ಕಥಾವಳಿ
Department of Public Instruction, Mysore
ಕಥಾವಳಿ.
ಮೊದಲನೆಯ ಭಾಗ.
BY
B.SUBBA RAO, B.A.
Third edition 10,000 copies
_______________
BANGALORE CITY.
PRINTED AT THE B. B. D, POWER PRESS.
1918
PART 1. ನಂ. ಕಥೆಗಳು. ನಟ ಸಂಖ್ಯೆ, ೧ ೪. 4
- * * *
೧ → ೧೦ C C & ೧೪. ೧೧ ೧ X ೧೩ ೧ ೬. ಕಾಗಕ್ಕ ಗುಬ ಕೈ t ಬ ಕ ಕೈ # ಕ್ರಿಯy 22 ನವರಿ ಇಲಿಗಳ ಉಾಯ ವಂಕರ ದೇವಿಯ ನಾಗವಲ್ಲಿಯ ಕರ (೧ನೆಯ ಭಾಗ) ಅದೇ (೨ನೆಯ ಭಾಗ) ಅದೆ? ( zವಿಲy ( ನಿಗ) ಅಜಿ ( , - ಗ) ಅದೇ (೫ನೆಯ) *ಾಗ) ಕಾಗೆಯ ಗುಬ್ಬಿಯ ನಾಲಯ ಕರೆ ೧.೨. ಎರಡು ನಗಿಗಳು ಸುಳ್ಳು ಹುಡುಗ ೧೪ ಚಿಕ್ಕದೇವರಾಜ ಒಡೆಯರ ) ೧೫ ಬಕೆಣಕುರನ ಕರ ೧೬ ವಾ ವಿನಗಿಡ, ೧ : *ಯುಗಿಡ ೧೭ ಕೆಯ, ರತ್ನ ೧೮ ಇರುವೆಯ ಚಿಮ್ಮು೦:: ಹುಳುವೂ ೧೯ ಅ ಫಿವ ವಿ ಕದ. ೨೦ ಶಿವಾಜಿ ಮYಾರ ನಜ ೨೧ ರಾಗಿರಾಮಾಯಣ ಉತರನ ಕ ೨ , ವಿಜಯ 3ಗರ ೨೪ ನಾಗಲೋಕ (೧ವೆಯ ಭಾಗ) ೨೫ ಸೌಗಲೆ ಕ (.: ) ಸಾರ) ೨೬ ನಾಗಲೋ?ಕ (9ನೆಯ ಭಾಗ)
- : : : : : : : : : : : : : : : : : : : : : : : : :
- : : : : : : : : : : : : : : : : : : : : : : : : :
с с с ೧೬. " " ೨೩ ೨೪ ೨X ೨೮ ೩೦ 49 $.. ಪುಟ ಸಂಖ್ಯೆ, ೪೦ ೪೧ ೨೯ ون ೪L ೩೧ ೪೫ Ly ಬಗೆ. ೪೬ ೫0
- : : : : ೪ : : : : : : : :
೪ X೧ LX ೫೩ X1 ೫೪ ನಂ. ಕಥೆಗಳು. ೨೭ ಹಾವಾಡಿಗನ, ಹಾವೂ , ಇಲಿಯ ೨೮ ಕಣಜ ಮತ್ತು ಜೇನುಹುಳು ನಾಯಿಯು ಸ್ನೇಹ ೩೦ ಧ್ರುವರಾಯನ ಕಥೆ ಕಬ ತಂಗು ಮೃಗಗಳು ರಾಜನನ್ನು ಗೊತ್ತು ಮಾಡಿಕ ೩೩ ವರಲಕ್ಷ್ಮಿ' ಕಥೆ ಕಡುಬಿನ ಕಥೆ ಹುಡುಗನೂ ಗಿಣಿಯ ಕೆಲಸದ ಹೆಂಗಸರೂ ಕೇಳಿಯ ೩೭ ಶ್ರೀರಾಮನ& ಚಂದ್ರ ನೂ ೩೮ ಲವಕುಶರ ಕಾಳಗ ಪಿಂಡಾರಿಯವರ, ೪೦ ಏನಾಯಕನ ಕಥೆ ೪೧. ಮರಗಳು ರಾಜನನ್ನು ಗೊತ್ತು ಮಾಡಿಕೊ೦ಡುದೆ) ೪೨ ಬಲಿಕ್ರವರ್ತಿ ೪೩ ಚಿ° ಪೂ ಸುರ್ಲಾ ೪೪ ರಾಜನು ಬೇಡರ ಹುಳುವಿನಿಂದ ಬದುಕಿದುದು ೪೫ ಸಾವಿತ್ರಿಯ ಕರೆ (೧ನೆಯ ಭಾಗ) . ಅದೇ (೨ನೆಯ ಭಾಗ) ೪೬ ಕಂಠೀರವ ನರಸರಾಜ ಒಡೆಯರವರು ೪೮ ಬೇಸಿಗೆಕಾಲ ಮಳೆಗಾಲ ೪೯ ಪುಷ್ಪ ಮಂಜರಿಯ ಕಥೆ (೧ನೆಯ ಭಾಗ) .. ೫೦ ಅದೇ (Jಸೆಯ ಭಾಗ) ೫೧ ಅದೇ (೭ನೆಯ ಭಾಗ) ೫೨ ಅದೆ' (೪ ನೆಯ ಭಾಗ) ೫೬ LE ೫೮
- : : : : : : : : : : : : : : : : : : : : : : : : :
ರ್X ೬೧ ೬೪ ೬೫ ೬೬ &೬ ೪೬ ೬೮ ೭೦ ೭೧
- : : : : :
ಕಥಾವಳಿ.
ಪೀಠಿಕೆ.
ಬಾಲವಿದ್ಯಾಭ್ಯಾಸವು ಈಚೆಗೆ ಬಾಲಲೀಲೆಯಾಗಿ ಪರಿಣಮಿಸಿರುವುದು. ಇದಕ್ಕೆ ಪಾಶ್ಚಾತ್ಯರಲ್ಲಿ ಪ್ರಸಿದ್ಧರಾದ ಉಪಾಧ್ಯಾಯರ ನವೀನಪಾಠಕ್ರಮವೇ। ಕಾರಣವು. ಈ ಪಾಠಕ್ರಮವು ಮಕ್ಕಳ ಚಿತ್ತವೃತ್ತಿಯನ್ನು ಅನುಸರಿಸಿರು ವುದು. ಮಕ್ಕಳ ಚಿತ್ತವು ಆಟದಲ್ಲಿ ಅನುರಕ್ತ ವಾಗಿರುವುದೆಂಬುದನ್ನು ತಿಳಿದು ಜ್ಞಾನೇಂದ್ರಿಯವಿಕಾಸಕ್ಕೆ ಆಟಪಾಟದಲ್ಲಿಯೇ ಅನೇಕಸಾಧನೆಗಳನ್ನು ಕಲಿ ಸಿರುವರು. ಹೀಗೆ ಕಲ್ಪಿಸಿರುವ ಸಾಧನಗಳಲ್ಲಿ ಕಥೆ ಹೇಳುವುದೂ ಒಂದು.
ಕಥೆ ಹೇಳುವುದಕ್ಕೆ ಯಾರಿಗೆ ತಾನೆ ಬಾರದು?ಎಂದು ಹೇಳಬಹುದು.ಆದರೆ ಒಂದು ಸನ್ನಿವೇಶವನ್ನು ವರ್ಣಿಸಿ,ಅಲ್ಲಿ ನಡೆವ ವಿಚಾರವನ್ನು ವಿವರಿ ಸುತಿದ್ದರೆ, ಕಥೆಯನ್ನು ಕೇಳುವವರು ಆ ಸಂದರ್ಭದಲ್ಲಿದ್ದುಕೊಂಡು, ಅಲ್ಲಿ ಸಂಭವಿಸುವ ಸುಖದುಃಖಗಳಿಗೆ ಭಾಗಿಗಳಾಗಿ ' ಮುಂದೇನುಗತಿ? ಹೇಗೆ ಪರಿಣಮಿಸುವದು? ಸೌಖ್ಯವು ಎಂದಿಗೆ ಉಂಟಾದೀತು?'ಎಂಬ ರೀತಿಯಲ್ಲಿ ಕಾತರಪಡುವಂತೆ ಕಥೆಯನ್ನು ಹೇಳುವದು ಜನಸಾಮಾನ್ಯಕ್ಕೆ ಸುಲಭವಲ್ಲ. ಕಥೆಯನ್ನು ಮನೋಹರವಾಗಿ ಹೇಳುವುದೂ ಒಂದು ವಿದ್ಯೆಯೇ ಸರಿ. ಇದು ಎಲ್ಲರಲ್ಲಿಯೂ ಸಾಮಾನ್ಯವಾಗಿ ಇಲ್ಲದ ವಿದ್ಯೆಯಾದರೂ ಕಥೆಯನ್ನು ಹೇಳುವವರು ಹೇಳಬೇಕೆಂದಿರುವುದನ್ನು,ತಿಳಿವಂತೆ ಹೇಳುವುದಲ್ಲದೆ ಕೂಡಿದ ಮಟ್ಟಿಗೂ ಮನೋಹರವಾಗಿರುವಂತೆ ಹೇಳಲೂ ಯತ್ನಿಸಬೇಕು.
ಒಂದು ಕಥೆಯಲ್ಲಿ ಹೇಳಬೇಕಾದುದನ್ನೆಲ್ಲಾ ಪುಸ್ತಕದಲ್ಲಿ ಬರೆವುದು ಸಾಧ್ಯವಲ್ಲ;ಪುಸ್ತಕದಲ್ಲಿ ಬರೆವುದನ್ನೆಲ್ಲಾ ಹೇಳಬೇಕಾದ ಅವಶ್ಯವೂ ಇಲ್ಲ. ಆದುದರಿಂದ ಕಥೆಗೆ ಬೇಕಾದ ಸಾಮಗ್ರಿಗಳನ್ನು ಕೂಡಿದಮಟ್ಟಿಗೆ ಇಲ್ಲಿ ಒದಗಿಸಿದೆ.ಇವನ್ನು ತೆಗೆದುಕೊಂಡು ರುಚಿಯದ ಪಾಕವನ್ನು ಇಳಿಸುವ ಜಾಣ್ಮೆಯ ಉಪಾಧ್ಯಾಯರದಾಗಿರುವದು.ಈ ಪುಸ್ತಕವನ್ನು ಉಪಯೋಗಿಸುವರು ಇಲ್ಲಿರುವ ಕಥೆಗಳನ್ನು ಗಟ್ಟಿಮಾಡಿ ಬಾಲಕರ ಮುಂದೆ ಒಪ್ಪಿಸದೆ ಕಥಾವಿಷಯವನ್ನು ಮಾತ್ರ ತೆಗೆದುಕೊಂಡು, ಬಾಲಕರ ಯೋಗ್ಯತೆಯನ್ನು ಅರಿತು, ಅವರಿಗೆ ರುಚಿಸಬಹುದಾದ ಕಥೆಯನ್ನು,ಸಾಧಾರಣವಾಗಿ ಮಾತನಾಡುವ ರೀತಿಯಲ್ಲಿ ಹೇಳಬೇಕು,ಕಥೆ ಹೇಳೊಣದರಲ್ಲಿ ಕಥಾವಿಷಯವನ್ನು ತಿಳಿಸುವುದೇ ಮುಖ್ಯವಾದುದರಿಂದ ಭಾಷೆಗೆ ಅಷ್ಟು ಗಮನಕೊಡ vi
ಬೇಕಾದುದಿಲ್ಲ. ಕಥೆಯನ್ನು ಹೇಳುವದೇ ಆಗಲಿ ಕೇಳುವದೇ ಆಗಲಿ,ಅದೂ ಒಂದು 'ಪಾಠ' ವೆಂಬ ಬೇಸರವು ಯಾರಲ್ಲೂ ಉಂಟಾಗಬಾರದು.
ಕಥೆಯನ್ನುಹೇಳುವಾಗ ಉಪಾಧ್ಯಾಯರು ಮಕ್ಕಳ ಚಿತ್ತವೃತ್ತಿಯನ್ನು ಪರೀಕ್ಷಿಸುತ್ತಿರಬೇಕು. ಒಂದೇ ಮನಸ್ಸಿನಿಂದ ಮಕ್ಕಳು ಕೇಳುತ್ತಿದ್ದಾರೆಂಬುದನ್ನು ತಿಳಿಯಲು ಮಧ್ಯೇಮಧ್ಯೇ ಪ್ರಶ್ನೆಯನ್ನು ಹಾಕುತ್ತಿರಬೇಕು. ವಿಷಯವನ್ನು ಮಕ್ಕಳು ಚೆನ್ನಾಗಿ ಗ್ರಹಿಸಿದರೆಂದು ದೃಢಪಡಿಸಿಕೊಂಡಲ್ಲದೆ ಕಥೆಯನ್ನು ಮುಂದಕ್ಕೆ ಸಾಗಿಸಬಾರದು.ಮಕ್ಕಳಿಗೆ ತಿಳಿಯಲಿ, ತಿಳಿಯದಿರಲಿ, ಮುಗಿಸಿದರೆ ಆಯಿತೆಂದು ಭಾವಿಸಿ ಕಥೆಯನ್ನು ಮುಂದೆ ಮುಂದೆ ಸಾಗಿಸಿದ ಮಾತ್ರದಿಂದಲೇ ಪ್ರಯೋಜನವಿಲ್ಲ. ತಿಳಿಯದುದನ್ನು ಕೇಳಲು ಮಕ್ಕಳಿಗೆ ಅವಕಾಶಕೊಡಬೇಕು. ಅವರಿಗೆ ಅನುಭವವಿಲ್ಲದ ವಿಷಯಗಳನ್ನೂ (ಯುದ್ಧ ವಿಚಾರ, ಸೃಷ್ಟಿಯಚಮತ್ಕಾರ) ತಿಳಿಯದ ಶಬ್ದಗಳನ್ನೂ ವಿವರಿಸಿ ಮುಂದಕ್ಕೆ ಕಥೆಯನ್ನು ಸಾಗಿಸಬೇಕು. ಸಾಧ್ಯವಾದೆಡೆಯಲ್ಲೆಲ್ಲಾ ದೇವರ ಮಾಹಾತ್ಮ್ಯವನ್ನೂ, ಸೃಷ್ಟಿಯ ವೈಚಿತ್ಯ್ರ್ವನ್ನೂ,ಸಸ್ಯ ಮೃಗಾದಿಗಳ ಸ್ವಭಾವವನ್ನೂ ವ್ಯಕ್ತಗೊಳಿಸುತ್ತಿರಬೇಕು,ತಿರ್‍ಯಗ್ಜಂತುಗಳಲ್ಲಿ ದಯೆಯೂ,ದುಃಖೆಗಳಲ್ಲಿ ಅನುತಾಪವೂ,ಸದ್ವತ್ತಿಯಲ್ಲಿ ಅಭಿಲಾಷೆಯೂ,ನೃಪಜರಲ್ಲಿ ನಯವೂ,ಸಾಧುಜನರಲ್ಲಿ ಪ್ರೀತಿಯೂ,ಶೂರರಲ್ಲಿ ಸ್ನೇಹವೂ, ದೀನರಲ್ಲಿ ಕ್ಷಮೆಯ ಉಂಟಾಗುವ ಕಥಾಸಂದರ್ಭಗಳನ್ನು ಮಕ್ಕಳ ಲಕ್ಷ್ಯಕ್ಕೆ ಅವಶ್ಯವಾಗಿ ತರಬೇಕು. ಕಥೆಯನ್ನು ಹೇಳಿ ಪೂರೈಸಿದ ಅನಂತರ, ಅದರಿಂದ ತಿಳಿಯಬೇಕಾದ ಅ೦ಶಗಳನ್ನು ಮಕ್ಕಳಿಂದಲೇ ಹೇಳಿಸಬೇಕು. ಮೇಲಣ ತರಗತಿಗಳಲ್ಲಿ ಕಥೆಯ ಛಾಯೆಯನ್ನು ಪಾತ್ರ ಕೊಟ್ಟು ಕಥಾ ಸಂದರ್ಭವನ್ನೆಲ್ಲಾ ಪುಷ್ಟೀಕರಿಸಿ ವಿವರಿ ಸುವಂತೆ ಬಾಲಕರಿಗೆ ಹೇಳಬೇಕು.
ಕಥಾವಳಿಯ ಮೊದಲನೆಯ ಭಾಗದಲ್ಲಿ ಬಾಲಕರು ಸಾಮಾನ್ಯವಾಗಿ ನೋಡಿರುವ ಜೀವಜಂತು, ಸಸಿ,ಹಿಂದೂಜನರು ಆಚರಿಸುವ ಮುಖ್ಯವಾದ ಹಬ್ಬ ಹಾಡಿಯ, ಇವುಗಳ ವಿಚಾರವಾದ ಕಥೆಗಳೂ, ಕಲ್ಪಿತ ಕಥೆಗಳೂ, ನೀತಿ ಕಥೆಗಳೂ, ಇತಿಹಾಸಗಳೂ, ಜೀವಿತಚರಿತ್ರೆಗಳೂ ಕೆಲಕೆಲವ್ರು ಇರುವುವು. ಇವುಗಳನ್ನು ಇಲ್ಲಿ ಕೊಟ್ಟಿರುವ ಕ್ರಮದಲ್ಲಿಯೇ ಹೇಳಬೇಕಾದ ಆವಶ್ಯಕತೆ ಏನೂ ಇಲ್ಲ. ಒಂದೊಂದು ದಿನ ಒಂದೊಂದರ ಮೇರೆ, ಬಾಲಕರ ಯೋಗ್ಯತೆಯನ್ನರಿತು, ಪುಸ್ತಕಭಾಷೆಯನ್ನು ಮರೆತು, ಸಾಧಾರಣವಾಗಿ vii ಕ. ೧೫ ಮಾತನಾಡುವ ಭಾಷೆಯಲ್ಲಿಯೇ ಕಥೆಯನ್ನು ಹೇಳಬೇಕು, ಇದರಿಂದ ಮಕ್ಕಳಲ್ಲಿ ಕಲ್ಪನಾಶಕ್ತಿಯು ವೃದ್ಧಿಗೊಳ್ಳು ವದು; ಅನುಕ೦ಪಾಧೈರೊ ತ್ವಾ ಹಾದಿಗುಣಗಳು ವಿಕಾಸಗೊಳ್ಳುವವ, ಮುಖ್ಯ ಜ್ಞಾನೇಂದ್ರಿಯಾಭಿ ವೃದ್ಧಿಗೆ ಕಥೆಗಳು ವಿಶೇಷ ಸಹಕಾರಿಯಾಗಿ ಪರಿಣಮಿಸುವವ. - ಈ ಕಥಾವಳಿಯನ್ನು ಬರೆಯಲು ಸಹಾಯಮಾಡಿದ ನನ್ನ ಮಿತ್ರ ರಿಗೆ ನಾನು ತುಂಬ ಕೃತಜ್ಞನಾಗಿರುವೆನು. ಮೈಸೂರ ೨; BAI>{1 S BBA RAO. 15th March 1904 ) ವಿಷಯಸೂಚಿ ಕೆ. ಪ್ರಾಣಿ ವಿಷಯವಾದ ಕಥೆಗಳು Stories of Animal-life. ಪುಟ ಕೋತಿಯ ಬೆಕ್ಕಿನ ಮರಿಯ ಇಲಿಗಳ ಉಪಾಯ, ೧೦ ಕಾಗೆಯೂ ಗುಬ್ಬಿ ಯೂ ೧೪ ೧೧. ನಾರು,ಯಕಜಿ ಕೋಳಿಯೋ ರತ್ತ ವೂ ಇರುವೆಯೂ - ಚಿಮ್ಮು ೦ಡಿ ಹುಳು ಹಾವಾಡಿಗನೂ -ಹಾವೂ- ಇಲಿಯೂ ಕಣಜ ಮತ್ತು ಜೇನು ಹುಳ ೨೯ ನಾಯಿಯ ಸ್ನೇಹ ೩೨ | ವಗಗಳು ರಾಜನನ್ನು ಗೊತ್ತು ಮಾಡಿಕ೦ದ ಬಗೆ ೩೫. ಹುಡುಗನೂ ಗಿಣಿಯ ಕೆಲಸದ ಹೆಂಗಸರೂ ಕೊಳಿಯೂ ೪೪ ರಾಜನು ಜೇಡರ ಹುಳುವಿನಿಂದ ಬದುಕಿದುದು ಸಸ್ಯ ವಿಷಯವಾದ ಕಥೆಗಳು. Stories of Plant-life. ೧೬ ಮಾವಿನಗಿಡ- ಗೊಬ್ಬ ಳಿಗಿಡ ೨೧ ರಾಗಿ ರಾಮಾಯಣ ೩೧. ಕಬೂ ತಂಗೂ ೪೧ ಮರಗಳು ರಾಜನನ್ನು ಗೊತ್ತು ಮಾಡಿಕೊ೦ಡುದು ೬೧ ಪುರಾಣ ಪ್ರಸಿದ್ಧವಾದ ಕಥೆಗಳು Puranic Tales and Legends. ೧೫ ಬಕಾಸುರನ ಕಥೆ ೧೯ ೧೯ ಅಭಿಮನ್ಯುವಿನ ಕಥೆ J೫ • ೧೬. ೧೮|
- : : : : : : : :
- : : : : : : : : : : ;
೨೭ ೪0 ೨೮ ೪೧ ೩೬.
ಬ ೨೧ ೪* ಪ್ರಭ ಸಂಖ್ಯೆ,
- :
೩೨ ೪೩ หe
- : : : : :
- * * * * c * * * 0
೪೬ ೧೭ ೨೮ ೨೩
- : : : :
K೮ ೬೫ ೭೦ viii ಕಥೆಗಳು. ೨೩ ಉತ್ತರನ ಕಥೆ ೩೦ ಧ್ರು ವಚರಿತ್ರೆ ೩೮ ಲವಕುಶರ ಕಾಳಗ ಹಬ್ಬ ಹಾಡಿಯದ ಕಥೆಗಳು, hindu-Feasts, ವರಲಕ್ಷ್ಮೀ ಕಥೆ ೪೦ ವಿನಾಯಕನ ಕಥೆ ೪೨ ಬಲಿಚಕ್ರವರ್ತಿಯು ಕರೆ ೪೫ ಸಾವಿತ್ರಿಯ, ಕಲೆ - ೧ನೆಯ ಭಾಗ ೨, ೨ನೆಯ ಭಾಗ ಇತಿಹಾಸಗಳು, Historical Tales. ೧೪ ಚಿಕ್ಕದೇವರಾಜ ಒಡೆಯರು ೨೦. ಶಿವಾಜಿ ಮಹಾರಾಜ ವಿಜಯನಗರ ಪಿಂಡಾರಿಯವರು ೪೩ ಔಪುಸುಲಾನ್ ೪೬ ಕಂಠೀರವ ನರಸರಾಜ ಒಡೆಯರವರ, ಕಲ್ಪಿತ ಕಥೆಗಳು, Imaginary Tales. ನಾಗವಲ್ಲಿಯು ಕಣೆ, ೧ನೆಯ ಭಾಗ ೨ ) - ೩ ? ೪ ೨೧೦ >> ೫ ೨೨ ••• ನಾಗಲೋಕ ೧ನೆಯ ಭಾಗ ೨೫ ೨೬ ಪುಷ್ಪಮಂಜರಿಯ ಕಥೆ ೧ನೆಯ ಭಾಗ _೨, ೨೨) ••• >> ೫೧ ೫೨ ೫೨ ೪ ಕಟ್ಟು ಕಥೆಗಳೇ ಮುಂತಾದುವು. Fables Etc. ೧ ಕಾಗಕ್ಕ ಗುಬ್ಬಕ್ಕೆ ದುಂಕರೂ ಭೇರಿಯ ೧೬ ಸುಳ್ಳು ಹುಡುಗ . ಕಡುಬಿನ ಕಥೆ ೩೬ ಶ್ರೀರಾಮ ಚಂದ್ರ ಸೂ 3) ಎ
- : : : : : : : : : : : : : : : : : : : : : :: : : : : :
>> 4 P >>
- : : : : : : : :
೧೨ LX ೨೪ 11 ೪೯ d & G & C & ко اله له له له ، Yo ೨) ೧೬
- : : :
೫೧
೫೪ ಕಥಾವಳಿ
_______
ಪ್ರ ಥ ಮ ಭಾ ಗ
_______
ಕಾಗಕ್ಕ ಗುಬ್ಬಕ್ಕ
ಒಂದು ಮರದ ಕೊಂಬೆಯ ಮೇಲೆ ಒಂದು ಕಾಗೆಯೂ, ಒಂದು ಗುಬ್ಬಿಯೂ ಹತ್ತಿರ ಹತ್ತಿರ ಗೂಡುಗಳನ್ನು ಕಟ್ಟಿಕೊಂಡು ಇದ್ದುವು, ಒಂದುದಿನ ಗುಬ್ಬಿಗೆ ಬಲು ಹಸಿವಾಗಿದ್ದಿತು. ಕಾಗೆಯ ಗೂಡಿನಿಂದ ಒಳ್ಳೆಯ ದೋಸೆಯ ವಾಸನೆ ಬಂದಿತು. ಆಗ ಗುಬ್ಬಿಯು, ಕಾಗೆಯ ಗೂಡಿನ ಹತ್ತಿರಕ್ಕೆ ಬಂದು,- ಕಾಗಕ್ಕಾ, ಕಾಗಕ್ಕಾ, ಸ್ವಲ್ಪ ಬಾಗಿಲು ತೆಗೆ- ಎಂದಿತು. ಕಾಗಕ್ಕನು ದೋಸೆಯನ್ನು ತಿನ್ನುತ್ತಾ- ನನ್ನ ಕೂಸಿಗೆ ನೀರು ಹಾಕುತಿದೇನೆ, ಸ್ವಲ್ಪ ತಾಳು- ಎಂದಿತು. ಒಂದು ಗಳಿಗೆ ಬಿಟ್ಟು ಗುಬ್ಬಿಯು-ಕಾಗಕ್ಕಾ, ಕಾಗಕ್ಕಾ, ಸ್ವಲ್ಪ ಬಾಗಿಲು ತೆಗೆಯೇ- ಎಂದು ಮತ್ತೆ ಕೂಗಿತು. ಆಗ ಕಾಗಕ್ಕನು-ನನ್ನ ಕೂಸನ್ನು ಮಲಗಿಸುತ್ತಿದೇನೆ, ತಾಳಮ್ಮ ಎಂದಿತು.
ಹಸಿವನ್ನು ತಡೆಯಲಾರದೆ ಗುಬ್ಬಿಯು ಹಾರಿಹೋಗಿ ಎಲ್ಲಿಂದಲೋ ಹತ್ತು ಕಡಲೆಕಾಳುಗಳನ್ನು ತಂದು ಗೂಡಿನಲ್ಲಿಟ್ಟು, ಬಾಗಿಲನ್ನು ಹಾಕಿಕೊಂಡು, ಒಳಗೆ ಕಟು೦, ಕುಟು೦, ಎಂದು ತಿನ್ನುತ್ತಿದ್ದಿತು. ಈ ಸದ್ದನ್ನು, ಕಾಗಕ್ಕನು ಕೇಳಿ, ಸಡಗರದಿಂದ ಬಂದು- ಎಲೆ ಗುಬ್ಬಕ್ಕಾ, ಗುಬ್ಬಕ್ಕಾ ! ಅದೇನೆ ಕಟು೦, ಕುಟುಂ, ಎಂದು ಅಷ್ಟು ಗಟ್ಟಿಯಾಗಿ ತಿನ್ನುತ್ತಿರುವುದು? ಬಾಗಿಲು ತೆಗೆಯೇ! ಎಂದಿತು. ಗುಬ್ಬಕ್ಕನು- ಅದು ಹುರಿಗಡಲೇ ಕಾಣೆ- ಎಂದು ಉತ್ತರವನ್ನು ಕೊಟ್ಟಿತು. ಕಾಗೆಯು ನನಗೊಂದೆರಡು ಕೊಟ್ಟೀಯೇನೆ ? ಎಂದು ಕೇಳಿತು. ಅದಕ್ಕೆ ಗುಬ್ಬಿಯು ಊ ! ನೀನು ದೋಸೆ ಕೊಟ್ಟಹಾಗೆ-ಎಂದಿತು. ೨
೨. ಕೋತಿಯೂ ಬೆಕ್ಕಿನಮರಿಯೂ.
ಒಬ್ಬ ಹುಡುಗನು ಒಂದು ಕೋತಿಯನ್ನೂ ಒಂದು ಬೆಕ್ಕಿನ ಮರಿಯನ್ನೂ ಸಾಕುತ್ತಿದ್ದನು. ಆ ಕೋತಿಯು ಬೆಕ್ಕಿನ ಮರಿಯೊಂದಿಗೆ ಬಹಳ ಸ್ನೇಹವಾಗಿದ್ದಿತು.
ಒಂದು ದಿವಸ ಇವೆರಡೂ ಆಡುತ್ತಿರುವಾಗ ಕೋತಿಯು ಬೆಕ್ಕಿನ ಬಾಲವನ್ನು ಹಿಡಿದು ಎಳೆಯಿತು. ಬೆಕ್ಕಿಗೆ ಕೋಪಬಂದು ಕೋತಿಯನ್ನು ಪರಚಿತು. ಬೆಕ್ಕಿನ ಉಗುರು ಸಾಧಾರಣವಾಗಿ ಒಳಗೆ ಇರುವದರಿಂದ ಬೆಕ್ಕಿಗೆ ಮೊನಚಾದ ಉಗುರುಗಳು ಇರುವುವೆಂದು ಕೋತಿಗೆ ತಿಳಿದೇ ಇರಲಿಲ್ಲ.
ಆದುದರಿಂದ ಕೋತಿಯು ಬೆಕ್ಕಿನ ಕಾಲುಗಳನ್ನು ಹಿಡಿದುಕೊಂಡು ಯಾವುದರಿಂದ ತನಗೆ ನೋವು ಆಯಿತೆಂದು ಚೆನ್ನಾಗಿ ನೋಡಿತು. ಆಗ ಒಳಗೆ ಸೆಳೆದುಕೊಂಡಿದ್ದ ಉಗುರುಗಳನ್ನು ಕಂಡುಹಿಡಿದು ಅವೇ ತನ್ನನ್ನು ಪರಚಿದುವೆಂದು ತಿಳಿದು ಒಂದೊಂದನ್ನಾಗಿ ಅವುಗಳನ್ನೆಲ್ಲಾ ಹಲ್ಲಿನಿಂದ ಸೆಳೆದು ಕಿತ್ತುಹಾಕಿತು.
ಅದು ಮೊದಲು ಬೆಕ್ಕು ಕೋತಿಯಮೇಲೆ ಬಿದ್ದು ಪರಚಿದಾಗೆಲ್ಲಾ ಕೋತಿಯು ಅದನ್ನು ಹಿಡಿದುಕೊಂಡು ಮತ್ತೆ ಮತ್ತೆ ಬೆಳೆದ ಉಗುರನ್ನು ಕಿತ್ತು ಹಾಕುತಿದ್ದಿತು. ಇದರಿಂದ ಉಂಟಾದ ನೋವನ್ನು ತಡೆಯಲಾರದೆ ಬೆಕ್ಕು ಪರಚುವುದನ್ನು ಬಿಟ್ಟುಬಿಟ್ಟಿತು. ಕೋತಿಯು ಬೆಕ್ಕಿನ ಉಗುರು ಮುರಿದುಹಾಕುವುದನ್ನೂ ಬಿಟ್ಟು ಬಿಟ್ಟಿತು.
_____________
೩. ಇಲಿಗಳ ಉಪಾಯ.
ಇಲಿಗಳಿಗೆ ಕೋಳಿಯ ಮೊಟ್ಟೆಗಳನ್ನು ಕಂಡರೆ ಬಹಳ ಆಶೆ, ಅವು ಮೊಟ್ಟೆಗಳಿರುವ ಸ್ಥಳವನ್ನು ಹುಡುಕಿ, ಅವನ್ನು ಬಹು ಉಪಾಯದಿಂದ ತಮ್ಮ ಬಿಲಕ್ಕೆ ಸಾಗಿಸಿ, ಅಲ್ಲಿ ತಿನ್ನು ವುವು.
ಒಬ್ಬ ಒಕ್ಕಲಿಗನ ಮನೆಯಲ್ಲಿ ಇಪ್ಪತ್ತು ಮೂವತ್ತು ಕೋಳಿಗಳಿದ್ದುವು. ಅವ್ರ ಇಟ್ಟ ಮೊಟ್ಟೆಗಳನ್ನು ಅವನು ಬೆಳಗ್ಗೆ ಎಣಿಸಿಕೊಂಡು ಹೋಗಿ ೩
ತಿರುಗಿ ರಾತ್ರಿ ಬಂದು ನೋಡುವಲ್ಲಿ ಕೆಲವು ಕಡಿಮೆಯಾಗಿರುತ್ತಿದ್ದುವು. ಈ ಕಳ್ಳತನವನ್ನು ಕಂಡು ಹಿಡಿಯಬೇಕೆಂದು ಒಂದುದಿನ ಆ ಒಕ್ಕಲಿಗನು ಸ್ವಲ್ಪ ಮರೆಯಾಗಿ ಅಲ್ಲಿಯೇ ಕಣ್ಣಿಟ್ಟು ನೋಡುತಿದ್ದನು.
ಸ್ವಲ್ಪ ಹೊತ್ತಿನಲ್ಲಿಯೇ, ಒಂದು ಇಲಿಯು ಬಂದು ಸುತ್ತು ಮುತ್ತೂ ನೋಡಿ, ಮೆಲ್ಲನೆ ಮೊಟ್ಟೆಗಳ ಹತ್ತಿರಕ್ಕೆ ಹೋಗಿ, ಹಿಂದಿರುಗಿ ಬುಡು ಬುಡನೆ ಓಡಿ ಬಿಲವನ್ನು ಸೇರಿತು. ಆಮೇಲೆ ಮೂರು ನಾಲ್ಕು ಇಲಿಗಳು ಒಟ್ಟಿಗೆ ಬಂದುವು.
ಒಂದು ಇಲಿಯು ಮೆತ್ತಗೆ ಒಂದು ಮೊಟ್ಟೆಯ ಹತ್ತಿರ ಹೋಗಿ ಮಲಗಿಕೊಂಡು ತನ್ನ ಬಾಲವನ್ನು ಆ ಮೊಟ್ಟೆಯ ಸುತ್ತಲೂ ಬೀಸಿತು. ಆಮೇಲೆ, ಮೊಟ್ಟೆಯ ಸುತ್ತೂ ಬಂದಿದ್ದ ತನ್ನ ಬಾಲದ ತುದಿಯನ್ನು ಬಾಯಿಯಿಂದ ಕಚ್ಚಿಕೊಂಡಿತು. ಆ ಬಳಿಕ ಉಳಿದ ಇಲಿಗಳು ಮೊಟ್ಟೆಯೊಡನೆ ಇದ್ದ ಆ ಇಲಿಯ ಕುತ್ತಿಗೆಯನ್ನು ಕಚ್ಚಿಕೊಂಡು ಹೊರಟುವ. ಹೀಗೆ ಮೊಟ್ಟೆಯು ಸುಲಭವಾಗಿ ಬಿಲಕ್ಕೆ ಸಾಗಿಹೋಗುತಿದ್ದಿತು.
ಅದನ್ನು ನೋಡಿ ಒಕ್ಕಲಿಗನು- ಓಹೋ! ಕಳ್ಳರು ಸಿಕ್ಕಿದರು ! ಕಳ್ಳರು ಸಿಕ್ಕಿದರು ! ಎಂದು ಎದ್ದು ಚಪ್ಪಾಳೆಯನ್ನು ತಟ್ಟಿ ದನು. ಕೊಡಲೆ ಮೊಟ್ಟೆ ಯನ್ನು ಅಲ್ಲಿಯೇ ಬಿಟ್ಟು ಇಲಿಗಳೆಲ್ಲಾ ಓಡಿಹೋದುವು.
_________
೪. ಮಂಕರೂ- ಭೇರಿಯೂ
೪
ಆ ಇಬ್ಬರು ಮಂಕರೂ ಆ ದೊಡ್ಡ ಭೇರಿಯೊಳಗೆ ಯಾರೋ ಇರುವರೆಂದೂ ಗಟ್ಟಿಯಾಗಿ ಹೊಡೆದ ಹಾಗೆಲ್ಲಾ ಅವರು ಕೂಗಿಕೊಳ್ಳುವರೆಂದೂ ತಿಳಿದುಕೊಂಡರು. ತರುವಾಯ ಹೇಗಾದರೂ ಮಾಡಿ ಅದರ ಒಳಗೆ ಇರುವವರನ್ನು ಬಿಡಿಸಬೇಕೆಂದು ಎಣಿಸಿ ಅವರಿಬ್ಬರೂ ಆ ಮೆರವಣಿಗೆಯ ಜತೆಯಲ್ಲಿಯೇ ಹೊರಟರು.
ಸ್ವಲ್ಪದೂರ ಹೋದಮೇಲೆ, ಭೇರಿಯನನು ಹುಲ್ಲು ಕಸ ಕಡ್ಡಿಯನು ಹಚ್ಚಿ, ಭೇರಿಯನ್ನು ಕಾಯಿಸಲಿಕ್ಕೆ ಇಳಿಸಿ, ದೀಪದ ಕಡ್ಡಿಯನ್ನು ತರಲಿಕ್ಕೆ ಸ್ವಲ್ಪ ಹಿಂದಕ್ಕೆ ಹೋದನು.
ಅದೇ ಸರಿಯಾದ ಸಮಯವೆಂದು ಆ ಮ೦ಕರು ಒಂದೊಂದು ಕಡೆಯ ಚರ್ಮವನ್ನು ಒಬ್ಬೊಬ್ಬನು ಹರಿದು ಹಾಕಿ ಒಳಗೆ ಕೈ ನೀಡಿ ಯಾರು ಇರುವರೆಂದು ತಡಕಾಡುತಿದ್ದರು. ಅಲ್ಲಿ ಒಬ್ಬನ ಕೈ ಇನ್ನೊಬ್ಬನಿಗೆ ಸಿಕ್ಕಲು, ನನ್ನ ಕೈಗೆ ಸಿಕ್ಕಿದನೆಂದು ಒಬ್ಬ ಮಂಕನೂ, ತನ್ನ ಕೈಗೆ ಸಿಕ್ಕಿದನೆಂದು ಮತ್ತೊಬ್ಬ ಮ೦ಕನೂ ಕೂಗಿಕೊಳ್ಳುತಿದ್ದರು.
