ಇಂದ್ರವಜ್ರ
ಇಂದ್ರವಜ್ರ
| "ಇಂದ್ರವಜ" | ೧ | |
| "ವಿಕ್ರಮಪೀಠ" | ೯ | |
| "ಸಸೇಮಿರಾ?" | ೫೯ |
ಗ್ರಂಥಸಂಖ್ಯೆ ೫
ಬೆಂಗಳೂರು:
'ಸುಮತಿ ಗ್ರಂಥಮಾಲಾ' ಅನೀಸ್,
೧೯೧೨.
ಈ ಪುಸ್ತಕದ ಶೈಲಿಯು "ಬೆಕ್ಕೊಜಿ"ಯ ಶೈಲಿಗಿಂತಲೂ ಸ್ವಲ್ಪ ಪ್ರೌಢವಾಗಿ ಕಾಣಬಹುದು, ಆದರೆ ಈ ಮೂಲಕ ಬಾಲ ವಾಚಕರ ಭಾಷಾಜ್ಞಾನವು ಹೆಚ್ಚಬಹುದೆಂದು ಲೇಖಕನ ಉದ್ದೇಶ.
ಕಥೆಗಳಿಗೆ ಅಲ್ಲಲ್ಲಿ ಚರಿತ್ರೆಯ ಸಂಬಂಧವಿರುವುದಾದರೂ, ಅವುಗಳೆಲ್ಲವೂ ಕೇವಲ ಇತಿಹಾಸವೇ ಎಂದು ಹೇಳಲಾಗುವುದಿಲ್ಲ.
ಅಲ್ಲಲ್ಲಿ ಚಿತ್ರಗಳನ್ನು ಇನ್ನೂ ಹೆಚ್ಚಾಗಿ ಸೆರಿಸಬಹುದಾಗಿತ್ತು; ಆದರೆ ಗ್ರಂಥವು ವಿಸ್ತಾರವಾಗಿ ಬೆಲೆ ಹೆಚ್ಚುವುದೆಂಬ ಭೀತಿಯಿಂದ ಹಾಗೆ ಮಾಡಲು ಆಗಲಿಲ್ಲ.
ಕನ್ನಡನಾಡಿನ ಮಹಾಜನರು ಈ ಪುಸ್ತಕಕ್ಕೆ ಆಶ್ರಯ ಕೊಟ್ಟರೆ, ಈಗ ಇರಬಹುದಾದ ಎಲ್ಲಾ ತಪ್ಪುಗಳನ್ನೂ ದ್ವಿತೀಯ ಮುದ್ರಣದಲ್ಲಿ ತಿದ್ದಿ, ಅದನ್ನು ಎಲ್ಲಾ ವಿಧಗಳಲ್ಲಿಯೂ ಉತ್ತಮ ಗೊಳಿಸಬಹುದು.
ಜನವರಿ, ೧೯೧೨.
ಇಂದ್ರವಜ್ರ.
ನಮ್ಮ ಭರತಖಂಡದ ಉತ್ತರದಿಕ್ಕಿನಲ್ಲಿ ಹಿಮಾಲ ಯನೆಂಬ ಬಲು ಎತ್ತರವಾದ ಬೆಟ್ಟದ ಸಾಲು ಇರುವುದಲ್ಲವೆ? ಆ ಬೆಟ್ಟಗಳ ನಡುವೆ ಈಗ ದೇವದ್ಯಾರ ವೆಂಬ ಹಳ್ಳಿಯೊಂದಿರುವುದು. ಅದಕ್ಕೆ ಕೊಂಚ ದೂರ ದಲ್ಲಿ ರಾಮಗಂಗಾನದಿಯು ಹರಿಯುತ್ತಿರುವುದು. ಆ ಹಳ್ಳಿಯಲ್ಲಿ ಎಷ್ಟೋ ವರ್ಷಗಳ ಹಿಂದೆ ಒಬ್ಬ ಬಡಮು ದುಕಿಯೂ ಅವಳ ಎಳೆಯಮಗನೂ ವಾಸಮಾಡುತ್ತಿದ್ದರು. ಅವರಿಗ ಕೀಳುತರದ ಭೂಮಿ ಸಲ್ಪ ವಿತ್ತು. ಅದನ್ನು ಅವರು ಬೇಸಾಯಮಾಡಿ ಜೀವಿಸುತ್ತಿದ್ದರು. ಆದರೂ ಅವರಿಗೆ ಕಷ್ಟ, ಹೆಚ್ಚು, ಫಲಕಡಿಮೆ; ಏಕಂದರೆ ಅವರಿಗೆ ವ್ಯವಸಾಯಕ್ಕೆ ಬೇಕಾದ ಜನಸಹಾಯವಾಗಲಿ ಇತರ ಅನುಕೂಲಗಳಾಗಲಿ ಇರಲಿಲ್ಲ. ಆದರೂ ಆ ಬಡಮುದುಕಿಗೆ ಮಾನದ ಮೇಲೆ ತುಂಬಾ ದೃಷ್ಟಿ; ಯಾವ ಉಪಕಾರವನ್ನೂ ಕೇಳಳು, ಯಾರ ಸಹಾಯವನ್ನೂ ಬಯಸಳು. ಅವಳ ಮಗನು ಅರೆಹೋ ಟ್ಟಿಗೆತಿಂದು, ಅರೆಮೈಗೆ ಹೊದ್ದು, ಬಡತನದಲ್ಲಿಯೇ ಬೆಳೆದನು.
ಒಂದು ಸಲ ಆಪ್ರಾಂತ ತಕ್ಕಷ್ಟು ಮಳೆ ಬೀಳದೆ ಕ್ಷಾಮ ಬಂದಿತು. ನೆಲದಲ್ಲಿ ಬಿತ್ತಿದ್ದ ಧಾನ್ಯಗಳನ್ನು 2
ನೆಲವೇ ತಿಂದು ಬಿಟ್ಟಿತು,_ಅವು ಮೊಳೆಯಲೇ ಇಲ್ಲ. ಮುದುಕಿಯು ಹಿಂದಿನ ವರ್ಷ ಸೇರಿಸಿಟ್ಟಿದ್ದ ಕಾಳು ಕಡ್ಡಿಯೆಲ್ಲವೂ ಚಳಿಗಾಲದ ವೇಳೆಗೇ ಮುಗಿದು ಹೋಯಿತು. ಇನ್ನು ಅವಳೂ ಅವಳ ಮಗನೂ ತಿನ್ನುವು ದೇನು? ಸೊಪ್ಪುಸೊದೆ ಕೂಡ ದೊರೆಯದು, ಮಾಡುವುದೇನು?__'ಉಪವಾಸವೊಂದೇ, ಮುದುಕಿಯು ಅದನ್ನೇ ಮಾಡಲು ಪ್ರಾರಂಭಿಸಿ, ಮಗನಿಗೆ ಮಾತ್ರ ಏ ನೇನೋ ಸಾಹಸದಿಂದ ಸಲ್ಪ ಗಂಜಿಮಾಡಿ ಹಾಕುತ್ತಿದ್ದಳು. ಎಷ್ಟು ದಿನ ತಾನೇ ಉಪವಾಸ ಮಾಡಲಾಗು ವುದು? ಅವಳಿಗೂ ಕಡೆಗಾಲವು ಸಮೀಪಿಸಿತು. ಅದ ಇವಳು ತಿಳಿದುಕೊಂಡು, ಮಗನಾದ ಪೃಥಿಪಾಲನನ್ನು ಬಳಿಗೆ ಕರೆದು, ಕುಳ್ಳಿರಿಸಿ, ಮುದ್ದಿಟ್ಟು, ಮೈದಡವಿ, ಹೀಗೆಂದಳು:__
ಕಂದ, ನಾನು ಹೇಳುವುದ ಕೇಳು, ಯಮಭಟರು ಬಂದು ನನ್ನನ್ನು ಕರೆಯುತ್ತಿರುವರು. ಅವರು ನನ್ನನ್ನು ಎಳೆದು ಕೊಂಡರಲ್ಲಿ ಹೋಗುವಷ್ಟರೊಳಗಾಗಿ ಒಂದು ವಿಷಯವನ್ನು ಹೇಳುವೆನು. ಅದನ್ನು ಈ ಹನ್ನೆರಡು ವರ್ಷಗಳಿಂದ ನಿನಗೆ ಹೇಳದೆ ಗುಟ್ಟಾಗಿಟ್ಟಿದ್ದೆನು. ಈಗ ಬಿಚ್ಚಿ ಹೇಳಬೇಕಾದಕಾಲ ಬಂದಿದೆ, ಕೇಳು....
ರಾಮಗಂಗೆಯ ಆಚೆಯದಡದಲ್ಲಿ ಪೂರ್ವದಲ್ಲಿ ಒಬ್ಬ ಮಹಾರಾಜನು ರಾಜ್ಯವಾಳುತ್ತಿದ್ದನು. ಆತನು ಚಂದ್ರ ವಂಶದವನು. ಆತನು ದೇವರ ಕೃಪೆಗೂ ಪ್ರಜೆಗಳ ವಿಶ್ವಾಸಕ್ಕೂ ಪಾತ್ರನಾಗಿದ್ದನು. ಆತನು ಕಟ್ಟಿಸಿದ 3
ಅನೇಕ ದೇವಸ್ಥಾನಗಳೂ ಧರ್ಮಸತ್ರಗಳೂ ಆತನ ಔದಾರ್ಯವನ್ನು ಹೊಗಳುತ್ತಿವೆ. ಕಾಲಕ್ರಮದಲ್ಲಿ ಆ ಮಾರಾಯನು ಈ ಲೋಕವನ್ನು ಬಿಟ್ಟನು. ಆಗ ಆತನ ಧರ್ಮಪತ್ನಿಯು ಗರ್ಭವನ್ನು ಧರಿಸಿದ್ದಳು.ಪುರಾತನ ಸಂಪ್ರದಾಯದಂತೆ, ಆತನ ಸಿಂಹಾಸನಕ್ಕೆ ಆತನ ಮಗನೇ ಬಾಧ್ಯನಾಗಿದ್ದ ಕಾರಣ, ಜನರು ಆತನ ಪಟ್ಟದ ರನಿಯ ಬಸಿರಲ್ಲಿದ್ದ ಮಗುವನ್ನು ರಾಜನೆಂದೆಣಿಸಿ, ಆಕೆಯು ಹೆತ್ತಮೇಲೆ ಅದನ್ನು ಗಾದಿಯ ಮೇಲೆ ಕೂಡಿಸ ಬೇಕೆಂದು ನಿಶ್ಚಯಿಸಿದರು.
"ಆದರೆ ಆರಾಜನಿಗೆ ಬಲುದುಷ್ಟನಾದ ಒಬ್ಬ ತಮ್ಮನಿದ್ದನು, ಅವನು ರಾಜ್ಯವನ್ನ ಪಹರಿಸಬೇಕೆಂದು ಚಿಂತಿಸಿ, ಕೆಲವು ಕೆಟ್ಟ ಜನರ ಸಹಾಯದಿಂದ ತನ್ನ ಅತ್ತಿಗೆಯನ್ನು ಬಲುವಿಧವಾಗಿ ಕಾಡಿಸಿ, ಕಾಡಿಗೆ ಅಟ್ಟಿದನು
"ಅಯ್ಯೋ ಪಾಪ! ಆಕೆಯು ಮಹಾರಾಣಿ; ಅದರಲ್ಲಿಯೂ ಬಸುರಿ; ಎಂದೂ ನಡೆದವಳಲ್ಲ; ಕಷ್ಟಪಟ್ಟವಳಲ್ಲ, ಅಂತಹವಳಿಗೆ ಈಗ ಕಲ್ಲು ಮುಳ್ಳುಗಳಮೇಲೆ ನಡೆದು, ಎಲೆ ಕಾಯಿಗಳನ್ನು ತಿನ್ನುವಗತಿ ಬಂದಿತು....
"ಹೀಗಿರಲಾಗಿ, ಒಂದಾನೊಂದು ದಿನ ಅವಳೊಂದು ಕಡೆ ಜ್ಞಾನ ವಿಲ್ಲದೆ ಬಿದ್ದಿದ್ದಳು; ಅವಳ ಪಕ್ಕದಲ್ಲಿ ಆಗತಾನೆ ಹುಟ್ಟಿದ ಕೂಸೊಂದು ಬಿದ್ದಿತ್ತು. ಅದನ್ನಾರೋ ಆದಾರಿಯಲ್ಲಿ ಹೋಗುತ್ತಿದ್ದವರು ಕಂಡು, ಅವರನ್ನು ಪಕ್ಕದಲ್ಲಿದ್ದ ಗ್ರಾಮಕ್ಕೆ ಕರೆದುಕ್ಕೊಂಡುಹೋಗಿ 4
ಪೋಪಿಸಿದರು. ಆ ಮಾರಾಯನಹೆಂಡತಿಯು ಅನಂತರ ಆ ಊರಿನಲ್ಲಿಯೇ ಇದ್ದುಕೊಂಡು, ಅಲ್ಲಿ ಒಂದು ಸಣ್ಣ ತೋಟವನ್ನು ಹಾಕಿಕೊಂಡು, ಬಹಳ ದುಃಖದಿಂದಲೂ ಕಷ್ಟದಿಂದಲೂ ಬಾಳುತ್ತಿದ್ದಳು. ಅವಳಿಗೂ ಕಡೆಗಾಲ ಬಂದಿತು? ಆಗ ಅವಳಿಗೆ ತನ್ನ ಮಗನಿಗೆ ನ್ಯಾಯವಾಗಿ ಬರಬೇಕಾಗಿದ್ದ ಸಿಂಹಾಸನಾಧಿಕಾರವು. ದೊರೆಯಲಿಲ್ಲವಲ್ಲಾ! ಎಂದು ಬಲು ಸಂಕಟವಾಯಿತು....? ಹೀಗೆಂದು, ಕಥೆಹೇಳುತ್ತಿದ್ದವಳು ಅಳತೊಡಗಿದಳು.
"ಅಮ್ಮಾ, ಆಮೇಲೇನಾಯಿತು?
"ಮಗು, ನನಗೆ ತಿಳಿಯದು..?
"ಅಮ್ಮಾ, ಈಗ ಆ ತಾಯಿ ಮಕ್ಕಳೆಲ್ಲಿರುವರು?"!
"ಮಗು, ಇನ್ನೂ ಹತ್ತರಬಾ.-ನಾನೇನ ಹೇಳಲಿ. ಆ ನಿರ್ಭಾಗ್ಯಳೇ ನಾನು, ಆರತ್ನವೇ ನೀನು"?
ಹೀಗೆ ಉಸುರಿ ಅವಳು ಪ್ರಾಣ ಬಿಟ್ಟಳು.
ಪ್ರಪಂಚವನ್ನ ರಿಯದ ಎಳೆಯ ಹುಡುಗನಾದಾ ಪೃಥ್ಯಾಪಾಲನು, ಆ ಸ್ಥಳವನ್ನು ಆಗಲೇ ಬಿಟ್ಟು, ಹಸಿ ವಿನಿಂದಕಂಗೆಟ್ಟು, ಭಯದಿಂದ ಬುದ್ದಿ ಗೆಟ್ಟು, ಚಳಿ ಯಿಂದ ನಡನಡುಗುತ್ತಾ ಎಲ್ಲಿಗೆ ಹೊರಟು ಹೋದನು.
***
ಕಗ್ಗತ್ತಲೆ, ಅದರಲ್ಲಿ ವಿಪರೀತ ಮಂಜ, ಅದರ ಮೇಲೆ ಬಿರುಗಾಳಿ, ಇಂತಹ ಹೊತ್ತಿನಲ್ಲಿ ದೇವದ್ಯಾರದ ಬಳಿ ಪೃಥಿಪಾಲನು ನಿಶ್ಯಕ್ತನಾಗಿ ಬಿದ್ದಿದ್ದನು, ಅವ 5
ನಿಗೆ ಯಾವುದೂ ಗೊತ್ತಾಗಲಿಲ್ಲ. ಅವನ ಮನಸ್ಸು ಮಾತ್ರ ತನ್ನ ತಾಯಿಯದುರವಸ್ಥೆಯನ್ನೂ, ತನ್ನ ಚಿಕ್ಕಪ್ಪನ ಅನ್ಯಾಯವನ್ನೂ ಕುರಿತ ಯೋಚಿಸುತಲಿತ್ತು. ಹಾಗೆ ಯೋಚಿಸುತ್ತಾ, ತನ್ನ ದುರ್ದೈವವನ್ನು ಬೈಯುತ್ತಾ ಇರಲು, ಅವನ ಕಣ್ಣಿಗೆ ನಿದ್ದೆ ಹತ್ತಿತು. ಸ್ವಲ್ಪ ಹೊತ್ತಿನ ಮೇಲೆ ಅವನು ನಿದ್ದೆಯಲ್ಲಿಯೇ ಇರುವಾಗ, ಯಾರೋ ಬಂದು ಬಲುವಿಶ್ವಾಸದಿಂದ ಅವನನ್ನೆತ್ತಿ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು, ಬಲುಸವಿಯಾದ ತಿಂಡಿಯನ್ನವನಿಗೆ ಕೊಟ್ಟರು. ಅದನ್ನವನು ತಿಂದೊಡನೆಯೆ ಅವನ ಹಸಿವು ಬಾಯಾರಿಕೆಗಳೆಲ್ಲವೂ ಮಾಯವಾದುವು. ಹಾಗೆಯೇ ಯಾರೋ ಅವನ ಕೈಮೈಗಗಳನ್ನೂ ಕಣ್ಣು ತಲೆಗಳನ್ನ ಸವರಲು ಅವನು ನಿರಾಯಾಸನಾದನು, ಅವನಿಗೆ ಅದು ಯಾರೆಂಬುದೂ ತಿಳಿಯಲಿಲ್ಲ. ಕಣ್ಣ ರೆಪ್ಪೆಗಳು ಗಟ್ಟಿಯಾಗಿ ಮುಚ್ಚಿಕೊಂಡಿದ್ದ ಕಾರಣ ಅವನು ಕಣ್ಣೆರೆಯಲಾಗಲಿಲ್ಲ. ಅದೆಲ್ಲವೂ ಕನಸೆಂದು ಅವನು ತಿಳಿದುಕೊಂಡನು.
ಕೆಲವು ನಿಮಿಷಗಳ ಮೇಲೆ ಅವನು ಮೇಲಕ್ಕೇಳಲು ಯತ್ನಿಸಿದನು. ಆಗ ಅವನ ಕೈಗೆ ಏನೋಸಿಕ್ಕಿತು. ಅದನ್ನವನು ಹಾಗೆಯೇ ಕಣ್ಣುಗಳ ಬಳಿಗೆ ತೆಗೆದು ಕೊಂಡು ಹೋಗಲು ಅವನಿಗಿರಿಗೆ ದೊಡ್ಡ ಬೆಳಕು ಬಂದ ಹಾಗಾಯಿತು, ಅವನು ಕೈಯಲ್ಲಿದ್ದುದನ್ನು ಚೆನ್ನಾಗಿ ಸವರಿನೋಡಿ, ಅದಾವುದೋ ಒಡವೆಯಾಗಿರಬಹುದೆಂದು ಊಹಿಸಿದನು. ಹಾಗೆ ಊಹಿಸಿ, "ನನಗಿದು 6
ನಿಜವಾಗಿಯೂ ಸಿಕ್ಕಿದರೆ ಇದನ್ನು ಮಾರಿ ನನ್ನ ದಾರಿ ದ್ರವ್ಯವನ್ನು ಮರೆತೇನ!" ಎಂದುಕ್ಕೊಂಡನು.
ಹಾಗಂದುಕ್ಕೊಂಡ ಕೂಡಲೇ ಅವನ ಕಣ್ಣುಗಳು ತೆರೆಯಲಾದವು, ನೋಡಲು, ಅಲ್ಲಿ ಯಾರೂ ಇರಲಿಲ್ಲ ಅವನಿಗೆ ಕಷ್ಟಗಳೆಲ್ಲವೂ ತೀರಿ, ಬಲು ಆನಂದವಾಗಿತ್ತು. ಏನಹೇಳುವುದಕ್ಕೂ ಅವನಿಗೆ ಬಾಯೇಬಾರದು. ಇದೆಲ್ಲವು ಕನಸಿರಬಹುದೆಂದು ಅವನ ಪುನಃ ಅಂದುಕ್ಕೊಂಡನು. ಅವನ ಕೈಯಲ್ಲಿ ಮಹಾಕಾಂತಿಯುಕ್ತವಾದ ವಜ್ರದ ಪದಕವೊಂದಿತ್ತು.
7
***
ಆದಿನ ಬೆಳಗಿನ ಝಾವದಲ್ಲಿ ಆವೂರಿನ ಪುರೋಹಿ ತನು ಒಂದು ಕನಸ ಕಂಡನು, ಅದರಲ್ಲಿ ಮಹಾತೋ ಜೋವತಿಯಾದ ಹೆಂಗಸೊಬ್ಬಳು ಕಾಣಿಸಿ. ಪೃಥ್ವಿಪಾಲನ ಪೂರ್ವಕಥೆಯನ್ನು ತಿಳಿಸಿ, ಹೀಗೆ ಹೇಳಿದಳು: "ನಾನು ಸಕಲ ಜೀವಗಳನ್ನೂ ಸಾಕಿ ಸಲಹುವ ಅನ್ನ ಪೂರ್ಣೆ, ಬಡಹುಡುಗನಾದ ಪೃಥ್ವಿಪಾಲನ ಕಷ್ಟವನ್ನು ಹೋಗಲಾಡಿಸುದಕ್ಕಾಗಿ ನಾನು ಪಕ್ಕದಲ್ಲಿರುವ ಅಡವಿಗೆ ಬಂದ ಅವನಿಗೆ ಉಪಚರಿಸಿದೆನು, ಆಗ ಇಂದ್ರನು ನನಗೆ ಕಾಣಿಕೆಯಾಗಿ ಕೊಟ್ಟಿದ್ದ ವಜ್ರದ ಸರವನ್ನು ಕೊರಳಿನಲ್ಲಿ ಹಾಕಿಕೊಂಡಿದ್ದೆನು. ಅದರ ಪದಕವು ಪೃಥ್ವಿಪಾಲನ ಕೈಗೆ ಸಿಕ್ಕಲು ಅದನ್ನವನು ಬಲುವಾಗಿ ಬಯಸಿದನು, ನಾನು ಅದನ್ನವನಿಗೆ ಕೊಟ್ಟು ಬಿಟ್ಟೆನು, ಆದರೆ ತಾನು ನನಗೆ ಕೊಟ್ಟ ಆಭರಣವನ್ನು ನಾನು ಮನುಷ್ಯ ಮಾತ್ರನಿಗೆ ಕೊಟ್ಟೆನೆಂದು ಇಂದ್ರನು ಕೋಪಗೊಂಡು, ಸಿಡಿಲಿನಿಂದ ಪೃಥ್ವಿಪಾಲನನ್ನೂ ಆ ಆಭರಣವನ್ನೂ ಭೂಮಿಯೊಳಕ್ಕೆ ತಳ್ಳಿಸಿರುವನು ಆ ಬಾಲಕನಿಗೆ ನಾನು ಸದ್ಗತಿಕೆಡುವೆನು. ಅವನ ಮೇಲೆ ಸಿಡಿಲು ಬಡಿದ ಸ್ಥಳದಲ್ಲಿ ನೀವು ನನ್ನ ಮೂರ್ತಿಯನ್ನು ಪ್ರತಿಷ್ಠೆ ಮಾಡಿ 'ಪೂಜಿಸಿರಿ. ನಾನು ಅಲ್ಲಿ ನಂದಾದೇವಿಯೆಂಬ ಹೆಸರಿನಿಂದ ಪ್ರಸಿದ್ದಳಾಗಿ ಆ ನಿರಪರಾಧಿ ಪೃಥ್ವಿಪಾಲನಂತೆ ಕಷ್ಟ ಪಡುವವರ ಅಭೀಷ್ಠಗಳನ್ನು ನೆರವೇರಿಸಿ ಕೊಡುವೆನು." 8
ಹೀಗೆ ಹೇಳಿ ಅನ್ನಪೂರ್ಣೆಯು ಅಗೋಚರಳಾದಳು.
ಆ ಕಾಲದ ಜನರಿಗೆ ಇಂತಹ ಸ್ವಪ್ನಗಳಲ್ಲಿ ವಿಶೇಷ ನಂಬುಗೆಯಿತ್ತು. ಅವರ ಸಹಾಯದಿಂದ ದೇವದ್ವಾರದ ಪುರೋಹಿತನು ದೇವತಾಲಯವನ್ನು ಕಟ್ಟಿಸಿ ನಂದಾ ದೇವಿಯನ್ನು ಪ್ರತಿಷ್ಠಿಸಿದನು.ಅವನು ಸಾಯುವಾಗ ಆ ಊರಿನ ಮುಖಂಡನೊಬ್ಬನನ್ನು ಕರೆಸಿ ಅವನೊಡನೆ, ಪೃಥ್ವಿಪಾಲನು ಆವೂರಿನಲ್ಲಿಯೇ ಪುನಃ ಹುಟ್ಟುವನೆಂ ದೂ, ಅವನು ನಂದಾದೇವಿಯ ಜಾತ್ರೆಯದಿನ ಆಸ್ಥಳ ದಲ್ಲಿ ಅಗೆದರೆ ಆ ವಜ್ರಾಭರಣವು ದೊರಕುವುದೆಂದೂ, ಅವನೇ ರಾಮಗಂಗಾನದಿಯ ಮತ್ತೊಂದುದಡದಲ್ಲಿ ರುವ ರಾಜ್ಯಕ್ಕೆ ಅರಸಾಗುವನೆಂದೂ ಹೇಳಿದನು.
ಅವನ ಮಾತಿನಂತೆಯೇ ಈಗಲೂ ವರ್ಷಕ್ಕೆಂದಾ ವರ್ತಿ ದೇವದ್ವಾರದ ಬಳಿ ನಂದಾದೇವಿಯ ಪರಿಪೆ ಜರ ಗುವದು.
ಆಗ ಸುತ್ತುಮುತ್ತಲ ಹಳ್ಳಿಗಳವರು ಅಲ್ಲಿಗೆ ಗುಂಪು ಗುಂಪಾಗಿ ಬರುವರು ಅವರ ಹುಡುಗರಲ್ಲಿ ಯಾರಾ ದರೋಬ್ಬನು ಪೃಥ್ವಿಪಾಲನಾಗಿರಬಹುದೆಂದು ನಿರೀ ಕ್ಷಿಸಿ, ಅವರು ಆದೇವತಾಲಯದ ಪ್ರದೇಶದಲ್ಲೆಲ್ಲಾ ಅಗೆಯುವರು, ಆದರೆ ಇದುವರೆಗೂ ಆದಿದ್ವಾಭರಣವು ಯಾರಿಗೂ ದೊರೆತಿಲ್ಲ.
ಈ ಕಥೆಯನ್ನು ಮಾತ್ರ ಅಲ್ಲಿನವರು ಭಕ್ತಿಯಿಂದ ಹೇಳುತ್ತಿರುವರು. ವಿಕ್ರಮಪೀಠ
ಪ್ರಿಯರಾದ ವಾಚಕರೆ,
ಈಗ ನಾನು ಹೇಳಬೇಕೆಂದಿರುವ ಕಥೆಯನ್ನು ತಿಳಿದುಕೊಳ್ಳಲು ನಿಮಗೆ ಆಶೆಯಿದ್ದರೆ, ನೀವು ನಿಮ್ಮ ಮನಸ್ಸನ್ನು ವಾಹನಮಾಡಿಕ್ಕೊಂಡ ನನ್ನೊಡನೆ ಈಗ ಉತ್ತರ ದೇಶಕ್ಕೆ ಪ್ರಯಾಣ ಬೆಳಿಸಬೇಕು, ನೀವು ಏರಿರುವ ಕುದುರೆಯು ಗಾಳಿಗಿಂತಲೂ ವೇಗವಾಗಿ ಓಡ ಬಲ್ಲುದಾದ ಕಾರಣ, ಕೆಲವು ನಿಮಿಷಗಳೊಳಗಾಗಿಯೇ ನಾವು ಕೃಷ್ಣಾ, ಗೋದಾವರಿ ಮುಂತಾದ ನದಿಗಳನ್ನೂ, ಅನೇಕ ಪರ್ವತಗಳನ್ನೂ ಅನೇಕರಾಜ್ಯಗಳನ್ನು, ಅನೇಕ ಮಹಾನಗರಗಳನ್ನೂ, ಮಹಾಕ್ಷೇತ್ರಗಳನ್ನೂ ದಾಟಿ, ಪವಿತ್ರಳಾದ ನರ್ಮದೆಯಿಂದ ತೊಳೆಯಲ್ಪಡುತಲಿರುವ ಪುಣ್ಯ ಪ್ರದೇಶವನ್ನು ಸೇರುವೆವು. ಮಧ್ಯಹಿಂದೂ ಸ್ಥಾನ (ಸೆಂಟ್ರಲ್ ಇಂಡಿಯಾ) ವೆಂದು ಕರೆಯಲ್ಪಡುತಲಿರುವ ಈ ಸ್ಥಳದಲ್ಲಿ ನಾವು ಸಧ್ಯ: ನಿಲ್ಲೋಣ, ಈ ಪ್ರಾಂತವು ಬಲುಪುರಾತನವಾಗಿ, ಭರತಭೂಮಿಯ ಇತಿಹಾಸದಲ್ಲಿ ಬಲು ಪ್ರಖ್ಯಾತವಾಗಿದೆ. ತತ್ರಾಪಿ ಈಗ ಶ್ರೀಮಂತ ಸಿಂಧಿಯಾ ಮಹಾರಾಜರ ಆಳ್ವಿಕೆಗೆ ಒಳ ಪಟ್ಟಿರುವ ಗ್ವಾಲಿಯರ ಪಟ್ಟಣದ ಸಮಿಾಪದಲ್ಲಿ ಸಿಪ್ರಾ ನದಿಯ ತೀರದಲ್ಲಿರುವ ಉಜ್ಜಯಿನೀಪಟ್ಟಣದ ಪ್ರದೇ ಶವು ಅನೇಕ ರಾಜಾಧಿರಾಜರುಗಳ ಸಾಮ್ರಾಜ್ಯವೈ ಭವಕ್ಕೂ, ಅನೇಕ ಕವಿಪುಂಗರವರ ವರ್ಣನಾ ವಿಶೇಷಕ್ಕೂ ಪಾತ್ರವಾಗಿ, ಹಿಂದೂ ಜನರಿಗೆ ತನ್ನ ಹಿಂದಿನ ಉನ್ನತ ಸ್ಥಿತಿಯನ್ನು ಜ್ಞಾಪಕಪಡಿಸುತ್ತಿರುವುದು.
