ಅನುಬಂಧ

ವಿಕಿಸೋರ್ಸ್ದಿಂದ
<ಪಂಪಭಾರತ

ಕಾವ್ಯದಲ್ಲಿರುವ ಐತಿಹಾಸಿಕ ಪ್ರಾಮುಖ್ಯ ಸಂಗತಿಗಳು[ಸಂಪಾದಿಸಿ]

  • ಪಂಪನು ತನ್ನ ಭಾರತದ ಪ್ರಾರಂಭದಲ್ಲಿ ತನ್ನ ಪೋಷಕನಾದ ಅರಿಕೇಸರಿಯ ವಂಶವೃಕ್ಷವನ್ನು ವಿಸ್ತಾರವಾಗಿ ಕೊಟ್ಟಿದ್ದಾನೆ. ಇದು ಐತಿಹಾಸಿಕ ದೃಷ್ಟಿಯಿಂದ ಬಹು ಉಪಯುಕ್ತವಾಗಿದೆ. ಅದರ ವಿವರ ಈ ರೀತಿ ಇದೆ.
  • ೧. ಯುದ್ಧಮಲ್ಲ-ಸಪಾದ ಲಕ್ಷ ರಾಜ್ಯವನ್ನು ಆಳುತ್ತಿದ್ದನು, ಪ್ರತಿದಿನವೂ ಐನೂರು ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
  • ೨. ಅರಿಕೇಸರಿ, ವೆಂಗಿಯ ಪ್ರಧಾನನೊಡನೆ ನಿರುಪಮರಾಜ್ಯವನ್ನು ಮುತ್ತಿದನು.
  • ೩. ನರಸಿಂಹ
  • ೪. ಭದ್ರದೇವ
  • ೫. ದುಗ್ಧಮಲ್ಲ- ಯುದ್ಧಮಲ್ಲ
  • ೬. ಬದ್ದೆಗ-ಭದ್ರದೇವ
  • ೪೨ ಕಾಳಗಗಳನ್ನು ಜಯಿಸಿದನು.
  • ಸೋಲದ ಗಂಡನೆಂಬ ಬಿರುದನ್ನುಳ್ಳವನು.
  • ಭೀಮನನ್ನು ನೀರಿನಲ್ಲಿ ನುಗ್ಗಿ ಹಿಡಿದನು.
  • ೭. ದುಗ್ಧಮಲ್ಲ (ಯುದ್ಧಮಲ್ಲ.)
  • ೮. ನರಸಿಂಹ- ಕಲಿನರಸಿಂಹ- ನರಸಿಂಹ- ನರಗ.
  • ಸುಭದ್ರ ಮುನಿಯ ಪ್ರತಿಬಿಂಬ
  • ಲಾಳನನ್ನು ಅಡಿಗೆರಗಿಸಿದನು
  • ಸಪ್ತಮಾಲದ ಮುಖ್ಯರನ್ನು ಸೋಲಿಸಿದನು
  • ಘೂರ್ಜರ ರಾಜ ಸೈನ್ಯವನ್ನು ಸೋಲಿಸಿ ಗಂಗಾ ಜಲದಲ್ಲಿ ಕುದುರೆಯನ್ನು ಮೀಯಿಸಿದನು.
  • ಮಹೀಪಾಲನನ್ನು ಓಡಿಸಿದನು
  • ಇವನ ಮಿತ್ರನಾದ ಸಂಗನನ್ನು ನಾಶಪಡಿಸಿದನು.
  • ಇವನ ಹೆಂಡತಿ ಜಾಕವ್ವೆ
  • ೯. ಅರಿಕೇಸರಿ- ಅರಿಗ- ಗೊಜ್ಜಿಗನಿಂದ ವಿಜಯಾದಿತ್ಯನನ್ನು ರಕ್ಷಿಸಿದ
