿಟ್ಟನು.
ಎರಡು ತಿಂಗಳುಗಳಾದ ಮೇಲೆ ಬೀರಬಲನು ಮನಗೆ ಬಂದನು ಈ ವರ್ತಮಾನವು ಬಾದಶಹನಿಗೆ ತಿಳಿದ ಕೂಡಲೆ, ಅವನು ಬೀರಬಲನನ್ನು ಕರೆಯಿಸಿಕೊಂಡನು. ಅವನು ಬಂದು ಬೆಟ್ಟಿಯಾದ ಕೂಡಲೆ ಬಾದಶಹನು ಬೀರಬಲ್ಲ ಬಲೆಯೊಳಗಿನ ಹಣ್ಣು ! ” ಎಂದನು ಆ ಕೂಡಲೆ ಬೀರಬಲನು ಪೃಥ್ವಿನಾಥ ! ಮಲವಿಸರ್ಜನೆಯ ಕಾಲಕ್ಕೆ ಬಂದದೇವರು ! ಎಂದು ಹೇಳಿದನು
ಈ ಮಾತು ಕಿವಿಗೆ ಬಿದ್ದಕೂಡಲೇ ಬಾದಶಹನು ಲಜ್ಜಿತನಾನು ಆ ದಿವಸದಿಂದ ಬಾದಶಹನು ತಿರುಗಿ ಆ ಮಾತನ್ನೇ ಬಿಟ್ಟುಬಿಟ್ಟನು. ಮುಂದೆ ಸ್ವಲ್ಪ ದಿವಸಗಳಾದ ಮೇಲೆ ಬೀರಬಲನು ಮಾಡಿದ ಕೃತಿಯು ಗೊತ್ತಾಗಲು ಮನಸಿನೊಳಗಿನ ಭಯವೆಲ್ಲ ಹೋಯಿತು. ಆನಂದದಿಂದ ಇರ ಹತ್ತಿದನು,

-(೩೫, ಅರ್ಧಬಿಸಿಲೂ, ಅರ್ಧನೆರಳೂ.)-

ಒಂದು ಸಮಯದಲ್ಲಿ ಬಾದಶಹನು ಬೀರಬಲನ ಮೇಲೆ ಕ್ರುದ್ಧನಾಗಿ ತನ್ನ ಪಟ್ಟಣದಿಂದ ಹೊರಗೆ ಹೋಗೆಂದು ಆಜ್ಞಾಪಿಸಿದನು. ಅದರಂತೆ ಬೀರಬಲನು ಬೇರೊಂದು ಗ್ರಾಮದಲ್ಲಿ ಹೋಗಿ ಗುಪ್ತದಿಂದ ಇರಹತ್ತಿದನು. ಮುಂದೆ ಕೆಲವು ದಿವಸಗಳು ಕಳೆದು ಹೋದಮೇಲೆ ಬೀರಬಲನು ಸ್ಮರಣೆಗೆ ಬಂದನು ಆಗ ಅವನು ಇರುವ ಸ್ಥಳವನ್ನು ಕಂಡು ಹಿಡಿಯಬೇಕೆಂದು, ಸೇವಕರನ್ನು ಕಳುಹಿಸಿ, ಬೇರೆ ಬೇರೆ ಪಟ್ಟಣಗಳಲ್ಲಿಯೂ; ಜನವಸತಿಯಲ್ಲಿಯೂ ಹುಡುಕಿಸಿದನು, ಆದರೆ ಎಲ್ಲಿಯೂ ಶೋಧವಾಗಲಿಲ್ಲ ಆಗ ಬಾದಶಹನು. "ಯಾವನು ಅರ್ಧಬಿಸಿಲಿನಲ್ಲಿಯೂ, ಅರ್ಧಛಾಯೆಯಲ್ಲಿಯೂ ನನ್ನ ಎದು `ಗೆ ಬರುವನೋ, ಅವನಿಗೆ ಒಂದು ಸಾವಿರ ರೂಸಾಯಿಗಳನ್ನು ಜಾರಿತೋ ಪಕವಾಗಿ ಕೊಡುವೆನು ?” ಎಂದು ಡಂಗುರವನ್ನು ಸಾರಿಸಿದನು. ಈ ವರ್ತ ಮಾನವು ಕರ್ಣೋದಕರ್ಣವಾಗಿ ಬೀರಬಲನಿದ್ದ ಗ್ರಾಮಕ್ಕೆ ಬಂದು ತಲುಪಿ ತು; ಆಗ ಅವನು ಒಂದು ಹೊರಸನ್ನು ತರಿಸಿ, ಒಬ್ಬ ಮನುಷ್ಯನಿಗೆ ಕೋ ಟ್ಟು ಇದನ್ನು ತೆಗೆದುಕೊಂಡು ಹೋಗಿ ಬಾದಶಹನ ಸಮ್ಮುಖದಲ್ಲಿ ನಿಂತು ಕೊಂಡು ತಮ್ಮ ಅಪ್ಪಣೆಯ ಮೇರೆಗೆ ಅರ್ಧ ಬಿಸಿಲಿನಲ್ಲಿಯೂ ಅರ್ಧ ಛಾ ಯೆಯಲ್ಲಿಯೂ ಬಂದಿದ್ದೇನೆ. ತಾವು ಪಾರಿತೋಷಕವಾಗಿ ಕೊಡುತ್ತೇವೆಂದು ಪ್ರಕಟ ಪಡಿಸಿದ ಪ್ರಕಾರ ನನಗೆ ಒಂದು ಸಾವಿರ ರೂಪಾಯಿಗಳನ್ನು ಕೊಡಬೇಕು ” ಎಂದು ಕಲಿಸಿ ಕೊಟ್ಟು ಅವನನ್ನು ಕಳುಹಿಸಿದನು.


ಬೀರಬಲನ ಕೀಕ್ಷಾನು ಸಾರವಾಗಿ ಆ ಮನುಷ್ಯನು ಆಹೊರಸ(ಖಾ ಜನ್ನು ತಲೆಯ ಮೇಲೆ ಹೊತ್ತುಕೊಂಡು ಬಾದಕಹನ ಎದುರಿಗೆ ಬಂದು ನಿಂತುಕೊಂಡು ಬೀರಬಲನು ಕಲಿಸಿಕೊಟ್ಟಂತೆ ನಿವೇದನ ಮಾಡಿದನು. ಆಗ ಬಾದಕನು “ ಎಲೈ ನಿನಗೆ ಈ ಯುಕ್ತಿಯನ್ನು ಯಾರು ಹೇಳಿದರು! ಎಂಬ ಸಂಗತಿಯನ್ನು ನಿಜವಾಗಿ ಹೇಳು ! ಎಂದು ಆಜ್ಞಾಪಿಸಿದನು. ಆಗ ಆ ಮ ನುಷ್ಯನು, “ ಪೃಥ್ವಿನಾಥ ನಮ್ಮ ಊರಲ್ಲಿ ಬೀರಬಲನೆಂಬ ಒಬ್ಬ ಬ್ರಾ ಹ್ಮಣನಿದ್ದಾನೆ. ಅವನೇ ನನಗೆ ಈ ಹಂಚಿಕೆಯನ್ನು ಕಲಿಸಿಕೊಟ್ಟನು" ಎಂದು ವಿಜ್ಞಪ್ತಿಯನ್ನು ಮಾಡಿಕೊಂಡನು. ಈ ಮಾತನ್ನು ಕೇಳಿದ ಕೂಡಲೇ ಆ ಬಾದಶಹನಿಗೆ ಬಹಳ ಹರುಪವಾಯಿತು. ಆಗ ಆ ಮನುಷ್ಯನಿಗೆ ಒಂದುಸಾ ವಿರ ರೂಪಾಯಿಗಳನ್ನಿತ್ತು ಬೀರಬಲನನ್ನು ಕರೆಯಿಸಿಕೊಂಡನು


- ೩೬ ನೀನು ದೊಡ್ಡ ಕತ್ತೆಯಾಗಿರುವಿ !

ಒಂದು ಸಮಯದಲ್ಲಿ ಬಾದಶಹನ ಬೀರಬಲನೂ ಮಾತಾಡುತ್ತ ಬಹಳ ಹೊತ್ತು ಕುಳಿತುಕೊಂಡಿದ್ದರು. ಆಗ ಅಕಸ್ಮಾತ್ತಾಗಿ ಬೀರಬಲನಿಂ ದ ಅಧೋವಾಯುವು ಹೊರಟಿತು ಆಗ ಬಾದಷಹನು, - ( ನೀನು ದೊಡ್ಡಕ ತ್ತೆಯಾಗಿರುವಿ ” ಎಂದನು. ಅದಕ್ಕೆ ಬೀರಬಲನು ; ( ಪ್ರಭುವೇ ! ನಾನು ಮೊದಲು ಒಳ್ಳೆಬುದ್ಧಿವಂತನಿದ್ದೆನು. ಆದರೆ ಈಗ ತಮ್ಮ ಸಂಗಡ ಇದ್ರದ ರಿಂದ ಕತ್ತೆಯಾಗ ಬೇಕಾಯಿತು” ಎಂದು ಉತ್ತರ ಕೊಟ್ಟನು ಬಾದಶಹ ನು ನಿರುತ್ತರನಾದನು.

- ೩೭. ಯಾತರ ಮೇಲೆ ಹತ್ತುವಿರಿ !)

ಬಾದಕಹನೂ ಬೀರಬಲನ ಕೂಡಿಕೊಂಡು ಮೃಗಯಾವಿಹಾರಕ್ಕೆ ಹೋಗಿದ್ದರು ಆಗ ಒಂದು ಕೃಷ್ಣಮೃಗವು ದೃಷ್ಟಿಗೆ ಬಿದ್ದದ್ದರಿಂದ ಇಬ್ಬರೂ ಬಹುದೂರ ಹೋಗಿ ಬಿಟ್ಟರು, ಬಳಿಯಲ್ಲಿ ತಿನ್ನುವದಕ್ಕೆ ಏನೂ ಇದ್ದಿಲ್ಲ ಬಿಸಿಲು ಬಲಿಯಿತು. ಆಗ ಅವರು ಶ್ರಾಂತರಾಗಿ ಒಂದು ಮರಕ್ಕೆ ಕುದುರೆಗೆಳನ್ನು ಕಟ್ಟಿ, ಶ್ರಮ ನಿವಾರಣಿಯಗೋಸುಗ ಕುಳಿತುಕೊಂಡರು ಆದರೆ ಕ್ಷುದ್ಬಾಧೆಯು ಸಹಿಸಲಸದಳವಾಯಿತು. ಬಾದಶಹನು ಕುದುರೆಯ ತೋಬರಿಯಲ್ಲಿದ್ದ ಕಡಲೇ ಕಾಳುಗಳನ್ನು ತಿನ್ನ ಹತ್ತಿದನು ಅಕಸ್ಮಾತ್ತಾಗಿ ಮೂರು ನಾಲ್ಕು ಜನ ಸ್ತ್ರೀಯರು ಆ ಮಾರ್ಗವಾಗಿ ಹೋಗುತ್ತಿದ್ದರು ಅವರನ್ನು ನೋಡಿ ಕುದುರೆಗಳು ಹೇಷಾರವವನ್ನು ಮಾಡಿರವು ಆಗ ಬಾದಶಹನು ಆ ಸ್ತ್ರೀಯರಿಗೆ, “ ನಿಮ್ಮನ್ನು ನೋಡಿ ಕುದುರೆಗಳು ಏನು ಹೇಳಹತ್ತಿವೆ ? ಎಂದು ಪ್ರಶ್ನೆ ಮಾಡಿದನು. ಆಗ ಆ ಸ್ತ್ರೀಯರು. ಎಲೋ ಯಾತ್ರಿಕರೇ ಆ ಕುದುರೆಗಳು ಹೇಳಿದ್ದೇನಂದರೆ, ಈ ನಮ್ಮ ಮೇಲೆ ಕುಳಿತು ಕೊಳ್ಳತಕ್ಕ ಯಜಮಾನರು ನಮ್ಮ ತೋಬರಿಯೊಳಗಿನ ಕಾಳುಗಳನ್ನು ತಿನ್ನ ಹತ್ತಿದ ಮೇ ಲೆ, ತಿರುಗಿ ಯಾತರ ಮೇಲೆ ಹತ್ತಿಕೊಂಡು ಹೋಗುವರು! ” ಎಂದು ನಮಗೆ ಪ್ರಶ್ನೆ ಮಾಡಿದವು ” ಎಂದು ಉತ್ತರಕೊಟ್ಟು ತಮ್ಮ ಮಾರ್ಗವನ್ನು ಹಿಡಿ ದು ಹೋದರು.
- (೩೮, ಮುಂದೆ ಹೋಗಿ ಸಾಯಬೇಕೆನ್ನುವಿಯಾ ? )-
ಒಂದು ದಿವಸ ಬಾದಶಹನು ಯಾವ ಒಂದು ಉನ್ನತವಾದ ಸ್ಥಳದಮೇಲೆ ಹೋಗಬೇಕೆಂದು ನಿಚ್ಚಣಿಕೆಯನ್ನು ಹಚ್ಚಿ ಏರಹತ್ತಿದ್ದನು. ಆಗ ಬಾದಶಹನು, ನಾನು ಈ ನಿಚ್ಚಣಿಕೆಯ ಕಡೆಯ ಹಲ್ಲನ್ನು ಮುಟ್ಟುವದ ರೊಳಗಾಗಿ ನೀನು ನನಗೆ ನಗೆಯು ಬರುವಹಾಗೆ ಮಾಡದಿದ್ದರೆ ನಿನ್ನ ಆಯುಷ್ಯವು ಈ ದಿವಸ ತೀರಿತೆಂದು ತಿಳಿದುಕೊ ! ” ಎಂದು ಹೇಳಿದನು. ಆಗ ಬೀರಬಲನು ಅನೇಕ ಪ್ರಕಾರದ ಹಾಸ್ಯದ ಮಾತು ಕಥೆಗಳನ್ನು ಹೇಳಹತ್ತಿದನು, ಆದರೆ ಬಾದಶಹನು ಒಂದು ತುಟಿಯನ್ನು ಎರಡು ಮಾಡಲಿಲ್ಲ. ಇನ್ನು ಆ ನಿಚ್ಚಣಿಕೆಯ ಹಲ್ಲು ಒಂದೇ ಉಳಿಯಿತು. ಆಗ ಬೀರಬಲನು "ಯಾಕೆ ? ಈಗ ಮುಂದೆಹೋಗಿ ಸಾಯಬೇಕೆನ್ನು ವಿಯಾ ? ” ಎಂದು ನುಡಿದನು, ಅದನ್ನು ಕೇಳಿದಕೂಡಲೆ ಬಾದಶಹನು. ಕಿಲಕಿಲ ನಕ್ಕನು.
-( ೩೯, ವುನೋಚಂದ್ರಕೊ ಚೀರ ಕುಸುಮ ಚುವಾಯೋ.) -
ಒಂದು ಸಾರೆ ಬಾದಶಹನು ತನ್ನ ಪ್ರಿಯ ಪಾತ್ರಳಾದ ರಾಣಿಗೆ ತನ್ನ ಬಾಯಿಯಲ್ಲಿದ್ದ ವೀಳ್ಯವನ್ನು ತಿನಿಸಿದನು ಅವಳು ತಾಂಬೂಲವನ್ನು ಮುಖದಲ್ಲಿ ಇಟ್ಟುಕೊಂಡು ಹಿಂದಕ್ಕೆ ಸರಿಯಬೇಕೆನ್ನು ವಷ್ಟರಲ್ಲಿ ಬಾದಶ ಹನು ನಗುತ್ತ ಅವಳಕೈಯನ್ನು ಹಿಡಿದುಕೊಂಡನು ಈ ಪ್ರಕಾರ ಮಾಡಿದ ಬಾದಸಹನ ಕೃತಿಯನ್ನು ಕತಿಯನ್ನು ಕಂಡು ಬೇಗಮ್ಮಳಿಗೆ ನಗೆಯು ಬಂತುಮತ್ತು ಆ ನಗೆಯಸಂಗಡ (ಬಾಯೊಳಗಿನ ಉಗುಳಿನ ಒಂದುಹನಿಯು ಬಂದು ಬಾದಶಹನ ತೊಡೆಯಮೇಲೆ ಬಿತ್ತು ಆ ಕೂಡಲೆ ಬಾದಕಹನು ಆವಿಷಯದಮೇಲೆ ಒಂದು ಸಮಸ್ಯೆಯನ್ನು ರಚಿಸಿ ಸಭಾಸ್ಥಾನಕ್ಕೆ ಬಂದು ಈ ಸಮಸ್ಯೆಯನ್ನು ಪೂರ್ಣ ಮಾಡಿರಿ! ಎಂದು ಹೇಳಿದನು. ಸಭೆಯಲ್ಲಿದ್ದ ಪಂಡಿತರೆಲ್ಲರೂ ಸುಮ್ಮನೆ ಕುಳಿತುಕೊಂಡು ಬಿಟ್ಟರು. ಆಗ ಬೀರಬಲನು ಎದ್ದು ನಿಂತು ಈ ಕೆಳಗೆ ಬರೆದ ವವನ್ನು ಹೇಳಿದನು.

“ಏಕ ಸಮೈಪ್ರಿಯನೇ ಮುಖನೆ ಮುಖ ಬೋಲಕೆ ಅರತಮೋಲ ಖವಾಯೋ । ಚಂದ್ರಮುಖಿ ಮುಖನಾಯಕೆ ಆವನ ಜ್ಯೋಂಕರ ಬೋರಕೆ ಶಿಶನವಾಯೋ ॥ ಲಾಲ ಉರೋಜ ಗಹೆ ಕರಸ ಉಮ ಗೀಛತಿಯಾ ಜಿಯರಾ ಹುಲಸಾಯೋ । ಮುನಕಾತಹಿ ಕಗಿರಿ ಮುಖಸ ಮನೆಚುದ್ರಕೋಬೇರ ಕುನೂಮ ಚುವಾಯೋ ॥

ಬೀರಬಲನಿಗಂತೂ ಅಂತಃ ಪುರದಲ್ಲಿ ನಡೆದ ಯಾವ ಸಮಾಚಾರವೂ ಗೊತ್ತುಯಿಲ್ಲ, ಹೀಗಿದ್ದು ಸಮಯಾನುಸಾರವಾಗಿ ಸಮಸ್ಯೆಯನ್ನು ಸರಿಯಾಗಿ ಹ್ಯಾಗೆ ಪೂರ್ಣ ಮಾಡಿದನು ಎಂದು ಬಾದಶಹನಿಗೆ ಅತ್ಯಾಶ್ಚರ್ಯವಾಯಿತು.

-(೪೦ ”ಕಿಇಕಾರಣ ಡೋಲಮೆ ಹಾಲತವಾನಿ.“ )-

ಒಂದುದಿವಸ ಬಾದಶಹನು ಮೇಲುಪ್ಪರಿಗೆಯ ಮುಂದಿನ ಭಾಗದಲ್ಲಿ ನಿಂತುಕೊಂಡು ಮಾರ್ಗದಲ್ಲಿ ನಡೆಯುವ ಚಮತ್ಕಾರಗಳನ್ನು ನೋಡುತ್ತಿದ್ದನು ಆಗ ಅಕಸ್ಮಾತ್ತಾಗಿ ಬಗಲೊಳಗೆ ನೀರಿನಿಂದತುಂಬಿದ ಕೊಡವನ್ನು ಹೊತ್ತುಕೊಂಡು ಹೋಗುತ್ತಿರುವ ಒಬ್ಬ ಸುಂದರಿಯಮೇಲೆ ಬಾದಕಹನದೃಷ್ಟಿ ಯು ಬಿತ್ತು, ಅವಳು ಹೋಗುತ್ತಿರುವಾಗ ಕೊಡದೊಳಗಿನನೀರು ಇಲ್ಲಾಡು ತಿತ್ತು, ಅದನ್ನು ನೋಡಿದ ಕೂಡಲೆ ಬಾದಕಹನು (ಮೇಲೆ ಬರೆದ) ಒಂದು ಸಮಸ್ಯೆಯನ್ನು ರಚಿಸಿ, ಸಭಾಸ್ಥಾನಕ್ಕೆ ಬಂದು ಈ ಸಮಸ್ಯೆಯನ್ನು ಪೂರ ಮಾಡು? ಎಂದು ಬೀರಬಲನಿಗೆ ಆಜ್ಞಾಪಿಸಿದನು ಬೀರಬಲನು ಆ ಸಮಸ್ಯೆಯನ್ನು ಈ ಪ್ರಕಾರ ಪೂರ್ಣಮಾಡಿದನು

“ಏಕನಮೈ ಜಲಲಾವನಕೋಘರಸೋನಿಕಸೀ ಅಬಲಾಬ್ರಜನರೀ

ಜಾತಹಿಕೂವಮೆ ಡೋಲ ಭರ್ಯೋ ಜಲಖ್ಹೈ ಚನಮೇ ಅಗಿಯಾಮಸ

ಕಾನೀ | ದೇಖಿಸಭಾ ಉಧರೀಛತಿಯಾ ಕವಿಸತ್ಯ ಕಥೈ ಮನಸಾಲ
ಲಚಾನೀ : ಹಾಥವಿನಾ ಪಛಿತಾತರಹೀ ಇಹಿಕಾರಣ ಡೊಲಮೆಹಾ
ಲತವಾನೀ ||

ಬಾದಶಹನು ಈ ಕವನವನ್ನು ಕೇಳಿ ಬಹುಪ್ರಸನ್ನ ನಾದನು.

-(೪೧. “ ಕನಿಸ್ಯೋರವಿ ಘೋಡ ಪಹಾಡಕೆ ತಾಈ ")
ಬಾದಶಹನು ಒಂದು ದಿವಸ ಒಂಟಿಗನಾಗಿ ಯಮುನಾ ತಟಾಕಕ್ಕೆ ಸಂಚಾ ರಾರ್ಥವಾಗಿ ಹೋಗಿದ್ದನು, ಅಲ್ಲಿ ಒಬ್ಬಸುಂದರ ತರುಣಿಯು ತನ್ನ ಮೈಮೆಲಿನ ವಸ್ತ್ರಗಳನ್ನೆಲ್ಲ ತೆಗೆದಿಟ್ಟು ಒಂದು ಧೋತರವನ್ನುಟ್ಟುಕೊಂಡು ಸ್ನಾನಾರ್ಥವಾಗಿ ನದಿಯ ಪಾತ್ರೆಯಲ್ಲಿಳಿದು ಅವಗಾಹನ ಸ್ನಾನವನ್ನು ಮಾಡಿದಳು. ನೀರೊಳಗೆ ಮುಳುಗಿ ಮೇಲಕ್ಕೆದ್ದ ಕೂಡಲೆ ಅವಳ ಮುಂಗುರುಳುಗಳು ಮೊರೆಯನ್ನು ಆವರಿಸಿಕೊಂಡಿದ್ದವು. ಅದರಿಂದ ಅವುಗಳನ್ನು ಅವಳು ತನ್ನ ಎರಡೂಕೈಗಳಿಂದ ಹಿಂದಕ್ಕೆ ಸರಿಸಿಕೊಂಡಳು, ಅದನ್ನು ನೋಡಿ ಬಾದಶಹನು ಒಂದು ಸಮಸ್ಯೆಯನ್ನು ರಚನಾ ಮಾಡಿಕೊಂಡು ಸಭೆಗೆ ಬಂದ ಕೂಡಲೇ ಬೀರಬಲನನ್ನು ಕರೆದು ಈ ನಿಕಸ್ಯೂರವಿ :ಘೋಡ ಪಹಾಡಕೆ ತಾಈ ಎಂದು ಹೇಳಿ ಇದನ್ನು ಪೂರ್ಣಮಾಡು ! ಎಂದು ಆಜ್ಞಾಪಿಸಿದನು; - ಆಗ ಬೀರಬಲನು
ರಾತನಮೈ ರಸಕೇಲಿಕಿಯೋ ಅರುಭೋರಭಯೆ ಊಮಜ್ಜನ ಧಾಈ ನೀರಕೆಛೀರಮೆ ದೈಡುಬಕೀ ಯಮುನಾಜಲಮೆ ಜನಚಂದ್ರಿಕಾಛಾಈ ಲೈಡುಬಕೀ ಜಲಸೋ ನಿಕಸಿ ಉರ‍ಝೀ ಅಲಕೈಮುಜದೈ ಛಿತರಾಈ ದೋಊ ಕರಕೇಶ ಸಮಾರಲಿಯೆ ನಿಕಸ್ಯೋರವಿಘೋಡ ಪಹಾಡಕೆತಾಈ||
ಈ ಪದ್ಯವನ್ನು ಕೇಳಿದ್ದರಿಂದ ಬಾದಶಹನು ಅವನನ್ನು ಬಹಳ ಪ್ರ ಶಂಸೆ ಮಾಡಿದನು.

-(೪೨. ದೀಪದ ಬುಡದಲ್ಲಿ ಕತ್ತಲೆ.)-

ಒಂದು ಸಮಯದಲ್ಲಿ ಬಾದಶಹನೂ ಬೀರಬಲನೂ ಕೂಡಿಕೊಂಡು ಪಟ್ಟಣದ ಕಡೆಯ ಉಕ್ಕಡದಕೋಟೆಯ ಕೊತ್ತಳದಮೇಲೆ ಕುಳಿತುಕೊಂಡು ಆ ಸಮಂತಾದ್ಭಾಗದಲ್ಲಿದ್ದ ವನಶ್ರೀಯನ್ನು ಅವಲೋಕಿಸುತ್ತ ಕುಳಿತುಕೊಂಡಿದ್ದರು, ಆಗ ಬಾದಶಹನು ದೂರದಲ್ಲಿ ಅವಲೋಕಿಸುತ್ತಿರಲು ಕಳ್ಳರು ಸುಲಿದು ಕೊಳ್ಳುತ್ತಿರುವ ಒಬ್ಬ ಪಥಿಕನು ಕಂಡುಬಂದನು, ಅಪ್ಪರಲ್ಲಿ ಕಳ್ಳರಿಂದ ಬಿಡಲ್ಪಟ್ಟವನಾಗಿ ಆ ಪಧಿಕನು, ಬಾದಶಹನು ಕುಳಿತುಕೊಂಡಿದ್ದ ಕೊತ್ತ ಳದ ಬುಡದಲ್ಲಿ ಬಂದು ಬಾದಶಹನಿಗೆ ಸಲಾಮುಮಾಡಿ ಪೃಥ್ವಿನಾಥ ? ದರಿದ್ರನಾದ ನಾನು ತಮ್ಮ ಸಮ್ಮುಖದಲ್ಲಿಯೇ ಕಳ್ಳರಿಂದ ಸುಲಿಗೆ ಮಾಡಿಸಿಕೊಳ್ಳಲ್ಪಟ್ಟೆನು ” ಎಂದು ನಿವೇದಿಸಿದನು. ಆಮಾತು ಬಾದಶಹನ ಕಿವಿಗೆ ಬಿದ್ದ ಕೂಡಲೆ ಸಿಟ್ಟಿಗೆದ್ದು ಬೀರಬಲನಕಡೆಗೆ ನೋಡುತ್ತ . " ಬೀರಬಲ ! ನೀನು ರಾಜ್ಯದಲ್ಲಿ ಮಾಡಿದ್ದ ಯೋಗ್ಯವ್ಯವಸ್ಥೆಯು ಇದೇ ಪ್ರಕಾರದ್ದಿರುವಂತೆ ಕಂಡುಬರುತ್ತಡೆ. ನಮ್ಮ ಸಮ್ಮುಖದಲ್ಲಿಯೇ ಈ ಬಡವನನ್ನು ಕಳ್ಳರು ಸುಲಿದು ಕೊಂಡುಬಿಟ್ಟರು, ಅಂದಮೇಲೆ ನಮ್ಮ ಅಪರೋಕ್ಷದಲ್ಲಿ ಪ್ರಜೆಗಳ ದುರವಸ್ಥೆಯು ಏನಾಗುತ್ತಿರಬಹುದು ?” ಎಂದು ಪ್ರಶ್ನೆ ಮಾಡಿದನು, ಆಗ ಬೀರಬಲನು ದೈರ್ಯದಿಂದ “ ಪೃಥ್ವಿಪತಿಯೆ ? ದೀಪದ ಬುಡದಲ್ಲಿ ಕತ್ತಲೆಯು ಇದ್ದೇಯಿರುವದು ” ಎಂದು ಉತ್ತರಕೊಟ್ಟನು. ಈ ಉತ್ತರದಿಂದ ಬಾದಶಹನಿಗೆ ಆನಂದವಾಯಿತು.

-[೪೩. ಯಾವಕಾಲವು ಹಿತಕರವಾದದ್ದು ! ]

ಒಂದುದಿವಸ ಬಾದಶಹನು ರಾಜಕಾರ್ಯದಿಂದ ನಿವೃತ್ತನಾಗಿ ಸಭಾಸದರೊಡನೆ ವಿನೋದದಿಂದ ಮಾತಾಡುತ್ತ ಕುಳಿತುಕೊಂಡಿದ್ದನು, ಆಗ ಎಲ್ಲ ಸಭಾಸದರನ್ನು ಕುರಿತು. ( ಪ್ರಜೆಗಳಿಗೆ ಯಾವಕಾಲವು ಹಿತಕರವಾದದು ಎಂದು ಪ್ರಶ್ನೆ ಮಾಡಿದನು. ಆಗ ಅಲ್ಲಿ ಕುಳಿತುಕೊಂಡಿದ್ದ ಕೆಲವರು ಹಿಮಕಾಲವು ಹಿತವಾದದ್ದೆಂದೂ, ಕೆಲವರು ಉಷ್ಣಕಾಲವು ಹಿತವಾದದ್ದೆಂತಲೂ ಕೆಲವರು ವರ್ಪಾಕಾಲವು ಹಿತಕರವಾದದ್ದೆಂದೂ ತಮ್ಮ ತಮ್ಮ ಮನಸ್ಸಿಗೆ ತಿಳಿದಹಾಗೆ ಹೇಳಿದರು. ಈ ಉತ್ತರದಿಂದ ಬಾದಶಹನಿಗೆ ಸಂತೋಷವಾಗಲಿಲ್ಲ ಆಗ ಅವನು ಬೀರಬಲನಿಗೆ ಕೇಳಿದನು ಆಗ ಬೀರಬಲನು. " ಸ್ವಾಮಿ ಹೊಟ್ಟೆತುಂಬಿದ ಮೇಲೆ ಎಲ್ಲಕಾಲಗಳೂ ಹಿತಕರಗಳಾಗಿಯೇ ಪರಿಣಮಿಸುವವು ಬುಭುಕ್ಷಿತನಾದವನಿಗೆ ಯಾವ ಕಾಲದಲ್ಲಿಯಾದರೂ ಸುಖವು ದೊರೆಯಲಾರದು” ಎಂದು ಹೇಳಿದನು, ಇದರಿಂದ ಬಾದಶಹನಿಗೆ ಸಂತೋಷವಾಯಿತು.

-[೪೪, ಲೋಟಾ ನಥಾ.]-

ಒಂದುದಿವಸ ಬಾದಶಹನು ಬೀರಬಲನನ್ನು ಕುರಿತು "ಬ್ರಾಹ್ಮಣನು ನೀರಡಿಸಿದ್ದು ಯಾಕೆ ? ಮತ್ತು ಕತ್ತೆಯು ಉದಾಸೀನತೆಯನ್ನು ಯಾಕೆ ಧರಿಸಿದೆ ! ” ಎಂದು ಎರಡು ಪ್ರಶ್ನೆಗಳನ್ನು ಮಾಡಿದನು. ಆ ಕೂಡಲೆ ಬೀರಬಲನು " ಲೋಟಾನಥಾ ” ಎಂದು ಉತ್ತರಕೊಟ್ಟನು. ಅದುಹ್ಯಾಗೆ ವಿವರಿಸಿಹೇಳು ? ಎಂದು ಬಾದಶಹನು ಕೇಳಿದನು, ಅದಕ್ಕೆ ಬೀರಬಲನು ಬ್ರಾ) ಹ್ಮಣನ ಹತ್ತರ ತಂಬಿಗೆಯು ಇಲ್ಲದ್ದರಿಂದ ಅವನು ನೀರಡಿಸಿ ಇರಬೇಕಾಯಿತು, ಕತ್ತೆಗೆ ಮನಮುರಿ ಸಂಚಾರವಾಗದ್ದರಿಂದ ಅದು ಉದಾಸೀನತೆಯನ್ನು ಧರಿಸಿದೆ " ಎಂದು ವಿಸ್ತರಿಸಿ ಹೇಳಿದನು. ಬಾದಶಹನು ತಾನು ಮಾಡಿದ ಎರಡು ಪ್ರಶ್ನೆಗಳಿಗೆ ಸಮರ್ಪಕವಾದ ಒಂದೇ ಉತ್ತರವು ಬಂದದ್ದನ್ನು ನೋಡಿ ಸಂತೋಶ್ರಿತನಾದನು.

-[೪೫, ನಾಲ್ಕು ಪ್ರಶ್ನೆಗಳು.]-

ಒಂದು ಸಾರೆ ಬಾದಶಹನು ಬೀರಬಲನಿಗೆ ಕೇಳುತ್ತಾನೆ; - "ಮಳೆಗಾಲವನ್ನು ಯಾರು ಅಪೇಕ್ಷಿಸುವರು! ಬಿಸಿಲನ್ನು ಅಪೇಕ್ಷಿಸುವವರು ಯಾರು ವಾಕ್ಪುಟತೆಯನ್ನು ಯಾರು ಅಪೇಕ್ಷಿಸುವರು? ಯಾರು ಮೌನವಾಗಿರುವದನ್ನು ಅಪೇಕ್ಷಿಸುವರು! " ಈ ನಾಲ್ಕು ಪ್ರಶ್ನೆಗಳಿಗೆ ನಿನ್ನಿಂದ ಸಮರ್ಪಕ ಉತ್ತರವು ದೊರೆಯದಿದ್ದರೆ ನಿನಗೆ ಪ್ರಾಣದಂಡನೆಯನ್ನು ವಿಧಿಸುತ್ತೇನೆಂದು ಹೇಳಿದನು. ಆ ಕಡಲೆ ಬೀರಬಲನು;-
"ಮಾಲೀಚಾಹೈ ಬರಸನಾ, ಧೋಬಿಚಾಹೈ ಧೂಪ |
ಸಾಹಜುಚಾಹೈ ಬೋಲನಾ, ಚೋರಜುಚಾ ಧೂಪ"॥
ಬಾದಶಹ -ಈ ಪದ್ಯವನ್ನು ನೀನು ಒಳ್ಳೇ ಸರಸಾಗಿ ಹೇಳಿದಿ? ಆದರೆ ಅದರಿಂದ ನನಗೆ ಆಗತಕ್ಕಷ್ಟು ಸಂತೋಷವಾಗಲಿಲ್ಲ, ಅದರಿಂದ ಮತ್ತೊಂದು ಪ್ರಕಾರವಾಗಿ ಹೇಳು!

ಅತಿಕಾಭಲಾ ನ ಬರಸನಾ, ಅತಿಕ್ ಭಲೇ ನ ಧೂಪ ।
ಅತಿಕಾಭಲಾನ ಬೋಲನಾ, ಅತಿಕೀಭವೀ ನ ಚೂವ ॥

-(೪೬. ಯಾರು ಏನನ್ನು ಮಾಡಲಾರರು! )

ಒಂದುದಿವಸ ಬಾದಶಹನು ರಾಜಕಾರ್ಯಗಳಿಂದ ನಿವೃತ್ತನಾಗಿ ವಿನೋದದಿಂದ ಮಾತಾಡುತ್ತಕುಳಿತಿರಲು, ಬಾದಶಹನಿಗೆ ಒಂದು ಪದ್ಯವು ಸ್ಮರಣೆಗೆ ಬಂತು ಅದುಯಾವದೆಂದರೆ;

ಕಹಾನ ಅಬಲಾ ಕರಸಕೈ, ಕಹಾನಸಿಂಧು ಸಮಯ।
ಕಹಾನ ಪಾವಕಮೆ ಜಲೈ ಕಾಹಿಕಾಲ ನಹಿಖಾಯ॥

ಈ ವದ್ಯದ ಉತ್ತರವನ್ನು ಈಗಿಂದೀಗ ಹೇಳಬೇಕೆಂದು ಬೀರಬಲನಿಗೆ ಆಜ್ಞಾಪಿಸಿದನು. ಬೀರಬಲನು - ಸುತನಹಿ ಅಬಲಾ ಕರಸಕೈ ಯಶನಹಿಸಿಂಧು ಸಮಾಯ। ಧರ್ಮನಾವಕಮೆ ಜಲೈ: ನಾಮಕಾಲ ನಹಿಖಾಯ॥ " ಎಂಬ ಪದ್ಯದಿಂದ ಉತ್ತರಕೊಟ್ಟನು. ಈ ಉತ್ತರದಿಂದ ಬಾದಶ ಹನು ಸಂತುಷ್ಟನಾಗಿ ಪಾರಿತೋಷಕವನ್ನಿತ್ತನು,
೪೭. ನೂರು ಗೋವುಗಳನ್ನು ರಕ್ಷಿಸುವದೂ, ಅಥವಾ ಕೊಲ್ಲಿಸುವದೂ ನಿಮ್ಮ ಕೈಯಲ್ಲಿಯೇ ಅದೆ,
ಒಂದುದಿವಸ ಬೀರಬಲನಿಗೂ ಮತ್ತು ತಾನಸೇನನಿಗೂ ತಮ್ಮ ತಮ್ಮ ಲಿದ್ದ ಗುಣಗಳು ಶ್ರೇಷ್ಟವಾದದ್ದೆಂಬದರ ಬಗ್ಗೆ ವಾದವಿವಾದವು ನಡೆಯಿತು, ಆಗ ಬಾದಶಹನು " ಈ ಪ್ರಕಾರ ನೀವಿಬ್ಬರೂ ವಾದವಿವಾದಮಾಡುತ್ತ ಕುಳಿತುಕೊಳ್ಳುವದು ಸರಿಯಾದದ್ದಲ್ಲ. ಆದ್ದರಿಂದ ನೀವಿಬ್ಬರೂ ಕೂಡಿ ಯಾವನಾದರೊಬ್ಬ ಮೂರನೆಯವನ ಹತ್ತಿರ ಹೋಗಿ ನ್ಯಾಯದ ನಿರ್ಣಯವನ್ನು ಮಾಡಿಕೊಂಡು ಬರ್ರಿ ” ಎಂದು ಹೇಳಿದನು. ಆಗ ಅವರಿಬ್ಬರು ತಾವು ಯಾರ ಬಳಿಯಲ್ಲಿ ಹೋಗೆಂದು ಹೇಳುವಿರೋ ಅಲ್ಲಿಗೆ ಹೋಗುತ್ತೇವೆ ಎಂದು ಉತ್ತರಕೊಡಲು, ಬಾದಶಹನು- ಮಹಾರಾಣಾ ಪ್ರತಾಪಸಿಂಹನ ಬಳಿಯಲ್ಲಿ ಹೋಗಿರಿ; ಎಂದು ಆಜ್ಞಾಪಿಸಿದನು. ಆ ಕೂಡಲೇ ಅವರಿಬ್ಬರು ಉದಯಪುರಕ್ಕೆ ಬಂದರು, ತಾನಸೇನನು ಗಾನನಿಪುಣನಿದ್ದನು ಅವನು ಮಹಾರಾಣಾಜಿಯ ಬಳಿಯಲ್ಲಿ ಹೋಗಿ ಗಾಯನವಾದನವನ್ನಾರಂಭಿಸಿದನು ಬೀರಬಲನು ಸಮಯ ನಿರೀಕ್ಷಣೆ ಮಾಡುತ್ತ ಕುಳಿತುಕೊಂಡನು. ಆಗ ಬೀರಬಲನ ಮನಸ್ಸಿನಲ್ಲಿ ತಾನಸೇನನು ತನ್ನ ಗಾನ ನೈಪುಣ್ಯದಿಂದ ಮಹಾರಾಣಾಜಿಯ ಮನಸ್ಸನ್ನು ಒಲಿಸಿಕೊಂಡು ಜಯಪತ್ರವನ್ನು ಹೊಂದಿ ಹೋಗಬಹುದು, ಎಂದು ಯೋಚಿಸಿ ಸ್ವಲ್ಪ ಮುಂದೆ ಬಂದು ನಮಸ್ಕಾರ ಮಾಡಿ, ಮಹಾರಾಣಾಜಿಯವರೇ ? ನಾವಿಬ್ಬರೂ ಬಾದಶಹನಿಂದ ಆಜ್ಞಪ್ತರಾಗಿ ತಮ್ಮ ಸನ್ನಿಧಿಗೆ ಬರುವ ಸಮಯದಲ್ಲಿ ನಾನುತಮ್ಮ ಪುಷ್ಕರಕ್ಷೇತ್ರದಲ್ಲಿ ಹೋಗಿ “ ನಾನು ಮಹಾರಾಣಾ ಜಿಯವರಿಂದ ಜಯಪತ್ರವನ್ನು ಹೊಂದಿದರೆ ಒಂದುನೂರು ಗೋವುಗಳನ್ನು ದಾನಮಾಡುತ್ತೇನೆಂದು ” ಸಂಕಲ್ಪ ಮಾಡಿಕೊಂಡು ಬಂದಿದ್ದೇನೆ, ತಾನಸೇನನು ಖಾಜೇಸಾಹೇಬನ ದರಗಾಕ್ಕೆ ಹೋಗಿ ನನಗೆ ಈ ಪ್ರಸಂಗದಲ್ಲಿ ರಾಣಾಜಿಯವರು ಮಾನಪತ್ರವನ್ನು ಕೊಟ್ಟರೆ ನಿನ್ನ ದರಗಾದ ಎದುರಿಗೆ ಒಂದು ನೂರು ಆಕಳುಗಳನ್ನು ಕೊಲ್ಲುತ್ತೇನೆ; - ಎಂಬದಾಗಿ ನಿಶ್ಚಯಮಾಡಿಕೊಂಡು ಬಂದಿದ್ದಾನೆ, ಆದ್ದರಿಂದ ನೂರು ಆಕಳುಗಳನ್ನು ಕೊಲ್ಲಿಸುವ ಅಥವ ಉಳಿಸುವದೂ ನಿಮ್ಮ ಕೈಯೊಳಗೇ ಆದೆ ಎಂದನು. ಆಗ ರಾಣಾಜಿಯು ಬೀರಬಲನು ಒಳ್ಳೆ ಗುಣವಂತನಿದ್ದಾನೆ ಎಂದು ಬರೆದು ಕಳುಹಿಸಿದನು. ತಾನ

ಸೇನನು ಬಾಯಿಮುಚ್ಚಿಕೊಂಡು ಸುಮ್ಮನೇ ಬಂದುಬಿಟ್ಟನು,
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,
೧೦೧


೪೮. ಖುರಾನ ಎಂಬ ಗ್ರಂಥಕ್ಕೆ (೦) ಬಿಂದುವಿಲ್ಲದೆ ಇರುವ ಶಬ್ದಗಳಿಂದ ಮಾಡಿದ ಟೀಕೆಯು,,

ಮುಸಲ್ಮಾನ ಜಾತಿಯಲ್ಲಿ ಒಳ್ಳೇ ಪ್ರಸಿದ್ಧ ವಿದ್ವಾಂಸನಾಗಿಯೂ ಪ್ರತಿಷ್ಠಿತ ಮಂತ್ರಿಯಾಗಿಯೂ ಇದ್ದ ಶೇಖಫೈಜಿ ಎಂಬವನು ಖುರಾನಕ್ಕೆ "ಸವಾಹತ ಉಲ್ ಇಲಹಾಮ್ ” ಎಂಬ ಹೆಸರಿನ ಟೀಕಾಗ್ರಂಥವನ್ನು ಬರೆದನು. ಅದರಲ್ಲಿ ಬಿಂದುವಿಲ್ಲದ ಶಬ್ಬಗಳೇ ಬಂದಿದ್ದವು, ಇಂಥ ಅಮೌಲಿಕ ಗ್ರಂಥವನ್ನು ಹಿಂದಕ್ಕೆ ಯಾರೂ ರಚಿಸಿದ್ದಿಲ್ಲ; ಯಾಕಂದರೆ ಫಾರಸೀ, ಮತ್ತೂ ಅರಬ್ಬಿ ಅಕ್ಷರಗಳಲ್ಲಿ ಬಿಂದುವಿಲ್ಲದ ಅಕ್ಷರಗಳು ಹದಿನೈದು, ಬಿಂದುವಿನಿಂದ ಕೂಡಿದ ಅಕ್ಷರಗಳು ಹದಿನೆಂಟು ಇರುವವು ಈ ಕೆಲಸವು ಒಳ್ಳೆ ಪ್ರಶಂಸಾರ್ಹವಾಗಿತ್ತು, ಆದರೆ "ಬಿಸಮಿಲ್ಲಾ” ಎಂಬ ಶಬ್ದವನ್ನು ಬರೆಯುವದಕ್ಕೆ ಅವನಿಗೆ ಗ್ರಂಥಾರಂಭದಲ್ಲಿಯೇ ಸಂದೇಹವುಂಟಾಯಿತು. ಯಾಕಂದರೆ- ಈ ಶಬ್ಬವನ್ನು ಬರೆಯುವದು ಬಹುಕಾಲದಿಂದ ಮುಸಲ್ಮಾನರಲ್ಲಿ ಪ್ರಚಾರವಿತ್ತು ಆದರೆ ಆ ಶಬ್ಬವು ಬಿಂದುವಿಲ್ಲದೆ ಬರಿಯಲಿಕ್ಕೇ ಬರುವಂತೆಯಿದ್ದಿಲ್ಲ ಅದರಿಂದ ಅವನು ಬಹಳಚಿಂತೆಗೊಳಗಾದನು. ಕಡೆಗೆ ಅವನು ಬೀರಬಲನ ಬಳಿಗೆ ಬಂದು, "ಮಿತ್ರವರ್ಯ ? ನಾನು ಬಿಂದುವಿಲ್ಲದ ಶಬ್ದಗಳಿಂದ ಖುರಾನಕ್ಕೆ ಟೀಕೆಯನ್ನು ಬರೆದಿದ್ದೇನೆ. ಆದರೆ ಗ್ರಂಥಾರಂಭದಲ್ಲಿ "ಬಿಸಮಿಲ್ಲಾ", ಎಂಬ ಶಬ್ಬವನ್ನು ಹಾಕುವ ಪದ್ಧತಿಯು ನಮ್ಮ ಜನರಲ್ಲಿ ಉಂಟು; ಆದರೆ ಆ ಶಬ್ಬವು ಬಿಂದುವಿಲ್ಲದೆ ಬರೆಯಲಿಕ್ಕೆ ಬರುವದಿಲ್ಲ. ಆದರಿಂದ ಆ ಸ್ಥಳದಲ್ಲಿ ಯಾವ ಶಬ್ಧದ ಯೋಜನೆಮಾಡಲಿ, ಎಂದು ಕೇಳಿದನು, ಬೀರಬಲನು ಒಳ್ಳೇ ದೂರದರ್ಶಿಯಾಗಿದ್ದದರಿಂದ ಆ ಕೂಡಲೆ "ಕಲಮಾ, ಎಂದು ಬರೆ;" ಎಂದು ಹೇಳಿದನು. ಆಗ ಪೈಜಿಯು ಅವನ ಜಾಣತನಕ್ಕೆ ತಲೆದೂಗಿದನು. “ ಕಲಮಾ ಎಂಬ ಶಬ್ಬದಲ್ಲಿ ಬಿಂದುವೇ ಬರುವಂತೆ ಇದ್ದಿಲ್ಲ, ಕಡೆಗೆ ಪೈಜಿಯು "ಪಂಡಿತ ಮಹಾಶಯ ? ಈ ಒಂದೇ ಶಬ್ದವನ್ನು ನೀನು ನನಗೆ ಹೇಳಿದ್ದರಿಂದ ಈ ಗ್ರಂಥದಲ್ಲಿ ಗುರುವಿನ ಸ್ಥಾನದಲ್ಲಿ ನಿನ್ನ ಹೆಸರನ್ನು ಬರೆಯುತ್ತೇನೆ ಎಂದು ಹೇಳಿದನು.

-(೪೯ ಯಾತರದು ಒಳ್ಳೇದು.)-,

ಒಂದು ದಿವಸ ಬಾದಶಹನು ಓಲಗದಲ್ಲಿ ಕುಳಿತುಕೊಂಡಿದ್ದನು. ರಾಜಕಾರ್ಯಗಳ ವಿಚಾರಣೆಯ ನಡೆದಿತ್ತು ? ಆಷ್ಟರಲ್ಲಿ ಬೀರಬಲನು ಸಭಾಸ್ಥಾನಕ್ಕೆ

ಬಂದನು ಅದನ್ನು ಕಂಡು ಬಾದಶಹನು; “ಕ್ಷೀರವು ಯಾವ
೧೦೨
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,


ಪ್ರಾಣಿಯದು ಒಳ್ಳೇದು; ಯಾವ ವೃಕ್ಷದ ಪರ್ಣಗಳು ಶ್ರೇಷ್ಟವು ಯಾವ ಪುಷ್ಪವು ಶ್ರೇಷ್ಠವಾದದ್ದು; ಯಾವ ಫಲವು ಉತ್ತಮ? ಯಾವ ರಾಜನು ಶ್ರೇಷ್ಠನು ಯಾವ ಮಾಧುರ್ಯವು ಶ್ರೇಷ್ಠವಾದದ್ದು?" ಎಂದು ಪ್ರಶ್ನೆ ಮಾಡಿದನು. ಬೀರಬಲನ ಹೊರತು ಉಳಿದ ಸಭಾಸದರೆಲ್ಲರು ಸುಮ್ಮನೆ ಕುಳಿತುಕೊಂಡರು ಬೀರಬಲನು ಕೈಮುಗಿದು "ಜೀಯಾ! ಕ್ಷೀರವು ಮಾತೆಯದು ಶ್ರೇಷ್ಠವಾದದ್ದು ಯಾಕೆಂದರೆ, ಸ್ತನ್ಯಪಾನದಿಂದಲೇ ಯಾವತ್ತು ಪ್ರಾಣಿಗಳ ಪಾಲನೆ ಪೋಷಣೆಯಾಗುವದು ವೀಳ್ಯದ ಎಲೆಯು ಶ್ರೇಷ್ಠವಾದದು: ಯಾಕಂದರೆ ಯಾವದಾದರೊಂದು ಕಾರ್ಯಕ್ಕೆ ಕೈಹಾಕಿದ ಮನುಷ್ಯನಿಗೆ, ಅವನ ಯಜಮಾನನು ನೆರೆದ ಸಭೆಯಲ್ಲಿ ವೀಳ್ಯವನ್ನು ಕೊಡುತ್ತಾನೆ. ಅದರಿಂದ ವೀಳ್ಯವನ್ನು ಸ್ವೀಕರಿಸಿದ ಮನುಷ್ಯನು ತನ್ನ ಪ್ರಾಣಾಂತ್ಯದವರೆಗೂ ಕಾರ್ಯವನ್ನು ಮಾಡಿಯೇ ತೋರಿಸುತ್ತಾನೆ. ಪುಷ್ಪಗಳಲ್ಲಿ ಹತ್ತಿಯ ಹೂವು ಶ್ರೇಷ್ಠವಾದದ್ದು ಯಾಕಂದರೆ ಆ ಪುಷ್ಪದಿಂದಲೇ ಯಾವತ್ತು ಮನುಷ್ಯ ಪ್ರಾಣಿಗಳ ಮಾನವು ಉಳಿಯುತ್ತದೆ. ಇನ್ನು ಫಲಗಳಲ್ಲಿ ಪುತ್ರಫಲವು ಅಧಿಕವಾದದ್ದು; ಯಾಕಂದರೆ ಆ ಪುತ್ರನಿಂದ ಕುಲಕೋಟಿಗಳೆಲ್ಲ ಉದ್ಧೃತವಾಗುತ್ತವೆ ರಾಜರಲ್ಲಿ ಇಂದ್ರನು ಶ್ರೇಷ್ಠನಾದವನು ಯಾಕಂದರೆ ಇಂದ್ರನು ವೃಷ್ಢಿಯನ್ನುಂಟು ಮಾಡಿ ಯಾವತ್ತೂ ಚರಾಚರಗಳನ್ನು ರಕ್ಷಿಸುತ್ತಾನೆ. ಮಾಧುರ್ಯದಲ್ಲಿ ವಾಂಘ್ಮಾಧುರ್ಯವು ಶ್ರೇಷ್ಠವಾದದ್ದು ಯಾಕಂದರೆ ವಾಂಘ್ಮಾಧುರ್ಯದಿಂದ ಯಾವತ್ತೂ ಜನರ ಮನಸ್ಸನ್ನು ಒಲಿಸಿಕೊಳ್ಳುವದಕ್ಕೆ ಬರುತ್ತದೆ.

-( ೫೦. ದಂಡನೆಗೆ ಪ್ರತಿಯಾಗಿ ಪಾರಿತೋಷಕವು.)-

ದಿಲ್ಲಿಯಲ್ಲಿ ಒಬ್ಬ ಮನುಷ್ಯನಿದ್ದನು ಅವನ ಮುಖವನ್ನು ಪ್ರಾತಃಕಾಲದಲ್ಲಿ ಎದ್ದ ಕೂಡಲೆ ಅವಲೋಕನ ಮಾಡಿದರೆ, ಸಂಜೆಯವರೆಗೆ ನೋಡಿದವನಿಗೆ ಅನ್ನವು ಸಿಗುವದಿಲ್ಲ" ಎಂದು ಜನರಲ್ಲಿ ದೃಢನಂಬಿಗೆಯು ಉತ್ಪನ್ನವಾಗಿತ್ತು ಅದರಿಂದ ಮಧ್ಯಾಹ್ನದವರೆಗೆ ಆ ಮನುಷ್ಯನ ಮುಖವನ್ನು ನೋಡಲಿಕ್ಕೆ ಯಾರೂ ಇಷ್ಠಪಡುತ್ತಿದ್ದಿಲ್ಲ ಈ ವಾರ್ತೆಯು ಕರ್ಣೋಪಕರ್ಣವಾಗಿ ಬಾದಶಹನಿಗೆ ತಲುಪಿತು. ಆಗ ಅವನು ಆ ಮಾತನ್ನು ಪರೀಕ್ಷಿಸಿ ನೋಡಬೇಕೆಂದು ನಿಶ್ಚಯಿಸಿ, ಆ ಮನುಷ್ಯನನ್ನು ಕರೆಯಿಸಿಕೊಂಡು ತನ್ನ ಅಂತಃಪುರದಲ್ಲಿ ಒಂದು ದಿವಸ ಇಟ್ಟುಕೊಂಡನು. ಮರುದಿವಸ ಪ್ರಾತಃಕಾಲದಲ್ಲಿ ಎದ್ದ ಕೂಡಲೆ ಮೊಟ್ಟಮೊದಲು ಬಾದಶಹನು ಅವನ ಮುಖವನ್ನವಲೋಕಿಸಿದನು, ಭೋಜನ ಸಮಯವು ಸಮೀಪಿಸಿತು ಸೇವಕರು ಸುವರ್ಣಪಾತ್ರೆಗಳಲ್ಲಿ ಭೋಜನವನ್ನು ಸಿದ್ಧಪಡಿಸಿ ತಂದಿಟ್ಟರು. ಆಗ ಪಾತ್ರೆಯಲ್ಲಿ ಅಕಸ್ಮಾತ್ತಾಗಿ ಒಂದು ಹಲ್ಲಿಯು ಬಿತ್ತು ಅದರಿಂದ ಅನ್ನವೆಲ್ಲ ಅಪವಿತ್ರವಾಯಿತು.ಆಗ ಬಾದಶಹನ ಮನಸ್ಸಿನಲ್ಲಿ "ಆ ಮನುಷ್ಯನ ಮುಖದರ್ಶನ ದೋಪದಿಂದಲೇ ಈ ಪ್ರಮಾದವುಂಟಾಯಿತು ಇಂಥ ಮನುಷ್ಯನು ಈ ಪಟ್ಟಣದಲ್ಲಿರುವದು ಯಾಕೆ ಈ ಪೃಥ್ವಿಯಲ್ಲೇ ಇರಬಾರದು :” ಎಂದು ನಿಶ್ಚಯಿಸಿ ಅವನನ್ನು ಗಲ್ಲಿಗೆ ಹಾಕಬೇಕೆಂದು ಅಪ್ಪಣೆಮಾಡಿದನು.
ರಾಜಾಜ್ಞೆಯಂತೆ ಕರ್ಮಚಾರಿಗಳು ಆ ದುರ್ದೈವಿಯನ್ನು ವಧಾಸ್ಥಾನಕ್ಕೆ ತೆಗೆದುಕೊಂಡು ಹೋದರು. ಈ ವಾರ್ತೆಯು ಬೀರಬಲನ ಕರ್ಣದ ಮೇಲೆ ಬಿತ್ತು. ನಿರಪರಾಧಿಯಾದ ಮನುಷ್ಯನನ್ನು ವ್ಯರ್ಥ ಮರಣಕ್ಕೆ ಗುರಿಯಾಗಗೊಡುವುದು ಅನುಚಿತವಾದದ್ದು ! ಎಂದು ಯೋಚಿಸಿ ಆ ಮನುಷ್ಯನ ಹತ್ತಿರ ಬಂದು: “ನೀನು ಧೈರ್ಯಗುಂದಬೇಡ ! ನಾನು ನಿನ್ನ ಜೀವವನ್ನು ಉಳಿಸಿಕೊಳ್ಳುವೆನು ನಾನು ಹೇಳಿದಂತೆ ಕೇಳು. ನಿನ್ನನ್ನು ವಧಸ್ಥಂಭಕ್ಖೇರಿಸುವ ಮೊದಲು ಕರ್ಮಚಾರಿಗಳು “ನಿನ್ನ ಅಂತಿಮ ಇಚ್ಛೆಯೇನಿರುವದೆಂದು ಕೇಳುವರು ಆಗ ನೀನು "ನನ್ನ ಮುಖಾವಲೋಕನದಿಂದ ಜನರಿಗೆ ಒಂದು ದಿವಸ ಉಪವಾಸವು ಒದಗುತ್ತದೆ. ಆದರೆ ಬಾದಶಹನ ಮುಖಾವಲೋಕನ ಮಾಡಿದ ಮನುಷ್ಯನಿಗೆ ಮರಣವೇ ಪ್ರಾಪ್ತವಾಗುತ್ತದೆ. ಹ್ಯಾಗಂದರೆ ಈ ದಿವಸ ಪ್ರಾತಃಕಾಲದಲ್ಲಿ ಬಾದಶಹನು ನನ್ನ ಮುಖಾವಲೋಕನ ಮಾಡಿದಂತೆ ನಾನಾದರೂ ಮೊಟ್ಟಮೊದಲು ಬಾದಶಹನ ಮುಖವನ್ನೇ ಅವಲೋಕಿಸಿದೆನು.ಅದರಿಂದ ಈ ದಿವಸ ನನಗೆ ಮರಣವು ಪ್ರಾಪ್ತವಾಯಿತು. ಅದರಿಂದ ಪ್ರಾತಃಕಾಲದಲ್ಲಿ ಯಾರೂ ಬಾದಶಹನ ಮುಖವನ್ನು ನೋಡಬೇಡಿರಿ, ಎಂಬದಾಗಿ ಹೇಳಿಬಿಡು., ಎಂದು ಕಲಿಸಿಕೊಟ್ಟು, ಅಲ್ಲಿಂದು ಹೊರಟು ಹೋದನು.

ಯೋಗ್ಯ ಸಮಯದಲ್ಲಿ ಕರ್ಮಚಾರಿಗಳು ಪ್ರಶ್ನೆ ಮಾಡಿದ ಕೂಡಲೆ, ಬೀರಬಲನ ತೀಕ್ಷಾನು ಸಾರವಾಗಿ ಆ ಮನುಷ್ಯನು ಕರ್ಮಚಾರಿಗಳ ಮುಂದೆ ಹೇಳಿದನು. ಆಗ ಕರ್ಮಚಾರಿಗಳು ಈ ಸಂಗತಿಯನ್ನು ಬಾದಶಹನಿಗೆ ತಿಳಿಸಿದರು.ಆಗ ಬಾದಶಹನ ಮನಸಿಗೆ ಬಹುವಿಷಾದವಾಯಿತು ಕೂಡಲೆ ಆ ಮನುಷ್ಯನನ್ನು ತನ್ನ ಬಳಿಗೆ ಕರೆಯಿಸಿಕೊಂಡು ಕೆಲವು ದ್ರವ್ಯವನ್ನು ಪಾರಿತೋಷಕವಾಗಿ ಕೊಟ್ಟು ಕಳುಹಿಸಿದನು.
೧೦೪
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,


-(೫೧. ಚತುರ ಮತ್ತು ಮೂರ್ಖ.)-

ಒಂದು ದಿನ ಬಾದಕಹನು ರಾಜಕಾರ್ಯ ಸಮಾಪ್ತಿಯ ನಂತರ ಅನ್ನುತ್ತಾನೆ, "ಬೀರಬಲ ಈ ಸಂಸಾರದಲ್ಲಿ ಚತುರರು ಯಾರು ಮೂರ್ಖರು ಯಾರು," ಎಂದು ಪ್ರಶ್ನೆ ಮಾಡಿದನು. ಈ ಪ್ರಶ್ನೆಗೆ ಬೀರಬಲನು ಬಹಳ ಹೊತ್ತು ಯೋಚಿಸಬೇಕಾಗಲಿಲ್ಲ ಆ ಕೂಡಲೆ, "ರಾಜಾಧಿರಾಜ ! ಯಾವನ ಹಂಚಿಕೆಯು ಸಿದ್ದಿಗೆ ಹೋಗಿ ಫಲಪ್ರದವಾಗುವದೋ ಅವನು ಚತುರನು ಯಾವನ ಹಂಚಿಕೆಯು ನಿಷ್ಪಲವಾಗುವದೋ ಅವನು ಮೂರ್ಖನು” ಎಂದುತ್ತರವಿತ್ತನು.
ಈ ಉತ್ತರವನ್ನು ಕೇಳಿ, ಬಾದಶಹನಿಗೂ ಸಭಾಸದರಿಗೂ ಅತ್ಯಾನಂದವಾಯಿತು.

-(೫೨. ಯಾವನು ಸುಖಿಯಾಗಿರುವನು.)-

ಒಂದು ದಿವಸ ನೆರೆದ ಸಭೆಯಲ್ಲಿ ಬಾದಶಹನು, "ಬೀರಬಲ! ಈ ಸಂಸಾರದಲ್ಲಿ ಸುಖಿಯಾಗಿರುವವನು ಯಾವನು ;” ಎಂದು ಪ್ರಶ್ನೆ ಮಾಡಿದನು. ಆ ಕೂಡಲೆ ಬೀರಬಲನು, "ಮನುಷ್ಯನ ಮರಣದ ಮೇಲೆ ಸುಖದುಃಖಗಳ ನಿರ್ಣಯವಾಗುತ್ತದೆ” ಎಂದನು. ಅದು ಹ್ಯಾಗೆ ಎಂದು ಬಾದಶಹನು ಪ್ರಶ್ನೆ ಮಾಡಿದನು ಆಗ ಬೀರಬಲನು, ಈ ದಿವಸ ಯಾವನು ಸುಖಿಯಾಗಿರುವನೋ ಅವನ ಮೇಲೆ ನಾಳೆಗೆ ಯಾವ ವಿಪತ್ತಿಯು ಬಂದೊದಗುವದೆಂಬದರ ನಿಯಮವಿಲ್ಲ ಅಂದಮೇಲೆ ಸುಖಯಾಗಿರುವನೆಂದು ಹ್ಯಾಗೆ ತಿಳಿದು ಕೊಳ್ಳಬೇಕು ಎಷ್ಟೋಜನರು ಬಹಿರಂಗದಲ್ಲಿ ಸುಂಗಲಾಗಿದ್ದಂತೆ ಕಂಡು ಬರುವದು ಆದರೆ ಅವರಿಗೆ ಅಂತರಂಗದಲ್ಲಿ ಯಾವ ದುಃಖವಿರುವದೆಂಬದು ತಿಳಿ ಯಲಸಾಧ್ಯವು ಆದ್ದರಿಂದ ಮನುಷ್ಯನಿಗೆ ಸುಖಪೂರ್ವಕ ಮರಣ ಒದಗಿದರೆ ಅವನು ಸುಖಿಯಾಗಿದ್ದನೆಂದು ಹೇಳಬಹುದು.

-(೫೩, ಸ್ವರ್ಗ ಮತ್ತು ನರಕ.)-

ಒಂದು ಸಾರೆ ಬಾದಶಹನು ಬೀರಬಲನನ್ನು ಕುರಿತು;- ಸ್ವರ್ಗವಾಸ ವು ಯಾರಿಗೆ ಲಭಿಸುತ್ತದೆ? ಮತ್ತು ನರಕವಾಸವು ಯಾರಿಗುಂಟಾಗುತ್ತದೆ ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಬೀರಬಲನು:- "ಖಾವಿಂದ! ಸತ್ತು ಹೋದ ಮೇಲೆ ಯಾವನಿಗೆ ಜನರು ಉತ್ತಮನೆಂದು ಹೊಗಳುವರೋ ಅವನಿಗೆ ಸ್ವರ್ಗವಾಸವು ಲಭಿಸುತ್ತದೆ, ಯಾವನನ್ನು ನಿಂದಿಸುತ್ತಿರುವರೋ ಅವನಿಗೆ ನರಕವಾಸವುಂಟಾಗುತ್ತದೆ ಎಂದು ತಿಳಿಯಬೇಕು" ಎಂದುತ್ತರ

ಕೊಟ್ಟನು. ಈ ಉತ್ತರದಿಂದ ಬಾದಶಹನಿಗೆ ಸಂತೋಷವಾಯಿತು.
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,
೨೪೯


ಮಾತನ್ನು ಕೇಳು ?" ಎಂದನು. ಅದಕ್ಕೆ ಮಾನಕಚಂದನು ಪೆಟ್ಟಿನ ಹೆದರಿಕೆಗೆ ಅವರು ಸುಳ್ಳುಹೇಳುತ್ತಾರೆ ಎಂದನು. ಅದಕ್ಕೆ ಬೀರಬಲನು "ಇವರು ಕಣ್ಣಿನಿಂದ ರತ್ನವನ್ನು ಕಂಡವರಾಗಿದ್ದರೆ ಅದರ ಆಕಾರವಿದ್ದಷ್ಟು ಮಣ್ಣಿನ ಉಂಡೆಗಳನ್ನು ಮಾಡುತ್ತಿದ್ದರು ಈ ವಿಷಯದಲ್ಲಿ ನೀನು ಅಸತ್ಯವನ್ನು ನುಡಿದದ್ದೇ ನಿಜ ?” ಎಂದು ಹೇಳಿ ಕರ್ಮಚಾರಿಗಳಿಗೆ ನೇತ್ರಸಂಕೇತಮಾಡಲು ಅವರು ಮಾನಕಚಂದನ ಬೆನ್ನ ಮೇಲೆ ಒಳಿತಾಗಿ ಒಂದು ಪೆಟ್ಟು ಕೊಟ್ಟರು ಆ ಕೂಡಲೆ ಮಾನಕಚಂದನು ತನ್ನಲ್ಲಿದ್ದ ಎರಡೂ ರತ್ನಗಳನ್ನು ತೆಗೆದು ಮುಂದಿಟ್ಟನು. ಅವುಗಳಲ್ಲೊಂದನ್ನು ಜವಾಹರಚಂದನಿಗೆ ಕೊಟ್ಟು ಮತ್ತೊಂದನ್ನು ರಾಜಭಂಡಾರದಲ್ಲಿಡಿಸಿ ಅಸತ್ಯ ಭಾಷಣ ಮಾಡಿದಬಗ್ಗೆ ಮಾನಕಚಂದನಿಗೂ, ಅವನ ಪಕ್ಷವನ್ನು ಸ್ವೀಕರಿಸಿಬಂದ ಜನರಿಗೂ, ಕಠಿಣವಾದ ದಂಡನೆಯನ್ನು ವಿಧಿಸಿದನು.

--(೧೪೭,ವಿಶ್ವಾಸಘಾತಕಿಯಾದ ಮಿತ್ರ)--,

ದಿಲ್ಲಿಯಲ್ಲಿ ಮೋತೀಚಂದ ನಾಮಕನಾದ ಒಬ್ಬ ವರ್ತಕನಿದ್ದನು ಅವನಿಗೆ ರಾಮದಾಸನೆಂಬ ಒಬ್ಬ ಸ್ನೇಹಿತನಿದ್ದನು, ಉಭಯತರಲ್ಲಿ ಅನಿರ್ವಾಚ್ಯವಾದ ಮೈತ್ರಿಯಿತ್ತು, ಮೋತೀಚಂದನು ಯಾತ್ರೆಗೆ ಹೊರಡಬೇಕೆಂಬ ಇಚ್ಛೆಯಿಂದ ತನ್ನಲ್ಲಿದ್ದ ಯಾವತ್ತು ಆಸ್ತಿ ಮನೆಮಾರು ಮೊದಲಾದ ಯಾವತ್ತು ಸ್ವತ್ತನ್ನು ರಾಮದಾಸನಿಗೊಪ್ಪಿಸಿ ಕುಟುಂಬಸಮೇತನಾಗಿ ಹೊರಟು ಹೋದನು. ಆ ಕಾಲದಲ್ಲಿ ಉಗಿಬಂಡಿಯು ಇದ್ದಿಲ್ಲ, ಕಾಲುನಡಿಗೆಯಿಂದಲೆ ಪ್ರಯಾಗ, ಕಾಶೀ, ಗಯಾ ಮೊದಲಾದ ಪವಿತ್ರಸ್ಥಳಗಳ ಯಾತ್ರೆಯನ್ನು ಮಾಡುತ್ತಾ ಮಾಡುತ್ತಾ ಮೂರು ವರುಷಗಳಾದ ಮೇಲೆ ಮರಳಿ ದಿಲ್ಲಿಗೆ ಬಂದನು. ಮನೆಗೆಬಂದು ನೋಡಲು ದ್ವಾರವು ತೆರೆದಿತ್ತು ಒಳಗೆ ಪ್ರವೇಶಮಾಡಿ ನೋಡಲು ಒಂದಾದರೂ ಪದಾರ್ಥವಿದ್ದಿಲ್ಲ. ಮನೆಯೆಲ್ಲ ಮಲಿನವಾಗಿ ಹೋ ಗಿತ್ತು, ಇಲಿ ಹೆಗ್ಗಣಗಳು ವಾಸಮಾಡಿಕೊಂಡಿದ್ದವು. ಆಗ ಅವನು ರಾಮದಾಸನ ಗೃಹಕ್ಕೆ ಬಂದನು ಪರಸ್ಪರರಲ್ಲಿ ಕುಶಲಪ್ರಶ್ನೆಗಳಾದವು, ಆಮೇಲೆ ಮೋತೀಚಂದನು ತನ್ನ ಯಾವತ್ತು ಸ್ವತ್ತನ್ನು ಮರಳಿಕೊಡು ! ಎಂದು ಕೇಳಲು ರಾಮದಾಸನು “ನನ್ನಲ್ಲಿ ನೀನು ಯಾವ ಸ್ವತ್ತನ್ನು ಇಟ್ಟು ಹೋಗಿರುವಿ ! ಯಾರಲ್ಲಿ ಇಟ್ಟಿದ್ದಿಯೋ ಅವರನ್ನು ಕೇಳಿಕೋ” ಎಂದನು.
ಮೋತೀಚಂದ-"ನಾನು ನನ್ನ ಸ್ವತ್ತನ್ನೆಲ್ಲ ನಿನಗೇ ಒಪ್ಪಿಸಿ ಹೋಗಿದ್ದೆನು,
ಅದರಿಂದಲೇ ನಿನ್ನನು ಕೇಳಲಿಕ್ಕೆ ಬಂದಿದ್ದೇನೆ ಇದು ವಿನೋದಕ್ಕೆ
ಸಮಯವಲ್ಲ. ಕೃಪೆಮಾಡಿ ನನ್ನ ಆಸ್ತಿಯನ್ನು ನನಗೆ ಕೊಡು. ರಾಮದಾಸ-ನೀನು ನನ್ನ ಬಳಿಯಲ್ಲಿ ಯಾವ ಆಸ್ತಿಯನ್ನೂ ಇಟ್ಟಿರುವದಿಲ್ಲ ಅದರಿಂದ ನೀನು ಇಲ್ಲಿಂದ ಸುಮ್ಮನೇ ಹೊರಟು ಹೋಗು! ಇಲ್ಲವಾದರೆ ಸೇವಕರಿಂದ ತಳ್ಳಿಸಿಬಿಡುತ್ತೇನೆ, ನಾನು ನಿನ್ನೊಡನೆ ವಿನೋದವನ್ನು ಮಾಡುವೆನೋ!

ಈ ಮಾತುಗಳನ್ನು ಕೇಳಿ ಮೋತೀಚಂದನಿಗೆ ಬಹಳ ಆಶ್ಚರವಾಯಿತು ಅವನು ಸದ್ಗದಿತವಂತನಾಗಿ, "ನಾನು ನಿನ್ನನು ಜೀವದ ಗೆಳೆಯನೆಂದು ತಿಳಿದು ಎಲ್ಲ ಆಸ್ತಿಯನ್ನು ಒಪ್ಪಿಸಿದ್ದಕ್ಕೆ ನನಗೆ ಈ ದುರವಸ್ಥೆಯನ್ನುಂಟು ಮಾಡಿದಿ! ನಿನಗೆ ಇಂಥ ದುರ್ಬುದ್ಧಿಯು ಯಾಕೆ ಹುಟ್ಟಿತು, ಪ್ರಾಜ್ಞನಾಗಿದ್ದು ವಿಶ್ವಾಸಘಾತಕದ ಪಾಪವನ್ನು ಯಾಕೆ ತಲೆಯ ಮೇಲೆ ಹೊತ್ತುಕೊಳ್ಳುತ್ತೀ? ಈ ಲೋಕದಲ್ಲಿ ಈ ಪಾಪದ ವರಿಣಾಮವು ನಿನಗೆ ತಟ್ಟದಿದ್ದರೂ ಪರಲೋಕದಲ್ಲಿ ಇದರ ದುಷ್ಪರಿಣಾಮವು ಸೋಂಕದೆ ಬಿಡಲಾರದು ಪರಮೇಶ್ವರನ ಕಠಿಣ ಶಿಕ್ಷೆಗೆ ಭೀತನಾಗಿ ನನ್ನ ಸ್ವತ್ತನ್ನು ನನಗೊಪ್ಪಿಸು; ಇದರಿಂದ ನಿನಗೆ ಕಲ್ಯಾಣವಾಗುವದು " ಎಂದನು.
ಈ ಮಾತಿನಿಂದ ರಾಮದಾಸನಿಗೆ ಅತಿಕೋಪವು ಬಂತು ಕಣ್ಣುಗಳು ಕೆಂಪಗಾದವು ಅದನ್ನು ಕಂಡು ಮೋತೀಚಂದನು "ಇನ್ನು ಇಲ್ಲಿ ನಿಂತುಕೊಳ್ಳುವುದು ಸರಿಯಲ್ಲ " ಎಂದು ಯೋಚಿಸಿ ಸುಮ್ಮನೆ ಮರಳಿಬಂದನು. ರಾಮದಾಸನು ಬರಕೊಟ್ಟ ಹಸ್ತಪತ್ರಿಕೆಯೂ ಇದ್ದಿಲ್ಲ, ಮತ್ತು ಸ್ವತ್ತನ್ನು ಒಪ್ಪಿಸುವ ಕಾಲಕ್ಕೆ ಅನ್ಯರಾರೂ ಇದ್ದಿಲ್ಲ; ಅದರಿಂದ ಸರಕಾರದಲ್ಲಿ ಅಭಿಯೋಗವನ್ನು ಸಹ ನಡೆಯಿಸಲಿಕ್ಕೆ ಬರುವಂತೆ ಇದ್ದಿಲ್ಲ. ಈ ವಿಷಯವನ್ನು ಬೀರಬಲನ ಕಿವಿಯ ಮೇಲೆ ಹಾಕಿ ನೋಡೋಣ? ಮುಂದೆ ನನ್ನ ದೈವದಲ್ಲಿ ಇದ್ದಂತೆ ಆಗಲಿ ಎಂದು ನಿಶ್ಚಯಿಸಿಕೊಂಡು ಮನೆಗೆಬಂದು, ಮರುದಿವಸ ಬೀರಬಲನ ಬಳಿಗೆ ಹೋಗಿ ಆದ್ಯೋಪಾಂತ ವೃತ್ತಾಂತವನ್ನೆಲ್ಲ ಹೇಳಿ ಈ ಕಾರ್ಯದಲ್ಲಿ ತಾವು ಪೂರ್ಣ ಸಹಾಯವನ್ನು ಮಾಡಬೇಕೆಂದು ಪ್ರಾರ್ಥನೆಮಾಡಿ ಕೊಂಡನು. ಅದಕ್ಕೆ ಬೀರಬಲನು ಇನ್ನು ನಾಲ್ಕು ದಿವಸಗಳನ್ನು ಬಿಟ್ಟು ನನ್ನ ಬಳಿಗೆ ಬಾ? ನಿನಗೆ ಯಾವದಾದರೊಂದು ಹಂಚಿಕೆಯನ್ನು ತೋರಿಸುತ್ತೇನೆ? ಎಂದು ಹೇಳಿದನು.
ಮೂರನೇ ದಿವಸ ಬೀರಬಲನು ರಾಮದಾಸನನ್ನು ಕರೆಯ ಕಳುಹಿದನು. ಆಗ ರಾಮದಾಸನು ಸ್ವಲ್ಪ ಗಾಬರಿಯಾದನು, ಆಗ ಅವನು ಮನಸ್ಸಿನಲ್ಲಿ "ಮೋತೀಚಂದನ ಹೇಳಿಕೆಯಿಂದಂತೂ ನನ್ನ೦ದು ಕರೆಯಿಸಿರುವದಿಲ್ಲ ಒಂದುವೇಳೆ ಕರೆಯಿಸಿದ್ದರೆ ನಾನೇನು ಮೋತೀಚಂದನಿಗೆ ನಿನ್ನ ಈ ಈ ಪ್ರ ಕಾರದ ಸ್ವತ್ತು ನನ್ನ ಬಳಿಯಲ್ಲಿದೆ ಎಂದು ಲೇಖನವನ್ನು ಬರೆದುಕೊಟ್ಟಲ್ಲ ಮತ್ತೆ ಬೇರೆ ಯಾವದಾದರೊಂದು ಕಾರ್ಯವಿದ್ದೀತು,” ಎಂದು ಯೋಚಿಸುತ್ತಾ ಬೀರಬಲನ ಸನ್ನಿಧಿಗೆ ಬಂದನು, ಬೀರಬಲನು ಆದರ ಸತ್ಕಾರಮಾಡಿ ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡನು. ಆಮೇಲೆ ಮೋತೀಚಂದನ ವಿಷಯವೇ ತನಗೆ ಗೊತ್ತುಯಿಲ್ಲವೆಂಬಂತೆ ನಟಿಸಿ, ಅನೇಕ ವಾರ್ತಾಲಾಪಗಳನ್ನು ಆಡುತ್ತ ಆಡುತ್ತ "ರಾಮದಾಸ ? ನನ್ನ ನಿನ್ನ ನಡುವೆ ಎಷ್ಟೋ ಕಾಲದಿಂದ ಮೈತ್ರಿಯಿದ್ದರೂ ಕೂಡ ಇಷ್ಟು ದಿವಸಗಳವರೆಗೆ ಆ ಮೈತ್ರಿಯನ್ನು ಪ್ರಕಟ ಮಾಡಲಿಕ್ಕೆ ಸಂಧಿಯೇ ದೊರಕಿದ್ದಿಲ್ಲ; ಈಗ ಪರಮೇಶ್ವರನ ದಯೆಯಿಂದ ಅಂಥ ಒಂದು ಪ್ರಸಂಗವು ಬಂದದೆ ಏನಂದರೆ- ಚಿಕ್ಕಚಿಕ್ಕ ಅಭಿಯೋಗಗಳ ನಿರ್ಣಯವನ್ನು ಮಾಡುವದರಸಲುವಾಗಿ ಒಂದು ನ್ಯಾಯಾಲಯವನ್ನು ಸ್ಥಾವಿಸೆಂದು ಬಾದಶಹನು ಅಪ್ಪಣೆಮಾಡಿದ್ದಾನೆ ಆ ಕಾರ್ಯಕ್ಕೆ ನಿನ್ನನು ನಿಯಮಿಸಬೇಕೆಂದು ಯೋಚಿಸಿ, ನಿನ್ನ ಇಚ್ಛೆಯನ್ನು ಅರಿತುಕೊಳ್ಳಬೇಕೆಂದು ನಿನ್ನನು ಇಲ್ಲಿಗೆ ಕರೆಯಿಸಿಕೊಂಡೆನು ನಿನ್ನಿಂದ ಈ ಕಾರ್ಯ ನಿರ್ವಾಹವಾಗುವಂತಿದ್ದರೆ ವಿಚಾರಮಾಡಿಕೊಂಡು ನನಗೆ ತಿಳಿಸು ! ?” ಎಂದನು. ಈ ಮಾತನ್ನು ಕೇಳಿದಕೂಡಲೆ ರಾಮದಾಸನ ಹರುಷಕ್ಕೆ ಪಾರವೇ ಇಲ್ಲದಾಯಿತು ಮನಸ್ಸಿನಲ್ಲಿ ಆನಂದದ ಲಹರಿಗಳು ಬರಹತ್ತಿದವು, ಪ್ರಫುಲ್ಲವದನನಾಗಿ;- "ಮಂತ್ರಿವರ್ಯನೇ ! ನಾನು ಈ ಕಾರ್ಯವನ್ನು ಆನಂದದಿಂದ ಸ್ವೀಕರಿಸುತ್ತೇನೆ” ಎಂದನು. ಅದಕ್ಕೆ ಬೀರಬಲನು "ಒಳ್ಳೇದು, ನಾನು ಸಮಯವನ್ನು ಸಾಧಿಸಿಕೊಂಡು ಈ ಸಂಗತಿಯನ್ನು ಬಾದಶಹನ ಕಿವಿಯಮೇಲೆ ಹಾಕುತ್ತೇನೆ ” ಎಂದು ಹೇಳಲು, ರಾಮದಾಸನು ಹರುಷಿತನಾಗಿ ಅಪ್ಪಣೆಯ ನ್ನು ತೆಗೆದುಕೊಂಡು ಹೊರಟು ಬಂದನು, ಮಾರ್ಗದಲ್ಲಿ ಅವನ ಮನಸ್ಸಿನಲ್ಲಿ ಅನೇಕ ಪ್ರಕಾರದ ತರಂಗಗಳು ಉದ್ಭವಿಸಹತ್ತಿದವು. ಮನಸ್ಸಿನಲ್ಲಿ ಮಂಡಿಗೆಯನ್ನು ತಿನ್ನುತ್ತ ಮನೆಗೆ ಬಂದು ಮುಟ್ಟಿದನು.
ಇತ್ತ ರಾಮದಾಸನು ಹೊರಟು ಹೋದಮೇಲೆ, ಬೀರಬಲನು ಮೋತೀಚಂದನನ್ನು ಕರೆಯಿಸಿ- "ನಾಳೆ ನೀನು ರಾಮದಾಸನ ಬಳಿಗೆ ಹೋಗಿ ನನ್ನ ಸ್ವತ್ತನ್ನೆಲ್ಲಿ ಕೊಡು ! ” ಎಂದು ಕೇಳು ಅವನು ಈ ಮಾತಿಗೆ ಒಪ್ಪಿಕೊಳ್ಳದಿದ್ದರೆ "ಬೀರಬಲನಿಗೆ ಈ ಸಂಗತಿಯನ್ನು ತಿಳಿಸುತ್ತೇನೆಂದು ಬೆದರಿಕೆಹಾಕು ! ” ಎಂದು ಹೇಳಿದನು.
ಈ ಪ್ರಕಾರದ ಮಾತಿನಿಂದ ಮೋತೀಚಂದನ ದುಃಖಿತ ಮನಸ್ಸಿಗೆ ಸ್ವಲ್ಪ ಶಾಂತಿಯುಂಟಾಯಿತು ಮರುದಿವಸ ಮೋತೀಚಂದನು ರಾಮದಾಸ ನ ಬಳಿಗೆ ಹೋಗಿ, “ ತನ್ನ ಧನ ಕನಕ ವಸ್ತುಗಳನ್ನು ಕೊಡು” ಎಂದು ಕೇಳಲಾಗಿ, ಅವನು ಮೊಟ್ಟಮೊದಲು ಹೇಳಿದಂತೆ ನಿರಾಕರಿಸಿ ಬಿಟ್ಟನು ಆಗ ಮೋತಿಚಂದನು-" ಮಿತ್ರಾ! ನೀನು ಒಳ್ಳೆಮಾತಿನಿಂದ ಆಸ್ತಿಯನ್ನು ಕೊಡಲಿಕ್ಕೆ ಸಮ್ಮತಿಸುವದಿಲ್ಲ; ಅದರಿಂದ ನಾನು ನಿರ್ವಾಹವಿಲ್ಲದೆ ಈ ಸಂಗತಿಯನ್ನು ಬೀರಬಲನ ಕಿವಿಯಮೇಲೆ ಹಾಕಬೇಕಾಗಿ ಬಂತು. "ಎಂದನು.
ಬೀರಬಲನಿಗೆ ತಿಳಿಸುತ್ತೇನೆಂದು ಹೇಳಿದ ಮಾತನ್ನು ಕೇಳಿದ ಕೂಡಲೆ ಮನಸ್ಸಿನಲ್ಲಿ ಗಾಬರಿಯಾದನು ಆಗ ಅವನು ಆಲೋಚಿಸಿ ದೇನಂದರೆ-“ ನನಗೆ ನ್ಯಾಯಾಧೀಶನ ಕೆಲಸವನ್ನು ಕೊಡಿಸುತ್ತೇನೆಂದು ಬೀರಬಲನು ವಚನಕೊಟ್ಟಿದ್ದಾನೆ ಇಂಥ ಸಂಧಿಯಲ್ಲಿ ನನ್ನ ಮೋಸದ ಕೃತ್ಯವು ಅವನಿಗೆ ತಿಳಿಯಬಂದರೆ ನನ್ನ ಅವಮಾನವಾಗುವದಲ್ಲದೆ, ದೊರೆಯತಕ್ಕ ಕೆಲಸವನ್ನು ಸಹ ನಾನೇ ಅಪ್ರಗಲ್ಪತೆಯಿಂದ ಕಳಕೊಂಡಂತೆ ಆಗುತ್ತದೆ ನ್ಯಾಯಾ ಧೀಶನ ಸ್ಥಾನವು ದೊರೆತರೆ ಬೇಕಾದಷ್ಟು ಸಂಪಾದಿಸಬಹುದು. ” ಎಂದು ಯೋಚಿಸಿ ಮೋತಿಚಂದನನ್ನು ಕುರಿತು ಪ್ರಿಯಮಿತ್ರನೇ ! ನಾನು ಇಂದಿನ ತನಕ ನಿನಗೆ ಚೇಷ್ಟೆಯನ್ನು ಮಾಡಿದೆನು ಕೇವಲ ನಿನ್ನಲ್ಲಿ ಎಷ್ಟರಮಟ್ಟಿಗೆ ಧೈರ್ಯ ವಿರುವದೆಂಬದನ್ನು ಪರೀಕ್ಷಿಸಬೇಕೆಂದು ಯೋಚಿಸಿ ಈ ಪ್ರಕಾರವಾಗಿ ಮಾಡಿದೆನೇ ಹೊರತು ಅನ್ಯಥಾ ಇಲ್ಲ ನಿನ್ನ ಯಾವತ್ತು ಸ್ಪತ್ತನ್ನು ನೀನು ತೆಗೆದುಕೊಂಡು ಹೋಗು ! ಈ ದಿವಸ ನೀನು ಬಾರದಿಹೋಗಿದ್ದರೆ ನಾನೇ ನಿನ್ನ ಮನೆತನಕ ಬಂದು ಕೊಟ್ಟು ಬರಬೇಕೆಂದುಮಾಡಿದ್ದೇ ನು ಎಂದು ಹೇಳಿ ಅವನ ಯಾವತ್ತು ಸ್ವತ್ತನ್ನು ಅವನ ಸ್ವಾಧೀನ ಪಡಿಸಿದನು ಮೋತಿಚಂದನು ಅದನ್ನು ತಕ್ಕೊಂಡು ಸಂತೋಷದಿಂದ ಮನೆಗೆ ಹೋದನು ಸಾಯಂಕಾಲದಲ್ಲಿ ಬೀರಬಲನು ರಾಜಕಾರ್ಯಗಳಿಂದ ನಿವೃತ್ತನಾಗಿ ಮನೆಗೆ ಬಂದಮೇಲೆ, ಮೊತೀಚಂದನು ಬೆಟ್ಟಿಯಾಗಿ ಯಾವತ್ತು ಸಂಗತಿಯನ್ನು ವಿಶದಪಡಿಸಿದನು.
ಇತ್ತ ರಾಮದಾಸನು ಬೀರಬಲನು ಯಾವಾಗ ಕರೆಯಿಸುವನೋ ಎಂದು ಮಾರ್ಗಪ್ರತೀಕ್ಷೆ ಮಾಡುತ್ತ ಕುಳಿತುಕೊಂಡನು ಮೋತಿಚಂದನು ರಾಮದಾಸನ ಮೈತ್ರಿಯನ್ನು ತ್ಯಜಿಸಿ ಬಿಟ್ಟನು ಕೆಲವು ದಿವಸಗಳಾದಮೇಲೆ ರಾಮದಾಸನು ಬೀರಬಲನ ದರುಶನಕ್ಕೆ ಹೋಗಲು, ಅವನು ನಿಷೇಧಿಸಿದನು ಆಗ ಅವನು ತಾನುಮಾಡಿದ ಮೋಸವು ತನಗೇಬಾಧಕವಾಯಿತೆಂದು

ತಿಳಿದುಕೊಂಡು ಸ್ಪಷ್ಟವಾಗಿ ಕುಳಿತುಕೊಂಡು ಬಿಟ್ಟನು.

- (೧೪೮. ಅಪ್ರಾಮಾಣಿಕನಾದ ಕಾಜಿಯು.) -

ದಿಲ್ಲಿಯಲ್ಲಿ ಫಾತಿಮಾ ಬೀಬೀ ನಾಮಕಳಾದ ಓರ್ವ ಮುಸಲ್ಮಾನ ಜಾತಿಯ ಸ್ತ್ರೀಯಳಿದ್ದಳು ಅವಳ ಪತಿಯು ಮರಣಹೊಂದಿದ್ದನು ಸಂತಾನವೂ ಇದ್ದಿಲ್ಲ ಅವಳು ಮಕ್ಕಾಯಾತ್ರೆಯನ್ನು ಮಾಡಿ ಬರಬೇಕೆಂಬ ಕುತೂಹಲದಿಂದ ತನ್ನಲ್ಲಿದ್ದ ವಸ್ತು ಒಡವೆಗಳನ್ನೆಲ್ಲ ಮಾರಿ ಒಂದು ಸಾವಿರ ರೂಪಾ ಯಿಗಳನ್ನು ಕೂಡಿಸಿ ಹಾದಿಯಖರ್ಚಿಗೆ ಎರಡು ನೂರುರೂಪಾಯಿಗಳನ್ನು ಇಟ್ಟುಕೊಂಡು ಉಳಿದ ಎಂಟುನೂರು ರೂಪಾಯಿಗಳನ್ನು ಒಂದು ಚೀಲದಲ್ಲಿ ಹಾಕಿ ಅದರ ಬಾಯಿಯನ್ನು ಹೊಲಿದು, ಮೇಲೆ ಅರಗಿನ ಮುದ್ರೆಯನ್ನು ಮಾಡಿ ತನ್ನ ನೆರೆಯವನಾದ ಒಬ್ಬ ಕಾಜಿಯ ವಶಕ್ಕೆ ಕೊಟ್ಟು" ಈ ನಗರದಲ್ಲಿ ನಿಮ್ಮಂಥ ಪ್ರಮಾಣಿಕರು ಇಲ್ಲ; ನಾನು ಮಕ್ಕಾಯಾತ್ರೆ ಯ ಸಲುವಾಗಿ ಹೊರಟಿದ್ದೇನೆ ನನ್ನ ಬಳಿಯಲ್ಲಿದ್ದ ಹಣವನ್ನು ಸಂಗಡ ತಗೆದುಕೊಂಡು ಹೋಬೇಕೆಂದರೆ ದಾರಿಯಲ್ಲಿ ಚೋರೋಪದವು ಬಹಳ ನಾನು ಬರುವವರೆಗೆ ಈ ಎಂಟುನೂರು ರೂಪಾಯಿಗಳುಳ್ಳ ಚೀಲವನ್ನು ನಿಮ್ಮ ಸ್ವಾಧೀನಕ್ಕೆ ಒಪ್ಪಿಸುತ್ತೇನೆ ನಾನು ಮರಳಿ ಬಂದರೆ ನನಗೆ ಕೊಡಿರಿ; ಇಲ್ಲವಾದರೆ ಈ ರೂಪಾಯಿಗಳನ್ನು ನಿಮ್ಮ ಮನಸ್ಸಿಗೆ ಸರಿದೋರಿದಹಾಗೆ ವ್ಯವಸ್ಥೆಯನ್ನು ಮಾಡಿರಿ !” ಎಂದು ಹೇಳಿದಳು ಅವಳ ಮಾತುಗಳನ್ನು ಶ್ರವಣ ಮಾಡಿ ಕಾಜಿಯು ಬೀಬಿಯೇ, ಒಳ್ಳೇದು ನನ್ನ ಸ್ವಾಧೀನಕ್ಕೆ ಕೊಟ್ಟುಹೊರಟುಹೋಗು ! ಏನೂ ಚಿಂತೆ ಮಾಡಬೇಡ ! ” ಎಂದು ಹೇಳಿದನು ಫಾತಿಮಾ ಬೀಬಿಯು ಹಣದ ಚೀಲವನ್ನು ಅವನ ಸ್ವಾಧೀನಪಡಿಸಿ ಯಾತ್ರೆಗೆ ಹೋಟುಹೋದಳು.
ಆ ಸ್ತ್ರೀಯು ಚೀಲದಲ್ಲಿ ರೂಪಾಯಿಗಳನ್ನು ಹಾಕುವಸಮಯದಲ್ಲಿ ಪ್ರತಿಯೊಂದು ರೂಪಾಯಿಯ ಮೇಲೆ ಒಂದೊಂದು ಚಿಕ್ಕದಾಗಿರುವ ಚಿನ್ಹವನ್ನು ಮಾಡಿದ್ದಳು ಅದನ್ನು ಬಹಳ ಲಕ್ಷ್ಯ ಕೊಟ್ಟು ನೋಡಿದರೂ ಸಹ ಕಾಣುವಂತೆ ಇದ್ದಿಲ್ಲ.

ಆ ಸ್ತ್ರೀಯು ಐದು ವರುಷಗಳವರೆಗೆ ಬಾರದಿರಲು, ಕಾಯ ಬುದ್ಧಿಯು ಸ್ವಲ್ಪ ವ್ಯತ್ಯಸ್ತವಾಯಿತು ಆ ಹಣವನ್ನು ಗಿಳಂಕೃತ ಮಾಡಬೇಕೆಂದು ಯೋಚಿಸಿದನು ಕಿಂಚಿತ್ಕಾಲ ಯೋಚನೆ ಮಾಡಿನೋಡಲು, ಒಂದು ಹಂಚಿಕೆಯು ತೋಚಿತು ಅದರಂತೆ ವ್ಯವಸ್ಥೆ ಮಾಡಿ ಬಿಟ್ಟನು ಮರುವರುಷ ಆ ಸ್ತ್ರೀಯು ಯಾತ್ರೆಯಿಂದ ತಿರುಗಿಬಂದು ಹಣದ ಚೀಲವನ್ನು ಕೊಡಿರೆಂದು ಕೇಳಿದಳು ಆ ಕೂಡಲೆ ಆ ಚೀಲವನ್ನು ಅವಳ ಸ್ವಾಧೀನಕ್ಕೆ ಕೊಟ್ಟನು ಆ ಸ್ತ್ರೀಯು ತನ್ನ ಚೀಲವು ಮೊದಲಿನಂತೆ ಇದ್ದದ್ದನ್ನು ಕಂಡು ಪ್ರಸನ್ನಳಾದಳು ಮನೆಗೆ ಹೋಗಿ ಚೀಲವನ್ನು ಬಿಚ್ಚಿ ನೋಡಲು ರೂಪಾಯಿಗಳು ಇದ್ದಿಲ್ಲ ತಾಮ್ರದ ನಾಣ್ಯಗಳೇ ಇದ್ದವು ಅದನ್ನು ನೋಡಿ ಅವಳು ಗಾಬರಿಯಾಗಿ ಕಾಜಿಯ ಬಳಿಗೆ ಬಂದು ಎಲ್ಲ ವೃತ್ತಾಂತವನ್ನು ತಿಳಸಿದಳು ಆಗ ಕಾಜಿಯು- ನೀನು ಚೀಲದಲ್ಲಿ ರೂಪಾಯಿಗಳನ್ನು ಹಾಕಿದ್ದೀಯೋ ಅಥವಾ ತಾಮ್ರದ ನಾಣ್ಯಗಳನ್ನು ಹಾಕಿದ್ದೀಯೋ ಎಂಬದನ್ನು ನಾನು ಅರಿತವನಲ್ಲ ನೀನು ಇಟ್ಟ ಚೀಲವನ್ನು ಕೈಯಿಂದ ಸಹಾ ಮುಟ್ಟಿಲ್ಲ; ಅದು ಮೊದಲು ಹ್ಯಾಗೆ ಇತ್ತೋ ಹಾಗೆಯೇ ಅದನ್ನು ಜೀವಾನಮಾಡಿ ಕೊಟ್ಟಿದ್ದೇನೆ ಹೆಚ್ಚಿನ ಸಂಗತಿಯನ್ನು ಅರಿತವನಲ್ಲ;” ಎಂದನು.
ಕಾಜಿಯ ಮಾತುಗಳನ್ನು ಕೇಳಿ ಅವಳು ಬಹು ಚಿಂತಾಕ್ರಾಂತಳಾಗಿ" ಕಾಜೀ ಸಾಹೇಬ, ನಾನು ನನ್ನ ಕೈಯಿಂದಲೇ ಎಂಟು ನೂರು ರೂಪಾಯಿಗಳನ್ನು ಆ ಚೀಲದಲ್ಲಿ ಹಾಕಿದ್ದೆನು ನಾನು ಕೇವಲ ದರಿದ್ರಳು ನನ್ನ ಜೀವನವು ಆ ದ್ರವ್ಯದಿಂದಲೇ ಸಾಗುತ್ತಿತ್ತು ಇನ್ನು ನಾನು ಉಪಜೀವಿಸುವ ಬಗೆ ಹ್ಯಾಗೆ ! ಎಲ್ಲಾ ಹಣವನ್ನು ಕೊಡದಿದ್ದರೂ ಚಿಂತೆ ಇಲ್ಲ ಅರ್ಧಹಣವ ನಾದರೂ ದಯಪಾಲಿಸಿರಿ ತಾವು ಕೇವಲ ಪ್ರಾಮಾಣಿಕರೆಂದು ನಂಬಿ ನನ್ನ ಯಾವತ್ತು ಆ ಸ್ತಿಯನ್ನು ಮಾಡಿ ಎಂಟು ನೂರು ರೂಪಾಯಿಗಳನ್ನು ಈ ಚೀಲದಲ್ಲಿ ತುಂಬಿ, ಉಳಿದ ರೂಪಾಯಿಗಳನ್ನು ತೆಗೆದುಕೊಂಡು ಚೀಲವನ್ನು ನಿಮ್ಮ ವಶಕ್ಕೆ ಕೊಟ್ಟು ಯಾತ್ರಿಗೆ ಹೋಗಲಿಲ್ಲವೇ ! ತಮ್ಮಂಥವರು ಈ ಪ್ರಕಾರ ವಿಶ್ವಾಸಘಾತಕ ತನವನ್ನು ಮಾಡಬಾರದು! ” ಅವಳ ಮಾತುಗಳನ್ನು ಕೇಳಿ ಕಾಜಿಯು ಬಹಳೇ ಕುಪಿತನಾಗಿ “ ಸುಮ್ಮನೆ ಆರೋಪವನು ಹೊರಿಸಬೇಡ ಹೊರಟು ಹೋಗು ! ಇಲ್ಲದಿದ್ದರೆ ಸೇವಕರ ಕಡೆಯಿಂದ ದಬ್ಬಿಸಬೇಕಾದೀತು ? ” ಎಂದು ಬೆದರಿಸಿದನು.
{[gap}}"ಆ ಸ್ತ್ರೀಯು ನಿರಾಸೆಯಿಂದ ಬಾದಶಹನ ಬಳಿಗೆ ಹೋಗಿ ತನ್ನ ಆ ದ್ಯೋಪಾಂತ ವೃತ್ತಾಂತವನ್ನು ಕಥನ ಮಾಡಿದಳು ಆಗ ಬಾದಶಹನು ಕಾಜಿಯನ್ನು ಕರೆಯಕಳುಹಿ ಅವನು ಬಂದಮೇಲೆ "ಈ ಸ್ತ್ರೀಯಳು ನಿನ್ನ ಬಳಿಯಲ್ಲಿಟ್ಟ ಹಣದ ಚೀಲದ ವೃತ್ತಾಂತವೇನೂ ” ಎಂದು ಪ್ರಶ್ನೆ ಮಾಡಿದನು ಈ ಮಾತಿಗೆ ಕಾಜಿಯು "ಈಗ ಐದಾರು ವರುಷಗಳ ಹಿಂದೆ ಈ ಸ್ತ್ರೀ ಯು ನನ್ನ ಬಳಿಯಲ್ಲಿ ಒಂದು ಚೀಲವನ್ನು ಇಟ್ಟದ್ದು ನಿಜವು ಅವಳು ಹ್ಯಾಗೆ ಇಟ್ಟಿದ್ದಳೋ ಹಾಗೆಯೇ ಅದನ್ನು ಅವಳು ಮರಳಿಬಂದ ಮೇಲೆ ಒಪ್ಪಿಸಿ ಬಿಟ್ಟಿದ್ದೇನೆ. ಅದರಲ್ಲಿ ಇವಳು ರೂಪಾಯಿಗಳನ್ನು ಇಟ್ಟಿದ್ದಳೋ, ಅಥವಾ ತಾಮ್ರದ ನಾಣ್ಯಗಳನ್ನು ಹಾಕಿದ್ದಳೋ ಎಂಬ ಸಂಗತಿಯನ್ನು ನಾನು ಅರಿತವನಲ್ಲ ” ಎಂದು ಹೇಳಿದನು.
ಕಾಜಿಯು ಹೇಳಿದ ಉತ್ತರದಿಂದ ಬಾದಶಹನ ಮನಸ್ಸಿನಲ್ಲಿ ಸ್ವಲ್ಪ ಸಂದೇಹವುಂಟಾಯಿತು ಆಗ ಕಾಜಿಯನ್ನು ಹಿಂದಕ್ಕೆ ಕಳುಹಿಸಿ ಆ ಸ್ತ್ರೀಯಳನ್ನು ಕುರಿತು, “ ಬಾಯೀ ನೀನು ಏನೂ ಚಿಂತೆಮಾಡಬೇಡ ನಿನ್ನ ಹಣ ಕಿಂಚಿತ್ಕಾಲದಲ್ಲಿ ಮರಳಿ ಬರುವ ಹಾಗೆ ಮಾಡುತ್ತೇನೆ” ಎಂದು ಸಮಾಧಾನ ಪಡಿಸಿ ಕಳುಹಿಕೊಟ್ಟನು.
ಈ ಸಂಗತಿಯು ವರ್ತಿಸಿದ ನಾಲ್ಕಾರು ದಿವಸಗಳ ಮೇಲೆ ಬಾದಶಹನು ಶಯನ ಮಾಡುವ ಪೂರ್ವದಲ್ಲಿ ತನ್ನ ಹಾಸಿಗೆಯನ್ನು ಕತ್ತರಿಯಿಂದ ಸ್ವಲ್ಪ ಕತ್ತರಿಸಿ ಸುಮ್ಮನೆ ಮಲಗಿಬಿಟ್ಟನು ಮರುದಿವಸ ಬಾದಶಹನು ಎದ್ದು ಹೋದ ಮೇಲೆ ಸರಿಚಾರಕನು ಹಾಸಿಗೆಯನ್ನು ತೆಗೆಯುವದಕ್ಕೆ ಬಂದಾಗ ಚಾದರವು ಹರಿದದ್ದು ಅವನದೃಷ್ಟಿಗೆ ಬಿತ್ತು ಆ ಕೂಡಲೆ ಅವನು ಗಾಬರಿಯಾಗಿ,ಅನ್ಯಪರಿಚಾರಕರಿಗೆ ತೋರಿಸಿದನು. ಆಗ ಅವರು ಇದರ ನಿಜ ಸಂಗತಿಯೇನೆಂದು ವಿಚಾರಿಸಲು ತನಗೆಯಾವ ಸಂಗತಿಯೂ ಗೊತ್ತು ಇಲ್ಲವೆಂದು ಹೇಳಿದನು. ಆಗ ಅವರೆಲ್ಲರೂ "ಈ ಸಂಗತಿಯು ಬಾದಶಹನಿಗೆ ವಿದಿತವಾದರೆ ಯಾವ ತೀಕ್ಷೆಯನ್ನು ವಿಧಿಸುವನೋ ” ಎಂದು ಚಿಂತಾಕ್ರಾಂತರಾದರು. ಆಗ ಅವರಲ್ಲಿದ್ದ ಒಬ್ಬ ವೃದ್ಧನು "ಹೆದರಬೇಡಿರಿ ಈ ನಗರದಲ್ಲಿ ಒಬ್ಬ ರಫ್ತುಗಾರ ನಿರುವನು ಅವನಿಗೆ ಈ ರಫ್ತುಮಾಡುವ ಕೆಲಸವು ಚನ್ನಾಗಿ ಗೊತ್ತಿದೆ ಅದರಿಂದ ಅವನನ್ನು ಕರೆಯಿಸಿ ಚಾದರವು ಕತ್ತರಿಸಿದಲ್ಲಿ ರಫ್ತುಮಾಡಿಸಿಬಿಡಿರಿ; ಅಂದರೆ ಮೊದಲಿನಂತೆಯೇ ಆಗುತ್ತದೆ ” ಎಂದು ಹೇಳಲು ಎಲ್ಲ ರೂ ಸಮಾಧಾನವನ್ನು ಹೊಂದಿ ರಪುಗಾರನಿಂದ ರಪುಮಾಡಿಸಿ ಬಿಟ್ಟರು.ಕತ್ತರಿಸಿದ ಸ್ಥಳವು ಇಂಥಲ್ಲೇ ಇರುವದೆಂದು ತಿಳಿಯದೆ ಹೋಯಿತು ಸರಿ ಚಾರಕರಿಗೆಲ್ಲರಿಗೂ ಅತ್ಯಾನಂದವಾಯಿತು ರಾತ್ರಿಯಲ್ಲಿ ಬಾದಶಹನು ಮಲಗಿಕೊಳ್ಳುವದಕ್ಕೆ ಬಂದು ಮೇಲು ಹಾಸಿಗೆಯನ್ನು ನೋಡಲು ಅದು ಮೊದಲಿನಂತೆಯೇ ಇತ್ತು ಕತ್ತರಿಸಿದ ಸ್ಥಳವು ಸಹ ಗೊತ್ತಾಗದೆ ಹೋಯಿತು. ಆಗ ಅವನು ಪರಿಚಾರಕರನ್ನು ಕರೆದು " ನಿನ್ನೆ ಈ ಮೇಲು ಹಾಸಿಗೆಯು ಕತ್ತರಿಸಲ್ಪಟ್ಟಿತು. ಈಗ ಅದು ಕಾಣುವದಿಲ್ಲವಲ್ಲಾ? ” ಎಂದು ಕೇಳಿದನು. ಆದಕ್ಕೆ ಏನೊಂದುತ್ತರವನ್ನು ಸಹಾಕೊಡದೆ ಗಾಬರಿಯಾಗಿ ನಿಂತುಕೊಂಡನು. ಆಗ ಬಾದಶಹನು “ ಗಾಬರಿಯಾಗಬೇಡ ! ನಿನ್ನ ಅಪರಾಧವನ್ನು ಕ್ಷಮಿಸುತ್ತೇನೆ. ಸತ್ಯವಾಗಿ ಹೇಳು” ಎಂದನು ಪರಿಚಾರಕನು " ದೃಷ್ಟಿ
ನಾಥ ? ನಿನ್ನೆ ಹಾಸಿಗೆಯನ್ನು ತೆಗೆಯಲಿಕ್ಕೆ ಬಂದಾಗ, ಕತ್ತರಿಸಲ್ಪಟ್ಟ ಭಾಗವು ನನ್ನ ದೃಷ್ಟಿಗೆ ಬಿತ್ತು. ಅದನ್ನು ಉಳಿದ ಪರಿಚಾರಕರಿಗೆ ತೋರಿಸಿದೆನು. ನಾನು ಗಾಬರಿಯಾಗಿರುವದನ್ನು ನೋಡಿ ಒಬ್ಬ ವೃದ್ಧ ಮನುಷ್ಯನು ರಪು ಮಾಡಿಸಿಬಿಡೆಂದು ಹೇಳಿದ್ದರಿಂದ ನಾನು ರಪುಗಾರನನ್ನು ಕರೆಯಿಸಿ ಮೇಲು ಹಾಸಿಗೆಯನ್ನು ಮೊದಲಿನಂತೆ ಮಾಡಿಸಿ ಬಿಟ್ಟೆನು. ಆಗ ಬಾದಶಹನು ರಪುಗಾರನನ್ನು ಕರೆಯಿಸಿ "ನೀನು ಈಗ ಕೆಲವು ದಿವಸಗಳ ಹಿಂದೆ ಒಂದು ಹಣದ ಚೀಲವನ್ನು ರಪು ಮಾಡಿದ್ದಿಯಾ? ಸತ್ಯವಾದ ಸಂಗತಿಯನ್ನು ತಿಳಿಸು"?