ಆಷ್ಫರಲ್ಲಿ ಬೇರಿಯನ್ನು ಬಾರಿಸುವವನು ಬಂದು ನೋಡಿ ಕೋಪ ಗೊ೦ಡು, ಇವನಿಗೆ ಒಂದು ಏಟು ಅವನಿಗೆ ಒಂದು ಏಟು ಕೊಟ್ಟು ಇಬ್ಬರನ್ನೂ ಓಡಿಸಿದನು.
___________
೫, ನಾಗವಲ್ಲಿಯ ಕಥೆ--(೧ನೆಯ ಭಾಗ.)
ನಾಗವಲ್ಲಿಯು ನಕುಲರಾಯನೆಂಬ ಒಬ್ಬ ದೊರೆಯ ಒಬ್ಬಳೇ ಮಗಳು. ಇವಳು ಒಂದು ದಿನ ಸಾಯಂಕಾಲ ತನ್ನ ಜತೆಗಾತಿಯರೊಡನೆ ಊರಿಗೆ ಹತ್ತಿರದಲ್ಲಿದ್ದ ಒಂದು ಉದ್ಯಾನವನಕ್ಕೆ ಹೋಗಿ ಹೂಗಳನ್ನು ಕೊಯ್ಯುತ್ತಲಿರಲು, ಎಲ್ಲೋ ದೂರದಲ್ಲಿ ಒಂದು ನವಿಲು ಕೇಗುಹಾಕಿದಂತೆ ಕೇಳಬಂದಿತು. ಒಡನೆಯ ಸುತ್ತಲೂ ನೋಡಿದಳು. ಹತ್ತಿರದಲ್ಲಿಯೆ ಕಾಮನ ಬಿಲ್ಲಿನಂತೆ ಗರಿಯನ್ನು ಎತ್ತಿಕೊಂಡು ಆಡುತಿದ್ದ ಬಹು ಸುಂದರವಾದ ಒಂದು ನವಿಲನ್ನು ಕಂಡಳು. ಆ ನವಿಲನ್ನು ಹಿಡಿಯಬೇಕೆಂದು ನಾಗವಲ್ಲಿಯು ತನ್ನ ಜತೆಗಾತಿಯ ರೊಡನೆ ಓಡಿದಳು. ಆ ನವಿಲು, ನಾಗವಲ್ಲಿಯ ಕೈಗೆ ಸಿಕ್ಕಿಯೂ ಸಿಕ್ಕದಹಾಗೆ ಓಡುತ್ತಾ ಕಾಡಿಗೆ ನುಗ್ಗಿತು. ಅಷ್ಟು ಹೊತ್ತಿಗೆ ಸ್ವಲ್ಪ ಕತ್ತಲಾದುದರಿಂದ ಜತೆಗಾತಿಯರು ಮುಂದೆ ಹೋಗದೆ ಅಲ್ಲಲ್ಲಿಯೇ ನಿಂತು ನಾಗವಲ್ಲಿಯನ್ನು ಹಿಂದಿರುಗೆಂದು ಕೂಗುತಿದ್ದರು. ನಾಗವಲ್ಲಿಯು ಮಾತ್ರ ಎಷ್ಟು ಹೊತ್ತಾದರೂ ಆ ನವಿಲನ್ನು ಹಿಡಿದುಕೊಂಡೇ ಬರುವೆನೆಂದು ಕಾಡಿಗೆ ನುಗ್ಗಿದಳು.
ಆ ವೇಳೆಗೆ ಚೆನ್ನಾಗಿ ಕತ್ತಲಾಯಿತು. ನವಿಲ ಧ್ವನಿಯು ಕೇಳಬರುತಿದ್ದಿತೇ ಹೊರತು ನವಿಲು ಬೇರೆ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಅದರ ಧ್ವನಿಯನ್ನೇ ಹಿಡಿದು ಮುಂದೆ ಮುಂದೆ ಹೋಗುವಲ್ಲಿ ಕಾಡು ನಿಬಿಡವಾಗುತ ಬಂದಿತು. ಎಲ್ಲೆಲ್ಲೂ ಗಿಡ, ಇದರ ಮೇಲೆ ಗಾದಾಂಧಕಾರ, ದಾರಿಯೇ ತೋರದು, ಮುಂದೆ ನಾಗವಲ್ಲಿಯು ಏನು ಮಾಡಬೇಕು ? ಏನುಮಾಡು ವದಕ್ಕೂ ತೋರದೆ ಗಟ್ಟಿಯಾಗಿ ಅಳುವುದಕ್ಕೆ ಮೊದಲು ಮಾಡಿದಳು. ಕಾಡಿನಲ್ಲಿ ಅತ್ತರೆ ಕೇಳುವವರು ಯಾರು ? ಅತ್ತು ಅತ್ತು ಸಾಕಾಯಿತು. ಮತ್ತೆ ದಾರಿ ಹುಡುಕಿದಳು. ದಾರಿ ಹುಡುಕಿ ತಡಿಕಿ ಸಾಕಾಯಿತು, ಕೈ ಕಾಲುಗಳೆಲ್ಲಾ ಮುಳ್ಳು ಮುರಿದು ಹೆಜ್ಜೆ ಇಡಲು ಆಗದೆ ಹೋಯಿತು. ನಿಂತ ಕಡೆಯೆ ನೆಲಕ್ಕೆ ಬಿದ್ದು ಬಿಟ್ಟಳು.
ಕಾಡಿನಲ್ಲಿ ಬಿದ್ದ ಹಾಗೆಯೇ ನಾಗವಲ್ಲಿಗೆ ನಿದ್ದೆ ಬಂದಿತು.ನಿದ್ದೆಯಲ್ಲಿದ್ದಾಗ ಅವಳು ಒಂದು ಕನಸು ಕಂಡಳು. ಕನಸಿನಲ್ಲಿ ತಾನು ಮಲಗಿರುವ ಸ್ಥಳಕ್ಕೆ ಸಮೀಪದಲ್ಲಿಯೆ ದೊಡ್ಡ ಹುತ್ತ ಇರುವಂತೆಯ, ಆ ಹುತ್ತದಲ್ಲಿ ಬಹು ಸುಂದರನಾದ ಒಬ್ಬ ದೊರೆ ಮಗನು ಇರುವಂತೆಯೂ, ಆ ದೊರೆ ಮಗನ ಸಹಾಯದಿಂದ ತಾನು ತನ್ನ ಮನೆಯನ್ನು ಸೇರಿದಂತೆಯೂ, ಆ ದೊರೆ ಮಗನು ಎಲ್ಲೋ ಬೇಗ ಮಾಯವಾದಂತೆಯೂ ಆಗಿ ಅವಳಿಗೆ ಎಚ್ಚರವಾಯಿತು. ಕಣ್ಣು ಬಿಟ್ಟು ನೋಡಲು ಮರುದಿನ ಸೂರ್ಯನು ಪಶ್ಚಿಮದಿಕ್ಕಿನಲ್ಲಿ ಸೌಮ್ಯವಾಗಿ ಕಾಣುತ್ತಿದ್ದನು, ಅವಳು ಆಯಾಸದಿಂದ, ಎಷ್ಟೊಂದುಹೊತ್ತು
ಮೈ ಮರೆತು ಮಲಗಿರಬಹುದು! ನೀವೇ ಯೋಚಿಸಿ, ಎಚ್ಚರಗೊಂಡ ಮೇಲೆ ತಿರುಗಿ ಶ್ರಮವು ತೋರುವುದಕ್ಕೆ ಮೊದಲಾಯಿತು, ತಡೆಯಲಾರದಷ್ಟು ಹಸಿವು, ಬಾಯಾರಿಕೆ, ಎಲ್ಲಾದರೂ ಹೋಗಿ ಅಲ್ಲಲ್ಲಿ ಉದುರಿರುವ ಹಣ್ಣನ್ನಾದರೂ ತಿನ್ನಬೇಕೆಂದರೆ ಹಜ್ಜೆ ಇಡುವುದಕ್ಕೆ ಆಗದು. ಆದರೂ ಅವಳು ಹಾಗೆಯೆ ಸ್ವಲ್ಪ ಚೇತರಿಸಿಕೊಂಡು ಮೆಲ್ಲಮೆಲ್ಲನೆ ಹೊರಟಳು.
ಅಷ್ಟರಲ್ಲಿಯೇ ಸೂರ್ಯನು ಮುಳುಗಿದನು. ಕತ್ತಲೂ ಆಯಿತು. ಹುಲಿಗಳ ಆರ್ಭಟ, ನರಿಯ ಕೂಗು, ಹೆದರಿಕೆ, ಹಾಗೆಯೆ ಅವಳು ಮು೦ದೆ ಮುಂದೆ ಹೋಗುತ್ತಿರಲು, ನಕ್ಷತ್ರಗಳಂತೆ ಥಳಥಳಿಸುವ ಮಿಣಕು ಹುಳುಗಳಿಂದ ಬೆಳಕಾಗಿದ್ದ ಒಂದು ಪ್ರದೇಶವು ಕಾಣಬಂದಿತು. ಅಲ್ಲಿಗೆ ಹೋಗಿ ನೋಡಿದಳು. ಅಲ್ಲಿ ಒಂದು ದೊಡ್ಡ ಹುತ್ತವು ಇದ್ದಿತು. ಹುತ್ತವನ್ನು ನೋಡಿದೊಡನೆ ತನ್ನ ಸ್ವಪ್ನವು ಜ್ಞಾಪಕಕ್ಕೆ ಬಂದಿತು. “ ಇದೇನು ! ಆಶ್ಚರ್ಯವಾಗಿರುವುದು, ಒಳ್ಳೆಯದು ! ಈ ಹುತ್ತದಲ್ಲಿ ಯಾವ ರಾಜಕುಮಾ ರನಾದರೂ ಇರುತ್ತಾನೆಯೋ ನೋಡೋಣ ' ಎಂದು, ಆ ಹುತ್ತದ ಹತ್ತಿರ ಹೋಗಿ ; ' ಹಾ ! ದೈವವೆ ! ಮುದುಕರಾದ ತಂದೆ ತಾಯಿಗಳನ್ನು ಬಿಟ್ಟು ನನ್ನ ಇಷ್ಟಜನರಿಂದ ಅಗಲಿ ಕಾಡುಪಾಲಾಗಿ ಹಸಿದು ಬಾಯಾರಿಕೆ ಸಂಕಟ ಪಡುತ್ತಾ, ದುಷ್ಟಮೃಗಗಳ ಬಾಯಿಗೆ ತುತ್ತಾಗಿರುವ ನನ್ನನ್ನು ಕಾಪಾಡುವ ಮಹಾತ್ಮರು ಯಾರಾದರೂ ಇಲ್ಲಿ ಇರುವರೆ ?” ಎಂದು ಬೇಡಿದಳು. ಕೂಡಲೆ ಆ ಹುತ್ತದೊಳಗಿನಿಂದ ಒಂದು ಧ್ವನಿಯು ಕೇಳಿಸಿತು.
೭
ದೇವರಚಿತ್ತದಲ್ಲಿ ಇದ್ದುದು ಆಗಲಿ. ಈ ಸಲಹೆಗೆ ನಾನು ಒಪ್ಪಿಕೊಳ್ಳುವುದು ಉತ್ತಮ ”ಎಂದು ಯೋಚಿಸಿ 'ಎಲೈ! ಮಹಾತ್ಮನೆ! ನಾನು ನಿನ್ನ ಸಲಹೆಗೆ ಒಫ಼್ಪುವೆನು.ನನ್ನನ್ನು ಹೇಗಾದರೂ ಕಾಪಾಡು'ಎಂದಳು. ಅದಕ್ಕೆ, ಹುತ್ತದೊಳಗಿನಿಂದ' ಹಾಗಾದರೆ ನೀನು ಈಗ ಊರಿಗೆ ಹೋಗಿ ಒಂದು ಭಂಗಾರದ ಕತ್ತಿಯನ್ನು ತಂದು ಈ ಹುತ್ತವನ್ನು ಸೀಳು.ನಾನು ಎದ್ದು ಬಂದು ನಿನ್ನನ್ನು ಮದುವೆಯಾಗುವೆನು ನಿನ್ನನು ಇಲ್ಲಿಗೆ ಕರೆತಂದ ಆ ನವಿಲೇ ಈಗ ನಿನಗೆ ದಾರಿಯನು ತೋರಿಸುವದು, ಎಂದು ಕೇಳಿಸಿತು.ಇಷ್ಟರಲ್ಲಿಯೇ ಆ ಮಯೂರವು ಧ್ವನಿ ಮಾಡಿತು.ಆಧ್ವನಿಯನ್ನೇ ಹಿಡಿದು ಹೊರಟಳು.ಬೇಗನೆ ಊರು ಸಿಕ್ಕಿತು.
ಇತ್ತಲಾಗಿ ಕಾಡಿನಲ್ಲಿ ನಾಗವಲ್ಲಿಯು ದಾರಿತಪ್ಪಿ ಹೋಗಿರುವಳೆಂದು ರಾಯನು ತಿಳಿದು, ಬೇಟೆಗಾರರನ್ನು ಕರೆಯಿಸಿ,ಕಾಡನ್ನೆಲ್ಲಾ ಚೆನ್ನಾಗಿ ಹುಡುಕಿ,ನಾಗವಲ್ಲಿಯನ್ನು ಕರೆತರಬೇಕೆಂದು ಹೇಳಿ ಕಳುಹಿಸಿದನು.ಒಂದೆರಡು ದಿನಗಳಾದರೂ ಇನ್ನೂ ಹಿಂದಿರುಗಿ ಯಾರೂ ಬರಲಿಲ್ಲವೆಂದು ಯೋಚಿಸುತ್ತ ಕುಳಿತಿದ್ದಾಗ ನಾಗವಲ್ಲಿಯೇ ಬಂದುಸೇರಿದಳು,ಅಗ ರಾಯನು ಮಗಳನ್ನು ಮುದ್ದಿಟ್ಟು ಅವಳು ಬಂದ ವರ್ತಮಾನವನ್ನು ಸಂತೋಷದಿಂದ ಪುರಜನರೆಲ್ಲರಿಗೂ ತಿಳಿಸಿದನು.
ತರುವಾಯ ನಾಗವಲ್ಲಿಯು, ತಾನು ಕಾಡನ್ನು ಹೊಕ್ಕ ಮೊದಲು ಹಿಂದಿರುಗಿಬಂದ ವರೆಗೂ ನಡೆದುದನ್ನೆಲ್ಲಾ ತನ್ನ ತಂದೆ ತಾಯಿಗಳಮುಂದೆ ಹೇಳಿ ಬಹು ದುಃಖದಿಂದ ಕೊನೆಗೆ' ಅಪ್ಪಾಜಿ, ನಾನು ಇಲ್ಲಿ ಇನ್ನು ನಿಲ್ಲುವುದಕ್ಕೆ ಇಲ್ಲ. ನನಗೆ ಒಂದು ಭಂಗಾರದ ಕತ್ತಿಯನ್ನು ತರಿಸಿಕೊಡಿ.ನಾನು ಹೋಗಿ ಬರುವೆನು,ಎಂದಳು ಆಗ ದೊರೆಯು ತನ್ನ ಒಬ್ಬಳೇ ಮಗಳನ್ನು ಕಾಡುಪಾಲು ಮಾಡಲಾರದೆ ಬಹಳವಾಗಿ ಚಿಂತಿಸಿ,ಮಗಳನ್ನೂ ಹೆಂಡತಿಯನ್ನೂ ಸಮಾಧಾನಪಡಿಸಿ,ಮಂತ್ರಿಗೆ ಹೇಳಿ ಕಳುಹಿಸಿದನು. ಮಂತ್ರಿಯು ಒಡನೆಯೆ ಬಂದನು.ರಾಯನು ಮಂತ್ರಿಗೆ ಎಲ್ಲವನ್ನೂ ತಿಳಿಸಿದನು. ಆಗ
ಮರುದಿನ ರಾಯನು ಆ ಸುಂದರಿಯನ್ನು ಕರೆಯಿಸಿ ಅವಳಿಗೆ ಬೇಕಾದುದನ್ನು ಕೊಟ್ಟು, ಚಿನ್ನದ ಕತ್ತಿಯೊಡನೆ ಹುತ್ತದ ಬಳಿಗೆ ಕಳುಹಿಸಿದನು. ಅವಳು ಆ ಹುತ್ತವನ್ನು ಕತ್ತಿಯಿಂದ ಒಂದು ದಿನವೆಲ್ಲಾ ಸೀಳಿದರೂ ಅದು ಸೀಳಲಿಲ್ಲ. ಮರುದಿನ ಬೆಳಕು ಹರಿವಹೊತ್ತಿನಲ್ಲಿ ' ಈಗ ಎಷ್ಟು ಹೊತ್ತಾಗಿರುವದು ? ' ಎಂಬ ಧ್ವನಿಯು ಹುತ್ತದಿಂದ ಬಂದಿತು. ಅದಕ್ಕೆ, ಅವಳು ಈಗ ಏರುಕಟ್ಟುವ ಹೊತ್ತು ' ಎಂದಳು, ' ಓಹೋ ! ನೀನು ದೊರೆಯ ಮಗಳಲ್ಲ; ನೀನು ರೈತನ ಮಗಳು, ನೀನು ಹೋಗಿ ದೊರೆಮಗಳನ್ನು ಕಳುಹಿಸು ' ಎಂದು ಅವಳಿಗೆ ಕೇಳಿಸಿತು. ಅವಳು ನಿಜವಾಗಿಯೂ ರೈತನಮಗಳೇ ಅವಳು ಹಿಂದಿರುಗಿ ಬಂದು ಅಲ್ಲಿ ನಡೆದುದನ್ನೆಲ್ಲಾ ದೊರೆಗೆ ತಿಳಿಸಿದಳು.
ದೊರೆಯ ಮಂತ್ರಿಯೂ ಮಾರನೆಯ ದಿನ ಅವಳಿಗಿ೦ತಲೂ ಸುಂದರಿಯಾಗಿದ್ದ ಒಬ್ಬ ಗಾಣಗಿತ್ತಿಯನ್ನು ಕಳುಹಿಸಿದರು. ಆ ಗಾಣಗಿತ್ತಿಯು ಹುತ್ತವನ್ನು ಒಂದು ದಿನವೆಲ್ಲಾ ಸೀಳಲು ಕಷ್ಟ ಪಟ್ಟಳು, ಆದರೂ ಪ್ರಯೋಜನವಾಗಲಿಲ್ಲ. ಅವಳಿಗೂ, 'ಎಷ್ಟು ಹೊತ್ತಾಗಿರುವುದು ?' ಎಂಬ ಧ್ವನಿಯು ಕೇಳಿಸಿತು. ಅವಳು : ಗಾಣಕಟ್ಟುವ ಹೊತ್ತಿರಬಹುದು ? ಎಂದಳು. ಅದಕ್ಕೆ ಹುತ್ತದಿಂದ : ಛೇ ! ಹೋಗು ; ನೀನು ಗಾಣಗಿತ್ತಿ. ದೊರೆಯ ಮಗಳು ಬಾರದೆ ಇದ್ದರೆ ಇನ್ನು ಸ್ವಲ್ಪ ಕಾಲದಲ್ಲಿಯೆ ಪಟ್ಟಣವೆಲ್ಲಾ ನಾಶವಾಗುವುದೆಂದು ಹೇಳು' ಎಂಬ ಧ್ವನಿಯು ಕೇಳಿಸಿತು. ಒಡನೆಯೆ ಅವಳು ಹಿಂದಿರುಗಿ ಬಂದು ರಾಜನಿಗೂ ಮ೦ತ್ರಿಗೂ ಆ ಸಂಗತಿಯನ್ನು ತಿಳಿಸಿದಳು.
ಆ ಮಾರನೆಯ ದಿನ ನಾಗವಲ್ಲಿ ಯೇ ಹೊರಟಳು. ಪಟ್ಟಣದ ಜನ ರೆಲ್ಲರೂ ಗೋಳಿಟ್ಟರು. ಅರಮನೆಯಲ್ಲಿದ್ದವರ ದುಃಖವನ್ನ೦ತೂ ಹೇಳುವು ದಕ್ಕೆ ಅಸಾಧ್ಯವು. ಆ ದಿನ ನಗಾರಿ ನೌಪತ್ತು ಆಗಲಿಲ್ಲ. ಊರಿನಲ್ಲಿ ಎಲ್ಲೆಲ್ಲಿ ನೋಡಿದರೂ ಜನರ ಗುಂಪು, ಪಿಸಿಪಿಸಿ ಮಾತು, ಜನರ ರೋದನಧ್ವನಿ, ಈ ರೀತಿಯಲ್ಲಿದ್ದಿತು. ನಾಗವಲ್ಲಿಯು ತನ್ನ ಜತೆಯಲ್ಲಿ ಬರುತ್ತಿದ್ದ ಜನರ ನ್ನೆಲ್ಲಾ ಸಮಾಧಾನಗೊಳಿಸಿ, ಹಿಂದಕ್ಕೆ ಕಳುಹಿಸಿ, ತಾನೊಬ್ಬಳೇ ಆ ಹುತ್ತವಿದ್ದಲ್ಲಿಗೆ ಹೊರಾಟಳು.
ನಾಗವಲ್ಲಿಯು, ತನ್ನ ಜನರನ್ನೆಲ್ಲಾ ಕಳುಹಿಸಿ, ಹೊರಟು ಸ್ವಲ್ಪ ಹೊತ್ತಿನಲ್ಲಿಯೇ ಹುತ್ತವನ್ನು ಸೇರಿದಳು. ಅದನ್ನು ಸೀಳುವುದಕ್ಕೆ ಮುಂದೆ, ದೇವರನ್ನು ಪ್ರಾರ್ಥಿಸಿ, ಹುತ್ತಕ್ಕೆ ಪ್ರದಕ್ಷಿಣೆಮಾಡಿ, ಭಂಗಾರದ ಕತ್ತಿಯಿಂದ ಅದನ್ನು ಸೀಳಿದಳು. ಹುತ್ತವು ಎರಡು ಪಾಲಾಯಿತು. ಆಗ ಥಳಥಳಿ ಸುವ ರತ್ನದ ಕವಚವನ್ನು ತೊಟ್ಟು, ವಜ್ರದ ಕಿರೀಟವನ್ನು ಇಟ್ಟು, ಅಗ್ನಿ ಯಂತೆ ಪ್ರಕಾಶಿಸುವ ನಾಗರಾಜ ಕುಮಾರನು ಈಚೆಗೆ ಬಂದು, ಅವಳ ಕೈಯನ್ನು ಹಿಡಿದುಕೊಂಡು, “ಪ್ರಿಯೆ ! ನನ್ನೊಡನೆ ನಡೆ” ಎಂದನು.
ನಾಗವಲ್ಲಿಯು ತನಗೆ ತಕ್ಕ ಗಂಡನು ಸಿಕ್ಕಿದುದಕ್ಕಾಗಿ ಬಹಳ ಸಂತೋಷಗೊಂಡು, ನನ್ನ ತಂದೆ ತಾಯಿಗಳೂ ಇಷ್ಟ ಜನರೂ ನನ್ನನ್ನು ಅಗಲಿ ಬಹಳವಾಗಿ ಚಿಂತಿಸುತ್ತಿರುವರು. ನನಗೆ ಲಭಿಸಿರುವ ಪ್ರಣವಿಶೇಷ ವನ್ನು ಎಲ್ಲರಿಗೂ ತಿಳಿಸಿ ಅವರ ಮನಸ್ಸನ್ನು ಸಂತೋಷಪಡಿಸಿ ಬರುವುದಕೆ ಅಪ್ಪಣೆಯನ್ನು ಕೊಡಬೇಕು ಎಂದು ಪ್ರಾರ್ಥಿಸಿದಳು. ಅದಕ್ಕೆ ನಾಗರಾಜ ಕುಮಾರನು ಒಪ್ಪಿ 'ನಾನು ಇಲ್ಲಿ ಬಹಳ ಕಾಲ ನಿಲ್ಲುವುದಕ್ಕೆ ಇಲ್ಲ, ನೀನು ಊರಿಗೆ ಹೋಗಿ, ನಿಮ್ಮ ತಂದೆ ತಾಯಿಗಳೊಡನೆ ಮರುಗಳಿಗೆ ಎಂದರೆ ಮರೇಗಳಿಗೆ ಇದ್ದು, ಹೊರಟು ಬಾ, ' ಎಂದು ಹೇಳಿ ಕಳುಹಿಸಿದನು. ೧೦
ನಾಗವಲ್ಲಿಯು ಹಿಂದಿರುಗಿ ಬಂದು ತನ್ನ ತಂದೆ ತಾಯಿಗಳನ್ನು ಸಂತೋಷಪಡಿಸಿ ಹೋಗುವುದರಲ್ಲಿ ಒಂದು ಗಳಿಗೆ ಹೆಚ್ಚಾದುದರಿಂದ, ತನ್ನ ಪ್ರಿಯನಿದ್ದೆಡೆಗೆ ಓಡಿ ಓಡಿ ಹೋದಳು.
ಅಲ್ಲಿ ರಾಜಕುಮಾರನೇ ಇರಲಿಲ್ಲ, ತಾನು ಸ್ವಲ್ಪ ಹೊತ್ತಾಗಿ ಬಂದು ದರಿಂದ ರಾಜಕುಮಾರನು ಮಾಯವಾದನೆಂದು ಚಿಂತಿಸಿ, ಅವನನ್ನು ಹುಡುಕಿಕೊಂಡು ಕಾಡಿನಲ್ಲಿಯೇ ಹೊರಟಳು, ಗೆಡ್ಡೆ ಗೆಣಸುಗಳನ್ನು ತಿಂದು ಪ್ರಾಣವನ್ನುಳಿಸಿಕೊಂಡು ಕಾಡಿನಲ್ಲೆಲ್ಲಾ ಅಲೆದಳು. ಎಲ್ಲಿಯೂ ತನ್ನ ಪ್ರಿಯನು ಸಿಕ್ಕಲಿಲ್ಲ. ಬಹು ಶಾಂತಳಾಗಿ ಒಂದು ಮರದ ನೆರಳಲ್ಲಿ ಕುಳಿ ತುಕೊಂಡಳು, ಹತ್ತಿರದಲ್ಲಿಯೆ ಒಂದು ಗುಡಿಸಲು ಕಾಣಬಂದಿತು. ಪ್ರಿಯನು ಆ ಗುಡಿಸಲಿನಲ್ಲಿಯಾದರೂ ಇರುವನೋ ಎಂದು ತಟ್ಟನೆ ಹೊರಟು ಗುಡಿ ಸಲನ್ನು ಸೇರಿದಳು.
ಆ ಗುಡಿಸಲಿನಲ್ಲಿ ಕುಳಿತಿದ್ದವನು, ರತ್ನದ ಕವಚವನ್ನು ತೊಟ್ಟು ವಜ್ರದ ಕಿರೀಟವನ್ನು ಇಟ್ಟು ಥಳಥಳಿಸುತಿದ್ದ ಪ್ರಿಯನೆ ? ಅಲ್ಲ, ಕಾವಿಯ ಬಟ್ಟೆಯನ್ನುಟ್ಟು, ಬಿಳಿಯ ಗಡ್ಡವನ್ನು ಬಿಟ್ಟು ಕಂಗೊಳಿಸುತ್ತಿದ್ದ ಒಬ್ಬ ಋಷಿಯು, ನಾಗವಲ್ಲಿಯು ಆ ಋಷಿಯ ಪಾದಕ್ಕೆರಗಿ ಕೈ ಮುಗಿದು ನಿಂತಳು, ಋಷಿಯು ನಾಗವಲ್ಲಿಯ ವೃತ್ತಾಂತವನ್ನೆಲ್ಲಾ ತಿಳಿದು, ಅವಳಿಗೆ ಧೈಲ್ಯವನ್ನು ಹೇಳಿ, ಮಂತ್ರಿಸಿ ನಾಲ್ಕು ಪದಾರ್ಥಗಳನ್ನು ಕೊಟ್ಟ ' ನಿನ್ನ ಪ್ರಿಯನು ಸಿಕ್ಕುವನು ಹೋಗು ' ಎಂದು ಆಶೀರ್ವದಿಸಿ ಕಳುಹಿಸಿದನು.
ನಾಗವಲ್ಲಿಯು ಆ ಋಷಿಗೆ ನಮಸ್ಕರಿಸಿ, ನಾಗರಾಜನ ಮಗನನ್ನು ಹುಡುಕಿಕೊಂಡು ಆಕಾಡಿನಲ್ಲ ಯೇ ಹೊರಟಳು. ದಾರಿಯಲ್ಲಿ ಒಂದುದೊಡ್ಡ ಬೆಟ್ಟವು ಸಿಕ್ಕಿತು. ಆ ಬೆಟ್ಟವ ಬಹು ಇಳಿಜಾರಾಗಿಯೂ, ನುಣು ಪಾ ಗಿಯೂ ಇದ್ದುದರಿಂದ, ಹತ್ತು ಇದಕ್ಕೆ ಅಸಾಧ್ಯವಾಗಿ ತೋರಿತು. ಆಗ ಋಷಿಯ ಕೊಟ್ಟಿದ್ದ ಪದಾರ್ಥಗಳಲ್ಲಿ ಮೂರು ವಜ್ರದ ಸೂಜಿಗಳು ಇದ್ದು ದನ್ನು ನೋಡಿ ಅವುಗಳನ್ನು ಚುಚ್ಚಿ ಮೆಟ್ಟಿಲುಗಳಂತೆ ಮಾಡಿ ಕೊಂಡು ಆ ಬೆಟ್ಟವನ್ನು ದಾಟಿದಳು. ಅಲ್ಲಿಂದ ಮುಂದೆ ಹೋಗುತ್ತಿರುವಾಗ, ಒಂದು ಇಕ್ಕಟ್ಟಾದ ಸ್ಥಳವು ಸಿಕ್ಕಿತು. ಆ ಸ್ಥಳದಲ್ಲಿ ಹರಿತವಾದ ಮೂರು ಕತ್ತಿಗಳು ತಕತಕನೆ ಕುಣಿ ದಾಡುತ್ತಿದ್ದುವು. ಅವನ್ನು ನೋಡುವುದಕ್ಕೇ ಭಯವಾಗುತ್ತಿದ್ದಿತು. ಇನ್ನು ದಾಟುವನ್ದು ಹೇಗೆ ? ನಾಗವಲ್ಲಿಯು ಧೈರೈ ತಾಳಿ ಋಷಿಯು ಕೊ ಟ್ವಿದ್ದುದರಲ್ಲಿ ಒಂದು ಚಕ್ರವಿದ್ದುದನ್ನು ನೋಡಿ, ಅದೂ ಸೂಜಿಯಂತಯೇ ಮಂತ್ರಸಿದ್ದವಾದ ಚಕ್ರವಿರಬಹುದೆಂದು, ಅದರ ಮೇಲೆ ಕುಳಿತು, ಕತ್ತಿಯ ಹತ್ತಿರ ಉರುಳಿಸಿದಳು. ಕತ್ತಿಗಳಮೇಲೆ ಚಕ್ರವ ಸರ್ರ್‌ನೆ ಹೊರಟ ಅವ ಇನ್ನು ಆಚೆಗೆ ದಾಟಿಸಿತು.
ಅವಳು ಮುಂದೆ ಮುಂದೆ ಹೋಗುತ, ಕಾಡು ಭಯಂಕರವಾಗುತ ಬಂದಿತೇ ಹೊರತು, ಊರು ಬೇರೆ ಸಿಕ್ಕಲಿಲ್ಲ. ಹುಲಿಗಳ ಆಲ್ಬಟ, ಆನೆಗಳ ಕೂಗು, ಸಿಂಹದ ಗರ್ಜನೆ, ಇವ್ರ ಬಾರಿ ಬಾರಿಗೂ ಅವಳ ಮೈಯನ್ನೆ ಲ್ಲಾ ನಡುಗಿಸುತ್ತಿದ್ದು ವ. ಆದರೆ ಅಲ್ಲಲ್ಲೆ ಸಿಕುತಿದ್ದ ಹುಲ್ಲಿಗಳ ಹಿಂಡು, ನವಿಲುಗಳ ಸಮೂಹ, ಕೋಗಿಲೆಗಳ ಗುಂಪು, ಇವು,ಅವಳಿಗೆ ಸಮಾಧಾನವ ನ್ನುಂಟುಮಾಡುತಿದ್ದುವ. ಹಾಗೆಯೇ ಹೊರಟಳು. ಮುಂದೆ ಒಂದು ದೊಡ್ಡ ಮೈದಾನವೂ ಸಿಕ್ಕಿತು ಆ ಮೈದಾನದಲ್ಲಿ ಒಂದು ಸೊಗಸಾದ ಕೊಳ. ಆ ಕೊಳದಲ್ಲಿ ನೀರು ಕುದಿಯುತ್ತಿದ್ದಿತು. ಅದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು.
ಖುಷಿಯು ಕೊಟ್ಟಿದ್ದ ಪದಾರ್ಥಗಳಲ್ಲಿ ಒಂದು ಗೋಲಿ ಯಿದ್ದಿತು. ಅದನ್ನು ಎಲ್ಲಿ ಯಾವಾಗ ಉಪಯೋಗಿಸಬಹುದೆಂದು ಯೋಚಿಸುತ, ಆ ಕೊಳೆದ ಮೇಲುಗಡೆಯ ಮೆಟ್ಟಲಮೇಲೆ ಕುಳಿತಿದ್ದಾಗ, ಮಂತ್ರಸಿದ್ದವಾದ ಆ ಗೋಲಿಯು ಅವಳ ಕೈಯಿಂದ ಉರುಳಿಹೋಗಿ ಆ ಕುದಿವ ನೀರಿಗೆ ಬಿದ್ದಿತು. ಅದು ಬಿದ್ದೊಡನೆ ಕುದಿಯುತ್ತಿದ್ದ ನೀರು ತಣ್ಣಗೆ ಆಗಿ ತಿಳಿಯಿತು. ತಿಳಿದ ನೀರಿನಲ್ಲಿ ಏಳುಪ್ಪರಿಗೆಯ ಅರಮನೆಯೊಂದು ಕಾಣಿಸಿಕೊಂಡಿತು. ಆ ಅರಮನೆಯ ಮೇಲುಗಡೆಯ ಬಿಸಿಲು ಮಚ್ಚಿನಲ್ಲಿ ನಾಗರಾಜ ಕುಮಾರನು ಯೋಚಿಸುತ ಕುಳಿತಿದ್ದಂತೆ ಕಾಣಿಸಿತು. ತನ್ನ ಪ್ರಿಯನನ್ನು ನೋಡಿದ ಸಂತೋ ಷಕ್ಕೆ ನಾಗವಲ್ಲಿಯು ಅಲ್ಲಿಯೇ ಮೂರ್ಛಿತಳಾದಳು.
ನಾಗವಲ್ಲಿಯು ಮೂರ್ಛಯಿಂದ ಚೇತರಿಸಿಕೊಂಡು ಎದ್ದು, ಸರಸರನೆ ಆ ನೀರಿನ ಹತ್ತಿರಕ್ಕೆ ಹೋದಳು. ಆ ತಿಳಿನೀರಿನಲ್ಲಿ ರಾಜಕುಮಾರನು ಇರುವುದನ್ನು ಮತ್ತೆ ನೋಡಿದಳು. ಹೇಗಾದರೂ ಅವನನ್ನು ಸೇರಬೇ ಕೆಂದು ಆ ನೀರಿನಲ್ಲಿ ದುಮುಕಿದಳು, ನೀರು ದಾರಿಬಿಟ್ಟಿತು, ಒಂದು ಕ್ಷಣ ದಲ್ಲಿ ಅರಮನೆಯ ಬಾಗಿಲನ್ನು ಸೇರಿದಳು. ಆದರೆ ಅರಮನೆಯ ಒಳಕ್ಕೆ ಇವಳನ್ನು ಯಾರೂ ಬಿಡರು ; ಒಬ್ಬರೂ ಮಾತನಾಡಿಸರು ; ಎಲ್ಲರೂ ಬಹು ಸಡಗರದಲ್ಲಿದ್ದರು ; ನಾಗಕನೈಗೆ ನಾಳೆ ಮದುವೆಯೆಂದು ಎಲ್ಲರೂ ಹೇಳಿ ಕೊಳ್ಳುತಿದ್ದರು, ತಾನು ಹೇಗೆ ರಾಜಕುಮಾರನನ್ನು ಕಂಡು ಮಾತನಾ ಡುವುದು ? ರಾಜಕುಮಾರನು ನಾಗಕನೈಯನ್ನು ಮದುವೆಯಾಗುವುದಾ ದರೆ ತಾನು ಏನು ಮಾಡುವುದು ? ತಾನು ಪಟ್ಟ ಕಷ್ಯವೆಲ್ಲಾ ವ್ಯರ್ಥವಾ ಗುವುದು ಎಂದು ಚಿಂತಿಸುತ್ತಾ, ಅರಮನೆಗೆ ಸ್ವಲ್ಪ ದೂರದಲ್ಲಿದ್ದ ಒಂದು ಮರದ ನೆಳಲಲ್ಲಿ ಕುಳಿತುಕೊಂಡಳು. ಸ್ವಲ್ಪ ಹೊತ್ತಿನಲ್ಲಿಯೆ ಅಲ್ಲಿಗೆ ಒಬ್ಬ ಮುದುಕಿಯು ಬಂದಳು. ಆ ಮುದುಕಿಗೆ ಇವಳು ನಮಸ್ಕಾರಮಾಡಿ, • ಅಮ್ಮಾ ನಾಳೆ ಯಾರಿಗೆ ಮದುವೆ ? ' ಎಂದು ಕೇಳಿದಳು, ಮುದುಕಿಯು, ಗಲ್ಲದಮೇಲೆ ಬೆಟ್ಟಿಟ್ಟ, ತಲೆಯೆತ್ತಿ ಇವಳ ಮುಖವನ್ನು ನೋಡಿ, 'ಇದೇನೆ ! ಹೀಗೆ ಕೇಳುತೀಯೆ ! ಚೆನ್ನಾಯಿತು, ಹೊಸದಾಗಿ ಬಂದಿದಾನಲ್ಲೆ ; ನಾಗ ರಾಜಕುಮಾರನಂತಲ್ಲೆ ! ಅವನಿಗೆ ನಮ್ಮ ನಾಗಕನಯನ್ನು ಕೊಡು ವರಲ್ಲವೇನೆ! ಅವನಿಗೇನೋ ಮದುವೆ ಬೇಡವಂತೆ ; ಮೂರು ಹೊತ್ತು ತಲೆಯ ಮೇಲೆ ಕೈ ಬಿಟ್ಟುಕೊಂಡು ಕುಳಿರುತ್ತಾನಂತೆ ! ರಾತ್ರಿ ಒಂದು ಹೊತ್ತಿನಲ್ಲಿ ಸ್ವಲ್ಪ ಹೊರಕ್ಕೆ ಬರುತ್ತಾನಂತೆ ! ನನಗೆ ಕೆಲಸವಿದೆ, ನಾನು ಹೋಗಬೇಕು. ನೀನು ಹುಡುಗಿ, ನಿನಗೆ ತಿಳಿಯದೇ ಇದ್ದುದು ನನಗೆ ತಿಳಿಯುತ್ತದೆಯೆ ! ನನ್ನನ್ನು ನೋಡಿದರೆ ನಿಮಗೆ ಹಾಸ್ಯ' ಎಂದು ಕೊಂಡು ಹೊರಟುಹೋದಳು.