ಹಾ ಉಜ್ಜಯನಿ! ನಿನ್ನ ಹೆಸರನ್ನು ಹೇಳಿದೊಡ ನೆಯೆ ಎಷ್ಟೊಂದು ಅಂಶಗಳು ಸ್ಮತಿಗೆ ಬರುತ್ತಲಿವೆ! ಪೂರ್ವದಲ್ಲಿ ನಿನ್ನನ್ನು ಅವಂತಿಯೆಂದು ಕರೆಯುತಲಿ ದ್ದರು ನೀವಾಗ ಭರತವರ್ಷದ ಎಳು ಪುಣ್ಯ ಸತ್ತನ ಗಳಲ್ಲಿ ಒಂದಾಗಿದ್ದೆ, ಅಪಾರವಾದ ವಿದ್ಯೆಯ ಐಶ್ವರ್ಯವೂ ನಿನ್ನನ್ನೇ ಆಶ್ರಯಿಸಿದ್ದುವು. ಈಚೆಗೆ ಬೌದ್ಧ ಚಕ್ರವರ್ತಿಯಾದ ಅಶೋಕನ ಕಾಲದಲ್ಲಿ ನೀನುಮತ್ತಷ್ಟು ಪ್ರಬಲಳಾಗಿ,ಆತನ ರಾಜ್ಯದಲ್ಲಿ ಮುಖ್ಯನಗರ ವಾ ಗಿದ್ದೆ, ತನ್ನ ಒಂದಾನೊಂದು ವಿಜಯದ ಜ್ಞಾಪಕಾರ್ಥ ವಾಗಿಯೇ ಆ ರಾಜರ್ಸಿಯು ನಿನ್ನನ್ನ "ಉಜ್ಜಯಿನಿ” ಎಂದು ಕರೆದಿರಬಹುದು.
ಆತನಿಂದೀಚೆಗೆ ನಿನ್ನ ಪ್ರಶಸ್ತಿಯು ಇನ್ನೂ ಹೆಚ್ಚಿತು. ನೀನುಮಾಲವದೇಶದ ರಾಜಧಾನಿಯಾಗಿ, ಶಾಶ್ವತಕೀ ರ್ತಿಯಾದ ಭರಥಹರಿಯ ಮಹಿಮೆಯನ್ನು ಕಣ್ಣಾರ ನೋಡಿದೆ. ಆತನೆಂತಹ ಮಹಾರಾಜ! ಎಂತಹ ಮಹಾ ಪಂಡಿತ! ಎಂತಹ ಮಹಾಕವಿ!ಎಂತಹ ಮಹಾಯೋಗಿ! ಅಂತಹ ಮತ್ತೊಬ್ಬ ವ್ಯಕ್ತಿಯನ್ನು ವಿಧಿಯು ಇದು ವರೆಗೂ ಸೃಷ್ಟಿಸಿಲ್ಲ: ಆತನ ಸುಭಾಷಿತವನ್ನು ಓದ ದವರೂ ಕೇಳದವರೂ ನಿರ್ಭಾಗ್ಯರೇಸರಿ! ಆಮಾರಾ ಯನು ಇಹಲೋಕವನ್ನು ತುಚ್ಛಿಕರಿಸಿ, ಪರನವಿರ ಕ್ತನಾದಮೇಲೆ, ಆತನ ತಮ್ಮನಾದ ವಿಕ್ರಮಾದಿತ್ಯ ಮಹಾರಾಜನು ನಿನ್ನ ಕೈಹಿಡಿದು, ನಿನ್ನನ್ನು ಇನ್ನೂ ವೃದ್ಧಿಗೊಳಿಸಿದನು. ಈ ಶಕ ಪುರುಷನನ್ನು ಕುರಿತು ಈಗಲೇ ವಿಸ್ತಾರವಾಗಿ ಪ್ರಸ್ತಾವಿಸುವೆವು ಈತನ ಕಾಲಾನಂತರ ನಿನ್ನ ಅದೃಷ್ಟ್ಯವು ಅಧೋಮುಖವಾಯಿತು. ಆದರೂ ಮೊಗಲ ಬಾದಶಾಹರಿಗೆ ನಿನ್ನಲ್ಲಿ ಅಭಿಮಾನವಿದ್ದಿತು, ಅವರು ಕೆಲವು ಮನೋಹರಗಳಾದ ಕಟ್ಟಡಗಳಿಂದ ನಿನ್ನನ್ನು ಸಿಂಗರಿಸಿದರು. ಅವರಿಂದೀಚೆಗೆ ಜ್ಯೋತಿಶ್ಯಾಸ್ತ್ರ ಪಂಡಿತನಾದ ಜಯಪ್ರರದ ರಾಜಾ ಜಯಸಿಂಹರಾಜನು ನಿನ್ನ ಸನ್ನಿಧಿಯಲ್ಲಿ ನಕ್ಷತ್ರದರ್ಶನ ಶಾಲೆಯೊಂದನ್ನು ಕಟ್ಟಿಸಿ, ನಿನ್ನ ಪ್ರಶಂಸೆಯನ್ನು ಹೆಚ್ಚಿಸಿದನು. ಇನ್ನೂ ಈಚಿನವರಾದ ಮಹಾರಾಷ್ಟ ಪ್ರಭುಗಳೂ ನಿನ್ನನ್ನು ನಿರಾಕರಿಸದೆ ಕೆಲವು ಉತ್ಕೃಷ್ಟಗಳಾದ ದೇವಮಂದಿರಗಳನ್ನೂ ಸ್ನಾನಘಟ್ಟಗಳನ್ನೂ,ಕಟ್ಟಿಸಿ ನಿನ್ನ ರಮಣೀಯತೆಯನ್ನು ಹೆಚ್ಚಿಸಿದರು, ಆದರೇನಾಯಿತು? ಜೀವನಿಲ್ಲದ ದೇಹವು ಒಡವೆಗಳಿಂದ ಶೋಭಿಸವುದೇನು? ವಿದ್ಯಾಸದ್ಗುಣಗಳು ನಷ್ಟವಾದ ರಾಜ್ಯಕ್ಕೆ ಒಳ್ಳೆಯಕಟ್ಟಡಗಳು ಕಳೆಗಟ್ಟುವನೇನು?ನೀನು ಕ್ಷೀಣಗತಿಗೆ ಬಂದ ಹಾಗೆಯೇ ಹಿಂದೂಗಳ ನಾಗರಿಕತೆಯ, ಅವರ ವಿದ್ಯಾವೈದುಷ್ಯಗಳೂ, ಧೈರ್ಯ ಪೌರುಷಗಳೂ ಕ್ಷೀಣಗತಿಗೆ ಬಂದವು. ಈಗ ಅವರು ತಮ್ಮ ಪೂರ್ವಿ ಕರು ಬಲುದೊಡ್ಡವರೆಂದು ಹೇಳಿಕೊಳ್ಳುತ್ತಾ,__ಬೆಂಗ ಳೂರು ವಿವಿಧ ವಸ್ತು ಶಾಲೆ ( ತಮಾಷ್ ಬಂಗಲೆ )ಯಲ್ಲಿ ರುವ ಪುರಾತನ ಪದಾರ್ಥಗಳಂತೆ, __ಲೋಕದವರ ಆಶ್ಚರ್ಯಕ್ಕೂ ,ಹಾಸ್ಯಕ್ಕೂ ಕಾರಣರಾಗಿರುವರು. ನೀನೂ ಆಗಾಗ ಪಾಚೀನಚರಿತ್ರಶೋಧಕರ ಮತ್ತು ವಿನೋದಾರ್ಥವಾಗಿ ದೇಶಸಂಚಾರಮಾಡುವವರ ಗಮನವನ್ನು ಮಾತ್ರ ಆಕರ್ಷಿಸುತ್ತಾ, ಮಿಕ್ಕಪ್ರಪಂಚಕ್ಕೆ ಇಲ್ಲವಾಗಿ ರುವೆ. ಹಾ ಉಜ್ಜಯಿನಿ!ನಿನ್ನ ಒಡೆಯನಾಗಿದ್ದ ಭರ್ತೃಹರಿಯು ಹೇಳಿದುದು, ನಿನ್ನ ವಿಷಯದಲ್ಲಿಯೇ ನಿಜವಾಯಿ ತಲ್ಲವೆ ? ಸಾರಮ್ಯಾನಗರೀ ಮರ್ಹಾಸ ನೃಪತಿಃ ಸಾಮಂತಚಕ್ರಂಚ ತತ್ವಾಶ್ವೇ ತಸ್ಯ ಚ ಸಾ ವಿದಗ್ಧ ಪರಿಷತ್ತಾಶ್ಚಂದ್ರಬಿಂಬಾನನಾ:|| ಸರ್ಯಂ ಯಸ್ಯವಶಾದಗಾತ್ ಸ್ಮೃತಿಪಥಂ ಕಾಲಾಯತಸ್ಮೈನಮಃ||
"ರಮ್ಯವಾದ ಆಟ್ಟಣವೇನು! ಆ ಮಹಾರಾಜನೇನು! ಆತನ ಸುತ್ತುಮುತ್ತಲಿದ್ದ ಆ ಸಾಮಂತರಾಜ ಮಂಡಲಿಯೇನು! ಆ ವಿದತೃಭೆಯೇನು! ಆ ಚಂ ದ್ರಮುಖಿಯರೇನು ! ಧೀರರಾದ ಆ ರಾಜಕುಮಾರರೇ ನು! ಆ ಸ್ತುತಿಪಾಠಕರೇನು! ಆ ಕಥೆಗಳೇನು! ಇವೆಲ್ಲವೂ ಯಾರವಶದಿಂದ ಪ್ರಪಂಚದಲ್ಲಿಲ್ಲದೆಹೋಗಿ) ಈಗಜ್ಞಾಪಕದಲ್ಲಿಮಾತ್ರ ನಿಂತಿದೆಯೋ ಅಂತಹ ಕಾಲ ಪುರುಪೆನಿಗೆ ನಮಸ್ಕಾರವು.” ಈ ಗೋಳುಹಾಗಿಲಿ! ವಾಚಕರೆ, ಮನಸ್ಸನ್ನು ಕುದುರೆಯಾಗಿ ಮಾಡಿ ಕೊಂಡು ನಾವು ಹೇಗೆ ಬಹು ಭೂಭಾಗವನ್ನು ದಾಟಿ ದೆವೋ, ಹಾಗೆಯೇ ಅದೇವಾಹನದಿಂದ ಕಾಲದೂರ ವನ್ನೂ ಅತಿಕ್ರಮಿಸಿ,ಮಹಾರಾಜಾ ವಿಕ್ರಮಾರ್ಕನಪ್ರಭುತ್ವಕಾಲವನ್ನು ಸೇರಿ, ಆತನ ಆಸ್ಥಾನನ್ನು ಪ್ರವೇಶಿಸೋಣ! ಆತನ ಕಾಲವನ್ನು ಕುರಿತು ವಿದ್ವಾಂಸರು ಇನ್ನೂ ಚರ್ಚೆಮಾಡುತಲೇ ಇರುವರು. ಇವರ ವಿವಾದವು ಮುಗಿಯುವುದೋ ಇಲ್ಲವೋ ಯಾರು ಬಲ್ಲರು? ಕೆಲವು ಮಂದಿ ಪ್ರಾಚೀನ ಚರಿತ್ರಶೋಧಕರು ವಿಕ್ರಮನು ಕ್ರಿ. ಶ. ೬ನೆಯ ಶತಮಾನದಲ್ಲಿದ್ದನೆಂದು ಹೇಳುತ್ತಾರೆ. ಆದರೆ, ಈ ದೇಶದ ಜನರು ಮಾತ್ರ ಆ ಮಹಾರಾಜನ ಹೆಸರನ್ನು ಮರೆಯದೆ, ಆತನು ಸ್ಥಾಪಿಸಿದ ಶಕಧಿಂದಲೇ ವರ್ಷಗಳನ್ನು ಈಗಲೂ ಎಣಿಸುತ್ತಿರುವರು. ವಿರೋಧಿಕೃನ್ನಾಸಂವತ್ಸರದ ಪಂಚಾಂಗದ ಮುಖಪತ್ರದ ಮೇಲುಗಡೆ "ಶ್ರೀವಿಕ್ರಮಾರ್ಕ ಶಕಗತಾಬ್ದಾ:? ೧೯೬೮ ” ಎಂದಿರುವುದನ್ನು ಯಾವ ಹಿಂದುವುತಾನೆ ನೋಡಿಲ್ಲ ? ಆದರೆ ಈಗಿನ ಹಿಂದುಗಳಿಗೆ ಸ್ವವಿಷಯಗಳಲ್ಲಿ ಗೌರವ ಕಡಿಮೆ, ಹೇಗಾದರಾಗಲಿ, ವಿಕ್ರಮಾದಿತ್ಯನೆಂಬ ಒಬ್ಬ ರಾಜನಿದ್ದ ವಿಷಯವು ನಿಸ್ಸಂದೇಹವಾಗಿದೆ ಆತನ ವಿಷಯವನ್ನೂ ಆತನ ಸಭಾವಿಷಯವನ್ನೂ ಸಾಧ್ಯವಾದ ಮಟ್ಟಿಗೆ ಇಲ್ಲಿ ಮನಸ್ಸಿಗೆ ತಂದುಕೊಳ್ಳೋಣ.
ಆತನ ತಂದೆಯ ಹೆಸರು ಮಹೇಂದ್ರಾದಿತ್ಯನೆಂದೂ ತಾಯಿಯ ಹೆಸರು ಸೌಮ್ಯದರ್ಶನೆಯೆಂದು ಕೆಲವರು ಹೇಳಿರುವರು. ಆತನು ಮಹಾಧೀರನು ಮತ್ತು ದೇಶಾಭಿಮಾನಿ. ತನ್ನ ರಾಜ್ಯಕ್ಕೆ ಆಗಾಗ ಬಂದು ಹಾವಳಿ ಮಾಡುತ್ತಿದ್ದ ಶಕರೆಂಬ ಜನರನ್ನು ಆತನು ಸೋಲಿಸಿ, ದೂರ ಓಡಿಸಿದನು, ಆದ ಕಾರಣ ಆತನಿಗೆ "ಶಕಾರಿ " ಯೆಂದು ಹೆಸರಾಯಿತು. ಈ ಸಂದರ್ಭದಲ್ಲಿಯೇ ಆತನು ತನ್ನ ಶಕೆಯನ್ನು ವಿಸುವನೆಂದು ಕೆಲವರ ನಂಬಿಕೆ, ಇಂತಸ ಶೂರನಾದ ಮಹಾರಾಜನ ಕೈ ಕೆಳಗೆ ಅನೇಕ ಸಾಮಂತರಾದರು ಇದ್ದಿರಲೇ ಬೇಕು, ಬಹುಶಃ ಈತನು ಆಗಿನ ಹಿಂದೂ ರಾಜರಿಗೆಲ್ಲಾ ಮುಖಂಡನಾಗಿದ್ದನೆಂದು ಧಾರಾಳವಗಿ ಹೇಳಬಹುದು.
ವಿಕ್ರಮಾರ್ಕನು ವಿದ್ಯಾಭಿಮಾನಿ. ಆತನ ಅಣ್ಣ ಭರ್ತೃಹರಿಯೇ ದೊಡ್ಡ ವೈಯಾಕರಣಿ ಮತ್ತು ಕವಿಯಾಗಿದ್ದನಷ್ಟೆ ವಿಕ್ರಮನ ಆಸ್ಥಾನದಲ್ಲಿ ಅನೇಕ ಮಂದಿ ಶಾಸ್ತ್ರಜ್ಞರೂ ಕವಿಗಳೂ ಇದ್ದರು. ಅವರಲ್ಲಿ ಪ್ರಸಿದ್ದರಾರೆಂದರೆ.
ಧನ್ವಂತರಿ ಕ್ಷವಣಕುಮರಸಿಂಹ ಶಂಕು ।
ವೇತಾಳಭಟ್ಟ ಘಟಕರ್ಪರ ಕಾಳಿದಾಸ:॥
ಖ್ಯಾತೋ ವರಾಹಮಿಹಿರೋ ನೃವತೀಸ್ಸಭಾಯಂ ।
ರತ್ನಾನಿ ವೈ ವರರುಚಿ ರ್ನವ ವಿಕ್ರಮಸ್ಯ ॥
15
ಇವರೊಳಗೆ ಕಾಳಿದಾಸನಹೆಸರನ್ನರಿಯದವರಾರು? ಶಾಕುಂತಲ,ವಿಕ್ರಮೋವ್ರಶೀಯ, ಮಾಲವಿಕಾಗ್ನಿ ಮಿತ್ರಗಳೆಂಬ ನಾಟಕರತ್ನಗಳನ್ನೂ, ರಘುವಂಶ, ಕುಮಾರಸಂಭವ, ಮೇಘಸಂದೇಶಗಳೆಂಬ ಮಹಾ ಕಾವ್ಯಗಳನ್ನೂ ವಿರಚಿಸಿ, ಜಗದ್ವಿಖ್ಯಾತನಾದೀ ಕವಿಗೆ ಸಮನೆಲ್ಲಿರುವನು? ಆತನ ಕೀರ್ತಿಯು ಚಂದ್ರಸೂರ್ಯರಂತೆ ಚಿರಸ್ಥಾಯಿಯಾಗಿರುವುದು.
ವರಾಹ ಮಿಹಿರಾಚಾರ್ಯರು ಜ್ಯೋತಿಷ್ಠರು. ಇ ವರು ಕ್ರಿ.ಶ. ೫೦೫ ರಿಂದ ೫೮೭ ರವರೆಗೆ ಇದ್ದರೆಂದು ಒಂದು ಮತ.ಇವರು ಉಜ್ಜಯಿನಿಯಬಳಿ ಒಂದು ಖ ಗೋಳದರ್ಶನ ಶಾಲೆಯನ್ನು ಕಲ್ಪಿಸಿ,ಅದರಿಂದ ಗ್ರಹಗಳ ಸ್ಥಿತಿ ಚಲನೆಗಳನ್ನು ಗೊತ್ತು ಮಾಡುತಲಿದ್ದರು, ಇವರೇ ಬಹುಶಃ ಉಜ್ಜಯಿನಿಯ ಬಳಿ ಅಂಗಾರಕೇಶ್ವರನ ದೇ ವಾಲಯವನ್ನು ಕಟ್ಟಿಸಿರಬಹುದು. ಇವರು 'ಪಂಚ ಸಿದ್ದಾಂತ ವೆಂಬ ಗ್ರಂಥವನ್ನು ಬರೆದಿರುವರು.
ವರರುಚಿಯು ವ್ಯಾಕರಣ ಶಾಸ್ತ್ರ ಪಾರಂಗತನು, ಈತನು ಪ್ರಾಕೃತಭಾಷೆಗಳನ್ನು ಕ್ರಮವಾಗಿ ವಿಂಗಡಸಿ , ಅವುಗಳ ವ್ಯಾಕರಣವನ್ನು ಬರೆದಿರುವನು
ಅಮರಸಿಂಹನ ಹೆಸರು ಈ ದೇಶದಲ್ಲಿ ಆ ಬಾಲವೃದ್ದ ರಿಗೂ ಪರಿಚಿತವಾಗಿದೆ. ಈತನ 'ಅಮರ', 'ಅಮರಕೋಶ' ಅಥವಾ 'ನಾಮಲಿಂಗಾನುಶಾಸನ' ವೆಂಬ ನಿಘಂಟು ಎಲ್ಲರಿಂದಲೂ, ಎಲ್ಲ ಕಾಲಗಳಲ್ಲಿಯೂ ಆದ 16
ರಿಸಲ್ಪಟ್ಟು, ಈಗಲೂ ಎಲ್ಲ ಪಾಠ ಶಾಲೆಗಳಲ್ಲಿಯ ಓದ ಲ್ಪಡುತ್ತಲಿದೆ. ಈತನ ಗ್ರಂಥವು ಚೀನಾ ಭಾಷೆಗೆ ಪರಿವರ್ತಿಸಲ್ಪಟ್ಟಿದೆ. ಈತನ ಗ್ರಂಥದ ಸಹಾಯದಿಂದ ಸಂಸ್ಕೃತ ಭಾಷಾಭ್ಯಾಸವು ಸುಲಭವಾಗಿದೆ.
ಧನ್ವಂತರಿಯಂಬಾತನು ದೊಡ್ಡ ವೈದ್ಯನು.
ವೇ(ಭೇ?) ತಾಳಭಟ್ಟನು 'ನೀತಿಪ್ರದೀಪ' ವೆಂಬ ಗ್ರಂಥವನ್ನು ರಚಿಸಿದನು.
ಈ ಮಹನೀಯರಲ್ಲದೆ ಸುವಾಕ್, ಅಂಶುದತ್ತ, ಜಿಷ್ಣು, ತ್ರಿಲೋಚನ, ಹರಿ, ಶೃತಸೇನ, ಬಾದರಾ ಯಣ, ಮನಿತ್ದ ಕುಮಾರ ಸಿಂಹ,ಕಾಲತಂತ್ರ, ಮುಂ ತಾದ ಅನೇಕ ವಿದಾಂಸರು ವಿಕಮಸಭೆಯನ್ನಲಂಕ ಕರಿಸಿದ್ದರು.
ಇಷ್ಟುಮಂದಿ ಕವಿಗಳಿಗೂ, ಜ್ಞಾನಿಗಳಿಗೂ, ಪಂಡಿತ ರಿಗೂ ಆಶ್ರಯವನ್ನಿತ್ತು, ರಾಜತೇನನ್ನಿಸಿ ಕೊಂಡಿದ್ದ ವಿಕ್ರಮನಲ್ಲಿ ಧೈರ್ಯ, ಔದಾರ್ಯ, ನ್ಯಾಯ, ದಯಾದಿ ಸದ್ದು ಣಗಳು ತುಂಬಿದ್ದವೆಂದು ಹೇಳಬೇ ಕಾದುದೇ ಇಲ್ಲವ, ಆ ಮಹಾರಾಯನಿಗೆ ದೇವತಾ ಯೋಗ್ಯವಾದ ಸಿಂಹಾಸನ ವೊಂದು ಹೇಗೋ ದೊರೆ ತಿತ್ತು. ಆ ಆಸನವು ಆತನ ಗುಣಗಳಿಗೆ ಅನುಸಾರ ವಾದುದು; ಆತನ ಗುಣಗಳು ಆ ಆಸನಕ್ಕೆ ತಕ್ಕವು, ಆತನಿಗೆ ಉಂಟಾಗಿದ್ದ ಐಶ್ವರ್ಯವೊ, ವೈಭವವೂ, ಗೌರ ವವೂ-ಎಲ್ಲವೂ ಆಸಿಂಹಾಸನದ ಮಹಿಮೆಯೇ ಎಂದು ಜನರು ನಂಬಿದ್ದರು. ಅಂತಹ ವಿಚಿತ್ರವಾದ ಮಾಹಾ ತ್ಮವುಳ ಸಿಂಹಪೀಠವನ್ನು ಪಡೆಯಲು ಆತನೆಂತಹ ಪುಣ್ಯವಂತನೋ, ಗುಣವಂತನೋ ಪಾಠಕರೇ ಊಹಿಸಿಕೊಳ್ಳಬಹುದು.
ಆ ಸಿಂಹಪೀಠದಮೇಲೆ ಕುಳಿತು, ವಿಕ್ರಮಾದಿತ್ಯರಾಜನು ಬಹುಕಾಲ ಸುಖದಿಂದಲೂ ಧರ್ಮದಿಂದಲೂ ರಾಜ್ಯವನ್ನಾಳಿದನು, ಆತನ ಹೆಸರು ಎಲ್ಲೆಲ್ಲಿಯೂ ಪ್ರಸಿದ್ದ ವಾಯಿತು-ಮನೆಮನೆಯಲ್ಲಿನ ಹೆಂಗಸರಿಗೂ ಮಕ್ಕಳಿಗೂ ಪರಿಚಿತವಾಯಿತು. ನಾಡಿನಲ್ಲೆಲ್ಲಾ ಆ ಹೆಸರನ್ನು ವಿಶ್ವಾಸದಿಂದಲೂ ಮರ್ಯಾದೆಯಿಂದಲೂ ನೆನೆಸದವರು ಒಬ್ಬರೂ ಇರಲಿಲ್ಲ
ಮನುಷ್ಯನು ಎಷ್ಟು ದೊಡ್ಡವನಾದರೂ ಎಂದಾದ ರೊಂದುದಿನ ಸಾಯಲೇ ಬೇಕಷ್ಟೆ? ಮಹಾನುಭಾವನಾದ ವಿಕ್ರಮಾರ್ಕನೂ ಒಂದು ದಿನ ಕಾಲಾಧೀನನಾದನು. ಆ ಶೋಕಮಯವಾದ ಸಮಯದಲ್ಲಿ ಆತನ ಮಂತ್ರಿಗಳಿಗೂ, ಪ್ರಜೆಗಳೂ ಸಭೆಸೇರಿ, ಮುಂದಿನ ಕಾರ್ಯಗಳನ್ನು ಕುರಿತು ಆಲೋಚಿಸುತ್ತಿರುವಲ್ಲಿ, ಆಕಾಶದಲ್ಲಿ ಯಾರೋ ಈರೀತಿ ಹೇಳಿದಂತಾಯಿತು:
"ಎಲೈ ಜನರೆ,ವಿಕ್ರಮನ ಪೀಠವನ್ನಡರಲು ಆತನಿಗೆ ಸಮನಾದ ರಾಜನಾರೂ ಭೂಮಿಯಮೇಲಿಲ್ಲವು ಆದಕಾರಣ ಅದನ್ನು ಒಳ್ಳೆಯ ಕ್ಷೇತ್ರದಲ್ಲಿ ಹೂತಿಡುವುದು," ಈ ವಾಣಿಯನ್ನು ಕೇಳಿದ ಮಂತ್ರಿಜನರು, ಬಹುವಾಗಿ ಪ್ರಲಾಪಿಸುತ್ತಾ, ದುಃಖದಲ್ಲಿ ಮುಳುಗಿದ ಮನಸ್ಸುಳ್ಳವರಾಗಿ ವಿಕ್ರಮನೀಠವನ್ನು ಅರಮನೆಯಿಂದೀಚೆಗೆ ಸಾಗಿಸಿ, ದೂರ ತೆಗೆದುಕೊಂಡುಹೋಗಿ ಫಲವತ್ತಾದ ಭೂಮಿಯಲ್ಲಿ ಅದನ್ನು ಆಳವಾಗಿ ಹೂಳಿ , ಅದರಮೇಲೆ ಎತ್ತರವಾಗಿ ಮಣ್ಣು ಗುಡ್ಡೆ ಮಾಡಿ, ಆನೆಲದಲ್ಲೆಲ್ಲಾ ಗೋಧಿ, ಕಡಲೆ ಮುಂತಾದ ಧಾನ್ಯಗಳನ್ನು ಬಿತ್ತಿಸಿ, ಅದನ್ನು ಒಬ್ಬ ಬಡಬ್ರಾಹ್ಮಣನಿಗೆ ದಾನವಾಗಿ ಕೊಟ್ಟು ಬಿಟ್ಟರು.
**
ಕಾಲಚಕವು ಯಥಾಪ್ರಕಾರ ನಡೆಯಿತು. ವಿಕ್ರಮನ ರಾಜ್ಯವಾದ ಮಾಳವವು ಕ್ಷಿಣಿಸಲಾರಂಭಿಸಿತು. ಭೂದಾನವನ್ನು ಪಡೆದ ಆ ಬ್ರಾಹ್ಮಣನೂ ಕಾಲವಶನಾದನು. ಅವನ ಮಕ್ಕಳು ಮುಮ್ಮಕ್ಕಳು ಆ ಭೂಮಿಯನ್ನನು ಭವಿಸುತ್ತ ಬಂದರು. ಸಿಂಹಾಸನವಿದ್ದ ಎತ್ತರವಾದೆಡೆಯಲ್ಲಿ ಬಿದಿರ ಅಟ್ಟಣಿಗೆಯೊಂದು ಏರ್ಪಾಟಾಯಿತು. ಅದು ಉನ್ನತವಾಗಿದ್ದ ಕಾರಣ ಭೂಮಿಯ ಯಜಮಾನನು ಅದರ ಮೇಲೆ ಕುಳಿತು ಬೆಳೆಯನ್ನು ಕಾಯುತ್ತಿದ್ದನು.
ಅವನ ಭೂಮಿಯಲ್ಲಿ ಬೆಳೆಯು ಯಾವಾಗಲೂ ಹುಲುಸಾಗಿರುವುದು, ಅವನು ಮನೆಯಲ್ಲಿಯ, ಬೀದಿಯಲ್ಲಿಯೇ ಇದ್ದಾಗ ಇತರರಂತೆ ಕೋಪವುಳ್ಳವನಾಗಿರುವನು, ಪಕ್ಷಪಾತವುಳ್ಳವನಾಗಿರುವನು, ಲೋಭಿಯಾಗಿರುವನು; ಆದರೆ ತನ್ನ ಭೂಮಿಗೆ ಬಂದು ಅಟ್ಟಣೆಯನ್ನೇರಿದ ಕೂಡಲೆ ಅವನ ನಡತೆಯೆಲ್ಲವೂ ಮಾರ್ಪಡುವುದು, ಅವನ ಮನಸ್ಸು ಶಾಂತವಾಗುವುದು, ಅವನ ಮಾತುಗಳು ಮೃದುವಾಗುವುವು, ಅವನ ಎದೆಯು ದಯೆ ರಿಂದ ತುಂಬುವುದು, ಅವನ ಬುಧ್ಧಿಯು ನ್ಯಾಯದ ದಾರಿಯಲ್ಲಿಯೇ ಹೋಗುವುದು. ಆ ಗದ್ದುಗೆಯ ಮೇಲೆ ವನು ಕುಳಿತಾಗ ನೆರೆಹೊರೆಯ ಬೇಸಾಯಗಾರರೆ ರೂ ಅವನಲ್ಲಿಗೆ ಬಂದು, ತಮ್ಮ ತಮ್ಮ ಕಷ್ಟ ಸುಖವನ್ನೂ ವ್ಯಾಜ್ಯ ವಿವಾದಗಳನ್ನು ಹೇಳಿ ಕೊಳ್ಳುರು. ಅವನು ಅದನ್ನೆಲ್ಲಾ ವಿಚಾರಿಸಿ ನ್ಯಾಯ ವಿದ್ದಂತೆ ತಿರ್ಮಾನಿಸಿ, ಅವರನ್ನು ಸಮಾಧಾನಗೊಳಿಸುವನು; ತನ್ನ ಕೈಯಿಂದಾದ ಮಟ್ಟಿಗೂ ಅವರಿಗೆ ಸಾಹಾಯ ಮಾಡುವನು; ಯಾವಾಗಲೂ ಅವನು ತಪ್ಪು ತೀರ್ಮಾನ ವನ್ನು ಕೊಟ್ಟದೇ ಇಲ್ಲ, ಉಪಕಾರ ಕೇಳಿದವನಿಗೆ ಇಲ್ಲವೆಂದುದೇ ಇಲ್ಲ. ಆದರೆ, ಆ ಗದ್ದುಗೆಯನ್ನು ಬಿಟ್ಟು ಇಳಿದ ಕೂಡಲೆ ಇತರ ಜನರ ದುರ್ಗುಣಗಳು ವನನ್ನು ಮುತ್ತಿಕೊಳ್ಳವುವು, ಈ ವಿಚಿತ್ರ ಸಂಗತಿಯನ್ನು ಕಂಡು ಎಲ್ಲರೂ ಆಶ್ಚರ್ಯ ಪಡುವರು.