ರಪುಗಾರ- "ಅಹುದು; ಈಗ ನಾಲ್ಕೈದು ತಿಂಗಳುಗಳ ಹಿಂದೆ ಒಬ್ಬ ಕಾಜಿಗೆ ಒಂದು ಚೀಲವನ್ನು ರಪುಮಾಡಿ ಕೊಟ್ಟಿದ್ದೆನು".

ಬಾದಶಹ- "ಆ ಚೀಲದಲ್ಲಿ ಏನು ಯಿತ್ತು ? ಎಂಬದು ನಿನಗೆ ಗೊತ್ತು, ಅದೆಯೋ ?"

ರಪುಗಾರ- ಅದರಲ್ಲಿ ತಾಮ್ರದ ನಾಣ್ಯಗಳು ಇದ್ದವು.

ಬಾದಶಹ- ಆಕಾರ್ಯಕ್ಕೆ ನಿನಗೆ ಕಾಜಿಯು ಏನು ಕೊಟ್ಟನು.

ರಪುಗಾರ- ಎರಡು ರೂಪಾಯಿಗಳನ್ನೂ ಕೊಟ್ಟಿದ್ದನು.

ಬಾದಶಹ- ಅವುಗಳನ್ನು ನೀನು ವ್ಯಯಮಾಡಬಿಟ್ಟರುವಿಯೋ ! ಅಥವಾ ಇಟ್ಟುಕೊಂಡಿರುವಿಯೋ?

ರಪುಗಾರ- ಒಂದು ರೂಪಾಯಿಯನ್ನು ವ್ಯಯಮಾಡಿದ್ದೇನೆ, ಒಂದು ಹಾಗೇ ಅದೆ.

ಬಾದಶಹ- ಹಾಗಾದರೆ ; ಆ ರೂಪಾಯಿಯನ್ನು ಶೀಘ್ರವಾಗಿ ತೆಗೆದುಕೊಂಡು ಬಾ.

ರಪುಗಾರನು ರೂಪಾಯಿಯನ್ನು ತರಲಿಕ್ಕೆ ಹೋಗಲು, ಕಾಜಿಯನ್ನೂ ಆ ಸ್ತ್ರೀಯಳನ್ನೂ ಕರೆಯಿಸಿಕೊಂಡನು. ಸ್ವಲ್ಪ ಅವಧಿಯೊಳಗಾಗಿ ರಪುಗಾರನು ಬಂದನು. ಅವನನ್ನು ನೋಡಿದ ಕೂಡಲೆ ಕಾಜಿಯ ಮೋರೆಯು ಇಳಿಯಿತು. ಅವನ ಬಾಡಿದ ಮುಖವು ದೃಷ್ಟಿಗೆ ಬಿದ್ದ ಕೂಡಲೆ ಬಾದಶಹನಿಗೆ ಕಾಜಿಯು ಅಪರಾಧಿಯಾಗಿರುವನೆಂದು ನಿಶ್ಚಯವಾಗಿ ಹೋಯಿತು. ಬಾದಶಹನು ಆ ರೂಪಾಯಿಯನ್ನು ಆ ಸ್ತ್ರೀಯಳ ಕೈಯಲ್ಲಿ ಕೊಟ್ಟು "ಇದರಮೇಲೆ ನೀನು ಮಾಡಿರುವ ಚಿನ್ನವು ಅದೆಯೋ ಹ್ಯಾಗೆ!ಎಂಬದನ್ನು ಪರೀಕ್ಷಿಸಿ ಹೇಳು" ಎಂದು ಹೇಳಿದನು. ಅವಳು ಒಳ್ಳೇ ತೀಕ್ಷ್ಣ ದೃಷ್ಟಿಯಿಂದ ನೋಡಿ ಆ ಚಿನ್ನವನ್ನು ಬಾದಶಹನಿಗೆ ತೋರಿಸಿದಳು. ಆಮೇಲೆ ಆ ಚೀಲವನ್ನು ರಪ್ತುಗಾರನಿಗೆ ತೋರಿಸಿ,-"ನೀನು ರಪುಮಾಡಿದ ಚೀಲವು ಇದೆಯೋ?
೩೩)
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,
೨೫೭


ರಫ್ತುಗಾರ- ಜೀಯಾ ? ಅಹುದು ಇದೇ ಚೀಲವು.
ಬಾದಶಹ- ನೀನು ಯಾವ ಸ್ಥಳದಲ್ಲಿ ರಫ್ತುಮಾಡಿರುವಿ ! ಎಂಬದನ್ನು ತೋರಿಸು.
ರಫ್ತುಗಾರ- ಇಲ್ಲಿಯೇ ಮಾಡಿದ್ದೇನೆ ನೋಡಬೇಕು.
ಬಾದಶಹ- (ಕಾಜಿಯನ್ನು ಕುರಿತು) ಯಾಕೆ ಇದರಮೇಲೆ ನಿನ್ನ ಅಭಿಪ್ರಾ ಯವೇನು!
ಆಗ ಕಾಜಿಯು ಹಿಂದೆಮುಂದೆ ತಿಳಿಯದೆ ನಿಂತುಕೊಂಡನು, ಅಧೋವದನನಾಗಿ ನೆಲವನ್ನು ನೋಡಹತ್ತಿದನು. ಆ ಕೂಡಲೇ ಇವನನ್ನು ಬಂಧನಮಾಡಿರಿ ಎಂದು ಸೇವಕರಿಗೆ ಆಜ್ಞಾಪಿಸಿದನು ಆಮೇಲೆ ಆ ಕಾಜಿಯ ಗೃಹಕ್ಕೆ ಹೋಗಿ ಶೋಧಮಾಡಿಸಲು ಚೀಲದಲ್ಲಿ ತುಂಬಿದ ಎಲ್ಲ ರೂಪಾಯಿಗಳು ದೊರೆತವು. ಆ ಸ್ತ್ರೀಯು ಪ್ರತಿಯೊಂದು ರೂಪಾಯಿಯ ಮೇಲೆ ತಾನು ಮಾಡಿದ ಚಿನ‍್ಹವನ್ನು ತೋರಿಸಿದಳು, ಬಾದಶಹನು ಕಾಜಿಯ ಸ್ವತ್ತನ್ನೆಲ್ಲ ಸರಕಾರಕ್ಕೆ ಸೇರಿಸಿಬಿಡಿರಿ ಎಂದು ಅಪ್ಪಣೆಮಾಡಿದನು, ಆ ಮೇಲೆ ಆ ಸ್ತ್ರೀಯಳಿಗೆ ಆ ರೂಪಾಯಿಗಳನ್ನೆಲ್ಲ ಕೊಟ್ಟು ಇನ್ನು ಮೇಲೆ ಹಣವನ್ನು ಪರರ ಸ್ವಾಧೀನಕ್ಕೆ ಕೊಡಬೇಕಾದರೆ ವಿಚಾರಮಾಡಿಕೊಂಡು ಕೊಡು! ಎಂದು ಬುದ್ಧಿಗಲಿಸಿ ಕಳುಹಿಕೊಟ್ಟನು.

-(೧೪೯, ದಿಲ್ಲಿಯಲ್ಲಿ ಕಾಕಪಕ್ಷಿಗಳು ಎಷ್ಟು ಅವೆ !)-

ಒಂದು ದಿವಸ ಬಾದಶಹನು ಎಲ್ಲರಿಗಿಂತಲೂ ಮುಂಚಿತವಾಗಿಯೇ ಓಲಗದಲ್ಲಿ ಬಂದು ಕುಳಿತುಕೊಂಡು ಬಂದ ಬಂದವರಿಗೆಲ್ಲ "ದಿಲ್ಲಿಯಲ್ಲಿ ಕಾಕ ಪಕ್ಷಿಗಳು ಗಳು ಎಷ್ಟು ಅವೆ! ” ಎಂದು ಪ್ರಶ್ನೆ ಮಾಡಹತ್ತಿದನು. ಕಾಗೆಗಳ ಸಂಖ್ಯೆಯ ನ್ನು ಎಣಿಸುವರಾರು ! ಈ ಪ್ರಶ್ನೆಗೆ ಯಾರೂ ಉತ್ತರವನ್ನು ಕೊಡದೆ ಸ್ವಸ್ಥವಾಗಿ ಕುಳಿತುಕೊಂಡು ಬಿಟ್ಟರು. ಬೀರಬಲನು ನಿಯಮಿತವಾದ ಸಮಯಕ್ಕೆ ಬಂದನು. ಆವನಿಗೂ ಬಾದಶಹನು ಇದೇ ಪ್ರಶ್ನೆಯನ್ನು ಮಾಡಿದನು ಕೂಡಲೇ ಬೀರಬಲನು ತತ್ಕಾಲಕ್ಕೆ- "ನರವರ ? ನಮ್ಮ ದಿಲ್ಲಿಯಲ್ಲಿ ಒಟ್ಟು ಹದಿನೈದುನೂರಾ ಐವತ್ತೈದು ಕಾಗೆಗಳು ಇರುವವು ” ಎಂದು ಉತ್ತರ ಕೊಟ್ಟನು. ಈ ಉತ್ತರದಿಂದ ಸಭಾಸದರಿಗೂ ಬಾದಶಹನಿಗೂ ಅತ್ಯಾಶ್ಚರ್ಯವಾಯಿತು. ಆಗ ಬಾದಶಹನು -"ಈ ಸಮಯದಲ್ಲಿ ನೀನು ಲೆಕ್ಕ ಮಾಡಿದವನಂತೆಯೇ ಹೇಳಿಬಿಟ್ಟೆ ? ಈ ಲೆಕ್ಕವನ್ನು ಮಾಡಲಿಕ್ಕೆ ನಿನಗೆ ಸಂಧಿಯು ಯಾವಾಗ ಸಿಕ್ಕಿತು, ನೀನು ಹೇಳಿದ ಸಂಖ್ಯೆಯು ಮಿಥ್ಯವಾಗಿ ಕಾಣುತ್ತದೆ?" ಎಂದನು. * ಬೀರಬಲ-ಸರಕಾರ? ನಾನು ಹೇಳಿದ ಸಂಖ್ಯೆಯು ಅಸತ್ಯವಾದದ್ದಲ್ಲ ನಿಜವಿರುತ್ತದೆ.

ಬಾದಶಹ-ನೀನು ಹೇಳಿದಸಂಖ್ಯೆಯಲ್ಲಿ ಒಂದು ನ್ಯೂನಾಧಿಕವಾಗಿ ಕಂಡುಬಂದರೆ ನಿನಗೆ ಹದಿನೈದುಸಾವಿರದ ಮುನ್ನೂರಾ ಅರವತ್ತು ರೂಪಾಯಿಗಳನ್ನು ದಂಡಮಾಡಲಾದೀತು ವಿಚಾರ ಮಾಡಿಕೊಂಡು ಹೇಳು?

ಬೀರಬಲ-ನಾನು ಈಗ ಹೇಳಿದಗಣನೆಗೆ ಸರಿಯಾಗಿ ಕಾಗೆಗಳು ಇರುವದು ನಿಜವು; ನಾನು ಮಿಥ್ಯಾವಾದಿಯಲ್ಲ ನೀವು ಒಂದುವೇಳೆ ಲೆಕ್ಕಮಾಡಿ ನೋಡಲಾಗಿ ಒಂದೆರಡು ನ್ಯೂನಾಧಿಕವಾಗಿ ಕಂಡುಬಂದರೆ ಅದಕ್ಕೆ ನಾನು ಅಪರಾಧಿಯಾಗುವದಿಲ್ಲ, ಯಾಕಂದರೆ ನಾನು ಹೇಳಿದ ಸಂಖ್ಯೆಗಿಂತ ಹೆಚ್ಚು ಕಂಡುಬಂದರೆ ಪರಸ್ಥಳದಿಂದ ಬಂದಿರಬಹುದು; ಕಡಿಮೆಯಾಗಿ ತೋರಿದರೆ ಪರಸ್ಥಳಕ್ಕೆ ಹೋಗಿರಬಹುದು; ಯಾಕಂದರೆ- ಪಕ್ಷಿಗಳು ಪ್ರತಿದಿವಸ ಹೊರಗೆ ಹೋಗುವವು ಎಷ್ಟೋ ಇರುವವು. ಬರುವಂಥವು ಎಷ್ಟೋಇರುವವು. ಹೀಗೆ ಆದಲ್ಲಿ ನಾನೇನು ಮಾಡಬೇಕು? " ಎಂದನು. ಬೀರಬಲನ ಸಮಯೋಚಿತ ಉತ್ತರವನ್ನು ಕೇಳಿ ಬಾದಶಹನು ಸಂಭ್ರಮವನ್ನು ಹೊಂದಿದನು.

-(೧೫೦, ಅಂಧಕಾರ.)-

ಒಂದು ದಿವಸ ಬಾದಶಹನು. ಬೀರಬಲ್ಲ! ಈ ಜಗತ್ತಿನಲ್ಲಿ ಎಲ್ಲರದೃಷ್ಟಿಗೂ ಗೋಚರವಾಗುವ ಒಂದು ವಸ್ತುವದೆ; ಆದರೆ ಅದು ಚಂದ್ರಮನ ನೇತ್ರಗಳಿಗೆ ಗೋಚರಿಸುವದಿಲ್ಲ; ಅಂಥ ಪದಾರ್ಥವು ಯಾವದು!" ಎಂದು ಪ್ರಶ್ನೆ ಮಾಡಿದನು.

ಬೀರಬಲ- "ಅಂಧಕಾರ"

-(೧೫೧. ರೇಷ್ಮೆಯು ಚಿಕ್ಕದಾಯಿತು.)-

ಒಂದುದಿವಸ ಬಾದಶಹನು ಒಂದು ಕಾಗದದ ಮೇಲೆ ಮಸಿಯಿಂದ ಒಂದು ರೇಖೆಯನ್ನು ಎಳೆದು ಬೀರಬಲನನ್ನು ಕುರಿತು—"ಈ ಕಾಗದವನ್ನು ಹರಿಯಬಾರದು, ರೇಖೆಯನ್ನು ಕೆಡಿಸಬಾರದು, ಹೀಗೆ ಮಾಡಿ ತೋರಿಸು" ಎಂದನು. ಆಕೂಡಲೆ ಬೀರಬಲನು ಲೆಕ್ಕಣಿಕೆಯನ್ನು ತೆಗೆದುಕೊಂಡು ಮೊದಲಿನ ರೇಖೆಯ ಹತ್ತರವೇ ಮತ್ತೊಂದನ್ನು ಸ್ವಲ್ಪ ಅಧಿಕವಾಗಿ ಎಳೆದು, "ಭೂಪಾಲ, ತಮ್ಮ ರೇಖೆಯು ಈಗ ಚಿಕ್ಕದಾಯಿತಲ್ಲವೇ" ಎಂದು ಕೇಳಿದನು. ಬಾದಶಹನು ಪ್ರಸನ್ನನಾದನು. -[೧೫೨ ಬಾದಶಹನು ನಗುವಂತೆ ಮಾಡಿದ್ದು.] —
ಒಂದು ದಿವಸ ಬಾದಶಹನು ಬೀರಬಲನನ್ನು ಕುರಿತು, " ಈ ದಿವಸ ನೀನು ನನ್ನನ್ನು ನಗಿಸಿದರೆ ನಿನಗೆ ಅಧಿಕವಾದ ಪಾರಿತೋಷಕವನ್ನು ಕೊಡುವೆನು ” ಎಂದನು. ಬೀರಬಲನು ಹಾಸ್ಯರಸಯುಕ್ತವಾದ ಎಷ್ಟೋ ಪ್ರಬಂಧಗಳನ್ನು ಹೇಳಿದನು. ಆದರೆ ಬಾದಶಹನು ನಗಬಾರದೆಂದು ಸಂಕಲ್ಪ ಮಾಡಿಕೊಂಡು ಕುಳಿತಿದ್ದನು. ಅಂತ್ಯದಲ್ಲಿ ಬೀರಬಲನು ಪರಾಜಿತನಾಗಿ ಬಾದಶಹನ ಕಿವಿಯ ಹತ್ತರ ತನ್ನ ಮುಖವನ್ನು ಒಯ್ದು "ಈ ದಿವಸ ನೀವು ನಗುವಿರೋ ಇಲ್ಲವೋ ಎಂಬದನ್ನು ಸತ್ಯವಾಗಿ ಹೇಳಿಬಿಡಿರಿ; ನೀವು ನಗದಿದ್ದರೆ ನಾನು ಗುದುಗುಲಿಯನ್ನು ಮಾಡುವೆನು” ಎಂದನು ಈ ಮಾತು ಕಿವಿಗೆ ಬಿದ್ದ ಕೂಡಲೆ ಬಾದಶಹನು ನಗುತ್ತ ಎದ್ದು ಅಧಿಕವಾದ ಉಚಿತವನ್ನಿತ್ತನು. ... ... ... ... -[೧೫೩, ಪ್ರಸಂಗಾವ ಧಾನವು ಅಧಿಕವಾದದ್ದು.]- ಒಂದುದಿವಸ ಬೀರಬಲನು ಯಮುನಾ ನದಿಯಿಂದ ಸ್ನಾನಮಾಡಿಕೊಂಡು ಬರುತ್ತಿದ್ದನು ಆಗ ಬಾದಶಹನು ಅವನ ಪ್ರಸಂಗಾವಧಾನವನ್ನು ಪರೀಕ್ಷಿಸಬೇಕೆಂದು ಯೋಚಿಸಿ ಅವನ ಮೈಮೇಲೆ ಮತ್ತಗಜವನ್ನು ಬಿಡಿಸಿದನು, ಮಾರ್ಗವು ಬಹಳೇ ಇಕ್ಕಟ್ಟಾಗಿತ್ತು ಪಲಾಯನಮಾಡುವದಕ್ಕೂ ಸಹ ಸಂಧಿಯು ದೊರೆಯದೇ ಹೋಯಿತು, ಅದರಿಂದ ಆತ್ಮರಕ್ಷಣೆಯನ್ನು ಹ್ಯಾಗೆ ಮಾಡಿಕೊಳ್ಳಬೇಕೆಂದು ಸುತ್ತು ಮುತ್ತು ನೋಡುವಷ್ಟ ರಲ್ಲಿ ಒಂದು ಮಲಗಿದ ಶುನಕವು ದೃಷ್ಟಿಗೆ ಬಿತ್ತು ಆ ಕೂಡಲೇ ಬೀರಬಲನು ಆ ಗ್ರಾಮ ಸಿಂಹದ ಎರಡು ಹಿಂಗಾಲುಗಳನ್ನು ಹಿಡಿದು ಗಜದ ಸೊಂಡಿಯಮೇಲೆ ಹೊಡೆದನು. ನಾಯಿಯು ಗಜದ ಗಂಡಸ್ಥಳದಲ್ಲಿ ಬಿದ್ದ ಕೂಡಲೇ ಬೊಗಳುತ್ತಾ ಉಗುರುಗಳಿಂದ ಗಾಯವನ್ನು ಮಾಡಿತು, ಮದ್ದಾನೆಯು ಗಾಬರಿಯಾಗಿ ಹಿಂದಕ್ಕೆ ಸರಿಯಿತು, ಅವಸರವನ್ನು ನೋಡಿಕೊಂಡು ಬೀರಬಲನು ಪಲಾ ಯನಮಾಡಿದನು, ಬೀರಬಲನ ಪ್ರಸಂಗಾವಧಾನವು ಅಧಿಕವಾದದ್ದೆಂದು ಬಾದಶಹನು ಒಪ್ಪಿಕೊಂಡನು.
೧೫೪ ಯಾವಪುಷ್ಪವು ಶ್ರೇಷ್ಠವಾದದ್ದು ? ಯಾವದಂತವು ಶ್ರೀಷ್ಠವಾದದ್ದು? ಯಾವಪುತ್ರನು ಶ್ರೇಷ್ಠನು ! ರಾಜರಲ್ಲಿ ಶ್ರೀ ವ್ಯತೆಯನ್ನು ಪಡೆದವನು ಯಾವನು ! ಯಾವಗುಣವು ಪ್ರಶಂಸಾರ್ಹವಾದದ್ದು!ಒಂದುದಿವಸ ಬಾದಶಹನು ಎಲ್ಲಸಭಾಸದರಿಗಿಂತಲೂ ಮುಂಚಿತವಾಗಿ ಬಂದು ಕುಳಿತುಕೊಂಡು ಎಲ್ಲ ಸಭಾಸದರು ಬಂದಮೇಲೆ ಅನವರತಾ ಎಂಬವನನ್ನು ಕುರಿತು ಮೇಲೆಬರೆದ ಪ್ರಶ್ನೆಗಳನ್ನು ಮಾಡಿದನು. ಆಗ ಅನವರಖಾನನು, ಜಹಾಪನಾ ? ನಾನು ಹೇಳಿದ ಉತ್ತರವು ತಮಗೆ ಸರಿ ಬಾರದಿದ್ದರೆ ನನಗೆ ಅವಮಾನವಾದೀತು ! ಅದರಿಂದ ಎಲ್ಲರ ಅಭಿಪ್ರಾಯವನ್ನು ಕೇಳಿಕೊಂಡು ಉತ್ತರ ಕೊಡುತ್ತೇನೆ ಎಂದು ಹೇಳಿದನು. ಈಮಾತಿಗೆ ಬಾದಶಹನು ಸಮ್ಮತಿಸಿದ್ದರಿಂದ ಅನವರಖಾನನು ಯಾವತ್ತು ಸಭಾಸದರ ಅಭಿಪ್ರಾಯವನ್ನು ಕೇಳಿಕೊಂಡು ಭೂವರ ? ಪುಷ್ಪಗಳಲ್ಲಿ ಮಲ್ಲಿಕಾಪುಷ್ಪವು ಶ್ರೇಷ್ಠವಾದದ್ದು, ದಂತಗಳಲ್ಲಿ ಗಜದಂತವು ಶ್ರೇಷ್ಠವಾದದ್ದು, ರಾಜಪುತ್ರ ನು ಎಲ್ಲರಿಗಿಂತಲೂ ಶ್ರೇಷ್ಠನು, ರಾಜರಲ್ಲಿ ಚಕ್ರವರ್ತಿಯಾದವನು ಮಿಗಿಲಾದವನು, ಗುಣಗಳಲ್ಲಿ ವಿದ್ಯೆಯು ಶ್ರೇಷ್ಠವಾದದ್ದು; ” ಎಂದು ನಿವೇದಿಸಿದನು. ಈ ಉತ್ತರಗಳಿಂದ ಬಾದಶಹನ ಮನಸ್ಸು ತೃಪ್ತವಾಗಲಿಲ್ಲ, ಕಿಂಚಿತ್ಕಾಲದ ಮೇಲೆ ಬೀರಬಲನು ಬರಲು ಅವನಿಗೆ ಅದೇ ಪ್ರಶ್ನೆಗಳನ್ನು ಮಾಡಿದನು, ಆಕೂಡಲೇ ಬೀರಬಲನು ಸ್ವಾಲ್ಪಾದರೂ ಯೋಚಿಸದೆ - “ ಸರಕಾರ ಹೂವುಗಳಲ್ಲಿ ಹತ್ತಿಯ ಹೂವು ಮೇಲಾದದ್ದು, ಯಾಕಂದರೆ ಅದರಿಂದ ವಸ್ತ್ರಗಳು ಉತ್ಪನ್ನವಾಗುತ್ತವೆ ಅದರಿಂದ ಯಾವತ್ತು ಮನುಷ್ಯರ ಶರೀರಸಂರ ಕ್ಷಣೆಯಾಗುತ್ತದೆ. ದಂತದಲ್ಲಿ ನೇಗಿಲದ ದಂತವು ಶ್ರೇಷ್ಠವಾದದ್ದು ; ಯಾಕಂದರೆ ಅದರಿಂದಲೇ ಭೂಮಿಯನ್ನು ಹಸನುಮಾಡಲಿಕ್ಕೆ ಬರುತ್ತದೆ. ಗೋಪುತ್ರನು ಎಲ್ಲರಕಿಂತಲೂ ಶ್ರೇಷ್ಠನು, ಯಾಕಂದರೆ ಅವನಿಂದ ಹಲವು ಪ್ರಕಾರದ ಪ್ರಯೋಜನಗಳುಂಟಾಗುತ್ತವೆ. ರಾಜರಲ್ಲಿ ಇಂದ್ರನು ಮಿಗಿಲಾದವನು, ಯಾಕಂದರೆ ಅವನು ವೃಷ್ಟಿಯನ್ನುಂಟುಮಾಡಿ ಭೂಲೋಕದೊಳಗಿನ ಪ್ರಾಣಿಗಳನ್ನು ಸಂರಕ್ಷಿಸುತ್ತಾನೆ; ಸರ್ವಗುಣಗಳಲ್ಲಿ ಧೈಯ್ಯವು ಮಿಗಿಲಾದದ್ದು , ಯಾಕಂದರೆ ಧೈರ್ಯವಿಲ್ಲದಿದ್ದರೆ ಉಳಿದಗುಣಗಳಿಂದ ಯಾವ ಪ್ರಯೋಜನವೂ ಆಗುವಂತೆ ಇಲ್ಲ; ಈ ಉತ್ತರಗಳಿಂದ ಬಾದಶಹನ ಮನಸ್ಸು ಪ್ರಸ ನ್ನವಾಯಿತು.
- ( ೧೫೫, ಎಲ್ಲರ ಕ್ಕಿಂತಲೂ ಹೆಚ್ಚಿನವನು ಯಾರು ? ) * - ಒಂದು ದಿವಸ ಬಾದಶಹ ಬೀರಬಲನೂ ಉಪವನದಲ್ಲಿ ಕುಳಿತು ಕೊಂಡು ವಾಯು ಸೇವನೆಯನ್ನು ಮಾಡುತ್ತಿದ್ದರು ಆಗ ಬಾದಶಹನು ಬೀರಬಲ್ಲ ! ಈ ಪ್ರಪಂಚದಲ್ಲಿ ಎಲ್ಲರಕ್ಕಿಂತಲೂ ಹೆಚ್ಚಿನವನು ಯಾರು? ” ಎಂದು ಕೇಳಿದನು ಆಗ ಬೀರಬಲನು ಆಲೋಚಿಸಿದ್ದೇನಂದರೆ, “ ಇವನಿಗೆ ರಾಜ್ಯ ಮದವು ತಲೆಗೇರಿದೆ ತಾನೇ ಹೆಚ್ಚಿನವನೆಂದು ತಿಳಿದುಕೊಂಡು, ಈ ಪ್ರ ಕೈಯನ್ನು ಮಾಡಿದ್ದಾನೆ ಇವನ ಮದವನ್ನು ಇಳಿಸಬೇಕು” ಎಂದು ನಿಶ್ಚಯಿಸಿ, "ಭೂವರ ! ಎಲ್ಲರಕಿಂತಲೂ ಚಿಕ್ಕಬಾಲಕನು ಹೆಚ್ಚಿನವನು ರಾಜನೇ ಆಗಲಿ ಬಲವಂತನೇ ಆಗಲಿ, ಧನವಂತನೇ ಆಗಲಿ, ಅವನು ಬಾಲಕನಕಿಂತಲೂ ಹೆಚ್ಚಿನವನು ಆಗಲಾರನೆಂದು ನಾನು ನಂಬಿದ್ದೇನೆ ” ಎಂದನು. ಈ ಮಾತುಗಳನ್ನು ಕೇಳಿ ಬಾದಶಹನು ನಗ ಹತ್ತಿದನು ಆಮೇಲೆ ಇದರಕಾರಣವನ್ನು ವಿವರಿಸಿ ಹೇಳೆಂದು ಅಪ್ಪಣೆ ಮಾಡಿದನು ಆಗ ಬೀರಬಲನು ಈ ಸಂಗತಿಯನ್ನು ಶಬ್ದಗಳಿಂದ ತಿಳಿಸಿ ಹೇಳಲಿಕ್ಕೆ ಬರುವದಿಲ್ಲ, ಅದನ್ನು ಪರೀಕ್ಷಿಸಿ ನೋಡಬೇಕು ” ಎಂದನು.
ಮುಂದೆ ಎಂಟು ದಿವಸಗಳಾದ ಮೇಲೆ ಬಾದಶಹನು ಒಂದೂವರೆ ಎರಡು ವರುಷಗಳಾಗಿದ್ದ ಒಬ್ಬ ಸುಂದರ ಬಾಲಕನನ್ನು ಕರೆದುಕೊಂಡು ಬಾದಶಹನ ಸನ್ನಿಧಿಗೆ ಬಂದನು ಆ ಬಾಲಕನು ಅತಿ ಚಪಲನಾಗಿದ್ದು ಸುಂದರನಾಗಿದ್ದನು ಬಾದಶಹನು ಆ ಬಾಲಕನನ್ನು ನೋಡಿ ಪ್ರಸನ್ನ ಮನನಾಗಿ ಆ ಬಾಲಕನನ್ನು ಎತ್ತಿಕೊಂಡು ಮುದ್ದಾಡ ಹತ್ತಿದನು ಆ ಬಾಲಕನು ತನ್ನಬಾಲ ಭಾವಕ್ಕನುಗುಣವಾಗಿ ಬಾದಶ ಹನ ವದನ ಕೇಶಗಳನ್ನು ಜಗ್ಗಿದನು ಆಗ ಬಾದಶಹನು ಸ್ವಲ್ಪ ಕುಪಿನಾಗಿ “ ಬೀರಬಲ! ಇಂಥ ಬಾಲಕನು ನಿನಗೆ ಎಲ್ಲಿ ದೊರಕಿದನು ಒಳ್ಳೆ ನಿಭೀತನಾಗಿದ್ದಂತೆ ಕಂಡು ಬರುತ್ತದೆ” ಎಂದನು ಆಗ ಬೀರಬಲನು ದೃಷ್ಟಿ ! ತಾವು ಬಾದಶಹ ರಾಗಿದ್ದರೇನು? ನಿಮ್ಮಕ್ಕಿಂತಲೂ ಈ ಬಾಲಕನೇ ಹೆಚ್ಚಿನವನುಯಾಕಂದರೆ ಅವನು ಮನಸ್ಸಿಗೆ ಬಂದದ್ದನ್ನು ಮಾಡಿಬಿಡುತ್ತಾನೆ ತಮ್ಮ ಶರೀರವನ್ನು ಸ್ಪರ್ಶ ಮಾಡುವಷ್ಟು ಸಾಮರ್ಥ್ಯವು ಯಾವನಲ್ಲಿರುವದು? ಹೀಗಿದ್ದರೂ ಈ ಬಾಲಕನು ನಿಮ್ಮ ವದನದ ಕೇಳಗಳಿಗೆ ಕೈಹಾಕಿದನು ಆದ್ದರಿಂದ ಎಲ್ಲರ ಕ್ಕಿಂತಲೂ ಬಾಲಕನು ಹೆಚ್ಚಿನವನೆಂದು ಹೇಳಿದ್ದೆನು ” ಅಂದನು ಇದನ್ನು ಕೇಳಿ ಬಾದಶಹನು ತುಷ್ಟನಾಗಿ ಆ ಬಾಲಕನನ್ನು ಬೀರಬಲನ ವಶಕ್ಕೆ ಕೊಟ್ಟನು,
ಬೀರಬಲನು ಆ ಬಾಲಕನನ್ನು ತನ್ನ ಮನೆಗೆ ಕರೆದುಕೊಂಡುಹೋಗಿ ಉತ್ತಮವಾದ ವಸ್ತ್ರಾಭರಣಗಳನ್ನಿತ್ತು, ಆ ಬಾಲಕನ ಮಾತಾ ಪಿತೃಗಳಿಗೆ ಒಪ್ಪಿಸಿದನು.
-( ೧೫೬, ಬೀರಬಲ್ಲ ರಾಂಧತಗಾಯ ”)--
ಬಾದಶಹನು ಬೀರಬಲನೂ ಯಾವಾಗಲಾದರೂ ಒಮ್ಮೆಮ್ಮೆ ವಿನೋದದ ಮಾತುಗಳನ್ನಾಡುತ್ತ ಕುಳಿತು ಕೊಳ್ಳುತ್ತಿದ್ದರು ಬೀರಬಲನು ವ್ಯಗಾರ್ಥವುಳ್ಳ ಶಬ್ದಗಳನ್ನು ಪ್ರಯೋಗಿಸಿದ ಕೂಡಲೆ, ಅದರ ನಿಜವಾದ ಅರ್ಥವು ತಿಳಿಯದೆ, ಸಿಟ್ಟಿಗೇಳುತ್ತಿದ್ದನು ಆದರೆ ಬೀರಬಲನು ಎಂದೂ ಕೃದ್ಧಾನಾ ಗುತ್ತಿದ್ದಿಲ್ಲ, ಒಂದು ದಿವಸ ಬೀರಬಲನಿಗೆ ಸಿಟ್ಟಗೆಬ್ಬಿಸಬೇಕೆಂದು ಬಾದಶಹನು ನಿಶ್ಚಯಿಸಿಕೊಂಡು ಮಾತು ಮಾತುಗಳನಾಡುತ್ತ " ಬೀರಬಲ್ಲ ರಾಂಧ ತಗಾಯಿ ” ಅಂದರೆ ( ಗೋವನ್ನು ಸೇವಿಸುವವನು ) ಎಂದನು ಬಾದಶಹನಾಡಿದ ಗೂಢವಾಕ್ಯದ ಎರಡೂಬಗೆಯ ಅರ್ಥಗಳು ಬೀರಬಲನ ಮನಸ್ಸಿನಲ್ಲಿ ಹೊಳೆದವು ಅವನು ಕೃದ್ಧನಾಗದೆ, ಬಾದಶಹ ಶುಕರ ಕಾಯ ?” ಎಂದನು ಅದನ್ನು ಕೇಳಿದ ಕೂಡಲೆ ಬಾದಶಹನು ಅತಿ ಕ್ರುದ್ಧನಾಗಿ “ ಬೀರಬಲ! ನನಗೆ ಹಂದಿಯನ್ನು ತಿನ್ನಿಸುವಿಯಾ? ” ಎಂದು ಕೇಳಿದನು ಅದಕ್ಕೆ ಬೀರಬಲನು ಪ್ರತ್ಯುತ್ತರವಾಗಿ “ ಪೃಥ್ವಿಕ, ತಾವುಮಾತ್ರ ನನಗೆ ಗೋವನ್ನು ಸೇವಿಸುವವನು ಎಂದು ಅನ್ನ ಬಹುದೇ ?” ಎಂದು ಕೇಳಿದನು ಆಗ ಬಾದಶಹನು ತನ್ನ ಮಾತಿನ ಅರ್ಥವನ್ನು ಪಲ್ಲಟಮಾಡಿ, “ ನಾನು ಹಾಗೆ ಅಂದಿರುವದಿಲ್ಲ, ಗೋವನ್ನು ಆರಾಧಿಸುವ ಕಾಲದಲ್ಲಿ ಗಾಯನ ಮಾಡುತ್ತೀ ಎಂದು ಅಂದನು ಅದಕ್ಕೆ ನೀನೇಕೆ ಈವರಿ ಕೋಪವನ್ನು ತಾಳಿದಿ! ” ಎಂದು ಕೇಳಿದನು ಆ ಕೂಡಲೆ ಬೀರಬಲನು ಪೃಥ್ವಿನಾಥ ನಾನು ತಮಗೆ ಹಂದಿಯನ್ನು ತಿನ್ನುವವನು ಎಂದು ಯಾವಾಗ ನುಡಿದನು, ನಾನು ಹೀಗೆ ಅಂದೆನಲ್ಲಾ ಬಾದಶಹನು ಶುಕರ ಕಾಯ. ಅಂದರೆ ಕುಕಗಳನ್ನು ರಕ್ಷಿಸಿದ್ದಾನೆ. ” ಎಂದು ನುಡಿದಿದ್ದೆನು ತಮಗೆ ನನ್ನ ಮಾತಿನ ಭಾವವು ಸಿಳಿಯದೆ, ವೃಥಾ ಕೊಡವನ್ನು ತಾಳಿದಿರಿ! ” ಎಂದು ಅಂದನು. ಈ ಪ್ರಕಾರ ಅವರಿಬ್ಬರು ತಮ್ಮ ತಮ್ಮ ಮನಸ್ಸಿನ ಸಮಾಧಾನ ಮಾಡಿಕೊಂಡರು.
– ೧೫೭, ಫಕೀರನು ನಿಷ್ಪೃಹತೆಯನ್ನು ತೋರಿಸಿದ್ದು.
ಒಬ್ಬ ಬ್ರಾಹ್ಮಣರು ತನ್ನ ಹೊಟ್ಟೆಗೆ ಸಹಾ ಪೂರ್ಣ ತಿನ್ನದೆ, ಒಂದು ಸಾವಿರ ರೂಪಾಯಿಗಳನ್ನು ಕೂಡ ಹಾಕಿದ್ದನು ಅವನ ಮನಸ್ಸಿನಲ್ಲಿ ಕಾಶೀ ವಿಶ್ವನಾಥನ ದರುಶನ ತೆಗೆದುಕೊಂಡು ಬರಬೇಕೆಂಬ ಸುಬುದ್ಧಿಯು ಹುಟ್ಟಿತು ಆಗ ತನ್ನ ಬಳಿಯಲ್ಲಿದ್ದ ರೂಪಾಯಿಗಳನ್ನು, ಯಾವನಾದರೊಬ್ಬ ವಿಶ್ವಾನಿಕನಾದ ಮನುಷ್ಯನ ಬಳಿಯಲ್ಲಿ ಇಟ್ಟು ಹೋಗಬೇಕೆಂದು ಯೋಚಿಸಿ ಶೋಧ ನಡೆಯಿಸಿದನು.
ಅದೇ ಊರಲ್ಲಿ ಒಬ್ಬ ಫಕೀರನು ಊರಹೊರಗೆ ಒಂದು ಗುಡಿಸಿಲವನ್ನು ಕಟ್ಟಿಕೊಂಡು ಸಾಯಂಕಾಲದ ತನಕ ಊರೊಳಗೆ ಬಂದು ಭಿಕ್ಷೆಯನ್ನೆತ್ತಿಕೊಂಡು ಪುನಃ ತನ್ನ ಪರ್ನಕುಟೀರಕ್ಕೆ ಬರುತ್ತಿದ್ದನು ಹೀಗಿರಲು ಒಂದಾನೊಂದು ದಿವಸ ಆ ಬ್ರಾಹ್ಮಣನಿಗೆ ಈ ಫಕೀರನ ಸಂದರ್ಶನವಾಯಿ ತು ಅವನನ್ನು ನೋಡಿದ ಕೂಡಲೆ ಆ ಬ್ರಾಹ್ಮಣನ ಮನಸ್ಸಿನಲ್ಲಿ " ಈ ಫಕೀರನ ಬಳಿಯಲ್ಲಿ ನನ್ನ ಹಣವನ್ನಿಟ್ಟರೆ, ಸುರಕ್ಷಿತವಾಗಿ ಇರಬಹುದು, ಎಂಬ ಆಲೋಚನೆಯು ಹುಟ್ಟಿತು ಮರುದಿವಸ ಆ ಬಾ ಬ್ರಾಹ್ಮಣನು ರೂಪಾಯಿಗಳನ್ನು ಕಟ್ಟಿಕೊಂಡು ಫಕೀರನ ಹತ್ತಿರಬಂದು : ಸಾಂ ಈ ಸಾಹೇಬ! ನಾನು ಕಾಶೀಯಾತ್ರೆಗೆ ಹೊರಡಬೇಕೆಂದು ಯೋಚಿಸಿದ್ದೇನೆ ನನ್ನಲ್ಲಿರುವ ಈ ಹಣವನ್ನು ಸಂಗಡ ತೆಗೆದುಕೊಂಡುಹೋದರೆ ಮಾರ್ಗದಲ್ಲಿ ಚೋರೋಪ ದ್ರದ ಭಯವುಂಟಾಗುವದು ಅದರಿಂದ ಈ ಹಣವನ್ನು ತಮ್ಮ ವಶಕ್ಕೆ ಕೊಟ್ಟು ಹೋಗಬೇಕೆಂದು ಮಾಡಿದ್ದೇನೆ ” ಎಂದು ವಿನಯಪೂರಕವಾಗಿ ಹೇಳಿಕೊಂಡನು. ಅದನ್ನು ಕೇಳಿ ಫಕೀರನು. “ ಛೇ, ಛೇ ಈಕೆಲಸವು ನನ್ನಿಂದ ಅಸಾಧ್ಯವು. ನೀನು ಈ ಹಣವನ್ನು ಬೇರೆಯವರ ವಶಕ್ಕೆ ಕೊಟ್ಟು ಹೋಗು ಎಂದನು. ಈಪ್ರಕಾರ ನಿಸ್ಪೃಹತೆಯ ಮಾತುಗಳನ್ನು ಕೇಳಿ ಆ ಫಕೀರನ ಮೇಲೆ ಹೆಚ್ಚು ವಿಶ್ವಾಸವು ಹುಟ್ಟ, " ಶಾಹಸಾಹೇಬ ? ತಾವೇ ಕೃಪೆಮಾಡಿ ಈ ಹಣವನ್ನು ಇಟ್ಟುಕೊಳ್ಳಬೇಕು ” ಎಂದು ಹೇಳಿದನು. ಆಗ ಫಕೀರನು ಬ್ರಾಹ್ಮಣನ ಆಗ್ರಹದಿಂದ ಒಪ್ಪಿಕೊಂಡು ಅವನಕಡೆಯಿಂದಲೇ ಒಂದುಕಡೆಯಲ್ಲಿ ಭೂಗತಮಾಡಿಸಿದನು, ಫಕೀರನ ಹೇಳಿಕೆಯಂತೆ ವ್ಯವಸ್ಥೆಯನ್ನು ಮಾಡಿ ಬ್ರಾಹ್ಮಣನು ನಿಶ್ಚಿಂತನಾಗಿ ಯಾತ್ರೆಗೆ ಹೊರಟುಹೋದನು.
ಮುಂದೆ ಎರಡು ವರುಷಗಳ ಮೇಲೆ ಬ್ರಾಹ್ಮಣನು ಯಾತ್ರೆಯಿಂದ ಮರಳಿಬಂದು ತನ್ನ ಹಣವನ್ನು ತೆಗೆದುಕೊಳ್ಳಬೇಕೆಂದು ಫಕೀರನ ಬಳಿಗೆ ಹೋಗಿ ತನ್ನ ಹಣವನ್ನು ಕೊಡಿರೆಂದು ಕೇಳಿದನು. ಆಗ ಫಕೀರನು ನಾನು ನಿನ್ನ ಹಣವನ್ನು ಕಣ್ಣೆತ್ತಿ ಸಹಾ ನೋಡಿಲ್ಲ, ನೀನು ಎಲ್ಲಿ ಭೂಗತ ಮಾಡಿದ್ವಿಯೋ ಅಲ್ಲಿಯೇ ಇರಬಹುದು ತೆಗೆದುಕೊಂಡು ಹೋಗು ? ಎಂದು ಹೇಳಿದನು.ಬ್ರಾಹ್ಮಣನು ಆಸ್ಥಳವನ್ನು ಅಗಿದು ನೋಡಿದನು ಹಣವು ಇದ್ದಿಲ್ಲ;ಬಹಳ ದುಃಖಿತನಾಗಿ ಫಕೀರನ ಬಳಿಗೆ ಬಂದು ಹೇಳಿದನು ಅವನು ಆಮಾತನ್ನು ಕಿವಿಯ ಮೇಲೆಹಾಕಿಕೊಳ್ಳಲಿಲ್ಲ; ನಿರುಪಾಯವಾಗಿ ತನ್ನ ದಡ್ಡತನಕೈ ತಾನೇ ನಿಂದಿಸಿಕೊಳ್ಳುತ್ತ ಪಶ್ಚಾತ್ತಾಪಯುಕ್ತನಾಗಿ ಮನೆಗೆ ಬರುತ್ತಿರಲು, ಈ ಸಂಗತಿಯನ್ನು ಬಾದಶಹನಿಗೆ ತಿಳಿಸಿ ನೋಡಬೇಕೆಂಬ ಯೋಚನೆಯು ಹುಟ್ಟಿತು ಆ ಕೂಡಲೆ ಬಾದಶಹನಸನ್ನಿಧಿಗೆ ಬಂದು ತನ್ನ ವೃತ್ತಾಂತವನ್ನೆಲ್ಲ ನಿವೇದಿಸಿದನು ಬಾದಶಹನಿಗೆ ದೊಡ್ಡ ಯೋಚನೆಯೇ ಬಿತ್ತು ಬೀರಬಲನು ಬಳಿಯಲ್ಲಿಯೇ ಇದ್ದನು. ಅವನು ಬಾದಶಹನನ್ನು ಕುರಿತು ಶ್ರೀನಾಥ ? ತಾವು ಚಿಂತೆ ಮಾಡಬಾರದು ನಾನು ಇವನ ಹಣವನ್ನು ಇವ ನಿಗೆ ಕೊಡಿಸುತ್ತೇನೆ ” ಎಂದನು ಬಾದಶಹನು ಪ್ರಸನ್ನನಾದನು ಬೀರಬಲನು ತನ್ನ ನಂಬಿಗೆಯ ಒಬ್ಬ ಮನುಷ್ಯನನ್ನು ಕರೆದು ಅವನ ಕೈಯಲ್ಲಿ ಆಭರಣಗಳ ಒಂದು ಗಂಟನ್ನು ಕೊಟ್ಟು, ಅವನ ಕಿವಿಯಲ್ಲಿ ಏನೋ ಹೇಳಿದನು.ಅವನು ಆ ಗಂಟನ್ನು ತಕ್ಕೊಂಡು ಫಕೀರನ ಕಡೆಗೆ ಹೊರಟನು ಮುಂದೆ ಕಿಂಚಿತ್ಕಾಲದ ಮೇಲೆ ಆ ಬ್ರಾಹ್ಮಣನನ್ನು ಕರೆದು “ ನಾನು ಈಗ ಕಳುಹಿಸಿಕೊಟ್ಟಿರುವ ಮನುಷ್ಯನು ಆ ಫಕೀರನಿದ್ದ ಸ್ಥಳಕ್ಕೆ ತಲುಪಿರಬಹುದು. ನೀನು ಓಡುತ್ತ ಅಲ್ಲಿಗೆ ಹೋಗಿ ಆ ಮನುಷ್ಯನ ಸಮಕ್ಷಮಾ ನಿನ್ನ ಹಣವ ನ್ನು ಕೇಳು! ಅಂದರೆ ಆ ಕೂಡಲೆ ಕೊಟ್ಟು ಬಿಡುತ್ತಾನೆ; ಎಂದು ಹೇಳಿಕಳುಹಿಸಿದನು.
ಬೀರಬಲನ ವಿಜ್ಞಾಸಿಕನಾದ ಮನುಷ್ಯನು ಫಕೀರನ ಬಳಿಗೆ ಹೋಗಿ “ ನನ್ನ ಸರೋದರನು ಪ್ರವಾಸಕ್ಕೆ ಹೋಗಿದ್ದಾನೆ ಇನ್ನೂವರೆಗೂ ಬರಲಿಲ್ಲ ಅವನನ್ನು ಶೋಧಮಾಡಿ ಕರೆದುಕೊಂಡು ಬರಬೇಕೆಂದು ನನ್ನ ಮನಸ್ಸಿನಲ್ಲಿ ಕುತೂಹಲವು ಉತ್ಪನ್ನವಾಗಿದೆ ಅದರಿಂದ ಈ ಆಭರಣದ ಗಂಟನ್ನು ದಯಮಾಡಿ ತಮ್ಮ ಬಳಿಯಲ್ಲಿಟ್ಟುಕೊಂಡರೆ ಮಹದುಪಕಾರಮಾಡಿದಂತೆ ಆಗುತ್ತದೆ ” ಎಂದು ಹೇಳಿಕೊಳ್ಳ ಹತ್ತಿದ್ದನು. ಫಕೀರನು ನಿಸ್ಪೃಹತೆಯನ್ನು ಪ್ರಕಟೀಕರಿಸಬೇಕೆಂದು “ ನಾನು ಪರರ ಸ್ವತ್ತನ್ನು ಮುಟ್ಟುವದಿಲ್ಲ; ಆದ್ದರಿಂದ ನಿನ್ನ ದ್ರವ್ಯವನ್ನು ಬೇರೆನಂಬಿಗಸ್ತರಾದವರ ಬಳಿಯಲ್ಲಿ ಇಟ್ಟು ಹೋಗು ! ” ಎಂದು ಹೇಳಿದನು ಅದಕ್ಕೆ ಆ ಮನುಷ್ಯನು ಶಾಹಸಾಬರೇ ಪ್ರಪಂಚಿಕರಾದವರೆಲ್ಲರು ಹಣದಾಸೆಯುಳ್ಳವರೇ, ತಮ್ಮಂಥವರ ಸ್ಥಿತಿಯು ಹಾಗಲ್ಲ ನೀವು " ಪರದ್ರವ್ಯಾಣಿ ಲೋಷ್ಟವತ್ ” ಎಂದು ತಿಳಿಯತಕ್ಕವರು.ನನಗೆ ನಿಮ್ಮ ಹೊರತು ಬೇರೆಯವರ ವಿಶ್ವಾಸವಿಲ್ಲ, ಅದರಿಂದ ತಮ್ಮವಶದಲ್ಲಿಯೇ ಈ ಆಭರಣಗಳನ್ನು ಕೊಟ್ಟು ಹೋಗಬೇಕೆಂದು ಯೋಚಿಸಿದ್ದೇನೆ ” ಎಂದು ಹೇಳಿ ಆ ಗಂಟನ್ನು ಬಿಚ್ಚಿ ತೋರಿಸಿದನು. ಆಗ ಫಕೀರನ ಮನಸಿನಲ್ಲಿ ಆ ಶಾಂಕುರವು ಉತ್ಪನ್ನ ವಾಯಿತು, ಅಷ್ಟರಲ್ಲಿ ಮೊದಲಿನ ಬ್ರಾಹ್ಮಣನು ಬಂದು “ ಸಾಂ ಇಸಾಹೇಬ ! ನಾನು ಯಾತಾರ್ಥವಾಗಿ ಗಮನ ಮಾಡುವ ಕಾಲದಲ್ಲಿ ನಿಮ್ಮ ವಶಕ್ಕೆ ಕೊಟ್ಟು ಹೋದ ಧನವನ್ನು ಕೃಪಾಳುಗಳಾಗಿ ಕೊಟ್ಟು ಬಿಡಬೇಕು, ತಮ್ಮಂಥ ಸಾಧುಗಳುವರದ್ರವ್ಯಾ ಪಹಾರ ಮಾಡುವದು ಉಚಿತವಲ್ಲ ?” ಎಂದು ಹೇಳಲು ಫಕೀರನು ತನ್ನ ಮನದಲ್ಲಿಯೇ " ಈ ಬ್ರಾಹ್ಮಣನು ಹೆಚ್ಚು ಹೆಚ್ಚು ಮಾತಾಡಹತ್ತಿದರೆ ನನ್ನ ಅಪನಂಬಿಕೆಯ ಕೃತ್ಯವು ಬಯಲಿಗೆ ಬರುವದು ಹಾಗಾದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ” ವೆಂಬ ಸಾಮತಿಯಂತೆ ಈ ಮನುಷ್ಯನು ತಂದಿರುವ ಬೆಲೆಯುಳ್ಳ ಆಭರಣಗಳೆಲ್ಲ ಕೈಬಿಟ್ಟು ಹೋದಾವು ! ” ಎಂದು ಯೋಚಿಸಿಕೊಂಡು ಆ ಬ್ರಾಹ್ಮಣನನ್ನು ಕುರಿತು " ಎಲೈ ತಿಳಿಗೇಡಿಯಾದ ಬ್ರಾಹ್ಮಣನೇ ! ನೀನು ನಿನ್ನೆಯ ದಿವಸ ವ್ಯರ್ಥಶ್ರ ಮಮಾಡಿದಂತಾಯಿತು. ಮೊದಲು ಇಟ್ಟ ಸ್ಥಳವನ್ನು ಬಿಟ್ಟು ಬೇರೆಕಡೆಗೆ ಶೋಧಮಾಡಿದರೆ ಹಣವು ಸಿಗುವ ಬಗೆಹೇಗೆ ? ” ಎಂದುನುಡಿದು ಅಂಗುಲಿ ಸಂಕೇತದಿಂದ ಈ ಸ್ಥಳ ದಲ್ಲಿ ಅಗಿದು ನೋಡು ! ಅಂದರೆ ಸಿಕ್ಕಿತು ! ” ಎಂದು ಹೇಳಿದನು ಫಕೀರನು ನಿರ್ದೇಶ ಮಾಡಿ ತೋರಿಸಿದ ಸ್ಥಳದಲ್ಲಿ ಅಗಿದು ನೋಡಲು ಯಾವತ್ತು ದ್ರವ್ಯವು ಸಿಕ್ಕಿತು ಬ್ರಾಹ್ಮಣನು ದ್ರವ್ಯವನ್ನು ತಕ್ಕೊಂಡು ಬೀರಬಲನ ಬಳಿಗೆ ನ್ಯಾಯಾಲಯಕ್ಕೆ ಬಂದನು.
ಆ ಮೇಲೆ ಬೀರಬಲನು ಪ್ರತಿಷ್ಕೃತನಾದ ಒಬ್ಬ ಸೇವಕನನ್ನು ಕರೆದು ಅವನ ಕಿವಿಯಲ್ಲಿ ಏನೋ ಹೇಳಿ ಆಭರಣದ ಗಂಟನ್ನು ತೆಗೆದು ಕೊಂಡು ಫಕೀರನ ಬಳಿಗೆ ಹೋಗಿದ್ದ, ಮನುಷ್ಯನನ್ನು ಕರೆಯ ಕಳುಹಿದನು. ಅವನು ಹೋಗಿ ಆ ಮನುಷ್ಯನನ್ನು ಕುರಿತು “ ಪರದೇಶಕ್ಕೆ ಹೋಗಿದ್ದ ನಿನ್ನ ಸಹೋದರನು ಇದೇ ಈಗ ಬಂದನು ಅದರಿಂದ ತಾವು ಬೇಗನೇ ಬರ ಬೇಕು ” ಎಂದು ವಿಜ್ಞಾಪನೆ ಮಾಡಿಕೊಂಡನು. ಆಗ ಮೊದಲಿನ ಮನುಷ್ಯನು ಆ ಫಕೀರನನನ್ನು ಕುರಿತು "ಶಾಹಸಾಹೇಬ ! ನಾನು ಯಾವನ ಸಲುವಾಗಿ ಪ್ರಯಾಣಕ್ಕೆ ಸಿದ್ದನಾಗಿದ್ದೆನೋ ಅವನೇ ಇಲ್ಲಿಗೆ ಬಂದಮೇಲೆ ಆಭರಣಗಳನ್ನು ನಿಮ್ಮ ಬಲಿಯಲ್ಲಿ ಇಡುವ ಅವಶ್ಯಕತೆಯೇ ಉಳಿಯಲಿಲ್ಲ' ಎಂದು ಹೇಳಿ ಆಭರಣಗಳನ್ನೆಲ್ಲ ಕಟ್ಟಿಕೊಂಡು ಆ ಫಕೀರನಿಗೆ ಸಲಾಮು ಮಾಡಿ, ಹೊರಟುಬಂದು ಬೀರಬಲನಿಗೆ ಬೆಟ್ಟಿಯಾದನು.
ಬೀರಬಲನ ಅನುರೋಧದಂತೆ ಆ ಬ್ರಾಹ್ಮಣನೂ ಆ ಈರ್ವರು ಮನುಪ್ಯರೂ ಸಮಗ್ರ ವೃತ್ತಾಂತವನ್ನು ಬಾದಶಹನಮುಂದೆ ಕಥನಮಾಡಿದರು, ಬಾದಶಹನು ಬೀರಬಲನ ಚಾತುರ್ಯವನ್ನು ಪ್ರಶಂಸೆಮಾಡಿ ಫಕೀರನನ್ನು ಕರೆಯಿಸಿ ಉಚಿತವಾದ ದಂಡನೆಯನ್ನು ವಿಧಿಸಿದನು.
—( ೧೫೮, ಕೃಷಣನ ಸಂಪಾದನೆ. )—
ದಿಲ್ಲಿಯಲ್ಲಿ ಒಬ್ಬ ಕೃಪಣನಿದ್ದನು. ಅವನು ಹೊಟ್ಟಗೆಸಹಾ ಪೂರಾತಿನ್ನದೆ ಬಹಳದ್ರವ್ಯವನ್ನು ಸಂಪಾದಿಸಿದ್ದನು. ಆ ದ್ರವ್ಯವನ್ನು ಮನೆಯಲ್ಲಿಟ್ಟರೆ ಚೋರೋಪದ್ರವವು ಆಗುವದೆಂಬ ಭಯದಿಂದ ಆ ದ್ರವ್ಯವನ್ನೆಲ್ಲ ತೆಗೆದುಕೊಂಡು ಹೋಗಿ ಅರಣ್ಯದಲ್ಲಿ ಒಂದುಬಿಲ್ವವೃಕ್ಷದ ಅಡಿಯಲ್ಲಿ ಹೂಳಿಟ್ಟ ನು ಇದರಿಂದಲೂ ಅವನ ಮನಸ್ಸಿನ ಸಮಾಧಾನವಾಗದೆ ನಾಲ್ಕೈದು ದಿವಸ ಕೊಮ್ಮೆ ಹೋಗಿ ನೋಡಿಬರುತ್ತಿದ್ದನು; ಇದರಂತೆ ಐದಾರು ವರುಷಗಳು ಕಳೆದುಹೋದವು ಆಮೇಲೆ ಅವನು ತನ್ನ ನಿಯಮದಂತೆ ಹೋಗಿ ನೋಡಲು ದ್ರವ್ಯವಿದ್ದಿಲ್ಲ; ಆಗ ಅವನು ಅಲ್ಲಿ ಎದೆಎದೆ ಬಡಕೊಂಡು ಆಕ್ರೋಶಮಾಡಹ ತ್ತಿದನು . ಬಹಳ ಹೊತ್ತು ರೋದನವಂಗೈದು ಆಮೇಲೆ ಬಾದಶಹನ ಕಿವಿಯ ಮೇಲೆ ಈ ಸಂಗತಿಯನ್ನು ಹಾಕಬೇಕೆಂದು ಯೋಚಿಸಿ ಒಲಗಕ್ಕೆ ಹೋಗಿ ಎಲ್ಲ ಸಂಗತಿಯನ್ನು ಅರಿಕೆಮಾಡಿ ದೊಡ್ಡಧ್ವನಿಯಿಂದ ರೋದನಮಾಡಹ ತ್ತಿದನು, ಅದರಿಂದ ನ್ಯಾಯಾಸನವೆಲ್ಲ ಪ್ರತಿಧ್ವನಿಗೊಂಡು ಹೋಯಿತು.
ಬಾದಶಹನು ಪ್ರಸ್ತನಾಗಿ ಕೈಯೊಳಗಿನಕೆಲಸವನ್ನು ಅರ್ಧಕ್ಕೇ ಬಿಟ್ಟು ಅವನ ವೃತ್ತಾಂತವನ್ನು ಕೇಳಿಕೊಂಡನು. ಆಗ ಅವನು ತನ್ನ ಅಯ್ಯೋ ಪಾಂತ ವೃತ್ತಾಂತವನ್ನೆಲ್ಲ ಕಥನಮಾಡಿ " ದಯಾಪರ ದೊರೆಗಳೇ ! ನನ್ನ ಹತ್ತರ ಇದ್ದದ್ರವ್ಯವೆಲ್ಲ ಈಪರಿಯಾಗಿ ಅನ್ಯರವಾಲಾಗಿ ಹೋಯಿತು, ಈಗ ನನ್ನ ಹತ್ತಿರ ಒಂದು ಒಡಕ ಕವಡಿಯೂ ಇಲ್ಲದೆ ಹೋಯಿತು ಏನುಮಾಡಲಿ?? ಎಂದು ಅಳಹತ್ತಿದನು. ಆ ವೃತ್ತಾಂತವನ್ನು ಕೇಳಿ ಬಾದಶಹನ ಮನಸ್ಸು ಕಳವಳಗೊಂಡಿತು, ಆಗ ಅವನು ರಾಜಭಂಡಾರದಿಂದ ಅವನ ನಿರ್ವಾಹ ವಾ ಗುವಂತೆ ಕಟ್ಟು ಮಾಡಿ ಉಳಿದಕೆಲಸವನ್ನು ಪೂರ್ಣಮಾಡಿ ಬೀರಬಲ ಅಭಿ ಪ್ರಾಯವನ್ನು ಕೇಳಿದನು. ಬೀರಬಲನು ಅನ್ವೇಷಣಮಾಡುವೆನೆಂದು ವಚ ನಕೊಟ್ಟನು. ಇಬ್ಬರೂ ಏಕಾಂತಗೃಹದಲ್ಲಿ ಕುಳಿತುಕೊಂಡು ಏನುಮಾಡ ಬೇಕೆಂದು ಯೋಚಿಸಹತ್ತಿದರು, ಬೀರಬಲನು ಒಂದು ಹಂಚಿಕೆಯನ್ನು ಹೇ ಳಿದನು ಅದು ಬಾದಶಹನ ಮನಸ್ಸಿಗೆ ಬಂತು.
ಮರುದಿವಸ ಪಟ್ಟಣದೊಳಗಿನ ಅನುಭವಿಕರಾದ ವೈದ್ಯರನ್ನು ಕರೆ ಯಿಸಿಕೊಂಡು ಬಿಲ್ವವೃಕ್ಷದ ಪರ್ಣ, ಮತ್ತು ಬೇರುಗಳು, ಯಾವಯಾವ ಔಷಧಕ್ಕೆ ಬರುತ್ತವೆ; ಎಂಬುದನ್ನು ಶೋಧಮಾಡಿಕೊಂಡು ಬಂದು ಎಂಟು ದಿವಸಗಳೊಳಗಾಗಿ ನನಗೆ ತಿಳಿಸಿರಿ ? ” ಎಂದು ಆಜ್ಞಾಪಿಸಿದನು. ಬಾದಶ ಹನ ಆಜ್ಞಾನುಸಾರವಾಗಿ ಎಂಟು ದಿವಸಗಳ ತನಕ ವೈದ್ಯಕೀಯ ಗ್ರಂಥಗ ಳನ್ನೆಲ್ಲ ಶೋಧಮಾಡಿ ತಮಗೆ ತಿಳಿದುಬಂದ ಸಂಗತಿಗಳನ್ನು ವರ್ಣನಮಾಡಿ ದರು ಅವರಲ್ಲಿ ಒಬ್ಬ ವೃದ್ಧನೂ ಅನುಭವಿಕನೂ ಆಗಿದ್ದ ಭಿಷಗ್ವರನು ಎದ್ದು ನಿಂತು “ ಭೂವರ ? ತಮ್ಮ ಆಜ್ಞಾನುಸಾರವಾಗಿ ಗ್ರಂಥಗಳನ್ನು ಶೋಧ ಮಾಡಿನೋಡಲು ಬಿಲ್ವವೃಕ್ಷದ ವರ್ಣದಿಂದ ಚೂರ್ಣಮಾಡಿಕೊಟ್ಟರೆ " ಅರಿಷಿ ಣಮುಂಡಿಗೆ" ರೋಗವು ಕಡಿಮೆಯಾಗುವದೆಂದೂ ಅದರ ಮೂಲಿಕೆಯು " ಜಲೋದರಕ್ಕೆ ” ಉಪಶಮನವೆಂದೂ ತಿಳಿಯಬಂದಿದೆ ಎಂದು ಹೇಳಿದನು ಬಾದಶಹನು ಅವನ ವಚನಗಳನ್ನೆಲ್ಲ ಕೇಳಿಕೊಂಡು ಯಾವತ್ತು ಧನ್ವಂತರಿ ಗಳನ್ನು ಕುರಿತು “ ಈಗ ಸದ್ಯಕ್ಕೆ ನಡೆಯುವ ತಿಂಗಳಲ್ಲಿ " ಜಲೋದರ ” ರೋಗವು ಎಷ್ಟು ಮಂದಿಗೆ ಉಂಟಾಗಿತ್ತು ? ಮತ್ತು ಅದು ಯಾವ ಉಪಾ ಯದಿಂದ ಕಡಿಮೆಯಾಯಿತು” ಎಂಬುದನ್ನು ಅರಿತುಕೊಂಡುಬಂದು ಒಂದು ವಾರದೊಳಗಾಗಿ ನನಗೆ ತಿಳಿಸಿರಿ ? ಎಂದು ಆಜ್ಞೆ ಮಾಡಿದನು. ಧನ್ವಂತರಿ ಗಳು ಆ ನಗರವನ್ನೆಲ್ಲ ಶೋಧಮಾಡಿ ಎಂಟು ದಿವಸಗಳಾದಮೇಲೆ ಬಾದಶ ಹನ ಸನ್ನಿಧಿಗೆ ಬಂದು - ಈಮಾಸದಲ್ಲಿ ನಾಲ್ಕು ಜನರಿಗೆ ಆ ರೋಗಬಾಧೆಯಾ ಗಿತ್ತು, ಅವರಲ್ಲಿ ಒಬ್ಬನಿಗೆ ಸ್ವಲ್ಪಗುಣವಾಗಿದೆ ! ” ಎಂದು ಹೇಳಿದರು, ಆಗ ಬಾದಶಹನು ಆ ರೋಗಿಗೆ ಔಪಧ ಕೊಟ್ಟ ವೈದ್ಯನನ್ನು ಕುರಿತು. “ ನಿಜವಾ ದದ್ದನ್ನು ಹೇಳು ? ಆ ವೃಕ್ಷದಮೂಲವನ್ನು ನೀನು ಎಲ್ಲಿಂದ ತೆಗೆದುಕೊಂ ಡುಬಂದಿದ್ದಿ ! ಅಸತ್ಯವನ್ನು ಹೇಳಿದರೆ ಮರಣಕ್ಕೆ ಗುರಿಯಾಗಬೇಕಾದೀತು ಎಂದು ಹೇಳಿದನು, ಬಾದಶಹನ ಆಜ್ಞೆಯನ್ನು ಶ್ರವಣಮಾಡಿ ಆ ವೈದ್ಯನು ಕಂಪಿಸಹತ್ತಿದನು. ಅಗ ಅವನು ಉತ್ತರಕೊಟ್ಟದ್ದೇ ನಂದರೆ ಪೃಥ್ವಿನಾಥ ! ನನ್ನ ಸೇವಕನು ಎಲ್ಲಿಂದ ತಂದಿದ್ದನೆಂಬ ಸಂಗತಿಯನ್ನು ನಾನರಿಯೆ ? ಇದ ರಲ್ಲಿ ನನ್ನಿಂದ ಏನಾದರೂ ಅಪರಾಧವು ಸಂಘಟಿಸಿದ್ದರೆ ಕ್ಷಮಿಸಬೇಕು! ” ಎಂದು ಪ್ರಾರ್ಥನೆಮಾಡಿಕೊಂಡನು. ಬಾದಶಹನು ಆ ಸೇವಕನನ್ನು ಕರೆಯ ಕಳುಹಿದನು, ಅವನು ಬಂದಮೇಲೆ.
ಬಾದಶಹ- ನಿನಗೆ ಬಿಲ್ವವೃಕ್ಷವು ಗೊತ್ತದೆಯೋ !
ಸೇವಕ-ಹುಜೂರ್ ! ಗೊತ್ತುಂಟು.
ಬಾದಶಹ- ನೀನು ನಿನ್ನ ಯಜಮಾನನ ಸಲುವಾಗಿ ಆ ವೃಕ್ಷದ ಬೇರುಗಳ ನ್ನು ಎಂದಾದರೂ ತಂದುಕೊಟ್ಟಿದೆಯೋ ?
ಸೇವಕ- ಮಾನ್ಯವರ ? ಈಗ ಒಂದುತಿಂಗಳ ಹಿಂದೆ ತಂದುಕೊಟ್ಟಿದ್ದೆನು.
ಬಾದಕಹ- (ಬೆದರಿಕೆಯನ್ನು ಹಾಕಿ) ನೀನು ಆ ವೃಕ್ಷದಡಿಯಲ್ಲಿದ್ದ ದ್ರವ್ಯ ವನ್ನು ತೆಗೆದುಕೊಂಡು ಹೋಗಿರುವಿ ! ಅದರಿಂದ ಅದನ್ನು ಒಳ್ಳೆ ಮಾತಿನಿಂದ ತಂದುಕೊಡು; ಇಲ್ಲದಿದ್ದರೆ ನಿನ್ನ ಮೈದೊಗಲನ್ನು ಸುಲಿಸಿಬಿಡುತ್ತೇನೆ.
ಸೇವಕ- ಗಾಬರಿಯಾಗಿ ನನಗೆ ಜೀವದಾನಕೊಡುವಂತೆ ಅಭಯವನ್ನು ಕೊಟ್ಟರೆ ಎಲ್ಲ ದ್ರವ್ಯವನ್ನೂ ತಂದುಕೊಡುವೆನು, ಬಾದಶಹನು ಹಾಗೇ ಆಗಲಿ; ಎಂದನು. ಆ ಸೇವಕನು ಎಲ್ಲದ್ರವ್ಯವ ನ್ನು ತಂದು ಬಾದಶಹನಿಗೆ ಒಪ್ಪಿಸಿದನು. ಆ ಹಣವನ್ನು ಬಾದಶಹನು ಆ ಕೃಪಣನಿಗೊಪ್ಪಿಸಿದನು.
--( ೧೫೯. ಬೀರಬಲನು ಯೋಗಿ ಯಾದದ್ದು.) -
ಒಂದು ಸಮಯದಲ್ಲಿ ಬಾದಶಹನು ಯಾವುದೋ ಒಂದು ಕಾರಣಾಂ ತರದಿಂದ ಬೀರಬಲನ ಮೇಲೆ ಕೃದ್ಧನಾಗಿದ್ದನು ಅದರಿಂದ ಬೀರಬಲನು ಯಾ ರಿಗೂ ಅರಿಯದಂತೆ ವಿದೇಶಕ್ಕೆ ಹೊರಟು ಹೋದನು ಆರುತಿಂಗಳು ಗಳುಕ ಳೆದು ಹೋದವು ಬೀರಬಲನು ಇಲ್ಲದ್ದರಿಂದ ಬಾದಶಹನಿಗೆ ಒಂದು ಕ್ಷಣವು ಒಂದು ಯುಗದಂತೆ ಭಾಸವಾಗ ಹತ್ತಿತು ಬೀರಬಲನ ಪ್ರಧಾರ್ಥವಾಗಿ ಅನೇಕ ಜನ ಅನುಚರರನ್ನೂ ಗೂಢ ಚಾರರನ್ನೂ ದೇಶಾಂತರಗಳಲ್ಲಿ ಕಳು ಹಿಸಿ ಬಿಟ್ಟನು ಅವರು ಹುಡುಕಿ ಬೇಸತ್ತು ಹೋದರೂ, ಬೀರಬಲನ ಶೋಧ ವಾಗಲಿಲ್ಲ ಬಾದಶಹನು ತನ್ನನ್ನು ಶೋಧಿಸುತ್ತಿರ ಬಹುದು ಯಾವದಾದ ರೊಂದು ಹಂಚಿಕೆಯಿಂದ ನಾನೇ ಬಾದಶ ಹನಿಗೆ ಭೇಟಿಯಾಗ ಬೇಕು ಎಂ ದು ಯೋಚಿಸಿ, ಸನ್ಯಾಸಿಯ ವೇಷವನ್ನು ಧರಿಸಿ ದಿಲ್ಲಿಗೆ ಬಂದು ಪ್ರತಿದಿನ ದೇವದರ್ಶನಕ್ಕೆ ಸಾವಿರಾರು ಜನಗಳು ಬರುತ್ತಿರುವ ಒಂದು ದೇವಾಲಯದ ಲ್ಲಿ ಆ ಸನಸ್ಥನಾಗಿ ಕುಳಿತುಕೊಂಡನು ಆನೇಕ ಜನರು ದೇವತಾ ದರ್ಶನವ ನ್ನು ತೆಗೆದು ಕೊಂಡು ಸನ್ಯಾಸಿಯಾಗಿ ಕುಳಿತುಕೊಂಡಿದ್ದ ಬೀರಬಲನಿಗೆ ದಂಡವತಪ್ರಣಾಮವನ್ನು ಮಾಡುತ್ತಿದ್ದರು. ಬೀರಬಲನು ಅವರವರ ಹೆಸ ರ್ಗೊಂಡು ಆಶೀರ್ವಾದ ಮಾಡಿ ಫಲಮಂತ್ರಾಕ್ಷತೆಗಳನ್ನು ಕೊಡುತ್ತಿದ್ದನು ಅದನ್ನು ಕಂಡು ಸನ್ಯಾಸಿಯು ಅಂತರ್ಜ್ಞಾನಿಯಾಗಿರುವೆನೆಂದು ಜನರು ಪ್ರ ಶಂಸೆ ಮಾಡಹತ್ತಿದರು. ಅಸಂಖ್ಯಾತ ಜನಗಳು ದರುಶನಕ್ಕೆ ಬರಹತ್ತಿದರು ಈವಾರ್ತೆಯು ಬಾದಶಹನಿಗೆ ತಿಳಿಯಬರಲು ಅವನು ಹಿಂದು ಮುಸಲ್ಮಾನ ಮುತ್ಸದ್ಧಿಗಳನ್ನೊಡಗೊಂಡು ದರುಶನಕ್ಕೆ ಬಂದನು. ಆಗ ಬಾದಶಹನು ಪ್ರ ಚ್ಛನ್ನ ವೇಷಧಾರಿಯಾಗಿದ್ದನು, ಬಾದಶಹನು ಆ ಸನ್ಯಾಸಿಗೆ ಪ್ರಣಾಮವ ನ್ನು ಮಾಡಿ- “ಮಹಾ ರಾಜ ? ತಾವು ಪ್ರತಿಯೊಬ್ಬರ ಹೆಸರ್ಗೊಂಡುಕರೆದು ಫಲಮಂತ್ರಾಕ್ಷತೆಗಳನ್ನು ಕೊಟ್ಟು ಆಶೀರ್ವದಿಸುತ್ತಿರುವಿರಿ, ಹೀಗಿದ್ದು ನಾ ನೇನು ಅಪರಾಧವನ್ನು ಮಾಡಿದ್ದೇನೆ; ನನಗೂ ಆಶೀರಾದಮಾಡಿರಿ ಎಂದು ಪ್ರಾರ್ಥನೆಮಾಡಿಕೊಂಡನು. ಆಗ ಬೀರಬಲನು ಅವನನ್ನು ಒಳ್ಳೆ ದಿಟ್ಟಿಸಿ ನೋಡಿ ಬಾದಶಹನೆಂದು ಅರಿತುಕೊಂಡು " ಈ ಜನಸಮ್ಮರ್ದವೆಲ್ಲ ಅಡಗಿದ ಬಳಿಕ ನಿನ್ನ ನಾಮಧೇಯವನ್ನು ಹೇಳುತ್ತೇನೆ.” ಎಂದನು ಕಿಂಚಿತ್ಕಾಲ ವಾದಮೇಲೆ ಜನಸಮ್ಮರ್ದವು ಕಡಿಮೆಯಾಯಿತು ಆಮೇಲೆ ಯೋಗಿಯಾದ ಬೀರಬಲನು “ ನಿನ್ನಂಥ ವಾಮಾತ್ಮನ ನಾಮಧೇಯವನ್ನು ನಾನು ಉಚ್ಚ ರಿಸಲಾರೆನು ” ಎಂದನು. ಆಗ ಬಾದಶಹನು ಆಶ್ಚರ್ಯಾತನಾಗಿ ಅವನ ಮೋರೆಯ ಕಡೆಗೆ ದಿಟ್ಟಿಸಿ ನೋಡಹತ್ತಿದನು ಬೀರಬಲನು ಜಪಮಾಲೆಯ ನ್ನು ತಿರುವುತ್ತ ಕಣ್ಣು ಮುಚ್ಚಿ ಧ್ಯಾನಸ್ಥನಂತೆ ಕುಳಿತು ಕೊಂಡನು ಕಿಂ ಚಿತ್ರಕಾಲದ ಮೇಲೆ ಬಾದಶಹನು ಯೋಗಿಯನ್ನು ಗುರುತಿಸಿ ಈ ಯೋ ಗಿರನು ಬೀರಬಲನಲ್ಲವೇ ! ಎಂದನು ಅದಕ್ಕೆ ಬೀರಬಲನು ಎದ್ದು ನಿಂತು ಹಾ, ಪೃಥ್ವಿನಾಥ ! ತಮ್ಮ ಬೀರಬಲನು ” ಎಂದು ಉತ್ತರ ಕೊಟ್ಟನು ಸಾಯಂಕಾಲವಾಗಿ ಕತ್ತಲೆಯಾಗಿತ್ತು ಉಭಯತರೂ ತಮ್ಮ ತಮ್ಮ ಗೃಹ ಗಳನ್ನು ಕುರಿತು ತೆರಳಿದರು.
ಪ್ರಾತಃಕಾಲದಲ್ಲಿ ನಿತ್ಯ ನಿಯಮಾನುಸಾರವಾಗಿ ನಗರ ನಿವಾಸಿಗಳು ಯೋಗಿರಾಜನ ದರುಶನಾರ್ಥವಾಗಿ ಬರಲು ಯೋಗಿ ರಾಜನೂ ಇದ್ದಿಲ್ಲ ಅ ವನ ಕುರುಹೂ ಇದ್ದಿಲ್ಲ; ಜನರು ಆಧ್ಯಾತ್ಮರಾಗಿ ಮಾತನಾಡುತ್ತ ನಿಂ ತುಕೊಂಡರು ಅಷ್ಟರಲ್ಲಿ ಬೀರಬಲನು ತುರುಗಾರೂಢನಾಗಿ ಒಲಗಕ್ಕೆ ಹೋಗುತ್ತಿರುವದನ್ನು ನೋಡಿ ಹರ್ಷ ನಿರ್ಭರರಾದರು.
-( ೧೬೦, ಅಂಗುಲಿ ಸಂಕೇತ. )-
ಬಾದಶ ಹನ ಓಲಗದಲ್ಲಿ ಒಬ್ಬ ಉಚ್ಚ ಕುಲದ ಸರದಾರನಿದ್ದನು ಆದರೆ ಅವನು ದೈವ ದುರ್ವಿಲಾಸದಿಂದ ಅತಿಶಯ ಹೀನಾವಸ್ಥೆ ಯುಳ್ಳವನಾಗಿದ್ದ ನು ಆದರೂ ಓಲಗದಲ್ಲಿ ಒಂದು ಕುಳಿತುಕೊಳ್ಳುವ ಮರ್ಯಾದೆಯಿತ್ತು ಅವ ನು ಮಹಾಸಭೆಗೆ ಬರಬೇಕಾದರೆ ಉತ್ತಮವಾದ ವಸ್ತ್ರಗಳನ್ನು ಧಾರಣ ಮಾಡಿಕೊಂಡು ಬರುತ್ತಿದ್ದನು ಇಷ್ಟು ವಸ್ತ್ರಗಳ ಹೊರತು ಬೇರೆ ವಸ್ತ್ರಗಳೇ ಇದ್ದಿಲ್ಲ ಇದರೆ ಹೊಟ್ಟೆಯಸಲುವಾಗಿ ಒಂದು ಬೀಸುವಕಲ್ಲನ್ನು ಇಟ್ಟು ಕೊಂಡು, ಕೂಲಿಯಿಂದ ಕಾಳುಗಳನ್ನು ಬೀಸುತ್ತಿದ್ದನು.
ಒಂದುದಿವಸ ಕಾಲುಗಳು ಬಹಳ ಬಂದಿದ್ದವು ಸಭೆಗೆ ಹೋಗಲಿಕ್ಕೆ ಅನುವು ದೊರೆಯಕಿಲ್ಲ; ಆ ದಿವಸ ಅಕಸ್ಮಾತ್ತಾಗಿ ಬಾದಶಹನ ಸವಾರಿಯು ಆ ಸರದಾರನ ಮನೆಯಮುಂದೆಯೇ ಬಂತು ಆ ಸರದಾರನ ಮನೆಯು ಚಿ ಕ್ಕದಿತ್ತು ಅವನು ಒಳಗೆ ಕುಳಿತುಕೊಂಡೇ ಸವಾರಿಯನ್ನು ನೋಡಹತ್ತಿದ ನು ಬಾದಶಹನ ದೃಷ್ಟಿಯೂ ಅವನ ಮೇಲೆ ಬಿತ್ತು,
ಮುಂದೆ ಕೆಲವುದಿವಸಗಳಾದಮೇಲೆ ಒಂದು ಸಮಾರಂಭದಲ್ಲಿ ಅನ್ಯಸರ ದಾರ ಉಮರಾವರೊಡನೆ ಆ ಉಚ್ಚಪ್ರತಿಯ ಸರದಾರನೂ ಬಂದು ಕುಳಿ ತುಕೊಂಡಿದ್ದನು ಹಿಂದೂ ಮುಸಲ್ಮಾನ ಸರದಾರರು ತಮ್ಮ ತಮ್ಮ ಯೋಗ್ಯ ತಾನುಸಾರವಾಗಿ ತಮ್ಮ ತಮ್ಮ ಆಸನಗಳಲ್ಲಿ ಮಂಡಿತರಾದರು. ಬಾದ ಶಹನು ಬಂದು ಸಿಹ್ಮಾಸನಾಧಿಷ್ಟನಾಗಿ, ಯಾವತ್ತೂ ಸರದಾರರನ್ನು ಅವಲೋಕಿಸುತ್ತಿರಲು ಈ ಬಡಸರದಾರನ ಮೇಲೆ ದೃಷ್ಟಿಯುಬಿತ್ತು ಆಗ ಅವನ ಸ್ಥಿತಿಯನ್ನು ವಿಚಾರಿಸಬೇಕೆಂದು ಮನಸ್ಸಿನಲ್ಲಿ ಬಂತು, ಆದರೆ ಎಲ್ಲರ ಮುಂದೆ ಪ್ರಶ್ನೆ ಮಾಡುವದು ಯೋಗ್ಯವಲ್ಲವೆಂದು ತಿಳಿದು ಬಾದಶಹನು ಅಂಗುಲಿಗಳನ್ನು ಮಡಿಚಿ ಹಿಡಿದುಕೊಂಡು ಬೀಸುವವನಂತೆ ಸಂಕೇತ ಮಾಡಿದನೆಂದು ನಿಶ್ಚಯಿಸಿ ಆ ಸಂಕೇತಕ್ಕೆ ಪ್ರತಿಯಾಗಿ ತನ್ನ ಹೊಟ್ಟೆಯ ಕಡೆಗೆ ಬೆರಳುಮಾಡಿ ತೋರಿಸಿದನು ಈ ಉಭಯತರ ಸಂಕೇತವನ್ನು ಎಲ್ಲರೂ ನೋಡಿದರು ಕಳ್ಳನ ಕನಸಿನಲ್ಲಿ ಬೆಳದಿಂಗಳೆಂಬ ಸಾಮತಿಗನುಸಾರವಾಗಿ ಅನೇಕ ಜನರು ಅನೇಕ ಪ್ರಕಾರದ ತರ್ಕಗಳನ್ನು ಮಾಡಹತ್ತಿದರು ಸಭಾವಿಸರ್ಜನೆಯಾದ ಕೂಡಲೆ ಒಬ್ಬನು ಆ ಸರದಾರನ ಮನೆಯನು ನೋಡಿಕೊಂಡು ಬಂದನು ಮರುದಿವಸ ಆ ಚಂಡಾಲ ಚೌಕಡಿಯು ಕೂಡಿಕೊಂಡು ಆ ಸರದಾರನ ಮನೆಗೆ ಬಂದರು ಅವನು ಅವರನ್ನು ಆದರ ಪೂರ್ವಕವಾಗಿ ಕುಳ್ಳಿರಿಸಿದನು ಆಗ ಅವರೊಳಗಿನವನೊಬ್ಬನು ಕೃಪಾಳುವೆ, ನಿನ್ನೆಯದಿವಸ ಬಾದಶಹನು ನಿಮಗೆ ಸಂಕೇತಮಾಡಿ ಏನನ್ನು ತಿಳಿಸಿದನು? ” ಎಂದು ಕೇಳಿದನು ಆಗ ಆ ಸರದಾರನು ತನ್ನ ಮನಸ್ಸಿನಲ್ಲಿ ಇದರಲ್ಲಿ ಏನೋ ಒಂದು ಗೂಢವದೆ ಬಾದಶಹನು ಸಂಕೇತ ಮಾಡಿದ್ದರಿಂದ ಇವರ ಮನಸ್ಸಿನಲ್ಲಿ ಯಾವದೋ ಸಂದೇಹವು ಉತ್ಪನ್ನವಾಗಿದೆ ಅದರಿಂದ ನಾನು ಇದರಲ್ಲಿ ಏನಾದರೂ ಹಣವನ್ನು ಸಂಪಾದಿಸಬೇಕು? ” ಎಂದು ಆಲೋಚಿಸಿ, "ಸದ್ಗೃ ಹಸ್ತರೇ, ಆ ವಿಷಯವು ಗೌರವಾದದ್ದು ! ಪ್ರಕಟಮಾಡಲಿಕ್ಕೆ ಬರುವಂತೆ ಇಲ್ಲ ” ಎಂದನು ಆಗ ಅವರು ಅತ್ಯಾಪ್ರಹ ಮಾಡಹತ್ತಿದರು ಅದರಿಂದ ಸರದಾರನು ನಿಮ್ಮ ಆಗ್ರಹವು ಬಹಳವಾದದ್ದರಿಂದ ಹೇಳುತ್ತೇನೆ ಈ ವಿಷಯದ ಚರ್ಚೆಯನ್ನು ಎರಡನೇಕಡೆಗೆ ಮಾಡಬೇಡಿರಿ ! "ಬಾದಶಹನು ನಿಮ್ಮೆಲ್ಲರಕಡೆಗೆ ಅಂಗುಲಿಯನ್ನು ತೋರಿಸಿ ಇವರ ಸಂಬಂಧಿಯಾದ ವಿಷಯವು! ” ಎಂದು ಸಂಕೇತಮಾಡುವದರೊಳಗಾಗಿ ನಾನು ನನ್ನ ಹೊಟ್ಟೆ ಯನ್ನು ತೋರಿಸಿ, " ಆ ವಿಷಯವು ನನ್ನ ಹೊಟ್ಟೆಯಲ್ಲಿಅದೆ” ಎಂಬದಾಗಿ ತೋರಿಸಿದೆನು ಎಂಬದಾಗಿ ಹೇಳಿದನು ಆಗ ಅವರೆಲ್ಲರೂ ಗಾಬರಿಯಾಗಿ ತಮ್ಮ ಮೋಸದಕೃತಿಗಳು ಈ ಸರದಾರನಿಗೂ ಮತ್ತು ಬಾದಶಹನಿಗೂ ತಿಳಿದು ಬಂದಂತೆ ಕಾಣುತ್ತವೆ ಇದಕ್ಕೆ ಅವನು ಏನು ದಂಡನೆಯನ್ನು ವಿಧಿಸು ವನೋ ಎಂಬದಾಗಿ ಬೆದರಿ ಆ ಸರದಾರನನ್ನು ಬಹುಪರಿಯಾಗಿ ಪ್ರಾರ್ಥಿಸ ಹತ್ತಿದರು ಮತ್ತು ತಮ್ಮ ತಮ್ಮ ಯೋಗ್ಯತಾನುಸಾರವಾಗಿ ಹಣವನ್ನು ಕೊಡಲೊಪ್ಪಿಕೊಂಡರು ಮರುದಿವಸ ಯಾವನು ನೂರು ಯಾವನು ಎರಡು ನೂರು ಯಾವನು ಐದುನೂರು ಹೀಗೆ ರೂಪಾಯಿಗಳನ್ನು ಚೀಲದಲ್ಲಿ ತುಂಬಿಕೊಂಡು ಬಂದು ಆ ಸರದಾರನಮುಂದೆ ಇಟ್ಟು “ ನಮ್ಮ ಕೃತ್ಯವು ಏನೇ ಇರಲಿ; ಅದನ್ನು ನಿಮ್ಮ ಹೊಟ್ಟೆಯಲ್ಲಿಯೇ ಇಟ್ಟುಕೊಳ್ಳಬೇಕು ಪ್ರಕಟಪಡಿಸ ಬೇಡಿರಿ ಆ ಶ್ರಮದ ಸಲುವಾಗಿ ನಾವು ಕೊಟ್ಟ ಕಿಂಚಿತ್ ದ್ರವ್ಯವನ್ನು ಸ್ವೀಕರಿಸಬೇಕು” ಎಂದು ಹೇಳಿದರು ಅದಕ್ಕೆ ಪ್ರತ್ಯುತ್ತರವಾಗಿ ಸರದಾರನು ನೀವು ಅತ್ಯಾಗ್ರಹ ಪಡಿಸಿದ್ದರಿಂದ ನಿಮ್ಮ ಮಾತಿಗೆ ಒಪ್ಪಿಕೊಳ್ಳಬೇಕಾಯಿತು; ನೀವು ಒಳ್ಳೇ ದೈವಶಾಲಿಗಳು ಅಂತೆಯೇ ಬಾದಶಹನ ಸಂಕೇತವು ನಿಮ್ಮ ದೃಷ್ಟಿಗೆ ಬಿದ್ದು ಸುರಕ್ಷಿತವಾಗಿರುವ ಹಂಚಿಕೆಯನ್ನು ಹುಡುಕಿಕೊಂಡಿರಿ ” ಎಂದು ಹೇಳಿದನು ಆ ಜನರೆಲ್ಲ ಹೊರಟು ಹೋದರು.
ಸಾಯಂಕಾಲದಲ್ಲಿ ಎಲ್ಲ ರಾಜಕಾರ್ಯಗಳಿಂದ ನಿವೃತ್ತನಾಗಿ ಬಾದ ಶಹನು ಆ ದರಿದ್ರ ಸರದಾರನ ಮನೆಗೆ ಬಂದನು. ಆ ಸರದಾರನು ಆ ಜನರಿಂದ ಸಂಪಾದಿತ ವಾದ ದ್ರವ್ಯವನ್ನು ಬಾದಶಹನ ಮುಂದೆ ಇಟ್ಟು “ " ಪೃಥ್ವಿ ನಾಥ ? ಇದನ್ನು ಸ್ವೀಕರಿಸಬೇಕು ” ಎಂದನು ಆಗ ಬಾದಶಹನು ಆಶ್ಚ ರ್ಯನ್ವಿತನಾಗಿ ಈ ಸದ್ಗೃಹಸ್ತನೇ ನೀನು ಕೂಲಿಯಿಂದ ಧಾನ್ಯವನ್ನು ಬೀಸಿ ಹೊಟ್ಟೆ ಹೊರಕೊಳ್ಳು! ಹೀಗಿದ್ದು ಇಷ್ಟುದ್ರವ್ಯವು ನಿನ್ನ ಬಳಿಯಲ್ಲಿ ಹ್ಯಾಗೆ ಬಂತು ” ಎಂದು ಕೇಳಿದನು. ಆಗ ಅವನು ನಸುನಗುತ್ತ ಖುದಾವಂದ ! ನಿನ್ನೆ ನೀವು ಓಲಗದಲ್ಲಿ ಅಂಗುಲ ಸಂಕೇತವನ್ನು ಮಾಡಿದ್ದರ ಫಲವು ! ಈ ದ್ರವ್ಯರೂಪದಿಂದ ಬಂದಿರುತ್ತದೆ.” ಎಂದು ಹೇಳಿದನು ಸರದಾರನ ಬುದ್ಧಿ ಚಾತುರ್ಯವು ಬಾದಶಹನಿಗೆ ತಿಳಿಯ ಬಂದಿದ್ದರೂ ಸಹ ಅವನ ಬಾಯಿಂದಲೇ ಹೊರಡಿಸಬೇಕೆಂಬ ಉದ್ದೇಶದಿಂದ "ವೃದ್ಧಸರದಾರನೇ ನಿನ್ನ ಅಭಿಪ್ರಾಯವು ನನಗೆ ತಿಳಿಯಲಿಲ್ಲ' ಎಂದನು ಆಗ ಅವನು ಸಮಗ್ರ ವೃತ್ತಾಂತವನ್ನು ಕಥನ ಮಾಡಿದನು, ಬಾದಶಹನು ಪ್ರಸನ್ನನಾಗಿ ಆ ಸಮಸ್ತ ದ್ರವ್ಯವನ್ನು ಅವನಿಗೆ ಕೊಟ್ಟು ನ್ಯಾಯಾಸನದಲ್ಲಿ ಒಂದು ಕಾರ್ಯಕ್ಕೆ ನಿಯಮಿಸಿ, “ ನನಗೆ ಆ ಮೋಸಗಾರರ ಪರಿಚಯವದೆ ಎಂದನು.
-(೧೬೧. ಸ ಸಯಾಸೋಕ ಏಕಮತ)- ಒಂದು ದಿವಸ ಬೀರಬಲನೂ ಬಾದಶಹನೂ ಏಕಾಂತದಲ್ಲಿ ಕುಳಿತು ಕೊಂಡು ವಿನೋದದಿಂದ ಮಾತುಗಳನ್ನಾಡುತ್ತಿದ್ದರು. ಆಗ ಬಾದಶಹನು "ಈ ಭೂಮಂಡಲದಲ್ಲಿಯ ಮನುಷ್ಯರ ಮನಸ್ಸೂ ಮತ್ತು ಬುದ್ಧಿಯೂ ಒಂದೇಪ್ರಕಾರವಾಗಿರುವದೋ ಅಥವಾ ಭಿನ್ನ ಭಿನ್ನ ವಾಗಿರುವದೋ !

ಬೀರಬಲ - ಪೃಥ್ವಿನಾಥ ; ಮನಸ್ಸೂ ಮತ್ತು ಬುದ್ಧಿಯೂ ಭಿನ್ನ ಭಿನ್ನ ವಾಗಿರುವವು.

ಬಾದಶಹ-ಬುದ್ಧಿಯು ಭಿನ್ನ ಭಿನ್ನವಾಗಿರುವಂತೆ ಅವರವರ ಅಭಿಪ್ರಾಯ ಗಳೂ ಭಿನ್ನವಾಗಿರ ಬೇಕಾಯಿತು.

ಬೀರಬಲ-ಹಿಂದೀಭಾಷೆಯಲ್ಲಿ " ಔಸಯಾನೋಕಾ ಏಕಮತ ಎಂಬ ಒಂದು ಸಾಮತಿಯಿರುವದು ಯಾಕಂದರೆ ಸ್ವಾರ್ಥ ಸಾಧನದ ವಿಷಯದಲ್ಲಿ ಮಾತ್ರ ಎಲ್ಲರ ಅಭಿಪ್ರಾಯವು ಒಂದೇ ಬಗೆಯಾಗಿ ವ್ಯಕ್ತವಾಗುವನು.

ಬಾದಶಹ-ಬುದ್ಧಿಯು ಭಿನ್ನ ಭಿನ್ನವಾಗಿದ್ದ ಮೇಲೆ ಅವರ ಅಭಿಪ್ರಾಯ ಗಳಾದರೂ ಭಿನ್ನವೇಕೆ ಆಗಬಾರದು !

ಬೀರಬಲ-ಈ ವಿಷಯವನ್ನು ತಾವು ಪ್ರಮಾಣಿಸಿ ನೋಡಬೇಕೆಂಬದಿದ್ದರೆ ನಾಳೆಯ ದಿವಸದಲ್ಲಿಯೇ ತೋರಿಸುವೆನು.