ನಾಗವಲ್ಲಿಯು ರಾತ್ರಿಯಲ್ಲಿ ಆ ರಾಜಕುಮಾರನು ಹೊರಡುವುದನ್ನೇ ಕಾದಿದ್ದಳು. ರಾತ್ರಿ ಒಂದು ಹೊತ್ತಿನಲ್ಲಿ ರಾಜಕುಮಾರನು, ಏಳನೆಯ ಉಪ್ಪರಿಗೆಯಿಂದ ಬರುತಿದ್ದುದನ್ನು ನೋಡಿದಳು. ತನ್ನ ಪ್ರಿಯನನ್ನು ಸೇರುವೆನೆಂಬ ಸಂತೋಷದಿಂದ ಮುಂದಾಗಿ ಬಂದಳು. ರಾಜಕುಮಾರನಾದರೋ, ಎಂದಿನಂತೆ ಹೊರಗೆ ಸಂಚಾರ ಹೊರಡದೆ ಎರಡನೆಯ ಅ೦ತಸ್ತಿನ ಮಚ್ಚಿನಮೇಲೆ ನಿಂತನು. ಎಷ್ಟು ಹೊತ್ತಾದರೂ ಕೆಳಕ್ಕೆ ಬರಲಿಲ್ಲ.ಬೆಳಗಾಗುತ್ತಾ ಬಂದಿತು.ಇವಳ ಮನಸ್ಸು ಕಳವಳಿಸುತ್ತಿದ್ದಿತು.
ಆಗ ನಾಗವಲ್ಲಿಯು ಮೆಲ್ಲನೆ ಎರಡನೆಯ ಅ೦ತಸ್ತಿನ ಕೆಳಗೆ ನಿ೦ತು, ನಿಶ್ಯಬ್ದವಾಗಿರುವ ಸಮಯದಲ್ಲಿ' ತಾನು ಕಾಡನ್ನು ಹೊಕ್ಕುದು ಮೊದಲುಗೊಂಡು, ಇಳಿಜಾರಾದ ಬೆಟ್ಟವನ್ನು ಹತ್ತಿದುದು, ಕುಣಿದಾಡುವ ಕತ್ತಿಗಳನ್ನು ದಾಟಿದುದು, ಕುದಿವ ನೀರನ್ನು ಅಣಗಿಸಿದುದು, ಇವೇ ಮುಂತಾದ ತನ್ನ ಕಥೆಯನ್ನೆಲ್ಲಾ ಒಂದು ಗಾನವನ್ನು ಮಾಡಿ, ಅದನ್ನು ಬಹು ಮಧುರ ಧ್ವನಿಯಿಂದ ಹಾಡಿದಳು. ಆ ಗಾನವನ್ನು ಕೊನೆಯವರೆಗೂ ಕೇಳಿ, ರಾಜಕುಮಾರನು ತನ್ನ ಪ್ರಿಯೆಯು ಇಲ್ಲಿಯೇ ಬಂದಿರುವಳೆಂದು ತಿಳಿದು ಒಡನೆಯೆ ಕೆಳಕ್ಕಿಳಿದು ಬಂದು ಅಲ್ಲಿ ನಾಗವಲ್ಲಿ ಇದ್ದುದನ್ನು ನೋಡಿ ಬಹು ಸಂತೋಷಪಟ್ಟನು.
ಆಗ ನಾಗರಾಜನು ತಾನು ಕಾಡಿನಲ್ಲಿ ಕಾದಿದ್ದುದು, ತರುವಾಯ ನಾಗಕನ್ನೆಯ ವಶವಾದುದು, ಅವಳು ಮದುವೆಯಾಗಬೇಕೆಂದು ಬಲತ್ಕಾರಿಸಿದುದು, ಅದಕ್ಕಾಗಿ ತಾನು ಯೋಚಿಸುತಿದ್ದುದು, ಇವೇ ಮುಂತಾದ ತನ್ನ ವೃತ್ತಾಂತವನ್ನೆಲ್ಲಾ ಹೇಳಿ ನಾಗವಲ್ಲಿಯನ್ನು ಸಮಾಧಾನಪಡಿಸಿದನು.'ನಾಗರಾಜ! ನಾವಿನ್ನು ಇಲ್ಲಿರುವುದು ಸರಿಯಲ್ಲ, ನನ್ನಲ್ಲಿ ಆ ಖುಷಿಯು ಆಶೀರ್ವದಿಸಿ ಕೊಟ್ಟಿರುವ ಒಂದು ಪದಾರ್ಥವಿರುವುದು. ಅದನ್ನು ಈಗ ಉಪಯೋಗಿಸಬಹುದು ಎಂದು ತನ್ನಲ್ಲಿದ್ದ ಒಂದು ಸಣ್ಣ ಪೆಟ್ಟಿಗೆಯನ್ನು ತೆಗೆದಳು. ಅದರಲ್ಲಿ ಒಂದು ವಿಧವಾದ ಸಿದ್ಧರಸವು ಇದ್ದಿತು. ಆದನ್ನು ನಾಗರಾಜಕುಮಾರ ನಾಗವಲ್ಲಿಯರು ಕಾಲಿಗೆ ಹಚ್ಚಿ ಕೊಂಡರು. ಆ ರಸವು ಇವರಿಗೆ ಗಂಧರ್ವರ೦ತೆ ಆಕಾಶದಲ್ಲಿ ಸಂಚಾರಮಾಡುವ ಶಕ್ತಿಯನ್ನು ಕೊಟ್ಟಿತು. ಅಲ್ಲಿಂದ ಇಬ್ಬರೂ ಹೊರಟು ಬರುತ್ತಿರುವಾಗ ದಾರಿಯಲ್ಲಿ ಆ ಖುಷಿಯ ಪಣ೯ಶಾಲೆ ಸಿಕ್ಕಿತು. ಅಲ್ಲಿಳಿದು, ಋಷಿಗೆ ಇಬ್ಬರೂ ನಮಸ್ಕರಿಸಿದರು. ನಾಗವಲ್ಲಿಯು ನಡೆದುದನ್ನೆಲ್ಲಾ ಖುಷಿಗೆ ತಿಳಿಸಿದಳು. ಋಷಿಯು ೧೪
ನಾಗವಲ್ಲಿಯ ಸಾಹಸಕ್ಕೆ ಮೆಚ್ಚಿ ಆಶೀರ್ವದಿಸಿ, ಅವರಿಬ್ಬರನ್ನೂ ನಕುಲ ರಾಯನಲ್ಲಿಗೆ ಕಳುಹಿಸಿಕೊಟ್ಟನು. ಅಲ್ಲಿ ನಾಗರಾಜಕುಮಾರ ನಾಗವಲ್ಲಿಯರಿಗೆ ಮದುವೆಯು ಬಹು ಸಂಭ್ರಮದಿಂದ ನೆರವೇರಿತು.
೧೦. ಕಾಗೆಯೂ ಗುಬ್ಬಿಯೂ.
ಒಂದು ದಿನ ಬೆಳಿಗ್ಗೆ ಒಂದು ಬಾವಿಯ ಕಟ್ಟೆಯ ಮೇಲೆ ಒಂದು ಗುಬ್ಬಿಯು ಕುಳಿತುಕೊಂಡು ತನ್ನ ಗರಿಯನ್ನು ಸರಿಮಾಡಿಕೊಳ್ಳುತಿದ್ದಿತು. ಆಗ ಒಂದು ಕಾಗೆಯು ಎಲ್ಲಿಂದಲೋ ಹಾರಿ ಬಂದು ಅಲ್ಲಿಯೇ ಕುಳಿತು, ತನ್ನ ಕೊಕ್ಕನ್ನು ಮಸೆಯುತ್ತಾ ಹಾಗೆಯೇ ಸ್ವಲ್ಪ ತನ್ನ ಕತ್ತನ್ನು ಸೊಟ್ಟ ಮಾಡಿಕೊಂಡು, ರೆಕ್ಕೆಯನ್ನು ನೋಡಿಕೊಳ್ಳುತಿದ್ದಿತು. ಆಗ ಗುಬ್ಬಿಯು ಕಾಗೆಯನ್ನು ನೋಡಿ- ಏನೇ, ಕಾಗಕ್ಕ ! ನಿನ್ನ ಗರಿ ಏನು ಚೆನ್ನಾಗಿದೆ ಎಂದು ನೋಡಿಕೊಳ್ಳುತ್ತೀಯೆ ? ಹೇಳು -ಎಂದಿತು.
ಇದನ್ನು ಕೇಳಿ ಕಾಗೆಯು- ನಿನ್ನದೇನು ಚೆನ್ನಾಗಿದೆ ಹೇಳು?ಎಂದಿತು. ಗುಬ್ಬಿಯು-ನನ್ನ ಗರಿಯೆ ! ನಿನ್ನ ಗರಿಯ ಬಣ್ಣ ಸೊಗಸಾಗಿದೆ- ಎಂದಿತು. ಕಾಗೆಯು-ನನ್ನ ಗರಿಯ ಬಣ್ಣವೇ ಸೊಗಸು-ಎಂದಿತು. ಹೀಗೆ ಕಾಗೆಯೂ ಗುಬ್ಬಿಯ ಬಹಳ ಹೊತ್ತು ಜಗಳವಾಡುತ್ತಿದ್ದುವು.
ಕೊನೆಗೆ ಕಾಗೆಯು-ಎಲೆ, ಗುಬ್ಬಕ್ಕ ! ನೀನು ಸಾವಿರ ಹೇಳಿಕೆ" ನನಗೇನು ! ಇರುವುದನ್ನು ಹೇಳುತ್ತೇನೆ, ಕೇಳು, ಬಿಸಿಲು ಕಾಲಕ್ಕೆ ನಿನ್ನ ಗರಿ ತಡೆದರೂ ತಡೆಯಬಹುದು. ಚಳಿಗಾಲ ಬಂದರೆ, ನೀನು ನಡುಗುತ್ತ ಕೂತಿರುವುದೇ, ನಾನು ಹಾರಾಡುತಿರುವುದೇ ? ಎ೦ದು ಭರನೆ ಹಾರಿ ಹೆಯಿತು. ಒಬ್ಬ ದೊರೆಯು ಒಂದು ದಿನ ಬೇಟೆಗಾಗಿ ಬಹುಮಂದಿಯೊಡನೆ ಒಂದು ಕಾಡಿಗೆ ಹೊರಟನು. ಕಾಡಿನಲ್ಲಿ ಇಬ್ಬರು ಮಾತ್ರ ಒಂದು ಜಿಂಕೆ ಯನ್ನು ಅಟ್ಟಿಕೊಂಡು ಮುಂದೆ ಮುಂದೆ ಹೋದರು, ಜಿಂಕೆಯು ಸಿಕ್ಕ ಲಿಲ್ಲ. ಆಗ ಅವರವರಿಗೆ ಜಗಳಬಂದು, ಒಬ್ಬನು ತನ್ನ ಜತೆಗಾರನನ್ನು ಹೊಡೆದು ಕೊಂದು ಹಿಂದಿರುಗಿ ಬಂದು ಗುಂಪನ್ನು ಸೇರಿದನು.
ಸತ್ತವನ ನಾಯಿ ಮಾತ್ರ ತನ್ನ ಯಜಮಾನನ ಹೆಣದ ಬಳಿಯಲ್ಲಿಯೇ ಕಾದಿದ್ದಿತು. ಮಾರನೆಯ ದಿನ, ಒಂದು ಕಾಡುಹಂದಿಯನ್ನು ಅಟ್ಟಿಕೊಂಡು ದೊರೆಯೇ ಆ ಮಾರ್ಗವಾಗಿ ಬಂದನು. ಅಲ್ಲಿ ಬಿದ್ದಿದ್ದ ಹೆಣವನ್ನು ನೋಡಿ ತನ್ನ ಕಡೆಯವನೆಂದು ತಿಳಿದು, ಒಪ್ಪಮಾಡಿಸಿ, ಆ ನಾಯಿಯನ್ನು ಕರೆದುಕೊಂಡು ಹಿಂದಿರುಗಿದನು.
ಅವನು ಸತ್ತ ಬಗೆಯನ್ನು ತನ್ನ ಪಾಳಯದಲ್ಲಿ ದೊರೆಯು ವಿಚಾರಿಸಲು ಯಾರೂ ಹೇಳಲಿಲ್ಲ. ಕೊಂದವನು ತಲೆ ಮರೆಸಿಕೊಂಡು ಇದ್ದನು. ಕೆಲವು ದಿನಗಳಾದುವು. ದೊರೆಯ ಬಳಿಯಲ್ಲಿಯೇ ಈ ನಾಯಿ ಇದ್ದಿತು. ಒಂದು ದಿನ ತನ್ನ ಯಜಮಾನನನ್ನು ಕೊಂದವನು ದೊರೆಯ ಹತ್ತಿರಕ್ಕೆ ಒಂದು ಕೆಲಸಕ್ಕಾಗಿ ಬರಲು, ನಾಯಿಯು ಅವನಮೇಲೆ ಬಿದ್ದಿತು ; ದೊರೆಯು ಆಗ ಅವನನ್ನು ಹಿಡಿಸಿ ಬೆದರಿಸಲು, ಅವನು ನಡೆದುದನ್ನೆಲ್ಲಾ ನಿಜವಾಗಿ ಹೇಳಿಬಿಟ್ಟನು. ಬಳಿಕ ದೊರೆಯು ಅವನಿಗೆ ಶಿಕ್ಷೆಮಾಡಿದನು.
ಒಂದು ದೊಡ್ಡ ಬೆಟ್ಟದಲ್ಲಿ ಹತ್ತಿರ ಹತ್ತಿರ ಎರಡು ನದಿಗಳು ಹುಟ್ಟಿ ಹರಿಯಲಿಕ್ಕೆ ಮೊದಲಾದುವು.
ಒಂದು ನದಿಯು ಬಹಳ ಎತ್ತರವಾದ ಸ್ಥಳದಲ್ಲಿ ಹುಟ್ಟಿತಾದುದರಿಂದ ಗುಡ್ಡದಿಂದ ಗುಡ್ಡಕ್ಕೆ ಬಿದ್ದು, ಧಡಧಡನೆ ಹರಿಯುತಿದ್ದಿತು.ಇನ್ನೊಂದು ಸ್ವಲ್ಪ ಕೆಳಗಡೆ ಸಮನಾದ ಸ್ಥಳದಲ್ಲಿ ಹುಟ್ಟಿತಾದುದರಿಂದ ಅಲ್ಲಲ್ಲಿ ನಿಂತು ಮೆಲ್ಲಮೆಲ್ಲನೆ ಹರಿಯುತಿದ್ದಿತು.
ಸರಸರನೆ ಹರಿದು ಹೋಗುತ್ತಿದ್ದ ನದಿಯು, ಇನ್ನೊಂದನ್ನು ನೋಡಿ 'ಏನು ! ಸೋಮಾರಿಯಂತೆ ತೆವಳಿಕೊಂಡು ಮೆಲ್ಲಗೆ ಹೋಗುತಿದ್ದೀಯೆ ? ನನ್ನನ್ನು ನೋಡು ! ಇನ್ನು ಸ್ವಲ್ಪದೂರ ಹೀಗೆ ಹೋಗಿ ದೊಡ್ಡ ಹೊಳೆಯಾಗಿ ಹರಿದು, ಅನೇಕ ದೇಶಗಳಲ್ಲಿ ಪ್ರವಹಿಸಿ, ಕಾಲುವೆಗಳನ್ನು ಕೊಟ್ಟು ರೈತರಿಗೆ ಬೇಕಾದುದನ್ನೆಲ್ಲಾ ಬೆಳೆಯಲೂ ಸಹಾಯವಾಗಿ, ಅನೇಕ ಸಣ್ಯ ಸಣ್ಣ ನದಿಗಳೊಡನೆ ಕೂಡಿ ಸಮುದ್ರವನ್ನು ಸೇರುವೆನು ' ಎಂದು ಹರಿದು ಮುಂದೆ ಮುಂದೆ ಹೋಗುತಿದ್ದಿತು.
ಮೆಲ್ಲಗೆ ಹರಿಯುತಿದ್ದ ನದಿಯು ಯಾವ ಉತ್ತರವನ್ನು ಕೊಡದೆ ತನ್ನ ಪಾಡಿಗೆ ತಾನು ಮೆಲ್ಲನೆ ಹರಿದು ಬಯಲಿಗೆ ಬೀಳಲು, ಇತರ ಸಣ್ಣ ಸಣ್ಣ ನದಿಗಳು ಬಂದು ಇದರೊಡನೆ ಸೇರಿದುವು. ಆಗ ಇದು ದೊಡ್ಡ ಹೊಳೆಯಾಗಿ, ಜನರಿಗೆ ಬಹು ಉಪಯೋಗವಾಗಿ, ಗಂಭೀರವಾಗಿ ಹರಿಯುತಿದ್ವಿತು. ಮೊದಲುಡಂಭವನ್ನು ಮಾಡಿಕೊಂಡು ಮುಂದಾಗಿ ಬಂದ ನದಿಯೂ ಸ್ವಲ್ಪದೂರದಲ್ಲಿಯೇ ಇದನ್ನು ಸೇರಿ, ಇದರ ಮೇಲೆ ಹೋಗುತಿದ್ದ ಹಡಗುಗಳನ್ನೂ ಇದಕ್ಕೆ ಕಟ್ಟಿದ್ದ ಅಣೆಕಟ್ಟು ಸೇತುಗಳನ್ನೂ ನೋಡಿ ನಾಚಿಕೊಂಡು ಈ ದೊಡ್ಡ ಹೊಳೆಯಲ್ಲಿಯೆ ಅಡಗಿಹೋಯಿತು.
ಒಂದು ಕಾಡಿನ ಹತ್ತಿರ ಒಂದು ಸಣ್ಣ ಊರು ಇದ್ದಿತು. ಆ ಊರಿನ ದನಗಳನ್ನು ಅಟ್ಟಿ ಕೊಂಡು ಸವಿಾಪವಾಗಿದ್ದ ಒಂದು ಹುಲ್ಲುಗಾವಲಿಗೆ ಒಬ್ಬ ಹುಡುಗನು ಪ್ರತಿದಿನವೂ ಹೋಗುತಿದ್ದನು.
ಒಂದು ದಿವಸ ಸಾಯಂಕಾಲದ ಹೊತ್ತಿನಲ್ಲಿ ಆ ಹುಡುಗನು ಊರ ಬಿಳಿಗೆ ಬಂದು 'ಓ ಹುಲಿ ಬಂದಿತು ; ಬಂದಿತೋ ; ಎಂದು ಬಿಡದೆ
ಗಟ್ಟಿಯಾಗಿ ಅರಚಿಕೊಂಡನು.ಊರಜನರು ಅವನ ಕೂಗನ್ನು ಕೇಳಿ ಮಾಡುತ್ತಿದ್ದ ಕೆಲಸವನ್ನು ಹಾಗೆಯೇ ಬಿಟ್ಟು, ಈಟಿದೊಣ್ಣೆಗಳನ್ನು ತೆಗೆದುಕೊಂಡು ಅಲ್ಲಿಗೆ ಓಡಿಬಂದರು.ಜನರು ಬೇಗ ಬೇಗ ಬರುವುದನ್ನು ನೋಡಿ ಆ ಹುಡುಗನು ನಗುತ ನಿಂತನು. ಜನರೆಲ್ಲರೂ ಅವನನ್ನು ಬೈಯ್ಯುತ್ತಾ ಹಿಂದಿರುಗಿದರು.
ಇನ್ನೊಂದು ದಿನ ಸಂಜೆಯಲ್ಲಿ ನಿಜವಾಗಿಯೂ ಹುಲಿಬಂದಿತು.
ಅದೇ ಹುಡುಗನು ಆ ಹೊತ್ತೂ ಒಂದೇ ಉಸಿರಿನಲ್ಲಿ ಗಟ್ಟಿಯಾಗಿ ಕಿರಿಚಿಕೊಂಡನು. ಊರ ಜನರೆಲ್ಲರೂ ಕೇಳಿದರು. ಆದರೂ ಅದು ಸುಳ್ಳಿರಬಹುದೆಂದು ಯಾರೂ ಅತ್ತಲಾಗಿ ಹೋಗಲೇ ಇಲ್ಲ. ಹುಲಿಯು ಬಂದು ಅವನ ಹಸುವನ್ನು ಎತ್ತಿಕೊಂಡು ಹೊರಟೇಹೋಯಿತು.
೧೪. ಚಿಕ್ಕ ದೇವರಾಜವೊಡೆಯರು.
ನಮ್ಮ ಈ ಮಹಿಸೂರು ಸಂಸ್ಥಾನವನ್ನು ಹಿಂದೆ ಮಹಾಶೂರರಾದ ಅನೇಕ ರಾಜರುಗಳು ಆಳಿರುವರು. ಅವರಲ್ಲಿ ಚಿಕ್ಕದೇವರಾಜ ಒಡೆಯರೆಂಬವರೊಬ್ಬರು. ಇವರು ಬಹು ಸಮರ್ಥರು. ಇವರ ಕಾಲದಲ್ಲಿಯೇ ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಮದ್ದಗಿರಿ ಇವು ಮಹಿಸೂರು ಸಂಸ್ಥಾನಕ್ಕೆ ಸೇರಿದುವು. ಊರಿಂದೂರಿಗೆ ಕಾಗದ ಪತ್ರಗಳನ್ನು ಸಾಗಿಸುವ ಅಂಚೆ (ಪೋಸ್ಟ್) ಕಛೇರಿಯನ್ನು ಏರ್ಪಡಿಸಿದವರೂ ಇವರೇ. ರಾತ್ರಿ ವೇಳೆ ಕಳ್ಳರು ಕಾಕರು ಪ್ರಜೆಗಳಿಗೆ ಹಿಂಸೆಕೊಡದಂತೆ ನೋಡಿಕೊಳ್ಳಲು,ಕೊತ್ವಾಲ, ಕಳ್ಳಭಂಟ, ದಂಡಿ ಮುಂತಾದವರನ್ನು ಇವರೇ ಮೊದಲು ಗೊತ್ತು ಮಾಡಿದವರು. ರೈತರೆಲ್ಲರೂ ಕ್ರಮವಾಗಿ ತಾವು ಬೆಳೆದ ಬೆಳೆಯಲ್ಲಿ ಒಂದು ಪಾಲನ್ನು ಸರಕಾರಕ್ಕೆ ಕೊಡಬೇಕೆಂದು ಕಟ್ಟು ಮಾಡಿದವರೂ ಇವರೇ. ಹೀಗೆ ಕಟ್ಟು ಮಾಡಲು, "ಕಾಡು ಭೂಮಿಯನ್ನು ಬಸವಣ್ಣ ಉಳುತ್ತಾನೆ, ದೇವೇಂದ್ರ ಮಳೆಯನ್ನು ಕರೆಯುತ್ತಾನೆ; ನಾವು ಕಷ್ಟಪಟ್ಟು ಬೆಳೆಮಾಡಿ ದೊರೆಗೇಕೆ
ಕೊಡಬೇಕು ?” ಎಂದು ಕೆಲವು ಮಂದಿ ಪುಂಡು ಜನರು ಕೂಗಲಿಕ್ಕೆ ಆರಂ ಭಿಸಿದರು. ದೊರೆಗಳು ಇ೦ತಹವರನ್ನೆಲ್ಲಾ ಅಡಗಿಸಿದರು. ಹೀಗೆ ಪುಂಡರನ್ನು ಅಡಗಿಸಿ ಒಳ್ಳೆಯವರನ್ನು ಕಾಪಾಡಿ, ಕಳ್ಳರುಕಾಕರಿಗೆ ಆಸ್ಪದ ಕೊಡದೆ ಈ ದೇಶವನ್ನು ಧದಿಂದ ಆಳುತ್ತಿದ್ದರು. ಆಗ ದೇಶದಲ್ಲಿ ಎಲ್ಲೆಲ್ಲಿ ನೋಡಿದರೂ ಸುಭಿಕ್ಷವು ನೆಲೆಗೊಂಡಿತು. ಹೀಗಿರಲು, ಮಹಿಸೂರ ಸಂಸ್ಥಾನದಲ್ಲಿ ಬಹಳವಾಗಿ ಹಣ ಸಿಕ್ಕುವು ದೆಂದು, ಕೊಳ್ಳೆ ಹೊಡೆವದರಲ್ಲಿ ನಿಪ್ಪಣರಾದ ಮರಾಟೆಯವರು ಒಂದು ದೊಡ್ಡ ದಂಡನ್ನು ತೆಗೆದುಕೊಂಡು ಬಂದು ಶ್ರೀರಂಗಪಟ್ಟಣದ ಬಳಿಯಲ್ಲಿ ಇಳಿದರು. ಆಗ ಪಟ್ಟಣದಲ್ಲಿ ಮಹಿಸೂರು ಸೈನ್ಯವಿರಲಿಲ್ಲ. ಶ್ರೀರಂಗಪಟ್ಟ ಣವು ಮರಾಟಿಯವರ ಕೊಳ್ಳೆಗೆ ತುತ್ತಾಯಿತು. ಅಷ್ಟರಲ್ಲಿಯೆ ಮಹಾ ರಾಜರ ಸೈನ್ಯವೊಂದು ಬಂದು ಬಹು ಉಪಾಯದಿಂದ ಮರಾಟೆಯವ ರನ್ನು ಓಡಿಸಿ ಶ್ರೀರಂಗಪಟ್ಟಣವನ್ನು ಕಾಪಾಡಿತು. - ಮಹಿಸೂರಿನ ದಳವಾಯಿಯು ಆಗ ಮಾಡಿದ ಉಪಾಯವನ್ನು ಹೇಳುವೆನು ಕೇಳಿ:- ಶ್ರೀರಂಗಪಟ್ಟಣಕ್ಕೂ ಮಹಿಸೂರ ಸೈನ್ಯಕ್ಕೂ, ಮದ್ದೇ ಮರಾಟಿ ಸೈನ್ಯವು ಇಳಿದಿದ್ದಿತು.ರಾತ್ರಿಯಾಗುವವರೆಗೂ ದಳವಾಯಿಯು ಸುಮ್ಮನಿದ್ದು ಮಧ್ಯರಾತ್ರಿಯಲ್ಲಿ ಎತ್ತಿನ ಕೊಂಬುಗಳಿಗೆ ಸ೦ಜುಗಳನ್ನು ಕಟ್ಟಿಸಿ ದೀಪವನ್ನು ಹಚ್ಚಿಸಿ, ಮರಾಟೆಯವರ ಮೇಲೆ ಹೊರಡಿಸಿದನು. ಮರಾಟಿಯವರು, ದೀವಟಿಗೆಗಳು ಬರುತ್ತಿದ್ದ ದಿಕ್ಕಿನಿಂದ ಮೈಸೂರ ಸೈನ್ಯವು ಬರುತ್ತಿರುವುದೆಂದು ಇದಿರು ನೋಡುತ್ತಿರಲು, ದಳವಾಯಿಯು ಸುತ್ತಿ ಕೊಂಡು ಬಂದು ಹಿಂದುಗಡೆಯಿಂದ ಮರಾಟೆಯವರ ಮೇಲೆ ಬಿದ್ದು, ಅವ ರನ್ನು ದಿಕ್ಕಾಪಾಲಾಗಿ ಓಡಿಸಿದನು, ಮರಾಟಿಯವರು ಚದರಿಹೋದರು. ಶ್ರೀರಂಗಪಟ್ಟಣವ ಉಳಿಯಿತು. ಈ ಚಿಕ್ಕದೇವರಾಜ ಒಡೆಯರವರು ಪ್ರತಿದಿನವೂ ಬೊಕ್ಕಸಕ್ಕೆ ಎರಡು ಸಾವಿರ ವರಹಗಳು ಬಂದಲ್ಲದೆ ಊಟಮಾಡುತ್ತಿರಲಿಲ್ಲ. ಹೀಗೆ ಇವರು ಬಹಳ ಹಣವನ್ನು ಸೇರಿಸಿದ್ದುದರಿಂದ ಇವರನ್ನು ' ನವಕೋಟಿ ನಾರಾಯಣ' ಎಂದು ಜನರು ಕರೆಯುತಿದ್ದರು.
೧೯
ಇವರ ಸಾಹಸಕ್ಕೂ ಆಳುವಿಕೆಗೂ ಮೆಚ್ಚಿ ದೆಹಲೀ ಚಕ್ರವರ್ತಿಯು ಇವರಿಗೆ 'ರಾಜಾ ಜಗದೇಕ್ ' ಎಂಬ ಬಿರುದನ್ನು ಕೊಟ್ಟನಲ್ಲದೆ, ನಗಾರಿ ನವಪತ್ತು ಮರ್ಯಾದೆ ಗಳನ್ನೂ ಜಂತದ ಒಂದು ಸಿಂಹಾಸನವನ್ನೂ ಕಳುಹಿಸಿ ಕೊಟ್ಟನು ಇವರು ಬಹುಕಾಲ ಸುಖವಾಗಿ ಮಹಿಸೂರರಾಜ್ಯವನ್ನಾಳಿದರು.
೧೫, ಬಕಾಸುರನ ಕಥೆ.
೨೦
ಒಂದು ದಿನದ ಸರದಿ ಒಬ್ಬ ಮುದುಕಿಯದಾಗಿದ್ದಿತು. ಆ ಮುದು ಕಿಗೆ ಒಬ್ಬನೇ ಒಬ್ಬ ಮಗನಿದ್ದನು, ಅವನಲ್ಲದೆ ಮತ್ತಾರೂ ಇರಲಿಲ್ಲ' ತಾನೇ ಹೋಗಿ ರಾಕ್ಷಸನಿಗೆ ತುತ್ತಾಗುವುದು ಎಂದರೆ, ಬಕನು ಮುದುಕಿ ಯರನ್ನೂ ಮಕ್ಕಳನ್ನೂ ಮುಟ್ಟುತಿರಲಿಲ್ಲ. ಮುಖ್ಯವೇನು ? ಅವರನ್ನು ತಿಂದರೆ ಅವನ ಹೊಟ್ಟೆ ತುಂಬುತ್ತಿರಲಿಲ್ಲ: ಮಗನನ್ನು ಕಳುಹಿಸಲು ಮುದುಕಿಗೆ ಮನಸ್ಸಿಲ್ಲ. ಅವಳು ಗೊಳೋ ಎಂದು ಅಳುತ್ತಿದ್ದಳು, ಊರು ಜನರು, ಮಗನನ್ನು ಅಟ್ಟಿಬಿಡಬೇಕು, ಇಲ್ಲದಿದ್ದರೆ ಊರು ಹಾಳಾಗುವುದು ಎಂದು ಮುದುಕಿಯನ್ನು ಬಲಾತ್ಕರಿಸುತಿದ್ದರು.
ಆ ಸಮಯಕ್ಕೆ ಸರಿಯಾಗಿ ಪಂಚ ಪಾಂಡವರಾದ ಧರ್ಮರಾಜ, ಭೀಮ, ಅರ್ಜುನ, ನಕುಲ, ಸಹದೇವ ಇವರು ತಾಯಿಯಾದ ಕುಂತೀ ದೇವಿಯೊಡನೆ ಬಂದು ಅಲ್ಲಿದ್ದರು. ಆಗ ಆ ಮುದುಕಿಯ ರೋದನವನ್ನು ಕೇಳಿ ಭೀಮನು, “ಅಮ್ಮಾ, ನಾನು ಹೋಗುವೆನು, ನಮ್ಮ ತಾಯಿಗೆ ನಾನ ಲ್ಲದೆ ಇನ್ನೂ ನಾಲ್ಕು ಮಂದಿ ಮಕ್ಕಳಿರುವರು. ನಾನು ಸತ್ತರೂ ಚಿಂತೆ ಯಿಲ್ಲ, ನೀನು ಎಲ್ಲವನ್ನೂ ಸಿದ್ಧಪಡಿಸು, ನಾನು ಹೋಗಿಬರುವೆನು' ಎಂದನು. ಮಗನ ಸಾಮರ್ಥ್ಯವನ್ನು ತಿಳಿದಿದ್ದ ಕುಂತಿಯು ಭೀಮನು ಬಕಾಸುರನಿಗೆ ತುತ್ತಾಗಿ ಹೋಗುವುದಕ್ಕೆ ಸಮ್ಮತಿಸಿದಳು. ನಾನಾ ವಿಧ ವಾದ ಹುಳಿಯನ್ನ, ಮೊಸರನ್ನ ಇವೆಲ್ಲಾ ಸಿದ್ಧವಾದುವ; ಕಡುಬು ಕಜ್ಜಾ ಯ ಇವೂ ಒದುಗಿದವ, ಪಾನಕ, ನೀರುಮಜ್ಜಿಗೆ ಇವೂ ಅಣಿಯಾದುವು. ಭಂಡಿಗಳು ಸಿದ್ದವಾದುವು. ಭೀಮನೂ ಹೊರಟನು.
ಹೋಗು ಹೋಗುತ ಹಸಿದಿದ್ದ ಭೀಮನು ಒಂದೊಂದುಬಗೆಯಅನ್ನವನ್ನಾಗಿ ತಿಂದು ಮುಗಿಸಿ, ಕಡುಬು ಕಜ್ಜಾಯಗಳನ್ನು ನಿಧಾನವಾಗಿ ಮೆದ್ದು, ಗಟ ಗಟನೆ ಪಾನಕ ನೀರುಮಜ್ಜಿಗೆಗಳನ್ನು ಕುಡಿದು ತೃಪ್ತನಾಗುವ ಹೊತ್ತಿಗೆ ಮಧ್ಯಾಹ್ನವಾಗಿ ಹೋಯಿತು. ಬಕಾಸುರನಿಗೆ, ಆಹಾರವು ಅಂದು ಅಷ್ಟು ಹೊತ್ತಾದರೂ ಬರಲಿಲ್ಲವೆಂದು, ಬಹು ಕೋಪಬಂದಿತು. ಹಸಿವಿನಿಂದ ಕೋಪವು ಅತಿಯಾಗಿ, ಅವನು ಭೂಮಿಯನ್ನು ಅಪ್ಪಳಿಸುತ್ತಿದ್ದನು. ಅಷ್ಟುಹೊತ್ತಿಗೆ ಭಂಡಿಗಳು ನಿಧಾನವಾಗಿ ಬರುತ್ತಿದ್ದುದನ್ನು ನೋಡಿ ಒಂದುಸಲ ಗರ್ಜನಮಾ ಡಿದನು. ಆ ಗರ್ಜನೆಗೆ ಭೀಮನು ಹೆದರಲಿಲ್ಲ, ಭೀಮನು ತಿಂದು ಹೊ
೨೧
ಟ್ಟೆಯನ್ನು ಸವರಿಕೊಳ್ಳುತಿದ್ದನು. ಇದನ್ನು ಬಕಾಸುರನು ಕಂಡು,'ಎಲಾ! ಎಲಾ! ನರಾಧಮ,ನಿನ್ನನ್ನು ಮೊದಲು ತಿಂದು, ಆಮೇಲೆ, ಊಟ ಮಾಡುವೆನು. ತರುವಾಯ ಇಷ್ಟು ಸಾವಕಾಶಮಾಡಿದುದಕ್ಕಾಗಿ ಈ ಪಟ್ಟಣವನ್ನೇ ಸುಟ್ಟುಬಿಡುವೆನು,'ಎಂದು ಆರ್ಭಟಿಸಿ,ಭೀಮನನ್ನು ಭಂಡಿಯಿಂದ ಈಚೆಗೆ ಸೆಳೆಯ ಹೋದನು.ಭೀಮನು ಅಲ್ಲಾಡಲಿಲ್ಲ, ಆಗ ಬಕನಿಗೆ ಇನ್ನೂ ಕೋಪ ಹೆಚ್ಚಿ ಭಂಡಿಯನ್ನು ಒಡೆದು ಪುಡಿ ಪುಡಿಮಾಡಿದನು.ಭೀಮನು ಮೆಲ್ಲನೆ ಈಚೆಗೆ ಬಂದು ನಿಂತನು.ಆಗ ಇಬ್ಬರಿಗೂ ಭಯಂಕರವಾದ ಹೊಡೆದಾಟವ್ರ ಆರಂಭವಾಯಿತು, ಒಂದೊಂದಾವೃತ್ತಿ ಭೂಮಿಯನ್ನು ತುಳಿದರೆ ಭೂಮಿಯಲ್ಲಾ ನಡುಗಿಹೋಗುತಿದ್ದಿತು.ಅದೇನೋ ಅನರ್ಥ ನಡೆಯುತ್ತಿದೆ ಎಂದು ದೂರದಲ್ಲಿದ್ದ ಏಕಚಕ್ರನಗರಿಯ ಜನರೆಲ್ಲ ಮನೆಯಲ್ಲಿಯೇ ಅಡಗಿಕೊಂಡಿದ್ದರು. ಭೀಮ ಬಕರ ಹೋರಾಟವು ಹೆಚ್ಚಿ ಭೀಮನಿಗೆ ಬಕನು ಒಂದು ಗುದ್ದನ್ನು ಗುದ್ದಿದನು. ಭೀಮನು-ಆ8 | ನಾನು ತಿಂದುದೆಲ್ಲ ಜೀರ್ಣಕ್ಕೆ ಬಂದಿತು. ಇನ್ನು ಪಟುವಾಗಿ ಯುದ್ಧ ಮಾಡುವೆನು ಎಂದು ಬಕನೊಡನೆ ಯುದ್ದಮಾಡಿ ಅವನಿಗೆ ಒಂದು ಬಲವಾದ ಗುದ್ದನ್ನು ಹಾಕಿ ಕೆಡವಿ ಅವನ ಪ್ರಾಣವನ್ನೇ ತೆಗೆದನು.ಬಳಿಕ ಬಕನು ಆ ಉದ್ದದಿಂದ ಈ ಉದ್ದದವರೆಗೂ ಕಾಲು ಚಾಚಿಕೊಂಡು ಬಿದ್ದನು.