ಈವರ್ತಮಾನವು ಎಲ್ಲೆಲ್ಲಿಯ ಹರಡಿತು, ಮಾಲ ದೇಶದ ನೆರೆಯಲ್ಲಿದ್ದ ಧಾರಾನಗರದ ಭೋಜರಾಜರಿಗೂ ಅದು ತಿಳಿಯಿತು. ಆತನು, ಆ ಸ್ಥಳದಲ್ಲಿ ವಿಕ್ರಮನ ಭದ್ರಪೀಠವಿರಬಹುದೆಂದು ಊಹಿಸಿ, ಪರೀಕ್ಷೆ ಲೋಸುಗ ಒಂದಾನೊಂದುದಿನ ಪರಿವಾರಸಮೇತವಾಗಿ ಆ ಭೂಮಿಯ ಕಡೆಬಂದನ್ನು
ಆತನು ಕಣ್ಣಿಗೆ ಬಿದ್ದೊಡನೆಯೆ, ಅಟ್ಟಣಿಗೆಯ ಮೇಲ್ಲಿದ್ದ ಭೂಮಿಯ ಯಜಮಾನನು ಎದ್ದು ನಿಂತು?" ಓ ಹಾರಾಜರೇ, ಈಕಡೆ ದಯಮಾಡಬೇಕು, ಈ ಅ ಲ್ಪನ ಸೇವೆ ಸತ್ಕಾರಗಳನ್ನು ಸ್ವೀಕರಿಸಬೇಕು. ತಮಗಿಂತಲೂ ಉತ್ತಮರಾದ ಅತಿಥಿಗಳು ನನಗೆಂದು ದೊರಕುವರು? ಇಂದು ನನ್ನ ಜನ್ಮವು ಸಫಲವಾಯಿತು. ದಯಮಾಡಿಬನ್ನಿರಿ. "ಎಂದು ವಿನಯದಿಂದ ಬೇಡಿ ಕೊಂಡನು, ಭೋಜನು ಆಪಾರ್ಥನೆಯಂತೆ ತನ್ನ ಪರಿವಾರ ಸಹಿತ ಭೂಮಿಯನ್ನು ಪ್ರವೇಶಿಸಿದನು. ಬ್ರಾಹ್ಮಣನು ಆತನನ್ನಿದಿರ್ಗೊಳ್ಳುವ ನಿಮಿತ್ತ ಗದ್ದುಗೆಯೊಂದಿಳಿದನು. ಸಂಗಡಲೆ ಅವನ ಬುದ್ದಿಯು ಬೇರೆ ಯಾಯಿತು. ಅವನು ಮಹಾರಾಜರೇ, ತಾವು ಹೀಗೆ ಬ್ರಾಹ್ಮಣನ ಭೂಮಿಗೆ ಪ್ರವೇಶಿಸಿ, ಅವನಬೆಳೆ ಯನ್ನು ಹಾಳುಮಾಡುವುದು ಉಚಿತವೆ? ಎಂದನು.
ಭೋಜರಾಜನು ಇಷ್ಟು ಬೇಗನೆ ಬ್ರಾಹ್ಮಣನ ಸ್ವಭಾವವು ಹೇಗೆ ವ್ಯತ್ಯಾಸವಾಯಿತೆಂದು ಆಶ್ಚರ್ಯಪಡುತ್ತಾ ಹಿಂದಡಿಯಿಟ್ಟನು. ಬ್ರಾಹ್ಮಣನೂ ಹಿಂದಕ್ಕೆ ಹೋಗಿ ಗದ್ದುಗೆಯನ್ನು ಹತ್ತಿದನು.ಒಡನೆಯೇ,ಅವನು ಹಿಂದಿನಂತೆ "ಹೇ ಮಹಾಸ್ವಾಮಿ, ನನ್ನ ಪ್ರಾರ್ಥನೆಯನ್ನು ಹೀಗೆ ನಿರಾಕರಿಸ ಬಹುದೆ? ನನ್ನ ಭೂಮಿಯು ಧಾನ್ಯ ಸಸ್ಯ ಫಲ ಜಲ ಸಮೃದ್ಧವಾಗಿರಲು, ಈ ಮಧ್ಯಾಹ್ನ ಕಾಲದಲ್ಲಿ ತಾವೂ ತಮ್ಮ ಪರಿಜನರೂ ಈ ಮಾರ್ಗ ದಲ್ಲಿ ಉಪವಾಸ ತಿರುಗ ಬೇಕೆ?" ಎಂದನು.
ಭೋಜರಾಜನು ತನ್ನ ಊಹೆಯು ಸರಿಯೆಂದು ನಿಶ್ಚಯಿಸಿದನು . ಆದರೂ,ತಾನೇ ಆ ವೈಚಿತ್ರ್ಯವನ್ನು ಆನುಭವಿಸಿ ತಿಳಿಯ ಬೇಕೆಂದು, ಆ ಬ್ರಾಹ್ಮಣನನ್ನು ಗ ದ್ದುಗೆಯಿಂದಿಳಿಸಿ, ತಾನೇ ಆಸ್ಥಳದಲ್ಲಿ ಕೂತನು. ಆಹಾ! ಆತನ ಆಂತರ್ಯವಾದ ಅನುಭವಗಳನ್ನು ಹೇಗೆ ತಾನೆ ವರ್ಣಿಸಬಹುದು! ತತ್‌ಕ್ಷಣವೇ ಆತನ ಮನಸ್ಸು ನಿರ್ಮಲವಾಯಿತು. ಆತ ಕೊರತೆಗಳವು ಮಾಯವಾದವು, ತನ್ನ ರಾಜ್ವದಲ್ಲಿ ನಡೆಯುತಲಿದ್ದ ನ್ಯಾಯಾನ್ಯಾಯಗಳೆಲ್ಲವು ಆತನಿಗೆ ಸ್ಪಷ್ಟವಾಗಿ ಗೊತ್ತಾದವು ತನ್ನ ಪ್ರಜೆಗಳಲ್ಲಿ ಸಜ್ಜನರು ಯಾರು, ದುರ್ಜನರುಯಾರು ಎಂಬುದು ಆತನಿಗೆ ಸಂದೇಹವಿಲ್ಲದಂತೆ ತಿಳಿದು ಬಂದಿತು. ಪ್ರಜೆಗಳ ಕಷ್ಟಗಳನ್ನು ಹೋಗಲಾಡಿಸಿ, ಸುಖವನ್ನು ಹೆಚ್ಚಿಸಿ, ಲೋಕಕ್ಕೆ ಉಪಕಾರ ಮಾಡಬೇಕೆಂಬ ಕುತೂಹಲವು ಆತನಲ್ಲಿ ಕ್ಷಣೇ ಕ್ಷಣೆ ಬಲವಾಯಿತು. ವಾಚಕರೇ, ವಿಕ್ರಮಪೀಠದ ಮಹಿಮೆಯನ್ನು ನೋಡಿದಿರಾ?
ಭೋಜನು ಏನಾದರೂ ಮಾಡಿ ಅಸಿಂಹಾಸನವನ್ನು ಸ್ವಾಧೀನಪಡಿಸಿಕೊಳ್ಳ ಬೇಕೆಂದು ನಿರ್ಧರಿಸಿದನು. ಆ ಬಡಬ್ರಾಹ್ಮಣನಿಗೆ ಬೇಕಾದಷ್ಟು ಹಣವನ್ನೂ ವಸ್ತು ವಾಹನಗಳನ್ನೂ ಕೊಟ್ಟು ತನ್ನ ಅಭಿಪ್ರಾಯವನ್ನು ತಿಳಿಸಿದನು. ಅವನು ತನ್ನ ಆಶೆಯೆಲ್ಲವೂ ತೀರಿ ಹೋಯಿತೆಂದು ಆನಂದಿಸಿ, ಭೋಜನ ಇಷ್ಟಕ್ಕೆ ಸಮ್ಮತಿಸಿದನು. ರಾಜನ ಇಷ್ಟವು ನೆರವೇರುವುದೊಂದು ಕಸ್ಟವೆ? ಬೇಗನೆ ಒಡ್ಡರು ಬಂದು, ಗುದ್ದಲಿ ಹಾರೆಗಳನ್ನು ತಂದು, ಆ ಪ್ರದೇಶವನ್ನೆಲ್ಲಾ ಅಗೆದರು. ಸ್ವಲ್ಪ ಹೊತ್ತು ತೋಡಿದಮೇಲೆ, ಆದೋ! ನವರತ್ನ ಖಚಿತ ವಾದ ವಿಕ್ರಮವೀರವು ಅಲ್ಲಿಯೇ ಗೋಚರವಾಯಿತು. ಇನ್ನು ಭೋಜನ ಸಂತೋಷಕ್ಕೆ ಸೀಮೆಯೆಲ್ಲಿಯದು? ಕೂಡಲೆ ಪುರೋಹಿತರನ್ನು ಕರೆಯಿಸಿ ಆಭದ್ರಪೀಠಕ್ಕೆ ಪೂಜೆಮಾಡಿಸಿ, ಶುಭಮುಹೂರ್ತದಲ್ಲಿ ವಾದ್ಯ ವೈಭವಗಳೊಡನೆ ಅದನ್ನು ತನ್ನೂರಿಗೆ ಹೊರೆಸಿಕೊಂಡು ಹೋದನು. ಅಲ್ಲಿ ಅದನ್ನು ಭದ್ರವಾದ ಸ್ಥಳದಲ್ಲಿರಿಸಿ, ಬಲು ಜಾಗಗೂಕರಾದ ಕಾವಲುಗಾರರು ಅದನ್ನು ಕಾದಿರುವಂತೆ ನಿಯಮಿಸಿದನು. ***
ಧಾರಾನಗರದಲ್ಲಿ ಈದಿನ ಮಹೋತ್ಸವ. ಊರನ್ನೆಲ್ಲಾ ತೋರಣಗಳಿಂದಲೂ ಧ್ವಜಪತಾಕೆಗಳಿಂದಲೂ ಸಿಂಗರಿಸಿರುವರು. ಎಲ್ಲಿನೋಡಿದರೂ ಉತ್ಸಾಹ, ಎಲ್ಲಿ ನೋಡಿದರೂ ಕೋಲಾಹಲ. ಜನರು ಒಳ್ಳೆಯ ಉಡುಪು ತೊಡಪುಗಳನ್ನಿಟ್ಟುಕೊಂಡು, ಸಡಗರದಿಂದ ತಿರುಗುತಲಿರುವರು. ಹುಡುಗರು ಗುಂಪು ಗಟ್ಟಿಕ್ಕೊಂಡು ಹಾಡುತ್ತಾ, ಓಡುತ್ತಾ, ಕುಣಿಯುತ್ತಾ, ಗದ್ದಲ ಮಾಡುತ್ತಿರುವರು. ರಾಜಬೀಧಿಯಲ್ಲಿ ಜನರು ಇಕ್ಕಟ್ಟಾಗಿ ಸೇರಿ, ಕಿಕ್ಕರಿಸುತ್ತಿರುವರು. ಅರಮನೆಯ, ಮುಂದಂತೂ ಸೂಜಿಯ ಮೊನೆಯಷ್ಟು ಸ್ಥಳವೂ ಬಿಡುವಿಲ್ಲ. ಜನರು ಒಳಕ್ಕೆ ಹೋಗುತ್ತಲೇ ಇರುವರು. ಇಷ್ಟೊಂದು ಸಂಭ್ರಮಕ್ಕೆ ಕಾರಣವೇನೆಂದರೆ, ಈದಿನ ಭೋಜಮಹಾರಾಜನು ನೂತನ ಸಿಂಹಾಸನವನ್ನು ಹತ್ತವನು. ಇದಕ್ಕಾಗಿ ದೇಶದೇಶಗಳಿಂದ ರಾಜಾಧಿರಾಜರುಗಳು, ಮಹಾರಾಜರೂ, ಕವಿಗಳೂ ಗಾಯ ಕರೂ ಬಂದು ಭೋಜಸಭೆಯಲ್ಲಿ ನೆರೆದಿರುವರು. ಬ್ರಾಹ್ಮಣರಿಗೂ ಬಡಬಗ್ಗರಿಗೂ ಯಥೇಚ್ಛವಾಗಿ ಅನ್ನ ದಾನ ವ ಸದಾನಗಳು ನಡೆಯುತ್ತಲಿರುವವು. ಓಲಗದ ವರು ಆದರದಿಂದ ಇಂಪಾದ ವಾದ್ಯಗಳನ್ನು ನುಡಿಯಿ ಸುತಲಿರುವರು.
ಸಿಂಹಾಸನಾರೋಹಣದ ಮುಹೂರ್ತವು ಸಮೀಪಿಸಿತು. ಸಿಂಹಾಸನಕ್ಕೆ ಶಾಸ್ತ್ರನುಸಾರವಾಗಿ ಪೂಜೆ ಪುನಃ ಪೂಜೆಗಳಾದವು. ಬ್ರಾಹ್ಮಣರಿಗೆ ಗೋದಾನ ಭೂದಾನ ಹಿರಣ್ಯದಾನಗಳು ಧಾರಾಳವಾಗಿ ದೊರೆತವು. ಗಂಧ ಪುಷ್ಪ ತಾಂಬೂಲಾದಿಗಳಿಂದ ಸಭೆಯವರೆಲ್ಲರೂ ಸುಂತುಷ್ಟರಾದರು. ಬ್ರಾಹ್ಮಣರಾಶೀರ್ವದಿಸುತ್ತಿರಲು, ವೈತಾಳಕರು ಪರಾಕು ಹೇಳುತ್ತಿರಲು, ವಂದಿಗಳು ಬಿರುದಾವಳಿಗಳನ್ನು ಹಾಡುತ್ತಿರಲು, ಸಾಮಂತರಾಜಗೂ ಪ್ರಜೆಗಳೂ ಜಯಜಯ ವೆನ್ನು ತಿರಲು ಭೋಜಮಹಾರಾಜನ. ಆತುರದಿಂದ ಎದ್ದು, ಸಭೆಯ ಅನುಮತಿಯನ್ನು ಪಡೆದು, ಸಿಂಹಪೀ ಠಕ್ಕೆ ನಮಸ್ಕರಿಸಿ, ಎಲ್ಲರೂ ಎವೆಯಿಕ್ಕದೆ ನೋಡುತ್ತಿಲಾಗಿ ಬಲಗಾಲನ್ನೆತ್ತಿ ಗಂಭೀರ ಭಾವದಿಂದ ಸಿಂಹಾಸನದ ಮೊದಲನೆಯ ಮೆಟ್ಟಲ ಮೇಲಿಟ್ಟನು. ಅಹಹಾ! ಅದೇನಾಶ್ಚರ್ಯ! ಆತನ ಹೆಬ್ಬೆಟ್ಟು ಸೋಸಾನದ ಮೇಲೆ ಕೆತ್ತಲ್ಪಟ್ಟಿದ್ದ ಪ್ರತಿಮೆಗೆ ಸೋಕಿದೊಡನೆಯೆ. ಅದು "ನಿಲ್ಲು" ಎಂದಿತು! ರಾಜನು ಸ್ತಬ್ದನಾದನು: ಎಲ್ಲರೂ ಸ್ಥಬ್ದರಾದರು. ಕೆಲವು ನಿಮಿಷಗ ಳವರೆಗೂ ಯಾರಿಗೂ ಏನೂ ತೋರದೆ, ಎಲ್ಲರ ಕಂಬಗಳಂತೆ ನಿಂತಿದ್ದರು. ಸಾಲಭಂಜಿಕೆಯು 'ಮರಳಿ ಹೀಗೆಂದಿತು: "ಎಲೈ ರಾಜನೆ, ನಿನ್ನಲ್ಲಿ ವಿಕ್ರಮಾದಿತ್ಯನಲ್ಲಿದ್ದ ಶೌರ್ಯ, ಔದಾರ್ಯ, ಸಾಹಸ, ಸದ್ಗುಣಗಳು ಇರುವುದಾದರೆ ನೀನೀ ಸಿಂಹಾಸನವನ್ನೇರಲು ಯೋಗ್ಯನು.
ರಾಜ:__ವಿಕ್ರಮಾರ್ಕನ ಗುಣಗಳು ನನ್ನಲ್ಲಿಯೂ ಇವೆ. ಆತನಿಗಿಂತಲೂ ಹೆಚ್ಚಾಗಿಯೇ ನಾನು ವಾಚಕರನ್ನು ತೃಪ್ತಿಗೊಳಿಸಬೇಕೆಂದು ಇರುವೆನು."
ಸಾಲಭಂಜಿಕೆ:__ತನ್ನ ಗುಣಗಳನ್ನು ತಾನೇ ಹೊಗಳಿಕೊಳ್ಳುವುದೊಂದು ಸದ್ಗಗುಣವೊ? "
ರಾಜನು ಇನ್ನೇನು ತಾನೆ ಹೇಳಿಯಾನು! ಸುಮ್ಮನಾಗಿ ತಲೆ ಬಗ್ಗಿಸಿ, ಆಶಾಭಂಗದಿಂದ ಬೇಯಿಸಲ್ಪಟ್ಟ ಹೃದಯವುಳ್ಳವನಾಗಿ ಅಂತಃಪುರವನ್ನು ಸೇರಿದನು."
***
ಕೆಲವು ದಿನಗಳು ಕಳೆದಮೇಲೆ ಪುನಃ ಭೋಜಮ ಹಾರಾಜನು ವಿಕ್ರಮ ಪೀಠವನ್ನಡರಲು ಯತ್ನಿಸಿದನು. 'ಈಸಲ ಎರಡನೆಯ ಸೋಪಾನದ ಸಾಲಭಂಜಿಕೆಯು ಈರೀತಿ ನುಡಿಯಿತು:
"ಎಲೈ ರಾಜನೆ, ಲಾಲಿಸು, ಪೂರ್ವದಲ್ಲಿ ವಿಕ್ರಮಾದಿತ್ಯನು ರಾಜನಾಗಿದ್ದಾಗ ಒಬ್ಬಾನೊಬ್ಬ ಬ್ರಾಹ್ಮಣನು ಚಿತ್ರಕೂಟಪ ರ್ವತದ ಬಳಿಯೆ ಅರಣ್ಯದಲ್ಲಿ ಬಹುಕಾಲ ಅತ್ಯುಗ್ರವಾಗಿ ತಪಸ್ಸು ಮಾಡುತ್ತಿದ್ದನು. ಆತನು ಜಗದಂಬಿಕೆಯನ್ನು ತೃಪ್ತಿಗೊಳಿಸು ವುದಕ್ಕಾಗಿ ಮಾಡಿದ ಹೋಮದ ಬೂದಿಯು ಬೆಟ್ಟ ಬೆಟ್ಟಗಳಾಗಿ ಬಿದ್ದಿತ್ತು. ಆದರೂ ದೇವಿಯು ಅವನಲ್ಲಿ ಪ್ರಸನ್ನಳಾಗಲಿಲ್ಲ ಆದಿಪ್ರನು ಏಕಕಿಯಾಗಿ, ಯಾರೊಂದಿಗೂ ಮಾತನಾಡದೆ ಒಣಗಿದ ದೇಹದಿಂದಲೂ ಕುಗ್ಗಿದ ಮನಸ್ಸಿನಿಂದಲೂ ಹೋಮ ಮಾಡುತ್ತಲೇ ಇದ್ದನು. ಈ ಸಮಾಚಾರವು ಚಾರರಮೂಲಕ ವಿಕ್ರಮಾದಿತ್ಯನ ಕಿವಿಯನ್ನು ಮುಟ್ಟಿತು. ಆತನು ಕೂಡಲೇ ಹೊರಟು, ಆದಿಪ್ರನಬಳಿ ಸೇರಿ, ತಾನೂ ದೇವಿಯನ್ನು ಪ್ರಾರ್ಥಿಸಿ ಕಡೆಗೆ ಆಕೆಯು ಪ್ರತ್ಯಕ್ಷಳಾಗುವುದಕ್ಕೋಸ್ಕರ ತನ್ನ ದೇಹವನ್ನೆ ಹೋಮದಲ್ಲಿ ಅರ್ಪಿಸುವುದಾಗಿ ಹೇಳಿ, ಕತ್ತಿಯನ್ನೆಳೆದು ತನ್ನ ಕೊರಳಮೇಲೆ ಹೊಡೆದುಕೊಂಡನು. ಏಟು ತಾಕುವುದರೊಳಗಾಗಿ ದೇವತೆಯು ಸಾಕ್ಷಾತ್ಆಗಿ ನಿಂತು " ರಾಜನೆ, ನಿನ್ನ ದೃಢ ಮನಸ್ಸಿಗೆ ಮೆಚ್ಚಿದೆನು. ಈ ಬ್ರಾಹ್ಮಣನಿಗೆ ಭಕ್ತಿಯಿದ್ದರೂ ಅದು ಚಂಚಲವಾದುದು, ನಿನಗಿರುವ ಧಿರಬುದ್ಧಿಯು ಅವನಿಗಿಲ್ಲ ಆದುದರಿಂದಲೇ ನಾನು ಅವನಲ್ಲಿ ಒಲಿಯಲಿಲ್ಲ. ನಿನಗೆ ಬೇಕಾದ ವರವನ್ನು ಕೇಳು?"ಎಂದಳು. ವಿಕ್ರಮನು ತಾಯಿ, ಈ ಬ್ರಾಹ್ಮಣನ ಇಷ್ಟವನ್ನು ನೆರವೇರಿಸಿ, ಕಷ್ಟವನ್ನು ನೀಗು. ಅದೆ ನನ್ನಿಷ್ಟವು "ಎಂದನು, ಅಂಬಿಕೆಯು ವಿಕ್ರಮನ ಪರೋಪಕಾರ ಬುದ್ದಿಯಿಂದ ಮತ್ತಷ್ಟು ಸಂತುಷ್ಟಳಾಗಿ ಆತನನ್ನಾಶೀರ್ವದಿಸಿ, ವಿಪ್ರನಲ್ಲಿಯೂ ಅನುಗ್ರಹಿಸಿದಳು, ಏಕಮನಲ್ಲಿದ್ದ ಇಂತಹ ಧೈರ್ಯ ಔದಾರ್ಯಗಳು ನಿನ್ನಲ್ಲಿರುವುದೆ?
ಭೋಜನು ನಿರುತ್ತರನಾದನು.
ಇನ್ನೊಂದುಸಲ ಭೋಜನು ವಿಕ್ರಮಪೀಠರೋಹಿಸ ಬಂದಾಗ ಮೂರನೆಯ ಸೋಪಾನದ ಮೇಲಿನ ಪಾಂಚಾಲಿಕೆಯು ಹೀಗೆಂದಿತು:
"ಎಲೈ ರಾಜನೆ, ವಿಕ್ರಮರಾಜನು ಒಂದು ಕಾಲದಲ್ಲಿ
ಭೋಜನಿಂದ ಮಾತೇ ಹೊರಡಲಿಲ್ಲ.
ಭೋಜನು ನಾಲ್ಕನೆಯಸಾರಿ ವಿಕ್ರಮಪೀಠವನ್ನಾಕ್ರಮಿಸಲು ಉಜ್ಜುಗಿಸಿದನು. ಆಗ ನಾಲ್ಕನೆಯ ಪುತ್ಥಳಿಯು ಹೀಗೆಂದಿತು
ವಿಕ್ರಮನೊಂದುವೇಳೆ ಬೇಟೆಗೆ ಹೋಗಿ, ಅಡವಿಯಲ್ಲಿ ದಾರಿತಪ್ಪಿ ಅರೆಯುತ್ತಿದ್ದನು. ಆಗ ಒಬ್ಬ ಬ್ರಾಹ್ಮಣನು ಆತನಿಗಿದುರು ಬಿದ್ದು ಆತನನ್ನು ಉಜ್ಜಯಿನಿಗೆ ಕರೆತಂದನು. ಈ ಉಪಕಾರಕ್ಕೆ ತಾನು ಪ್ರತಿಮಾಡಬೇಕೆಂದು ವಿಕ್ರಮನು ಅನೇಕಾವರ್ತಿ ಆ ಬಹ್ಮಣನೊಡನೆ ಹೇಳುತ್ತಿದ್ದನು, ಆತನು ಬಂದು ದಿನ ರಾಜನ ಮನಸ್ಸನ್ನು ಪರೀಕ್ಷಿಸಬೇಕೆಂದು, ರಾಜಕುವರ ನನ್ನು ತನ್ನ ಮನೆಯಲ್ಲಿ ಬಚ್ಚಿಟ್ಟ, ಆ ಹುಡ ಗನ ವೈಮೇಲಿನ ಒಡವೆಯೊಂದನ್ನು ಅಂಗಡಿಬೀದಿಗೆ ತಂದು ಮಾರಾಟದ ನಿಮಿತ್ತ ದಿಂದ ಎಲ್ಲರಿಗೂ ತೋರಿಸುತ್ತಿದ್ದನು ರಾಜಭಟರಿದನ್ನರಿತು ಅವನೆ ರಾಜಪುತ್ರನನ್ನು ಕದ್ದಿರಬೇಕೆಂದು ನಿಶ್ಚಯಿಸಿ, ಅವನನ್ನು ಹಿಡಿದು ರಾಜನ ಮುಂದೆ ತಂದು ನಿಲ್ಲಿಸಿದರು, ಅವನಾಗ " ಹೇರಾಜನೆ, ನಾನು ದರಿದ್ರನು, ಆದರೂ ನಿನ್ನನ್ನು ಯಾಚಿಸಲಿಷ್ಟವಿಲ್ಲದೆ, ನಿನ್ನ ಮಗನನ್ನು ಕೊಂಡೊಯ್ದು ತಲೆಯೊಡೆದು, ಅವನ ಆಭರಣಗಳನ್ನು ಮಾರಿ ಹಣಸಂಪಾದಿಸು ತಲಿರುವನು" ಎಂದನ, ವಿಕ್ರಮನು ಸ್ವಲ್ಪವೂ ಕೋಪಗೊಳ್ಳದೆ ಎಲೈ ವಿಪ್ರನೆ, ಭಯವು ಬೇಡ, ನೀನು ಮಾಡಿದ ಉಪಕಾರ ವನ್ನು ನಾನು ಮರೆತಿಲ್ಲ, ನನ್ನ ಮಗನಿಗಾದ ಗತಿಯು ದೈವ ಕಾರ್ಯವೇ, ದೈವಸಂಕಲ್ಪವಿಲ್ಲದೆ ಯಾವುದೂ ನಡೆಯದಲ್ಲವೆ? ಆದ ಕಾರಣ ನಿನ್ನಿಂದೇನೂ ತಪ್ಪಿಲ್ಲ, ನನ್ನ ಭಂಡಾರದಿಂದ ನಿನಗೆ ಬೇಕಾದಷ್ಟು ಧನವನ್ನು ಪಡೆದುಹೋಗು" ಎಂದನು. ಬ್ರಾಹ್ಮಣನು ತುಂಬಾ ಸಂತೃಷ್ಟವನ್ನು ರಾಜಪುತ್ರನನ್ನು ತಂದೊಪ್ಪಿಸಿ, ತನ್ನ ನಿಜವಾದ ಉದ್ದೇಶವನ್ನರುಹಿ, ಮನ್ನಣೆಯನ್ನು ಬೇಡಿದನು. ವಿಕ್ರಮನಲ್ಲಿದ್ದ ಕೃತಜ್ಞತಾ ಕಾರುಣ್ಯಗಳು ನಿನ್ನಲ್ಲಿ ಉಂಟೇನೈ, ರಾಜನೆ?
ಭೋಜನು ಏನತಾನೆ ಹೇಳಬಹುದು? ಐದನೆಯಾವರ್ತಿ ಸಾಲಭಂಜಿಕೆಯು ಹೀಗೆಂದಿತು. "ಒಂದು ಸಮಯದಲ್ಲಿ ವಿಕ್ರಮಭೂಪನು ಬಹುಬೆಲೆಯುಳ ಹತ್ತು ರತ್ನಗಳನ್ನು ಎಂಟು ದಿನಗಳೊಳಗಾಗಿ ಕೋಡುತಾರೆಂದು ತನ್ನ ಭ್ರತ್ಯನೊಬ್ಬನನ್ನು ದೂರದೇಶದಲ್ಲಿದ್ದ ರತ್ನ ವ್ಯಾಪಾರಿಯ ಬಳಿಗೆ ಕಳುಹಿಸಿದನು. ಆಭ್ರತ್ಯನುಹೊಗಿ ರತ್ನಗಳನ್ನು ಕೊಂಡು ಹಿಂದಿರುಗಿ ಬರುವಾಗ”, ವಿಶೇಷ ಮಳೆ ಬಿದ್ದು ದಾರಿಯಲ್ಲಿ ಅಡ್ಡವಾಗಿದ್ದ ನದಿಯು ಉಕ್ಕಿ ಹರಿಯುತ್ತಿತ್ತು. ಹೊಳೆಯನ್ನು ದಾಟಿಸೆಂದು ಅಂಬಿಗನನ್ನು ಕೇಳಿದನು. ಅವನು ಆಗಲಾರದೆಂದು ಹೇಳಿದನು, ಬೃತ್ಯನು ತಾನು ವಹಿಸಿದ್ದ ರಾಜಕಾರ್ಯವನ್ನು ವಿವರಿಸಿದನು. ಅದಕ್ಕವನು ಹತ್ತುರತ್ನಗಳಲ್ಲಿ ಐದನ್ನು ತನಗೆ ಕೊಟ್ಟರೆ ಹರಿಗೊಲ ನಡಿಸುವದಾಗಿ ಹೇಳಿದನು. ಕಾಲವು ಮಿಂಚಿ ಹೋಗುವುದೆಂಬ ಭಯದಿಂದ ರಾಜಭ್ಯತ್ಯನು ಅದಕೊಪ್ಪಿ, ಅಂಬಿಗರವನಿಗೆ ಐದು ಮನೆಗಳನ್ನು ಕೊಟ್ಟು ಉಳಿದವನ್ನು ದೊರೆಗೊಪ್ಪಿಸಿ, ಆದಸಂಗತಿಯನ್ನು ಹೇಳಿದನು. ವಿಕ್ರಮನು ಅವನ ಕಾಲ'ನಿಯಮವನ್ನು ಮುಚ್ಚಿ ಆ ಐದು ರತ್ನಗಳನ್ನು ಬೃತ್ಯನಿಗೆ ಬಹುಮಾನವಾಗಿ ಕೊಟ್ಟುಬಿಟ್ಟನು. ಹೇಳೋ ಜಭೂ ಕತೆ, ಈಬಗೆಯ ಗುಣವು ತಮ್ಮಲ್ಲಿರುವುದೋ ? ?
ಯಥಾ ಪ್ರಕಾರ ಭೋಜನು ಅವಾಕ್. ಆರನೆಯ ಗೊಂಬೆಯು ಭೋಜನಿಗೆ ಹೇಳಿದ ಕಥೆ ಯೆಂತೆಂದರೆ:
"ವಿಕ್ರಮನು ಒಂದಾನೊಂದುವೇಳೆ ವನವಿಹಾರದಲ್ಲಿದ್ದಾಗ ಒಬ್ಬಾನೊಬ್ಬ ಬ್ರಹ್ಮಚಾರಿಯು ಅದನ್ನು ಕಂಡು ರಾಜನಲ್ಲಿಗೆ ಹೋಗಿ, '"ಎಲೈ ರಾಜನ, ಹುಟ್ಟಿದಾಗಿನಿಂದಲೂ ವ್ರತೋಪವಾಸಗಳನ್ನು ಮಾಡಿ ಬಳಲಿರುವೆನು' ಸಂಸಾರಸುಖದಲ್ಲಿ ನನಗೆ ಈಗ ಅಪೆಕ್ಷೆ ಹುಟ್ಟಿರುವುದು, ಅದನ್ನಿಡೇರಿಸಲು ನಿನಗಿಂತಲೂ ಶಕ್ತರಾರು? ಎಂದು ವಿನಯದಿಂದ ಬೇಡಿದನು. ವಿಕ್ರಮನು ಆತನಿಗೆ ಒಂದು' ಗ್ರಾಮವನ್ನೇ ದಾನವಾಗಿಕೊಟ್ಟು, ಆತನ ವಿವಾಹಕ್ಕೂ ಸುಖಜೀವನಕ ತಕ್ಕ ಅನುಕೂಲ್ಯಗಳನ್ನು ಒದಗಿಸಿಕೊಟ್ಟನು. ಇಂತಹ ಕಾರ್ಯಗಳನ್ನು ತಾವೆಷ್ಟು ಮಾಡಿರುವಿರಿ?