ಬಾದಶಹ - ಒಳ್ಳೇದು, ತೋರಿಸು !
ಬೀರಬಲನು ಸರಕಾರದ ಉಪವನದಲ್ಲಿದ್ದ ಒಂದು ಹೌದನ್ನು ” ನೀರಿಲ್ಲದಂತೆ ಮಾಡಿಸಿ, ಬಾದಶಹನ ಅಪ್ಪಣೆಯನ್ನು ಪಡೆದು ! ನಾಳೆ ಪ್ರಾತಃ ಕಾಲದೊಳಗಾಗಿ ಈ ಪಟ್ಟಣದ ವಾಸಿಗಳಲ್ಲಿ ಪ್ರತಿಯೊಂದು ಕುಟುಂಬದವರು ಒಂದೊಂದು ಕೊಡ ಹಾಲನ್ನು ತಂದು, ಬಾದಶಹರವರ ಉಪವನದಲ್ಲಿದ್ದ ಹೌದಿನಲ್ಲಿ ತಂದು ಹಾಕಬೇಕು ” ಎಂಬದಾಗಿ ಡಂಗುರವನ್ನು ಸಾರಿಸಿದನು ಮತ್ತು ಆ ಹೌದಿನಮೇಲೆ ಒಂದು ಶುಭ್ರವಾದ ವಸ್ತ್ರವನ್ನು ಆಚ್ಛಾದನ ಮಾಡಿ ಬಾದಶಹನಿಗೆ ಈ ಸಂಗತಿಯನ್ನು ತಿಳಿಸಿದನು
ಆಗ ಪ್ರತಿಯೊಂದು ಕುಟುಂಬದವರು ಯೋಚಿಸಿದ್ದೇನೆಂದರೆ " ಬಾದಶಹರವರ ಉಪವನದಲ್ಲಿಯ ಹೌದಿನಲ್ಲಿ ಸಾವಿರಾರು ಕುಟುಂಬದವರು ಹಾಲನ್ನು ತಂದು ಹಾಕುತ್ತಾರೆ ನಾವೊಬ್ಬರು ಆದರಲ್ಲಿ ಒಂದು ಕೊಡ ನೀರನ್ನು ಸುರುವಿದರೆ ನಮ್ಮ ಅಪರಾಧವು ಯಾರಿಗೂ ಗೊತ್ತಾಗುವದಿಲ್ಲ; ಈ ಪ್ರಕಾರ ಆ ಲೋಚನೆ ಮಾಡಿಕೊಂಡು ಪ್ರತಿಯೊಬ್ಬನು ಒಂದು ರಾತ್ರಿಯಲ್ಲಿ ಬಂದು ಒಂದೊಂದು ಕೊಡ ನೀರನ್ನು ತಂದು ಸುರುವಿ ಸುಮ್ಮನೆ ಹೋಗ ಹತ್ತಿದರು ಪ್ರತಿಯೊಬ್ಬನ ಮನಸ್ಸಿನಲ್ಲಿ ನನ್ನ ಹೊರತು ಎಲ್ಲರೂ ಹಾಲನ್ನೇ ತಂದು ಸುರುವಿದ್ದಾರೆ; ಎಂದು ನಿಶ್ಚಯಿಸಿಕೊಂಡೇ ನೀರನ್ನು ಹಾಕಿ ಹೋಗುತ್ತಿದ್ದನು, ಯಾವನಾದರೂ ಸೂಕ್ಷ್ಮ ಬುದ್ಧಿಯವನು ಹೌದಿನಹತ್ತಿರ ಬಂದು ಪರೀಕ್ಷಿಸಿನೋಡಿದರೂ ಸಹ ಮೇಲೆ ಹೊಂದಿಸಲ್ಪಟ್ಟ ಶುಭ್ರವಾದ ವಸ್ತ್ರದಿಂದ ನೀರು ಸಹಾ ಹಾಲಿನಂತೆ ಶುಭ್ರವಾಗಿಯೇ ತೋರುತಿತ್ತು. ಮರುದಿವಸ ಪ್ರಾತಃಕಾಲದಲ್ಲಿ ಬೀರಬಲನು ಬಾದಶಹನನ್ನು ಕರಕೊಂಡು ಹೌದಿನಹತ್ತರ ಬಂದನು, ಹೌದಿನಮೇಲೆ ಆಚ್ಚಾದಿಸಲ್ಪಟ್ಟಿದ್ದ ವಸ್ತ್ರವನ್ನು ತೆಗೆದನು ಆ ಹೌದು ಹಾಲಿನಿಂದ ತುಂಬುವದರ ಬದಲು ನೀರಿ ನಿಂದಲೇ ತುಂಬಿಹೋಗಿತ್ತು, ಅದರಲ್ಲಿ ಹಾಲಿನ ಹೆಸರೇ ಇದ್ದಿಲ್ಲ ಅದನ್ನು ಕಂಡು ಬಾದಶಹನಿಗೆ ಬಹು ಸೋಜಿಗವಾಯಿತು ಯೋಚನೆಯಲ್ಲಿ ಬಿದ್ದನು.
ಅದನ್ನು ಕಂಡು ಬೀರಬಲನು- “ ಪೃಥ್ವಿನಾಥ ? ಸೌನಯಾನೋಕಾ ಏಕಮತ ” ನಾನು ಹೇಳಿದಸಾಮತಿಯು ಸತ್ಯವಾಯಿತೋ ಇಲ್ಲವೋ ಎಂದು ಕೇಳಿದನು.
ಬಾದಶಹ-ಪ್ರತ್ಯಕ್ಷವಾಗಿದ್ದ ಮಾತಿನಲ್ಲಿ ಸಂದೇಹವೇನು ! ಆದರೂ ಈ ವಿಷಯವನ್ನು ಇನ್ನೂ ಸ್ವಲ್ಪ ಹೆಚ್ಚು ಪರೀಕ್ಷಿಸಿನೋಡಬೇಕೆಂದು ಅಭಿಲಾಷೆಯದೆ.
ಬೀರಬಲ-ಒಳ್ಳೇದು ಹಾಗೇ ಆಗಲಿ,
ಆಗ ಬಾದಶಹನು ಪ್ರಚ್ಛನ್ನ ವೇಷಧಾರಿಯಾಗಿ ಸಾಯಂಕಾಲದಲ್ಲಿ ನಗರದ ಸಂಚಾರಾರ್ಥವಾಗಿ ಹೊರಟನು. ಸಂಚರಿಸುತ್ತಾ ಸಂಚರಿಸುತ್ತಾ ಕತ್ತಲೆಯಾಗಲು ಒಂದುಮನೆಯ ಸಮೀಪಕ್ಕೆ ಬಂದನು. ಆ ಗೃಹವು ಬಹಳ ಎತ್ತರವಾಗಿದ್ದರೂ ಸುಂದರವಾಗಿತ್ತು, ಈ ಮನೆಯಲ್ಲಿ ಪರೀಕ್ಷಿಸಿ ನೋಡ ಬೇಕೆಂದು ಯೋಚಿಸಿ ಮುಂದೆಮಾಡಿದ ಬಾಗಿಲವನ್ನು ಅಂಗುಲಿಯಿಂದ ಟಕ ಟಕ ಬಾರಿಸಿದನು. ಆಗ ಒಳಗಿನಿಂದ ಯಾರವರು ? ಎಂಬ ಧ್ವನಿಯು ಕೇಳ ಬಂತು; ಆಗ ಬಾದಶಹನು. " ಯಜಮಾನರೇ ! ನಾನು ಪ್ರವಾಸಿಯು ಈ ಪಟ್ಟಣಕ್ಕೆ ಬಂದು ಎರಡು ದಿವಸಗಳಾದವು ಈ ದಿವಸ ಸಾಯಂಕಾಲದ ಮುಂದೆ ನಗರವನ್ನು ನೋಡಬೇಕೆಂದು ಇಚ್ಛಿಸಿ ಸಂಚಾರಮಾಡುತ್ತ ಮಾಡುತ್ತ ಬರಲು ನಾನು ಇಳಿದುಕೊಂಡಿದ್ದ ಸ್ಥಳವು ಗೊತ್ತಾಗದೆ ಹೋಯಿತು ಮತ್ತು ನಡೆದುನಡೆದು ಬೇಸತ್ತುಹೋಗಿದ್ದೇನೆ, ಆದ್ದರಿಂದ ನನಗೆ ವಿಶ್ರಾಂತಿ ಗೋಸುಗ ಕಿಂಚಿತ್‌ಸ್ಥಳವನ್ನು ಕೊಟ್ಟರೆ ತಮಗೆ ಬಹಳೇಪುಣ್ಯವು ಬರು ವದು ” ಎಂದನು. ಆಗ ಮನೆಯ ಯಜಮಾನನು ಬಂದು ಬಾಗಿಲತೆರೆದು ಬಾದಶಹನನ್ನು ಒಳಗೆ ಕರೆದುಕೊಂಡು ಭೋಜನದ ವಿಷಯದಲ್ಲಿ ವಿಚಾರಿ ಸಿದನು, ಬಾದಶಹನು ಧನ್ಯವಾದಸಹಿತ ಅಸ್ವೀಕಾರಮಾಡಿದನು. ಮುಂದೆ ಕಿಂಚಿತ್ಕಾಲದಮೇಲೆ ಗೃಹದ ಯಜಮಾನನು ಊಟ ಉಡಿಗೆಗಳನ್ನು ತೀರಿಸಿಕೊಂಡು ಬಾದಶಹರೊಡನೆ ಮಾತುಕಥೆಗಳನ್ನಾಡುತ್ತ ಕುಳಿತುಕೊಂಡನು. ಆಗ ಬಾದಶಹನು “ ನಿನ್ನೆಯದಿವಸ ನಿಮ್ಮ ಈ ಪಟ್ಟಣದಲ್ಲಿ ಬಾದಶಹನು ಸಾರಿಸಿದ ಡಂಗುರದ ಅಭಿಪ್ರಾಯವನ್ನು ಕೇಳಿ ನನಗೆ ಪರಮ ಆಶ್ಚರ್ಯ ವಾಯಿತು, ಈಪ್ರಕಾರದ ರೂಢಿಯು ಪ್ರತಿಮಾಸದಲ್ಲಿ ಇರುವದೋ ಅಥವಾ ನಿನ್ನೆ ಒಂದೇ ದಿವಸವೋ ” ಎಂದು ಪ್ರಶ್ನೆ ಮಾಡಿದನು. ಆಗ ಗೃಹದೊಡೆಯನು “ ಇಲ್ಲ; ನಿನ್ನೆ ಯಾಕೆ ಈಪ್ರಕಾರ ಡಂಗುರವನ್ನು ಸಾರಿಸಿದನೋ ತಿಳಿಯಲಿಲ್ಲ ” ಎಂದನು. ಬಾದಶಹ " ನಿಮ್ಮ ಬಾದಶಹನು ಇಷ್ಟು ಹಾಲಂನು ತೆಗೆದುಕೊಂಡು ಏನುಮಾಡುವನು ” ಎಂದು ಪುನಃ ಕೇಳಿದನು ಅದಕ್ಕೆ ಗೃಹದ ಯಜಮಾನನು " ಅವನು ಏನಾದರೂ ಮಾಡಲೊಲ್ಲನೇಕೆ ! ಅದರ ಸಂಗತಿಯು ನನಗೆಬೇಡ, ನಾನಂತೂ ಸತ್ಯವಾಗಿ ಹೇಳುತ್ತೇನೆ. ಹಾಲುಹಾಕುವದಕ್ಕೆ ಪ್ರತಿಯಾಗಿ ನಾನು ಒಂದು ಕೊಡ ನೀರನ್ನು ಹಾಕಿ ಬಂದೆನು, ಸಾವಿರಾರುಕೊಡ ಹಾಲಿನಲ್ಲಿ ನಾನೊಬ್ಬನು ಒಂದು ಕೊಡ ನೀರನ್ನು ಹಾಕಿದರೆ ಅದನ್ನು ಯಾರು ಗೊತ್ತು ಹಿಡಿಯುತ್ತಾರೆ ?” ಎಂದನು. ಈಮಾತಿಗೆ ಬಾದಶಹನು "ವಾಹಾವ್ವಾ ; ವಾಹವ್ವಾ ; ಒಳ್ಳೇ ಶ್ರೇಷ್ಠವಾದ ಯುಕ್ತಿಯು. ಇರಲಿ; ಈ ಸಂಗತಿಯು ಬಾದಶಹನಿಗೆ ತಿಳಿದರೆ ನಿಮ್ಮ ಗತಿಯೇನಾಗುವದೆಂಬುದನ್ನು ವಿಚಾರಿಸಿದಿರಾ?” ಎಂದು ಕೇಳಿದನು. ಆಗ ಗೃಹಸ್ವಾಮಿಯು ಈ ಸಂಗತಿಯು ಬಾದಶಹನಿಗೆ ತಿಳಿಯುವದು ಅಸಾಧ್ಯವು ಎಂದನು ಆ ಕೂಡಲೇ ಬಾದಶಹನು ತನ್ನ ಮೈಮೇಲೆ ಇದ್ದ ಬಟ್ಟೆಗಳನ್ನು ತೆಗೆದುಹಾಕಿ ತನ್ನ ನಿಜಸ್ವರೂಪವನ್ನು ತೋರಿಸಿದನು, ಆ ಕೂಡಲೆ ಗೃಹದ ಯಜಮಾನನು ಗಾಬರಿಯಾದನು ಮುಖವು ಕಳೆಗುಂದಿತು, ಮುಖದಿಂದ ಶಬ್ದಗಳು ಹೊರಡದಾದವು; ಅದನ್ನು ನೋಡಿ ಬಾದಶಹನು ನೀನು ಅಂಜಬೇಡ, ನಿನ್ನ ಕೂದಲುಸಹ ಕೊಂಕಾಗಲಾರದು; - ಯಾಕಂದರೆ ನೀನು ಮಾಡಿದ ಅಪರಾಧವನ್ನು ನಿನ್ನ ಮುಖದಿಂದಲೇ ಸ್ವೀಕಾರಮಾಡಿದ್ದೇ ! ನಾನು ಪ್ರತ್ಯಕ್ಷವಾಗಿ ಬಂದು ಈ ವಿಷಯದಲ್ಲಿ ನಿನಗೆ ಪ್ರಶ್ನೆ ಮಾಡಿದ್ದರೆ ನೀನು ನಿಜಸಂಗತಿಯನ್ನು ಪ್ರಕಟಪಡಿಸುತ್ತಿದ್ದೀಯಾ ? ನನಗೆ ಕಾರ್ಯಂತರಕ್ಕಾಗಿ ಈ ವಿಷಯವನ್ನು ಪರೀಕ್ಷಿಸಿ ನೋಡಬೇಕಾಗಿ ಬಂದದರಿಂದ ನಾನು ಈಪ್ರಕಾರ ಪ್ರಚ್ಛನ್ನ ವೇಷ ದಿಂದ ಬಂದಿದ್ದೆನು ಎಂದುಹೇಳಿ, ಪುನಃ ಪ್ರವಾಸಿಗನಂತೆ ವೇಷ ಧಾರಣಮಾಡಿಕೊಂಡು ಅಲ್ಲಿಂದ ಹೊರಬಿದ್ದು ಮತ್ತೊಬ್ಬ ಧನಾಡ್ಯನಗೃಹಕ್ಕೆ ಹೋದನು ಆ ಪಟ್ಟಣದಲ್ಲಿ ಅವನು ಬಹಳೇ ದಾತೃವೆಂದು ಪ್ರಸಿದ್ಧಿಯನ್ನು ಹೊಂದಿ ದ್ದನು. ಮೊದಲಿನಂತೆಯೇ ಅವನ ದ್ವಾರದಸಮೀಪಕ್ಕೆ ಹೋಗಿ ತಾನು ಬಹಳೇ ದಣಿದು ಬಂದಿರುವೆನೆಂದು ಹೇಳಿದನು. ಆಗ ಆ ಧನಾಡ್ಯನು “ ನಿನಗೆಲ್ಲಿ ಎಷ್ಟು ದಿವಸ ನಿಂತುಕೊಳ್ಳಬೇಕೆಂಬ ಅಪೇಕ್ಷೆಯಿರುವದೋ ಅಷ್ಟು ದಿವಸಗಳ ತನಕ ನಿಶ್ಚಿಂತೆಯಿಂದ ನನ್ನ ಮನೆಯಲ್ಲಿ ವಾಸಮಾಡು, ಈ ಗೃಹವು ನಿನ್ನ ದಂತಲೇ ಭಾವಿಸಿಕೋ, ನಿನಗೆ ಯಾವಪ್ರಕಾರದ ತೊಂದರೆಯೂ ಉಂಟಾ ಗಲಾರದು ” ಎಂದು ಮಾತನಾಡಿದನು. ಆಗ ಬಾದಶಹನು ಸ್ವಾಮೀ ನನಗೆ ಸ್ವಲ್ಪ ಹೊತ್ತು ವಿಶ್ರಾಂತಿಗೆ ಸ್ಥಳದೊರೆತರೆ ಸಾಕು ಎಂದನು. ಆಮೇಲೆ ಉ ಳಿದ ಮಾತುಕಥೆಗಳು ಸಾಗಿದವು, ಆಗ ಬಾದಶಹನು ಆ ಡಂಗುರದ ವಿಷಯ ವನ್ನೇ ತೆಗೆದನು ಆಗ ಧನಾಡ್ಯನು “ ಸ್ವಾಮಿ ! ಈ ಜಗತ್ತಿನಲ್ಲಿರುವ ಪ್ರತಿ ಯೊಬ್ಬ ಪ್ರಾಣಿಯು ತನ್ನ ಉಳಿತಾಯವಾಗಬೇಕೆಂದು ಅಪೇಕ್ಷಿಸುತ್ತಿರು ವನೇ ಹೊರತು ಹಾನಿಯನ್ನು ಅಪೇಕ್ಷಿಸುವದಿಲ್ಲ ಉಳಿದವರು ಹ್ಯಾಗೆ ಮಾ ಡಿರಲಿ, ಅದರಗೊಡವೆಯು ನನಗೆಬೇಡ ! ನಾನಂತೂ ಹಾಲುಹಾಕುವದಕ್ಕೆ ಪ್ರತಿಯಾಗಿ ನೀರನ್ನೇ ಹಾಕಿ ಬಂದೆನು' ಎಂದು ಹೇಳಿದನು. ಆಗ ಬಾದಶ ಹನು “ ಈ ನಿಮ್ಮ ಕಪಟಕೃತ್ಯವು ಬಾದಶಹನಿಗೆ ವಿದಿತವಾದರೆ ನಿಮ್ಮ ಗತಿ ಏನಾಗುವದೆಂಬದನ್ನು ವಿಚಾರಮಾಡಿಕೊಂಡು ತಿಳಿದಿದ್ದೀರಾ” ಎಂದು ಪ್ರಶ್ನೆ ಮಾಡಿದನು. ಈಮಾತಿಗೆ ಪ್ರತ್ಯುತ್ತರವಾಗಿ ಧನಾಡ್ಯನು ಈ ವಿಷಯವು ನಿನ್ನ ದ್ವಾರದಿಂದ ಬಾದಶಹನಿಗೆ ತಿಳಿಯಬೇಕೇ ಹೊರತು ಅನ್ಯರಿಂದ ತಿಳಿ ಯುವಂತಿಲ್ಲ ಎಂದನು. ಆ ಕೂಡಲೇ ಬಾದಶಹನು ತನ್ನ ನಿಜಸ್ವರೂಪವಂ ನು ವ್ಯಕ್ತಪಡಿಸಲು ಧನಾಡ್ಯನು ಬೆದರಿದನು. ಬಾದಶಹನು ಅವನಿಗೆ ಅಭ ಯವನ್ನಿತ್ತು ಭಯಪಡಬೇಡ, ನಿನ್ನಂತೆಯೇ ಯಾವತ್ತರೂ ಮಾಡಿದ್ದಾರೆ ಈ ಸಂಗತಿಯನ್ನು ಪರೀಕ್ಷಿಸಿ ನೋಡಬೇಕೆಂತಲೇ ಪ್ರಚ್ಛನ್ನ ವೇಷದಿಂದ ಸಂಚಾರಮಾಡಹತ್ತಿದ್ದೇನೆ ಎಂದು ಹೇಳ ಹೊರಟುಬಂದನು ಮತ್ತು ಬೀರ ಬಲನ ವಿಚಾರಶಕ್ತಿಯ ವಿಷಯದಲ್ಲಿ ಆನಂದಪಟ್ಟನು.
-(೧೬೨. ಜಲಾಶಯದಲ್ಲಿ ಬ್ರಾಹ್ಮಣನು.)- ಹೇಮಂತಕಾಲದಲ್ಲಿ ಬಾದಶಹನು ಒಂದುದಿವಸ ತನ್ನ ಅನುಯಾಯಿ ಗಳೊಡನೆ ಉಪವನದಲ್ಲಿ ಸಂಚಾರಾರ್ಥವಾಗಿ ಬಂದಿದ್ದನು ಜಲಾಶಯಗಳಲ್ಲಿ ಯ ಜಲವು ಅತಿಸೀತಕರವಾಗಿದ್ದವು, ಬಾದಶಹನು ಜಲದಲ್ಲಿ ತನ್ನ ಬೆರಳನ್ನು ಎದ್ದಿ ಆ ಕೂಡಲೆ ಹೊರಗೆ ತೆಗೆದುಕೊಂಡು ತನ್ನ ಅನುಯಾಯಿಗಳನ್ನು ಕುರಿತು “ ಜಲವು ಬಹುಶೀತಲವಾಗಿದೆ; ಇದರಲ್ಲಿ ಕುಳಿತುಕೊಂಡು ಯಾವ ನಾದರೂ ಒಂದು ಸಂಪೂರ್ಣರಾತ್ರಿಯನ್ನು ಕಳೆಯಲು ಸಮರ್ಥನಾಗುವ ನೇನು" ಎಂದು ಕೇಳಿದನು. ಯಾವತ್ತರೂ ಆಗಲಾರದೆಂದು ಹೇಳಿದರು ಆಗ ಬಾದಶಹನು " ಯಾವನಾದರೂ ಈ ಜಲಾಶಯದಲ್ಲಿ ಸಂಪೂರ್ಣರಾತ್ರಿಯ ನ್ನು ಕಳೆದರೆ ಅವನಿಗೆ ಐವತ್ತು ಸಾವಿರ ರೂಪಾಯಿಗಳನ್ನು ಪಾರಿತೋಷಕ ವಾಗಿ ಕೊಡುತ್ತೇನೆ ಯಾರಿಗಾದರೂ ಧೈರ್ಯವಿದ್ದರೆ ಮುಂದೆ ಬರ್ರಿ !ಎಂ ದನು. ಬಾದಶಹನ ಆಜ್ಞೆಯು ಸರ್ವರಿಗೂ ಕೇಳಬಂತು, ಆದರೆ ಬಬ್ಬನಾದ ರೂ ಮುಂದುವರಿಯಲಿಲ್ಲ; ಆ ಜನಸಮೂಹದಲ್ಲಿ ಒಬ್ಬ ದರಿದ್ರಿಯಾದ ಬ್ರಾ ಹ್ಮಣನಿದ್ದನು, ಅವನು ಹೊದ್ದು ಕೊಂಡ ಒಂದು ಬಟ್ಟೆಯಾದರೂ ಗಟ್ಟಿಯಾ ಗಿ ಇದ್ದಿಲ್ಲ; ಅವನು ಆಲೋಚಿಸಿದ್ದೇನಂದರೆ - ನಾನು ಕೇವಲದರಿದ್ರ ನಾದ ದಿಂದ ಉಪಜೀವನಕ್ಕೆ ಬಹಳೇ ತೊಂದರೆಯಾಗುತ್ತದೆ, ಒಂದು ನೀರಿನಲ್ಲಿ ಕುಳಿತುಕೊಂಡರೆ ಬಾಧೆಯೇನು, ಒಂದುವೇಳೆ ಇದರಲ್ಲಿಯೇ ಮರಣವುಬಂ ದೊದಗಿದರೆ ಈ ಕಷ್ಟ ದಿಂದಾದರೂ ಬಿಡುಗಡೆಯಾದೀತು, ಒಂದುವೇಳೆ ಬ ದುಕಿಕೊಂಡರೆ ಐವತ್ತು ಸಾವಿರ ರೂಪಾಯಿಗಳು ಸಿಕ್ಕುತ್ತವೆ ದರಿದ್ರತನವು ಹಿಂಗುವದು ” ಎಂದು ನಿಶ್ಚಯಿಸಿಕೊಂಡು ನಮ್ರತೆಯಿಂದ ಮುಂದೆ ಬಂದು "ಖುದಾನಂದ ! ತಮ್ಮ ಅಪ್ಪಣೆಯಾದರೆ ಒಂದು ಸಂಪೂರ್ಣರಾತ್ರಿಯನ್ನು ಈ ಜಲದಲ್ಲಿ ಕಳೆಯುವದಕ್ಕೆ ಸಿದ್ಧನಿರುವೆನು” ಎಂದು ಬಿನ್ನ ಹಮಾಡಿದನು ಆಗ ಬಾದಶಹನು ಒಂದು ಸಂಪೂರ್ಣರಾತ್ರಿಯನ್ನು ಈ ಜಲದಲ್ಲಿ ನಿಂತು ಕೊಂಡು ಕಳೆದರೆ ಐವತ್ತು ಸಾವಿರ ರೂಪಾಯಿಗಳನ್ನು ಕೊಡುವದಲ್ಲದೇ ಮತ್ತೆ ವಸ್ತ್ರಾಭರಣಗಳನ್ನು ಉಚಿತವಾಗಿ ಕೊಡುವೆನು ಎಂದುಹೇಳಿದನು. ಈ ಮಾತಿಗೆ ಬ್ರಾಹ್ಮಣನು ಒಪ್ಪಿಕೊಂಡನು ಬಾದಶಹನು ಆ ಜಲಾಶ ಯದ ಸುತ್ತುಮುತ್ತು ಕಾವಲಿಟ್ಟನು ದ್ರವ್ಯ ದಾಶೆಯಿಂದ ಬ್ರಾಹ್ಮಣನು ನೀರೊಳಗೆ ಆಕ೦ಠ ಪರಿಯಂತರ ತನ್ನ ದೇಹವನ್ನು ಮುಳುಗಿಸಿಕೊಂಡು ನಿಂತನು ಪ್ರಾತಃಕಾಲ ವಾಗುತ್ತಲೇ ಆ ಜಲಾಶಯದಿಂದ ಹೊರಬಿದ್ದು ಒ ದ್ದೆ ಬಟ್ಟೆ ಯಿಂದಲೇ ಅರಮನೆಗೆ ಬಂದನು ಅವನ ಸಂಗಡ ಕಾವಲುಗಾರ ರೂ ಬಂದರು ಬ್ರಾಹ್ಮಣನು ಬಾದಶಹನ ಬಳಿಗೆ ಹೋಗಿ, ದವ್ಯವನ್ನು ಬೇ ಡಿದನು ಕಾವಲುಗಾರರ ಮುಖದಿಂದ ವೃತ್ತಾಂತವನ್ನೆಲ್ಲ ಕೇಳಿಕೊಂಡು ಬಾದಶಹನು ರೂಪಾಯಿಗಳನ್ನು ಕೊಡುವದಕ್ಕೆ ಅಪ್ಪಣೆ ಮಾಡಿದನು ಆದ ರೆ ಹೊಟ್ಟೆ ಯುರಕರಾಗಿದ್ದ ಕೆಲವರು ಒಬ್ಬ ಕಾವಲುಗಾರನನ್ನು ತಮ್ಮ ಕ ಡೆಗೆ ಒಲಿಸಿಕೊಂಡು ಹಣವನ್ನು ಕೊಡುವದಕ್ಕೆ ಪ್ರತಿಬಂಧವನ್ನು ತಂದ ರು ಆಗ ಕಾವಲುಗಾರನು ಮುಂದೆಬಂದು, " ಪೃಥ್ವಿನಾಥ ! ಈ ಬಾಹ್ಮಣ ನು ಜಲದಲ್ಲಿ ನಿಂತುಕೊಂಡು ಸಂಪೂರ್ಣರಾತ್ರಿಯನ್ನು ಕಳೆದದ್ದೇನೋನಿಜ ಆದರೆ ಗುಡ್ಡಕ್ಕೆ ಬೇಗೆಯು ಹತ್ತಿದ್ದರಿಂದ, ಇವನು ಜಲದಲ್ಲಿ ನಿಲ್ಲಲು ಸಮ ರ್ಥನಾದನು; ಇಲ್ಲದಿದ್ದರೆ ಸತ್ತು ಹೋಗುತ್ತಿದ್ದನು ” ಎಂದು ಹೇಳಿದನು ಅ ದನ್ನು ಕೇಳಿ ಬಾದಶಹನು- “ ನಿನ್ನ ದೃಷ್ಟಿಗೆ ಅಗ್ನಿಯು ಬಿದ್ದದರಿಂದ ನೀರಿನಲ್ಲಿ ನಿಂತುಕೊಳ್ಳಲು ಸಮರ್ಥನಾದಿ ! ಅದರಿಂದ ನಿನಗೆ ಪಾರಿತೋಷಕವು ದೊರೆಯಲಾರದು ” ಎಂದು ಹೇಳಿದನು.
ಬ್ರಾಹ್ಮಣನು ದುಃಖಿತನಾಗಿ ಬೀರಬಲನಮನೆಗೆ ಹೋದನು ಬೀರಬ ಲನು ಅವನಿಗೆ ಧೈರ್ಯ ಹೇಳಿ, ಕಳುಹಿಸಿ ಕೊಟ್ಟನು ಆಮೇಲೆ ಓಲಗಕ್ಕೆ ಹೋಗುವ ಸಮಯವು ಸಮೀಪಿಸಲು ಆ ದಿವಸ ಓಲಗಕ್ಕೆ ಹೋಗದೆ ನದಿಯದಂಡಗೆ ಹೋಗಿ, ಒಂದು ಉದ್ದವಾಗಿದ್ದ ಗಳವನ್ನು ತೆಗೆದುಕೊಂಡು ಹೋಗಿ, ಆದನ್ನು ಭೂಮಿಯಲ್ಲಿ ನೆಡಿಸಿ ಅದರ ಮೇಲ್ಬಾಗಕ್ಕೆ, ಒಂದು ಗಡೆಗೆಯನ್ನು ಕಟ್ಟಿ ಅದರಲ್ಲಿ ಅಕ್ಕಿಯನ್ನೂ ನೀರನ್ನೂ ಹಾಕಿ ಬುಡದಲ್ಲಿ ಹುಲ್ಲಿನಿಂದ ಉರಿಯನ್ನು ಮಾಡುತ್ತ ಕುಳಿತುಕೊಂಡನು.

ಬಾದಶಹನು ನ್ಯಾಯಸ್ಥಾನದಲ್ಲಿ ಬಂದು ಕುಳಿತುಕೊಂಡು ನಿಯತ ಸಮಯವು ಮೀರಿಹೋದರೂ ಬೀರಬಲನು ಬಾರದಿರುವದನ್ನು ಕಂಡು ಒಬ್ಬ ಸೇವಕನನ್ನು ಕರೆಯಲಿಕ್ಕೆ ಕಳುಹಿಕೊಟ್ಟನು ಅವನು ಬೀರಬಲನ ಗೃಹಕ್ಕೆ ಹೋಗಿ ವಿಚಾರಿಸಲು ನದಿಯ ಕಡೆಗೆ ಹೋಗಿದ್ದಾರೆಂದು ತಿಳಿಯಬಂತು ಆ ಕೂಡಲೆ ಅವನು ಶೀಘ್ರವಾಗಿ ಹೋಗಿ ಬೀರಬಲನಿಗೆ ಬೆಟ್ಟಿಯಾಗಿ - "ಬಾದ ಶಹರವರು ತಮ್ಮನ್ನು ಕರೆದುಕೊಂಡು ಬರುವದಕ್ಕೆ ಕಳಿಸಿದ್ದಾರೆ; ನಡೆಯ ಬೇಕು ” ಎಂದನು, ಬೀರಬಲ-ಬರುತ್ತೇನೆ.

ಸೇವಕ-ಮಹಾಶಯ ! ಇದನ್ನೇನು ಆರಂಭಿಸಿರುವಿರಿ ? ಬೀರಬಲ -:ಅನ್ನವನ್ನು ಬೇಯಿಸಹತ್ತಿದ್ದೇನೆ.
ಈಮಾತು ಕಿವಿಗೆ ಬಿದ್ದ ಕೂಡಲೆ ಸೇವಕನು ನಗುತ್ತ ಬಾದಶಹನ ಬಳಿಗೆ ಬಂದು ಸಮಗ್ರ ವೃತ್ತಾಂತವನ್ನು ತಿಳಿಸಿದನು. ಆಮೇಲೆ ಕಿಂಚಿತ್ಕಾಲ ಮಾರ್ಗ ಪ್ರತಿಕ್ಷೆ ಮಾಡಿ, ಬಾರದಾಗಲು ಪುನಃ ಮತ್ತೊಬ್ಬ ಸೇವಕನನ್ನು ಕಳುಹಿಸಿದನು ಅವನಿಗೂ ಅದೇ ಉತ್ತರವು ಬಂತು ಪುನಃ ಮೂರನೆಯವನನ್ನು ಕಳಿಸಿದನು ಅವನು ಹೋಗಿಬಂದು ಅದೇಸಂಗತಿಯನ್ನು ತಿಳಿಸಿ” ಹೀಗೆ ಬಾದಶಹನು ಎಷ್ಟೋ ಸಾರೆ ಕಳುಹಿಸಿದರೂ ಸಹ ಬೀರಬ ದೆ ಕರೆಯಬಂದ ಬಂದವರಿಗೆಲ್ಲ, " ಅನ್ನವನ್ನು ಬೇಯಿಸಿ ಇಟ್ಟು ನೆಂದು ಹೇಳಿ ಕಳುಹಿಸಿದನೇ ಹೊರತು ಓಲಗಕ್ಕೆ ಬರಲಿಲ್ಲ ರ್ಜನವಾಯಿತು ಆಮೇಲೆ ಬಾದಶಹನು ಅತಿಸಂಪ ೨೭೮ " ಎಷ್ಟು ಅನ್ನವನ್ನು ಬೇಯಿಸುತ್ತಿದ್ದಾನಾದೀತು ? ನೋಡಿಯಾದರೂ ಬ ರೋಣ ” ಎಂದು ನದಿಯ ದಂಡೆಯ ಕಡೆಗೆ ಹೊರಟನು ಅಲ್ಲಿಹೋಗಿ ನೋ ಡಲು ಗಳದ ತುದಿಯಲ್ಲಿ ಗಡಿಗೆಯನ್ನು ಕಟ್ಟಿ ಹುಲ್ಲನ್ನು ಉರಿಹಚ್ಚುತ ಸ್ಟಾರಿಯು ಕುಳಿತುಕೊಂಡಿತ್ತು ಅದನ್ನು ನೋಡಿ,
ಬಾದಶಹ—" ಬಿರಬಲ್ಲ ! ಏನು ಅರಂಭಮಾಡಿರುವಿರಿ ? ”
ಬೀರಬಲ್ಲ — ಮಾನ್ಯವರ ! ಅನ್ನವನ್ನು ಬೇಯಿಸ ಹತ್ತಿದ್ದೇನೆ.
ಬಾದಶಹ— ಈ ದಿವಸ ನೀನು ಮೂರ್ಖನಾದಂತೆ ತೋರುತ್ತದೆ ಆಕಾಶ ದಲ್ಲಿ ಬಡಿಗೆಯನ್ನಿಟ್ಟು ಭೂಮಿಯಮೇಲೆ ಉರಿಹಚ್ಚಿದರೆ ಅನ್ನವು ಎಂ ವಾದರೂ ಪಕ್ವವಾಗುವದುಂಟೇ ?
ಬೀರಬಲ-ಪ್ರಭುವರೆ ! ಒಂದು ಹರದಾರಿ ದೂರದಲ್ಲಿದ್ದ ಬೇಗೆಯ ಜಳ ದಿಂದ ಬ್ರಾಹ್ಮಣನು ಜಲದಲ್ಲಿ ಸಂಪೂರ್ಣ ರಾತ್ರಿಯನ್ನು ಕಳೆದ ನೋ, ತನ್ನ ಈ ಅನ್ನವಾದರೂ ಪಕ್ವವಾಗ ಬಹುದು; ಇದರಲ್ಲಿ ನನ್ನ ಮೂರ್ಖತನವೇನು ?
ಬಾದಶಹ— ನಿನ್ನ ಅಭಿಪ್ರಾಯವು ಸರಿಯಾದದ್ದು ಈಗ ಅರಮನೆಗೆ ನಡೆ ಆ ಬ್ರಾಹ್ಮಣನನ್ನು ಕರೆಯಿಸಿ ಪಾರಿತೋಷಕವನ್ನು ಕೊಡುತ್ತೇನೆ. ಬಾದಶಹನ ಬೀರಬಲನೂ ಕೂಡಿಕೊಂಡು ಅರಮನೆಗೆ ಬಂದ ರು ಬಾದಶಹನು ಆ ಕೂಡಲೆ ಬ್ರಾಹ್ಮಣನನ್ನು ಕರೆಯಿಸಿಕೊಂಡು ಐವತ್ತು ಸಹಸ್ರ ರೂಪಾಯಿಗಳನ್ನು ಕೊಟ್ಟು ಕಳುಹಿದನು. ಬ್ರಾಹ್ಮಣನು ಪ್ರಸ ನ್ನನಾಗಿ ಬೀರಬಲನಿಗೂ ಬಾದಶಹನಿಗೂ ಆಶೀರ್ವಾದ ಮಾಡಿ ಹೊರಟು ಹೋದನು.
೧೬೩. ಚಾತುರ್ಯ ಗರ್ಭಿತವಾದ ಮೃತ್ತಿಕೆಯ ಘಟ.
ವಸಂತ ಕಾಲದಲ್ಲಿ ಬಾದಶಹನು ಓಲಗವನ್ನು ಉಪವನದಲ್ಲಿ ನೆರೆಯಿ ಸಬೇಕೆಂದು ಅಪ್ಪಣೆಮಾಡಿದನು ಅದರಂತೆ ಸಭೆಯು ನೆರೆಯಿತು ಬೀರಬ ಲನು ನ್ಯಾಯ ವಿಚಾರಣೆಯನ್ನು ಮಾಡುತ್ತ ಸಮೀಪದಲ್ಲಿಯೇ ಕುಳಿತು ಕೊಂಡಿದ್ದನು ಮುಂದೆ ನಾಲ್ಕಾರು ಗಳಿಗೆಯ ಮೇಲೆ ಆ ನ್ಯಾಯದ ನಿರ್ಣ ನನ್ನು ಹೇಳಿದನು ಆ ಮೇಲೆ ಒಬ್ಬ ವರ್ತಕನು ಬಂದು ಬಾದಶಹನ ಸಮ್ಮು ಖದಲ್ಲಿ ಒಂದು ಲೇಖವನ್ನು ತಂದು ಇಟ್ಟನು. ಆ ಕಾಗದವನ್ನು ತೆಗೆದು ನೋಡಲು ಅದರಲ್ಲಿ ಈ ಕೆಳಗಿನ ಅಭಿಪ್ರಾಯವಿತ್ತು. ಅಜಮೀರ ನಿವಾಸಿಯು, ದೇಶದೇಶಗಳಲ್ಲಿ ಸಂಚಾರಮಾ ಪದಾರ್ಥಗಳ ಕ್ರಯ ವಿಕ್ರಯಮಾಡಿ ಉಪಜೀವನ" "ವನ್ನು ಸಾಗಿಸಿರುತ್ತೇನೆ ನಾನು ಬಂಗಾಲ ಪ್ರಾಂತದಲ್ಲಿಯ ಡಾಕಾ" "ಗಾಮಕ ಪಟ್ಟಣಕ್ಕೆ ಹೋದಾಗ ಒಬ್ಬ ವರ್ತಕನ ಬಳಿಯಲ್ಲಿದ್ದ ಒಂದು ರಾಜ ” " ಹಂಸವನ್ನು ಕಂಡೆನು. ಆ ಪಕ್ಷಿಯು ಅತಿ ಸುಂದರವಾದದ್ದಿತು, ಅದರ ಪುಕ್ಕಗಳು ” "ಸುವರ್ಣದ ವರ್ಣವನ್ನು ಹೀಯಾಳಿಸುತ್ತಿದ್ದವು ಅದರ ಶರೀರವು ಒಳ್ಳೆಕಾಂತಿ ಯುಕ್ತವಾಗಿ ಪುಷ್ಟವಾಗಿತ್ತು ಅಹಹಾ ! ಅದನ್ನು ಬಣ್ಣಿಸುವದು ನನ್ನಿಂದ ಸಾಧ್ಯವಲ್ಲ ಆ ಪಕ್ಷಿಯು ನಿಮ್ಮಂಥ ಚಕ್ರವರ್ತಿಗಳ ಬಳಿಯಲ್ಲಿ ಇರುವದಕ್ಕೆ ” ' ಯೋಗ್ಯವಾದದ್ದು ಅದನ್ನು ಕ್ರಯಕ್ಕೆ ತೆಗೆದುಕೊಂಡು, ಖಾವಂದರವರಿಗೆ ಕಾಣಿಕೆಯಾಗಿ ಸಮರ್ಪಿಸ ಬೇಕೆಂಬ ಸದಿಚ್ಛೆಯಿಂದ, ಆ ವರ್ತಕನು ಕೇಳಿದಷ್ಟು ಬೆಲೆಯನ್ನು ಕೊಟ್ಟು, ತೆಗೆದುಕೊಂಡು ಇಲ್ಲಿಗೆ ಬಂದೆನು, ಮತ್ತು ಆ ಪಕ್ಷಿಯ "ಪಂಜರವನ್ನು ನಾನು ಮಲಗಿಕೊಳ್ಳುವ ಅಂತರ್ಗಹದಲ್ಲಿ ತೂಗಹಾಕಿದೆ ನು” ಆ ಮೇಲೆ ಪಟ್ಟಣದಲ್ಲಿ ಸಂಚಾರಮಾಡಿ, ತಿರುಗಿ ಬಂದು ನೋಡಲು, ಪಕ್ಷಿಯು ” " ಮಾಯವಾಗಿತ್ತು ನನ್ನ ಸೇವಕರಲ್ಲಿಯೇ ಯಾವನೋ ಒಬ್ಬನು ಆ ಪಕ್ಷಿಯನ್ನು ಭಕ್ಷಿಸಿರಬೇಕೆಂಬ ಆಕ್ಷೇಪಣೆಯು ನನಗುಂಟಾಗಿದೆ; ಅದರಿಂದ ಕೃಪಾಳು ” ಗಳು, ಆ ಅಪರಾಧಿಯನ್ನು ಶೋಧಮಾಡಿ; ಅವನಿಗೆ ಯೋಗ್ಯದಂಡನೆಯನ್ನು"ವಿಧಿಸುವಿರೆಂದು ನಂಬಿದ್ದೇನೆ. ”
ಎಂದು ಬರೆದಿದ್ದ ಲೇಖನಾಭಿಪ್ರಾಯವನ್ನು ಕೇಳಿ ಬಾದಶಹನು ಆ ವರ್ತಕನ ಮನೆಯ ಯಾವತ್ತು ಸೇವಕರನ್ನು ಕರೆದು ಕೊಂಡು ಬರ್ರಿ ! ಎಂದು ಆಜ್ಞಾಸಿದನು. ಕಿಂಚಿತ್ಕಾಲದೊಳಗಾಗಿ ಯಾವತ್ತು ಸೇವಕರು ಓಲಗದಲ್ಲಿ ತಂದು ನಿಲ್ಲಿಸಲ್ಪಟ್ಟರು ಬಾದಶಹನು ಎಲ್ಲರಿಗೂ ವಿಚಾರಮಾಡಿದನು ಅಪರಾಧಿಯು ಸಿಕ್ಕಲಿಲ್ಲ ಆಗ ಬಾದಶಹನು ಆವರ್ತಕನನ್ನು ಕುರಿತು " ನಾನು ಯಾವತ್ತು ಸೇವಕರನ್ನು ಕರೆಯಿಸಿ ವಿಚಾರಮಾಡಿದೆನು ಅದರಿಂದೇನೂ ಪ್ರಯೋಜನವಾಗಲಿಲ್ಲ ನಿಮ್ಮ ಸಂಶಯವು ಮತ್ತೆ ಯಾರ ಮೇಲಾದರೂ ಇದ್ದರೆ ತಿಳಿಸು ” ಎಂದು ಹೇಳಿ ಆ ವರ್ತಕನ ಸೇವಕರಿಗೆ ಹೋಗಲಪ್ಪಣೆಕೊಟ್ಟನು ವರ್ತಕನು ಬಾಡಿದ ಮುಖವುಳ್ಳವನಾಗಿ ಬೀರಬಲನ ಕಡೆಗೆ ನೋಡುತ್ತ " ಈ ದಿವಸ ನನ್ನ ನ್ಯಾಯ ನಿರ್ಣಯವು ಆದಂತೆ ಅನ್ಯರದಾದರೂ ಆಗುತ್ತಿರಬಹುದು, ಇನ್ನು ಈ ಜಗತ್ತಿನಲ್ಲಿ ನ್ಯಾಯವಿಮರ್ಶೆಯನ್ನು ಮಾಡುವವರೇ ಇಲ್ಲದಂತಾಯಿತು ಇಂಥ ಪ್ರಸಿದ್ಧವಾದ ಅಕ ಬರ ಬಾದಶಹನ ಓಲಗದ ಸ್ಥಿತಿಯೇ ಹೀಗಿದ್ದ ಮೇಲೆ ಅನ್ಯರ ಪಾಡೇನು ? ಆಶ್ಚರ್ಯ ? ಮಹದಾಶ್ಚರ್ಯ !! ” ಎಂದನು. ಆಗ ಬೀರಬಲನು ಆ ವರ್ತ ಕನನ್ನು ಕುರಿತು- ( ಸಮಾಧಾನವನ್ನು ತಾಳು ! ನಾನು ನಿನ್ನ ನ್ಯಾಯನಿರ್ಣಯವನ್ನು ಮಾಡುತ್ತೇನೆ. ” ಎಂದುಹೇಳಿ ಪುನಃ ಆ ಸೇವಕರನ್ನು ಮಾರ್ಗದಲ್ಲಿಯೇ ಇದ್ದಕ್ಕಿದ್ದ ಹಾಗೆ ಬಂಧನಮಾಡಿಕೊಂಡು ಬರ್ರಿ ! ಎಂದು ಅಪ್ಪಣೆ ಮಾಡಿ ನಿಯೋಗಿಗಳನ್ನು ಅಟ್ಟಿದನು ಅವರು ಓಡುತ್ತ ಹೋಗಿ, ಮುಂದೆ ಮಾರ್ಗದಲ್ಲಿ ಹೋಗುತ್ತಿದ್ದ ಆ ಸೇವಕರನ್ನು ಚತುರ್ಭುಜರನ್ನಾಗಿ ಮಾಡಿ ಓಲಗದಲ್ಲಿ ತಂದು ನಿಲ್ಲಿಸಿದರು ಆಗ ಬೀರಬಲನು ಕೆಲವು ಪ್ರಶ್ನೆಗಳನ್ನು ಮಾಡಿ ಆ ಮೇಲೆ ಎಲೈ ಭೋರಾಗ್ರಣಿಯೇ! ನಿನ್ನ ಮನಸ್ಸಿನಲ್ಲಾದರೂ ಇದ್ದದೇನು ! ಪತ್ನಿಯನ್ನು ಹೊಡೆದು ತಿಂದು ಬಿಟ್ಟ ಸಂಗತಿಯು ಹೋಗಲಿ ! ಆದರೆ ಅದರ ಗರಿಯನ್ನು ಮುಂಡಾಸದಲ್ಲಿ ಇಟ್ಟುಕೊಂಡು ಬರಬೇಕೇ! ಶಹ ಬಾಸ ! ನಿನ್ನ ಧೈರ್ಯಕ್ಕೆ ಬಣಿಯೇ ಇಲ್ಲ; ಇಷ್ಟು ಹೊತ್ತಿನ ವರೆಗೆ ನೀನು ಒಪ್ಪಿಕೊಂಡಿದ್ದಿಲ್ಲ; ಈಗ ಏನು ಹೇಳು ! ಎಂದು ನುಡಿದನು ಈ ಮಾತುಗಳು ಪ್ರತಿಯೊಬ್ಬನಿಗೂ ಕೇಳಬಂದವು ಆ ಸೇವಕರಲ್ಲಿಯೇ ಒಬ್ಬನು ಪಕ್ಷಿಯನ್ನು ಕೊಂದು ತಿಂದು ಬಿಟ್ಟದ್ದನು. ಆಗ ಅವನು ತನ್ನ ಮನಸ್ಸಿನಲ್ಲಿ ನಾನೇನಾದರೂ ವಿಸ್ಮರಣೆಯಿಂದ ಗರಿಯನ್ನು ಮುಂಡಾಸದಲ್ಲಿ ಇಟ್ಟುಕೊಂಡಿರ ಬಹುದೇನೋ! ಎಂಬ ಸಂದೇಹವು ಉತ್ಪನ್ನವಾಗಿ ಅವನು ಯಾರಿಗೂ ತಿಳಿಯದಂತೆ ಸಾವಕಾಶವಾಗಿ ಮುಂಡಾಸದ ಮೇಲೆ ಕೈಯಾಡಿಸಿ ಕೊಂಡನು ಸಭಾಸದರೆಲ್ಲರೂ ಆ ಸೇವಕರನ್ನೇ ನೋಡುತ್ತ ಕುಳಿತುಕೊಂಡಿದ್ದರು ಆದರೆ ಮುಂಡಾಸದ ಮೇಲೆ ಕೈಯಾಡಿಸಿಕೊಂಡವನ ಮೇಲೆ ಯಾರ ದೃಷ್ಟಿಯೂ ಬೀಳಲಿಲ್ಲ ಬೀರಬಲನು ಮಾತ್ರ ಕಂಡನು. ಆಗ ಅವನನ್ನು ಹಿಡಿದುನಿಲ್ಲಿಸಿ ಉಳಿದವರಿಗೆ ಹೋಗಲಪ್ಪಣೆ ಕೊಟ್ಟನು ಆಮೇಲೆ ಅವನನ್ನು ನಯಯಭಗಳಿಂದ ವಿಚಾರಿಸಿದನು ಆದರೂ ಅವನು ತನ್ನ ಅಪರಾಧವನ್ನು ಒಪ್ಪಿಕೊಳ್ಳಲಿಲ್ಲ ಕಡೆಗೆ ಕರ್ಮಚಾರಿಗಳನ್ನು ಕರೆದು -" ಇವನನ್ನು ಬಳಿ ತಾಗಿ ದಂಡಿಸಿರಿ, ” ಎಂದು ಅಪ್ಪಣೆ ಮಾಡಿದನು ಆ ಕೂಡಲೆ ತಾಡನದ ಭಯ ದಿಂದ ಅವನು ಅಪರಾಧವನ್ನು ಒಪ್ಪಿಕೊಂಡು ಮುಂಡಾಸದಲ್ಲಿ ಬಚ್ಚಿಟ್ಟು ಕೊಂಡಿದ್ದ ಹಂಸಪಕ್ಷಿಯ ಗರಿಯನ್ನು ತೋರಿಸಿದನು. ಈ ಹಂಚಿಕೆಯಿಂದ ತುಡುಗನನ್ನು ಬಯಲಿಗೆ ತಂದು ಅವನಿಗೆ ಉಚಿತವಾದ ದಂಡನೆಯನ್ನು ವಿಧಿ ಸಿದನು ಸಭಾ ವಿಸರ್ಜನೆಯ ಸಮಯವು ಸಮೀಪಿಸಲು ಎಲ್ಲರೂ ತಾಂಬೂಲ ಸುಗಂಧಾದಿದ್ರವ್ಯಗಳನ್ನು ಕೊಡಲಪ್ಪಣೆ ಮಾಡಿದನು ಆಗ ಬಾದಶಹನ ಕೈ ಯೊಳಗಿದ್ದ ಸುವರ್ಣದ ತೈಲವಾತ್ರೆಯೊಳಗಿಂದ ಒಂದು ತೈಲಬಿಂದುವು ಕೆಳಗೆ ಹಾಸಿದ ರತ್ನಗಂಬಳಿಯ ಮೇಲೆ ಬಿತ್ತು ಅದನ್ನು ಪುನರಸಿ ಪಾತ್ರೆ ಯೊಳಗೆ ಹಾಕಬೇಕೆಂದು ಬಾದಶಹನು ಬೊಗ್ಗಿದನು ಆದರೆ ತೈಲವು ಪಸರಿ ಸಿದ್ದರಿಂದ ಅವನಪ್ರಯತ್ನವು ಸಾಧ್ಯವಾಗಲಿಲ್ಲ, ಈ ಸಮಯದಲ್ಲಿ ಬೀರಬ ಲನ ದೃಷ್ಟಿಯು ಬಾದಶಹನಮೇಲೆ ಬಿತ್ತು ಆಗ ಬಾದಶಹನು ಮನಸ್ಸಿನಲ್ಲಿ ಬೀರಬಲನು ಈ ಸಂಗತಿಯ ವಿಷಯವಾಗಿ ಎಂದಾದರೂ ಹಂಗಿಸದೆ ಬಿಡಲಿ ಕ್ಕಿಲ್ಲ ಎಂದು ನಿಶ್ಚಯಿಸಿಕೊಂಡನು. ಸಭಾವಿಸರ್ಜನೆಯಾಯಿತು ಸರ್ವರೂ ತಮ್ಮ ತಮ್ಮ ಗೃಹಗಳನ್ನು ಕುರಿತು ಗಮನಮಾಡಿದರು.
ಮರುದಿವಸ ತನ್ನ ದಾತೃತ್ವವನ್ನು ವ್ಯಕ್ತಪಡಿಸಬೇಕೆಂದು ಬಾದಶ ಹನು ಒಂದು ಹೌದನ್ನು ಸುಗಂಧತೈಲದಿಂದ ತುಂಬಿಸಿ, ಬೇಕಾದವರು ಬಂ ದು ತೈಲವನ್ನು ತೆಗೆದುಕೊಂಡು ಹೋಗಬಹುದೆಂದು ಡಂಗುರವನ್ನು ಸಾರಿ ಸಿದನು. ಆಮೇಲೆ ಈ ಸಮಾರಂಭವನ್ನು ನೋಡಬೇಕೆಂದು ಬೀರಬಲನನ್ನು ಕರೆದುಕೊಂಡು ಆ ಸ್ಥಳಕ್ಕೆ ಬಂದನು, ಬಾದಶಹನ ಆಶಯವು ಬೀರಬಲನಿಗೆ ವಿದಿತವಾಯಿತು ಆಗ ಬಾದಶಹನು. " ಬೀರಬಲ್ಲ ' ಎಂಥ ಆನಂದದ ಸಮ ಯವು ನೋಡಿದಿಯಾ ” ಎಂದನು. ಆಗ ಬೀರಬಲನು ಮುಕುಳಿ ತಹಸ್ತನಾಗಿ " ನರವರ ! ಅಪರಾಧವನ್ನು ಕ್ಷಮಿಸಬೇಕು; ಬಿಂದುವಿನಿಂದ ಆಗಿಹೋದ ಕೆಲಸವು ಹೌದಿನಿಂದಲೂ ಬರಲಾರದು, ಅಡಿಕೆಗೆ ಹೋದ ಮಾನವು ಆನೆಕೊ ಟ್ಟರೂ ಬರದು ” ಎಂಬ ಸಾಮತಿಯನ್ನು ಕೇಳಿಲ್ಲವೇ ಎಂದನು, ಈ ಮಾ ತನ್ನು ಕೇಳಿದಕೂಡಲೆ ಬಾದಶಹನಿಗೆ ಅತಿಶಯವಾದ ಕ್ರೋಧವು ಬಂತು, ಬೀರಬಲನ ಅಧಿಕ ಪ್ರಸಂಗತನದಿಂದ ತನಗೆ ಲಘುತ್ವವು ಬರುವದೆಂದು ನಿಶ್ಚ ಯಿಸಿದನು. ಆದರೆ ತನ್ನಿಂದಲೇ ಲಘುಕಾರ್ಯವು ಸಂಘಟ್ಟಿಸಿದ್ದರಿಂದ ಕ್ರೋ ಧವನ್ನು ಪ್ರಕಟೀಕರಿಸಲಿಲ್ಲ.
ಮರುದಿವಸವೇ ಬೀರಬಲನನ್ನು ಓಲಗಕ್ಕೆ ಬರಗೊಡಬೇಡಿರೆಂದು ದ್ವಾರ ರಕ್ಷಕರಿಗೆ ಆಜ್ಞಾಪಿಸಿದನು.
ಬಾದಶಹನ ಕ್ರೋಧವು ಇಳಿದಮೇಲೆ ತಾನೇ ಕರೆಯಕಳುಹುವನೆಂ ದು ತಿಳಿದು, ಬೀರಬಲನು ತನ್ನ ಮನೆಗೆ ಹೊರಟುಹೋದನು. ಎಂಟು ದಿವಸ ಗಳಾಗಿ ಹೋದವು ಬಾದಶಹನಿಂದ ಆಹ್ವಾನವು ಬರಲಿಲ್ಲ ಅದರಿಂದ ಬೀರಬ ಲನಿಗೂ ಕೋಪವು ಬಂದಿತು. ತಾನುಹೋದ ಸಂಗತಿಯನ್ನು ಪ್ರಕಟೀಕರಿ ಸದೆ ಮಾಳವಪ್ರಾಂತಕ್ಕೆ ಹೊರಟುಹೋದನು, ಅಲ್ಲಿ ಒಂದು ಜನವಸತಿಯ ಲ್ಲಿ ಒಬ್ಬ ಸಧನ ಮನುಷ್ಯನ ಆಶ್ರಯವನ್ನು ಪಡೆದು, ತನ್ನ ಗುಣವನ್ನೂ ನಿಜವಾದ ನಾಮಧೇಯವನ್ನೂ ವ್ಯಕ್ತಪಡಿಸದೆ ಗುಪ್ತರೀತಿಯಿಂದ ಇರಹ ತ್ರಿದನು. ಬೀರಬಲನು ಅಕಬರಶಹನ ದರ್ಬಾರದಿಂದ ಹೊರಟು ಹೋಗಿರುವನೆಂಬ ವಾರ್ತೆಯು ದೇಶವಿದೇಶಗಳಲ್ಲಿ ಪಸರಿಸಿತು. ಆಗ ಬಾದಶಹನ ವೈರಿಗಳು ಒಳಸಂಚನ್ನು ನಡೆಯಿಸಿದರು. ಏನಂದರೆ- "ಅಕಬರಶಹನ ಓಲಗದಲ್ಲಿ ಚತುರನಾದ ಮಂತ್ರಿಯು ಇಷ್ಟು ದಿವಸಗಳವರೆಗೆ ಇದ್ದದರಿಂದ ಅವನ ರಾಜ್ಯಸೂತ್ರದಲ್ಲಿ ಕೈಹಾಕಲಿಕ್ಕೆ ಸಾಮರ್ಥ್ಯವಿದ್ದಿಲ್ಲ; ಇನ್ನು ರಾಜ್ಯಹರಣ ಮಾಡಲಿಕ್ಕೆ ವಿಲಂಬವು ಹತ್ತುವಂತೆ ಇಲ್ಲ."

ಈ ಸಂಗತಿಯು ಗುಪ್ತಚರರ ಮುಖದಿಂದ ಬಾದಶಹನಿಗೆ ತಿಳಿಯಬಂತು. ಬೀರಬಲನನ್ನು ಕಾರ್ಯನಿವೃತ್ತ ಮಾಡಿದ್ದಕ್ಕೆ ಹಳಹಳಿಸಹತ್ತಿದನು. ಬೀರಬಲನ ಶೋಧಕ್ಕಾಗಿ ಅನುಚರರನ್ನು ಗ್ರಾಮ ಗ್ರಾಮಕ್ಕೆ ಕಳಿಸಿದನು. ಶೋಧಮಾಡಿಕೊಂಡು ಬಂದವರಿಗೆ ವಾರಿತೋಷಕವನ್ನು ಕೊಡುವೆನೆಂದು ಡಂಗುರವನ್ನು ಸಾರಿಸಿದನು. ಯಾವ ಉಪಾಯದಿಂದಲೂ ಬೀರಬಲನ ಶೋಧವು ಹತ್ತದೆ ಹೋಯಿತು. ಈ ವಾರ್ತೆಯು "ಬಲ್ಕ" ಪಟ್ಟಣದ ಬಾದಶಹನಿಗೆ ವಿದಿತವಾಗಲು, ಅವನು ಹಿಂದುಸ್ತಾನದ ಮೇಲೆ ದಂಡೆತ್ತಿಬರುವ ಸಿದ್ಧತೆಯನ್ನು ನಡೆಸಿದನು. ಮತ್ತು ತತ್ಪೂರ್ವದಲ್ಲಿ ಅಕಬರನ ಓಲಗದಲ್ಲಿದ್ದ ಉಳಿದ ಮುತ್ಸದ್ಧಿಗಳ ಚಾತುರ್ಯವನ್ನು ಪರೀಕ್ಷಿಸಿ ನೋಡಬೇಕೆಂಬ ಉದ್ದೇಶದಿಂದ "ಇನ್ನು ಮೂರುಮಾಸಗಳೊಳಗಾಗಿ ಒಂದು ಕೊಡದತುಂಬ ಬುದ್ಧಿಯನ್ನು ಕೊಟ್ಟು ಕಳುಹಿಸಬೇಕು, ಇಲ್ಲದೆಹೋದರೆ ಯುದ್ಧಕ್ಕೆ ಸಿದ್ಧರಾಗಬೇಕು" ಎಂಬ ಅಭಿಪ್ರಾಯಗರ್ಭಿತವಾದ ಒಂದು ಪತ್ರಿಕೆಯನ್ನು ಬರೆದು ಕಳುಹಿಸಿದನು. ಆ ಪತ್ರವನ್ನು ಓದಿಕೊಂಡು ಅಕಬರಬಾದಶಹನು ಚಿಂತೆಗೊಳಗಾದನು. ಈ ಪ್ರಸಂಗವು ಬೀರಬಲನ ಚಾತುರ್ಯದಿಂದ ದೂರಾಗಬೇಕಲ್ಲದೆ ಅನ್ಯರಿಂದ ಸಾಧ್ಯವಲ್ಲ; ಏನಾದರೂ ಹಂಚಿಕೆ ಮಾಡಿ ಬೀರಬಲನನ್ನು ಗೊತ್ತು ಹಚ್ಚಲಿಕ್ಕೇಬೇಕೆಂದು ನಿರ್ಣಯಿಸಿದನು. "ಪರುಷಮಣಿಯ ಸ್ಪರ್ಶದಿಂದ ಲೋಹವು ಸಹಾ ಭಂಗಾರವಾಗುವದೆಂಬ" ನಾಣ್ಣುಡಿಯಂತೆ ಬೀರಬಲನ ಸಂಗತಿಯಿಂದ ಬಾದಶಹನು ಸಹಾ ಚತುರನಾಗಿದ್ದನು. ಬೀರಬಲನನ್ನು ಶೋಧಮಾಡಲಿಕ್ಕೆ ಒಂದು ಹಂಚಿಕೆಯನ್ನು ಹುಡುಕಿದನು. ಅವನು ಪ್ರತಿಯೊಂದು ಗ್ರಾಮಕ್ಕೆ ಒಂದೊಂದು ಕುರಿಯನ್ನು ಕೊಟ್ಟು ಕಳುಹಿಸಿದನು, ಮತ್ತು ಅದರಸಂಗಡ "ಈ ಕುರಿಯನ್ನು ತೂಕಮಾಡಿ ಕಳಿಸಿದೆ ಇದರ ಪಾಲನ ಪೋಷಣೆಯ ಸಲುವಾಗಿ ಸರಕಾರದಿಂದ ಖರ್ಚುಕೊಡಲ್ಪಡುತ್ತದೆ. ಒಂದು ಮಾಸಪರಿಯಂತರ ಇದನ್ನು ಚನ್ನಾಗಿ ಆರೈಕೆಮಾಡಿ, ಅವಧಿಯು ಪೂರ್ಣವಾದ ಮರುದಿವಸವೇ ನಮ್ಮ ಕಡೆಗೆ ಕಳುಹಿಸಿಕೊಡಬೇಕು. ಆಗ ನಾವು ಪುನಃ ತೂಕಮಾಡಿ ನೋಡುತ್ತೇವೆ ಆಗ ಇದರ ತುಲನೆಯಲ್ಲಿ ಕಿಂಚಿ ತ್ ನ್ಯೂನಾಧಿಕ್ಯವು ಕಂಡುಬಂದಲ್ಲಿ ಸಂರಕ್ಷಣೆಯ ಕೆಲಸವನ್ನು ಕೈಕೊಂ ಡವನಿಗೆ ಮರಣದ ತೀಕ್ಷೆಯನ್ನು ವಿಧಿಸಲಾದೀತು ” ಎಂಬ ಆಶಯಗರ್ಭಿತ ವಾದ ಪತ್ರಿಕೆಯನ್ನು ಬರೆದು ಕಳುಹಿಸಿದನು. ಯಾವತ್ತು ಗ್ರಾಮಗಳಿಗೆ ಸ ತಿಕೆಯೂ ಕುರಿಯೂ ಹೋದಂತೆ ಬೀರಬಲನಿದ್ದ ಗ್ರಾಮಕ್ಕಾದರೂ ಬಂದಿ ತು, ಈ ಸಂಗತಿಯು ಬೀರಬಲನಿಗೆ ತಿಳಿದಕೂಡಲೆ ನನ್ನನ್ನು ಶೋಧಮಾ ಡುವದಕ್ಕಾಗಿಯೇ ಬಾದಶಹನು ಈ ಹಂಚಿಕೆಯನ್ನು ತೆಗೆದಿದ್ದಾನೆ ಇನ್ನು ಮೇಲೆ ನಾನು ಪ್ರಕಟನಾಗುವದಕ್ಕೆ ಯಾವ ಆತಂಕವೂ ಇಲ್ಲ ಎಂದುಯೋ ಚಿಸಿ, ಅವನು ಗ್ರಾಮಾಧಿಕಾರಿಯ ಬಳಿಗೆ ಹೋದನು. ಆ ಸಮಯದಲ್ಲಿ ಗ್ರಾಮಾಧಿಕಾರಿಯು ತನ್ನ ಗ್ರಾಮದೊಳಗಿನ ಬುದ್ಧಿವಂತರೂ ಅನುಭವಿಕರೂ ಆದ ವೃದ್ಧರೊಡನೆ ಈ ವಿಷಯವನ್ನೆ ಪ್ರಸ್ತಾಪಿಸುತ್ತ ಕುಳಿತಿದ್ದನು ಬೀರಬಲನು ಹೋಗಿ ನಮಸ್ಕಾರಮಾಡಿ “ ಗ್ರಾಮಾಧಿಕಾರಿಗಳೇ! ನಿಮ್ಮ ಆಶ್ರಯದಿಂದ ನಾನು ಇಲ್ಲಿಯವರೆಗೆ ಸುಖದಿಂದ ಕಾಲಹರಣ ಮಾಡಿದೆನು, ನಿಮ್ಮ ಉಪಕಾರವು ನನ್ನ ಮೇಲೆಬಹಳವಾಗಿದೆ ಈಗ ಸದ್ಯಕ್ಕೆ ನಿಮ್ಮ ಮೇಲೆ ಸಂಕಟವು ಬಂದಿರುವದ ? ಆದರೊಳಗಿಂದ ಪಾರಾಗುವ ಹಂಚಿಕೆಯ ನ್ನು ನಾನು ಹೇಳುತ್ತೇನೆ, ನನ್ನ ಹೇಳಿಕೆಯಂತೆ ವರ್ತಿಸಿದರೆ ನಿಮ್ಮ ಸಂಕ ಟವು ನಿಶ್ಚಯವಾಗಿ ದೂರಾಗುತ್ತದೆ” ಎಂದನು ಆಗ ಗ್ರಾಮಾಧಿಕಾರಿಯು ನೀವು ಅಂಥ ಉಪಾಯವನ್ನು ತೋರಿಸಿಕೊಟ್ಟದ್ದಾದರೆ ಆಜನ್ಮ ಪರಿಯಂ ತರ ನಿಮ್ಮ ಗುಣಗಾನವನ್ನು ಮಾಡುವೆನು ಎಂದನು. ಈ ಮಾತಿಗೆ ಬೀರ ಬಲನು “ ನಿಮ್ಮ ಪಶು ಸಂಗ್ರಹಾಲಯದಲ್ಲಿ ಒಂದು ಸಿಂಹನಿರುವದಷ್ಟೆ ಅದರ ಪಂಜರದಮುಂದೆ ಈ ಕುರಿಯನ್ನು ಕಟ್ಟಸಿಬಿಡಿರಿ; ಅಂದರೆ ಇದು ಎಷ್ಟು ತಿಂದರೂ ಪುಷ್ಟ ವಾಗದೆ ಮೊದಲಿನಂತೆಯೇ ಇರುವದು, ಆದರೆ ಈ ಹಂಚಿಕೆಯನ್ನು ನಾನು ಹೇಳಿದೆನೆಂದು ಬಾದಶಹನಿಗೆ ತಿಳಿಸಬೇಡಿರಿ ಎಂದು ಹೇಳಿದನು. ಗ್ರಾಮಾಧಿಕಾರಿಯು ಬೀರಬಲನ ಹೇಳಿಕೆಯಂತೆ ವ್ಯವಸ್ಥೆಮಾ ಡಿದನು ಅವಧಿಯು ಪೂರ್ಣವಾಗಲು, ತುಲನೆಯನ್ನು ಮಾಡಿ ನೋಡಿದನು ಮೊದಲಿನಷ್ಟೇ ಇತ್ತು ಅದನ್ನು ಆಕೂಡಲೆ ದಿಲ್ಲಿಗೆ ಕಳುಹಿಸಿಬಿಟ್ಟನು ಇದ ರಂತೆಯೇ ಪ್ರತಿಯೊಂದು ಗ್ರಾಮದಿಂದ ಕುರಿಗಳುಬಂದು ತಬ್ಬಿದವು ಅವುಗ ಳಲ್ಲಿ ಕೆಲವು ಆನಂದತಿಂದ ಇದ್ದ ಕುರಿಗಳ ತೂಕವು ಹೆಚ್ಚಾಯಿತು ಪರಿಶ್ರಮ ಮಾಡಿದ ಕುರಿಗಳತೂಕವು ಕಡಿಮೆಯಾಯಿತು. ಆದರೆ ಬೀರಬಲನಿದ್ದ ಗ್ರಾ ಮದಕುರಿಯತೂಕವು ಮೊದಲಿನಷ್ಟ ಆಯಿತು ಅದನ್ನು ಕಂಡು ಬಾದಶಹನು ಈ ಗಾಮದಲ್ಲಿಯೇ ಬೀರಬಲನಿದ್ದಾನೆಂದು ನಿಶ್ಚಯಿಸಿ ಆ ಗ್ರಾಮದಧಿಕಾರಿ ಯನ್ನು ಕರೆಯಕಳುಹಿ ಕೇಳಿದನು, ಗ್ರಾಮಾಧಿಕಾರಿಯು ತಾನು ಮಾಡಿದ ಹಂಚಿಕೆಯನ್ನು ಹೇಳಿದನು. ಬಾದಶಹನು- “ ಈ ಹಂಚಿಕೆಯನ್ನು ಹೇಳಿ ಕೊಟ್ಟವರಾರು ? ” ಎಂದು ಕೇಳಿದನು, ಅವನು ತನ್ನ ಹೆಸರನ್ನೇ ಹೇಳಿದ ನು. ಆದರೆ ಅವನ ಮಾತು ಬಾದಶಹನಿಗೆ ನಂಬಿಗೆಯಾಗಲಿಲ್ಲ ಪಾರಿತೋಷಕ ದ ಆಶೆಯನ್ನು ಹಚ್ಚಿದನು ಆಗ ಗ್ರಾಮಾಧಿಕಾರಿಯು - "ಪೃಥ್ವಿನಾಥ ! ನನ್ನಿಂದ ಏನಾದರೂ ಅಪರಾಧವು ಘಟಸಿದ್ದರೆ ಕ್ಷಮಿಸಬೇಕು. ಕೆಲವು ಮಾ ಸಗಳಿಂದ ನಮ್ಮ ಗ್ರಾಮದಲ್ಲಿ ಒಬ್ಬ ಮನುಷ್ಯನು ಬಂದು ವಾಸವಾಗಿದ್ದಾನೆ ಅವನ ಬುದ್ಧಿಯ ಪರಿಣಾಮವಿದು” ಎಂದು ಹೇಳಿದನು. ಬಾದಶಹನಿಗೆ ಇಷ್ಟೇ ಬೇಕಾಗಿತ್ತು, ಗ್ರಾಮಾಧಿಕಾರಿಗೆ ಉಚಿತವನ್ನಿತ್ತು ಕಳುಹಿಸಿದನು. ಆ ಮೇಲೆ ಗಜ, ತುರಗ, ಪಲ್ಲ ಮೊದಲಾದ ಪರಿವಾರವನ್ನು ಕಳುಹಿ ಕರೆಯಿ ಸಿಕೊಂಡನು, ಬೀರಬಲನು ಆ ಕೂಡಲೆ ಬಂದುಭಿಟ್ಟನು, ಬಾದಶ ಹನ, ಅತ್ಯಾನಂದದಿಂದ ಅವನನ್ನು ತಬ್ಬಿಕೊಂಡು ಪೂರ್ವಪದದಲ್ಲಿ ನಿಯಮಿಸಿ, ಬಲ್ಕ , ಪಟ್ಟಣದ ಬಾದಶಹನ ಪತ್ರಾಭಿಪ್ರಾಯವನ್ನು ತಿಳಿಸಿದನು ಬೀರಬ ಲನು ಬಾದಶಹನಿಗೆ ಧೈರ್ಯಹೇಳಿ ಯಥಾಶಕ್ತಿ ಪ್ರಯತ್ನ ಮಾಡುತ್ತೇನೆಂದು ವಚನಕೊಟ್ಟನು, ಆಮೇಲೆ ತನ್ನ ಉಪವನದಲ್ಲಿ ಒಂದು ಕೂಷ್ಮಾಂಡಲತೆ ಯನ್ನು ಹಚ್ಚಿಸಿದನು ಅದಕ್ಕೆ ಕಾಯಿಯಾಗುವ ಕಾಲವು ಸಮೀಪಿಸಲು ಒಂದು ಹೀಚನ್ನು ಒಂದು ಮೃತ್ತಿಕಾ ಕುಂಭದಲ್ಲಿಡಿಸಿ ಜೋಪಾನಮಾಡಹ ತ್ತಿದನು, ಆ ಹೀಚು ಅಲ್ಲಿಯೇ ದೊಡ್ಡದಾಗಿ ಕೊಡದೊಳಗಿಂದ ಹೊರಗೆ ಬ ರದಹಾಗಾಯಿತು ಆಗ ಅದರತುಂಬನ್ನು ಕೊಯಿದು, ಆ ಕೊಡದ ಬಾಯಿಗೆ ಒಂದು ವಸ್ತ್ರವನ್ನು ಕಟ್ಟಿ ಬಾದಶಹನಮುಂದೆ ತರಿಸಿಯಿಟ್ಟು “ ಖಾವಂದ ಈ ಕೊಡದತುಂಬ ಬುದ್ಧಿಯು ಇರುವದು, ಇದನ್ನು ಬಲ್ಯದ ಬಾದಶಹನಿಗೆ ಕಳುಹಿಸಿಕೊಡುತ್ತೇನೆ ” ಎಂದನು. ಆಗ ಬಾದಶಹನು ಆ ಬುದ್ಧಿಯು ಹಾ ಗದೆ ? ನನಗೆ ಸ್ವಲ್ಪತೋರಿಸು ಎಂದು ಕೇಳಿದನು. ಅದಕ್ಕೆ ಬೀರಬಲನು ಇದರಲ್ಲಿ ಬುದ್ಧಿಯನ್ನು ತುಂಬಿ ಮೇಲೆ ವಸ್ತ್ರವನ್ನು ಕಟ್ಟಿದ್ದೇನೆ ಈಗ ಇದ ನ್ನು ಬಿಚ್ಚಿ ತೋರಿಸಿದರೆ ಕೆಟ್ಟು ಹೋಗುವದು ಹೀಗೆಯೇ ಇರಲಿ ಎಂದು ಹೇ ಳಿದನು, ಬಾದಶಹನು ಇವನ ವಚನಕ್ಕೆ ಮಾನ್ಯಮಾಡಿದನು. ಆಗ ಬಲ್ಲದ ಬಾದಶಹನ ಹೆಸರಿಗೆ " ಕೊಡವನ್ನು ತುಂಬಿ ಬುದ್ಧಿಯನ್ನು ಕಳಿಸಿಕೊಟ್ಟಿ ದ್ದೇನೆ ಅದು ನಿಮಗೆ ತಪ್ಪಿದಕೂಡಲೆ ಆ ಕೊಡದೊಳಗಿನ ಬುದ್ದಿಯು ಚೂ ರ್ಣವಾಗದಂತೆಯೂ, ಕೆಡವು ಒಡೆಯದಂತೆಯೂ ಎಚ್ಚರಿಕೆಯಿಂದ ಹೊ ರಗೆ ತೆಗೆದುಕೊಂಡು ಬರಿದಾದಕೊಡವನ್ನು ಪುನಃ ನಮಗೆ ಕಳುಹಿಸಬೇಕು ಒಂದುವೇಳೆ ಕೊಡವನ್ನು ಒಡೆಯದೆ ಬುದ್ದಿಯನ್ನು ಹೊರಗೆತಕೊಳ್ಳುವದು ಅಸಾಧ್ಯವಾಗಿ ಕಂಡುಬಂದರೆ ನಾಲ್ವತ್ತು ಸಹಸ್ರ ರೂಪಾಯಿಗಳನ್ನು ಕಳು ಹಿಸಬೇಕು, ಹಣವಾಗಲೀ ಕೊಡವಾಗಲೀ ಎಂಟು ದಿವಸಗಳೊಳಗಾಗಿ ನ ಮಗೆ ತಲ್ಪದಿದ್ದರೆ ನಿಮ್ಮ ಮೇಲೆ ದಂಡೆತ್ತಿ ಬರುತ್ತೇವೆ, ಯುದ್ಧದ ಸಿದ್ಧತೆಯ ಲ್ಲಿರಿ” ಎಂಬ ಅಭಿಪ್ರಾಯವುಳ್ಳ ಪತ್ರವನ್ನು ಬರೆದು ಬಾದಶಹನ ಮುದ್ರೆಯ ನ್ನು ಒತ್ತಿ ಕಳುಹಿಸಿಕೊಟ್ಟನು. ಆ ಪತ್ರವನ್ನೂ, ಕೊಡವನ್ನೂ, ತೆಗೆದು ಕೊಂಡು ఒబ్బ ಒಂಟೆಯಸವಾರನು ಬಲ್ಕಶಹರಕ್ಕೆ ಪ್ರಯಾಣಮಾಡಿತಲುಪಿ ಅಲ್ಲಿಯ ಬಾಲಕನಿಗೆ ಪತ್ರವನ್ನೂ ಕೊಡವನ್ನೂ ಒಪ್ಪಿಸಿದನು. ಆ ಕೂಡ ಲೇ ಬಾದಶಹನು ಆ ಪತ್ರವನ್ನು ಸ್ವತಃ ತಾನೇ ಓದಿಕೊಂಡನು, ಅಭಿಪ್ರಾ ಯವು ತಿಳಿದಕೂಡಲೇ ಮುಖವು ಕಳೆಗುಂದಿತು, ಕೈಯು ನಡುಗಹತ್ತಿತು. ಅನುಚರರನ್ನು ಕಳುಹಿ ತನ್ನ ಅನುಯಾಯಿಗಳನ್ನು ಕರೆಯಿಸಿಕೊಂಡನು ಅವರೆಲ್ಲರೂ ಒಂದು ಕುಳಿತುಕೊಂಡಮೇಲೆ ಅಕಬರಬಾದಶಹನ ಪತ್ರವನ್ನು ತೋರಿಸಿ ಕೊಡವು ಒಡೆಯದಂತೆಯೂ, ಬುದ್ಧಿಯು ನಿನ್ನ ವಿಚ್ಛಿನ್ನವಾಗಿ ದಂತೆಯೂ ಹೊರಗೆ ತೆಗೆಯಿರಿ ! ಎಂದು ಆಜ್ಞಾಪಿಸಿದನು, ಎತ್ತರೂ ಅನೇಕ ಹಂಚಿಕೆಗಳನ್ನು ಹಾಕಿದರೂ ಸಾಧ್ಯವಾಗಲಿಲ್ಲ ಅಂತ್ಯದಲ್ಲಿ ಮುಖ್ಯ ಮಂತ್ರಿಯು ಎದ್ದು ನಿಂತು “ ಮಹಾರಾಜ ! ಅಕಬರಬಾಹನ ಒಲಗದಲ್ಲಿ ಚತುರರಾದ ಮಂತ್ರಿಗಳು ಅನೇಕಜನರಿದ್ದಾರೆ, ಅವನಿಗೆ ದೈವಸಹಾಯವು ಇನ್ನೂ ಬಲವತ್ತರವಾಗಿದೆ ಅವರನ್ನು ಯುದ್ಧದಲ್ಲಿ ಪರಾಜಿತರನ್ನಾಗಿ ಮಾ ಡುವದು ಅಸಾಧ್ಯವು. ಇದರಿಂದ ನಮ್ಮ ಪ್ರಜೆಗಳನ್ನು ಮರಣಕ್ಕೆ ಗುರಿಮಾ ಡದೆ ನಾಲ್ವತ್ತು ಸಹಸ್ರ ರೂಪಾಯಿಗಳನ್ನು ಕೊಟ್ಟು ಕಳುಹಿಸುವದೇ ಮೇ ಲಾವ ಉಪಾಯವು ” ಎಂದು ತನ್ನ ಅಭಿಪ್ರಾಯವನ್ನು ಕೊಟ್ಟನು. ಸ ಸಭಾಸದರೂ ಮಂತ್ರಿಯ ಅಭಿಪ್ರಾಯವು ಸರಿಯಾದದ್ದೆಂದು ಮುಕ್ತಕಂಠ ರಾಗಿ ಹೇಳಿದರು, ಅವರೆಲ್ಲರ ಅಭಿಪ್ರಾಯದಂತೆ ಬಲ್ಲದ ಬಾದಶಹನು ನಾಲ್ವ ತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಕಳುಹಿಸಿ ಅಕಬರನ ಸ್ನೇಹವ ನ್ನು ಸಂಪಾದಿಸಿದನು.
-( ೧೬೪, ಜೀವವು ಅತ್ಯಂತ ಪ್ರಿಯವಾದದ್ದು. )
ಒಂದುದಿವಸ ಬಾದಶಹನು ಓಲಗದಲ್ಲಿ ಬಂದು ಕುಳಿತುಕೊಂಡಿದ್ದನು ಎರಡುವರುಷದ ಬಾಲಕನಾದ ಸೇಲೀಮನು ಅಲ್ಲಿಯೆ ಮಗ್ಗಲಲ್ಲಿ ಆಡುತ್ತಿದ್ದ ನು ಆ ಹುಡುಗನ ಬಾಲಲೀಲೆಗಳನ್ನು ನೋಡುವದರಲ್ಲಿ ಬಾದಶಹನಮನಸ್ಸು ಮಗ್ನವಾಗಿತ್ತು ಆಗ ಬಾದಶಹನ ಮನಸ್ಸಿನಲ್ಲಿ ಅಕಸ್ಮಾತ್ತಾಗಿ, ಒಂದು ಪ್ರಶ್ನೆಯು ಉದ್ಭವಿಸಿತು " ಈ ಸಂಸಾರದಲ್ಲಿ ಉತ್ಪನ್ನವಾಗಿರುವ ಮನು ವ್ಯ, ಪಶು , ಪಕ್ಷಿ, ಕೀಡಕಾದಿಗಳಿಗೆ, ಅತ್ಯಂತ ಪ್ರಿಯವಾದ ವಸ್ತುವು ಯಾ ವದು ? ” ಎಂದು ಆಲೋಚಿಸುತ್ತಿರಲು, ಸೇಲೀಮನ ತೊದಲ್ನುಡಿಗಳು ಶ್ರ ವಣಪಥವನ್ನು ಸೇರಲು, ಅತಿ ಆನಂದವಾಯಿತು. ಆ ಆನಂದದ ಭರದಲ್ಲಿ ತ ನ್ನ ಸಭಾಸದರನ್ನು ಕುರಿತು. ಈ ಸಂಸಾರದಲ್ಲಿ ಎಲ್ಲಕ್ಕಿಂತಲೂ ಅಧಿಕ ವಾಗಿ ಪ್ರಿಯವಾಗಿರುವ ವಸ್ತುವು ಯಾವದು? ” ಎಂದು ಪ್ರಶ್ನೆ ಮಾಡಿದನು. ಆ ಸಮಯದಲ್ಲಿ ಅಲ್ಲಿ ಬೀರಬಲ ನಿದ್ದಿಲ್ಲ; ಅವನಿದ್ದರೆ ಆಕೂಡಲೆ ಪ್ರಶ್ನೆಗೆ ಉ ತರವು ಸಿಕ್ಕೇ ಹೋಗುತ್ತಿತ್ತು ಅವನು ಇಲ್ಲದ್ದರಿಂದ ತಮ್ಮ ಚಾತುರ್ಯ ವನ್ನು ಪ್ರಕಟೀಕರಿಸಲಿಕ್ಕೆ ಯೋಗ್ಯಸಮಯವು ದೊರಿಯಿತೆಂದು ಹಿಗ್ಗಿದ ರು ಯಾಕಂದರೆ ಬೀರಬಲನ ಉತ್ತರದ ಹೊರತು ಬಾದಶಹನಿಗೆ ಸಮಾಧಾ ನವೇ ಆಗುತ್ತಿದ್ದಿಲ್ಲ;
ಆದರೆ ಏನೆಂದು ಉತ್ತರವನ್ನು ಕೊಡಬೇಕು? ” ಎಂಬಬಗ್ಗೆ ಸಹ ಸ್ರಾವಧಿ ತರ್ಕ ವಿತರ್ಕಗಳು ನಡೆದವು ಒಂದಾದರೂ ಸಮರ್ಪಕ ವಾದಂತೆ ತಮಗೇ ಕಂಡು ಬರಲಿಲ್ಲ, ಕಡೆಯಲ್ಲಿ ಬಾದಶಹನ ಮಗ್ಗುಲಲ್ಲಿ ಕುಳಿತಿದ್ದ ಸೆ ಲೀಮನ ಮೇಲೆ ದೃಷ್ಟಿಬಿದ್ದು, ಬಹಳ ಮಾಡಿ ಬಾದಶಹನ ಮನಸ್ಸಿನಲ್ಲಿ ಪು ತ್ರಪ್ರೇಮವೇ ಅಧಿಕ ವಾದದ್ದೆಂದು ಇರಬಹುದು ಎಂದು ಕಲ್ಪನೆ ಮಾಡಿ ಕೊಂಡು ಅದೇರೀತಿಯಾಗಿ ಹೇಳಿಬಿಟ್ಟರು ಬಾದಶಹನು ಅದನ್ನು ಸ್ವೀಕರಿ ಸಿದನು.
ಕಿಂಚಿತ್‌ಕಾಲದ ಮೇಲೆ ಬೀರಬಲನು ಸಭಾಸ್ಥಾನವನ್ನು ಪ್ರವೇಶಿ ಸಿದನು. ಬಾದಕಹನು ಅವನಿಗೂ ಅದೇ ಪ್ರಶ್ನೆಯನ್ನು ಮಾಡಿದನು ಕೂಡ ಲೆ ಬೀರಬಲನು- ಪೃಥ್ವೀಶ ! ಎಲ್ಲ ವಸ್ತುಗಳಿಗಿಂತ ಸ್ವಂತ ಜೀವವು ಅತ್ಯಂ ತ ಪ್ರಿಯವಾದದ್ದು, ಇದಕ್ಕಿಂತಲೂ ಹೆಚ್ಚಾದ ಒಡವೆಯು ಬೇರೊಂದು ಇ ಲ್ಲ ,” ಎಂದು ಉತ್ತರಕೊಟ್ಟನು ಈ ಮಾತಿಗೆ ಬಾದಶಹನು ಪುನಃ ವಾಹ ವ್ವಾ ! ಅಧಿಕಪ್ರಿಯವಾದದ್ದು ಪುತ್ರಪ್ರೇಮವು ನೀನು ಜೀವವು ಪ್ರಿಯವಾ ದದ್ದೆಂದು ಹೇಳುತ್ತೀ ? ಅದನ್ನು ಸಿದ್ಧ ಮಾಡಿ ತೋರಿಸು! ” ಎಂದನು ಆ ಕೂಡಲೆ ಬೀರಬಲನು ಈ ಮಾತಿನ ಸತ್ಯತೆಯನ್ನು ಈ ಗಲೇ ತೋರಿಸು ವೆನು, ತಮ್ಮ ಉಪವನದಲ್ಲಿಯ ನೀರುತುಂಬಿದ ಹೌಜನ್ನು ತೆರವು ಮಾಡಿಸ ಬೇಕು, ಮತ್ತು ಮರಿಯಿದ್ದ ಒಂದು ಕಪಿಯನ್ನು ತರುವಂತೆ ಸೇವಕರಿಗೆ ಆ ಜ್ಞಾಪಿಸಬೇಕು,” ಎಂದು ಹೇಳಿದನು ಬಾದಶಹನ ಆಜ್ಞೆಯಮೇರೆಗೆ ಎಲ್ಲ ವೂ ಸಿದ್ಧವಾಯಿತು ಬಾದಶಹನು ಸಭಾಸದರೊಡನೆ ಉಪವನಕ್ಕೆ ಬಂದನು ಬೀರಬಲನು ಮರಿಯಳ್ಳ ಕಪಿಯನ್ನು ಆ ಹೌದಿನಲ್ಲಿ ಕೂಡಿಸಿ ನೀರುತುಂ ಬುವಂತೆ ಪರಿಚಾರಕರಿಗೆ ಹೇಳಿದನು ಕ್ಷಣ ಕ್ಷಣಕ್ಕೆ ನೀರು ಹೌದಿನಲ್ಲಿ ಮೇ ಲಕ್ಕೇರಹತ್ತಿತು ಕಪಿಯು ತನ್ನ ಮರಿಯನ್ನು ಹೆಗಲಮೇಲೆ ಕುಳ್ಳಿರಿಸಿಕೊಂ ಡಿತು ನೀರು ಹೆಚ್ಚಾಗುತ್ತಾಗುತ್ತ ಕುತ್ತಿಗೆಯ ವರೆಗೆ ಬರಲು ಮರಿಯನ್ನು ತಲೆಯಮೇಲಿಟ್ಟುಕೊಂಡಿತು ಆಕೂಡಲೆ ಬಾದಶಹನು ಬೀರಬಲ್ಲ, ನೋ ಡು ! ಕಪಿಯು ತನ್ನ ಜೀವದಾಸೆಯನ್ನುಳಿದು, ಮರಿಯನ್ನು ಹ್ಯಾಗೆ ರಕ್ಷಿ ಸುತ್ತದೆ? ಕಂಡಿಯಾ ! ಇದರ ಮೇಲಿಂದ ಅವತ್ಯಪ್ರೇಮವು ಅಧಿಕವಾದ ದೆಂದು ಸಿದ್ಧವಾಗಲಿಲ್ಲವೇ? ಎಂದು ಕೇಳಿದನು ಅದಕ್ಕೆ ಬೀರಬಲನು ಭೂ ವರ ! ಸ್ವಲ್ಪ ಅವಕಾಶ ಮಾಡಿರಿ ತನ್ನ ಪ್ರಾಣಕ್ಕೆ ಬಂದಮೇಲೆ ನಿಜವಾದ ಪ್ರೇಮವು ಯಾವದೆಂದು ತಾನೇ ನಿರ್ಣಯವಾಗುವದು. ” ಎಂದು ಹೇಳುವ ದರೊಳಗಾಗಿ ಆ ಕಪಿಯ ಕಣ್ಣು ಮೂಗು, ಕಿವಿ, ಬಾಯಿಗಳಲ್ಲಿ ನೀರುಹೊ ಕ್ಕು ಪಾಣಹೋಗುವ ಸಮಯವು ಸಮೀಪಿಸಲು ಅದತ್ಯ ಪ್ರೇಮವನ್ನು ಬಿ ಟ್ಟು, ಆ ಮರಿಯನ್ನು ತೆಳಕ್ಕೆ ಹಾಕಿ, ಮೇಲೆ ತಾನು ನಿಂತುಕೊಂಡಿತು ಆ ಕೂಡಲೆ ಬಾದಶಹನಿಗೆ ಅದನ್ನು ತೋರಿಸಿ ನೀರನ್ನು ಹೊರಗೆ ತೆಗೆಯಲಿಕ್ಕೆ ಅಪ್ಪಣೆ ಮಾಡಿದನು, ವತ್ಸ ಸಹಿತವಾಗಿ ಕಪಿಯು ಬದುಕಿಕೊಂಡಿತು ಆಮೇ ಲೆ ಬೀರಬಲನು ಖಾವಂದ ! ಅವಲೋಕಿಸಿದಿರಾ ! ಅಪತ್ಯಪ್ರೇಮವು ಅಧಿ ಕವಾಯಿತೊ '.? ಸ್ವಂತಪ್ರಾಣವು ಅಧಿಕವಾಯಿತೋ? ಎಲ್ಲಿಯ ತನಕ ಪ್ರಾ ಣಸಂಕಟವು ಇರುವದಿಲ್ಲವೋ ಅಲ್ಲಿಯ ತನಕ ಅಪತ್ಯ ಪ್ರೇಮವಿರುವದು ಯಾವಾಗ ತನ್ನ ಪ್ರಾಣಕ್ಕೆ ಮುಳುವು ಬರುವದೋ ಆಗ ಎಲ್ಲ ಪ್ರೇಮಗ ಳು ಬಯಲಾಗಿ ಆತ್ಮ ಸಂರಕ್ಷಣೆಯೇ ಮುಂದೊರೆಯುವದು ? ಇದರ ಉ ದಾಹರಣೆಯನ್ನು ತಾವು ಪ್ರತ್ಯಕ್ಷ ಕಂಡದ್ದಾಯಿತು! ?” ಎಂದು ಹೇಳಲು, ಬಾದಶಹನೂ ಮುತ್ಸದ್ಧಿಗಳೂ ಬೀರಬಲನ ಚಾತುರ್ಯಕ್ಕೆ ಒಪ್ಪಿಕೊಂಡರು
-(೧೬೫, ಅತ್ಯದ್ಭುತ ಚಮತ್ಕಾರ.)-
ಬಾದಶಹ ಬೀರಬಲ್ಲರ ನಡುವೆಯಾವಾಗಲೂ ವಿನೋದವು ನಡೆದೇ ಇರುತ್ತಿತ್ತು ಒಂದು ದಿವಸ ಬಾದಶಹನು " ಬೀರಬಲ್ಲ ? ನಭೂತೋನಭ ವಿಷ್ಯತಿ ” ಇಂಥ ಒಂದು ಅತ್ಯದ್ಭುತ ಚಮತ್ಕಾರವನ್ನು ಮಾಡಿತೋರಿಸು ಎಂದನು ಬೀರಬಲನು ಸರಕಾರ ! ಇದು ಯಾವದೊಡ್ಡ ಸಂಗತಿಯು ! ತ ಮ್ಮ ಆಜ್ಞೆಯಾದ ಕೂಡಲೆ ತೋರಿಸುವೆನು ; ಎಂದನು ಹಾಗಾದರೆ ನಾಳೆ ಪ್ರಾತಃ ಕಾಲದಲ್ಲಿಯೇ ತೋರಿಸು ಎಂದು ಬಾದಶಹನು ಕೇಳಿದನು ಅದ ಕ್ಕೆ ಬೀರಬಲನು ಮಹಾರಾಜ ! ನಾಳೆಗೆ ತೋರಿಸುವದು ಆಗಲಿಕ್ಕಿಲ್ಲ ಒಂ ದು ಸವಂತ್ಸರದ ವಧಿಯು ಬೇಕು, ಮತ್ತು ದ್ರವ್ಯಸಹಾಯವೂ ಬಹಳಬೇ ಕಾಗುವದು, ಎಂದನು “ ಏನೂ ಚಿಂತೆಯಿಲ್ಲ, ಒಂದು ಸಂವತ್ಸರದ ಅವಧಿ ಯನ್ನು ಕೊಟ್ಟಿದ್ದೇನೆ ದ್ರವ್ಯವು ಎಷ್ಟು ಬೇಕಾದೀತೆಂಬದನ್ನು ತಿಳಿಸು" ಎಂದು ಬಾದಶಹನು ಕೇಳಿದನು ಎರಡು ಲಕ್ಷರೂಪಾಯಿಗಳು ಬೇಕಾಗ ಬ ಹುದೆಂದು ಬೀರಬಲನು ಹೇಳಿದ ಕೂಡಲೆ ಹಣವನ್ನು ಅವನ ಸ್ವಾಧೀನಪಡಿ ಸಿದನು ಬೀರಬಲನು ಆ ದ್ರವ್ಯದಲ್ಲಿ ಅರ್ಧದ್ರವ್ಯವನ್ನು ಬ್ರಾಹ್ಮಣರಿಗೆ ದಾ ನಮಾಡಿ, ಉಳಿದ ದ್ರವ್ಯವನ್ನು ಮನೆಯಲ್ಲಿಟ್ಟುಕೊಂಡು ಕುಳಿತು ಬಿಟ್ಟನು ಕೆಲವು ಕಾಲದ ತನಕ ಬಾದಶಹನ ಅರಮನೆಯ ಕಡೆಗೇ ಹಾಯಲಿಲ್ಲ ಅದ ನ್ನು ಕಂಡು ಬಾದಶಹನು ಅವನನ್ನು ಕರೆಯ ಕಳುಹಿದನು. ಆಗ ಬೀರಬ ಲನು “ ನನಗೆ ಈಗ ಸ್ವಲ್ಪದಿವಸಗಳಿಂದ ಜಾಡ್ಯವುತ್ಸನ ವಾಗಿದೆ ಅದರಿಂದ ಬಾದಶಹರ ದರುಶನಕ್ಕೆ ಬರಲಸಮರ್ಥನಾಗಿದ್ದೇನೆ, ” ಎಂದು ಹೇಳಿ ಕಳು ಹಿಸಿದನು ಆಗ ಬಾದಶಹನು ಜಾಡ್ಯಗೆ ಪರೀಕ್ಷೆಯನ್ನು ಮಾಡಲಿಕ್ಕೂ ಔಷ ಧೋಪಚಾರಮಾಡಲಿಕ್ಕೂ ಪ್ರಸಿದ್ಧರಾದ ಧನ್ವಂತರಿಗಳನ್ನು ಕಳುಹಿಸಿಕೊ ಟ್ಟನು ಅದರಿಂದ ಏನೂ ಪ್ರಯೋಜನ ವಾಗಲಿಲ್ಲ ಬಾದಶಹನು ಸ್ವತಃನೋ ಡಲಿಕ್ಕೆ ಬಂದನು. ಆಗ ಬೀರಬಲನು ಅತಿತ್ರಾಣಗುಂದಿದವನಂತೆ " ಪೃಥ್ವಿ ನಾಥ ! ನನ್ನ ಆ ಯುರ್ಮರ್ಯೋದೆಯಾ ಕಾಲವು ಸಮೀಪಿಸಿದಂತೆ ಕಾಣು ತ್ತದೆ, ಇನ್ನು ನಾನು ಬಹಳ ದಿವಸ ಬದುಕುವದಿಲ್ಲ, ” ಎಂದು ಕ್ಷೀಣಸ್ವರ ದಿಂದ ಮಾತಾಡಿದನು ಬಾದಶಹನು ಧೈರ್ಯಹೇಳಿ “ಛೇ; ನೀನು ಎದೆಯೊ ಡಕೊಳ್ಳಬೇಡ ! ನಿನಗೆ ಬೇಗನೆ ರೋಗವು ವಾಸಿಯಾಗುವದು ನೀನಿಲ್ಲದಿದ್ದರೆ ನನ್ನ ಅವಸ್ಥೆಯು ಏನಾಗುತ್ತದೆಂಬದು ಪರಮೇಶ್ವರನು ಬಲ್ಲನು ” ಎಂದ ನು ಅದಕ್ಕೆ ಬೀರಬಲನು- ಮಾನ್ಯವರ : ಈಶ್ವರೇಚ್ಛೆಗೆ ಉಪಾಯವಿಲ್ಲ; ಅವನ ಅಪ್ಪಣೆಯನ್ನು ಮೀರಲಸಾಧ್ಯವು ನನ್ನಿಂದ ಏನಾದರೂ ಅಪರಾಧ ಗಳುಂಟಾಗಿದ್ದರೆ ಕ್ಷಮಿಸಬೇಕು; ಮತ್ತು ನಾನು ಮರಣ ಹೊಂದಿದಮೇಲೆ ನನ್ನ ಸತಿಸುತರ ಯೋಗಕ್ಷೇಮವನ್ನು ನಡೆಯಿಸಬೇಕು ಎಂದು ಪ್ರಾರ್ಥ ನೆಮಾಡಿಕೊಂಡನು ಅದನ್ನು ಕೇಳಿ ಬಾದಶ ಹನು ದುಃಖಿತನಾಗಿನಿನ್ನ ಅಪೇಕ್ಷೆ ಯನ್ನು ಪೂರ್ಣ ಮಾಡುತ್ತೇನೆಂದು ಹೇಳಿ ಹೊರಟು ಬಂದನು ಅದೇದಿವಸ ರಾತ್ರಿಯಲ್ಲಿ ಬೀರಬಲನು ಮರಣ ಹೊಂದಿದನೆಂಬ ವಾರ್ತೆಯು ನಗರವನ್ನೆ ಲ್ಲ ವ್ಯಾಪಿಸಿತು ನೆರೆಹೊರೆಯವರು ಬಂದು ಕೂಡಿದರು ಬೀರಬಲನು ತನ್ನ ಆಕಾರದಷ್ಟು ಆಕಾರವುಳ ಒಂದು ಸಿಸ್ಟಪ್ರತಿಮೆಯನ್ನು ಮಾಡಿಟ್ಟು, 66 ಅಂತರ್ಗಹದಲ್ಲಿ ಯಾರಿಗುತಿಳಿಯದಂತೆ ಕುಳಿತುಬಿಟ್ಟನು ಆಪ್ತರು ನೆ ರೆದರು ಸ್ಮಶಾನ ಯಾತ್ರೆಯನ್ನು ಪೂರೈಸಿ ಬಿಟ್ಟರು ಈಸಂಗತಿಯು ಅನ್ಯರಿ ಗೆತಿಳಿಯಗೊಡದಂತೆ ಜಾಗರೂಕತೆಯಿಂದ ವರ್ತಿಸಿರಿ ಎಂದು ತನ್ನ ಆಪ್ತೇಷ್ಟ ರಿಗೆಲ್ಲ ಕಟ್ಟಪ್ಪಣೆ ಮಾಡಿಬಿಟ್ಟನು ಬೀರಬಲನ ಮರಣದ ವಾರ್ತೆಯು ಬಾದಶಹನಿಗೆ ತಿಳಿದ ಕೂಡಲೆ ಅವನು ಅತಿದುಃಖಪಟ್ಟನು ಆದರೆ ಮುಸ ಲ್ಮಾನ ಜಾತಿಯ ಮಂತ್ರಿಗಳಿಗೂ ಮುತ್ಸದ್ದಿಗಳಿಗೂ ಈ ವಾರ್ತೆಯನ್ನು ಕೇಳಿ ಸಂತೋಷಿತರಾದರು. ಅವರು ಸಕ್ಕರೆಯನ್ನು ಹಂಚಿದರು ಹಿಂದುಗ ಲಾದವರು ದುಃಖಿಸಿದರು ಎರಡು ದಿವಸ ಅನ್ನೋದಕಗಳನ್ನು ಸಹಸ್ವೀಕರಿ ಸಲಿಲ್ಲ; ಬಾದಶಹನು ಬೀರಬಲನ ಉತ್ತರ ಕ್ರಿಯಾದಿಗಳನ್ನು ಯಥಾಸಾಂ ಗವಾಗಿ ನಡೆಯಿಸುವಂತೆ ಅವನ ಮಗನಿಗೆ ಹೇಳಿ ಬಹಳದವ್ಯವನ್ನು ಕೊಟ್ಟ ನು ದಿವಸಗಳು ಹೆಚ್ಚು ಹೆಚ್ಚು ಹೋದಹಾಗೆ ಪ್ರಜೆಗಳಿಗೆ ವಿಸ್ಮರಣೆ ಯಾಗುತ್ತ ಬಂತು ಅವನ ಸ್ಥಾನದಲ್ಲಿ ಒಬ್ಬ ಯವನ ಮಂತ್ರಿಯು ನಿಯಮಿ ಸಲ್ಪಟ್ಟನು ಅವನ ಕಾರಭಾರಕ್ಕೆ ಪ್ರಜೆಗಳು ತ್ರಸ್ತರಾಗಿ ಬಿಟ್ಟರು ಪ್ರಜೆಗಳ ಸುಖದುಃಖಗಳನ್ನು ಕೇಳುವವರೇ ಇಲ್ಲವಾಗಿ ಹೋದರು ಈ ಪ್ರಕಾರ ಅಂತೂ ಇಂತೂ ದಶಮಾನಗಳು ಕಳೆದು ಹೋದವು. ಆಮೇಲೆ ಬೀರಬಲನು ತನ್ನ ಪುತ್ರನನ್ನು ಕರೆದು, ಸುಕುಮಾರನೇ ಸುತ್ತು ಮುತ್ತು ಒಂದು ಹರ ದಾರಿಯವರೆಗೆ ಪ್ರಕಾಶಮಾನವಾಗಿ ಕಾಣುವಂಥ ಏಳು ಅಂತಸ್ತುಗಳುಳ್ಳ ಒಂದು ಮನೆಯನ್ನು ಇಲ್ಲಿಗೆ ಸಮೀಪವಾಗಿರುವ ಗುಡ್ಡದ ಮೇಲೆ ಒಂದೇ ರಾತ್ರಿಯಲ್ಲಿ ಸಿದ್ಧ ಪಡಿಸು ” ಎಂದು ಹೇಳಿ ಒಂದು ಲಕ್ಷ ರೂಪಾಯಿಗಳ ನ್ನು ಅವನ ವಶಕ್ಕೆ ಕೊಟ್ಟನು. ಪುತ್ರನಾದರೂ ತಂದೆಯಂತೆ ಚತುರನಿದ್ದ ನು. ಅವನು ಎರಡು ದಿವಸಗಳ ವರೆಗೆ ಎಲ್ಲಪದಾರ್ಥಗಳನ್ನು ಗುಪ್ತ ರೀತಿ ಯಿಂದ ಸಂಗ್ರಹಿಸಿ ಇಟ್ಟುಕೊಂಡು ಒಬ್ಬ ಚತುರನಾದ ಶಿಲ್ಪಿಗನನ್ನು ಕರೆ ದು ಒಂದು ರಾತ್ರಿಯೊಳಗಾಗಿ ಏಳು ಉಪ್ಪರಿಗೆಗಳುಳ್ಳ ಒಂದು ಮನೆಯ ನ್ನು ಸಿದ್ಧಪಡಿಸಬೇಕೆಂದು ಹೇಳಿದನು ಅವನ ಅಪ್ಪಣಿಯ ಮೇರೆಗೆ ಕಾವ್ಯ ನಿರ್ಮಿತ ಗ್ರಹವು ಸಿದ್ಧವಾಯಿತು ಅದರ ಪ್ರಕಾಶವು ದೂರದ ವರೆಗೆ ವಸರಿ ಸುವಂತೆ ಹೊರಮಲ್ಗಲಿಗೆ ದೊಡ್ಡದೊಡ್ಡ ಕನ್ನಡಿಗಳು ಹಚ್ಚಲ್ಪಟ್ಟವು ಒಳ ಮಗ್ಗುಲಲ್ಲಿ ಅಂದವಾದ ಬಣ್ಣವನ್ನು ಹಚ್ಚಿಸಿ ಬಿಟ್ಟಿದ್ದನು. ಈ ಪ್ರಕಾರ ಗೃ ಹಸಿದ್ಧತೆಯಾದ ಕೂಡಲೆ ಅದೇ ದಿವಸ ರಾತ್ರಿಯಲ್ಲಿ ಬೀರಬಲನು ಅತ್ಯುತ್ಕೃಷ್ಟ ವಾದ ವಸ್ತ್ರಾಲಂಕಾರಗಳಿಂದ ಮಂಡಿತನಾಗಿ ಆಮಹಲಿನಲ್ಲಿ ಹೋ ಗಿ ಕುಳಿತುಕೊಂಡನು ಮರುದಿವಸ ಓಲಗವು ನೆರೆಯುವ ನಿಯತ ಸಮಯ S ಕ್ಕೆ ಬೀರಬಲನು, ನೂತನ ಗೃಹದಿಂದ ಹೊರಬಿದ್ದು ಪಟ್ಟಣವನ್ನು ಪ್ರವೇ ಶಿಸಿದನು ಅವನ ಪರಿಚಯವು ಹತ್ತದೇ ಹೋಯಿತು ನೆರೆದ ಸಭೆಯ ನಡುವೆ ಬಾದಶಹನ ಸಮ್ಮುಖ ಲ್ಲಿ ಹೋಗಿ ನಿಂತುಕೊಂಡು ಬಿಟ್ಟನು ನಿಯೋಗಿಗ ಳೆಲ್ಲರೂ ತಮ್ಮ ತಮ್ಮ ಕೆಲಸಳನ್ನು ಬಿಟ್ಟು ಇವನ ಕಡೆಗೆ ನೋಡುತ್ತ ಕುಳಿ ತುಕೊಂಡು ಬಿಟ್ಟರು ಯಾರಿಂದಲೂ ಅವನಿಗೆ ಪ್ರಶ್ನೆ ಮಾಡುವ ಸಾಹಸ ವಾಗಲಿಲ್ಲ ಕಡೆಗೆ ಬಾದಶಹ ಸಾಹಸ ಮಾಡಿ " ತಾವು ಯಾರು ! ಇಲ್ಲಿಗೆ ಯಾಕೆ ಆಗಮಿಸಿದಿರಿ ? ಬಂದ ಉದ್ದೇಶವೇನು?” ಎಂದು ಪ್ರಶ್ನೆ ಮಾಡಿದನು ಬಾದಶಹನು ಈ ಪ್ರಕಾರ ಪ್ರಶ್ನೆಗಳನ್ನು ಮಾಡಿದ್ದನ್ನು ಕೇಳಿ, ಬೀರಬಲ ನು- ಪೃಥ್ವಿನಾಥ ! ನಾನು ತಮ್ಮ ಆಶ್ರಯದಲ್ಲಿದ್ದ ಬೀರಬಲನೆಂಬವನು, ಎಂದು ಉತ್ತರಕೊಟ್ಟನು ಅದನ್ನು ಕೇಳಿ ಬಾದಶಹನು ಅತ್ಯಾಶ್ಚರ್ಯವು ಳ್ಳವನಾಗಿ, ನೀನು ನನ್ನ ಮಂತ್ರಿಯಾಗಿದ್ದ ಬೀರಬಲನೇ ! ನೀನು ಮರಣ ಹೊಂದಿದ್ದಿಲ್ಲವೇ : ಹೀಗಿದ್ದು ಪುನರಸಿ ಜೀವಂತನಾಗಿ ಬಂದದ್ದು ಹ್ಯಾಗೆ ? ಎಂದು ಕೇಳಿದನು ಅದಕ್ಕೆ ಬೀರಬಲನು, ಭೂಮೀಶ ! ನಾನು ಮರಣಹೊಂ ದಿದ್ದು ನಿಜವು ಸ್ವರ್ಗಲೋಕಕ್ಕೆ ಹೋಗಲು ದೇವೇಂದ್ರನು ನನ್ನನ್ನು ತನ್ನ ಅಮಾತ್ಯ ಪದವಿಯಲ್ಲಿರಿಸಿಕೊಂಡನು ನನಗೆ ಅದಕ್ಕೂ ಹೆಚ್ಚಿಗೇನು ಬೇಕಾ ಗಿದೆ ? ನನಗೆ ಅಲ್ಲಿ ಊಟ ಉಡಿಗೆಗಳಿಗೆ ಕೊರತೆಯಿಲ್ಲ, ನೂರಾರುಜನ ಸು ರಸುಂದರಿಯರು ನನ್ನ ಸೇವೆಯಲ್ಲಿ ತತ್ಪರರಾಗಿರುವರು ಅಮೃತ ಪ್ರಾಶನ ಮಾಡಲಿಕ್ಕೆ ಸಿಗುತ್ತದೆ ನನಗೆ ಆ ಲೋಕದಲ್ಲಿ ಉಂಟಾಗಿದ್ದ ಸುಖಸಂಪತ್ತಿ ಗಳನ್ನು ವರ್ಣಸುವದಸಾಧ್ಯವು ಎಂದನು ಬಾದಶಹನು ಹೀಗಿದ್ದರೆ ಅಂಥಾ ಸುಖವನ್ನು ಬಿಟ್ಟು ಇಲ್ಲಿಗೆ ಯಾಕೆಬಂದಿ ? ಎಂದು ಕೇಳಿದನು ಬೀರಬಲ ತಾವು ನನ್ನ ಪುರಾತನದ ಸ್ವಾಮಿಗಳು, ಆದ್ದರಿಂದ ನಿಮ್ಮ ಅಪ್ಪಣೆಯನ್ನು ಪಡೆದುಕೊಂಡು ಹೋಗಬೇಕೆಂದು ಬಂದಿದ್ದೇನೆ, ಮತ್ತು ತಮ್ಮ ಸಲುವಾಗಿ ಒಬ್ಬ ಆಪ್ಸರೆಯನ್ನು ಕರೆತಂದಿದ್ದೇನೆ. ಅವಳು ತನ್ನ ಅಂದವಾದ ಗೃಹದೊ ಡನೆ ಇಲ್ಲಿಗೆ ಸಮೀಪವಾಗಿರುವ ಗುಡ್ಡದ ಮೇಲೆ ವಾಸಮಾಡಿರುವಳು ಈಗ ತಾವು ನನ್ನೊಡನೆ ದಯಮಾಡಿಸಿದರೆ ತೋರಿಸುವೆನು ಎಂದನು.
ಬಾದಶಹನು ಇವನವಚನಗಳಿಗೆ ಮಾನ್ಯ ಮಾಡಿದನು. ಮತ್ತು ಆಲೋ ಸಿದ್ದೆನಂದರೆ ಅವನು ಮೃತಪಟ್ಟು ಸ್ವಲ್ಪ ಹೆಚ್ಚು ಕಡಿಮೆ ಒಂದು ವರುಷವಾ ಗುತ್ತ ಬಂತು ನನ್ನ ಅಪ್ಪಣೆಯನ್ನು ಪಡೆದುಕೊಳ್ಳುವದಕ್ಕೆ ಬಂದಿರಬಹುದು ಅದರಸಲುವಾಗಿ ಅಪ್ಸರೆಯ ರೂಪದ ಕಾಣಿಕೆಯನ್ನು ಸಮರ್ಪಿಸಲು ತಂದಿ ರಬಹುದು ಎಂದು ನಿಶ್ಚಯಿಸಿಕೊಂಡು ಅವನ ವಚನದ ಸತ್ಯಾಸತ್ಯತೆಯ ನಿ ರ್ಣಯ ಮಾಡುವದರಸಲುವಾಗಿ ನೂತನಮಂತ್ರಿಯನ್ನೂ ಅನ್ಯ ನಿಯೋಗಿ ಗಳನ್ನೂ ಕೊಟ್ಟು ಕಳುಹಿಸಿದನು, ಬೀರಬಲನು ತುರಗಾರೂಢನಾಗಿ ಆ ಜ ನರ ಹಿಂದೆ ಹಿಂದೆ ಹೊರಟನು ಗುಡ್ಡವು ಸಮೀಪಿಸಿದಕೂಡಲೆ ಅದರ ಅಡಿಯ ಲ್ಲಿ ನಿಂತುಕೊಂಡು ಮಹಲಿನಕಡೆಗೆ ತೋರಿಸಿ, “ ನೋಡಿರಿ; ಆ ಗೃಹದ ಏಳ ನೇ ಅಂತಸ್ತಿನಲ್ಲಿ ಅಪ್ಸರೆಯು ಕುಳಿತುಕೊಂಡಿದ್ದಾಳೆ ನಾವು ಇಷ್ಟು ಜನಗ ಳು ಏಕತ್ರರಾಗಿ ಬಂದದ್ದರಿಂದ ನಮ್ಮ ಕಡೆಗೆ ನೋಡಹತ್ತಿದ್ದಾಳೆ, ಅವಳ ಮುಖವು ಚಂದ್ರ ಬಿಂಬವನ್ನು ಹೀಯಾಳಿಸುತ್ತಿರುವದು ನೋಡಿದಿರಾ ಅವ ಳು ನಿಮ್ಮ ನೇತ್ರಗಳಿಗೆ ಗೋಚರಿಸಿದಳಲ್ಲವೇ ! ಒಂದುವೇಳೆ ಗೋಚರಿಸದಿ ದ್ದರೆ ಚನ್ನಾಗಿ ಲಕ್ಷ್ಯವಿಟ್ಟು ನೋಡಿರಿ, ಯಾಕಂದರೆ ಬಾದಶಹನಿಗೆ ನಿಜಸಂ ಗತಿಯನ್ನು ನೀವು ಹೇಳಬೇಕಾಗುತ್ತದೆ ” ಎಂದನು. ಆ ಜನಸಮೂಹದಲ್ಲಿ ಪ್ರತಿಷ್ಠಿತರಾದ ಅನೇಕಜನ ಗೃಹಸ್ಥರಿದ್ದರು ಅವರು ಮನಸ್ಸಿನಲ್ಲಿ ಬೀರ ಬಲನು ಭೂತವಾಗಿ ಬಂದಿರಬಹುದೇನು ! ಇವನ ವರ್ಣನಾನುಸಾರವಾಗಿ ಸುಂದರವೂ ಮನೋಹರವೂ ಆಗಿದ್ದ ಗೃಹವೊಂದು ದೃಗ್ಗೋಚರಿಸಹತ್ತಿದೆ ಯೇ ಹೊರತು ಅಪ್ಸರೆಯೆಂಬುವಳು ತೋರಲೊಲ್ಲಳು ಎಂದು ಬೀರಬಲನಂ ನು ಕುರಿತು ತಾವು ಹೇಳಿದಸಂಗತಿಯಲ್ಲಿ ಗೃಹದೆ, ಕಾಣಬರುತ್ತದೆ ಹೊರತು ಅಪ್ಸರೆಯು ಕಾಣಿಸುವದಿಲ್ಲವಲ್ಲಾ ಎಂದು ಕೇಳಿದರು. ಆಗ ಬೀರ ಬಲನು " ಅಹುದಹುದು; ನಾನು ಹೇಳುವಾಗ ಕೆಲವು ಸಂಗತಿಗಳನ್ನು ಮರೆತು ಬಿಟ್ಟೆನು. ಏನಂದರೆ ಅವಳು ಸ್ವರ್ಗಲೋಕದವಳಾದ್ದರಿಂದ ಈ ಭೂಲೋಕ ದ ಬಾವಿಗಳಿಗೂ, ವರ್ಣಸಂಕಲಿತವಾಗಿ ಹುಟ್ಟಿದಮನುಷ್ಯರಿಗೂ ದೃಗೊ ಚರಿಸಲಾರಳು; ಆದ್ದರಿಂದ ಸತ್ಯಶುದ್ಧಿಯುಳ್ಳವರು ಮುಂದೆಬಂದು ಚನ್ನಾಗಿ ಅವಲೋಕಿಸಿರಿ ಎಂದು ಹೇಳಿದನು. ಅವನ ಕಥನಾನುಸಾರವಾಗಿ ಅವರು ಒಳ್ಳೆ ಸೂಕ್ಷ್ಮದೃಷ್ಟಿಯಿಂದ ಅವಲೋಕಿಸಹತ್ತಿದರು ಯಾರಿಗೂ ಕಂಡು ಬರಲಿಲ್ಲ; ಆದರೆ ತಮ್ಮ ಗೌರವಕ್ಕೆ ಕುಂದುಬರುವದೆಂಬ ಆಶಂಕೆಯಿಂದ ವಾ ಹವ್ವಾ ; ವಾಹಾವ್ವಾ ! ಎಂಥ ಸುಂದರಮುಖವಿರುವದು ಇಂಥ ಸುಂದರಮು ಖವು ಈ ಭೂಲೋಕದಲ್ಲಿ ಗೋಚರಿಸುವದು ಅಸಂಭವವು ಎಂದು ಆಶ್ಚರ್ಯ ಪಡಹತ್ತಿದರು. ಬೀರಬಲನು ಆ ಜನರ ಮೂರ್ಖತೆಯನ್ನು ಕಂಡು ಮನಸ್ಸಿ ನಲ್ಲಿಯೇ ಹಾಸ್ಯ ಮಾಡುತ್ತ ಆ ಜನರನ್ನು ಕುರಿತು, ತಾವು ಅವಲೋಕಿಸಿದ ಸಂಗತಿಯನ್ನು ಬಾದಶಹನ ಸಮ್ಮುಖದಲ್ಲಿ ಹೇಳಲಿಕ್ಕೆ ಯಾವಪ್ರಕಾರದ ಆತಂಕವೂ ಇರುವದಿಲ್ಲವಲ್ಲಾ ಎಂದು ಕೇಳಿದನು. ಅದಕ್ಕೆ ಅವರು ಏನೂ ಆತಂಕವಿಲ್ಲ; ನಾವು ಪ್ರತ್ಯಕ್ಷ ಕಂಡನ್ನು ಕಥನಮಾಡಲಿಕ್ಕೆ ಭಯವೇನು ಎಂದು ಉತ್ತರಕೊಟ್ಟರು. ಬೀರಬಲನು ಅವರೆಲ್ಲರನ್ನೂ ಕರಕೊಂಡು ಮರ ಳಿ ರಾಜಸಭೆಗೆ ಬಂದನು ಇಷ್ಟು ಸಮಯದ ತನಕ ಒಂಟಿಗನಾಗಿ ಕುಳಿತಿದ್ದ ಬಾದಶಹನು ಆ ಜನರೆಲ್ಲರೂ ಮರಳಿಬಂದದ್ದನ್ನು ಕಂಡು ನೀವೆಲ್ಲರೂ ಅಪ್ಸ ರೆಯನ್ನೂ ಆ ದಿವ್ಯಗೃಹವನ್ನೂ ಅವಲೋಕಿಸಿ ಬಂದಿರಷ್ಟೇ ಎಂದು ಕೇಳಿ ದನು ಆಗ ನೂತನಮಂತ್ರಿಯು ಖುದಾವಂದ ! ಬೀರಬಲನು ಹೇಳಿದ್ದರಕಿಂ ತಲೂ ಕಿಂಚಿತ್ ಅಧಿಕವೇ ಹೊರತು ನ್ಯೂನತೆಯಿಲ್ಲ ಅಹಹಾ ! ಅವಳಂಥ ಸುಂದರವದನವು ಈಭೂಲೋಕದಲ್ಲಿ ಕಾಣುವದುದುಸ್ತರವು ಎಂದು ಉತ್ತ ರಕೊಟ್ಟನು. ಮಂತ್ರಿಯು ಮಾಡಿದ ಪ್ರಶಂಸೆಯನ್ನು ಕೇಳಿದಮೇಲಂತೂ ಬಾದಶಹನ ಆನಂದಕ್ಕೆ ಪಾರಾವಾರವೇ ಇಲ್ಲದೆಹೋಗಿ ಬೀರಬಲ್ಲ ! ಅವಳಂ ನು ಇಲ್ಲಿಗೆ ಕರೆದುಕೊಂಡು ಬಾ ' ಎಂದು ಹೇಳಿದನು. ಅದಕ್ಕೆ ಬೀರಬಲನು ಅವಳು ಸ್ವರ್ಗಲೋಕದ ಸುರ ಸುಂದರಿಯು ನನ್ನ೦ಥ ಪಾಮರನ ಆಜ್ಞೆಗೆ ಅವಳು ಎಂದೂ ಬರಲಾರಳು ಆದ್ದರಿಂದ ಪ್ರಭುಗಳು ತಾವೇ ಬಂದು ಕರೆದರೆ ಒಂದುವೇಳೆ ಬಂದರೂ ಬರಬಹುದು; ಎಂದನು. ಬಾದಶ ಹನು ಮಾಂಧನಾದ್ದರಿಂದ ಯಾವದನ್ನೂ ವಿಚಾರಿಸಲಿಲ್ಲ, ಅಮೌ ಲ್ಯಗಳಾದವಸ್ತ್ರಾ ಭರಣಗಳಿಂದ ಭೂಷಿತನಾದನು, ಮತ್ತು ತನ್ನ ವೈಭವವನ್ನು ತೋರಿಸಬೇ ಕೆಂದು ತನ್ನ ಅನುಯಾಯಿಗಳಿಗೂ ಸಿದ್ಧರಾಗಿ ಬರಬೇಕೆಂದು ಅಪ್ಪಣೆಮಾ ಡಿದನು, ಅರ್ಧತಾಸಿನಲ್ಲಿ ಯಾವತ್ತರೂ ಸಿದ್ಧರಾಗಿಬಂದರು ಎಲ್ಲರೂ ಆನಂ ದದಿಂದ ಅಪ್ಸರೆಯನ್ನು ಕರೆತರುವದಕ್ಕೆ ಹೊರಟರು. ಆ ಸಮಯದಲ್ಲಿ ದಿನ ಮಣಿಯು ತನ್ನ ಪ್ರಖರ ಕಿರಣಗಳಿಂದ ಯಾವತ್ತೂ ಧರಣಿಯನ್ನು ತಪ್ಪಿಸಹ ತಿದ್ದನು ಅವನ ಕಿರಣಗಳು ಆ ಕನ್ನಡಿಯಮೇಲೆ ಬಿದ್ದದ್ದರಿಂದ ಅದನ್ನು ಕ ಣ್ಣೆತ್ತಿ ನೋಡಲಿಕ್ಕೆ ಸಹ ಸಾಧ್ಯವಾಗಲಿಲ್ಲ, ಬಾದಶಹನು ಅತ್ಯಾಶ್ಚರ್ಯ ವುಳ್ಳವನಾದನು ಈ ಚಮತ್ಕಾರವನ್ನು ನೋಡಲಿಕ್ಕೆ ನಗರವಾಸಿಗಳೆಲ್ಲರೂ ಏಕತ್ರರಾಗಿ ಕೂಡಿ ಅಲ್ಲಿಗೆ ಬಂದಿದ್ದರು ಯಾವತ್ತೂ ಜನಸಮುದಾಯದೊ ಡನೆ ಗಿರ್ಯಾರೋಹಣಮಾಡಿ ಆ ಸ್ವರ್ಗಭುವನದ ನಿಕಟವನ್ನು ಹೊಂದಲು ಬೀರಬಲನು ಪೃಥ್ವಿನಾಥ ! ಮೇಲೆನೋಡಿರಿ ಈ ಭುವನದ ಏಳನೇ ಭಾಗದ ಮೇಲೆ 7 ವಾಕ್ಷದಲ್ಲಿ ಆಸುರ ರಮಣಿಯು ಮಂಡಿತಳಾಗಿದ್ದಾಳೆ ಅವಳ ಹಿಂದೆ ತಾಂಬೂಲವನ್ನು ಸಿದ್ಧಪಡಿಸಿಕೊಂಡು ಒಡತಿಯ ಮುಖವನ್ನೀಕ್ಷಿಸುತ್ತಾ ನಿಂತುಕೊಂಡವಳೇ ದಾಸಿಯು, ಅಹಹಾ ! ಆ ದಾನಿಯ ಸೌಂದರವನ್ನೆ ಬಣ್ಣಿಸಲಸಾಧ್ಯವು. ತಮ್ಮ ಅಂತಃಪುರದಲ್ಲಿ ಆ ದಾಸಿಯನ್ನು ಸುಂದರರಾಗಿ ದ್ದ ಒಬ್ಬ ಬೇಗಮ್ಮಳಾದರೂ ಇಲ್ಲ ಅಂದಮೇಲೆ ಆ ಅಪ್ಸರೆಯ ರೂಪಸಾದೃ ವುಳ್ಳವರು ದೊರೆಯುವದಂತೂ ದುರ್ಲಭವೇ ಸರಿ, ಚನ್ನಾಗಿ ಪರಿಕ್ಷಿಸಬೇಕು ಎಂದನು. ಆಗ ಬಾದಶಹನು ಬೀರಬಲ್ಲ ? ಅವಳು ಎಲ್ಲಿದ್ದಾಳೆ ನನಗೆ ಕಾಣಿ ಸುವದೇ ಇಲ್ಲವಲ್ಲಾ ಎಂದನು. ಈ ಮಾತಿಗೆ ಬೀರಬಲನು ಖಾವಂದಾ ? ತ ಮಗೆ ಕಾಣಿಸಲೊಲ್ಲದೇ ? ಬೇಕಾದರೆ ಈ ನೂತನ ಮಂತ್ರಿಯನ್ನೂ ಅನ್ಯ ನಿಯೋಗಿಗಳನ್ನೂ ಈ ವಿಷಯದಲ್ಲಿ ವಿಚಾರಮಾಡಬೇಕು ಅವರು ಪ್ರತ್ಯಕ್ಷ ವಾಗಿ ಕಂಡಿದ್ದಾರೆ ಎಂದು ಹೇಳಿದನು. ಆ ಜನರಂತೂ ಮೊದಲೇ ಮೂ ರ್ಖರಾಗಿ ಹೋಗಿದ್ದರು ಆ ಕೂಡಲೇ ಅವರು ಮುಂದೆಬಂದು ಹುಜೂರ ? ಅವಳು ಮುಂದೆಕಾಣಿಸುವ ಗವಾಕ್ಷದಲ್ಲಿಯೇ ಕುಳಿತುಕೊಂಡಿದ್ದಾಳೆ ತಮ್ಮ ನಯನಗಳಿಗೆ ಇನ್ನೂ ಗೋಚರಿಸಲಿಲ್ಲವೇ ಎಂದರು. ಬಾದ ಶಹನು ಪುನಹ ಮೇಲೆಕೆಳಗೆ ನೋಡಿದನು ಕಾಣಿಸಲಿಲ್ಲ; ಬಾದಶಹನು ಕಿಂಚಿತ್ ವಿಚಾರ ಮಗ್ನನಾದನು. ಅಷ್ಟರಲ್ಲಿ ಬೀರಬಲನು ಪೃಥ್ವಿನಾಥ ? ನಾನು ಒಂದು ಸಂ ಗತಿಯನ್ನು ಹೇಳುವದಕ್ಕೆ ಮರೆತಿದ್ದೆನು. ಅದೇನಂದರೆ, ಸ್ವರ್ಗಲೋಕದ ವಸ್ತ್ರಾಭರಣಗಳು ಮೃತ್ಯುಲೋಕದಜನರಿಗೆ ಪೂರ್ವಜನ್ಮದ ಪುಣ್ಯದಿಂದಲೇ ದೃಗ್ಗೋಚರಿಸುವವು. ಯಾಕಂದರೆ ಈ ಮರ್ತ್ಯಲೋಕದಲ್ಲಿ ವರ್ಣಸಂಕಲಿ ತರಾಗಿ ಜನ್ಮತಾಳಿದವರೇ ಬಹುಜನರು, ಇಂಥಜನರಿಗೆ ಸೃರ್ಗಿಯ ಪದಾ ರ್ಥಗಳು ದೃಗ್ಗೋಚರಿಸಲಾರವು, ತಾವು ಚೆನ್ನಾಗಿಲಕ್ಷ್ಯನಿಟ್ಟು ಪರಿಶೀಲಿಸಿ ನೋಡಬೇಕು ಎಂದು ಪ್ರಾರ್ಥನೆಮಾಡಿದನು. ಆಗ ಬಾದ ಶಹನು ಮನಸ್ಸಿ ನಲ್ಲಿ ಎಲ್ಲ ಜನರಿಗೆ ಸುರಸುಂದರಿಯೂ, ಅವರ ಪರಿಚಾರಿಕೆಯೂ ಕಾಣಿಸು ತಿರಲು ನನಗೆ ಯಾಕೆ ಕಾಣಿಸಲೊಲ್ಲಳು; ನಾನೂ ವರ್ಣಸಾಂಕರ್ಯದಿಂದ ಜನಿಸಿರಬಹುದೇ ನನ್ನ ಜನ್ಮಕ್ಕೆ ಧಿಕ್ಕಾರವಿರಲಿ; ಇಷ್ಟು ಕಾಲ ಈ ಸಂಗತಿ ಯು ಗುಪ್ತವಾಗಿತ್ತು ಈ ಅಪ್ಸರೆಯನಿಮಿತ್ಯದಿಂದ ಅದು ಬಯಲಿಗೆ ಬರುವ ಹಾಗೆ ಕಾಣುತ್ತದೆ. ಈಗ ನಾನು ಈ ಸಂಗತಿಯನ್ನು ಪ್ರಕಟೀಕರಿಸಿದರೆ ನನಗೆ ಲಘುತ್ವವುಂಟಾಗುವದು ಆದ್ದರಿಂದ ನಾನೂ ಈ ಎಲ್ಲಜನರಂತೆ ಒಪ್ಪಿ ಕೊಳ್ಳುವದೇ ಮೇಲು ಎಂದು ಯೋಚಿಸಹತ್ತಿದನು. ಅದನ್ನು ಕಂಡು ಬೀರ ಬಲನು ನೋಡಬೇಕು ಆ ಗವಾಕ್ಷದಲ್ಲಿಯೇ ಮಂಡಿಸಿದ್ದಾಳೆ ಪರಿಶೀಲಿಸಬೇ ಕು ಎಂದು ಪುನಃ ನುಡಿದನು. ಆಗ ಬಾದಶಹನು ನಿರ್ವಾಹವಿಲ್ಲದೆ ಅಹುದಹು ದು; ಎಂದನು. ಆಗ ಬೀರಬಲನು ಬಾದಶಹನನ್ನೂ ಅವನ ಸಂಗಡಿಗರನ್ನೂ ಆ ಮಣಿಮಯ ಭುವನದೊಳಗೆ ನಾಲ್ಕನೇ ಅಂತಸ್ತಿನಲ್ಲಿ ಕರೆದುಕೊಂಡು ಹೋಗಿ ಯೋಗ್ಯತಾನುಸಾರವಾಗಿ ಕುಳ್ಳಿರಿಸಿ, ತ್ರಯೋದಶಗುಣ ತಾಂಬೂಲ ವನ್ನಿತ್ತು ಸತ್ಕರಿಸಿದನು. ಎಲ್ಲ ಜನರಿಗೆ ಪೂಮಾಲೆಯನ್ನು ಹಾಕಿದನು ಬಾದಶಹನು ಅಪ್ಸರೆಯನ್ನು ಕಂಡು ಮಾತನಾಡಿ ಬರಬೇಕೆಂದು ಆತುರಪಡ ಹತ್ತಿದನು, ದೂರದರ್ಶಿಯಾಗಿದ್ದ ಬೀರಬಲನು ಅವನ ಮನದಾತುರವನ್ನು ಕಂಡು:- " ಪೃಥ್ವಿನಾಥ ! ತಾವೂ ತಮ್ಮ ಅನುಯಾಯಿಗಳು ಭೂಲೋ ಕಧ ಅಸ್ಥಿರವಾದ ವಸ್ತ್ರಭೂಷಣಗಳಿಂದ ಮಂದಿತರಾಗಿರುವಿರಿ, ಆದ್ದರಿಂದ ಅವುಗಳನ್ನು ತೆಗೆದಿಟ್ಟು ಸ್ವರ್ಗಲೋಕದ ವಸ್ತ್ರಾಭರಣಗಳನ್ನು ಧರಿಸಬೇಕು ನಾನು ಅವುಗಳನ್ನು ನನ್ನ ಸಂಗಡ ತೆಗೆದುಕೊಂಡುಬಂದಿದ್ದೇನೆ ಸ್ವರ್ಗಿಯ ವಸ್ತ್ರಾಭರಣಗಳು ನಾಶಹೊಂದತಕ್ಕವಲ್ಲ; ” ಎಂದು ಹೇಳಿ ಬಾದಶಹನ ವಸ್ತ್ರಆಭರಣಗಳನ್ನು ತೆಗೆಯಿಸಿ ಇಟ್ಟು ಹೊಸಬಟ್ಟೆಗಳನ್ನು ಕೊಟ್ಟನು ಅದ ರಿಂದ ಬಾದಶಹನ ಲಜ್ಜಾ ಭಂಗವಾಗುವಂತೆ ಇದ್ದಿಲ್ಲ, ಆಮೇಲೆ ನೂತನಮಂ ತಿಯನ್ನುದ್ದೇಶಿಸಿ- ಮಾನ್ಯವರ ? ತಾವೂ ತಮ್ಮ ಬಟ್ಟೆಗಳನ್ನು ತೆಗೆದಿಟ್ಟು ಸ್ವರ್ಗಿಯ ಬಟ್ಟೆಗಳನ್ನು ಧಾರಣಮಾಡಿಕೊಳ್ಳಬೇಕು ಎಂದು ವಿನಯದಿಂದ ಹೇಳಿದನು ಅದನ್ನು ಕೇಳಿ ಮಂತ್ರಿಯು ತನ್ನ ಮನಸ್ಸಿನಲ್ಲಿ ಈ ಸ್ವರ್ಗಿಯ ಬ ಟ್ಟೆಗಳನ್ನು ಧಾರಣಮಾಡಿಕೊಳ್ಳುವದೆಂದರೆ ನಗ್ನರಾಗಬೇಕೆಂದಹಾಗಾಯಿತು ಯಾಕಂದರೆ ಬಟ್ಟೆಗಳೇ ಕಂಡುಬರುವದಿಲ್ಲ ಬಟ್ಟೆಗಳು ಎಲ್ಲಿಅವೆ ಎಂದು ಪ್ರ ಶ್ನೆ ಮಾಡಿದರೆನನಗೆ ವರ್ಣಸಂಕಲ್ಪವುಬರುತ್ತದೆ ಈ ಪ್ರಕಾರಮಾನಗೇಡಿಯಾ ಗುವದಕ್ಕಿಂತಲೂ ನಗ್ನವಾಗುವದೆ ಮೇಲೆಂದು ಯೋಚಿಸಿ ತನ್ನ ಯಾವತ್ತು ಬಟ್ಟೆಗಳನ್ನು ತೆಗೆದು ಚೆಲ್ಲಿ ಸ್ಪರ್ಗಿಯ ಬಟ್ಟೆಗಳನ್ನು ಧರಿಸಿಕೊಳ್ಳುವವನಂತೆ ನಟಿಸಿ ದಿಗಂಬರನಾಗಿ ಕುಳಿತುಕೊಂಡನು ಅವನು ಒಂದು ಕೌಪೀನವನ್ನು ಮಾತ್ರ ಧಾರಣಮಾಡಿದ್ದನು, ಮಂತ್ರಿಯು ದಿಗಂಬರನಾದದ್ದನ್ನು ಕಂಡು, ಎಲ್ಲರೂ ಹಾಸ್ಯ ಮಾಡಹತ್ತಿದರು ಆದರೆ ತಾವು ಬಹಳನಕ್ಕರೆ ತಮ್ಮ ಪಾಲಿಗು ವರ್ಣಸಂಕರದೋಷವು ಬರುವದೆಂಬ ಭಯದಿಂದ "ತೇರೀಭೀಚುವ , ಔರ ಮೇರಿಭೀಚುವ” ಎಂಬ ಸಾಮತಿಯಂತೆ ಮನವನ್ನು ಧಾರಣಮಾಡಿದರು ನೂತನ ಮಂತ್ರಿಯು ತನ್ನ ಸ್ಥಾನದಲ್ಲಿ ಮಂಡಿತವಾದಮೇಲೆ ಉಳಿದ ಯಾ ವತ್ತರಿಗೂ ಸ್ವರ್ಗೀಯ ಬಟ್ಟೆಗಳನ್ನು ಕೊಟ್ಟು, ಕೌಪೀನಾ ವಶಿಷ್ಟರನ್ನಾ ಗಿ ಮಾಡಿ ತಾರ ತಮ್ಯಾನುಸಾರವಾಗಿ ಕುಳ್ಳಿರಿಸಿದನು ಬಾದಶಹನು ದಿಗಂ ಬರರಾಗಿದ್ದ ತನ್ನ ಅನುಯಾಯಿಗಳನ್ನು ಅವಲೋಕಿಸಿ, ಮನಸ್ಸಿನಲ್ಲಿ ಸ್ವರ್ಗದ ಚರಿತ್ರವು ಅತ್ಯದ್ಭುತವಾದದ್ದು ” ಎಂದು ನಿಶ್ಚಯಿಸಿಕೊಂಡು, ಬೀರ ಬಲನನ್ನು ಕುರಿತು-ಬೀರಬಲ್ಲ ! ಯಾವತ್ತರೂ ಸ್ವರ್ಗೀಯ ಬಟ್ಟೆಗಳನ್ನು ಧಾರಣಮಾಡಿಕೊಂಡರೇ? ” ಎಂದು ಕೇಳಿದನು ಅದಕ್ಕೆ ಬೀರಬಲನು - ಜೀ ಹಾ ! ಎಲ್ಲರೂ ಸಿದ್ಧರಾಗಿದ್ದಾರೆ” ಎಂದಕೂಡಲೆ, ಅಪ್ಸರೆಯ ಸಾನ್ನಿಧ್ಯದ ಲ್ಲಿ ಕರೆದುಕೊಂಡು ಹೋಗು ! ಎಂದು ಅಪ್ಪಣಿ ಮಾಡಿದನು ಆಗ ಬೀರಬಲ ನು "ಪೃಥ್ವಿನಾಥ! ಈ ಎಲ್ಲ ಜನರನ್ನು ಕರೆದುಕೊಂಡು ಹೋಗುವದಕ್ಕೆ ಅವಳಸಮ್ಮತಿಯನ್ನು ಪಡೆಯ ಬೇಕಾಗುತ್ತದೆ ತಾವು ಸ್ವಲ್ಪ ಹೊತ್ತು ವಿಕ್ರ ಮಿಸಿರಿ, ” ಎದು ಹೇಳಿ ಆ ಗೃಹದ ಮತ್ತೊಂದುಭಾಗದಲ್ಲಿ ಸ್ವಲ್ಪ ಹೊತ್ತು ವಿಕ್ರ ಮಿಸಿ, ಆಮೇಲೆ ಹೊರಗೆ ಬಂದು, “ ನರವರ ! ಈಗ ತಾವೆಲ್ಲರೂ ಹೋ ಗಿ, ರಾತ್ರಿಯಲ್ಲಿ ದರ್ಶನಕ್ಕೆ ಬರಬೇಕೆಂದು ಅಪ್ಪಣೆ ಮಾಡಿದ್ದಾಳೆ, ಈ ಭೂ ಪ್ರದೇಶವು ಅವಳಿಗೆ ರಮಣೀಯವಾಗಿ ಕಂಡು ಬಂದದ್ದರಿಂದ ಕಿಂಚಿತ್ಕಾಲ ಇಲ್ಲಿಯೇ ವಾಸಮಾಡಬೇಕೆಂಬ ಆಕಾಂಕ್ಷೆ ಯುಳ್ಳವಳಾಗಿದ್ದಾಳೆ, ಇದಲ್ಲದೆ ತಮ್ಮ ಆಶ್ರಯದಲ್ಲಿಯೇ ಇರಬೇಕೆಂಬ ಅಪೇಕ್ಷೆಯನ್ನೂ ತೋರಿಸಿದಳು ಇ ಷ್ಟು ಪರಿವಾರದವರೊಡನೆ ಅವಳ ದರುಶನ ತೆಗೆದುಕೊಳ್ಳುವದೂ ಅನುಚಿತ ವು ಅವಳ ಆಜ್ಞಾ ಭಂಗಮಾಡಿದರೆ ಅವಳಿಗೆ ಕೋಪವು ಬಂದರೂ ಬರಬಹು ದು ಆದ್ದರಿಂದ ಈಗ ಹೋಗುವದೇ ಯೋಗ್ಯವು! ” ಎಂದು ಹೇಳಿದನು ಕಲ್ಪಿ ತ ಅಪ್ಸರೆಯ ದರುಶನೋತ್ಸುಕನಾಗಿ ರಾತ್ರಿಯ ಆ ಮಂತ್ರಣವನ್ನು ಸ್ವೀ ಕರಿಸಿ, ಎಲ್ಲರೂ ಹೊರಡ ಲನುವಾದರು. ಆ ಪರಿವಾರದ ಮುಂದೆ ವಸ್ತ್ರವುಳ್ಳ ಬಾದಶಹನೂ ಬೀರಬಲನೂ ಸಾಗಲು, ಕೌಪೀನಧಾರಿಗಳಾಗಿದ್ದ ಉಳಿದವರೆ ಲ್ಲರೂ ಬೆನ್ನು ಹತ್ತಿದರು ಬೀರಬಲನು ಅವರೆಲ್ಲರನ್ನೂ ಪಟ್ಟಣದ ಯಾವತ್ತು ಭಾಗಗಳಲ್ಲಿ ತಿರುಗಿಸಿಕೊಂಡು ಸಭಾಸ್ಥಾನಕ್ಕೆ ಬಂದನು ಈ ಅತ್ಯದ್ಭುತ ಚಮತ್ಕಾರವನ್ನು ಕಂಡು ನಗರವಾಸಿಗಳೆಲ್ಲರೂ ನಗಹತ್ತಿದರು ಆಗ ಈವಸ್ತ್ರ ಹೀನರಾದ ಪರಿವಾರದವರು ನಗರವಾಸಿಗಳನ್ನು ಕುರಿತು. ನೀವು ನ ಮ್ಮನ್ನು ನೋಡಿ ಹಾಸ್ಯಮಾಡುವಿರಾ ನೀವು ಮೂರ್ಖರು ! ವರ್ಣಸಂಕಲಿತ ರಾಗಿರುವಿರಿ ! ಬೀರಬಲನು ನಮಗೆ ಸ್ವರ್ಗಿಯ ಬಟ್ಟೆ ಗಳನ್ನು ಧಾರಣಮಾ ಡಿಸಿದ್ದಾನೆ, ಈ ವಸ್ತ್ರಗಳು ನಿಮ್ಮಂಥ ವರ್ಣಸಂಕರರಿಗೆ ಕಾಣಿಸುವದಿಲ್ಲ, ಎಂದು ಹೇಳಹತ್ತಿದರು ಈ ಉತ್ಸವವನ್ನು ನೋಡಲಿಕ್ಕೆ ಬಂದವರಲ್ಲೊಬ್ಬ ನು; ನಾವು ಬೀರಬಲನು ಸ್ವರ್ಗಸ್ಥನಾಗಿರುವನೆಂದು ತಿಳಿದಿದ್ದೆವು ಆ ನಾ ರ್ತೆಯು ಅಸತ್ಯವು ಅವನು ಸತ್ಯವಾಗಿಯೂ ಜೀವದಿಂದಿರುವನು ಇದರಲ್ಲಿ ಏನೋ ಕವಡಗಂಟಕತನವದೆ, ಎಂದನು ಆಗ ಮತ್ತೊಬ್ಬನು ಹಾ, ಹಾ! ಸ್ಮರಣೆಗೆ ಬಂತು ಈಗದಶ ಮಾನಗಳ ಪೂರ್ವದಲ್ಲಿ ಬಾದಶಹನು ಒಂದು ಅತ್ಯ ದ್ಭುತ ಚಮತ್ಕಾರವನ್ನು ಮಾಡಿ ತೋರಿಸು ಎಂದು ಬೀರಬಲನಿಗೆ ಆಜ್ಞಾ ಪಿಸಿದ್ದನು. ಇದು ಅವನಕೃತಿಯೇ ಇರಬಹುದು ಎಂದನು ಈ ಎಲ್ಲಸಂಭಾ ಷಣೆಗಳು ಕೌಪೀನದಾರಿಗಳ ಕಿವಿಗಳಿಗೆ ಕೇಳಿಸಿದವು ಆದರೆ ಅವರಿಗೆ ಬೀ ರಬಲನು ಇಂಥ ವಿಶ್ವಾಸ ಘಾತಕ ನಲ್ಲವೆಂಬ ನಂಬುಗೆಯಿದ್ದದರಿಂದ ತಮ ಗೆ ಸ್ವರ್ಗಿಯ ಬಟ್ಟೆಗಳನ್ನೇ ಕೊಟ್ಟಿದ್ದಾನೆ, ಎಂದು ತಿಳಿದುಕೊಂಡು ಸು ಮ್ಮನಾದರು. ಸಭಾಸ್ಥಾನದಲ್ಲಿ ಎಲ್ಲರೂ ತಮ್ಮ ತಮ್ಮ ಆಸನಗಳನ್ನು ಸ್ವೀ ಕರಿಸಿ ದ ಮೇಲೆ ಬೀರಬಲನು ಮುಂದೆ ಬಂದು, ಅಪರಾಧವನ್ನು ಕ್ಷಮಿ ಸುವೆ ನೆಂದು ಭಾಷೆ ಕೊಟ್ಟರೆ, ಎಲ್ಲ ವೃತ್ತಾಂತವನ್ನು ಕಥನ ಮಾಡು ವೆನು ಎಂದನು ಬಾದಶಹನು “ ಬೀರಬಲ್ಲ; ಹೇಳು ಹೇಳು !! ಏನುಕ ಥನ ಮಾಡತಕ್ಕದ್ದದೆ! ಎಂದು ಕೇಳಿದನು. ಬೀರಬಲನು ಪೃಥ್ವಿನಾಥ! ಈಗ ದಶಮಾನಗಳ ಪೂರ್ವದಲ್ಲಿ ತಾವು ನನಗೆ ಆಜ್ಞಾಪಿಸಿದ್ದನ್ನು ಸ್ಮರಣೆ ಗೆತಂದುಕೊಳ್ಳಬೇಕು. ಆ ಆಜ್ಞಾನು ಸಾರವಾಗಿ ಈ ಚಮತ್ಕಾರವನ್ನು ತೋರಿಸಿದ್ದೇನೆ ತಾವು ಇಂಥ ನನ್ನ ನಭೆಯನ್ನು ಎಂದಾದರೂ ಅವಲೋಕನ ಮಾಡಿದ್ದೀರಾ ! ಇಂಥ ನಗ್ನ ಸಭೆಯು ಹಿಂದೆ ಎಂದೂ ಆಗಿರಲಿಕ್ಕಿಲ್ಲ ಮುಂದೆ ಆಗುವ ಹಾಗೆ ಇಲ್ಲ ಪೃಥ್ವಿನಾಥ ! ಮರಣಹೊಂದಿದವನು ಎಂದಾದರೂ ಮರಳಿ ಬರುವದುಂಟೇ ಸ್ವರ್ಗದಪ್ಸರೆಯು ಭೂಲೋಕಕ್ಕೆ ಬರುವ ನಿಮಿತ್ಯ ವೇನು : ಭೂವರ ! ತಮ್ಮ ಹೊರತು ಇಂಥ ನ ಸಭೆಯನ್ನು ಯಾರೂ ಅವಲೋಕ ಮಾಡಿರುವದಿಲ್ಲ ; ಎಂದು ಪ್ರಾರ್ಥಿಸಿದನು. ಬೀರಬಲನು ಹೇಳಿ ದ ವಾಕ್ಯಗಳನ್ನು ಶ್ರವಣವಾಡಿ ಬಾದಶಹನು ಸಭಾಸದರನ್ನ ಕುರಿತು, ಈಗ ದಶಮಾನಗಳ ಹಿಂದೆ, ನಾನು ಬೀರಬಲನಿಗೆ ಒಂದು ಅತ್ಯದ್ಭುತ ಚ ಮತ್ಕಾರವನ್ನು ತೋರಿಸೆಂದು ಆಜ್ಞಾಪಿಸಿದ್ದು ನಿಜವು ! ನನ್ನ ಅಪ್ಪಣೆಯ ಮೇರೆಗೆ ಇವನು ಕಾರ್ಯವನ್ನು ಮಾಡಿ ತೋರಿಸಿದನು. ಆದ್ದರಿಂದ ಯಾ ರೂ ಬೀರಬಲನ ಮೇಲೆ ಕೋಪಿಸ ಬಾರದು ; ಆದರೆ ಇಷ್ಟು ದೀರ್ಘಪ್ರ ಸಂಗವನ್ನು ತರಬಾರದಾಗಿತ್ತು ! ಉಪಾಯವಿಲ್ಲ ; ಆದ್ದರಿಂದ ಯಾರೂ ಅವನಮೇಲೆ ದೋಷವನ್ನಿ ಡಬಾರದು ಮತ್ತು ಪೂರ್ವದಂತೆ ಸಲಿಗೆಯಿಂದ ವ ರ್ತನೆ ಮಾಡಬೇಕು” ಎಂದು ಆಜ್ಞೆಮಾಡಿದನು. ಬಾದಶಹನ ಅಪ್ಪಣೆಯಿಂ ದ ಹಿಂದೂ ಸಭಾಸದರೆಲ್ಲರೂ ಪ್ರಸನ್ನರಾದರು, ಆದರೆ ಮುಸಲ್ಮಾನರ ಮ ನಸ್ಸಿನಲ್ಲಿ ಸಮಾಧಾನವಾಗಲಿಲ್ಲ; ಅವರು ಮನಸ್ಸಿನಲ್ಲಿಯ ಬೀರಬಲನ ಮೇಲೆ ಹಲ್ಲುಕಡಿಯಹತ್ತಿದರು, ಬೀರಬಲನು ಆ ಸಭಾಸದರ ವಸ್ತ್ರಗಳೆಲ್ಲವನ್ನೂ ಪೂರದಲ್ಲಿಯೇ ತರಿಸಿ ಇಟ್ಟಿದ್ದನು ಅವರವರಿಗೆ ಅವರವರ ವಸ್ತ್ರಗಳನ್ನು ಪರಿಧಾನಮಾಡಿಕೊಳ್ಳುವದಕ್ಕೆ ಇತ್ತನು ಅವರು ತಮ್ಮ ತಮ್ಮ ಬಟ್ಟೆಗಳನ್ನು