ಈ ಗದ್ದಲವು ನಿಂತ ಬಹು ಹೊತ್ತಿನಮೇಲೆ ಊರ ಜನರೆಲ್ಲರೂ ಮೆಲ್ಲ ಮೆಲ್ಲನೆ ಅಲ್ಲಲ್ಲಿ ಸುಳಿದಾಡುತ ರಾಕ್ಷಸನು ಬಿದ್ದಿದ್ದು ದನ್ನೂ ಭೀಮನು ಸುಖ ವಾಗಿ ಓಡಾಡುತಿದ್ದುದನ್ನೂ ಕಂಡರು. ತರುವಾಯ ಅವರೆಲ್ಲರೂ ಬಹು ಸಂತೋಷದಿಂದ ಬಂದು ಭೀಮನನ್ನು ಕೊಂಡಾಡಿ- ಅ೦ತಹ ಮಗನನ್ನು ಪಡೆದ ಕುಂತಿಯು ಎಂತಹ ಧನ್ಯಳೊ! ನಮ್ಮ ಪಟ್ಟಣವನ್ನೇ ಉಳುಹಿದನಲ್ಲ! ಎಂದು ಹೊಗಳುತ, ಭೀಮನೊಡನೆ ಸುಖವಾಗಿ ಪಟ್ಟಣಕ್ಕೆ ಹಿಂದಿರುಗಿದರು.
೧೬, ಮಾವಿನಗಿಡ, ಗೊಬ್ಬಳಿಯಗಿಡ.
೨೨
ಇವೇ ಮುಂತಾದ ಒಳ್ಳೆಯ ಹೂವಿನ ಬಳ್ಳಿಗಳೂ, ಗಿಡಗಳೂ; ತೆಂಗು, ಮಾವು, ಹಲಸು, ಕಿತ್ತಿಳೆ, ನಿಂಬೆ, ಬಾಳೆ ಇವೇ ಮುಂತಾದ ಹಣ್ಣಿನ ಗಿಡ ಗಳೂ; ಗಿಳಿ, ನವಿಲು, ಪಾರಿವಾಳ ಇವೇ ಮೊದಲಾದ ಪಕ್ಷಿಗಳೂ ತುಂಬಿದ್ದುವು. ಇ೦ತಹ ಮನೋಹರವಾದ ಉದ್ಯಾನವನದಲ್ಲಿ ಒಂದು ಮಾವಿನ ಮರದ ಬಳಿ ಒಂದೇ ಒಂದು ಗೊಬ್ಬಳಿಯ ಗಿಡವಿತ್ತು, ಆ ಮಾವಿನಮರದಲ್ಲಾದರೂ ಬೇಕಾದಷ್ಟು ಹಣ್ಣುಗಳು ಇದ್ದುವು, ಆ ಹಣ್ಣುಗಳನ್ನು ತೆಗೆದು ತಿನ್ನ ಬೇಕೆಂದು ಬಂದವರ ಕಾಲಿಗೆ, ಆ ಗೊಬ್ಬಳಿಯ ಮರದ ಸುತ್ತಲೂ ಉದಿರಿದ್ದ ಮುಳ್ಳು ಚುಚ್ಚಿಕೊಳ್ಳುತ್ತಿತ್ತು. ಹಣ್ಣು ಸಿಕ್ಕದೆ ಮುಳ್ಳು ಚುಚ್ಚಿದ ವ್ಯಥೆಯಿಂದ ಎಲ್ಲರೂ ಹಿಂದಿರುಗುತ್ತಿದ್ದರು. ಇದನ್ನು ಕಂಡು, ಮಾವಿನ ಮರಕ್ಕೆ ಬಹು ಕೋಪವ್ರಂಟಾಗಿ, ಅದು ಗೊಬ್ಬಳಿಯ ಮರವನ್ನು ಕುರಿತು—ಛೇ ! ಪಾಪಿ! ನೀನಂತೂ ಹಣ್ಣು ಬಿಡುವುದಿಲ್ಲ, ನನ್ನಲ್ಲಿರುವ ಸವಿಯಾದ ಹಣ್ಣನ್ನು ತಿಂದು ಆನಂದಪಡಲು ಬರುವವರನೂ, ನೀನು ಸೇರ ಗೋಡೆಯಲ್ಲ ! ನೀನು, ನನಗೂ ಜನರಿಗೂ ಎಂತಹ ಕಂಟಕನಾಗಿರುವೆ ! ನಿನಗಿಂತಲೂ ಕಂಟಕರಾದವರು ಯಾರಾದರೂ ಉಂಟೆ ? ಈ ಪ್ರಣ್ಯಭೂಮಿಯಲ್ಲಿ ನಿನಗೇನು ಕೆಲಸ ? ನೀನು ಏಕೆ ಬೇಗ ಸಾಯಬಾರದು !- ಎಂದು ಬಹು ಕಠಿನವಾಗಿ ಜರಿಯಿತು
ಅದಕ್ಕೆ ಗೊಬ್ಬಳಯು ಕೋಪಗೊಂಡು 'ಎಲೆ ಮಾವಿನಮರವೇ ! ನಿನಗೇಕೆ ಇಷ್ಟು ಅಹಂಕಾರ ! ನಿನ್ನ ಹಣ್ಣು ಇರುವುದೆಲ್ಲ ಇನ್ನೆಷ್ಟು ದಿನ ! ನಿನ್ನಲ್ಲಿ ಒಂದುವರ್ಷ ಹೆಚ್ಚಾಗಿ ಹಣ್ಣು ಬಿಟ್ಟರೆ ಇನ್ನೊಂದುವರ್ಷ ಎಲೆಯೂ ಕೊಂಬೆಯೂ ಹೆಚ್ಚಾಗಿ ಬಿಡುತ್ತವೆ ! ನೀನೇ ಟೊಳ್ಳು ! ನೀನು ಜನರಿಗೆ ಮಾಡುವ ಅಂತಹ ದೊಡ್ಡ ಉಪಕಾರವೇನು ? 'ನನ್ನ ನೆರಳಲ್ಲಿ ಜನರು ಕೂಡುವರೆಂಬೆಯೋ ?' ಆಗಬಹುದು ಆಗಬಹುದು ! ನಿನ್ನ ಮೇಲೆ ಹರಿ ದಾಡುವ ಕೆಂಜಿಗದ ಕಡಿತವನ್ನು ಕಾಣದ ಬೆಪ್ಪರು ಹಾಗೆ ಕೊಡಬೇಕು ! 'ಗಿಣಿಗಳು! ಕೋಗಿಲೆಗಳು ! ಬಂದು ನನ್ನ ಮೇಲೆ ಕೂಡುವುವು ಎಂಬೆಯೋ?' ಅಹುದು ಅಹುದು ! ನಿನ್ನ ಅಹಂಕಾರವನ್ನು ನೋಡಿ ನಿನ್ನ ಹಣ್ಣನ್ನು ಕಡಿದು ಛಿನ್ನ ಭಿನ್ನ ಮಾಡಲು ಗಿಳಿಗಳು ಬರುವುವು. ಸಾಕಿದವನನ್ನು ಕಚ್ಚಿ ಅಟ್ಟುವ ಕೆಲಸದಲ್ಲಿ ನಿಪುಣತೆಯುಳ್ಳ ಕೋಗಿಲೆಗಳು ನಿನ್ನ ಮರೆ ೨೩
ಬೀಳುವುವು,ಮೋಸಗಾರರಿಗಲ್ಲವೆ ನೀನು ಆಶ್ರಯ? ನನ್ನನ್ನು ನೋಡು!ನನ್ನ ಹೂವನ್ನು ನೋಡು,ಎಷ್ಟು ಸುಗಂಧವುಳ್ಳುದಾಗಿರುವುದು! ನನ್ನಕಾಯನ್ನು ನೋಡು,ಎಷ್ಟು ಉಪಯೋಗವಾಗಿರುವುದು!'ನಿನ್ನ ಮುಳ್ಳನ್ನು ನೋಡು' ಎಂದರೆ ಅಹುದು; ಮುಳ್ಳಿರುವುದು ಕಷ್ಟವು ಬೆರೆಯದ ಸುಖವೆಲ್ಲಿರುವುದು? ಮುಳ್ಳಿಲ್ಲದ ಗುಲಾಬಿ ಎಲ್ಲಿ ನಾನು ಬಹುಗಟ್ಟಿ, ನನ್ನಿಂದ ಬೇಕಾದ ಮುರಮುಟ್ಟುಗಳಾಗುವವ; ನನ್ನನು ಅರಿಯದ ಜನರು ಬೇಗನೆ ಕಡಿದುಹಾಕುವರು. ಆದುದರಿಂದ ದೇವರು ನನ್ನ ರಕ್ಷಣೆಗಾಗಿ ಮುಳ್ಳನ್ನು ಕೊಟ್ಟಿರುವನು. ಈ ಹೊತ್ತಿಗಾಯಿತು, ನಾಳೆಯಿ೦ದ ಇ೦ತಹ ಮಾತನಾಡಬೇಡ ' ಎ೦ದಿತು.
ಇದಕ್ಕೆ ಮಾವಿನಮರವ-“ ನಮ್ಮ ವಂಶಕ್ಕೆ ಮೃತ್ಯುವಾದ ನಿನ್ನೊಡನೆ ನನಗೇನುಮಾತು? ನೀನು ಜನೋಪಕಾರಿ ಎಂದು ಹೇಳಿಕೊಂಡರೆ ಜನರು ನಂಬುವರೆ? ನನ್ನಯೋಗ್ಯತೆಯನ್ನು ಹೊಗಳಲು ಮನುಷ್ಯರಲ್ಲಿ ಶ್ರೇಷ್ಟರಾದ ಕವಿಗಳು ಇರುವರು; ಪಕ್ಷಿಗಳಲ್ಲಿ ಕೋಗಿಲೆಗಳಿರುವುವು; ನೀನು ನನ್ನನ್ನು ಸ್ತೋತ್ರಮಾಡ ಬೇಕೆಂದಿಲ್ಲ, ಕೈಯಲ್ಲಾದರೆ ಪರೋಪಕಾರ ಮಾಡಬೇಕು, ಇಲ್ಲದಿದ್ದರೆ ಉಪಕಾರ ಹೊಂದತಕ್ಕವರಿಗೆ ಕಂಟಕನಾಗಿ ಬಾರದೆ, ತಟಸ್ಥನಾಗಿರಬೇಕು, ನಿನ್ನ ಬಾಳು ಎಂತಹ ಬಾಳು ಹೇಳು" ಎಂದು ಮಾವಿನಮರವು ಸುಮ್ಮನೆ ಆಯಿತು.
———————
೧೭, ಕೋಳಿಯೂ-ರತ್ನವೂ.
ಒಂದು ಹೆಣ್ಣು ಕೋಳಿಯು ತನ್ನ ಮರಿಗಳನ್ನೆಲ್ಲಾ ಜತೆಯಲ್ಲಿ ಕರೆದು ಕೊಂಡು ತಾಸಿದ್ದ ಅಂಗಳದಲ್ಲಿದ್ದ ಕಸ ಕಡ್ಡಿಯನ್ನು ಕಾಲಿನಿಂದ ಕೆದಕುತ್ತಾ ಕೊಕ್ಕಿನಿಂದ ಕುಕ್ಕುತ್ತಾ ಕೊ ಕ್ಕೊ ಎಂದು ಗಂಟಲಲ್ಲಿ ಕೂಗುತ್ತಾ ಅಲ್ಲಲ್ಲಿಯೇ ಸುತ್ತಾಡುತಿದ್ದಾಗ ಆ ಕಸದಲ್ಲಿ ಒಂದು ಕಡ್ಡಿಯ ಕೆಳಗೆ ಥಳಥಳನೆ ಹೊಳೆಯುತ್ತಿದ್ದ ಒಂದಾನೊಂದು ವಸ್ತುವನ್ನು ಕಂಡಿತು.
ಆಗ ಬಹು ಸಡಗರದಿಂದ, ರೆಕ್ಕೆಯನ್ನು ಬಡಿಯುತ್ತಾ ಕತ್ತನ್ನು ಎತ್ತಿ ಕೊ, ಕೆ,ಎಂದು ಗಟ್ಟಿಯಾಗಿ ಕೂಗಿ ಕಿಚ್,ಕಿಚ್,ಕಿಚೆನ್ನುತ ೨೪
೧೮.ಇರುವೆಯೂ- ಚಿಮ್ಮಂಡೆ ಹುಳುವೂ.
ಅಭಿಮನ್ಯುನ ಅರ್ಜುನನ ಮಗನು. ಅರ್ಜುನನು ಪಂಚಪಾಂಡವರೆಂಬ ಐದುಮಂದಿ ಅಣ್ಣ ತಮ್ಮಂದಿರಲ್ಲಿ ಒಬ್ಬನು. ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ, ಇವರೇ ಪಂಚಪಾಂಡವರು. ಇವರಿಗೂ ಇವರಿಗೂ ಇವರ ದಾಯಾದಿಗಳಾದ ರಾಜ್ಯಕ್ಕಾಗಿ ದೊಡ್ಡ ಯುದ್ಧವು ನಡೆಯಿತು. ಆ ಯುದ್ಧದಲ್ಲಿ ಒಂದು ದಿನ ಮಗುವಾದ ಅಭಿಮನ್ಯುವು ತೋರಿಸಿದ ಪರಾ ಕ್ರಮವನ್ನು ಈ ಹೊತ್ತು ಹೇಳುವೆನು ಕೇಳಿ.
ಚತುರನಾದ ನಿಮ್ಮ ತಂದೆಗಲ್ಲದೆ ಇನ್ನಾರಿಗೂ ಸಾಧ್ಯವಲ್ಲಪ್ಪ 1 ರಣಧೀರನಾದ ಭೀಮನಿಗೂ ಆದು ಕಷ್ಟ ವಾಗಿರುವುದು, ನಿನಗೇಕೆ ಇದು, ಕಂದ! ಬೇಡ !? ಎಂದು ಹೇಳಲು, ಅಭಿಮನ್ಯುವ ಕೇಳದೆ, ನನಗೆ ಅಪ್ಪಣೆಯನ್ನು ಕೊಡ ಬೇಕು, ನಾನು ಹೋಗಿ ಬರುವೆನು ' ಎಂದು ಮುಷ್ಕರ ಹಿಡಿದನು, ಆಗ ಧರ್ಮರಾಯನು ಯತ್ನವಿಲ್ಲದೆ ಅಪ್ಪಣೆಯನ್ನು ಕೊಟ್ಟು, ಆಶೀರ್ವದಿಸಿ ಕಳುಹಿಸಲು ಮಕ್ಕಳು ಚೆಂಡಾಡುವದಕ್ಕೆ ಕುಣಿಯುತ್ತಾ ಓಡುವಂತೆ ಅಭಿಮನ್ಯುವ, ಸಂತೋಷದಿಂದ ರಥವನ್ನು ಸಿದ್ಧ ಮಾಡೆಂದು ಹೇಳಿ, ಬಿಲ್ಲು ಬಾಣ ಗಳನ್ನು ತೆಗೆದುಕೊಂಡು ಹೊರಟನು. ಧರ್ಮರಾಯನು ಅವನ ಬೆಂಗಾವಲಿಗೆ ಭೀಮ, ನಕುಲ, ಸಹದೇವರನ್ನು ಕಳುಹಿಸಿದನು.
ಅಭಿಮನ್ಯುವು, ದ್ರೋಣಾಚಾರ್ಯ ಕಟ್ಟಿದ್ದ ಸೈನ್ಯದ ಕೋಟೆಯ ಬಳಿಗೆ ಬಂದು, ಬಾಗಿಲಲ್ಲಿ ಅದ್ಭುತಾಕಾರನಾಗಿ ನಿಂತಿದ್ದ ಸೈಂಧವನನ್ನು ಎರಡು ಬಾಣಗಳಿಂದ ಹೊಡೆದು, ಅವನು ಚೇತರಿಸುವುದರೊಳಗಾಗಿಯೇ ಒಳಕ್ಕೆ ನುಗ್ಗಿದನು, ಅಭಿಮನ್ಯುವಿನ ತರುವಾಯ ಬಂದ ಭೀಮ, ನಕುಲು ಸಹದೇವರಿಗೆ ಒಳಕ್ಕೆ ನುಗ್ಗಲು ಆಗಲಿಲ್ಲ. ಅವರು ಹೊರಗೆ ಬಡಿದಾಡುತಿದ್ದರು. ಬಾಲನಾದ ಅಭಿಮನ್ಯುವಾದರೆ, ಯಾರಿಗೂ ಅಂಜದೆ, ಎಲ್ಲೆಲ್ಲ ನುಗ್ಗುತ, ಒಂದೊಂದು ಬಾಣದಿಂದ ನೂರಾರು ಮಂದಿಯನ್ನು ಕೊಲ್ಲುತ, ಇದಿರಾಗಿ ಬಂದ ದ್ರೋಣಾಶ್ವತಾ ಮರನ್ನು ಧಿಕ್ಕರಿಸಲು, ಅವರು, ಮಗು ಏನು ಮಾಡಾನೆಂದು ಇರುವಲ್ಲಿ, ಸ್ವಲ್ಪ ಕಾಲದಲ್ಲಿಯೇ ಸಾವಿರಾರು ಮಂದಿ ಮಡಿದರು. ಜನರ ಕೋಟೆಯು ಸಡಿಲು ಬಂದಿತು. ಆಗ ಕರ್ಣನು ಬಂದನು, ಮಹಾ ಶೂರನಾದ ಆ ಕರ್ಣನನ್ನು ನಾಲ್ಕಾರು ಬಾಣಗಳಿ೦ದ ಹೊಡೆದು, ಅವನ ಕುದುರೆ, ರಥ, ಧ್ವಜ ಇವೆಲ್ಲವನ್ನೂ ನಾಶಮಾಡಿ ಅಟ್ಟಿದನು. ದೊಣ, ಕೃಪ, ಅಶ್ವತ್ಥಾಮ ಇವರೆಲ್ಲರನ, ಹಸುಳೆಯದ ಅಭಿಮನ್ನು ವಿನಸೆಟ್ಟಿಗೆ ನಿಲ್ಲಲಾರದೆ ಹೋದರು. ಅವರು ರೇಗಿ ರೇಗಿ ಮೇಲೆಬಿದ್ದ ಹಾಗೆಲ್ಲ, ಅಭಿಮನ್ಯುವ ನಗುನಗುತ ಅವರನ್ನು ಅಟ್ಟಿ, ಅವರ ರಥಗಳನ್ನು ಪುಡಿಪುಡಿಮಾಡಿ ಅವರ ಕವಚಗಳನ್ನು ಕತ್ತರಿಸಿ, ಅವರ ಬಿಲ್ಲನ್ನು ಮುರಿದು, ರಣರಂಗದಿಂದ ಅವರನ್ನು ಸಾಗಿಸುತ್ತಿದ್ದನು, ಅಭಿಮನ್ಯುವಿನ ಬಾಣಗಳ ಉರಿಯು ಎಲ್ಲೆಲ್ಲೂ ಸುಡಹತ್ತಿತು. ಆನೆ ಕುದುರೆಗಳು ಆ ಬಾಧೆಯನು ೨೭
ತಡೆಯಲಾರದೆ ಓಡಲಾರಂಭಿಸಿದುವ, ಎಲ್ಲೆಲ್ಲೂ ಕೋಲಾಹಲ, ಜನರ ಗೋಳು, ಶೂರರ ಆರ್ಭಟ, ಅಭಿಮನ್ಯುವಿನ ಹುಂಕಾರ ಧ್ವನಿ ಇವೇ ತುಂಬಿದ್ದುವು.
೨೮
ಒಬ್ಬರನ್ನೂ ಹತ್ತಿರ ಸೇರಿಸದೆ ಇರಲು, ಒಬ್ಬ ವೀರನು ಬಂದು ಮುಷ್ಟಿ ಯುದ್ಧಕ್ಕೆ ಕರೆದನು. ಅದಕ್ಕೂ ಸಿದ್ಧನಾಗಿ ನಿಂತು ಮೊಂಡು ತೋಳುಗಳಿಂದ ಯುದ್ಧವನ್ನು ಮಾಡಿ ಶತ್ರುವನ್ನು ಬಲವಾಗಿ ಹೊಡೆದನು. ಅವನೂ ಒಂದು ಬಲವಾದ ಪೆಟ್ಟನ್ನು ಕೊಡಲು,ಶ್ರಾಂತನಾದ ಅಭಿಮನ್ಯುವು ಅಲ್ಲಿಯೇ ಪ್ರಾಣವನ್ನು ಬಿಟ್ಟನು. ಅವನ ಶತ್ರುವೂ ಅಭಿಮನ್ಯುವಿನ ಏಟಿನಿಂದ ರಕ್ತ ವನ್ನು ಕಾರಿ ಪ್ರಾಣವನ್ನು ಬಿಟ್ಟನು, ಬಾಲಕರಲ್ಲಿ ಶೂರನೆಂದರೆ ಇವನೇ ಅಲ್ಲವೆ ?
೨೦, ಶಿವಾಜಿಮಹಾರಾಜ
ಸುಮಾರು ಇನ್ನೂರ ಐವತ್ತು ವರ್ಷಗಳ ಹಿಂದೆ ಮಹಾರಾಷ್ಟ್ರದೇಶ ವನ್ನು ಶಿವಾಜಿ ಮಹಾರಾಜನು ಆಳುತ್ತಿದ್ದನು. ಇವನು ಷಾಜಿಯ ಮಗನು. ಮಗುವಾಗಿದ್ದಾಗಲೇ ಇವನ ತಂದೆಯು ಇವನನ್ನು ಸಾಕಿ ಸಲುಹುವುದಕ್ಕೆ ತಕ್ಕ' ಏರ್ಪಾಟನ್ನು ಮಾಡಿನೆವು ಎಂಬ ಒಂದು ಪಟ್ಟಣದಲ್ಲಿ ಬಿಟ್ಟಿದ್ದನು. ಅಲ್ಲಿ ಹುಡುಗರ ಗುಂಪಿನಲ್ಲೆಲ್ಲಾ ಶಿವಾಜಿಯೇ ಮುಂದಾಳಾಗಿದ್ದನು. ಯಾವ ಆಟದಲ್ಲಿಯೂ ಶಿವಾಜಿಯೇ ಮುಂದು ; ಇವನು ಯಾವ ಕುದುರೆ ಯನ್ನಾದರೂ ಏರಲು ಶಕ್ತನಾಗಿದ್ದನು. ಗುರಿ ಕಟ್ಟಿ ಹೊಡೆವುದರಲ್ಲಿ ಶಿವಾಜಿಗೆ ಸಮರಾದ ಬಾಲಕರೇ ಆ ಊರಲ್ಲಿರಲಿಲ್ಲ. ಕತ್ತಿ ಕಠಾರಿಗಳನ್ನು ತಿರುಗಿಸುವುದರಲ್ಲಿ ಶಿವಾಜಿಯು ನಿಪ್ರಣನಾಗಿದ್ದನು. ಇವನಿಗೆ ರಾಮಾಯಣ ಮಹಾಭಾರತಗಳನ್ನು ಕೇಳುವುದರಲ್ಲಿ ಬಹು ಆದರ. ಆ ಪುರಾಣಗಳಲ್ಲಿ ಪ್ರಸಿದ್ಧಿಗೊಂಡ ಶೂರರಂತೆ ತಾನೂ ಹೆಸರುವಾಸಿಯಾಗಬೇಕೆಂಬುದು ಶಿವಾಜಿಯ ಆಶೆ. ಅಲ್ಲದೆ ಆಗಿನ ಕಾಲದಲ್ಲಿ ಪ್ರಬಲರಾಗಿದ್ದ ತುರುಕರನ್ನು ಹಿಂದೂ ದೇಶದಿಂದ ಓಡಿಸಿ, ಹಿಂದೂ ರಾಜ್ಯವನ್ನೂ, ಹಿಂದೂಧರ್ಮವನ್ನೂ ಸ್ಥಾಪಿಸ ಬೇಕೆಂಬುದೇ ಶಿವಾಜಿಯ ಸಂಕಲ್ಪ.
ತನಗೆ ಪ್ರಾಯವ ಬರಲು, ಶಿವಾಜೆಯು ತನ್ನ ಜತೆಗಾರರನ್ನು ಸೇರಿ ಸಿಕೊಂಡು, ಹತ್ತಿರ ಹತ್ತಿರ ಇದ್ದ ಹಳ್ಳಿ ಹಳ್ಳಿಗಳ ಮೇಲೆ ಬಿದ್ದು ಅವನ್ನು ಸ್ವಾಧೀನ ಮಾಡಿಕೊಂಡು, ಮೆಲ್ಲನೆ ಒಂದು ಕೋಟೆಯನ್ನು ಹಿಡಿದು ಅಲ್ಲಿ ೨೯
ಸಿಕ್ಕಿದ ಹಣದಿಂದ ಮದ್ದು ಗುಂಡುಗಳನ್ನು ಕೊಂಡುಕೊಂಡು, ಹೆಚ್ಚು ಹೆಚ್ಚು ಜನರನ್ನು ಸೇರಿಸಿ, ತನ್ನದೇ ಒಂದು ಬಲವಾದ ಕೋಟಿಯನ್ನು ಕಟ್ಟಿ ಪ್ರಬಲನಾದನು. ಇವನ ಹಾವಳಿಯನ್ನು ಕೇಳಿ ಇವನನ್ನು ಅಡಗಿಸ ಬೇಕೆಂದು ಮಗ್ಗುಲ ರಾಜ್ಯದ ತುರುಕರಾಜರು ಎಷ್ಟೋ ಪ್ರಯತ್ನ ಪಟ್ಟರು. ಇವನ ತಂದೆಯನ್ನು ಸೆರೆಯಲ್ಲಿಟ್ಟರು. ಯಾವುದಕ್ಕೂ ಜಗ್ಗಲಿಲ್ಲ. ತಂದೆಯನ್ನು ಬಿಡಿಸಿಕೊಂಡನು. ಕೊನೆಗೆ ಒಂದು ದೊಡ್ಡ ಸೈನ್ಯವನ್ನೂ ಕಳುಹಿಸಿದರು. ಆ ಸೈನ್ಯವ ತನ್ನ ಸೈನ್ಯಕ್ಕಿಂತಲೂ ಒಲವಾಗಿದ್ದುದನ್ನು ನೋಡಿ, ಶಿವಾಜಿಯು ತನಗೆ ಜಯವಾಗಲಾರದೆಂಬ ತಿಳದು, ಉಪಾಯದಲ್ಲಿ ತುರು ಕರ ಸೇನಾಧಿಪತಿಯನ್ನು ಬೇರೆ ಬರುವಂತೆ ಹೇಳಿ ಕಳುಹಿಸಿ ತಾನು ಶರಣಾ ಗತನಾಗುವೆನೆಂದು ತಿಳಿಸಿ, ಅವನು ಒಬ್ಬನೇ ಬಂದಾಗ ಅವನಮೇಲೆ ಬಿದ್ದು ಅವನ ಹೊಟ್ಟೆಯನ್ನು ಬಗಿದು ಕೊಂದು ಶತ್ರುಗಳನ್ನು ಓಡಿಸಿದನು.
ತರುವಾಯ ದೆಹಲಿ ಚಕ್ರವರ್ತಿಯು ಶಿವಾಜಿಯನ್ನು ಅಡಗಿಸಬೇ ಕೆಂದು ಒಂದು ದೊಡ್ಡ ಸೈನ್ಯವನ್ನು ಕಳುಹಿಸಿದನು. ಆ ಸೈನ್ಯದವರು ಬಂದು ಇವನ ಪಟ್ಟಣವಾದ ಪ್ರನೆಯನ್ನು ಆಕ್ರಮಿಸಿಕೊಂಡು, ಇವನ ಮನೆ ಯಲ್ಲಿಯೇ ಅವರ ಸೇನಾಧಿಪತಿಯು ಇಳಿದುಕೊಂಡನು, ಶಿವಾಜಿಯ ಇದನ್ನು ಕೇಳಿ ಮದುವೆಯ ಮೆರೆವಣಿಗೆಯ ಎರೊಂದಿಗೆ ಸೇರಿ ಶತ್ರುಸೇನಾ ಧಿಸತಿಯ ಮನೆಯೊಳಕ್ಕೆ ನುಗ್ಗಿದನು. ಆಗ ಅವನು ಬಹು ಕಷ್ಟದಿಂದ ತಲೆ ತಪ್ಪಿಸಿಕೊಂಡು ಹೋದನು. ಆದರೂ ಅವನ ಕಿರುಬೆರಳು ಕತ್ತರಿಸಿ ಹೋಯಿತು. ಸೇನಾಧಿಪತಿಯು ಹಿಂದಿರುಗಿ ಬರುವುದರಲ್ಲಿ ಶಿವಾಜಿಯು ಮಾಯವಾಗಿದ್ದನು. ಅನಂತರ ಶಿವಾಜಿಯು ದೆಹಲೀ ಚಕ್ರವರ್ತಿಯೊಡನೆ ಸ್ನೇಹವನ್ನು ಬೆಳಸಿ ದೆಹಲಿಗೆ ಹೋದನು, ಅಲ್ಲಿ ದರ್ಬಾರಿನಲ್ಲಿ ತನಗೆ ಅಪ ಮಾನವಾಯಿತೆಂದು ಸ್ವಲ್ಪ ಕೂಗಾಡಲು, ಚಕ್ರವರ್ತಿಯು ಶಿವಾಜೆಯನ್ನು ಸೆರೆಯಲ್ಲಿಟ್ಟನು.
ಆ ಸೆರೆಮನೆಯಲ್ಲಿದ್ದಾಗ ಶಿವಾಜಿಗೆ ನಿತ್ಯವೂ ಹಣ್ಣು, ಪಲ್ಯ, ಕಾಯಿ, ಹೂ ಇವನ್ನು ಬುಟ್ಟಿ ಬುಟ್ಟಿಯಲ್ಲಿ ಕಳುಹಿಸುತ್ತಿದ್ದರು. ಶಿವಾಜಿಯು ಬುಟ್ಟಿ, ಬುಟ್ಟಿಯಲ್ಲಿ ಹಣ್ಣನ್ನೂ , ತಿಂಡಿಯನ್ನೂ , ಸರದಾರರಿಗೂ ಬ್ರಾಹ್ಮಣರಿಗೂ ಕಳುಹಿಸುತ್ತಿದ್ದನು. ಒಂದು ದಿನ, ಹಣ್ಣಿನ ಬುಟ್ಟಿಯಲ್ಲಿ ತಾನೇ ಕುಳಿತು ೩೦
೨೧.ರಾಗಿರಾಮಾಯಣ.
ಯಾಗಿ, ' ಹಲವ ಮಾತೇಕೆ ! ನಾನೇನೋ ಬಡವರ ಆಧಾರಿ, ದೊಡ್ಡವರ ಆಶ್ರಯ ನನಗೆ ನಿಜವಾಗಿಯೂ ಇಲ್ಲ. ರಾಜಾಧಿರಾಜರುಗಳೂ, ಧನಾಧಿ ಕಾರಿಗಳೂ ನನ್ನನ್ನು ಸೇವಿಸುವುದಿಲ್ಲ. ಬಡವರ ಕೂಗು ಗಗನ ಮುಟೀತೆ? ಆದುದರಿಂದ ನನ್ನ ಕೂಗು ಪ್ರಯೋಜನವಿಲ್ಲದಿದ್ದರೂ, ನಾನು ಒಂದೇ ಒಂದು ಮಾತನ್ನು ಹೇಳುವೆನು ಕೇಳಿ, ಯಾವ ಪದಾರ್ಥದ ಯೋಗ್ಯತೆ ಯನ್ನು ಪರೀಕ್ಷಿಸಬೇಕಾದರೂ ಸಾವಕಾಶವಾಗಿ ಪರೀಕ್ಷಿಸಬೇಕು. ನಮ್ಮೆ ಲ್ಲರನ್ನೂ ಒಂದೊಂದು ಕಡೆ ಯಾರಾದರೂ ನಾಲ್ಕಾರುವರ್ಷ ಇಟ್ಟು ತರು ವಾಯ ತೆಗೆಯಲಿ, ಆಗ ನಮ್ಮ ನಮ್ಮ ಯೋಗ್ಯತೆಯು ಪ್ರಕಾಶವಾಗುವುದು' ಎಂದಿತು, ಇಷ್ಟರಲ್ಲಿಯೇ ಬೆಳಗಾಯಿತು.
ರಾತ್ರಿ ನಡೆದ ವಿಚಿತ್ರವನ್ನು ಕಾವಲುಗಾರನು ಅವರಶೇಖರರಾಯ ನಿಗೆ ತಿಳಿಸಿದನು. ಇದನ್ನು ಪರೀಕ್ಷಿಸಬೇಕೆಂದು ಪ್ರತಿಯೊಂದು ಧಾನ್ಯ ವನ್ನೂ ಬೇರೆಬೇರೆ ಹಗೇವುಗಳಲ್ಲಿ ಹಾಕಿ ಮುಚ್ಚಿಡಿಸಿದ್ದು -ಕೆಲವು ವರ್ಷಗಳ ಮೇಲೆ ಒಂದು ದಿನ ರಾಜನು ಓಲಗದಲ್ಲಿ ಜ್ಞಾಪಿಸಿಕೊಂಡು ಹಗೇವುಗಳಲ್ಲಿ ಹೂಳಿದ್ದ ಧಾನ್ಯಗಳನ್ನು ತರಿಸಿದನು. ಅವುಗಳಲ್ಲಿ ರಾಗಿಯೊಂದು ವಿನಾ ಉಳಿದುದೆಲ್ಲವೂ, ಹುಳಿತು, ಕೊಳತು, ಹಾಳಾಗಿ ಹೋಗಿದ್ದು ವು. ಅ೦ದು ಕಾಗಿಯೇ ಶ್ರೇಷ್ಠ ಎಂದು ಜನರೆಲ್ಲರೂ ಗೊತ್ತು ಮಾಡಿದರು. ಇತರ ಧಾನ್ಯ ಗಳೂ ಒಪ್ಪಿಕೊಂಡುವು.
೩೩
ಕೊಂಡರು. ಈ ಕೂಗು ಅಂತಃಪ್ರರದಲ್ಲಿದ್ದ ಉತ್ತರನಿಗೆ ಮುಟ್ಟಿತು. ಆಗ ತಾಯಿ, ತಂಗಿ, ಮತ್ತು ಇತರ ಹೆಂಗಸರೊಡನೆ ಮಾತನಾ ಡುತ್ತ ಕುಳಿತಿದ್ದ ಉತ್ತರನು ಆ ಕೂಗನ್ನು ಕೇಳಿ, “ ಏನು ನಮ್ಮ ಹಸುಗಳನ್ನು ಹಿಡಿದಿರುವರೆ? ಆವರಿಗೆ ಎಷ್ಟು ಧೈರ್ಯ ' ನಾನು ಇರುವುದನ್ನು ಮರೆತಿರು ವರೋ ? ಈಗ ಹೊರಟು ಅವರುಗಳನ್ನು ಪುಡಿ ಪುಡಿ ಮಾಡಿ ಬರುವೆನು, ಎಲ್ಲಿ ನನ್ನ ಸಾರ ಥಿಯಲ್ಲಿ- 'ಹಾ ! ಈ ಸಮಯದಲ್ಲಿ ನನಗೆ ತಕ್ಕ ಸಾರಥಿ ಇದೆಹೋದನಲ್ಲ' ಸಾರಥಿಯೊಬ್ಬನಿದ್ದರೆ ಆ ದುಷ್ಟಕೌರವರ ಅಹಂಕಾರವನ್ನು ಅಡಗಿಸುತ್ತಿ ದೈನಲ್ಲ; ಆ ಶತ್ರುಸೇನೆಯಲ್ಲಿರುವ, ಭೀಷ್ಮ, ದ್ರೋಣ, ಕೃಪಾಚಾರ ಮೊದ ಲಾದವರ ಮೇಲೆ ಬಿದ್ದು ನುಗ್ಗಿ ನುಚ್ಚು ನುರಿಮಾಡುತ್ತಿದ್ದೆನಲ್ಲ; ಕರ್ಣ, ಅಶ್ವತ್ಥಾಮ ಮುಂತಾದವರ ಹೆಸರನ್ನೆ ಅಳಿಸಿಬಿಡುತ್ತಿದ್ದೆನಲ್ಲ ; ಯಮವು ರಿಯಲ್ಲಿ ಸ್ಥಳವಿಲ್ಲದಂತೆ ಮಾಡುತ್ತಿದ್ದೆನಲ್ಲ; ಏನು ಮಾಡಲಿ; ನನ್ನ ರಥವನ್ನು ನಡೆಯಿಸುವರು ಯಾರೂ ಇಲ್ಲವಲ್ಲ. ಹಾ ! ಎಂದು ಆರ್ಭಟಿಸುತ್ತಿದ್ದನು.