ಭೋಜನು ಏನೂ ಹೇಳಲಿಲ್ಲ.
ಏಳನೆಯ ಸಲ ಭಂಜಿಕೆಯು ನುಡಿದ ವೃತ್ತಾಂ ತವೇನೆಂದರೆ:
"ಪಶ್ಚಿಮ ಸಮುದ್ರದಲ್ಲೊಂದು ದ್ವೀಪಉಂಟು, ಅದರಲ್ಲೊಂದು ಪರ್ವತದಮೇಲೆ ಭುವನೆಶ್ವರಿ ದೇವಿಯ ಆಲಯ ವುಂಟು ಪೂರ್ವಕಾಲದಲ್ಲಿ, ಅದರಲ್ಲಿನ ದೇವತಾ ವಿಗ್ರಹದ ಪಕ್ಕ ದಲ್ಲಿ, ತಲೆಯಿಲ್ಲದ ಸ್ತ್ರೀದೇಹ ವೊಂದೂ ಪುರುಷ ದೇಹವೊಂದೂ ಇದ್ದುವು. ಅಲ್ಲಿ ಗೋಡೆಯ ಮೇಲೆ "ಪರೋಪಕಾರಿಯಾದ ಮಹಾಪುರುಷನು ತನ್ನ ಕೊರಳ ರಕ್ತದಿಂದ ಇದೇವಿಯನ್ನಾರಧಿಸಿದರೆ ಈ ಶರೀರಗಳು ಸಜೀವವಾಗುವುವು" ಎಂದು ಬರೆಯಲ್ಪಟ್ಟಿತ್ತು, ಈ ಸಂಗತಿಯನ್ನು ವಿಕ್ರಮಾದಿತ್ಯನು ಹೇಗೋ ಕೇಳಿ, ಆದೇವತಾಲಯವನ್ನು ಸೇರಿ, ದೇವತೆಗೆ ನಮಸ್ಕರಿಸಿ ರಕ್ತಕ್ಕೋಸ್ಕರ ಖಡ್ಗವನ್ನು ತನ್ನ ಕಂಠದೊಳಕ್ಕೆ ಹೊಗಿಸಿದನು. ಕೂಡಲೆ ದೇವಿಯು ಪ್ರಸನ್ನಳಾಗಿ, ಆಮುಂಡಗಳಿಗೆ ತಲೆಯನ್ನೂ ಜೀವವನ್ನೂ ಕೊಟ್ಟು, ಅವರನ್ನು ತಮ್ಮ ರಾಜ್ಯಕ್ಕೆ ಬಿಳ್ಕೋಟ್ಟು,ವಿಕ್ರಮನನ್ನೂ ಆಶೀರ್ವದಿಸಿದಳು. ವಿಕ್ರಮನ ಈ ನಾ ಹಸಪರೋಪಕಾರಗಳಿಗೆ ಸಮವಾದ ಗುಣಗಳು ತಮ್ಮಲಾವುವು?"
ಭೋಜನು ಮೂಕನಂತಿದ್ದನು.
ಕಾಶ್ಮೀರ ದೇಶದಲ್ಲಿ ಒಬ್ಬಾನೊಬ್ಬ ಧನಿಕನು ಬಹುದ್ರವ್ಯವನ್ನು ವ್ಯಯವಾಗಿ ಒಂದು ದೊಡ್ಡ ಕೆರೆಯನ್ನು ತೊಡಿಸಿದ್ದನು, ಆದರೆ ವಿನು ಮಾಡಿದರೂ, ಎಷ್ಟುದಿನಗಳ ಕಾದರೂ ಅದಕ್ಕೆ ನೀರೇ ಬರಲಿಲ್ಲ, ಧನಿಕನು ಚಿಂತಾಸಮದ್ರದಲ್ಲಿ ಮುಳುಗಿರಲು, ಒಬ್ಬ ಋಷಿಯು ಅವನಲ್ಲಿಗೆ ಬಂದು "ಎಲೈ, ಪರೋಪಕಾರಿದ ಒಬ್ಬ ಮಹಾಪುರುಷನು ತನ್ನ ರಕ್ತವನ್ನಿಕೆರೆಯ ಅಂಗಳದಲ್ಲಿ ಚೆಲ್ಲಿದ ಹೊರತು ಇಲ್ಲಿನೀರು ನಿಲ್ಲುವುದಿಲ್ಲ."ಎಂದು ಹೇಳಿದನು. ಧನಿಕನು ಮತ್ತಷ್ಟು ಚಿಂತಾಕ್ರಾಂತನಾದನು. ವಿಕ್ರಮನೀ ಸಂಗತಿಯನ್ನು ಕೇಳಿ, ತಾನೇ ಆಕೆರೆಗೆ ಬಂದು ತನ್ನ ರಕ್ತವನ್ನು ಚೆಲ್ಲಲುದ್ಯುಕ್ತನಾಗಿ ಕರಾರಿಯನ್ನು ಬರೆ ಯಿಂದ ತೆಗೆದನು, ಆನಿಮಿಷದಲ್ಲಿಯೇ ಅಲ್ಲೊಂದುಕಡೆ ಅಕ ಸ್ಮಾತಾಗಿ ನೆಲದಿಂದ ನೀರು ಉಕ್ಕಿ ಹರಿಯಲಾರಂಭಿಸಿತು. "ವಿಕ್ರಮ, ನೀನೇಧೀರನು . ನೀನು ಕೆರೆಯ ಕಟ್ಟೆಯನ್ನು ಹತ್ತು ವಷ್ಟರೊಳಗೆ ಕೆರೆಯು ತುಂಬಿರುವುದು. ' " ಎಂದು ಅಶರೀರವಾಣಿಯಾಯಿತು, ಹಾಗೆಯೇ, ವಿಕ್ರಮನು ಏರಿಯನ್ನು ಹತ್ತಿ ದೃಷ್ಟಿಯನ್ನು ಹಿಂದಿರುಗಿಸುವ ವೇಳೆಗೆ ತಟಾಕವು ನಿರ್ಮ ಲೋದಕದಿಂದ ಪರಿಪೂರ್ಣವಾಗಿತ್ತು, ಇಂತಹ ಪ್ರಭಾವವು ತಮ್ಮಲ್ಲೂ ಉಂಟೆ??
ಭೋಜನು ಬಾಗಿದ ತಲೆಯನ್ನು ಮೇಲಕ್ಕೆತ್ತಲಿಲ್ಲ.
ಭೋಜನಿಗೆ ವಿಕ್ರಮಾದಿತನ ವೃತ್ತಾಂತವನ್ನು ಕೇಳುವುದರಲ್ಲಿ ಆಸಕ್ತಿಯು ವಿಶೇಷವಾಯಿತು. ಸಿಂಹಾ ಸನದ ಒಂಬತ್ತನೆಯ ಪುತ್ತಳಿಕೆಯು ಆತನೊಡನೆ ಹೀಗೆಂದಿತು.
"ಕಾಂಚೀನಗರದಲ್ಲಿ ಬಲುರೂಪವತಿಯಾದ ತರುಣಿಯೊಬ್ಬಳು. ರಾತ್ರಿ ಕಾಲದಲ್ಲಿ ಆಕೆಯು ನಿದ್ರೆಯಲ್ಲಿರುವಾಗ ಒಬ್ಬಾನೊಬ್ಬ ರಾಕ್ಷಸನು ಖಂದು ಆಕೆಯ ಮೈರಕ್ತವನ್ನ ಹೀರಿಹೋ ಗುತ್ತಿದ್ದನು. ವಿಕ್ರಮನು ಈಸಮಾಚಾರವನ್ನರಿತು, ಅಲ್ಲಿಗೆ ಹೋಗಿ, ಆರಾಕ್ಷಸನ ಸಮಯವನ್ನು ಕಾದಿದ್ದು, ಅವನು ಬಂದೊಡನೆಯೆ ಅವನನ್ನು ಕೊಂದು, ಆಕೆಯ ಪೀಡೆಯನ್ನು ತೊಲಗಿಸಿ, ಆಕೆಯನ್ನು ಅನುರೂಪನಾದ ವರನಿಗೆ ಕೊಡಿಸಿ ಮದುವೆ ಮಾಡಿಸಿ, ಅವರ ಸುಖಕ್ಕೆ ಕಾರಣನಾದನು. ಇಂತಹ ಸಂದರ್ಭವು ತಮ್ಮದೇನಾದರೂ ಇದ್ದರೆ ತಿಳಿಸಿ
ಭೋಜನು ಮುಖವನ್ನು ಹಿಂದಿರುಗಿಸಿದನು.
ಹತ್ತನೆಯ ಸಾಲಭಂಜಿಕೆಯು ಹೀಗೆಂದಿತು,
"ಒಬ್ಬಾನೊಬ್ಬ ಮಹಾಯೋಗಿಯು ವಿಕ್ರಮಾದಿತ್ಯನ ಬಳಿಗೆ ಬಂದು ಆತನಿಗೊಂದು ರಹಸ್ಯವಾದ ಮಂತ್ರವನ್ನು ಉಪದೇಶಿಸಿದನು. ಆತನು ಬಹುನಿಯಮದಿಂದ ಒಂದು ವರ್ಷ ಆಮಂತ್ರವನ್ನು ಜಪಿಸಿ ಹೋಮಮಾಡಲು, ಒಬ್ಬ ಪುರುಷನು ಯಜ್ಞ ಕುಂಡದಲ್ಲಿ ಹುಟ್ಟಿ, ಬಂದು ದಿವ್ಯವಾದ ಫಲವನ್ನು ರಾಜನಿಗಿತ್ತು "ಎಲೈ ರಾಜನೆ, ಈ ಹಣ್ಣನ್ನು ತಿಂದವರಿಗೆ ಮುಪ್ಪುರೋಗ ಸಾವುಗಳಿಲ್ಲವು" ಎಂದುಹೇಳಿ ಅದೃಶ್ಯನಾದನು. ಆಸಮಯಕ್ಕೆ ಸರಿಯಾಗಿ ಕುಷ್ಠರೋಗದಿಂದದಿಂದ ಪೀಡಿತನಾದವನೋಬ್ಬನು ರಾಜನಿದ್ದೆಡೆಗೆ ಬಂದು, ವಿಕ್ರಮನನ್ನು ಕುರಿತು ಮಹಾರಾಜನೆ, ನೀನೇ ನಿನ್ನ ಪ್ರಜೆಗಳಿಗೆ ತಂದೆಯು, ನೀನೇ ತಾಯಿಯು, ನೀನೇ ಬಂಧುವು, ನೀನೇ ಆಪ್ತ ಮಿತ್ರನು, ನಮ್ಮ ಕಷ್ಟಗ ಳನ್ನು ನೀನಲ್ಲದೆ ಮತ್ತಾರೂ ಹೋಗಲಾಡಿಸಲಾರರು, ಈಗ ನಾನು ಮಹಾ ವ್ಯಾಧಿಯಲ್ಲಿ ನರಳುತ್ತಿರುವೆನು. ನನ್ನ ದೇಹವು ಯಾವ ಕಾರ್ಯಕ್ಕೂ ಉಪಯೋಗವಿಲ್ಲದೆ ಇದೆ. ನನ್ನ ಕಷ್ಟವನ್ನು ನೀಗಲು ನೀನೊಬ್ಬನೇ ಶಕ್ತನು "ಎಂದು ಮೊರೆಯಿಟ್ಟನು, ವಿಕ್ರಮನು ತಾನು ಸಂಪಾದಿಸಿದ್ದ ದಿವ್ಯಫಲವನ್ನು ತಡಮಾಡದೆ ಅವನಿಗೆ ಕೊಟ್ಟುಬಿಟ್ಟನು. ಭೋಜಮಹಾರಾಜರು ಹಾಗೇನಾದರೂ ಮಾಡಿರುವರೋ?"
ಭೋಜನು ತಲೆಬಾಗಿದನು, - ನಾಚಿಕೆಯಿಂದ ಲೋ ಏನೋ!
ಹನ್ನೊಂದನೆಯ ಸಂಚಾಲಿಕೆಯ ಹೇಳಿದುದೇನಂದರೆ
"ಪಲಾಶ ನಗರವೆಂಬ ಊರಿನ ಬಳಿ ಶೈವಾಲಕವೆಂಬ ಬೆಟ್ಟವಿರುವುದು. ಅದರಲ್ಲಿ ಒಬ್ಬ ರಾಕ್ಷಸನು ವಾಸವಾಗಿದ್ದು, ಆ ಊರಿನಲ್ಲಿದ್ದವರನ್ನು ಬೇಕಾದಂತೆ ಭಕ್ಷಿಸುತ್ತಿದ್ದನು. ಆ ಜನರು ಅವನಿಗೆ ಏನುಮಾಡುವುದಕ್ಕೂ ಶಕ್ತಿಯಿಲ್ಲದೆ, ತಮ್ಮನ್ನೆಲ್ಲರನ್ನೂ ರಾಕ್ಷಸನು ಸಿಕ್ಕಿದಂತೆ ಕೊಲ್ಲದಿರಬೇಕೆಂದೂ, ತಾವೇ ದಿನಕ್ಕೂನಂತೆ ಸರದಿಯ ಮೇರೆಗೆ ಅವನ ಆಹಾರಕ್ಕಾಗಿ ಹೋಗುವಂತೆಯ ಅವನಿಗೆ ಹೇಳಿಕಕ್ಕೊಂಡರು. ಅವನು ಹಾಗೆಯೇ ಒಪ್ಪಲು ಕೆಲವುದಿನ ಹಾಗೆಯೇ ನಡೆಯಿತು;-ಒಂದೊಂದು ದಿನ ಒಂದೊಂದು ಮನೆಯವರು ಕಳುಹುತ್ತಿದ್ದರು, ಒಂದು ದಿನ ಒಬ್ಬ ಮುದುಕನ ಮನೆಯ ಸರದಿ ಬಂತು, ಆ ಮನೆಯಲ್ಲಿದ್ದವರು ಒಬ್ಬ ಮುದುಕ, ಅವನ ಹೆಂಡತಿ ಮುದುಕಿ, ಅವನ ಮಗ ಹುಡುಗ ಮುದುಕನೇ ರಾಕ್ಷಸನಿಗೆ ಆಹಾರವಾಗಿ ಹೋದರೆ, ಮುದಕಿಯಾದ ಹೆಂಡತಿಯು ವಿಧವೆಯಾಗುವಳು ಮುದುಕಿಯು ಹೋದರೆ ಮಗನಿಗೆ ರಕ್ಷಕರಿಲ್ಲದೆ ಹೊಗುವರು, ಮಗನು ಹೋದರೆ ವಂಕವೇನಾಶವಾಗುವುದು. ಈ ದುಃಖದಲ್ಲಿ ಅವರು ಹಿಂದೆ ಹದಿನೈ ದು ದಿನಗಳಿಂದಲೂ ಗೋಳಾಡುತ್ತಿದ್ದರು. ಇದನ್ನ ವಿಕ್ರಮನರಿತು,ಯಾರಿಗೂ ಹೇಳದಂತೆ, ತಾನೇ ಗೊತ್ತಾದ ಹೊತ್ತಿಗೆ ಮುಂಚೆಯೇ ಗೊತ್ತಾದ ಸ್ಥಳಕ್ಕೆ ಹೋಗಿ ರಾಕ್ಷಸನಿಗಾಗಿ ಕಾದಿದ್ದನು . ಅವನು ಬಂದು ಈತನನ್ನು ನೋಡಿ, ಈತನ ಲಕ್ಷಣಗಳಿಂದ ಈ ತನಾರೋ ಮಹಾಪುರುಷನೆಂದು ಬಗೆದು ಮಾತನಾಡಿಸಿದನು. ವಿಕ್ರಮನು ತನ್ನ ಹೆಸರನ್ನು ಹೇಳದೆ ರಾಕ್ಷಸನ ಕ್ರೂರಕರ್ಮವನ್ನು ದೂಪಿಸಿ, ನಡೆದಸಂಗತಿಯನ್ನು ವಿವರಿಸಿದನು ರಾಕ್ಷಸನು ಈತನ ಪರೋಪಕಾರ ಬುದ್ದಿಯಿಂದ ಮನಕರಗಿದವನಾಗಿ, ಅಲ್ಲಿಂದ ಮುಂದಕ್ಕೆ ಎಂದೆಂದಿಗೂ ಪಲಾಶನಗರದವರ ಗೋಚಿಗೇ ಹೋಗದೆ, ಯಾರಿಗೂ ಹಿಂಸೆ ಮಾಡದೆ ಇದ್ದನು.'"
***
ಹನ್ನೆರಡನೆಯ ಬೊಂಬೆಯು ವಿವರಿಸಿದ ಕಥೆ:-
"ಹಿಮಾಚಲದ ತಪ್ಪಲಿನಲ್ಲಿ ಒಂದು ನಗರ. ಆ ನಗರಕ್ಕೆ ಅನತಿದೂರದಲ್ಲಿ ಒಂದು ಬಿದಿರು ಮೆಳೆಗಳ ಕಾಡು, ಆ ಕಾಡಿನ ಮಧ್ಯಭಾಗದಿಂದ ಪ್ರತಿಅರ್ಧರಾತ್ರಿಯೂ ಆರ್ತಸ್ವರವು ಊರಿಗೆ ಕೆಳಬರುವುದು, ಆ ಸ್ವರವು ಒಬ್ಬ ಹೆಂಗಸಿನದು, ಆ ಹೆಂಗಸು ಯಾರೋ ಯಾರಿಗೂ ತಿಳಿಯದು ಯಾರಿಗೂ ಆ ಕಾಡನ್ನು ಬಳ ಹೊಕ್ಕು ನಿಜಸ್ಥಿತಿಯನ್ನು ಕಂಡುಹಿಡಿಯಲು ಧೈರ್ಯವಿಲ್ಲ. ಹೀಗೆ ಕೆಲವು ಕಾಲ ನಡೆದ ಮೇಲೆ, ಈ ಸಂಗತಿಯು ವಿಕ್ರಮನ ಕಿವಿಗೆ ಬಿತ್ತು ಆತನು ಕೂಡಲೆ ಉಜ್ಜಯಿನಿಯಿಂದ ಹೊರಟು ಆ ಅರಣ್ಯ ಮಧ್ಯವನ್ನು ಸೇರಿ, ಅರ್ಧರಾತ್ರಿಯಲ್ಲಿ ಅಲ್ಲಿ ಒಬ್ಬ ಹೆಂಗಸನ್ನು ಒಬ್ಬ ರಾಕ್ಷಸನು ಹಿಂಸಿಸುತ್ತಿದ್ದದ ಕಂಡು, ಆ ರಾಕ್ಷಸನನ್ನು ಕೊಂದನು ದೀನಸ್ವರದಿಂದ ಗೋಳಿಡುತ್ತಿದ್ದ ಆಹಂ ಗಸು ರಾಕ್ಷಸಸಂಹಾರದಿಂದ ಸಂತೋಷಿಸಿ ತನ್ನವತ್ತಂತಾವನ್ನು ರಾಜನಿಗೆ ತಿಳಿಸಿದಳು" ನಾನು ನನ್ನ ಪತಿಯನ್ನು ಪ್ರೀತಿಸದೆ ಆತನ ಇಷ್ಟಕ್ಕೆ ವಿರೋಧವಾಗಿ ನಡೆಯುತ್ತಿದ್ದ ಕಾರಣ, ಆತನು ಸಾಯುವ ಕಾಲದಲ್ಲಿ ನನ್ನನ್ನು ಈ ವನದಲ್ಲಿ ರಾಕ್ಷಸನ ಬಾಧೆಗೆ ಗುರಿಯಾಗುವಂತೆ ಶಪಿಸಿದನು. ಆಗ ನಾನು ಭಯಪಟ್ಟು ಆತನ ಪಾದಗಳಿಗೆ ರಗಿ ಮನ್ನಣೆಯನ್ನ ಬೇಡಿದೆನು, ಆತನು ಒಬ್ಬ ಮಹಾಪುರುಷನಿಂದ ನನಗೆ ಶಾಪವಿಮೋಚನೆ ಯಾದಿ ತೆಂದು ಹೇಳಿದನು. ಈಗ ನೀನು ರಾಕ್ಷಸಭಯದಿಂದ ನನ್ನನ್ನು ತಪ್ಪಿಸಿದೆ. ನೀನು ಮಹಾಪುರುಷನೇ ಸರಿ ಇನ್ನು ನಾನು ಈ ಹಾಳು ದೇಹವನ್ನು ಬಿಡುವೆನು. ನನ್ನಲ್ಲಿ ಚಿನ್ನದಿಂದ ತುಂಬಿದ ಒಂಭತ್ತ ದೊಡ್ಡ ಕೊಪ್ಪರಿಗೆಗಳಿವೆ, ಅದನ್ನು ನೀನೇ ದಯೆಯಿಂದ ಸ್ವೀಕರಿಸು" ಎಂದು ಅವಳು ಹೇಳುತ್ತಾ ಹರಣವನ್ನು ಬಿಟ್ಟಳು. ವಿಕ್ರಮನು ವಿಸ್ಮಿತನಾಗಿ, ಆ ಹೊನನ್ನೆಲ್ಲಾ ಧರ್ಮಕಾರ್ಯಗಳಿಗೆ ವಿನಿಯೋಗಿಸಿ, ಉಜ್ಜಯಿನಿಗೆ ಹಿಂದಿರುಗಿದನು"
ಈ ಕಥೆಯನ್ನು ಕೇಳಿ ಭೋಜನು ಅಂತಃಪುರಕ್ಕೆ ಹಿಂದಿರುಗಿದನು.
***
ಹದಿಮೂರನೆಯ ಪುತ್ಥಳಿಯ ಭೋಜನೊಡನೆ ಹೀಗೆಂದಿತು:____
35
ರಿ ಪುರಾಣ ಶ್ರವಣ ಮಾಡುತ್ತಿದ್ದರು, ವಿಕ್ರಮನು ಅದನ್ನು ಕಂಡು ತಾನೂ ಅಲ್ಲಿ ಕುಳಿತನು. ಪೌರಾಣಿಕನು ಈ ಮನುಷ್ಯ ದೇಹವು ಅಶಾಶ್ವತವೆಂದೂ, ಇದೆ ಹವನ್ನು ಪರೋಪಕಾರಕ್ಕಾಗಿ ವಿನಿಯೋಗಿಸಬೇಕೆಂದೂ ಮುಂತಾಗಿ ಹೇಳುತ್ತಿದ್ದನು. ಆ ಹೊತ್ತಿಗೆ ಸರಿಯಾಗಿ ನದೀಮಧ್ಯದಿಂದ ಅಯ್ಯಾ ಪುಣ್ಯಾತ್ಮರೇ,ನಾನು ಮುದಿಬ್ರಾಹ್ಮಣ, ನನ್ನ ಹೆಂಡತಿ ಮುದುಕಿ ನಾವಿಬ್ಬರ ನದಿಯಲ್ಲಿ ಮುಳುಗಿ ಹೋಗುತ್ತಿದ್ದೇವೆ, ಯಾರಾದರೂ ಬಂದು ನಮ್ಮನ್ನು ಗಟ್ಟಿಗೆಹಾಕಿರಿ" ಎಂಬ ವಾಕ್ಯಗಳು ಕೇಳ ಬಂದವು, ಕುತೂಹಲದಿಂದ ಪರೋಪಕಾರ ಮಹಿಮೆಯನ್ನು ಕೇಳತ್ತಿದ್ದ ವರರೂ ಮೇಲಕ್ಕೇ ಬೀಳಲಿಲ್ಲ ವಿಕ್ರಮನು ತಡಮಾಡದೆ ನದಿಯೊಳಕ್ಕೆ ಧುಮ್ಮಿಕ್ಕಿ, ಅವರಿಬ್ಬರನ್ನೂ ತಿರಕ್ಕೆ ತಂದನು.ಕೃತಜ್ಞನಾದ ಬ್ರಾಹ್ಮಣನು ವಿಕ್ರಮನ ಉಪಕಾರವನ್ನು ವಿಶೇಷವಾಗಿ ಸ್ತುತಿಸಿ, ತಾನು ಅನೇಕ ವರ್ಷಗಳ ವೇದ ಶಾಸ್ತ್ರಧ್ಯಾಯನವನ್ನೂ ಯಜ್ಞ ದಾನ ತಪಸ್ಸುಗಳನ್ನೂ ಮಾಡಿ ಸಂಪಾದಿಸಿದ ಪುಣ್ಯವನ್ನು ವಿಕ್ರಮನಿಗೆ ಧಾರೆಯೆರೆದನು, ಆ ವೇಳೆಗೆ ಅಲ್ಲಿಗೊಬ್ಬ ಬ್ರಹ್ಮ ರಾಕ್ಷ ಸನು ಬಂದು ವಿಕ್ರಮನನ್ನು ಕುರಿತು "ಅಯ್ಯಾ ಮಹಾಪುರುಷನೆ, ವಿದ್ಯಾಗರ್ವವು ನನ್ನಲ್ಲಿ ವಿಶೇಷವಾಗಿದ್ದ ಕಾರಣ ಬ್ರಾಹ್ಮಣನಾದ ನಾನು ರಾಕ್ಷಸನಾದೆ. ನೀನು ಪರೋಪಕಾರಿಯಾದ ಕಾರಣ, ಈಗ ನಗೀಬ್ರಾಹ್ಮಣನಿಂದ ಬಂದಿರುವ ಪುಣ್ಯವನ್ನು ನನಗೆ ಕೂತು, ಅದರಿಂದ ನನ್ನ ರಕ್ಷಸತವು ಹೋಗುವುದು' ಎಂದು ಕೇಳಿದನು, ವಿಕ್ರಮನು ಹಾಗೆಯೇ ಮಾಡಿದನು. ಆಗ ಅವನು ನಿಜರೂಪಕ್ಕೆ ಬಂದು ವಿಕ್ರಮನನ್ನು ಕೊಂಡಾಡಿದೆನು."
ಇದನ್ನು ಕೇಳಿದಮೇಲೆ ಭೋಜನು ಅಲ್ಲಿಸಿಲ್ಲಲಿಲ್ಲ. *** ಹದಿನಾಲ್ಕನೆಯ ಸಾಲಭಂಜಿಕೆಯು ಹೇಳಿದವೃತ್ತಾಂತ. "ಒಂದು ಸಂದರ್ಭದಲ್ಲಿ ಒಬ್ಬ ಯೋಗಿಶ್ವರನು ವಿಕ್ರಮರಾಜನಿಗೆ ಬಂದು ಶಿವಲಿಂಗವನ್ನು ಕೊಟ್ಟು ಇದನ್ನು ಭಕ್ತಿಯಿಂದ ಪೂಜಿಸು. ನಿನಗೆ ಬೇಕಾದ ವಸ್ತುಗಳೆಲ್ಲವನ್ನೂ ಇದುಕೊಡುವುದು' ಎಂದು ಹೇಳಿದನು ರಾಜನು ಅದನ್ನು ಸ್ವೀಕರಿಸಿದ ಕೆಲವು ಕಾಲದ ಮೇಲೆ ಒಬ್ಬ ಬ್ರಾಹ್ಮಣನು ಆತನಲ್ಲಿಗೆ ಬಂದು "ಅಯ್ಯಾ ನಾಲ್ಕೈದು ದಿನಗಳ ಕೆಳಗೆ ಯಾರೊ ನನ್ನ ಇಷ್ಟದೇವತಾ ಮೂರ್ತಿಯಾದ ಶಿವಲಿಂಗವನ್ನು ಅಪಹರಿಸಿದರು. ಆಗಿನಿಂದಲೂ ನಾನು ಉಪವಾಸವಾಗಿದ್ದೇನೆ . 'ಎಂದನು. ಕೂಡಲೆ ವಿಕ್ರಮನು ತನ್ನಲ್ಲಿದ್ದ ಈಶ್ವರಲಿಂಗವನ್ನು ಆತನಿಗೆ ಕೊಟ್ಟುಬಿಟ್ಟನು'.
ಭೋಜನು ಮನಸ್ಸಿನಲ್ಲಿ 'ವಿಕ್ರಮನೆಲ್ಲಿ ನಾನಿಲ್ಲಿ?' ಎಂದು ಅಂದುಕ್ಕೊಂಡು ಹಿಂದಿರುಗಿದನು.
***
ಹದಿನೈದನೆಯ ಪ್ರತಿಮೆಯು ಕಥಿಸಿದ ಬಗೆ:__
"ಒಂದು ನಗರದಲ್ಲಿ' ಒಬ್ಬ ಪ್ರಾಯದ ಹೆಂಗಸು ರಾಜ್ಯಭಾರ ಮಾಡುತ್ತಿದ್ದಳು, ಆಕೆಗಿನ್ನೂ ಮದುವೆಯಾಗಿರಲಿಲ್ಲ. ಆಕೆಯು ಚೆಲ್ವಿಕೆಗೆ ತೌರುಮನೆಯಿಂದ ಎಲ್ಲರೂ ಹೇಳುತ್ತಿದ್ದರು. ಆಕೆಯು ಒಂದು ದೊಡ್ಡ ಕಬ್ಬಿಣದ ಕೊಪ್ಪರಿಗೆಯಲ್ಲಿ ಎಣ್ಣೆಯನ್ನು ಕಾಸಿಸಿ, ಯಾರು ಅದರೊಳಕ್ಕೆ ಧೆರ್ರ್ಯದಿಂದ ಬೀಳುವನೋ? ಅವನನ್ನೆ ತಾನು ಮದುವೆಯಾಗುವುದಾಗಿ ಸಾರುತ್ತಿದ್ದಳು, ಈವರ್ತ ಮಾನವು ವಿಕ್ರಮನಿಗೆ ತಿಳಿಯಿತು, ಆತನು ಬಂದು ಆಕೆಯ ಮಾತಿನಂತೆ ಕಾದಣ್ಣೆಯ ಕಟಾಹದೊಳಕ್ಕೆಬಿದ್ದನು. ಅರೆಗಳಿಗೆ ಯೊಳಗಾಗಿ ಆತನ ದೇಹವೆಲ್ಲವೂ ಬೆಂದು ಮಾಂಸದ ಮುದ್ದೆಯಾ ತು, ಆಗ ಕ್ರೂರಹೃದಯಳಾದ ಆ ಸ್ತ್ರೀಯು ಆ ಮುದ್ದೆಯ ನ್ನು ಈಚೆಗೆ ತೆಗೆದು, ಅದರ ಮೇಲೆ ಯಾವುದೋ ನೀರನ್ನು ಚೆ ದಳು, ಕೂಡಲೆ ವಿಕ್ರಮನು ತನ್ನ ಹಿಂದಿನ ಮನೋಹರರೂಪ ದಲ್ಲಿ ನಿಂತನು, ಆಕೆಯು ಆತನ ಧೈರ್ಯವನ್ನು ಕೊಂಡಾಡಿ, ಆತ ಕೊರಳಲ್ಲಿ ಹೂಸರವನ್ನು ಹಾಕಲು ಬಂದಳು. ವಿಕ್ರಮನು ಆಕೆಯನ್ನು ತಡೆಹದು, ತಾನು ಎಕಪಪತ್ನಿ ವ್ರತಸ್ಥನೆಂದು ಹೇಳಿ, ಆಕೆಗೆ ತಕ್ಕವರನನ್ನು ತೋರಿಕೊಟ್ಟನು. ಆಕೆಯ ಆತನ ಮಾ ಗೆಒಡಂಬಟ್ಟಳು, ವಿಕ್ರಮನು ಉಜ್ಜಯಿನಿಗೆ ಬಂದನು?