ಧಾರಣಮಾಡಿಕೊಂಡು ತಮ್ಮತಮ್ಮ ಗೃಹಗಳನ್ನು ಕುರಿತು ತೆರಳಿದರು.

-( ೧೬೬, ಅಕಬರ ಭಾರತ.)-

ಅಕಬರ ಬಾದಶಹನು ಗ್ರಂಥಗಳನ್ನು ರಚನೆಮಾಡುವದರಲ್ಲಿಯೂ ಮಾಡಿಸುವದರಲ್ಲಿಯೂ ವಿಶೇಷ ಅನುರಾಗವುಳ್ಳವನಾಗಿದ್ದನು. ಅವನು ಅನೇ ಕಪ್ರಕಾರದ ಪುರಾಣೇತಿಹಾಸಗಳನ್ನು ಓದಿದ್ದನು, ಮಹಾ ಭಾರತದಲ್ಲಿಯ ಕೌರವ ಪಾಂಡವರ ಯುದ್ಧದವರ್ಣನೆಯನ್ನು ಎಷ್ಟೋ ಸಾರೆ ಓದಿದ್ದನು, ಹೀಗಿರಲು ಒಂದುದಿವಸ ಪಾಂಡವರ ಕ್ರೌರ್ಯದ ಪ್ರಶಂಸೆಯ ಭಾಗವು ಬರಲು ಅವನ ಮನಸ್ಸಿನಲ್ಲಿ ತನ್ನ ಪರಾಕ್ರಮದ ವರ್ಣನೆಯುಳ್ಳ "ಅಕಬರಭಾರತ " ವೆಂಬ ಗ್ರಂಥವನ್ನು ರಚನೆಮಾಡಿಸಬೇಕೆಂಬ ಅಭಿಲಾಷೆಯು ಉತ್ಪನ್ನವಾಯಿತು ಅದನ್ನು ಬೀರಬಲನಮುಂದೆ ತಿಳಿಸಿದನು, ಮತ್ತು ಬೀರಬಲ್ಲ ಪುರಾತನಕಾಲದಲ್ಲಿ ಆಗಿಹೋದ ರಾಜರುಗಳ ಕೌರ್ಯೋದಾರ್ಯ ಗುಣಗಳಪ್ರಶಂಸಾ ಪರವಾದ ಎಷ್ಟೋ ಗ್ರಂಥಗಳಿರುವವು ರಾಮಚಂದ್ರನ ರಾಮಾಯಣವು ಕೃಷ್ಣನ ಮಹಿಮೆಯನ್ನು ವರ್ಣಿಸಿದ ಮಹಾಭಾಗವತ, ಪಾಂಡವರ ವರ್ಣನಾ ಪರವಾದ ಮಹಾಭಾರತವೂ ಇರುವಂತೆ ನನ್ನ ಕೀರ್ತಿಯ ವರ್ಣನೆಯುಳ್ಳ " ಅಕಬರಭಾರತ ” ವೆಂಬ ಗ್ರಂಥವನ್ನು ಮಾಡಿಸಬೇಕಾಗಿದೆ; ಈ ಭಾರತವರ್ಷದಲ್ಲಿ ಪಾಂಡವರು ರಾಜ್ಯಭಾರಮಾಡಿದಂತೆ ನಾನಾದರೂ ಅದೇ ಭಾರತವರ್ಷದ ಚಕ್ರವರ್ತಿಯಾಗಿದ್ದೇನೆ ನನ್ನ ಹೆಸರೂ ಈ ಭೂಮಂಡಲದಲ್ಲಿ ಪ್ರಖ್ಯಾತವಾಗಿದೆ” ಎಂದನು. ಆಗ ಬೀರಬಲನು ಮನಸ್ಸಿನಲ್ಲಿ ಇವನು ತನ್ನ ವರ್ಣನಾ ಪರವಾದ ಒಂದು ಗ್ರಂಥವನ್ನು ರಚನೆ ಮಾಡು ಎಂದು ಹೇಳಿದರೆ ಅದೊಂದು ವಿಧವಾಗಿ ಸಯುಕ್ತಿಕವಾದದ್ದೆ ಎಂದು ಎಣಿಸಬಹುದಾಗಿತ್ತು, ಹಾಗೆಹೇಳದೆ “ ಅಕಬರಭಾರತ ” ಎಂಬ ಹೆಸರಿನ ಗ್ರಂಥವನ್ನು ರಚನೆಮಾಡಿಸಬೇಕಾಗಿದೆ ಎಂದು ಹೇಳುತ್ತಾನೆ; ಈ ಅಪೇಕ್ಷೆಯನ್ನು ಅವನ ಮನಸಿನೊಳಗಿಂದ ದೂರಮಾಡಬೇಕು, ” ಎಂದು ನಿಶ್ಚಯಮಾಡಿಕೊಂಡು ಪೃಥ್ವಿನಾಥ ! ಅಕಬರ ಭಾರತವನ್ನು ರಚಿಸುವದರಲ್ಲಿ ಅಂಥ ಪ್ರಯಾಸವಿಲ್ಲ ಭಾರತದಲ್ಲಿ ಒಂದೂ ಕಾಲು ಲಕ್ಷ ಶ್ಲೋಕಗಳಿದ್ದಂತೆ ಅಕಬರಭಾರತದಲ್ಲಿಸಹ `ರಚಿಸಲಿಕ್ಕೆ ಅಂದೇಶವೇನೂ ಇಲ್ಲ, ಆದರೆ ಪ್ರತಿಯೊಂದು ಶ್ಲೋಕಕ್ಕೆ ಒಂದು ರೂಪಾಯದಂತೆ ಖರ್ಚುಬೇಕಾಗುತ್ತದೆ ಅದರಿಂದ ಅಷ್ಟು ರೂಪಾಯಿಗಳನ್ನು ನನ್ನ ವಶಕ್ಕೆ ಕೊಡಿಸಿದರೆ ನಾನು ಅದನ್ನು ರಚಿಸಲುದ್ಯುಕ್ತನಾಗುತ್ತೇನೆ ಅದು ಪೂರ್ತಿಯಾಗಬೇಕಾದರೆ ಷಣ್ಮಾಸಗಳು ಬೇಕಾಗಬಹುದು " ಎಂದು ಹೇಳಿದನು. ಈ ವಾಕ್ಯವನ್ನು ಕೇಳಿ ಬಾದಶಹನು ಬಹಳ ಪ್ರಸನ್ನನಾದನು ಆ ಕೂಡಲೆ ಕೋಶಾಧ್ಯಕ್ಷನನ್ನು ಕರೆಯಿಸಿ ಒಂದೂ ಕಾಲು ಲಕ್ಷ ರೂಪಾಯಿಗಳನ್ನು ಬೀರಬಲನ ಸ್ವಾಧೀನಕ್ಕೆ ಕೊಡಬೇಕೆಂದು ಅಪ್ಪಣೆ ಮಾಡಿದನು ಆ ದ್ರವ್ಯದಿಂದ ಜಲಾಭವವಿದ್ದ ಸ್ಥಳಗಳಲ್ಲಿ ನಾಟೀಕೂಪತಟಾ ಕಾದಿಗಳನ್ನು ನಿರ್ಮಿಸಿದನು, ಅನ್ನಸತ್ರವನ್ನಿಡಿಸಿದನು ಅಕಬರಭಾರತ ಗ್ರಂ ಥವು ಮೂಲಿಗೆ ಬಿತ್ತು ಅವಧಿಯು ಪೂರ್ಣವಾಗಲಿಕ್ಕೆ ಸ್ವಲ್ಪೇ ದಿವಸಗಳು ಇರಲು, ಬೀರಬಲನು ಬಾದಶಹನ ಬಳಿಗೆ ಬಂದು ಭಾರಥ ಗ್ರಂಥವು, ಸಮಾ ಪ್ರಿಯಾಗುತ್ತ ಬಂದದೆ ಎಂದು ಹೇಳಿ, ಕಿಂಚಿತ್ಕಾಲ ಮಾತನಾಡುತ್ತ ಕುಳಿ ತುಕೊಂಡು ಆಮೇಲೆ ಮನೆಗೆ ಹೊರಟುಬಂದನು. ಆಮೇಲೆ ಕೆಲವುಬರಿಯದೆ ಇದ್ದ ಕಾಗದಗಳನ್ನು ಗ್ರಂಥಗಳಂತೆ ಆಕಾರಮಾಡಿ ಮೇಲೊಂದು ಕೆಳಗೊಂ ದು ಸಣ್ಣಸಣ್ಣ ಹಲಿಗೆಗಳನ್ನಿಟ್ಟು, ಅದರಮೇಲೆ ರೇಶಿಮೆಯ ವಸ್ತ್ರವನ್ನು ಸುತ್ತಿ ರೇಶಿಮೆಯದಾರದಿಂದ ಬಿಗಿದು ಬಾದಶಹನ ಬಳಿಗೆ ತೆಗೆದುಕೊಂಡು ಬಂದನು. ಅವನ ಕಂಕುಳಲ್ಲಿದ್ದ ಪುಸ್ತಕವನ್ನು ಕಂಡು ಬಾದಶಹನು " ಬೀರ ಬಲ್ಲ ಗ್ರಂಥವು ಪರಿಸಮಾಪ್ತಿಯಾಯಿತೋ ” ಎಂದನು ಬೀರಬಲನು ಪೃಥ್ವಿ ನಾಥ ? ಸಮಾಪ್ತಿಯಾಗಿದೆ ಎಂದು ಉತ್ತರಕೊಟ್ಟು ಗಂಟನ್ನು ಬಿಚ್ಚುತ್ತ ಮತ್ತೆ ನರವರ ? ಗ್ರಂಥವೇನೋ ಸಮಾಪ್ತವಾಗುತ್ತ ಬಂದದೆ ಆದರೆ ಅದ ರಲ್ಲಿ ಒಂದುಮಾತಿನ ವಿಷಯವಾಗಿ ಸ್ವಲ್ಪ ಅಂದೇಶ ವುಂಟಾಗಿದೆ; ಆ ಅಂದೇ ಶವು ಬೇಗಮ್ಮ ಸಾಹೇಬರಿಂದ ದೂರವಾಗುವದು, ಅಪ್ಪಣೆಯಾದರೆ ಅಂತಃ ಪುರಕ್ಕೆ ಹೋಗಿ ವಿಚಾರಮಾಡಿಕೊಂಡು ಬರುತ್ತೇನೆ” ಎಂದನು. ಬೀರಬಲ ನು ದಾರವನ್ನು ಬಿಚ್ಚಹತ್ತಿರಲು, ಬಾದಕಹನ ಮನಸ್ಸಿನಲ್ಲಿ ಸಿದ್ಧವಾಗಿದೆ ಯೋ ಇಲ್ಲವೋ ನೋಡಬೇಕೆಂಬ ಅಂದೇಶವೇ ಉಂಟಾಗಲಿಲ್ಲ; ಕೂಡಲೇ ಅವನು ಬೀರಬಲನನ್ನು ಕುರಿತು " ಪ್ರಥಮದಲ್ಲಿ ಹೋಗಿ ನಿನ್ನ ಅಂದೇಶನಿ ವೃತ್ತಿಯನ್ನು ಮಾಡಿಕೊಂಡೇ ಬಂದು ಆಮೇಲೆ ನನಗೆ ಗ್ರಂಥವನ್ನು ತೋ ರಿಸು ” ಎಂದು ಅಪ್ಪಣೆಮಾಡಲು, ಪುನಃ ಆ ದಾರವನ್ನು ಸುತ್ತಿ ಇಟ್ಟು ಅಂ ತಃಪುರಕ್ಕೆ ಹೋಗಿ “ ಅಕಬರಭಾರತ ” ಗ್ರಂಥದ ಆದ್ಯೋವಾಂತ ವೃತ್ತಾಂತ ತವನ್ನೆಲ್ಲ ಕಥನಮಾಡಿ, “ ಈ ಗ್ರಂಥವು ಪೂರ್ಣವಾಗಲಿಕ್ಕೆ ಬಂದದೆ ಇನ್ನು ಕಿಂಚಿತ್ ಶೇಷವಿರುವದು ಅದು ನಿಮ್ಮ ಉತ್ತರದಿಂದ ಪೂರ್ಣವಾಗತಕ್ಕದ್ದ ದೆ, ಬಾದಶಹನ ಅಪ್ಪಣೆಯಪ್ರಕಾರವಾಗಿ ತಮ್ಮ ಸನ್ನಿಧಿಗೆ ಬಂದಿದ್ದೇನೆ ತಾ ವು ಕೃದ್ಧರಾಗುವದಿಲ್ಲವೆಂದು ಅಭಯವನ್ನಿತ್ತರೆ ಕಥನಮಾಡುವೆನು, ” ಎಂ ದನು. ಆ ಮಾತನ್ನು ಕೇಳಿ ಬೇಗಮ್ಮಳು. “ ನೀನು ಕೇಳತಕ್ಕದ್ದನ್ನು ಸಂ ತೋಷದಿಂದ ಕೇಳು ನಾನು ಕೋಪಗೊಳ್ಳುವದಿಲ್ಲ ” ಎಂದಳು. ಅದಕ್ಕೆ ಬೀ ರಬಲನು" ಪಾಂಡವರ ಭಾರತದಲ್ಲಿ ಪಾಂಚಾಲಿಗೆ ಐದುಜನ ಪತಿಗಳಿದ್ದಂತೆ ತಮ್ಮ ಐದುಜನ ಪತಿಗಳು ಯಾರು ! ಎಂಬ ಸಂಗತಿಯನ್ನು ಅರುಹಿದರೆ, ಗ್ರಂಥವು ಪೂರ್ಣವಾಗುತ್ತದೆ” ಎಂದನು. ಆ ಕೂಡಲೇ ಬೇಗಮ್ಮಳ ನೇತ್ರ ಗಳು ಆರಕ್ತವರ್ಣವನ್ನು ಧರಿಸಿದವು, ನಖಶಿಖಾಂತವಾಗಿ ಉರಿದದ್ದು ಇಂಥ ನಿಕೃಷ್ಟ ಗ್ರಂಥವನ್ನು ರಚಿಸೆಂದು ಹೇಳಲಿಕ್ಕೆ ಬಾದಶಹನಿಗೂ ಬುದ್ಧಿ ಇಲ್ಲ ರಚಿಸುವದಕ್ಕೆ ನಿನಗೂ ಬುದ್ಧಿಯಿಲ್ಲ, ಈ ಗ್ರಂಥವನ್ನು ಅಗ್ನಿ ಗಾಹುತಿಕೊ ಟ್ಟುಬಿಡು ಎಂದು ಗರ್ಜಿಸಿ, ಒಬ್ಬ ಪರಿಚಾರಿಕೆಯನ್ನು ಕರೆದು ಈ ಗ್ರಂಥವ ನ್ನು ಸುಟ್ಟು ಬೂದಿಮೂಡಿಬಿಡು ಎಂದು ಹೇಳಲು, ಅವಳು ಅಪ್ಪಣೆಯಂತೆ ದಹನ ಮಾಡಿ ಬಿಟ್ಟಳು. ಅದನ್ನು ಕಂಡು ಬೀರಬಲನು ಮನಸ್ಸಿನಲ್ಲಿ ಹರುಷಿತ ನಾಗಿ ಮೇಲೆಮೇಲೆ ದುಃಖಿತನೂ ನಿರಾಶೆಯುಳ್ಳವನೂ ಆದವನಂತೆ ನಟಿಸಿ, ಬಾದಶಹನ ಬಳಿಯಲ್ಲಿ ಬಂದನು. ಬೀರಬಲನ ನಿರುತ್ಸಾಹಯುಕ್ತವಾದ ಮು ಖವನ್ನು ಅವಲೋಕಿಸಿ, ಬೀರಬಲ್ಲ ವಿನಾಯಿತು ? ಎಂದು ಕೇಳಿದನು. ಆಗ ಬೀರಬಲನು. ಪೃಥ್ವಿನಾಥ ; ಬೇಗಮ್ಮ ಸಾಹೇಬಿಯವರು ಒಳ್ಳೇಪತಿವೃತೆ ಯರಿರುವದರಿಂದ ನಾನು ಕೇಳಿದ ಪ್ರಶ್ನೆಗೆ ಕೋಪವುಳ್ಳವರಾಗಿ ಆ ಗ್ರಂಥವ ನ್ನು ಅಗ್ನಿ ಪಾಲು ಮಾಡಿಬಿಟ್ಟರು. ಒಂದು ಕಾಲು ಲಕ್ಷರೂಪಾಯಿಗಳು ನೀರಿನಲ್ಲಿ ಹೋದಂತಾದವು ಏನುಮಾಡಲಿ, ನನ್ನ ಕಡೆಗೆ ಯಾವದೋಷವೂ ಇಲ್ಲ; ದ್ರೌಪದಿಗೆ ಐದುಜನ ಪತಿಗಳಿದಂತೆ, ತಮ್ಮ ಬೇಗಮ್ಮ ಸಾಹೇಬಿಯ ವರಿಗಾದರೂ ಐದುಜನ ಪತಿಗಳನ್ನು ತೋರಿಸಿಕೊಟ್ಟು ಪುನಃ ಒಂದೂಕಾ ಲು ಲಕ್ಷರೂಪಾಯಿಗಳನ್ನು ಕೊಟ್ಟರೆ ಪುನರಸಿ ರಚನೆಮಾಡಲುದ್ಯುಕ್ತನಾ ಗುತ್ತೇನೆ ಎಂದನು. ಆಗ ಬಾದಶಹನು ಸ್ವಲ್ಪ ಹೊತ್ತು ಯೋಚಿಸಿ, “ ಬೀರ ಬಲ್ಲ ಗ್ರಂಥಸಮಾಪ್ತಿಯ ಕಾಲಕ್ಕೆ ಈಪ್ರಕಾರ ವಿಘ್ನವು ಬಂದೊದಗಿದರಿಂದ ನನ್ನ ಉತ್ಸಾಹವಲ್ಲ ಕುಗ್ಗಿ ಹೋಯಿತು, ಇನ್ನು ಎರಡನೇ ಸಾರೆ ಬರೆಯುವ ಅವಶ್ಯಕತೆಯು ಇಲ್ಲ ” ಎಂದನು.

- (೧೬೬. ಬೀರಬಲನು ಸ್ವಧರ್ಮವನ್ನು ರಕ್ಷಿಸಿಕೊಂಡದ್ದು.)-


ಮಸಲ್ಮಾನ ಬಾದಶಹನ ಆಳಿಕೆಯಲ್ಲಿ, ಶ್ರೇಷ್ಟವಾದ ಅಮಾತ್ಯಪದ ವಿಯಲ್ಲಿ ಹಿಂದೂ ಮನುಷ್ಯನಿರುವದು, ತಮಗೆ ಅವಮಾನಕರ ವಾದದ್ದೆಂದು ಬಗೆದು, ಬೀರಬಲನ ಪ್ರತಿಯನ್ನು ಕಡಿಮೆಮಾಡಿ ಬಿಡಬೇಕೆಂದು ಮು ಸಲ್ಮಾನ ಮುತ್ಸದ್ದಿಗಳೆಲ್ಲರೂ, ಅನೇಕಸಾರೆ ಪ್ರಯತ್ನಗಳನ್ನು ಮಾಡಿದ್ದರು ಮತ್ತು ಮಾಡುತ್ತಿದ್ದರು ಈ ಸಂಗತಿಯು ಬಾದಶಹನಿಗೂ ವಿದಿತವಾಗಿತ್ತು ಅದರಿಂದ ಅವನು ಯಾವಾಗಲೂ, ಬೀರಬಲನು ಹಿಂದು ವಾದ್ದರಿಂದ. ಮು ಸಲ್ಮಾನರು ಅವನನ್ನು ಪರಿಪರಿಯಿಂದ ಪೀಡಿಸುವರು. ಅದರಿಂದ ಅವನಿಗೆ ಅತಿಶಯ ಕಷ್ಟವಾಗುವದು, ಅವನ ಕಷ್ಟವನ್ನು ನನಗೆ ನೋಡಲಿಕ್ಕೆ ಅ ಸದಳವಾಗಿ, ಅವನನ್ನು ಬೇರೆ ಕೆಲಸಕ್ಕೆ ನಿಯಮಿಸಬೇಕಂದರೆ, ಆಪದವ ನ್ನು ಸುಯಂತ್ರವಾಗಿ ಸಾಗಿಸಿಕೊಂಡು ಹೋಗುವಂಥ ಚತುರನು, ಮುಸ ಲ್ಮಾನರಲ್ಲಿ ದೊರೆಯುವದು ದುಸ್ತರವು, ಈ ಬಗ್ಗೆ ನಾನು ಎಷ್ಟು ಸಾರೆ ಪ್ರ ಯತ್ನ ಮಾಡಿಯೂ ನೋಡಿದ್ದೇನೆ ಅಮಾತ್ಯ ಪದವಿಯಲ್ಲಿ ಮುಸಲ್ಮಾನನ ನ್ನು ನಿಯಮಿಸಿಕೊಂಡರೆ, ಅವನಿಂದ ರಾಜ್ಯದಾಡಳಿತವು ಚನ್ನಾಗಿಸಾಗದೆ, ಪ್ರಜೆಗಳಿಗೆ ಅನೇಕ ದುಃಖಗಳು ಉಂಟಾಗುತ್ತವೆ, ಎಂಬದನ್ನೂ ಪರೀಕ್ಷಿ ಸಿನೋಡಿದ್ದೇನೆ ಇದರಿಂದ ಬೀರಬಲನನ್ನೇ ಮುಸಲ್ಮಾನ ಧರ್ಮಕ್ಕೆ ಸೇರಿ ಸಿಕ್ಕೊಂಡು ಬಿಟ್ಟರೆ, ನಾನು ಉಭಯಸಂಕಟಗಳಿಂದಲೂ ನಿವೃತ್ತನಾಗುವೆ ನು ಎಂದು ಯೋಚಿಸಿಕೊಂಡು, ಪ್ರತಿದಿನ ಓಲಗದಿಂದ ಎದ್ದು ಹೋಗು ವಾಗ, ಬೀರಬಲನಿಗೆ, ಭೋಜನಕ್ಕೆ ನಡೆ, ಎಂದು ಆಗ್ರಹ ಮಾಡಿ ಹೋ ಗುತ್ತಿತ್ತಿದ್ದನು. ಬೀರಬಲನು ತನ್ನ ಸಮಸೂಚಕತೆಯ ಬುದ್ಧಿಚಾತು ರ್ಯದಿಂದ ಯಾವದಾದರೊಂದು ಹಂಚಿಕೆಯಿಂದ ಆ ಪ್ರಸಂಗ ದೊಳಗಿಂದ ಪಾರಾಗಿ ಹೋಗುತ್ತಿದ್ದನು. ಹೀಗೆ ಎಷ್ಟೋ ದಿವಸಗಳು ಕಳೆದುಹೋದವು ಹೀಗಿರಲು ಒಂದಾನೊಂದುದಿವಸ ಬೀರಬಲನು ಆತ್ಯವಶ್ಯಕವಾಗಿದ್ದ ಕಾ ರ್ಯದಲ್ಲಿ ತೊಡಗಿರಲು, ಬಾದಶಹನು ಬೀರಬಲ್ಲ ! ನಾಳೆ ಪ್ರಾತಃಕಾಲದ ಲ್ಲಿ ಇಲ್ಲಿಯೇ ಭೋಜನಕ್ಕೆ ಬರಬೇಕು ” ಎಂದನು ಆಗ ಬೀರಬಲನು ಕಾ ರ್ಯಮಗ್ನನಾಗಿದ್ದದರಿಂದ, ಬಾದಶಹನ ಮಾತಿನ ಕಡೆಗೆ ಲಕ್ಷ್ಯವು ಹೋಗದೆ ಒಳ್ಳೇದು ” ” ಎಂದು ಉತ್ತರ ಕೊಟ್ಟುಬಿಟ್ಟನು, ಬೀರಬಲನು ಏಕವಚ ನಿಯಾಗಿರುವನೆಂಬ ನಂಬಿಗೆಯು, ಬಾದಶಹನಿಗೆ ಪೂರ್ಣವಾಗಿದ್ದದರಿಂದ ಆನಂದಿತನಾಗಿ ಯಾವತ್ತು ಪ್ರತಿಷ್ಠಿತ ಮುಸಲ್ಮಾನರಿಗೆ, ಈ ಸಮಾಚಾರ ವನ್ನು ತಿಳಿಸಿ, ನಾಳೆ ಪ್ರಾತಃಕಾಲದಲ್ಲಿ ಭೋಜನಕ್ಕೆ ಬರಬೇಕೆಂದು ಆಮಂ ತ್ರಣಕೊಟ್ಟು ಬಿಟ್ಟನು ಬೀರಬಲನಂಥ ಉಚುಕುಲದ ಹಿಂದುವು ಮುಸಲ್ಮಾ ನ ಧರ್ಮವನ್ನು ಸ್ವೀಕರಿಸುವನೆಂದು, ಎಲ್ಲರೂ ಅತ್ಯಾನಂದಿತರಾದರು ಇತ್ತ ಬೀರಬಲನು ತನ್ನ ಯಾವತ್ತು ಕಾರ್ಯಗಳಿಂದ ನಿವೃತ್ತನಾಗಿ ಕುಳಿತು ಕೊಂಡಮೇಲೆ, ಒಬ್ಬ ಹಿಂದೂಮನುಷ್ಯನು ಬಂದು - “ ನೀವು ಬಾದಶಹನ ಆಮಂತ್ರಣವನ್ನು ಸ್ವೀಕರಿಸಿದ್ದನ್ನು ಕಂಡು ನನಗೆ ಅತಿವಿಷಾದವಾಗಿದೆ ?? ಎಂದು ನುಡಿದನು. ಆ ನುಡಿಯು ಕಿವಿಗೆ ಬಿದ್ದಕೂಡಲೇ ಬೀರಬಲನು ದಿಂಗು ಬಡೆದು ಕುಳಿತುಕೊಂಡನು. ನಾಳೆಗೆ ಮುಸಲ್ಮಾನನಾಗುವ ಹೊತ್ತು ಬಂತು ಏನುಮಾಡಬೇಕು ನನ್ನ ಕೀರ್ತಿಯೆಲ್ಲ ಮಣ್ಣುಪಾಲಾಗುವ ಸಮಯವು ಬಂ ದೊದಗಿತು, ಬಾದಶಹನ ಪಂಕ್ತಿಯಲ್ಲಿ ಭೋಜನಮಾಡಿದರೆ ಜಾತಿಭ್ರಷ್ಟತೆ ಯುಂಟಾಗಿ ಜನರಲ್ಲಿ ಹ್ಯಾಗೆ ಮೋರೆತೋರಿಸಲಿ ಎಂಬ ಅನೇಕ ಪ್ರಕಾರದ ಚಿಂತಾತರಂಗಗಳು ಉದ್ಭವಿಸಹತ್ತಿದ್ದರಿಂದ ಬುದ್ಧಿಯ ನಷ್ಟವಾಗಿ ಹೋ ಯಿತು. ಉಳಿದ ಕೆಲಸಗಳ ಕಡೆಗೆ ಮನವು ಹೋಗದಾಯಿತು. ಮನೆಗೆ ಹೊರಟು ಬಂದನು. ಚಿತ್ತವು ಶಾಂತವಾಗಲಿಲ್ಲ. ಊಟಉಡಿಗೆಗಳ ಕಡೆಗೆ ಲಕ್ಷ್ಯವೇ ಹೋಗಲಿಲ್ಲ. ರಾತ್ರಿಯಲ್ಲಿ ನಿದ್ರೆಯು ಬರಲಿಲ್ಲ ಹೀಗಾಗಿ ಆ ದಿವಸವನ್ನೆಲ್ಲಾ ಚಿಂತೆಯಲ್ಲಿಯೇ ಕಳೆದನು.

ಮರುದಿವಸ ಬಾದಶಹನು ಅನೇಕ ಪ್ರಕಾರದ ಭೋಜನ ಪದಾರ್ಥಗ ಳನ್ನು ಸಿದ್ಧಪಡಿಸಿದನು. ಆಮಂತ್ರಿತ ಜನರೆಲ್ಲರೂ ಬಂದುಕೂಡಿದರು. ಆಮೇಲೆ ಬೀರಬಿಲನನ್ನು ಕರೆಯ ಕಳುಹಿದನು. ಸೇವಕನು ಬೀರಬಲನನ್ನು ಕರೆ ಯಲು ಆ ಕೂಡಲೆ ಬಟ್ಟೆಗಳನ್ನು ಧರಿಸಿಕೊಂಡು ಸೇವಕನ ಬೆನ್ನು ಹತ್ತಿದನು. ಇನ್ನು ತನ್ನ ವಚನವನ್ನು ಹ್ಯಾಗೆ ಕಾಯ್ದು ಕೊಳ್ಳಬೇಕೆಂಬ ಚಿಂತೆಯಲ್ಲಿ ಮಗ್ನನಾಗಿ ಒಂದೊಂದೇ ಹೆಜ್ಜೆಯನ್ನಿ ಕ್ಕುತ್ತ ನಾಲ್ಕೂಕಡೆಗೆ ನೋಡುತ್ತ ನಡೆದಿರಲು, ಈಶ್ವರನ ಪ್ರೇರಣೆಯಿಂದ ಒಂದು ಹಂಚಿಕೆಯು ತೋರಿತು. ಒಬ್ಬ ಸ್ವರ್ಣಕಾರನು ವರಾಹಕೇಶದ ಕುಂಚ [ಬ್ರಶ್] ದಿಂದ ಬೆಳ್ಳಿಭಂಗಾರದ ಆಭೂಷಣಗಳನ್ನು ತೊಳೆಯಹತ್ತಿದ್ದನು ಅವನ ಮೇಲೆ ಬೀರಬಲನ ದೃ ಷ್ಠಿಯು ಹೋಯಿತು, ಕೂಡಲೆ ಅವನಬಳಿಯಲ್ಲಿ ಹೋಗಿ ಆ ಕುಂಚವನ್ನು ಸ್ವೀಕರಿಸಿಕೊಂಡು ಮಾರ್ಗವನ್ನು ಹಿಡಿದನು ಬಾದಶಹನ ಅರಮನೆಯು ಸ ಮೀಪಿಸಿತು. ಆಮಂತ್ರಿತ ಜನರೆಲ್ಲರೂ ಇವನ ಮಾರ್ಗಪ್ರತಿಜ್ಞೆಯನ್ನು ಮಾ ಡುತ್ತ ಕುಳಿತುಕೊಂಡಿದ್ದರು ಬೀರಬಲನನ್ನು ಕಂಡಕೂಡಲೆ ಎಲ್ಲರೂ ಆನಂ ದಿತರಾದರು ಬಾದಶಹನು ಪ್ರತಿದಿವಸಕ್ಕಿಂತಲೂ, ಅಧಿಕವಾಗಿ ಉಪಚಾರ ಮಾಡಿ, ತನ್ನ ಸಮೀಪದಲ್ಲಿಯೇ ಕುಳಿತುಕೊಳ್ಳಬೇಕೆಂದು ಆಜ್ಞೆ ಮಾಡಿದನು ಆಗ ಬೀರಬಲನು - - ಪೃಥ್ವಿನಾಥ ! ನಾನು ಭೋಜನಕ್ಕೆ ಬಂದಿರುವೆನು ಆದರೆ ನಾನು ಪ್ರತಿದಿವಸದಲ್ಲಿ ಆಚರಿಸತಕ್ಕ ಕೆಲವು ನಿಯಮಗಳುಂಟು ಅ ವುಗಳನ್ನು ತೀರಿಸಿಕೊಳ್ಳುವದಕ್ಕೆ ಆಜ್ಞೆ ಯಾಗಬೇಕು! ” ಎಂದನು ಅದಕ್ಕೆ ಬಾದಶಹನು - "ಏನೂಚಿಂತೆಯಿಲ್ಲ ! ನಿನ್ನ ಇಚ್ಛೆಯಂತೆಯೇ ಆಗಲಿ!", ಎಂದನು. ಅದಕ್ಕೆ ಬೀರಬಲನು ಪ್ರಾರ್ಥಿಸಿಕೊಂಡದ್ದೇನಂದರೇ, - "ಈ ಎಲ್ಲ ಭೋಜನ ಪಾತ್ರಗಳ ಮೇಲೆ ನಾನು ಜಲವನ್ನು ಪ್ರೋಕ್ಷಿಸುತ್ತೇನೆ ಅದ ರಿಂದ ಯಾರೂ ಅಪ್ರಸನ್ನರಾಗಕೂಡದು ಯಾಕಂದರೆ ನನ್ನ ನಿಯಮವೇ ಈ ಪ್ರಕಾರವಿರುವದು,, ಎಂದನು ಈ ಮಾತಿಗೆ ಬಾದಶಹನು - ನಿನ್ನ ಸಾಂ ಪ್ರಧಾಯಾನುಸಾರವಾಗಿ ನಡೆಯಿಸಲಿಕ್ಕೆ ನಮದೇನೂ ಆತಂಕವಿಲ್ಲ, ಮ ತ್ತು ಯಾರೂ ಅಪ್ರಸನ್ನತೆಯನ್ನು ತೋರಿಸಲಾರರು ಎಂದು ಹೇಳಿ ಎಲ್ಲ ರ ಮುಖವನ್ನು ನೋಡಿದನು ಅವರೆಲ್ಲರೂ ಸಮ್ಮತಿ ದರ್ಶಕವಾಗಿ ತಲೆಯ ನ್ನು ಅಲುಗಾಡಿಸಿದರು ಈ ಪ್ರಕಾರ ಯಾವತ್ತರನ್ನೂ ವಚನಬದ್ಧರನ್ನಾ ಗಿಮಾಡಿಕೊಂಡು ಒಂದು ಕೈಯಲ್ಲಿ ಜಲಪಾತ್ರೆಯನ್ನೂ ಮತ್ತೊಂದು ಕೈ ಯಲ್ಲಿ ವರಾಹಕೇಶದ ಗುಚ್ಛವನ್ನೂ ಹಿಡಿದುಕೊಂಡು, ಆಗುಚ್ಛವನ್ನು ಜ ಲದಲ್ಲಿ ಎದ್ದಿ ಎದ್ದಿ, ಪ್ರತಿಯೊಂದು ಭೋಜನಪಾತ್ರೆಯ ಮೇಲೆ ಚಿಮುಕಿಸ ಹತ್ತಿದನು ಹೀಗೆ ಯಾವತ್ತು ಪಾತ್ರೆಗಳು ಶುದ್ಧವಾದ ಮೇಲೆ ಬಾದಶಹನ ಪಾತ್ರೆಯ ಮೇಲೆ ಚಿಮುಕಿಸುವದಕ್ಕೆ ಬರಲು ಒಬ್ಬ ಅಮೀರನು-ಯಾ ಅ ಲ್ಲಾ ! ಯಾ ಖುದಾ ! ಧರ್ಮಭ್ರಷ್ಮತೆಯುಂಟಾಯಿತು. ಬೀರಬಲನು ಕೈ ಯಲ್ಲಿ ಹಿಡಿದದ್ದು, ಕೇಶದ ಗುಚ್ಛವು' ಎಂದು ಕೂಗಿದನು ಕೂಡಲೆ ಎಲ್ಲರೂ ಎದ್ದು ನಿಂತುಕೊಂಡರು. ಬೀರಬಲನ ಮೇಲೆ ಗಾಲಿಪ್ರದಾನದ ವರ್ಷಣವು ಆರಂಭವಾಯಿತು ಎಲ್ಲರೂ ಕೂಡಿ ಬೀರಬಲನನ್ನು ಭೋಜನಶಾಲೆಯಿಂದ ದಬ್ಬಿಬಿಟ್ಟರು ಬಾದಶಹನು ವಚನಬದ್ದನಾದ್ದರಿಂದ ಏನನ್ನೂ ಮಾತಾಡದೆ ಸ್ವಸ್ಥ ಕುಳಿತುಕೊಂಡು ಬಿಟ್ಟನು. ಧರ್ಮತ್ಯಾಗಕ್ಕಿಂತಲೂ ಪ್ರಾಣತ್ಯಾಗ ವೇ, ಮೇಲಾದದ್ದೆಂಬ ಶಾಸ್ತ್ರಾಜ್ಞೆ ಯ ಪ್ರಕಾರವಾಗಿ ತನ್ನ ಧರ್ಮವನ್ನು ರ ಕ್ಷಿಸಿಕೊಂಡದ್ದರಿಂದ ಬೀರಬಲನಿಗೆ ಅತ್ಯಾನಂದವಾಯಿತು ಬೀರಬಲನು ಕ್ಷಿ ಪ್ರದಲ್ಲಿಯೇ ತಿರುಗಿ ಬಂದದ್ದನ್ನು ಕಂಡು ಹಿಂದೂಮತಾನು ಯಾಯಿಗಳಿ ಗೆಲ್ಲ ಪರಮಾನಂದವಾಯಿತು ಅವನು ಮನೆಗೆ ಹೋಗಿ ಅನಂದದಿಂದ ಭೋಜ ನತೀರಿಸಿಕೊಂಡನು ಬಾದಶಹನು ಆ ಮಂತ್ರಿತ ಜನರೆಲ್ಲ ಸಮಾಧಾನಮಾಡಿ ಬೇರೆ ಪಾಕವನ್ನು ಮಾಡಿಸಿ ಭೋಜನ ಮಾಡಿಸಿದನು. ಆದಿನ ಮೊದಲ್ಗೊಂ ಡು ಬಾದಶಹನು ಬೀರಬಲನನ್ನು ಎಂದೂ ಊಟಕ್ಕೆ ಅಮಂತ್ರಣವನ್ನು ಕೊಡಲಿಲ್ಲ.

-( ೧೬೮, ನದಿಯು ಯಾಕೆ ರೋದಿಸುತ್ತಿರುವದು.) -

ಒಂದು ಸಾರೆ ವರ್ಷಾಕಾಲದಲ್ಲಿ ಸರ್ಜನ್ಯವು ಅತ್ಯಧಿಕವಾದ್ದರಿಂದ ಯಮುನಾಪ್ರವಾಹವು ಮೇರೆದಪ್ಪಿ ಪ್ರವಹಿಸ ತೊಡಗಿತು ರಾಜಪ್ರಸಾದವು ಆ ನದಿಯ ದಂಡೆಯಮೇಲೆಯೇ ಇದ್ದದರಿಂದ ಪ್ರವಾಹದ ರಭಸವು ಅತಿಶ ಯವಾಗಿ ಕೇಳ ಬರಹತ್ತಿತು ಆರ್ಧ ರಾತ್ರಿಯ ಸಮಯದಲ್ಲಿ ಆರಭಸದಿಂದ ಬಾದಶಹನಿಗೆ ನಿದ್ರೆಯು ತಿಳಿಯಿತು ಎದ್ದು ಕುಳಿತುಕೊಂಡನು ಯಮುನಾ ನದಿಯು ಈ ವರೆರೋದಿಸುತ್ತಿರುವ ಕಾರಣವೆ(ನಿದ್ದೀತು! ಎಂಬ ಪ್ರಶ್ನೆಯು ಬಾದಶಹನ ಮನಸ್ಸಿನಲ್ಲಿ ಉತ್ಪನ್ನವಾಯಿತು ಆದರೆ ಆಪ್ರಶ್ನೆಗೆ ಉತ್ತರವನ್ನು ಕೊಡುವವರು ಯಾರು? ಬೀರಬಲನಾಗಲೀ, ಅನ್ಯಮುತ್ಸದ್ಧಿಗಳಾಗಲಿ ಯಾರೂ ಇದ್ದಿಲ್ಲ ಯಾರಿಗೆ ಕೇಳಬೇಕು! ಆಕಾಂಕ್ಷೆಯು ಬಲವತ್ತರವಾಗಹತ್ತಿತು ಆಗ ಒಬ್ಬ ಗೃಹರಕ್ಷಕನನ್ನು ಕರೆದು ಅಯ್ಯಾ ! ನಾಸಿರುದ್ದೀನ ನದಿಯು ಯಾಕೆ ರೋದನೆ ಮಾಡುತ್ತಿರುವದು ! ಎಂದು ಕೇಳಿದನು ಅಪ್ರಗಲ್ಭನಾದ ನಾಸಿರುದ್ದೀನನು ಏನೆಂದು ಉತ್ತರವನ್ನು ಕೊಡಬೇಕು ? ಸುಮ್ಮನೆ ನಿಂತುಕೊಂಡುಬಿಟ್ಟನು ಆಗ ಬಾದಶಹನು ಅನೇಕ ಜನಗಳಿಗೆ ಇದೇ ಪ್ರಶ್ನೆಯನ್ನು ಮಾಡಿದನು ಒಬ್ಬನಾದರೂ ಒಂದು ತುಟಿಯನ್ನು ಎರಡು ಮಾಡಲಿಲ್ಲ ಕಡೆಗೆ ಬಾದಶಹನು ಬೀರಬಲನನ್ನು ಕರೆದುಕೊಂಡು ಬರ್ರಿ! ಎಂದು ಆಜ್ಞಾಪಿಸಿದನು. ಆ ಸಮಯದಲ್ಲಿ ಬೀರಬಲನು ನಿದ್ರಾವಶನಾಗಿದ್ದನು, ಸೇವಕನು ಹೋಗಿ ದ್ವಾರದಲ್ಲಿ ನಿಂತುಕೊಂಡು ಕೂಗ ಹತ್ತಿದ್ದನು ಅದನ್ನು ಕೇಳಿ ಬೀರಬಲನ ಪತ್ನಿಯು ಎಚ್ಚತ್ತು ಪತಿಯನ್ನು ಎಬ್ಬಿಸಿದಳು. ಆ ಸಮಯದಲ್ಲಿ ಪರ್ಜನ್ಯವು ಮುಸಲಧಾರೆಯಾಗಿ ಸುರಿಯುತ್ತಿತ್ತು. ಹೊರಗೆ ಕಾಲಿಡಲು ಸಾಧ್ಯವಿಲ್ಲ; ಸ್ವಾಮಿಯ ಆಜ್ಞಾನುವರ್ತಿಯಾಗಿ ಉಪಾಯವಿಲ್ಲದೆ ಹೊರಬಿದ್ದನು. ಮೈಮೇಲಿನ ಬಟ್ಟೆಗಳೆಲ್ಲ ನೆನೆದು ಹೋದವು ಮಾರ್ಗಪ್ರತೀಕ್ಷಿಸುತ್ತ ಕುಳಿತಿದ್ದ ಬಾದಶಹನ ಸಮ್ಮುಖದಲ್ಲಿ ಹೋಗಿ ನಿಂತುಕೊಂಡನು. ಆ ಕೂಡಲೆ ಬಾದಶಹನು. "ಬೀರಬಲ್ಲ ; ಈ ದಿವಸ ನಾನು ಗಾಢವಾದ ನಿದ್ರಾಸಕ್ತನಾಗಿರಲು, ಒಮ್ಮಿಂದೊಮ್ಮೆ ಎಚ್ಚರವಾಯಿತು, ನದಿಯು ರೋಧಿಸುತ್ತಿರುವ ಶಬ್ದವು ಕಿವಿಗೆ ಬಿತ್ತು ಇನ್ನೂ ಆ ಶಬ್ದವು ಕೇಳಿಸುತ್ತಿರುವದು ನೋಡು ! ಈ ವಿಷಯವಾಗಿ ನಾನು ಅನೇಕರನ್ನು ಪ್ರಶ್ನೆ ಮಾಡಿದೆನು. ಒಬ್ಬನಿಂದಲೂ ಸಮಾಧಾನಕರವಾದ ಉತ್ತರವು ದೊರೆಯಲಿಲ್ಲ ; ನಿರುವಾಯವಾಗಿ ನಿನ್ನನ್ನು ಕರೆಯಿಸುವ ಪ್ರಸಂಗವು ಬಂತು ಒಳ್ಳೆದು: "ನದಿಯು ಈ ಪರಿ ಶೋಕಿಸುವದಕ್ಕೆ ಕಾರಣವೇನು ಎಂದು ಕೇಳಿದನು, ಆಗ ಬೀರಬಲನು ಮನಸ್ಸಿನಲ್ಲಿ "ನದಿಯ ಪ್ರವಾಹದ ರಭಸವು ಕೇಳಿಬಂದದ್ದರಿಂದ ಒಮ್ಮಿಂದೊಮ್ಮೆ ಎಚ್ಚತ್ತು ಈ ಪ್ರಶ್ನೆಯನ್ನು ಹುಡುಕಿತೆಗೆದಿರಬಹುದು ! ಇದಕ್ಕೆ ಸರಿಯಾಗಿ ಪ್ರತ್ಯುತ್ತರವನಿತ್ತರೇ ಮನಸ್ಸು ಶಾಂತ ವಾಗುತ್ತದೆ ;” ಎಂದು ಯೋಚಿಸಿ, ಆ ಮೇಲೆ ಮಾನ್ಯವರ ? ಯಮುನೆಯು ತನ್ನ ಪಿತನಾದ ಹಿಮಾಚಲವನ್ನು ತ್ಯಾಗಮಾಡಿ, ಪತಿಯಾದ ಸಮುದ್ರ ರಾಜನೆಡೆಗೆ ಹೋಗಹತ್ತಿದ್ದಾಳೆ. ಅದರಿಂದ ಪಿತನ ವಿಯೋಗ ದುಃಖವನ್ನು ಸಹಿಸಲಾರದೆ ರೋದನ ಮಾಡಹತ್ತಿದ್ದಾಳೆ ಎಂದು ಉತ್ತರ ಕೊಟ್ಟನು ಅದನ್ನು ಕೇಳಿ ಬಾದಶಹನು ಹಾ, ಹಾ! ತಿಳಿಯಿತು, ತಿಳಿಯಿತು, ಎಂದು ತಲೆದೂಗಿದನು,

-( ೧೬೯, ಏನು ನಡೆಯುತ್ತಿರುವದು !) -

ಒಂದು ದಿವಸ ಬಾದಶಹನು ರಾಜಕಾರ್ಯಗಳಿಂದ ನಿವೃತ್ತನಾಗಿ, ಆ ಮೇಲೆ "ಬೀರಬಲ್ಲ ' ಈ ಸಮಯದಲ್ಲಿ ಏನು ನಡೆಯುತ್ತಿರುವದು ! ಎಂದು ಕೇಳಿದನು. ಆ ಕೂಡಲೆ ಬೀರಬಲನು, ಮಹಾರಾಜ ಸಾವುಕಾರರ ಚುಂಗಡಿಯು ನಡೆಯುತ್ತಿರುವದು. ಯಾಕಂದರೆ ಅದಕ್ಕೆ ಅಹರ್ನಿಕ ನಿದ್ರೆಯೇ ಇಲ್ಲ, ಎಂದು ಉತ್ತರಕೊಟ್ಟನು. ಈ ಉತ್ತರದಿಂದ ಬಾದಶಹನ ಮನಸ್ಸು ಪ್ರಸನ್ನವಾಯಿತು.

- (೧೭೦. ಕಲ್ಲು ಸಕ್ಕರೆಯ ಹರಳಿನ ರತ್ನ,)-

ಒಂದು ದಿವಸ ರಾತ್ರಿಯಲ್ಲಿ ಬೀರಬಲನು ನಗರ ಸಂಚಾರಾರ್ಥವಾಗಿ ಹೊರಟಿದ್ದನು. ಮಾರ್ಗದಲ್ಲಿ ಅವನಿಗೆ ರೋಧನ ಧ್ವನಿಯು ಕೇಳಿಬಂತು ಬೀರಬಲನು ಆ ಗೃಹದದ್ವಾರದಲ್ಲಿ ಹೋಗಿ ನಿಂತುಕೊಂಡನು. ಶಬ್ಬವು ನಿಂತು ಹೋಯಿತು ಬೀರಬಲನು ದ್ವಾರವನ್ನು ಹಸ್ತಾಂಗುಲಿಯಿಂದ ಬಾರಿಸಿದನು. ಆಗ ಅರವತ್ತು ವರುಷದ ಒಬ್ಬ ವೃದ್ಧನು ಬಂದು ಬಾಗಿಲವನ್ನು ತೆರೆದನು. ಗೃಹವೆಲ್ಲ ಅಂಧಕಾರಮಯವಾಗಿತ್ತು ಆ ವೃದ್ಧನಿಗೆ ಬೀರಬಲನ ಪರಿಚಯವು ಹತ್ತಲಿಲ್ಲ ಆಗ ಬೀರಬಲನು " ಇಲ್ಲಿ ಇದೇ ಈಗ ಯಾರು ರೋಧಿಸುತ್ತಿದ್ದರು ! ” ” ಎಂದು ಕೇಳಿದನು. ಈ ಮಾತಿಗೆ ವೃದ್ಧನು- ಅಯ್ಯಾ ! ಶೋಕಿಸುತ್ತಿದ್ದವನು ನಾನೇ ಆ ಸಂಗತಿಯನ್ನು ನಿನ್ನ ಮುಂದೆ ಪ್ರಕಟೀಕರಿಸುವದರಿಂದ ಪ್ರಯೋಜನವೇನು ದಯಮಾಡಿ ಆ ವಿಷಯದಲ್ಲಿ ನನಗೆ ಪ್ರಶ್ನೆ ಮಾಡಬೇಡ, ನನ್ನ ದುಃಖವೇ ನನಗೆ ಅಧಿಕವಾಗಿದೆ ? ” ಎಂದನು. ಆಗ ಪುನಃ ಬೀರಬಲನು ವೃದ್ಧನೇ ! ನನ್ನ ಮುಂದೆ ತಿಳಿಸು ! ತಕ್ಕ ಸಹಾಯವನ್ನು ಮಾಡುತ್ತೇನೆ ಎಂದು ಹೇಳಿದನು. ಆಗ ಆ ವೃದ್ಧನು, ಅಯ್ಯಾ ? ರಾತ್ರಿ ಯು ಅಂಧಕಾರವಾಗಿದೆ ಇದರಿಂದ ನಿನ್ನ ಪರಿಚಯವು ನನಗೆ ಹತ್ತಲೊಲ್ಲದು ಮನೆಯಲ್ಲಿ ತೈಲಾಭಾವವಾದ್ದರಿಂದ ದೀಪವನ್ನು ಸಹ ಹಚ್ಚಲಿಕ್ಕೆ ಬರುವ ಹಾಗಿಲ್ಲ ಆದ್ದರಿಂದ ನಿನ್ನ ನಾಮಧೇಯವನ್ನಾದರೂ ಹೇಳಿದರೆ, ನೆಟ್ಟಗಾಗುವದು ಎಂದನು ಆಗ ಬೀರಬಲನು ರಾತ್ರಿಯು ಅರ್ಧ ಕಳೆದು ಹೋಗಿದೆ ನಿದ್ರೆಯು ನನ್ನನ್ನು ಬಹಳವಾಗಿ ಪೀಡಿಸಹತ್ತಿದೆ ಆದ್ದರಿಂದ ಪ್ರಾತಃಕಾಲದಲ್ಲಿ ಈ ವೃದ್ಧನನ್ನು ಕರೆಯಿಸಿಕೊಂಡು ವಿಚಾರಮಾಡಿದರಾಯಿತು ! ಎಂದು ಯೋಚಿಸಿ "ವೃದ್ಧನೇ ! ಈಗ ರಾತ್ರಿಯು ಬಹಳವಾಗಿದೆ ನೀನುಶೋ ಕಿಸುವದನ್ನು ಬಿಟ್ಟು ಸ್ವಸ್ಥವಾಗಿ ನಿದ್ರೆಮಾಡು! ನಾಳೆದುದಯದಲ್ಲಿ ಮಂ ತ್ರಿ ಪ್ರಸಾದದ ಹತ್ತಿರಬಂದು ನನ್ನನ್ನು ವಿಚಾರಿಸು ನನ್ನ ಹೆಸರು ಬೀರಬಲನು ಎಂದುಹೇಳಿ ಹೊರಟುಬಂದನು ವೃದ್ಧನು ಆ ಮಾತುಗಳನ್ನು ಕೇಳಿ ದಂಗುಬಡೆದು ನಿಂತನು ಮರುದಿವಸ ವೃದ್ಧನು ಬೀರಬಲನ ಗೃಹಕ್ಕೆ ಬಂದನು ಆಗ ಬೀರಬಲನು ಅವನನ್ನು ಕರೆದುಕೊಂಡು ಹೋಗಿ, ನಿನ್ನೆ ರಾತ್ರಿ ಶೋಕಿಸುತಿದ್ದ ಕಾರಣವೇನೆಂದು ಕೇಳಿದೆನು. ಆಗ ಆ ವೃದ್ಯನು ಮಂತ್ರಿವರನೇ ! ನಿನ್ನೆ ರಾತ್ರಿಯಲ್ಲಿ ತಮ್ಮ ಪರಿಚಯವು ನನಗೆ ಹತ್ತದೆ ಹೋಯಿತು ಆ ಕಾಲದಲ್ಲಿ ನನ್ನ ಮುಖದಿಂದ ಏನಾದರೂ ಅನುಚಿತ ಭಾಷಣಗಳು ಹೊರಟಿದ್ದರೆ ಕ್ಷಮಿಸಬೇಕು ಎಂದನು. ಅದಕ್ಕೆ ಬೀರಬಲನು, “ ಅಯ್ಯಾ! ಇದರಲ್ಲ್ಲಿ ಕ್ಷಮೆಯನ್ನು ಯಾಚಿಸುವ ಕಾರಣವೇ ಇಲ್ಲ ಅಂಧಕಾರವಿದ್ದದರಿಂದ ನನ್ನ ಪರಿಚಯವು ಸಿಗದೇ ಹೋದದ್ದು, ನಿನ್ನ ಅಪರಾಧವಲ್ಲ ; ಒಳ್ಳೇದು, ನೀನು ಶೋಕಿಸುತ್ತಿದ್ದ ಕಾರಣವೇನು! ಎಂದು ಕೇಳಿದನು ಈ ಮಾತಿಗೆ ಆ ವೃದ್ಧನು “ ದಿವಾನ ಸಾಹೇಬ ! ನಾನೊಬ್ಬ ಕೈಕೆಲಸದವನು ನನ್ನನ್ನು ಪಾಲನ ಪೋಷಣ ಮಾಡುವಂಥ ಒಬ್ಬ ಮಗನು ಮೃತ್ಯುವಿನ ಬಾಯಿಗೆ ತುತ್ತಾಗಿ ಈಗ ಒಂದೆರಡು ತಿಂಳಾಗುತ್ತ ಬಂತು. ವೃದ್ಧನಾದ ನನ್ನಿಂದ ಪರಿಕ್ರಮ ಮಾಡುವದು ಅಸಾಧ್ಯವಾದ್ದರಿಂದ ಹೊಟ್ಟೆಗಿಲ್ಲದೆ ಬಳಲ ಹತ್ತಿದ್ದೇನೆ, ಈಗ ನಾಲ್ಕಾರು ದಿವಸಗಳಿಂದಂತೂ ಅರಹೊಟ್ಟೆಯಿಂದ ಕಾಲಹರಣ ಮಾಡಿದ್ದೇನೆ, ಈಗೆರಡು ದಿವಸಗಳಿಂದಂತೂ ಆಹಾರದ ಮುಖವನ್ನೇ ನೋಡಿಲ್ಲ ನಾಳೆಗೆ ಮೂರನೇಯಪವಾಸವು. ಈ ಪ್ರಕಾರನನ್ನದು ಸ್ಥಿತಿಯಿರುದು. ನಿನ್ನಿನ ದಿವಸ ಕ್ಷುದ್ಭಾದೆಯು ಅತಿಶಯವಾದ್ದರಿಂದ ಸಹನ ಮಾಡಲಸಮರ್ಥನಾಗಿ ರೋದಿಸಹತ್ತಿದ್ದೆನು” ಎಂದು ಹೇಳಲು ಬೀರಬಲನು ದಯಾರ್ದ ಹೃದಯನಾಗಿ ಅವನಿಗೆ ಆಹಾರಸಾಮಗ್ರಿಯನ್ನು ತಂದುಕೊಟ್ಟನು ಆಮೇಲೆ ವೃದ್ಧನೇ ? ನಿನಗೆ ಇನ್ನು ಹದಿನೈದು ದಿವಸ ಸಾಕಾಗುವಷ್ಟು ದ್ರವ್ಯವನ್ನು ಕೊಡುತ್ತೇನೆ ಆ ಅವಧಿಯೊಳಗಾಗಿ ನೀನು ಒಂದು ಕಲ್ಲುಸಕ್ಕರೆಯ ಹರಳನ್ನು ತೆಗೆದುಕೊಂಡು ನಿನ್ನ ಶಲತನದಿಂದ ಅದನ್ನು ರತ್ನದಂತೆ ಮಾಡು ಚೆನ್ನಾಗಿ ಪರೀಕ್ಷೆ ಮಾಡದ ಹೊರತು, ಯಾರಿಗೂ ತಿಳಿಯಬಾರದು ? ಹೀಗೆ ಸಿದ್ಧಮಾಡಿಕೊಂಡು ಹದಿನಾಲ್ಕನೇ ದಿವಸ ನನ್ನ ಬಳಿಗೆ ಬಾ” ಎಂದುಹೇಳಿ ಕಳುಹಿಕೊಟ್ಟನು. ಆ ವೃದ್ಧನು ಬಹು ಸಂತೋಷಿತನಾಗಿ ಮನೆಗೆ ಬಂದು ತನ್ನ ಕುಶಲತನದಿಂದ ಒಂದು ರತ್ನವನ್ನು ಸಿದ್ಧಪಡಿಸಿಕೊಂಡು ಹದಿನಾಲ್ಕುನೇ ದಿವಸ ಬೀರಬಲನ ಬಳಿಗೆ ಬಂದನು. ಅದನ್ನು ನೋಡಿ ಬೀರಬಲನು ಅವನ ಜಾಣತನಕ್ಕೆ ತಲೆದೂಗಿದನು. ಮರುದಿವಸ ಆ ಹರಳನ್ನು ತೆಗೆದುಕೊಂಡು ಬಾದಶಹನ ಸನ್ನಿಧಿಗೆ ಬಂದನು, ಆಗ ಬಾದಶಹನು ಓಹೋ ಹೋ ! ಬೀರಬಲ್ಲ ಈ ದಿವಸ ನೀನು ಶೀಘ್ರವಾಗಿ ಸಭೆಗೆ ಬಂದಿರುವಿಯಲ್ಲಾ ಎಂದು ಕೇಳಿದನು, ಆ ಕೂಡಲೆ ಬೀರಬಲನು " ಸರಕಾರ ? ಈ ಮನುಷ್ಯನು ಒಂದು ಅತ್ಯುತ್ತಮವಾದ ರತ್ನವನ್ನು ತಂದುಕೊಟ್ಟಿದ್ದಾನೆ. ಅದು ತಮ್ಮ ಬಳಿಯಲ್ಲಿ ರುವದಕ್ಕೆ ಯೋಗ್ಯವಾಗಿದೆ” ಎಂದನು. ಬಾದಶಹನು ಅದನ್ನು ತನ್ನ ಕಡೆಗೆ ತೆಗೆದುಕೊಂಡು ಚನ್ನಾಗಿ ಪರೀಕ್ಷಿಸಿ, ರತ್ನವಂತೂ ಅತ್ಯುತ್ತಮವದೆ ಇನ್ನು ಎರಡು ತಾಸಾದಬಳಿಕ ಬೆಟ್ಟಿಯಾಗೆಂದು ಆ ಶಿಲ್ಪ ಕಾರನಿಗೆ ಹೇಳು ಎಂದನು. ಅದನ್ನು ಕೇಳಿ ಆ ವೃದ್ಧನು ಹೊರಟುಹೋದನು. ಆಮೇಲೆ ಈ ರತ್ನವನ್ನು ಜಾಣರಿಂದ ಪರೀಕ್ಷಿಸಿ ನೋಡಬೇಕು ? ಅಲ್ಲಿಯವರೆಗೆ ಇದು ನನ್ನ ಬಳಿಯಲ್ಲಿಯೇ ಇರಲಿ ಎಂದು ಬೀರಬಲನಿಗೆ ಹೇಳಿ, ಉಳಿದ ರಾಜಕರಣಗಳಲ್ಲಿ ಮನವನ್ನು ಹಾಕಿದನು. ಮುಂದೆ ಎರಡುತಾಸು ಆದಮೇಲೆ ಆ ಶಿಲ್ಪಿಯುಬರಲು ಬೀರಬಲನು- ಪೃಥ್ವಿನಾಥ ? ಆ ರತ್ನದವನು ಬಂದಿದ್ದಾನೆ ಎಂದು ಹೇಳಿದನು. ಆ ಕೂಡಲೆ ಬಾದಶಹನು ರತ್ನವನ್ನು ಶೋಧಮಾಡಹತ್ತಿದನು, ಯೆಲ್ಲಿಯೂ ಸಿಕ್ಕಲಿಲ್ಲ. ಆಗ ಬೀರಬಲನಿಗೆ ಬೀರಬಲ ! ಆ ರತ್ನವನ್ನು ನಿನ್ನ ಸ್ವಾಧೀನ ಪಡಿಸಲಿಲ್ಲವೇ ಎಂದು ಕೇಳಿದನು. ಸರಕಾರ ! ನನ್ನ ಕಡೆಗೆ ಕೊಡಲಿಲ್ಲ ಅದನ್ನು ಚನ್ನಾಗಿ ಪರೀಕ್ಷಿಸಬೇಕೆಂದು ತಾವೇ ಇಟ್ಟು ಕೊಳ್ಳಲಿಲ್ಲವೇ, ಎಂದು ಬೀರಬಲನು ನುಡಿದನು. ( ಈ ಪೂರ್ವದಲ್ಲಿಯೇ ಆ ರತ್ನವನು ಬೀರಬಲನು ನುಂಗಿಬಿಟ್ಟಿದ್ದನು) ಎಷ್ಟು ಹುಡುಕಿದರೂ ಶೋಧವಾಗದಿರಲು ಬಾದಶಹನು- ರತ್ನದ ಯಜಮಾನನು ಎಷ್ಟು ಬೆಲೆಯನ್ನು ಹೇಳುವನೋ ಅಷ್ಟು ದ್ರವ್ಯವನ್ನು ಕೊಟ್ಟುಬಿಡು, ವ್ಯರ್ಥ ಚರ್ಚೆ ಮಾಡುತ್ತ ಕುಳಿತುಕೊಳ್ಳಬೇಡ ಎಂದು ಅಪ್ಪಣೆ ಮಾಡಲು ಬೀರಬಲನು ಆ ವೃದ್ಧನನ್ನು ಕುರಿತು ರತ್ನದ ಬೆಲೆಯನ್ನು ಹೇಳು ಎಂದನು, ಆ ವೃದ್ಧನು ಎರಡುಸಾವಿರ ರೂಪಾಯಿಗಳನ್ನು ಕೊಡಬೇಕು ಮತ್ತು ಶ್ರಮದ ಫಲವೆಂದು ಐವತ್ತು ರೂಪಾಯಿಗಳನ್ನು ಕೊಡಬೇಕು ಎಂದು ಹೇಳಿದನು ಆಗ ಬೀರಬಲನು ಛೇ, ಛೇ, ಅಷ್ಟು ಬೆಲೆ ಬಾಳತಕ್ಕ ರತ್ನವಲ್ಲ; ಒಂದುನೂರು ರೂಪಾಯಿಗಳನ್ನು ತೆಗೆದುಕೊ ಎಂದು ಅವನೊಡನೆ ಚರ್ಚೆನಡಿಸಿದನು, ಅದನ್ನು ಕಂಡು ಬಾದಶಹನು ವೃದ್ಧನು ಏನನ್ನುತ್ತಾನೆ ಎಂದು ಕೇಳಿದನು. ಅದಕ್ಕೆ ಪ್ರತ್ಯುತ್ತರವಾಗಿ ಬೀರಬಲನು ಖಾವಂದ ? ಈ ವೃದ್ಧನು ಎರಡುಸಾವಿರ ರೂಪಾಯಿಗಳನ್ನು ಬೆಲೆಯಾಗಿ ಕೊಡಬೇಕೆಂದೂ, ಶ್ರಮದ ಫಲವೆಂದು ಎರಡು ನೂರು ರೂಪಾಯಿಗಳನ್ನೂ ಕೇಳುತ್ತಾನೆ, ನಾನು ಶ್ರಮದಫಲವನ್ನು ಒಂದುನೂರು ರೂಪಾಯಿಗಳನ್ನು ತೆಗೆದುಕೋ ಎಂದು ಹೇಳಿದೆನು ಅದಕ್ಕೆ ಅವನು ಸಮ್ಮತಿಸದೆ ನನ್ನ ರತ್ನವನ್ನು ನನಗೆ ಕೊಡಿಸಿಬಿಡಿರಿ ಎಂದು ಹಟಹಿಡಿದು ಕುಳಿತಿದ್ದಾನೆ ಎಂದುಹೇಳಿದನು. ಆಗ ಬಾದಶಹನು ಉದಾರಮನಸ್ಸಿನಿಂದ ಅವನು ಹೇಳಿದಷ್ಟು ಹಣವನ್ನು ಕೊಟ್ಟುಬಿಡು ಎಂದು ಕೋಶಾಧ್ಯಕ್ಷನಿಗೆ ಅಪ್ಪಣೆಮಾಡಿದನು ಆ ವೃದ್ದನು ಬಹಳ ಪ್ರಸನ್ನನಾಗಿ ಬೀರಬಲನಿಗೆ ಆಶೀರ್ವಾದಗಳನ್ನು ಮಾಡುತ್ತ ಮನೆಗೆ ಹೊರಟುಹೋದನು, ಸಭಾವಿಸರ್ಜನೆಯಾದ ಬಳಿಕ ಬೀರಬಲನು ಗೃಹಕ್ಕೆ ಹೋಗುವ ಮಾರ್ಗದಲ್ಲಿ ಆ ವೃದ್ಧನು ಬೆಟ್ಟಿಯಾಗಿ " ಮಂತ್ರಿವರ್ಯನೇ ! ನಿನ್ನ ಬುದ್ಧಿಗೆ ಬೆಲೆಯಿಲ್ಲ, ತಾವು ಈ ಪ್ರಕಾರ ಅನಾಥರಿಗೆ ಸಹಾಯ ಮಾಡುತ್ತಿರುವದರಿಂದ ದೇವರು ನಿಮಗೆ ಅಕ್ಷಯ ಸುಖವನ್ನೀಯುತ್ತಾನೆ; ಇದರಲ್ಲಿ ಏನೂ ಸಂದೇಹವಿಲ್ಲ” ಎಂದನು. ಈ ಮಾತಿಗೆ ಪ್ರತ್ಯುತ್ತರವಾಗಿ ಬೀರಬಲನು “ ಪೂಜ್ಯನೇ ! ನಾನು ಇದರಲ್ಲಿ ಮಾಡಿದ ಕರ್ತೃತ್ವವೇನು ? ಇದು ನಿನ್ನ ಚಾತುರ್ಯದ ಪರಿಣಾಮವು ” ಎಂದು ಹೇಳಿ ಅವನಿಂದ ಆಶೀರ್ವಚನವನ್ನು ಸ್ವೀಕರಿಸಿ ಮನೆಗೆ ಹೊರಟುಬಂದನು.

