ಒಳಗಣ ಗಂಡನಯ್ಯಾ, ಹೊರಗಣ

ವಿಕಿಸೋರ್ಸ್ದಿಂದ


Pages   (key to Page Status)   

ಒಳಗಣ ಗಂಡನಯ್ಯಾ
ಹೊರಗಣ ಮಿಂಡನಯ್ಯಾ. ಎರಡನೂ ನಡೆಸಲು ಬಾರದಯ್ಯಾ. ಲೌಕಿಕ ಪಾರಮಾರ್ಥವೆಂಬೆರಡನೂ ನಡೆಸಲು ಬಾರದಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ
ಬಿಲ್ವ ಬೆಳವಲಕಾಯಿ ಒಂದಾಗಿ ಹಿಡಿಯಲು ಬಾರದಯ್ಯಾ.