ವಿಷಯಕ್ಕೆ ಹೋಗು

ಇಹವ ತೋರಿದನು ಶ್ರೀಗುರು;

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಇಹವ
ತೋರಿದನು
ಶ್ರೀಗುರು;
ಪರವ
ತೋರಿದನು
ಶ್ರೀಗುರು.
ಎನ್ನ
ತೋರಿದನು
ಶ್ರೀಗುರು;
ತನ್ನ
ತೋರಿದನು
ಶ್ರೀಗುರು.
ಗುರು
ತೋರಿದಡೆ
ಕಂಡೆನು
ಸಕಲ
ನಿಷ್ಕಲವೆಲ್ಲವ.
ಗುರು
ತೋರಿದಡೆ
ಕಂಡೆನು
ಗುರುಲಿಂಗಜಂಗಮ
ಒಂದೆ
ಎಂದು.
ತೋರಿ
ಕರಸ್ಥಲದಲ್ಲಿದ್ದನು
ಗುಹೇಶ್ವರಲಿಂಗನು.