- (೧೭೧ ಬೀರಬಲನ ಮತ್ತು ಮೌರಕನು,)-

ಒಂದು ದಿವಸ ಅಮೀರಿನು, ಒಬ್ಬ ಹಿಂದೂ ಸ್ತ್ರೀಯಳ ಮೇಲೆ ಬಲಾತ್ಕಾರ ನಡೆಯಿಸಿದ್ದನು. ಆಗ ದೈವಯೋಗದಿಂದ ಪ್ರಚ್ಛನ್ನ ವೇಷಧಾರಿಯಾಗಿದ್ದ ಬೀರಬಲನು ಆ ಸ್ಥಳಕ್ಕೆ ಹೋದನು, ಆ ತರುಣ ಸರದಾರನು ಬೀರಬಲನನ್ನು ಗುರುತಿಸದೆ ಅಯ್ಯಾ! ನಿನ್ನ ಉಡಿಗೆ ತೊಡಿಗೆಗಳ ಮೇಲಿಂದ ಮುಸಲ್ಮಾನ ಜಾತಿಯವನಿದ್ದಂತೆ ಕಂಡುಬರುತ್ತದೆ ನೀನು ನಿಜವಾದ ಮುಸಲ್ಮಾನನಾಗಿದ್ದರೆ ಈ ಸಮಯದಲ್ಲಿ ನನಗೆ ಸ್ವಲ್ಪ ಸಹಾಯವನ್ನು ಮಾಡು; ಇವಳು ನನ್ನ ಹೆಂಡತಿಯು, ಒಬ್ಬ ಹಿಂದೂ ಮನುಷ್ಯನೊಡನೆ ಪಲಾಯನ ಮಾಡಬೇಕೆಂದು ಮಾರ್ಗ ಹಿಡಿದಿದ್ದಳು ಈ ಸಂಗತಿಯು ನನಗೆ ಬೇಗನೇ ತಿಳಿದುಬಂದದ್ದರಿಂದ ನಾನು ಇವಳಿಗೆ ನಿರ್ಬಂಧ ಪಡಿಸಿಕೊಂಡು ನಿಂತಿದೇನೆ, ಈಗ ಇವಳು ತಾನು ಹಿಂದೂ ಜಾತಿಯವಳೆಂದು ಹೇಳಹತ್ತಿದ್ದಾಳೆ ನೀನು ನನಗೆ ಸ್ವಲ್ಪ ಸಹಾಯಮಾಡಿದರೆ ಸಮೀಪದಲ್ಲಿರುವ ನನ್ನ ಗೃಹಕ್ಕೆ ಕರೆದುಕೊಂಡು ಹೋಗುವೆನು ” ಎಂದು ಹೇಳಿದನು. ಅದಕ್ಕೆ ಪ್ರತಿಯಾಗಿ ಬೀರಬಲನು, ಹೀಗಿರುವದೇ ? ಒಳ್ಳೇದು, ನಾನು ನಿನಗೆ ಸಹಾಯಮಾಡಿದರೆ ಆ ಶ್ರಮದಸಲುವಾಗಿ ನೀನು ನನಗೆ ಏನುಕೊಡುತ್ತೀ ? ಎಂದುಕೇಳಿದನು ಆ ತರುಣ ಸರದಾರನು, ಅಯ್ಯಾ ? ನಾನು ಸರದಾರಾಖ ನಾಮಕನಾದ ಅಮಿರನು ನನ್ನ ಖ್ಯಾತಿಯನ್ನು ನೀನು ಕೇಳಿರಬಹುದು, ಈ ನನ್ನ ಕೆಲಸ . ದಲ್ಲಿ ನೀನು ಪೂರ್ಣಸಹಾಯ ಮಾಡಿದರೆ ನಿನ್ನ ಮನಸ್ಸು ತೃಪ್ತವಾಗುವಂತೆ ಪಾರಿತೋಷಕವನ್ನು ಕೊಡುತ್ತೇನೆ, ” ಎಂದನು,
ಬೀರಬಲ-ಒಳ್ಳೇದು;" ನಾನು ಮೊದಲು ಈ ಸ್ತ್ರೀಯಳಿಗೆ ಕೆಲವು ಉಪದೇ ದ ಮಾತುಗಳನ್ನು ಹೇಳುತ್ತೇನೆ ಆಷ್ಟರಿಂದಲೇ ಕಾರ್ಯಸಾಧ್ಯವಾ ದರೆ ಉತ್ತಮ, ಇಲ್ಲದೆಹೋದರೆ ಹಿಂದಿನಿಂದ ನಾವುಮಾಡತಕ್ಕದ್ದನ್ನು ಮಾಡಿಬಿಡೋಣ, ನೀನು ಕಿಂಚಿತ್ ದೂರಹೋಗಿ ನಿಂತುಕೊ,
ಆ ಕಾಮಾಂಧನಾದ ಅಮೀರನು ಇವನಮಾತಿಗೆ ಸಮ್ಮತಿಸಿ, ಕಿಂಚಿತ್ ದೂರದಲ್ಲಿ ಹೋಗಿ ನಿಂತುಕೊಂಡನು. ಆಗ ಬೀರಬಲನು ಆ ಸ್ತ್ರೀಯಳನ್ನು ದ್ದೇಶಿಸಿ, " ತನ್ವಂಗಿಯೇ ? ನೀನುಯಾರು, ನಿನ್ನ ಮಾತಾಪಿತೃಗಳುಯಾ ರು, ಎಂಬ ವೃತ್ತಾಂತವನ್ನು ಸತ್ಯಸತ್ಯವಾಗಿ ಹೇಳಿದರೆ ಈ ದುಮ್ಮನಬಂ ಧನದಿಂದ ನಿನ್ನನ್ನು ದಾಟಿಸುತ್ತೇನೆ, ನಾನು ಬೀರಬಲನು, ನಗರ ಸಂಚಾ ರಾರ್ಥವಾಗಿ ಪ್ರಚ್ಛನ್ನವೇಷದಿಂದ ಸಂಚರಿಸುತ್ತಿದ್ದೆನು ” ಎಂದನು. ಬೀರ ಬಲನ ಹೆಸರು ಕಿವಿಗೆ ಬಿದ್ದ ಕೂಡಲೇ ಅವಳಲ್ಲಿ ಅವಸಾನವು ಬಂತು.
ಆಗ ಅವಳು- ನಾನು ಒಬ್ಬಬ್ರಾಹ್ಮಣನ ಕನ್ಯೆಯು ಅವಿವಾಹಿತಳಾಗಿದ್ದೇ ನೆ ಈ ದುಷ್ಟನು ಎಷ್ಟೋದಿವಸಗಳಿಂದ ನನ್ನ ಸತೀತ್ವವನ್ನು ಭ್ರ ಷ್ಟಗೊಳಿಸಬೇಕೆಂದು ಹೊಂಚುಹಾಕಿ ಕುಳಿ ತುಕೊಂಡಿದ್ದನು ನನ್ನ ದುರದೃಷ್ಟದಿಂದ ಈ ದಿವಸ ಈ ದುಷ್ಟನ ಬಲೆಯೊಳಗೆ ಸಿಕ್ಕುಬಿ ದಿದ್ದೇನೆ ನನಗೆ ಮಹಾಲಕ್ಷ್ಮಿ ಎಂದು ಕರೆಯುವರು ತಾವು ಕರು ಣಾಳುಗಳಾಗಿ, ನನ್ನ ಮರ್ಯಾದೆಯನ್ನುಳಿಸಿದರೆ, ಜಗನ್ನಿಯಂತ ನು ನಿಮಗೆ ಅಖಂಡವಾದ ಸೌಖ್ಯವನ್ನೀಯುತ್ತಾನೆ” ಎಂದು ಪ್ರಾ ರ್ಥಿಸಿಕೊಂಡಳು ಆಗ ಬೀರಬಲನು ಅವಳಿಗೆ ಧೈರ್ಯ ಹೇಳಿ, ಆ ಸರದಾ ರನನ್ನ ಕರೆದು " ಸರದಾರಖಾನ ! ನೀನು ಪ್ರಜೆಗಳ ಪ್ರಾಣ, ಮತ್ತು ಧನಗಳನ್ನು ರಕ್ಷಿಸುವ ಕರ್ಮಚಾರಿಯಾಗಿದ್ದು ನಿರ್ದೋಷಿಯಾಗಿರು ವ ಬ್ರಾಹ್ಮಣಕನೈಯ ಮೇಲೆ ಬಲಾತ್ಕಾರವನ್ನು ಮಾಡ ಉದ್ಯುಕ್ತ ನಾಗಿರುವದು ಸರಿಯಲ್ಲ;
ಸರದಾರಖಾ-ಇವಳು ಅಸತ್ಯ ವಾದವನ್ನು ಮಾಡುತ್ತಾಳೆ.
ಬೀರಬಲ- ನೀನೇ ಅಸತ್ಯವಾದಿ ಯಾಗಿರುವಿ ಇವಳು ರಾಮಶಂಕರ ಶಾ ಸ್ತ್ರೀಯ ಕನ್ಯೆಯು ನನ್ನ ಎದುರಿಗೆ ನೀನು ಇವಳ ಅಂಗಸ್ಪರ್ಶ ಮಾ ಡಲಾರಿ! “ ಪರಸ್ತ್ರೀಯರಮೇಲೆ ಬಲಾತ್ಕಾರ ನಡೆಯಿಸಿದವನು, ಕಠಿ ಣತರವಾದ ಶಿಕ್ಷೆಗೆ ಗುರಿಯಗುವನು ” ಎಂಬ ಬಾದಶಹನ ಆಜ್ಞೆ ಯು ನಿನ್ನ ಲಕ್ಷ್ಯದಲ್ಲಿ ಇದ್ದಂತೆ ಕಂಡುಬರುವದಿಲ್ಲ ಅದು ನಿನ್ನ ಸ್ಮ ರಣೆಯಲ್ಲಿ ಇರದಿದ್ದರೆ; ನಾನು ಸ್ಮರಣೆಗೆ ತಂದು ಕೊಡುತ್ತೇನೆ ಸುಮ್ಮನೆ ಇಲ್ಲಿಂದ ಹೊರಟು ಹೋಗು ! ಇಲ್ಲವಾದರೆ ನಿನ್ನ ಗತಿಯು ನೆಟ್ಟಗಾಗಲಿಕ್ಕಿಲ್ಲ.
ಬೀರಬಲನು ಹೇಳಿದ ಈ ಬುದ್ಧಿವಾದದಿಂದ ಆ ಮದಾಂಧನಿಗೆ ಕೋಪವು ತಲೆಗೇರಿತು ಆ ಕೂಡಲೆ ಅವನು ನೀನು ಬಹಳೇ ಮೋಸಗಾರನು ನನ್ನನ್ನು ದೂರದಲ್ಲಿನಿಲ್ಲಿಸಿ, ಇವಳಿಗೆ ಉಪದೇಶ ಮಾಡಿ ಇವಳನ್ನು ಹರಣ ಮಾಡಿಕೊಂಡು ಹೋಗಬೇಕೆಂಬ ಕಾರ್ಯ ಸಾಧನೆಯಲ್ಲಿದ್ದಂತೆ ಕಂಡು ಬರುತ್ತದೆ ಇದರ ಪ್ರತಿಫಲವನ್ನು ಅನುಭವಿಸಲಿಕ್ಕೆ ಸಿದ್ಧನಾಗು ! ಇವಳ ನಿನ್ನ ಸ್ವಾಧೀನಕ್ಕೆ ಎಂದಿಗೂ ಕೊಡಲಾರೆನು ” ಎಂದು ನುಡಿದು ಒರೆಯಿಂದ ಖಡ್ಗವನ್ನು ಹಿಡಿದನು ಆಕೂಡಲೆ ಬೀರಬಲನು ತನ್ನ ಪ್ರಚ್ಛನ್ನ ವೇಪವನ್ನು ತೆಗೆದು ಚಲ್ಲಿ, ಎದುರಿಗೆ ನಿಂತುಕೊಂಡನು ಆಗ ಸರದಾರಖಾನನ ಕೈಕಾಲುಗಳು ತಣ್ಣಗಾದವು ನಾಲಿಗೆಯು ತೊದಲಿಸ ಹತ್ತಿತು ಆಗ ಬೀರ ಬಲನು " ಸರದಾರಖಾ ! ಈಗ ನೀನು ನನ್ನ ಸೆರೆಯಾಳಾದಿ ! ನನ್ನ ಸಂಗಡ ಸುಮ್ಮನೆ ಬಾ ! ಪ್ರಜೆಗಳ ಧನಮಾನಗಳನ್ನು ರಕ್ಷಿಸುವ ಕೆಲಸವನ್ನು ಬಿಟ್ಟುಕೊಟ್ಟು ಇಂಥ ಕುಕರ್ಮ ಪ್ರವೃತ್ತನಾಗುವಿಯಾ? ಧಿಕ್ಕಾರ ! ಧಿಕ್ಕಾರ" ಎಂದನು ಆಗ ಸರದಾರಖಾನನು ಏನೊಂದು ಪ್ರತ್ಯುತ್ತರವನ್ನು ಕೊಡದೆ ಬೀರಬಲನ ಬೆನ್ನು ಹತ್ತಿದನು ಬೀರಬಲನು ಆ ಕುಮಾರಿಕೆಯನ್ನು ಕುರಿತು - ನೀನೂ ನನ್ನೊಡನೆ ಬಾ ! ನಾಳೆ ಪ್ರಾತಃಕಾಲದಲ್ಲಿ ನಿನ್ನ ಪಿತನನ್ನು ಕರೆಯಿಸಿ, ಯಾವತ್ತೂ ಸಮಾಚಾರವನ್ನು ತಿಳುಹಿ ನಿನ್ನನ್ನು ಅವನ ಸ್ವಾಧೀನ ಪಡಿಸುತ್ತೇನೆ ” ಎಂದು ಹೇಳಲು ಆ ಕುಮಾರಿಕೆಯು ಪ್ರಸನ್ನ ಹೃದಯದಿಂದ ಬೀರಬಲನೊಡನೆ ಸಾಗಿದಳು, ಅವರೀರ್ವರನ್ನೂ ಕರೆದು ಕೊಂಡು ಮನೆಗೆ ಬಂದು ಆ ಸರದಾರನನ್ನು ಅಂರ್ತಗೃಹದಲ್ಲಿ ಬಂದಿಯಾಗಿಟ್ಟು ಆ ಕುಮಾರಿಕೆಯನ್ನು ತನ್ನ ಪತ್ನಿಯ ವಶಕ್ಕೆ ಕೊಟ್ಟು ನಿದ್ರಾವಶನಾದನು ಮರುದಿವಸ ಪ್ರಾತಃಕಾಲದಲ್ಲಿ ಎದ್ದು ಆ ಸರದಾರಖನನ್ನು ಕರೆದುಕೊಂಡು ಬಾದಶಹನ ಬಳಿಗೆ ಬಂದನು ಅಮ್ಯಾನ ಮುಖದಿಂದ ಬೀರಬಲನ ಹಿಂದೆ ಔತುಕೊಂಡು ನಿಂತಿರುವ ಸರದಾರಖಾನನನ್ನು ಕಂಡು ಬಾದಶಹನಿಗೂ ಅ ಸಭಾಸದರಿಗೂ ಪರಮಾಶ್ಚರ್ಯವಾಯಿತು ಬಾದಶಹನು ಈ ವಿಷೆಯವೇನೆಂದು ಪ್ರಸ್ತಾಪಿಸಲು, ಬೀರಬಲನು ಆದ್ಯೋಪಾಂತ ವೃತ್ತಾಂತವನೆಲ್ಲ ಕಥನ ಮಾಡಿದನು ಅದನ್ನು ಕೇಳಿ ಬಾದಶಹನಿಗೆ ಮಿತಿಮೀರಿ ಕೋಪವುಬಂ ತು ಆಗ ಬಾದಶಹನು ಆ ಸರದಾರನನ್ನು ಕುರಿತು. ಎಲೈ ! ಮೋಸಗಾರನಾದ ಸರದಾರಖಾನನೇ ! ನಾನು ನಿನ್ನ ಯೋಗ್ಯತೆಯನ್ನು ಮೀರಿದ ಪದವಿಯನ್ನಿತ್ತು ಸನ್ಮಾನಿಸಿದ್ದದ್ದಕ್ಕೆ, ಈಪರಿಯಾಗಿ ಪ್ರತಿಫಲವನ್ನಿತ್ತಿಯಾ? ಧಿಕ್ಕಾರವಿರಲಿ, ನಿನ್ನ ಜನ್ಮಕ್ಕೆ ನೀನು ಇನ್ನು ಮುಂದೆ ನನಗೆ ಮುಖವನ್ನು ತೋರಿಸಬೇಡ ಬೀರಬಲ್ಲ ! ಇವನನ್ನು ಬಲವಾದ ಸಂಕೋಲೆಗಳಿಂದ ಬಿಗಿದು. ಕಠಿಣವಾದ ಕಾರಾಗೃಹದಲ್ಲಿರಿಸು” ಎಂದು ಅಪ್ಪಣೆ ಮಾಡಿದನು. ಕೂಡಲೆ ಬೀರಬಲನು ಬಾದಶಹನ ಅಪ್ಪಣೆಯಮೇರೆಗೆ ಸರದಾರಖಾನನ್ನು ಕಾರಾಗೃಹಕ್ಕೆ ಕಳಿಸಿಕೊಟ್ಟನು.
ಈ ಪ್ರಕಾರವನ್ನು ನೋಡಿ ಮುಸಲ್ಮಾನ ಸರದಾರರೆಲ್ಲರಿಗೂ ಬೀರಬಲನ ಮೇಲೆ ಅತ್ಯಂತವಾದ ಕೋಪವುಂಟಾಯಿತು. ಆದರೆ ಅವರಲ್ಲಿ ಏನು ಸಾಮರ್ಥ್ಯವಿತ್ತು ಬಾದಶಹನ ಒಲುಮೆಯು ಬೀರಬಲನ ಮೇಲೆ ಸಂಪೂರ್ಣವಿತ್ತು ಬೀರಬಲನನ್ನು ಹ್ಯಾಗಾದರೂ ಮಾಡಿ, ಕಿತ್ತುಹಾಕಬೇಕೆಂಬ ಬಗ್ಗೆ ಒಳಸಂಚನ್ನು ಮಾಡಹತ್ತಿದರು ಅನೇಕರು ಅನೇಕ ಉಪಾಯಗಳನ್ನು ಹುಡುಕಿ ತೆಗೆದರು ಒಂದೂ ಸಾಧ್ಯವಾಗುವಂತೆ ಕಂಡುಬರಲಿಲ್ಲ. ಕಡೆಗೆ ಬಾದಶಹನ ಆಯುಷ್ಯಕ್ಷೌರವನ್ನು ಮಾಡುತ್ತಿರುವ ಒಬ್ಬ ಕ್ಷೌರಕನನ್ನು ತಮ್ಮ ಒಳಸಂಚಿನಲ್ಲಿ ತೆಗೆದುಕೊಂಡು, ಅವನನ್ನು ಹುರಿದುಂಬಿಸಿದರು.
ಆ ನಾವಲಿಗನು ಒಂದು ದಿವಸ ಬಾದಶಹನ ಆಯುಷ್ಕರ್ಮವನ್ನು ಮಾಡುತ್ತಿರುವಾಗ, “ ಹುಜೂರ್ ; ನಿಮ್ಮ ಮಾತಾಪಿತೃಗಳು ಸ್ವರ್ಗವಾಸಿಗಳಾಗಿ ಎಷ್ಟೋ ವರುಷಗಳು ಆಗಿ ಹೋದವು. ಅವರ ಸಮಾಚಾರವೇನೆಂ ಬದನ್ನು ಕಿಂಚಿತ್ತಾದರೂ ತಿಳಿದುಕೊಂಡಿದ್ದೀರಾ ? ಅವರ ಪುಣ್ಯಬಲದಿಂದಲೇ ನಿಮಗೆ ಈ ರಾಜ್ಯವೂ, ಈ ಲಕ್ಷ್ಮಿಯೂ ಕೈವಶವಾಗಿಲ್ಲವೇ ! ಹೀಗಿದ್ದು ಅವರನ್ನೇ ಮರೆತು ಬಿಡುವದೆಂದರೆ ಎಂಥ ಅನ್ಯಾಯವಿದು ; ಹೀಗೆ ನೀವು ಅನ್ಯಾಯ ಮಾಡಹತ್ತಿದರೆ ಅವರು ಕೋಪಗೊಳ್ಳದಿರರೇ ? ಎಂದನು.

ಬಾದಶಹ-ನೀನು ಹೇಳಿದ್ದು ನಿಜವು, ಅವರ ಸಮಾಚಾರವನ್ನು ನಾನು ಹೇಗೆ ತಿಳಿದುಕೊಳ್ಳಲಿ ? ಯಾರನ್ನು ಕಳುಹಿಕೊಡಲಿ ? ಕದಾಚಿತ್ ಯಾವನಾದರೂ ಈ ಕೆಲಸವನ್ನು ಸ್ವೀಕರಿಸಿದ್ದಾದರೆ ಅವನಿಗೆ ಸ್ವರ್ಗದ ಮಾರ್ಗವು ಸಿಗುವಬಗೆ ಹೇಗೆ ?

ಕ್ಷೌರಕ- ನರವರ ; ಯಾರನ್ನು ಕಳುಹಿಸಿ ಕೊಡಬೇಕೆಂಬದನ್ನು ನೀವೇ ವಿಚಾರಮಾಡಿಕೊಂಡು ನೋಡಿರಿ ! ನೀವು ಯಾವನನ್ನು ಕಳುಹಿಸಿ ಕೊಡುವಿರೋ, ಅವನಿಗೆ ನಾನು ಸ್ವರ್ಗದ ಮಾರ್ಗವನ್ನು ಹೇಳಿ ಕೊಡುತ್ತೇನೆ.
ಬಾದಶಹ-ಆಮಾರ್ಗವು ಎಲ್ಲಿಯದೆ, ಎಂಬದನ್ನು ಹೇಳು
ಕ್ಷೌರಕ-ಯಾವ ಮನುಷ್ಯನನ್ನು ನೀವು ಕಳುಹಿಸಬೇಕೆಂದು ನಿಶ್ಚಯಿ ಸುವಿರೋ, ಅವನನ್ನು ಕರೆದುಕೊಂಡು ಹೋಗಿ "ಸ್ಮಶಾನದಲ್ಲಿ ಕೂ ಡಿಸಿ, ಅವನ ಸುತ್ತು ಮತ್ತು ಗೋಪುರಾಕಾರವಾಗಿ ಉರು ವಲಗಳ ನ್ನು ಒಟ್ಟಿ, ಅದಕ್ಕೆ ಬೆಂಕಿಯನ್ನು ತಗುಲಿಸಬೇಕು. ಅಂದರೆ ಅವನು ಧೂಮ ಮಾರ್ಗವಾಗಿ ಸ್ವರ್ಗವನ್ನು ನಿರಾಯಾಸವಾಗಿ ಸೇರುವನು.
ಬಾದಶಹ-ನೀನು ಹೇಳಿದ ಮಾರ್ಗವು ಒಳ್ಳೆಯದಾಗಿ ಕಾಣುತ್ತದೆ ಆದರೆ ಯಾರನ್ನು ಕಳುಹಿಸಬೇಕು ?
ಕ್ಷೌರಕ-ಖುದಾವಂದ! ನಿಮ್ಮ ಆಶ್ರಯದಲ್ಲಿ ಸಾವಿರಾರು ಜನಗಳು ಇರು ವರಲ್ಲಾ ! ಯಾವನೊಬ್ಬನನ್ನು ಕಳುಹಿಸಿಕೊಟ್ಟ ರಾಯಿತು. ಆದರೆ ಆ ಕೆಲಸವು ಸಾಮಾನ್ಯ ಮನುಷ್ಯ ನಿಂದ ಆಗ ತಕ್ಕಕ್ಕಿಲ್ಲ ಅವನು ಆ ಸಾಧಾರಣ ಚತುರನಾಗಿರಬೇಕು.
ಬಾದಶಹ - ನೀನೇಹೇಳು ; ಅಂಥ ಚತುರನಾದವನು ನನ್ನ ಅನು ಯಾಯಿ ಗಳಲ್ಲಿ ಯಾವನಿರುವನು ?
ಕ್ಷೌರಕ –(ತಡವರಿಸುತ್ತ) ಸರಕಾರ : ನನ್ನ ದೃಷ್ಟಿಯಿಂದ ನೋಡಿದರೆ, ಬೀ, ಬೀ, ಬೀ. ಬೀರಬಲನೇ ಯೋಗ್ಯನೆಂದು ಕಂಡು ಬರುತ್ತದೆ ಅವ ನ ಹೊರತು ಅನ್ಯರಾರೂ ಕಾಣುವದಿಲ್ಲ ಇದರ ಮೇಲೆ ತಮ್ಮ ಮ ನಸ್ಸು.
ಬಾದಶಹ- ಅಹುದು ; ಅವನು ಹೋದಮೇಲೆ ಈ ರಾಜ್ಯಕಾರಭಾರವನ್ನು ನಿರ್ವಹಿಸುವವರು ಯಾರು ?

ಕ್ಷೌರಕ- ಅವನ ಪದವಿಯಲ್ಲಿ ಬೇರೊಬ್ಬನನ್ನು ಸ್ವಲ್ಪ ದಿವಸಗಳ ಮಟ್ಟಿಗೆ ನಿಯಮಿಸಿಕೊಂಡ ರಾಯಿತು, ಬೇಕಾದರೆ ನಾನೇ ಆ ಕೆಲಸವನ್ನು ಮಾಡಲಿಕ್ಕೆ ಸಿದ್ಧನಿದ್ದೇನೆ.
ಬಾದಶಹ– ಛೀ ಹುಚ್ಚನೇ ; ನನ್ನ ಮಂತ್ರಿಯಾಗಬೇಕೆಂದು ಅಪೇಕ್ಷಿಸು ವಿಯಾ ? ಕ್ಷೌರಕ – ಮಹಾರಾಜ ; ಹಾಗಲ್ಲ ನಾನೇ ಹೋಗುತ್ತೇನೆಂದು ಹೇಳಿದೆ ಆದರೆ ನಾನು ಒಬ್ಬಕ್ಷುದ್ರ ಜೀವಿಯಾದ್ದರಿಂದ ತಮ್ಮ ಪಿತೃಗಳ ಬಳಿಗೆ ಹೋಗಲು, ಯೋಗ್ಯನಲ್ಲ ; ಅವರ ಪ್ರತಿಷ್ಠೆಗೆ ಸರಿಯಾಗಿರು ಮನು ಷ್ಯನು ಹೋಗಬೇಕಲ್ಲವೇ ! ನನ್ನನ್ನು ನೀವು ಕಳುಹಿಸಿಕೊಟ್ಟರೆ ಅವರ ಅವಮಾನಮಾಡಿದಂತಾಗಲಿಕ್ಕಿಲ್ಲವೇ ? ಬೀರಬಲನನ್ನು ಕಳುಹಿಸಿಕೊಟ್ಟರೆ ನಿಮ್ಮ ಪ್ರತಿಷ್ಠೆಗೂ ನಿಮ್ಮ ಹಿರಿಯರ ಮರ್ಯಾದೆಗೂ ಕುಂದು ಬರಲಿಕ್ಕಿಲ್ಲ ಇದರಮೇಲೆ ಖಾವಂದರವರ ಚಿತ್ತ.

ಬಾದಶಹ:- ಒಳ್ಳೇದು ಬೀರಬಲನನ್ನೇ ಕಳುಹಿಕೊಡುತ್ತೇನೆ. ಈ ಪ್ರಕಾರ ಮಾತುಕಥೆ ನಡೆಯುವದರೊಳಗೆ ಬಾದಶಹನ ಆಯುಷ್ಕರ್ಮವು ಸಂಪೂರ್ಣವಾಯಿತು ನಾವಲಿಗಳು ಹೊರಟು ಹೋದನು ಬಾದಶಹನು ಉಡಿಗೆ ತೊಡಿಗೆಗಳನ್ನು ಹಾಕಿಕೊಂಡು ಸಭಾಸ್ಥಾನಕ್ಕೆ ಬಂದನು ಮುತ್ಸದ್ದಿಗಳೆಲ್ಲರೂ ಮಿಲಿತರಾಗಿದ್ದರು. ಬಾದಶಹನು ಬಂದು ಸಿಂಹಾಸ ನದಮೇಲೆ ಕುಳಿತುಕೊಂಡು ಯಾವತ್ತು ವೃತ್ತಾಂತವನ್ನು ಹೇಳಿ ಆ ಮೇಲೆ ಬೀರಬಲನನ್ನು ಕುರಿತು, - ಬೀರಬಲ್ಲ : ನನ್ನ ಮಾತಾಪಿತೃಗಳು ಮರಣ ಹೊಂದಿ ಎರಡು ವರುಷಗಳು ಕಳೆದು ಹೋದವು ಅವರ ಕ್ಷೇಮಸಮಾಚಾರವೇ ತಿಳಿದಿಲ್ಲ ಆದರಿಂದ ನೀನು ಸ್ವತಃ ಹೋಗಿ ಅವರ ಕುಶಲ ವಾರ್ತೆಯನ್ನು ತಿಳಿದು ಕೊಂಡು ಬಾ! ಎಂದು ಅಪ್ಪಣೆ ಮಾಡಿದನು, ಆಗ ಬೀರಬಲನು ತನ್ನ ಮನಸ್ಸಿನಲ್ಲಿ - ಯಾವನೋ ಬಾದಶಹನ ಕಿವಿಯನ್ನು ಪುನಃ ತುಂಬಿದಂತೆ ಕಾಣುತ್ತದೆ, ಏನುಚಿಂತೆ ಇಲ್ಲ ; ” ಎಂದು ಯೋಚಿಸಿ ಬಾದಶಹನನ್ನು ಕುರಿತು. "ಪೃಥ್ವಿನಾಥ ? ನಾನು ಹೋಗಲಿಕ್ಕೆ ಸಿದ್ಧನಿದ್ದೇನೆ ಆದರೆ ಆ ಲೋಕಕ್ಕೆ ಹೋಗುವ ಮಾರ್ಗವು ನನಗೆ ವಿದಿತ ವಿಲ್ಲವಲ್ಲಾ ! ಆ ಮಾರ್ಗವನ್ನು ಗೊತ್ತು ಹಚ್ಚಿಸಿ ಕೊಟ್ಟರೆ ಪ್ರಸನ್ನ ಚಿತ್ತನಾಗಿ ಹೋಗಿಬರುತ್ತೇನೆ ಎಂದನು.

ಬಾದಶಹ :- ಸ್ವರ್ಗಕ್ಕೆ ಹೋಗಿಬರುವ ಮಾರ್ಗವು ಈ ಕ್ಷೌರಕನಿಗೆ ಚೆನ್ನಾಗಿ ತಿಳಿದಿದೆ, ಅವನು ನನ್ನ ಮುಂದೆ ತಿಳಿಸಿದ್ದಾನೆ ! ಅದು ಹ್ಯಾಗಂದರೆ, ಸ್ವರ್ಗಕ್ಕೆ ಹೋಗಲು, ಸಿದ್ಧನಾಗಿದ್ದ ಮನುಷ್ಯನನ್ನು ಸ್ಮಶಾನ ಭೂಮಿಯಲ್ಲಿ ಕುಳ್ಳಿರಿಸಿ, ಅವನ ಸುತ್ತು ಮುತ್ತು ಉರುವಲಗಳನ್ನು ಗೋಪುರಾಕೃತಿಯಾಗಿ ರಚನೆ ಮಾಡಬೇಕು. ಆ ಮೇಲೆ ಅದಕ್ಕೆ ಅಗ್ನಿ ಸ್ಪರ್ಶ ಮಾಡಬೇಕು ಅದರಿಂದ ಹೊರಡುವ ಧೂಮವು ಆಕಾಶಕ್ಕೆ ಮುಟ್ಟಲು ಅದರ ಸಂಗಡ ಮನುಷ್ಯನಿಗೆ ನಿರಾಯಾಸವಾಗಿ ಹೋಗಲಿಕ್ಕೆ ಬರುತ್ತದೆಂದು ಹೇಳಿದ್ದಾನೆ. ಆದ್ದರಿಂದ ನೀನು ಬೇಗನೇ ಸಿದ್ಧನಾಗು ?
ಈ ವೃತ್ತಾಂತವನ್ನು ಶ್ರವಣಮಾಡಿ, ಬೀರಬಲನು ತನ್ನ ಮನಸ್ಸಿನಲ್ಲಿ " ಈ ಕಪಟ ಪ್ರಂಬಧದ ಸೂತ್ರದಾರನು ಈ ಕ್ಷೌರಕನೇ ಆಗಿರುವನು. ಒಳ್ಳೇದು, ಏನಾದರೂ ಹಂಚಿಕೆಯನ್ನು ಮಾಡಿ, ಮುಯ್ಯಕ್ಕೆ ಮುಯ್ಯತೀ ರಿಸಿದರಾಯಿತು ” ಎಂದು ನಿಶ್ಚಯಿಸಿಕೊಂಡು " ಮಹಾರಾಜ ! ನಾನು ಹೋಗುವದಕ್ಕೆ ಸಿದ್ಧನಿದ್ದೇನೆ, ನಾನು ಅಲ್ಲಿಗೆ ಹೋದಮೇಲೆ ನಿಮ್ಮ ಪಿತನು ನನ್ನನ್ನು ಅಲ್ಲಿ ಕೆಲವುದಿವಸ ಇಟ್ಟುಕೊಂಡರೆ ಇಲ್ಲಿ ನನ್ನ ಸತಿಸುತರ ಪರಾ ಮರ್ಷಯನ್ನು ತೆಗೆದುಕೊಳ್ಳುವರಾರು ! ನಾನುಬರುವವರೆಗೆ ಅವರ ಉವಜೀ ವನಾರ್ಥವಾಗಿ ತಮ್ಮಿಂದ ಒಂದು ಲಕ್ಷರೂಪಾಯಿಗಳು ದೊರೆತರೇ ನಾನು ಸ್ವಸ್ಥಚಿತ್ತನಾಗಿ ಹೋಗಿಬರುತ್ತೇನೆ, ಈ ದಿವಸವೇ ತಮ್ಮಿಂದ ಹಣದೊರೆ ದರೆ ಯಾವತ್ತು ವ್ಯವಸ್ಥೆಯನ್ನು ಮಾಡಬೇಕಾದರೆ ಒಂದು ಮಾಸದವಧಿ ಯು ಬೇಕಾಗುವದು ಆಮೇಲೆ ಹೊರಡಲು ಸಿದ್ಧನಾಗುತ್ತೇನೆ” ಎಂದನು. ಬೀರಬಲನು ನಿವೇದಿಸಿದ ಸಂಗತಿಗೆ ಬಾದಶಹನು ಸಮ್ಮತಿಸಿದನು ಆಮೇ ಲೆ ಬೀರಬಲನು ತನ್ನ ಮನೆಗೆ ಬಂದು ಸ್ಮಶಾನದಿಂದ ತನ್ನ ಗೃಹದವರೆಗೆ ಒಂ ದು ವಿವರವನ್ನು ಗುಪ್ತವಾಗಿ ರಚಿಸುವದಕ್ಕೆ ಆರಂಭಮಾಡಿದನು. ಆ ಕಾರ್ಯ ವು ಒಂದು ತಿಂಗಳಲ್ಲಿ ಸಂಪೂರ್ಣ ವಾಯಿತು, ಆಮೇಲೆ ಬಾದಶಹನ ಬಳಿಗೆ ಬಂದು ಆ ಖಾವಂದ ? ನನ್ನ ಗೃಹಕೃತ್ಯದ ಯಾವತ್ತೂ ತೊಂದರೆಗಳಿಂದ ನಿವೃತ್ತನಾಗಿದ್ದೇನೆ ” ಎಂದು ಹೇಳಿದನು. ಬಾದಶಹನು ತನ್ನ ಅನುಯಾ ಯಿಗಳನ್ನೆಲ್ಲ ಒಡಗೊಂಡು ಸ್ಮಶಾನಕ್ಕೆ ಹೊರಟನು, ಅದನ್ನು ಕಂಡು ಆ ನಾವಲಿಗನಿಗೆ ಹಿಡಿಸಲಾರದಷ್ಟು ಆನಂದವಾಯಿತು ಬೀರಬಲನು ವಿವರವಿದ್ದ ಸ್ಥಳದ ಮೇಲ್ಬಾಗದಲ್ಲಿ ಕುಳಿತುಕೊಂಡನು ಗೋಪುರಾಕೃತಿಯಾಗಿ ಉರುವ ಲಗಳನ್ನು ರಚಿಸಲು ಉದ್ಯುಕ್ತರಾಗಿ ಅರ್ಧಮರ್ಧ ರಚನೆಮಾಡುವದರೊಳ ಗಾಗಿ ಆ ವಿವರದೊಳಗಿಂದ ಪಾರಾಗಿ ತನ್ನ ಗೃಹಕ್ಕೆ ಬಂದು ಪ್ರಚ್ಛನ್ನ ವೇಷ ಧಾರಿಯಾಗಿ ಸ್ಮಶಾನಕ್ಕೆ ಬಂದು ಅಲ್ಲಿಯ ವರ್ತಮಾನವನ್ನು ನೋಡಹತ್ತಿ ದನು. ಉರುವಲ ರಚನೆಯು ನಮಾಪ್ತವಾದ ಕೂಡಲೆ ಬೆಂಕಿಯನ್ನು ಹೋ ತ್ತಿಸಿದರು, ಬುದ್ಧಿವಂತರಾದ ಹಿಂದುಗಳು ಬಾದಶಹನ ವಿವೇಕತನಕ್ಕೆ ದೂ ಷಿಸಲಾರಂಭಿಸಿದರು, ಬೀರಬಲನು ಮುಸಲ್ಮಾನರು ನೆರೆದಲ್ಲಿಗೆ ಹೋಗಿ, ಬಹಳೇ ನೆಟ್ಟಗಾಯಿತು ನಮ್ಮ ಧರ್ಮದ ವೈರಿಯೊಬ್ಬನು ನಾಶವಾದನು ಆ ಮಂತ್ರಿಪದವಿಯು ನಮ್ಮ ಮುಸಲ್ಮಾನಜಾತಿಯ ಮನುಷ್ಯನಿಗೇ ದೊರೆದರೆ ನಮ್ಮ ಆನಂದಕ್ಕೆ ಪಾರಾವಾರವೇ ಇಲ್ಲ ಎಂದುಹೇಳಿ, ಕಿಂಚಿತಮುಂದಕ್ಕೆ ಸಾಗಿದನು. ಅಲ್ಲಿ ಮತ್ತೊಂದು ಜನಸಮೂಹವು ಕೂಡಿತ್ತು ಆ ಸಮೂಹದ ಮಧ್ಯದಲ್ಲಿ ಕ್ಷೌರಕನು ನಿಂತುಕೊಂಡು ನನ್ನ ಬುದ್ಧಿ ಚಾತುರ್ಯದಿoದಲೇ ಬೀ ರಬಲನು ಇಹಲೋಕವನ್ನು ಬಿಟ್ಟು ತೆರಳಬೇಕಾಯಿತು, ಅಮೀರಖಾನ ಸಾಹೇಬರೇ ! ನನ್ನ ಕೆಲಸವನ್ನಂತೂ ನಾನು ಪೂರಯಿಸಿದೆನು ಇನ್ನು ತಮ್ಮ ಕಡೆಗೆ ಉಳಿಯಿತು ನನ್ನ ಪಾರಿತೋಷಕವನ್ನು ಕೊಟ್ಟು ನಿಮ್ಮ ವಚನ ದಿಂದ ಮುಕ್ತರಾಗಿರಿ ಆ ಅಪ್ರಬುದ್ಧಿಯ ಬೀರಬಲನು ಇಷ್ಟು ಹೊತ್ತಿಗೆ ಭಸ್ಮಿ ಭೂತವಾಗಿ ಹೋಗಿ ಬಿಟ್ಟಿರಬಹುದು ಎಂದು ಆತ್ಮಸ್ತುತಿಯನ್ನು ಮಾ ಡಿಕೊಳ್ಳಹತ್ತಿದನು. ಅದನ್ನು ಕೇಳಿ ಬೀರಬಲನು ಮನಸಿನೊಳಗೇ ಹಲ್ಲುಕ ಡಿಯುತ್ತ ಅಪ್ರಬುದ್ಧನೇ ! ಇನ್ನು ನಿನ್ನ ಸರತಿಯುಬಂತು ಜಾಗ್ರ ತೆಯಿಂದ ಇರು ಎಂದು ಮನಸ್ಸಿನಲ್ಲಿ ನುಡಿದು, ತನ್ನ ಮನೆಗೆ ಬಂದು ಗುಪ್ತವಾಗಿ ಇರ ಹತ್ತಿದನು. ಪ್ರತಿದಿವಸ ರಾತ್ರಿಯಲ್ಲಿ ಪ್ರಚ್ಛನ್ನ ವೇಷದಿಂದ ಸಂಚರಿಸಹತ್ತಿ ದನು, ಈಪ್ರಕಾರ ಷಣ್ಮಾಸಗಳು ಕಳೆದು ಹೋದಮೇಲೆ ಪ್ರಕಟನಾದನು ಆ ಆರುತಿಂಗಳಲ್ಲಿ ಆಯುಷ್ಕರ್ಮ ವನ್ನೇ ಮಾಡಿಸದೆ ಇದ್ದದರಿಂದ ಗಡ್ಡಮೀಸೆ ಗಳು ಬೆಳೆದು ಹೋದದ್ದರಿಂದ ಅವನ ಪರಿಚಯವು ಬೇಗನೆಹತ್ತದಂತೆ ಆಗಿ ತು, ಒಂದುದಿವಸ ಸಭೆಗೆ ಉಚಿತವಾದ ಉಡಿಗೆ ತೊಡಿಗೆಗಳನ್ನು ಧರಿಸಿ ಕೊಂಡು ಅರಿಮನೆಗೆ ಹೋಗಿ ಬಾದಶಹನ ಎದುರಿಗೆ ನಿಂತುಕೊಂಡನು ಬಾ ದಶಹನಿಗೂ ಅವನ ಪರಿಚಯವು ಹತ್ತದೆ ಹೋಯಿತು.
ಬೀರಬಲ-ಪ್ರಭುವರ ! ನಾನು ನಿಮ್ಮ ಅಮಾತ್ಯನಾದ ಬೀರಬಲನು ನಿಮ್ಮ ಮಾತಾಪಿತೃಗಳ ದರುಶನ ತೆಗೆದುಕೊಂಡು ಈ ದಿವಸ ಹಿಂದಿರುಗಿ ಬಂದಿದ್ದೇನೆ.
ಬಾದಶಹ —(ಅವನ ಧ್ವನಿಯಮೇಲಿಂದ ಗುರುತಿಸಿ) ಓಹೋ ! ಬೀರಬಲನು ಮರಳಿಬಂದನು, ಬೀರಬಲನೇ ! ನನ್ನ ಮಾತಾಪಿತೃಗಳು ಸುಖವಾ ಗಿರುವರೇ.
ಬೀರಬಲ-ಅವರು ಆ ಲೋಕದಲ್ಲಿ ಇಷ್ಟು ಸುಖಸಂಪತ್ತಿಗಳನ್ನು ಅನುಭ ವಿಸುತ್ತಿರುವರಲ್ಲಾ ! ಅದನ್ನು ಬಣ್ಣಿಸುವದು ನನ್ನಿಂದ ಅಸಾಧ್ಯವು ನಾನು ಅವರಿಗೆ ನಿಮ್ಮ ಕುಶಲವಾರ್ತೆಯನ್ನೆಲ್ಲ ತಿಳಿಸಿದೆನು, ಅವರು ಬಹಳ ಸಂತೋಷಪಟ್ಟರು, ನಾನು ನಿಮ್ಮ ಅಮಾತ್ಯನಿರುವೆನೆಂಬ ಸಂಗತಿಯು ಅವರಿಗೆ ತಿಳಿದಕೂಡಲೆ ನನ್ನನ್ನೂ ಬಹುವರಿಯಾಗಿ ಸ ತ್ಕರಿಸಿದರು ಅವರ ವೈಭವವು ದೇವೇಂದ್ರನಿಗಿಂತಲೂ ಅಧಿಕವಾಗಿದೆ ಇಂದ್ರನಂತೆ ಸ್ವತಂತ್ರವಾಗಿ ರಾಜ್ಯಭಾರ ಮಾಡುತ್ತಾರೆ, ಇಷ್ಟೆಲ್ಲ ಸುಖಗಳಿದ್ದರೂ ಸಹ ಅಲ್ಲಿ ಒಂದುಕೊರತೆಯು ಅದೆ; ಅದು ಯಾವ ದೆಂದರೆ ಅಲ್ಲಿ ಚತುರನಾದ ನಾವಲಿಗನೊಬ್ಬನು ಇಲ್ಲ ಈ ಕಾರಣದಿಂ ದ ಅವರ ಗಡ್ಡಮೀಸೆಯ ಕೂದಲುಗಳು ಭೂಮಿಯನ್ನು ಸ್ಪರ್ಶಮಾ ಡಹತ್ತಿವೆ. ಆರೇ ತಿಂಗಳಲ್ಲಿ ನನ್ನ ಗಡ್ಡಮೀಸೆಗಳು ಎಷ್ಟು ಬೆಳೆದಿರು ವವು ನೋಡಿದಿರಾ ! ನಾನು ಅಲ್ಲಿಂದ ಹೊರಟುಬರುವ ಕಾಲದಲ್ಲಿ ಅವ ರು ಒಳ್ಳೆ ನಮ್ರತೆಯಿಂದ ಒಬ್ಬ ನಾವಲಿಗನನ್ನು ಹ್ಯಾಗಾದರೂ ಮಾಡಿ ಕಳುಹಿಸು; ಎಂದು ನಮ್ರತೆಯಿಂದ ನನಗೆ ವಿಜ್ಞಾಪನೆಮಾ ಡಿಕೊಂಡಿದ್ದಾರೆ, ನಾನಂತೂ ನಿಜಸಂಗತಿಯನ್ನು ಸನ್ನಿಧಿಯಲ್ಲಿ ಅರಿ ಕೆಮಾಡಿಕೊಂಡಿದ್ದೇನೆ, ಇದರಮೇಲೆ ತಮ್ಮ ಚಿತ್ತಕ್ಕೆ ಬಂದಹಾಗೆ ಮಾಡಬೇಕು.

ಬಾದಶಹ-ನೀನು ಹೇಳಿದ್ದೆಲ್ಲಾ ಸತ್ಯವು ನಾನು ಅಲ್ಲಿಗೆ ಯಾರನ್ನು ಕಳು ಹಿಸಲಿ !

ಬೀರಬಲ-ಪೃಥ್ವಿನಾಥ ! ನಿಮ್ಮ ಈ ನಾವಲಿಗನು ತನ್ನ ಕಸವಿನಲ್ಲಿ ಒಳ್ಳೇ ಪ್ರಶಂಸೆಯನ್ನು ಪಡೆದಿದ್ದಾನೆ, ಅವನನ್ನೇ ಕಳುಹಿಸಿಕೊಟ್ಟರೆ ನೆಟ್ಟ ಗಾಗುವದು.
ಆ ಕೂಡಲೇ ಬಾದಶಹನು ನಾವಲಿಗನನ್ನು ಕರೆಯಿಸಿ ಸಮಗ್ರ ವೃತ್ತಾಂ ತವನ್ನು ಕಥನಮಾಡಿದನು. ಬೀರಬಲನು ಮರಳಿ ಬಂದದ್ದನ್ನು ಕಂಡು, ಆ ನಾವಲಿಗನಿಗೆ ಅತ್ಯಾಶ್ಚರ್ಯವಾಯಿತು ಇನ್ನು ತನ್ನ ಸರತಿಯು ಬಂದಿತೆಂದು ತಿಳಿದುಬಿಟ್ಟನು. ಆಗ ಬೀರಬಲನಂತೆ ಒಂದುಮಾಸದ ಅವಧಿಯನ್ನು ಪಡೆ ದುಕೊಂಡು ಎಲ್ಲಿಗಾದರೂ ಹೊರಟು ಹೋಗಬೇಕೆಂದು ಯೋಚಿಸಿದನು. ಮತ್ತು ಅದರಂತೆ ಬಿನ್ನ ಹಮಾಡಿಕೊಂಡನು. ಅದಕ್ಕೆ ಬಾದಶಹನು “ ನೀನು ಹೇಳುವದೆಲ್ಲಾ ನಿಜವು; ಆದರೆ ಅಲ್ಲಿ ಅವರು ಆಯುಷ್ಕರ್ಮವಿಲ್ಲದೆ ಬಹಳೇ ಪೇಚಾಡಹತ್ತಿದ್ದಾರಂತೆ ! ನೀನು ಬರುವವರೆಗೆ ನಿನ್ನ ಕುಟುಂಬ ಪೋಷಣೆಯ ಭಾರವನ್ನು ನಾನು ಸ್ವೀಕರಿಸುತ್ತೇನೆ ನೀನು ಬೇಗನೇ ಹೊರಡುವ ಸಿದ್ಧತೆಯನ್ನು ಮಾಡು” ಎಂದು ಅಪ್ಪಣೆಮಾಡಿದನು. ಆಗ ನಾವಲಿಗನು ತನ್ನ ಮನಸ್ಸಿನಲ್ಲಿ, ಎಂಟು ದಿವಸಗಳ ಅವಧಿಯನ್ನು ಕೊಟ್ಟರೆಸಾಕು ಹ್ಯಾಗಾದ ರೂ ಮಾಡಿ ಪಾರಾಗಿ ಹೋಗುತ್ತೇನೆ ಎಂದು ಯೋಚಿಸಿ, ಬಹುಪರಿಯಿಂದ ಪ್ರಾರ್ಥನೆಮಾಡಿಕೊಂಡು ಎಂಟು ದಿವಸಗಳ ಅವಧಿಯನ್ನು ಪಡೆದುಕೊಂಡನು, ಬಾದಶಹನಿಗೆ ಸಲಾಮುಮಾಡಿ ಹೊರಟುಹೋದನು; ಆದರೆ ಬೀರಬಲನಿಗೆ ಅವನು ಮನಸ್ಸಿನಲ್ಲಿ ಯೋಚಿಸಿಕೊಂಡಿದ್ದ ಕಪಟ ಪ್ರಬಂಧವೆಲ್ಲ ಅವನ ಮುಖಲಕ್ಷಣದ ಮೇಲಿಂದಲೇ ವಿದಿತವಾಯಿತು, ಆ ನಾವಲಿಗನ ಮೇಲೆ ಒಬ್ಬ ಚಾಣಾಕ್ಷನಾದ ಗೂಢಚಾರನನ್ನು ನಿಯಮಿಸಿ ಬಿಟ್ಟನು, ಅವನು ಆ ನಾವಲಿಗನ ಬೆನ್ನ ಹಿಂದಿನಿಂದಲೇ ಹೋಗಿ ಅವನ ಮನೆಯಮುಂದೆ ಕುಳಿತು ಬಿಟ್ಟನು. ಆ ನಾವಲಿಗನು ಮನೆಗೆ ಹೋಗಿ ತನ್ನ ಆಪ್ತೇಷ್ಟರ ಮುಂದೆ ಯಾ ವತ್ತು ವೃತ್ತಾಂತವನ್ನು ಕಥನಮಾಡಿ ಪಲಾಯನಮಾಡಬೇಕೆಂಬ ತನ್ನ ಮ ನಸಿನ ಬಯಕೆಯನ್ನೂ ತಿಳಿಸಹತ್ತಿದನು. ಅಷ್ಟರಲ್ಲಿ ಆ ನಾವಲಿಗನ ಮ ಗನೊಬ್ಬನು ಹೊರಗಿನಿಂದ ಬಂದು, ಪಿತನೆ ! ನಮ್ಮ ಬಾಗಿಲಮುಂದೆ ಒಬ್ಬ ಕರ್ಮ ಚಾರಿಯು ಕುಳಿತುಕೊಂಡಿದ್ದಾನೆ ಎಂದು ಹೇಳಿದನು, ಈ ಮಾತು ಕಿ ವಿಗೆ ಬಿದ್ದ ಕೂಡಲೇ ಅವನ ಎದೆಯೊಡೆದು ನೀರಾಯಿತು. ಕೆಟ್ಟೆನು ಆ ಕರ್ಮ ಚಾರಿಯನ್ನು ಬೀರಬಲನೇ ಕಳುಹಿಸಿಕೊಟ್ಟಿದ್ದಾನೆ, ಇನ್ನು ಮಾತ್ರ ನನ್ನ ಜೀವವು ಉಳಿಯುವದಿಲ್ಲ ಎಂದು ಗಟ್ಟಿಯಾಗಿ ಕೂಗಿಬಿಟ್ಟನು. ಆಗ ಅವನ ಸ್ತ್ರೀಯು ಅಂಜಬೇಡಿರಿ, ಬೀರಬಲನುಹೋಗಿ ತಿರುಗಿಬರಲಿಲ್ಲವೇ, ಅದರಂ ತೇ ನೀವಾದರೂ ಬಂದೇಬರುತ್ತೀರಿ, ಧೈರ್ಯ ಹಿಡಿಯಿರಿ; ಎಂದು ಹೇಳಿದಳು, ಅದಕ್ಕೆ ನಾವಲಿಗನು ಆವನಮೇಲೆ ಜಗನ್ನಿಯಂತನ ಕೃಪಾ ಛತ್ರವದೆ ಅದ ರಿಂದಲೇ ಅವನು ಮರಳಿಬಂದನು, ನಾನು ನಿಶ್ಚಯವಾಗಿ ಮೃತ್ಯುವಿನಬಾ ಯಿಗೆ ತುತ್ತಾದೆನು, “ ಮಾಡಿದ್ದು ಉಣ್ಣೋ ಮಹಾರಾಯಾ,, ಎಂಬ ಸಾ ಮತಿಯಂತೆ ನನಗೆ ಆಮಾತು ನಿದರ್ಶನಕ್ಕೆ ಬಂತು. ನಾನುತೋಡಿದ ತಗ್ಗಿ ನಲ್ಲಿ ನಾನೇಬಿದ್ದೆನು ಉಪಾಯವಿಲ್ಲ ಎಂದು ಹಳಹಳಸಹತ್ತಿದನು, ಎಂಟು ದಿವಸಗಳ ಅವಧಿಯು ಪೂರ್ಣವಾಯಿತು ಬಾದಶಹನ ಕಡೆಯಿಂದ ಒಬ್ಬ ಕರ್ಮ ಚಾರಿಯು ಕರೆಯಲಿಕ್ಕೆ ಬಂದನು, ನಾವಲಿಗನು ತನ್ನ ಸಾಮಗ್ರಿಗಳನ್ನೆಲ್ಲಾ ತೆಗೆದುಕೊಂಡು ಬಾದಶಹನ ಎದುರಿಗೆ ಬಂದು ನಿಂತುಕೊಂಡನು ಬಾದಶ ಹ ನು ಆ ಕೂಡಲೆ ಬಿರಬಲನಿಗೆ ಅಪ್ಪಣೆಮಾಡಲು, ಅವನು ನಾವಲಿಗನನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಅವನನ್ನು ಕುಳ್ಳಿರಿಸಿ ಅವನಸುತ್ತಲೂ ಉರುವಲಗಳಿಂದ ಚಿತೆಯನ್ನು ರಚನೆಮಾಡಿಸಿ ಅಗ್ನಿಯನ್ನು ಹಚ್ಚಿಸಿಬಿಟ್ಟ ನು, ನೋಡನೋಡುವದರೊಳಗೆ ನಾವಲಿಗನ ದೇಹವು ಭಭೂತವಾಗಿ ಹೋಗಿಬಿಟ್ಟಿತು. ಈ ಪ್ರಕಾರ ಬೀರಬಲನು ತನ್ನ ಚಾತುರ್ಯದಿಂದಲೇ ತನ್ನ ಕತೃವ ನ್ನು ನಿರ್ನಾಮಮಾಡಿ ಸುಖದಿಂದ ಇರಹತ್ತಿದನು ಒಂದು ಕೈಯಿಂದ ಕರ್ಮ ಮಾಡಬೇಕು ಮತ್ತೊಂದು ಕೈಯಿಂದ ಅದರ ಫಲವನ್ನು ಭಕ್ಷಿಸಬೇಕು ಎಂ ಬ ನೀತಿ ವಚನದ ಕಡೆಗೆ ಎಳ್ಳಷ್ಟಾದರೂ ಲಕ್ಷ್ಯಕೊಡದೆ, ಎಷ್ಟೋಜನರು ತಾವೇ ಶ್ರೇಷ್ಟರೆಂದು ಹೆಮ್ಮೆ ಕೊಚ್ಚಿ ಕೊಳ್ಳುತ್ತಾರೆ ಇದು ಸರಿಯಲ್ಲ ಸೇರಿ ಗೆ ಸವ್ವಾಸೇರು ಇದ್ದೆ ಇರುವದು. ಮೂರ್ಖನೊಡನೆ ಕೆಸವು ಉಂಟಾದರೆ ಏನು

೧೭೨.ಮಾಡಬೇಕು? ಸುಮ್ಮ ನಿರಬೇಕು.

ಅಕಬರ ಬೀರಬಲ್ಲರ ನಡುವೆ ದಿವಸ ದಿವಸಕ್ಕೆ ಮೈತಿಯು ಹೆಚ್ಚು ತ್ತ ನಡೆದಿತ್ತು ಪರಸ್ಪರರಲ್ಲಿ ಯಾವಾಗಲೂ ವಿನೋದಗಳು ನಡೆದೇ ಇರುತ್ತಿ ದ್ದವು, ಹೀಗಿರಲು ಒಂದಾನೊಂದು ದಿವಸ ಮಕ್ಕಾಯಾತ್ರೆಗೆ ಹೋಗಿದ್ದ ಬಾದಶಹನ ಗುರುವು ದಿಲ್ಲಿಗೆ ಬಂದನು ಬಾದಶಹನು ಅವನ ಆದರ ಸತ್ಕಾರ ವನ್ನು ಮಾಡಿ, ಅಪ್ಪಣೆಕೊಡುವ ಸಮಯದಲ್ಲಿ ಗುರುವಿಗೆ ಅನೇಕ ವಿಧವಾ ದ ವಸ್ತ್ರಗಳನ್ನು ಧನ, ಕನಕ, ವಸ್ತು ವಾಹನಗಳನ್ನೂ ಇತ್ತು, ಸನ್ಮಾನ ಮಾಡಿದನು ಗುರುವು ಹೋಗಿ ಕೆಲವುದಿವಸಗಳಾದ ಮೇಲೆ ಬಾದಶಹನು ಬೀರಬಲ್ಲ ! ನಮ್ಮ ಗುರುಗಳು ಬಂದಿದ್ದರಲ್ಲಾ ! ಅದರಂತೆ ನಿನ್ನ ಗುರುಗ ಳು ಬಂದದ್ದನ್ನು ನಾನು ಕಂಡಿಯೇ ಇಲ್ಲವಲ್ಲಾ! ನಿನಗೆ ಗುರುಗಳು ಇರು ವರೇನು? ಇದ್ದರೆ ಅವರ ವಾಸಸ್ಥಳವು ಎಲ್ಲಿ ? ಎಂದು ಪ್ರಶ್ನೆ ಮಾಡಿದನು.
ಬೀರಬಲ - ಪೃಥ್ವಿನಾಥ ನನಗೆ ಅನೇಕಮಂದಿ ಗುರುಗಳಿರುವರು ಆದರೆ ಅವರ ವಾಸಸ್ಥಳಗಳು ಈ ನಮ್ಮ ದಿಲ್ಲಿಯಿಂದ ಬಹು ದೂರದಲ್ಲಿರುವ ವು ಅದರಿಂದ ಅವರು ನಿಮ್ಮ ದೃಷ್ಟಿಗೆ ಬಿದ್ದಿಲ್ಲ; ಇನ್ನು ಕಿಂಚಿತ್ ಕಾಲದೊಳಗಾಗಿ, ಒಬ್ಬ ಗುರುಗಳು ಬರತಕ್ಕವ ದಿದ್ದಾರೆಂದು ಕೇಳಿ ದ್ದೇನೆ ಅವರು ಈಗ ಸದ್ಯಕ್ಕೆ ಎಲ್ಲಿರುವರೋ ವಿದಿತವಿಲ್ಲ; ಅವರು ಒ ಳ್ಳೇ ನಿಸ್ಪೃಹಿಗಳಾಗಿರುವರೆಂಬ ವಾರ್ತೆಯೂ ಇರುವದು ಬಡವನಾ ದ ನನ್ನ ಮನೆಗೆ ದಯಮಾಡಿಸುವರೋ ಇಲ್ಲವೋ, ಯಾರಿಗೆ ಗೊ ತ್ತು ! ಒಂದುವೇಳೆ ಬಂದರೆ, ತಮಗೆ ಅವರ ದರ್ಶನ ಮಾಡಿಸುತ್ತೇನೆ.
ಬಾದಶಹ-ಹೀಗಿದ್ದ ಮೇಲೆ ಅವರ ದರ್ಶನವನ್ನು ಅತ್ಯಗತ್ಯವಾಗಿ ತೆಗೆದು ಕೊಳ್ಳಬೇಕು. ಆದಷ್ಟು ತೀವ್ರವಾಗಿ ಅವರು ಇಲ್ಲಿಗೆ ಬರುವಂತೆ ಮಾಡು.
ಬೀರಬಲ-ನಿಮ್ಮ ಮನಸಿನಲ್ಲಿ ಅಷ್ಟು ಆತುರವಿದ್ದರೆ, ಶೋಧಮಾಡಿ ಕರೆಕ ಳುಹುತ್ತೇನೆ.
ಬಾದಶಹ— ನಿನ್ನಿಂದ ಸಾಧ್ಯವಾದಷ್ಟು ತ್ವರೆ ಮಾಡು, ಬಾದಶಹನ ಆಜ್ಞೆಯನ್ನು ಸಿರಸಾವಹಿಸಿ, ಬೀರಬಲನು ತನ್ನ ಗೃಹ ಕೈ ನಡೆದನು. ಮಾರ್ಗದಲ್ಲಿ ಒಬ್ಬ ಕಾಷ್ಟವಿಕ್ರಯಿಯು ಅವನಿಗೆ ಬೆಟ್ಟಿ ಯಾದನು. ಅವನ ತಲೆಯಮೇಲೆ ಕಾಷ್ಟ ಭಾರವಿತ್ತು ಯಾರೂ ತೆಗೆದು ಕೊಂಡಿಲ್ಲ ತಿರುಗಿ ತಿರುಗಿ ಬೇಸತ್ತು ಹೋಗಿದ್ದನು ಬೀರಬಲನು ಅವನ ಹತ್ತರಹೋಗಿ, ಅವನು ಹೇಳಿದಷ್ಟು ಬೆಲೆಯನ್ನು ಕೊಡುವದಕ್ಕೆ ಒಪ್ಪಿಕೊಂಡು, ಅವನನ್ನು ತನ್ನ ಮನೆಗೆ ಕರೆದುಕೊಂಡು ಬಂದನು ಆಮೇಲೆ ಅವನಿಗೆ ಮೂಲವನ್ನಿತ್ತು. ಎಲೈ ಕಾಷ್ವಾವಾಹಕನೇ! ನಿನ್ನ ಮುಖಚರ್ಯೆಯನ್ನು ನೋಡಿದರೆ ಪ್ರತಿಸಷ್ಠಿತ ಮಷ್ಯನಹಾಗೆ ಕಾಣಿಸುತ್ತಿ ಇರಲಿ ನಿನ್ನ ಕಡೆಯಿಂದ ನನ್ನದೊಂದು ಕಾರ್ಯವಾಗಬೇಕಾಗಿದೆ ನೀನು ಆ ಕಾರ್ಯವನ್ನು ನಿರ್ವಹಿನಿಕೊಟ್ಟರೆ ನಿನಗೆ ಐವತ್ತು ರೂಪಾಯಿಗಳನ್ನು ಕೊಡುವೆನು, ಎಂದನು ಆಗ ಕಾಷ್ಟವಿಕ್ರಯಿಯು ಮನಸ್ಸಿನಲ್ಲಿ ಯೋಚಿಸಿದ್ದೇನಂದರೆ, . ಇವನು ಈ ನಮ್ಮ ಪಟ್ಟಣದಲ್ಲಿ ಪ್ರತಿಷ್ಟಿತವಾದ ಅಮಾತ್ಯನಾಗಿದ್ದಾನೆ ಇವನು ಹೇಳಿದ ಮಾತನ್ನು ನಾನು ಕೇಳದಿದ್ದರೆ, ಕೋಪಗೊಂಡಾನು! ಇದು ಸರಿಯಲ್ಲ ಇದಲ್ಲದೆ ಐವತ್ತು ರೂಪಾಯಿಗಳನ್ನು ಕೊಡುತ್ತೇನೆಂದು ಹೇಳುತ್ತಾನೆ ಅಂದಮೇಲೆ ಇವನು ಹೇಳಿದ ಕಾರ್ಯವನ್ನು ನಿರ್ವಹಿಸಲಿಕ್ಕೆ ಆತಂಕವೇನು? ಎಂದು ನಿಶ್ಚಯಿಸಿಕೊಂಡು ಬೀರಬಲನನ್ನು ಕುರಿತು - ತಮ್ಮ ಅಪ್ಪಣೆಯ ಮೇರೆಗೆ ನಡೆದುಕೊಳ್ಳಲು ಸಿದ್ದನಿದ್ದೇನೆ, ಎಂದು ಹೇಳಿದನು ಆಗ ಬೀರಬಲನು - ಈಗ ನಾನು ಕೊಡುವ ಬಟ್ಟೆಗಳನ್ನು ಧಾರಣ ಮಾಡಿಕೊಂಡು ಹನುಮಂತ ದೇವರ ದೇವಾಲಯದಲ್ಲಿ ಹೋಗಿ ಕುಳಿ ತುಕೋ ಆಮೇಲೆ ಜಪಮಾಲೆಯನ್ನು ಹಸ್ತದಲ್ಲಿ ಧಾರಣ ಮಾಡಿಕೊಂಡು, ಧ್ಯಾನಸ್ಥನಂತೆ ಮೌನವಾಗಿ ಕುಳಿತುಕೊ ಯಾರು ಮಾತಾಡಿಸಿದ್ದರೂ ಮಾತಾಡಬೇಡ ಪ್ರತ್ಯಕ್ಷ ಬಾದಕಹನು ಬಂದು ಮಾತನಾಡಿಸಿದರೂ ಸಹ ಮಾತನಾಡಕೂಡದು ಅವನು ಏನಾದರೂ ಧನ ಕನಕಗಳನ್ನು ಕಾಣಿಕೆಯಾಗಿ ಸಮರ್ಪಿಸಿದರೂ ಕಣ್ಣೆತ್ತಿ ನೋಡಬಾರದು ನೀನು ಕೇವಲ ಧ್ಯಾನದಲ್ಲಿಯೇ ಮಗ್ನನಾಗಿರಬೇಕು ನಾನು ನಿನ್ನ ಕೃತ್ಯಗಳೆಲ್ಲವನ್ನೂ ನೋಡುತ್ತಿರುತ್ತೇನೆ ಅದರಲ್ಲಿ ಕಿಂಚಿತ್ ನ್ಯೂನಾಧಿಕ್ಯವು ಕಂಡು ಬಂದರೆ ನಿನ್ನ ತಲೆಯು ಉಳಿಯಲಾರದು ಎಂದು ಹೇಳಿ, ಅವನ ಸರ್ವಾಂಗಕ್ಕೆಲ್ಲ ವಿಭೂತಿಯನ್ನು ಬೊಳೆದು, ಕೌಪೀನವನ್ನು ಧಾರಣಮಾಡಿಸಿ, ಶಿರಸ್ಸಿನ ಮೇಲೆ ಕೃತ್ರಿಮ ಜಡೆಯನ್ನು ನಿರ್ಮಾಣಮಾಡಿ, ಒಂದು ಜಪಮಾಲೆಯನ್ನೂ, ಒಂದು ಮೃಗ ಚರ್ಮವನ್ನೂ ಕೊಟ್ಟು, ಶ್ರೀ ಮಾರುತಿಯ ದೇವಾಲಯದಲ್ಲಿ ಕುಳ್ಳಿರಿಸಿ, ಬಹ ಳ ಜಾಗ್ರತೆಯಿಂದ ವರ್ತನಮಾಡು! ಎಂದು ಸಾರಿ ಸಾರಿ ಹೇಳಿ ಬಾದಶಹನ ಬಳಿಗೆ ಬಂದನು. ಆಗ ಸಭೆಯಲ್ಲಿ ಸರದಾರರೂ, ಮಾನಕರಿಗಳೂ ಮಂಡಲೀಕರೂ, ಮೊದಲಾದವರು ಅನೇಕ ಜನರು ಕೂಡಿದ್ದರು ಬೀರಬಲನುಸ ಭಾಸ್ಥಾನವನ್ನು ಪ್ರವೇಶಿಸಿ - ಪೃಥ್ವಿನಾಥ! ನಮ್ಮ ಗುರುಗಳು ಈ ದಿನ ಸ ಪ್ರಾತಃಕಾಲದಲ್ಲಿ ಅಕಸ್ಮಾತ್ತಾಗಿ ಬಂದುಬಿಟ್ಟಿದ್ದಾರೆ ನನಗೆ ಅವರ ದ ರುಶನವಾಯಿತು ನಾನು ನಿಮ್ಮ ಸಂಗತಿಯನ್ನು ಅರುಹಲು, ಅವರು ಸಂ ತೋಷದಿಂದ ಒಪ್ಪಿಕೊಂಡಿದ್ದಾರೆ ಬೇಕಾದಾಗ ತಾವು ದರುಶನಕ್ಕೆ ಹೋಗ ಬಹುದು ಆದರೆ ನಿಮ್ಮ ಸಂಗಡ ನನಗೆ ಮಾತ್ರ ಬರಬೇಡವೆಂದು ಅಪ್ಪಣೆಮಾ ಆಜ್ನೋಲ್ಲಂಘನ ಡಿದ್ದಾರೆ ನಾನು ಅವರ ಆಜ್ನೋಲ್ಲಂಘನ ಮಾಡಿ ಒಂದುವೇಳೆ ನಿಮ್ಮೊಡನೆ ಬಂ ದರೆ ಶಾಪವನ್ನು ಕೊಟ್ಟಾರು ಎಂದು ನಿವೇದನ ಮಾಡಿದನು, ಅದಕ್ಕೆ ಬಾದಶಹನು - ಒಳ್ಳೇದು; ಹಾಗೇ ಆಗಲಿ ! ಅವರು ಎಲ್ಲಿ ವಾಸಮಾಡಿದ್ದಾ ರೆ ? ಎಂದು ಕೇಳಿದನು ಆಕೂಡಲೆ ಬೀರಬಲನು ಪ್ರತ್ಯುತ್ತರವಾಗಿ - ಗುರು ಗಳು ನನ್ನ ಗೃಹದಿಂದ ಕಿಂಚಿತ್ ಅಂತರದಮೇಲೆ ಇರುವ ಮಾರುತಿಯ ದೇ ವಾಲಯದಲ್ಲಿ ಇಳಿದು ಕೊಂಡಿದ್ದಾರೆ ಬೇಕಾದರೆ ತಾವು ಹೋಗಿ ದರುಶನ ತೆ ಗೆದುಕೊಂಡು ಬರಬೇಕು. ಎಂದು ವಿಜ್ಞಾಪನೆ ಮಾಡಿಕೊಂಡನು.
ಆ ಮೇಲೆ ಬಾದಶಹನು ತನ್ನ ಸಂಗಡ ಅನೇಕಜನ ಪತ್ರಿತ ಸರ ದಾರರನ್ನು ಕರೆದುಕೊಂಡು, ಮಾರುತಿಯ ದೇವಾಲಯಕ್ಕೆ ಹೋದನು. ಅಲ್ಲಿ ಭಸ್ಮೋದ್ದೂಳಿತ ಗಾತ್ರನಾದ ಒಬ್ಬ ಬೈರಾಗಿಯು ಕಣ್ಣು ಮುಚ್ಚಿ ಕೊಂಡು ಜಪಮಾತಿಯನ್ನು ತಿರುಗಿಸುತ್ತ ಧ್ಯಾನಸ್ಥನಾಗಿ ಕುಳಿತು ಕೊಂ ಡಿದ್ದನು. ಬಾದಶಹನು ತನ್ನ ಅನುಯಾಯಿಗಳೊಡನೆ ಪ್ರಣಾಮ ಮಾಡಿದ ನು. ಕಣ್ದೆರೆದು ನೋಡಲಿಲ್ಲ ಬಾದಶಹನು ಅವನ ಮುಂದೆ ಕುಳಿತುಕೊಂಡು ಸ್ತುತಿಸ ಹತ್ತಿದನು. ಆದರೂ ಮಾತನಾಡಲಿಲ್ಲ ಕಡೆಗೆ ಬಾದಶಹನು ಮ ಹಾರಾಜ ! ಗುರುವರ್ಯರೇ ತಾವು ವಾಸಮಾಡುತ್ತಿರುವ ಸ್ಥಳವ್ಯಾವದು ? ತಮ್ಮ ನಾಮಧೇಯವೇನು ! ಕೃಪೆಮಾಡಿ ತಿಳಿಸಿದರೆ ದಾಸನಮೇಲೆ ಕರು ಣಿಸಿದಂತಾಗುತ್ತದೆ. ಎಂದು ಬಿನ್ನಹ ಮಾಡಿಕೊಂಡನು. ಆದರೆ ಸ್ವಾಮಿ ಯು ತನ್ನ ಜಪಮಾಲೆಯನ್ನು ತಿರುಗಿಸುವದನ್ನು ಬಿಡಲಿಲ್ಲ, ಮುಂದೆ ಕಿಂಚಿ ತ್ ಹೊತ್ತಾದಮೇಲೆ ಬಾದಶಹನು ಪುನಃ “ ಮಹಾರಾಜ ! ನಾನು ಈಸ ಮಗ್ರ ಭರತ ಖಂಡದ ರಾಜಾಧಿರಾಜನಿದ್ದೇನೆ. ನನ್ನೊಡನೆ ಎರಡು ಶಬ್ದಗಳ ನಾದರೂ ಮಾತಾಡಿರಿ, ನಿಮ್ಮ ಮನೋಬಯಕೆಯನ್ನು ಪೂರ್ಣಮಾಡಲು ಸಮರ್ಥನಿದ್ದೇನೆ. ಎಂದು ಹೇಳಿದನು. ಸ್ವಾಮಿಯ ಮೌನವನ್ನು ಬಿಡಲಿಲ್ಲ ಆಮೇಲೆ ಬಾದಶಹನು ಒಂದು ಲಕ್ಷರೂಪಾಯಿಗಳ ರಾಸಿಯನ್ನು ಅವನ ಮುಂದೆ ಹಾಕಿಸಿ ಮಹಾರಾಜ ! ತಾವು ಮಾತಾಡದಿದ್ದರೂ ಚಿಂತೆ ಇಲ್ಲ ಈ ಒಂದು ಲಕ್ಷರೂಪಾಯಿಗಳನ್ನು ತಮ್ಮ ಪಾದಕ್ಕೆ ಸಮರ್ಪಿಸಿದ್ದೇನೆ. ಸ್ವೀಕ ರಿಸಿ ನನಗೆ ಶುಭಾಶೀರ್ವಾದವನ್ನು ಮಾಡಬೇಕು, ಎಂದನು. ಗುರುವು ಕಥೆ ರೆದು ಸಹನೋಡಲಿಲ್ಲ ಇಷ್ಟೆಲ್ಲ ಆದಮೇಲೆ ಬಾದಶಹನಿಗೆ ಕೋಪವು ಉಂಟಾಯಿತು ಕೂಡಲೆ ಅಲ್ಲಿಂದ ಎದ್ದು, “ ಇವನು ಕೇವಲ ಮೂರ್ಖನಿದ್ದಂತೆ. ಕಂಡು ಬರುತ್ತದೆ ಇವನೊಡನೆ ತಲೆಯೊಡಕೊಂಡರೆ ಏನೂ ಪ್ರಯೋಜನವಿಲ್ಲ ” ಎಂದು ತಿಳಿದುಕೊಂಡು ಆ ರೂಪಾಯಿಗಳನ್ನು ಬೀರಬಲನ ಮನೆಗೆ ಕಳುಹಿಸಿ, ತನ್ನರಮನೆಗೆ ಹೊರಟು ಬಂದನು ಮರುದಿವಸ ರಾಜಕಾರ್ಯಗಳೆಲ್ಲ ನಿವೃತ್ತಿಯಾದಮೇಲೆ ಬೀರಬಲನೊಡನೆ ಏಕಾಂತದಲ್ಲಿ ಕುಳಿತುಕೊಂಡು ಮಾತು ಕಥೆಗಳನ್ನಾಡುತ್ತ ಬಾದಶಹನು ಬೀರಬಲ್ಲನನ್ನು ಕುರಿತು- ಬೀರಬಲ್ಲ ! ಪ್ರಸಂಗವಶಾತ್ ಮೂರ್ಖನೊಡನೆ ಕೆಲಸವು ಉಂಟಾದರೆ ಯೇನು ಮಾಡಬೇಕು ? ಎಂದು ಪ್ರಶ್ನೆ ಮಾಡಿದನು. ಆಕ್ಷಣದಲ್ಲಿಯೇ ಬೀರಬಲನು ಸುಮ್ಮನಿರ ಬೇಕು, ಎಂದು ಉತ್ತರಕೊಟ್ಟನು. ಅದನ್ನು ಕೇಳಿ ಬಾದಶ ಹನಿಗೆ ಪರಮಾಶ್ಚರ್ಯವಾಯಿತು ತನ್ನ ಮನಸ್ಸಿನಲ್ಲಿ ತಾನೇ ಸುಮ್ಮನಿರ ಬೇಕು ಎಂದು ಉತ್ತರಕೊಟ್ಟನು. ಅದನ್ನು ಕೇಳಿ ಬಾದಶಹನಿಗೆ ಪರಮಾ ಶ್ಚರ್ಯವಾಯಿತು, ತನ್ನ ಮನಸ್ಸಿನಲ್ಲಿ ತಾನೆ - ನಾನು ಈ ಪ್ರಶ್ನೆಯನ್ನು ಮಾಡಿ, ಬೀರಬಲನೇ ನಿನ್ನ ಗುರುವು ಶುದ್ಧಮೂರ್ಖನಿರುವೆನೆಂದು ಹೇಳ ಬೇಕೆಂದು ಮಾಡಿದ್ದೆನು ಆದರೆ ಬೀರಬಲನು ನನ್ನನ್ನೆ ಮೂರ್ಖನನ್ನಾಗಿ ಮಾಡಿ ಬಿಟ್ಟನು ನಾನು ಆ ಗುರುವನ್ನು ಮಾತಾಡಿಸಬೇಕೆಂದು ಅತೀ ಸಾಹಸಪಟ್ಟೆನು. ಕಡೆಗೆ ದ್ರವ್ಯದಾಕೆಯನ್ನೂ ತೋರಿಸಿದನು. ಆದರೆ ಅವನು ಧನವನ್ನು ಮೃತ್ತಿಕಾ ಸಮಾನವೆಂದು ತಿಳಿದು ಲಕ್ಷ್ಯಕ್ಕೆ ತಂದುಕೊಳ್ಳಲಿಲ್ಲ ನನ್ನನ್ನೇ ಮೂರ್ಖನನ್ನಾಗಿ ಮಾಡಿಕುಳ್ಳಿರಿಸಿ ಬಿಟ್ಟನು. ಇನ್ನು ಮೇಲೆ ಎಂದಾದರೂ ಮಹಾತ್ಮರ ದರುಶನಕ್ಕೆ ಹೋದರೆ ನಮ್ರತೆಯಿಂದ ಆಚರಿಸು ವೆನು ಎಂದು ನಿಶ್ಚಯಿಸಿಕೊಂಡು ಬೀರಬಲನನ್ನು, ಗುರುವಿನ ಹತ್ತಿರ ಕ್ಷಮಾ ಯಾಚನೆಯನ್ನು ನನ್ನ ಸಲುವಾಗಿ ಕೇಳಿಕೊಂಡು ಬಾ ; ಎಂದು ಹೇಳಿ ಕಳುಹಿಸಿಕೊಟ್ಟನು. ಆ ಕೂಡಲೆ ಬೀರಬಲನು ಮಾರುತಿಯ ದೇವಾಲಯಕ್ಕೆ ಬಂದು ಅಂಧಕಾರ ವ್ಯಾಪ್ತವಾಗಿ, ಜನಸಮ್ಮರ್ದವು ಕಡಿಮೆಯಾಗುವ ತನಕ ಕುಳಿತುಕೊಂಡು ಆ ಮೇಲೆ ಗುರುವನ್ನು ಕರೆದುಕೊಂಡು ತನ್ನ ಗೃ ಹಕ್ಕೆ ಹೋಗಿ ಒಂದು ಕಾಲನ್ನೂ ಒಂದು ನೂರುರೂಪಾಯಿಗಳನ್ನೂ ಕೃತಿಮ ಗುರುವಿಗೆ ಕೊಟ್ಟು ಕಳುಹಿಸಿಕೊಟ್ಟನು ಈ ಸಂಗತಿಯನ್ನು ಎಂದೂ ಪ್ರಕಟಿಸಕೂಡದೆಂದು ಅಪ್ಪಣೆ ಮಾಡಿದನು ಆ ಕಾಷ್ಟವಿಕ್ರಯಿಯು ಅಷ್ಟು ರೂಪಾಯಿಗಳನ್ನು ಎಂದೂ ನೋಡಿದ್ದಿಲ್ಲ. ಅದರಿಂದ ಹರುಷಿತನಾಗಿ ಬೀರ

ಬಲನ ಪಾದಗಳಿಗೆ ನಮಸ್ಕರಿಸಿ ಹೊರಟು ಹೋದನು.

-(೧೭೩, ತಾನಸೇನ ಮತ್ತು ಬೀರಬಲರಪರೀಕ್ಷೆ)-

ದಿಲ್ಲಿಯಲ್ಲಿ ತಾನಸೇನನೆಂಬ ಒಬ್ಬ ಪ್ರಖ್ಯಾತನಾದ ಗಾಯನ ಪಂಡಿತನು ಇದ್ದನು. ಆ ಕಾಲದಲ್ಲಿ ಅವನನ್ನು ಎದುರಿಸುವವರು ಯಾರೂ ಇದ್ದಿಲ್ಲ ದೂರದೂರಿಂದ ಗಾಯಕರೂ ರಾಜರೂ ಶ್ರೀಮಂತರೂ ಮೊದಲಾದವರು ದಿಲ್ಲಿಗೆ ಬಂದು ತಾನಸೇನನ ಗಾಯನಾಮೃತವನ್ನು ಪಾನಮಾಡಿ ಸಂತುಷ್ಟ ರಾಗಿ ಹೋಗುತ್ತಿದ್ದರು. ಅವನು ಮುಸಲ್ಮಾನ ಧರ್ಮದವನಾದ್ದರಿಂದ ಮುಸಲ್ಮಾನರಲ್ಲೆಲ್ಲ ಅವನ ಪ್ರತಿಷ್ಟೆಯು ಬೆಳೆದು ಹೋಗಿತ್ತು ಮುಸಲ್ಮಾನ ಸರದಾರರೂ ಮುತ್ಸದ್ದಿಗಳೂ ಪ್ರತಿಯೊಂದು ಪ್ರಸಂಗದಲ್ಲಿ ಅವನ ಹೆಸ ರನ್ನೆ ಮುಂದಕ್ಕೆ ತರುತ್ತಿದ್ದನು ತಾನಸೇನನಿಗಿಂತ ಬೀರಬಲನ ಹೆಚ್ಚಳವು ಬಾದಶಹನ ಬಳಿಯಲ್ಲಿ ಅಧಿಕವಾಗಿರುವದನ್ನು ನೋಡಿ, ಮುಸಲ್ಮಾನರಿಗೆ ಸಹನವಾಗುತ್ತಿದ್ದಿಲ್ಲ. ಈತರದ ಸ್ಥಿತಿಯಿರಲು ಒಂದು ದಿವಸ ಯಾವದೋ ಒಂದು ಕಾರ್ಯಾಂತರದಿಂದ, ಮುಸಲ್ಮಾನರು, ತಾನಸೇನನನ್ನು ಬಹುಪರಿಯಾಗಿ, ಬಾದಶಹನ ಮುಂದೆ ಶ್ಲಾಘನೆ ಮಾಡಿದರು. ಅದು ಬಾದಶಹನಿಗೆ ಸಹನವಾಗಲಿಲ್ಲ ಕಡೆಗೆ ಅವರೆಲ್ಲರನ್ನು ಕುರಿತು ನೀನು ತಾನಸೇನನನ್ನು ಬಹುಪರಿಯಾಗಿ ವರ್ಣಿಸುವಿರಿ ಅವನು ತನ್ನ ವಿದ್ಯೆಯಲ್ಲಿ ಅದ್ವಿತೀಯ ಪಂಡಿತನಿರುವನು ಇದುನಿಜ, ಆದರೆ ಅವನಿಂದ ಬೀರಬಲನನ್ನು ಸರಿಗಟ್ಟುವು ದಸಾಧ್ಯವು, ಅವನು ಬೀರಬಲನ ಪ್ರಾಸಂಗಕ್ಕೆ ಸಹ ಹತ್ತಲಾರನು.
ಬಾದಶಹನ ಈ ವಾಕ್ಯವನ್ನು ಕೇಳಿ, ಆ ಜನರೆಲ್ಲರೂ ಆ ಕಾಲಕ್ಕೆ ಸುಮ್ಮನಾದರು. ಆಮೇಲೆ ಓಲಗವು ವಿಸರ್ಜನೆಯಾದ ಬಳಿಕ ಎಲ್ಲರೂ ಒಬ್ಬ ಸರದಾರನ ಗೃಹದಲ್ಲಿ ಏಕತ್ರರಾಗಿ ಆಸ್ಥಾನವನ್ನು ಬಹುರಮಣೀಯವಾಗಿ ತೋರುವಂತೆ ಸಿಂಗರಿಸಿ ಬಾದಶಹನ ಸಲುವಾಗಿ ಒಂದು ಉಚ್ಚಸ್ಥಾನವನ್ನು ಸಿದ್ಧ ಮಾಡಿ ಇಟ್ಟು ತಾನಸೇನನನ್ನು ಕರೆಯಿಸಿಕೊಂಡರು, ಅವನು ಬಂದಮೇಲೆ ಬಾದಶಹನನ್ನು ಕರೆಯಹೋದರು, ಬಾದಶಹನು ಆಸ್ಥಾನಕ್ಕೆ ಬರುವದರೊಳಗಾಗಿ ಅಂಧಕಾರವಾಗಿ ಹೋಯಿತು ಅವನು ಆ ಸಭಾಮಂದಿರವನ್ನು ಪ್ರವೇಶಿಸಲು ತಾನಸೇನನು ದೀಪರಾಗವನ್ನು ಮಾಡಹತ್ತಿದನು, ಆ ಕೂಡಲೆ ಅಲ್ಲಿದ್ದ ದೀಪಸ್ತಂಭಗಳಲ್ಲಿ ತಮ್ಮಷ್ಟಕ್ಕೆ ತಾವೇ ದೀಪಗಳುಹತ್ತಿ ಗೃಹವೆಲ್ಲ ಪ್ರಕಾಶಮಯವಾಯಿತು, ಉಷ್ಣಕಾಲವಿದ್ದದರಿಂದ ಎಲ್ಲರ ಮೈಮೇಲೆ ಬೆವರೊಡೆಯ ಹತ್ತಿತು ಜನರು ಉಪವಸ್ತ್ರಗಳಿಂದ ಗಾಳಿಯನ್ನು ಹಾಕಿಕೊಳ್ಳ ಹತ್ತಿದರು. ಅದನ್ನು ಕಂಡು ತಾನಸೇನನು " ಮಲ್ಲಾರ” ವೆಂಬ ರಾಗವನ್ನು ಮಾಡಿ ವೃಷ್ಟಿಯನ್ನುಂಟು ಮಾಡಿದನು ಈ ಅತ್ಯದ್ಭುತದ ಕೆಲ

