ಅರುಣ ರಾಗ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಚಿತ್ರದ ವಿವರ[ಸಂಪಾದಿಸಿ]

 • ಬಿಡುಗಡೆಯಾದ ವರ್ಷ : 1986
 • ತಾರಾಗಣ : ಅನಂತನಾಗ್, ಗೀತಾ
 • ಸಾಹಿತ್ಯ :
 • ಸಂಗೀತ : ಎಂ ರಂಗರಾವ್
 • ಹಿನ್ನೆಲೆ ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ
 • ನಿರ್ದೇಶನ : ಕೆ ವಿ ಜಯರಾಂ
 • ನಿರ್ಮಾಣ : ಮೀನಾಕ್ಷಿ

ಹಾಡುಗಳು[ಸಂಪಾದಿಸಿ]

ಅರುಣ ರಾಗ - ನಾನೊಂದು ತೀರ

{{ಚಿತ್ರ: ಅರುಣ ರಾಗ ಸಂಗೀತ : ಎಂ ರಂಗರಾವ್ ಗಾಯನ : ಕೆ.ಜೆ. ಯೇಸುದಾಸ್, ಕೆ.ಎಸ್. ಚಿತ್ರಾ ಸಾಹಿತ್ಯ : ದೊಡ್ಡರಂಗೇಗೌಡ }}


                                              ನಾನೊಂದು ತೀರ ನೀನೊಂದು ತೀರ

ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರಾ ಪ್ರೀತಿ ಹೃದಯ ಭಾರ

ಹೂವು ಚೆಲುವಾಗಿ ಅರಳಿ ದುಂಬಿ ಸೆಳೆಯೋದು ಸಹಜ ಹೆಣ್ಣು ಸೊಗಸಾಗಿ ಬೆಳೆದು ಗಂಡು ಬಯಸೋದು ಸಹಜ ಹೀಗೇಕೆ ನಿನಗೆ ಏಕಾಂಗಿ ಬದುಕು ಹೀಗೇಕೆ ನಿನಗೆ ಏಕಾಂಗಿ ಬದುಕು ಸಂಗಾತಿ ಇರದೆ ಬಾಳೆಲ್ಲ ಬರಿದು

                                              ಭೂಮಿ ಆಕಾಶ ಸೇರಿ ಕಲೆತು ಕೂಡೋದು ಉಂಟೆ ?

ಕಡಲು ತಾನಾಗಿ ಹರಿದು ನದಿಗೆ ಸೇರೋದು ಉಂಟೆ? ಚೂರಾದ ಹೃದಯ ಮತ್ತೊಮ್ಮೆ ಮಿಡಿದು ಚೂರಾದ ಹೃದಯ ಮತ್ತೊಮ್ಮೆ ಮಿಡಿದು ಜೀವಂತ ಬದುಕಿ ಸಂಬಂಧ ತರದು

                                 ನಾನೊಂದು ತೀರ ನೀನೊಂದು ತೀರ

ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರಾ ಪ್ರೀತಿ ಹೃದಯ ಭಾರ