ಭೋಜನು ಅಂತಃಪುರಕ್ಕೆ ಹೋದನು:__
***
ಹದಿನಾರನೆಯ ಸಾಲಭಂಜಿಕೆಯು ಹೇಳಿದುದೆಂತೆಂದರೆ:
ಒಂದು ದಿನ ಒಬ್ಬ ಬ್ರಾಹ್ಮಣನು ವಿಕ್ರಮಾರ್ಕ ಮಹಾರಾಜ ಬಳಿಗೆ ಬಂದು ಈ ರೀತಿ ಪ್ರಾರ್ಥಿಸಿದನು: "ಪ್ರಭುವೇ' ನನಗೆ ಎಂಟು ಮಂದಿ ಗಂಡುಮಕ್ಕಳು, ಹೆಣ್ಣು ಮಗು ಮಾತ್ರ ಬಹು ಕಾಲದವರೆಗೂ ಅಗಲಿಲ್ಲ, ಆಗ, ನನಗೊಬ್ಬ ಮಗಳಾದರೆ ಅವಳಿಗೆ ಜಗದಂಬೆ"ಎಂದು ಹೆಸರಿಟ್ಟು, ಅವಳಷ್ಟು ಭಾರ ಹೊನ್ನಿನೋವೆ ಅವಳನ್ನು ನಾಲ್ಕು ವೇದಗಳನ್ನು ಅರಿತ ವಿಪ್ರನಿಗೆ ಕೊಟ್ಟಳು ಮದುವೆ ಮಾಡುವೆನೆಂದು ಶ್ರೀಜಗದಂಬೆಗೆ ಹರಸಿಕ್ಕೊಂಡೇನು,ಅನಂತರ ನನಗೊಬ್ಬ ಪುತ್ರಿಯು ಹುಟ್ಟಿದಳು, ಈಗ ಅವಳಿಗೆ ವಿವಾಹ ಕಾಲವು ಸಮೀಪಿಸಿದೆ ಆದರ ನನ್ನ ಹರಕೆಯನ್ನು ಸಲ್ಲಿಸಲು ಸುವರ್ಣವಿಲ್ಲ ಅದನ್ನು ನಿನ್ನಲ್ಲದೆ ಮತ್ತಾರು ಕೊಡಬಲ್ಲರು?" ಎಂದನು. ವಿಕ್ರಮನು ಅವನಿಗೆ ಬೇಕಾದಷ್ಟು ಚಿನ್ನವನ್ನು ಆಗಲೇ ಕೊಡಿಸಿದನು
ಭೋಜನು ಅಚ್ಚರಿಯಿಂದ ತಲೆದೂಗಿದನು.
ಹದಿನೇಳನೆಯ ಪ್ರತಿಮೆಯು ಈ ಕೆಳಗಣ ಕಥೆಯನ್ನು ವಿಸ್ತರಿಸಿತು:__
"ಒಬ್ಬ ರಾಜನು ವಿಕ್ರಮನಿಗಿಂತಲೂ ಐಶ್ವರ್ಯಶಾಲಿಯಾಗಬೇಕೆಂದೂ, ಅದರಿಂದ ಪರೋಪಕಾರಮಾಡಿ ವಿಕ್ರಮನಿಗಿಂತಲೂ ಕಿರ್ತಿಶಾಲಿಯಾಗಬೇಕೆಂದೂ ಬಯಸಿ, ಒಬ್ಬ ದೇವತೆಯನ್ನು ಉಪಾಸನೆ ಮಾಡುತ್ತಿದ್ದನು. ಎಷ್ಟು ದಿನವಾದರೂ ಅವನ ಕೋರಿಕೆ ಯು ಕೈಗೂಡಲಿಲ್ಲ. ವಿಕ್ರಮನು' ಇದನ್ನರಿತು ಪಶ್ಚಾತ್ತಾಪಗೊಂಡು ಆ ರಾಜನಿದ್ದೆಡೆಗೆ ಬಂದು, ತಾನೇ ಆ ದೇವತೆಗೆ ಆಹುತಿಯಾಗಿ ಅಗ್ನಿ ಕುಂಡದೊಳಕ್ಕೆ ಇಳಿದನು ಕೂಡಲೆ ದೇವಿಯ ಕಣ್ಣಿದಿರಿಗೆ ಬಂದ "ಎಲೈ ಮಹಾಪುರುಷನೆ, ನಿನಗೇನು ಬೇಕು?ಎಂದಳು,ವಿಕ್ರಮನು ತಾಯಿ, ಈ ರಾಜನಿಗೆ ಪ್ರತಿನಿತ್ಯವೂ ಏಳು ಕೊಪ್ಪರಿಗೆಯಷ್ಟು ಧನವನ್ನು ಅನುಗ್ರಹಿಸು, ಎಂದು ಬೇಡಿದನು, ದೇವಿಯು ಅದಕ್ಕೆ ಸಮ್ಮತಿಸಿ ವಿಕ್ರಮನನ್ನು ಆಶೀರ್ವದಿಸಿ ಅಂತರ್ಧಾನವಾದಳು."
ಭೋಹನು ಆಸ್ಥಳದಿಂದ ತೆರಳಿದನು.
***
ಹದಿನೆಂಟನೆಯ ಸಾರಿ ಭೋಜನು ವಿಕ್ರಮಪೀಠದ ಬಳಿ ಸೇರಲು ಮತ್ತೊಂದು ಸಾಲಭಂಜಿಕೆಯು ಹೀಗೆಂದಿತು:___
"ವಿಕ್ರಮರಾಜನು ಒಂದಾವರ್ತಿ ಒಬ್ಬ ದೇಶಸಂಚಾರಿಯನ್ನು ಕಂಡು ಅವನು ನೋಡಿದ ವಿಶೇಷಗಳನೆಂದು ಕೇಳಿದನು, ಅವನು ಹೀಗೆ ಬಿನ್ನಯಿಸಿದನು: "ಉದಯಪರ್ವತದಲ್ಲಿ ಸೂರ್ಯನ ಅರಮನೆಯಿದೆ. ಅದರ ಪಕ್ಕದ ದೇವಗಂಗಾ ನದಿಯುಹರಿಯು 39
ತಲಿದೆ. ಸೂರ್ಯನು ತನ್ನ ಮನೆಯಿಂದ ಹೊರಗೆ ಹೊರಡುವ ವೇಳೆಗೆ ಸರಿಯಾಗಿ ಗಂಗಾನದಿಯಲ್ಲಿ ಒಂದು ಚಿನ್ನದ ಕಂಬವು ಉತ್ಪತ್ತಿಯಾಗುವುದು. ಅದರ ಮೇಲುಗಡೆ ಒಂದು ನವರತ್ನ ಖಚಿತ ಸಿಂಹಾಸನವಿರುವುದು. ಸೂರ್ಯನು ಮೇಲೆ ಹೋದ ಹಾಗೆಲ್ಲಾ ಕಂಬವೂ ಬೆಕಿದು ಸೂರ್ಯಮಂಡಲವನ್ನು ಸಾರುವುದು, ಆಮೇಲೆ ಸೂರ್ಯನು ಇಳಿದ ಹಾಗೆಲ್ಲಾ ಕಂಬವೂ ಇಳಿದು, ಸೂರ್ಯಸ್ತ ಮಾಯವಾಗುತ್ತಲೇ ಅದು ನದಿಯಲ್ಲಿ ಮುಳುಗಿ ಹೋಗುವುದು. ನಾನು ನೋಡಿರುವುದರಲ್ಲೆಲ್ಲಾ ಇದೆ ಪರಮಾಶ್ಚರ್ಯವು." ಈ ಮಾತನ್ನು ಕೇಳಿದ ವಿಕ್ರನುನು ತತ್‌ಕ್ಷಣವೇ ಹೊರಟು ಉದಯಾದ್ರಿಯನ್ನು ಸೇರಿ, ಸೂರ್ಯೋದಯ ಸಮಯವನ್ನು ಕಾದಿದ್ದು ಕಂಬವು ಕಾಣಿಸಿಕೊಂಡ ಕೂಡಲೇ ಅದನ್ನು ಹಿಡಿದು, ಅದರ ಮೇಲಿನ ಸಿಂಹಪೀಠದ ಮೇಲೆ ಕುಳಿತು, ಕಂಬವು ಮೇಲು ಮೇಲಕ್ಕೆ ಹೋದಹಾಗೆಲ್ಲ ಸೂರ್ಯನ ತಾಪವು ಹೆಚ್ಚಾಯಿತು. ಮಧ್ಯಾಹ್ನದ ವೇಳೆಗೆ ಆತನ ಶರೀರವು ಸುಟ್ಟು ಇದ್ದಲಿನಂತೆ ಆಗಿತ್ತು ಸೂರ್ಯನು ಅದನ್ನು ಕಂಡು, ಅವನಾರೋ ಮಹಾಧೀರನೇ ಎಂದು ನಿಶ್ಚಯಿಸಿ, ಆ ಶರೀರದ ಮೇಲೆ ಅಮೃತದ ಮಳೆಯನ್ನು ಸುರಿಸಿದನು. ಕೂಡಲೆ ವಿಕ್ರಮನು ಚೇತರಿಸಿಕೊಂಡು ಭಗವಂತನಾದ ಆದಿತ್ಯನನ್ನು ಬಹುವಾಗಿ ಸ್ತೋತ್ರಮಾಡಿದನು. ಕರ್ಮ ಸಾಕ್ಷಿಯಾದ ರವಿಯು ವಿಕ್ರಮನ ಮನೋದಾರ್ಢ್ಯವನ್ನು ಕೊಂಡಾಡಿ, ಆತನಿಗೆ ಎರಡು ರತ್ನ ಕುಂಡಲಗಳನ್ನು ಕೊಟ್ಟು, ಅವು ದಿನಕ್ಕೆ ಎಂಭತ್ತುಮಣ ಸುವರ್ಣವನ್ನು ಕೊಡತಕ್ಕವೆಂದು ಹೇಳಿದನು. ರಾಜನು ಅದನ್ನು ಪಡೆದು ಹಿಂದಿರುಗಿದನು. ದಾರಿಯಲ್ಲಿ ಒಬ್ಬ ದರಿದ್ರನು ವಿಕ್ರಮನಲ್ಲಿಗೆ ಬಂದು, ತನ್ನದು ಬಲುದೊಡ್ಡ ಈ ಸಂಸಾರವೆಂದೂ, ತಾನು ತುಂಬಾಬಡವನೆಂದೂ ಹೇಳಿಕೊಂಡನು. ರಾಜನು ಸೂರ್ಯದತ್ತವಾದ ಕರ್ಣಾಭರಣಗಳನ್ನು ಅವನಿಗೆ ಕೊಟ್ಟು ಬಿಟ್ಟನು.”
ಭೋಜನು ನಾಚಿಕೆಯಿಂದ ಆ ಸ್ಥಳವನ್ನು ಬಿಟ್ಟನು.
***
ಹತ್ತೊಂಬತ್ತನೆಯ ಸಾಲಭಂಜಿಕೆಯು ಹೇಳಿದ ಉಪಾಖ್ಯಾನ:-
"ವಿಕ್ರಮರಾಜನು ಒಂದಾವರ್ತಿ ಒಡ್ಡೋಲಗದಲ್ಲಿರಲು, ಒ ಬ್ಬ ವನಪಾಲಕನು ಬಂದು, ಒಂದು ಕಾಡಹಂದಿಯಿಂದ ಜನಗಳಿಗೂ, ದನಗಳಿಗೂ, ಬೆಳೆಗಳಿಗೆ ಹಾನಿಯಾಗಿರುವುದೆಂದು ಅರಿಕೆ ಮಾಡಿದನು. ರಾಜನು ಅದನ್ನು ಧ್ವಂಸಮಾಡಲೆಣಿಸಿ, ಬೇಟೆಗೆ ಹೊರಟು, ಆ ಮೃಗವನ್ನಟ್ಟಿಕ್ಕೊಂಡು ಹೋದನು. ಕಡೆಗೆ ಅದು ಒಂದು ದೊಡ್ಡ ಬಿಲವನ್ನು ಹೊಕ್ಕಿತು. ವಿಕ್ರಮನು ಹಿಂಬಾಲಿಸಿಹೋದನು. ಬಹುದೂರ ನೆಲದೊಳಗೆ ಹೊಗಲಾಗಿ ಮಹಾಪ್ರಕಾಶವೊಂದು ಕಾಣಬಂದಿತು. ಹಾಗೆಯೇ ಹೋಗಲು ವಿಕ್ರಮನು ಪಾತಾಳರಾಜ್ಯವನ್ನು ಸೇರಿದನು. ಅಲ್ಲಿ ಬಲಿಚಕ್ರವರ್ತಿಯು ಆಳುತ್ತಿದ್ದನು. ವಿಕ್ರಮನು ಆತನ ದರ್ಶನವನ್ನು ತೆಗೆದುಕ್ಕೊಂಡನು. ಬಲಿಯು ವಿಕ್ರಮನನ್ನು ಸನ್ಮಾನಿಸಿ, ಸ್ನೇಹಿತನನ್ನಾಗಿ ಮಾಡಿಕೊಂಡು, ಬಂದು ರಸವನ್ನೂ ಬಂದು ರಸಾಯನವನ್ನೂ ಬಹುಮಾನವಾಗಿ ಕೊಟ್ಟು, ಕಳುಹಿಸಿ ಕೊಟ್ಟನು. ವಿಕ್ರಮನು ಬರುತ್ತಿರುವಾಗ ದಾರಿಯಲ್ಲಿ ಒಬ್ಬ ಬಡವನು ಬಂದು ಧನವನ್ನು ಯಾಚಿಸಲು, ಆ ತ್ಯಾಗಿಯ, “ನನ್ನಲ್ಲಿ ಈಗ ಧನವಿಲ್ಲ. ಈ ರಸವನ್ನು ನೀನು ಯಾವುದಕ್ಕೆ ಸೋಕಿಸಿದರೆ ಅದು ಹೊನ್ನಾಗುವುದು, ಈ ರಸಾಯನವನ್ನು ಭುಜಿಸಿದರೆ ಮುಪ್ಪುಸಾವುರೋಗ ಹಸಿವುಗಳಿಲ್ಲದೆ ಇರುವುದು" ಎಂದು ಹೇಳಿ, ಬಲಿಯು ಕೊಟ್ಟಿದ್ದ ವಸ್ತುಗಳನ್ನು ಅವನಿಗೆ ಕೊಟ್ಟನು. ಹೇ ರಾಜನೆ, ಈ ವಿಷಯದಲ್ಲಿ ನೀನೇನ ಹೇಳುವೆ?"
ಭೋಜನು ಏನೂ ಹೇಳಲಿಲ್ಲ.
***
ಇಪ್ಪತ್ತನೆಯ ಪ್ರತಿಮೆಯು ಹೇಳಿದ ವಾರ್ತೆ:-
"ಒಂದಾವರ್ತಿ, ವಿಕ್ರಮನು ದೇಶಾಟನ ಮಾಡುತ್ತಿರುವಾಗ ಕೆಲವು ಮಂದಿ ವಿದೇಶಿಗಳಿಂದ ತ್ರಿಕಾಲನಾಥನೆಂಬ ಮಹಾಯೋಗಿಯು ವಿಷಯವನ್ನು ಕೇಳಿದನು. ಆತನ ದರ್ಶನವನ್ನು ಅಪೇಕ್ಷಿಸಿ, ಕೂಡಲೇ ಅಲ್ಲಿಂದ ಪ್ರಯಾಣಮಾಡಿ, ಹನ್ನೆರಡು ಯೋಜನಗಳನ್ನು ನಡೆದು, ಘೋರವಾದ, ಜನರೆಂದೂ ತಿರುಗದ ಅರಣ್ಯದ ಮಧ್ಯವನ್ನು ಮುಟ್ಟಿ, ಅಲ್ಲಿದ್ದ ಕಡಿದಾದ ಬೆಟ್ಟವನ್ನು ಹತ್ತಿ ದಾರಿಯಲ್ಲಿ ಭಯಂಕರವಾದ ಹಾವಿನಿಂದ ಕಚ್ಚಲ್ಪಟ್ಟವನಾಗಿ, ಕಡೆಗೆ ಆ ಯೋಗಿಯನ್ನು ಕಂಡು ನಮಸ್ಕರಿಸಿದನು. ಆತನು ವಿಕ್ರಮನ ಭಕ್ತಿಗೂ, ದೃಢಭಾವಕ್ಕೂ ಮೆಚ್ಚಿ, ಒಂದು ಗುಳಿಗೆಯನ್ನೂ ಒಂದು ಕಟ್ಟಿಗೆಯನ್ನೂ,ಬಂದು ಬೊಂತೆಯನ್ನೂ ವಿಕ್ರಮನಿಗೆ ಕೂಟ್ಟು, ಅವುಗಳ ಗುಣಗಳನ್ನು ವಿವರಿಸಿ, ಆಶೀರ್ವದಿಸಿ ಕಳುಹಿನು. ರಾಜನು ಹಿಂದಕ್ಕೆಬರುವಾಗ, ರಾಜ್ಯವನ್ನ ಕಳೆದದುಕ್ಕೊಂಡು, ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದ ಒಬ್ಬರಾಜಪುತ್ರನನ್ನು ಕಂಡು, ಆಗುಳಿಗೆಯನ್ನೂ, ಕೋಲನ್ನೂ, ಬೊಂತೆಯನ್ನೂ ಅವನಿಗೆ ಕೊಟ್ಟು "ಎಲೈ, ಈ ಮಾತ್ರೆಯಿಂದ" ಭೂಮಿಯ ಮೇಲೆ ಎಷ್ಟುಸಲ ಗೀಚಿದರೆ ಅಷ್ಟು ಯೋಜನಗಳನ್ನು ಒಂದು ನಿಮಿಷದಲ್ಲಿ ದಾಟುವಿ. ಈ ದಂಡವನ್ನು ಎಡಗೈಲಿ ಹಿಡಿದರೆ ನಿನ್ನ ಸ್ವಂತ ಸೈನ್ಯವೆಲ್ಲವೂ ಬದುಕುವುದು; ಬಲಗೈಲಿ ಹಿಡಿದರೆ ಶತ್ರುಸೈನ್ಯವು ನಾಶವಾಗುವುದು, ಈ ಕಂತೆಯು ನಿನಗೆ ಬೇಕಾದುದನ್ನು ಕೊಡಬಲ್ಲುದು, ಇದನ್ನು ಹೊದ್ದರೆ ನಿನಗೆ ಬೇಕಾದರೂಪವು ಬರುವುದು, ಇವುಗಳ ಸಹಾಯದಿಂದ ನಿನ್ನ ರಾಜ್ಯವನ್ನು ನೀನು ಪಡೆಯುವಿ" ಎಂದು ಹೇಳಿ, ಉಜ್ಜಯಿನಿಗೆ ಬಂದನು, ಆರಾಜಕುಮಾರನು ರಾಜ್ಯಸಂಪಾದನೆ ಮಾಡಿ, ವಿಕ್ರಮನಿಗೆ ಕೃತಜ್ಞನೂ, ಸಾಮಂತ ರಾಜನೂ ಆಗಿದ್ದನು?
ಭೋಜನು ಹಿಂದಿನಂತೆಯೇ ನಿರಂತ್ತರಾಗಿದ್ದನು
***
ಇಪ್ಪತ್ತೊಂದನೆಯ ಸಾಲ ಭಂಜಿಕೆಯು ಹೇಳಿದ ಚರಿತ್ರೆ:-
ಒಂದು ಮಹಾರಣ್ಯದ ನಡವ ಒಂದು ದೇವಾಲಯವಿರು ವುದು, ಅದರ ಮುಂದೆ ಬಂದು ಸರೋವರವಿರುವುದು, ಅದರಲ್ಲಿ ಒಂದು ಕಡೆಯ ನೀರು ಯಾವಾಗಲೂ ಬೆಚ್ಚಗಿರುವುದು. ಆಭಾಗದಿಂದ ಪ್ರತಿರಾತ್ರಿಯ ಎಂಟು ಮಂದಿ ಹೆಂಗಸರು ಹೊರಟುಬಂದು, ಸೂರ್ಯೋದಯದವರೆಗೃತ ಆದೇವತಾಲಯದಲ್ಲಿ ಪೂಜಿಸುತಿರುವರು. ಈ ಸಮಾಚಾರವನ್ನು ವಿಕ್ರಮನು ಕೇಳಿ, ಆ ಸ್ಥಳಕ್ಕೆ ಬಂದು ಆ ಸ್ತ್ರೀಯರು ದೇವತಾಲಯದಿಂದ ಹಿಂದಿರುಗುವ ವೇಳೆಯನ್ನು ಕಾದಿದ್ದು, ಅವರಿಗೆ ಕಾಣಿಸಿಕ್ಕೊಂಡನು, ಅವರಲ್ಲೂ ಬ್ಬಾಕೆಯು ಆತನನ್ನು ಬಾರೆಂದು ಕರೆಯಲು ಆತನು ಅವರ ಹಿಂದೆ ಹೋಗಿ ನಾಗಲೋಕವನ್ನು ಸೇರಿದನು. ಅವರು ಅಲ್ಲಿ ಆತನನ್ನು ಉಪಚರಿಸಿ, ವಿಚಾರಿಸಿ, ತಾವು ಅಷ್ಟ ಸಿದ್ಧಿ ಯರೆಂದು ತಿಳಿಸಿ, ಎಂಟು ರತ್ನಗಳನ್ನು ಆತನಿಗೆ ಕೊಟ್ಟರು. ಆತನು ಅವುಗಳೊ ಡನೆ ತನ್ನೂರಿಗೆ ಬರುತ್ತಿರುವಾಗ ಯಾಚಕನೊಬ್ಬನು ಇದಿರು ಬೀಳಲು, ಅವುಗಳನ್ನವನಿಗೆ ದಾನಮಾಡಿ ಬಿಟ್ಟನು. ಭೋಜನು ವಿಕ್ರಮನ ಈ ವಿಚಿತ್ರ ಚರ್ಯಗಳನ್ನು ಕುರಿತು ಚಿಂತಿಸುತ್ತಿದ್ದನು. ಇಪ್ಪತ್ತೆರಡನೆಯ ಸಾಲಭಂಜಿಕೆಯು ಕೀರ್ತಿಸಿದ ರೀತಿಯು ಹೇಗೆಂದರೆ:-
ಒಂದು ಸಾರಿ ವಿಕ್ರಮರಾಜನು ಕೃಶನೂ ಚಿಂತಾಕ್ರಾಂತನೂ ಆಗಿದ್ದ ಒಬ್ಬ ಪುರುಷನನ್ನು ಕಾಣಲು, ಅವನ ಅವಸ್ಥೆಗೆ ಕಾರಣವೇನೆಂದು ಪ್ರಶ್ನಿಸಿದನು, ಅವನು ಎಲೈ, ನೀನು ಯಾ ರೋ ಮಹನೀಯನಂತೆ ಕಾಣುವಿ, ಇಲ್ಲಿಗೆ ಕೊಂಚ ದೂರದಲ್ಲಿ ನೀಲಪರ್ವತವಿರುವುದು, ಅದರ ತುದಿಯಲ್ಲಿ ಬಂದು ಗವಿಯಿದೆ, ಅದರ ನಡುವೆ ಶ್ರೀಕಾಮಾಕ್ಷಿ ದೇವಿಯ ಮೂರ್ತಿಯಿದೆ, ಅದರ ಹಿಂಭಾಗದಲ್ಲಿ ಇನ್ನೊಂದು ಗುಹೇಯಿದೆ ಅದರ ಬಾಗಲು ಮುಚ್ಚಲ್ಪಟ್ಟಿದೆ, ಅದರ ಒಳಗಡೆ ಒಂದು ಬಗೆಯರಸದ ಮಡಕೆಯಿದೆ. ಆ ರಸವು ಯಾವ ವಸ್ತುವಿಗೆ ತಗುಲವುದೊ ಆ ವಸ್ತುವು ಚಿನ್ನವಾಗುವುದು. ಆ ರಸವನ್ನಪೇಕ್ಷಿಸಿ, ನಾನು ಹನ್ನೆರಡು ವರ್ಷಗಳಿ೦ದಲೂ ಕಾಮಾಕ್ಷಿಯನ್ನು ಕುರಿತು ತಪಸ್ಸಮಾಡುತ್ತಿರುವೆನು; ಆದರೂ ಆ ಒಳಗಿನ ಗುಹೆಯ ಬಾಗಿಲು ಮುಚ್ಚಿಕ್ಕೊಂಡೇ ಇದೆ. ತೆಗೆಯಲಾಗದು" ಎಂದನು. ಕೂಡಲೆ ವಿಕ್ರಮನು ತಾನೇ ಆ ಗವಿಯೊಳಕ್ಕೆ ಹೋಗಿ ಒಳಗಿನ ಗುಹೆಯಮುಂದೆ ನಿಂತು ತನ್ನ ಕಂಠರಕ್ತವನ್ನೇ ದೇವತೆಗೆ ಆಹುತಿಕೊಡಲು ಉದ್ಯಾಕ್ತಪಟ್ಟನು. ಆಗ ದೇವತೆಯು ಆತನ ಸಾಹಸಕ್ಕೂ, ಚಿತ್ತಸೈರ್ಯಕ್ಕೂ ಮೆಚ್ಚಿ ಆತನಲ್ಲಿ ಪ್ರಸನ್ನಳಾಗಿ ಆತನು ಬೇಡಿದಂತೆ ರಸಕುಂಭವನ್ನು ದೀನನಾದ ಪುರುಷನಿಗೆ ಕೊಟ್ಟು, ವಿಕ್ರಮನಿಗೆ ಅನೇಕ ವರಗಳನ್ನಿತಳು. ಭೋಜನು ಇಂತಹ ಕಾರ್ಯಗಳನ್ನಷ್ಟು ಮಾಡಿರುವನು?"
ಪ್ರತ್ಯುತ್ತರವಿಲ್ಲ.
** ಇಪ್ಪತ್ತು ಮೂರನೆಯ ಮೆಟ್ಟಿಲಿನ ಮೂರ್ತಿಯು ಹೀಗೆಂದಿತು:-
"ಎಲೈರಾಜನೆ, ಒಂದಾನೊಂದು ರಾತ್ರಿ ವಿಕ್ರಮ ಭೂಪಾಲನು ತಾನು ಎಮ್ಮೆಯನ್ನೇರಿ ದಕ್ಷಿಣದಿಕ್ಕಿಗೆ ಪ್ರಯಾಣಮಾಡಿದಂತೆ ಕನಸಕಂಡನು. ಮಾರಣೆಯ ದಿನ ಆಸಂಗತಿಯನ್ನು ಶಾಸ್ತ್ರಜ್ಞರಿಗೆ ತಿಳಿಸಲು, ಅವರು ಆ ಸ್ವಪ್ನವು ಅನಿಷ್ಟ ಸೂಚಕವೆಂದೂ, ಆ ಅ ನಿಷ್ಟವು ಪರಿಹಾರವಾಗುವುದಕ್ಕಾಗಿ ರಾಜನು ತನ್ನ ರಾಜ್ಯದಲ್ಲಿನ ಕುರುಡ, ಕುಂಟ, ಮೂಗ, ಆನಾಥರಿಗೂ, ಬ್ರಾಹ್ಮಣರಿಗೂ ಅನ್ನದಾನ ವಸ್ತ್ರದಾನಗಳನ್ನು ಮಾಡಬೇಕೆಂದೂ ಹೇಳಿದರು. ವಿಕ್ರಮನು ಅವರ ವಚನವನ್ನು ಶಿರಸಾವಹಿಸಿ, ತನ್ನ ಭಂಡಾರದ ಬಾಗಿಲುಗಳನ್ನು ಮೂರುದಿನಗಳು ತೆರೆದಿಟ್ಟು, ಬೇಕಾದವರು ಬೇಕಾದಷ್ಟು ಹಣವನ್ನು ತೆಗೆದುಕೊಂಡು ಹೋಗುವಂತೆ ಆಜ್ಞಾಪಿಸಿದನು. ಈ ಔದಾರ್ಯದಿಂದ ಜನರೆಲ್ಲರೂ ಆಶ್ಚರ್ಯಪಟ್ಟರಲ್ಲದೆ, ಅನ್ನ ವಸ್ತ್ರಧನಗಳನ್ನು ಮನದಣಿಯಪಡೆದು ಸುಖಿಸಿದರು. ಈ ಧಾರಾಳಬುದ್ಧಿಯು ತಮಗೂ ಉಂಟೋ?”
ಭೋಜನು ಏನುತಾನೆ ಹೇಳಿಯಾನು?
