ಅಗ್ಗದ ಅರವಿ ತಂದು

ವಿಕಿಸೋರ್ಸ್ ಇಂದ
Jump to navigation Jump to search

ಅಗ್ಗದ ಅರವಿ ತಂದು[ಸಂಪಾದಿಸಿ]

  • ಜೀವ ಸುಲಭವಾಗಿ ದೇಹವನ್ನು ಪಡೆದು ಸಂತಸಪಟ್ಟು, ನೋಡಲು ಅದು ಹಿಂದಿನ ಜನ್ಮದ ಕರ್ಮಫಲ. ಅದರ ಮರ್ಮ ಗುರು ಶಿಶುನಾಳಾಧೀಶನು ತಿಳಿಸಿ ಜ್ಞಾನ (ಬೆಳಗಾಗೋ ಸಮಯ) ಕೊಟ್ಟು ಸತ್ಯವನ್ನು ಅರುಹಿದನು (ಬಿಡುಗಡೆ ಮಾಡಿದನು?).

ಅಗ್ಗದ ಅರಿವಿ ತಂದು
ಹಿಗ್ಗಿ ಹೊಲಿಸಿದೆ ಅಂಗಿ
ಹೆಗ್ಗಣ ಒಯ್ತವ್ವ ತಂಗಿ ಈ ಅಂಗಿ.
 
ಅಗಣಿತ ವಿಷಯದ
ಆರುಗೇಣೀನ ಕವಚ
ಬಗಲಿನ ಬೆವರನು ಕುಡಿದು
ಸಿಗದೆ ಹೋಯಿತವ್ವ ತಂಗಿ ಈ ಅಂಗಿ.
 
ಬುದ್ದಿಗೇಡಿಗಳಾಗಿ
ನಿದ್ದಿ ಕೆಡಿಸಿಕೊಂಡು
ಎದ್ದು ನೋಡಲು ಕರ್ಮದ
ಗುದ್ದಿನೊಳಡಗಿತ್ತವ್ವ ತಂಗಿ ಈ ಅಂಗಿ.
 
ಕಳೆದೆನೀಪರಿ ರಾತ್ರಿ
ಬೆಳಗಾಗೋ ಸಮಯದಿ
ಚೆಲುವ ಶಿಶುನಾಳಾಧೀಶನು
ಉಳುವಿ ಕೊಟ್ಯಾನವ್ವ ತಂಗಿ ಈ ಅಂಗಿ.

ನೋಡಿ[ಸಂಪಾದಿಸಿ]

ಶರೀಫ ಸಾಹಿತ್ಯ

ಉಲ್ಲೇಖ[ಸಂಪಾದಿಸಿ]

  • ಶಿಶುನಾಳ ಶರೀಫರ ಪದಗಳು -ಅನಾಮಿಕ