  • ೧೦. ಬದ್ದೆಗ- ಅರಿಕೇಸರಿಯ ಹಿರಿಯ ಮಗ, ರಾಜಧಾನಿ ಗಂಗಾಧಾರಾ (ಯಶಸ್ತಿಲಕದಿಂದ) ಫ್ಲೀಟರು ಇದರಲ್ಲಿ ಉಕ್ತವಾಗಿರುವ ಕೆಲವು ಸಂಗತಿಗಳಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಸೂಚಿಸಿದ್ದಾರೆ. (vIಒಟಿoಔಓಟಿ ಈS oWಓ ಒIಒಟಓಟಿಓ ಔಟಿoಟಔoಟಿ) ಎಂಬ ಗ್ರಂಥದಲ್ಲಿ. ಅವುಗಳನ್ನು ಹೀಗೆ ಸಂಗ್ರಹಿಸಬಹುದು: ನರಸಿಂಹ ಭದ್ರದೇವರು ಏಕವ್ಯಕ್ತಿಗಳು- (ಮುಂದಿನ ಶಂಶೋಧನೆಯಿಂದ ಇದು ಸರಿಯಲ್ಲವೆಂದು ಸಿದ್ಧಾಂತವಾಗಿದೆ) ವಂಶವೃಕ್ಷದಲ್ಲಿ ಬರುವ ನರಸಿಂಹನು ಲಾಳನನ್ನು ಸೋಲಿಸಿದುದನ್ನು ಅವರು ಹೇಳಿಲ್ಲ. ಸಂಗನನ್ನು ಸೋಲಿಸಿದುದೂ ಅವರಿಂದ ಉಕ್ತವಾಗಿಲ್ಲ. ಆದರೆ ರೈಸರು ತಮ್ಮ ಪಂಪಭಾರತದ ಪೀಠಿಕೆಯ ನಾಲ್ಕನೆಯ ಪುಟದ ಅಡಿಟಿಪ್ಪಣಿಯಲ್ಲಿ ಇದನ್ನು ನಮೂದಿಸಿದ್ದಾರೆ. ಫ್ಲೀಟರು ಇವನ ಹೆಂಡತಿಯು ‘ಚಂದ್ರಾನನೆ’ ಎಂದು ಹೇಳುತ್ತಾರೆ. ರೈಸರು ‘ಜಾತವ್ವೆ’ ಎಂದಿದ್ದಾರೆ (ಪಂ.ಭಾ.ಪೀಠಿಕೆ). ರಾ. ನರಸಿಂಹಾಚಾರ್ಯರು ಜಾಕವ್ವೆ ಎಂದೇ ಹೇಳಿದ್ದಾರೆ. ಮೂಲದಲ್ಲಿ ಆ ಭಾಗವು ಉಕ್ತವಾಗಿದೆ. ಚಂದ್ರಾನನಾ ಎಂಬುದು ವಿಶೇಷಣವಿರಬಹುದು. ಅರಿಕೇಸರಿಯ ತಂದೆಯ ಹೆಸರು ಯುದ್ಧಮಲ್ಲನೆಂದು ಫ್ಲೀಟರು ಹೇಳುತ್ತಾರೆ. ಇದು ಸರಿಯಲ್ಲ. ಏಕೆಂದರೆ ಪಂಪಭಾರತ, ಪರಭಣಿ ತಾಮ್ರಶಾಸನ ವೇಮಲುವಾಡಶಾಸನಗಳಲ್ಲಿ ‘ನರಸಿಂಹ’ ಎಂದೇ ಹೇಳಿದೆ- ಬದ್ದೆಗನು ಅರಿಕೇಸರಿಯ ಮೊದಲನೆಯ ಮಗನೆಂದು ಸೋಮದೇವನು ತನ್ನ ‘ಯಶಸ್ತಿಲಕಚಂಪು’ವಿನಲ್ಲಿ ತಿಳಿಸಿದ್ದಾನೆ. ಆದುದರಿಂದ ಇವನಿಗೆ ಇನ್ನೂ ಇತರ ಮಕ್ಕಳಿದ್ದಿರಬಹುದೆಂದು ಊಹಿಸಲು ಅವಕಾಶವಿದೆ. ಆದರೆ ಪರಭಣಿಯ ತಾಮ್ರ ಶಾಸನದಲ್ಲಿ ಭದ್ರದೇವನು ಅರಿಕೇಸರಿಯ ಒಬ್ಬನೇ ಮಗನೆಂದು ಉಕ್ತವಾಗಿದೆ.