***
ಇಪ್ಪತ್ತನಾಲ್ಕನೆಯ ಪಾಂಚಾಲಿಕೆಯು ಹೇಳಿದಕಥೆ:-
45
ಒಬ್ಬೊಬ್ಬನು ಮಂಚದ ಒಂದೊಂದು ಕಾಲಕಳಗೆ ಅಗೆದನು. ನಾಲ್ವರಿಗೂ ನಾಲ್ಕು ತಾಮ್ರದ ಸಂಪುಟಗಳು ದೊರೆತವು. ಮೊದಲನೆಯವನ ಭರಣಿಯಲ್ಲಿ ಮಣ್ಣು, ಎರಡನೆಯವನದರಲ್ಲಿ ನೆಲ್ಲರಳೂ, ಮೂರನೆಯವನದರಲ್ಲಿ ಇದ್ದಲೂ, ನಾಲ್ಕನೆಯವನದರಲ್ಲಿ ಮೂಳೆಯೂ ಇದ್ದುವು. ಅವರು ಇದನ್ನು ಕಂಡು, ಆಶ್ಚರ್ಯ ಹೊಂದಿ, ಅದರ ಆರ್ಥವನ್ನು ಕಾಣಲಾರದೆ, ದೇಶದಲ್ಲಿನ ಪಂಡಿತರೆಲ್ಲರನ್ನೂ ಅದರ ಭಾವವೇನೆಂದು ವಿಚಾರಿಸಿದರು. ಯಾರೂ ಹೇಳಲಾರದೆ ಹೋದರು. ಈ ಸಂಗತಿಯು ವಿಕ್ರಮನ ಕಿವಿಯನ್ನೂ ಮುಟ್ಟಿತು. ಅದರ ಅಭಿಪ್ರಾಯವು ಆತನಿಗೂ ತೋರಲಿಲ್ಲ. ಕಡೆಗೆ ಈ ವರ್ತಮಾನವು ದಕ್ಷಿಣದೇಶದಲ್ಲಿದ್ದ ಪ್ರತಿಷ್ಠಾನಗರ(ಪಾಟ್ನ ಕ್ಕೆ ಹೋಯಿತು. ಅಲ್ಲಿನ ವಿದ್ವಾಂಸರೂ ಅದನ್ನರಿಯಲಾರದೆ ಹೋಗಲು, ಅಲ್ಲಿನ ಒಬ್ಬ ಕುಂಬಾರನ ಮನೆಯಲ್ಲಿದ್ದ ಶಾಲಿವಾಹನನೆಂಬ ಹುಡುಗನು ಪುರಂಧರಪುರಿಯ ಧನಿಕನ ಅಭಿಪ್ರಾಯವನ್ನು ಹೀಗೆಂದು ವಿವರಿಸಿದರು: ಮಣ್ಣು ಭೂಮಿಯನ್ನೂ, ನೆಲ್ಲರಳು ಧಾನ್ಯವನ್ನೂ, ಇದ್ದಲು ಬಂಗಾರವನ್ನೂ, ಮೂಳೆಯು ಪ್ರಾಣಿಯನ್ನೂ ಸೂಚಿಸುತ್ತದೆ; ಆದ ರಣ ಜ್ಯೇಷ್ಠಪುತ್ರನು ತಂದೆಯ ಭೂಮಿಗಳನ್ನೂ, ದ್ವಿತೀಯನು ಆತನು ಶೇಖರಿಸಿದ್ದ ಧಾನ್ಯರಾಶಿಗಳನ್ನೂ, ತೃತೀಯನು ಒಡವೆ ಹಣಗಳನ್ನೂ, ಕನಿಷ್ಠನು ಗೋ ವೃಷಭಗಳನ್ನೂ ಪಡೆಯತಕ್ಕುದು." ಈ ವಿಮರ್ಶೆಯಿಂದ ಆಧನಿಕನ ಮಕ್ಕಳೂ, ಸರ್ವರೂ ಸಂತೋಷಪಟ್ಟರು. ಇದು ವಿಕ್ರಮನಿಗೆ ತಿಳಿಯಲು, ಆತನು ವಿಸ್ಮಿಕನಾಗಿ, ಶಾಲಿವಾಹನನನ್ನು ತನ್ನಲ್ಲಿಗೆ ಬರಹೇಳಿ ಕಾಗದಬರೆಸಿದನು. ಶಾಲೀವಾಹನನು ಆ ಕಾಗದವನ್ನು ನಿರಾಕರಿಸಿ, ತನಗೆ ವಿಕ್ರಮನಲ್ಲಿ ಕೆಲಸವೇನೂ ಇಲ್ಲವೆಂದೂ, ಆತನಿಗೆ ಕೆಲಸವಿದ್ದರೆ ಆತನೇ ಬರಬೇಕೆಂದು ಹೇಳಿಕಳುಹಿಸಿದನು. ವಿಕ್ರಮನು ಅದರಂತೆಯೇ ಶಿಷ್ಟಾನಗಕ್ಕೂ ಬಂದು, ಪುನಃ ಹೇಳಿಕಳುಹಿಸಿದನು. ಶಾಲೀವಾಹನನು ನಾನು ಒಬ್ಬಂಟಿಗನಾಗಿ ರಾಜನನ್ನು ಕಾಣುವುದಿಲ್ಲ. ಚತುರಂಗ ಬಲದೊಡನೆ ಕಾಣುವನು. " ಎಂದು ಹೇಳಿ ಯುದ್ದಕ್ಕೆ ಕಾಲಕೆರೆದನು. ವಿಕ್ರಮನು ಹಾಗೆಯೇ ಆಗಲೆಂದು ತನ್ನ ಸೈನ್ಯವನ್ನು ಯುದ್ಧಕ್ಕೆ ಜಡೆಗೊಳಿಸಿದನು. ಕಾಲೀವಾಹನನು ತನ್ನ ಮನೆಯಲ್ಲಿದ್ದ ಮಣ್ಣಿನ ಆನೆ, ಕುದುರೆ, ರಥ, ಪದಾತಿಗಳಿಗೆ ಜೀವವನ್ನು ಕೊಟ್ಟು, ಅವುಗಳನ್ನು ಕರೆತಂದನು. ವಿಕ್ರಮನ ಸೈನ್ಯಕ್ಕೂ ಶಾಲಿವಾಹನನ ಕೃತಕಸೈನ್ಯಕ್ಕೂ ಘೋರಯುದ್ಧವಾಗಿ, ಶಾಲೀ ವಾಹನನ ಸೇನೆಯು ನಾಶವಾಯಿತು, ಆಗಲವನು ಆದಿಶೇಷನನ್ನು ಕುರಿತು ಪ್ರಾರ್ಧಿಸಲು ಆತನು ಸರ್ವಗಳನ್ನು ಕಳುಹಿಸಿ, ವಿಕ್ರ ಮನಸೇನೆಯನ್ನು ನಾಶಪಡಿಸಿದನು. ಆಗ ವಿಕ್ರಮನೂ ವಾಸುಕಿಯನ್ನು ಪ್ರಾರ್ಥಿಸಿ, ತನ್ನ ಸೇನೆಯನ್ನು ಬದುಕಿಸಲು ಆಮೃತವು ಬೇಕೆಂದು ಬೇಡಿದನು, ವಾಸುಕಿಯು ಅದರಂತೆ ಅಮೃತ ಕುಂಭವನ್ನು ವಿಕ್ರಮನಿಗೆ ಕೊಟ್ಟನು, ಆ ವೇಳೆಗೆ ಸರಿಯಾಗಿ ಬ್ರಾಹ್ಮಣನೊಬ್ಬನು ವಿಕ್ರಮನ ಬಳಿಗೆ ಬಂದು 'ಎಲೈ ರಾಜನೆ, ನೀನು ದಾನಕರ್ಣನಂದು ಪ್ರಸಿದ್ದನಲ್ಲವೆ? ಈಗಲೀ ಅಮೃತಕಲಶವನ್ನು ನನಗೆ ಕೊಡುವೆಯಾ? " ಎಂದನು. ವಿಕ್ರಮನು ನಿನಗೀ ಸಮಾಚಾರವು ಹೇಗೆ ತಿಳಿಯಿತು? ಎಂದು ಕೇಳಲು, ಬ್ರಾಹ್ಮಣನು "ಶಾಲಿವಾಹನನಿಂದ' ಎಂದು ಹೇಳಿದನು ಆದರೂ ವಿಕ್ರಮನು ತನ್ನ ಶತೃವನ್ನು ಗಣಿಸದೆ, ಬ್ರಾಹ್ಮಣನಿಗೆ ಆಸವಯದಲ್ಲಿ ಅಮೃತಕಲಶವನ್ನು ಕೊಟ್ಟೀಕೊಟ್ಟನು. ಇಂತಹಧಾರಾಳವಾದ ಹೃದಯವು ತಮಗುಂಟೆ?"
ಭೋಜನು ಏನೂ ಹೇಳಲಾರದವನಾಗಿದನು.
***
ಇಪ್ಪತ್ತೈದನೆಯ ಸಾಲಭಂಜಿಕೆಯು ಹೀಗೆಂದಿತು: "ಒಂದಾನೊಂದು ಕಾಲದಲ್ಲಿ ವಿಕ್ರಮಾದಿತ್ಯನ ರಾಷ್ಟದಲ್ಲಿ ಮಳೆಯಿಲ್ಲದೆ ಹೋಗಿ, ವೀರಕ್ಷಾಮವು ಪ್ರಾಪ್ತವಾಯಿತು. ರಾಜನು ನವಗ್ರಹಹೋಮಾದಿಗಳನ್ನೂ ಬೇಕಾದಷ್ಟು ದಾನಧರ್ಮಗಳನ್ನೂ ಮಾಡಿದನು. ಆದರೂ ಅನಾವೃಷ್ಟಿಯ ಹೋಗಲಿಲ್ಲ. ಒಂದುದಿನ ರಾಜನು ಚಿಂತಾಕ್ರಾಂತನಾಗಿ ಕುಳಿತಿರಲು ಏಲೈ ರಾಜನೆ, ನಿನ್ನ ಮಾಂಸವನ್ನೇ ಆಹುತಿಯಾಗಿ ಅರ್ಪಿಸುವಿಯಾದರೆ ಈ ದುರ್ಭಿಕ್ಷವು ಹೋಗುವುದು "ಎಂದು ಅಶರೀರವಾಣಿಯಾಯಿತು, ವಿಕ್ರಮನು ಕೊಂಚವೂ ತಡಮಾಡದೆ, ತನ್ನ ಖಡ್ಗವನ್ನು ಒರೆಯಿಂದ ತೆಗೆದು ಶಿರಚ್ಛೇದನ ಮಾಡಿಕೊಳ್ಳಲು ಯತ್ನಿಸಿದನು, ಕೂಡಲೆ ಆ ರಾಜ್ಯದ ಅಭಿಮಾನದೇವತೆಯು ಪ್ರಸನ್ನಳಾಗಿ, ರಾಜನಲ್ಲಿ ಅನುಗ್ರಹಿಸಿ, ಸುವೃಷ್ಟಿಯನ್ನು ಕೊಟ್ಟಳು, ಹೇ ಭೋಜ ಮಹಾರಾರ್ಜ, ತಮ್ಮಲ್ಲಿ ಇಂತಹವುಹಿಮಯುಂಟೆ?"
ಉತ್ತರವೇಇಲ್ಲ.
***
ಇಪ್ಪತ್ತಾರನೆಯ ಸಾಲಭಂಜಿಕೆಯು ಕೊಟ್ಟ ಉದಾಹರಣೆ:
"ಒಂದಾನೊಂದುವೇಳೆ ವಿಕ್ರಮನು ಬಂದು ಕಾಡಿನಲ್ಲಿ ಎಲ್ಲಿಗೋ ಹೋಗುತ್ತಿರಲು, ಮಾರ್ಗದಲ್ಲಿ ದುರ್ಬಲವಾಗಿ, ಕೃಶವಾಗಿದ್ದ ಒಂದು ಹಸುವು ಕೆಸರಿನಲ್ಲಿ ಸಿಕ್ಕಿ ಈಚೆಗೆ ಬರಲಾರದೆ ಸಂ ಕಟಪಡುತ್ತಿದ್ದುದನ ಕಂಡನು. ಆತನು ಕನಿಕರಪಟ್ಟವನಾಗಿ,ಬೇಗನೆ ತಾನೆ ಆಕೆಸರಿನೊಳಕ್ಕೆ ನುಗ್ಗಿ, ಬಹ ಸಾಹಸದಿಂದ ಆ ದನ್ನು ಹೆಸರಿನಿಂದಿಚೆಗೆ ಕರೆದು ತಂದು, ಅದರ ಮೈಯನ್ನು ತೊಳೆದು, ಅದಕ್ಕೆ ಗರಿಕೆಯ ಹುಲ್ಲನ ತಂದುಹಾಕಿ, ಅದನ್ನು ಪಚರಿಸಿದನು, ಆಗ ಅದು ದಿವ್ಯವಾದ ರೂಪವನ್ನು ಧರಿಸಿ, "ಎಲೈ ರಾಜನೆ, ನಾನು ಕಾಮಧೇನು, ನೀನು ಪರಮದಯಾಳುವೆಂದು ನಾರದನು ಇಂದ್ರ ಸಭೆಯಲ್ಲಿ ಹೇಳಲು ನಿನ್ನ ಧರ್ಮವನ್ನು ಪರೀಕ್ಷಿಸಲೋಸುಗ ದೇವೇಂದ್ರನ ಅಪ್ಪಣೆಯಂತೆ ನಾನಿಲ್ಲಿಗೆ ಬಂದು, ಈ ರೀತಿ ಮಾಡಿದೆನು, ದೀನಸಂರಕ್ಷಣೆಯಲ್ಲಿ ನಿನಗಿರುವ ಶ್ರದ್ಧೆಯಿಂದ ನಾನು ಸಂತೃಪ್ತಳಾದನು, ಬೇಕಾದವರವನ್ನು ಕೇಳು "ಎಂದಿತು, ವಿಕ್ರಮನ ಆ ಕಾಮಧೇನುವೇ ತನ್ನ ಬಳಿಯಿರಬೇಕೆಂದು ಬಯಸಿದನು. ಆ ಧೇನುವು ಹಾಗೆಯೇ ಆಗಲೆಂದು ಒಪ್ಪಿ, ವಿಕ್ರ ಮನ ಅರಮನೆಯಲ್ಲಿಯೇ ಇದ್ದಿತು ಇದನ್ನರಿತ ಬ್ರಾಹ್ಮಣನೊಬ್ಬನು ಆಗೋವು ತನಗೆ ಬೇಕೆಂದು ವಿಕ್ರಮರಾಯನನ್ನು ಕೇಳಲು, ರಾಯನು ಪ್ರತಿಮಾತಾಡದೆ, ಸಂತೋಷದಿಂದ ಆದೇವಲೋ ಕದ ಧೇನುವನ್ನು ವಿಪ್ರನಿಗೆ ಕೊಟ್ಟನು. ನೀವೂ ಹಾಗೆ ಮಾಡಿರುವಿರೋ???
ಭೋಜನು ತಲೆ ಬಾಗಿದನು.
***
ಇಪ್ಪತ್ತೇಳನೆಯ ಸಾಲಭಂಜಿಕೆಯು ಉದೀರಿಸಿ ತೇನೆಂದರೆ:__
ಮಾರಿರಬಹುದೆಂದು ವಿಚಾರಿಸುತ್ತಿದ್ದನು. ಮಾರಣೆಯದಿನ ಆ ವ್ಯಕ್ತಿಯೇ ದೀನನಾಗಿ, ದಿಗಂಬರನಾಗಿ, ಆರಂಗಮಂಟಪಕ್ಕೆ ಬಂದು, ವಿಕ್ರಮನು ಅದನ್ನು ಕಂಡು ಮತ್ತಷ್ಟು ವಿಸ್ಮಿತನಾಗಿ, ಅಯ್ಯಾ, ನೀನಾರು? ನಿನ್ನೆ ರಾಜಕುಮಾರನಂತಿದ್ದು ಈದಿನ ಭೀಕ್ಷುಕನಂತೆ ಕಾಣಲು ಕಾರಣವೇನು?" ಎಂದು ಪ್ರಶ್ನಿಸಿದ. ಅವನು "ಜೂಜೆ ಕಾರಣ' ಎಂದನು. ವಿಕ್ರಮನು "ಜೂಜೆ ಆಡುವುದು ಪಾಪವೆಂದು ನಿನಗೆ ತಿಳಿಯದೆ?" ಎಂದನು. ಅವನು "ಅದರಿಂದಲೇ ನನಗೆ ಜೀವನ?"ಎಂದನು. ಆವೇಳೆಗೆ ಯಾರೋ ಪ್ರಾಮಾಣಿಕರಿಬ್ಬರು ಆ ದೆವಾಲಯದೊಳಕ್ಕೆ ಬಂದು ಕುಳಿತುಕ್ಕೊಂಡಿದ್ದರು. ಅದರಲ್ಲೊಬ್ಬನೂ ಮತ್ತೊಬ್ಬನನ್ನು ಕುರಿತು, ಖಜನೆ, ಈ ಗೋಡೆಯ ಮೇಲಿನ ಪೈಶಾಚಭಾಷೆಯ ಶಿಲಾಶಾಸನ ಈ ದೇವಾಲಯದ ಈಶಾನ್ಯ ಭಾಗದ ಗವಿಯಲ್ಲಿ ಚಿನ್ನ ರನ್ನದಿಂದು ತುಂಬಿದ ಕೊಡಗಳು ಮೂರಿವೆ. ಅವುಗಳ ಬಳಿ ಬೈರವೇಶ್ವನ ಪ್ರತಿಮೆಯೊಂದಿದೆ. ನಿನ್ನ ಕಂಠರಕ್ತದಿಂದ ಅದನ್ನು ಪ್ರೋಕ್ಷಿಸಿದರೆ ಆಕೊಡಗಳು ನಿನ್ನ ವಶವಾಗುವುವು ಎಂದು ತಿಳಿಸಿದನು"ಎಂದು ಹೇಳಿದನು. ವಿಕ್ರಮನು ಅದನ್ನು ಕೇಳಿದೊಡೆನೆ ಆ ಗವಿಯೊಳಕ್ಕಿಳಿದು, ತನ್ನ ಕೊರಳನ್ನು ಕತ್ತಿಯಿಂದ ಇರಿದು, ರಕ್ತವನ್ನು ತೆಗೆದು, ಭೈರವಮೂರ್ತಿಯ ಮೇಲೆ ಚೆಲ್ಲಿದ. ಭೈರವನು ಪುತ್ಯಕ್ಷನಾಗಿ ಆ ಧನವನ್ನು ವಿಕ್ರಮನಿಗೆಕೊಟ್ಟು ಅದೃಶ್ಯನಾದನು. ವಿಕ್ರಮನು ಅದನ್ನು ಆ ಜೋಜಗಾರನಿ ಕೊಟ್ಟು, ಇನ್ನು ಮೇಲೆ ದ್ಯುತವಾಡದಿರೆಂದು ಅವನಿಗೆ ಹೇಳಿ,ಇಚ್ಛೆ ಬಂದಂತೆ ಹೊರಟು ಹೋದನು. ನೀವೂ ಹಾಗೆ ಮಾಡಿರುವಿರೋ?"
ಭೋಜನು ಏನೂ ಹೇಳಲಿಲ್ಲ.
*** ಇಪ್ಪತ್ತೆಂಟನೆಯ ಸಾರಿ ಭೋಜಮಹಾರಾಜನು ವಿಕ್ರಮಪೀಠದ ಸಮೀಪಕ್ಕೆ ಬರಲು, ಪೀಠದ ಮೇಲಿನ ಆ ಸಂಖ್ಯೆಯ ಪ್ರತಿಮೆಯು ಹೀಗೆಂದಿತು:-
"ಒಂದು ಸಲ ವಿಕ್ರಮಭೂಮಿಪನು ದೇಶಸಂಚಾರಮಾಡುತಿರಲು, ಒಂದೂರಿನಲ್ಲಿ ನಾಲ್ವರು ವಿದೇಶಿಗಳನ್ನು ಕಂಡನು. ಅವರನ್ನಾತನು ವಿಶೇಷವೇನೆಂದು ಕೇಳಲಾಗಿ, ಅವರೀರೀತಿ ವಿವರಿಸಿದರು: "ಅಯ್ಯಾ, ಇಲ್ಲಿಗೆ ಸ್ವಲ್ಪ ದೂರದಲ್ಲಿ ಭೇತಾಳಪುರಿಯೆಂಬ ಪಟ್ಟಣವುಂಟು. ಅಲ್ಲಿನ ಗ್ರಾಮದೇವತೆಯಾದ ಚಂಡೀದೇವಿಗೆ ಆವೂರಿನವರು ವರ್ಷಕ್ಕೊಂದು ಬಾರಿ ಜಾತ್ರೆ ನಡೆಯಿಸಿ, ಆ ಜಾತ್ರೆಯ ದಿನ ನರಬಲಿಯನ್ನರ್ಪಿಸುವರು. ಆ ಬಲಿಗಾಗಿ, ಆವೇಳೆಗೆ ಅಲ್ಲಿಗೆ ಬಂದಿರುವ ಪರದೇಶೀಯರನ್ನೇ ಅವರು ಹಿಡಿಯುವರು. ನಿನ್ನೆ ಅಲ್ಲಿ ನಾವುಗಳು ಈ ವರ್ತಮಾನವನ್ನು ಕೇಳಿ, ಭಯಭ್ರಾಂತರಾಗಿ, ಪ್ರಾಣವನ್ನುಳಿಸಿಕೊಳ್ಳುವ ನಿಮಿತ್ತ ಇಲ್ಲಿಗೆ ಓಡಿಬಂದಿರುವೆವು." ಈ ಸುದ್ದಿಯನ್ನು ಕೇಳಿದೊಡನೆಯೆ ವಿಕ್ರಮಾದಿತ್ಯನು ಭೇತಾಳಪುರಿಗೆ ಪಯಣವಾಡಿ, ಚಂಡಿಕಾಲಯಕ್ಕೆ ಹೋಗಿ ಅಲ್ಲಿನವರು ಬಲಿಕೊಡುವುದಕ್ಕೆ ತಂದಿದ್ದ ಕೃಶನಾದ ಮನುಷ್ಯರನ್ನು ಬಿಡಿಸಿ, ಪುಪ್ಪಾಂಗನಾದ ತಾನೇ ದೇವತೆಗೆ ಆಹುತಿಯಾಗಿರಲು ಒಪ್ಪಿಕ್ಕೊಂಡನು. ಆತನು ಬಲಿಕೊಡುವ ಹೊತ್ತಿಗೆ ಪಶುಸ್ಥಾನದಲ್ಲಿ ನಿಂತು ಶಿರಚ್ಛೇದನಕ್ಕಾಗಿ ಕತ್ತಿಯನ್ನೆತ್ತಲು, ದೇವತೆಯು ಪ್ರತ್ಯಕ್ಷಳಾಗಿ ಆತನ ಭೂತದಯೆಯನ್ನೂ, ಪರೋಪಕಾರ ಬುದ್ಧಿಯನ್ನೂ ಕೊಂಡಾಡಿ, ವಿಕ್ರಮನನ್ನು ಹರಸಿದಳು. ಅಲ್ಲಿಂದ ಮುಂದಕ್ಕೆ ನರಬಲಿಯನ್ನು ಮಾಡಿಸದಿರಬೇಕೆಂದು ಆತನು ಕೇಳಿಕೊಳ್ಳಲು, ಅದರಂತೆಯ ಒಪ್ಪಿ, ಆ ಊರಿನವರಲ್ಲಿ ಅನುಗ್ರಹಿಸಿದಳು.” ಈ ಕಥೆಯನ್ನು ಕೇಳಿದ ಭೋಜನು ಆ ಹಾ! ಎದಂದುಕ್ಕೊಂಡು, ವಿಕ್ರಮನ ಗುಣಾತಿಶಯಗಳನ್ನು ಕೊಂಡಾಡುತ್ತಾ ಹೊರಟು ಹೋದನು. *** ಆದರೂ ಭೋಜನು ವಿಕ್ರಮಪೀಠದಬಳಿಗೆ ಬರುವುದನ್ನು ಬಿಡಲಿಲ್ಲ. ಉಳಿದ ಸಾಲಭಂಜಿಕೆಗಳು ಹೇಳುವ ಕಥೆಗಳನ್ನು ಕೇಳಬೇಕಂದೂ, ಅವು ಏನೂ ಹೇಳದಿದ್ದರೆ ಆ ಪೀಠವನ್ನೇರಬೇಕೆಂದೂ ಮರಳಿ ಅದರ ಮುಂದೆ ಬಂದು ನಿಂತನು. ಈಸಲ ಇಪ್ಪತ್ತೊಂಭತ್ತನೆಯ ಸಾಲಭಂಜಿಕೆಯು ಹೀಗೆಂದಿತು. "ಒಂದಾನೊಂದು ಸಮಯದಲ್ಲಿ ಒಬ್ಬಾನೊಬ್ಬ ದರಿದ್ರನಾದ ಕವಿಶ್ವರನು ವಿಕ್ರಮಾರ್ಕ ರಾಜನಬಳಿಗೆ ಬಂದು ಆತನನ್ನಾಶೀರ್ವದಿಸಿ ಯಾಚಿಸಲು, ಆತನು ಆ ಕವಿಯ ಕವಿತೆಯನ್ನ ಮೆಚ್ಚಿ ಅವನಿಗೆ ತನ್ನ ಭಂಡಾರದಲ್ಲಿನ ಅಮೂಲ್ಯಗಳಾದ ಒಂಭತ್ತು ರತ್ನಗಳನ್ನೇ ಕೊಡಿಸಿದನು. ಇಂತಹ ಕಾರ್ಯವು ಇತರರಲ್ಲಿರುವುದೆ?"
ಭೋಜನು ಮಾತನಾಡದೆ ಹಿಂದಿರುಗಿದನು.
***
ಪುನಃ ಭೋಜಭೂಸಾಲನು ವಿಕ್ರಮವಿರದಬಳಿ ಸಾರಿ, ಈ ಕಥೆಯನ್ನಾಲಿಸಿದನು:-
"ಒಂದುದಿನ ಬಬ್ಬಾನೊಬ್ಬ ಪುರುಷನು ಒಬ್ಬ ಸುಂದರಿಯ ಸಮೇತ ವಿಕ್ರಮನ ಅಸ್ಥಾನಕ್ಕೆ ಬಂದು, 'ಹೇ ರಾಜನ್ ನಾನು ದೇವೇಂದ್ರನ ಭೃತ್ಯನು, ಯಾವುದೋ ಕಾರಣದಿಂ ದ ಆತನು ನನ್ನನ್ನು ಶಪಿಸಲು, ನಾನು ಭೂಲೋಕಕ್ಕೆ ಬರಬೇಕಾಯಿತು ಈಗ ದೇವತೆಗಳಿಗೂ ರಾಕ್ಷಸರಿಗೂ ಒಂದು ಮಹಾಯುದ್ದ ವು ಸಂಭವಿಸಿರುವ ಕರಣ ನಾನು ಮಹೇಂದ್ರನ ಸಹಾಯಾರ್ಧವಾಗಿ ಹೋಗಬೇಕಾಗಿದೆ, ನೀನು ಹೆರರ ಹೆಂಗಸರನ್ನು ಅಕ್ಕ ತಂಗಿಯರಂತಿ ಕಾಣವಿಯೊಂದು ಕೇಳಿರುವೆನಾದ ಕಾರಣ ನನ್ನ ಹೆಂಡತಿ ಯಾದ ಆಕೆಯನ್ನು ನಿನ್ನ ರಕ್ಷಣೆಯಲ್ಲಿರಿಸಲು ಬಂದಿರುವೆನು. ಏನ ಹೇಳುವಿ? ಎಂದನು. ವಿಕ್ರಮನು ಆಗಬಹುದೆನ್ನ ಲು, ಆ ಪುರುಷನು ಆಕೆಯನ್ನು ವಿಕ್ರಮನ ಬಳಿ ಬಿಟ್ಟು ಆಕಾಶಕ್ಕೆ ಹಾರಿ ಅದೃಶ್ಯನಾದನು. ರಾಜನೂ, ಸಭಿಕರೂ ಮುಖಗಳನ್ನು ಮೇಲಕ್ಕೆತ್ತಿ ಆಗಸದಲ್ಲಿ ದೃಷ್ಟಿಯನ್ನು ನಿಲ್ಲಿಸಲು,ಕ್ಷಣಮಾತ್ರದಲ್ಲಿ ಹಿಡಿ, ಹೊಡಿ, ಬಡಿ, ಕಡಿ " ಎಂದು ಮುಂತಾದ ಕಠಿಣವಾಕ್ಕುಗಳು ಕೇಳ ಬಂದುವು. ಉತ್ತರಕ್ಷಣದಲ್ಲಿ ಕತ್ತಿಯನ್ನು ಹಿಡಿದಿದ್ದ ರಕ್ತಮಯ ವಾದ ಒಂದು ಬಾಹುವು ಕೆಳಕ್ಕೆ ಬಿದ್ದು, ಇನ್ನೊಂದು ಕ್ಷಣದಲ್ಲಿ ತಲೆಯಿಲ್ಲದ ಒಂದು ಮುಂಡವು ಬಿದ್ದಿತು.ಎಲ್ಲರೂ ಈ ಅದ್ಬುತವನ್ನು ನೋಡಿ ಏನ ತೋರದೆ ನಿಂತಿರಲು, ಆ ದಿವ್ಯ ಪುರುಷನ ಮುಖವನ್ನೇ ಹೋಲುತಿದ್ದ ಒಂದು ತಲೆಯ ಕೆಳಕ್ಕೆ ಬಿದಿತ್ತು ಅದನ್ನು ಕಂಡೊಡನೆಯೇ ಅಲ್ಲಿದ್ದ ಸುಂದರಿಯು "ಹಾ! ಇನ್ನೇನು ಗತಿ! ನನ್ನ ಪತಿಯು ಸಂಹರಿಸಲ್ಪಟ್ಟಿರುವನು.' ಎಂದು ಗೋಳಾಡಿ, ತಾನು ಅಗ್ನಿಪ್ರವೇಶ ಮಾಡಲು ಅನುಕೂಲ ಪಡಿಸಿಕೊಡಬೇಕೆಂದು ವಿಕ್ರಮನನ್ನು ಪ್ರಾರ್ಥಿಸಿದಳು. ಆತನು ಬೇಡವೆಂದು ಎಷ್ಟು ಬಗೆಯಿಂದ ತೆಡೆದರೂ ಆಕೆಯ ಒಪ್ಪದಿರಲು, ವಿಕ್ರಮನು ಅನುತಾಪಪಟ್ಟ, ಆಕೆಯ ಸಹಗಮನಕ್ಕೆ ಬೇಕಾದುದನ್ನು ಒದಗಿಸಿಕೊಟ್ಟನು,ಆ ಕೋಮಲಾಂಗಿಯು ಅಗ್ನಿಜ್ವಾಲೆಯಲ್ಲಿ ಬಿದ್ದು ಪ್ರಾಣಗಳನ್ನು ತೊರೆದಳು, ಮಾರ ಣೆಯದಿನ ವಿಕ್ರಮರಾಜನು ಎಂದಿನಂತೆ ಸಭಾಸಾನಕ್ಕೆ ಬಂದು ಕೂಡಲು, ಹಿಂದಿನ ದಿನದ ದಿವ್ಯ ಪುರುಷನು ಹಿಂದಿನಂತೆಯೇ ಬಂದು, ವಿಕ್ರಮನಿಗೆ ಒಂದು ದಿವ್ಯ ಪುಷ್ಸ ಮಾಲೆಯನ್ನು ಸಮರ್ಪಿಸಿ ಕುಶಲ ಪ್ರಶ್ನೆ ಮಾಡಿ, ತಾನು ದೇವದಾನವ ಯುದ್ಧದಲ್ಲಿ ಅನೇಕ ದಾನವರನ್ನು ಕೊಂದನೆಂದೂ, ಮಹೇಂದ್ರನು ಅದರಿಂದ ಸಂತೋಷಿಸಿ ತನ್ನನ್ನು ಪುನಃ ದೇವಲೋಕಕ್ಕೆ ಬಾರೆಂದು ಕರೆದನೆಂದೂ ಹೇಳಿ, ತನ್ನ ಪತ್ನಿಯನ್ನ ಕಳುಹಿಸಿಕೊಡಬೇಕೆಂದು ಕೇಳಿದನು. ವಿಕ್ರಮನು, ಸಬಿಕರೂ ಅತ್ಯಂತ ವಿಸ್ಮಿತರಾದರು, ಸಭಿಕರಲ್ಲೊಬ್ಬನು ಅವನನ್ನು ಕುರಿತು "ನಿನ್ನ ಭಾರ್ಯಯು ಅಗ್ನಿಯನ್ನು ಹೊಕ್ಕಳು ಎಂದನು. ಆ ಪರುಷನು "ಅಯ್ಯೋ! ಅದೇನು- ಎಂದನು. ಯಾರೂ ಉತ್ತರ ಕೊಡಲಿಲ್ಲ. ಅವನು 'ಎಲೈ ಗಾಜನೇ! ನೀನು ಪರನಾರಿಯರ ಸೋದರನೆಂದು ತಿಳಿದು ನನ್ನ ಪತ್ನಿಯನ್ನು ನಿನ್ನ ವಶದಲ್ಲಿ ಬಿಟ್ಟು ಹೋದರೆ, ನೀನವಳನ್ನು ಅಂತಃಪುರದಲ್ಲಿ ಬಚ್ಚಿಟ್ಟರುವೆಯೋ?" ಎಂದನು. ವಿಕ್ರಮಾರ್ಕನು ಮನದಲ್ಲಿ ಕಳವಳಹೊಂದಿ ರಾಣಿವಾಸದ ಸೇವಕ ಜನರನ್ನು ಕರೆಯಿಸಿ "ಈತನ ಪತ್ನಿಯು ಅಂತಃಪುರದಲ್ಲಿರುವಳೆ?" ಎಂದು ಕೇಳಿದನು. ಅವರು "ಹೌದು, ಮಹಾರಾಣಿಯವ ರೂಡನೆ ಮಾತನಾಡುತ್ತಿರುಳು!" ಎಂದರು. ಎಲ್ಲರೂ ಮತ್ತಷ್ಟು ಆಶ್ಚರ್ಯಭರಿತರಾದರು. ಆಗ ಆ ಪುರುಷನು ಎದ್ದು ನಿಂತು "ಮಹಾಪ್ರಭೋ?: ಕ್ಷಮಿಸಬೇಕು, ನಾನೊಬ್ಬ ಐಂದ್ರಜಾಲಿಕನು ಈಗ ನಡೆದುದೆಲ್ಲವೂ ಬರಿಯವಾಯೆ, ನನ್ನ ಇಂದ್ರಜಾಲ ಮಹೇಂದ್ರಜಾಲ ವಿದ್ಯೆಗಳನ್ನು ತೋರಿಸಲು ಹೀಗೆ ಮಾಡಿದೆನು. ಅಪರಾಧಗಳನ್ನು ಮನ್ನಿಸಬೇಕು" ಎಂದನು ಆ ವೇಳೆಗೆ ದ್ವಾರವಾಲಕನೊಬ್ಬನ ವಿಕ್ರಮರಾಜನು ಸನ್ನಿಧಿಗೆ ಬಂದು "ಪಾಂಡ್ಯ ರಾಜನು ಕಪ್ಪವನ್ನು ಕಳುಹಿಸಿರುವನು " ಎಂದು ಬಿನ್ನಯಿಸಿದನು . ವಿಕ್ರಮನು ಆ ಬಹುಧನನನ್ನೆಲ್ಲಾ ಐಂದ್ರಜಾಲಿಕನಿಗಗೇ ಕೊಡಿ ಸಿದನು, ಈ ಬಗೆಯ ವಿಶೇಷಗಳು ಬೋಜಮಹಾರಾಜನ ಆಸ್ಥಾನದಲ್ಲಿ ನಡೆಯುವವೆ?”
