ಅರುಣ ರಾಗ - ನಡೆದಾಡೊ ಕಾಮನಬಿಲ್ಲೆ

ವಿಕಿಸೋರ್ಸ್ ಇಂದ
Jump to navigation Jump to search

ಚಿತ್ರ: ಅರುಣ ರಾಗ
ಸಂಗೀತ : ಎಂ ರಂಗರಾವ್
ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ
ಸಾಹಿತ್ಯ : ದೊಡ್ಡರಂಗೇಗೌಡನಡೆದಾಡೊ ಕಾಮನಬಿಲ್ಲೆ, ಹರಿದಾಡೊ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ, ಭುವಿಗಿಳಿದ ಹುಣ್ಣಿಮೆ ಹೊನಲೆ
ನೀನೆಂದಿಗೂ ನನ್ನ ಬಾಳಿಗೆ, ಆನಂದದಾ ಅರುಣ ರಾಗ
ಅರುಣ ರಾಗ, ಅರುಣ ರಾಗ

ಮೀನಿನ ನಯನ, ಹವಳದ ತುಟಿಯ ಪಡೆದಿಹ ರೂಪಸಿ
ಸಂಪಿಗೆ ಮೂಗು, ಕಬ್ಬಿನ ಹುಬ್ಬು ಹೊಂದಿದ ಷೋಡಷಿ || -೨
ನಿನ್ನ ನುಡಿ ಪ್ರೀತಿ ಮುಡಿ ಆಸೆ ಚಿಮ್ಮಿ ಹೊಮ್ಮಿದೆ
ನೀನೆಂದಿಗೂ ನನ್ನ ಬಾಳಿಗೆ, ಆನಂದದಾ ಅರುಣ ರಾಗ
ಅರುಣ ರಾಗ, ಅರುಣ ರಾಗ

ನಡೆದಾಡೊ ಕಾಮನಬಿಲ್ಲೆ, ಹರಿದಾಡೊ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ, ಭುವಿಗಿಳಿದ ಹುಣ್ಣಿಮೆ ಹೊನಲೆ
ನೀನೆಂದಿಗೂ ನನ್ನ ಬಾಳಿಗೆ, ಆನಂದದಾ ಅರುಣ ರಾಗ
ಅರುಣ ರಾಗ, ಅರುಣ ರಾಗ

ದಂತದ ಮೈಯ ಮಲ್ಲಿಗೆ ನಗೆಯ ಅಂದದ ಊರ್ವಶಿ
ಮೇಘದ ಕುರುಳ ಕೋಗಿಲೆ ಕಂಠ ಗಳಿಸಿದ ಪ್ರೆಯಸಿ || -೨
ನಿನ್ನ ರೂಪು ಕಣ್ಣ ತುಂಬಿ ಸ್ನೇಹ ಸಂಘ ಬೇಡಿದೆ
ನೀನೆಂದಿಗೂ ನನ್ನ ಬಾಳಿಗೆ, ಆನಂದದಾ ಅರುಣ ರಾಗ
ಅರುಣ ರಾಗ, ಅರುಣ ರಾಗ

ನಡೆದಾಡೊ ಕಾಮನಬಿಲ್ಲೆ, ಹರಿದಾಡೊ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ, ಭುವಿಗಿಳಿದ ಹುಣ್ಣಿಮೆ ಹೊನಲೆ
ನೀನೆಂದಿಗೂ ನನ್ನ ಬಾಳಿಗೆ, ಆನಂದದಾ ಅರುಣ ರಾಗ
ಅರುಣ ರಾಗ, ಅರುಣ ರಾಗ