ವಿಷಯಕ್ಕೆ ಹೋಗು

ಆಯತಲಿಂಗ ಸಂಬಂಧವಿಲ್ಲದಾತ ಅಂಗಭವಿ;

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆಯತಲಿಂಗ ಸಂಬಂಧವಿಲ್ಲದಾತ ಅಂಗಭವಿ; ಸ್ವಾಯತಲಿಂಗ ಸಂಬಂಧವಿಲ್ಲದಾತ ಮನಭವಿ; ಸನ್ನಿಹಿತಲಿಂಗವ ಸಂಬಂಧವಿಲ್ಲದಾತ ಆತ್ಮಭವಿ; ಇದು ಕಾರಣ
ಆಯತಲಿಂಗವ ಅಂಗದಲ್ಲಿ ಅಳವಡಿಸಿ
ಸ್ವಾಯತಲಿಂಗವ ಮನದಲ್ಲಿ ಅಳವಡಿಸಿ ಸನ್ನಿಹಿತಲಿಂಗವ ಆತ್ಮನಲ್ಲಿ ಅಳವಡಿಸಿ ಅಂಗಮನಪ್ರಾಣದಲ್ಲಿ ಲಿಂಗವ ಧರಿಸಿ ಹೆರೆಹಿಂಗದಿರ್ದೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.