ಭೋಜನು ಸುಮ್ಮನೆ ನಡೆದನು.
*** ಮೂವತ್ತೊಂದನೆಯಾವರ್ತಿ ಭೋಜಭೂಪತಿಯು ವಿಕ್ರಮಾಸನದ ಬಳಿ ಹೋಗಲು ಇನ್ನೊಂದು ಪಾಂಚಾಳಿಕೆಯು ಹೀಗೆ ಹೇಳಿತು:-
"ಒಂದುಸಲ ದಿಗಂಬರ ಸನ್ಮಾನಿಯೊಬ್ಬನು ವಿಕ್ರಮಾರ್ಕನಲ್ಲಿಗೆ ಬಂದು, ರಾಜನನ್ನಾಶೀರ್ವದಿಸಿ ಫಲಮಂತ್ರಾಕ್ಷತೆಗಳನ್ನಿತ್ತು, ಅಯ್ಯಾ, ನಾನು ಮಾರ್ಗಶೀರ್ಷ ಕೃಷ್ಣ ಚತುರ್ದಶಿಯ ರಾತ್ರಿ ಸ್ಮಶಾನದಲ್ಲಿ ಒಂದು ಹೋಮ ಮಾಡಬೇಕಾಗಿದೆ. ಅದಕ್ಕೆ ನಿನ್ನ ಸಹಾಯವು ಬೇಕು" ಎಂದನು.
ರಾಜ:-ನಾನೇನು ಮಾಡಬೇಕು?
ದಿಗಂಬರ:- ಸ್ಮಶಾನಭೂಮಿಗೆ ಸ್ವಲ್ಪ ದೂರದಲ್ಲಿರುವ ಶಮಿವೃಕ್ಷದಲ್ಲಿ ಭೇತಾಳನಿರುವನು. ಅವನನ್ನು ಬಲವಾಗಿ ಹಿಡಿದು, ಮೌನದಿಂದ ನನ್ನಲ್ಲಿಗೆ ಕರೆತರಬೇಕು.
ರಾಜ:- ಹಾಗೆಯೇ ಆಗಲಿ.
ದಿಗಂಬರನು ಹೊರಟು ಹೋದನು. ನಿಯಮಿಸಿದ್ದ ವೇಳೆಗೆ ವಿಕ್ರಮನು ರುದ್ರಭೂಮಿಯನ್ನು ಸೇರಿ, ಶಮಿವೃಕ್ಷದಡಿಯಲ್ಲಿದ್ದ ಭೇತಾಳನನ್ನು ಬಲವಾಗಿ ಹಿಡಿದೆತ್ತಿ ಭುಜದಮೇಲೆ ಕೂಡಿಸಿಕ್ಕೊಂಡು ದಿಗಂಬರನ ಬಳಿಗೆ ಹೊರಟನು. ಮಾರ್ಗದಲ್ಲಿ ಭೇತಾಳನು ಹೀಗೆಂದನು: "ರಾಜನೆ, ದಾರಿಯನ್ನು ಕಳೆಯುವುದಕ್ಕಾಗಿ ಒಂದು ಕಥೆಯನ್ನ ಹೇಳು. "ರಾಜನು ಮೌನವನ್ನು ಬಿಟ್ಟರೆ ಭೇತಾಳನು ಹಿಂದಿರುಗುವನೆಂಬ ಭಯದಿಂದ ಸುಮ್ಮನಿದ್ದನು. ಭೇತಾಳ: " ನೀನು ಹೇಳದಿದ್ದರೆ ನಾನೇ ಹೇಳುವೆನು. ಕಡೆಗೆ ನಾನು ಕೇಳುವ ಪ್ರಶ್ನೆಗೆ ಉತ್ತರವನ್ನು ತಿಳಿದೂ, ಮೌನಭಂಗ ಭಯದಿಂದ ನೀನು ಮಾತನಾಡದೆ ಹೋದರೆ, ನಿನ್ನ ತಲೆಯು ಸಾವಿರ ಹೋಳಾಗುವುದು ಕೇಳು. ವಿಂಧ್ಯವತಿಯೆಂಬುದೊಂದು ಪಟ್ಟಣ. ಅದರಲ್ಲಿ ಸುವಿಚಾರನೆಯ ದೊರೆ.ಆತನ ಮಗ ಜಯತ್ಸೇನನು ಒಂದು ದಿನ ಬೇಟೆಗೆ ಹೊರಟು, ಒಂದು ಕಾಡಾನೆಯನ್ನು ಹಿಂಬಾಲಿಸಿ ಅರಣ್ಯದೊಳಕ್ಕೆ ಬಲುದೂರ ಹೋದನು, ಅಲ್ಲಿ ಒಂದು ನದಿಯು ಹರಿಯುತ್ತಿತ್ತು. ಅದರ ದಡದಲ್ಲಿ ಒಬ್ಬ ಬ್ರಾಹ್ಮಣನು ಧ್ಯಾನನಿಷ್ಟನಾಗಿ ಕುಳಿತಿದ್ದನು, ರಾಜಪುತ್ರನು ಕುದುರೆಯಿಂದಿಳಿದು, ಅವನಬಳಿಗೆ ಹೋಗಿ, "ಅಯ್ಯಾ, ಈ ಕುದುರೆಯನ್ನು ನೋಡಿಕ್ಕೊಂಡಿರು, ನಾಮ ನದಿಯೊಳಕ್ಕಿಳಿದ ಸ್ನಾನ ಪಾನಗಳನ್ನು ಮಾಡಿರುವೆನು. ಎಂದನು ಬ್ರಾಹ್ಮಣನು'ಧ್ಯಾನಾ ರೂಢನಾದವನನ್ನು ಹೀಗೆ ತೊಂದಿಪಡಿಸುವುದು ಸರಿಯೇನೈ?, ಎನ್ನಲು, ರಾಜಪುತ್ರನು ಕೋಪಗೊಂಡು, ಆ ವಿಪ್ರವನ್ನು ಚಾಟಮಿಂದ ಚೆನ್ನಾಗಿ ಹೊಡೆದನು. ವಿಪ್ರನು ಅಲ್ಲಿಂದ ಹೊರಟು, ಸುವಿಚಾರ ರಾಜನಲ್ಲಿಗೆ ಜೋಗಿ ಆದ ಸಂಗತಿಯನ್ನ ವಿಘ್ನಾಪಿಸಿದನು. ರಾಜನು ಮಗನೆ ಮೇಲೆ ತುಂಬಾ ಆಗ್ರಹಪಟ್ಟು ಅವನನ್ನು ದೇಶಭ್ರಷ್ಟನನ್ನಾಗಿ ಮಾಡಲು ನಿಶ್ಚಯಿಸಿದನು. ಅಷ್ಟರಲ್ಲಿ ಮಂತ್ರಿಯು "ರಾಜ್ಯಭಾರವನ್ನು ವಹಿಸಲು ಯೋಗ್ಯನಾದ ಕುಮಾರನನ್ನು ರಾಜ್ಯದಿಂದ ಓಡಿಸುವುದು ಉಚಿತವಲ್ಲ" ಎಂದನು. ಹೀಗೆದೊರೆಯು ನ್ಯಾಯಪರವಾಗಿಯೂ, ಮಂತ್ರಿಯು ಅನುಕೂಲವನ್ನು ಯೋಚಿಸಿಯೂ ಬಹುದೂರ ಚರ್ಚಿಸಿದರು.ಕಡೆಗೆ ರಾಜನು ಮಗನನ್ನು ಶಿಕ್ಷಿಸಿಯೇ ತೀರಬೇಕೆಂದು ತಿರ್ಮಾನಿಸಿ, ಹಸ್ತೇಚ್ಛೇದವನ್ನು ವಿಧಿಸಿದನು, ಅಷ್ಟರಲ್ಲಿ ಬ್ರಾಹ್ಮಣನು ಅಡ್ಡ ಬಂದು, "ರಾಜನೆ, ನಿನ್ನ ಧರ್ಮಬುದ್ಧಿಗೆ ಮೆಚ್ಚಿದೆನು.ನಿನ್ನ ಮಗನು ಇನ್ನೂ ಬಾಲಕನಾದಕಾರಣ ಕ್ಷಮೆಗೆ ಅರ್ಹನು. ನಾನು ಅವನನ್ನು ಕ್ಷಮಿಸಿರುವೆನು, ನೀನೂ ಕ್ಷಮಿಸತಕ್ಕುದು" ಎಂದು ಹೇಳಿ ಹೊರಟು ಹೋದನು. ಎಲೈವಿಕ್ರಮರಾಜನೆ, ಆ ಬ್ರಾಹ್ಮಣನ ಗುಣವು ದೊಡ್ಡದೋ ಆ ರಾಜನ ಗುಣತ್ರ ದೊಡ್ಡದೊ?,,
ವಿಕ್ರಮ:-ರಾಜನ ಗುಣವೇ ದೊಡ್ಡದು.
ಈ ರೀತಿ ವಿಕ್ರಮನ ಮೌನಮತವು ಭಂಗವಾಗಲು ಭೇತಾಳನು ಬನ್ನಿಮರವನ್ನು ಸೇರಿದನು, ಪ್ರನಃ ವಿಕ್ರಮನು ಅವನನ್ನು ಹಿಡಿದು ತಂದನು, ಪುನಃ ಭೇತಾಳೆನು ಕಥೆ ಹೇಳಿ ಮೌನವನನ್ನು ಭಂಗಪಡಿಸಿದನು, ಈ ರೀತಿ ಒಟ್ಟಿಗೆ ಇಪ್ಪತ್ತೈದಾವರ್ತಿ ನಡೆಯಿತು. ಕಡೆಗೆ ಭೇತಾಳನು ಹೀಗೆಂದನು: "ಎಲೈ ರಾಜನೆ, ನಿನ್ನ ಬುದ್ಧಿವಂತಿಕೆಯಿಂದಲೂ ಧರ್ಮಪರತೆಯಿಂದಲೂ ತುಂಬಾ ಸಂತುಷ್ಟನಾದೆನು. ಈಗ ನಾನು ಹೇಳುವುದ ಕೇಳು. ನೀನು ಆ ಕಾಪಾಲಿಕ ಸನ್ಯಾಸಿಯ ಬಳಿಗೆ ನನ್ನನ್ನು ಕರೆದೊಯ್ದು ರೆ, ಅವನು ನಿನ್ನನ್ನು ಯಜ್ಞಕುಂಡಕ್ಕೆ ಸಾಷ್ಟಾಂಗವಾಗಿ ನಮ ಸ್ಕರಿಸಹೇಳಿ, ನೀನು ಮಲಗಿದಕೂಡಲೆ ನಿನ್ನಶಿರವನ್ನು ತರಿದು ಪೂರ್ಣಾಹುತಿ ಕೊಟ್ಟು ತಾನು ಅನೇಕ ಸಿದ್ದಿಗಳನ್ನು ಹೊಂದುವನು.ಅದಕ್ಕೆ ಪ್ರತಿಯಾಗಿ ನೀನೇ ಪ್ರಣಾಮ ವಿಧಿಯನ್ನು ಮಾಡಿ ತೋರಿಸು' ಎಂದು " ನೀನೇ ಕೇಳಿದರೆ, ಅವನು ಪ್ರಣಾಮ ಮಾಡುವನು. ಆಗ ನೀನೇ ಅವನ ಶಿರವನ್ನು ಖಂಡಿಸಿ ಪೂರ್ಣಾಹುತಿ ಮಾಡು. ಯಜ್ಞದೇವತೆಯು ನಿನ್ನವಳಾಗುವಳು ಎಂದನು, ವಿಕ್ರಮಾದಿತ್ಯನು ಭೇತಾಳನು ಹೇಳಿದಂತೆಯೇ ಎಲ್ಲವನ್ನೂ ನಡೆಸಲು, ದೇವತೆಯು ಪ್ರತ್ಯಕ್ಷಳಾಗಿ "ವರವನ್ನು ಬೇಡು "ಎಂದಳು. -
ವಿಕ್ರಮನು: ದೇವಿ ಈಕಾಸಾಲಿಕನನ್ನು ಬದುಕಿಸಿ ಅವನ ಇಷ್ಟ ಇಳನ್ನು ನೆರವೇರಿಸು, ನಾನು ಸ್ಮರಿಸಿದಾಗ ನನ್ನಲ್ಲಿ ದಯೆ ಮಾಡು ." ದೇವಿಯು "ಹಾಗೆಯೇ ಆಗಲಿ” ಎಂದು ಅಂತರ್ಧಾನವಾದಳು.
ಕಾಪಾಲಿಕನು ಸಂತುಷ್ಟಚಿತ್ತನಾಗಿ ವಿಕ್ರಮನನ್ನು ಹೊಗಳುತ್ತಾ ನಡೆದನು. ವಿಕ್ರಮನು ಭೇತಾಳನ ಸ್ನೇಹವನ್ನು ಸಂಪಾದಿಸಿ ನಗರಕ್ಕೆ ತೆರಳಿದನು. ಇಂತಹ ಶೌರ್ಯದಾರ್ಯಗಳು ಭೋಜರಾಜನಲ್ಲಿರುವುವೆ?"
ಭೋಜನು ನಸುನಗುತ ಹಿಂದಕ್ಕೆ ತೆರಳಿದನು.
*** ಇನ್ನೊಂದುಸಲ -ಇದು ಮೂವತ್ತೆರಡನೆಯ ಸಲ-
ಭೋಜನು ವಿಕ್ರಮನ ಭದ್ರಾಸನದ ಬಳಿ ಬರಲು, ಕಡೆಯ ಸಾಲಭಂತಿಕೆಯು ಹೀಗೆ ನುಡಿಯಿತು:-
"ಎಲೈ ರಾಜನೆ, ನೀನು ಪುನಃ ಪುನ: ಈ ಸಿಂಹಾಸನವನ್ನು ಆರೋಹಿಸಲು ಏಕೆ ಬಯಸುವಿ? ವಿಕ್ರಮಾದಿತ್ಯನಲ್ಲಿದ್ದ ಶೌರ್ಯ, ಔದಾರ್ಯ, ಧೈರ್ಯ, ದಯೆ, ಕ್ಷಮೆ, ಭಕ್ತಿ, ಜ್ಞಾನ, ವೈರಾಗ್ಯ, ತೇಜಸ್ಸು, ಓಜಸ್ಸು, ಬಲ ಇವೇ ಮುಂತಾದ ಸದ್ಗುಣಗಳು ಇತರರಲ್ಲಿ ಇಲ್ಲವು. ನಾವಾದರೋ ದೇವಕನ್ಯೆಯರ ಹಿಂದೆ ನಾವು ಒಂದುವನದಲ್ಲಿ ವಿನೋದರಲ್ಲಿರಲು, ಅಲ್ಲಿಂದ ಹೋಗುತ್ತಿದ್ದ ಪರಮೇಶ್ವರನು ನನ್ನನ್ನು ಕಂಡು ನಮ್ಮಲ್ಲಿ ಅನುರಾಗವನ್ನು ತೋರಿದನು. ಪಾರ್ವತಿಯು ಅದನ್ನರಿತು, ತಮ್ಮಲ್ಲಿ ಅಸೂಯೆಪಟ್ಟು, “ ನೀವು ಇಂದ್ರಸಿಂಹಾಸನದ ಮೇಲಿನ ಪ್ರತಿಮೆಗಳಾಗಿರಿ" ಎಂದು ಶಪಿಸಿದಳು. ಆಗ ನಾವು ಆಕೆಯಲ್ಲಿ ಹೋಗಿ ಮೊರೆಯಿಡಲು, ಆಕೆಯು "ಕೆಲವುಕಾಲದ ಮೇಲೆ ಆ ಸಿಂಹಾಸನವು ಇಂದ್ರನಿಂದ ವಿಕ್ರಮಾದಿತ್ಯನಿಗೆ ಕೊಡಲ್ಪಡುವುದು. ಆರಾಜಶ್ರೇಷ್ಠನು ಸ್ವರ್ಗಸ್ಥನಾದ ಕೆಲವು ಕಾಲದಮೇಲೆ ಮತ್ತೊಬ್ಬ ರಾಜೋತ್ತಮನು ಆ ಪೀಠವನ್ನು ಹತ್ತಲು ಪ್ರಯತ್ನಿಸುವನು. ಅವನಿಗೆ ನೀವು ವಿಕ್ರಮನ ಗುಣಗಳನ್ನು ವರ್ಣಿಸಿ ನಿಮ್ಮ ನಿಜ ರೂಪವನ್ನು ಹೊಂದುವಿರಿ” ಎಂದಳು. ಈಗ ನಮ್ಮ ಶಾಪವಿಮೋಚನೆಯು ಆಯಿತು. ಇನ್ನು ನಾವು ದೇವಲೋಕಕ್ಕೆ ಹೊರಡುವೆವು. ನೀನು ವಿಕ್ರಮನ ಸದ್ಗುಣಗಳನ್ನು ಅವಲಂಬಿಸಿ ನಡೆದು, ಚಿರಕಾಲ ಬಾಳಿ ಕೀರ್ತಿವಂತನಾಗು, ನಿನಗೆ ಶುಭವಾಗಲಿ."
ಹೀಗೆ ಆ ಪಾಂಚಾಲಿಕೆಯು ಹೇಳಿದೊಡನೆಯೆ, ಆ ಮೂವತ್ತೆರಡು ಪ್ರತಿಮೆಗಳೂ ಮಾಯವಾಗಿ ಅಷ್ಟು ಮಂದಿ ದಿವ್ಯ ಸ್ತ್ರೀಯರು ಅಲ್ಲಿ ನಿಂತಿದ್ದರು. ಅವರುಗಳಿಂದ ಪ್ರತ್ಯೇಕ ಪ್ರತ್ಯೇಕವಾಗಿ ಭೋಜನು ಆಶೀರ್ವಾದವನ್ನೂ ಅನೇಕ ವರಗಳನ್ನು ಪಡೆದಮೇಲೆ ಅವರೂ ಮಾಯವಾದರು.
ಭೋಜನು ವಿಕ್ರಮನ ಕಥೆಗಳು ಮುಗಿದು
ಹೋದವಲ್ಲಾ ಎಂದು ವ್ಯಸನಪಟ್ಟು, ಆತನ
ಗುಣಗಳನ್ನು ಪದೇಪದೇ ಸ್ಮರಿಸುತ್ತಾ,
ಅಭ್ಯಾಸಮಾಡುತ್ತಾ, ಆಸಿಂಹಪೀಠ
ವನ್ನು ಅರಮನೆಯಲ್ಲಿರಿಸಿ ಪ್ರತಿನಿ
ತ್ಯವೂ ಪೂಜಿಸುತ್ತಾ, ಬಹು
ಕಾಲ ಧರ್ಮದಿಂದ ರಾಜ್ಯ
ಪರಿಪಾಲನೆ ಮಾಡಿ,
ಯಶಸ್ವಿಯಾದನು.
ಕೆಲವು ದಿನಗಳು ಕಳೆದವು. ಚಿತ್ರವೆಲ್ಲವೂ ಸಂಪೂರ್ಣವಾಯಿತು. ಭೋಜನ ರಾಣಿಯ ರೂಪಲಾವಣ್ಯಗಳು ಅದರಲ್ಲಿ ಎಳ್ಳಷ್ಟು ವ್ಯತ್ಯಾಸವಿಲ್ಲದೆ ಕಾಣಬರುತ್ತಿದ್ದವು, ಚಿತ್ರಕಾರನು ಅದ ರಲ್ಲಿ ಜೀವಕಳೆಯನ್ನು ತುಂಬಿ ತನ್ನ ಕೌಶಲ್ಯವನ್ನು ತಾನೇ ಪರೀಕ್ಷಿಸಿನೋಡಿ ಹಿಗ್ಗಲಾರಂಭಿಸಿದನು; ಕೇಶರಾಶಿಯ ನ್ನು ನೋಡಿ ದನು; ದೃಷ್ಟಿಗಳನ್ನು ನೋಡಿದನು; ಮಂದಸ್ಮಿತವನ್ನು ನೋಡಿ ದನು; ಹಾಗೆಯೇ ಅಂಗಗಳನ್ನೆಲ್ಲಾ ಒಂದೊಂದಾಗಿ ಎವೆಯಿಕ್ಕದೆ ನೋಡುತ್ತ ಬಂದನು; ಬರುತಬರುತ ಅವನ ಕಣ್ಣ ಮಧ್ಯ ಭಾಗವನ್ನು ಸೇರಿದೊಡನೆಯೆ ಅವನು ಸ್ತಬ್ದನಾದನು! ಇದೇನು?ಇಷ್ಟೊಂದು ಜಾಗರುಕನಾಗಿ, ಮೈಯೆಲ್ಲಾ ಕಣ್ಣ ಮಾಡಿಕ್ಕೊಂಡು ಬಂದಿರುವ ಈ ಆಕಾರದಲ್ಲಿ ಕಿಬ್ಬೊಟ್ಟೆ ಮೇಲಕ್ಕೆ ಕಪ್ಪು ಮಚ್ಚೆಯು ಹೇಗೆ ಒಂದಿತು? ಇರಲಿ, ಮಸಿಯ ಚುಕ್ಕೆಯೇನಾದರೂ ಪ್ರಮಾದದಿಂದ ಬಿದ್ದಿರಬಹುದು."ಎಂದಂದುಕ್ಕೊಂಡು, ಚಿತ್ರಕಾರನು ಆ ದೋಷವನ್ನು ತೆಗೆಯಲು ಪ್ರಯತ್ನ ಮಾಡಿದನು. ಏನೇನೋ' ಸಾಹಸಮಾಡಿದನು. ಏನು ಮಾಡಿದರು ಆ ಗುರುತು ಹೋಗಲ್ಲೋಲದು. ಅಳಿಸಿದರೆ ಹೋಗದು ಆಯಧದಿಂದ ಕೆರೆದರೆ ಹೋಗದು ಮೇಲೆ ಬಣ್ಣ ಬಳಿದರೂ ಹೋಗದು.ಮಾಡುವುದೇನು? ಎಷ್ಟೊಕಷ್ಟಪಟ್ಟು ಅಣಿ ಮಾಡಿದ ಚಿತ್ರದಲ್ಲಿ ಅದು ಒಂದೇ ಕುಂದು.
ಆ ಚಿತ್ರಕಾರನು ಈ ಕಷ್ಟದಲ್ಲಿ ಸಿಕ್ಕಿ ಸಂಕಟಪಡುತ್ತಿರು \ವಾಗ ಕಾಳಿದಾಸನು• ಆ ದಾರಿಯಲ್ಲಿ ಹೋಗುತ್ತಿದ್ದ, ಚಿತ್ರಕಾರನನ್ನು ಕಂಡು "ಎಲೈ, ಏಕೆ ಚಿಂತಾಕ್ರಾಂತನಾಗಿ ಕಾಣುವೆ? ನಿನಗೆ ನನ್ನಿಂದಾಗಬಲ್ಲ ಸಹಾಯವೇನಾದರೂ ಇದ್ದರೆ ದಯಯಿಟ್ಟು ತಿಳಿಸು, ಶಿರಸಾವಹಿಸಿ ಮಾಡುವೆನು"ಎಂದು
•ಈ ಕಾಳಿದಾಸನೂ ವಿಕ್ರಮಾದಿತ್ಯನ ಸಭೆಯಲ್ಲಿದ್ದ ಕಾಳಿದಾಸನೂ ಒಬ್ಬ ವ್ಯಕ್ತಿಯೇ ಎಂದು ನಂಬುವುದು ಕಷ್ಯವಾಗಿದೆ; ಏಕೆಂದರೆ ವಿಕ್ರಮನ ಕಾಲಕ್ಕೂ ಭೋಜನ ಕಾಲಕ್ಕೂ ನೂರು ವರ್ಷಗಳಿಗಿಂತ ಹೆಚ್ಚಿನ ಅಂತರ ವುಂಟೆಂದು ಗೊತ್ತಾಗಿದೆ. ಆದರೆ ಇಲ್ಲಿ ನಾವು ಹೇಳುತ್ತಿರುವುದು ಕಥೆಯಾದ ಕಾರಣ ಚರಿತ್ರೆಯನ್ನು ಸ್ಪಲ್ಪ ಮಟ್ಟಿಗೆ ದೂರವಿಡಬೇಕಾಗಿದೆ. ಹೇಳಿದನು. ಚಿತ್ರಗಾರನು ಇದ್ದ ಸಂಗತಿಯನ್ನು ಬಿನ್ನಯಿಸಲು, ಕವಿಕುಲತಿಲಕನಾದ ಕಾಳಿದಾಸ ಕೆಲವು ನಿಮಿಷಗಳು ಆ ಲೋಚಿಸಿ, "ಎಲೈ, ಅ ದರಂತೆ ಇರಲಿ! ಅದು ಆಕೆಯ ದೇಹದಲ್ಲಿರುವ ಕುರುಹನನ್ನೇ ಸೂಚಿಸುವದು? " ಎಂದನು. ಚಿತ್ರಗಾರನು ಆ ಪತ್ರದಿಂದ ಪ್ರತ್ಯುತ್ತರದಿಂದ ಸಂತುಷ್ಟುನಾದನು ವರಕವಿಗೆಳಿಗೂ ಶಾಸ್ತ್ರಜ್ಞರಿಗೂ ಇದೇ ವ್ಯತ್ಯಾಸ, ಶಾಸ್ತ್ರಜ್ಞರು ತಮ್ಮ ಶಾಸ್ತ್ರಗಳನ್ನು ಅಕ್ಷರಶಃ- ಚಾಚು ತಪ್ಪದಂತೆ ಅನುಸರಿಸುವರು, ವರಕವಿಗಳಾದರೋ ನಿಶ್ಚಯ ತತ್ತ್ವವನ್ನು ಮೊದಲೇ ತಿಳಿದಿರುವರು.
ಚಿತ್ರವು ದೊರೆಯಬಳಿಗೆ ಒಯ್ಯಲ್ಪಟ್ಟಿತು ಕಹಿಕಾಗ್ರೇಸರನಾದ ಭೋಜನ ಅದನ್ನು ನೋಡಿ ಆನಂದಿಸಿದರು ಆತನು ಆ ಚಿತ್ರದಲ್ಲಿನ ಮೂರ್ತಿಯ ಅಂಗಸೌಷ್ಟವವನ್ನು ನೋಡುತ್ತಿರುವಾಗ ಆತನ ದೃಷ್ಟಿಯು ಹರತ್ತಾಗಿ, ಆ ಕರಿಚುಕ್ಕೆಯ ಮೇಲೆ ಬೀಳಲೇಬಿತ್ತು! ಒಡವೇಯೇ ದೊರೆಯು ಚುಬ್ಬಂಟಿಕ್ಕಿದನು' ನಸುನಗುವಿನಿಂದ ಸೊಗಯಿಸುತ್ತಿದ್ದ ಮುಖವು ಕೋಪದಿಂದ ಸಂಕುಚಿತವಾಯಿತು! ಕ್ರೂರಭಾವದಿಂದ " ಏನೈ! ಈ ಮಚ್ಚೆಯಿರುವ ಸಂಗತಿಯ, ನಿನಗೆ ಹೇಗೆ ತಿಳಿಯಿತು? ಅದನ್ನು ಕುರಿತು ನಿನಗೆ ಹೇಳಿದವರಾರು? ಹೇಳದಿದ್ದರೆ, ಮರಣಶಾಸನವನ್ನು ವಿಧಿಸಿಯೇನು! "ಎಂದು ಗರ್ಜಿಸಿದನು. ಇನ್ನೇನುಗತಿ! ಚಿತ್ರಗಾರನ ಚಿಂತಗೆ ಪಾರವೇ ಇಲ್ಲ, ದಿಕ್ಕತೋರದೆ ಅವನು ಕಾಳಿದಾಸನ ಹೆಸರನ್ನು ಹೇಳಿಯೇಬಿಟ್ಟನು, ಭೋಜರು ವಿಸ್ಮಿತನಾದನು. ಕಾಳಿದಾಸನು ಅಲ್ಲಿಯೇ ಇದ್ದ ಚಿತ್ರಗಾರನಹೇಳಿಕೆ ಯನ್ನು ಕೇಳಿ ದನಾದರೂ ಬಾಯಿಬಿಡಲಿಲ್ಲ, ಭೋಜನ ಏನೇನೋ ಯೋಚಿಸಲಾರಂಭಿಸಿದನು. "ಅದು ಹೇಗಾದೀತು? ಆ ಗುರುತು ನನಗಲ್ಲದ ಮತ್ತೂಬ್ಬ ಪುರುಷನಿಗೆ ಹೇಗೆ ತಿಳಿದೇತು? ಅವಳ ಅಂತರಂಗ ಭಾಗದ ಗುರುತು ಕಾಳಿದಾಸನಿಗೆ ತಿಳಿಯಬೇಕಾದರೆ ಅದನ್ನವನು ಕಣ್ಣಾರ ನೋಡಿರಬೇಕು, ಅದು ನಿಜವೇ ಆದರೆ ಅವಳಿಗೂ ಅವನಿಗೂ ರಹಸ್ಯವಾಗಿ ಸಂಬಂಧವಿರಲೇಬೇಕು. ಹಾಗಿಲ್ಲದಿರುವುದು ಸಾಧ್ಯವಿಲ್ಲ." ಹೀಗೆಂದು ಯೋಚಿಸಿ, ಕಡೆಗೆ ಕಾಳಿದಾಸನಿಂದ ತನ್ನ ಸತಿಯು ಪಾತಿವ್ರತ್ಯವು ಕೆಟ್ಟು ಹೋಯಿತೆಂದು ನಿಶ್ಚಯಿಸಿದನು. ಹಾಗೆಯೇ ನಿಶ್ಚಯಿಸಿ, ಕಾಳಿದಾಸನಿಗೆ ಶಿರಚ್ಛೇದನ ಶಿಕ್ಷೆಯನ್ನು ವಿಧಿಸಿದನು, ಬುದ್ದಿ ಶಾಲಿಯಾದ ಭೋಜನ ಮಂತ್ರಿಯು ಈ ಸಂಗತಿಗಳನ್ನೆಲ್ಲಾ ತಿಳಿದು, ಕಾಳಿದಾಸನನ್ನು ತನ್ನ ಮನೆಯಲ್ಲಿ ಬಚ್ಚಿಟ್ಟು ಅವನ ತಲೆಯು ತೆಗೆಯುಲ್ಪಟ್ಟಿತೆಂದು ಅರಸಿಗೆ ವಿಜ್ಞಾಗಿಸಿದನ. ಆಮೇಲೆ ಸ್ವಲ್ಪ ಕಾಲ ಜರುಗಿತು.