ವಿರಾಟನ ಮಗಳಾದ ಉತ್ತರೆಗೆ ಪಾಠವನ್ನು ಕಲಿಸುತ್ತಿದ್ದ ಬೃಹನ್ನ ಳೆಯು ಸಾರಥ್ಯದಲ್ಲಿಯ ಬಲು ಗಟ್ಟಿಗನೆಂದು ಹತ್ತಿರದಲ್ಲಿದ್ದವರೊಬ್ಬರು ಉತ್ತರೆಗೆ ತಿಳಿಸಲು, ಅವಳು ಬೃಹನ್ನಳೆ ಯನ್ನು ಸಾರಥ್ಯಕ್ಕೆ ಕರೆದುಕೊಂಡು ಹೋಗಬಹುದೆಂದು ಹೇಳಿದಳು. ಅದಕ್ಕೆ ಉತ್ತರನು “ ಛೇ ! ಬೃಹನ್ನಳೆಗೆ ಏನು ಬರುವದು ? ಕುಣಿವುದಕ್ಕೆ ಬಂದರೆ ಯುದ್ದದಲ್ಲಿ ರಥವನ್ನು ನಡಿಸುವು ದಕ್ಕೂ ಬಂದೀತೆ ? ಚೆನ್ಯಾ ಯಿತು ” ಎಂದನು. ' ಆಗ ಅಲ್ಲಿದ್ದವರು ಬೃಹ ನೃಳೆಯು ನಮ್ಮ ಅರಮನೆಗೆ ಬರುವುದಕ್ಕೆ ಮುಂಚೆ ಮಹಾಪರಾಕ್ರಮಶಾಲಿ ಯಾದ ಅಜು ತಾವು ಪರೀಕ್ಷಿಸಬಹುದು' ಎಂದರು.ಉತ್ತರನು ಅದಕ್ಕೆ ಒಪ್ಪಿ ಬೃಹನ್ನಳೆಗೆ ರಥವನ್ನು ಸಿದ್ದಪಡಿಸುವಂತೆ ಹೇಳಿ, ಅಲ್ಲಿದ್ದ ಹೆಂಗ ಸರಿಗೆಲ್ಲಾ ನಿಮಗೇನು ಬೇಕು ? ನಿಮಗೇನು ತರಲ ? ಯುದ್ಧರಂಗದಿಂದ ಯಾವ ರಾಜನ ಆಭರಣವನ್ನು ಬೇಕಾದರೂ ತರುತ್ತೇನೆ ಹೇಳಿ - ಎಂದು ವಿಚಾರಿಸಿಕೊಂಡು ಯುದ್ಧಕ್ಕೆ ಹೊರಟನು,
ಬೃಹನ್ನಳೆಯು ಅತಿವೇಗದಿಂದ ರಥವನ್ನು ಓಡಿಸಿ, ಹಿಂದೆ ಇಟ್ಟಿದ್ದ ತನ್ನ ಬಾಣಗಳನ್ನು ತೆಗಿಸಿಕೊಂಡು ಕೌರವರ ಸೇನೆಗೆ ಇದಿರಾಗಿ ಉತ್ತರನ ರಥವನ್ನು ನಿಲ್ಲಿಸಿದನು. ಆ ಸೇನೆಯ ಕೋಲಾಹಲವನ್ನು ನೋಡಿದೊಡ
ನೆಯೇ ಉತ್ತರನಿಗೆ ದಿಕ್ಕು ತೋರದಂತೆ ಆಯಿತು. ಆ ಶತ್ರುಸೇನೆಯ ಆನೆಗಳ ಕೂಗು, ಕುದುರೆಗಳ ಧ್ವನಿ, ಜನಗಳ ಆಲ್ಬಟ, ಶೂರರ ಸಿಂಹನಾದ ಬಾಣಗಳ ಬಿರುಸು ಇವೆಲ್ಲವನ್ನೂ ನೋಡಿ, ಗಡಗಡನೆ ನಡುಗುತ್ತಾ 'ಅಯ್ಯಾ ಬೃಹನ್ನಳೆ! ನಿನ್ನ ದಮ್ಮಯ್ಯ! ನನ್ನನ್ನು ಹಿಂದಕ್ಕೆ ಕರೆದುಕೊಂಡುಹೋಗು. ನನ್ನನ್ನು ಕೊಲ್ಲಿಸಬೇಡ, ಈ ಭಯಂಕರವಾದ ಸೇನೆಯನ್ನು ನಾನು ಕಣ್ಣೆತ್ತಿ ನೋಡಲಾರೆ, ನಾನು ಕೌರವಸೇನೆ ಯನ್ನು ಚಿತ್ರದಲ್ಲಿ ನೋಡಿದುದೇ ಹೊರತ ಯುದ್ದರಂಗದಲ್ಲಿ ನೋಡಿದುದೇ ಇಲ್ಲ, ನನ್ನ ಉಪ್ಪತಿಂದು ನನಗೆ ಎರ ಡನ್ನು ನೀನು ಬಯಸಬಾರದು, ಹೇಗಾದರೂ ನನ್ನ ತಾಯಿ ತಂದೆಗಳ ಮುಖವನ್ನು ನನಗೆ ತೋರಿಸು ' ಎಂದು ಕೂಗಿಕೊಳ್ಳುತಿರಲು-ಬೃಹನ ಳೆಯು ರಥವನ್ನು ಮುಂದೆಮುಂದೆ ತೆಗೆದುಕೊಂಡು ಹೋಗುತ್ತಿದ್ದನು. ಆಗ ಉತ್ತರನು ಹೇಗೌದರೂ ತಪ್ಪಿಸಿಕೊಂಡು ಓಡಿಹೋಗೋಣವೆಂದು ರಥದಿಂದ ಧುಮುಕಲು, ಬೃಹನ್ನಳೆಯು ಅವನನ್ನು ಹಿಡಿದು ರಥದಲ್ಲಿ ಕುಕ್ಕಿ ರಿಸಿ, ತಾನೇ ಯುದ್ಧ ಮಾಡಿ ಶತ್ರುಗಳ ನ್ನು ಜಯಿಸಿ, ಶತ್ರುಗಳ ವಸ್ತ್ರಾಭರ ಣಗಳನ್ನು ತೆಗೆದುಕೊಂಡು, ಉತ್ತರನೊಡನೆ ಹಿಂದಿರುಗಿದನು. ಈ ಬೃಹ ನೃಳೆಯೇ ಪಂಚಪಾಂಡವರಲ್ಲಿ ಒಬ್ಬನಾದ ಅರ್ಜುನನು, ಅಂತಃ ಪ್ರರದಲ್ಲಿ ಹೆಂಗಸರೊಂದಿಗೆ ಡಂಭವನ್ನು ಮಾಡಿ, ಯುದ್ಧರಂಗದಲ್ಲಿ ಹೆದರಿ, ಹೇಡಿಯಾ ಗಿದ್ದ ಉತ್ತರವನ್ನು ಈಗಲೂ ಜನರು 'ಉತ್ತರನ ಪೌರುಷ ಒಲೆಯಮು೦ದೆ' ಎಂದು ಎತ್ತಿ ಆಡುವರು.
೩೫
ನಮಸ್ಕರಿಸಿದರು. ಆ ಸನ್ಯಾಸಿಯು ಹುಕ್ಕಬುಕ್ಕರನ್ನು ನೋಡಿ, ಇವರು ರಾಜ್ಯವನ್ನು ಕಟ್ಟುವುದಕ್ಕೂ, ಆಳುವುದಕ್ಕೂ ಸಮರ್ಥರಾಗಿದ್ದಾರೆ. ಇವ ರಿಂದ ಇಲ್ಲಿ ಒಂದು ಹಿಂದೂ ರಾಜ್ಯವನ್ನು ಕಟ್ಟಿಸಿ ದೇಶಗಳನ್ನೆಲ್ಲಾ ಆಕ್ರಮಿಸುತ್ತಿರುವ ತುರುಕರನ್ನು ತಡೆದು, ಹಿಂದಕ್ಕೆ ಅಟ್ಟಿ ಸಬೇಕು, ಎಂ ದುಯೋಚಿಸಿ, 'ಎಲೈ ಸಹೋದರಿರಾ ! ನೀವು ತುಂಗಭದ್ರಾತೀರದಲ್ಲಿ ಒಂದು ರಾಜ್ಯವನ್ನು ಕಟ್ಟಬೇಕು. ಸ್ಥಳವನ್ನು ನೋಡಿಕೊಂಡು ಬನ್ನಿ' ಎಂದನು. ಅವರು ಸ್ಥಳವನ್ನು ಹುಡುಕಿಕೊಂಡು ನದೀತೀರದಲ್ಲಿ ಹೋಗು ತಿರುವಾಗ್ಯ ಒಂದು ಕಾಡು ಸಿಕ್ಕಿತು, ಅಲ್ಲಿ ಒಂದು ಹುತ್ತವನ್ನು ಕಂಡರು. ಆ ಕಾಲದಲ್ಲಿ ಆ ಹುತ್ತದ ಸವಿಾಪಕ್ಕೆ ಒಂದು ಹಸು ಬಂದು ತಾನಾಗಿ ಹಾಲನ್ನು ಕರೆಯುತ್ತಿದ್ದಿತು, ಅದನ್ನು ಕಂಡು, ಹಿಂದಿರುಗಿ ಹೋಗಿ, ಈ ವಿಶೇಷವನ್ನು, ಆ ತಪಸ್ವಿಗೆ ತಿಳಿಸಿದರು. ಆಗ ಆ ತಪಸ್ವಿಯು ಅಲ್ಲಿಯೇ ನೀವು ಪಟ್ಟಣವನ್ನು ಕಟ್ಟಿರಿ; ಅದು ಬಹು ಪ್ರಸಿದ್ಧಿಗೆ ಬರುವ ದು~ ಎಂದನು ಅವರು ಪಟ್ಟಣವನ್ನು ಕಟ್ಟಿದರು, ಹುಕ್ಕರಾಯನು ಮೊದಲು ದೊರೆಯಾದನು, ಸನ್ಯಾಸಿಯಾದವಿದ್ಯಾರಣ್ಯನೇ ಮಂತ್ರಿಯಾದನು. ಹಿಂದೂ ಜನರಿಗೆಲ್ಲಾ ಆ ಪಟ್ಟಣ ವ್ರ ಆಶ್ರಯವಾಗಿತ್ತು. ದಿನೇದಿನೇ ಪಟ್ಟಣವೂ, ರಾಜ್ಯವೂ ಬಹಳ ಅಭಿವೃದ್ದಿಗೆ ಬಂದುವ, ತುರುಕರು ಈ ರಾಜರನ್ನು ಕಂಡು ನಡುಗುತ್ತಿದ್ದರು. ಇವರಿಗೂ ಅವರಿಗೂ ಕದನವಿದ್ದೇ ಇರುತಿತ್ತು. ಒಹುಕಾಲದ ಮೇಲೆ ಒಂದು ದೊಡ್ಡ ಯುದ್ಭವ ನಗೆ ದು ಅಲ್ಲಿ ನಿಜ ಯನಗರದ ದೊರೆಯಾದ ರಾಮರಾಜನು ಸೋತನು. ಪಟ್ಟಣನ್ನ ಶತ್ರುಗಳ ಪಾಲಾಗಿ ಹಾಳಾಯಿತು ಈಗಲೂ ಹಂಪೆಯಹತ್ತಿರ ವಿಜಯನಗರದ ದೊಡ್ಡ ದೊಡ್ಡ ದೇವಸ್ಥಾನಗಳೂ, ಪಾಳುಗೋಡೆಗಳೂ ಇವೆ.
೨೪,ನಾಗಲೋಕ (೧ ನೆಯ ಭಾಗ)
ಸಮುದ್ರತೀರ, ಅಲ್ಲಿ ಒಂದು ದೊಡ್ಡ ಪಟ್ಟಣ, ಆ ಪಟ್ಟಣವನು ಒಬ್ಬ ದೊರೆಯು ಆಳುತ್ತಿದ್ದನು. ಆ ದೊರೆಗೆ ಇನ್ನೂ ಇಪ್ಪತ್ತು ವರ್ಷ ವಯಸ್ಸು, ಅವನು ರೂಮಿನಲ್ಲಿ ಕೆಲುವನು, ಜನರಲ್ಲಿ ದಯಾಳು, ಯುದ್ಧ ೩೬
ದಲ್ಲಿ ಚತುರನು. ಆದುದರಿಂದ ಪ್ರಜೆಗಳಿಗೆ ಅವನಲ್ಲಿ ಬಹಳ ಪ್ರೀತಿಯಿದ್ದಿತು. ಹೀಗಿರುವಾಗ ಒಂದಾನೊಂದುದಿನ, ಹಠಾತ್ತಾಗಿ ನೆರೆರಾಜ್ಯದವರು ಇವನ ಮೇಲೆ ದಂಡೆತ್ತಿ ಬಂದರು, ದೊಡ್ದಯುದ್ಡವು ನಡೆಯಿತು. ಆ ಯುದ್ಧ ದಲ್ಲಿ ಈ ದೊರೆಯ ಕಡೆಯವರೆಲ್ಲರೂ ಸೋತುಹೋದರು. ಅನೇಕರು ಸತ್ತು ಹೋದರು. ಉಳಿದವರು ಓಡಿದರು. ಆಗ ದೊರೆಯೂ ಓಡಿಹೋಗಬೇಕಾಯಿತು.
ದೊರೆಗೆ ಬಹು ಕಷ್ಟಬಂತು, ತನ್ನ ರಾಜ್ಯವನ್ನು ಬಿಟ್ಟು, ಮು ಖಕ್ಕೆ ಮುಸುಕನ್ನು ಹಾಕಿಕೊಂಡು ಯಾರೂ ಕಾಣದಂತೆ ಕಾಡುಬಿದ್ರು ಹೊರಟನು, ಕಾಡಿನಲ್ಲಿ ಗೆಡ್ಡೆಗೆಣಸುಗಳನ್ನು ತಿಂದುಕೊಂಡು ಸ್ವಲ್ಪ ಕಾ ಲವಿದ್ದು, ಕೊನೆಗೆ ಒಂದು ದಿನ ಸಾಯಂಕಾಲ ಸಮುದ್ರದ ಕರೆಗೆ ಬಂದನು ಆಗ ಇವನಿದ್ದ ಸ್ಥಿತಿಯಲ್ಲಿ ಇವನೇ ದೊರೆಯೆಂದು ಇವನನು, ಹಿಂದೆ ನೋ ಡಿದ್ದವರೂ ಹೇಳುವುದಕ್ಕೆ ಆಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ದೊರೆಯು ಕಂಗೆಟ್ಟು ಹೋಗಿದ್ದನು, ಆದಿನ ದೊರೆಯು ಬಹಳ ಹಸಿದಿದ್ದನು. ಅವನಿಗೆ ತಡೆಯಲಾರದಷ್ಟು ಬಾಯಾರಿಕೆ, ಅಲ್ಲಿ ತಿನ್ನು ಇದಕ್ಕೆ ತಿಂಡಿ ಯಿಲ್ಲ. ಎಷ್ಟು ದೂರ ನೋಡಿದರೂ ಉಪ್ಪುನೀರು. ಆಗ ದೊರೆಯು ಏನು ಮಾಡಬೇಕು ! ಅ ಕಷ್ಟವನ್ನು ಸಹಿಸಲಾರದೆ ಸಮುದ್ರದಲ್ಲಿಯಾ ದರೂ ಬಿದ್ದು ಪ್ರಾಣವನ್ನು ಕಳೆದುಕೊಳ್ಳಬೇಕೆಂದು ನೀರಿನಲ್ಲಿಳಿದು ಮುಂದೆ ಮುಂದೆ ಹೊರಟನು. “ಪಾಪಿ ಸಮುದ್ರಕ್ಕೆ ಹೋದರೆ ಮೊಳಕಾಲಿನುದ್ದ ನೀರು” ಎಂಬಂತೆ ಅವನು ಎಷ್ಟು ದೂರ ಹೋದರೂ ಸಮುದ್ರದಲ್ಲಿ ಆಳವೇ ಇಲ್ಲದಂತೆ ಕಂಡಿತು. ಆಗ ಸಾಯ೦ಕಾಲ ಸಮಯವಾಯಿತು, ನೀರು, ಆಕಾಶ ಎಲ್ಲವೂ ಕೆಂಪಗೆ ಕಾಣಿಸುತ್ತಿದ್ದು ವ, ಮರಳಮೇಲೆ ಬಿದ್ದು ಇದ ಕಪ್ಪೆಚಿಪ್ಪಗಳೆಲ್ಲ ಥಳಥಳನೆ ಹೊಳೆಯುತ್ತಿದ್ದು ವ, ನೀರಿನಲ್ಲಿದ್ದ ಸಣ್ಣ ಸಣ್ಣ ವಿಾನುಗಳು ಪ್ರಳಪಳನೆ ನೆಗೆದಾಡುತ್ತಿದ್ದು ವ, ಆಕಾಶದಲ್ಲಿ ಪಕ್ಷಿಗಳೆಲ್ಲಾ ಬೇಗಬೇಗನೆ ಹಾರಿ ಹೋಗುತ್ತಿದ್ದು ವ, ಗಾಳಿ ಮೆಲ್ಲನೆ ಬೀಸುತ್ತಿದ್ದಿತು. ದುಃಖದಲ್ಲಿ ಮುಳುಗಿದ್ದ ಆ ದೊರೆಗೂ ಆ ಸಾಯಂಕಾಲವು ಸಂತೋಷವ ನು೦ಟುಮಾಡುತ್ತಿತ್ತು . ದೊರೆಯು ನಡುನೀರಿನಲ್ಲಿ ಒಂದು ಗಳಿಗೆ.
ಹಾಗೆಯೇ ಸುಮ್ಮನೆ ನಿಂತನು. ಆಷ್ಟರಲ್ಲಿಯೆ ಸಮುದ್ರದ ಮಧ್ಯೆ ದೂರದಲ್ಲಿ ಒಂದು ಅರಮನೆಯು ಕಾಣಿಸಿತು. ಒಂದು ಕ್ಷಣ ದೃಷ್ಟಿಸಿ ನೋಡಲು ಅದು ಸೊಗಸಾದ ಏಳು ಪ್ಪರಿಗೆಯ ಮನೆಯೆಂದು ಗೊತ್ತಾಯಿತು. ಆಗ ದೊರೆಯು “ನಾನು ಸಾಯುವದೇನೋ ನಿಜ, ನಾನು ಸತ್ತರೆ ಅಳುವವರು ಯಾರು ? ಸಾಯು ವೆನೆಂಬ ಹೆದರಿಕೆಯಾಗಲಿ, ವ್ಯಸನವಾಗಲಿ ಯಾವುದೂ ನನಗೆ ಇಲ್ಲ' ಆದುದರಿಂದ ಹೇಗಾದರೂ ಆ ಅರಮನೆಯನ್ನು ಸೇರಬೇಕು' ಎಂದು ಯೋಚಿಸುತ್ತಿದ್ದನು.
ಅಷ್ಟರಲ್ಲಿಯೇ ಒಂದು ದೋಣಿಯು ದಡದ ಕಡೆಗೆ ಹೊಡೆದುಕೊಂಡು ಬರುತ್ತಿತ್ತು. ಅದನ್ನು ನೋಡಿ ಅದು ಬರುವುದನ್ನೇ ಕಾದಿದ್ದು, ಬಂದ ಮೇಲೆ ಅದನ್ನು ಹತ್ತಿ ಅರಮನೆಯಿದ್ದ ಕಡೆಗೆ ಹೊರಟನು. ಎಷ್ಟು ದೂರ ಹೋದರೂ, ಅರಮನೆಯು ಇನ್ನೂ ದೂರವಾಗಿ ಕಾಣುತ್ತಿತ್ತೇ ಹೊರತು ಸಿಕ್ಕುವಂತೆ ಇರಲಿಲ್ಲ. ಅಷ್ಟು ಹೊತ್ತಿಗೆ ಬಹು ಕತ್ತಲೆಯಾಯಿತು. ಅರಮನೆಯು ಸಿಕ್ಕಲಿಲ್ಲ, ನಡುಸಮುದ್ರ, ಆ ದೊರೆಯು ಏನು ಮಾಡ ಬೇಕು ? ಏನಾದರೂ ಆಗಲಿ 'ನಾನು ಸತ್ತರೆ ಅಳುವವರು ಯಾರು ? ಎಂದು ದೋಣಿಯನ್ನು ಮುಂದೆಮುಂದೆ ನಡೆಯಿಸಿಕೊಂಡು ಹೋದನು.
೩೮
ಸ್ವಲ್ಪ ದೂರದಲ್ಲಿ ಬೆಳಕು ಕಾಣಿಸಿತು. ಆ ಬೆಳಕನ್ನೆ ಗುರುತಾಗಿಟ್ಟು ಕೊಂಡು ಹೊರಟನು. ಹೋಗುಹೋಗುತ ಬೆಳಕು ದೊಡ್ಡದಾಗುತ್ತ ಬಂದಿತು, ಅಲ್ಲಿ ಒಂದು ಸಣ್ಣ ಕಾಲುದಾರಿ ಕಾಣಿಸಿತು.
ಆ ದಾರಿಯನ್ನೇ ಹಿಡಿದು ಹೋಗಲು, ಒಂದು ದೊಡ್ಡ ಮೈದಾ ನವೂ ಸಿಕ್ಕಿತು. ಆ ಮೈದಾನದಲ್ಲಿ ಸರೋದಯವಾಗಿರುವಂತೆ ಬೆಳಕು ತುಂಬಿದ್ದಿತು. ಇದೇನು ಆಶ್ಚರ್ಯ ! ಮಧ್ಯರಾತ್ರಿ, ಇಲ್ಲಿ ಈಗ ಸೂರ ನು ಪ್ರಕಾಶಿಸುವಂತಿದೆ. ನೋಡೋಣ ಎಂದು ಇನ್ನೂ ಮುಂದೆ ಹೋ ದನು. ಮುಂದೆ ಹೋಗು ಹೋಗುತ್ತ ಸುವಾಸನೆಯಾಗಿ ತಂಗಾಳಿ ಬೀಸು ತಿದ್ದಿತು. ಹಗಲಿನಲ್ಲಿ ಹೇಗೋಹಾಗೆ ಪಕ್ಷಿಗಳು ಸುಖವಾಗಿ ಧ್ವನಿ ಮಾ ಡುತ್ತ ಎಲ್ಲೆಲ್ಲೂ ಹಾರಾಡುತ್ತಿದ್ದು ವ, ಇವನ ಆಯಾಸವೆಲ್ಲಾ ಮರೆತು ಹೋಯಿತು, ಹಸಿವು ಬಾಯಾರಿಕೆಗಳೂ ನಿಂತು ಹೋದುವ, ಮನಸ್ಸಿನಲ್ಲಿ ಉಲ್ಲಾಸವುಂಟಾಯಿತು.
ಇವನು ಹಾಗೆ ಬೆರಗಾಗಿ ನಿಂತಿದ್ದಾಗ ಮಹಾರಾಜನ ! ದಯೆ ಮಾಡು. ನೀನು ಬಹಳ ದೂರದಿಂದ ಆಯಾಸಪಟ್ಟು ಬಂದಿರುವಂತಿದೆ ಎಂಬ ಧ್ವನಿಯು ಕೇಳಬಂತು. ಆ ಧ್ವನಿ ಬಂದ ದಾರಿಯಲ್ಲಿ ಸ್ವಲ್ಪ ಮುಂದೆ ಹೋಗುತ ಒಬ, ನಾಗಕನೆಯು ಒಂದು ನವಿಲಿನ ಮೇಲೆ ಕುಳಿ ತಿದ್ದುದನ್ನು ನೋಡಿ ಅಲ್ಲಿಯೇ ನಿಂತನು. ಆ ನಾಗಕನೈಯೊಡನೆ ಇದ್ದ ಸಖೀ ಜನರು 'ದಯಮಾಡಿ, ಮೃದುವಾಗಿರುವ ಈ ಹೂವಿನ ಹಾಸಿಗೆಯ ಮೇಲೆ ವಿಶ್ರಮಿಸಿಕೊಳ್ಳಿ, ನಿಮಗೆ ಬೇಕಾದುದನ್ನು ತಂದು ಕೊಡುವವ, ಸ್ವೀಕರಿಸಿ' ಎಂದು ಉಪಚರಿಸಿದರು. ರಾಜನು “ನನ್ನ ಕೋರಿಕೆಯೊಂ ದನ್ನು ನಿಮ್ಮ ರಾಣಿಯು ನೆರವೇರಿಸುವುದಾದರೆ, ನಿಮ್ಮ ಆದರವು ನನಗೆ ಹಿತವನ್ನುಂಟುಮಾಡುವದು ' ಎಂದನು. ಇವನ ಧೈರ್ಯಕ್ಕೆ ಮೆಚ್ಚಿ. ನಾಗಕನೈಯು 'ನಿಮ್ಮ ಕೋರಿಕೆ ಏನು ? ಎಂದಳು. ರಾಜನು 'ನಾನ ಇಲ್ಲಿಯೇ ವಾಸಮಾಡಬೇಕೆಂದು ಬಂದಿರುವೆನು. ಅದಕ್ಕೆ ನೀವು ಒಪ್ಪ ಬೇಕು' ಎಂದನು.
ಆಗ ನಾಗಕನ್ಯೆಯು'ನೀವು ಇಲ್ಲಿ ಬಹಳ ಹೊತ್ತು ಇರಲಾಗದು. ಇದು ಮನುಷ್ಯ ಲೋಕವಲ್ಲ, ಮನುಷ್ಯನನ್ನು ನೋಡಿದೊಡನೆ ನಾಗಗಳು ಒಂದು ಕೊಳ್ಳುವವು. ಆದುದರಿಂದ ನಿಮಗೆ ಬೇಕಾದುದನ್ನು ತೆಗೆದು ಕೊಂಡು ಬೇಗ ಇಲ್ಲಿಂದ ಹೊರಟು ಹೋಗಿ' ಎಂದಳು. ಅದಕ್ಕೆ ರಾಜನು “ ನಾನು ಸತ್ತರೆ ಅಳುವರಿಲ್ಲ, ವ್ಯಸನವಾರಿಗೆ ? ನನಗೆ ಇಲ್ಲ, ಆದಕಾರಣ ನಾನು ಇಲ್ಲಿಯೇ ಇದ್ದು ಸಾಯುವೆನಲ್ಲದೆ ಹಿಂದಕ್ಕೆ ಹೋಗಲಾರೆನು ? ಎಂದನು. ಅದಕ್ಕೆ ನಾಗಕನೆಯು ರಾಜನನ್ನು ನೋಡಿ - ಅಯ್ಯೋ ! ದಾರಿ ತಪ್ಪಿ ರಾಜಕುಮಾರರನೇಕರು ಇಲ್ಲಿಗೆ ಬಂದಿರುವರು. ಬಂದವರೆಲ್ಲರೂ ಇಲ್ಲಿ ನಿಲ್ಲಬೇಕೆಂದು ಹು ಹಿಡಿವರು, ನಾನು ಕೇಳುವ ಎರಡು ಪ್ರಶ್ನೆಗಳಿಗೆ ಉತ್ತ ರಕೊಡಲಾರದೆ ನಾಶವಾಗಿರುವರು. ನೀವು ಹಾಗೆ ಮುಷರಮಾಡದೆ, ನಿಮಗೆ ಬೇಕಾದುದನ್ನು ತೆಗೆದುಕೊಂಡು ಹೋಗಿ ಎಂದಳು. ಅದಕ್ಕೆ ರಾಜನು ' ನಾನು ಸತ್ತರೆ ಅಳುವವರು ಇಲ್ಲ. ವ್ಯಸನವಾರಿಗೆ ? ನನಗೆ ಇಲ್ಲ. ಆದುದರಿಂದ ನಿಮ್ಮ ಪ್ರಶ್ನೆಗಳನ್ನು ಹೇಳಿ, ನನ್ನ ಅದೃಷ್ಟವನ್ನು ಬೇಗ ತಿಳಿ ವೆನು ' ಎಂದನು.
೨೬, ನಾಗಲೋಕ (೩ನೆಯ ಭಾಗ)
ಆ ನಾಗಕನ್ನಿಕೆಯು ಎಷ್ಟು ವಿಧವಾಗಿ ಹೇಳಿದರೂ ರಾಜನು ಕೇಳದೆ ಇದ್ದುದರಿಂದ, ' ನಿಮ್ಮ ಅದೃಷ್ಟದಲ್ಲಿದ್ದಂತೆ ಆಗಲಿ ! ನನ್ನಿ ಮೊದಲನೆಯ ಪ್ರಶ್ನೆಗೆ ಉತ್ತರವೇನು ? ಈ ಉದ್ಯಾನವನವನ್ನೆಲ್ಲಾ ತುಂಬಿರುವುದೇನು? ಹೇಳಿ?ಎ೦ದಳು. ಅದಕ್ಕೆ ರಾಜನು- ಈ ಉದ್ಯಾನವನವನ್ನೆಲ್ಲಾ ತುಂಬಿ ರುವದು ನಿಮ್ಮ ಕಣ್ಣಿನ ಕಾಂತಿಯು, ಎಂದು ಹೇಳಿ, ' ಇದೇ ಕಷ್ಟವಾದ ಪ್ರಶ್ನೆಯೇ" ಎಂದನು. ಈ ಉತ್ತರಕ್ಕೆ ನಾಗಕನೈಯು ಸಂತೋಷಪಟ್ಟಳು. ಮಹಾರಾಜ, ನನ್ನಿ ಪ್ರಶ್ನೆಗೆ ಉತ್ತರವನ್ನು ಕೊಟ್ಟರೆ ನಿಮ್ಮ ಅಪೇಕ್ಷೆಯು ಕೈಗೂಡುವುದು, ಯಾವ ರಾಜನ ಕಿರೀಟದಲ್ಲಿಯೂ ಇಲ್ಲದ ಎಂತಹ ಭಂಗಾ ರದಲ್ಲೂ ಇಲ್ಲದ ಹೊಂಬಣ್ಯದ ಕಾಂತಿಯು ಎಲ್ಲಿರುವುದು?; ನೀವು ಏರಿ ರುವ ನವಿಲಗರಿಯ ಕಣ್ಣಿನಲ್ಲಿರುವ ಹೊಂಬಣ್ಯದ ಕಾಂತಿಯಲ್ಲಲ್ಲದೆ ಮತ್ತೆ ಏತರಲ್ಲಿ ಅಂತಹ ಹೊಂಬಣ್ಣದ ಕಾಂತಿಯು ಇದ್ದೀತು ?” ಎಂದನು. ೪೦
ಆ ಉತ್ತರಕ್ಕೆ ನಾಗಕನೈಯು ಮೆಚ್ಚಿ, “ ಮಹಾರಾಜರೇ ನಿಮಗೆ ನಾಗಲೋಕದಲ್ಲಿ ವಾಸಮಾಡುವುದಕ್ಕೆ ಅಪೇಕ್ಷೆ ಇದ್ದರೆ ನನ್ನೊಡನೆ ಬನ್ನಿ' ಎಂದಳು. ಸಂತೋಷದಿಂದ ಇವನು ಒಂದೆರಡು ಹಜ್ಜೆ ಮುಂದೆ ಇಡುವು ದರಲ್ಲಿಯೇ ಥಟ್ಟನೆ ಕತ್ತಲಾಯಿತು, ನಾಗಕನೈಯು ಮಾಯವಾದಳು. ಪಕ್ಷಿಗಳೆಲ್ಲಾ ತಮ್ಮ ತಮ್ಮ ಗೂಡುಗಳನ್ನು ಹುಡುಕಿಕೊಂಡು ಮರಗಳನ್ನು ಅಡರುತ್ತಿದ್ದವು, ಅರಳಿದ ಹೂವುಗಳೆಲ್ಲಾ ಬಾಡಿರಬಹುದು ; ಅವು ಬಾಡಿ ಹೋದುದು ಇವನಿಗೆ ಕಾಣಲಿಲ್ಲ ; ಆದರೆ ಸುಗಂಧದಿಂದ ಕೂಡಿ ಬೀಸು ತಿದ್ದ ಗಾಳಿಯು ಬರಿದಾಯಿತು. ರಾಜನು ಭ್ರಾಂತನಾಗಿ, ನಾಗಕನೈಯು ಕುಳಿತಿದ್ದ ಸ್ಥಳದ ಹತ್ತಿರಕ್ಕೆ ಎಡವರಿಸಿ ಮುಗ್ಗರಿಸಿಕೊಂಡು ಹೋದನು.
- ಅಲ್ಲಿ ೬೪ನೀರಿನಿಂದ ಕೂಡಿದ ಒಂದು ಸಣ್ಣ ಕೊಳವನ ಆ ಕೊಳ ದಲ್ಲಿ ಮಹಾ ಜ್ಯೋತಿಯೊಂದು ಮುಳುಗುತ್ತಿದ್ದುದನ್ನೂ ಕಂಡನು “ ನಾನು ಸತ್ತರೆ ಅಳುವವರು ಯಾರು ? ವ್ಯಸನವು ಯಾರಿಗೆ ? ನನಗೆ ಇಲ್ಲ' ಎಂದು, ಆ ಕೊಳದಲ್ಲಿ ಬೆಳಕಿನ ಜತೆಯಲ್ಲಿ ಹೋಗಬೇಕೆಂದು ತಡಮಾಡದೆ ದುಮಿ ಕಿದನು, ಹಾಗೆ ದುಮಿಕಿದೊಡನೆ ನಾಗಕನ್ಯಯ ಮಾಯದಿಂದ ಸ್ವಲ್ಪವೂ ಆಯಾಸವಾಗದಂತೆ ಆ ದೊರೆಯು, ನಾಗಲೋಕದಲ್ಲಿದ್ದ ಅರಮನೆಯನ್ನು ಸೇರಿದನು, ಅಲ್ಲಿ ನಾಗಕನೈಯ ನಂಟರಿಷ್ಟರು ಇವನನ್ನು ಆದರದಿಂದ ಇದಿರುಗೊಂಡರು. ದೊರೆಯು ಅಲ್ಲಿ ನಾಗಕನೆಯನ್ನು ಮದುವೆಯಾಗಿ, ಬಹುಕಾಲ ಸುಖವಾಗಿ ಇದ್ದನು.
೪೧
ಹೀಗಿರುವಲ್ಲಿ ಆ ಗುಡಿಯ ಹಳೆಯ ಉಗ್ರಾಣದಲ್ಲಿ ಸೇರಿಕೊಂಡಿದ್ದ ಒಂದು ಇಲಿಯು ಹಾವಿನ ಬುಟ್ಟಿಯನ್ನು ನೋಡಿ ಕಾಳು ತುಂಬಿಟ್ಟಿರುವ ಬುಟ್ಟಿಯೆಂದು ಮೆಲ್ಲನೆ ಬಂದು, ಸ್ವಲ್ಪ ಸ್ವಲ್ಪವಾಗಿ ಆ ಬುಟ್ಟಿಯನ್ನು ಕೊರೆದು, ಬಹಳ ಆಶೆಯಿಂದ ಬುಟ್ಟಿಯೊಳಗೆ ನುಗ್ಗಿತು. ಹಸಿದಿದ್ದ ಹಾವಿಗೆ ಇಳಿಯನ್ನು ನೋಡಿ ಬಹುಸಂತೋಷವಾಯಿತು' ಅದು ಒಳಗೆ ಬಂದೊಡನೆ ಹಾವು ಫಕ್ಕನೆ ನುಂಗಿ, ಇಲಿಯು ಮಾಡಿದ ಕನ್ನದಿಂದ ಸರಸರನೆ ಹರಿದು ಹೋಗಿ, ಹತ್ತಿರವಿದ್ದ ಒಂದು ಹುತ್ತವನ್ನು ಸೇರಿತು.
ಇತ್ತಲಾಗಿ ಹಾವಾಡಿಗನು ಸ್ವಲ್ಪ ಚೇತರಿಸಿಕೊಂಡು ಎದ್ದು ನೋ ಡುವಲ್ಲಿ, ಬುಟ್ಟಿಯು ಬರಿದಾಗಿದ್ದಿತು. ಹಾವೇ ಬುಟ್ಟಿಯನ್ನು ಕೊರೆದು ಕೊಂಡು ಹೋಯಿತೆಂದು ಆಶ್ಚರ್ಯ ಪಡುತ್ತಿದ್ದನು.
೨೮.ಕಣಜ ಮತ್ತು ಜೇನುಹುಳು.
ಒಂದು ಪಾಳು ಗುಡಿಯ ಗೋಡೆಯ ಮೂಲೆಯಲ್ಲಿ ಒಂದು ಕಣ ಜವು ಗೂಡು ಕಟ್ಟಿಕೊಂಡು ಇದ್ದಿತು, ಒಂದು ಜೇನು ಹುಳುವು ಗೂಡು ಕಟ್ಟುವುದಕ್ಕೆ ಅನುಕೂಲವಾದ ಸ್ಥಳವನ್ನು ಹುಡುಕುತ್ತಾ ಹುಡುಕುತ್ತಾ, ಆ ಕಣಜದ ಗೂಡಿನ ಹತ್ತಿರಕ್ಕೆ ಬಂದಿತು. ಕಣಜವ ಜೇನು ಹುಳುವನ್ನು, ಕರೆದು, ಉಪಚರಿಸಿ, “ ಅಣ್ಯ ! ನಿನ್ನನ್ನು ಒಂದು ಮಾತು ಕೇಳಬೇಕೆಂದು ಇದ್ದೇನೆ ' ಎಂದಿತು, ಜೇನುಹುಳುವು ಅದಕ್ಕೆ “ ಅದೇನು ಕೇಳು, ತಿಳಿದಿದ್ದರೆ ಅಗತ್ಯವಾಗಿ ಹೇಳುತ್ತೇನೆ' ಎಂದಿತು.
ಆಗ ಕಣಜವು 'ಜನರು ನಿನ್ನನ್ನು ಕಂಡರೆ ಅದರಿಸುದೇಕೆ ? ನನ್ನ ನ್ನು ಹಿಂಸಿಸುವುದೇಕೆ ? ನಾವಿಬ್ಬರೂ ಒಂದೇ ರೀತಿಯಲ್ಲಿಲ್ಲವೆ ? ನಮ್ಮಿಬ್ಬರಿಗೂ ಚೆನ್ನಾದ ರೆಕ್ಕೆಗಳಿಲ್ಲವೆ ? ನಮ್ಮಿಬ್ಬರಿಗೂ ಸಿಹಿಯಾದ ಪದಾರ್ಥದಲ್ಲಿ ಪ್ರೀತಿಯಿಲ್ಲವೆ ? ನಮ್ಮ ಗೋಜಿಗೆ ಜನಗಳು ಬಂದರೆ ನಾವಿಬ್ಬರೂ ಕಚ್ಚ ವೆವಲ್ಲವೆ ? ಹೀಗಿರುವಾಗ, ನೀನು ಬಂದರೆ ನಿನಗೆ ಎಲ್ಲಾ ಅನುಕೂಲ ೪೨ ವನ್ನೂ ಮಾಡಿಕೊಡುವರು, ನಾನು ಸಿಕ್ಕಿದರೆ ಒಡನೆಯೆ ಕೊಲ್ಲುವರು. ನಾನು ಜನರಿಗೆ ಮಾಡುವ ಅಪಕಾರವೇನು ? ನೀನು ಮಾಡುವ ಉಪಕಾರ ವೇನು ? ಹೇಳು ' ಎಂದು ಕೇಳಿತು. ಅದಕ್ಕೆ ಜೇನುಹುಳುವ “ ನೀನು ಮನುಷ್ಯರಿಗೆ ಯಾವ ಉಪಕಾರ ವನ್ನೂ ಮಾಡುವುದಿಲ್ಲ, ಅವರ ಮನೆಯ ಮರ ಮುಟ್ಟನ್ನು ಕೊರೆದು ಹಾಳುಮಾಡುತ್ತೀಯೆ ; ನಾನಾದರೋ ಹಗಲೆಲ್ಲಾ ಕೆಲಸಮಾಡಿ, ಸಿಹಿ ಯಾದ ಜೇನುತುಪ್ಪವನ್ನು ಕೂಡಿಹಾಕುವೆನು, ಜನರಿಗೆ ಅದರಿಂದ ಪ್ರಯೋ ಜನವಾಗುವುದು. ಆದುದರಿಂದ ಜನರು ನನ್ನನ್ನು ಆದರಿಸುವರು. ನೀನು ಜನರಿಗೆ ಕೆಡುಕನ್ನು ಮಾಡದೆ, ಉಪಯೋಗವಾಗಿದ್ದರೆ, ನನ್ನಂತೆ ನಿನ್ನ ಜನರು ಉಪಚರಿಸುತ್ತಿದ್ದರು. ೨೯, ನಾ ಬಿ ಯ ಸ್ನೇಹ. ಮಳವಿ ಎಂಬವಳಲ್ಲಿ ಒಂದು ನಾಯಿ ಇದ್ದಿತು. ಆ ನಾಯಿಯನ್ನು ಅವಳು ತನ್ನ ಮಗುವಿನೊಡನೆ ಸಾಕುತ್ತಿದ್ದಳು. ಆ ನಾಯಿಯು ಯಾವಾ ಗಲೂ ಆ ಮಗುವಿನಬಳಿಯಲ್ಲಿಯೆ ಆಡಿಕೊಂಡು ಇರುತ್ತಿದ್ದಿತು. ಆ ಮಗುವು ಆಡುವುದಕ್ಕೆ ಎಲ್ಲಿಗೆ ಹೋದರೂ ನಾಯಿ ಯ ಜತೆಯಲ್ಲಿ ಹೋಗುತಿ ದ್ವಿತು. ತುಂಟ ಹುಡುಗರು ಆ ಮಗುವಿನ ತಂಟೆಗೆ ಹೋದರೆ ನಾಯಿಯು ಅವರ ಮೇಲೆ ಬಿದ್ದು ಓಡಿಸುವುದು, ಮಗುವು ಊಟಮಾಡುವಾಗಲೂ ಆಡುವಾಗಲೂ, ಮಲಗಿಕೊಳ್ಳುವಾಗಲೂ ನಾಯಿಯು ಜತೆಯಲ್ಲಿಯೇ ಇರುವದು.