ನಗಳನ್ನು ಬಾದಶಹನು ಆಶ್ಚರ್ಯಾನ್ವಿತನಾದನು. ಆ ಸುಸಮಯದಲ್ಲಿ ಮಮತಾಜುದ್ದೀನ ನೆಂಬ ಪ್ರತಿಷ್ಟಿತ ಸರದಾರನು ಬದ್ದಾಂಜಲಿಯುಕ್ತನಾಗಿ ಎದ್ದು ನಿಂತು ಜಹಾಂವನಾಯ ? ಬೀರಬಲನಿಗಿಂತಲೂ ತಾನಸೇನನು ಅಧಿಕ ವಿದ್ವತೆಯುಳ್ಳವನೆಂದು ತಮಗೆ ಈಗ ತಿಳಿದುಬಂದೇ ಅದೆ, ಅದರಿಂದ ಬೀರಬಲನ ಕೆಲಸವನ್ನು ಇವನಿಗೆ ಕೊಡುವಿರೆಂದು ನಾವೆಲ್ಲರೂ ನಂಬಿದ್ದೇವೆ ಎಂದನು. ಈ ಮಾತನ್ನು ಎಲ್ಲರೂ ಪುಷ್ಟಿಕರಿಸಿದರು, ಆಗ ಬಾದಶಹನು ತಾನಸೇನನು ಬೀರಬಲನಿಗಿಂತಲೂ ಹೆಚ್ಚುಯೋಗ್ಯತೆಯವನಿರುವನೆಂದು ನನ್ನ ಮನವರಿಕೆಯಾಗಿದೆ ಆದರೆ ಬೀರಬಲನ ಚಾತುರ್ಯವು ಅವನಿಗೆಬರಲಾ ರದು ಇದು ನಿಮ್ಮ ಮನಸ್ಸಿಗೆ ಸರಿದೋರದಿದ್ದರೆ ಕಿಂಚಿತ್ ದಿವಸಗಳಲ್ಲಿ ನಿಮಗೆ "ಪ್ರತ್ಯಕ್ಷಮಾಡಿ ತೋರಿಸುತ್ತೇನೆ” ಎಂದು ಹೇಳಿದನು, ಮುಂದೆ ನಾಲ್ಕಾರು ಮಾಸಗಳ ಅವಧಿಯನ್ನು ಬಿಟ್ಟು, ಬ್ರಹ್ಮದೇಶದ ರಾಜನಿಗೆ " ಈ ಪತ್ರ ವನ್ನು ತೆಗೆದುಕೊಂಡು ಬಂದವರೀರ್ವರಿಗೂ ಕ್ಷಣಸಹ ವಿಲಂಬಮಾಡದೆ ದೇಹಾಂತ ಶೀಕ್ಷೆಯನ್ನು ವಿಧಿಸಬೇಕು. ” ಎಂಬ ಆಶಯಗರ್ಭಿತವಾದ ಒಂದು ಲೇಖನವನ್ನು ಬರೆದು ಒಂದುಚೀಲದಲ್ಲಿ ಹಾಕಿ, ಮೇಲೆ ಅರಗಿನಿಂದ ರಾಜ ಮುದ್ರೆಯನ್ನು ಒತ್ತಿ ಬೀರಬಲನನ್ನೂ ತಾನಸೇನನನ್ನೂ ಕರೆದು "ಬ್ರಹ್ಮ ದೇಶದ ರಾಜನಿಂದ ಒಂದು ಅತ್ಯವಶ್ಯಕವಾದ ಕಾರ್ಯವಾಗಬೇಕಾಗಿದೆ ನಿಮ್ಮಿಬ್ಬರ ಹೊರತು ಅನ್ಯರಿಂದ ಅದು ಸಾಧ್ಯವಾಗುವಂತೆ ಇಲ್ಲ, ನೀವು ಬೇಗನೇ ಹೊರಡುವ ಸಿದ್ಧತೆಯನ್ನು ಮಾಡಿರಿ, ನಾನು ಒಂದು ಪತ್ರವನ್ನು ಕೊಡು ತ್ತೇನೆ ವಿಲಂಬಮಾಡಬೇಡಿರಿ” ಎಂದು ಅಪ್ಪಣೆಮಾಡಿ ತಾನು ಬರೆದಿಟ್ಟ ಪತ್ರ ವನ್ನು ಅವರವಶಕ್ಕೆ ಕೊಟ್ಟನು. ಆಗ ಅವರಿಬ್ಬರು ಒಳ್ಳೇದು ಎಂದು ಹೇಳಿ ಮನೆಗೆಬಂದರು, ಮನೆಗೆ ಬಂದಮೇಲೆ ಬೀರಬಲನು ತನ್ನ ಮನಸ್ಸಿನಲ್ಲಿ ಬ್ರಹ್ಮ ದೇಶದ ರಾಜನಬಳಿಯಲ್ಲಿ ಅತ್ಯವಶ್ಯಕವಾದ ಕೆಲಸವೇನಿದ್ದೀತು ಇದರಲ್ಲಿ ಏನೋ ಒಂದು ಮಹತ್ವದ ಕಾರ್ಯಭಾಗವಿರಬೇಕು. ಇಲ್ಲದಿದ್ದರೆ ಏನೋ ಒಂದು ಕಪಟ ಪ್ರಬಂಧವಿರಬೇಕು, ಇರಲಿ ಸಮಯವು ಬಂದೊದಗಿದಾಗ ನೋ ಡಿಕೊಂಡರೆ ತೀರಿತು ಎಂದು ನಿಶ್ಚಯಿಸಿ; ಪಯಣದ ಸನ್ನಾಹದಲ್ಲಿ ತೊಡಗಿ ದನು. ತಾನಸೇನನು ತನ್ನ ಮನದಲ್ಲಿ ಏನೋ ಒಂದು ಮಹತ್ವದರಾಜಕರಣ ಉಂಟಾದ್ದರಿಂದಲೇ ಬಾದಶಹನು ನಮ್ಮನ್ನು ಈ ಕೆಲಸಕ್ಕೆ ಕಳುಹುತ್ತಾನೆ ಈ ಕಾರಣದಿಂದಲಾದರೂ ದೇಶಸಂಚಾರದ ಸುಖವು ದೊರಕಿದಂತಾಯಿತು ಮತ್ತು ನನ್ನ ಗಾನವಿದ್ಯೆಯ ಬಲದಿಂದ ಆ ರಾಜನನ್ನು ಒಲಿಸಿಕೊಂಡು ಪಾರಿತೋಷಕವನ್ನು ಪಡೆಯಬಹುದು ” ಎಂದು ಯೋಚಿಸಿ, ಮನೆಗೆ ಬಂದು ಊಟ ಉಡಿಗೆಗಳನ್ನು ತೀರಿಸಿಕೊಂಡು ಶಯನ ಮಾಡಿದನು, ಮರು ದಿವಸ ಬೀರಬಲನ ಸೇವಕನೊಬ್ಬನು ತಾನಸೇನನ ಬಳಿಗೆ ಬಂದು “ ಅಮಾತ್ಯರವರು ಪ್ರಯಾಣದ ಸನ್ನಾಹಗಳನ್ನೆಲ್ಲ ಮಾಡಿಕೊಂಡು ತಮ್ಮ ಮಾರ್ಗವನ್ನೇ ಪ್ರತೀಕ್ಷಿಸುತ್ತ ಕುಳಿತುಕೊಂಡಿದ್ದಾರೆ ನಡೆಯಬೇಕು ” ಎಂದು ವಿಜ್ಞಾಪ ನೆಯನ್ನು ಮಾಡಿಕೊಂಡನು. ಕೂಡಲೆ ತಾನಸೇನನು ಬೀರಬಲನೆಡೆಗೆ ಬಂ ದನು. ಈರ್ವರೂ ವೇಗಶಾಲಿಗಳಾದ ಅಶ್ವಾರೋಹಣ ಮಾಡಿಕೊಂಡು, ಮಾರ್ಗವನ್ನು ಹಿಡಿದರು. ಪಯಣದ ಮೇಲೆ ಪಯಣ ಮಾಡುತ್ತ ಎಷ್ಟೊ ದಿವಸಗಳಾದಮೇಲೆ ಬ್ರಹ್ಮದೇಶದ ರಾಜಧಾನಿಯಸಾನ್ನಿಧ್ಯವನ್ನು ಸೇರಿದರು ಇವರು ರಾಜಧಾನಿಗೆ ತಲುಪಿದ ಕಾಲದಲ್ಲಿ ರಾತ್ರಿಯಾಗಿತ್ತು ನಗರದಮಹಾ ದ್ವಾರವು ಮುಚ್ಚಲ್ಪಟ್ಟಿತ್ತು, ಅಲ್ಲಿ ಅವರಿಗೆ ಯಾರ ಪರಿಚಯವೂ ಇದ್ದಿಲ್ಲ, ರಾತ್ರಿಯಾದರೋ ಗಾಡಾಂಧಕಾರ ಕೋಟಿಯ ಹೊರಗೆ ಜನಸಂಚಾರವಿಲ್ಲ ಹೀಗಾಗಿ ಅವರಿಗೆ ಆಶ್ರಯಕ್ಕೆ ನಿರ್ಭಯವಾದ ಸ್ಥಳವು ಸಿಕ್ಕದೇಹೋಯಿತು ಅವರಿಬ್ಬರೂ ಪಗಡಿಯಪ್ರಕಾರ ಜಾಗರೂಕರಾಗಿದ್ದು ರಾತ್ರಿಯನ್ನು ಕಳೆ ಯಬೇಕೆಂದು ಯೋಚಿಸಿದರು. ಅಷ್ಟರಲ್ಲಿ ಕೋಟೆಯ ರಕ್ಷಕನೊಬ್ಬನು ಇವರನ್ನು ಕಂಡು ನಿಮ್ಮ ಸ್ಥಿತಿಗತಿಯಮೇಲಿಂದ ನೋಡಿದರೆ ನೀವು ಪ್ರ ಯಾಣಸ್ಥರಂತೆ ತೋರುವಿರಿ, ಇಲ್ಲಿ ಸಿಂಹದಭಯವು ಬಹಳ ನನ್ನ ಕುಟೀರಕ್ಕೆ ಬಂದು ಇಳಿದುಕೊಳ್ಳಬೇಕು; ” ಎಂದು ವಿಜ್ಞಾಪನೆ ಮಾಡಿಕೊಂಡನು. ಬೀರಬಲನು ಹಿಂದೆಮುಂದೆ ನೋಡಹತ್ತಿದನು, ಆದರೆ ಅವನು ಅತ್ಯಾಗ್ರಹ ಮಾಡಹತ್ತಿದ್ದರಿಂದ ತಮ್ಮ ತಮ್ಮ ಕುದುರೆಗಳನ್ನು ಏರಿಕೊಂಡು ಅವನ ಬೆನ್ನ ಹಿಂದೆ ಹೊರಟರು ಅವನು ತನ್ನ ಮನೆಗೆ ಇವರನ್ನು ಕರೆದುಕೊಂಡು ಹೋಗಿ ಅಶ್ವಗಳನ್ನು ತನ್ನ ದನದಕೊಟ್ಟಿಗೆಯಲ್ಲಿ ಕಟ್ಟಿಸಿ ಪೃಥಕ್‌ ಪೃಥಕ್ ಸ್ಥಾನಗಳನ್ನು ಮಲಗಲಿಕ್ಕೆ ತೋರಿಸಿದನು, ಇಬ್ಬರೂ ನಿಶ್ಚಿಂತೆಯಿಂದ ರಾತ್ರಿಯನ್ನು ಕಳೆದರು. ಪ್ರಾತಃಕಾಲವಾಗುತ್ತಲೇ ಸ್ನಾನ ಉಪಹಾರಾದಿಗಳನ್ನು ತೀರಿಸಿಕೊಂಡು ರಾಜಧಾನಿಯನ್ನು ಪ್ರವೇಶಿಸಿದರು. ಆ ನಗರವು ಒಳ್ಳೇ ಅಚ್ಚುಕಟ್ಟಾಗಿದ್ದು, ಇಂದ್ರನ ಅಮರಾವತಿಯಂತೆ ಕಂಗೊಳಿಸು ತಿತ್ತು, ರಾಜನು ದಯಾಳುವಾಗಿದ್ದದರಿಂದ ಪ್ರಜೆಗಳೆಲ್ಲರೂ ಸುಖದಿಂದ ಕಾಲಹರಣ ಮಾಡುತ್ತಿದ್ದರು. ಇದನ್ನೆಲ್ಲಾ ಕಂಡು ಇವರಿಬ್ಬರೂ ಹರುಷಿ ತರಾಗಿ ಪಟ್ಟಣದ ಸೌಂದರ್ಯವನ್ನವಲೋಕಿಸುತ್ತಾ ರಾಜಪ್ರಾಸಾದದ ಹತ್ತಿರರ ಬಂದರು. ಆಗ ಒಬ್ಬ ಪ್ರತಿಹಾರಿಯು ಮುಂದೆಬಂದು ಇವರ ಹೆಸರನ್ನು ವಾಸ ಸ್ಥಳವನ್ನು ಇಲ್ಲಿಗೆ ಬಂದಿರುವ ಉದ್ದೇಕವೇನೆಂಬುದನ್ನು ತಿಳಿದುಕೊಂಡು ಮ್ಮರಸನಿಗೆ ತಿಳಿಸಿದನು ಆಮೇಲೆ ರಾಜಾಜ್ಞೆಯಿಂದ ಇವರನ್ನು ಕರೆದುತ ಕೊಂಡುಹೋಗಿ ರಾಜನಸಮ್ಮುಖದಲ್ಲಿ ನಿಲ್ಲಿಸಿದನು ಅವನು ಇವರ ಮುಖವ ನ್ನೀಕ್ಷಿಸಿ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿ ಆಗಮನದಕಾರಣವೇನೆಂದು ಪ್ರಶ್ನೆ ಮಾಡಿದನು ಬೀರಬಲನು ಬಾದಶಹನುಕೊಟ್ಟಿದ್ದ ಲೇಖನವನ್ನು ಮುಂ ದೆಯಿಟ್ಟನು. ರಾಜನು ಅದನ್ನು ಬಿಚ್ಚಿ ನೋಡಲು ಅದರಲ್ಲಿ ನನ್ನ ಸಭಾಸದ ರಲ್ಲಿ ಈರ್ವರೂ ತಮ್ಮ ಹತ್ತಿರ ನನ್ನ ಪತ್ರವನ್ನು ತೆಗೆದುಕೊಂಡು ಬಂದಿದ್ದಾರೆ ಅವರು ನನ್ನಲ್ಲಿ ಮಹಾಪರಾಧವನ್ನು ಮಾಡಿದ್ದಾರೆ ಅದರಿಂದ ಅವರಿಗೆ ದೇ ಹಾಂತ ಶೀಕ್ಷೆಯನ್ನೇ ಕೊಡಬೇಕಾಗಿರುವದು. ಇವರು ನನ್ನ ಪಟ್ಟಣದಲ್ಲಿ ಪ್ರತಿಷ್ಕೃತರಾಗಿರುವವರಿಂದ ಬಹಿರಂಗವಾಗಿ ಇವರಿಗೆ ದೇಹಾಂತಶೀಕ್ಷೆಯ ನ್ನು ನನ್ನ ರಾಜಧಾನಿಯಲ್ಲಿ ಕೊಟ್ಟರೆ, ಪ್ರಜೆಗಳಲ್ಲಿ ಅಸಂತೋಷ ವುತ್ಪನ್ನ ವಾಗುವಂತೆ ಆದೆ ಅದರಿಂದ ತಮ್ಮ ಬಳಿಯಲ್ಲಿ ಕಳುಹಿಕೊಟ್ಟಿದ್ದೇನೆ ನ ನ್ನ ಮಿತ್ರತ್ವದ ದೆಶೆಯಿಂದ ಈ ಕಾರ್ಯವನ್ನು ತಾವು ಅವಶ್ಯವಾಗಿ ನಡೆ ಯಿಸಬೇಕು. ” ಎಂಬ ಅಭಿಪ್ರಾಯವಿತ್ತು ಅದನ್ನು ಚನ್ನಾಗಿ ಮನನ ಮಾ ಡಿಕೊಂಡು ತನ್ನ ಅಮಾತ್ಯನ ಕೈಯಲ್ಲಿ ಇತ್ತನು ಅವನು ಆ ಪತ್ರಾಭಿ ಯವನ್ನು ನೋಡಿಕೊಂಡು ಆಶ್ಚರ್ಯಾನ್ವಿ ತನಾದನು ಆಗ ಆ ರಾಜನು “ ಏ ನು ವ್ಯವಸ್ಥೆಯನ್ನು ಮಾಡಬೇಕು? ” ಎಂದು ಕೇಳಿದನು ಚತುರನಾದ ಆ ಅಮಾತ್ಯನು ಮಹಾರಾಜ ! ಇದರಲ್ಲಿ ಏನೋ ಗೂಢವಿದ್ದಂತೆ ಕಾಣುತ್ತ ದೆ ಆದ್ದರಿಂದ ಇವರನ್ನು ಏಳು ದಿವಸಗಳಮಟ್ಟಿಗೆ ಕಾರಾಗೃಹದಲ್ಲಿಟ್ಟು ಆ ಮೇಲೆ ಏನು ಮಾಡತಕ್ಕದ್ದನ್ನು ಮಾಡಿದರಾಯಿತು. ” ಎಂದು ಹೇಳಿದನು ಆರಾಜನಿಗೂ ಇದು ಸರಿಯಾಗಿ ತೋರಿತು ಕೂಡಲೆ ಕರ್ಮಚಾರಿಗಳಿಂದಇ ವರ ಕೈಯಲ್ಲಿ ಸಂಕೋಲೆಗಳನ್ನು ಹಾಕಿಸಿ, ಕಾರಾಗೃಹಕ್ಕೆ ತೆಗೆದುಕೊಂ ಡುಹೋಗಿರಿ, ಎಂದು ಅಪ್ಪಣೆ ಮಾಡಿದನು ಇದನ್ನು ಕಂಡು ತಾನಸೇನನ ಬುದ್ಧಿಯು ಮಂಕಾಗಿ ಹೋಯಿತು ಈರ್ವರನ್ನೂ, ಒಂದು ಸೆರೆಮನೆಯಲ್ಲಿ ಇಟ್ಟುಬಿಟ್ಟರು ಕರ್ಮಚಾರಿಗಳು ಹೊರಟುಹೋದಮೇಲೆ ತಾನಸೇನನು ಮಿತ್ರಾ ! ಬೀರಬಲ್ಲ ! ಇದು ಏನಾಯಿತು? ನಾವು ಇಲ್ಲಿಗೆ ಬಂದು ಮೋಸ ಹೋದವು ಪ್ರಾಣದ ಮೇಲೆಯೇ ಬಂದಂತೆಕಾಣುತ್ತದೆ ಜೀವವು ಉಳಿಯು ವರ್ಹಾ ಯಾವದಾದರೊಂದು ಹಂಚಿಕೆಯನ್ನು ಮಾಡು ! ನಿನ್ನ ಬುದ್ಧಿ ಸಾಮರ್ಥ್ಯದಿಂದಲೇ ಪಾರಾಗಬೇಕೇ ಹೊರತು ಅನ್ಯಉಪಾಯವೇ ಇಲ್ಲ ನನ್ನ ಬುದ್ಧಿಯಂತೂ ಭ್ರಂಶವಾಗಿ ಹೋಗಿದೆ. ” "ಎಂದನು ಆಗ ಬೀರಬಲ ನು ತನ್ನ ಮನಸ್ಸಿನಲ್ಲಿ - "ಬಾದಶಹನು ನಮ್ಮಿಬ್ಬರ ಬುದ್ಧಿ ಚಾತುರ್ಯವ ನ್ನು ಪರೀಕ್ಷಿಸುವದಕ್ಕೋಸುಗವೇ, ಈ ಹಂಚಿಕೆಯನ್ನು ತೆಗೆದಂತೆ ಕಾಣು ತ್ತದೆ ” ಎಂದು ನಿಶ್ಚಯಿಸಿಕೊಂಡು, ಪ್ರಾಣದಾಶೆಯನ್ನು ತೊರದಿದ್ದ ತಾನಸೇನನನ್ನು ಕುರಿತು "ಪ್ರಿಯಮಿತ್ರಾ! ನಾವಿಬ್ಬರೂ ಜೀವದಿಂದ ಉಳಿದು ಕೊಳ್ಳಬೇಕಾದರೆ ಒಂದು ಹಂಚಿಕೆಯದೆ ಅದು ಯಾವದೆಂದರೇ ಯಾವ ಸಮಯದಲ್ಲಿ ನಮ್ಮನ್ನು ವಧಸ್ಥಳಕ್ಕೆ ಕರೆದುಕೊಂಡು ಹೋಗುವರೋ ಆಗ ಪರಸ್ಪರರು ನಾಮುಂದೆ, ನಾಮುಂದೆ, ಎಂದು ಬಡದಾಡ ಹತ್ತಬೇಕು, ಇದರಿಂದ ಏನಾದರೂ ಜೀವ ಉಳಿಯುವದೇ ಹೊರತು, ಅನ್ಯ ಉಪಾಯವಿಲ್ಲ, ಎಂದು ಹೇಳಿದನು. ಅಂತೂ ಇಂತೂ ಏಳು ದಿವಸಗಳು ಕಳೆದು ಹೋದವು. ಎಂಟನೇ ದಿವಸ ಪ್ರಾತಃಕಾಲದಲ್ಲಿ, ಕರ್ಮಚಾರಿಗಳು ಬಂದು, ಇವರಿಬ್ಬರನ್ನೂ ವಧಸ್ಥಾನಕ್ಕೆ ಕರೆದುಕೊಂಡು ಹೋದರು. ತಾನಸೇನನು ಬಹಿರಂಗದಲ್ಲಿ ಪ್ರಸನ್ನತೆಯನ್ನು ವ್ಯಕ್ತಪಡಿಸುತ್ತಿದ್ದರೂ ಸಹ ಅಂತರಂಗದಲ್ಲಿ ಸ್ವಸ್ಥತೆಯಿದ್ದಿಲ್ಲ ವಧಸ್ಥಾನದಲ್ಲಿ ಒಯ್ದು ನಿಲ್ಲಿಸಿದ ಕೂಡಲೆ ಬೀರಬಲನು ಮುಂದೆ ಬಂದು " ಪ್ರಥಮದಲ್ಲಿ ನನ್ನ ತಲೆಯನ್ನು ಹೊಡಿಯಿರಿ ! ” ಎಂದು ಹೇಳಿದನು. ಆ ಕೂಡಲೆ ತಾನಸೇನನು ಬೀರಬಲನನ್ನು ಹಿಂದಕ್ಕದಬ್ಬಿ, ತಾನು ಮುಂದೆ ಬಂದು ಮೊದಲು ನನ್ನ ತಲೆಯನ್ನು ಹೊಡಿಯಿರಿ, ಎಂದು ವಿಜ್ಞಾಪ್ತಿಯನ್ನು ಮೂಡಿಕೊಂಡನು ಈ ಪ್ರಕಾರ ಒಬ್ಬರಿ ಗೊಬ್ಬರು ನಾಮುಂದೆ, ನಾ ಮುಂದೆ, ಎಂದು ಬಡಿದಾಡ ಹತ್ತಿದರು ಅದನ್ನು ಕಂಡು ಆ ಕರ್ಮ ಚಾರಿಗಳಿಗೆ ಬಹಳ ನಗೆಯು ಬಂತು ಅವರಲ್ಲೊಬ್ಬನು ಓಡುತ್ತ ಹೋಗಿ ರಾಜನ ಮುಂದೆ ಈ ಸಂಗತಿಯನ್ನು ಅರಿಕೆ ಮಾಡಿದನು ಆಗ ಆ ಅಮಾತ್ಯನು ಪೃಥ್ವಿನಾಥ ! ಇದರಲ್ಲಿ ಏನೋ ಒಂದು ಸಂದೇಹವಿದೆಯೆಂದು ಮೊದಲೇ ಹೇಳಿರಲಿಲ್ಲವೇ ? ಇಲ್ಲದಿದ್ದರೆ ಮೃತ್ಯು ಮುಖದಲ್ಲಿ ಬೀಳಲಿಕ್ಕೆ ಯಾವ ಅಜ್ಞನು ಸಂತೋಷದಿಂದ ಸಮ್ಮತಿಸುವನು ? ಅವರಿಬ್ಬರನ್ನೂ ಕರೆಯಿಸಿ ಕೇಳಬೇಕು ಎಂದು ಬಿನ್ನಹ ಮಾಡಿಕೊಂಡನು ಆ ಕೂಡಲೆ ಅವರನ್ನು ಇಲ್ಲಿಗೆ ಕರೆದುಕೊಂಡು ಬರ್ರಿ! ಎಂದು ಅಪ್ಪಣೆ ಮಾಡಿದನು ಅವರು ಬಂದ ಕೂಡಲೆ ಬ್ರಹ್ಮದೇಶದ ದೊರೆಯು ನಿವಿಬ್ಬರೂ ಮೃತ್ಯು ಮುಖದಲ್ಲಿ ಬೀಳಲಿಕ್ಕೆ ನಾ ಮುಂದೆ ನಾ ಮುಂದೆ ಎಂದು ಹಾತೊರೆಯುತ್ತಿರುವದೇಕೆ ? ಎಂದು ಕೇಳಿದನು ಅದಕ್ಕೆ ಬೀರಬಲನು ನೀವು ಕೇಳಿದ ಪ್ರಶ್ನೆಗೆ ನಾವು ಉತ್ತರವನ್ನು ಹೇಳಿದರೆ ನಮಗೇ ಅಧಿಕವಾದ ಹಾನಿಯು ತಟ್ಟುವ ಸಂಭವವುಂಟು ಅದರಿಂದ ನಾವು ಹೇಳುವದಿಲ್ಲ, ಎಂದನು ಬೀರಬಲನ ಈ ಉತ್ತರದಿಂದ ಅವರಲ್ಲಿದ್ದ ಸಂದೇಹವು ಮತ್ತಿಷ್ಟು ಬಲವತ್ತರವಾಯಿತು ಆಗ ಅಮಾತ್ಯನು ನೀವು ಇದ ರಕಾರಣವನ್ನು ಪ್ರಕಟೀಕರಿಸದಿದ್ದ ಪಕ್ಷದಲ್ಲಿ ಆ ಜನ್ಮ ಪರಿಯಂತರವಾಗಿ ಕಾರಾಗೃಹದಲ್ಲಿ ಇರಿಸಿ ಬಿಡುತ್ತೇವೆ, ಎಂದನು ಅದನ್ನು ಕೇಳಿ ಬೀರಬಲನು ಅಂತರಂಗದಲ್ಲಿ ಆನಂದಿತನಾಗಿ ಬಹಿರಂಗದಲ್ಲಿ ದುಃಖಪ್ರದರ್ಶನ ಮಾಡುತ್ತ- ಮಹಾರಾಜ ! ನೀವು ಅದರ ಕಾರಣವನ್ನು ಕೇಳಿಕೊಳ್ಳಲಿಕ್ಕೆ, ಈಪರಿ ಅತ್ಯಾಗ್ರಹ ಮಾಡಹತ್ತಿದ್ದರಿಂದ ಉಪಾಯಾಂತರವಿಲ್ಲದೆ ಹೇಳಬೇಕಾಗಿದೆ ಆದರೆ ಅದರ ಕಾರಣವನ್ನು ನಾವು ಬಹಿರಂಗಪಡಿಸಿದರೆ ನಮ್ಮ ಹಾನಿಯು ಎಷ್ಟಾಗವದೆಂಬದು ಪರಮೇಶ್ವರನಿಗೇ ಗೊತ್ತು ಅನ್ತು ನಮ್ಮ ದೈವದಲ್ಲಿಯೇ ಆ ಸುಖವನ್ನನುಭವಿಸಬೇಕೆಂದು ಸೃಷ್ಟಿಕರ್ತನು ಲೇಖಿಸಿದಂತೆ ತೋರುವದಿಲ್ಲ ಕೇಳಬೇಕು ! ನಮ್ಮ ಅಕಬರ ಬಾದಶಹನು ನಿಮ್ಮ ಈ ರಾಜ್ಯವನ್ನು ಕೈವಶ ಮಾಡಿಕೊಳ್ಳಬೇಕೆಂದು ಬಹು ದಿವಸದಿಂದ ಹೊಂಚು ಹಾಕಿ ಕೊಂಡು ಕುಳಿತಿದ್ದಾನೆ ಆದರೆ ನೀವು ಅವನಿಗಿಂತಲೂ ಬಲಾಡ್ಯರಾಗಿರು ವದರಿಂದ ನಿಮ್ಮನ್ನು ಸಂಗ್ರಾಮದಲ್ಲಿ ಪರಾಜಿತರನ್ನಾಗಿ ಮಾಡಿ ರಾಜ್ಯವ ನ್ನು ಕೈವಶ ಮಾಡಿಕೊಳ್ಳುವದು ಅಸಂಭವವೆಂದು ತಿಳಿದು ಸುಮ್ಮನೇ ಕುಳಿತು ಕೊಂಡಿದ್ದಾನೆ ಒಂದು ದಿವಸ ನಮ್ಮ ಆ ದಿಲ್ಲಿಯಲ್ಲಿ ಮಹಾಸಭೆಯು ನೆರೆದಿರಲು ಕಾಶ್ಮೀರ ದೇಶ ನಿವಾಸಿಯಾದ ಒಬ್ಬ ಪ್ರಸಿದ್ಧ ಜ್ಯೋತಿರ್ವಿದನು ಬಂದು ಬಾದಶಹನಿಗೆ ಈ ಸಂಗತಿಯನ್ನು ಅರಿಕೆ ಮಾಡಿದನು ಏನಂದರೆ "ದಿಲ್ಲಿಯ, ಸಭಾಸದರಲ್ಲಿ ಇಬ್ಬರನ್ನು ಬ್ರಹ್ಮ ದೇಶದ ರಾಜನು ಕೊಲ್ಲಿಸಿದರೆ ಪ್ರಥಮದಲ್ಲಿ ಮರಣ ಹೊಂದಿದವನು ಈ ದೇಶದಧಿವನಾಗುವ ನೆಂತಲೂ, ಹಿಂದುಗಡೆಯಲ್ಲಿ ಮರಣಹೊಂದಿದವನು ಅವನ ಅಮಾತ್ಯನಾಗು ವನೆಂತಲೂ ಅವರನ್ನು ಕೊಲ್ಲಿಸಿದ ಭೂಪಾಲನು ಅವರಿಬ್ಬರ ಸೇವಕನಾಗು ವನೆಂತಲೂ ಭವಿಷ್ಯವನ್ನು ಹೇಳಿದನು. ಈ ನೆವದಿಂದಲಾದರೂ ನಿಮ್ಮ ರಾಜ್ಯವು ತನ್ನ ಹಸ್ತಗತವಾಗಲೆಂದು ತಿಳಿದು ಅಕಬರ ಬಾದಶಹನು ನಮ್ಮನ್ನು ಇಲ್ಲಿಗೆ ಕಳುಹಿಸಿಕೊಟ್ಟನು. ಆದರಿಂದ ಬೇಗನೇ ನಮ್ಮ ತಲೆಹೊಡೆಯುವಂತೆ ಅಪ್ಪಣೆಮಾಡಿರಿ ! ” ಎಂದು ಅಂಗಲಾಜ ಪ್ರಾರ್ಥಿಸಿಕೊಂಡನು. ಬೀರಬಲನ ಮಾತು ಕಿವಿಗೆ ಬಿದ್ದ ಕೂಡಲೆ, ಬ್ರಹ್ಮದೇಶದ ಅರಸನು ಅತ್ಯಾ ಶ್ಚರ್ಯವುಳ್ಳವನಾಗಿ, ತನ್ನ ಅಮಾತ್ಯನನ್ನು ಈ ವಿಷಯದಲ್ಲಿ ವಿಚಾರಿಸಿದನು ಅಮಾತ್ಯನು ಬುದ್ಧಿವಂತನಾಗಿ ಇದ್ದದರಿಂದ ಈ ಸಂಗತಿಯು ಬೀರಬಲನ ಕ್ಲಪ್ತಿಯೆಂದು ತಿಳಿದುಕೊಂಡು; “ ಪೃಥ್ವಿನಾಥ ! ಈ ಉಭಯತರವಾದ ವಿವಾದದ ಮೇಲಿಂದ ಕಂಡುಬರುವದೇನಂದರೆ, ಈ ಸಂಗತಿಯು ಅ ಸಂಭವವೆಂಬದಾಗಿ ಕಂಡು ಬರುವದಿಲ್ಲ. ಇವರ ಅಭಿಪ್ರಾಯದಂತೆ ಇವರ ನ್ನು ವಧಮಾಡಿದರೆ ನಮಗೇ ಹಾನಿಯುಂಟಾಗುವದು ಆದ್ದರಿಂದ ಇವರು ಹ್ಯಾಗೆ ಬಂದಿರುವರೋ ಹಾಗೆಯೇ ಬಿಟ್ಟು ಪತ್ರಕ್ಕೆ ಉತ್ತರವನ್ನು ಹೇಳಿ ಕಳುಹಿಸಿದರಾಯಿತು” ಎಂದು ಹೇಳಿದನು. ಆ ರಾಜನಿಗೆ ಅಮಾತ್ಯನ ಮಾತು ಸರಿದೋರಿತು, ಆ ಮೇಲೆ ಬೀರಬಲನನ್ನು ಕುರಿತು... " ನಾನು ಅಕಬರ ಬಾದಶಹನ ಮಾಂಡಲೀಕನೂ ಅಲ್ಲ, ಆಶ್ರೀತನೂ ಅಲ್ಲ, ಅದರಿಂದ ನಾನು ಅಪ್ಪಣೆಯನ್ನು ಮಾನ್ಯಮಾಡಲಾರೆನು ನೀವು ನಿಮ್ಮ ಜನ್ಮ ಭೂಮಿಗೆ ಹೊರಟು ಹೋಗಿರಿ ನಿಮ್ಮ ಬಾದಶಹನಿಗೆ ಹೀಗೆ ಹೇಳಬೇಕಲ್ಲಾ “ ಬ್ರಹ್ಮದೇಶದ ಮಹಾರಾಜಾಧಿ ರಾಜನು ನಿಮ್ಮ ಸೇವಕನಲ್ಲವಾದ್ದರಿಂದ ನಿಮ್ಮ ಅಪ್ಪಣೆಯನ್ನು ಮಾನ್ಯಮಾಡದೆ ನಮ್ಮನ್ನು ಹಿಂದಕ್ಕೆ ಕಳುಹಿಕೊಟ್ಟನು ನಿರ್ದೊಷಿಗಳಾದ ನಮ್ಮನ್ನು ಕೊಂdu ಪಾಪಕ್ಕೆ ಗುರಿಯಾಗುವದಿಲ್ಲವೆಂದು " ಹೇಳಿದನು ಎಂಬದಾಗಿ ತಿಳಿಸಿರಿ ! ಎಂದು ಅಪ್ಪಣೆ ಮಾಡಿದನು, ತಾನಸೇನನಿಗೆ ತನ್ನ ಜೀವಿತ ವಿಷಯದಲ್ಲಿ ನಿರಾಶೆಯುಳ್ಳವನಾಗಿದ್ದನು. ಬ್ರಹ್ಮದೇಶದ ಅರಸನ ವಚನವು ಕರ್ಣೇoದ್ರಿಯವನ್ನು ಪ್ರವೇಶಿಸಿದ ಕೂಡಲೆ ಅತ್ಯಾನಂದವುಳ್ಳವನಾಗಿ ಬೇಗನೇ ಇಲ್ಲಿಂದ ಹೊರಟು ಹೋಗೋಣ ನಡೆ, ಎಂದು ಬೀರಬಲನಿಗೆ ದುಂಬಾಲ ಬಿದ್ದನು. ಬೀರಬಲನು ಅವನನ್ನು ಸಮಾಧಾನ ಮಾಡಿ ಬ್ರಹ್ಮ ದೇಶದ ಮಹಾರಾಜನನ್ನು ಕುರಿತು ಮಹಾರಾಜ : ಬಡವರಾದ ನಮ್ಮ ಮೇಲೆ ದಯತೋರಿಸಿರಿ ! ಮೊದಲು ನಮ್ಮ ವಧೆಗೆ ಅಪ್ಪಣೆಕೊಟ್ಟು ಈಗ ಹಿಂದೆಗೆಯುವದು ಯಾಕೆ ? ಈ ಮಾತು ತಮ್ಮಂಥವರಿಂದ ಆಗಬಾರದು . ನಮ್ಮ ಬಾದಶಹನ ಈ ಅಲ್ಪಕಾರ್ಯವನ್ನಾದರೂ ಮಾಡಿರಿ, ಈ ಸಂಗತಿಯನ್ನು ಬಹಿರಂಗ ಪಡಿಸಿದರೆ ನಮಗೆ ಹಾನಿಯುಂಟಾಗುವದೆಂಬ ಸಂಗತಿಯನ್ನು ನಾನು ಪ್ರಥಮದಲ್ಲಿಯೇ ಅರಿಕೆ ಮಾಡಿಕೊಂಡಿದ್ದೆನಲ್ಲವೇ ! ಅದರಂತೆಯೇ ಆಯಿತು ಆಗಲಿ ಉಪಾಯವಿಲ್ಲ ಈಗಾದರೂ ಕೃಪಾಳುಗಳಾಗಿ ವಧೆಗೆ ಅಪ್ಪಣೆಕೊಡಿರಿ ! ಎಂದು ಬಿನ್ನಹ ಮಾಡಿಕೊಂಡನು ಬೀರಬಲನ ಮಾತುಗಳನ್ನು ಕೇಳಿ, ನೀನು ಎಷ್ಟು ಪ್ರಾರ್ಥಿಸಿದರೂ ಪ್ರಯೋಜನವಾಗಲರಿಯದು ತಿಳಿದೂತಿಳಿದು ಯಾವನಾದರೂ ವಿಷಾಪ್ರಾಷಾನಮಾಡುವನೇ ಅಕಬರಬಾದಶಹನ ಯೋಗ್ಯತೆಯು ನಮ್ಮಲ್ಲಿದ್ದ ಕನಿಷ್ಟ ಪರಿಚಾರಕನ ಯೋಗ್ಯತೆಯಕಿಂತಲೂ ಹೀನವಾಗಿದೆ ಈಗ ನೀವು ಇಲ್ಲಿಂದ ಸುಮ್ಮನೆ ಹೊರಟು ಹೋಗಿರಿ ಇಲ್ಲವಾದರೆ ಪರಿಚಾರಕರ ಕಡೆಯಿಂದ ದಬ್ಬಿಸಿಕೊಳ್ಳುವ ಪ್ರಸಂಗವು ಬಂದೀತು ? ತಿಳಿಯಿತೇ ? ಎಂದು ಕೇಳಿದನು. ಆಮಾತಿಗೆ ಬೀರಬಲನು ಹೀಗೆ ತಮ್ಮ ಅಪ್ಪಣೆಯಾದರೆ ಉಪಾಯವಿಲ್ಲ ದಿಲ್ಲಿಗೆ, ಪ್ರಯಾಣ ಮಾಡು ತ್ತೇವೆ, ಬಾದಶಹನು ನಮ್ಮ ಮೇಲೆ ಕೃದ್ಧನಾಗುವದು ನಿಜ ? ಎಂದು ಅತಿಶಯ ಹಾನಿಯಾದವನಂತೆ ಚಡಪಡಿಸುತ್ತ ಮಹಾರಾಜನ ಅಪ್ಪಣೆಯನ್ನು ಪಡೆದು ಪ್ರಯಾಣ ಸನ್ನದ್ಧರಾದರು. ಈ ಪ್ರಕಾರ ಅವರಿಬ್ಬರು ಪಯಣ ಗತಿಯಿಂದ ದಿಲ್ಲಿಗೆ ಬಂದು ತಲುಪಿದರು.
ಮರುದಿವಸ ರಾಜಾಜ್ಞೆಯನ್ನು ಪಡೆದು ಇಬ್ಬರೂ ಸಭಾಸ್ಥಾನವನ್ನು ಪ್ರವೇಶಿಸಿದರು ಅಕಬರ ಬಾದಶಹನು ಇವರ ಸಮಾಚಾರವನ್ನು ಕೇಳಿದನು ಆಗ ತಾನಸೇನನು " ಹುಜೂರ್ ಬೀರಬಲನು ನನ್ನ ಜೊತೆಯಲ್ಲಿ ಇಲ್ಲದಿದ್ದರೆ, ನಿಮ್ಮ ದರುಶನವು ನನಗೆ ಈ ಜನ್ಮದಲ್ಲಿಯಂತೂ ಆಗುತ್ತಿದ್ದಿಲ್ಲ, ಬೀರಬಲನ ಚಾತುರ್ಯದಿಂದಲೇ ಈ ಸುದಿನವು ಪ್ರಾಪ್ತವಾಯಿತು ಎಂದು ಹೇಳಿ ಬ್ರಹ್ಮದೇಶದಲ್ಲಿ ನಡೆದ ಯಾವತ್ತು ಸಮಾಚಾರವನ್ನು ಕಥನ ಮಾಡಿದನು. ಆಗ ಬಾದಶಹನು ಯಾವತ್ತೂ ಮುಸಲ್ಮಾನ ಮುತ್ಸದ್ದಿಗಳನ್ನುದ್ದೇಶಿಸಿ “ ನಾನು ಹಿಂದಕ್ಕೆ ತಾನಸೇನ ಮತ್ತು ಬೀರಬಲ್ಲ ಈ ಉಭಯತರಲ್ಲಿ ಯಾರು ಚತುರರೆಂಬದನ್ನು ಪ್ರತ್ಯಕ್ಷ ಮಾಡಿ ತೋರಿಸುತ್ತೇನೆಂದು ಹೇಳಿದ್ದಿಲ್ಲವೇ ? ನೀವು ಯಾವನಿಗೆ ಬೀರಬಲನ ಪದವಿಯನ್ನು ಕೊಡಿಸ ಬೇಕೆಂದು ನೀವೆಲ್ಲರೂ ಬಯಸುತ್ತಿದ್ದಿರೋ ! ಆ ತಾನಸೇನನು ಯಾವನ ಸಹಾಯದಿಂದ ಪ್ರಾಣದಿಂದ ಉಳಿದುಕೊಂಡು ಬಂದಿರುವನೆಂಬ ಸಂಗತಿಯು ಅವನ ಮುಖದಿಂದಲೇ ನಿಮಗೆ ವಿದಿತವಾಯಿತಷ್ಟೇ ? ಈಗಲಾದರೂ ನಿಮ್ಮ ಕುರುಕುರಿಯು ತೀರಿತೇ ? ಇನ್ನು ಮೇಲೆ ನಿಮ್ಮಲ್ಲಿ ಯಾರಾದರೂ, ಹಿಂದೂಜನರ ಮೇಲೆ ದ್ರೋಹವನ್ನೆಸಗಿದ ಪಕ್ಷದಲ್ಲಿ ಅವರಿಗೆ ಕಠಿಣವಾದ ಶೀಕ್ಷೆಯನ್ನು ವಿಧಿಸಲಾದೀತು ? ನನ್ನ ರಾಜ್ಯದಲ್ಲಿ ಹಿಂದೂ ಮುಸಲ್ಮಾನರ ನಡುವೆ ಎಂದೂ ಕಲಹವಿರಲಿಕ್ಕಾಗದು ಹಿಂದೂ ಜನರೂ ನನ್ನ ಪ್ರಜೆಗಳು ಮುಸಲ್ಮಾನರೂ ನನ್ನ ಪ್ರಜೆಗಳು ಇನ್ನು ಮೇಲೆ ಈ ಪ್ರಕಾರ ಭೇದ ಬುದ್ಧಿಯನ್ನು ಮನಸ್ಸಿನಲ್ಲಿ ಹಿಡಿಯ ಬೇಡಿರಿ ” ಎಂದು ಅಪ್ಪಣೆಮಾಡಿದನು ಈ ಮಾತುಗಳನ್ನು ಶ್ರವಣಮಾಡಿ ಅಮೀರ ಖಾನನು ಜಹಾಂಪನಾದ ! ಈಗ ನಮಗೆ ಮನವರಿಕೆ ಯಾಯಿತು ಅವರವರ ಯೋಗ್ಯತೆಯ ಪ್ರಕಾರ ಅವರ ವರಿಗೆ ಕೆಲಸಗಳನ್ನು ನಿಯಮಿಸಬೇಕು ಹಿಂದೂ ಜನರೂ ಮತ್ತು ನಾವು ಒಂದೇ ಎಂದು ಹೇಳೋಣವಾಯಿತು ! ಅವರು ಅನೇಕ ಮೂರ್ತಿಗಳನ್ನು ಪೂಜಿಸುತ್ತಾರೆ ನಮ್ಮ ಕುರಾನ ಕರೀಫದಲ್ಲಿ " ಜಗನ್ನಿಯಂತನು ಓರ್ವನೇ ಇರುವನೆಂದೂ ಆನೇಕ ದೇವತೆಗಳನ್ನು ಪೂಜಿಸುವವರು ಕೇವಲ ಕಾಪುರು ಷರೆಂದೂ ಹೇಳಲ್ಪಟ್ಟದೆ ಹೀಗಿದ್ದು ಅವರು ನಮ್ಮ ಸಮಾನತ್ವವನ್ನು ಹೊಂ " ದುವದು ಹ್ಯಾಗೆ ? ಎಂಬದನ್ನು ವಿಶದ ಪಡಿಸಿ ತೋರಿಸಬೇಕು ಅಂದರೆ ಅವರೂ ನಾವೂ ಸಮಾನರೆಂದು ತಿಳಿದುಕೊಳ್ಳುವೆವು ಎಂದನು ಈ ಮಾತಿಗೆ ಬಾ ದಶಹನು- " ಅವರವರ ಧರ್ಮವು ಅವರವರಿಗೆ ಶ್ರೇಷ್ಠವಾದದ್ದೇ ಯಾವ ದರ್ಮವನ್ನೂ ನಿಂದಿಸ ಕೂಡದು ತಮ್ಮ ತಮ್ಮ ಧರ್ಮಗಳಲ್ಲಿ ದೃಢವಿಶ್ವಾಸವ ನ್ನಿಡಬೇಕು ಧರ್ಮದ ವಿಷಯವನ್ನು ಮುಂದೆ ಮಾಡಿ ಇತರರಿಗೆ ಹಾನಿಯ ನ್ನುಂಟು ಮಾಡುವದು ಉಚಿತವಾದದ್ದಲ್ಲ ನನ್ನ ಪ್ರಜೆಗಳಾದ ಹಿಂದೂ ಜನರಿಗೆ ಯಾವನಿಂದಾದರೂ ಉಪಟಳವು ಉಂಟಾದರೆ, ಅವನು ಸರದಾರನಾಗಿರಲಿ, ಅಥವಾ ಕನಿಷ್ಟ ಪ್ರತಿಯ ಸೇವಕನಾಗಿರಲಿ ಅವನಿಗೆ ಕಠಿಣತರವಾದ ಶೀಕ್ಷೆಯನ್ನು ವಿಧಿಸುವೆನು ಈ ಸಂಗತಿಯನ್ನು ಯಾವತ್ತರೂ ಸ್ಮರಣೆಯಲ್ಲಿಟ್ಟು ಕೊಳ್ಳಿರಿ ! ಎಂದು ಆಜ್ಞೆಮಾಡಿದನು ಅದರಿಂದ ಯಾವತ್ತರೂ ಶಾಂತತಯಿಂದ ವರ್ತಿಸಹತ್ತಿದರು.
-( ೧೭೪, ಚಿಕ್ಕ ಮಗುವು ಅಳುತ್ತಿತ್ತು.) -
ಒಂದು ದಿವಸ ಬಾದಶಹನ ಸಭಾಸ್ಥಾನದಲ್ಲಿ ಬೀರಬಲನ ಹೊರತು ಆನ್ಯಸರದಾರರೂ ಮಾನಕರಿಗಳೂ ಕೊಡಿದ್ದರು, ಬಾದಶಹನು ಬೀರಬಲನ ಮಾರ್ಗವನ್ನು ಬಹಳಹೊತ್ತು ನೋಡಿದನು. ಆದರೂ ಬೀರಬಲನು ಬರಲಿಲ್ಲ ಅದನ್ನು ಕಂಡು ಒಬ್ಬ ಪರಿಚಾರಕನನ್ನು ಕೊಟ್ಟು ಕಳುಹಿದನು. ಆ ಪರಿಚಾರಕನು ಬೀರಬಲನ ಮನೆಗೆ ಹೋಗಿ, ಬಾದಶಹನ ಆಜ್ಞೆಯನ್ನು ಶ್ರುತ ಪಡಿಸಿದನು ಆಗ ಬೀರಬಲನು " ಹೂ ! ಬರುತ್ತೇನೆ ” ಎಂದು ಹೇಳಿಕಳುಹಿ ಸಿದನು ಪರಿಚಾರಕನು ಬಂದು ಹಾಗೆಯೇ ಹೇಳಿದನು ಮುಂದೆ ಆರ್ಧ ತಾಸಾದರೂ ಬರಲಿಲ್ಲ ಪುನಃ ಮತ್ತೊಬ್ಬ ಪರಿಚಾರಕನನ್ನು ಅಟ್ಟಿದನು. ಅವನಿಗೂ ಆದೇ ಉತ್ತರವನ್ನು ಹೇಳುವ ಪ್ರಸಂಗವು ಬಂತು ಅದನ್ನು ಕೇಳಿ ಬಾದಶಹನಿಗೆ ಆತಿಶಯ ಕೋಪವು ಬಂತು ಮೂರನೆಯವನನ್ನು ಕಳುಹಿಸಿದರೂ ಕೂಡಬರಲಿಲ್ಲ ಆಗ ಬಾದಶಹನು "ಬೀರಬಲನನ್ನು ಕಟ್ಟಿ ಹಿಡಿದಕೊಂಡು ” ಬರುವಂತೆ ಆಜ್ಞಾಪಿಸಿದನು. ಆ ಸೇವಕನು ಬೀರಬಲನ ಸನ್ನಿಧಿಗೆ ಬಂದು ರಾಜಾಜ್ಞೆಯನ್ನು ತಿಳಿಸಿದನು ಆಗ ಬೀರಬಲನು ಇನ್ನು ವಿಲಂಬ ಮಾಡಿ ಪ್ರಯೋಜನವಿಲ್ಲವೆಂದು ತಿಳಿದು ಬಟ್ಟೆಗಳನ್ನು ಧಾರಣಮಾಡಿಕೊಂಡು ಸೇವಕನ ಬೆನ್ನು ಹತ್ತಿ ಸಭಾಸ್ಥಾನವನ್ನು ಪ್ರವೇಶಿಸಿ, ನಿತ್ಯ ನಿಯಮಾ ನುಸಾರವಾಗಿ ಬಾದಶಹನಿಗೆ ನಮಸ್ಕಾರಮಾಡಿ ತನ್ನ ಸ್ಥಳದಲ್ಲಿ ಕುಳಿತು ಕೊಂಡನು. ಆಗ ಬಾದಶಹನು ಬೀರಬಲ್ಲ ! ಈ ದಿವಸ ನಿನ್ನನ್ನು ಕರೆಯ ಕಳುಹಿ ಕಳುಹಿ, ಬೇಸತ್ತು ಹೋದೆನು ಆದರೆ ನಿನ್ನ “ ಹೂ ಬರುತ್ತೇನೆ ” ಎಂಬ ಸೊಲ್ಲೇ ತಪ್ಪಲಿಲ್ಲ ಇದಕ್ಕೆ ಕಾರಣವೇನು ! ನಿನ್ನ ಮನೆಯಲ್ಲಿ ಇದ್ದ ಕೆಲಸವಾದರೂ ಯಾವದು.
ಬೀರಬಲ-ಖುದಾವಂದ ? ಚಿಕ್ಕಮಗುವು ಅಳುತ್ತಿತ್ತು, ಅವನನ್ನು ಸಮಾಧಾನ ಪಡಿಸಿ ಬರಬೇಕಾದರೆ ಇಷ್ಟು ವಿಲಂಬವಾಯಿತು.
ಬಾದಶಹ— ಛೇ ? ನೀನು ಸುಳ್ಳಾಡುತ್ತಿ, ಬಾಲಕರು ಇಚ್ಛಿತ ವಸ್ತುವು ಸಿಕ್ಕ ಕೂಡಲೇ ಸುಮ್ಮನಾಗಿ ಹೋಗುವರು. ಹೀಗಿದ್ದು ಇಷ್ಟು ವಿಲಂಬ ವನ್ನೇಕೆ ಮಾಡಿದೆ,
ಬೀರಬಲ-ಖುದಾವಂದ ? ಬಾಲಕರನ್ನು ಸಮಾಧಾನಪಡಿಸುವದಕ್ಕೆ ಏನು ಉಪಾಯವನ್ನು ಮಾಡಬೇಕೆಂಬದು ನನಗೆ ತಿಳಿದಿಲ್ಲ.
ಬಾದಶಹ-ನಾನು ನಿನ್ನ ಸ್ಥಳದಲ್ಲಿದ್ದರೆ ಆ ಕೂಡಲೆ ಆ ಬಾಲಕನನ್ನು ಸಮಾಧಾನ ಪಡಿಸುತ್ತಿದ್ದೆನು.
ಬೀರಬಲ -ಪೃಥ್ವಿನಾಥ! ದೇಶದ ಪ್ರಜೆಗಳೆಲ್ಲರಿಗೂ ರಾಜನು ತಾಯಿತಂದೆ ಯಾಗಿರುವನು, ನಾನು ಬಾಲಕನಾಗುತ್ತೇನೆ ನೀವು ನನ್ನನ್ನು ಸಮಾಧಾನ ಪಡಿಸಿರಿ.
ಈ ಮಾತಿಗೆ ಬಾದಶಹನು ಒಪ್ಪಿಕೊಂಡನು, ಬೀರಬಲನು ಬಾಲಕನಂತೆ ಬಟ್ಟೆಗಳನ್ನು ಧಾರಣಮಾಡಿಕೊಂಡು ನೆಲದಮೇಲೆ ಕುಳಿತುಕೊಂಡು ರೋದಿಸಹತ್ತಿದನು. ಬಾದಶಹನು ಸಿಂಹಾಸನದಿಂದ ಇಳಿದು ಬಾಲಕನಾದ ಬೀರಬಲನ ಹತ್ತಿರಬಂದನು.
ಬಾದಶಹ— (ಬಾಲಕನಾಗಿದ್ದ ಬೀರಬಲನ ಬೆನ್ನ ಮೇಲೆ ಕೈಯಾಡಿಸಿ, ) ಮಗೂ ? ಯಾಕೆ ರೋದಿಸುತ್ತಿ.
ಬೀರಬಲನು ದೀರ್ಘವಾಗಿ ಉಸಿರನ್ನು ಬಿಡುತ್ತ ಹೆಚ್ಚು ಹೆಚ್ಚು ಅಳುತ್ತ ಏನೊಂದು ಉತ್ತರವನ್ನೂ ಕೊಡದೆ ಬಾದಶಹನ ಕೊರಳಿಗೆ ಅಟ್ಟೀ ಮಿಟ್ಟಿ ಹಾಕಿದನು.
ಬಾದಶಹ (ಅವನನ್ನು ತನ್ನ ತೊಡೆಯಮೇಲೆ ಕುಳ್ಳಿರಿಸಿಕೊಂಡು) ಮಗೂ ಯಾಕೆ ಆಳುತ್ತೀ ! ನಿನಗೆ ಬೇಕಾದದ್ದೇನು ಹೇಳು, ಅದನ್ನು ತರಿಸಿ ಕೊಡುತ್ತೇನೆ.
ಬೀರಬಲ- [ಬಹಳ ಹೊತ್ತು ಗಟ್ಟಿಯಾಗಿ ರೋದಿಸಿ, ] ನನಗೆ ಕಬ್ಬನ್ನು ಕೊಡಿಸು. ಬಾದಶಹ— (ಆ ಕೂಡಲೆ ಒಂದು ಕಬ್ಬಿನ ಹೊರೆಯನ್ನು ಆ ಬಾಲಕನಮುಂದೆ ಚಲ್ಲಿಸಿ) ನಿನ್ನ ಮನಸ್ಸಿಗೆ ಬಂದದ್ದನ್ನು ತೆಗೆದುಕೊ ಬೀರಬಲ:-ನೀನೇ ನಿನ್ನ ಕೈಯಿಂದ ತೆಗೆದುಕೊಡು.
ಬಾದಶಹನು ಆ ಹೊರೆಯೊಳಗಿಂದ ಒಂದು ಉತ್ತಮವಾದ ಕಬ್ಬನ್ನು ಆರಿಸಿ ತೆಗೆದುಕೊಟ್ಟನು. " ಇದು ನೆಟ್ಟಗಿಲ್ಲ? ” ವೆಂದು ಒಗೆದು ಬಿಟ್ಟನು. ಹೀಗೆ ಎಷ್ಟೋಾರೆ ಆದಮೇಲೆ ಒಂದು ಕಬ್ಬು ಮನಸಿಗೆ ಬಂತು, ಅದನ್ನು ಕೈಯಲ್ಲಿ ಹಿಡಿದುಕೊಂಡು ಪುನಃ ಅಳಹತ್ತಿದನು.
ಬಾದಶಹ:-ಮಗು ? ಮಗೂ ? ಮತ್ತೆ ಯಾಕೆ ರೋದನವನ್ನು ಆರಂಭಿಸಿdi ಏನುಬೇಕು.
ಬೀರಬಲ :-(ಸ್ವಲ್ಪಹೊತ್ತು ಅತ್ತು) ಇದನ್ನು ಸುಲಿದುಕೊಡು, ಬಾದಶಹನು ಕಬ್ಬನ್ನು ಸುಲಿದುಕೊಟ್ಟನು, ಅದನ್ನು ಹಿಡಿದುಕೊಂಡು ಪುನಃ ಅಳಹತ್ತಿದನು.
ಬಾದಶಹ:— ಮತ್ತೆ ಯಾಕೆ ಅಳುತ್ತೀ ?
ಬೀರಬಲ:-ಇದರ ತುಂಡುಗಳನ್ನು ಮಾಡಿಕೊಡು.
ಬಾದಶಹನು ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಕೊಟ್ಟನು ಆಮೇಲೆ ಅವುಗಳನ್ನು “ ನನ್ನ ಟೊಪ್ಪಿಗೆಯಲ್ಲಿ ಹಾಕಿಕೊಡು, ” ಎಂದು ಅಳಲಾರಂಭಿಸಿದನು. ಬಾದಶಹನು ಅದರಂತೆಯೇ ಮಾಡಿದನು ಅದರಿಂದಲೂ ಅವನು ಶಾಂತನಾಗದೆ ಟೊಪ್ಪಿಗೆಯನ್ನು ಬಿಸಾಟಕೊಟ್ಟನು. ಬಾದಶಹನು ಅವನನ್ನು ಹತ್ತಿರ ಕರೆದುಕೊಂಡು " ಮಗೂ ! ನೀನು ಹೇಳಿದಹಾಗೆ ನಾನು ಮಾಡಿಕೊಡಲಿಲ್ಲವೇ, ಹೀಗಿದ್ದು ನೀನು ಯಾಕೆ ಸುಮ್ಮನಾಗಲೊಲ್ಲಿ” ಎಂದು ಕೇಳಿದನು. ಬೀರಬಲನು ಕಿಂಚಿತ್ಕಾಲ ರೋದಿಸಿ, ಆ ಮೇಲೆ " ಈ ಎಲ್ಲ ತುಂಡುಗಳನ್ನು ಜೋಡಿಸಿ ಮೊದಲು ಇದ್ದಂತೆ ಮಾಡಿಕೊಡು' ಎಂದು ಪುನಃ ರೋದಿಸಲಾರಂಭಿಸಿದನು. ಆಗ ಬಾದಶಹನು : ಮಗೂ ? ನಿನಗೆ ಬೇಕಾದಷ್ಟು ತುಂಡುಗಳನ್ನು ತೆಗೆದುಕೊ ! ಆದರೆ ಅವುಗಳನ್ನು ಜೋಡಿಸಿ ಮೊದಲಿನ ಹಾಗೆ ಹ್ಯಾಗಮಾಡಲಿಕ್ಕೆ ಬಂದೀತು” ಎಂದನು. ಆಕೂಡಲೆ ಬೀರಬಲನು “ ಹಾಗೆ ನಾನು ಅಳುವದನ್ನು ಹ್ಯಾಗೆ ಬಿಡಲಿ ? ” ಎಂದು ಕೇಳಿದನು. ಆಗ ಬಾದಶಹನು ಶಹಬಾಸ! ಶಹಬಾಸ ? ನೀನು ಹೇಳಿದ್ದು ಸತ್ಯವು, ಬಾಲಕರನ್ನು ಸಮಾಧಾನಗೊಳಿಸುವದು ಬಹುಶ್ರಮ ಸಾಧ್ಯವಾದದ್ದು ಎಂದು ಒಪ್ಪಿಕೊಂಡು ತನ್ನ ಕೋಪವನ್ನು ಅಡಗಿಸಿಕೊಂಡನು. ಆಮೇಲೆ ಬೀರಬಲನು ಬಾಲಕನವೇಷವನ್ನು ಚೆಲ್ಲಿಕೊಟ್ಟು, ತನ್ನ ಸ್ಥಾನದಲ್ಲಿ ಬಂದು ಕುಳಿತು ಕೊಂಡನು

...

--(೧೭೫, ಗಾಣಿಗ, ಮತ್ತು ಕಟುಕನು.)--

ಒಂದುದಿವಸ ಬಾದಶಹನು ಸಭಾಸ್ಥಾನದಲ್ಲಿ ವಿರಾಜಮಾನನಾಗಿದ್ದನು. ಆ ಸಮಯದಲ್ಲಿ ಒಬ್ಬ ಗಾಣಿಗ [ತೈಲವಿಕ್ರಯಿ]ನೂ, ಒಬ್ಬ ಕಟುಕ(ಮಾಂಸವಿಕ್ರಯಿ)ನೂ, ತಮ್ಮ ತಮ್ಮೊಳಗೆ ಬಡಿದಾಡುತ್ತ ಸಭಾಸ್ಥಾನವಂನು ಪ್ರವೇಶಿಸಿದರು. ಆಗ ಬೀರಬಲನು "ನಿಮ್ಮಿಬ್ಬರಲ್ಲಿ ವಾದಿಯು ಯಾರು" ಎಂದು ಕೇಳಿದನು.
ಗಾಣಿಗ--ನಾನು ವಾದಿಯು.
ಕಟುಕ--ನಾನು.
ಆಗ ಅವರಿಬ್ಬರಿಗೂ ನಿಜವಾದ ಸಮಾಚಾರವನ್ನು ಹೇಳಿರಿ, ಎಂದು ಆಜ್ಞಾಪಿಸಿದನು.
ಗಾಣಿಗ :- ಮಹಾರಾಜ, ನಾನು ನನ್ನ ಅಂಗಡಿಯಮೇಲೆ ಲೆಕ್ಕವನ್ನು ಬರಿಯುತ್ತ ಕುಳಿತುಕೊಂಡಿದ್ದೆನು. ಆಗ ಈ ಕಟುಕನು ಬಂದು ಎಂಣೆಯನ್ನು ಕೊಡು, ಎಂದು ಕೇಳಿದನು. ನಾನು ನನ್ನ ಕೆಲಸವನ್ನು ಬಿಟ್ಟು, ಇವನಿಗೆ ತೈಲವನ್ನು ಕೊಟ್ಟೆನು. ಪುನಃ ನನ್ನ ಕೆಲಸದಲ್ಲಿ ತೊಡಗಿದೆನು. ಮುಂದೆ ಕಿಂಚಿತ್ ಹೊತ್ತಾದಮೇಲೆ ನೋಡಲು ನನ್ನ ಹಣದ ಚೀಲವೇ ಇದ್ದಿಲ್ಲ. ಆ ಕೂಡಲೇ ಇವನ ವಿಷಯದಲ್ಲಿ ಸಂದೇಹವು ಉತ್ಪನ್ನವಾಗಿ ಓಡುತ್ತ ಇವನ ಅಂಗಡಿಗೆ ಹೋದೆನು. ನಾನು ಹೋದಾಗ ಚೀಲವು ಇವನ ಕೈಯಲ್ಲಿಯೇ ಇತ್ತು. ಅದು ನನ್ನ ಚೀಲವೆಂದು ಹೇಳಿ ಬೇಡಿದೆನು. ಇವನು ಕೊಡದೆ ತನ್ನ ಚೀಲವೆಂದು ವಾದಿಸಹತ್ತಿದನು. ನಾನು ಸತ್ಯಸಂಗತಿಯನ್ನು ವಿಜ್ಞಾಪಿಸಿಕೊಂಡಿದ್ದೇನೆ. ನನ್ನ ಹಣದ ಚೀಲವನ್ನು ನನಗೆ ಕೊಡಿಸಬೇಕು ಎಂದು ಬೇಡಿಕೊಂಡನು. ಆಮೇಲೆ ಕಟುಕನು ಮುಂದೆಬಂದು. ನಾನು ನನ್ನ ಅಂಗಡಿಯಮೇಲೆ ಕುಳಿತುಕೊಂಡು ವಿಕ್ರಯಿಸಿದ ಹಣವನ್ನು ಎಣಿಸುತ್ತಿದ್ದೆನು. ಆಗ ಇವನು ತೈಲವಿಕ್ರಯ ಮಾಡುವದಕ್ಕೆ ಪ್ರತಿದಿನದಲ್ಲಿ ಬರುವಂತೆ ಈ ದಿವಸವೂ ಬಂದನು. ಇವನ ಅಂಗಡಿಯು ನನ್ನ ಅಂಗಡಿಗೆ ಕಿಂಚಿತ್‌ ದೂರದಲ್ಲಿ ಅದೆ. ಇವನು ಬಂದಕಾಲಕ್ಕೆ ಹಣದ ಚೀಲವು ನನ್ನ ಹತ್ತಿರದಲ್ಲಿಯೇ ಇತ್ತು, ಇವನು ಹೊರಟುಹೋದ ಮೇಲೆ ನೋಡಲು ಚೀಲವು ಮಾಯವಾಗಿತ್ತು. ಆಗ ನಾನು ಗಾಬರಿಯಾಗಿ ಓಡುತ್ತ ಹೋಗಿ ಇವನನ್ನು ಮಾರ್ಗದಲ್ಲಿಯೇ ಹಿಡಿದೆನು ಮತ್ತು ಚೀಲವನ್ನು ಕಸಿದುಕೊಂಡೆನು. ನಾನು ಈ ಸಂಗತಿಯನ್ನು ಜಗನ್ನಿಯಂತನನ್ನು ಸ್ಮರಿಸಿ, ಸತ್ಯವಾಗಿ ಹೇಳುತ್ತೇನೆ, ಇದರಲ್ಲಿ ಎಳ್ಳಷ್ಟಾದರೂ ಅಸತ್ಯವಿಲ್ಲ ಎಂದು ಹೇಳಿದನು.
ಬೀರಬಲನು ಅವರ ಸಮಗ್ರ ವೃತ್ತಾಂತವನ್ನು ಕೇಳಿಕೊಂಡು ಮರುದಿನ ಬರುವಂತೆ ಆಜ್ಞಾಪಿಸಿದನು ಮತ್ತು ಹಣದಚೀಲವನ್ನು ತನ್ನ ಬಳಿಯಲ್ಲಿಯೇ ಇರಿಸಿಕೊಂಡನು ಅವರೀರ್ವರು ಹೊರಟುಹೋದಮೇಲೆ ಆ ಚೀಲ ದೊಳಗಿಂದ ಕೆಲವು ರೂಪಾಯಿಗಳನ್ನೂ ಚಿಲ್ಲರೆ ಹಣವನ್ನೂ ತೆಗೆದು ನೀರಿನಲ್ಲಿ ತೊಳೆಯಿಸಿದೆನು ಕಿಂಚಿತ್ತಾದರೂ ತೈಲಾಂಶವು ಹೊರಡಲಿಲ್ಲ ಆದರೆ ದುರ್ಗಂಧವು ಹೊರಹೊರಟಿತು ಇದರಿಂದ ಈ ಹಣವು ಕಟುಕರವನದೇ ಎಂದು ನಿಶ್ಚಯಿಸಿಕೊಂಡನು.
ಮರುದಿವಸ ನಿಯತವಾದ ಸಮಯಕ್ಕೆ ವಾದಿಯೂ, ಪ್ರತಿವಾದಿಯೂ ಬಂದರು ಬೀರಬಲನು ಅವರಿಬ್ಬರ ಕೈಯಲ್ಲಿಯೂ, ಧರ್ಮಗ್ರಂಥವನ್ನು ಕೊಟ್ಟು ಶಪಥಮಾಡು ಎಂದು ಹೇಳಿದನು. ಇಬ್ಬರೂ ಶಪಥಮಾಡಿದರು ಬೀರಬಲನು ಕಟುಕನವಶಕ್ಕೆ ಯಾವತ್ತೂ ಹಣವನ್ನು ಕೊಟ್ಟು ತೈಲ ವಿಕ್ರಯಿಯಿಗೆ ಉಚಿತ ದಂಡನೆಯನ್ನು ವಿಧಿಸಿದನು.–
೧೭೬, ಮಣಿಪುರದ ದೊರೆಯು ಬೀರಬಲನ ನ್ಯಾಯ
ಚಾತುರ್ಯವನ್ನು ಪರೀಕ್ಷಿಸಿದ್ದು.
ಮಣಿಪುರದ ದೊರೆಯಾದ ಚಂದ್ರಕಾಂತನೆಂಬವನು, ಬೀರಬಲನ ಪ್ರಖ್ಯಾತಿಯನ್ನು ಕೇಳಿ, ಅವನ ಜಾಣತನವನ್ನು ಪರೀಕ್ಷಿಸಬೇಕೆಂಬ ಉದ್ದೇಶದಿಂದ ಪ್ರಚ್ಛನ್ನ ವೇಷಧಾರಿಯಾಗಿ ದಿಲ್ಲಿಗೆ ಬಂದನು. ಆ ಪಟ್ಟಣದ ಬೀದಿಯಲ್ಲಿ ಕುಂಟನಾದ ಒಬ್ಬ ಬಿಕ್ಷುಕನು ಬೆಟ್ಟಿಯಾದನು ಅವನಿಗೆ, ಇವನು ಮಣಿಪುರದ ದೊರೆಯೆಂದು ಅವನಿಗೆ ಬೋಧೆಯಾಗಲಿಲ್ಲ ಅದರಿಂದ ಅವನು ಮಹಾರಾಜ ! ನಾನು ಒಂದು ಅತ್ಯವಶ್ಯಕವಾದ ಕಾರ್ಯಸಾಧನೆ ಗೋಸುಗ ಪಟ್ಟಣವನ್ನು ಶೀಘ್ರವಾಗಿ ಪ್ರವೇಶ ಮಾಡಬೇಕಾಗಿತ್ತು; ಆದರೆ ನನ್ನ ಪಾದಗಳಲ್ಲಿ ವಿಲಕ್ಷಣವಾದ ಒಂದು ಶೂಲಿಯು ಅಕಸ್ಮಾತ್ತಾಗಿ ಉತ್ಪನ್ನ ವಾದ್ದರಿಂದ ಹೋಗಲಸಮರ್ಥನಾಗಿ, ಇಲ್ಲಿ ಕುಳಿತುಕೊಂಡಿದ್ದೇನೆ ಅದರಿಂದ ಕೃಪಾಳುಗಳಾದ ತಾವು ನನ್ನನ್ನು ತಮ್ಮ ಬೆನ್ನಿನ ಹಿಂದೆ ಕೂಡ್ರಿಸಿಕೊಂಡು ಕರೆದುಕೊಂಡು ಹೋದರೆ, ಬಹಳೇ ಉಪಕಾರವಾಗುವದು, ಎಂದು ಬೇಡಿಕೊಂಡನು ಆಗ ಚಂದ್ರಕಾಂತನು ಅವನ ದುರ್ದಶೆಯನ್ನು ನೋಡಿ, ಕನಿಕರಪಟ್ಟು ಹಿಂದೆ ಕುಳ್ಳಿರಿಸಿಕೊಂಡು ಹೊರಟನು ಕುಂಟನು ತನ್ನ ಇಚ್ಛಿತಸ್ಥಾನವು ಪ್ರಾಪ್ತವಾದ ಕೂಡಲೆ, ರಾಜನಿಗೆ ಇಳಿಯಿರಿ ! ಎಂದು ಹೇಳಿದನು ಆಗ ಚಂದ್ರಕಾಂತನು - ಎಲೋ ನಾನು ನಿನ್ನನ್ನು ಕೂಡ್ರಿಸಿ ಕೊಂಡು ಇಲ್ಲಿಯವರೆಗೆ ಬಂದದ್ದಕ್ಕೆ ಈ ಪ್ರಕಾರವಾಗಿ ಉಪಕಾರವನ್ನು ತೀರಿಸುವಿಯಾ? ಎಂದು ಕೇಳಿದನು ಈ ಮಾತಿಗೆ ಆ ಭಿಕ್ಷುವು - ಕುದುರೆಬಿಟ್ಟು ಇಳಿಯೆಂದು, ನನಗೆ ಅಪ್ಪಣೆ ಮಾಡುತ್ತೀಯಾ? ಇದು ನನ್ನ ಕುದುರೆಯು ಹೀಗಿದ್ದು ನನ್ನ ಮೇಲೆಯೇ ಅಪರಾಧವನ್ನು ಹೊರಿಸುತ್ತಾನೆ ನೋಡಿದಿರಾ ! ಎಂಥ ಧರ್ಮದ ದಿವಸಗಳು ಪ್ರಾಪ್ತವಾದವು ನೋಡಿರಿ, ಎಂದುಅನ್ನಹತ್ತಿದನು.
ಈ ಪ್ರಕಾರ ಉಭಯತರು ಪಟ್ಟಣದ ಮಧ್ಯಬೀದಿಯಲ್ಲಿ ವಾದ ವಿವಾದ ಮಾಡುತ್ತ ನಿಂತುಕೊಂಡರು, ನೆರೆಹೊರೆಯವರು ನೆರೆದರು ಈ ವ್ಯಾಜ್ಯದ ವರ್ತಮಾನವು ಬೀರಬಲನ ಕಿವಿಯವರೆಗೆ ಹೋಯಿತು ಆಗ ಅವನು ಅವರಿಬ್ಬರನ್ನು ಕರೆಯಿಸಿಕೊಂಡು ಸತ್ಯವಾದ ಸಂಗತಿ ಯೇನೆಂದು ವಿಚಾರಿ ಸಿದನು ಆಗ ಮಣಿಪುರದ ದೊರೆಯು ವ್ಯಾಜ್ಯದ ಆದ್ಯೋಪಾಂತ ಸಂಗತಿಯನ್ನು ವಿವರಿಸಿದನು ಆಮೇಲೆ ಬಿಕ್ಷುಕನು ಮುಂದೆಬಂದು - ಮಹಾರಾಜ! ನಾನು ನನ್ನ ಕುದುರೆಯೆಮೇಲೆ ಕುಳಿತುಕೊಂಡು, ಈ ಪಟ್ಟಣಕ್ಕೆ ಬರಹತ್ತಿದೆನು ಮಾರ್ಗದಲ್ಲಿ ಇವನು ಬಂದು ಇದು ನನ್ನ ಕುದುರೆ; ಕೆಳಗೆ ಇಳಿ; ಎಂದು ನಿರ್ಭಂದಿಸ ಹತ್ತಿದ್ದಾನೆ ಸತ್ಯವಾದ ಸಂಗತಿಯನ್ನು ವಿಜ್ಞಾಪನೆ ಮಾಡಿಕೊಂಡಿದ್ದೆನೆ ಯೋಗ್ಯವಾದ ನಿರ್ಣಯದಿಂದ, ನನ್ನ ಕುದುರೆಯು ನನ್ನ ಕೈವಶವಾಗುವಹಾಗೆ ಮಾಡಿರಿ ಎಂದು ವಿಜ್ಞಾಪನೆ ಮಾಡಿಕೊಂಡನು ಅದಕ್ಕೆ ಬೀರಬಲನು - ಈ ದಿವಸ ಈ ಕುದುರೆಯು ನನ್ನ ಹತ್ತಿರದಲ್ಲಿಯೇ ಇರಲಿ ಪ್ರಾತಃಕಾಲದಲ್ಲಿ ಇದರ ನಿರ್ಣಯ ಮಾಡುವೆನು; ಎಂದು ಹೇಳಿ ಅವರಿಬ್ಬ ರನ್ನೂ ಕಳುಹಿಸಿಕೊಟ್ಟನು.
ಮರುದಿವಸ ಮಣಿಪುರದ ದೊರೆಯೂ ಬಿಕ್ಷುಕನೂ ನಿಯತವಾದ ಸಮಯಕ್ಕೆ ನ್ಯಾಯಾಸ್ಥಾನಕ್ಕೆ ಬಂದರು ಉಭಯತರ ಕಡೆಯಿಂದಲೂ, ಪ್ರಮಾಣವನ್ನು ಮಾಡಿಸಿದನು. ಆಮೇಲೆ ಕುಂಟ ಬಿಕ್ಷುಕನನ್ನು ಕುರಿತು ನಿನ್ನ ಅಶ್ವವು , ಬಾದಶಹರ ಅಶ್ವಶಾಲೆಯಲ್ಲಿ ಅದೆ ಅದನ್ನು ತೆಗೆದುಕೊಂಡು ಬಾ, ಎಂದು ಹೇಳಿದನು ಆ ಅಶ್ವಶಾಲೆಯಲ್ಲಿ ಅಸಂಖ್ಯಾತವಾದ ಅಶ್ವಗಳು ಇದ್ದವು ಅದರಲ್ಲಿ ತನ್ನ ಅಶ್ವ ಯಾವದೆಂಬದು ತಿಳಿಯದೆ ಹೋಯಿತು. ಆ ಮೇಲೆ ಚಂದ್ರಕಾಂತನನ್ನು ಕಳುಹಿ ಕೊಟ್ಟನು ಅವನು ಅಶ್ವಶಾಲೆಯಲ್ಲಿ ಕಾಲಿಟ್ಟ ಕೂಡಲೆ ಅವು ತನ್ನ ಯಜಮಾನನನ್ನು ಗುರುತಿಸಿ ಹೇಷಾರವವನ್ನು ಮಾಡಿತು ಈ ಸಂಗತಿಯನ್ನು ಅಶ್ವ ಶಾಲೆಯ ಅಧ್ಯಕ್ಷನು ಬೀರಬಲನಿಗೆ ತಿಳಿಸಿದನು ಆಗ ಬೀರಬಲನು ಆ ತುರಗವನ್ನು ಚಂದ್ರಕಾಂತನಿಗೆಕೊ ಡಿಸಿ, ಭಿಕ್ಷುಕನಿಗೆ, ಐವತ್ತು ಪೆಟ್ಟುಗಳನ್ನು ಬಲವಾಗಿ ಹೊಡೆಯಿರಿ : ಎಂ ದು ಅಪ್ಪಣೆ ಮಾಡಿದನು.
ಆಮೇಲೆ ಚಂದ್ರಕಾಂತನು - ತಾವು ಈ ನ್ಯಾಯ ವಿಮರ್ಶೆಯನ್ನು ಯಾವ ಆಧಾರದಮೇಲಿಂದ ಮಾಡಿದಿರಿ? ಎಂದು ಕೇಳಿದನು ಅದಕ್ಕೆ ಬೀರ ಬಲನು - ಈ ಹೆಳವನು ಅಶ್ವಶಾಲೆಗೆ ಹೋಗಿನೋಡಲು, ಇವನಿಗೆ ಕುದುರೆ ಯ ಗುರುತವು ಸಹ ಹತ್ತಲಿಲ್ಲ ನೀವು ಹೋದಕೂಡಲೆ, ಕುದುರೆಯು ಆ ನಂದದಿಂದ ಹೇಷಾರವವನ್ನು ಮಾಡಹತ್ತಿತು ಇಷ್ಟೇ ಆಧಾರದ ಮೆಲಿಂದ ಇದು ನಿಮ್ಮ ಕುದುರೆಯೆಂದು ನಿರ್ಣಯಿಸಿ, ನಿಮ್ಮ ವಶಕ್ಕೆ ಕೊಡಿಸಿದೆನು, ಎಂ ದು ಹೇಳಿದನು ಆಗ ಚಂದ್ರಕಾಂತನು ತನ್ನ ನಿಜಸ್ಥಿತಿಯನ್ನು ಮರೆಮಾಚಿ ಕೊಂಡು, ತನ್ನ ದೇಶಕ್ಕೆ ಹೊಟುಹೋನು, ಆ ತನ್ನ ದೇಶದಲ್ಲಿ ಬೀರಬಲನ ಚಾತುರ್ಯವನ್ನು ಬಹುವರಿಯಾಗಿ ಹೊಗಳಿದನು.

೧೭೭. ಕಮ್ ಅಸಲಕಾ ಅಸಲ, ಅಸಲಕಾ ಕಮ್ ಅಸಲ, ಗದ್ದೀಕಾ ಗಧಾ , ಔರಬಾಜಾರಕಾ ಕುತ್ತಾ

ಮಲಿಯಾಳ ದೇಶದಧಿಪತಿಯಾದ ರೋಹಸೇನನು " ಕಮ್ ಅಸಲ ಕಾ ಅಸಲ, ಅಸಲಕಾ ಕಮ್ ಅಸಲ, ಗದ್ದೀಕಾ ಗಧಾ ಔರ ಬಾಜಾರ ಕಾಕು ತಾ ” ಈ ನಾಲ್ಕು ವಸ್ತುಗಳನ್ನು ಶೀಘ್ರವಾಗಿ ಕಳಿಸಿ ಕೊಡಿರಿ ; ಇಲ್ಲವಾ ದರೆ ಯುದ್ಧಸಿದ್ಧತೆಯನ್ನು ಮಾದಿರಿ ! ಎಂಬ ಅಭಿಪ್ರಾಯ ಗರ್ಭಿತವಾದ ಒಂದು ಲೇಖನವನ್ನು ಬರೆದು, ದೂತ, ಮುಖಾಂತರವಾಗಿ ಅಕಬರ ಬಾದ ಶಹನಿಗೆ ಕಳುಹಿಸಿ ಕೊಟ್ಟನು ಬಾದಶಹನು ಆ ಪತ್ರಿಕೆಯನ್ನೊದಿಕೊಂಡ ಕೂಡಲೆ ಮ್ಲಾನವದನನಾಗಿ ಕುಳಿತುಕೊಂಡನು. ಅಷ್ಟರಲ್ಲಿ ಬೀರಬಲನು ಬಂದು ಮುಖವು ಮ್ಲಾನವಾದ ಕಾರಣವೇನೆಂದು ಕೇಳಿದನು. ಬಾದಶಹನು ಆ ಲೇಖನವನ್ನು ಬೀರಬಲನ ಕೈಯಲ್ಲಿತ್ತು ಇದರಲ್ಲಿ ಲೇಸಿರುವ ಪದಾ ರ್ಥಗಳು ದೊರೆಯುವದು ಅಸಂಭವವು ವ್ಯರ್ಥವಾಗಿ ಪ್ರಾಣಹಾನಿ ಯಾಗು ವದಲ್ಲಾ ! ! ಎಂದು ಚಿಂತಿಸುತ್ತೇನೆ ” ಎಂದು ಹೇಳಿದನು. ಆಗ ಬೀರಬಲ ನು " ಈ ಪದಾರ್ಥಗಳು ದೊರೆಯುವದು ಅಸಂಭವವಲ್ಲ ಸ್ವಲ್ಪ ಶ್ರಮಸಾ ಧ್ಯದಿಂದ ದೊರೆಯುವವು ಅದಕ್ಕೋಸುಗ ಮಲೆಯಾಳದಧಿವನಿಗೆ ಒಂದು ವರುಷದವಧಿ ಯೊಳಗಾಗಿ ಕಳುಹಿಸಿಕೊಡುತ್ತೇನೆ ” ಎಂಬದಾಗಿ ಪ್ರತ್ಯು ತರವನ್ನು ಬರೆದು ಕಳುಹಿಸಿರಿ ನಾನು ಈ ಪದಾರ್ಥಗಳನ್ನು ಒದಗಿಸಿಕೊ ಡುತ್ತೇನೆ ಎಂದು ಹೇಳಿದನು. ಬೀರಬಲನ ಸಮ್ಮತಿಯಿಂದ ಬಾದಶಹನು, ಮಲಿಯಾಳದ ಅರಸನಿಗೆ ಪ್ರತ್ಯುತ್ತರವನ್ನು ಬರೆದು ಕಳುಹಿಸಿದನು ಬೀರಬ ಲನು ಈ ಪದಾರ್ಥಗಳ ಶೋಧಾರ್ಥವಾಗಿ ಒಂದು ಲಕ್ಷರೂಪಾಯಿಗಳನ್ನು ಬೊಕ್ಕಸದೊಳಗಿಂದ ತೆಗೆದುಕೊಂಡು ವರ್ತಕನ ವೇಷದಿಂದ ರೋಹಸೇನ ನ ರಾಜಧಾನಿಯನ್ನು ಕುರಿತು ತೆರಳಿದನು. ಅಲ್ಲಿ ಹೋಗಿ ತಲುಪಿದ ಮೇಲೆ ಕೊತವಾಲನ ಮನೆಯ ಹತ್ತಿರ ಒಂದು ಗ್ರಹವನ್ನು ಕ್ರಯಕ್ಕೆ ತೆಗೆದು ಕೊಂಡು ಅದರಲ್ಲಿ ತನ್ನ ಪ್ರಸ್ತಾನವನ್ನಿಟ್ಟು ವ್ಯವಹಾರವನ್ನು ಆರಂಭಿಸಿ ದನು ಆಮೇಲೆ ಆ ನಗರದ ಕೊತವಾಲ ನೊಡನೆ ಸ್ನೇಹವನ್ನು ಇಟ್ಟು ದಿನಾಲು ಅವನನ್ನು ತನ್ನ ಮನೆಗೆ ಊಟಕ್ಕೆ ಕರೆಯೋಣ, ದಾನ, ಮಾನಾ ದಿಗಳಿಂದ ಸತ್ಕರಿಸೋಣ ಮೊದಲಾದ ಸಾಧನಗಳಿಂದ ಆಸ್ನೇಹವನ್ನು ವೃದ್ಧಿ ಪಡಿಸಿದನು. ಆಗ ಕೊತವಾಲನು ನಗರದಲ್ಲಿ ಹೊಸದಾಗಿಬಂದ ಕಲಾ ವಂತಿನಿಯರನ್ನು ಕರೆದುಕೊಂಡು ಬಂದು, ಗಾಯನ ವಾದನಗಳನ್ನು ಮಾ ಡಿಸಿ ಈ ಸಾವುಕಾರನ ಕಡೆಯಿಂದ ಉಚಿತವನ್ನು ಕೊಡಿಸಿ ಕಳುಹುವ ಸಾಂಪ್ರದಾಯವನ್ನಿಟ್ಟನು. ಹೀಗಿರಲು ಆ ಪಟ್ಟಣಕ್ಕೆ ಷೋಡಶ ವರುಷ ಪ್ರಾಯದ ಒಬ್ಬ ವೇಶ್ಯಯು ಬಂದಳು. ಈ ವರ್ತಮಾನವು ಕೊತವಾಲನ ಕಿವಿಗೆ ಬಿದ್ದ ಕೂಡಲೆ ಅವನು ತನ್ನ ನೂತನ ಮಿತ್ರನ ಬಳಿಗೆ ಬಂದು ನಿನ್ನೆ ಯ ದಿವಸ ಈ ಪಟ್ಟಣಕ್ಕೆ ಒಬ್ಬ ವೇಶೈಯು ಬಂದಿದ್ದಾಳೆ. ಅವಳು ಗಾಯ ನವಾದನಗಳಲ್ಲಿ ಅತಿಪ್ರಖ್ಯಾತಿಯನ್ನು ಪಡೆದಿರುವಳಂತೆ ಅದು ಹ್ಯಾಗೆ ಇರ ಲಿ ! ಅವಳ ರೂಪವನ್ನಂತೂ ವರ್ಣಿಸುವದ ಸಾಧ್ಯವು ಅಪ್ಸರೆಯರಲ್ಲಿ ಅಂಥ ರೂಪವತಿಯು ದೊರಕುವಳೋ ಇಲ್ಲವೋ ? ನಾನಂತೂ ನೋಡಿ ಬ್ರಾಂತ ನಾದೆನು ಆದರೆ ನಾನು ಬ್ರಾಂತನಾಗಿ ಉಪಯೋಗವೇನು ! ಹೆಸರು ಕ್ರಿ ರಸಾಗರ ಭಟ್ಟ ಮನೆಯಲ್ಲಿ ಹುಳಿಮಜ್ಜಿಗೆ ಇಲ್ಲ, ಎಂಬ ಸಾಮತಿಯಂತೆ ನನ್ನ ಅವಸ್ಥೆಯದೆ ಆದರೆ ನಿನ್ನಂಥ ಲಕ್ಷ್ಮಿ ಪುತ್ರರಿಗೆ ಅವಳು ಯೋಗ್ಯ ಲಾಗಿದ್ದಾಳೆ ಇದರಲ್ಲಿ ಏನೂ ಸಂದೇಹವಿಲ್ಲ ನಿನಗೆ ಇಚ್ಛೆಯಿದ್ದರೆ ನಾಳೆ ಪ್ರಾ ತಃ ಕಾಲದಲ್ಲಿ ಅವಳನ್ನು ಇಲ್ಲಿಗೆ ಕರೆಸೋಣ ಎಂದು ಪ್ರಶಂಸೆ ಮಾಡಹತ್ತ ಲು ಧನಾಡ್ಯನಾದ ಬೀರಬಲನು "ವೇಷಧಾರಿಯಾದ ವರ್ತಕನು ಸಮ್ಮತಿಸಿ ದನು. ಮರುದಿವಸ ಆ ವೇಶ್ಯೆಯು ಸಾವುಕಾರನ ಮನೆಗೆ ಬಂದು ತನ್ನಲ್ಲಿದ್ದ ಗಾನ ವಿದ್ಯೆಯನ್ನೂ ನರ್ತನ ಚಮತ್ಕಾರವನ್ನೂ ವಿಶದ ಪಡಿಸಿದಳು ಬೀರ ಬಲನು ಅವಳ ವಿದ್ವತೆಗೆ ಆನಂದಪಟ್ಟು ಕೊತವಾಲನನ್ನು ಕುರಿತು, ಇವ ಳಿಗೆ ಏನು ಕೊಡಬೇಕು ! ಎಂದು ಪ್ರಶ್ನೆ ಮಾಡಿದನು ಆ ಕೂಡಲೆ ಕೊತವಾ ಲನು ಇವಳಯೋಗ್ಯತೆಗೆ ಸರಿಯಾಗಿ ಕೊಡಬೇಕಾದರೆ ಏನಿಲ್ಲೆಂದರೂ ಎರ ಡು ನೂರು ರೂಪಾಯಿಗಳನ್ನು ಕೊಡಬಹುದು ಎಂದು ಹೇಳಿದನು ತಕ್ಷ ಣಕ್ಕೆ ಪೆಟ್ಟಿಗೆ ಯೊಳಗಿಂದ ಎರಡುನೂರು ರೂಪಾಯಿಗಳನ್ನು ವೇ ಶ್ಯೆಯ ಮುಂದೆ ಸುರುವಿದನು. ಅದನ್ನು ಕಂಡು ಅವಳು ವರ್ತಕ ಮಹ ಯ ನಾನು ನಿಮ್ಮಂಥ ದಾನ ಶೂರರನ್ನು ಇಂದಿನವರೆಗೂ ನೋಡಿದ್ದಿಲ್ಲವು ನಾನು ನಿಮ್ಮ ಪಾಪಗಳನ್ನು ಬಿಟ್ಟು ಎಲ್ಲಿಯೂ ಚಲಿಸುವದಿಲ್ಲ ಕೃಪಾಳುಗ ಲಾಗಿ ನನ್ನ ವಾಂಛಿತವನ್ನು ಪೂರ್ಣಮಾಡಬೇಕು ಎಂದು ವಿಜ್ಞಾಪನೆಮಾ ಡಿಕೊಂಡಳು ಧನಾಡ್ಯನು ಅವಳ ಮಾತಿಗೆ ಒಪ್ಪಿಕೊಂಡು ಅವಳ ಗೃಹಕ್ಕೆ ತೆರಳಿ ಅನೇಕ ಪ್ರಕಾರದ ಸುಖವಿಲಾಸಗಳಲ್ಲಿ ರಾತ್ರಿಯನ್ನು ಒಂದು ಕ್ಷಣ ದಂತೆ ಕಳೆದು ಪ್ರಾತಃಕಾಲದಲ್ಲಿ ತನ್ನ ಮನೆಗೆ ಬಂದನು.
ಮುಂದೆ ಕಿಂಚಿತ್ಕಾಲದ ಮೇಲೆ ಕೊತವಾಲನು ಈ ಸಾವುಕಾರನಿಗೆ ವಿವಾಹ ಮಾಡಿಕೊಳ್ಳುವದು ಯುಕ್ತವೆಂದುಬೋಧಿಸಹತ್ತಿದನು ಆಗ ಸಾವು ಕಾರನು ನನಗೆ ಯಾವದಾದರೊಂದು ಕುಲೀನ ಮನೆತನದ ಕನ್ಯೆಯು ದೊ ರೆತರೆ, ವಿವಾಹ ಮಾಡಿಕೊಳ್ಳುತ್ತೇನೆಂದು ಹೇಳಿದನು ಅದಕ್ಕೆ ಕೊತವಾಲನು ನಿನ್ನ ಸಲುವಾಗಿ ನಾನು ಕನ್ಯೆಯನ್ನು ಶೋಧಿಸುವ ಪ್ರಯತ್ನ ಮಾಡುತ್ತೇನೆ, ಸಾವುಕಾರ - ಒಳ್ಳೇದು, ಅಂಥಕನ್ಯೆಯು ದೊರೆತರೆ, ಬಹಳೇ ಉತ್ತಮವು.
ಕೊತವಾಲನು ಕನ್ಯಾಶೋಧವನ್ನು ನಡೆಯಿಸಿದನು ದೈವವಶಾತ್ ಕುಲೀನ ಮನೆತನದ ರೂಪವತಿಯಾದ ಬಬ್ಬ ಕನ್ಯೆ ಯು ದೊರೆತಳು ಅವಳ ಕರೆತಂದು ಸಾವು ಕಾರನಿಗೆ ತೋರಿಸಿದನು. ಅವನು ಒಪ್ಪಿಕೊಂಡನು ಯಥಾವಿಧಿಯಾಗಿ ವಿವಾಹ ಸಮಾರಂಭವು ಜರಗಿತು, ವಧುವು ಮನೆಗೆ ಬಂದಳು.

ಯಾವಾಗ ಹೆಂಡತಿಯು ಗೃಹದಲ್ಲಿ ಬಂದು ವಾಸಮಾಡಿದಳೋ ಆದಿನ ಮೊದಲ್ಗೊಂಡು ಪ್ರತಿದಿವಸದಲ್ಲಿ ಬಲವಾದ ಒಂದು ಪೆಟ್ಟನ್ನು ಕೊಟ್ಟು ಹೊರಗೆ ಹೋಗುವ ಪರಿಪಾಠವಿಟ್ಟನು. ಮುಂದೆ ಒಂದುದಿವಸ ಆ ಸಾವುಕಾ ರನು ಪೇಟೆಯೊಳಗಿಂದ ಒಂದು ಪಕ್ವವಾಗಿದ್ದ ಕರಬೂಜೀ ಹಣ್ಣನ್ನು ತಂದು ಸಮನಾದ ಎರಡು ಭಾಗಗಳನ್ನು ಮಾಡಿ ಅವುಗಳ ಮೇಲೆ ಸುಭ್ರವಾದ ಒಂದು ಬಟ್ಟೆಯನ್ನು ಪರಿವೇಷ್ಟನವಾಡಿ ಕೆಲವು ಹೊತ್ತು ಇಟ್ಟನು. ಆಮೇ ಲೆ ಅದರೊಳಗಿಂದ ರಕ್ತವರ್ಣದ ನೀರು ಪ್ರವಿಸಹತ್ತಲು ಅದನ್ನು ತೆಗೆದು ಕೊಂಡು ಧಾವಿಸಿ ಮನೆಗೆಬಂದು ಒಂದು ಪೆಟ್ಟಿಗೆಯಲ್ಲಿಟ್ಟು, ಬೀಗವನ್ನು ಹಾಕಿ ಆ ಪೆಟ್ಟಿಗೆಯನ್ನು ತನ್ನ ಹೆಂಡತಿಯ ಸ್ವಾಧೀನಕ್ಕೆ ಕೊಟ್ಟು ಒಂದು ಬಲವಾದ ಪೆಟ್ಟನ್ನು ಕೊಟ್ಟು, ರಾಜತನಯನ ಶಿರವನ್ನು ಕೊಯ್ದುಕೊಂ ಡುಬಂದು ಈ ಪೆಟ್ಟಿಗೆಯಲ್ಲಿಟ್ಟಿದ್ದೇನೆ ಅನ್ಯರಿಗೆ ಈ ವರ್ತಮಾನವು ತಿಳಿಯ ಬಹಳಜೋಕೆ ! ಒಂದುವೇಳೆ ಈ ವರ್ತಮಾನವು ಬಯಲಿಗೆ ಬಂ ನಿನ್ನನ್ನು ಕಡಿದು ತುಂಡುಮಾಡಿ ಬಿಟ್ಟೇನು ! ” ಎಂದು ಆಜ್ಞೆಮಾಡಿ ಹೊರಬಿದ್ದು ಹೋದನು. ಆ ಸ್ತ್ರೀಯು ರೋದನ ಮಾಡಲಾರಂಭಿಸಿದಳು, ಅವಳಧ್ವನಿಯು ಕೊತವಾಲನಿಗೆ ಕೇಳಬರಲು ಅವನು ನಾಲ್ಕೆಂಟುಜನ ಸಿಪಾ ಯಿಗಳನ್ನು ಕರೆದುಕೊಂಡು ಓಡುತ್ತಸಾವುಕಾರನ ಮನೆಗೆ ಬಂದನು ಮತ್ತು ರೋದನಕ್ಕೆ ನಿಮಿತ್ಯವೇನೆಂದು ಕೇಳಿದನು. ಆಗ ಆ ಸಾವುಕಾರನ ಮಡದಿ ಯು- " ನನ್ನ ಪತಿಯು ಈ ಪಟ್ಟಣದ ರಾಜತನಯನ ಶಿರವನ್ನು ಕೊಯ್ದು ಕೊಂಡು ಬಂದು ಈ ಪೆಟ್ಟಿಗೆಯಲ್ಲಿಟ್ಟು ಬೀಗವನ್ನು ಹಾಕಿಕೊಂಡು ಹೊರ ಗೆಹೋಗಿದ್ದಾನೆ ಈ ಸಂಗತಿಯನ್ನು ಗುಪ್ತವಾಗಿ ಇಡು ! ಎಂದು ನನಗೆ ಅಪ್ಪಣೆಮಾಡಿ ಬಲವಾಗಿ ಪ್ರಹಾರಮಾಡಿ ಹೋಗಿದ್ದಾನೆ, ಆ ಪೆಟ್ಟಿನ ನೋ ವಿನಿಂದ ನಾನು ರೋದಿಸಹತ್ತಿದ್ದೇನೆ” ಎಂದು ಹೇಳಿದಳು. ಅವಳಬೆನ್ನ ಮೇ ಲಿನ ಬಾಸಳಿಕೆಗಳನ್ನು ನೋಡಿದಕೂಡಲೇ ಸಾವುಕಾರನನ್ನು ಹಿಡಿದುಕೊಂ ಡುಬರಿ ! ಎಂದು ತನ್ನ ಸಿಪಾಯಿಗಳಿಗೆ ಹೇಳಿದನು. ಅವರು ಕೂಡಲೆ ಧಾ ವಿಸಿ ಹೋಗಿ ಮಾರ್ಗದಲ್ಲಿ ಹೋಗುತ್ತಿದ್ದ ಬೀರಬಲನನ್ನು ಹಿಡಿದು, ಚತು ರ್ಭುಜಮಾಡಿ ನಿಂದಿಸುತ್ತ ಹೊಡೆಯುತ್ತ ದಬ್ಬುತ್ತ ಕೊತವಾಲನೆಡೆಗೆ ಎಳೆ ತಂದರು. ಆಗ ಆ ಸಾವುಕಾರನು ಕೊತವಾಲಸಾಹೇಬ ನೀವು ನನ್ನ ಪರಮ ಮಿತ್ರರಾಗಿದ್ದು ನನ್ನನ್ನು ಹೊಡೆದುಬಡೆದು ಯಾಕೆ ಪೀಡಿಸುತ್ತೀರಿ. ಕೊತವಾಲ ಈ ಸಮಯದಲ್ಲಿ ನೀನು ನನ್ನ ಮಿತ್ರನಲ್ಲ, ನಿನ್ನಿಂದ ಮಹತ್ತರವಾದ ಒಂದು ಅಪರಾಧವು ಸಂಘಟಿಸಿದೆ ” ಎಂದು ಹೇಳಿ, ಅವನ ನ್ನು ರಾಜಸಭೆಗೆ ತೆಗೆದುಕೊಂಡು ಹೋಗಿ. ಈ ಪೃಥ್ವಿನಾಥ! ಇವನು ಒಂ ದು ಮಹತ್ತಾದ ಅಪರಾಧವನ್ನು ಮಾಡಿದ್ದಾನೆ. ಏನಂದರೆ- ಈ ಯುವರಾಜನ ತಿರವನ್ನು ಕಡಿದುಕೊಂಡು ಹೋಗಿ ಪೆಟ್ಟಿಗೆಯಲ್ಲಿಟ್ಟು ಬೀಗಹಾಕಿ, ಈ ಸು ದ್ಧಿಯು ಅನ್ಯರಿಗೆ ವಿದಿತವಾಗದಂತೆ ಜಾಗ್ರತೆಯಿಂದ ಇರು ! ಎಂದು ಅಪ್ಪ ಣೆಮಾಡಿ ನಿರಪರಾಧಿಯಾದ ತನ್ನ ಸ್ತ್ರೀಯನ್ನು ಚನ್ನಾಗಿ ಪ್ರಹರಿಸಿ ಹೊ ರಟು ಹೋಗಿದ್ದಾನೆ ಅವಳು ರೋದಿಸುವ ಸ್ವರವು ಸಮೀಪದಲ್ಲಿದ್ದ ನನ್ನ ಕಿ ವಿಗೆ ಕೇಳಿಸಲು, ನಾನು ಹೋಗಿ ಸಮಾಚಾರವೆಲ್ಲವನ್ನು ತಿಳಿದುಕೊಂಡು ಇವನನ್ನು ಹಿಡತರಿಸಿ, ಸನ್ನಿಧಿಯಲ್ಲಿ ಒಪ್ಪಿಸಿದ್ದೇನೆ ” ಎಂದು ಅರಿಕೆಮಾಡಿ ಕೊಂಡನು. ಆಗ ರಾಜನು ಯಾವದನ್ನೂ ವಿಚಾರಿಸದೆ; " ವಧಸ್ಥಾನಕ್ಕೆ ಕರೆದುಕೊಂಡು ಹೋಗಿ ತಲೆಹೊಡೆದು ಬಿಡರಿ, ” ಎಂದು ಆಜ್ಞಾಪಿಸಿದನು. ಕೊತವಾಲನು ಸಾವುಕಾರನನ್ನು ಕರೆದುಕೊಂಡು ವಧಸ್ಥಾನಕ್ಕೆ ನಡೆದನು " ಇದನ್ನು ಕಂಡು ಸಾವುಕಾರನ ಸೇವಕರು ಈ ವರ್ತಮಾನವನ್ನು ತಮ್ಮ ಒಡೆಯನ ಆಜ್ಞೆಯಪ್ರಕಾರ ಒಡತಿಗೆ ತಿಳಿಸಿದರು. ಅದನ್ನು ಕೇಳಿ ಕ್ರೋ ಧಾವಿಷ್ಟಳಾಗಿದ್ದ ಆ ಸಾವುಕಾರನ ಸ್ತ್ರೀಯು- " ಅರಿಷ್ಟವು ಕಳೆದುಹೋ ಯಿತು ನಾನು ಪರಿಪರಿಯಿಂದ ಅವನಸೇವೆಯನ್ನು ಮಾಡುತ್ತಿದ್ದರೂ ಸಹ ದಿನಾಲು ನನಗೆ ಪೆಟ್ಟುಗಳೇನು ತಪ್ಪುತ್ತಿದ್ದಿಲ್ಲ ಆದದ್ದು ಒಳಿತೇ ಆಯಿತು ” ಎಂದು ಗುಣುಗುಟ್ಟಿದಳು, ಸೇವಕರು ಈ ಮಾತನ್ನು ತಮ್ಮ ಯಜಮಾನ ನಿಗೆ ತಿಳಿಸಿದರು. ಆಗ ಸಾವುಕಾರನು ವೇಶ್ಯಾಸ್ತ್ರೀ ಯಳಿಗೆ ಹೇಳಿ ಕಳುಹಿಸಿ ದನು, ಮತ್ತು ಕೊತವಾಲನನ್ನು ಕುರಿತು “ ಕೊತವಾಲಸಾಹೇಬ ! ನನ್ನ ನ್ನು ಆ ವೇಶ್ಯಯ ಗೃಹದವಾರ್ಗವಾಗಿ ಕರೆದುಕೊಂಡು ಹೋಗಿರಿ ” ಎಂ ದು ಬಿನ್ನಹ ಮಾಡಿಕೊಂಡನು. ಈ ಮಾತಿಗೆ ಕೊತವಾಲನು ಸಮ್ಮತಿಸಿ ಆ ಮಾರ್ಗದಿಂದಲೇ ಸಾಗಿದನು, ಆ ವೇಶೈಯ ಗೃಹವು ಸಮೀಪಿಸಿದ ಕೂಡಲೆ ಸಾವುಕಾರನು ಗಟ್ಟಿಯಾಗಿ ಕೂಗಿಕೊಂಡನು ಆ ಧ್ವನಿಯನ್ನು ಗುರುತಿಸಿ, ಆ ವೇಶೈಯು ಗೃಹದ ಮುಂಬಾಗಿಲ ಹತ್ತರಬಂದು ಸಾವುಕಾರನ ದುರವ ಸ್ಥೆಯನ್ನು ಕಂಡು ಶೋಕಾಕುಲ ಹೃದಯಲಾಗಿ, ಆ ಕೊತವಾಲನಹತ್ತರ ಬಂದು.. " ಜಮಾದಾರಸಾಹೇಬ ! ಈ ಸಾವುಕಾರನಿಗೆ ಇನ್ನು ಎರಡುಘಳಿ ಗೆ ಅವಧಿಯನ್ನು ಕೊಡಿರಿ ನಾನು ಮಹಾರಾಜರ ಬಳಿಗೆ ಹೋಗಿ ಇವನಾ ಣರಕ್ಷಣೆಯ ಬಗ್ಗೆ ಸಾಹಸಮಾಡಿ ನೋಡುತ್ತೇನೆ ತಮ್ಮಶ್ರ ಮದಬಗ್ಗೆ ಕಿಂ ಚಿತ್ ಈ ದ್ರವ್ಯದಾನವನ್ನು ಸ್ವೀಕರಿಸಬೇಕು ” ಎಂದು ವಿಜ್ಞಾಪನೆಮಾಡಿ ಕೊಂಡು ಎರಡುನೂರು ರೂಪಾಯಿಗಳನ್ನು ಕೊತವಾಲನ ಪದರಿನಲ್ಲಿ ಸು ರುವಿದಳು. ಕೊತವಾಲನು ಆ ದ್ರವ್ಯವನ್ನು ಸ್ವೀಕರಿಸಿ ನಿನ್ನ ಮಾರ್ಗಪ್ರತೀ ಕ್ಷೆಯನ್ನು ಎರಡು ಘಳಿಗೆಯವರೆಗೆ ಮಾಡುತ್ತೇನೆಂದು ಹೇಳಿದನು.
ಆಗ ಆ ಕಲಾವಂತಿನಿಯು ರಾಜಸಭೆಯನ್ನು ಪ್ರವೇಶಿಸಿ, ತನ್ನ ನೃತ್ಯ ಗಾಯನಗಳಿಂದ ರಾಜರ ಮನಸ್ಸನ್ನು ಪ್ರಸನ್ನೀಕರಿಸಿ ಕೊಂಡಳು. ರಾಜ- ನಾನು ನಿನ್ನ ವಿದ್ವತ್ತತೆಯನ್ನು ಕಂಡು ಪ್ರಸನ್ನನಾಗಿದ್ದೇನೆ, ನಿನ್ನ ಇಚ್ಛೆಯೇನಿರುವದು ಕಥನಮಾಡು.

ವೇಶ್ಯಾ -ಪೃಥ್ವಿಕ ! ತಾವು ನನ್ನ ಮೇಲೆ ಪ್ರಸನ್ನರಾಗಿದ್ದರೆ ಆ ಸಾವುಕಾ ರನಿಗೆ ಪ್ರಾಣದಾನವನ್ನೀಯಬೇಕು. ರಾಜಾ ಅವನು ಇದ್ದ ಹೊತ್ತಿಗೆ ಮೃತ್ಯು ಮುಖವನ್ನು ಪ್ರವೇಶಿಸಿರಬಹುದು
ವೇಶ್ಯಾ- ಹೀಗೆ ನಡಿಯದೆ ಇದ್ದ ಪಕ್ಷದಲ್ಲಿ ಅವನಿಗೆ ಪ್ರಾಣದಾನವನ್ನೀಯ ಬೇಕು. . ರಾಜಾ- "ಒಳ್ಳೆದು”ಎಂದು ಹೇಳಿ, ಸೇವಕರನ್ನು ಕರೆದು " ಆ ಸಾವುಕಾರನನ್ನು ಬಿಟ್ಟುಬಿಡುವಂತೆ " ರಾಜನ ಅಪ್ಪಣೆಯಾಗಿರುವದೆಂದು ಕೊತವಾಲನಿಗೆ ತಿಳಿಸಿರಿ, ಶೀಘ್ರವಾಗಿ ಗಮನಮಾಡಿರಿ ಎಂದು ಹೇಳಿದನು. ಕರ್ಮಚಾರಿಗಳು ಧಾವಿಸುತ್ತ ಹೋಗಿ ಕೊತವಾಲನಿಗೆ ರಾಜಾಜ್ಞೆಯನ್ನು ತಿಳಿಸಿದರು, ಆ ಕೂಡಲೇ ಅವನು ಬೀರಬಲನನ್ನು ಬಿಟ್ಟುಬಿಟ್ಟನು. ಸಾವು ಕಾರನು ಹಿಂದಿರುಗಿ ಬರುವಾಗ, ವೇಶೈಯು ಮಾರ್ಗದಲ್ಲಿ ಬೆಟ್ಟಿಯಾಗಿ ಅವ ನನ್ನು ಕರೆದುಕೊಂಡು ಹೋಗಿ ಖೇದವನ್ನು ಪ್ರದರ್ಶನ ಮಾಡಿದಳು. ಆಗ ಆ ಸಾವುಕಾರನು ಇವಳನ್ನು ಸಮಾಧಾನಪಡಿಸಿ, ಧೈರ್ಯ ಬಿಡಬೇಡ ? ನಾನು ಈ ಕೆಲಸವನ್ನು ಮಹತ್ವವಾದ ಒಂದು ಕಾರ್ಯ ದುದ್ದಿಶ್ಯಗಿ ಮಾಡಿದ್ದೇನೆ, ಅದು ಹಿಂದಿನಿಂದ ನಿನಗೆ ವಿದಿತವಾದೀತು ಈಗನಾನು ಸದ್ಯಕ್ಕೆ ನನ್ನ ಪಟ್ಟ ಣವನ್ನು ಕುರಿತು ತೆರಳುತ್ತೇನೆ ಇನ್ನು ನಾಲ್ಕು ದಿವಸಗಳೊಳಗೇ ಇಲ್ಲಿಗೆಮ ರಳಿ ಬರುತ್ತೇನೆ, ಆಗ ನಿನ್ನನ್ನು ಕರೆದುಕೊಂಡು ಹೋಗುವೆನು ” ಎಂದು ಧೈರ್ಯ ಹೇಳಿದನು.
ಆಮೇಲೆ ಆ ಪಟ್ಟಣದಲ್ಲಿದ್ದ ತನ್ನ ಯಾವತ್ತು ವ್ಯವಹಾರವನ್ನು ನಿರ್ಭಂದ ನೆ ಮಾಡಿಟ್ಟು ದಿಲ್ಲಿಗೆ ಬಂದು ಅಕಬರ ಬಾದಶಹನಿಗೆ ಬೆಟ್ಟಿಯಾಗಿ " ಮಲಿ ಯಾಳದ ಅರಸನುಕೇಳಿದ ಯಾವತ್ತು ಪದಾರ್ಥಗಳನ್ನು ಸಂಪಾದಿಸಿಕೊಂ ಡು ಬಂದಿದ್ದೇನೆ” ಎಂದು ಬಿನ್ನವಿಸಿದನು, ಅದನ್ನು ಕೇಳಿ ಬಾದಶಹನು ಸಂತುಷ್ಟಾಂತರಂಗನಾಗಿ ಶಹಬಾಸ ! ಆ ವಸ್ತುಗಳು ಎಲ್ಲಿ ಅವ, ಅವುಗಳಂ ನು ತೋರಿಸು ಎಂದು ಕೇಳಿದನು. ಅದಕ್ಕೆ ಬೀರಬಲನು ನರವರ ! ಆ ಪದಾ ರ್ಥಗಳನ್ನು ಇಲ್ಲಿಗೆ ತರುವದು ಅಸಾಧ್ಯವಾಗಿ ತೋರಿದ್ದರಿಂದ ಅಲ್ಲಿಯೇ ಬಿಟ್ಟು ಬಂದಿದ್ದೇನೆ ತಾವು ಒಂದು ಪತ್ರವನ್ನು ಬರೆದುಕೊಡಿರಿ, ನಾನು ಮಲಿ ಯಾಳಕ್ಕೆ ಹೋಗಿ ಆ ವಸ್ತುಗಳನ್ನು ಆ ರಾಜನ ಸ್ವಾಧೀನಪಡಿಸಿ, ತಮಗೆ ಪ್ರತ್ಯುತ್ತರವನ್ನು ತಂದುಕೊಡುತ್ತೇನೆ ಎಂದು ವಿಜ್ಞಾಪಿಸಲು, ಬಾದಶಹ ನು ಬೀರಬಲನ ಅನುಮತಿಯಪ್ರಕಾರ ಲೇಖನವನ್ನಿತ್ತು ತನ್ನ ಮುದ್ರೆಯ ಉಂಗುರವನ್ನೊತ್ತಿ ಕೊಟ್ಟನು.
ಬೀರಬಲನು ತನ್ನ ಯೋಗ್ಯತೆಗೆ ಸರಿಯಾಗಿ ಗಜ, ತುರಗ, ಸೇನಾ, ಮೊದಲಾದ ಪರಿವಾರದೊಂದಿಗೆ ಮಲಿಯಾಳಕ್ಕೆ ಪ್ರಯಾಣ ಬೆಳೆಸಿದನು. ಪ ಯಣ ಗತಿಯಿಂದ ಮಲಿಯಾಳದ ರಾಜಧಾನಿಯನ್ನು ಪ್ರವೇಶಿಸಿ, ತಾನು ಬಂದ ವರ್ತಮಾನವನ್ನು ರಾಜನಿಗೆ ಹೇಳಿ ಕಳುಹಿಸಿ ಕೊಟ್ಟನು ಆಕೂಡ ಲೆ ಆ ರಾಜನು ಸನ್ಮಾನದಿಂದ ಬೀರಬಲನನ್ನು ತನ್ನೆಡೆಗೆ ಬರಮಾಡಿಕೊಂ ಡು, ಯೋಗ್ಯಾಸನದಲ್ಲಿ ನಿಶ್ರಮಿಸುವಂತೆ ಹೇಳಿ, ಬಂದ ಸಮಾಚಾರವೇನೆಂ ದು ಪ್ರಶ್ನೆ ಮಾಡಿದನು, ಆಗ ಬೀರಬಲನು ಅಕಬರ ಬಾದಶಹನ ಪತ್ರಿಕೆಯ ನ್ನು ಅವನ ಮುಂದೆ ಇಟ್ಟನು ರಾಜನು ಆ ಪತ್ರಾಭಿಪ್ರಾಯವನ್ನು ತಿಳಿದು ಕೊಂಡು, ಆ ವಸ್ತುಗಳು ಎಲ್ಲಿ ಅವೆ ? ಎಂದು ಕೇಳಿದನು ಆಗ ಬೀರಬಲನು ಕೊತವಾಲ ಸಾಹೇಬರಂತೂ ಇಲ್ಲಿಯೇ ಇರುವರು ಇನ್ನು ಒಬ್ಬ ಸ್ತ್ರೀಯ ನ್ನೂ , ಒಬ್ಬ ವೇಶೈಯನ್ನೂ ಕರೆತರಿಸಬೇಕು ಎಂದು ಹೇಳಿ, ಆ ಸ್ತ್ರೀಯಳ ಮತ್ತು ವೇಶ್ಯೆಯ ಹೆಸರನ್ನೂ ಹೇಳಿ, ಅವರು ವಾಸಿಸುವ ಗೃಹವು ಯಾವ ಬೀದಿಯಲ್ಲಿ ಇರುವವೆಂಬದನ್ನೂ ತಿಳಿಸಿದನು ಕರ್ಮಚಾರಿಗಳು ರಾಜಾಜ್ಞೆ ಯಪ್ರಕಾರ ಅವರೀರ್ವರನ್ನೂ ರಾಜಸಭೆಗೆ ಕರೆತಂದರು ಆಗ ಬೀರಬಲನು ಮಹಾರಾಜ ! ನಾನು ಈ ಪೂರ್ವದಲ್ಲಿ ಸಾವು ಕಾರನ ವೇಷದಿಂದ ಈ ಪಟ್ಟ ಣಕ್ಕೆ ಬಂದಿದ್ದೆನು. ಆಗ ನಾನು ( ತನ್ನ ಪತ್ನಿಯನ್ನು ತೋರಿಸಿ ) ಈ ಸ್ತ್ರೀ ಯಳನ್ನು ನಾನು ವಿವಾಹ ಮಾಡಿಕೊಂಡಿದ್ದೆನು ಪ್ರತಿದಿನ ನಾನು ಹೊರ ಬೀಳುವಾಗ ಇವಳಿಗೆ ವೇತ್ರಾಯುಧದಿಂದ ಒಂದು ಬಲವಾದ ಪೆಟ್ಟನ್ನು ಕೊಟ್ಟು ಹೋಗುವ ನಿಯಮವನ್ನಿಟ್ಟಿದ್ದೆನು ಒಂದುದಿವಸ ನನಗೆ ಪಕ್ವವಾದಒಂ ದು ಕರಬೂಜಿಯ ಹಣ್ಣು ದೃಷ್ಟಿಗೆ ಬೀಳಲು, ಅದನ್ನು ಕ್ರಯಕ್ಕೆ ತೆಗೆದು ಕೊಂಡು, ಎರಡು ಭಾಗಮಾಡಿ, ಒಂದು ಶುಭ್ರವಾದ ವಸ್ತ್ರವನ್ನು ಪರಿವೇಷ್ಟ ನ ಮಾಡಿ, ಒಂದು ಪೆಟ್ಟಿಗೆಯಲ್ಲಿಟ್ಟು ಬೀಗಹಾಕಿ; ಇವಳನ್ನು ಕುರಿತು ನಾನು ರಾಜತನಯನ ಶಿರಸ್ಸನ್ನು ಕೊಯ್ದುಕೊಂಡು ಬಂದಿದ್ದೇನೆ ಈ ಸಂ ಗತಿಯನ್ನು ಯಾರಮುಂದೆ ಪ್ರಕಟಮಾಡಬೇಡ, ಎಂದು ಕಟ್ಟಪ್ಪಣೆ ಮಾಡಿ. ವೇತ್ರಾಯುಧದಿಂದ ಹೊಡೆದು ಹೊರಬಿದ್ದು ಹೋದೆನು ಆಮೇಲೆ ಇವಳು ಮನಸ್ವಿಯಾಗಿ ರೋದಿಸಿ, ನನ್ನ ಬಂಧನಕ್ಕೆ ಕಾರಣಳಾದಳು, ಮ ತ್ತು ವಧಸ್ಥಾನಕ್ಕೆ ಕರದೊಯ್ಯುವಾಗ ಈ ಸಂಗತಿಯನ್ನು ಇವಳಿಗೆ ಹೇಳಿ ಕಳುಹಿಸಲು, ನನ್ನನ್ನು ರಕ್ಷಿಸುವದಕ್ಕೆ ಕಿಂಚಿತ್ತಾದರೂ ಪ್ರಯತ್ನ ಪಡದೆ ಸ್ಪಷ್ಟವಾಗಿ ಕುಳಿತುಕೊಂಡು ಬಿಟ್ಟಳು ಇವಳ ಜಾತಿಯಲ್ಲಿ ಕುಲಿನಳಾಗಿದ್ದ ರೂ, ಇಂಥ ನಿಕೃಷ್ಟತೆಯನ್ನು ತೋರಿಸಿದಳು ಆದ್ದರಿಂದ ತಾವು ಬಯಸಿದ ಪ್ರಧಮವಸ್ತುವು, - ಅನಲಮ ಕಮ್ ಅಸಲ ” ವೆಂಬದು; ಇವಳೇ ಇನ್ನು ದ್ವಿ ತೀಯ ವಸ್ತುವಾದ : ಕಮ್ ಅಸಲಕಾ ಅಸಲ ” ಎಂಬ ವಸ್ತುವು ಈ ವೇ ಶ್ಯೆಯು, ಹ್ಯಾಗಂದರೆ ಇವಳು ಕನಿಷ್ಟ ಜಾ ತಿಯವಳಾದರೂ, ನನ್ನ ಪ್ರಾಣ ರಕ್ಷಣೆಯನ್ನು ಮಾಡುವದಕ್ಕೆ ಯಾವ ಯಾವ ಉಪಾಯಗಳನ್ನು ಮಾಡಿದ ಳೆಂಬ ಸಂಗತಿಯು ತಮಗೆ ವಿದಿತವದೆ. ಇನ್ನು ಮೂರನೇ ವಸ್ತುವಾದ " ಬಾಜಾರಕಾಕುತ್ತಾ ” ಎಂಬದು, ಈ ಕೊತವಾಲನು ಹ್ಯಾಗಂದರೆ, “ ಯಜಮಾನನು ತನಗೆ ಆಹಾರವನ್ನು ಹಾಕುತ್ತ ಜೋಪಾಸನೆ ಮಾಡುತ್ತಿರು ವಾಗ ಮಾತ್ರ ಶುನಕವು ಒಡೆಯನ ಸುತ ಮುತ್ತು ಚಲ್ಲಾಟವಾಡಿ ಅವನ ಮಾನಾನಂದವನ್ನು ಮಾಡುತ್ತಿರುವಂತೆ ಈ ಕೊತವಾಲನು ನನ್ನೊಡನೆ ಕೆ ಲವು ದಿವಸ ಸ್ನೇಹಿತನಂತೆ ನಟಿಸಿ, ಈ ನನ್ನ ಹೆಂಡತಿಯು ರಾಜಪುತ್ರನ ಕೊಲೆಯ ಸಂಗತಿಯನ್ನು ತಿಳಿಸಿದಕೂಡಲೆ, ಹಿಂದಿನ ಉಪಕಾರವನ್ನೆಲ್ಲ ಮ ರೆತು ಬಿಟ್ಟು, ಅವಳು ಹೇಳಿದ ಸಂಗತಿಯು ಸತ್ಯವಾದದ್ದೋ, ಅಥವಾ ಮಿ ಥ್ಯವಾದದ್ದೋ ಎಂಬದನ್ನು ಸಹಾ ವಿಚಾರಿಸದೆ, ನನ್ನನ್ನು ಚತುರ್ಭುಜನ ನ್ನಾಗಿ ಮಾಡಿ, ತಮ್ಮ ಸನ್ನಿಧಿಗೆ ತಂದು ನಿಲ್ಲಿಸಿದನು. ಇನ್ನು ನಾಲ್ಕನೇ ವ ಸ್ತುವಾದ " ಗದ್ದಿಕಾ ಗಧಾ ” ಎಂಬದು ಆವಸ್ತುವು ತಾವೇ ಆಗಿರುವಿರಿ ! ಯಾಕಂದರೆ, ಕೊತವಾಲನು ನನ್ನನ್ನು ತಮ್ಮ ಸನ್ನಿಧಿಯಲ್ಲಿ ತಂದು ನಿಲ್ಲಿಸಿ ನಾನು ಮಾಡಿದ ಅಪರಾಧವನ್ನು ಅರುಹಲು, ತಾವು ಯಾವಸಂಗತೆಯ ನ್ನೂ ಅನ್ವೇಷಣ ಮಾಡದೆ ನನ್ನ ತಲೆ ಹೊಡೆಯುವಂತೆ ಅಪ್ಪಣೆ ಮಾಡಿಬಿಟ್ಟ ರಿ ! ಇಷ್ಟೇ ಅಲ್ಲ, ಈ ಕಾಲದ ವರೆಗೂ, ರಾಜ ಪುತ್ರನು ಜೀವದಿಂದ ಇರುವ ನೋ, ಅಥವಾ ಮೃತನಾಗಿರುವನೋ ಎಂಬದರ ಕಡೆಗೆ ಲಕ್ಷ್ಯವನ್ನೇ ಕೊಡ ಲಿಲ್ಲ. ಇನ್ನೂ ಆ ಕರಬೂಜಿ ಹಣ್ಣಿನ ತುಂಡುಕಳು ಹಾಗೇ ಪೆಟ್ಟಿಗೆಯಲ್ಲಿವೆ ಬೇಕಾದರೆ ತರಿಸಿಕೊಂಡು ನೋಡಬೇಕು ನಿಮ್ಮ ನಾಲ್ಕು ವಸ್ತುಗಳು ನಿಮಗೆ ಮುಟ್ಟಿದವು ಈ ಬಗ್ಗೆ ಪ್ರತ್ಯುತ್ತರವನ್ನು ದಯಪಾಲಿಸಬೇಕು” ಎಂದು ಬಿ ನ್ನವಿಸಿದನು.
ಈ ಪ್ರಕಾರ ಬೀರಬಲನ ಕಥನವನ್ನು ಕೇಳಿ, ಮಲಿಯಾಳದರಸನು ಬಹಳ ಸಂತೋಷಹೊಂದಿ, ಅವನ ಚಾತುರ್ಯವನ್ನು ಬಹು ಪರಿಯಾಗಿ ಪ್ರಶಂಸ ಮಾಡಿದನು. ನಾಲ್ಕು ವಸ್ತುಗಳು ತಲುಪಿದವೆಂದು, ಪ್ರತಿ ಲೇಖವ ನ್ನು ಕೊಟ್ಟು ವಸ್ತ್ರಾಭರಣಗಳಿಂದ ಸನ್ಮಾನಿಸಿ ಅಪ್ಪಣೆ ಕೊಟ್ಟನು ಬೀ ರಬಲನು ತನ್ನ ಸತಿಯನ್ನೂ, ಆ ವೇಶೈಯನ್ನೂ ಕರೆದುಕೊಂಡು ದಿಲ್ಲಿಗೆ ಹೊರಟು ಬಂದನು.
ಆಮೇಲೆ ಬಾದಶಹನಿಗೆ ಬೆಟ್ಟಯಾಗಿ ಯಾವತ್ತು ವೃತ್ತಾಂತವನ್ನು ಕಥನಮಾಡಿದನು ಅದನ್ನು ಕೇಳಿಬಾದಶಹನು ಸಂತುಷ್ಟನಾಗಿ, ಬಹಳೇ ಸ ನ್ಮಾನಿಸಿದನು.
... ೧೭೮. ಟೂಟ, ಘಾಟ, ಸಡೇಕೊ, ಕೈಸೇ ವಿಧಿ ಸರಾಹಿಯೇ! ” ಒಂದುಸಾರೆ ಬಾದಶಹನು, ಈ ಮೇಲೆ ಹೇಳಿದ ಸಮಸ್ಯೆಯನ್ನು ಕೊ

ಟ್ಟು ಪೂರ್ಣಮಾಡು ! ಎಂದು ಹೇಳಿದನು ಬೀರಬಲನು ಆ ಕೂಡಲೆ ಈ ಕೆ ಳಗಿನ ಪದ್ಯವನ್ನು ರಚಿಸಿ ಹೇಳಿದನು

"ಟೂಟೇಪರ ಈಖ ತಾಕಿ ಮಿಶ್ರೀ ಗುಡ ಕಂದಕರೀ
ತಾಕೋ ಲೈಪ್ರಸಾದ ದೇವ ದೇವಿನ ಚಢಾಯಿಯೇ |
ಘಟಕ ಕಪಾಸ ಪತ ರಾಖತ ಹೈ ಆ ಲಮಕಿ,
ತಾಕೇ ಹೊತ ವಸ್ತ್ರ ಕಹಾ ಕಹಾ ಲೌಗಿನಾಇಯೇ |
ಸಡೇಜ ಬಸನ ತಾಕೇಶ್ವೇತ ವರ್ಣ ಕಾಗಜ್ ಕರೀ :
ತಾವರ ಕುರಾನ ಔರ ಪುರಾನಹೂ ಲಿಖಾಇಯೇ|
ಕಹೈ ಬೀರಬಲ ಸುನೋಅಕಬರ ಬಾದಶಾಹ
ಟೂಟೆ ಘಾಟ ಸಡೇಕೋ ಐಸಿ ವಿಧಿ ಸರಾಹಿಯೇ |

ಇದರ ಅರ್ಥವು ಕೆಳಗೆ ಬರೆದಂತೆ ಅದೆ " ಟೂಟೇ " ಅಂದರೆ ಮುರಿ ದದ್ದು, ಯಾವದು? ಕಬ್ಬು ಅಂದರೆ ಇಕ್ಷುದಂಡವು ಕಬ್ಬನ್ನು ಮುರಿದುತಂ ದು, ಗಾಣಕ್ಕೆ ಹಾಕಿ, ರಸವನ್ನು ತೆಗೆದು, ಕೊಪ್ಪರಿಗೆಯಲ್ಲಿ ಸುರುವಿ, ಕಾ ಯಿಸಿ, ಬೆಲ್ಲ, ಸಕ್ಕೆರೆ, ಕಲ್ಲುಸಕ್ಕರೆ, ಮೊದಲಾದ ಪದಾರ್ಥಗಳನ್ನು ಸಿದ್ಧಪ ಡಿಸಿ, ಪರಮೇಶ್ವರನಿಗೆ ಅರ್ಪಿಸಬೇಕು.
"ಘಾಟೇ ” ಅಂದರೆ ಒಡೆದದ್ದು. ಅದು ಯಾವದೆಂದರೆ ಹತ್ತಿಯು ( ಕಾರ್ಪಸ ) ಹೊಲದಲ್ಲಿ ಬಿತ್ತಿದ ಹತ್ತಿಯು ಕಾಯಾಗಿ ಒಡೆದಮೇಲೆ ಅದನ್ನು ಬಿಡಿಸಿ ತಂದು, ರಾಟಿಗೆ ಹಾಕಿ ನೂಲು ಮಾಡಿ, ವಸstraಗಳನ್ನು ನೆಯಿದು, ಅನೇಕ ಪ್ರಕಾರದ ಬಟ್ಟೆಗಳನ್ನು ಮಾಡಿಕೊಳ್ಳಬೇಕು.
" ಸಡೇಸೋ” ಅಂದರೆ ಕೊಳೆತದ್ದು ಅದು ಯಾವದು? ಕಾಗದವು ಅನೇಕ ಪ್ರಕಾರದ ಹರಕು ಬಟ್ಟಿಗಳನ್ನು ತಂದು, ಕೊಳೆಹಾಕಿ, ಅವುಕೊ ಳೆತಮೇಲೆ ಅದರೊಳಗಿನ ಮಲವನ್ನೆಲ್ಲ ತೆಗೆದು ಸ್ವಚ್ಛಮಾಡಿ ಕಾಗದವನ್ನು ಸಿದ್ಧಪಡಿಸಬೇಕು. ಆಮೇಲೆ ಅದರಮೇಲೆ ಪುರಾಣ, ಇತಿಹಾಸ ಮೊದಲಾದ ಅನೇಕ ಧರ್ಮಗ್ರಂಥಗಳನ್ನು ಬರೆದು ಇಡಬೇಕು ಎಂದು ಸಮಸ್ಯೆಯನ್ನು ಪೂರ್ಣ ಮಾಡಿದನು. ಅದನ್ನು ಕೇಳಿ ಬಾದಶಹನು ಬಹಳಸಂತೋಷವನ್ನು ಹೊಂದಿದನು.
-(೧೭೯. ಕೇಹೀ ಕಾರಣ ಪ್ರಾತ ಬಾಫಾತ ಹೈ ಪಾನೀ)-
ಹಿಮಂತ ಋತುವು ಆರಂಭವಾಗಿತ್ತು ಒಂದು ದಿವಸ ಬಾದಶಹನು ತನ್ನ ಪ್ರಾಸಾದದ ಅಗ್ರಭಾಗದಲ್ಲಿ ಕುಳಿತುಕೊಂಡು ಬಿಸಿಲನ್ನು ಕಾಯಿಸಿ

ಕೊಳ್ಳುತ್ತಿದ್ದನು. ಆಗ ಅವನ ದೃಷ್ಟಿಯು ಯಮುನಾಜಲದಲ್ಲಿ ಹೊರಡುವ
೩೪೪
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು

ಬಾಷ್ಯದಮೇಲೆಬಿತ್ತು ಅದು ಧೂಮ (ಹೊಗೆ)ಯಂತೆ ಕಂಡುಬಂದದ್ದರಿಂದ ಕೇಹಿ ಕಾರಣ ಪ್ರಾತ ಬಪಾತ ಹೈ ವಾನೀ ! ಎಂಬ ಸಮಸ್ಯೆಯನ್ನು ರಚ ನೆಮಾಡಿಕೊಂಡು ಬಂದು ಬೀರಬಲನನ್ನು ಕುರಿತು, “ ಬೀರಬಲ್ಲ ? ಈಗ ಶೀತಕಾಲವಿದ್ದು ನೀರು ಗಡ್ಡೆಗಟ್ಟಿ ಭರ್ಪದಂದೆ ಆಗಬೇಕು, ಹೀಗಿದ್ದು, ಪ್ರಾತಃಕಾಲದಲ್ಲಿ ನೀರಮೇಲೆ ಹೊಗೆಯು ಕಾಣುವದಲ್ಲಾ: ಇದರ ಕಾರಣ ವೇನು? ಎಂದು ಪ್ರಶ್ನೆ ಮಾಡಿದನು. ಆ ಕೂಡಲೆ ಬೀರಬಲನು.
ಏಕ ಸಮೈ ಲಂಕಾಪತಿ ರಾವನ, ಆನಿ ಹರೀಸಿಯ ರಾಮಕೀ ರಾನೀ
ಕೋಪಿಚಡೇ ದಶರತ್ಥಕೆ ನಂದನ, ಅಂಜನಿಪೂತ ಭಯೋ ಅಗವಾ
ನೀ | ಬಾಧಿಲಗೋಟ ಕಗೂರ ಚಢ್ಯೋ ಅರು ಲಂಕಜರೀ ಧರತೀ
ಅಕುಲಾನೀ ! ಜಾಯ ಸಮುದ್ರಮೆ ಪೂಛ ಬು‍‌ಝೀ ಇಹಿಕಾರಣ
ಪ್ರಾತ ಬಪಾತ ಹೈ ವಾನೀ ||
ಅಂದರೆ "ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಅರಣ್ಯವಾಸಕ್ಕೆ ಹೋದಾಗ ಲಂಕಾಧಿಪತಿಯಾದ ದಶಮುಖನು, ಸೀತಾದೇವಿಯ ಸೌಂದರ್ಯ ದ ಮಹಿಮಾತಿಶಯವನ್ನು ಕೇಳಿ ಮೋಹಿತರಾಗಿ ಸನ್ಯಾಸಿಯ ವೇ‍ಷವನ್ನು ಧಾರಣ ಮಾಡಿಕೊಂಡು ರಾಮಚಂದ್ರ ಮತ್ತು ಲಕ್ಷ್ಮಣರಿಲ್ಲದ ಸಂಧಿಯ ನ್ನು ಸಾಧಿಸಿ, ಸೀತಾದೇವಿಯನ್ನು ಹರಣಮಾಡಿಕೊಂಡು ಹೋದನು ಅದ ರಿಂದ ಶ್ರೀರಾಮನು ಸುಗ್ರೀವನ ಸ್ನೇಹವನ್ನು ಸಂಪಾದಿಸಿ, ಆವನ ಮಂತ್ರಿ ಯಾದ ಅಂಜನಾಸುತನನ್ನು ಸೀತಾದೇವಿಯ ಶೋಧಕ್ಕಾಗಿ ಕಳಿಸಿದನು. ಆಂಜನೇಯನು ಸೀತಾದೇವಿಯಿದ್ದಲಂಕಾನಗರವನ್ನು ಪ್ರವೇಶಿಸಿ ಅವಳಸ್ಥಿತಿ ಯನ್ನು ಕಣ್ಣಿನಿಂದ ನೋಡಿ ಆಮೇಲೆ ದಶಮುಖನಿಗೆ ಹಿತವಾಕ್ಯಗಳನ್ನು ಬೋಧಮಾಡುವದಕ್ಕೆ ರಾವಣನ ಸಭೆಯನ್ನು ಪ್ರವೇಶಿಸಿ ರಾಮಚಂದ್ರನ ಶೌರ್ಯೋದಾರ್ಯಗುಣಗಳನ್ನು ವರ್ಣಿಸಿ ಸೀತಾದೇವಿಯನ್ನು ರಾಮಚಂದ್ರನಿಗೆ ಒಪ್ಪಿಸಿಬಿಡು ಎಂದು ಬೋಧೆಮಾಡಲು ರಾವಣನು ಸಿಟ್ಟಿಗೆದ್ದು, ಹನುಮಂ ತನ ಪುಚ್ಛಕ್ಕೆ ಬಟ್ಟಿಗಳನ್ನು ಸುತ್ತಿಸಿ ತೈಲಾವಗಾಹನ ಮಾಡಿಸಿ ಬೆಂಕೀ ಹಚ್ಚಿದನು ಆ ಹನುಮಂತನು ತನ್ನ ಪುಚ್ಛದುರಿಯಿಂದ ಲಂಕಾಪಟ್ಟಣವ ನ್ನು ದಹನಮಾಡಿ ಆ ಬಾಲವನ್ನು ಸಮುದ್ರದಲ್ಲಿ ಅದ್ದಿದನು. ಆ ಉಷ್ಣತೆ ಯಿಂದ ಶೀತಕಾಲದಲ್ಲಿ ಸಹ ಜಲದ ಮೇಲೆ ಹೊಗೆ ಹೊರಡುತ್ತದೆ ಎಂದು ಹೇಳಿ ಅವನಸಮಸ್ಯೆಯನ್ನು ಮಾರ್ಣ ಮಾಡಿದನು.