  • ಪಂಪಭಾರತದಲ್ಲಿ ಬರುವ ಚಾಳುಕ್ಯವಂಶವೃಕ್ಷಕ್ಕೆ ಒಂದನೇ ಅರಿಕೇಸರಿಯ ಕೊಲ್ಲೇಪಾರಾ ದಾನಪತ್ರವೂ ಎರಡನೆಯ ಅರಿಕೇಸರಿಯ ವೇಮಲವಾಡ ಶಿಲಾ ಲೇಖನವೂ ಮೂರನೆಯ ಅರಿಕೇಸರಿಯ ಪರಭಣಿ ತಾಮ್ರಶಾಸನವೂ ಉಪಷ್ಟಂಭಕವಾಗಿವೆ. ಇವುಗಳಲ್ಲಿರುವ ಈ ಭಾಗವನ್ನು ಮುಂದಿನ ರೀತಿಯಲ್ಲಿ ಚಿತ್ರಿಸಬಹುದು.
  • ಪರಭಣಿಯ ತಾಮ್ರಶಾಸನ
  • ಚಾಳುಕ್ಯವಂಶ (ಆದಿತ್ಯಭವ)
  • ೧. ಯುದ್ಧಮಲ್ಲ
  • ಸಪಾದಲಕ್ಷ ರಾಜ್ಯವನ್ನು ಆಳುತ್ತಿದ್ದನು.
  • ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
  • ಕಲಿಂಗತ್ರಯದೊಡನೆ ವೆಂಗಿಯನ್ನು ಸಂರಕ್ಷಿಸಿದನು.
  • ೨. ಅರಿಕೇಸರಿ
  • ೩. ನರಸಿಂಹ
  • ೪. ಭದ್ರದೇವ
  • ೫. ಯುದ್ಧಮಲ್ಲ
  • ೬. ಬದ್ದೆಗ
  • ಸಂಗಮನಿಗೆ ತೊಂದರೆ ಕೊಟ್ಟನು
  • ಭೀಮನನ್ನು ಜಲಯುದ್ಧದಲ್ಲಿ ಸೋಲಿಸಿದನು
  • ೭. ಯುದ್ಧಮಲ್ಲ
  • ೮. ನರಸಿಂಹ
  • ೯. ಅರಿಕೇಸರಿ- ಇವನ ಹೆಂಡತಿ ಪ್ರಖ್ಯಾತ ರಾಷ್ಟ್ರಕೂಟರ ಲೋಕಾಂಬಿಕೆ
  • ೧೦. ಭದ್ರದೇವ-ಬದ್ದೆಗ-ಶುಭದಾಮ ಜಿನಾಲಯವನ್ನು ಕಟ್ಟಿಸಿದನು
  • ೧೧. ಅರಿಕೇಸರಿ
  • ರಾಜಧಾನಿ ಲೆಂಬುಳಪಾಟಕ
  • ಸೋಮದೇವಸೂರಿಗೆ ದಾನ ಕೊಟ್ಟನು
  • ವೇಮಲವಾಡ ಶಿಲಾಶಾಸನ
  • ಚಾಲುಕ್ಯಕುಲ
  • ೧. ವಿನಯಾದಿತ್ಯ ಅಥವಾ ಯುದ್ಧಮಲ್ಲ
  • ಸಪಾದ ಲಕ್ಷ ರಾಜ್ಯವನ್ನು ಆಳುತ್ತಿದ್ದನು
  • ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
  • ಚಿತ್ರಕೂಟವನು ವಶಮಾಡಿಕೊಂಡನು.
  • ೨. ಅರಿಕೇಸರೀಶ-ಬಲದಿಂದ ವೆಂಗಿ ದೇಶವನ್ನು ತೆಗೆದುಕೊಂಡನು
  • ೩. ನರಸಿಂಹವರ್ಮ- ಅಥವಾ ರಾಜಾದಿತ್ಯ (?)
  • ೪. ಯುದ್ಧಮಲ್ಲ
