ಕಂಠಿ - ಜಿನು ಜಿನುಗೋ

ವಿಕಿಸೋರ್ಸ್ ಇಂದ
Jump to navigation Jump to search

ಜಿನು ಜಿನುಗೋ[ಸಂಪಾದಿಸಿ]


ಜಿನು ಜಿನುಗೊ ಜೇನ ಹನಿ, ಮಿನು ಮಿನುಗೊ ತುಟಿಗೆ ಇಬ್ಬನಿ (೨)
ಈ ನಯನದಲಿ ಸಂಗಾತಿ ಸಂಪ್ರೀತಿ ನಲಿನಲಿನಲಿಯುತಿದೆ |ಜಿನು |


ಒಮ್ಮೊಮ್ಮೆ ನಾನೆ ಕೇಳೋದು ನನ್ನೆ ನೀ ಸೂರ್ಯನ ಬಂಧುವೆ
ನಿನ್ನನ್ನು ಕಂಡೆ ನಾನಂದುಕೊಂಡೆ ನೀ ಚಂದ್ರನ ತಂಗಿಯೆ
ಆ ಮಿಂಚು ಕೊಂಚ ನಿಲ್ಲದು ಬರಿ ಮಿಂಚಿ ಹೋಗುತಿಹುದು
ನಿನ ಕಾಂತಿ ಕಂಡು ನಸು ನಾಚಿಕೊಂದು ಬರಿ ಮುಗಿಲಲೆ ಇಣುಕಿಹುದು | ಜಿನು |


ನೀ ನಕ್ಕ ಮೋಡಿ ಆ ಚುಕ್ಕಿ ನೋಡಿ ಬಾನಿಂದಲೇ ಜಾರಿದೆ
ಆ ಬೆಳ್ಳಿ ಮೋಡ ಬೆಳ್ಳಕ್ಕಿ ಕೂಡ ನಿನ ನೋಡುತ ನಿಂತಿದೆ
ಆ ಚೈತ್ರ ಚಿತ್ರ ಬರೆದು ಆ ಚಿತ್ರ ಜೀವ ತಳೆದು
ಇದೆ ಭೂಮಿಯಲ್ಲಿ ಹಸಿರನ್ನು ಚೆಲ್ಲಿ ಈ ಹರುಷವ ಹರಡಿಸಿದೆ | ಜಿನು |