ಹೀಗಿರುತ್ತಿರಲು ಮಗುವಿಗೆ ರೋಗವು ಬಂದಿತು, ಕೆಲವು ದಿನಗ ಳಲ್ಲೇ ಅದು ಸತ್ತೂ ಹೋಯಿತು. ನಾಯಿಯು ಆ ದಿನವೇ ತಪ್ಪಿಸಿಕೊಂ ಡಿತು ; ಎಲ್ಲೆಲ್ಲಿ ಹುಡುಕಿದರೂ ಸಿಕ್ಕಲಿಲ್ಲ, ಕೆಲವು ದಿನಗಳಾದಮೇಲೆ ಒಂದು ದಿನ ಆ ಮಗುವಿನ ತಾಯಿಯು ಮಗುವನ್ನು ಮಣ್ಣುಮಾಡಿದ್ದ ಸ್ಥಳಕ್ಕೆ ಹೋದಳು ; ಅಲ್ಲಿ ನಾಯಿಯ ಸತ್ತು ಬಿದ್ದುದನ್ನು ನೋಡಿದಳು. ನಾಯಿಯು ಮೂಗುಜೀವಿಯಾದರೂ, ಆ ಮಗುವಿನಲ್ಲಿ ಅದಕ್ಕೆ ಎಷ್ಟು ಪ್ರೀತಿ ! ಎಷ್ಟು ಸ್ನೆಹ !
ಒಂದಾನೊಂದು ದೇಶದಲ್ಲಿ ಬಹು ಕಾಲದ ಹಿಂದೆ ಉತ್ತಾನಪಾದರಾ ಯನೆಂಬ ಒಬ್ಬ ರಾಜನು ಇದ್ದನು. ಅವನಿಗೆ ಸುಮತಿ, ಸುರುಚಿ ಎಂಬ ಇಬ್ಬರು ಹೆಂಡಿರಿದ್ದರು. ಸುಮತಿಗೆ ಧ್ರುವನೆಂಬ ಒಬ್ಬ ಮಗನಿದ್ದನು. ಸುರಚಿಗೂ ಒಬ್ಬ ಮಗನಿದ್ದನು. ರಾಜನಿಗಾದರೋ ಸುರುಚಿಯಲ್ಲಿ ಬಹಳ ಪ್ರೀತಿ. ಒಂದುದಿನ ರಾಜನು ಸುರುಚಿಯ ಮಗನನ್ನು ಎತ್ತಿ ಮುದ್ದಾಡುತ್ತಾ ಸಿಂಹಾಸನದ ಮೇಲೆ ಕುಳಿತಿದ್ದಾಗ ಧುವನ ತಂದೆಯ ಬಳಿಗೆ ಓಡಿಹೋಗಿ, ಸಿಂಹಾಸನವನ್ನೇರಿ ತಂದೆಯ ತೊಡೆಯ ಮೇಲೆ ಕುಳಿತು ಕೊಳ್ಳಲು ಹೋದನು. ಆಗ ಹತ್ತಿರದಲ್ಲಿಯೇ ಇದ್ದ ಸುರುಚಿಯು ಧ್ರುವ ನನ್ನು ರೆಟ್ಟಿ ಹಿಡಿದು ಎಳದು, “ ನೀನು ಏಕೆ ಇಲ್ಲಿಗೆ ಬಂದೆ ? ನಡೆ ! ನಿನ ಗೇಕೆ ಸಿಂಹಾಸನದ ಸೌಖ್ಯ ! ನಡೆನಡೆ !” ಎಂದು ಗದರಿಸಿಕೊಂಡು ಅಟ್ಟಿಬಿಟ್ಟಳು.
ಮಗುವಾದ ಧ್ರುವನು ಅಳುತ್ತಾ ತನ್ನ ತಾಯಿಯಲ್ಲಿಗೆ ಬಂದು ಅಮ್ಮಾ, ನನ್ನನ್ನು ಹೀಗೆ ರೆಟ್ಟೆ ಹಿಡಿದು ಎಳೆದುಹಾಕಿಬಿಟ್ಟರು,' ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿಕೊಂಡನು. ತಾಯಿಯು ಏನುಮಾಡಬೇಕು ? ರಾಜನಿಗೆ ಸುಮತಿಯಲ್ಲಿ ಪ್ರೀತಿಯಿರಲಿಲ್ಲ. ಸುರುಚಿಯು ಸುಮತಿಯನ್ನೇ ಆಗಲಿ, ಧ್ರುವನನ್ನೇ ಆಗಲಿ ರಾಜನ ಹತ್ತಿರ ಸೇರಿಸಳು, ಮಗನನ್ನು ಯಾವ ವಿಧವಾಗಿಯೂ ಸಮಾಧಾನವಾಡಲು ತಿಳಿಯದೆ 'ಅಪ್ಪ, ದೇವರು ನಿನ್ನ ಹಣೆಯಲ್ಲಿ ಆ ಸೌಖ್ಯವನ್ನು ಅನುಭವಿಸಲು ಬರೆದಂತಿಲ್ಲ, ದೇವರೇ ನಿನಗೆ ಸಿಂಹಾಸನವನ್ನು ಕೊಡಿಸಬೇಕು ನಾನೇನು ಮಾಡೇನಪ್ಪ' ಎಂದು ಕಣ್ಣೀರನ್ನು ಸುರಿಸಿದಳು. ಆಗ ಧ್ರುವನು ಅಮ್ಮಾ, ಹಾಗಾದರೆ ನಾನು ಆ ದೇವರನ್ನೇ ಕೇಳಿ ಸಿಂಹಾಸನವನ್ನು ಪಡೆಯುವೆನು ' ಎಂದು ಹೇಳಿ ಹೊರ ೪ಳಿ ಟುಹೋದನು, ಮಗು ಸುಮ್ಮನೆ ಮಾತನಾಡುವದೆಂದು ತಿಳಿದ ತಾಯಿ ಯು, “ ಒಳ್ಳೆಯದು; ಹಾಗೆಯೇ ಮಾಡು, ಕಂದ' ಎಂದಳು. ಧ್ರುವನು ಹೊರಟೇ ಹೊರಟನು. ದೇವರನ್ನು ಇವನು ಕಾಣುವು ದೆಂದರೇನು ! ಏನು ಕಥೆ ! ಬಹು ದೂರ ಹೋದನು. ದೇವರನ್ನೂ ಕಾಣ ಲಿಲ್ಲ, ಯಾರನ್ನೂ ಕಾಣಲಿಲ್ಲ. ಅಷ್ಟು ಹೊತ್ತಿಗೆ ಕತ್ತಲಾಯಿತು, ಕಾಡು ಸಿಕ್ಕಿತು, ಗೊಂಡಾರಣ್ಯ, ಹುಲಿ, ಆನೆ, ಕರಡಿ ಇವುಗಳ ಆರ್ಭಟ. ಯಾವುದಕ್ಕೂ ಧ್ರುವನು ಹೆದರದೆ, ಹಸಿವು ಬಾಯಾರಿಕೆ ಎನ್ನದ ದೇವರ ನ್ನು ಕಾಣಬೇಕೆಂಬ ಒಂದೇ ಮನಸ್ಸಿನಿಂದ ಹೋಗುತ್ತಿದ್ದನು. ಹೀಗೆ ಹೋಗುತಿರುವಾಗ ದೇವರನ್ನು ಕಂಡ ನಾರದರು ಬಂದರು, ಅಪಾ ಮಗು ನೀನು ಯಾರಪ್ಪ ? ಈ ಗೊಂಡಾರಣ್ಯದಲ್ಲಿ ಒಬ್ಬನ ಎಲ್ಲಿ ಹೋಗು ಯ' ಎಂದು ಕೇಳಲು ಧುವನು ನಡೆದುದನ್ನೆಲ್ಲಾ ನಾರದರಿಗೆ ತಿಳಿಸಿ ದನು. ಆಗ ನಾರದರು ಧುವನ ಧೈರ್ಯಕ್ಕೆ ಮೆಚ್ಚಿ * ಅಪ್ಪ, ನೀನು ಈ ರೀತಿಯಲ್ಲಿ ದೇವರನು ಧ್ಯಾನಿಸಿದರೆ ದೇವರು ನಿನಗೆ ಪ್ರಸನ್ನನಾಗುವನು ? ಎಂದು ಹೇಳಿದರು. ಧ್ರುವನು ಅದೇರೀತಿಯಲ್ಲಿ ದೇವರಧ್ಯಾನ ಮಾಡತೊಡಗಿದನು. ಬಹು ಕಾಲ ಹಾಗೆ ದೇವರ ಧ್ಯಾನದಲ್ಲಿಯೇ ಧ್ರುವನಿರಲು ದೇವರು ಮೆಚ್ಚಿ ಬಂದು “ ಅಪ್ಪ ಮಗು ! ನಿನ್ನ ಧ್ಯಾನಕ್ಕೆ ಮೆಚ್ಚಿ ಬಂದಿರುವೆನು, ಇಗೋನೋಡು' ಎಂದು ದಿವ್ಯಸ್ವರೂಪವನ್ನು ತೋರಿ, 'ನಿನಗೆ ಏನುಬೇಕು' ಎಂದು ಕೇಳಲು, “ ನನಗೆ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಯೋಗ್ಯತೆಯನ್ನು ಕೊಡು' ಎಂದು ಬೇಡಿದನು. ದೇವರು, ' ಮಗು, ನಿನಗೆ ಶಾಶ್ವತವಾದ ಪದವಿ ಯನ್ನು ಕೊಟ್ಟಿರುವೆನು ' ಎಂದು ಹೇಳಿ ಮಾಯವಾದನು.
ಇತ್ತಲಾಗಿ ತಂದೆ ತಾಯಿಗಳು ಧ್ರುವನನ್ನು ಕಾಣದೆ, ಹಂಬಲಿಸುತ್ತಾ ಧ್ರುವನು ಎಲ್ಲಿ ಹೋದನೋ ಎಂದು ಪೇಚಾಡುತ್ತಾ, ಮಗುವನ್ನು ತಳ್ಳಿ ಬಿಟ್ಟೆವೆಂದು ಕೊರಗುತ್ತಾ ಇರಲು, ನಾರದರು ಬಂದು ಧ್ರುವನ ವೃತ್ತಾರೆ ತವನ್ನೆಲ್ಲಾ ತಿಳಿಸಿದರು. ತರುವಾಯ ತಂದೆ ತಾಯಿಗಳು ಹೋಗಿ ಧ್ರುವ ನನ್ನು ಉಪಚರಿಸಿ ಕರೆತಂದು ಪಟ್ಟವನ್ನು ಕಟ್ಟಿದರು, ಬಹುಕಾಲ ರಾಜ್ಯ ವನ್ನಾಳಿ, ತರುವಾಯ ದೇವರು ಕೊಟ್ಟ ಶಾಶ್ವತಪದವಿಯನ್ನು ಸೇರಿ ಈ ಗಲೂ ಆಕಾಶದಲ್ಲಿ ಉತ್ತರದಿಕ್ಕಿನಲ್ಲಿ ನಿತ್ಯದಲ್ಲೂ ಒಂದೇ ಸ್ಥಳದಲ್ಲಿ ಪ್ರಕಾಶಿ ಸುತ್ತ ಧ್ರುವನಕ್ಷತ್ರವೆಂದು ಪ್ರಸಿದ್ಧಿಗೊಂಡಿರುವನು.
ಒಂದು ಕಬ್ಬಿನ ಗದ್ದೆ, ಅಲ್ಲಿ ಕಬ್ಬು ಬಹು ಚೆನ್ನಾಗಿಬೆಳೆದು ಗದ್ದೆಯ ಶುಂಬಾ ತುಂಬಿದ್ದಿತು. ಗದ್ದೆಯ ಬದುವಿನ ಮೇಲೆ ಒಂದೇ ಒಂದು ತೆಂಗಿನ ಗಿಡವು ಬೆಳೆದಿದ್ದಿತು. • ಅದರಲ್ಲಿಯೂ ಹದವಾದ ಎಳೆನೀರುಗಳು ತುಂಬಿ ದ್ದುವು. ಒಂಟಿಯಾಗಿ ನಿಂತಿದ್ದ ತೆಂಗನ್ನ ನೋಡಿ, ಗುಂಪಗುಂಪಾಗಿ ಬೆಳೆ ದಿದ್ದ ಕಬ್ಬು ಅಪಹಾಸ್ಯ ಮಾಡಲು ತೊಡಗಿತು. ' ಎಲೈ ! ತೆಂಗೇ ನೀನು ಹುಟ್ಟಿ, ಇದುವರಿಗೆ ಹತ್ತು ಹನ್ನೆರಡು ವರ್ಷಗಳಾಗಿರಬಹುದು.
ನಿನ್ನಿಂದ ಏನು ಪ್ರಯೋಜನ ! ನೀನು ಬಿಟ್ಟಿರುವ ಫಲವು ಆಕಾಶದಲ್ಲಿರುವುದು. ನಿನ್ನ ಮೈಯೋ- ಶುದ್ಧ ಒರಟು; ನಿನ್ನನು ಹತ್ತಿ, ನಿನ್ನ ಫಲವನ್ನು ತೆಗೆ ದುಕೊಳ್ಳುವುದು ಎಲ್ಲರಿಗೂ ಸಾಧ್ಯವಲ್ಲ. ಹೀಗಿರುವಾಗ ನೀನು ಹೆಮ್ಮೆ ಯಿಂದ ತಲೆಯನ್ನೆತ್ತಿಕೊಂಡು- ಬಾಯಾರಿದವರೆಲ್ಲರೂ ಬಂದು ನೋಡಿ; ದ್ರಾಕ್ಷೆ ಹಣ್ಣು ಸಿಕ್ಕದೆ ನರಿ ತಲೆಯನ್ನು ಜೋಲು ಹಾಕಿಕೊಂಡು ಹೋ ದಂತೆ, ಮುಖವನ್ನು ಒಣಗಿಸಿಕೊಂಡು ಹೋಗಿರಿ~ ಎಂಬಂತೆ ನಿಂತಿರುತ್ತೀ ಯೆ ! ನನ್ನನ್ನು ನೋಡು ! ನಾನು ಹುಟ್ಟಿದ ಒಂದು ವರ್ಷ ಒಂಬತ್ತು ತಿಂಗಳಲ್ಲಿಯೇ, ಎಷ್ಟು ಉಪಯೋಗವಾಗಿರುವೆನು, ನನ್ನ ಮೈಯೆಲ್ಲಾ ಸಿಹಿ, ಬುಡ ಮೊದಲು ಕೊನೆಯವರೆಗೂ ನಾನು ಜನರಿಗೆ ಬೇಕಾಗಿರುವೆನು.
ನಾನು ಆ ಮಹಾ ವಿಷ್ಣುವಿನ ಮಗನಾದ ಮನ್ಮಥನಿಗೆ ಬಿಲ್ಲಾಗಿರುವೆನು. ನನ್ನ ಗರಿಯೇ ನನ್ನನ್ನು ಕಾಪಾಡುವುದು, ನಾನು ಜನರಿಗೆ ನಾನಾ ತೆರ ದಲ್ಲಿ ಬೇಕಾಗಿರುವೆನು, ಬೇಕಾದರೆ ಜನರು ನನ್ನನ್ನು ಹಾಗೆಯೇ ಉಪ ಯೋಗಿಸಬಹುದು; ಇಲ್ಲವಾದರೆ ನನ್ನ ರಸವನ್ನು ತೆಗೆದು ಬೆಲ್ಲವನ್ನು ಮಾಡಬಹುದು, ನನ್ನ ಬೆಲ್ಲವನ್ನು ಚೆನ್ನಾಗಿ ಶೋಧಿಸಿ ದಿವ್ಯವಾದ ಸಕ್ಕರೆ ಯನ್ನು ಮಾಡಬಹುದು, ನನ್ನ ಸಿಪ್ಪೆಯನ್ನೂ ನನ್ನ ಗರಿಯನ್ನ ಒಲೆಗೆ ಉಪಯೋಗಿಸಿಕೊಳ್ಳಬಹುದು. ನನ್ನ ಚಕ್ಕೆಯಿಂದ ಬರೆವಕಾಗದವನ್ನು ಮಾಡಬಹುದು. ಭೂಮಿಯ ಮೇಲೆ ಜನ್ಮವೆತ್ತಿದರೆ ನನ್ನ ಹಾಗೆ ಜನರಿಗೆ ಉ ಪಯೋಗವಾಗಿದ್ದರೆ ಸಾರ್ಥಕ. ನಿನ ಜನ್ಮವನ್ನು ಸುಡು ' ಎಂದಿತು. ಇದುವರೆಗೂ ಸುಮ್ಮನೆ ಇದ್ದು, ಗಂಭೀರವಾಗಿ ಕೇಳುತ್ತಿದ್ದ ತೆಂಗು * ಮಿಣಕು ಹುಳಕ ನಕ್ಷತ್ರಕ್ಕೂ ಸಾಟಿಯೆ ! ನೀನು ಈ ಹೊತ್ತು ಇದ್ದು ನಾಳೆನಾಶವಾಗುವವನು, ನಾನು ನಾಲ್ಕಾರು ತಲೆ ನಿಂತು, ನನ್ನನ್ನು ನೆಟ್ಟ ವನ ಮಕ್ಕಳೂ ಮೊಮ್ಮಕ್ಕಳವರೆಗೂ, ಇವನ ಉಪಕಾರವನ್ನು ತಲೆಯ ಮೇಲೆ ಹೊತ್ತು, ಬೇಕಾದಾಗ, ಅಪೇಕ್ಷಿಸಿದವರಿಗೆ ಪ್ರತಿಯಾಗಿ ಉಪಕಾರ ವನ್ನು ಮಾಡುವೆನು, ನಿನ್ನ ನಾ ದರೆ, ರಸವನ್ನು ಹಿಂಡಿ ಒಲೆಗೆ ಎಸೆವರು. ಹುಟ್ಟಿದ ಒಂದೆರಡು ವರ್ಷದಲ್ಲಿ ನೀನು ನಿರ್ಣಾಮವಾಗುವೆ. ನಾನಾ ದರೋ ಜನರಿಗೆ ಮನೆಕಟ್ಟಿ ಕೊಳ್ಳುವುದಕ್ಕೆ ಉಪಯೋಗವಾಗಿರುವೆನು, ಅಡಿ ಗೆಗೆ ಉಪಯೋಗವಾಗಿರುವೆನು, ಬ್ರಾಹ್ಮಣರು ರಾಜನನ್ನು ನೋಡಲಿಕ್ಕೆ ಹೋದಾಗಲೂ, ಜನರು ದೇವರನ್ನು ನೋಡಲಿಕ್ಕೆ ಹೋದಾಗಲೂ ನನ್ನ ಫಲವನ್ನು ತೆಗೆದುಕೊಂಡು ಹೋಗಿ ಒಪ್ಪಿಸುವರು. ನನ್ನ ನಾರಿನಿಂದ ಹಗ್ಯವನ್ನು ಮಾಡುವರು. ನನ್ನ ಕರಟದಿಂದ ಸೌಟನ್ನು ಮಾಡುವರು. ನನ್ನ ತಾಳಿಂದ ತೊಲೆಯನ್ನು ಮಾಡುವರು ನನ್ನ ಗರಿಯಿಂದ ಮಟ್ಟಿಯನ್ನು ಮಾಡುವರು, ನನ್ನ ನಾರಿನಿಂದ ಬೆಂಕಿಯನ್ನು ಹೊತ್ತಿಸುವರು. ನಾನಿ ದ್ದಷ್ಟು ದಿನವೂ ಒಂದಲ್ಲ ಒಂದು ತೆರನಾಗಿ ಜನರಿಗೆ ಉಪಯೋಗವಾಗಿ ರುವೆನು. ಈ ಹೊತ್ತು ಹುಟ್ಟಿ, ನಾಳೆ ಬೆಳದು, ಮೈಯೆಲ್ಲಾ ಗಂಟುಗಂ ಟಾಗಿ, ಸೋಗೆ ಹರಿತವಾಗಿ, ನಾಡಿದ್ದು ಸಾಯುವ ನಿನಗೆ, ಎಷ್ಟು ಅಹಂ ಕಾರ ? ಸಾಕುಮಾಡು ' ಎಂದಿತು. ೩೨, ಮೃಗಗಳು ರಾಜನನ್ನು ಗೊತ್ತು ಮಾಡಿಕೊಂಡ ಬಗೆ.
ದಂಡಕಾರಣ್ಯವೆಂಬುದು ಒಂದು ಮಹಾಟವಿ, ಆ ಅಡವಿಗೆ ದೊರೆ ಯಾದ ಮೃಗರಾಜನು ಒಂದು ದಿನ ಬೆಳಗ್ಗೆ ಸತ್ತು ಬಿದ್ದಿದ್ದನು. ಆ ಸತ್ಯ ಸಿಂಹರಾಜನ ಬಳಿಯಲ್ಲಿ ಅವನ ಸಣ್ಣ ಮರಿಗಳು ಕಣ್ಮರನ್ನು ಸುರಿಸುತ್ತಾ ಕುಳಿತಿದ್ದುವು. ಅಷ್ಟು ಹೊತ್ತಿಗೆ ಸರಿಯಾಗಿ ಮಂತ್ರಿಶ್ರೇಷ್ಟ ನಾದ ಜಂಬು ಕನು (ನರಿಯು) ಬಂದು ರಾಜಪ್ರತ್ರರಿಗೆ ಸಮಾಧಾನವನ್ನು ಹೇಳಿ, ಹೆದರ ಬೇಡಿ ಯೆಂದು ಇತರ ಸಣ್ಣ ಸಣ್ಯ ಮೃಗಗಳಿಗೆ ಧೈರ್ಯವನ್ನು ಕೊಟ್ಟು, ಮುಂದಣ ಕ್ರಮವನ್ನು ನಡೆಸಲು, ಬಹುಬೇಗ ಒಂದು ಉಪಾಯವನ್ನು ತನ್ನೊಳಗೆ ತಾನೇ ಯೋಚಿಸಿತು. ' ಈಗಲಾದರೋ ನಮ್ಮ ಮಹಾರಾಜ ಸಿಂಹರಾಜನು ಸತ್ತು ಬಿದ್ದಿರುವನು. ಅವನಿಗೆ ಪರಮಮಿತ್ರನಾದ ನಾನು ಅವನ ಹಿರಿಯ ಮಗನಿಗೆ ಪಟ್ಟ ವನ್ನು ಕಟ್ಟಿ, ಅವನು ದೊಡ್ಡವನಾಗುವ ವರೆಗೂ ನಾನೇ ನಿಂತು ರಾಜ್ಯಭಾರವನ್ನು ಮಾಡುವುದು ಧರ್ಮ. ಆದರೆ ನನಗೆ ಸಲಹೆ ಕೊಡುವುದಕ್ಕೆ ಬರುದೇ ಹೊರತು ನಿಂತು ರಾಜ್ಯಭಾರ ವನ್ನು ಮಾಡುವುದಕ್ಕೆ ತಿ ಧರ್ಮ. ಆದರೆ ನನಗೆ ಸಲಹೆ ಕೊಡುವುದಕ್ಕೆ ಬರುವುದೇ ಹೊರತು ನಿಂತು ರಾಜ್ಯಭಾರ ವನ್ನು ಮಾಡುವುಡಕ್ಕೆ ತಿಳಿಯದು. ನನಗೆ ತಿಳಿಯದ ಕೆಲಸವನ್ನು ಮಾಡುವುದಕ್ಕೆ ತಿಳಿಯದು.ನನಗೆ ತಿಳಿಯದ ಕೆಲಸವನ್ನುಮಾಡುವುದಕ್ಕೆ ಹೋಗಿ, ನಾನು ಅವಿವೇಕಿ ಎನ್ನಿಸಿಕೊಳ್ಳಬಾರದು. ನನ್ನ ಮಂತ್ರಿ ತ್ವವೇನೋ ನನಗೆ ಉಳಿಯಬೇಕು ; ರಾಜನು ಯಾವನಾದರೇನು ?ನನ್ನಮಾತನ್ನು ಕೇಳುವವನು ಸಿಕ್ಕಿದರೆ ನನಗೆ ಬೇರೆ ದೊರೆತನವೇಕೆ ? ದೊರೆತ ನದ ಕಷ್ಟವಿಲ್ಲದೆ ದೊರೆಯ ಸುಖವನ್ನೆಲ್ಲಾ ನನ್ನ ಮನಸ್ಸು ಬಂದ ಹಾಗೆ ನಾನು ಅನುಭವಿಸಬಹುದು. ಇದಕ್ಕಾಗಿ ನಾನೇ ಮುಖ್ಯಮುಖ್ಯವಾದ ಪ್ರತಿಯೊಂದು ಜಾತಿಯ ಮೃಗದ ಬಳಿಗೂ ಹೋಗಿ--ಸಮಯವ್ರ ಹೀಗೆ ಇದೆ, ನೀನೇ ಹೇಗಾದರೂ ದೊರೆಯಾಗಬೇಕ೦ಬುದು ನನ್ನ ಮನಸ್ಸು ; ತಕ್ಕ ಪ್ರಯತ್ನವನ್ನು ಮಾಡು ಎಂದು ಹೇಳಿ ಬರುವೆನು. ಯಾರಾದರೂ ನನ್ನನ್ನೇ ಆಪ್ತನೆಂದು ಕರೆದರು ಎಂದು ಯೋಚಿಸಿ, ಹೊರಟ, ಆ ಕಾಡಿನಲ್ಲಿ ದ್ದ ಮೃಗಗಳಿಗೆಲ್ಲಾ ವರ್ತಮಾನವನ್ನು ಕೊಟ್ಟನು ಆಗ ಪ್ರತಿಯೊಂದು ಮೃ ಗವ್ರ * ಮಂತ್ರಿಯಂದರೆ ಜಂಬುಕನೇ ಮಂತ್ರಿ, ನಾನು ದೊರೆಯಾದರೆ ಅವ ನನ್ನೇ ಮಂತ್ರಿಯಾಗಿ ಇಟ್ಟುಕೊಳ್ಳುವೆನು, ನಮಗೆ ಎಂತಹ ಮಿತ್ರ, ' ಎಂದು ಕೊಂಡು ಸಿಂಹರಾಜನ ಅರಮನೆಯಾಗಿದ್ದ ಒಂದು ದೊಡ್ಡ ಗವಿಯ ಬಳಿಗೆ ಬಂದು ಸೇರಿತು. ನರಿಯ ಅಷ್ಟು ಹೊತ್ತಿಗೆ ಅಲ್ಲಿಗೆ ಬಂದು, ' ಎಲೈ, ಮೃಗಶ್ರೇಷ್ಟರಿರಾ ! ನಮ್ಮ ಮಹಾರಾಜನು ದೈವಾಧೀನನಾಗಿರುವನು. ಅವನ ಮಕ್ಕಳು ಶಕ್ತರೇ ಆದರೂ ಇನ್ನೂ ಚಿಕ್ಕವರಾಗಿರುವರು. ಅವರು ದೊಡ್ಡವರಾಗುವವರೆಗೂ ರಾಜ್ಯಭಾರವನ್ನು ನಿಮ್ಮಲ್ಲಿ ಯೋಗ್ಯರಾದವ ರಿಗೆ ಒಪ್ಪಿಸಬೇಕೆಂದು ಯೋಚಿಸಿರುವರು. ಆದುದರಿಂದ ನಿಮ್ಮಲ್ಲಿ ಶ್ರೇಷ್ಠ
ರಾದವರು ರಾಜ್ಯಭಾರವನ್ನು ವಹಿಸಬೇಕೆಂದು ನಮ್ಮ ಕೋರಿಕೆ,' ಎಂದು ಹಿಂಗಾಲುಗಳನ್ನು ಮುಗಿದು ತಲೆ ತಗ್ಗಿಸಿ,ಬಹು ವಿನಯದಿಂದ ಬಿನ್ನಹ ,ಮಾಡಿಕೊ ಮೇಲೆ ನಿಂತು, ಮುಂಗಾಲುಗಳನ್ನು ಮುಗಿದು ತಲೆ ತಗ್ಗಿಸಿ, ಬಹು ವಿನಯದಿಂದ ಬಿನ್ನಹ ಮಾಡಿಕೊಂಡಿತು.
ಅಲ್ಲಿ ನೆರೆದಿದ್ದ ಆನೆ, ಹುಲಿ, ಕರಡಿ, ಕತ್ತೆ, ಕುದುರೆ, ನಾಯಿ, ನರಿ, ಕೊತಿ, ಗಿಳಿ ಮುಂತಾದುವುಗಳು ಸ್ವಲ್ಪ ಹೊತ್ತು, ಒಂದರ ಮುಖವನ್ನು ಒ೦ದು ನೋಡಿದುವು. ತರುವಾಯ ಒಂದು ಗುಟರೆಯನ್ನು ಹಾಕಿ, ಹುಲಿ ಎದ್ದು, ಬಾಲವನ್ನು ನೆಲಕ್ಕೆ ಅಪ್ಪಳಿಸಿ, ತಲೆಯನ್ನು ಒದರಿ ಮೈಯನ್ನು ಮುರಿದು, ಮತ್ತೆ ಒಂದುಸಲ ಸಣ್ಣ ಸಣ್ಣ ಮೃಗಗಳು ನಡಗುವಂತೆ ಆರ್ಭ ಟಿಸಿ,-ರಾಜವಂಶಕ್ಕೆ ಸೇರಿದವನಾಗಿಯೂ,ಗತಿಸಿದ ಸಿಂಹರಾಜನಿಗೆ ಸವಿತಾಪ ಬಂಧುವಾಗಿಯೂ ಇರುವ ನಾನಲ್ಲದೆ ಈ ದೊರೆತನಕ್ಕೆ ಇನ್ನು ಯಾರು ತಾನೆ ಅರ್ಹರು ?- ಎಂದಿತು.
ಹುಲಿಯ ಸಡಗರವನ್ನೂ , ಆರ್ಭಟವನ್ನೂ ಧಿಕ್ಕರಿಸುವ ನೋಟ ದಿಂದ ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು ನೋಡುತ್ತಿದ್ದ ಕರಡಿಯು, ಗುಲೊಂದು ಗೇಣುಗೇಣುದ್ದ ಕೂದಲುಳ್ಳ ತನ್ನ ಮೈಯನ್ನು ಒಂದಾವೃತ್ತಿ ಕೊಡವಿ, ಹಿಂಗಾಲ ಮೇಲೆ ನಿಂತು, ಹುಲಿಯನ್ನು ಕುಸ್ತಿಗೆ ಕರೆಯುವಂತೆ ಮುಂಗಾಲುಗಳನ್ನು ಎತ್ತಿ ಬೀಸುತ್ತಾ, 'ಹುಲಿಯೆ! ಸಾಕು! ನಿಲ್ಲಿಸು! ನಾನಿ ಲ್ಲಿರುವಾಗ ನೀನು ಯಾರು? ಬಲದಲ್ಲಿ ನಾನು ನಿನಗೆ ಕಡಿಮೆಯೆ? ಪ್ರಾಣಿ ಗಳನ್ನು ಹಿಂಸಿಸುವುದರಲ್ಲಿ ನಾನು ಯಾರಿಗೆ ಕೀಳು? ಧೈರ್ಯದಲ್ಲಿ ನನಗೆ ಇದಿರಾರುಂಟು? ಇವೆಲ್ಲಾ ಹಾಗಿರಲಿ, ಶತ್ರುವು ಮರವನ್ನೇರಿದರೆ, (ಇತರ ಮೃಗಗಳ ಕಡೆಗೆ ತಿರುಗಿ) ಈ ಬೆಪ್ಪ, ಮರವನ್ಮ ರೀತೇ? ಶತ್ರುವಿನಿಂದ ನಿಮ್ಮ « ಲ್ಲಾ ಸಂರಕ್ಷಿಸೀತೇ? ನಾನೇ ಎಂದೆಂದಿಗೂ ರಾಜನಾಗಿರುವುದಕ್ಕೆ ತಕ್ಕ ವನು, ನನ್ನ ಶಕ್ತಿ ಆ ಸಿಂಹ ಕ ಇಲ್ಲ. ನನ್ನ ಯೋಗ್ಯತೆಯ ನ್ನು ನೀವು ಚೆನ್ನಾಗಿ ತಿಳಿದು ಯೋಚಿಸಿರಿ,' ಎಂದು ಮೃಗಗಳು ಬೆದರಿ ಓಡಿಹೋ ಗುವಂತೆ ಕೋಪದಿಂದ ಗುರುಗುಟ್ಟಿತು.
ಇವೆರಡರ ಆರ್ಭಟವನ್ನೂ ಗಂಭೀರವಾಗಿ ನೋಡುತ್ತಿದ್ದ ಗಜರಾ ಜನು, ಸೊಂಡಿಲನ್ನು ಅಲ್ಲಾಡಿಸುತ್ಯ, ಮುಂದೆ ಬಂದು, ' ನಾನು ಹೆಚ್ಚು ೪೯
ಹೇಳುವುದಿಲ್ಲ, ಗಾತ್ರದಲ್ಲಿಯ, ಶಕ್ತಿಯಲ್ಲಿಯ , ಧೈರ್ಯದಲ್ಲಿಯ, ಮುಖ್ಯವಾಗಿ ಗಾಂಭೀರದಲ್ಲಿಯೂ ಈ ಕಾಡಿನಲ್ಲಿ ನನ್ನಂತೆ ಇನ್ನಾವ ಪಾ)ಣಿಯಾದರೂ ಉಂಟೆ ? ಈ ವಿಷಯವನ್ನು ಸ್ವಲ್ಪ ಮನಸ್ಸಿಗೆ ತೆಗೆದುಕೊಂಡು ನೀವು ಯಾರನ್ನು ಬೇಕಾದರೂ ಗೊತ್ತು ಮಾಡಿಕೊಳ್ಳಿರಿ” ಎಂದಿತು. "ರೂಪಿನಲ್ಲಿಯೂ, ಕಾಲುಬಲದಲ್ಲಿಯೂ ನನಗೆ ಈಡಾರು ? ಎಂದು ಕುದುರೆಯ; ನನ್ನ ಕಣ್ಣೀ ಸಾಕು | ನನ್ನ ಕಾಲಿನ ಮಹಿಮೆಯೊಂದೇ ಮೇಲು ! ದೊರೆತನಕ್ಕೆ ಇನ್ನೇನು ಬೇಕು ? ” ಎಂದು ಜಿಂಕೆಯೂ; 'ಮನುಷ್ಯರಂತಿರುವ ನಾನಲ್ಲದೆ ಇನ್ನು ಯಾರು ದೊರೆಯಾಗಬಲ್ಲರು ? ನನು ಚೇಷ್ಟೆಗಳಲ್ಲದೆ ಇನ್ನಾವುವು ನಿಮಗೆ ಸಂತೋಷವನ್ನುಂಟುಮಾಡುವುವು ?' ಎಂದು ಕಪಿಯ; ಕಲಿತ ಎರಡು ಮಾತುಗಳನ್ನು ಮುದ್ದು ಮುದ್ದಾಗಿ ಆಡುತ ಬಂದ ಗಿಳಿಯು, “ಮನು ಷ್ಯರು ಮಾತನಾಡುವಂತೆ ಮಾತನಾಡುವ ನಾನುತಾನ ನಿಮಗೆಲ್ಲ ದೊರೆಯಾಗಿರಬೇಕು ?” ಎ೦ದೂ ಹೀಗೆಯೇ ಯೋ ಗ್ಯತೆ ಇಲ್ಲದಿದ್ದರೂ ನಾನು ತಾನೆಂದು ಹೊಡೆದಾಡುತ್ತಿದ್ದ ಇತರ ಅಲ್ಪ ಪ್ರಾಣಿಗಳನ್ನು ಗಣನೆಗೆ ತಾರದೆ, ಮುಖಂಡರಾದ ಕೆಲವು ಮೃಗಗಳು ಸೇರಿ ಪ್ರಾಣಿಹಿಂಸೆ ಮಾಡದ, ಬಲವಾದ, ಗಂಭೀರವಾದ, ಮುಖ್ಯ ವಾಗಿ ಸ್ಕೋ ತ್ರಪ್ರಿಯನಾದ ಗಜರಾಜನೇ ಈ ಅರಣ್ಯದಲ್ಲಿ ಸದ್ಯ ರಾಜನಾಗಿರಬೇಕೆಂದು ಗೊತ್ತು ಮಾಡಿಕೊಂಡು, ರಾಜಾಧಿರಾಜಾ ಹೋ ! ಎಂದು ಕೂಗಿಕೊಳ್ಳುತ್ತ ತಮ್ಮ ತಮ್ಮ ಬಿಡಾರಕ್ಕೆ ಹೋದುವು. ಎಲ್ಲವೂ ಹೊರಟು ಹೋಗುವವರೆಗೆ ಕಾದಿದ್ದು ಒರು ತಂತ್ರಿಯಾದ ಆ ನರಿಯು, ಗಜರಾಜನಿಗೆ ನಯಭಯವನ್ನು ತೋರಿಸುತ ಬಹು ದೂರ ದಲ್ಲಿ ನಿಂತಿದ್ದು, ಆ ಗಜರಾಜನು ಒಂದು ಆವೃತ್ತಿ ಇದಿದ್ದ ಕಡೆಗೆ ತಿರುಗಲು ಮೆಲ್ಲನೆ ಹತ್ತಿರಕ್ಕೆ ಹೋಯಿತು. ಆಗ ಆನೆಯು ಎಲೈ ಮ೦ತ್ರಿಶ್ರೇಷ್ಠ ನೇ! ನೀನು ಬಂದು ನನಗೆ ಹೇಳದಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ, ನನಗೆ ಈ ಪದವಿಯ ಸಿಕ್ಕುತ್ತಿರಲಿಲ್ಲ, ನನ್ನ ಮಿತ್ರನಾದ ನೀನೇ ಮಂ ತ್ರಿಯಾಗಿದ್ದು ಕೊಂಡು ನಮ್ಮ ಪ್ರಜೆಗಳ ಕ್ಷೇಮಲಾಭಗಳನ್ನು ತಿಳಿಸುತ್ತಾ ಬಾ- ಎಂದು ಹೇಳಿ, ಗಿಡದೊಳಕ್ಕೆ ನುಗ್ಗಿ, ಸೊಂಡಲಲ್ಲಿ ರೆಂಬೆಗಳನು ಮುರಿದು ತಿರುಗಿಸುತ್ತಾ, ಸಂತೋಷದಿಂದ ತನ್ನ ಹಿಂಡನ್ನು ಸೇರಿತು.
