ಓಂ - ಓಂ ಬ್ರಹ್ಮಾನಂದ ಓಂಕಾರ

ವಿಕಿಸೋರ್ಸ್ ಇಂದ
Jump to navigation Jump to search

ಓಂ ಬ್ರಹ್ಮಾನಂದ ಓಂಕಾರ ಆತ್ಮನಂದ ಸಾಕಾರ ಓಂ ವೇದಾಂತರ್ಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ

ಹೇ ದಿನಕರ ಸುಭಕರ ಧರೆಗೆ ಬಾ ಈ ಧರಣಿಯ ದೇಗುಲ ಬೆಳಗು ಬಾ ನೀಗಿಸು ಬಾಳಿನ ಅಹಂ ಮಾನಸ ಮಂದಿರ ತುಂಬು ಓಂಕಾರನಾದವೊ

ನಗುವ ಮನಸೆ ಸಾಕು ನಮಗೆ ಹಗಲುಗನಸೇ ಬೇಡ ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ ತಂದೆ ತಾಯೆ ದೈವ ಗುರುವೆ ನಮ್ಮ ಜೀವ ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸೂ

ಸತ್ಯ ಹೇಳೊ ಕನ್ನಡಿಯಂತೆ ಅಂತರಂಗ ಮಾಡು ದಯೆ ತೋರೊ ಧರಣಿಯಂತ ಮನೊಧರ್ಮ ನೀಡು ನೊಂದ ಎಲ್ಲ ಜೀವ ನನ್ನ ಎಂಬ ಭಾವ ಬಾಳಿನಲ್ಲಿ ತುಂಬೊ ವಿದ್ಯೆ ವಿನಯ ಕರುಣಿಸೊ