ಒಂದಾನೊಂದುದಿನ ಭೋಜಪುತ್ರನು ಬೇಟೆಗಾಗಿ ಕಾಡಿಗೆ ಹೋದನು, ಕೆಲಸವಿಲ್ಲದ ಸೋಮಾರಿಗಳಿಗೆ "ಇಸ್ಪೀಟು " ಆಟವು ಹೇಗೆ ಪ್ರಿಯವೋ, ಮೃಗಯಾವ್ಯಸನವು ರಾಜಪುತ್ರರಿಗೆ ಹಾಗೆ "ಇಸ್ಪೀಟು" ಆಡಲು ಕೂತವರು ಹೇಗೆ ಆಟವನ್ನು ಬಿಡಲು, ಇಷ್ಟಪಡುವುದಿಲ್ಲವೋ, ಹಾಗೆಯೇ ರಾಜಪುತ್ರರು ಬೇಟೆಯಿಂದ ಹಿಂದಿರುಗಲು ಇಪ್ಪವುಳ್ಳವರಾಗುವುದಿಲ್ಲ, ಭೋಜನ ಮಗನು ಯಾವುದೋ ಒಂದು ಪ್ರಾಣಿಯನ್ನು ಹಿಂಬಾಲಿಸಿ ಕಾಡಿನೊಳಕ್ಕೆ ಬಲುದೂರಹೋದನು, ಅವನ ಚಾರರು ಅವನನ್ನು ಅನುಸರಿಸಲಾರದೆ ಹೋದರು, ಅಷ್ಟರಲ್ಲಿಯೇ ಸೂರ್ಯನು ಅಸ್ತಂ ಗತನಾದನು.
ವ್ಯಸನಿನ ಇವ ವಿದ್ಯಾ ಕ್ಷೀಯತೇ ಪಂಕಜಶ್ರೀಃ
ಗುಣಿನ ಇವ ವಿದೇಶೇ ದೈನ್ಯಮಾಯಾಂತಿ ಭೃಂಗಾಃ।
ಕುನೃಪತಿರಿವ ಲೋಕಂ ಪಿಡಿಯತ್ಯಂಧಕಾರಃ
ಧನಮಿವ ಕೃಪಣಸ್ಯ ವ್ಯರ್ಥತಾಮೇತಿ ಚಕ್ಷುಃ॥ (ಕಾಳಿದಾಸ)
ಆದರೆ ಆ ಕರಡಿಯು ಮನುಷ್ಯ ಪ್ರಾಣಿಯಷ್ಟು ಕಲ್ಲೆದೆಯ ದಾಗಿರಲಿಲ್ಲ. ಆ ಹತಭಾಗ್ಯವನ್ನು ನೋಡಿ ಅದರ ಮನಸ ಕರಗಿತು, ಅದು ಆ ಬಾಲಕನನ್ನು ಒಳಗೆ ಕರೆದು, ಒಳ್ಳೆ ಮಾತುಗಳಿಂದ ಸಮಾಧಾನಪಡಿಸಿ, ಅವನಿಗೆ ತನ್ನಿಂದ ಕೆಡಕಾಗಲಾರದೆಂದು ಅಭಯವನ್ನು ಕೊಟ್ಟು, ಅವನನ್ನು ತನ್ನ ತೊಡೆಯ ಮೇಲೆ? ಮಲಗಿಸಿಕ್ಕೊಂಡು ನಿದ್ದೆ ಮಾಡಿಸಿತು. ಕೆಳಗೆ ನಿಂತಿದ್ದ ಕ್ಷುದ್ರಜಂತುವು ಉದಾರಿಯಾದ ಕರಡಿಯನ್ನು ಕುರಿತು ಮಿತ್ರನೆ! ಅದೇಕೆ ಹೀಗೆಮಾಡುವೆ? ಮನುಷ್ಯನು ನಮ್ಮಿಬ್ಬರಿಗೂ ವೈರಿಯಲ್ಲವೆ? ನಮ್ಮ ರಾಜ್ಯವಾದ ಅರಣ್ಯವೆಲ್ಲವೂ ಅವನ ರಾಜ್ಯ ಬಾರ ಊರಾಗುತ್ತಿರುವುದಲ್ಲವೆ? "ನಮ್ಮ ನಿರಂಕಶಹ ಅರಣ್ಯವು ಅವನಿಂದ ಸಾಕುಂಶಕವಾಗಿರುವುದಲ್ಲವೆ?"ಎಂದು ಮೊದಲಾದ ಅನೇಕ ಕಪಟೋಕ್ತಿಳನ್ನಾಡಲಾರಂಭಿಸಿತು. ಯಾವ ಉಪಾಯದಿಂದಲೂ ಕರಡಿಯು ಹುಲಿಯಮಾರ್ಗಕ್ಕೆ ಬರಲಿಲ್ಲ.
ನಿಂದಂತು ನೀತಿನಿಪುಣಾಯದಿ ವಾಸ್ತುವಂತು|
ಲಕ್ಷ್ಮೀಸ್ಸವಾದಿಶತು ಗಚ್ಛತು ವಾ ಯಧೇಷ್ಟo||
ಅದೈವ ವಾ ಮರಣಮಸ್ತು ಯುಗಂತರೇ ವಾ|
ನ್ಯಾಯ್ಯಾತ್ ಪಥ: ಪ್ರವಿಟಲಂತಿ ವದಂನ ಧೀರಾಃ||
(ಭರ್ತೃಹರಿ)
ನೀತಿಶಾಸ್ತ್ರಜ್ಞರು ದೂಷಿಸಲಿ, ಭೂಷಿಸಲಿ; ಸಂಪತ್ತು ಬರಲಿ, ಹೋಗಲಿ; ಮರಣವೀಗಲೆ ಆಗಲಿ, ಈಗಾಗಲಿದಿಂದಿರಲಿ ಧೀರರು ನ್ಯಾ ಯಮಾರ್ಗವನ್ನು ತಪ್ಪುವುದಿಲ್ಲ, ಆ ಕರಡಿಯು ಅಂತಹ ಧೀರ ಸ್ವಭಾವವುಳ್ಳದು. ಅದು ಹುಲಿಯ ಮಾತಿಗೆ ಕಿವಿಗೊಡಿದೆ, ತಾನೂ ಮಲಗಿ ನಿದ್ರಿಸಿತು.
ಸ್ವಲ್ಪ ಹೊತ್ತಿನಮೇಲೆ ಭೋಜಪುತ್ರನೆಚ್ಚೆತನು, ಅವನ ಆಶ್ರಯವಾದ ಕರಡಿಯು ಗಾಢನಿದ್ರೆಯಲ್ಲಿತ್ತು. ದುಷ್ಟಮೃಗವು ಹೊಂಚು ಕಾಯುತ್ತಾ ಇನ್ನೂ ಮರದಡಿಯಲ್ಲಿಯೇ ನಿಂತಿತ್ತು. ರಾಜಪುತ್ರನು ನಿದ್ರೆಯಿಂದೆಚ್ಚರಗೊಂಡುದನ್ನು ತಿಳಿದು ಹುಲಿಯು ಈ ರೀತಿ ಹೇಳಲಾರಂಭಿಸಿತು "ಎಲೈ ತರುಣನೆ! ನೀನು ರಾಜಕುಮಾರನಂತೆ ಕಾಣುತ್ತಿರುವೆ ನೀನು ಶೂರನು, ಔದಾರ್ಯವು ರಾಜರಿಗೆ ಸಹಜವಾದಗುಣ. ನಾನು ಎಷ್ಟೊದಿನಗಳಿಂದ ಆಹಾರವಿಲ್ಲದೆ ಹಸಿದಿರುವೆನು, ನಿದ್ರಿಸುತ್ತಿರುವ ಆ ಕರಡಿಯನ್ನು ಕಳಕ್ಕೆ ತಳ್ಳುವೆಯಾದರೆ ನೀನು ನನಗೆ ಅನ್ನದಾನಮಾಡಿದಂತಾಗುವುದು? ನೀವು ಹಾಗೆ ಮಾಡದಿದ್ದರೆ, ನಾನು ಹಸಿವಿನಿಂದ ಸಾಯುವನಲ್ಲದೇ ನೀನೂ ವಂಚಕವಾದಾಕರಡಿಯಿಂದ ಹತನಾಗುವೆ? ಆಕ್ಷುದ್ರಜಂತುವನ್ನು ನಂಬಬಹುದೆ? ಕರಡಿಯು ನಂಬಿಸಿ ಮೋಸಮಾಡುವ ದ್ರೋಹಿ. ಅದನ್ನು ಕೆಳಕ್ಕೆ ನುಕಿದೆಯಾದರೆ ನಾನು ಅದನ್ನೆತ್ತಿಕೊಂಡು ಹೋಗುವೆನು. ನೀನು ಕ್ಷೇಮವಾಗಿರಬಹುದು" ಎಂದು ಬಹುವಿಧವಾಗಿ ಹೇಳಿತು. ಆ ಬಾಲಕನು ತನ್ನ ಪೂರ್ವಕರ್ಮದಿಂದ ಪ್ರೇರಿತನಾಗಿ, ಹುಲಿ ಮಾತಿಗೊಡಂಬಟ್ಟು, ತನಗೆ ಪ್ರಾಣದಾನಮಾಡಿದ ಉದಾರಿಯನ್ನು ಶತ್ರುವಿನ ಕೈಗೆ ಬಿಟ್ಟುಕೊಡುವವನಾಗಿದ್ದನು. ಹಾ! ಕೃತಜ್ಞನೆ!! ನೀಚನೆ!!! ಉಪಕಾರ ಸ್ಮರಣೆಯಿಲ್ಲದಿರುವುದು ಮನುಷ್ಯ ಜಾತಿಗೆ ಸಾಮಾನ್ಯವಾಗಿರುವುದು. ಸೃಷ್ಟಿಯಲ್ಲಿನ ಎಲ್ಲಾ ಪ್ರಾಣಿಗಳೂ, ಸಸ್ಯಗಳೂ ಕೂಡ ಮನುಷ್ಯನಿಗೆ ಉಪಕಾರಮಾಡುತ್ತಿರುವುವು. ಅವನು ಅದಕ್ಕೆ ಪ್ರತಿಯಾಗಿ ಎಲ್ಲರಿಗೂ ಅಸಕಾರವನ್ನೆ ಎಸಗುವನು. ಈ ದುಷ್ಟಗುಣವು ಭೋಜಪುತ್ರನಾದ ನಿನ್ನಲ್ಲಿಯೂ ಇರಬಹುದೆ?
ದೈವಾಧೀನದಿಂದ ಕರಡಿಯು ಎಚ್ಚೆತ್ತುಕೊಂಡಿತು. ಎಚ್ಚೆತು, ಆ ಮಿತ್ರದ್ರೋಹಿಯ ಮೇಲೆ ಆಗ್ರಹಗೊಂಡು, ಅವನ ನಾಲಿಗೆಯನ್ನಿಚೆಗೆಳೆದು ಅದರಮೇಲೆ ಸಸೇಮಿರಾ, ಎಂಬಕ್ಷರಗಳನ್ನು ಬರೆದು, ತನ್ನಿಚ್ಚೆಯಿದ್ದಂತೆ ಹೋಯಿತು. ಹುಲಿಯೂ ಹೊರಟುಹೋಯಿತು. ರಾತ್ರಿಯೂ ಕಳೆಯಿತು. ಅರುಣೋದಯವಾದೊಡಯೆ, ರಾಜಭಟರು ರಾಜಕುಮಾರನನ್ನು ಹುಡುಕಹೊರಟರು. ಮಧ್ಯಾಹ್ನದ ಹೊತ್ತಿಗೆ ಅವರು ಭೋಜಪುತ್ರನಿದ್ದೆಡೆಗೆ ಬಂದರು. ಅವನು ಏನೂ ಮಾತನಾಡಲಾರದವನಾಗಿದ್ದ ನು, ಅವರೇನು ಕೇಳಿದರೂ "ಸಸೇಮಿರಾ " ಎಂದೇ ಪ್ರತ್ಯುತ್ತರ ಕೊಡುವನು, ಅವರು ಅವನ ವಿಷಯವನ್ನು ತಿಳಿದುಕೊಳ್ಳ ಬೇಕೆಂದು ಪರಿಪರಿಯಾಗಿ ಪ್ರಯತ್ನ ಪಟ್ಟರು.ಏನೂ ಸಾರ್ಥಕವಾಗಲಿಲ್ಲ, ಅವರು ಮಹತ್ವವ್ಯಸನದಿಂದಾಗಿ ಕೂಡಿದವರಾಗಿ ಆತನ ನ್ನು ಕರೆದುಕೊಂಡು ಭೋಜನ ಬಳಿಗೆ ಹೋದರು. ಭೋಜನ ಶೋಕಕ್ಕೆ ಪಾರವೇ ಇಲ್ಲ ಪ್ರಿಯಪುತ್ರನ ಇದ್ದಕ್ಕಿದ್ದಂತೆ ಮೂಕನಾಗಲು ಕಾರಣವೇನು? ಅವನ "ಸಸೇಮಿರಾ" ಎಂಬ ವಚನಕ್ಕೆ ಅರ್ಥವೇನು? ಅವನ ನಾಲಿಗೆಯಲ್ಲಿ ಅದನ್ನು ಕೆತ್ತಿದವರಾರು: ದೇವತೆಯೆ? ಮನುಷ್ಯನೇ? ಇತರ ಜಂತುಗಳೆ? ಅವರಿಗೆ ತಕ್ಕ ಶಿಕ್ಷೆಯನ್ನು ಹೇಗೆ ಮಾಡಬಹುದು? ಅವನನ್ನು ಹೇಗೆ ಮೊದಲಿನಂತೆ ವಾಚಾಳುವನ್ನಾಗಿ ಮಾಡಬಹುದು? ಮಹಾರಾಜನಿಗೆ ಏನೂ ತೊರಗೆ ಹೋಯಿತು, ಆತನ ಪ್ರಭು ಶಕ್ತಿಯು ಈ ವಿಷಯದಲ್ಲಿ ನಿಪ್ಪ್ರ ಯೋಜನ. ಆತನು ಚಿಂತಾಗ್ನಿಯಿಂದ ಬೆಂದು, ಘೋರವಾಗಿ ಪ್ರಲಾಪಿಸುತ್ತಿರಲು, ಆತನ ಮಂತ್ರಿಯು ಆತನನ್ನು ಬಹು ವಿಧವಾಗಿ ಸಮಾಧಾನಗೊಳಿಸಿ, ಭೋಜಪುತ್ರನಿಗೆ ವಾಕ್ಪಟುತ್ಯವನ್ನುಂಟುಮಾಡುವವರಿಗೆ ಅಪರಿ ಮಿತವಾದ ಬಹುಮಾನವನ್ನೀಯುವದಾಗಿ ಡಂಗುರವನ್ನು ಹೊಯಿಸಿದನು, ದೇಶದೇಶದಿಂದಲೂ ವೈದ್ಯರು ಮಂತ್ರ ತಂತ್ರಯಂತ್ರ ಚಿಕಿತ್ಸೆಗಳಲ್ಲಿ ನಿಪುಣರಾದವರ ಧಾರಾನಗರಕ್ಕೆ ಬಂದು ರಾಜಪು ಇನನ್ನ ನೋಡಿ ಆತನಿಗೆ ಬಂದವ್ಯಾಧಿಯನ್ನು ಗುಣಪಡಿಸಲಾರದೆ ಹಿಂದಿರುಗಿದರು ಭೋಜನ ದುಃಖವು ವಿಪರಿತವಾಯಿತು. ಕಡೆಗೆ ಮಂತ್ರಿಯು ಕಾಳಿದಾಸನೊಬ್ಬನೇ "ಸಸೇಮಿರಾ" ಮಂತ್ರದರ್ಧವನ್ನು ಬಲ್ಲನಿಂದು ತಿಳಿದು, ರಾಜನಬಳಿಗೆ ಹೋಗಿ "ಮಹಾಸ್ವಾಮಿ! ಮಲೆಯಾಳ ದೇಶದಿಂದ ಒಬ್ಬಾನೊಬ್ಬ ಮಂತ್ರಿಗಿತ್ತಿಯು ಬಂದಿರುವಳು, ಆಕೆಯು ಪುರುಷರ ಮುಖವನ್ನು ನೋಡುವುದಿಲ್ಲವಂತೆ. ಆಕೆಯು ಬಲು ಸಮರ್ಥವಂತಳು. ಆಕೆಯಿಂದ ತಮ್ಮ ಪುತ್ರನಿಗೆ ಉಂಟಾಗಿರುವ ಅನಿಷ್ಟ್ಯವು ನಿವಾರಣೆಯಾಗಬಲ್ಲುದೆಂದು ನನ್ನ ನಂಬಿಕೆ. ಅಪ್ಪಣೆಯಂತೆ ನಡೆಯುವೆನು" ಎಂದು ಹೇಳಿದನು. ಭೋಜನು ಆಗಬಹುದೆಂದನು. ಕೂಡಲೆ ಅರಮನೆಯ ಒಂದು ಭಾಗದಲ್ಲಿ ಒಂದು ತೆರೆಯು ಕಟ್ಟಲ್ಪಟ್ಟಿತು. ಕಾಳಿದಾಸನು ಗೂಢವಾಗಿ ಕರೆತರಲ್ಪಟ್ಟು ಆ ತೆರೆಯ ಹಿಂದುಗಡೆಯಲ್ಲಿ ಕೂಡಿಸಲ್ಪಟ್ಟನು. ಭೋಜನೂ, ಆತನ ಪುತ್ರನೂ, ಮಂತ್ರಿಯೂ, ಸಾಮಾಜಿಕರೂ ತೆರೆಯ ಮುಂದುಗಡೆ ಕೂತರು.
ಎಲ್ಲರೂ ಕುತೂಹಲ ಯುಕ್ತರಾಗಿದ್ದರು. "ಸಸೇಮಿರಾ" ಮಂತ್ರದ ರಹಸ್ಯರ್ಧವು ಹೇಗೆ ಬಯಲಿಗೆ ಬೀಳುವುದೊ ನೋಡಬೇಕೆಂದು ಸಭಿಕರೆಲ್ಲರೂ ಎವೆಯಿಕ್ಕದೆ ತೆರೆಯಕಡೆಯೇ ನೋಡುತ್ತಿದ್ದರು. ಒಳಗಿನ ಅಪರಿಚಿತವ್ಯಕ್ತಿಯು ಮಾತನಾಡಲಾರಂಭಿಸಿತು. "ಎಲೈ, ರಾಜಕುಮಾರನೆ! ನಿನಗೆ ಈ ಪೀಡೆಯು ಹೇಗೆ ಸಂಭವಿಸಿತು?" ಎಂಬ ಆಕೆಯ ಪ್ರಶ್ನೆಗೆ ಪ್ರತಿಯಾಗಿ, ಭೋಜಪುತ್ರನು ಯಥಾಪ್ರಕಾರ "ಸಸೇಮಿರಾ,, ಎಂದೇ ಉತ್ತರ ಕೊಟ್ಟನು. ಗುಪ್ತಳಾದ ಮಾಂತ್ರಿಕಳು ಕ್ಷಣಮಾತ್ರ ಸುಮ್ಮನಿದ್ದು, “ಸಸೇಮಿರಾ,, ಮಂತ್ರದ ಪ್ರಥಮಾಕ್ಷರವಾದ 'ಸ,ಕಾರದಿಂದ ಪರಂಭವಾಗುವ
ಸಧ್ಬಾವಂ ಪ್ರತಿವನ್ನಾನಾಂ ವಂಚನೇ ಕಿಂ ವಿದಗ್ನತಾ
ಅಂಗಮಾರುಹ್ಯ ಸುಸಾನಾಂ ಹನನೇ ಕಿನ್ನು ಬಪೌರುಷಂ
[ಸ್ನೇಹಭಾವದಿಂದಿರುವವರಿಗೆ ವಂಚನೆಮಾಡುವದರಲ್ಲಿ ಬುದ್ಧಿ ವಂತಿಕೆಯೇನು? ತೊಡೆಯ ಮೇಲೆ ಮಲಗಿ ನಿದ್ರಿಸುತ್ತಿರುವವರನ್ನು ಕೊಲ್ಲುವುದರಲ್ಲಿ ಪೌರುಷವೇನು?] ಎಂಬ ಶ್ಲೋಕವನ್ನು ಹೇಳಿದಳು. ಭೋಜಪುತ್ರನಿಗೆ ಸ್ವಲ್ಪ ಮಟ್ಟಿಗೆ ಜ್ಞಾನೋದಯವಾಯಿತು. ಅವನು ತನ್ನ ದುಷ್ಟಕೃತ್ಯಕ್ಕಾಗಿ ಆಗಿ ಪಶ್ಚಾತ್ತಾಪ ಪಡಲಾರಂಭಿಸಿದನು. ಈಗ"ಸ,, ಕಾರವನ್ನು ಬಿಟ್ಟ "ಸೇಮಿರಾ,, ಎಂದು ಮಾತ್ರ ಕೂಗುತ್ತಿದ್ದನು. ತೆರೆಯೊಳಗಿನ ಅಪರಿಚಿತವಾಣಿಯು,ಸೇ. ಎಂಬಕ್ಷರವನ್ನು ಮೊದಲುಮಾಡಿ,
ಸೇತುಂ ದೃಷ್ಟ ಸಮುದ್ರಸ್ಯ ಗಂಗಾಸಾಗರಸಂಗಮಂ ।
ಬ್ರಹ್ಮಹರಾಸ್ಪಿ ಮುಖ್ಯೆತವಿ ಶದೋಹೋನಮಚ್ಯತೇ ॥
[ರಾಮಸೇತುವಿಗೂ ಗಂಗಾನಮುದ್ರಗಳ ಸಂಗಮಸ್ಥಾನಕ್ಕೂ ಯಾತ್ರೆಹಗುವುದರಿಂದ ಬ್ರಹ್ಮ ಹತ್ಯಯ ದೋಷವನ್ನು ಕಳೆ ದುಕ್ಕೊಳ್ಳಬಹುದು. ಮಿತ್ರದ್ರೋಹಿಯ ಪಾಪವು ಮಾತ್ರ ಏನು ಮಾಡಿದರೂ ಹೋಗುವುದಿಲ್ಲ. ] ಎಂದು ನುಡಿದಳು.
ಈಗ "ಮಿರಾ, ಎಂಬುದುಮಾತ್ರವೇ ಭೋಜಪುತ್ರನ ನಾಲಿಗೆಯಲ್ಲಿ ನೆಲಸಿತ್ತು. ಆದುದರಿಂದ,ಮಿ'ಎಂಬಕ್ಷರವು ಆದಿಯಲ್ಲುಳ್ಳ
ಮಿತ್ರ ದ್ರೋಹೀ ಕೃತಘ್ನಶ್ಚ ಯಸ್ತು ವಿಶ್ವಾಸಘಾತುಕಃ ।
ತ್ರಯಸ್ತೇ ನರ ಕಂ ಯಾಂತಿ ಯಾವಚ್ಚಂದ್ರ ದಿವಾಕರೌ॥
[ಸ್ನೇಹಿತನಿಗೆ ವಂಚನೆ ಮಾಡಿದವನು, ಉಪಕಾರಮರೆತವನು, ನಂಬಿದವರಿಗೆ ಮೋಸಮಾಡಿದವನು. ಈ ಮೂರುಮಂದಿಯೂ ಸೂರ್ಯ ಚಂದ್ರರಿರುವವರೆಗೂ ನರಕದಲ್ಲಿ ಬಿದ್ದಿರುವರು. ]
ಎಂಬ ಶೋಕವು ನುಡಿಯಲ್ಪಟ್ಟಿತು, ಈಗ "ರಾ,,ಕಾರವು ಮಾತ್ರವೇ ರಾಜಪ್ರತ್ರನನ್ನು ಬಾಧಿಸತಿತ್ತು . ಸಭಿಕರೆಲ್ಲರೂ ಇದನ್ನು ನೋಡಿ ವಿಸ್ಮತರಾಗಿ ಮೂಗಿನಮೇಲೆ ಬೆರಳಿಟ್ಟುಕ್ಕೊಂಡು, ಚಿತ್ರದಲ್ಲಿನ ಪ್ರತಿಮೆಗಳಂತೆ ಸ್ತಬ್ದರಾಗಿ, ಬುದ್ದಿ ವ್ಯಾಪಾರವೇ ಇಲ್ಲದವರಾಗಿದರು. ತೆರೆಯೊಳಗಿನಿಂದ ಉಳಿದಿದ್ದ "ರಾ" ಕಾರವೂ ಉಚ್ಚಾರಣೆಯಾಗಿ, ಈ ರೀತಿಕೇಳಬಂದಿತು. ರಾರ್ಜ ಭೋಜವ ಪುತ್ರಸ್ಯಯದಿ ಕಲ್ಯಾಣಮಿಚ್ಛಸಿ।
ದಾನಂ ದೇಹಿದ್ಯಜಾ ಭ್ಯೋವರ್ಣಾನಾಂ ಬ್ರಾಹ್ಮಣೋಗುರಃ
[ಎಲೈ ಅರಸೆ! ನಿನ್ನ ಮಗನಿಗೆ ಒಳ್ಳೆಯದಾಗಬೇಕೆಂದು ನಿನಗೆ ಅಪೇಕ್ಷೆಯಿಗ್ಗರೆ, ಬಾಹ್ಮಣರಿಗೆ ದಾನಗಳನ್ನ ಕೊಡು, ಎಲ್ಲಾ ವರ್ಣಗಳಿಗೂ ಬಾಣನೇ ಗುರುವು.]
ಕೂಡಲೆ ಭೋಜಪುತ್ರ ಬಾಯಿಬಂದಿತು. ಅವನು ತನ್ನ ತಂದೆಯೊಡನೆಯ ಮಂತ್ರಿಸಾಮಾಜಿಕೊಡನೆಯೂ ಮಾತನಾಡತೊಡಗಿದನು. ಎಲ್ಲರೂ ಅವನ ವೃತಾಂತವನ್ನು ಅವನ ಮುಖದಿಂದಲೇ ಆಮೂಲಾಗ್ರವಾಗಿ ಕೇಳಿದರು, ಆಶ್ಚರ್ಯಯುಕ್ತನಾದ ದೊರೆಯು ಮಂತ್ರಿಯನ್ನು ಕುರಿತು, ಕಾಡಿನಲ್ಲಿ ನಡೆದ ಸಂಗತಿಯು ಈ ಮಾಂತ್ರಿಕಳಿಗೆ ಹೇಗೆ ತಿಳಿಯಿತು? " ಎಂದು ಕೇಳಿದನೂ . ಒಳಗಿನ ವ್ಯಕ್ತಿಯು ನಿನ್ನ ರಾಣಿ ಕಿಬ್ಬೊಟ್ಟಿಯ ಮೇಲಿದ್ದ ಮಚ್ಚೆಯ ತಿಳಿದಂತೆಯೇ, ಎಂದುರಿತು.
ಓಹೋ! ಭೋಜನ ಆನಂದಕ್ಕೆ ಮೇಯಿಲ್ಲ' ತನ್ನ ಆಪ್ತಮಿತ್ರನಾದ, ಪ್ರಾಣಸವನಾದ ಕಾಳಿದಾಸನಿಗಲ್ಲದೆ ಭೂತಭವಿಷ್ಯದ್ಯರ್ತಮಾನಗಳ ಜ್ಞಾನವು ಮತ್ತಾರಿಗುಂಟು? ಪುನಃ ಭೋಜ ಕಾಳಿದಾರು ಸೇರಿದರು' ಭೋಜನು ತನ್ನ ಅವಿವೆಕಕ್ಕಾಗಿ ಬಹುವಾಗಿ ಪಶ್ಚಾತ್ತಾಪಪಟ್ಟನು. ಆ ಮೇಲೆ ಇಬ್ಬರೂ ಬಹುಕಾಲ ಸುಖದಿಂದ ಬಾಳಿದರು.
ಸ್ವಾದ್ರಪರರಾಗಿ ನರಸ್ತುತಿ ಮಾಡುವವರ ಕವಿತೆಯ, ನಿಜ ಸ್ಥಿತಿಯನ್ನು ತೋರಿಸುವುದಲ್ಲ, ಅದು ಬರೇ ಉತ್ಪ್ರೇಕ್ಷೆ, — ಅಸಂಬದ್ದ ಪ್ರಲಾಪ, ಆದರೆ ನಿರಾಶರಾದ, ನಿರ್ಮತ್ಸರರಾದ, ಲೋಕಹಿತಾಕಾಂಕ್ಷಿಗಳಾದ ವರಕವಿಗಳು ಹೇಳುವುದೆಲ್ಲವೂ ಸತ್ಯ ವಲ್ಲದೆ ಬೇರೆಯಲ್ಮುಂಲ .ಅವರಿಗೆ ಮುಂದೆ ನಡೆಯುವುದನ್ನು ಕರ ತಲಾಮಲಕದಂತೆ ತಿಳಿಯುವ ದಿವ್ಯದೃಷ್ಟಿಯುಂಟು ಅಂತಹ ಕವಿಗಳು ಪ್ರಾಚೀನ ಭರತವರ್ಷದಲ್ಲಿ ಬಹುಮಂದಿಯಿದ್ದರು, ಅವರಲ್ಲಿ ಕಾಳಿದಾಸನು ಅತಿ ಮುಖ್ಯನಾದೊಬ್ಬನು. ಕಾಳಿದಾಸನು ಭೋಜನಿದಿಗೆ ಕೈಕಟ್ಟಿಕೊಂಡು ನಿಂದಿರುತ್ತಿದ್ದನು. ಆದರೆ ಈಗ ಭೋಜನ ಹೆಸರು ಕಾಳಿದಾಸನಿಂದಲೇ ಪ್ರಸಿದ್ಧವಾಗಿದೆ. ಕಾಳಿದಾಸನ ಹೆಸರು ಆ ಚಂದ್ರಾರ್ಕವಾಗಿ ಜನರ ಜ್ಞಾಪಕದಲ್ಲಿರುವುದು, ಭೋಜನ ಕೋಟೆಕೊತ್ತಲುಗಳ, ಸಿಂಹಾಸನ ಕಿರೀಟಗಳೂ ಎಲ್ಲಿಹೋದವೋ ಯಾರಿಗೂ ಗೊತ್ತಿಲ್ಲ, ಆದರೂ ಅವನ ಹೆಸರು ಮಾತ್ರ ಅವನ ಸ್ತುತಿಪಾಠಕನಾದ ಕಾಳಿದಾಸನ ಹೆಸರನ್ನು ಎಡೆಬಿಡದೆ ಹಿಂಬಾಲಿಸುತ್ತಿರುವುದು
ಸಂಪೂರ್ಣ
Printed by K, S. Krishna Iyer B. A., at the Irish Press, Bangalore City.