-(೧೮೦ ಶೌಚ ಕೂಪದಲ್ಲಿಯ ಚಿತ್ರ)-

ಮಶದ ಪಟ್ಟಣದ ಬಾದಶಹನು ಯಾವದೋ ಒಂದು ಕಾರ್ಯದುದ್ದಿ ಶ್ಯವಾಗಿ ಬೀರಬಲನನ್ನು ತನ್ನೆಡೆಗೆ ಬರಮಾಡಿಕೊಂಡಿದ್ದನು. ತನ್ನ ಕಾರ್ಯವು ಪೂರ್ಣವಾದ ಮೇಲೆ ಇವನನ್ನು ಅವಮಾನಗೊಳಿಸಬೇಕೆಂದು ಅಕಬರ ಬಾದಶಹನ ಭಾವಪಟವನ್ನು ಕೌಚಕೂಪದ ಗೃಹದಗೋಡೆಗೆ ತೂಗಹಾಕಿದ್ದನು. ಬೀರಬಲನು ಬಹಿರ್ದಿಶೆಗೆ ಹೋದಾಗ ಆ ಭಾವಪಟವು ಕಣ್ಣಿಗೆ ಬಿತ್ತು. ಆಕೂಡಲೆ ಹಿಂದುರುಗಿ ಬಾದಕಹನ ಬಳಿಗೆ ಬಂದು, ಖಾವಂದ ತಮಗೆ ಮಲಬದ್ಧತೆಯ ರೋಗವು ಅಂಟಿಕೊಂಡಿರುವದೇನು ? ಎಂದು ಪ್ರಶ್ನೆ ಮಾಡಿದನು. ಆಗ ಆವನು ಅದ್ಯಾಕೆ ಎಂದು ಕೇಳಿದನು. ಅದಕ್ಕೆ ಬೀರಬಲನು, ಕೌಚಕೂಪದಲ್ಲಿ ತೂಗು ಹಾಕಿರುವ ನಮ್ಮ ಬಾದಕಹನ ಭಾವಪಟದ ಮೇಲೆ ತಮ್ಮ ದೃಷ್ಟಿಯು ಬಿದ್ದ ಕೂಡಲೆ ಭಯವು ಹುಟ್ಟಿ ತಾವು ಬೇಗನೆ ಮಲವಿಸರ್ಜನೆಯನ್ನು ಮಾಡಿಕೊಂಡು ಬರುತ್ತಿರಬಹುದೆಂಬಂತೆ ಕಾಣುತ್ತದೆ. ಇದರಲ್ಲಿ ಏನೂ ಸಂದೇಹವಿಲ್ಲ, ಎಂದನು.

ಈ ಮಾತು ಕಿವಿಗೆ ಬಿದ್ದ ಕೂಡಲೆ, ಮಶದದ ಬಾದಶಹನು ಲಜ್ಜಿತನಾಗಿ ಮುಖವನ್ನು ತಗ್ಗಿಸಿದನು.

೧೮೧. ಇಹದಲ್ಲಿ ಸುಖವುಂಟು, ಪರದಲ್ಲಿ ಇಲ್ಲ. ಪರದಲ್ಲಿ ಸುಖ
ವುಂಟು ಇಹದಲ್ಲಿ ಇಲ್ಲ ಇಹಪರಗಳೆರಡರಲ್ಲಿಯೂ ಸುಖ
ವಿಲ್ಲ. ಮತ್ತು ಇಹಪರಗಳೆರಡರಲ್ಲಿಯೂ ಸುಖ
ವುಂಟು. ಇಂಥ ಮನುಷ್ಯರು ಯಾರು ?

ಒಂದು ದಿವಸ ಅಕಬರ ಬಾದಶಹನು ಸಿಂಹಾಸನಾಧಿಷ್ಟಿತನಾಗಿ ಬೀರಬಲನನ್ನು ಕುರಿತು, ಮೇಲೆ ಬರೆದ ನಾಲ್ಕು ವಿಧದ ಮನುಷ್ಯರನ್ನು ತಂದು ತೋರಿಸು ಎಂದು ಅಪ್ಪಣೆಮಾಡಿದನು. ಆ ಕೂಡಲೆ ಬೀರಬಲನು ಅರಮನೆಯಿಂದ ಹೊರಬಿದ್ದು ಒಬ್ಬ ವೇಶ್ಯೆಯನ್ನೂ ಒಬ್ಬ ಸನ್ಯಾಸಿಯನ್ನೂ ಒಬ್ಬ ಭಿಕ್ಷುಕನನ್ನೂ ಒಬ್ಬ ಧರ್ಮಾತ್ಮನಾದ ಧನಾಡ್ಯಗೃಹಸ್ಥನನ್ನೂ ಕರೆದುಕೊಂಡು ರಾಜಸಭೆಯನ್ನು ಪ್ರವೇಶಿಸಿದನು, ಮತ್ತು ತಮ್ಮ ಆಜ್ಞಾನುಸಾರವಾಗಿ, ನಾಲ್ಕು ವಿಧದ ಮನುಷ್ಯರನ್ನು ಕರೆದುಕೊಂಡು ಬಂದಿದ್ದೇನೆ, ಎಂದು ವಿಜ್ಞಾಪನೆಯನ್ನು ಮಾಡಿಕೊಂಡನು. ಆಗ ಬಾದಶಹನು ಅದನ್ನು ವಿಸ್ತರಿಸಿ ಹೇಳು ? ಎಂದು ಅಪ್ಪಣೆಮಾಡಿದನು. ಆಗ ಬೀರಬಲನು ಭೂವರ ! ಈ ವೇಶೈಗೆ ಇಹದಲ್ಲಿ ಸುಖವಿರುವದೇ ಹೊರತು, ಪರಲೋಕದಲ್ಲಿ ಇವಳಿಗೆ ಸ್ವರ್ಗಾದಿ ಭೋಗಗಳು ದೊರೆಯಲಾರವು. ಇನ್ನು ಈ ಸನ್ಯಾಸಿಯು ಎರಡನೇ ಪ್ರಕಾರದವನು ಹ್ಯಾಗಂದರೆ, ಇವನು ಈ ಲೋಕದಲ್ಲಿ ಭಿಕ್ಷೆಯಿಂದ ಕಾಲಹರಣಮಾಡಿ ತನ್ನ ಉಪಜೀವನವನ್ನು ಸಾಗಿಸಿಕೊಂಡು ಜಗನ್ನಿಯಂತನ ಪಾದಾರವಿಂದವನ್ನು ನೆನೆಯುತ್ತಿರುವನು. ಇವನಿಗೆ ಒಂದು ದಿವಸ ಹೊಟ್ಟೆಗೆ ಸಾಕಾಗುವಷ್ಟು ಆಹಾರ ಸಾಮಗ್ರಿಯು ದೊರೆದರೆ ದೊರೆಯಿತು, ಇಲ್ಲವಾದರೆ ಇಲ್ಲ ಈ ಪ್ರಕಾರ ವಿರುವದರಿಂದ ಇಹಲೋಕದಲ್ಲಿ ಇವನಿಗೆ ಸೌಖ್ಯವು ದೊರಿಯುವದಿಲ್ಲ. ಪರಲೋಕದಲ್ಲಿ ಯಥೇಚ್ಛವಾದ ಸುಖವು ಲಭಿಸುವದು ಅದರಿಂದ ಇವನಿಗೆ ಇಹದಲ್ಲಿ ಸುಖವಿಲ್ಲ ಪರದಲ್ಲಿ ಸುಖವುಂಟು ಇನ್ನು ಈ ಭಿಕ್ಷುಕನು ಇವನು ತನ್ನ ಉದರ ಪೋಷಣೆಯ ಸಲುವಾಗಿ ದಿನಾಲು ಭಿಕ್ಷೆಬೇಡುವದಕ್ಕೆ ಹೋಗಿ ಅನೇಕ ಪ್ರಕಾರದ ಅಸತ್ಯ ಭಾಷಣಗಳನ್ನಾಡುತ್ತಾನೆ. ಇವನು ಅಹರ್ನಿಕ ಕಷ್ಟಪಡುವದರಿಂದ ಜಗನ್ನಿಯಂತನನ್ನು ಸ್ತುತಿಸಲಿಕ್ಕೆ ಒಂದರಕ್ಷಣವಾದರೂ ಕಾಲವು ದೊರೆಯುವದಿಲ್ಲ ಅದರಿಂದ ಇವನಿಗೆ ಇಹಪರಗಳೆರಡಲ್ಲಿಯೂ ಸುಖವು ದೊರೆಯಲಾರದು ಇನ್ನು ಈ ಧರ್ಮಾತ್ಮನಾದ ಧನಾಡ್ಯನು ನಾಲ್ಕನೇ ಪ್ರಕಾರದ ಮನುಷ್ಯನು ಹ್ಯಾಗಂದರೆ, ಇವನ ಹತ್ತಿರ ಅಸಂಖ್ಯಾಕವಾದ ಸಂಪತ್ತಿಯಿರುವದು ಆ ಸಂಪತ್ತಿನ ಬಲದಿಂದ ಅನೇಕ ಪ್ರಕಾರದ ಪುಣ್ಯಸಾಧನೆಗಳನ್ನು ಮಾಡಿಕೊಂಡು ತಾನು ಉಂಡುಟ್ಟು ಪರರಿಗೂ ಸುಖಕೊಡುತ್ತಾನೆ. ಇದರಿಂದ ಇವನಿಗೆ ಇಹಪರಗ ಳೆರಡರಲ್ಲಿಯೂ ಸುಖವುಂಟು. ಎಂದು ವಿಸ್ತರಿಸಿ ಹೇಳಿದನು.
ಬೀರಬಲನ ಈ ಪ್ರಕಾರದ ಚಾತುರ್ಯಯುಕ್ತವಾದ ಬಾಷಣಗಳನ್ನು ಕೇಳಿ ಬಾದಶಹನಿಗೂ ತದಿತರ ಸಭಾಸದರಿಗೂ ಹರುಷವೂ ಆಶ್ಚರ್ಯವೂ ಉಂಟಾಯಿತು. ಆಗ ಬಾದಶಹನು ಬೀರಬಲನು ಕರೆತಂದ ಆನಾಲ್ಕೂ ಜನರಿಗೆ ಅವರವರ ಯೋಗ್ಯತೆಯ ಪ್ರಕಾರ ಬಹುಮಾನವನ್ನಿತ್ತು ಕಳಿಸಿ ಕೊಟ್ಟನು ಮತ್ತು ಆ ಧನಾಡ್ಯನಿಗೆ ಪ್ರತಿದಿವಸ ರಾಜಸಭೆಯಲ್ಲಿ ಬಂದು ಕುಳಿತು ಕೊಳ್ಳುವ ಬಹುಮಾನವನ್ನಿತ್ತನು.

- ೧೮೨, ಚಂಚಲ ನೈನ ಛಿನೈನ ಛಿವಾಯೇ )-

ಒಂದು ದಿವಸ ಅಕಬರ ಬಾದಶಹನು ಸಾಯಂಕಾಲದಲ್ಲಿ ವಾಯು ಸೇವನಾರ್ಥವಾಗಿ ಹೊರಟನು ಆಗ ಅವನ ದೃಷ್ಟಿಯು ಒಬ್ಬ ತನ್ವಂಗಿಯ ಮೇಲೆಬಿತ್ತು ಬಾದಶಹನು ಬಂದದ್ದನ್ನು ಕಂಡು ಆ ಪ್ರಮದೆಯು ದ್ವಾರದ ಮರೆಗೆ ನಿಂತುಕೊಂಡಳು ಆ ಕೂಡಲೆ ಹಿಂದಿರುಗಿಬಂದು ಬೀರಬಲನನ್ನು ಕರೆಯಿಸಿ, ಚಂಚಲ ನೈನ ಛಿನೈನ ಛಿವಾಯೇ ಈ ಸಮಸ್ಯೆಯನ್ನು ಪೂರ್ತಿ ಗೋಳಿಸು ! ಎಂದು ಹೇಳಿದನು. ಆಗ ಬೀರಬಲನು.
ಸೂರ್ಯಛಿವೈ ಅದರೀ ಬದರೀ ಅರು ಚಂದ ಛಿವೈ ಹೈ ಅಮಾವಸ ಆಯೇ ವಾನೀಕೀ ಬೂನ ಪತಂಗ ಛಿವೈ ಅರು ಮೀನ ಛಿವೈ ಇ | ಚ್ಛಾಜಲವಾಯೇ ಭೋರಹುಯೇ ಪರಚೋರ ಛಿವೈ ಅರು ಮೋರ ಛಿವೈ ಋತು ಫಾಗುನ ಆಯೇ | ಓಟಕರೋಶತ ಘಾಂಘಟಕಿ ಪರ ಚಂಚಲ ನೈನ ಛಿವೈನ ಛಿವಾಯೇ ||
ಖಾವಂದ ಇದರ ಅಭಿಪ್ರಾಯವೆಂತೆಂದರೆ ಸೂರ್ಯನು ಪ್ರತಿ ದಿವಸ -ದಲ್ಲಿ ಪಶ್ಚಿಮಾಂಬುಧಿಯಲ್ಲಿ ಅದೃಶ್ಯನಾಗುತ್ತಾನೆ, ಚಂದ್ರನು ಅಮಾವಾಸ್ಯೆ ಯಲ್ಲಿ ಅದೃಶ್ಯನಾಗುತ್ತಾನ ಜಲವು ವಾಯುದೋಷಣೆಯಿಂದ ಅದೃಶ್ಯವಾಗುತ್ತದೆ ಮತ್ಸ್ಯವು ಜಲದಲ್ಲಿ ಅಡಗಿಕೊಳ್ಳುತ್ತದೆ ಗದ್ದಲವಾದ ಕೂಡಲೆ ಕಳ್ಳನು ಮರೆಯಾಗಿ ಹೋಗಿ ಕುಳಿತು ಕೊಳ್ಳುತ್ತಾನೆ ಫಾಲ್ಗುಣ ಮಾಸದಲ್ಲಿ ನವಿಲುಗಳು ಕಾಣದಾಗುತ್ತವೆ. ಆದರೆ ತರುಣಿಯರ ಚಲಚಲವಾದ ನಯನಗಳು, ದ್ವಾರವನ್ನು ಮರೆ ಮಾಡಿದರೂ ಸಹ, ಅದೃಶ್ಯವಾಗಲಿಲ್ಲ ಎಂದು ಹೇಳಿ ಸಮಸ್ಯೆಯನ್ನು ಪೂರ್ಣಮಾಡಿದನು.
ಈ ಕವಿತ್ವವನ್ನು ಕೇಳಿ ಬಾದಶಹನು ಹೃಮಾನಸನಾದನು.

- (೧೮೩. ಬಾದಶಹನ ನಖ)-

ಬಲಕ್ ಪಟ್ಟಣದ ಬಾದಶಹನ ಅಂಗುಲಿಯ ನಖಪು ಒಂದು ಕಾಳಗದಲ್ಲಿ ಘಾಯವಾಗಿ ಹೋಗಿತ್ತು, ಅವನ ಆಶ್ರಯದಲ್ಲಿದ್ದ ವೈದ್ಯರಿಂದಲೂ, ಧನ್ವಂತರಿಗಳಿಂದಲೂ ಅನೇಕ ಉಪಾಯಗಳನ್ನು ಮಾಡಿಸಿದನು. ಅದರಿಂದ ಏನೂ ಪ್ರಯೋಜನವಾಗಲಿಲ್ಲ ಅದರಿಂದ ಅವನು ಕುಪಿತನಾಗಿ ಯಾವತ್ತೂ ವೈದ್ಯರನ್ನು ಪ್ರತಿಬಂಧನದಲ್ಲಿ ಇಡೆಸಿಬಿಟ್ಟನು. ಮತ್ತು ಪರದೇಶದಿಂದ ಪ್ರಸಿದ್ಧರಾದ ಧನ್ವಂತರಿಗಳನ್ನು ಕರೆಯಿಸಿ ಔಷಧೋಪಚಾರ ನಡೆಯಿಸಿದನು ಅವರಿಂದಲೂ ಹೊಸ ಉಗುರು ಬರಲಿಲ್ಲ, ಆಗ ಅವರನ್ನು ಸಹ ಪ್ರತಿಬಂಧದಲ್ಲಿಟ್ಟು “ ನನ್ನ ಅಂಗುಲಿಯಲ್ಲಿ ನೂತನವಾದ ನಖವು ಪ್ರಾಪ್ತವಾದರೆ ನಿಮ್ಮನ್ನು ಈ ಬಂಧನದಿಂದ ತಪ್ಪಿಸುತ್ತೇನೆ, ಇಲ್ಲವಾದರೆ ಆಜನ್ಮ ಪರಿಯಂತರ ನಿಮ್ಮನ್ನು ಬಂಧನದಿಂದ ಬಿಡಲಾರೆನು ” ಎಂದು ಅಪ್ಪಣೆ ಮಾಡಿದನು. ಈ ಭಯದಿಂದ ಆ ದೇಶದಲ್ಲಿ ವೈದ್ಯರೆಂಬ ಹೆಸರೇ ಮುಳುಗಿ ಹೋಯಿತು.
ಈ ವರ್ತಮಾನವು ಕಿಂಚಿತ್ ಕಾಲವಾದಮೇಲೆ ಈ ಭರತವರ್ಷದಲ್ಲಿ ಪಸರಿಸಿತು, ಇಷ್ಟೇ ಅಲ್ಲ; ಅದು ಅಕಬರ ಬಾದಶಹನಿಗೂ ವಿದಿತವಾಯಿತು, ಆಗ ಅವನು ಬಲ್ಕ” ಪಟ್ಟಣದ ಬಾದಶಹನು ಬಹಳೇ ಅತ್ಯಾಚಾರಿಯಾಗಿದ್ದಾನೆ ಅವನ ರಾಜ್ಯದಲ್ಲಿಯ ಪ್ರಜೆಗಳೆಲ್ಲರೂ ತ್ರಸ್ತರಾಗಿದ್ದಾರೆ, ಆ ಜನರ ದುಃಖನಿವಾರಣೆಯ ಬಗ್ಗೆ ಯಾವ ಉಪಾಯವನ್ನು ಮಾಡಬೇಕು ! ಎಂದು ತನ್ನ ಸಭಾಸದರಲ್ಲಿ ಪ್ರಶ್ನೆಯನ್ನು ತೆಗೆದನು, ಆಗ ಬೀರಬಲನು ಭೂವರ ನನಗೆ ಆ ಪಟ್ಟಣಕ್ಕೆ ಹೋಗುವದಕ್ಕೆ ತಮ್ಮಿಂದ ಅನುಮತಿಯು ದೊರೆತರೆ ನಾನು ಅಲ್ಲಿಗೆ ಹೋಗಿ ಆ ಜನರ ದುಃಖಗಳನ್ನು ಯಾವದಾದರೊಂದುವಾಯ ದಿಂದ ದೂರೀಕರಿಸಿ ಬರುತ್ತೇನೆ ಎಂದು ಬಿನ್ನಹ ಮಾಡಿಕೊಂಡನು. ಬಾದಶಹನು ಪ್ರಸನ್ನತೆಯಿಂದ ಅಪ್ಪಣೆಕೊಟ್ಟನು.
ಬೀರಬಲನು ವೈದ್ಯನ ವೇಷವನ್ನು ಪರಿಧಾನ ಮಾಡಿಕೊಂಡು ತನ್ನ ಉದ್ಯೋಗಕ್ಕೆ ಬೇಕಾಗುವ ಪರಿಕರಗಳನ್ನೆಲ್ಲ ಸಿದ್ಧಪಡಿಸಿಕೊಂಡು ಬಲಕ್ ಪಟ್ಟಣಕ್ಕೆ ಪ್ರಯಾಣಮಾಡಿ ಕೆಲವುದಿವಸಗಳಲ್ಲಿ ತಲುಪಿದನು ಮತ್ತು ತನ್ನ ಉದ್ಯೋಗವನ್ನು ಆರಂಭಿಸಿದನು. ಆ ದೇಶದಲ್ಲಿ ಇವನ ಹೊರತು ಅನ್ಯವೈದ್ಯರು ಇಲ್ಲದ್ದರಿಂದ ಇವನ ಪ್ರಶಂಸೆಯು ಬಹುಬೇಗ ನಾಲ್ಕೂ ಕಡೆಗೆ ಪಸರಿ ಸಿತು, ಆ ಪಟ್ಟಣದೊಳಗಿನ ಪ್ರತಿಷ್ಟಿತರಾದ ನಾಲ್ಕು ಜನರು ಈ ವೈದ್ಯಕಿಯ ಉದ್ಯೋಗವನ್ನು ಬಿಟ್ಟುಬಿಡು, ಇಲ್ಲವಾದರೆ ಇಲ್ಲಿಯ ಬಾದಶಹನ ಕೋಪಕ್ಕೆ ಪಾತ್ರನಾದಿ ಎಂದು ಬೋಧಿಸಿ ತಮ್ಮಲ್ಲಿ ನಡೆದ ಅನಾಹುತವನ್ನೆಲ್ಲಾ ವಿಶದವಾಗಿ ಬಣ್ಣಿಸಿದರು, ಆದರೂ ಬೀರಬಲನು ಅವರಮೂತಿಗೆ ಎಳ್ಳಷ್ಟಾದರೂ ಭೀತನಾಗಲಿಲ್ಲ ತನ್ನ ಉದ್ಯೋಗವನ್ನು ಸಾಗಿಸಹತ್ತಿದನು, ಈ ವರ್ತಮಾನವು ಬಲದ ಬಾದಶಹನಿಗೂ ತಲುಪಿತು,
ಮರುದಿವಸವೇ ಬೀರಬಲನನ್ನು ಓಲಗಕ್ಕೆ ಕರೆಯಿಸಿ, ಹಕೀಮನಾ ಹೇಬ ನಿಮ್ಮ ಪ್ರಶಂಸೆಯು ನನ್ನ ಕಿವಿಯವರೆಗೂ ಬಂದು ತಲುಪಿದೆ, ನೀವು ನಿಮ್ಮ ಚಾತುರ್ಯದ ಬಲದಿಂದ ನನ್ನ ಅಂಗುಲಿಯ ನಖವನ್ನು ಪೂರ್ವವತ್ ಮಾಡಿ ಕೊಟ್ಟರೆ ನಾನು ನಿಮ್ಮ ಗುಣಾನುವಾದವನ್ನು ಆಜನ್ಮ ಪರಿಯಂತರ ಮರೆಯಲಿಕ್ಕಿಲ್ಲ ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಬೀರಬಲನು"ಜೀಹಾ ನನಗೆ ಈ ರೋಗದಮೇಲೆ ರಾಮಬಾಣದಂತಿರುವ ಒಂದು ಔಷಧವು ವಿದಿತವದೆ ಅದನ್ನು ಹಚ್ಚಿದ ಐದು ದಿವಸಗಳಲ್ಲಿಯೇ ಪೂರ್ವದಂತೆ ಉಗುರು ಬರುತ್ತದೆ ಈ ಔಷಧದಿಂದ ಗುಣವಾಗದೆ ಇರದು ಎಂದು ನಮ್ಮಗುರುಗಳು ಸಹ ಪ್ರತಿಜ್ಞೆಯ ಮೇಲಿಂದ ಹೇಳಿದ್ದಾರೆ, ಆದರೆ ನಾನು ಔಷಧಕ್ಕೆ ಹೇಳುವ ಪದಾರ್ಥಗಳನ್ನು ಮಾತ್ರ ತರಿಸಿಕೊಡಬೇಕು, ಅದರಮೇಲೆ ನಿಮ್ಮ ಉಗುರು ಪೂರ್ವದಂತಾಗದಿದ್ದರೆ ನನ್ನ ತಿರಸ್ಸನ್ನು ಖಂಡಿಸಿಬಿಡಬೇಕು ಎಂದನು ಆಗ ಪುನಃ ಬಾದಶಹನು ಇಂಥ ದೃಢಪ್ರತಿಜ್ಞೆಯಿಂದ ಹೇಳುವ ಒಬ್ಬ ವೈದ್ಯನಾದರೂ ಬೆಟ್ಟಿಯಾಗಿದ್ದಿಲ್ಲ ಎಂದನು. ಈ ಮಾತಿಗೆ ಬೀರಬಲನು ಪರಮೇಶನು ಬೆಂಬಲವಿದ್ದರೆ ಯಾವಕಾರ್ಯವೂ ಅಸಾಧ್ಯವಲ್ಲ ಆದರೆ ಔಷಧದ ಜೀನಸುಗಳು ದೊರೆಯುವದೇ ಪರಮ ಪ್ರಯಾಸವು ಎಂದು ಉತ್ಕರಕೊಟ್ಟನು. 堂 ಬಾದಶಹ :- ಅದರಲ್ಲಿ ಪ್ರಯಾಸವೇನು ! ನಾನು ಇಂಥ ಬಲಾಡ್ಯ ಬಾದಶಹ ನಿಮ್ಮ ಔಷಧದ ಪದಾರ್ಥಗಳನ್ನು ಸಿದ್ಧಪಡಿಸಿಕೊಡಲಾರೆನೆ.

ಬೀರಬಲ :- ಪರಮೇಶ್ವರನ ಕೃಪೆಯಿಂದಲೇ ಯಾವತ್ತೂ ಸಿದ್ಧವಾಗುತ್ತದೆ ಆದರೆ ನಾನು ಹೇಳುವ ಪದಾರ್ಥಗಳನ್ನು ತರಿಸಿಕೊಡುವದು ಕಿಂಚಿತ್ ಪ್ರಯಾಸವೇ ಸರಿ; ಇರಲಿ ಆದರೆ ನೀವು ಪ್ರತಿಜ್ಞಾ ಪೂರ್ವಕವಾಗಿ ಹೀಗೆ ಲೇಖವನ್ನು ಬರೆದುಕೊಡಬೇಕಲ್ಲಾ ಒಂದುತಿಂಗಳೊಳಗಾಗಿ ನಾನು ನೀವು ಹೇಳುವ ಔಷಧೀ ಪದಾರ್ಥಗಳನ್ನು ತರಿಸಿಕೊಡದಿದ್ದ ಪಕ್ಷದಲ್ಲಿ ಬಂದಿಯಲ್ಲಿ ಇಟ್ಟಿರುವ ಯಾವತ್ತು ವೈದ್ಯರನ್ನು ಬಿಟ್ಟು ಬಿಡುತ್ತೇನೆ, ಮತ್ತು ನಿಮ್ಮ ಮೇಲೆ ಯಾವ ಪ್ರಕಾರದ ದೋಷವನ್ನೂ ಕೊಡುವದಿಲ್ಲ; ” ಎಂಬದಾಗಿ ಒಂದು ತಮ್ಮ ಹಸ್ತಲಿಖಿತವಾದ ಪ್ರತಿಜ್ಞ ಪತ್ರವನ್ನು ಬರೆದುಕೊಡಬೇಕು, ನೀವು ಯಾವಕಾಲಕ್ಕೆ ಆ ಪದಾರ್ಥಗಳನ್ನು ಒದಗಿಸಿ ಕೊಡುವಿರೋ ಆ ಕಾಲಕ್ಕೆ ನಾನು ಬಂದು ಔಷಧವನ್ನು ಸಿದ್ಧಪಡಿಸಿ ಪೂರ್ವವತ್ ನಖವು ಉತ್ಪನ್ನವಾಗುವಂತೆ ಮಾಡುತ್ತೇನೆ.

ಈಪ್ರಕಾರದ ಭಾಷಣಗಳನ್ನು ಕೇಳಿ ಬಾದಶಹನು ಮನಸ್ಸಿನಲ್ಲಿ " ಈ ವೈದ್ಯನಿಗೆ ನನ್ನ ಪ್ರಭಾವವೂ, ಸಂಪತ್ತಿನ ಬಲವೂ ವಿದಿತವಿದ್ದಂತೆ ಕಂಡುಬರುವದಿಲ್ಲ, ಅಂಥ ಪದಾರ್ಥಗಳಾದರೂ ಯಾವವಿರಬಹುದು ” ಎಂದು ಯೋಚಿಸಿ, ಬೀರಬಲನ ಕಥನಾನುಸಾರವಾಗಿ ಪ್ರತಿಜ್ಞಾ ಪತ್ರವನ್ನು ಬರೆದು ಕೊಟ್ಟನು.
ಆಮೇಲೆ ಬೀರಬಲನು ತನ್ನ ಇಚ್ಛಾನುಸಾರವಾಗಿ ಕೆಲಸವು ಪೂರ್ಣವಾದಮೇಲೆ, ಬಾದಶಹನನ್ನು ಕುರಿತು ಖಾವಂದ,

"ಕ್ಯಾ ಅಜಬ ಆನಾಹೈ ಉಸ ನಾಖೂನಕಾ :
ಫಾಲಗರ ಗೂಲರಕಾಹೋವ ಪೇಕಾಬ ಮಛಲೀಕಾ |

ಅಂದರೆ, ಹೂವಾಡಿಗನ ಅಂಗಡಿಯೊಳಗಿನ ಪುಷ್ಪಗಳ ಸುವಾಸನೆ ಯನ್ನೂ ಮತ್ಸ್ಯ ಮೂತ್ರವನ್ನೂ ಸಂಪಾದಿಸಿದರೆ, ನಷ್ಟವಾದಂಥ ನಖವು ಬರುವದು, ಏನು ಆಶ್ಚರ್ಯವು ! ” ಎಂದು ವೈದ್ಯಶಾಸ್ತ್ರದಲ್ಲಿ ಉಲ್ಲೇಖಿಸ ಲ್ಪಟ್ಟದೆ ಹೂಜೂರ್ ತಾವು ಈಎರಡು ಪದಾರ್ಥಗಳನ್ನು ತರಿಸಿಕೊಟ್ಟರೆ ನಿಮ್ಮ ರೋಗವನ್ನು ದೂರಮಾಡುತ್ತೇನೆ.
ಬಾದಶಹನು ಈ ವಾಕ್ಯವನ್ನು ಕೇಳಿ, ತನ್ನ ಅಮಾತ್ಯನಿಗೆ ವೈದ್ಯನು ಹೇಳವ ಜೀನಸುಗಳನ್ನು ಬಹು ತೀವ್ರವಾಗಿ ತರಿಸಿಕೊಡು ಎಂಬದಾಗಿ ಅಪ್ಪಣೆ ಮಾಡಿದನು. ಆ ಅಮಾತ್ಯನು ಬಹುವರಿಯಿಂದ ಶೋಧಮಾಡಿಸಿದನು ಆಪದಾರ್ಥಗಳ ಹೆಸರನ್ನು ಕೇಳಿದವರು ಸಹಾ ಸಿಕ್ಕಲಿಲ್ಲ ಒಂದು ಮಾಸದ ಅವಧಿಯು ಸಮಾಪ್ತವಾಗಿ ಹೋಯಿತು. ಉಪಾಯಾಂತರವಿಲ್ಲದೆ, ಬಂದಿಯಲ್ಲಿದ್ದ ಯಾವತ್ತು ವೈದ್ಯರನ್ನು ಬಿಟ್ಟು ಕೊಡ ಬೇಕಾಯಿತು ಬಾದಶಹನು ಅವರೆಲ್ಲರನ್ನೂ ಪ್ರತಿಬಂಧದಿಂದ ಬಿಡಿಸಿ, ಓಲಗಕ್ಕೆ ಕರೆಯಿಸಿಕೊಂಡು ಈ ವೈದ್ಯನ್ನು ಹೇಳಿದ ಔಷಧವು ವೈದ್ಯಶಾಸ್ತ್ರದಲ್ಲಿ ಇರುವದೋ ? ಎಂದು ಕೇಳಲು, ಅವರು ಬೀರಬಲನಿಂದ ಶಿಕ್ಷಣ ಹೊಂದಿದಂತೆ, “ ಅಹುದು ” ಎಂದು ಉತ್ತರ ಕೊಟ್ಟರು.
ವೈದ್ಯರೆಲ್ಲರೂ ಕೃತಜ್ಞತೆಯಿಂದ ಬೀರಬಲನನ್ನು ಸ್ತೋತ್ರ ಮಾಡಿ, ಒಂದು ಲಕ್ಷ ರೂಪಾಯಿಗಳನ್ನು ಬಹುಮಾನವನ್ನಾಗಿ ಕೊಟ್ಟರು. ಆಮೇಲೆ ಬೀರಬಲನು ದಿಲ್ಲಿಗೆ ಬಂದು, ಅದ್ಯೋವಾಂತವನ್ನೆಲ್ಲ ಅಕಬರ ಬಾದಶಹನಿಗೆ ತಿಳಿಸಿದನು ಅವನ ಚಾತುರ್ಯವನ್ನು ಬಹುಪರಿಯಿಂದ ಪ್ರಶಂಸೆ ಮಾಡಿದನು.
೧೮೪, ಹಾಥನಕೆ ಭುಎ ಕೊಊ ಬೇರ ನಖಾಯಗೋ

ಒಂದುದಿವಸ ಅಕಬರನು, ಒಬ್ಬ ಸ್ತ್ರೀಯಳಿಗೆ ಕಿಂಚಿತ್ ಚೇಷ್ಟೆ ಮಾಡಿದನು ಆ ಸ್ತ್ರೀಯು ಪರಮ ಸುಶೀಲೆಯಾಗಿದ್ದಳು ಅದರಿಂದ ಅವಳಲ್ಲಿ ಸ್ವಲ್ಪರೋಷವುಂಟಾಯಿತು ಕೋಪದಿಂದ ಬಾದಶಹನನ್ನು ದುರದುರನೆ ನೋಡಹತ್ತಿದಳು ಆಗ ಬಾದಶಹನು ಅವಳನ್ನು ಕುರಿತು - ಈಗ ನೀನು ಒಳ್ಳೇ ಪ್ರಾಯಸ್ಥಳಾಗಿರುವಿ ! ಆದರಿಂದ ನನ್ನಂಥವನೊಡನೆ, ವಿನೋದದ ಮಾತುಗಳನ್ನಾಡಿ, ನನ್ನ ಮನಸ್ಸನ್ನು ತೃಪ್ತಿ ಪಡಿಸು ! ಅಂದರೆ ಆ ಜನ್ಮ ಪರಿಯಂತರ ನಿನಗೆ ಸುಖವುಂಟಾಗುವಂತೆ ಮಾಡುತ್ತೇನೆ; ಇದಕ್ಕೆ ನೀನು ಒಪ್ಪಿಕೊಳ್ಳದಿದ್ದರೆ ಮುಪ್ಪಿನಕಾಲದಲ್ಲಿ ನಿನ್ನನ್ನು ನಾಯಿಯು ಸಹಾ ಮೂಸಿ ನೋಡಲಿಕ್ಕಿಲ್ಲ ಎಂದು ಅವಳಿಗೆ ಬೆದರಿಸಿ, ಸಭಾಸ್ಥಾನಕ್ಕೆ ಬಂದು, ಬೀರಬಲನನ್ನು ಕುರಿತು, “ ಹಾಥನಕೆ ಭುವಿ ಕೋಊ ಬೇರಹೂ ನಖಾಯಗೋ" ಎಂಬ ಸಮಸ್ಯೆಯನ್ನು ಹೇಳಿ, ಇದನ್ನು ಪೂರ್ಣಮಾಡೆಂದು ಆಜ್ಞಾಪಿಸಿದನು ಆ ಕೂಡಲೆ ಬೀರಬಲನು.

ಮಾನುಷಕೋ ಜನ್ಮವಾಯೋ ಸುಂದರಂಗ ರೂಪವಾಯೋ,
ಕರ ರಸ ರಂಗ ಜಾಸೋ ಜೀವ ಹುಲಸಾಯಗೋ
ಜ್ಞಾನೀಕಿ ತರಂಗಮೆ ಕರೆ ಕ್ಯೂನ ಉಮಂಗ ಆಲಿ,
ದಿನಢಲಜಾಯ ದಿನ ಯಾಹೂ ಢಲಜಾಹ ಗೋ |

ಕರೈಕ್ಯೊ ಗುಮಾನ ಐಸಿ ತೇಜ ತರುನಾಈವಾಯ,
ಫಿರಲಲಚಾಯ ಚಿತ್ತ ವಾಛೆ ವಛತಾಯ ಗೋ |
ಜೋಬನಕ ಚಾರದಿನಾ ಬೀತಗಯೆ ಪಿಛೇನಖೀ
ಹಾಥನಕೆ ಭುವೆ ಕೊಊ ಬೇರಹೂ ನಖಾಯಗೋ " |

ಖಾವಂದ, ಒಬ್ಬ ಕಾಮುಕನು ಸುಂದರ ಸ್ತ್ರೀಯನ್ನು ನೋಡಿ, ಮೋಹಿತನಾಗಿ, ಅಂದದ್ದೇನಂದರೆ, “ ಎಲೈ ಮೃದ್ವಂಗಿಯೇ, ಪೂರ್ವಾರ್ಜಿತ ಸುಕೃತಫಲದಿಂದ, ಮನುಷ್ಯಪ್ರಾಣಿಗೆ ಸುಂದರ ರೂಪವೂ ಮನೋಹರ ವಾದ ವರ್ಣವೂ ಪ್ರಾಪ್ತವಾಗುತ್ತದೆ ಅದರಿಂದ ಇಹಜನ್ಮದಲ್ಲಿ ಅಂಥಪ್ರಾಣೆಯು, ಅನೇಕ ಪ್ರಕಾರದ ಸುಖ ವಿಲಾಸಾದಿಗಳನ್ನು ಅನುಭವಿಸಬೇಕು; ಮತ್ತು ಅನ್ಯರಿಗೂ ಅದರ ಲಾಭವು ಸಿಗುವಹಾಗೆ ಮಾಡಬೇಕು. ಪ್ರಾಯ ವೆಂಬದು, ಮಧ್ಯಾನ್ಹದ ಬಿಸಿಲಿನಂತೆ ಕ್ಷಣಿಕವಾದದ್ದು. ಇಂಥ ಸಮಯದಲ್ಲಿ ಸುಖ ವಿಲಾಸಗಳನ್ನು ಅನುಭವಿಸದೆಯೂ, ಪರರಿಗೆ ಸುಖವನ್ನಿಯದೆಯೂ ವ್ಯರ್ಥವಾಗಿ ಕಳೆದರೆ, ಅದರಿಂದ ಪ್ರಯೋಜನವೇನು? ಪ್ರಾಯದ ಕಾಲದಲ್ಲಿ ತನ್ನಿಂದ ಸಾಧ್ಯವಾದಷ್ಟು ಸುಖವನ್ನು ಅನುಭವಿಸದಿದ್ದ, ಮೇಲೆ, ಎಲೈ ಸುಂದರಿಯೇ, ವೃದ್ಧಾಪ್ಯಕಾಲದಲ್ಲಿ ಅಂಥ ಯುವತಿಯನ್ನು ಯಾರಾದರೂ ಕಣ್ಣೆತ್ತಿ ನೋಡಲಿಕ್ಕಿಲ್ಲ; ಮತ್ತು ನಿನ್ನನ್ನು ನಾಯಿಗಿಂತ ಹೀನವೆಂದು ತಿಳಿದು ಕೊಳ್ಳುವರು; ಎಂಬದಾಗಿ ಆ ಕಾಮಕನು ಆ ಸಾಧ್ವಿಯಾದ ಸ್ತ್ರೀಯಳಿಗೆ ಉಪದೇಶ ಮಾಡಿದನು.
ಬಾದಶಹನು ಈ ಪದ್ಯವನ್ನು ಶ್ರವಣಮಾಡಿ ಹೃದ್ವ ಮಾನಸನಾಗಿ, ಬೀರಬಲನಿಗೆ ಪಾರಿತೋಷಕವನ್ನು ಕೊಟ್ಟನು.

- (೧೮೫, ಮಾರ್ಗವು ಎಲ್ಲಿಗೆ ಹೋಗುತ್ತದೆ.) -

ಒಂದು ದಿವಸ ಅಕಬರನೂ ಬೀರಬಲನೂ ಕೂಡಿಕೊಂಡು ಮೃಗಯಾ ವಿಹಾರಕ್ಕೆ ಹೊರಟಿದ್ದರು. ಆಗ ಮಾರ್ಗದಲ್ಲಿ ಬೆಟ್ಟಿಯಾದ ಒಬ್ಬ ಕುರುಬನನ್ನು ಕುರಿತು “ ಈ ಮಾರ್ಗವು ಎಲ್ಲಿಗೆ ಹೋಗುತ್ತದೆ ” ಎಂದು ಪ್ರಶ್ನೆ ಮಾಡಿದರು ಆಗ ಆ ಕುರುಬನು ನೀವು ಕೇವಲ ಅಜ್ಞಾನಿಗಳಿದ್ದಂತೆ ಕಂಡು ಬರುತ್ತದೆ, ಮಾರ್ಗವು ಎಂದಾದರೂ ಹೋಗುವದುಂಟೇ? ಇದು ನಿರ್ಜೀವವಾದದ್ದು ಪ್ರಯಾಣಿಕರು ಮಾತ್ರ ಹೋಗುತ್ತಿರುತ್ತಾರೆ, ಬರುತ್ತಿರು ತಾರೆ, ಎಂದು ಉತ್ತರ ಕೊಟ್ಟನು,
ಅವನ ಉತ್ತರವನ್ನು ಕೇಳಿ ಉಭಯತರೂ ಲಜ್ಜಿತರಾದರು ಆ ಕುರುಬನಿಗೆ ಉಚಿತವನ್ನು ಕೊಟ್ಟು ಕಳುಹಿಸಿದರು.

-( ೧೮೬, ಸೂರ್ಯನು ಪಶ್ಚಿಮದಲ್ಲಿ ಯಾಕೆ ಮುಳುಗುತ್ತಾನೆ. )-

ಒಂದು ದಿವಸ ಅಕಬರನೂ ಬೀರಬಲನೂ ಏಕಾಂತದಲ್ಲಿ ವಿನೋದವಾಡುತ್ತ ಕುಳಿತು ಕೊಂಡಿದ್ದರು ಆಗ ಬೀರಬಲನು " ನರವರ ! ಸೂರ್ಯ ನು ಪಶ್ಚಿಮದಲ್ಲಿ ಯಾಕೆ ಮುಳುಗುತ್ತಾನೆ! ಎಂದು ಪ್ರಶ್ನೆ ಮಾಡಿದನು ಅದಕ್ಕೆ ಬಾದಶಹನು ಈ ಪ್ರಶ್ನೆಯನ್ನು ಯಾವನಾದರೊಬ್ಬ ಮೂರ್ಖನಿಗೆ ಮಾಡತಕ್ಕದ್ದು ಎಂದು ಉತ್ತರಕೊಟ್ಟನು ಆಗ ಬೀರಬಲನು ಖಾವಂದ ? ಅದಕ್ಕಂತಲೇ ತಮಗೆ ಪ್ರಶ್ನೆ ಮಾಡಿದೆನು ಎಂದನು, ಈ ಮಾತನ್ನು ಕೇಳಿ ಬಾದಶಹನು ಕಿಲಕಿಲ ನಕ್ಕನು.

-(೧೮೭, ಹುಜೂರ್ ಗಧೆ ಆತೇ ಹೈ)-

ಒಂದು ದಿವಸ ಬಾದಶಹನು ಬೀರಬಲನಿಗೆ ನೀನು ಈ ದಿವಸ ಬಹು ರೂಪಿಯಾಗು ??” ಎಂದು ಅಪ್ಪಣೆಮಾಡಿದನು ಆ ಕೂಡಲೆ ಬೀರಬಲನು ಕುಂಬಾರನ ವೇಷವನ್ನು ಧಾರಣಮಾಡಿಕೊಂಡು ಕತ್ತೆಯನ್ನು ಹೊಡಕೊಂಡು ಬಾದಶಹನಿಗೆ ಎದುರಾಗಿ ಮಾರ್ಗದಲ್ಲಿ ಬರಹತ್ತಿದನು. ಆಗ ಬಾದಶಹನು ಎಲೋ ಕತ್ತೆ ಕಾಯುವವನೇ ಓರೆಯಾಗು ! ಎಂದು ಅಪ್ಪಣೆ ಮಾಡಿದನು ಆಗ ಬೀರಬಲನು ನಗುತ್ತ ನಾನುದೂರದಿಂದಲೇ ಸರಕಾರ ಕತ್ತೆ ಬರುತ್ತದೆ ಓರೆಯಾಗಿದೆ ಎಂದು ಕೂಗಿಕೊಳ್ಳುತ್ತಿರುವೆನಲ್ಲಾ ! ಎಂದನು ಇದನ್ನು ಕೇಳಿ ಬಾದಶಹನು ಲಜ್ಜಿತನಾದನು,

- (೧೮೮, ಒಂಟೆಯ ಡೊಂಕ ಕುತ್ತಿಗೆಯು) -

ಒಂದುಸಮಯದಲ್ಲಿ ಅಕಬರ ಬಾದಶಹನು, ಬೀರಬಲನಿಗೆ ಕೆಲವು ದೇಶವನ್ನು ಬಕ್ಷೀಸಾಗಿ ಕೊಡುತ್ತೇನೆಂದು ಹೇಳಿದ್ದನು ಯಾವಾಗ ಕೊಡುವ ಪ್ರಸಂಗವು ಸಮೀಪಿಸಿತೋ ಆಗ ಮೋರೆಯನ್ನು ಡೊಂಕ ಮಾಡಿದನು ಮುಂದೆ ಕೆಲವು ದಿವಸಗಳಾದಮೇಲೆ ಮಾರ್ಗದಲ್ಲಿ ಹೋಗುತ್ತಿದ್ದ ಒಂದು ಉಷ್ಟ್ರವನ್ನು ಕಂಡು ಬೀರಬಲನನ್ನು ಕುರಿತು " ಬೀರಬಲ್ಲ? ಈ ಒಂಟೆಯ ಕುತ್ತಿ ಗೆಯು ಯಾಕೆ ಡೊಂಕಾಗಿರುವದು ? ” ಎಂದು ಕೇಳಿದನು ಅದಕ್ಕೆ ಬೀರ ಬಲನು ಇದು ಹಿಂದಕ್ಕೆ ಯಾವನಿಗಾದರೂ ಉಂಬಳಿ ಗ್ರಾಮವನ್ನು ಕೊಡು ತೇನೆಂದು ಹೇಳಿರಬಹುದು ! ಎಂದನು.
ಆಗ ಬಾದಶಹನಿಗೆ ತಾನು ಕೊಟ್ಟ ವಚನವು ಸ್ಮರಣೆಗೆ ಬಂತು ಆ ಕೂಡಲೆ ಒಂದು ಪ್ರಾಂತವನ್ನು ಬಕ್ಷೀಸಾಗಿ ಕೊಟ್ಟು ಬಿಟ್ಟನು. {{center|-(೧೮೯. ಜೋ ಸೋಯಾ ಸೋ ಚುಕಾ.)-

ಒಂದು ದಿವಸ ಬಾದಶಹನು ಬೀರಬಲ್ಲ ! ಈ ದಿವಸ ನೀನು ನನ್ನನ್ನು ಮೋಸ ಗೊಳಿಸುವಂತೆ ಒಂದುವೇಷವನ್ನು ಧಾರಣ ಮಾಡಿಕೊಂಡು ಬಾ ! ಎಂದು ಅಪ್ಪಣೆಮಾಡಿದನು. ಬಾದಶಹನ ಅಪ್ಪಣೆಯ ಮೇರೆಗೆ ಬೀರಬಲನು ಕಾವಲುಗಾರನ ವೇಷವನ್ನು ಹಾಕಿಕೊಂಡು ಬಾದಶಹನ ಪ್ರಾಸಾದದ ಮುಂಭಾಗದಲ್ಲಿ ಅತ್ತ ಇತ್ತ ಸಂಚರಿಸಹತ್ತಿದನು. ಅರ್ಧರಾತ್ರಿಯಲ್ಲಿ ಅಕ ಸ್ಮಾತ್ತಾಗಿ ಎಚ್ಚತ್ತು ಬಾದಶಹನು ಹೊರಗೆಬಂದು ಸಂಚರಿಸಹತ್ತಿರುವವ ನು ಕಾವಲುಗಾರನೇ ಎಂದು ತಿಳಿದು " ಎ ಕಾವಲು ಗಾರನೇ ! ನಿದ್ರೆ ಯನ್ನು ಹ್ಯಾಗೆ ಕೊಡುತ್ತೀ? ” ಎಂದು ಕೇಳಿದನು. ಅದಕ್ಕೆ ಪ್ರಚ್ಛನ್ನ ವೇಷಧಾರಿಯಾದ ಬೀರಬಲನು ಬಿಲ್ಲಿಗೆ ಒಂದು ಸೇರು ? ಎಂದು ಹೇಳಿದನು. ಆಮೇಲೆ ಪುನಃ ಬಾದಶಹನು ಎಚ್ಚರಿಕೆಯನ್ನು ಹ್ಯಾಗೆ ಕೊಡುವಿ ! ಎಂದ ನು ಅದಕ್ಕೆ ಬೀರಬಲನು ಹುಜೂರ್ ಜೋ ಸೋಯಾ ಸ ಚಕಾ ಅಂದರೆ ನಿದ್ರೆಯನ್ನು ಯಾವ ಬೆಲೆಗೆ ಕೊಡುತ್ತೇನೆಂದು ಹೇಳಿದೆನೋ ಅದ ರಂತೆಯೇ ಎಚ್ಚರಿಕೆಯನ್ನಾದರೂ ಕೊಡುತ್ತೇನೆ. ಎಂದು ಹೇಳಿದನು. ಈ ಪ್ರಕಾರ ಭಾವಗರ್ಭಿತವಾಕ್ಯವನ್ನು ಹೇಳಿದವನು ಬೀರಬಲನೇ ಇರಬಹು ದೆಂದು ತಿಳಿದು ಅನನ್ಯವಾದ ಪಾರಿತೋಷಕವನ್ನಿತ್ತನು.

ಟೀಪು -ಸೋಯಾ, ಅಂದರೆ ನಿದ್ರೆ, ಚೂಕಾ, ಅಂದರೆ ಎಚ್ಚರಿಕೆ ಎಂತಲೂ
ತಪ್ಪು ಎಂತಲೂ ಅರ್ಥವಾಗುವದರಿಂದ " ಜೋ ಸೋಯಾ
ನೋ ಚಕಾ' ಎಂಬವಾಕ್ಯಕ್ಕೆ ಹ್ಯಾಗೆ ನನಗೆ ನಿದ್ರೆ ಇರುವದೋ
ಹಾಗೆಯೇ ಎಚ್ಚರಿಕೆಯು ಇರುವದೆಂತಲೂ, ಅಥವಾ ನಿದ್ರೆ ಮಾಡು
ವವನಿಂದ ತಪ್ಪಾಗುತ್ತ ದೆಂತಲೂ ಹೇಳಿದಂತಾಯಿತು,

-(೧೯೦, ಸಹಸ್ರ ಪಾದರಕ್ಷೆ.)-

ಒಂದು ಸಾರೆ ಬಾದಶಹನು ವಿನೋದ ಮಾಡಬೇಕೆಂದು ಬೀರಬಲನ ಪಾದರಕ್ಷೆಗಳನ್ನು ಬಚ್ಚಿಟ್ಟನು ರಾಜಕರಣವು ಸಮಾಪ್ತಿಯಾದ ಮೇಲೆ, ಬೀರಬಲನು ಮನೆಗೆ ಹೋಗಬೇಕೆಂದು ಹೊರಗೆ ಬಂದು ಪಾದರಕ್ಷೆಗಳನ್ನು ಹುಡುಕ ಹತ್ತಿದನು ಎಲ್ಲಿಯೂ ಕಾಣಿಸಲಿಲ್ಲ ಆಗ ಬಾದಶಹನು ಪಾದರಕ್ಷೆಗೆ ಳು ಸಿಗಲಿಲ್ಲವೇ ? ಒಳ್ಳೇದು ಎಲೋ ಪರಿಚಾರಕನೇ ನನ್ನ ಪಾದರಕ್ಷೆಗಳ ನ್ನು ಕೊಡು ? ಎಂದು ಹೇಳಿದನು. ಅದರಂತೆ ಸೇವಕನು ಹೊಸಪಾದರಕ್ಷೆ ಗಳನ್ನು ಕೊಡಲು, ಅವುಗಳನ್ನು ಕಾಲೊಳಗೆ ಹಾಕಿಕೊಂಡು, ದೇವರು ತಮಗೆ ಸರಲೋಕದಲ್ಲಿ ಇಂಥ ಸಹಸ್ರ ಸಹಸ್ರ ಪಾದರಕ್ಷೆಗಳನ್ನು ಕೊಡಲಿ ಎಂದು ಆಶೀರ್ವದಿಸಿದನು ಈ ಮಾತು ಕಿವಿಗೆ ಬಿದ್ದ ಕೂಡಲೆ ಬಾದಶಹನು ಬಿದ್ದು ಬಿದ್ದು ನಕ್ಕನು.

-(೧೯೧. ಬೀರಬಲನು ಪರುಷಮಣಿಯಾಗಿದ್ದಾನೆ.)-


ಅಕಬರ ಬಾದಶಹನಿಗೂ, ಇರಾಣದ ಬಾದಶಹನಿಗೂ, ಒಂದುಸಾರೆ ಯಾವದೋ ಒಂದುಕಾರದನಿಮಿತ್ಯದಿಂದ ಸಮಾಗಮವಾಗಿತ್ತು ಆಗ ಇರಾ ಣದ ಬಾದಶಹನು ಅಕಬರನನ್ನು ಕುರಿತು ನಿಮ್ಮ ಸಂಗ್ರಹದಲ್ಲಿ ವರುಷ ಮಣಿಯುಂಟೋ ! ” ಎಂದು ಪ್ರಶ್ನೆ ಮಾಡಿದನು. ಆಗ ಅಕಬರನು ಬೀರಬ ಲನ ಕೈ ಹಿಡಿದು ಇವನೇ ನನ್ನ ಸಂಗ್ರಹದಲ್ಲಿದ್ದ ಪರುಷಮಣಿಯು, ಎಂದು ಹೇಳಿ ಈ ಕೆಳಗಿನ ಪದ್ಯವನ್ನು ಹೇಳಿದನು.
ಉದ್ಯಮನೆ ಲಕ್ಷ್ಮಿ, ಮಿಲ್ಲೈ ಮಿಲ್ಲೈದ್ರವ್ಯನೇ ಮಾನ : ದುರ್ಲಭ ವಾರಸ ಜಗತಮೆ, ಮಿಲನೋ ಮೀತಸುಜಾನ || ಅಂದರೆ ಉದ್ಯೋಗದಿಂದ ಲಕ್ಷ್ಮಿ ಪ್ರಾಪ್ತವು, ದ್ರವ್ಯದಿಂದ ಂದ ಮಾನವು ಸಿಗುತ್ತದೆ. ಸುಜನರು ಮಿತಿಯಿಂದ ದೊರೆಯುತ್ತಾರೆ. ಆದರೆ ಪರುಷಮಣಿ ಯು ದುರ್ಲಭವು, ಈಮಾತಿಗೆ ಇರಾಣದ ಬಾದಶಹನು ಒಪ್ಪಿಕೊಂಡನು.

-(೧೯೨. ದೌಲತ ಹಾಜೀರಹೈ.)-

ಒಂದುದಿವಸ ಅಕಬರ ಬಾದಶಹನು ತನ್ನ ದೌಲತ ಎಂಬ ಪರಿಚಾರ ಕನನ್ನು ಕೆಲಸದಿಂದ ದೂರಮಾಡಿದನು, ಇದಕ್ಕೆ ಏನು ಉಪಾಯ ಮಾಡ ಬೇಕೆಂದು ದೌಲತನು ಬೀರಬಲನಿಗೆ ಹೋಗಿ ಕೇಳಿದನು. ಆಗ ಬೀರಬಲನು ನೀನು ಒಂದುದಿವಸ ಅರಮನೆಯ ಮಹಾದ್ವಾರದ ಹತ್ತಿರಬಂದು ದೌಲತ ಹಾಜೀರಹೈ ಇರಬೇಕೆ ? ಹೋಗಬೇಕೋ, ಎಂದು ಗಟ್ಟಿಯಾಗಿ ಕೂ ಗು ಎಂದು ಹೇಳಿ ಕಳುಹಿಸಿದನು. ಅವನು ಬೀರಬಲನ ಹೇಳಿಕೆಯಂತೆ ಮಾ ಡಿದನು. ಆಗ ಬಾದಶಹನು ದೌಲತನನ್ನು ಹಿಂದಕ್ಕೆ ಕರಯಿಸಿ ಕೊಂಡು- " ದೌಲತ ಹಮಾರೆಯಹಾ ಸದಾ ಬನೀರಹೈ” ಅಂದರೆ ದೌಲತನು ನಮ್ಮಲ್ಲಿ ಯಾವಾಗಲೂ ಇರಲಿಕ್ಕೇ ಬೇಕು ಎಂದನು. ಇಂಥ ಭಾವಗರ್ಭಿತ ವಾಕ್ಯ ವನ್ನು ಕೇಳಿ ಸಭಾಸದರು ನಕ್ಕುನಕ್ಕು ಬಿದ್ದರು.

—( ೧೯೩, ನಜರಾಂಚೆ ರಹಿಮಾನ. )—


ಒಂದುದಿವಸ ಅಕಬರ ಬಾದಶಹನು ಮೃಗಯಾವಿಹಾರಕ್ಕೆ ಹೋಗಿ ದ್ದನು , ಎರಡುಪ್ರ ಹರ ಸಮಯವಾಯಿತು ಆಗ ಅವನು ನಮಾಜ ಅಂದರೆ ದೇವರಧ್ಯಾನಕ್ಕೆ ಕುಳಿತುಕೊಂಡನು. ಆಗ ವಿರಹಿಣಿಯು ತನ್ನ ಪ್ರಿಯನನ್ನು ಹುಡುಕುತ್ತ ಅಕಬರನು ಕುಳಿತಿದ್ದ ಸ್ಥಳಕ್ಕೆ ಬಂದು, ಬಾದಶಹನು ಕಳೆದು ಇಟ್ಟ ವಸ್ತ್ರಗಳನ್ನು ತುಳಿಯುತ್ತಹೋದಳು. ಆಗ ಅವನು ಎಲೈ ಸುಂದರಿ ಯೇ ! ನೀನುಬಹಳೇ ಅಸಾವಧಳೂ ಧಿಕ್ಕಳೂ ಇದ್ರಂತೆ ಕಾಣುತ್ತದೆ ನನ್ನ ಬಟ್ಟೆಗಳನ್ನು ನೀನುತುಳಿದಕಾರಣವೇನುಎಂದುಕೇಳಿದನು ಆಗಆ ಸ್ತ್ರೀಯು ನರರಾಚೀ ಸುಝ ನಹೀ ತುಮಕಸಲಖ್ಯೆ ಸುಜಾನ ಪಢ ಕುರಾನ ಚಾರೇಭಯೇ ನಹಿರಾಂಚೇ ರಹಿಮಾನ |
ಖಾವಂದ ? ನಾನಂತೂ ಬುದ್ಧಿಯಿಲ್ಲದವಳು, ಆದರೆ ನೀನು ಕುರಾನ ವನ್ನು ಓದಿದವನೂ, ಸದ್ಯಕ್ಕೆ ನಮಾಜ ಮಾಡುತ್ತ ಕುಳಿತ ಸುಜನನೂ, ಆಗಿದ್ದು ನನ್ನ ಮೇಲೆ ನಿನ್ನ ದೃಷ್ಟಿಯು ಯಾಕೆಬಿತ್ತು. ನೀನು ಮಾಡುತ್ತಿ ರುವ ಭಕ್ತಿಯು ಕೇವಲ ಬಹಿರಂಗವಾಗಿದ್ದಂತೆ ಕಾಣುತ್ತದೆ ಎಂದಳು. ಈ ಮಾತುಗಳನ್ನು ಕೇಳಿದಕೂಡಲೇ ಬಾದಶಹನು ಲಜ್ಜಿತನಾಗಿ ಆ ಸ್ತ್ರೀಯಳಿಗೆ ವಾರಿತೋಷಕವನ್ನು ಕೊಟ್ಟು ಕಳುಹಿಸಿದನು ಮತ್ತು ಅಂತಃ ಪುರಕ್ಕೆ ಬಂದು ಬೀರಬಲನನ್ನು ಕರೆಯಿಸಿ ಈ ಸಂಗತಿಯನ್ನು ತಿಳಿಸಿದನು ಬಿಬಲನು ಆ ಸ್ತ್ರೀಯಳನ್ನು ಪ್ರಶಂಸೆ ಮಾಡಿದನು.

-(೧೯೪, ಬದನೇಕಾಯಿ ಹಲ್ಲೆ.) -


ಒಂದುದಿನ ಬಾದಶಹನು ಬೀರಬಲನ ಮುಂದೆ ಬದನೇಕಾಯಿಯು ಬ ಹಳೇ ಉತ್ತಮ ಪದಾರ್ಥವೆಂದು ಪ್ರಶಂಸೆ ಮಾಡಹತ್ತಿದನು, ಆಗ ಬೀರಬ ಲನು " ಅಹುದು; ಮಹಾರಾಜ ! ಅಂತೇ ಜನರು ಅದನ್ನು ತಿನ್ನು ತಾರೆ, ಎಂದು ಹೇಳಿದನು. ಮುಂದೆ ಕೆಲವು ದಿವಸಗಳಾದಮೇಲೆ ಅಕಬರನು ಬದನೇ ಕಾಯಿಯನ್ನು ಬಹಳ ನಿಂದಿಸಿದನು. ಆಗ ಬೀರಬಲನು " ಖಾವಂದ ! ಇದ ರಿಂದ ರೋಗೋತ್ಪತ್ತಿಯಾಗುತ್ತದೆ, ಮತ್ತು ಬಹಳೇ ವಾತವಾಗುವದು; ?? ಎಂದನು. ಈ ಮಾತನ್ನು ಕೇಳಿದಕೂಡಲೇ ಬಾದಶಹನಿಗೆ ಕೋಪವುಂಟಾ ಯಿತು ಆಗ ಬೀರಬಲನನ್ನು ಕುರಿತು ಬೀರಬಲ್ಲ ! ನೀನು ಬಹಳೇ ಅಸತ್ಯ ವಾದವನ್ನು ಮಾಡುತ್ತಿರುವಿ, ಹ್ಯಾಗಂದರೆ ಬದನೇಕಾಯಿಯು ಶ್ರೇಷ್ಠವಾ ದದ್ದೆಂದು ಹೇಳಿದವನೂ ನೀನೇ. ಈಗ ಹಳಿಯುವವನೂ ನೀನೇ; ಹೀಗೇಕೆ ಎಂದು ಕೇಳಿದನು, ಆಗ ಬೀರಬಲನು ನಮ್ರತೆಯಿಂದ ಪೃಥ್ವಿನಾಥ ನಾನು ನಿಮ್ಮ ಆಧಾರಕನೋ, ಅಥವಾ ಬದನೇಕಾಯಿಯ ಆಜ್ಞಾಧಾರಕನೊ ಎಂದನು, ಈ ಮಾತನ್ನು ಕೇಳಿದಕೂಡಲೆ ಬಾದಶಹನಿಗೆ ನಗೆಯು ಬಂತು,

-( ೧೯೫ ಅಪ್ಸರೆಯ ಮತ್ತು ಡಾಕಿನಿಯೂ.) -

ಒಂದುದಿವಸ ಬಾದಶಹನು. "ಬೀರಬಲ್ಲ ! ನನಗೆ ಒಬ್ಬ ಅಪ್ಸರೆಯಂ ನೂ ಒಬ್ಬ ಡಾಕಿನಿಯನ್ನೂ ತೋರಿಸು ” ಎಂದು ಹೇಳಿದನು. ಮರುದಿವಸ ಬೀರಬಲನು ತನ್ನ ಪತ್ನಿಯನ್ನೂ, ಒಬ್ಬ ವೇಶ್ಯಾಂಗನೆಯನ್ನೂ ಕರೆತಂದು ಭೂವರ ! ಈ ನನ್ನ ಪತ್ನಿಯು ಅಪ್ಸರೆಯಕ್ಕಿಂತಲೂ ಶ್ರೇಷ್ಠಳಾಗಿರುವಳು, ನನ್ನ ಸೇವೆಯನ್ನು ಚನ್ನಾಗಿ ಮಾಡುತ್ತಾಳೆ ಎಂದನು. ಆಗ ಬಾದಶಹನು ಇವಳು ಕೇವಲ ಕೃಷ್ಣವರ್ಣವುಳ್ಳವಳು ಅಪ್ಸರೆಯರು ತ್ರಿಲೋಕಸುಂದರಿ ಇರುವರೆಂದು ಕೇಳಿದ್ದೇನೆ ಎಂದನು. ಆಗ ಬೀರಬಲನು ಧರ್ಮಾವತಾರ ಸುಂದರತ್ವವು ಗುಣಗಳಿಂದ ಉಂಟಾಗುತ್ತದೆಯೇ ಹೊರತು ರೂಪ,ವರ್ಣದಿಂದ ಬರತಕ್ಕದ್ದಲ್ಲ, ಇವಳಿಂದ ನನಗೆ ಸ್ವರ್ಗಸುಖವು ಲಭಿಸುತ್ತದೆ ಎಂದು ಪ್ರತಿಯಾಗಿ ನುಡಿದನು, ಆಮೇಲೆ ಬಾದಶಹನು ಒಳ್ಳೇದು; ಡಾಕಿನಿಯು ಎಲ್ಲಿರುವಳು ಎಂದು ಕೇಳಿದನು. ಆಗ ಬೀರಬಲನು ಆ ವೇಶ್ಯೆಯನ್ನು ಮುಂದಕ್ಕೆ ಕರೆದು- ಸರಕಾರ ? ಇವಳು ಡಾಕಿನಿಯು, ಇವಳು ಯಾರನ್ನು ಆಶ್ರಯಿಸುವಳೋ ಅವರ ಸರಸ್ವವನ್ನು ಹರಣಮಾಡಿ ಅವನನ್ನು ಮಣ್ಣು ಪಾಲು ಮಾಡಿ ಹೋಗುತ್ತಾಳೆ ಎಂದು ಹೇಳಿದನು. ಈ ಯುಕ್ತಿಯಿಂದ ಬಾದಶಹನು ಪ್ರಸ ನ್ನನಾದನು.

(೧೯೬ ಯಾವ ನದಿಯ ಜಲವು ಉತ್ತಮವಾದದ್ದು.) -

ಒಂದುದಿವಸ ಬಾದಕಹನು ತನ್ನ ಪ್ರಾಸಾದದ ಮುಂಭಾಗದಲ್ಲಿ ನಿಂ ತುಕೊಂಡು ಯಮುನಾ ಪ್ರವಾಹವನ್ನು ನೋಡಹತ್ತಿದ್ದನು, ಆಗ ಬೀರಬ ಲನು ಅಲ್ಲಿಗೆ ಬಂದನು ಅವನನ್ನು ನೋಡಿ- ಬೀರಬಲ್ಲ ! ಯಾವ ನದಿಯ ಜಲವು ಉತ್ತಮವಾದದ್ದು ಎಂದು ಕೇಳಿದನು. ಅದಕ್ಕೆ ಬೀರಬಲನು ಯಮುನಾ ನದಿಯ ಜಲವು ಶ್ರೇಷ್ಠವಾದದ್ದು; ಎಂದು ಉತ್ತರಕೊಟ್ಟನು. ಆಗ ಪುನಃ ಬಾದಶಹನು ನಿಮ್ಮ ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಗಂಗಾನದಿಯು ಮಹತ್ವವಾದದ್ದೆಂದು ಹೇಳಿರಲು, ನೀನು ಯಮುನಾಜಲವು ಶ್ರೇಷ್ಠವಾದದ್ದೆಂದು ಹೇಳುವಿಯಲ್ಲಾ ಹೀಗೇಕೆ ಎಂದು ಕೇಳಿದನು. ಅದಕ್ಕೆ ಬೀರಬಲನು ಪೃಥ್ವಿನಾಥ ! ಗಂಗೆಯಲ್ಲಿ ಇದ್ದದ್ದು ಜಲವಲ್ಲ ! ಅಮೃತವು; ಎಂದು ಹೇಳಿದನು. ಈ ಉತ್ತರದಿಂದ ಬಾದಕಹನು ಸುಮ್ಮನಾದನು.

-( ೧೯೭ ದಾದಃ ಹುಜೂರಸ್ತ. -

ಒಂದುದಿವಸ ಬೀರಬಲನೂ ಬಾದಶಹನೂ ಕೂಡಿಕೊಂಡು ತುರಗಾ ರೂಢರಾಗಿ ವಾಯು ಸೇವನಾರ್ಥವಾಗಿ ಹೊರಟಿದ್ದರು, ಆಗ ಬಾದಶಹನು ವಿನೋದಕ್ಕಾಗಿ- "ಬೀರಬಲ್ಲ ? ಈ ಅಶ್ವಪಿದರ ಶುಮಾನ್ತ ! ” ಎಂದನು [ ಈ ವಾಕ್ಯಕ್ಕೆ ಎರಡು ಅರ್ಥಗಳಾಗುತ್ತವೆ. ಮೊದಲನೇದು, ಈ ಕುದುರೆ ಯು ನಿಮ್ಮ ತಂದೆಯದೋ ! ಎಂದೂ ಎರಡನೇದು ಈಕುದುರೆಯೇ ನಿಮ್ಮ ತಂದೆಯೋ ! ] ಅದಕ್ಕೆ ಬೀರಬಲನು “ ದಾದಃ ಹುಜೂರಸ್ತ ” ಎಂದು ಉತ್ತರ ಕೊಟ್ಟನು [ ಈ ವಾಕ್ಯಕ್ಕೂ ಎರಡು ಅರ್ಥಗಳಾಗುತ್ತವೆ. ಮೊದಲ ನೇದು ತಾವು ಕೂಟ್ಟದ್ದೂ ;ಎಂದೂ ಎರಡನೇದು ಈ ಕುದುರೆಯು ನಿಮ್ಮ ಅಜ್ಜ ಎಂದು ಹೇಳಿದಂತೆ.ಆಯಿತು ] ಬಾದಶಹನು ನಿರುತ್ತರನಾದನು
೧೯೮. ಕೆಲಪು ( ಮೀಶಿಗೆ ಹಚ್ಚಿಕೂಳ್ಳುವ ಬಣ್ಣ ) ಹಚ್ಚಿ
ಕೊಳ್ಳುವದರಿಂದ ಸುಂದರತ್ವವು ಬರುವದಿಲ್ಲ.

ಅಕಬರ ಬಾದಶಹನು ವೃಧ್ಧನಾಗಲು, ಅವನ ಕೂದಲುಗಳೆಲ್ಲ ಬಿಳು ಪಾಗಿಹೋದವು. ಅದರಿಂದ ಅವುಗಳಿಗೆ ಕೆಲವು ಹಚ್ಚಿ ಕೊಳ್ಳುತ್ತಿದ್ದನು ಆ ಸಮದಲ್ಲಿ ಬೀರಬಲನು ಅಲ್ಲಿಗೆ ಬಂದನು ಆಗ ಬಾದಶಹನು ಅವನನ್ನು ನೋಡಿ ಬೀರಬಲ್ಲ ! ಕೆಲವನ್ನು ಹಚ್ಚಿ ಕೊಳ್ಳುವದರಿಂದ ಸುಂದರತ್ವವು ಉಂಟಾಗುವ ದಿಲ್ಲ ! ಎಂದನು ಅದಕ್ಕೆ ಬೀರಬಲನು ಧೈರ್ಯದಿಂದ - "ಹೀಗೆ ತಿಳಿದಿದ್ದರು ಕೆಲವನ್ನು ಹಚ್ಚಿ ಕೊಳ್ಳುತ್ತಿರುವರೆಲ್ಲಾ ! ಅವರು ಕೆಲಪು ಹಚ್ಚಿ ಕೊಂಡರೆ ವೃದ‍್ಧತ್ವವು ಹೋಗಿ, ತರುಣತ್ವವು ಪ್ರಾಪ್ತವಾಗುವದೆಂದು ತಿಳಿದು ಕೊಂಡಂತೆ ಕಾಣುತ್ತದೆ "ಎಂದನು.
ಆ ದಿವಸದಿಂದ ಬಾದಶಹನು ಕಲಪು ಹಚ್ಚಿ ಕೊಳ್ಳುವದನ್ನು ಬಿಟ್ಟು ಬಿಟ್ಟನು.

-( ೧೯೯ ಉದ್ಯಾನದ ವೃಕ್ಷವೂ ಮತ್ತು ಅರಣ್ಯದ ವೃಕ್ಷವೂ. ) -

ಒಂದು ದಿವಸ ಬಾದಶಹನು ಅರಣ್ಯದ ಮಾರ್ಗವನ್ನು ಹಿಡಿದು ಹೊರಟಿದ್ದನು ಆಗ ಒಂದು ಏಳೆಕೂನನ್ನು ಬುಟ್ಟಯೊಳಗೆ ಇಟ್ಟುಕೊಂಡು, ಹೋಗುತ್ತಿರುವ ಕಾಡಿನ ಸ್ತ್ರೀಯನ್ನು ನೋಡಿದನು ಅದನ್ನು ನೋಡಿ ಅವನಿಗೆ ಬಹಳ ಆಶ್ಚರ್ಯವಾಯಿತು ಆಗ ಅವನ ಮನಸ್ಸಿನಲ್ಲಿ " ಸ್ತ್ರೀಯರೆಂದರೆ ಎಲ್ಲರೂ ಒಂದೇತರ ಹೀಗಿದ್ದು ನಮ್ಮ ಅಂತಃಪುರದ ಸ್ತ್ರೀಯರು ಸುಮ್ಮ ಸುಮ್ಮನೆ ಒಣ ಜಂಭವನ್ನು ಮಾಡುತ್ತಿರುವರು . ಹೀಗ್ಯಾಕೆ ಇರಬಹುದು ; ಇದನ್ನು ಪರೀಕ್ಷಿಸಿ ನೋಡಬೇಕೆಂದು " ಕಲ್ಪನೆಯು ಹುಟ್ಟತು ಅವನು ಹಾಗೆಯೇ ತಿರುಗಿ ,ಅಂತಃಪುರಕ್ಕೆ ಬಂದನು. ಒಬ್ಬ ಬೇಗಮ್ಮಳನ್ನು ಸಹಾ ಮಾತಾಡಿಸಲಿಲ್ಲ.ಆಗ ಅವರು ಗಾಬರಿಯಾಗಿ ಬೀರಬಲನನ್ನು ಕರೆಯಿಸಿ ಕೊಂಡು, ಇದಕ್ಕೆ ಏನುಉಪಾಯ ಮಾಡಬೇಕೆಂದು ಪ್ರಶ್ನೆ ಮಾಡಿದರು. ಅದಕ್ಕೆ ಬೀರಬಲನು - " ನಾಳೆಯ ದಿವಸದಿಂದ ಉದ್ಯಾನದೊಳಗಿನ ಯಾವ ವೃಕ್ಷಗಳಿಗೂ ನೀರು ಹಾಕಬೇಡಿರೆಂದು, ತೋಟಗರಿಗೆ ಅಪ್ಪಣೆ ಮಾಡಿರಿ" ಎಂದು ಹೇಳಿ ಕಳುಹಿಸಿ ಕೊಟ್ಟನು ಅವರು ಅದರಂತೆಯೇ ಅಪ್ಪಣೆ ಮಾಡಿ ದರು. ನಾಲ್ಕಾರು ದಿವಸಗಳೊಳಗಾಗಿ ಲತೆ ; ವೃಕ್ಷಗಳೆಲ್ಲ ಶುಷ್ಕವಾಗಿ ಹೋದವು, ಅದನ್ನು ನೋಡಿ ಬಾದಶಹನು ಕುಪಿತನಾದನು ಆಗ ಒಬ್ಬ ಬೇಗಮ್ಮ ಳು ಮುಂದೆಬಂದು "ಸ್ವಾಮೀ ! ನಿರಪರಾಧಿಯವನ ಮೇಲೆ ಕೋಪಿಸಕೂ ಡದು ನಾವೇ ಈ ಗಿಡಗಳಿಗೆ ನೀರು ಹಾಕಬೇಡಿರೆಂದು ಅಪ್ಪಣೆ ಮಾಡಿದ್ದೇವೆ? ಎಂದಳು ಆಗ ಬಾದಶಹನು ಹೀಗೇಕೆ ಮಾಡಿದಿರಿ? ಎಂದು ಪ್ರಶ್ನೆ ಮಾಡಿದ ನು ಆ ಕೂಡಲೆ ಬೇಗಮ್ಮಳು- ಅರಣ್ಯದೊಳಗೆ ಬೆಳೆದಿರುವ ವೃಕ್ಷಗಳಿಗೆ ಯಾರು ನೀರನ್ನು ಹಾಕುತ್ತಾರೆ? ಹಾಕದಿದ್ದರೂ ಸಹ ಅವು ಹಚ್ಚಗೆ ಹಸ ರು ಮುರಿಯುತ್ತಿರುವದಿಲ್ಲವೇ? ” ಎಂದು ಕೇಳಿದಳು ಆಗ ಬಾದಶಹನ ಮ ನಸ್ಸಿನ ಸಂಶಯವು ನಿವೃತ್ತಿಯಾಯಿತು.

-( ೨೦೦ ಅಂತ್ಯಜನು ಮುಸಲ್ಮಾನ ನಾಗಲಿಲ್ಲ.) -

"ಒಂದು ದಿವಸ ಬಾದಶಹನು ಬೀರಬಲನನ್ನು ಕುರಿತು- ನೀನು ಮು ಸಲ್ಮಾನ ಧರ್ಮವನ್ನು ಸ್ವೀಕರಿಸಿದರೆ, ನಿನಗೆ ಅರ್ಧ ರಾಜ್ಯವನ್ನು ಕೊಡು ತ್ತೇನೆ ” ಎಂದನು ಅದಕ್ಕೆ ಬೀರಬಲನು- ನಾಳೆಯ ದಿನದಲ್ಲಿ ವಿಚಾರಮಾ ಡಿಕೊಂಡು ಉತ್ತರವನ್ನು ಹೇಳುವೆನು. ” ಎಂದು ಹೇಳಿ, ಓಲಗದಿಂದ ಹೊ ರಬಿದ್ದು, ಅಂತ್ಯಜರ ಕೇರಿಯನ್ನು ಹೊಕ್ಕು “ ಬಹಳೇ ಜಾಗ್ರತೆಯಿಂದ ಇರ್ರಿ ! ಯಾಕಂದರೆ ಬಾದಶಹನು ನಿಮ್ಮನ್ನು ಮುಸಲ್ಮಾನ ಧರ್ಮಕ್ಕೆ ಸೇರಿ : ಸಿಕೊಳ್ಳಬೇಕೆಂದು ಯತ್ನಪಡಿಸಿದ್ದಾನೆ ” ಎಂದು ಹೇಳಿ ಹೊರಟುಬಂದನು ಮರುದಿವಸ ಆ ಅಂತ್ಯಜರೆಲ್ಲ ಕೂಡಿಕೊಂಡು ಬಾದಶಹನ ಸಮ್ಮುಖದಲ್ಲಿ ಬಂ ದು ನಿಂತುಕೊಂಡು. ಖಾವಂದ; ನಾವು ಮರಣವನ್ನಾದರೂ ಆನಂದದಿಂ ದ ಸ್ವೀಕರಿಸುವವೇ ಹೊರತು, ಮುಸಲ್ಮಾನ ಧರ್ಮವನ್ನು ಸ್ವೀಕರಿಸಲಾರೆ ವು” ಎಂದು ಪ್ರಾರ್ಥನೆ ಮಾಡಿಕೊಂಡರು ಆಗ ಅಲ್ಲಿ ಇದ್ದ ಬೀರಬಲನು "ಪೃಥ್ವಿನಾಥ ! ಈ ಅಂತ್ಯಜರೇ, ತಮ್ಮ ಧರ್ಮವನ್ನು ಬಿಡ ಲೊಪ್ಪಿಕೊಳ್ಳ ದಮೇಲೆ, ಇತರರು ಹ್ಯಾಗೆ ಧರ್ಮಚ್ಯುತ ರಾದರು! ” ಎಂದು ಕೇಳಿದನು ಬಾದಶಹನು ಬಹಳೇ ನಕ್ಕನು.

- ( ೨೦೧, ವನಸ್ಪತಿಯ ಬೀಜ. )-

ಒಂದು ದಿವಸ ಬಾದಶಹನು ಓಲಗದಲ್ಲಿ ಕುಳಿತಿದ್ದನು ರಾಜಕರಣಗ ಳೆಲ್ಲ ಸಮಾಪ್ತಿಯಾಗುತ್ತ ಬಂದಿದ್ದವು ಆಗ ಯಾವತ್ತು ಸಭಾಸದರು ಬಾದ ಶಹನನ್ನು ಕುರಿತು ಖಾವಂದ ! ತಾವು ಬೀರಬಲನ ಹೊರತು ಅನ್ಯರಿಗೆಯಾ ವ ವಿಷಯದಲ್ಲಿಯೂ ಪ್ರಶ್ನೆ ಮಾಡುವದಿಲ್ಲ; ಇದರ ಕಾರಣವೇನು? ಎಂದು ಕೇಳಿದರು. ಆ ಮಾತಿಗೆ ಬಾದಶಹನು, ಅವನು ನಾನು ಕೇಳಿದ ಪ್ರತಿಯೊಂ ದು ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ಕೊಡುವ ಸಾಮರ್ಥ್ಯ ವುಳ್ಳ ವನಿದ್ದಾನೆ. ನಿಮ್ಮಲ್ಲಿ ಅಂಥ ಸಾಮರ್ಥ್ಯವು ಇಲ್ಲ; ಇದ್ದ ಪಕ್ಷದಲ್ಲಿ ವನಸ್ಪತಿ ಯ ಬೀಜವಾವುದು ? ಹೇಳಿರಿ! ಎಂದು ಅಪ್ಪಣೆ ಮಾಡಿದನು ಅವರು ಒಂದು ಮಾಸ ಪರಿಯಂತರ ಶೋಧಮಾಡಿದರೂ ಸಹ ಗೊತ್ತಾಗಲಿಲ್ಲ ಆಗ ಬಾದಶ ಹನು ಬೀರಬಲನಿಗೆ ಅದೇ ಪ್ರಶ್ನೆಯನ್ನು ಮಾಡಿದನು ಕೂಡಲೆ ಬೀರಬಲನು ಗಂಗಾಜಲವನ್ನು ತೆಗೆದುಕೊಂಡು ಭೂಮಿಯಮೇಲೆ ಹಾಕಿ ಖಾವುದ ! ಇ ದೇ ವನಸ್ಪತಿಗಳ ಬೀಜವು ! ಎಂದು ಉತ್ತರ ಕೊಟ್ಟನು ಅದನ್ನು ಕೇಳಿ, ಅವರೆಲ್ಲರೂ ಲಜ್ಜೆಯಿಂದ ಅಧೋವದನ ರಾದರು.

೨೨. ಪ್ರಜೆಗಳಲ್ಲಿ ಕೆಲವರು ರಾಜರು ಕೆಲವರು ದರಿದ್ರರು ಯಾಕೆ ಇರುವರು ?

ಒಂದು ಸಾರೆ ಬಾದಶಹನು ಬೀರಬಲನೊಡನೆ ಗೃಹಕೃತ್ಯದ ಸಂಬ ಧದ ಮಾತು ಕಥೆಗಳನ್ನಾಡುತ್ತ ಕುಳಿತು ಕೊಂಡಿದ್ದನು ಒಮ್ಮಿಂದೊಮ್ಮೆ ಬಾದಶಹನ ಮನಸ್ಸಿನಲ್ಲಿ ಈ ಮೇಲೆ ಬರೆದ ಪ್ರಶ್ನೆಯು ಉದ್ಭವಿಸಿತು ಆಕೂ ಡಲೆ ಬೀರಬಲ್ಲ ಜಗತ್ತಿನಲ್ಲಿ ಕೆಲವು ಜನರು ರಾಜರು ಯಾಕೆ ಆಗುವರು ? ಕೆಲವರು ದರಿದ್ರರು ಆಗುವ ಕಾರಣವೇನು ? ಎಂದು ಪ್ರಶ್ನೆ ಮಾಡಿದನು ಆಗ ಬೀರಬಲನು ಕಿಂಚಿತ್ತಾದರೂ ಯೋಚಿಸದೆ
"ರಾಮ ಝರೋಖೆ ಬೈಠಕರ ಸಬಕಾಮುಜರಾಲೇತ !
ಜಾಕೀಜೈಸೀ ಚಾಕರೀ ವಾಕೋ ವೈ ಸೋದೇತ |
ಎಂಬ ಪದ್ಯವನ್ನು ಹೇಳಿದನು ಇದರ ಅಭಿಪ್ರಾಯವೇನಂದರೆ “ ಕರ್ತನು ಎಲ್ಲ ಮನುಷ್ಯ ಪ್ರಾಣಿಗಳನ್ನು ನಿರ್ಮಿಸಿ ತನ್ನ ಪ್ರಾಸಾದದ ಅಗ್ರಭಾಗದಲ್ಲಿ ಕುಳಿತುಕೊಂಡು ಎಲ್ಲರ ಕಡೆಯಿಂದ ಮುಜರೆಯನ್ನು ತಕ್ಕೊ ಳ್ಳಹತ್ತಿದನು ಯಾರು ಉದ್ದತತ ನದಿಂದ ಮುಜರೆ ಮಾಡಿದರು ಕೆಲವರು ಅತಿನಮ್ರತೆಯಿಂದ ಮಾಡಿದರು ಅದರಿಂದ ಅವರವರ ಕರ್ಮಾನು ಸಾರವಾ ಗಿ ಅವರವರಸ್ಥಿತಿಯನ್ನುಂಟು ಮಾಡಿದನು.

-೨೨೩. ಬೀರಬಲನು ಶುನಕನ ವೈದ್ಯನು.)-

ಒಂದು ದಿವಸ ಬಾದಶಹನು ತನ್ನ ಮುಖ್ಯ ಮುಖ್ಯಸಭಾಸದರೊಡನೆ ಕುಳಿತುಕೊಂಡು ವಿನೋದದಿಂದ ಮಾತು ಕಥೆಗಳನ್ನು ಆಡುತ್ತಿದ್ದನು. ಆಗ ಅಬುಲ್ ಫಜಲನು ಬೀರಬಲನಿಗೆ ವಿನೋದಮಾಡಬೇಕೆಂದು ಯೋಚಿ ಸಿ “ ಬೀರಬಲ್ಲ ? ಈಹೊತ್ತಿನಿಂದ ತಮ್ಮನ್ನು ಶುನಕಗಳ ರೋಗ ನಿವಾರ ಣೆಯಗೃಹಗಳ ಮೇಲೆ ಮುಖ್ಯಸ್ಥರನ್ನಾಗಿ ನಿಯಮಿಸಿದೆ?” ಎಂದನು ಆ ಕೂ ಡಲೆ ಬೀರಬಲನು ಹಾಗಾದರೆ ನೀವೆಲ್ಲರೂ ನನ್ನ ಆಜ್ಞೆಯನ್ನು ಪಾಲಿಸಬೇ ಕಾಯಿತು? ಎಂದುನು ಅಬುಲಫಜಲನು ಬೀರಬಲನ ಮಾತನ್ನು ಕೇಳಿ ಲಜ್ಜಿ ತನಾದನು.

-(೨೦೪, ಕಳ್ಳನ ಗಡ್ಡದಲ್ಲಿ ಎಳ್ಳಿನಕಾಳು ಅದೆ.)-

ಬಾದಶಹನ ಅಂತಃಪುರದಲ್ಲಿ ಒಂದು ರತ್ನದ ಅಲಂಕಾರವು ಕಳವಾಗಿ ಹೋಯಿತು. ಕಳ್ಳನನ್ನು ಗೊತ್ತು ಹಚ್ಚಿಕೊಡು ? ಎಂದು ಬಾದಶಹನು ಬೀ ರಬಲನಿಗೆ ಆಜ್ಞೆ ಮಾಡಿದನು, ಆಗ ಬೀರಬಲನು ಆ ಅಲಂಕಾರವನ್ನಿಟ್ಟಿದ್ದ ಪೆಟ್ಟಿಗೆಗೆ ಕಿವಿಯನ್ನು ಹಚ್ಚಿ ಸ್ವಲ್ಪ ಹೊತ್ತು ಕುಳಿತುಕೊಂಡು ಆ ಮೇಲೆ ಪೃಥ್ವಿನಾಥ! ಈ ಪೆಟ್ಟಿಗೆಯು ಹೇಳಿದ್ದೇನಂದರೆ ಕಳ್ಳನಗಡ್ಡದಲ್ಲಿ ಒಂದು ಎಳ್ಳುಕಾಳು ಅದೆ, ಎಂದು ಹೇಳಿತು ಎಂದನು ಆಗ ಪರಿಚಾರಕನೊಬ್ಬನು ತನ್ನ ಗಡ್ಡವನ್ನು ಹಿಡಿದುಕೊಂಡು ನೋಡಿದನು, ತೀಕ್ಷ್ಣ ದೃಷ್ಟಿಯುಳ್ಳ ಬೀ ರಬಲನು ಅವನನ್ನು ಆ ಕೂಡಲೆ ಹಿಡಿದು ಕಿಂಚಿತ್ ಬೆದರಿಕೆ ಹಾಕಲು ಅವ ನು ತನ್ನ ಅಪರಾಧವನ್ನು ಸ್ವೀಕರಿಸಿದನು.

- (೨೦೫, ಅತ್ಯದ್ಭುತ ಪ್ರಹೇಲಿಕಾ )-

ಅಕಬರ ಬಾದಶಹನು ಒಂದು ಸಾರೆ ಬೀರಬಲನಿಗೆ ಈ ಪ್ರಹೇಳಿಕೆ ಯನ್ನು ಹೇಳಿದನು.
"ಊಪರ ಢಕ್ಕನ ನೀಚೇಢಕ್ಕನ ಬೀಚಮೆ ಖರಬೂಜಾ | ಮೊಮ ಘರಿಸೋ ಆಸಹಿ ಕಾಟತಾನು ಅರ್ಥನಹಿ ದೂಜಾ|| ಈ ಪ್ರಹೇಲಿಕೆಯನ್ನು ಕೇಳಿ ಬೀರಬಲನು ಚಕಿತನಾದನು. ಅರ್ಥವನ್ನು ಹೇಳಲಿಕ್ಕೆ ತಿಳಿಯಲಿಲ್ಲ ಕಿಂಚಿತ್ ಅವಕಾಶವನ್ನು ಕೊಡಿರಿ ! ಎಂದು ಕೇಳಿ ಕೊಳ್ಳಲು ಬಾದಶಹನು ಅಪ್ಪಣೆಕೊಟ್ಟನು. ಬೀರಬಲನು ದಿಲ್ಲಿಯನ್ನು ಬಿ ಟ್ಟು ಒಂದು ಸಮೀಪದ ಜನವಸತಿಗೆ ಹೋದನು. ಬಿಸಲಿನಿದ ಬಾಯಾರಿತ ಳಮಳಿಸಹತ್ತಿದನು ಆಗ ಆಜನವಸತಿಯಲ್ಲಿದ್ದ ಒಂದು ಚಿಕ್ಕ ಮನೆಯನ್ನು ಪ್ರವೇಶಿಸಿದನು ಆಗ ಅಲ್ಲಿ ಒಬ್ಬ ತರುಣಿಯು ಅಡಿಗೆಯನ್ನು ಮಾಡುತ್ತ ಕು ಳಿತು ಕೊಂಡಿದ್ದಳು ಅವಳನ್ನು ಕುರಿತು, ಬಾಲಕಿಯೇ ! ಏನನ್ನು ಮಾಡು ತಿರುವಿ !
ಬಾಲಕಿ-ಮಗಳನ್ನು ಬೇಯಿಸುತ್ತೇನೆ, ತಾಯಿಯನ್ನು ಸುಡಹತ್ತಿದ್ದೇನೆ.
ಬೀರಬಲ-ನಿನ್ನ ತಂದೆಯು ಏನು ಮಾಡುತ್ತಿರುವನು ?
ಬಾಲಕಿ-ಮಣ್ಣಿನಲ್ಲಿ ಮಣ್ಣು ಕೂಡಿಸಲಿಕ್ಕೆ ಹೋಗಿದ್ದಾನೆ
ಬೀರಬಲ- ನಿನ್ನ ತಾಯಿಯು ಎಲ್ಲಿ ಹೋಗಿದ್ದಾಳೆ.
ಬಾಲಕಿ- ಒಂದೊಂದನ್ನು ಎರಡೆರಡು ಮಾಡಲಿಕ್ಕೆ ಹೋಗಿದ್ದಾಳೆ. ಈ ಉತ್ತರಗಳನ್ನು ಕೇಳಿ ಬೀರಬಲನು ದಿಗ್ಭ್ರಮೆಗೊಂಡನು ಅಮ್ಮ ರಲ್ಲಿ ಆ ಬಾಲಕಿಯ ಮಾತಾಪಿತೃಗಳು ಬಂದರು ಬೀರಬಲನು ಯಾವತ್ತು ವೃತ್ತಾಂತವನ್ನು ಹೇಳಿದನು. ಆಗ ಆ ಬಾಲಕಿಯ ತಂದೆಯು ಮಹಾಶಯ! ನನ್ನ ಮಗಳು ತೊಗರೇ ಬೆಳೆಯನ್ನು ಬೇಯಿಸಹತ್ತಿರುವಳು ಅದಕ್ಕೆ ತೊಗರೇ ಕಟ್ಟಿಗೆಯನ್ನೇ ಉರಿ ಹಚ್ಚಿದ್ದಾಳೆ ನಾನು ನಮ್ಮ ಜಾತಿಯ ಒಬ್ಬ ಮನುಷ್ಯನ ಸ್ಮಶಾನಯಾತ್ರೆಗೆ ಹೋಗಿದ್ದೆನು ನನ್ನ ಸ್ತ್ರೀಯು ಉದ್ದಿನಕಾಳುಗಳಿಂದ ಬೇಳೆಯನ್ನು ಮಾಡಲಿಕ್ಕೆ ಹೋಗಿದ್ದಳು; ಎಂದು ಹೇಳಿದನು ಆಗ ಬೀರಬಲನು ಆ ಮನುಷ್ಯನಿಗೆ, ಬಾದಶಹನು ಹೇಳಿದ ಪ್ರಹೇಲಿಕೆಯ ಅರ್ಥವನ್ನು ಹೇಳೆಂದು ಕೇಳಿದನು ಆಗ ಆ ಮನುಷ್ಯನು - ಎರಡು ಆಚ್ಛಾ ದನಗಳೆಂದರೆ ಕೆಳಗೆ ಧರಣಿ ಮೇಲೆ ಆಕಾಶ ಕರಬೂಜಿಯ ಹಣ್ಣಿನಂತೆ ಇದ್ದವನು ಮನುಷ್ಯಪ್ರಾಣಿಯು ಎರಡೂ ಕಡೆಯಲ್ಲಿ ತೃಣಾಚ್ಛಾದಿತವಾಗಿದ್ದ ಚೂತ ಫಲವು ಆವತೃಣದ ಶಕೆಯಿಂದ ಹಣ್ಣಾಗಿ ಹೋಗುವಂತೆ ಮನುಷ್ಯ ಪ್ರಾಣಿಯು ಭೂಮ್ಯಾಕಾಶಗಳೆಂಬ ಆಚ್ಛಾದನಗಳನಡುವೆ ಸಿಲುಕಿಬಿದ್ದು, ಮೃತ್ಯುವಶನಾಗುತ್ತಾನೆ ಎಂದು ಹೇಳಿದನು.

ಆಗ ಬೀರಬಲನು ಆ ಮನುಷ್ಯನಿಗೆ ಉಚಿತವನ್ನಿತ್ತು ದಿಲ್ಲಿಗೆ ಬಂದನು ಮರುದಿವಸ ಸಭಾಸ್ಥಾನಕ್ಕೆ ಹೋಗಿ ಬಾದಶಹನಿಗೆ ಪ್ರಹೇಲಿಕೆಯ ಆರ್ಥವನ್ನು ಹೇಳಿದನು ಅದನ್ನು ಕೇಳಿ ಬಾದಶಹನು ಅತಿಪ್ರಸನ್ನನಾದನು.

- (೨೦೬,ಡೋಣಿಯನ್ನು ಗೊತ್ತುಮಾಡಿಕೊಂಡು ಬರುತ್ತೇನೆ.)-

ಒಂದು ದಿವಸ ಬಾದಶಹನೂ ಬೀರಬಲನೂ ಸಂಚರಿಸುತ್ತ ಸಂಚರಿಸುತ್ತ ಯಾವದೋ ಒಂದು ಜನವಸತಿಗೆ ಹೋದರು ಅಕಬರನು ಒಬ್ಬ ಮನುಷ್ಯನನ್ನು ಕರೆದು ನಿನ್ನ ಹೆಸರೇನು? ಎಂದು ಕೇಳಿದನು ಅದಕ್ಕೆ ಆ ಮನುಷ್ಯನು “ ಗಂಗಾ ” ಎಂದು ಉತ್ತರ ಕೊಟ್ಟನು ಪುನಃ ಬಾದಶಹನು ನಿನ್ನ ತಂದೆಯ ಹೆಸರೇನು? ಎಂದು ಕೇಳಲು, ಅವನು " ಯಮುನಾ ” ಎಂದು ಉತ್ತರಕೊಟ್ಟನು ಆಮೇಲೆ ಬೀರಬಲನ ಪ್ರಶ್ನೆಯಿಂದ " ಅವನ ಅಕ್ಕನ ಹೆಸರು ನರ್ಮದೆಯೆಂದೂ, ತಾಯಿಯ ಹೆಸರು” "ಸರಸ್ವತಿ ” ಎಂದೂ ತಿಳಿಯಬಂತು ಆಗ ಬೀರಬಲನು ಆ ಮನುಷ್ಯನಿಗೆ ಸಾಕು, ಸಾಕು, " ಸ್ವಲ್ಪತಡೆ ನಾನು ನಾವೆನ್ನೊಂದನ್ನು ಗೊತ್ತು ಮಾಡಿಕೊಂಡು ಬರುತ್ತೇನೆ ಇಲ್ಲದಿದ್ದರೆ ಈ ನದಿಗಳ ಪ್ರವಾಹದಲ್ಲಿ ತೇಲಿ ಹೋಗಬೇಕಾದೀತು.

-( ೨೦೭. ಜೂತೇಕೇ ಮಾರೆ ಖಡೇಹೈ, )-

ಬಾದಶಹನು ತನ್ನ ಮಂತ್ರಿ ಜನಗಳೊಡನೆ ಜುಮ್ಮ ಮಸೀದಿಗೆ ನಮಾಜಿ ( ದೇವರಪ್ರಾರ್ಥನಿಗೆ ) ಹೋಗಿದ್ದನು ಆಗ ಅಕಸ್ಮಾತ್ತಾಗಿ ಪೈಜಿ ಎಂಬವನ ವಾದರಕ್ಷೆಗಳನ್ನು ಯಾರೋ ಕದ್ದು ಒಯ್ದಿದ್ದರು ಆಗ ಅವನು ಅಲ್ಲಿ ಇಲ್ಲಿ ಪಾದರಕ್ಷೆಗಳ ಶೋಧ ನಡೆಯಿಸಿದನು ಅಷ್ಟರಲ್ಲಿ ಬಾದಶಹನು ತನ್ನ ನಿಯಮವನ್ನು ತೀರಿಸಿಕೊಂಡು, ಹೊರಗೆಬಂದು ಅರಮನೆಗೆ ಹೊರ ಡಲುನುವಾಗಿ ನಿಂತುಕೊಂಡು ಪೈಜಿಯನ್ನು ಕುರಿತು - ಯಾಕೆ ? ಬರುವ ದಿಲ್ಲವೇನು ? ಎಂದು ಕೇಳಿದನು ಆಗ ಬೀರಬಲನು - ಜೂತೆಕ ಮಾರೆ ಖಡೇ ಹೈ ” ಎಂದು ಹೇಳಿದನು ಇದನ್ನು ಕೇಳಿ ಬಾದಶಹನು ಕಿಲಕಿಲ ನಕ್ಕನು.
ಟೀಪು:- ಜೂತೋಕೆ ಮಾರೆ ಎಂದರೆ ಪಾದರಕ್ಷೆಗಳ ಸಲುವಾಗಿ ಎಂದೂ ಪಾದರಕ್ಷೆಗಳ ಪೆಟ್ಟಿನ ಸಲುವಾಗಿ ಎಂದೂ ಎರಡು ಅರ್ಥವಾಗುತ್ತವೆ.

-( ೨೦೮. ಮೂರ್ಖರ ಪತ್ರಿಕೆ. )-

ಒಂದಾನೊಂದು ಸಮಯದಲ್ಲಿ ಒಬ್ಬ ಅರಬನು ಕೆಲವು ಉತ್ತಮಾಶ್ವಗಳನ್ನು ತೆಗೆದುಕೊಂಡು ದಿಲ್ಲಿಗೆ ಬಂದು, ಬಾದಶಹನಿಗೆ ಬೆಟ್ಟಿಯಾದನು ಅಕಬರನು ಕೆಲವು ಅಶ್ವಗಳನ್ನು ಕ್ರಯಕ್ಕೆ ತೆಗೆದುಕೊಂಡನು ಆ ಅಶ್ವಗಳ ಸುಲಕ್ಷಣ ಲಕ್ಷಿತವಾದ ಮೈಕಾಂತಿಯನ್ನು ನೋಡಿ, ಮೋಹವುಳ್ಳವನಾಗಿ, ಇನ್ನೊಂದು ಸಾರೆ ಇಂಥ ಉತ್ತಮಾಶ್ವಗಳನ್ನು ತಂದು ಕೊಡು ! ಎಂದು, ಆ ಅರಬನಿಗೆ ಒಂದು ಲಕ್ಷ ರೂಪಾಯಿಗಳನ್ನು ಮುಂಚಿತವಾಗಿಯೇ ಕೊಟ್ಟು ಬಿಟ್ಟನು ಆ ವರ್ತಕನು ರೂಪಾಯಿಗಳನ್ನು ಕಟ್ಟಿಕೊಂಡು ಹೋರಟು ಹೋದನು ಅವನ ಹೆಸರೇನು? ಅವನು ಎಲ್ಲಿಂದ ಬಂದನು? ಎಲ್ಲಿಗೆ ಹೋದನು? ಎಂಬ ಸಂಗತಿಯನ್ನು ಯಾರೂ ವಿಚಾರಿಸಿ ತಿಳಿದುಕೊಳ್ಳಲಿಲ್ಲ.
ಮುಂದೆ ಕೆಲವು ದಿವಸಗಳಾದಮೇಲೆ ಬಾದಶಹನು ಪಟ್ಟಣದಲ್ಲಿದ್ದ ಮೂರ್ಖರ ಪತ್ರಿಕಯೊಂದನ್ನು ಸಿದ್ಧಮಾಡು ! ಎಂದು ಬೀರಬಲನಿಗೆ ಅಪ್ಪಣೆ ಮಾಡಿದನು. ಬೀರಬಲನು ಆ ಪತ್ರಿಕೆಯ ಆರಂಭದಲ್ಲಿಯೇ ಅಕಬರ ಬಾದಶಹನ ಹೆಸರನ್ನು ಬರೆದು, ಅದರ ಕೆಳಗೆ ನೂರಾರು ಜನಗಳ ಹೆಸರನ್ನು ಬರೆದು ಬಾದಶಹನ ಮುಂದೆ ಇಟ್ಟನು ಅದನ್ನು ನೋಡಿದಕೂಡಲೆ ಬಾದಶಹನಿಗೆ ಅತಿಕೋಪವು ಬಂತು ಆಗ ಬೀರಬಲನನ್ನು ಕುರಿತು - ನೀನು ನನ್ನನ್ನು ಈಪರಿ ಅವಮಾನ ಮಾಡಿದ್ದು ಯಾಕೆ? ಎಂದು ಕೇಳಿದನು ಅದಕ್ಕೆ ಬೀರಬಲನು - ಆ ಅರಬನ ಹೆಸರು ಗ್ರಾಮ, ಮೊದಲಾದ ಯಾವ ಸಂಗತಿಗಳನ್ನು ತಿಳಿದು ಕೊಳ್ಳದೆ, ಅವನಿಗೆ ರೂಪಾಯಿಗಳನ್ನು ಕೊಟ್ಟು ಬಿಟ್ಟ ಮೇಲೆ ನಿಮ್ಮ ಹೆಸರನ್ನು ಈ ಪತ್ರಿಕೆಯಲ್ಲಿ ಆರಂಭದಲ್ಲಿ ಯಾಕೆ ಬರಿಯ ಕೂಡದು? ಎಂದು ಕೇಳಿದನು ಅದಕ್ಕೆ ಬಾದಶಹನು - ಒಂದು ವೇಳೆ ಆ ಅರಬನ ಅಶ್ವಗಳನ್ನು ತೆಗೆದುಕೊಂಡು ಬಂದರೆ, ಎಂದು ಕೇಳಿದನು. ಆ ಕೂಡಲೆ ಬೀರಬಲನು - “ ನಿಮ್ಮ ಹೆಸರನ್ನು ಕಿತ್ತುಹಾಕಿ, ಆ ಸ್ಥಳದಲ್ಲಿ ಅವನ ಹೆಸ ರನ್ನು ಬರೆದಿಡ ವೆನು ” ಎಂದು ಉತ್ತರ ಕೊಟ್ಟನು ಈ ಉತ್ತರವನ್ನು ಕೇ ಳಿ ಬಾದಶಹನು ಅಧೋಪದನ ನಾದನು.

- ( ೨೦೯. ಕೃತಜ್ಞ ಮತ್ತು ಕೃತಘ್ನ,)-

ಒಂದು ದಿವಸ ಬಾದಶಹನು - ಬೀರಬಲ ! ಈ ದಿವಸ ಕೃತಜ್ಞ ಮ ತ್ತು ಕೃತಘ್ನರನ್ನು ತಂದು ತೋರಿಸು ! ಎಂದು ಅಪ್ಪಣೆ ಮಾಡಿದನು ಬೀ ರಬಲನ, ಬಹುವರಿಯಿಂದ ಯೋಚಿಸಿ ನೋಡಿದನು ಗೊತ್ತಾಗಲಿಲ್ಲ. ನಿರು ಪಾಯನಾಗಿ ಮನೆಗೆಬಂದು ಕುಳಿತುಕೊಂಡನು ಉದಾಸೀನ ವೃತ್ತಿಯನ್ನು ಸ್ವೀಕರಿಸಿಕೊಂಡು ಕುಳಿತಿರುವ ತನ್ನ ಪಿತನನ್ನು ಕಂಡು ಅವನ ತನುಜಿ ಯು ಕಾರಣವನ್ನು ಕೇಳಿದಳು ಬೀರಬಲನು ಸಮಗ್ರ ವೃತ್ತಾಂತವನ್ನು ಹೇಳಿದನು ಆಗ ಅವಳು “ ಏನೂಚಿಂತೆ ಮಾಡಬೇಡ ! ಪ್ರಾತಃಕಾಲದಲ್ಲಿ ಅ ವರನ್ನು ತೋರಿಸುವೆನು, ಎಂದಳು ಪ್ರಾತಃಕಾಲ ವಾಗುತ್ತಲೆ ಸುತೆಯ ನ್ನು ಕರೆಯಲು ಅವಳು ಪಿತನೇ, ಒಂದು ಶುನಕವನ್ನೂ, ಒಬ್ಬ ಜಾಮಾತ ನನ್ನೂ ಕರೆದುಕೊಂಡು ಹೋಗು ! ಎಂದು ಹೇಳಿದಳು ಆಕೂಡಲೆ ಬೀರಬ ಲನು ಪ್ರಸನ್ನಚಿತ್ತನಾಗಿ, ಬಾದಶಹನ ಸಮ್ಮುಖದಲ್ಲಿ ಒಯ್ದು ನಿಲ್ಲಿಸಿದನು ಆಗ ಬಾದಶಹನು ನಾನು ಹೇಳಿದ ವಸ್ತುಗಳು ಎಲ್ಲಿ ಅವೆ? ಎಂದು ಕೇಳಿದ ನು ಆಗ ಬೀರಬಲನು - ಹುಜೂರ್ ! ಈ ಶುನಕವು ಕೃತಜ್ಞ ಪ್ರಾಣಿಯು ಇದು ಯಾವಾಗಲೂ ಒಡೆಯನನ್ನು ಅನುಸರಿಸಿಯೇ ಇರುತ್ತದೆ. ಇದು ಯಜಮಾನನಿಗೆ ಎಂಥ ಸಂಕಟದಲ್ಲಿಯಾದರೂ ಸಹಾಯ ಮಾಡುತ್ತದೆ ಇವ ನು ಜಾಮಾತನು ಬಹು ಕೃತಘ್ನನು ಯಾಕಂದರೆ ಅತ್ತೆ ಮಾವಂದಿರು ಅವ ನಮನಸ್ಸನ್ನು ತೃಪ್ತಿ ಬಡಿಸುವದಕ್ಕೆ ದ್ರವ್ಯವನ್ನು ಕೊಟ್ಟು ಮಗಳನ್ನು ಸ್ವಾ ಧೀನಪಡಿಸಿದರೂ ಸಹ ಇವನು ಯಾವಗಡಿಗೆಯಲ್ಲಿ ಭೋಜನ ಮಾಡು ವನೋ ಆಗಡಿಗೆಯ ತಳಕ್ಕೆ ಛಿದ್ರವನ್ನು ಮಾಡದೆ ಬಿಡುವದಿಲ್ಲ ಎಂದು ಹೇ ಳಿದನು ಆಗ ಬಾದಶಹನು - ಹೀಗೆ ಇದ್ದ ಪಕ್ಷದಲ್ಲಿ ಇವನ ತಲೆ ಹೊಡಿಸಿ ಬಿಡು ! ಎಂದು ಅಪ್ಪಣೆ ಮಾಡಿದನು ಆಕೂಡಲೆ ಬೀರಬಲನು ಖಾವಂದ ! ತಾನಾದರೂ ಒಬ್ಬ ಸುರನಿಗೆ ಜಾಮಾತ ರಾಗಿರುವಿರಿ? ಎಂದು ಉತ್ತರ

ಕೊಟ್ಟನು ಬಾದಶಹನು ಲಜ್ಜಿತನಾದನು.

