ಇರುಳ ನುಂಗಿತ್ತು, ಇರುಳಿಲ್ಲ;

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇರುಳ ನುಂಗಿತ್ತು
ಇರುಳಿಲ್ಲ; ಹಗಲ ನುಂಗಿತ್ತು ಹಗಲಿಲ್ಲ. ಅರಿವ ನುಂಗಿತ್ತು ಅರಿವಿಲ್ಲ
ಮರಹ ನುಂಗಿತ್ತು ಮರಹಿಲ್ಲ. ಕಾಯವ ನುಂಗಿತ್ತು ಕಾಯವಿಲ್ಲ
ಜೀವವ ನುಂಗಿತ್ತು ಜೀವವಿಲ್ಲ. ಇವೆಲ್ಲವ ನುಂಗಿತ್ತು_ಇದೇನಯ್ಯಾ
ಸಾವ ನುಂಗದು ಗುಹೇಶ್ವರಾ ?