೫೦
೩೩, ವರಲಕ್ಷ್ಮೀ ಕಥೆ.
ಎದರ್ಭದೇಶವೆಂದು ಒಂದು ದೇಶ. ಆ ದೇಶದಲ್ಲಿ ಕುಂಡಿನ ನಗರ ವೆಂಬುದೊಂದು ಪಟ್ಟಣ. ಆ ಪಟ್ಟಣದಲ್ಲಿ ಚಾರುಮತಿ ಎಂಬ ಪತಿವ್ರ ತಾ ಶಿರೋಮಣಿಯೊಬ್ಬಳಿದ್ದಳು, ಆ ಚಾರುಮತಿಯು, ತನ್ನ ಗಂಡನೇ ದೇವರೆಂದು ತಿಳಿದು, ಗಂಡನಮಾತಿಗೆ ಇದಿರಾಡದೆ, ಯಾವಾಗಲೂ ಗಂ ದನ ಉಪಚಾರದಲ್ಲಿಯೇ ಸಂತೋಷದಿಂದ ಕಾಲವನ್ನು ಕಳೆಯುತ್ತಿದ್ದಳು. ಗಂಡನಾದರೋ ಬಹು ಬಡವ; ಬೆಳಗ್ಗೆ ಊಟಕ್ಕೆ ಇದ್ದರೆ ಸಾಯಂಕಾ ಲಕ್ಕೆ ಇರುತ್ತಿರಲಿಲ್ಲ; ಬಹು ಕಷ್ಟ ಪಟ್ಟು ಅನ್ನ ವನ್ನು ಸಂಪಾದಿಸಿ ತರು ತಿದ್ದನು. ಗಂಡನು ತಂದುದನ್ನು ಸಂತೋಷದಿಂದ ತೆಗೆದಿಟ್ಟು., ದೇವ ರಿಗೆ ಸಮರ್ಪಿಸಿ, ಗಂಡನಿಗೆ ಊಟಕ್ಕೆ ಇಟ್ಟು, ಮಿಕ್ಕುದನ್ನು ಆ ಚಾರು ಮತಿಯು ಊಟಮಾಡಿ ಸುಖವಾಗಿರುತ್ತಿದ್ದಳು. ಒಂದು ದಿನವಾದರೂ ತನ್ನ ಗಂಡ ಬಡವನೆಂದು ಅವಳು ಅಸಮಾಧಾನಪಟ್ಟು ದಿಲ್ಲ, ಗಂಡನ ಬಡ ತನವನ್ನ ತಾಡಿ ಯಾವಾಗಲೂ ಅವನ ಮನಸ್ಸನ್ನು ನೋಯಿಸಿದುದೂ ಇಲ್ಲ, ನೆರೆಹೊರೆಯವರ ಐಶ್ವರವನ್ನು ನೋಡಿ ದುಃಖತಪಟ್ಟವಳಲ್ಲ, ಒಬ್ಬರೊಡ ನೆಯ ಅವಳು ಗಟ್ಟಿಯಾಗಿ ಮಾತನಾಡಿದವಳಲ್ಲ, ಯಾವ ಪ್ರಾಣಿಯನ್ನು ಕಂಡರೂ ಅವಳು ಪ್ರೀತಿಸುತ್ತಿದ್ದಳು.
ಹೀಗಿದ್ದ ಚಾರುಮತಿಯ ಒಳ್ಳೆಯತನಕ್ಕೂ, ಸುಗುಣಕ್ಕೂ, ಅವರನ್ನು ಲಕ್ಷ್ಮಿದೇವಿಯೇ ಮೆಚ್ಚಿ, ಒಂದುದಿನ ರಾತ್ರಿ ಚಾರುಮತಿಯ ಸ್ವಷ್ಟದಲ್ಲಿ ಬಂದು “ಎಲ್! ಚಾರುಮತೀ, ನಿನಗೆ ಗಂಡನಲ್ಲಿರುವ ಭಕ್ತಿವಿಶ್ವಾಸಕ್ಕೂ, ಪ್ರಾಣಮಾತ್ರದಲ್ಲಿರುವ ಪ್ರೀತಿಗೂ ನಾನು ಮೆಚ್ಚಿದೆನು. ಇಂತಹವರನ್ನ ಇವೆ ದೇವಾನುದೇವತೆಗಳು ಮೆಚ್ಚತಕ್ಕುದು! ನಾನು ವರಲಕ್ಷ್ಮೀದೇವಿ. ಏಳು! ಏಳು! ನಾನು ಹೇಳುವುದನ್ನು ಕೇಳು. ಬರುವ ಶ್ರಾವಣಮಾಸದ ಶುಕ್ಲ ಪಕ್ಷದ ಎರಡನೆಯ ಶುಕ್ರವಾರದಲ್ಲಿ ನನ್ನನ್ನು ಪೂಜೆಮಾಡು, ಹಾಗೆ ನನ್ನನ್ನು ಮನಃಪೂರ್ವಕ ಪೂಜೆಮಾಡಿದವರಿಗೆ ಬೇಕಾದುದನ್ನೆಲ್ಲಾ ಕೋ ಡುವೆನು' ಎಂದು ಹೇಳಿ ಮಾಯವಾದಳು.
ಬೆಳಗಾಯಿತು. ಚಾರುಮತಿಯು ತನ್ನ ಸ್ವಪ್ನವನ್ನು ತಿಗೆ ತಿಳಿ ಸಿದಳು. ಅವನು ಸಂತೋಷದಿಂದ ಶ್ರಾವಣ ಶುಕ್ರವಾರ ವರಲಕ್ಷ್ಮೀಪೂಜೆಗೆ ೫೧ ಬೇಕಾದುದನ್ನು ಅಣಿಮಾಡಿದನು. ಸದಾ ನಿರ್ಮಲಚಿತ್ತಳಾದ ಆ ಚಾರು ಮತಿಯು ಆ ದಿನ ವರಲಕ್ಷ್ಮಿಯನ್ನು ಮನಸ್ಸಿನಿಂದ ಪೂಜೆಮಾಡಿದಳು' ಲಕ್ಷ್ಮಿಯು ಬೇಕಾದ ವರವನ್ನಿತಳು. ಚಾರುಮತಿಯ ಮನೆಯಲ್ಲಿ ಧನ ವೂ ಧಾನ್ಯವೂ ಉಕ್ಕಿದುವ, ಚಾರುನುತಿಯು ಆ ಸಂಪತ್ತಿನಿಂದ ಬಡಬಗ್ಯ ರಿಗೆ ಅನ್ನ ದಾನ ಮಾಡುತ್ತಾ, ಐಶ್ವರ್ಯ ಬಂದಿತೆಂದು ಗಂಡನನ್ನು ತಿರಸ್ಕ ರಿಸದೆ, ಎಂದಿನಂತೆ ಸ್ವಲ್ಪವೂ ಬೇಸರವಿಲ್ಲದೆ ಗಂಡನನ್ನು ಉಪಚರಿಸುತ್ತಾ ವರಲಕ್ಷ್ಮೀಯನು ಪೂಜಿಸುತ್ತಾ ಸೌಖ್ಯವಾಗಿದ್ದಳು. ೩೪, ಕಡುಬಿನ ಕಥೆ. ಒಂದಾನೊಂದು ಪಟ್ಟಣವಿದ್ದಿತು. ಆ ಪಟ್ಟಣದಲ್ಲಿ ಶಾಸ್ತ್ರಿಗಳೆಬ್ಬ ರಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು, ಅವರಿಬ್ಬರಿಗೂ ಚೆನ್ನಾ ಗಿ ವಿದ್ಯೆಯನು ಕಲಿಸಿ, ದೊಡ್ಡವಳನ್ನು ತಮ್ಮ ಸೋದರದ ಕಡೆಯ ಒಬ್ಬ ಹುಡುಗನಿಗೆ ಮದುವೆ ಮಾಡಿಕೊಟ್ಟಿದ್ದರು. ಆ ಹುಡುಗನು ಒಂದು ಹಳ್ಳ ಯಲ್ಲಿ ವಾಸವಾಗಿದ್ದನು. ಮದುವೆಯಾದ ಕೆಲವು ವರ್ಷಗಳಲ್ಲಿ ಆ ಹುಡು ಗನ ತಂದೆತಾಯಿಗಳು ತಿರಿಹೋಗಲು, ಆ ಹುಡುಗನು ಮಾವನ ಮನೆಗೆ ಹೋಗಿ, ಕೆಲವು ದಿನಗಳು ಅಲ್ಲಿಯೇ ಇದ್ದು ತರುವಾಯ ತನ್ನ ಹೆಂಡತಿ ಯೊಡನೆ ಹಳ್ಳಿಗೆ ಹೋಗಬೇಕೆಂದು ಹೇಳಿದನು. ಆಗ ಶಾಸ್ತ್ರಿಗಳು ಅಳಿಯ ನಿಗೂ ಮಗಳಿಗೂ ಒಳ್ಳೆಯ ಔತಣವನ್ನು ಮಾಡಿ ಉಡುಗೊರೆಗಳನ್ನು ಕೋ ಟ್ಟು ಕಳುಹಿಸಿದರು. ದಾರಿಯಲ್ಲಿ ಬರುತ್ತಾ, ಮಧ್ಯಾಹ್ನದ ಊಟವನ್ನು ಜ್ಞಾಪಿಸಿಕೊಂ ಡು, 'ಎಲೆ, ಎಲೆ, ನಾವು ಊರಿಗೆ ಹೋದೊಡನೆ ನೀನು ಅದನ್ನು ಮಾಡಿ ಹಾಕಬೇಕು, ನೋಡು. ಅದು ಬಹು ರುಚಿಯಾಗಿದ್ದಿತು' ಎಂದು ಗಂ ಡನು ಹೆಂಡತಿಗೆ ಹೇಳಿದನು. “ ಅದು' ಎಂದರೆ ಯಾವುದೋ ತಿಳಿಯದೆ, ಅದು ಯಾವದು? ಎಂದು ಕೇಳಿದಳು. ಅದಕ್ಕೆ ಗಂಡನು, “ಅದುಕಾಣೆ ಎಂದರೆ, ಅದು ಬಹು ಚೆನ್ನಾಗಿದ್ದಿತಲ್ಲೇ! ಅದು!” ಎಂದನು. ಜಾಣೆ ೫೨ ಯಾದ ಹೆಂಡತಿಯು, ಮಧ್ಯಾಹ್ನ ದಲ್ಲಿ ಮಾಡಿದ ಅಡಿಗೆಯಲ್ಲಿ ಒಂದೊಂದು ಭಕ್ಷ್ಯವನ್ನಾಗಿ ಮಾಡೇ? ಚಿರೋಟಿಯೇ? ಜಿಲೇಬಿಯೇ? ಫೀವರೇ? ಎಂದು ಹೆಸರು ಹೇಳುತ್ತಾ, ಅದರದರ ರುಚಿಯನ್ನು ಸಾಧ್ಯವಾದಮಟ್ಟಿಗೂ ಒಣ್ಣಿಸುತ್ತಾ ಬಂದಳು, ಯಾವುದಕ್ಕೂ-ಅದಲ್ಲ, ಅದೂ ಅಲ್ಲ, ಅದೂ ಅಲ್ಲಎಂದು ಹೇಳುತ ಬಂದನು, ಅವಳಿಗೆ ಆಗ ಕಡುಬು ಜ್ಞಾಪಕಕ್ಕೆ ಬರಲಿಲ್ಲ. ಅದಲ್ಲದೆ ಕಡುಬನ್ನು ಯಾರು ತಾನೆ ತಿಂದು ಅರಿಯರು, ಅದೇನು ಅಂತಹ ಅಪೂರ್ವವಾದ ಭಕ್ಷ್ಯ: ಅಂತೂ ಅವಳು ಕಡುಬಿನ ಹೆಸರು ಹೇಳಲಿಲ್ಲ. ಹೀಗೆ ಮಾತನಾಡುತ್ತ ಹೋಗುತ್ತಿರುವಷ್ಟರಲ್ಲಿಯೇ ಹಳ್ಳಿಯು ಸಿಕ್ಕಿತು, ಅಲ್ಲಿ ಪ್ರತಿದಿನವೂ ಊಟಮಾಡುವಾಗಲೆಲ್ಲಾ 'ಎಲೆ, ಅದು ಮಾ ಡುವದಿಲ್ಲವೇನೆ?” ಎಂದು ಕೇಳುತಿದ್ದನು. ಅದೇನು ಮಾಡಬೇಕೋ ಅವ ಳಿಗೆ ತಿಳಿಯದೆ ಅವಳು “ಒಳ್ಳೆಯದು ನಾಳೆ ನಾಡಿದ್ದು,” ಎಂದು ದಿನವನ್ನು ಕಳೆಯುತ್ತಿದ್ದಳು, ಒಂದುದಿನ ಇವನು, ಊಟದ ಹೊತ್ತಿಗೆ ಏಳದೆ, ಅದನ್ನು ಮಾಡಿಹಾಕಿದಲ್ಲದೆ ನಾನು ಊಟಕ್ಕೆ ಬಾರೆನು” ಎಂದು ಹಟಹಿ ಡಿದನು, ಅವಳು ಎಷ್ಟೆಷ್ಟು ಉಪಚಾರ ಹೇಳಿದರೂ ಕೇಳದೆ ಇದ್ದುದರಿಂದ ಏನೂ ತೋರದೆ, “ಹೀಗೆ ನೀವ ಕೋಪಮಾಡಿಕೊಂಡರೆ ನಾನೇನು ಮಾಡ ಲಿ?” ಎಂದಳು. ಇಷ್ಟಕ್ಕೆ ಆ ಹಳ್ಳಿಯ ಬ್ರಾಹ್ಮಣನಿಗೆ ಕೋಪಬಂದು, ಫಟೇರ್, ಎಂದು ಅವಳ ಕಪಾಳಕ್ಕೆ ಒಂದು ಏಟನ್ನು ಹಾಕಿದನು. ಅಷ್ಟರಲ್ಲಿಯೇ ಮಗ್ಗುಲ ಮನೆಯ ಹೆಂಗಸು ನೀರಿಗೆ ಬಂದಳು. ಈಕೆಯು ಬೇಗ ಕಣ್ಣೀರನ್ನು ಒರಸಿಕೊಂಡು ನಿಂತಿರಲು, ಈಕೆಯನ್ನು ನೋಡಿ “ಇದೇನಮ್ಮ ಇದು! ಕಡುಬು ಊದಿದಹಾಗೆ ನಿಮ್ಮ ಗಲ್ಲವೂ ಊದಿ ದೆಯಲ್ಲ?” ಎಂದಳು. ಆಗ ಒಳಗಿದ್ದ ಬ್ರಾಹ್ಮಣನು ಬೇಗ ಎದ್ದು ಬಂದು, “ ಅದು ಕಾಣೆ, ಅಗೋ ಅದು! ಕಡುಬು, ಕಡುಬು ಮಾಡಿಹಾಕು' ಎಂ ದನು. ಅದಕ್ಕೆ ಹೆಂಡತಿಯು ಮುಗುಳುನಗೆ ನಗುತ್ತಾ, “ಅಗತ್ಯವಾಗಿ ನಾಳೆ ಮಾಡಿ ಹಾಕುತ್ತೇನೆ. ಈಗ ಊಟಕ್ಕೆ ಎಳಿ” ಎನ್ನಲು, ಹಸಿದಿದ್ದ ಬ್ರಾಹ್ಮಣನು ಎದ್ದು, ಕಡುಬು ನಾಳೆ ಸಿಕ್ಕುವುದೆಂಬ ಸಂತೋಷದಿಂದ ಊಟ ಮಾಡಿದನು. ಕಡುಬಿಗೆ ದವಡೆ ಪೆಟ್ಟು ಮಲವಾಯಿತು. ೫೩ ೩೫, ಹುಡುಗನ ಗಿಣಿಯ. “ಒಂದು ಮನೆಯಲ್ಲಿ ಗಂಡಹೆಂಡಿರಿಬ್ಬರು ವಾಸವಾಗಿದ್ದರು. ಅವರಿಗೆ ಬಹುಕಾಲ ಮಕ್ಕಳಿರಲಿಲ್ಲ. ಆದುದರಿಂದ ಒಂದು ಮುದ್ದಾದ ಅರಗಿಣಿಯ ನು ಮನೆಯಲ್ಲಿ ಸಾಕುತಿದ್ದರು. ಆ ಗಿಣಿಗೆ ಮಾತನ್ನು ಕಲಿಸುವುದರಲ್ಲಿ ಯೇ ಅ ಗಂಡಹೆಂಡಿರು ಕಾಲವನ್ನು ಕಳೆಯುತ್ತಿದ್ದರು. ಆ ಗಿಣಿಯನ್ನು ರಾಮನೆಂದು ಕರೆಯುತಿದ್ದರು, ರಾಮ! ಎಲ್ಲಿದ್ದೀಯೆ? ಎಂದು ಕೇಳಿದೆ ಡನೆ ಅದು ಎಲ್ಲಿದ್ದರೂ “ನಾನು ಇಲ್ಲಿದ್ದೇನೆ” ಎಂದು ಉತ್ತರ ಕೊಡುವಂತೆ ಕಲಿಸಿದ್ದರು. ಈ ಗಿಣಿಯೊಡನೆ ಆಡುವುದಕ್ಕೆ ನೆರೆಹೊರೆಯ ಹುಡುಗರು ಬರುತ್ತಿ ದ್ದರು, ಅವರಲ್ಲಿ ಒಬ್ಬ ಹುಡುಗನು ಈ ಗಿಣಿಯನ್ನು ಹೇಗಾದರೂ ಕದ್ದು ಕೊಂಡು ಹೋಗಬೇಕೆಂದು ಇದ್ದನು. ಒಂದು ದಿನ ಆ ಹುಡುಗನು ಮನೆ ಯ ಯಜಮಾನನು ಇಲ್ಲದಿರುವ ಸಮಯವನ್ನು ನೋಡಿ ಆ ಮನೆಗೆ ಬಂದು, ಪಂಜರದಲ್ಲಿ ಇದ್ದ ಗಿಣಿಯನ್ನು ತೆಗೆದುಕೊಂಡು ಜೇಬಿನಲ್ಲಿಟ್ಟು ಕೊಂಡು ಹೊರಟುಹೋಗುತಿದ್ದನು. ಅಷ್ಟರಲ್ಲೇ ಆ ಮನೆಯ ಯಜಮಾ ನನು ಬಂದು, ಈ ಹುಡುಗನು ಇದ್ದುದನ್ನು ನೋಡಿ, ಅವನ ಮನಸ್ಸಿಗೆ ಸಂತೋಷಪಡಿಸಬೇಕೆಂದು “ರಾಮ; ಎಲ್ಲಿದ್ದೀಯೆ” ಎಂದು ಕೂಗಿದನು. ಆ ಹುಡುಗನ ಜೇಬಿನಲ್ಲಿದ್ದ ಗಿಣಿಯು ಅಲ್ಲಿಂದಲೇ 'ನಾನು ಇಲ್ಲಿದ್ದೇನೆ” ಎಂ ದಿತು. ಆ ಹುಡುಗನ ಮುಖವು ಕೆಟ್ಟಿತು; ಕಳ್ಳನು ಸಿಕ್ಕಿಬಿದ್ದನು. ೩೬. ಕೆಲಸದ ಹೆಂಗಸರೂ ಕೊಳಿಯೂ. ಒಂದು ಊರಿನಲ್ಲಿ ಒಬ್ಬ ಮುದುಕಿ ಇದ್ದಳು, ಅವಳು ಅಡಿಗೆ ಕೆಲಸ ವನ್ನು ಮಾಡಲಿಕ್ಕೆ ಇಬ್ಬರು ಹೆಂಗಸರನ್ನು ಇಟ್ಟು ಕೊಂಡಿದ್ದಳು. ಬೇಗ ಎದ್ದು ಅಡಿಗೆ ಮಾಡಲೆಂದು, ಆ ಮುದುಕಿಯು ಮೊದಲ ಕೋಳಿ ಕೂಗು ಇಲೂ ಅವರಿಬ್ಬರನ್ನೂ ಕೆಲಸಕ್ಕೆ ಎಬ್ಬಿಸುತಿದ್ದಳು. ಅವರಿಗೆ ಆ ಹೊತ್ತಿ ನಲ್ಲಿ ಬಹು ನಿದ್ರೆ, ಅವರಿಬ್ಬರೂ ಎದ್ದಲ್ಲದೆ ಮುದುಕಿಯು ಭಡಳು, ಗಣ ಗುಟ್ಟುತ್ತಾ ಎದ್ದು, ಆ ಇಬ್ಬರು ಹೆಂಗಸರೂ ಕೆಲಸ ಮಾಡುತಿದ್ದರು. ೫೪ ಈ ಮನೆಯಲ್ಲಿರುವ ಈ ಹಾಳು ಕೋಳಿ ಕೂಗುವದರಿ೦ದಲ್ಲವೆ ನಮ್ಮ ನ್ನು ಈ ಮುದುಕಿಯು ಬೇಗ ಎಬ್ಬಿಸುವುದು; ಈ ರಾತ್ರಿ ಅದನ್ನು ಕೊಂದು ಹಾಕಿ ನಾವು ಮಲಗಿಕೊಳ್ಳೋಣವೆಂದು, ಆ ಕೆಟ್ಟ ಹೆಂಗಸರು, ಪಾಪ ! ಆ ಕೋಳಿಯನ್ನು ಕೊಂದು ಮಲಗಿಕೊಂಡರು. ಮುದುಕಿಗೆ ಒಂದು ಹೊತ್ತಿಗೆ ಎಚ್ಚರವಾಯಿತು, ಕೋಳಿ ಕೂಗಿರ ಬಹುದು, ಬೆಳಗಾಗಿರಬಹುದು ಎಂದು ಆ ಮುದುಕಿ ಆ ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ಇವರನ್ನು ಕೂಗು ವುದಕ್ಕೆ ಮೊದಲುಮಾಡಿದಳು. ಅವರು ಎದ್ದು ಬೆಳಗತನಕ ನಿದ್ರೆಯೇ ಇಲ್ಲದೆ ಕೆಲಸ ಮಾಡಬೇಕಾಯಿತು. ೩೭, ಶ್ರೀರಾಮ ನ ಚಂದ್ರನು. ಹುಣ್ಣಿಮೆಯ ಸಾಯಂಕಾಲ, ಸೂರ್ಯನು ಪಶ್ಚಿಮ ದಿಕ್ಕಿನಲ್ಲಿ ಅದೇ ಮುಳುಗಿದ್ದನು. ಭೂತ್ವ ದಿಕ್ಕಿನಲ್ಲಿ ಚಂದ್ರನು ಆಗತಾನೆ ಹುಟ್ಟುತ್ತಿದ್ದ ನು. ಆ ದಿಕ್ಕು ಕೆಂಪಗೆ ಥಳಥಳಿಸುತಿದ್ದಿತು. ಗಾಳಿಯು ತಣ್ಣಗೆ ಬೀಸು ಶಿದ್ದಿತು. ಪಕ್ಷಿಗಳು ಗೂಡುಗಳನ್ನು ಸೇರುತಿದ್ದುವ, ಮನೋಹರವಾದ ಆ ಸಂಜೆಯನ್ನೂ ಆ ಚಂದ್ರಮಂಡಲವನ್ನು ಶ್ರೀರಾಮನಿಗೆ ತೋರಿಸಬೇಕೆಂದು ತಾಯಿಯಾದ ಕಸಲೈಯು ಮಗುವನ್ನು ಕರೆತಂದಳು, ಮೇಲಕ್ಕೆ ಎಸೆದ ಬೆಳ್ಳಿಯ ಚೆಂಡಿನಂತೆ ಅಷ್ಟರಲ್ಲಿಯೇ ಕಾಣಿಸಿಕೊಂಡ ಆ ಚಂದ್ರನನ್ನು ಶ್ರೀ ರಾಮನಿಗೆ ತೋರಿಸಿದಳು. ಶ್ರೀರಾಮನು ಚಂದ್ರನನ್ನು ನೋಡಿ ತನಗೆ ಆಡುವುದಕ್ಕೆ ಅದು ಬೇಕೆಂದು ಮುದ್ದಾದ ಎರಡು ಕೈಗಳನೂ ಚಂದ್ರನ ಕಡೆ ನೀಡಿ ತೋರಿಸಿದನು. ಕೌಸಲೈಗೆ ಶ್ರೀರಾಮನ ಮನಸ್ಸು ತಿಳಿಯದೆ ಇದ್ದುದರಿಂದ, ಅವಳೂ ಚಂದ್ರನ ಕಡೆ ತೋರಿಸುತಿದ್ದಳು. ಆಗ ಶ್ರೀರಾಮು ನಿಗೆ ಕೋಪಬಂದಿತು, ಅಳುವುದಕ್ಕೆ ಮೊದಲುಮಾಡಿದನು. “ನಿನಗೆ ಏನು ಬೇಕಪ್ಪ” ಎಂದು ಕೌಸಲ್ಯಯು ಎಷ್ಟೆಷ್ಟು ವಿಧವಾಗಿ ಕೇಳಿದರೂ ಶ್ರೀರಾಮನು ಚಂದ್ರನನ್ನು ತೋರಿಸುತ್ತಾ, ಅಳುವುದನ್ನು ಹೆಚ್ಚು ಮಾಡುತ್ತಿದ್ದನು. ಮಗುವು ಅಳುತಿದೆಯೆಂದು ಆ ಕೌಸಿಯು ತಿಳಿದುಚಂದ್ರನು ಆಕಾಶದಲ್ಲಿ ಬಹು ದೂರದಲ್ಲಿರುವನು, ನಮಗೆ ಸಣ್ಣಗೆ ಕಂಡರೂ ೫೫ ಬಹುಗಾತ್ರವಾಗಿರುವನು, ನಿನ್ನೊಡನೆ ಆಡುವುದಕ್ಕೆ ಅವನು ಬಾರನಪ್ಪ - ಎಂದು ಎಷ್ಟು ಸಮಾಧಾನ ಹೇಳಿದರೂ ಅವನು ಅಳುವುದನ್ನು ನಿಲ್ಲಿಸಲಿಲ್ಲ. ಅಷ್ಟರಲ್ಲಿಯೇ ಅಲ್ಲಿದ್ದ ಹೆಂಗಸರೆಲ್ಲರೂ ಬಂದು ಸೇರಿದರು, ಶ್ರೀರಾ ಮನನ್ನು ಸಮದಾಯಿಸಲು ಯಾರಿಂದಲೂ ಆಗಲಿಲ್ಲ. ಆಗ ಒಬ್ಬೊಬ್ಬರು ಒಂದೊಂದು ವಿಧವಾಗಿ ಶ್ರೀರಾಮನ ಅಳುವಿಗೆ ಕಾರಣವನ್ನು ಹೇಳತೊಡಗಿ ದರು. ಒಬ್ಬಳು “ ಶ್ರೀರಾಮನಿಗೆ ನಮ್ಮ ಮುದ್ದು ಕೂಸಿಗೆ ದೃಷ್ಟಿಯಾ ಗಿದೆ” ಯೆಂದೂ, ಇನ್ನೊಬ್ಬಳು “ಮಗುವಿಗೆ ಸಿಟ್ಟು ಬಂದಿದೆ" ಯೆಂದೂ, ಮತ್ತೊಬ್ಬಳು “ ಶ್ರೀರಾಮನಿಗೆ ನಿದ್ದೆ ಯ ಹೊತ್ತಾಯಿತು, ನಿದ್ದೆಯಿಂದ ಚೆಂಡಿ ಮಾಡುತ್ತಿದ್ದಾನೆ” ಯೆಂದೂ, ಎಲ್ಲೋ ಹೊಟ್ಟೆ ನೋಯುತ್ತಿರಬ ಹುದೆಂದೂ, ಹೀಗೆ ಒಬ್ಬೊಬ್ಬರು ಒಂದೊಂದು ಕಾರಣವನ್ನೂ, ಅದಕ್ಕೆ ಸಮಾಧಾನವನ್ನೂ ಹೇಳುತ್ತಿದ್ದರು. ಬೇಗನೆ ಒಬ್ಬ ಮುದುಕಿಯು ಬಂದು ಶ್ರೀರಾಮನಿಗೆ ದೃಷ್ಟಿ ಮಂತ್ರವನ್ನು ಹಾಕಲು ಮೊದಲುಮಾಡಿದಳು. ಯಾವ ಮಂತ್ರಕ್ಕೆ ಯಾವ ಸಮಾಧಾನಕ್ಕೂ ರಾಮನ ಅಳು ನಿಲ್ಲಲಿಲ್ಲ. - ಶ್ರೀರಾಮನು ಏಕೋ ಹಟ ಹಿಡಿದು ಚಂಡಿ ಮಾಡುತ್ತಿರುವನಂಬು ದನ್ನು ತಂದೆಯಾದ ದಶರಥನು ಕೇಳಿ ಥಟ್ಟನೆ ರಾಮನಿದ್ದಲ್ಲಿಗೆ ಬಂದನು ದಶರಥನು ಬಂದರೂ ರಾಮನಿಗೆ ಸಮಾಧಾನವುಂಟಾಗಲಿಲ್ಲ. ಆಗ ಏನು ಮಾಡುವದಕ್ಕೂ ತೋರದೆ ದಶರಥನು ತನ್ನ ಮಂತ್ರಿಗೆ ಹೇಳಿಕಳುಹಿಸಿದನು. ದೊರೆಯ ಮಗನಾದ ಶ್ರೀರಾಮನಿಗೆ ಆಲಸ್ಯವೆಂದು ತಿಳಿದೊಡನೆಯೇ ಮಂ ತ್ರಿಯೂ ಬೇಗ ಬಂದು ಶ್ರೀರಾಮನು ಎಷ್ಟು ಹೊತ್ತಿನಿಂದ ಅಳುತ್ತಿರುವನು, ಏಕೆ ಅಳುತ್ತಿರುವನು-ಎಂದು ಕೇಳಿ ಅಲ್ಲಿದ್ದವರಿಂದ ಎಲ್ಲವನ್ನೂ ತಿಳಿದು ಕೊಂಡನು. ಆಗ ಚಂದ್ರನನ್ನು ತಂದುಕೊಡಬೇಕೆಂದು ರಾಮನು ಚಂಡಿ ಹಿಡಿದಿರುವನೆಂದು ಗೊತ್ತು ಮಾಡಿ, ಮಂತ್ರಿಯು ಬೇಗನೆ ಒಂದು ಕನ್ನಡಿ ಯನ್ನು ತಂದು ಶ್ರೀರಾಮನ ಕೈಯಲ್ಲಿ ಕೊಟ್ಟು ಅದರಲ್ಲಿ ಚಂದ್ರನನ್ನು ತೋ ರಿಸಿದನು. ರಾಮನಿಗೆ ಬಹು ಸಂತೋಷವಾಯಿತು. ಆಗ ರಾಮನು ಅಳುವದನ್ನು ಬಿಟ್ಟು ಸುಖವಾಗಿ ಆಡತೊಡಗಿದನು. ಶ್ರೀರಾಮನ ಆಟ ಪಾಟವನ್ನು ನೋಡಿ ಅಲ್ಲಿದ್ದವರೆಲ್ಲರಿಗೂ ಸಂತೋಷವಾಯಿತು. ೫೬ ೩೮, ಲವಕುಶರ ಕಾಳಗ. ಲವಕುಶರು ಶ್ರೀರಾಮನ ಮಕ್ಕಳು, ಇವರು ವಾಲ್ಮೀಕಿ ಋಷಿಗಳ ಆಶ್ರಮದಲ್ಲಿ ಹುಟ್ಟಿ, ತಾಯಿಯಾದ ಸೀತಾದೇವಿಯೊಡನೆ ಬೆಳೆಯುತ್ತಿದ್ದರು. ಆಶ್ರಮದಲ್ಲಿಯೇ ಇವರು ಇದ್ದರಾದುದರಿಂದ ಶ್ರೀರಾಮನನ್ನು ನೋಡಿದುದೇ। ಇಲ್ಲವ, ಅಲ್ಲಿಯ ಬ್ರಾಹ್ಮಣರ ಹುಡುಗರೊಡನೆ ಇವರು ಆಟಪಾಟಗಳ ನ್ಯಾಡಿಕೊಂಡು, ಸಮಿತ್ತು, ದರ್ಭೆ ಇವುಗಳನ್ನು ತಂದುಕೊಂಡು ಇದ್ದರೂ ವಾಲ್ಮೀಕಿ ಋಷಿಗಳ ಅನುಗ್ರಹದಿಂದ ಕ್ಷತ್ರಿಯರಾದ ಲವಕುಶರಿಗೆ ಧನುರ್ವಿ ದೈಯು ಚೆನ್ನಾಗಿ ಬರುತ್ತಿತ್ತು: ಒಂದಾನೊಂದುದಿನ ಆ ಆಶ್ರಮಕ್ಕೆ ಒಂದು ಕುದುರೆ ಬಂದಿತು, ಆ ಕುದುರೆಯು ಬಹು ಚೆನ್ನಾಗಿರುವುದನ್ನು ನೋಡಿ, ಋಷಿಕುಮಾರರು ಅದರ ಹತ್ತಿರಕ್ಕೆ ಹೋದರು. ಲವನೂ ಹೋದನು. ಆಗ ಆ ಕುದುರೆಯ ಹಣೆಯ ಮೇಲೆ ಭಂಗಾರದ ಪಟ್ಟಿಯಲ್ಲಿ “ ಶ್ರೀರಾಮನ ಅಶ್ವವು ಇದು. ಶ್ರೀರಾಮನ ಆಳುವಿಕೆಗೆ ಒಪ್ಪದೆ, ಶ್ರೀರಾಮನೊಡನೆ ಯುದ್ಧ ಮಾಡಿ ಸೋಲಿಸಲು ಧೈರ್ಯವುಳ್ಳವರು ಇದನು ಕಟ್ಟಬಹುದು, ಅ೦ತಹ ಧೈರ್ಯ ಎಲ್ಲದವರು, ಶ್ರೀರಾಮನಿಗೆ ಕಪ್ಪಕಾಣಿಕೆಗಳನ್ನು ಒಪ್ಪಿಸಿ, ಕುದು ರೆಯ ಗೋಜಿಗೆ ಹೋಗದೆ, ಸುಮ್ಮನಿರುವುದು” ಎಂದು ಬರೆದಿತ್ತು, ಅದನ್ನು ಓದಿಕೊಂಡು ಅವನು, ಕುದುರೆ ಯೇನೋ ಚೆನ್ನಾಗಿದೆ, ನಾವಂತೂ ಇದ ನ್ನು ಕಟ್ಟಿ ಹಾಕೋಣ! ಯಾರು ಬರುವರೋ ನೋಡೋಣ! ಎಂದು ದರ್ಭೆ ಯಲ್ಲಿ ಒಂದು ಹಗ್ಯವನ್ನು ಹೊಸೆದು ಕುದುರೆಯನ್ನು ಕಟ್ಟಿದನು. ಹತ್ತಿ ರಿದ್ದ ಬ್ರಾಹ್ಮಣರ ಹುಡುಗರು, “ಬೇಡವಯ್ಯ! ನಮಗೀತಂಟೆ ಬೇಡವಯ್ಯ ಬಿಟ್ಟುಬಿಡು! ನಮಗಿದು ಸರಿಯಲ್ಲ!” ಎನ್ನುತ್ತಿದ್ದರೂ ಅವನು ಲಕ್ಷ್ಯವಾ ಡದೆ, ಕುದುರೆಯನ್ನು ಕಟ್ಟಿಯೇ ಕಟ್ಟಿದನು. ಅಷ್ಟರಲ್ಲಿಯೇ ಕುದುರೆಯ ರಕ್ಷಣೆಗಾಗಿ ಬರುತ್ತಿದ್ದ ಸೈನಿಕರು, ಈ ಹುಡುಗರು ಕುದುರೆಯನ್ನು ಕಟ್ಟಿದುದನ್ನು ನೋಡಿ, “ಎಲೋ! ಆ ಹಾರು ವ ಹೈಕಳಿಗೆ ಎರಡು ಏಟುಗಳನ್ನು ಕೊಟ್ಟು ಕುದುರೆಯನ್ನು ಬಿಚ್ಚಿಕೊಂಡು ನಡೆಯಿರೆ” ಎಂದರು. ಒಬ್ಬನು ಕುದುರೆಯನ್ನು ಬಿಚ್ಚಲು ಹೋದನು. ಲವನು, ಅವರನ್ನು ನೋಡಿ “ದೂರ ನಿಲ್ಲಿ, ಕುದುರೆಯನ್ನು ಮುಟ್ಟಿರಿ! ನಮ್ಮ ಆಶ್ರಮದಲ್ಲಿ ಕುದುರೆ ಇದೆ” ಎಂದನು. ಅವರು ಧಿಕ್ಕರಿಸಿ ೫೭ ಮು೦ದೆರಡು ಹೆಜ್ಜೆ ಯಿಡಲು,ಲವನು ಅಲ್ಲಿ ಬಿದ್ದಿದ್ದ ದರ್ಭೆಯನ್ನು ಮಂತ್ರಿಸಿ, ಅವರಿಬ್ಬರ ಕಡೆಗೂ ಎಸೆದನು. ಒಬ್ಬನ ಕೈಗಳೂ ಇನ್ನೊಬ್ಬನ ಕಾಲುಗಳೂ ಕತ್ತರಿಸಿ ಹೋದುವ, ಈ ವರ್ತಮಾನವು, ಲಕ್ಷ್ಮಣನ ಮಗನಾದ ಚಂದ್ರ ಕೇತುವಿಗೆ ತಿಳಿಯಿತು, ಅವನು ಆಶ್ಚರ ಪಟ್ಟು ಬಂದು, ಅವನನ್ನು ನೋಡಿ, ಏನೋ ಒಂದು ವಿಧವಾದ ಪ್ರೀತಿಯುಂಟಾಗಲು, ಇವನು ಮಾಡಿದ ತಪ್ಪನ್ನು ಕ್ಷಮಿಸಿ, ಮಗು ! ನೀನು ಯಾರು ? ಕುದುರೆಯನ್ನು ಏಕೆ ಕಟ್ಟಿದೆ ? ನಿನಗೆ ರಾಜರ ಕುದುರೆಯನ್ನು ಕಟ್ಟಿಕೊಂಡು ಏನು ಪ್ರಯೋಜನ ?” ಎಂದನು. ಅದಕ್ಕೆ ಲವನು 'ನಾನು ಯಾರಾದರೇನಪ್ಪ ! ನಮ್ಮ ಆಶ್ರಮಕ್ಕೆ ಕು ದುರೆ ಬಂದಿತು, ನಾನು ಕಟ್ಟಿದೆನು, ನನ್ನ ಅಪ್ಪಣೆ ಇಲ್ಲದೆ ಅವರು ಬಿಚ್ಚಲು ಬಂದರು, ಅವರನ್ನು ಹೊಡೆದೆನು. ನಾನು ಕುದುರೆಯನ್ನು ಕೊಡುವನಲ್ಲ. ಹೋಗು' ಎಂದನು. ಆಗ ಚಂದ್ರಕೇತುವು ಎಷ್ಟು ಸಮಾಧಾನ ಹೇಳಿದರೂ ಅವನು ಕೇಳದೆ ಹೋದುದರಿಂದ, ಬಾಣದಿಂದ ಹೊಡೆಯಲು ಆರಂಭಿಸಿದ ನು. ಅವನೂ ಮಂತ್ರ ಶಕ್ತಿಯಿಂದ ಅವನ ಬಾಣಗಳನ್ನೆಲ್ಲಾ ದರ್ಭೆಯಿಂದ ಕತ್ತರಿಸಿ, ಚಂದ್ರಕೇತುವನೂ ಅವನ ಸೈನ್ಯವನ್ನೂ ಹೊಡೆದಟ್ಟಿದನು. - ಚಂದ್ರಕೇತುವು ಸೋತುಹೋದನೆಂದು ಶತ್ರುಘಾದಿಗಳು ಬಂದರು. ಅವರೆಲ್ಲರನ್ನೂ ಹೊಡೆದಟ್ಟಿದನು, ಆಗ ಅವರುಗಳಿಗೆ ಬಹು ಕೋಪ ಬಂದು ಅವನಿಗೆ ಮೂರ್ಛ ಬರುವಂತೆ ಹೊಡೆದು, ಅವನನ್ನು ಎತ್ತಿಕೊಂಡು ಕುದುರೆಯನ್ನು ಬಿಚ್ಚಿಕೊಂಡು ಹೋಗುತ್ತಿದ್ದರು. ಅಷ್ಟರಲ್ಲಿಯೇ, ಬೇರೆ ಎಲ್ಲಿಗೋ ಹೋಗಿದ್ದ ಕುಶನು ಬಂದು “ಎಲೈ ಖಳರಾ, ನಿಲ್ಲಿ ನಿಲ್ಲಿ. ನನ್ನ ಒಡಹುಟ್ಟಿದವನನ್ನು ನೀವು ಎತ್ತಿಕೊಂಡು ಹೋಗುವಾಗ ನಿಮ್ಮನ್ನು ಕತ್ತ ರಿಸಿ ಹಾಕುವೆನು' ಎಂದು, ಬಹು ತೀಕ್ಷ್ಮವಾದ ಬಾಣಗಳನ್ನು ಬಿಟ್ಟು, ಅವರನ್ನು ತಡೆದು, ಅವನನೂ ಕುದುರೆಯನ್ನೂ ಬಿಡಿಸಿಕೊಂಡು, ಲವ ನನ್ನು ಎಚ್ಚರಿಸಿ, ಅವನೊಡನೆ ಕೂಡಿ ಮತ್ತೆ ಯುದ್ಧಕ್ಕೆ ನಿಂತನು. ಶತ್ರು ಫ್ಯಾದಿಗಳಿಗೆ ಮಕ್ಕಳನ್ನು ನೋಡಿ, ಹೋಗಿ ಮುದ್ದಿಡಬೇಕೆಂಬಷ್ಟು ಮನ ಸ್ಸುಂಟಾಯಿತು, ಆದರೆ ಮಕ್ಕಳು ಯುದ್ಧ ಮಾಡುವುದರಲ್ಲಿ ಸಿದ್ದರಾಗಿ ದ್ದರೇ ಹೊರತು, ಸ್ನೇಹವನ್ನು ಮಾಡುವವರಾಗಿರಲಿಲ್ಲ. ಮತ್ತೆ ಯುದ್ಧ ವಾಯಿತು. ಆಗ ಶ್ರೀರಾಮನ ಸೈನ್ಯದವರೆಲ್ಲ ಸೋತುಹೋದರು. ಲವ
