ಅಭಿ - ವಿಧಿ ಬರಹ

ವಿಕಿಸೋರ್ಸ್ದಿಂದ

ಚಿತ್ರ: ಅಭಿ

ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ಗುರುಕಿರಣ್
ಗಾಯನ: ಡಾ.ರಾಜ್ ಕುಮಾರ್


ವಿಧಿ ಬರಹ ಎಂತ ಘೋರ!
ಪ್ರೇಮಿಗಳು ದೂರ ದೂರ
ಹಸಿರಾಗೋ ಪ್ರೇಮ ಕಥೆಗೆ

ವಿಶವಾಗೋ ಜಗವು ಕ್ರೂರ!

ಬದುಕು ಪ್ರತಿ ಘಳಿಗೆ
ಒಲವ ಸುಳಿ ಓಳಗೆ
ಏಕೊ ಇಂತ ಸಮರ?!

ವಿಧಿ ಬರಹ ಎಂತ ಘೋರ!

ಪ್ರೇಮಿಗಳು ದೂರ ದೂರಾ... ಆ

ನೀನೆ ಜೀವ! ನೀನೆ ಭಾವ! ಅನ್ನೊ ಮಾತಿಗೆ
ಮಾತೂ ನೀಡಿ.. ಮನಸೂ ನೀಡಿ ಹಾಡೋ ಪ್ರೀತಿಗೆ!
ಸನಿಹ.. ವಿರಹ.. ಕಲಹ..
ಹಣೆಯಾ ಬರಹ!

ವಿಧಿ ಬರಹ ಎಂತ ಘೋರ!
ಪ್ರೇಮಿಗಳು ದೂರ ದೂರ
ಹಸಿರಾಗೋ ಪ್ರೇಮ ಕಥೆಗೆ
ವಿಶವಾಗೋ ಜಗವು ಕ್ರೂರ!

ನೋವು ನಲಿವು, ಸೋಲು ಗೆಲುವು ಉಂಟೂ ಪ್ರೀತಿಗೆ
ಯಾರೋ ಬಂದು.. ಯಾರೊ ಬಳಗ ಬಾಳ ಪಯಣಕೆ!

ಕನಸೊ.. ಭ್ರಮೆಯೋ.. ಜಗವೇ.. ಕುರುಡಾಗಿದೆ!

ವಿಧಿ ಬರಹ ಎಂತ ಘೋರ!
ಪ್ರೇಮಿಗಳು ದೂರ ದೂರ
ಹಸಿರಾಗೋ ಪ್ರೇಮ ಕಥೆಗೆ
ವಿಶವಾಗೋ ಜಗವು ಕ್ರೂರ!

ಬದುಕು ಪ್ರತಿ ಘಳಿಗೆ
ಒಲವ ಸುಳಿ ಓಳಗೆ
ಏಕೊ ಇಂತ ಸಮರ?!

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