-( ೨೧೦. ಪಾಠ್ಠಚ

ಢಗಯಾ.)-

ಒಂದು ಸಾರೆ ಒಬ್ಬ ಬೇಗಮ್ಮಳ ಶರೀರದಲ್ಲಿ ಪೀಡೆ ಯುoಟಾಗ ಹತ್ತಿ ತು ಅದಕ್ಕೆ ಬಾದಶಹನು ಬೀರಬಲನಿಗೆ ಹೀಗೆ ಯಾಕೆ ಆಗಿರಬಹುದು? ಎಂದು ಕೇಳಿದನು ಅದಕ್ಕೆ ಬೀರಬಲನು ಮಹಾರಾಜ ! ಯಾವದಾದರೊಂದು ಪಠ್ಠಾಚಢಗಯಾ ಹೋಗಾ, ಅಂದರೆ ಯಾವದಾದರೊಂದು ಲೇಪವನ್ನು ಹಚ್ಚಿರಿ ! ಎಂದು ಹೇಳಿದನು ಬಾದಶಹನಿಗೆ ಅವನ ವ್ಯಂಗಾರ್ಥವು ತಿಳಿದಿದ್ದ ರಿಂದ ಬಿದ್ದು ಬಿದ್ದು ನಕ್ಕನು.

( ೨೧೧, ಬ್ರಾಹ್ಮಣನನ್ನು ಮರಣದಂಡನೆಯಿಂದ ತಪ್ಪಿಸಿದ್ದು.)-

ಅಕಬರ ಬಾದಶಹನು ಒಬ್ಬ ವೃದ್ಧ ಬ್ರಾಹ್ಮಣನ ಮೇಲೆರುಷ್ಟನಾಗಿ ಮರಣ ದಂಡನೆಯನ್ನು ವಿಧಿಸಿದನು ಆ ಸಮಯದಲ್ಲಿ ಬೀರಬಲನು ಬರಲು, ಬಾದಶಹನು ಅವನನ್ನು ಕುರಿತು ಈ ದುಷ್ಟನ ವಿಷಯದಲ್ಲಿ ನೀನು ನನಗೆ ಏನೂ ಹೇಳಬೇಡ ನಾನು ಈ ವಿಷಯದಲ್ಲಿ ನಿನ್ನ ಮಾತನ್ನು ಕೇಳಲಿಕ್ಕಿಲ್ಲವೆಂದು ಪ್ರತಿಜ್ಞೆ ಮಾಡಿದ್ದೆನೆ ಎಂದನು. ಆಗ ಬೀರಬಲನು ಹುಜೂರ್! ನನ್ನ ಅಭಿಪ್ರಾಯವನ್ನು ಕೇಳಬೇಡಿರಿ ! ಅವಶ್ಯವಾಗಿ ಈ ದುಷ್ಟನಿಗೆ ಶಿಕ್ಷಿಸಲಿಕ್ಕೇಬೇಕು ಎಂದನು ಬಾದಶಹನು ವಚನ ಬದ್ಧನಾದ್ದರಿಂದ ಬ್ರಾಹ್ಮಣ ನನ್ನು ಬಿಟ್ಟುಬಿಟ್ಟನು.

-(೮೧೨, ಒಂದು ಬಗ್ಗದೆ ) -

ಅಕಬರ ಬಾದಶಹನು ಒಳ್ಳೆವಿನೋದಿಯಾಗಿದ್ದನು. ಒಂದು ದಿವಸ ಅವನು ದಿಲ್ಲಿಯೊಳಗಿನ ಬನಿಯಾ ” ಅಂದರೆ ವರ್ತಕರನ್ನು ಕರೆಯಿಸಿ ನೀವು ನಗರ ವಿಕ್ಷಣೆಯ ಕೆಲಸವನ್ನು ಮಾಡಬೇಕು. ಎಂದು ಆಜ್ಞಾಪಿಸಿದನು ಅಂಜುಗುಳಿಗಳಾದ ಆ ವರ್ತಕರು ತಮ್ಮ ಮೈಮೇಲಿನ ವಸ್ತ್ರಗಳ ಪರಿವೆಯಿಲ್ಲದೆ ಬೀರಬಲನ ಬಳಿಗೆ ಬಂದು ತಮ್ಮ ದುರವಸ್ಥೆಯನ್ನೂ ದೂರ ಮಾಡು ! ಎಂದು ಹೇಳಿಕೊಂಡರು ಆಗ ಬೀರಬಲನು ಅವರಿಗೆ ತೊಟ್ಟುಕೊಂಡ ಚಲ್ಲಣವನ್ನು ತಲೆಗೆ ಸುತ್ತಿಕೊಂಡು ತಲೆಯ ಮೇಲಿನ ರುಮಾಲವನ್ನು ಉಟ್ಟು ಕೊಂಡು ರಾತ್ರಿಯಲ್ಲಿ ಬಂದು ಬಿದ್ದದೆ, ಬಂದು ಬಿದ್ದದೆ, ಎಂದು ಕೂಗುತ್ತ ಪಟ್ಟಣದಲ್ಲಿ ಸಂಚಾರಮಾಡಿರಿ ; ಎಂದು ಹೇಳಿದನು ಅದೇ ದಿವಸ ರಾತ್ರಿಯಲ್ಲಿ ಅವರು ಬೀರಬಲನ ಹೇಳಿಕೆಯಂತೆ ಆಚರಿಸುತ್ತಿರಲು ಅಕಸ್ಮಾತ್ತಾಗಿ ಬಾದಶಹನು ಪ್ರಚ್ಛನ್ನ ವೇಷದಿಂದ ನಗರ ಸಂಚಾರಾರ್ಥವಾಗಿ ಹೊರಟಿರಲು, ವಿಚಿತ್ರ ವೇಪಧಾರಿಗಳಾದ ಆವರ್ತಕರನ್ನು ನೋಡಿ ನೀವು ನುಡಿಯುತ್ತಿರುವ ಕಬ್ದಗಳ ಅರ್ಥವೇನು ಎಂದು ಕೇಳಿದನು ಅದಕ್ಕೆ ಆವರ್ತಕರು " ಹುಜೂರ್ ನಾವು ವರ್ತಕರು ನಗರರಕ್ಷಣೆಯ ಕಾಯ ದಲ್ಲಿ ಅನಭಿಜ್ಞರು ನಮಗೆ ನಗರರಕ್ಷಣೆಯ ಕೆಲಸದಲ್ಲಿ ಕಿಂಚಿತ್ತಾದರೂ ಜ್ಞಾನವಿದ್ದರೆ ನಾವು ವರ್ತಕರೆಂದು ಹೇಳಿಕೊಳ್ಳುತ್ತಿಲ್ಲ ಎಂದು ವಿಜ್ಞಾಪನೆ ಮಾಡಿಕೊಂಡರು. ಮರುದಿವಸವೇ ಅವರಿಗೆ ಆಕೆಲಸವನ್ನು ತಪ್ಪಿಸಿದನು.

-(೨೧೩, ಹೌದಿನಲ್ಲಿಯ ತತ್ತಿ.)-

ಒಂದು ದಿವಸ ಬಾದಶಹನು ಬೀರಬಲನಿಗಿಂತ ಮುಂಚಿತವಾಗಿ ಸಭೆಗೆ ಬಂದು ಬೀರಬಲನಿಗೆ ವಿನೋದ ಮಾಡಬೇಕೆಂದು ಯೋಚಿಸಿ ಪ್ರತಿಯೊಬ್ಬ ಸಭಾಸದನ ಕೈಯಲ್ಲಿ ಒಂದೊಂದು ಕೋಳಿಯ ತತ್ತಿಯನ್ನು ಕೊಟ್ಟನು. ಬೀರಬಲನು ಬಂದ ಕೂಡಲೆ ಬಾದಶಹನು "ಬೀರಬಲ್ಲ, ನಿನ್ನೆ ರಾತ್ರಿಯಲ್ಲಿ ಸ್ವಪ್ನದಲ್ಲಿ ಒಬ್ಬ ದೇವದೂತನು ಬಂದು ನಿನ್ನ ದರಬಾರದಲ್ಲಿರುವ ಮುತ್ಸದ್ಧಿಗಳಲ್ಲಿ ಓರ್ವಜನಕನ ವೀರ್ಯದಿಂದಲೇ ಜನಿಸಿದವರಾರೆಂಬದನ್ನು ಗೊತ್ತು ಮಾಡಿಕೊ" ಎಂದನು. ಅದಕ್ಕೆ ಯಾವ ಯುಕ್ತಿಯನ್ನು ಮಾಡಬೇಕು ! ಎಂದು ನಾನು ಕೇಳಿದೆನು. ಅದಕ್ಕೆ ಅವನು "ನಿನ್ನ ಉದ್ಯಾನದಲ್ಲಿರುವ ಜಲಪ್ರೇರಿತ ಹೌದಿನೊಳಗಿಂದ ಒಬ್ಬೊಬ್ಬನು ಒಂದೊಂದು ತತ್ತಿಯನ್ನ ತಂದು ತೋರಿಸಬೇಕು; ಯಾವನಿಗೆ ತತ್ತಿಯು ಸಿಗುವದಿಲ್ಲವೋ ಅವನು ಶುದ್ಧವೀರ್ಯದಿಂದ ಜನಿಸಿದವನಲ್ಲ ಎಂದು ತಿಳಿದುಕೋ ಎಂದು ಹೇಳಿ ಅದೃಶ್ಯನಾಗಿ ಹೋದನು. ಅದರಿಂದ ಈ ದಿವಸ ಪರೀಕ್ಷೆಯಾಗಿ ಹೋಗಲಿ.! ಎಂದು ನುಡಿದನು. ಆಗ ಬಾದಶಹನ ಆಜ್ಞಾನುಸಾರವಾಗಿ ಯಾವತ್ತು ಸಭಾಸದರು ಪುಷ್ಕರಣಿಯಲ್ಲಿ ಮುಳುಗಿ ಒಂದೊಂದು ತತ್ತಿಯನ್ನು ತಂದು ತೋರಿಸಿದರು. ಎಲ್ಲರಂತೆ ಬೀರಬಲನ ಮುಳುಗಿದನು. ಅವನಿಗೆ ತತ್ತಿಯು ಸಿಕ್ಕಲಿಲ್ಲ ಆಗ ಮೇಲೆ ಬಂದು "ಕು ಕು ಕೂ ಕೂ" ಎಂದು ಕೂಗಹತ್ತಿದನು. ಆಗ ಬಾದಶಹನು "ನಿನ್ನ ತತ್ತಿಯು ಎಲ್ಲಿ ಅದೆ" ಎಂದು ಪ್ರಶ್ನೆ ಮಾಡಿದನು. ಆ ಕೂಡಲೆ ಬೀರಬಲನು - ಪೃಧ್ವಿನಾಥ ! ಈ ಯಾವತ್ತೂ ತತ್ತಿಗಳು ಗಂಡುಕೋಳಿಯಾಗಿದ್ದ ನನ್ನಿಂದಲೇ ಉತ್ಪನ್ನವಾಗಿದೆ” ಎಂದು ಹೇಳಿದನು. ಮುತ್ಸದ್ದಿಗಳೆಲ್ಲರೂ ಲಜ್ಜಿತರಾದರು, ಬಾದಹನು ಕಿಲಕಿಲನಕ್ಕನು.

-(೨೧೪, ಕಾಳಗದಲ್ಲಿ ಜಯವೋ ! ಪರಾಜಯವೋ!)-

ಬಾದಶಹನು ಯಾವ ಒಂದು ಕಾಳಗಕ್ಕೆ ಹೊರಡಲನವಾಗಿ ಬೀರಬಲನನ್ನು ಕುರಿತು "ಬೀರಬಲ್ಲ, ಈ ಕಾಳಗದಲ್ಲಿ ನನಗೆ ಜಯವಾಗುವದೋ ಪರಾಜಯವಾಗುವದೋ" ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಬೀರಬಲನು ರಣಭೂಮಿಯಲ್ಲಿ ಈ ಪ್ರಶ್ನೆಗೆ ಉತ್ತರವನ್ನು ಹೇಳುವೆನು ಅಂದನು. ಬಾದಶಹನು ರಣಭೂಮಿಗೆ ತಲುವಿದಕೂಡಲೆ ಪುನಃ ಪ್ರಶ್ನೆ ಮಾಡಿದನು. ಆಗ ಬೀರಬಲನು ನಿಮಗೇ ಜಯವಾಗುವದು ಎಂದು ಹೇಳಿದನು. ಅದು ಯಾ

ತರಮೇಲಿಂದ ? ಎಂದು ಕೇಳಿದನು ಆ ಕೂಡಲೆ ಬೀರಬಲನು ( ಸರಕಾರ ! ಶತ್ರುಗಳು ಮದ್ದಾನೆಗಳನ್ನು ಹತ್ತಿಕೊಂಡು ಬಂದಿರುವರು ಅವು ತಮ್ಮ ಸೊಂಡಿಯಿಂದ ತಮ್ಮ ತಲೆಯಮೇಲೆ ಮಣ್ಣು ತೂರಿಕೊಳ್ಳುತ್ತವೆ ತಾವು ತು ರಗಾರೂಢರಾಗಿರುವಿರಿ, ತುರಗಗಳು ತಮ್ಮ ಖುರಪುಟಗಳಿಂದ ಭೂಮಿಯ ನ್ನು ಕೆದರುತ್ತವೆ ಇದರಿಂದ ಕತ್ರುಗಳು ಮಣ್ಣುಪಾಲಾಗುವರು ಎಂದು ಸೂಚಿತವಾಗುವದು ಎಂದು ಉತ್ತರಕೊಟ್ಟನು ಬೀರಬಲನ ಹೇಳಿಕೆಯಂತೆ ಬಾದಶಹನಿಗೆ ಜಯವಾಗಲು ಅವನು ಬೀರಬಲನಿಗೆ ಅತಿಶಯ ಮಾರಿತೋಷ ಕವನ್ನು ಕೊಟ್ಟನು.
(೨೧೫ ದೇವರು ವಾಕನಿವೃತ್ತಿ ಮಾಡುವವ ಜಲವಾಹಕ ಭಾರವಾಹಕ)
ಒಂದು ಸಾರೆ ಬಾದಶಹನು ಬೀರಬಲನನ್ನು ಕುರಿತು. - ದೇವರಂತೆ ಪೂಜಿಸಗೊಳ್ಳುವವನೂ ಪಾಕನಿಷ್ಪತ್ತಿ ಮಾಡಬಲ್ಲವನೂ ಜಲವಾಹಕನೂ, ಭಾರವಾಹಕನೂ ಆಗಿರುವ ಒಬ್ಬ ಮನುಷ್ಯನನ್ನು ನಾಳವಾತಃಕಾಲದಲ್ಲಿ ತಂದುಕೊಡು ! ಎಂದು ಅಪ್ಪಣೆ ಮಾಡಿದನು ಆಗ ಬೀರಬಲನು ಒಬ್ಬ ಬ್ರಾ ಹ್ಮಣನನ್ನು ತಂದು ನಿಲ್ಲಿಸಿದನು. ಆಗ ಅವನಲ್ಲಿದ್ದ ಗುಣಗಳನ್ನು ವಿಸ್ತರಿಸಿ ಹೇಳು ಎಂದನು, ಅದಕ್ಕೆ ಬೀರಬಲನು ಚಾತುರ್ವಣ್ರಗಳಲ್ಲಿ ಕೇವ್ಯವಾದ ಬ್ರಹ್ಮಕುಲದಲ್ಲಿ ಇವನು ಜನಿಸಿದ್ದರಿಂದ ದೇವರಂತೆ ಪೂಜೆಗೊಳ್ಳುತ್ತಾನೆ, ಯಾವತ್ತೂ ಜನರುಬ್ರಾಹ್ಮಣನ ಹಸ್ತದಿಂದ ಭೋಜನ ಕೈಕೊಳ್ಳುವದರಿಂದ ಪಾಕ ನಿವೃತ್ತಿಕಾರನಾಗಿರುವನು ಎಲ್ಲರಿಗೂ ತೀರ್ಥದಿಂದ ಪ್ರೇಕ್ಷಿಸಿ ಕು ದ್ಧಮಾಡುತ್ತಿರುವದರಿಂದ ಜಲವಾಹಕನೂ ಆಗಿರುವನು ಮತ್ತು ತಲೆಯು, ಮೇಲೆ ಒಜ್ಜೆಯನ್ನು ಹೊತ್ತುಕೊಂಡು ತೀರ್ಥಾಟನೆ ಮಾಡುತ್ತಿರುವದ ರಿಂ ದ ಭಾರವಾಹಕನೂ ಆ ಗಿರುವನು ಆದ್ದರಿಂದ ಸಮಯಬಂದಾಗ ಬ್ರಾಹ್ಮಣ ನನ್ನೇ ಕೆಲಸಕ್ಕೆ ನಿಯಮಿಸಿಕೊಳ್ಳಬೇಕು, ಅಂದರೆ ನಾಲ್ಕು ಕೆಲಸಗಳೂ ನಡೆ ಯುವವು ಎಂದು ಹೇಳಿದನು.

-[೨೧೬. ನಾನು ಅವಳನ್ನು ಮರೆತು ಬಿಟ್ಟೇನು]-

ಒಂದು ದಿವಸ ಬಾದಶಹನು ಬೀರಬಲ್ಲ ! ನಿನ್ನ ಪತ್ನಿಯು ಒಳ್ಳೆ ಸು ಸ್ವರೂಪಿ ಯಾಗಿದ್ದಾಳೆ ಎಂದನು. ಆ ಕೂಡಲೆ ಬೀರಬಲನು ಖಾವಂದ ? ನಾನು ಪ್ರಥಮದಲ್ಲಿ ಹಾಗೆಯೇ ತಿಳಿದುಕೊಂಡಿದ್ದನು ಆದರೆ ಯಾವಾಗ ನಿ ಮ್ಮ ಅರ್ಧಾಂಗಿಯರನ್ನು ನೋಡಿದನೋ ಆಗ ನಾನು ಅವಳನ್ನು ಮರತು

ಬಿಟ್ಟೆನು, ಎಂದು ಉತ್ತರಕೊಟ್ಟನು. ಬಾದಶಹನು ನಿರುತ್ತರನಾದನು.
-( ೨೧೭ ಶ್ರೇಷ್ಟ ವರ್ಣವು ಯಾವದು ! )-

ಒಂದು ದಿವಸ ಬಾದಶಹನು ವರ್ಣಗಳಲ್ಲಿ ಶ್ರೇಷ್ಠವಾದ ವರ್ಣವು ಯಾವದು ! ಎಂದು ತನ್ನ ಸಭಾಸದರನ್ನು ಕೇಳಿದರು ಕೆಲವರು ಕಮಲದ ಎಲೆಯು ಶ್ರೇಷ್ಠವಾದದ್ದೆಂದೂ ಕೆಲವರು ಬಾಳೇ ಎಲೆಯು ಶ್ರೇಷ್ಟವಾದ ದ್ದೆಂದೂ ಹೇಳಿದರು, ಬೀರಬಲನ ವರದಿಯು ಬಂದಕೂಡಲೆ ಅವನು ಸಲಾ ಮು ಮಾಡಿ ಧರ್ಮಾವತಾರ? ಯಾವತ್ತು ಪರ್ನಗಳಿಗಿಂತ ನಾಗವಲ್ಲಿ ಪರ ವು ಶ್ರೇಷ್ಟವಾದದ್ದು ಯಾಕಂದರೆ ಅದು ಬಾದಕ ಹರವರ ಮುಖದಲ್ಲಿ ಬಂದು ಬೀಳುತ್ತದೆ ಎಂದನು ಈ ಉತ್ತರದಿಂದ ಯಾವತ್ತೂ ಸಭಾಸದರು ಚಕಿತ ರಾದರು.

-[೨೧೮, ಯುವರಾಜನಾದ ಸೇಲೀಮನ ಪ್ರತಿಸ್ಪರ್ಥಿ]-

ಯುವರಾಜನಾದ ಸಲೀಮನು ಬಹಳೇ ಮದ್ಯಪಿಯಾಗಿದ್ದನು ಅವ ನನ್ನು ಆ ವ್ಯಸನದಿಂದ ದೂರ ಮಾಡಬೇಕೆಂದು ಬಾರಕಹನು ಅನೇಕ ಪ್ರ ಯತ್ನಗಳನ್ನು ಮಾಡಿದನು ಏನೂ ಲಾಭವಾಗಲಿಲ್ಲ ಅಂತ್ಯದಲ್ಲಿ ಬೀರಬಲನ ಸಮ್ಮತಿಯಿಂದ ನಗರದಲ್ಲಿ ದಂಗುರವನ್ನು ಸಾರಿಸಿದನು ಆದರ ಆಶಯವೇ ನಂದರೆ “ ಸೇಲೀಮನು ಅತಿದುರ್ವ್ಯಸನಿ ಯಾದ್ದರಿಂದ ಅವನನ್ನು ಯುವ ರಾಜಪದವಿಯಿಂದ ದೂರೀಕರಿಸಿದ್ದೇವೆ ಮತ್ತು ಯಾವನಾದರೊಬ್ಬ ಚಾಣಾ ಕತರುಣನನ್ನು ಆವದವಿಯಲ್ಲಿ ನಿಯಮಿಸಬೇಕೆಂದು ಮಾಡಿದ್ದೇವೆ ಅದ್ದ ರಿಂದ ಶ್ರೀಮಂತ ದರಿದ ಸರದಾರ ಮಾನಕರಿಗಳ ಪುತ್ರರಲ್ಲಿ ಯಾವನಾದ ರೂಆಪದವಿಯನ್ನು ಹೊಂದಬೇಕೆಂಬ ಅಪೇಕೆಯಿದ್ದರೆಅವರು ನಾಳೆಯದಿನ ದಲ್ಲಿ ಓಲಗಕ್ಕೆ ಬಂದು ಬಾದಶಹನಿಗೆ ಬೆಟ್ಟಿಯಾಗಬೇಕು ಆಗ ಸಭಾಸದರು ಮಾಡುವ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ಕೊಟ್ಟವನಿಗೆ ಸದ್ಯಕ್ಕೆ ಯುವರಾಜ ಪದವಿಯನ್ನು ಕೊಟ್ಟು ಹಿಂದುಗಡೆಯಲ್ಲಿ ರಾಜ್ಯಾಧಿ ಕಾರಿಯನ್ನಾಗಿ ಮಾಡುತ್ತೇವೆ.
ಈ ಡಂಗುರದ ವಾರ್ತೆಯ ಬರ್ಚೆಯೇ ಪಟ್ಟಣದಲ್ಲಿ ಎಲ್ಲಿ ನೋಡಿದ ರೂ ಅಲ್ಲಿ ನಡೆಯುತ್ತಿತ್ತು ಸೇಶೀಮನ ಸ್ವತ್ವವು ಅನ್ಯರಿಗೆ ಪ್ರಾಪ್ತವಾಗು ತದೆಂದಮೇಲೆ ಬಹು ಜನರ ಮನಸ್ಸಿಗೆ ವಿಷಾದವಾಯಿತು ಸಲೀಮನು ಗಾಬರಿಯಾದನು ಡಂಗುರವನ್ನು ಸಾರಿಸಿದ್ದರಿಂದ ಯಾರ ಉಪಾಯವೂ ಸಾಗದಂತಾಯಿತು ದೈವವನ್ನು ನಂಬಿ ಸೇಲೀಮನು ಸ್ವಸ್ಥ ಕುಳಿತುಕೊಂಡ ನು ಮಹಾಸಭೆಯು ನೆರೆಯುವದಿವಸವ ಸಮೀಪಿಸಿತು ಬಾದಶಹನ ಪ್ರ ಮೊದವನದಲ್ಲಿ ಮಂಟವನ್ನು ಹಾಕಲ್ಪಟ್ಟಿತು ಮಂಟದ ಮಧ್ಯಭಾಗದಲ್ಲಿ ಯುವರಾಜ ಪದಾಪೇಕ್ಷೆಯುಳ್ಳವರ ಸಲುವಾಗಿ ಸ್ಥಳವನ್ನು ಕಾದಿಟ್ಟು ಆಸ ಮಂತಾದ್ದಾಗದಲ್ಲಿ ಪತಿಗಳು ಕುಳಿತುಕೊಳ್ಳುವದಕ್ಕೆ ತಕ್ಕಸ್ಥಳವನ್ನು ಮಾ ಡಿದ್ದರು ಅಂತಃ ಪುರದ ಸ್ತ್ರೀಯರ ಸಲುವಾಗಿ ಬೇರೆಸ್ಥಳವು ಏರ್ಧೆಡಿಸಲ್ಪಟ್ಟ ತು ಮಹಾ ಸಭೆಯು ನೆರೆಯುವ ದಿವಸವು ಬಂದಕೂಡಲೆ ಅನೇಕ ಜನರ ತಂಡವುಬಂದು ಆ ಮಂಟಪದಲ್ಲಿ ತಮ ತಮಗೆ ಅನುಕೂಲವಾದ ಸ್ಥಳಗಳಲ್ಲಿ ಬಂದು ಕುಳಿತುಕೊಂಡರು ಚಾವಣೆಹನು ಸಿಂಹಾಸನಾಧಿತನಾದನು ಆ ಮೇಲೆ ಒಬ್ಬಚೋಪದಾರನು ಎನ್ನು ನಿಂತು ಎಲ್ಲರಿಗೂ ಕೇಳಿಸುವಂತೆ ಯು ವರಾಜ ಪದವಿಯನ್ನು ಸಂಪಾದಿಸಬೇಕೆಂಬ ಕುತೂಹಲವುಳ್ಳ ತರುಣರು ಮುಂದೆ ಬರಬೇಕೆ ಎಂದು ಗಟ್ಟಿಯಾಗಿ ಕೂಗಿದನು. ಆಗ ನಾಲ್ಕೂ ಕಡೆ ಯಿಂದ ತರುಣಮಂಡಳಿಯು ಮುಂದೆಬಂದು ಮಧ್ಯಭಾಗದಲ್ಲಿ ಕುಳಿತುಕೊಂ ಡರು ಅವರಲ್ಲಿ ಬೊಕ್ಕನೆತ್ತಿಯ ಒಬ್ಬ ತರುಣನೂ ಅವರಲ್ಲಿ ಬಂದು ಕುಳಿತ ನು ಪ್ರಶ್ನೆಗಳನ್ನು ಮಾಡುವದಕ್ಕೆ ಜಗನ್ನಾಥ ಪಂಡಿತರಾಜ ಬೀರಬಲ್ಲ, ತೊಡರಮಲ್ಲ ! ಅಬುಫಜಲ್ಲ ಕವಿಗಂಗ, ಖಾನಖಾನಾ ಫೈಜಿ ಜಂಗ ತಾನಸೇನ ತಾನತರಂಗ ಬೈಜೂ ಬಾವರಾ ರಾಜಾಮಾನಸಿಂಹಂಬ ಹನ್ನೆರಡು ಜನರನ್ನು ನಿಯಮಿಸಿದ್ದರು ಅವರು ಪ್ರತಿಯೊಬ್ಬ ದಾಭಿಲಾ ಯಾದ ತರುಣರಿಗೆ ವಗದಿಯ ಪ್ರಕಾರ ಪಶ್ನೆಗಳನ್ನು ಮಾಡಹತ್ತಿದರು.
ಜಗನ್ನಾಥ ಪಂಡಿತರಾಯನು ಪ್ರಥಮದಲ್ಲಿ ಜಗತ್ತಿನಲ್ಲಿ ಎಲ್ಲರಿಕಿಂತ ಶ್ರೀಪ ನಾದ ಖಾನನು ಯಾರು ಎಂದು ಪ್ರಶ್ನೆ ಮಾಡಿದನು ಕೆಲವರು ಗೋವಳಕೊಂಡದವನೆಂತಲೂ ಕೆಲವರು ವಾಂಯಿಯತಾನನು ಕೆನಂ ತಲೂ ತಮತಮಗೆ ಗೊತ್ತು ಇದ್ದ ಖಾನರ ಹೆಸರನ್ನು ಹೇಳಿದರು ಕಟ್ಟಕ ಡೆಯಲ್ಲಿ ಒಬ್ಬತರುಣನು ಎಲ್ಲರಿಗೆ ಕೇಳಿಸುವಂತೆ ಎಲ್ಲಕ್ಕಿಂತಲೂ ಓರಾನ ವೆಂಬದು ಶ್ರೇಷ್ಠವಾದದ್ದು ಓಲಖಾನ ಅಂದರೆ ಗುರುತು ಅಥವಾ ಪರಿಚಯ ಎಂದು ಉತ್ತರಕೊಟ್ಟನು.
ಎಲ್ಲತರುಣರ ಮುಖಗಳು ಕೆಳಗೆ ಆದವು. ಬೀರಬಲನು ಆ ಬಾಲಕನ ನ್ನು ಮುಂದೆ ಕರೆದು ( ಬಾಲಕನೇ ಈ ಕ್ಷಣ ಭಂಗುರವಾದ ಜಗತ್ತಿನಲ್ಲಿ ಎಲ್ಲಕ್ಕೂ ಶ್ರೇಷ್ಠವಾದದ್ದು ಯಾವದು ” ಎಂದು ಕೇಳಿದನು ಅದಕ್ಕೆ ಆ ಬಾಲಕನು ಸ್ವಲ್ಪಾದರೂ ಯೋಚಿಸದೆ, ಧರ್ಮ ಎಂದು ಉತ್ತರ ಕೊಟ್ಟ ನು, ಬೀರಬಲನು ಹಿಂದಕ್ಕೆ ಸರಿದನು.
ಕವಿಗಂಗ-ತರುಣರೇ ಎಲ್ಲಕ್ಕಿಂತಲೂ ಸವಿಯಾದದ್ದು ಯಾವು ಬಾಲಕ-ಗರ ಖ್ಯಾಜಾಜಂಗ-ವಾಯುವೇಗಕ್ಕಿಂತಲೂ, ಶೀಘ್ರಗಮನವು ಯಾವದಕ್ಕೆ
ಬಾಲಕ:- ಮನೋವೇಗ,

(ಇರುವದು)

ಫೈಜ-ರಾಜರಲ್ಲಿ ಇರತಕ್ಕ ಅವಶ್ಯವಾದ ಅಮೂಲ್ಯವಾದ ವಸ್ತುವು ಯಾವದು ?
ಬಾಲಕ-ರಾಜನೀತಿ,
ಎಂದು ಹೇಳಿ, ಆಮೇಲೆ " ಇಂಥ ಪ್ರಸಿದ್ಧರಾದ ಪಂಡಿತರು ಇಂಥ ಸ ರಳವಾದ ಪ್ರಶ್ನೆಗಳನ್ನು ಮಾಡಲಾರರೆಂದು ನಾನು ನಂಬಿದ್ದೆನು ” ಎಂದು ಅಂದನು ಆಗ ಎಲ್ಲ ಪಂಡಿತರ ಮುಖಗಳು ಅವನತವಾದವು ಆಗ ಪುನಃ-
ಜ. ಪಂಡಿತ:- ನಿಜವಾದ ಸಾಕ್ಷಿಯು ಯಾವದು ?
ಬಾಲಕ:- ತನ್ನ ಮಸ್ಸು,
ಬೀರಬಲ:- ಸಂಚಾರದ ಅಸ್ಥಿತ್ವವು ಎಲ್ಲಿಯ ವರೆಗೆ ?
ಬಾಲಕ :-ತನ್ನ ಮರಣದ ವರೆಗೆ,
ಬಾದಾಶಹ:- ಮೃತ್ಯುವಿಗೂ ಸಂಸಾರಕ್ಕೂ ಸಂಬಂಧವೇನು ?
ಚಾಲಕ:-ಪೃಥ್ವಿನಾಥ ! ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಿರುವದೋ, ಅಲ್ಲಿಯವರೆಗೆ ಸಂಸಾರದ ಸಂಬಂಧವು ಇದ್ದೇ ಇರುವದು.
ಬಾದಕಹನು ಆ ಬಾಲಕನ ಚಾತುರ್ಯಕ್ಕೆ ತಲೆದೂಗಿದನು.
ಗಂಗಕವಿ-ಮೂರ್ಖನೆಂದು ಯಾತರ ಮೇಲಿಂದ ತಿಳಿದು ಕೊಳ್ಳಬೇಕು ?
ಬಾಲಕ:- ಅವನ ಮಾತಿನ ಮೇಲೆ.
ತಾನಸೇನ:-ಶರೀರದ ಪ್ರಥಮ ಸುಖವು ಯಾವದು ? ಬಾಲಕ:- ಆರೋಗ್ಯತೆಯು
ಸಭಾಸದರೆಲ್ಲರು ಆ ಬಾಲಕನ ಚಾತುರ್ಯಕ್ಕೂ, ದಿಟ್ಟತನಕ್ಕೂ ಬೆರಗಾದರು ಯಾವತ್ತೂರಿಗೂ ಸೇಲಿಮನು ದುರದೃಷ್ಟನೆಂದು ತಿಳಿದುಹೋಯಿತು. ಅಷ್ಮರಲ್ಲಿ ಪೈಜಿಯು ಮುಂದೆಬಂದು - ಬಾದಸಹನ ಕ್ರೋಧದ ಸ್ವ ರೂಪವೇನು ?
ಬಾಲಕ-ಪ್ರಜ್ವಲಿತ ವಾದ ಅಗ್ನಿಯಂತೆ.
ಅಬುಲ್‌ಫಜಲ್-ಯಾವ ಫಲವು ರುಚಿಕರವಾದದ್ದು ?
ಬಾಲಕ-ಧೈರ್ಯದಿಂದ ದೊರೆತ ಫಲವು.
ಬೈಜುಬಾವರ:-ಮಗೂ ಸಮುದ್ರದಲ್ಲಿ ಮಳಳಿನ ಕಥಗಳು ಎಷ್ಟಿರುವುವು?
ಬಾಲಕ-ಈ ಜಗತ್ತಿನಲ್ಲಿ ಜೀವಂತರಾಗಿರುವ ಮನುಷ್ಯರ ಅಂಗಾಂಗಗಳಲ್ಲಿ ರುವ ರೋಮಗಳಷ್ಟು. ಖಾನಖಾನ-ಬಲಕ್ಕೆ ಸಹಾಯಕಾರಿಯದದ್ದು ಯಾವದು ?

ಬಾಲಕ-ಸಾಹಸ.

ತೋಡರಮಲ್ಲ-ಎಲ್ಲಕ್ಕಿಂತಲೂ ಹೀನ ಸ್ಥಿತಿಯು ಯಾವದು ?

ಬಾಲಕ-ದಾಸತ್ವವು

ಮಾನಸಿಂಹ - ಈ ಸಂಸಾರದಲ್ಲಿ ನೀಚತರ ತಮವಾದ ಉದ್ಯೋಗವಾವುದು.

ಬಾಲಕ-ಭಿಕ್ಷಾವೃತ್ತಿಯು.

ತೋಡರಮಲ್ಲ-ಹೋದಂಥ ಯಾವವಸ್ತುವು ಪುನರಪಿ ಬರಲಾರದು ?

ಬಾಲಕ-ಸಮಯ.

ಆ ಚತುರನಾದ ಬಾಲಕನನ್ನು ಪ್ರಶ್ನೆಗಳಿಂದ ಪರಾಜಿತನನ್ನಾಗಿ ಮಾಡುವದು ಯಾರಿಂದಲೂ ಸಾಧ್ಯವಾಗಲಿಲ್ಲ. ಬಾದಶಹನು ಪ್ರಸನ್ನನಾದನು.

ಬಾದಶಹ-ಬಾಲಕನೇ, ನಿನ್ನ ಅಪೇಕ್ಷೆ ಯೇನಿರುವದು? ಅದನ್ನು ಕೇಳು?

ಬಾಲಕ-ಭೂಮೀಶ ! ನಾನು ಎಲ್ಲರಂತೆ ಸಮಯವನ್ನು ಕಳೆದುಕೊಳ್ಳಲಾರೆನು. ನಾನು ಅಸ್ವತಂತ್ರನು ಆದರೂ ನಾನು ಕೇಳಿದ ಪ್ರಶ್ನೆಗೆ ಸಮರ್ವಕವಾದ ಉತ್ತರವು ದೊರೆತಲ್ಲಿ ಪ್ರಸನ್ನಚಿತ್ತನಾಗಿ ಹೊರಟು ಹೋಗುವೆನು.

ಬಾದಶಹ ಒಳ್ಳೇದು! ಅದನ್ನು ಹೇಳು.

ಬಾಲಕ- ಪೃಥ್ವೀಶ ! ನನಗೆ ಯುವರಾಜ ಪದವಿಯು ಬೇಕಾಗಿಲ್ಲ ಅದರಿಂದ ನನ್ನ ಬುದ್ಧಿಗೆ ಮಾಂದ್ಯವುಂಟಾದೀತು! ಈ ಇಕ್ಷುದಂಡದಲ್ಲಿ ನನಗೊಂದು ಮುರಲ (ಕೊಳಲು)ಯನ್ನು ಮಾಡಿಸಿಕೊಡಬೇಕು. ಆದರೆ ಅಂಥ ಶ್ರೇಷ್ಟಮಾತೆಯ ಸುಪುತ್ರನು ಒಬ್ಬನಾದರೂ ತಮ್ಮ ಓಲಗದಲ್ಲಿ ಇದ್ದಂತೆ ಕಂಡುಬರುವದಿಲ್ಲ ಅಂದಮೇಲೆ ನಾನು ಇಲ್ಲಿ ವ್ಯರ್ಥವಾಗಿ ಕಾಲಹರಣ ಮಾಡುವದರಿಂದ ಪ್ರಯೋಜನವಿಲ್ಲ

ಎಂದು ಕಬ್ಬಿನ ಗಣಿಕೆಯನ್ನು ಚೆಲ್ಲಿ ಹೊರಟು ಹೋದನು. ಬಾದಶಹನು ಅವನ ಶೋಧದ ಸಲುವಾಗಿ ಅತಿ ಪ್ರಯಾಸಪಟ್ಟನು ಪುನರಪಿದರ್ಶನವಾಗಲಿಲ್ಲ.

- ( ೨೧೯. ತಾವು ಜಗತ್ಪಿತೃಗಳಾಗಿರುವಿರಿ )-

ಒಂದು ದಿವಸ ಒಬ್ಬ ವೇಶ್ಯಾ ಸ್ತ್ರೀಯು ಮಗನುಮಾಡಿದ ಅಪರಾಧದ ವಿಚಾರಣೆಯು ನಡೆದಿತ್ತು. ಆಗ ಬಾದಶಹನು ವಿನೋದಕ್ಕಾಗಿ ಆ ವೇಶ್ಯೆಯನ್ನು ಕುರಿತು - ಇವನ ತಂದೆಯ ಹೆಸರೇನು ? ಎಂದು ಕೇಳಿದನು. ಆ ವೇಶ್ಯೆ ಯು ಲಜ್ಜಿತಳಾಗಿ ಅವನತ ಮುಖಿಯಾದಳು ಅದನ್ನು ಕಂಡು ಬೀರಬಲನು ಹುಜೂರ ! ತಾವು ಜಗತ್ಪಿತೃಗಳಾಗಿರುವಿರಿ; ತಮ್ಮ ಪುತ್ರನೆಂತಲೇ ಭಾವಿಸಿಕೊಳ್ಳಬೇಕು ಎಂದನು ಬಾದಶಹನು ಲಜ್ಜಿತನಾಗಿ ಮುಖತಗ್ಗಿಸಿದನು.
೨೨೦. ಬೀರಬಲನು ನಕ್ಕರೆ ಅವನು ನಿಂತುಕೊಂಡ
ಸ್ಥಲವು ಜಲಮಯ ವಾಗುವದು.}}
ಒಂದಾನೊಂದು ಸಮಯದಲ್ಲಿ ಒಬ್ಬ ಜ್ಯೋತಿಷಿಯು ಅಕಬರನ ಸಭಾಸ್ಥಾನಕ್ಕೆ ಬಂದು ಬೀರಬಲನು ಒಂದು ವೇಳೆ ನಕ್ಕರೆ ಪೃಥ್ವಿಯೆಲ್ಲ ಜಲಮಯವಾಗುವದು ಎಂದು ಭವಿಷ್ಯವನ್ನು ಹೇಳಿದನು ಆದರೆ ಬೀರಬಲನು ಕ್ರೋಧಯುಕ್ತನಾಗಿ ಕುಳಿತಿದ್ದನು ಬಾದಶಹನು ಅನೇಕ ಯುಕ್ತಿ ಪ್ರಯುಕ್ತಿಗಳನ್ನೆಲ್ಲ ಮಾಡಿ ನೋಡಿದನು ಅದರಿಂದ ಪ್ರಯೋಜನವಾಗಲಿಲ್ಲ ಅಂತ್ಯದಲ್ಲಿ ಬಾದಶಹನಿಗೂ ಕೋಪವು ಬಂತು ಆ ಕೂಡಲೆ ಅವನು ನೀನು ಈಗಿಂದೀಗ ನನ್ನ ಪಟ್ಟಣವನ್ನು ಬಿಟ್ಟು ಹೋಗು ! ಎಂದು ಅಪ್ಪಣೆ ಮಾಡಿದನು ಬಾದಶಹನ ಆಜ್ಞೆಯು ಕಿವಿಗೆ ಬಿದ್ದ ಕೂಡಲೆ, ಬೀರಬಲನು ಅರಣ್ಯದ ಮಾರ್ಗವನ್ನು ಹಿಡಿದನು ಕಿಂಚಿತ್ ದೂರ ಹೋಗುವದರೊಳಗೆ ಹೊತ್ತು ಮುಳುಗಿತು ಕತ್ತಲೆಯಾರಿಸಿತು ಕಣ್ಣೊಳಗೆ ಬೆರಳು ಚುಚ್ಚಿದರೂ ಸಹ ಕಾಣದಷ್ಟು ಕತ್ತಲೆಯು ಆಯಿತು ಆಗ ಅವನು ಹಿಂದು ಹಾಳುದೇಗುಲವನ್ನು ಕಂಡು, ಅದರೊಳಗೆ ಪ್ರವೇಶ ಮಾಡಿದನು ಅಷ್ಟರಲ್ಲಿ ಒಬ್ಬನು ಒಂದು ಕಬ್ಬಿನ ಕೋಲನ್ನು ಹಿಡಿದುಕೊಂಡು, ಅದೇ ದೇಗುಲವನ್ನು ಹೊಕ್ಕು ಒಂದು ಮೂಲೆಯಲ್ಲಿ ಅವಿತುಕೊಂಡನು ಆಮೇಲೆ ಒಬ್ಬನು ತನ್ನ ಗಾರ್ದಭವನ್ನು ಶೋಧಮಾಡುತ್ತ ಅಲ್ಲಿಗೆ ಬಂದು, ಕತ್ತಲೆಯಾದ್ದರಿಂದ ಅವನ ಒಂದುಮಗ್ಗುಲಲ್ಲಿ ಕುಳಿತುಕೊಂಡನು ಆಷ್ಟರಲ್ಲಿ ಮೂರನೆಯವನೊಬ್ಬನು ತನ್ನ ನೂತನ ಪ್ರಾಯದ ಹೆಂಡತಿಯನ್ನೊಡಗೊಂಡು ಆಸ್ಥಳಕ್ಕೆ ಬಂದು ಮನೆಯೆಂದು ತಿಳಿದು ತನ್ನ ಪತ್ನಿಯೊಡನೆ ವಿಲಾಸ ಮಗ್ನನಾದನು ಕಿಂಚಿತ್ ಕಾಲದಮೇಲೆ ಅವನು ತನ್ನ ಪತ್ನಿಯನ್ನುದ್ದೇಶಿಸಿ, ಎನಾದರೂ ಸ್ವಲ್ಪ ಸುಖವಾಯಿತೋ? ಎಂದು ಕೇಳಿದನು ಅದಕ್ಕೆ ಅವಳು ಸುಖವೆಲ್ಲಿಯದು? ಗಾರ್ದಭದೊಡನೆ ಕ್ರೀಡಿಸಿದಂತಾಯಿತು ಎಂದಳು ಆಕೂಡಲೆ ಆ ಕತ್ತೆಯವನು ನನ್ನ ಕತ್ತೆಯು ಎಲ್ಲಿ ಅದೆ? ಎಂದು ಕೇಳಿದನು ಆ ಸ್ತ್ರೀಯು ಲಜ್ಜಿತಳಾಗಿ ತನ್ನ ಪತಿಯನ್ನು ಕುರಿತು ಹೊರಗೆ ತೆಗೆದುಕೋ? ಎಂದಳು ಆಗ ಕಬ್ಬಿನ ಹೊರೆಯವನು ಜೋಕೆ ! ಹೊರಗೆ ತೆಗೆಯಕೂಡದು . ಸರಕಾರದ ಬದುಕು ಅದೆ;ಎಂದನು ಈ ಮಾತುಗಳನ್ನು ಕೇಳುತ್ತ ಕುಳಿತಿದ್ದ ಬೀರಬಲನಿಗೆ ಹೊಟ್ಟೆ ಹಿಡಿಸಲಾರದಷ್ಟು ನಗೆಯು ಬಂತು ಫಕ್ಕನೆ ನಕ್ಕನು ಮಳೆಯು ಬರಹತ್ತಿತು ಆ ಮರುದಿವಸವೇ ಬಾದಕಶಹನು ಬೀರಬಲನನ್ನು ಶೋಧಮಾಡಿ, ನಿನ್ನೆ ಮಳೆಯಾಗಲಿಕ್ಕೆ ಕಾರಣವೇನೆಂದು ಕೇಳಿದನು. ಆಗ ಬೀರಬಲನು ಆದ್ಯೋಪಾಂತ ಸಂಗತಿಯನ್ನೆಲ್ಲ ತಿಳಿಸಲು, ನಕ್ಕು ನಕ್ಕು ಬಾದಶಹನ ಹೊಟ್ಟೆಯುಬ್ಬಿತು.

-( ೨೨೧. ಕಿಸಕಾರಣ ಯಹ ನಾಚೈಗದಹಾ. )-

ಒಂದು ದಿವಸ ಬಾದಶಹನು ಬೀರಬಲನಿಗೆ-
ಕಿಸಕಾರಣ ಯಹ ನಾಚೆ ಗದಹಾ |
ಯಾವ ಕಾರಣದಿಂದ ಕತ್ತೆಯು ಈ ಪರಿ ಕುಣಿದಾಡುತ್ತದೆ ? ಎಂದು ಕೇಳಿದನು. ಬೀರಬಲನು ತತಕ್ಷಣದಲ್ಲಿಯೇ,
"(ಆಗನಾಥನ ಪೀಛೇ ಪರಹಾ | ಇಸಕಾರಣ ಯಹನಾಚೈ ಗದಹಾ ||
ಮುಂದೆ ಕಟ್ಟುವವರಿಲ್ಲ ಹಿಂದೆ ಕಾಯುವವರಿಲ್ಲ; ಎಂಬ ಸಂತೋಷದಿಂದ ಕುಣಿದಾಡುತ್ತದೆ. ಎಂದು ಉತ್ತರ ಕೊಟ್ಟನು. ಅಕಬರನು ನಗಹತ್ತಿದನು.

- (೨೨೨. ಕತ್ತೆಯ ಭಾರ.) -

ಒಂದು ದಿವಸ ಅಕಬರ ಬೀರಬಲರಿಬ್ಬರೂ ಕೂಡಿಕೊಂಡು ಮೃಗಯಾವಿಹಾರಕ್ಕೆ ಹೋಗಿದ್ದರು. ಉಷ್ಣಕಾಲವಾದ್ದರಿಂದ ಮೈಯಲ್ಲಿ ಬೆವರೊಡೆಯಿತು. ಆಗ ಬಾದಶಹನು ತನ್ನ ಮೈಮೇಲಿನ ಬಟ್ಟೆಗಳನ್ನು ತೆಗೆದು ಬೀರಬಲನ ಭುಜದಮೇಲೆ ಹಾಕಿದನು. ಆಗ ಬೀರಬಲನು ಕೃಪಾಳುವೇ? ನಾನು ಒಂದು ಕತ್ತೆಯ, ಭಾರವನ್ನು ಹೇಗೆ ಸಹಿಸಲಿ ! ಎಂದು ಗಟ್ಟಿಯಾಗಿ ಕೂಗಿದನು.

-(೨೨೩. ಅವರು ಮೂವರೂ ಅಳುತ್ತಿದ್ದರು.)

ಬಾದಶಹನು ಪ್ರತಿದಿವಸ ರಾತ್ರಿ ಸಮಯದಲ್ಲಿ ಪ್ರಚ್ಛನ್ನನು ವೇಷವನ್ನು ಧಾರಣ ಮಾಡಿಕೊಂಡು ನಗರದಲ್ಲಿ ಸಂಚಾರಾರ್ಥವಾಗಿ ಹೊರಹೊರಡುತ್ತಿದ್ದನು. ಆ ಸಮಯದಲ್ಲಿ ದುಃಖಗಳು ಕಂಡು ಬಂದರೆ ಮರುದಿವಸ ಅವರನ್ನು ಕರೆಯಿಸಿಕೊಂಡು ಅವರ ದುಃಖವನ್ನು ದೂರಮಾಡುತ್ತಿದ್ದನು. ಹೀಗಿರಲು ಒಂದು ದಿವಸ ಅವನು ಭಿಕ್ಷುಕನ ವೇಷವನ್ನು ಧಾರಣಮಾಡಿಕೊಂಡು ರಾತ್ರಿಯಲ್ಲಿ ಹೊರಬಿದ್ದನು. ಆ ಸಮಯದಲ್ಲಿ ಒಬ್ಬ ವರ್ತಕನ ಹೆಂಡತಿಯು ತನ್ನ ಮನೆಯ ಬಾಗಿಲಮುಂದೆ ಕುಳಿತು ಕೊಂಡು ರೋದನ ಮಾಡುತ್ತಿದ್ದಳು. ಅಲ್ಲಿಗೆ ಬಾದಶಹನು ಹೋಗಿ ತಾಯಿ ಒಂದು ತುಣಿಕುರೊಟ್ಟಿ ಯನ್ನು ಹಾಕು ? ಎಂದನು ಅವಳು ಒಳಗೆ ಹೋಗಿ ರೊಟ್ಟಿಯನ್ನು ತಂದುಹಾಕಲಿಕ್ಕೆ ಬರಲು ಬಾದಶಹನು ತಾಯಿ ! ನೀನು ಯಾಕೆ ದುಃಖಿಸುತ್ತಿದ್ದೀ ಎಂದು ಕೇಳಿದನು ಅದಕ್ಕೆ ಆ ಸ್ತ್ರೀಯು ನನ್ನ ಪತಿಯು ಹಡಗವನ್ನೇರಿ ಪರದೇಶಕ್ಕೆ ವ್ಯಾಪಾರದ ಸಲುವಾಗಿ ಹೋಗಿ ಹನ್ನೆರಡು ವರುಷಗಳಾದವು. ಇನ್ನೂವರೆಗೆ ಬರಲಿಲ್ಲವೆಂದು ಶೋಕಿಸಹತ್ತಿದ್ದೇನೆ ಎಂದು ಉತ್ತರಕೊಟ್ಟಳು. ಅದನ್ನು ಕೇಳಿಕೊಂಡು ಕಿಂಚಿತ್ ಮುಂದೆಬರಲು ಮತ್ತೊಬ್ಬ ಸ್ತ್ರೀಯು, ಬೀಸುವ ಕಲ್ಲನ್ನು ತಿರುಗಿಸುತ್ತ ಅಳುತ್ತ ಕುಳಿತಿದ್ದಳು. ಆಮನೆಗೆ ಹೋಗಿ, ನೀನು ಯಾಕೆ ಅಳುತ್ತಿರುವಿ ! ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಅವಳು, ನನ್ನ ಪತಿಯು ಕಳವು ಮಾಡಲಿಕ್ಕೆ ಹೋಗಿ ಮೂರು ದಿವಸಗಳಾದವು, ಜೀವದಿಂದ ಇರುವನೋ ಅಥವಾ ಮರಣ ಹೊಂದಿದನೋ ಎಂಬ ಸಂಗತಿಯು ತಿಳಿಯದಾದ್ದರಿಂದ ಅಳುತ್ತೇನೆಂದು ಹೇಳಿದಳು. ಕಿಂಚಿತ್ ಮುಂದಕ್ಕೆ ಬರಲು ಮತ್ತೊಬ್ಬ ಸ್ತ್ರೀಯು ಹಾಡಾಡಿಕೊಂಡು ಅಳುವಸ್ವರವು ಕೇಳಬಂತು. ಆ ಮನೆಗೆ ಹೋಗಿ ತಾಯಿ ನೀನೇಕೆ ಅಳುತ್ತಿರುವಿ ? ಎಂದು ಕೇಳಿದನು. ಆ ಮಾತಿಗೆ ಅವಳು ನನ್ನ ಪತಿಯು ಪುತ್ರಹೀನನಾಗಿದ್ದಾನೆ ಎಂದು ಹೇಳಿದಳು.

ಈ ಸಂಗತಿಗಳಿಂದ ಬಾದಶಹನ ಮನಸ್ಸಿಗೆ ವಿಷಾದವಾಗಿ ಮನೆಗೆ ಬಂದುಬಿಟ್ಟನು. ಮರುದಿವಸ ಓಲಗದಲ್ಲಿ ಬೀರಬಲನನ್ನು ಕುರಿತು ಆ ಮೂವರು ಸ್ತ್ರೀಯರು ಯಾರುಯಾಕೆ ಅಳುತ್ತಿದ್ದರು ಎಂದು ಪ್ರಶ್ನೆ ಮಾಡಿದನು.

ಅದಕ್ಕೆ ಬೀರಬಲನು--

ಏಕಸಮುಂದರ ವಾಣಿಜ ಕರೈ ನಿತ ಉಠಚೋರಿಜಾಯ |
ಬಾಲಕ ಹೀಸೆ ನೇಹಂಗಾಯಾ ಯೇ ತೀನೋ ಬಿಲಖಾಯ ||

ಬೀರಬಲನು ಹಿಂದು ಮುಂದಿನ ಸಂಗತಿಯನ್ನು ತಿಳಿದುಕೊಳ್ಳದೆ ಯಥಾರ್ಥವಾಗಿದ್ದ ಸಂಗತಿಗಳನ್ನು ಹೇಳಿದ್ದರಿಂದ ಬಾದಶಹನಿಗೆ ಪರಮಾನಂದವಾಯಿತು.

-(೨೨೪, ಕಾಜಿಗೆ ಮದ್ಯವನ್ನು ಕುಡಿಸು.)-

ಹೋಲಿಕಾ ಮಹೋತ್ಸವದಲ್ಲಿ ಬಾದಶಹನು ಬೀರಬಲನನ್ನು ಕುರಿತು ಏನಾದರೂ ಹಂಚಿಕಿಮಾಡಿ ಕಾಜಿಗೆ ಮದ್ಯವನ್ನು ಕುಡಿಸು ? ಎಂದು ಅಪ್ಪಣೆಮಾಡಿದನು. ಅದಕ್ಕೆ ಬೀರಬಲನು ಇದುಯಾವ ಆಶ್ಚರ್ಯದ ಮಾತು, ಈ ದಿವಸವೇ ಅವನನ್ನು ಅಧಿಕಾರದಿಂದ ದೂರ ಮಾಡಿರಿ ! ಅಂದರೆ ಅವನು ಆ ಕ್ಷಣದಲ್ಲಿಯೇ ತಮ್ಮ ಬಳಿಗೆ ವಿನಂತಿ ಮಾಡಿಕೊಳ್ಳಲಿಕ್ಕೆ ಬರುವನು. ಆಗ ನೀವುಬೇಕಾದದ್ದನ್ನು ಹೇಳಿದರೂ ಕೇಳುತ್ತಾನೆ; ಎಂದು ಹೇಳಿದನು ಬೀರ ಬಲನ ಹೇಳಿಕೆಯಂತೆ ಮಾಡಿದನು ಆಗ ಬೀರಬಲನ ಹೇಳಿಕೆಯು ಯಥಾರ್ಥ ವಾದದ್ದೆಂದು ಎಲ್ಲರಿಗೂ ಮನವರಿಕೆ ಯಾಯಿತು.
(೨೨೫, ನೀನು ಹಲಾಲಖೋರನೋ ಅಥವಾ ಹರಾಮ ಖೋರನೋ)
ಒಂದು ದಿವಸ ನೆರೆದ ಸಭೆಯ ಮಧ್ಯದಲ್ಲಿ ಅಕಬರನು ಬೀರಬಲ್ಲ ನೀನು ಹಲಾಲಖೋರನೋ ಅಥವಾ ಹರಾಮ ಖೋರನೋ ? ಎಂದು ಪ್ರಶ್ನೆ ಮಾಡಿದನು ಆಗ ಬೀರಬಲನು " ಹುಜೂರ್ ಎರಡೂ ? ” ಎಂದು ಉತ್ತರ ಕೊಟ್ಟನು.

-(೨೨೬, ವೈಕುಂಠ ದರ್ಶನ)-

ಒಂದು ದಿವಸ ಅಕಬರ ಬಾದಶಹನು ಬೀರಬಲನನ್ನು ಕುರಿತು ನೀನು ನನಗೆ ಒಂದು ದಿವಸ ನನಗೆ ವೈಕುಂಠ ದರುಶನವನ್ನು ಮಾಡಿಸು ಎಂದು ಹೇಳಿದನು ಅದಕ್ಕೆ ಬೀರಬಲನು ಎರಡು ತಿಂಗಳುಗಳ ಅವಧಿಯನ್ನು ಕೊಡಬೇಕು ಎಂದು ಪ್ರಾರ್ಥನೆಮಾಡಿಕೊಳ್ಳಲು ಬಾದಶನು ಒಪ್ಪಿಕೊಂಡನು, ಆ ಕೂಡಲೆ ಮನೆಗೆಬಂದು ಮರುದಿವಸ ಬೀರಬಲನಿಗೆ ಅತಿಶಯ ಜಾಡ್ಯ ವಾಗಿದೆಯೆಂದು ವಾರ್ತೆಯನ್ನು ಪಸರಿಸಿ ಬಿಟ್ಟನು ಮುಂದೆ ಹದಿನೈದು ದಿವಸಗಳಾದ ಪರಲೋಕವನ್ನು ಕುರಿತು, ಗಮನ ಮಾಡಿದನೆಂದು ವಾರ್ತೆ ಯನ್ನು ಹುಟ್ಟಿಸಿ ಬಿಟ್ಟನು ಬಾದಶಹನಿಗೆ ಅತಿಶಯ ದುಃಖವಾಯಿತು ಬಹಳಮಾಡಿ ವೈಕುಂಠ ದರ್ಶನವನ್ನು ಮಾಡಿಸುವದು ಅಸಾಧ್ಯವಾದದ್ದೆಂದು ತಿಳಿದುಕೊಂಡು ಅದರ ಚಿಂತೆಯಿಂದಲೇ ಮರಣಹೊಂದಿರಬಹುದೆಂದು ನಿಶ್ಚ ಯಿಸಿಕೊಂಡನು ನಾನೇ ಅವನ ಮರಣಕ್ಕೆ ಕಾರಣನಾದೆನೆಂತಲೂ ಇನ್ನು ತನಗೆ ಅಂಥ ಮನುಷ್ಯನು ದೊರೆಯುವದು ದುರ್ಲಭವೆಂತಲೂ ತಳಮಳಿಸ ಹತ್ತಿದನು.
ಇತ್ತ ಬೀರಬಲನು ತನ್ನ ಗೃಹದೊಳಗಿಂದ ಕೋಟೆಯವರೆಗೆ ಬಂದು ವಿವರವನ್ನು ಸಿದ್ಧಪಡಿಸಿಕೊಂಡು ಬಂದು ರಾಜಸಭಕ್ಕೆ ಆ ವಿವರದೊಳಗಿಂದ ಹಾಯ್ದು ಹೋಗುವದಕ್ಕೂ ಅಲ್ಲಿಂದ ಮರಳಿ ಬರುವದಕ್ಕೂ ಕಲಿಸಿದನು. ಆ ಮೇಲೆ ಒಂದು ದಿವಸ ರಾತ್ರಿ ಸಮಯದಲ್ಲಿ ಆ ವಿವರದೊಳಗಿಂದ ಆಕೋಟೆಯನ್ನು ಹೊಕ್ಕು ವೀಳ್ಯದೆಲಿಯನ್ನು ಮಾರುತ್ತಿರುವವಳ ಅಂಗಡಿಯಲ್ಲಿ ಹೋಗಿ ವೀಳ್ಯವನ್ನು ಹಾಕಿಕೊಂಡು ಒಂದು ರೂಪಾಯಿಯನ್ನು ಅವಳ ಕೈಗೆ ಇತ್ತು ಹೊರಡಲನುವಾದನು ಅದನ್ನು ಕಂಡು ಅವಳು ಆಶ್ಚಯಾ ನ್ವಿತಲಾಗಿ ಇವನು ಒಬ್ಬ ಧನಾಡ್ಯನಿರಬಹುದೆಂದು ತಿಳಿದು ಕೊಂಡು ತಾವು ಯಾರು ತಮ್ಮ ಪರಿಚಯವು ಹತ್ತಿದಂತೆ ಆಗುತ್ತದೆ ಆದರೆ ಎಲ್ಲಿ ಎಂಬದು ಗೊತ್ತಾಗಲೊಲ್ಲದು ಎಂದಳು ಆಗ ಬೀರಬಲನು ನಾನು ಬೀರಬಲನು ವೈಕುಂಠದಲ್ಲಿ ಇರುತ್ತೇನೆ ಆದರೆ ಈ ಸಂಗತಿಯನ್ನು ಅನ್ಯರ ಕಿವಿಗೆ ಹಾಕಬೇಡ ಎಂದು ಹೇಳಿ ಹೊರಟುಹೋದನು ಮರುದಿವಸಬಂದು ಅವಳ ಕೈಯಲ್ಲಿ ಎರಡು ರೂಪಾಯಿಗಳನ್ನು ಕೊಟ್ಟನು ಹೀಗೆ ಎರಡು ಮೂರು ದಿವಸ ನಡೆಯಲು ಅವಳು ಈ ಸಂಗತಿಯನ್ನು ಬಾದಶಹನ ಕಿವಿಯಮೇಲೆ ಹಾಕಿದಳು ಆಗ ಬಾದಶಹನು ಪ್ರಸನ್ನನಾಗಿ ಅವಳನ್ನು ಕುರಿತು ಅವನು ನಿನ್ನ ಬಳಿಯಲ್ಲಿ ಬಂದಾಗ ಅವನನ್ನು ನನ್ನೆಡೆಗೆ ಕರೆದುಕೊಂಡು ಬಾ ಎಂದು ಹೇಳಿದನು ನಾಲ್ಕನೇ ದಿವಸ ಪುನಃ ಬೀರಬಲನು ಬರಲು ಕಿಂಚಿತ್ ಅವಕಾಶಮಾಡಿರಿ ? ಬಾದಶಹನು ನಿಮ್ಮನ್ನು ಕರೆದಿದ್ದಾನೆ ಎಂದು ಹೇಳಿದಳು ಆಗ ಬೀರಬಲನು ಈ ದಿವಸ ಬರುವದಕ್ಕೆ ಆಗುವದಿಲ್ಲ ನಾಳೆಯ ದಿವಸ ಬರುತ್ತೇನೆ ಎಂದು ಹೇಳಿದನು ವಚನ ಕೊಟ್ಟಂತೆ ಐದನೇ ದಿವಸಬರಲು ಅವಳು ಬೀರಬಲನನ್ನು ಬಾದಶಹನೆಡೆಗೆ ಕರದೊಯ್ದಳು ಆಗ ಬಾದಶಹನು ಆತಿತುಷ್ಟನಾಗಿ ನೀನು ಈಗ ವೈಕುಂಠದಲ್ಲಿಯೇ ಇದ್ದು ನನಗೆ ಯಾಕ ವೈಕುಂಠ ದರುಶನವನ್ನು ಮಾಡಿಸಲ್ಲ ಈ ಸಾರೆ ನನಗೆ ಅವಶ್ಯವಾಗಿ ದರುಶನ ಮಾಡಿಸಲಿಕ್ಕೇ ಬೇಕು ಎಂದನು ಅದಕ್ಕೆ ಬೀರಬಲನು ಅಲ್ಲಿ ಹೋಗುವದು ಬಹಳ ಕಷ್ಟ ಸಾಧ್ಯವು ಎಂದನು. ಅದಕ್ಕೆ ಬಾದಶಹನು ಬೇಕಾದಷ್ಟು ಕಷ್ಟವಿರಲಿ ! ನಾನು ಬಂದೇ ಬರುತ್ತೇನೆ ನೀನು ಅವಶ್ಯವಾಗಿ ನನ್ನನ್ನು ಕರೆದುಕೊಂಡು ಹೋಗಲಿಕ್ಕೇ ಬೇಕು ಎಂದನು ಆಗ ಬೀರಬಲನು ಒಳ್ಳೇದು ಮಾರ್ಗದಲ್ಲಿ ನಿಮಗೆ ಭೂತ ಪಿಶಾಚಿಗಳು ಬಂದು ಬಾದಶಹರೇ ಎಲ್ಲಿಗೆ ಹೋಗುತ್ತೀರಿ ? ಎಂದು ಪ್ರಶ್ನೆ ಮಾಡುವವು ಹೆದರಿಕೆಯನ್ನು ಹಾಕುವವು ಆದರೆ ಅವು ನಿಮಗೆ ಎಷ್ಟೇ ಪ್ರಶ್ನೆಗಳನ್ನು ಮಾಡಿದರೂ ಸಹ ನೀವು ಒಂದಾದರೂ ಮಾತಾಡ ಕೂಡದು ಮಾತಾಡಿದರೆ ಅವು ನಿಮ್ಮನ್ನು ಕೆಳಗೆ ಚೆಲ್ಲಿಬಿಡುವವು ಎಂದು ಹೇಳಿದನು ಬಾದಶಹನು ಒಪ್ಪಿಕೊಂಡನು ಆಗಬೀರಬಲನು ಬಾದಶಹನ ಕಣ್ಣುಗಳನ್ನು ಕಟ್ಟಿ ಮೋರೆಗೆ ಕಪ್ಪು ಹಚ್ಚಿ ಗಡ್ಡದ ಕೂದಲುಗಳನ್ನು ಕತ್ತರಿಸಿ, ಕತ್ತೆಯಮೇಲೆ ಕುಳ್ಳಿರಿಸಿ ವಿವರದ ಮಾರ್ಗವಾಗಿ ತನ್ನ ಮನೆಗೆ ಕರೆದು ಕೊಂಡು ಹೋಗಿ ಕೆಲವು ಹೊತ್ತು ಅತ್ತ ಇತ್ತ ಸಂಚರಿಸಿ ಪ್ರಾತಃ ಕಾಲ ವಾಗುವದಕ್ಕಿಂತ ಮುಂಚಿತವಾಗಿ ಆ ಗರ್ಧಬದಮೇಲೆ ಕುಳ್ಳಿರಿಸಿ ವಿವರದ ಮಾರ್ಗವಾಗಿ ಬಿಟ್ಟು ಬಿಟ್ಟನು ಆ ಗಾರ್ದಭವು ಸುರಂಗದೊಳಗಿಂದ ಹೊರಬಿದ್ದು ಕೋಟೆಯಲ್ಲಿ ಸಂಚರಿಸಹತ್ತಿತು ಆಗ ವಿದ್ರೂಪಿಯಾಗಿರುವ ಬಾದ ಶಹನ ಪರಿಚಯವನ್ನು ಹಿಡಿದು ಅಮಾತ್ಯ ಅಮೀರ ಮೊದಲಾದವರಿಗೆ ತಿಳಿಸಿದರು, ಆಗ ಅವರು ಬಂದು ಬಾದಶಹನನ್ನು ಕುರಿತು. ಜಂಹಾವನಾಹ! ತಮಗೆ ಭ್ರಾಂತಿಹಿಡಿದಿದೆಯೋ! ಎಲ್ಲಿಗೆ ಹೋಗುತ್ತೀರಿ? ಯಾವ ಪ್ರಾಣಿಯನ್ನು ಆರೋಹಣ ಮಾಡಿರುವಿರಿ! ಎಂದು ಪ್ರಶ್ನೆಗಳನ್ನು ಮಾಡ ಹತ್ತಿದರು ಆದರೆ ಅವು ಪಿಶಾಚಿಗಳೆಂದು ತಿಳಿದು ಉತ್ತರ ಕೊಟ್ಟರೆ ಬೀಳುವೆನೆಂಬ ಭಯದಿಂದ ಒಂದು ತುಟಿಯನ್ನು ಎರಡು ಮಾಡಲಿಲ್ಲ ಅದನ್ನು ಕಂಡು ಒಬ್ಬ ವಜೀರನು ಆ ಕತ್ತೆಯನ್ನು ಹಿಡಿದು ನಿಲ್ಲಿಸಿ ಬಾದಶಹನ ಕಣ್ಣಿನಕಟ್ಟನ್ನು ಸಡಲಿಸಿದನು ಆಗ ತನಗುಂಟಾದ ವಿದ್ರೂಪತೆಯನ್ನು ಕಂಡು ಲಜ್ಜಿತನಾಗಿ ಅರಮನೆಯನ್ನು ಹೊಕ್ಕನು ಮರುದಿವಸ ಬೀರಬಲವನ್ನು ಹಿಡತರಿಸಿ ಇದು ಏನು ಮಾಡಿದಿ! ನಿನಗೆ ಜೀವವು ಬೇಡಾಗಿದಯೆಂಬಂತೆ ಕಾಣುತ್ತದೆ! ಎಂದು ಕೇಳಿದನು ಆಗ ಬೀರಬಲನು ಸರಕಾರ ಪುಣ್ಯವಂತರಾದ ಮೃತ ಮನುಷ್ಯರಿಗೆ ವೈಕುಂಠ ದರ್ಶನವು ದೊರೆಯುವದು ದುರ್ಲಭವಾಗಿರಲು ನಿಮ್ಮಂಥವರಿಗೆ ವೈಕುಂಠ ದರ್ಶನವು ಹ್ಯಾಗೆ ಲಭಿಸುವದು! ಎಂದು ಕೇಳಿದನು. ಬಾದಶಹನು ನಿರುತ್ತರನಾದನು.

--( ೨೨೭. ಹಂಚಿಕೆಯ ಇಡಿಗಂಟು. ) --

ಒಬ್ಬ ಮುಸಲ್ಮಾನನು ಅಲ್ಪಸ್ವಲ್ಪ ವೈದ್ಯಕಿಯನ್ನು ಮಾಡಿ, ಹೊಟ್ಟೆ ಹೊರಕೊಳ್ಳುತ್ತಿದ್ದನು ಅವನಿಗೂ ಬೀರಬಲನಿಗೂ ವೈರವಿತ್ತು ಅದರಿಂದ ಅವನು ಯಾವಾಗಲೂ ಬೀರಬಲನನ್ನು ಅವಮಾನಗೊಳಿಸಬೇಕೆಂಬ ಹಂಚಿಕೆಯ ಶೋಧದಲ್ಲಿಯೇ ಇದ್ದನು. ಒಂದು ದಿವಸ ಬಾದಶಹನು ಬೀರಬಲನನ್ನು ಕುರಿಡು ಬೀರಬಲ ಈ ವೈದ್ಯನು ನಿನ್ನನ್ನು ಅವಮಾನ ಗೊಳಿಸಬೇಕೆಂಬ ಹಂಚಿಕೆಯಲ್ಲಿಯೇ ಇದ್ದಾನೆ; ಅದರಿಂದ ನೀನೇ ಇವನಿಗೆ ಅವಮಾನವಾಗುವಂತೆ ಮಾಡುಎಂದು ಹೇಳಿದನು ಆಗ ಬೀರಬಲನು ಒಳ್ಳೇದು; ನಾನು ಪರದೆಯೊಳಗೆ ಕೂಡುತ್ತೇನೆ ನೀವು ಅವನು ಬಂದಕೂಡಲೆ ನನ್ನ ಮಗಳ ಮೈಯಲ್ಲಿ ಕಿಂಚಿತ್ತು ಜಾಡ್ಯವುಂಟಾಗಿದೆ, ಅದರಿಂದ ನಾಡಿಯನ್ನು ನೋಡಿ ಔಷಧ ಕೊಡಬೇಕು ಎಂದು ಹೇಳಿರಿ ಎಂದು ಅಂದನು ಅಷ್ಟರಲ್ಲಿ ಆ ವೈದ್ಯನು ಸಭಾಸ್ಥಾನಕ್ಕೆ ಬಂದನು ಬೀರಬಲನು ಅವನು ಬರುವದರೊಳಗಾಗಿ ಪರದೆಯೊಳಗೆ ಹೋಗಿ, ಕುಳಿತುಕೊಂಡನು ವೈದ್ಯನು ಬಂದಕೂಡಲೆ ಬಾದಶಹನು ವೈದ್ಯರೇ! ನನ್ನ ಮಗಳ ಪ್ರಕೃತಿಯಲ್ಲಿ ಕಿಂಚಿತ್ ಜಾಡ್ಯವ್ಯತ್ಪನ್ನವಾಗಿದೆ ಅವಳ ನಾಡಿಯನ್ನು ಪರೀಕ್ಷಿಸಿ ಚಿಕಿತ್ಸಾ ಪ್ರಬಂಧವನ್ನು ಮಾಡಿರಿ' ಎಂದು ಹೇಳಿದನು ಆಗ ವೈದ್ಯನು ಪರದೆಯೊಳಗೆ ಕೈಚಾಚಿದನು ಬೀರಬಲನು ತ ಬಾದಶಹನ ಸಮ್ಮುಖದಲ್ಲಿ ಬಂದು ನಿಂತುಕೊಂಡಳು ಅವಳನ್ನು ನೋಡಿ ಬಾದಶಹನು ನಸುನಗುತ್ತ ಮೇಲ್ಬಾಗವಂತೂ ಒಳ್ಳೆ ಅಲಂಕಾರವಾಗಿ ಕಾಣುತ್ತದೆ ಆದರೆ ಕೆಳಭಾಗವು ಹ್ಯಾಗೆ ಇರುವದೆಂಬದನ್ನು ತೋರಿಸು ಎಂದನು ಈ ಮಾತಿಗೆ ಆ ಪರಿಚಾರಿಕೆಯು ನಿಮ್ಮ ಅಜ್ಞಾನಕ್ಕೆ ಬೆಲೆ ಇಲ್ಲ ನೀವು ಯಾವ ಮಾರ್ಗದಿಂದ ಬಂದಿರೋ ಆ ಮಾರ್ಗವು ಹ್ಯಾಗದೆ, ಎಂಬ ಸಂಗತಿಯ ನಿಮಗೆ ಇನ್ನೂ ಗೊತ್ತಾಗಲಿಲ್ಲವೇ? ಎಂದು ಕೇಳಿದಳು ಬಾದಶಹನು ನಿರುತ್ತರನಾದನು.

- (೨೩೦, ಈ ಬೀಗದ ಕೈಗಳು ಯಾವ ಅಂತಹದವು ? )-
ಬೀರಬಲನು ಒಂದು ದಿವಸ ತನ್ನ ಗೃಹದ ಪರಿಚಾರಿಕೆಯ ಜಾಣತನವನ್ನು ಬಾದಶಹನ ಸಮ್ಮುಖದಲ್ಲಿ ಬಹುಪರಿಯಾಗಿ ಹೊಗಳಿದನು ಆಗ ಬಾದಶಹನು ಅವಳನ್ನು ಕರೆಯಿಸು ! ಎಂದು ಹೇಳಿದನು ಅಪ್ಪಣೆಯ ಮೇರೆಗೆ ಅವಳನ್ನು ಕರೆಯಿಸಲು, ಅವಳು ಬೀಗದ ಕೈಗಳ ಸರವೊಂದನ್ನು ನಡುವಿನಲ್ಲಿ ಕಟ್ಟಿಕೊಂಡು ಸಭೆಗೆ ಬಂದು ಒಯ್ಯಾರದಿಂದ ಬಾದಶಹನಿಗೆ ನಮಸ್ಕರಿಸಿದಳು ಆಗ ಬಾದಶಹನು ನಸುನಗುತ್ತ ಈ ಬೀಗದ ಕೈಗಳು ಯಾವ ಅಂತಗೃಹದವು? ಎಂದು ಪ್ರಶ್ನೆ ಮಾಡಿದನು ಆಗ ಆ ಪರಿಚಾರಿಕೆಯು ಖಾವಂದ!ತಾವು ನವಮಾಸದ ವರೆಗೆ ಯಾವ ಅಂತರ್ಗಹದಲ್ಲಿ ವಾಸ ಮಾಡಿದ್ದಿರೋ,ಆ ಅಂತರ್ಗೃಹದ್ದು ಎಂದು ಉತ್ತರಕೊಟ್ಟಳು ಆ ಕೂಡಲೆ ಬಾದಶಹನು ಮುಂದೆ ಮಾತಾಡಲಿಕ್ಕೆ ತಿಳಿಯದೆ, ಪ್ರಸನ್ನತೆಯಿಂದ ಆ ಪರಿಚಾರಿಕೆಗೆ ಬಹುಮಾನ ವನ್ನಿತ್ತು ಕಳುಹಿಸಿದನು.
-( ೨೩೧. ಬೀರಬಲನ ಪುತ್ರಿಯ, ಬಾದಶಹನೂ. )-

ಒಂದು ದಿವಸ ಬೀರಬಲನ ಪುತ್ರಿಯು ಜನ್ಮಾವಸ್ಥೆಯಿಂದ, ಹೂಸಿ ಕೊಳ್ಳುವದಕ್ಕೆ ಕುಳಿತುಕೊಂಡಿದ್ದಳು ಆ ಸಮಯದಲ್ಲಿ ಅಕಸ್ಮಾತ್ತಾಗಿ ಬಾ ದಶಹನು ಅಲ್ಲಿಗೆ ಹೋದನು ಮತ್ತು ಅವಳ ಸೀರೆ ಕುಪ್ಪಸಗಳನ್ನೆಲ್ಲ ತೆಗೆ ದುಕೊಂಡು, ಒಂದು ಮೂಲೆಯಲ್ಲಿ ಅವಿತುಕೊಂಡು ಕುಳಿತನು ಅವಳು ಸ್ನಾನ ತೀರಿಸಿಕೊಂಡು ಬಟ್ಟೆಗಳನ್ನು ನೋಡಲು, ಕಾಣಲಿಲ್ಲ ಮೂಲೆಯಲ್ಲಿ ಕುಳಿತಿದ್ದ ಬಾದಶಹನ ಮೇಲೆ ದೃಷ್ಟಿಯು ಬಿತ್ತು ಆಗ ಅವಳು ಸ್ತನಗಳನ್ನು ಮುಚ್ಚಿಕೊಂಡು ಬಾದಶಹನ ಮುಂದೆ ಬಂದಳು ಆಗ ಬಾದಶಹನು ನೀನು ಉಳಿದ ಅಂಗಾಂಗಳನ್ನು ಮುಚ್ಚಿಕೊಳ್ಳದೆ ಸ್ತನಗಳನ್ನೇ ಯಾಕೆ ಮುಚ್ಚಿ ಕೊಂಡಿ ? ಎಂದು ಪ್ರಶ್ನೆ ಮಾಡಿದನು ಆಗ ಅವಳು - ಖಾವಂದ ! ತಾವು ಚಿಕ್ಕಂದಿನಲ್ಲಿ ನನ್ನನ್ನು ಎತ್ತಿಕೊಂಡು ಲಾಲನೆ ಪಾಲನೆ ಮಾಡಿರುವಿರಿ ನ್ನ ಭುಜದಂಡವನ್ನು ಮುಂದೆ ಮಾಡಿದನು ವೈದ್ಯನು ಅದನ್ನು ಮುಟ್ಟಿದ ಕೂಡಲೆ ಗಾಬರಿಯಾಗಿ ಹೊರಗೆ ಕೈ ತೆಗೆದುಕೊಂಡನು ಇಷ್ಟಾದಮೇಲೆ ಬೀರಬಲನು ಅವನ ಭುಜದಂಡವನ್ನು ಹಿಡಿದುಕೊಂಡು ಹೊರಗೆ ಬಂದು ಇದು ಹಂಚಿಕೆಯ ಇಡಿಗಂಟು ವೈದ್ಯಸಾಹೇಬ ! ಬಿಸಮಿಲ್ಲಾಹ ಉಹಮಾ ನುರ್ರಹೀಮ ಎಂದು ಹೇಳಿದನು ವೈದ್ಯನು ನಾಚಿಕೆಯಿಂದ ತಲೆಬಗ್ಗಿಸಿದನು ಪುನರಪಿ ಬೀರಬಲನ ಹೆಸರನ್ನು ಎತ್ತಲಿಲ್ಲ.

-( ೨೮. ಎರಡು ಸಾವಿರ ಮೂರ್ಖರು.)-

ಒಂದು ಸಮಯದಲ್ಲಿ ಬೀರಬಲನು ತನ್ನ ಸ್ವದೇಶಕ್ಕೆ ಬಂದಿದ್ದನು ಮರಳಿ ದಿಲ್ಲಿಗೆ ಬರಬೇಕೆಂದು ಹೊರಡಲು ಎರಡುಸಾವಿರ ಜನ ಬ್ರಾಹ್ಮಣಕುಲದ ತರುಣರು ತಮಗೆ ಸೈನ್ಯದಲ್ಲಿ ಕೆಲಸವನ್ನು ಕೊಡಿಸಬೇಕೆಂದು ಬೀರಬಲನ ಬೆನ್ನು ಹತ್ತಿದನು ಅವರೆಲ್ಲರನ್ನೂ ದಂಡಿನಲ್ಲಿ ನಿಯಮಿಸಿಕೊಂಡು ದಿಲ್ಲಿಗೆ ಬಂದನು ಆದರೆ ಅವರಿಗೆ ವೇತನವನ್ನು ಹ್ಯಾಗೆ ಕೊಡಬೇಕು? ಎಂದು ಚಿಂತಿಸಿ ಸ್ವಸ್ಥ ಕುಳಿತುಕೊಂಡನು ಮುಂದೆ ಕೆಲವು ದಿವಸಗಳಾದ ಮೇಲೆ ಬಾದಶಹನು ಬೀರಬಲನನ್ನು ಕರೆಯಿಸಿಕೊಂಡು ನಿನ್ನ ದೇಹವು ಸೌಖ್ಯದಲ್ಲಿರುವದೋ ? ನನ್ನ ಸಲುವಾಗಿ ಯೇನು ತೆಗೆದುಕೊಂಡು ಬಂದಿರುವಿ? ಎಂದು ಕೇಳಿ ದನು ಆಗ ಬೀರಬಲನು ಸರಕಾರ ! ಎರಡು ಸಾವಿರ ಜನ ಮೂರ್ಖರನ್ನು ಕರೆತಂದಿರುವೆನು; ಎಂದು ಉತ್ತರಕೊಟ್ಟನು ಅದಕ್ಕೆ ಬಾದಶಹನು ಅವರು ಮೂರ್ಖರೆಂದು ಹ್ಯಾಗೆ ಹೇಳುವಿ? ಎಂದು ಕೇಳಿದನು ಬೀರಬಲನು. ಆ ಮನುಷ್ಯರಿಗೆ ಕಿಂಚಿತ್ತಾದರೂ ಜ್ಞಾನವಿದ್ದಂತೆ ಕಂಡು ಬರುವದಿಲ್ಲ ಯಾಕಂದರೆ, ತಮ್ಮಲ್ಲಿ ಚಾಕರಿಯು ದೊರೆಯದಿದ್ದ ಪಕ್ಷದಲ್ಲಿ ಸ್ವದೇಶಕ್ಕೆ ಮರಳಿ ಹೋಗುವಪರಿ ಹ್ಯಾಗೆ? ಎಂಬದನ್ನು ಸಹಾ ಯೋಚಿಸದೆ ನನ್ನೊಡನೆ ಹೊರಟು ಬಂದಿದ್ದಾರೆ ಅದರಿಂದ ಅವರಿಗೆ ನಾನು ಮೂರ್ಖರೆಂದು ತಿಳಿದು ಕೊಂಡಿದ್ದೇನೆ ಎಂದು ಉತ್ತರಕೊಟ್ಟನು. ಆಗ ಬಾದಶಹನು ನಕ್ಕು ಒಳ್ಳೇದು ಅವರಿಗೆ ಸೈನ್ಯದಲ್ಲಿ ನಿಯಮಿಸಿಕೊಂಡು ಪ್ರತಿಮಾಸಕ್ಕೆ ಸರಕಾರದ ಖಜಾನೆಯೊಳಗಿಂದ ವೇತನವನ್ನು ಸಲ್ಲಿಸುತ್ತ ಹೋಗು ! ಎಂದು ಅಪ್ಪಣೆ ಮಾಡಿದನು ಬೀರಬಲನು ಬಾದಶಹನ ಅಪ್ಪಣೆಯಂತೆ ಮಾಡಿದನು.

- (೨೨೯. ಬೀರಬಲನ ದಾಸಿ. )-

ಒಂದು ಸಮಯದಲ್ಲಿ ಬಾದಶಹನ ಮನಸ್ಸಿನಲ್ಲಿ ಬೀರಬಲನ ಗೃಹದ ಪರಿಚಾರಿಕೆಯರನ್ನು ಪರೀಕ್ಷಿಸಿ ನೋಡಬೇಕೆಂಬ ಕುತೂಹಲವು ಜನಿಸಿತು ಕೂಡಲೆ ಅವನು ಬೀರಬಲನ ಗೃಹದೆಡೆಗೆ ಬಂದನು ಆಗ ಒಬ್ಬ ದಾಸಿಯ ಗ ತಾವು ನನ್ನ ಸರ್ವಾಂಗವನ್ನೂ ನೋಡಿರುವಿರಿ, ಆದರೆ ಎದೆಯ ಮೇಲಿ ಸ್ತನಗಳನ್ನು ನೋಡಿದ್ದಿಲ್ಲ, ಅದರಿಂದ ಸ್ತನಗಳನ್ನು ಮುಚ್ಚಿಕೊಂಡು ತಮ್ಮ ಎದುರಿಗೆ ಬಂದೆನು ಎಂದು ಹೇಳಿದಳು ಬಾದಶಹನು ಸುಮ್ಮನಾದ ನು.

- (೨೩೨. ಹಿಂದೂಗಳಲ್ಲಿ ಯಾವ ಜಾತಿಯವರು ಚತುರರು?)-

ಬಾದಶಹ -ಹಿಂದುಗಳಲ್ಲಿ ಯಾವಜಾತಿಯವರು ಚತುರರು ?
ತೋಡರವಲ್ಲ- ಬ್ರಾಹ್ಮಣರು,
ಬೀರಬಲ-ಅಲ್ಲ, "ಲಾಲಾ ” ಜಾತಿಯವರು ಚತುರರು,
ಬಾದಶಹ- ಇದನ್ನು ಪರೀಕ್ಷಿಸಿ ನೋಡಬೇಕು ?
ಮರುದಿವಸ ಬೀರಬಲನೂ ಬಾದಶಹನೂ ಕೂಡಿಕೊಂಡು ನಗರವೆಲ್ಲ ರಾತ್ರಿ ಸಮಯದಲ್ಲಿ ಸಂಚಾರಕ್ಕೆ ಹೊರಟರು ಒಂದು ಬೀದಿಯಲ್ಲಿ ಒಬ್ಬ ಲಾಲನ ಮನೆಯು ಹತ್ತಿತು ಆ ಲಾಲಾಜಿಯ ಹೆಂಡತಿಯು ತನ್ನ ಪತಿಗೆ ಇನ್ನು ಉಪ ಜೀವನವು ಹ್ಯಾಗೆ ನಡೆಯಬೇಕು ಮಕ್ಕಳು ಮರಿಗಳೆಲ್ಲ ಉಪ ಮಣದಿಂದ ಮರುಗಹತ್ತಿವೆ ಎಂದಳು ಆಗ ಲಾಲಾಜಿಯು ಹೆದರಬೇಡ ನನಗೆ ಚಾಕರಿಯು ಹತ್ತಿದದಿವಸವೇ ಮನೆಯನ್ನೆಲ್ಲ ದ್ರವ್ಯದಿಂದ ತುಂಬಿಬಿಡುತ್ತೇನೆ ಎಂದು ಹೇಳಿದನು ಈ ಮಾತುಗಳು ಕಿವಿಗೆಬಿದ್ದ ಕೂಡಲೆ ಅವರಿಬ್ಬರೂ ಅಲ್ಲಿಂದಲೇ ಹಿಂದಿರುಗಿ ತಮ್ಮ ತಮ್ಮ ಸ್ಥಾನಗಳಿಗೆ ಬಂದರು ಮತ್ತು ಆಲಾಲಾಜಿಗೆ ನಮ್ಮ ಅರಮನೆಯಲ್ಲಿ ಒಂದು ಕೆಲಸವನ್ನು ಕೊಡು ಆದರೆ ವೇತನ ವನ್ನು ತೀರಕಡಿಮೆಕೊಡು ಎಂದು ಹೇಳಿ ಬಾದಶಹನು ತನ್ನ ಸ್ಥಾನಕ್ಕೆ ತೆರ ಳಿದನು ಮರುದಿವಸ ಬೀರಬಲನು ಅವನನ್ನು ಕರೆಯಿಸಿ ಈ ಹೊತ್ತಿನಿಂದ ನಿನಗೆ ಮಾಸ ಒಂದಕ್ಕೆ ಹತ್ತು ರೂಪಾಯಿ ವೇತನದ ಮೇಲೆ ಆಶ್ವಶಾಲೆಯ ಕಟ್ಟೆಯಮೇಲೆ ಕುಳಿತುಕೊಳ್ಳುವ ಕೆಲಸದ ಮೇಲೆ ನಿಯಮಿಸಿದ್ದೇನೆ ಎಂದು ಹೇಳಿದನು ಆಗ ಲಾಲಾಜಿಯು ಅಶ್ವಶಾಲೆಗೆ ಬಂದು ಕಟ್ಟಿಯ ಮೇಲೆ ಕುಳಿತು ಕೊಂಡನು ಮರುದಿವಸ ಪ್ರಾತಃಕಾಲದಲ್ಲಿ ಎದ್ದು ಬಂದು ಪ್ರತಿಯೊಂದು ಕುದುರೆಯ ಲದ್ದಿಯನ್ನು ತೂಕ ಮಾಡಿ ನೋಡಹತ್ತಿದನು. ಆಗ ಪ್ರತಿಯೊಬ್ಬ ತುರಗರಕ್ಷಕನು ಬಂದು ನೀವು ಲದ್ದಿಯನ್ನು ಯಾಕೆ ತುಲನೆ ಮಾಡುತ್ತಿ... ರುವಿರಿ ! ಎಂದು ಕೇಳಹತ್ತಿದನು ಆಗ ಲಾಲಾಜಿಯು ಏನೂ ಇಲ್ಲ ಬಾದಶ ಹನು ನನ್ನನ್ನು ಇದೇ ಕಾರ್ಯಕ್ಕೆ ನಿಯಮಿಸಿದ್ದಾನೆ ಪ್ರತಿಯೊಂದು ಅಶ್ವಕ್ಕೆ ಪ್ರತಿದಿವಸದಲ್ಲಿ ಎಷ್ಟು ಆಹಾರ ಕೊಡಲ್ಪಡುತ್ತದೆ ಮತ್ತು ಆ ಮಾನದಿಂ ದ ಕುದುರೆಯು ಎಷ್ಟು ಲಡ್ಡಿಯನ್ನು ಹಾಕುತ್ತಿರುವದು ಎಂಬದನ್ನು ಪರೀ

ನು ನಿಜಸಂಗತಿಯನ್ನೆಲ್ಲ ಹೇಳಿಬಿಟ್ಟನು. ಆಗ ದೇವಿಯು ಕುಪಿತನಾಗಿ "ಈ ದಿವಸದಿಂದ ಲಾಲಾಜಾತಿಯ ಜನರಮನೆಯಲ್ಲಿ ನಾನು ವಾಸಮಾಡುವದಿಲ್ಲ” ಎಂದು ಹೇಳಿ ಅಂತರ್ಧಾನವಾದಳು ಈ ಕಾರಣದಿಂದ " ಲಾಲಾ ” ಜನರು ದರಿದ್ರರಾಗಿರುವರು ಎಂದು ಬೀರಬಲನು ಹೇಳಿದನು..

- (೨೩೪ ಮುಸಲ್ಮಾನರ, ಇಸ್ತಂಜಾ.)-

ಒಂದುಸಮಯದಲ್ಲಿ ಬಾದಶಹನು " ಬೀರಬಲ ! ನಿಮ್ಮ ಜನರು ಯಾವಾಗಲೂ ಅಸ್ವಚ್ಛತೆಯಿಂದ ಇರುವರು ನಮ್ಮ ಜನರು ಯಾವಾಗಲೂ ಸ್ಪಚ್ಛವಾಗಿರುವರು”ಎಂದನು. ಅದಕ್ಕೆ ಬೀರಬಲನು ಆದು ಹ್ಯಾಗೆ ಎಂದು ಪ್ರಶ್ನೆ ಮಾಡಿದನು ಈ ಪ್ರಶ್ನೆಗೆ ಬಾದಶಹನು ನಿಮ್ಮ ಜನರು ಮೂತ್ರವಿಸರ್ಜನೆ ಮಾಡಿ ಹಾಗೆಯೇ ದೋತರವನ್ನು ಬಿಟ್ಟು ಬಿಡುತ್ತಾರೆ, ನಮ್ಮ ಜನರು ಮೂತ್ರ ವಿಸರ್ಜನೆಯ ನಂತರ ಮಣ್ಣನ್ನು ಹಚ್ಚಿ ಶುದ್ಧ ಮಾಡುತ್ತಾರೆ; ಎಂದು ಉತ್ತರ ಹೇಳಿದನು. ಅದಕ್ಕೆ ಬೀರಬಲನು ಹಾಗಲ್ಲ ? ಇದಕ್ಕೆ ಬೇರೆ ಕಾರಣವುಂಟು, ಅದೇನಂದರೆ ಮೂತ್ರ ವಿಸರ್ಜನೆಯ ಕಾಲದಲ್ಲಿ ಅದರಮೇಲೆ ದೃಷ್ಟಿ ಬೀಳಲು, ಆಗ ನಿಮ್ಮ ಮನಸ್ಸಿನಲ್ಲಿ ( ಇದು ಕಕ್ಕನ ಮಗಳನ್ನೂ, ಮಾವನ ಮಗಳನ್ನೂ ಅಕ್ಕತಂಗಿಯರನ್ನೂ ಸಹ ಬಿಡಲಿಲ್ಲವೆಂದು ತಿಳಿದು ಅದರ ಮೋರೆಗೆ ಮಣ್ಣು ಹಚ್ಚುತ್ತೀರಿ” ಎಂದು ಹೇಳಿದನು. ಅದನ್ನು ಕೇಳಿ ಬಾದಶಹನು ಲಜ್ಜಿತನಾದನು.

-(೨೩೫ ಬಾದಶಹನ ಜಾಮಾತ.)-}

ಒಂದುದಿವಸ ಸಭಾಸ್ಥಾನದಲ್ಲಿ ಅಕಬರನ ಜಾಮಾತನು ಬಂದನು, ಸಭಿಕರೆಲ್ಲರೂ ಚುಟಿಕೆಯನ್ನು ಬಾರಿಸಹತ್ತಿದರು. ಆದರೆ ಮಧುರೆಯ ಒಬ್ಬ ವರ್ತಕನು ತನ್ನ ಅಂಗುಲಿಯನ್ನು ತೋರಿಸಿದನು, ಹೀಗೇಕೆ ! ಎಂದು ಬಾದಶಹನು ಪ್ರಶ್ನೆ ಮಾಡಿದನು. ಆಗ ಆ ವರ್ತಕನು "ಈ ಜನರು ಚುಟಕೆಯನ್ನು ಬಾರಿಸಿದರು, ಇದರ ಕಾರಣವೇನಂದರೆ ಚುಟಿಕೆಬಾರಿಸುವಷ್ಟು ಸಮಯದಲ್ಲಿ ನಿಮ್ಮನ್ನು ನಾಶಮಾಡುತ್ತೇವೆ ” ಎಂಬ ಅಭಿಪ್ರಾಯದಿಂದ ಗರ್ಭಿತವಾದ್ದರಿಂದ ನಾನು ಒಂದು ಅಂಗುಲಿ ನಿರ್ದೆಶವನ್ನು ಮಾಡಿದೆನು, ಇದರ ಆಶಯವೇನಂದರೆ ನಿಮ್ಮಿಂದ ಒಂದಂಗುಲಿಯನ್ನು ಸಹ ಮಣಿಸುವದು ಆಗ ಲಿಕ್ಕಿಲ್ಲ ಒಂದು ಅಂಗುಲಿಯನ್ನು ತೋರಿಸಿದೆನು ಎಂದು ಕಥನಮಾಡಿದನು ಈ ಮಾತನ್ನು ಶ್ರವಣಮಾಡಿ ಬಾದಶಹನು ಪ್ರಸನ್ನನಾದನು ಸಭಾಸದರು

ಲಜ್ಜಿತರಾದರು.
-(೨೩೬ ನಾನು ಮಾತಾಡಿಸಿಕೊಳ್ಳುವೆನು) -

ಒಂದಾನೊಂದು ಸಮಯದಲ್ಲಿ ಬೀರಬಲನು ಬಾದಶಹನ ದರುಶನಕ್ಕೆ ಬರಹತ್ತಿದ್ದನು. ಆಗ ಅವನನ್ನು ನೋಡಿ ಬಾದಶಹನು " ಬೀರಬಲ್ಲ ! ಕೇಳು ನನಗೆ ನಿನ್ನೊಡನೆ ಈಗ ಮಾತನಾಡಲು ಅವಕಾಶವಿಲ್ಲ ” ಎಂದನು ಅದಕ್ಕೆ ಬೀರಬಲನು “ ನಾನೇ ಮಾತನಾಡಿಸಿಕೊಳ್ಳುತ್ತೇನೆ ನೀವು ಹೆದರಬೇಡಿರಿ ! ಎಂದನು. ಈ ಉತ್ತರವನ್ನು ಕೇಳಿ ಬಾದಶಹನು ಬಿದ್ದು ಬಿದ್ದು ನಕ್ಕನು.

- (೨೩೭ ನಾವಕೀ ರಕ್ಷಾ.) -

ಒಂದಾನೊಂದು ಸಮಯದಲ್ಲಿ ಬಾದಶಹನು ಬೀರಬಲನನ್ನು ಕುರಿತು ನೀನು ಎಂದಾದರೂ ದೋಣಿಯಲ್ಲಿ ಕುಳಿತಾಗ ಅದು ಮುಳುಗಹತ್ತಿದರೆ ಆ ಸಮಯದಲ್ಲಿ " ನಾವಕೀರಕ್ಷಾ ಎಂಬ ಗ್ರಂಥವನ್ನು ತೆರೆದು, ಅದರಲ್ಲಿರುವ ಉಪಾಯಗಳಂತೆ ವರ್ತಿಸಿದರೆ ದೋಣಿಯು ಎಂದೂ ಮುಳುಗಲಾರದು,, ಎಂದು ಹೇಳಿದನು. ಅದಕ್ಕೆ ಬೀರಬಲನು, ನಿಜವದೆ; ಆ ಸಮಯದಲ್ಲಿ ಗ್ರಂಥವನ್ನು ನೋಡಲಿಕ್ಕೆ ಸಂಧಿಯು ದೊರೆತರೂ ದೊರೆಯಬಹುದು ಎಂದನು.ಈ ಉತ್ತರವನ್ನು ಕೇಳಿ ಬಾದಕಹನು ನಗಹತ್ತಿದನು.

- (೨೩೪ ಅತ್ತರ[ ಸೌಗಂಧಿತೈಲ ]ವೂ, ನ. )-

ಒಂದು ದಿವಸ ಬಾದಶಹನು ವಿನೋದಮಾಡಬೇಕೆಂದು ಬೀರಬಲನಿಗೆ ಸುಗಂಧದೆಣ್ಣೆಗೆ ಪ್ರತಿಯಾಗಿ ಮೂತ್ರವನ್ನು ಹಚ್ಚಿ ಹಾಸ್ಯ ಮಾಡಹತ್ತಿದನು ಬೀರಬಲನು ಕೈಯನ್ನು ಅವಘ್ರಾಣಿಸಿ ನಾಚಿಕೆಯಿಂದ ತಲೆಬಗ್ಗಿಸಿದನು, ಏನೂ ಮಾತಾಡಲಿಲ್ಲ ತನ್ನ ಕೆಲಸದಲ್ಲಿಯೇ ತೊಡಗಿದನು, ಮುಂದೆ ಕೆಲವು ದಿವಸಗಳ ಮೇಲೆ ಬಾದಶಹನಿಗೆ ಶಿರೋವೇದನೆಯುಂಟಾಯಿತು, ಆಗ ಬಿರ ಬಲನು. ಹುಜೂರ ? ನನ್ನ ಬಳಿಯಲ್ಲಿ ಒಂದುಪ್ರಕಾರದ ನಶ್ಯವಿರುವದು ಅದನ್ನು ಅವಘ್ರಾಣಿಸಿದ ಉತ್ತರಕ್ಷಣದಲ್ಲಿಯೇ ಶಿರೋವೇದನೆಯು ನಿಂತುಹೋಗುವದು ಎಂದು ಹೇಳಿದನು. ಅದಕ್ಕೆ ಬಾದಶಹನು ಶೀಘ್ರವಾಗಿ ತಂದುಕೊಡು ! ಎಂದು ಅಪ್ಪಣೆಮಾಡಿದನು. ಆಗ ಬೀರಬಲನು ಶುಷ್ಕವಾಗಿರುವ ಮಲವನ್ನು ತಂದು ಸಣ್ಣಾಗಿ ಅರೆದು, ಒಂದು ಬೆಳ್ಳಿಯ ಡಬ್ಬಿಯಲ್ಲಿ ತುಂಬಿಕೊಂಡು ಒಯ್ದು ಬಾದಶಹನಿಗೆ ಕೊಟ್ಟನು ಬಾದಶಹನು ಅದನ್ನು ಅವಘ್ರಾಣಿಸಿ ಕೆಟ್ಟ ಮೋರೆಯನ್ನು ಮಾಡಿ ಇದು ಯಾವ ಪದಾರ್ಥದಿಂದ ಮಾಡಿದ ನಶ್ಯವು ಎಂದು ಕೇಳಿದನು. ಅದಕ್ಕೆ ಬೀರಬಲನು ಕೈಜೋಡಿಸಿ,- ಹುಜೂರ ? ಹಿಂದಕ್ಕೆ ತಾವು ನನಗೆ ಸುಗಂಧ ತೈಲವನ್ನು ಹಚ್ಚಿದ್ದಿಲ್ಲವೇ ! ಆ ಪದಾರ್ಥದ ಅರ್ಕದಿಂದ ಈ ನಶ್ಯವು ಸಿದ್ಧವಾಗಿದೆ ಎಂದು ಉತ್ತರಕೊಟ್ಟನು. ಈ ಮಾ ತನ್ನು ಕೇಳಿ ಬಾದಶಹನು ಲಜ್ಜಿತನಾದನು,

-(೨೩೯ ನನ್ನ ವಾದ್ಯವು ಪೃಥಕ್ಕಾಗಿ ನುಡಿಯುವದಿಲ್ಲ.)-

ಒಂದಾನೊಂದು ಸಮಯದಲ್ಲಿ ಬಾದಶಹನು ಬೀರಬಲನನ್ನು ಗಾಯನ ವಾದನ ಶಾಲೆಯ ಮುಖ್ಯಸ್ಥನನ್ನಾಗಿ ನಿಯಮಿಸಿದನು, ಆದರೆ ಆ ವಿದ್ಯೆಯಲ್ಲಿ ಬೀರಬಲನಿಗೆ ಕಿಂಚಿತ್ತಾದರೂ ಅಭಿರುಚಿಯಿಲ್ಲ. ಒಂದು ದಿವಸ ಗಾಯಕರ ಸಮ್ಮೇಳನವು ಆರಂಭವಾಯಿತು ಎಲ್ಲರೂ ಒಂದೊಂದು ವಾದ್ಯವನು ಬಾರಿಸಹತ್ತಿದರು, ಬೀರಬಲನು ಒಂದು ಹೊರಸಿನ ಕಾಲಿಗೆ ಬಟ್ಟೆಯನ್ನು ಸುತ್ತಿಕೊಂಡು ಬಂದು ಒಂದು ಕಟ್ಟಿಗೆಯಿಂದ ಬಾರಿಸಹತ್ತಿದನು, ಈ ಕೌತುಕವನ್ನು ಕಂಡು ಬಾದಶಹನು ಪ್ರತಿಯೊಬ್ಬನು ಪೃಥಕ್‌ ಪೃಥಕ್ಕಾಗಿ ಬಾರಿಸಿರಿ ! ಎಂದು ಅಪ್ಪಣೆಮಾಡಿದನು, ಎಲ್ಲರೂ ತಮ್ಮ ವಾದನಪಟುತ್ವವನ್ನು ಪ್ರಕಟಗೊಳಿಸಿದರು, ಬೀರಬಲನ ಸರದಿಯು ಬಂದಕೂಡಲೆ ಹುಜೂರ ನನ್ನ ವಾದ್ಯವು ಪೃಥಕ್ಕಾಗಿ ನುಡಿಯುವದಿಲ್ಲ ಎಂದು ಹೇಳಿದನು. ಆ ದಿನ ಮೊದಲ್ಗೊಂಡು ಬಾದಶಹನು ಆ ಅಧಿಕಾರದಿಂದ ಬೀರಬಲನನ್ನು ತಪ್ಪಿಸಿದನು.

- ೨೪೦, ವರ್ತಕನ ಚತುರನಾದ ಮಗನು. -

ಒಂದುದಿವಸ ಬಾದಶಹನು ಗಜಾರೋಹಣ ಮಾಡಿಕೊಂಡು ನಗರದಲ್ಲಿ ಸಂಚಾರಕ್ಕೆ ಹೊರಟಿದ್ದನು ಅವನನ್ನು ನೋಡಿ ಒಬ್ಬ ವರ್ತಕನ ಚಿಕ್ಕ ಮಗನು- ಎಲೋ, ಆನೆಯವನೇ ! ಆನೆಯನ್ನು ಕ್ರಯಕ್ಕೆ ಕೊಡುವಿಯಾ ಎಂದು ಕೇಳಿದನು ಆ ಅಜ್ಞಾನಿಯಾದ ಬಾಲಕನ ಕಥನವನ್ನು ಕೇಳಿ, ಬಾದಶಹನಿಗೆ ಕೋಪವು ಬಂತು ಆದರೂ ಅವನ ಸಹನಮಾಡಿಕೊಂಡು ಸುಮ್ಮನೆ ಹೊರಟು ಹೋದನು ಮರುದಿವಸ ಆ ಬಾಲಕನನ್ನು ಕರೆಯಿಸಿ - ಈ ದಿವಸ ಗಜವನ್ನು ಕ್ರಯಕ್ಕೆ ತೆಗೆದು ಕೊಳ್ಳುವಿಯಾ ? ಎಂದು ಕೇಳಿದನು ಆಗ ಅವನು ಕೈಜೋಡಿಸಿ ನಿಂತುಕೊಂಡು - ಖುದಾವುದ ! ಆ ವರ್ತಕನು ನಿನ್ನೆಯ ದಿವಸವೇ ಹೊರಟು ಹೋದನು ಎಂದು ಉತ್ತರ ಕೊಟ್ಟನು ಈ ಉತ್ತರದಿಂದ ಬಾದಶಹನು ಪ್ರಸನ್ನನಾದನು.

-( ೨೪೧. ಚತುರನಾದ ಚೌಬೆ. )-

ಒಂದುದಿವಸ ಬಾದಶಹನು ಬೀರಬಲನನ್ನು ಕುರಿತು ಮಧುರಾ ಪಟ್ಟಣದಲ್ಲಿಯ ಚೌವೇ ಜನರು, ಸಮಯೋಚಿತ ಉತ್ತರವನ್ನು ಕೊಡುವದರಲ್ಲಿ ಬಹು ಸಮರ್ಥರೆಂದು ಕೇಳಿದ್ದೇನೆ, ಅದರಿಂದ ಈ ಪಟ್ಟಣದಲ್ಲಿ ಯಾರಾದರೂ ಇದ್ದರೆ ನಾಳೆಯ ದಿವಸ ಓಲಗಕ್ಕೆ ಕರೆದುಕೊಂಡು ಬಾ ! ಎಂದು ಅಪ್ಪಣೆ ಮಾಡಿದನು ಅದರಂತೆ ಒಬ್ಬ ಮನುಷ್ಯನನ್ನು ಬೀರಬಲನು ಕರ