ಒಳಗಿಟ್ಟುಕೊಂಡು ನಡೆದರೂ ನಡೆಯಲಿ;

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಒಳಗಿಟ್ಟುಕೊಂಡು ನಡೆದರೂ ನಡೆಯಲಿ; ಅದಕೇನು? ಶಿವಶರಣರಿಗೆ ತಥ್ಯ ಮಿಥ್ಯ ಸಲುವುದೆ? ಸಲ್ಲದೆಂದುದಾಗಿ ಆದಿ-ವ್ಯಾಧಿ
ಸುಖ-ದುಃಖ
ಭಯ-ಮೋಹ
ಪುಣ್ಯ-ಪಾಪ
ಇಹ-ಪರವೆಂಬ ಉಪಾಧಿಯ ಹೊದ್ದದೆ ಆಚಾರ ಅನಾಚಾರವೆಂಬುದರಿಯದಿರ್ದಡೆ ಜಲದೊಳಗಣ ಸೂರ್ಯನಂತೆ ವಿಶ್ವಪ್ರಪಂಚ ಹೊದ್ದಿಯು ಹೊದ್ದದೆ ಬೆರಸಿಯು ಬೆರಸದೆ ಸರ್ವಸಾಕ್ಷಿಕನಾಗಿರಬಲ್ಲರೆ ಆತಂಗೆ ಸಲುವುದೀ ಮತ ಆಚಾರದೆಡೆಯಲ್ಲಿ ಅನುಸರಣೆಯುಂಟೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.