  • ೫. ನರಸಿಂಹ ದೇವ-ಗುರ್ಜರಾಜ ಸೈನ್ಯವನ್ನು ಜಯಿಸಿದನು, ಏಳು ರಾಜರನ್ನು ಜಯಿಸಿದನು
  • ೬. ಅರಿಕೇಸರಿ-ಗೋವಿಂದ (ಗೊಜ್ಜಿಗ) ನಿಂದ ಬಿಜ್ಜನನ್ನು ರಕ್ಷಿಸಿದನು. ಹೆಂಡತಿ ರೇವಕ್ಕ (?)
  • ಕೊಲ್ಲೋಪಾರಾ ದಾನಪತ್ರ
  • ಚಾಳುಕ್ಯ ವಂಶ
  • ರಣವಿಕ್ರಮಸತ್ಯಾಶ್ರಯ ಪೃಥ್ವೀಪತಿ ಮಹಾರಾಜ ವಿನಯಾದಿತ್ಯ ಯುದ್ಧಮಲ್ಲ ಅರಿಕೇಸರಿ
  • ಮಧ್ಯಯುಗದ ಇತಿಹಾಸದಲ್ಲಿ ನಾಲ್ಕು ಚಾಲುಕ್ಯ ಕುಲಗಳಿದ್ದವು. ಒಂದನೆಯದು ಬಾದಾಮಿಯದು. ಎರಡನೆಯದು ಕಲ್ಯಾಣಿಯದು. ಮೂರನೆಯದು ವೆಂಗಿಯದು. ನಾಲ್ಕನೆಯದು ಪಂಪ ಮತ್ತು ಸೋಮದೇವರಿಂದ ಉಕ್ತವಾದುದು. ಇವುಗಳಲ್ಲಿ ಬಾದಾಮಿಯ ಚಾಳುಕ್ಯಕುಲದಿಂದ ವೆಂಗಿಯ ಚಾಳುಕ್ಯಕುಲವು ಉತ್ಪನ್ನವಾಯಿತು. ಕಲ್ಯಾಣಿಯ ಚಾಲುಕ್ಯರು ಬಾದಾಮಿಯ ಚಾಲುಕ್ಯರ ವಂಶಜರೆಂದು ತಾವೇ ಹೇಳಿಕೊಂಡಿದ್ದಾರೆ. ಬಾದಾಮಿಯ ಚಾಲುಕ್ಯರ ಕಾಲ ಮತ್ತು ಕಲ್ಯಾಣಿಯ ಚಾಲುಕ್ಯರ ಕಾಲಗಳಿಗೆ ಮಧ್ಯೆ ರಾಷ್ಟ್ರಕೂಟರು ಆಳಿದರು. ಈ ಎರಡು ಕುಲಗಳನ್ನು ಜೋಡಿಸಿದವನು ಯಾರು ಎಂಬುದು ನಿಶ್ಚಿತವಾಗಿ ತಿಳಿಯದಿದ್ದರೂ ಈ ಎರಡು ಕುಲಗಳಿಗೂ ಸಂಬಂಧವಿತ್ತೆಂದು ಹೇಳುವುದಕ್ಕೆ ಆಧಾರ ಸಿಗುತ್ತದೆ. ವೆಂಗಿಯೂ ಇವುಗಳ ಶಾಖೆಗೇ ಸೇರಿರಬಹುದು. ಇವರ ಸ್ಥಳವೂ ಲಕ್ಷ್ಮೀಶ್ವರಕ್ಕೆ ಅಕ್ಕಪಕ್ಕದಲ್ಲಿದ್ದಿರಬಹುದು.
  • ***********

(ಸಾಹಿತ್ಯ ಪರಿಷತ್ತು)

ಪಂಪಭಾರತ[ಸಂಪಾದಿಸಿ]

ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ನೋಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ

"https://kn.wikisource.org/w/index.php?title=ಅನುಬಂಧ&oldid=130730" ಇಂದ ಪಡೆಯಲ್ಪಟ್ಟಿದೆ