೮ ೫೮
ಕುಶರು ಕುದುರೆ, ವಸ್ತ್ರಾಭರಣಗಳೊಡನೆ ತಾಯಿಯಾದ ಸೀತಾದೇವಿಯ ಲ್ಲಿಗೆ ಬಂದು ಬಹು ಸಂಭ್ರಮದಿಂದ ತಾವು ತಂದುದನ್ನೆಲ್ಲಾ ಒಪ್ಪಿಸಿ,ನಡೆದು ದನ್ನೆಲ್ಲಾ ಹೇಳಿದರು, ಮಕ್ಕಳನ್ನು ನೋಡಿ ಸಂತೋಷವುಂಟಾದರೂ ಅವ ಭು ಶ್ರೀರಾಮನನ್ನು ನೆನಸಿಕೊಂಡು ಅಳಲು ಮೊದಲುಮಾಡಿದಳು. ಮಕ್ಕ ಳು ಕಾರಣ ತಿಳಿಯದೆ ಮಂಕಾಗಿ ನಿಂತರು. ಅಷ್ಟರಲ್ಲಿ ವಾಲ್ಮೀಕಿ ಏರುಷಿ ಗಳು ಬಂದು, ಎಲ್ಲರನ್ನೂ ಸಮಾಧಾನಪಡಿಸಿ, ಶ್ರೀರಾಮ ಸೀತಾದೇವಿಯ ರನ್ನು ಒಟ್ಟುಗೂಡಿಸಿ, ಲವಕುಶರನ್ನು ಒಪ್ಪಿಸಿ, ಅವರಿಗೆ ತಾಯಿತಂದೆಗೆ ೪ಾದ ಸೀತಾರಾಮರನ್ನು ತೋರಿಸಿ, ಸುಖಿಗಳನ್ನಾಗಿ ಮಾಡಿದರು. ೩೯, ಪಿಂಡಾರಿಯವರು. ಆ8 1 ಈಗಿನಕಾಲ ಎಷ್ಟು ಸುಖವಾಗಿದೆಯೆಂದು ಹೇಳಬೇಕು, ಹಿಂದೆ ನಮ್ಮ ಜನರು ಪಡುತಿದ್ದ ಕಷ್ಟವನ್ನು ನೆನಸಿಕೊಂಡರೆ ಈಗಲೂ ನಮ್ಮ ಮೈ ನಡುಕ ಹಿಡಿವುದು, ಅದೇನಂಬಿರೋ ? ಹೇಳುವೆನು ಕೇಳಿ, ಈಗ ನಾವು ಬೇಕಾದಷ್ಟು ಹಣವನ್ನು ಕೂಡಿಹಾಕಬಹುದು, ಬೇಕಾದ ಒಡವೆ ಗಳನ್ನು ಇಟ್ಟು ಕೊಂಡು ತಿರುಗಾಡಬಹುದು, ಬೇಕಾದ ಪೈರನ್ನು ಮಾಡ ಬಹುದು, ಬೇಕಾದಷ್ಟು ಬೆಳೆಯನ್ನು ಬೆಳೆಯಬಹುದು. ಮನಸ್ಸು ಬಂದೆ ಡೆಗೆ ಹೋಗಬಹುದು, ನಮ್ಮಲ್ಲಿ ಎಷ್ಟು ಹಣಕಾಸು ಇದ್ದರೂ, ನಮ್ಮ ಗದ್ದೆಯಲ್ಲಿ ಎಷ್ಟು ಚೆನ್ನಾದ ಬೆಳೆ ಬೆಳೆದಿದ್ದರೂ, ನಮ್ಮ ತೋಟದಲ್ಲಿ ಎಂತಹ ಹಣ್ಣುಗಳು ಬಿಟ್ಟಿದ್ದರೂ, ರಾತ್ರಿಯ ವೇಳೆ ನಾವು ಒಂದೇ ಮನಸ್ಸಿನಲ್ಲಿ ಮಲ ಗಿಕೊಂಡು, ಸುಖವಾಗಿ ನಿದ್ರೆ ಮಾಡಬಹುದು. ಧರ್ಮರಾಜ್ಯವೆಂದರೆ ಇದೇ ಧರ್ಮರಾಜ್ಯವೆಂದು ಹೇಳಬಹುದು. ಹಿಂದಿನ ಕಾಲದಲ್ಲಿ ಹೀಗೆ ಸ್ವಸ್ಥಚಿತ್ತರಾಗಿಲು ಅವಕಾಶವಂಟೆ ? ಈಹೊತ್ತೇನು ? ಮಗ್ಗುಲ ದುರ್ಗದ ಪಾಳೆಯಗಾರ ಬಂದು ಪೈರನ್ನು ಹಾ ಇುಮಾಡಿದ ; ನಾಳೇ ಏನು ? ತುರುಕರ ದಂಡು ಬಂದು, ಕೊಂದವರನ್ನು ಕೊಂದು, ಸಿಕ್ಕಿದುದನ್ನೆಲ್ಲಾ ಎತ್ತಿಕೊಂಡು ಹೋಯಿತು, ಮತ್ತೇನು ! ಓಹೋ ! ಮರಾಟಿಯವರು ಬರುತಿದ್ದಾರೆ ! ಪಿಂಡಾರಿಯವರು ಬರುತಿ ದ್ರಾರೆ ! ಜಾಗ್ರತೆ!ಜಾಗ್ರತೆ ಅಗೋ! ಮಗ್ಗುಲ ಹಳ್ಳಿಗೆ ಬೆಂಕಿಯನ್ನಿಕ್ಕಿದರು; ೫೯ ಕಿವಿಗೊಟ್ಟು ಕೇಳಿ ! ಹೆಂಗಸರು ಮಕ್ಕಳು ಕಿರಿಚಿಕೊಳ್ಳುವುದು ಇಲ್ಲಿಗೆ ಕೇಳು ತಿದೆ! ರಾಮ ರಾಮ !ಅಲ್ಲಿ ನೋಡಿ, ಹೊಗೆ ! ಓಹೋ ! ಉರಿ ಇಲ್ಲಿಗೆ ಕಾಣು ತಿದೆಯಲ್ಲ ! ಶಿವ ಶಿವ ! ಇಲ್ಲಿಗೂ ಬರುವರಲ್ಲ, ನಾವೇನು ಮಾಡೋಣ ! ಮುಂದೇನು ಗತಿ ! ಆ ಹಾಳು ಪಿಂಡಾರಿಯವರು ! ಅವರಿಗೆ ದಿಕ್ಕು ದಿವಾಳಿ ಯಾರೂ ಇಲ್ಲವಲ್ಲ ! ಅವರಿಗೆ ದೇಶ, ಮನೆ, ಭೂಮಿ, ಕಾಣಿ ಎಂಬುದೇ ಇಲ್ಲ ವಲ್ಲ ! ಅವರಿಗೆ ಹೆಂಡಿರು ಮಕ್ಕಳು ಇದ್ದಾರೆಯೋ ಇಲ್ಲವೋ ಅರಿಯವಲ್ಲ ! ಅವರಿಗೆ ಕರುಣವೆಂಬುದೇ ಇಲ್ಲವಲ್ಲ ! ಆಗೋ ಕೇಳಿ, ಪಟ, ಪಟ, ಕುದು ರೆಯ ಶಬ್ದ ! ಒಂದು ದಿನಕ್ಕೆ ಎಷ್ಟು ಹಳ್ಳಿಗಳನ್ನು ಸುಟ್ಟರೆ ಇವರಿಗೆ ತೃ ಪ್ರಿಯೋ ಕಾ ಸವಲ್ಲ ! ಇನ್ನೇನು ಬಂದೇ ಬಂದರು ! ನಾವೇನು ಕೊಡೋಣ! ನಾವೆಲ್ಲಿಗೆ ಹೋಗೋಣ! ನಾವೆಲ್ಲಿ ಅವಿತುಕೊಳ್ಳೋಣ ! ನಾವೆ ನಮ್ಮ ಊರಿಗೆ ಬೆಂಕಿಹಾಕಿಬಿಟ್ಟು, ಅವರಿಗೆ ನಮ್ಮ ಹೆಂಗಸರು ಮಕ್ಕಳು, ನಮ್ಮ ಹಣ, ಸಿಕ್ಕದಹಾಗೆ ಮಾಡಿಬಿಡೋಣವೇ ? ಎಂಬೀ ಭಯವು ಯಾವಾಗಲೂ ಇದ್ದೇ ಇರುತಿದ್ದಿ ತು, ಮರಾಟೆಯವರೂ, ಪಿಂಡಾರೆಯವರೂ ದಿನಕ್ಕೆ ನಲ ವತ್ತು ಐವತ್ತು ಮೈಲಿಗಳದೂರವಾದರೂ ಸವಾರಿಮಾಡಿಕೊಂಡು ಹೋ। ಗುಹೋಗುತ ಕೊಳ್ಳೆ ಹೊಡೆದು, ಹಳ್ಳಿಗಳಿಗೆ ಬೆಂಕಿಹಚ್ಚಿ, ಸಿಕ್ಕಿದುದನ್ನು ಎತ್ತಿಕೊಂಡುಹೋಗುತಿದ್ದರು. ಇವರ ಹಾವಳಿಯು ಈಚೀಚೆಗೆ, ಎಂದರೆ ಅರವತ್ತು, ಎಪ್ಪತ್ತು ವರ್ಷಗಳಿಂದ ತಪ್ಪಿತು. ಇಂತಹ ಭಯವನ್ನು ತಪ್ಪಿಸಿ, ಜನರಿಗೆ ಸುಖವನ್ನುಂಟುಮಾಡಿದ ಇಂಗ್ಲಿ ಷರನ್ನು ಈವಿಷಯದಲ್ಲಿ ಎಷ್ಟು ಕೊಂಡಾಡಿದರೂ ಸ್ವಲ್ಪವೆ. ೪೦, ವಿನಾಯಕನ ಕಥೆ. ವಿನಾಯಕನು ಪಾಶ್ವತೀದೇವಿಯ ಮಗನು. ಒಂದುದಿನ ಪಾರ ತಿದೇವಿಯು ನೀರು ಎರೆದುಕೊಳ್ಳಲು ಹೋಗುವಾಗ, ಬಾಗಿಲನ್ನು ಕಾ ಯಲು, ಮಣ್ಣಿನಿಂದ ಒಂದು ಬೊಂಬೆಯನ್ನು ಮಾಡಿ, ಅದಕ್ಕೆ ಜೀವಕಳೆ ಯನ್ನ ತುಂಬಿ-ಮಗು, ನಾನು ನೀರೆರೆದುಕೊಳ್ಳಲು ಹೋಗುತ್ತೇನೆ, ನೀನು ಇಲ್ಲಿಯೇ ಇದ್ದು ಯಾರು ಬಂದರೂ ಒಳಕ್ಕೆ ಬಿಡದಂತೆ ಕಾದಿರು-ಎಂದು ಒಳಕ್ಕೆ ಹೋದಳು. ೬೦ ಸ್ವಲ್ಪ ಹೊತ್ತಾದಮೇಲೆ ಪಾಶ್ವತೀಪತಿಯಾದ ಈಶ್ವರನು ಬಂದನು. ಬಾಗಿಲಲ್ಲಿ ಇದ್ದ ಆ ಮಣ್ಣಿನ ಹುಡುಗನು, ' ಒಳಕ್ಕೆ ಹೋಗಕೂಡದೆಂದು ತಡೆದನು, ಈಶ್ವರನಿಗೆ ಕೋಪ ಬಂದು ಅವನ ತಲೆಯನ್ನು ಕತ್ತರಿಸಿ, ಒಳ ಕೈ ನುಗ್ಗಿದನು. ಅಷ್ಟರಲ್ಲಿ ನೀರೆರೆದುಕೊಂಡು ಹೊರಕ್ಕೆ ಬರುತಿದ್ದ ಸಾರ: ತಿಯು, ವಿನೋದಕ್ಕೆ,ನಿಮ್ಮನ್ನಾರೂ ತಡೆಯಲಿಲ್ಲವೆ ? ನೀವು ಒಳಕ್ಕೆ ಹೇಗೆ ಬಂದಿರಿ? ” ಎಂದು ಈಶ್ವರನನ್ನು ಕೇಳಿದಳು, ಈಶ್ವರನು ಅದಕ್ಕೆ 'ಮಣ್ಣಿನ ಬೊಂಬೆಯೊಂದು ತಡೆಯಿತು, ಅದರ ಕತ್ತನ್ನು ಮುರಿದು ಒಳಕ್ಕೆ ಬಂದೆನು' ಎಂದನು ಪಾಶ್ವತಿಯು, ಅಯ್ಯೋ ! ಎಂದು ಗಟ್ಟಿಯಾಗಿ ಅಳುವದಕ್ಕೆ ಆರಂಭಿಸಿದಳು. ಈಶ್ವರನು ಎಷ್ಟೆಷ್ಟು ಸಮಾಧಾನ ಹೇಳಿದರೂ ಕೇಳಳು. ಆಗ ಈಶ್ವರನು ' ನೀನು ಅಷ್ಟೇಕೆ ಅಳುತ್ತೀಯೆ ? ನಾನು ಅವನನ್ನು ಬದುಕಿ ಸಿಕೊಡುವೆನು ' ಎಂದು ಸಮದಾಯಿಸಿ, ತನ್ನ ಭಟರಿಗೆ, - ಈಗ ಉತ್ತರ ದಿಕ್ಕಿಗೆ ತಲೆಯನ್ನು ಇಟ್ಟು ಯಾರು ಮಲಗಿರುತ್ತಾರೋ ಅವರ ತಲೆಯನ್ನು ಕಡಿದುಕೊಂಡು ಬನ್ನಿ' ಎಂದು ಹೇಳಿ ಕಳುಹಿಸಿದನು. ಅವರು ಎಲ್ಲೆಲ್ಲಿ ಹುಡುಕಿದರೂ ಯಾರೂ ಉತ್ತರ ದಿಕ್ಕಿಗೆ ತಲೆಯ ಯನ್ನಿಟ್ಟು ಮಲಗಿರಲಿಲ್ಲ. ಒಂದು ದೊಡ್ಡ ಅರಣ್ಯದಲ್ಲಿ ಎಲ್ಲಿಯೋ ಒಂದು ಆ ನೆ ಮಾತ್ರ ಉತ್ತರಕ್ಕೆ ತಲೆಯನ್ನಿಟ್ಟು ಮಲಗಿದ್ದಿತು. ಆಗ ಅವರು ಅದರ ತಲೆಯನ್ನು ಕತ್ತರಿಸಿಕೊಂಡು ಬಂದು ಈಶ್ವರನಿಗೆ ಒಪ್ಪಿಸಿದರು. ಪರಮೇ ಶ್ವರನು ಅದನ್ನೇ ವಿನಾಯಕನ ಮುಂಡದ ಮೇಲೆ ಇಟ್ಟು ಮತ್ತೆ ಜೀವಕಳ ತು೦ಬಿ, ಆಗ ಆ ವಿನಾಯಕನಿಗೆ ಬೇಕಾದ ವರಗಳನ್ನು ಕೊಟ್ಟನು. ಯಾ ರೇ ಆಗಲಿ, ಯಾವ ಕೆಲಸವನ್ನು ಆರಂಭಿಸುವಾಗ ನಿನ್ನನ್ನು ಪೂಜಿಸದೆ ಆರಂಭಿಸುವರೊ ಅವರ ಕಾರವ ನರವೇರದಿರಲಿ, ಎಂದು ಹೇಳಿದನು. ತನ್ನ ಮಾತು ನಿಶ್ಚಯ ವಾಗಲು ತಾನೇ ತ್ರಿಫರರನ್ನು ಕೊಲ್ಲುವ ಕಾಲದಲ್ಲಿ ವಿನಾಯಕನನ್ನು ಪೂಜಿಸಿದನು. ಶ್ರೀರಾಮನು ಸೀತೆಯನ್ನು ಹುಡುಕು ವಾಗ, ವಿನಾಯಕನನ್ನು ಪೂಜೆ ಮಾಡಿದನು. ಈ ವಿನಾಯಕನನ್ನು ಗಣಪತಿಯೆಂದೂ ವಿಚ್ಛೇಶ್ವರನೆಂದೂ ಕರೆವರು, ವಿದ್ಯೆಯು ನಿರ್ವಿಘ್ನವಾಗಿ ನಡೆವುದಕ್ಕೆ ಇವನ ಅನುಗ್ರಹ ವು ಬೇಕೆಂದು ವಿದ್ಯೆಯನ್ನು ಕಲಿಯಬೇಕೆಂ ಬ ಅಪೇಕೆ ಯುಳ್ಳವರೆಲ್ಲರೂ ಈಗಲೂ ಪೂಜಿಸುವರು. ಈ ವಿನಾಯಕ ನನ್ನು ಭಾದ್ರಪದ ಶುದ್ಧ ಚತುರ್ಥಿಯದಿನ ಎಲ್ಲರೂ ಪೂಜಿಸುವರು, ಒಂದು ೬೧. ಚೌತಿಯಲ್ಲಿ ವಿನಾ ಯಕನು, ಬೇಕಾದಷ್ಟು ಕಡುಬುಗಳನ್ನು ತಿಂದು (ವಿನಾ ಯಕನಿಗೆ ಕಾಯಿ ಕಡುಬಿನಲ್ಲಿ ತುಂಬ ಇಷ್ಟ), ಅವನ ವಾಹನವಾದ ಇಲಿ ಯಮೇಲೆ ಕುಳಿತು ಬರುವಾಗ, ಇಲಿಯು ಒಂದು ಹಾವನ್ನು ನೋಡಿ ಬೆದರಿ ಓಡಿತಂತೆ, ಹೊಟ್ಟೆಯ ಭಾರದಿಂದ ವಿನಾಯಕನು ಮುಗ್ಗುರಿಸಿದ ನಂತೆ, ಆಗ ಹೊಟ್ಟೆಯು ಒಡೆಯಲು ಹತ್ತಿರ ಹೋಗುತಿದ್ದ ಹಾವನ್ನು ಬಿಗಿದು ಹೋಟೆ ಗೆ ಕಟ್ಟಿದನಂತೆ. ಇದನ್ನು ನೋಡಿ ಚಂದ್ರನು ನಕ್ಕನಂತೆ. ಆಗ ಚಂದ್ರನಮೇಲೆ ಕೋಪಬಂದು, ವಿನಾಯಕನು ಚಂದ್ರನಿಗೆ ಶಾಪಕೊ ಟ್ಟನಂತೆ. ಶಾಪದಿಂದ ಕೂಡಿದ ಆ ಚಂದ್ರನನ್ನು ಭಾದ್ರಪದ ಶುದ್ಧ ಚೌತಿ ಯಂದು ಯಾರು ನೋಡುತ್ತಾರೋ ಅವರಮೇಲೆ ಇಲ್ಲದ ಕಳ್ಳತನವೇ ಮುಂತಾದ ಅಪವಾದ ಬರುವುದೆಂದು ಹೇಳುತ್ತಾರೆ. ೪೧, ಮರಗಳು ರಾಜನನ್ನು ಗೊತ್ತು ಮಾಡಿ ಕೊಂಡುದು. ಒಂದಾನೊಂದು ಕಾಲದಲ್ಲಿ ಮರಗಳೆಲ್ಲವೂ ಒಟ್ಟಾಗಿ ಸೇರಿ ತಮ್ಮಲ್ಲಿ ಒಂದಕ್ಕೆ ದೊರೆತನವನ್ನು ಕೊಡಬೇಕೆಂದು ಗೊತ್ತು ಮಾಡಿಕೊಂಡುವ, ಆಗ ಅವುಗಳು ತಮ್ಮಲ್ಲೆಲ್ಲಾ ದೊಡ್ಡದಾಗಿದ್ದ ಅರಳಿಯ ಮರಕ್ಕೆ ನಮಸ್ಕಾರ ಮಾಡಿ,-ಅರಳಿಯ ಮರವೇ ನೀನು ನಮಗೆಲ್ಲಾ ರಾಜನಾಗಿರುವೆಯಾ, ಎಂದು ಕೇಳಿದವ. ಅದಕೆ ಅರಳಿಯ ವರವ ಹೇಳಿದುದೇನೆಂದರೆ, ನಾನು ಎಂದರೇ ನು ! ನಿಮಗೆ ರಾಜನಾಗಿರುವದೆಂದರೇನು ? ನನ್ನ ಬುಡ ಮೊದಲ್ಗೊಂಡು ಕೊನೆಯವರೆಗೂ ದೇವತೆಗಳು ವಾಸವಾಗಿರುವರೆಂದು ಜನರು ತಿಳಿದು, ನನಗೆ ಮುಂಜಿ ಮದುವೆ ಮಾಡುವರು. ನನ್ನನ್ನು ಕಡಿದು ಹಾಕುವುದು ಪಾಪವೆಂದು ತಿಳಿದಿರುವರು. ತಮಗೆ ಬೇಕಾದುದನ್ನು ಕೊಡುವೆನೆಂದು ಜನರು ನನಗೆ ಪ್ರದಕ್ಷಿಣೆ ನಮಸ್ಕಾರ ಮಾಡುವರು; ನನ್ನ ಬುಡದ ಸುತ್ತ ಲೂ ನನ, ಪಾದಸೇವೆಯನ್ನು ಮಾಡಿಕೊಂಡು ಬಹುಮಂದಿ ನಾಗರಾ ಜರು ಹಗಲೂ ರಾತ್ರಿಯೂ ನಿಂತಿರುವರು, ಇಂತಹ ಗೌರವವನ್ನು ಬಿಟು, ಜಗರಾದ ನಿಮಗೆ ರಾಜನಾದರೆ ನನಗೆ ಬರುವದೇನು ? ನಾನು ಆಗಲಾರೆ, ಇನ್ಯಾರನ್ನಾದರೂ ನೋಡಿಕೊಳ್ಳಿ ಎಂದಿತು. ಅಗ ಮರಗಳೆಲ್ಲವೂ ಆಲದ ಮರವನ್ನು ನೋಡಿ- ಆಲದಮರವೇ ? ಆಲದಮರವೇ ? ನಮ್ಮೆಲ್ಲರಿಗೂ ನೀನು ರಾಜನಾಗುವೆಯಾ ? ಎಂದು ಕೇಳಿ ದುವ, ಅದಕ್ಕೆ ಆಲದಮರವು ಚೆನ್ನಾಯಿತು, ನೀವು ಪರಾಣಗಳನ್ನು ಕೇಳಲಿಲ್ಲವೆ ? ಲೋಕಕ್ಕೆಲ್ಲಾ ಒಡೆಯನಾದ ಆ ಕೃಷ್ಣದೇವರು ಕ್ಷೀರಸ ಮುದ್ರದಲ್ಲಿ ಮುಳುಗಿಹೋಗದೆ ತೇಲಾಡುತ್ತಿರುವುದು ನನ್ನ ಸಹಾಯದಿಂ ದಲ್ಲವೆ ? ನನ್ನ ಮೇಲಲ್ಲವೇ ಆ ಶ್ರೀ ಕೃಷ್ಣನು ಮಲಗಿರುವುದು ; ಎಲ್ಲರಿ ಗಿಂತಲೂ ದೊಡ್ಡವನಾದ ಆ ದೇವರೇ ನನ್ನ ಆಶ್ರಯದಲ್ಲಿರುವಾಗ ನಿಮ್ಮ ನ್ನು ಕಟ್ಟಿಕೊಂಡು ನನಗೇನು ಕೆಲಸ ? ನನಗೆ ಅವಶ್ಯವಿಲ್ಲ-ಎಂದಿತು. ಬಳಿಕ ಅವು ಅಲ್ಲಿ ಕೋಮಲವಾಗಿ ಬೆಳೆದಿದ್ದ ಮಾವಿನಮರವನ್ನು, ನೋಡಿ, ಮಾವಿನಮರವೆ ! ನಿನ್ನ ಕೋಮಲವಾದ ಎಲೆಯ, ಮಧುರ ವಾದ ಹಣ ನಮ್ಮನ್ನು ಬೆರಗುಮಾಡಿರು ವುವ, ನನ್ನೊಡೆಯನಾಗುವ ದಕ್ಕೆ ನೀನಲ್ಲದೆ ಇನ್ನಾರುತಾನೆ ಚೆನ್ನಾಗಿರುವರು ; ಬಹುಕಾಲ ನಮಗೆ ನೀನು ದೊರೆಯಾಗಿದ್ದು ಕೊಂಡು ಸುಖವಾಗಿ ಕಾಪಾಡಬೇಕು ಎಂದು ವ. ಆಗ ಮಾವಿನಮರವೂ “ಎಲೈ ಜಡರೆ! ಎ೦ತಹ ಎ೦ತಹ ಕವಿಗಳ ಹೊಗಳುವಿ ಕೆಗೂ ನಾನು ಬೆರಗಾಗದಿದ್ದವನು ನಿಮ್ಮ ಸ್ತೋತ್ರಕ್ಕೆ ಬೆರಗಾಗುವೆನೆ? ನಾನು ಸ್ವಲ್ಪ ನಕ್ಕರೆ ಸಾಕು, ನನ್ನ ಸೊಬಗನ್ನು ಬಣ್ಣಿಸುವುದಕ್ಕೆ ಕವಿಗಳನ್ನು ಕರೆಯಲು ಕೋಗಿಲೆಗಳೇ ಭಟರಾಗಿ ಹೊರಡುವವ, ನಿಮ್ಮಿಂದ ನನಗೇ ನಾಗಬೇಕಾಗಿದೆ ? ಇನ್ನಾರನ್ನಾದರೂ ಕೇಳಿಕೊಳ್ಳಿಹೋಗಿ, ಎ೦ದಿತು. ಆಗ ಅಲ್ಲಿಯೇ ಇದ್ದ ತೇಗಿನ ಮರವನ್ನು ನೋಡಿ, ನಮ್ಮೆಲ್ಲರಿಗಿಂ ತಲೂ ಗಟ್ಟಿಯೆಂದು ಹೆಸರುಗೊಂಡಿರುವ ತೇಗವೇ ! ನೀನು ನಮ್ಮೊಡೆ ಯನಾಗಿರಬೇಕು, ಎಂದುವು, ಆಗ ತೇಗವ- ಅಯ್ಯೋ ? ನಾನೇನು ಮಾ ಡೇನು ! ನನ್ನ ಜನರು ಉಳಿಬಾಳಿಸುವಂತಿಲ್ಲ. ಹಿಂದೆ ಮನೆ ಮಠ ವನ್ನು ಕಟ್ಟುವುದಕ್ಕೆ ಮಾತ್ರ ನನ್ನನ್ನು ಉಪಯೋಗಿಸುತ್ತಿದ್ದರು. ಈಗ ಕುರ್ಚಿ, ಮೇಜು, ಬಂಡಿ ಇವೆಲ್ಲವನ್ನೂ ಮಾಡುವುದಕ್ಕೆ ನನ್ನನ್ನೇ ಕಡಿದು ಬಿಸಲಲ್ಲಿ ಒಣಗಿಸಿ, ಮಳೆಯಲ್ಲಿ ನೆನಸಿ, ಕೆತ್ತಿ, ಕೊಯಿದು, ಕೊಲ್ಲುತ್ತಿರು ವರು, ನನ್ನ ಶಕ್ತಿಯೇ ನನಗೆ ಮೃತ್ಯುವಾಗಿದೆ. ಹಡಗುಗಳನ್ನು ಕಟ್ಟು ವದಕ್ಕೆ ನನ್ನ ಸಮಾನರಿಲ್ಲವೆಂದು ತಿಳದು ನನ್ನನ್ನು ದೇಶ ದೇಶಾಂತರಕ್ಕೆ ೩೩ ಓಡಾಡಿಸುತ್ತಿರುವರು. ಹೀಗಿರುವಾಗ ನಾನು ನಿಮಗೆ ಏನು ಸಹಾಯ ಮಾಡೇನು ! ಇನ್ಯಾರನ್ನಾದರೂ ಕೇಳಿಕೊಳ್ಳಿ - ಎಂದಿತು. ಅಲ್ಲಿದ್ದ ಮರಗಳಲ್ಲೆಲ್ಲಾ ಉದ್ದವಾದ ತೆಂಗಿನಮರವನ್ನು ನೋಡಿ, ನೀನು ನಮಗೆ ದೊರೆಯಾಗಿ ಇರೆಂದು ಕೇಳಲು, “ಎಲೈ ಸ್ನೇಹಿತರಿರಾ ; ನಾನು ಎಲ್ಲರಿಗಿಂತಲೂ ದೊಡ್ಡವನೆಂದು ತಿಳಿದು, ನೀವು ನನ್ನ ನು ದೊರೆ ಯಾಗಿರೆಂದು ಕೇಳಿದುದು ನನಗೆ ಬಹಳ ಸಂತೋಷ, ಆದರೆ ನಾನು ಸಾ ಲಗಾರನೆಂಬುದು ನಿಮಗೆ ತಿಳಿಯದೆಂದು ಕಾಣುತ್ತದೆ. ನಾನು ಚಿಕ್ಕವ ನಾಗಿದ್ದಾಗ ಜನರು ನನಗೆ ನೀರನ್ನು ಕೊಟ್ಟು ಸಾಕಿದರು. ಅವರು ಮಾಡಿದ ಉಪಕಾರವನ್ನು ನನ್ನ ತಲೆಯ ಮೇಲೆ ಹೊತ್ತಿರುವೆನು. ಈಗೀಗ ಅವರು ಕೊಟ್ಟ ಸಾಲವನ್ನು ಪ್ರತಿವರ್ಷದಲ್ಲಿ ನಾನಾಬಗೆಯಾಗಿ ತೀರಿಸು ತಿರುವೆನು. ಜೀತಗಾರನಂತೆ ನಾನೇ ದುಡಿಯುತ್ತಿರುವಾಗ ನನಗೆ ಬೆರೆ ತನವೆಂತಹುದು, ನನ್ನಂತಿರುವ ಸಾಲಗಾರರು ದೊರೆತನಕ್ಕೆ ಬಂದರೆ ನಿಮಗೆ ಬಹುಕೇಡು ಉಂಟಾದೀತು. ಆದುದರಿಂದ ನೀವು ಚೆನ್ನಾಗಿ ಯೋ ಚಿಸಿ ತಕ್ಕವರಿಗೆ ದೊರೆತನವನ್ನು ಕೊಡಿ, ಎಂದು ತೆಂಗಿನಮರವೂ ಅವು ಗಳಿಗೆ ವಿವೇಕವನ್ನು ಹೇಳಿತು. ಆಗ ಮರಗಳೆಲ್ಲವೂ ಇನ್ನು ಯಾರನ್ನು ಕೇಳಬೇಕೆಂದು ಯೋಚಿಸುತ ಇದ್ಘಾಗ ಗುಂಪಾಗಿ ಬೆಳೆದಿದ್ದ ಬಿದಿರ ಮೆಳೆಯನ್ನು ನೋಡಿ, “ನೀನು ವಂಶ ಪರಂಪರೆಯಾಗಿ ನಮ್ಮನ್ನು ಕಾಪಾಡಿಕೊಂಡು ಬರಬೇಕು ಎಂದು ಬೇಡಿಕೊಂಡವು, ಆಗ ಬಿದಿರು ತನ್ನಲ್ಲಿಯೇ, ನಾನು ಜಾತಿಯಲ್ಲಿ ಹುಲ್ಲು ದರೂ ನನ್ನ ವಂಶಾವಳಿ ಏನೋ ಬಲವಾಗಿಯೇ ಇದೆ ; ಗಿಡಗಳ ಗುಂಪಿನ ಲ್ಲೆಲ್ಲಾ ನಾನು ಸಾಧಾರಣವಾಗಿ ಇದ್ದೇ ಇರುತ್ತೇನೆ, ಈಗ ಈ ಮರಗ ಳೆಲ್ಲವೂ ತಮ್ಮಲ್ಲಿ ಒಬ್ಬ ದೊರೆ ಇರಬೇಕೆಂದು ಅಪೇಕ್ಷಿಸುತ್ತಿರುವವ್ರ, ನನ್ನ ಮಾತಿಗೆ ಇವು ಒಪ್ಪುವುದಾದರೆ ನಾನು ಏಕೆ ದೊರೆಯಾಗಿರಬಾರದು, ಎಂ ದು ಯೋಚಿಸಿ, ಮರಗಳನ್ನು ಕುರಿತು, “ನೀವು ನನಗೆ ಕೊಟ್ಟ ಮತ್ಯಾದೆಗೆ ನಾನು ತುಂಬ ಕೃತಜ್ಞನಾಗಿರುವೆನು, ನನ್ನ ಮಾತಿನಂತೆ ನೀವು ನಡೆವವ ರೆಗೂ ನಿಮಗೆ ನನ್ನಿಂದ ತೊಂದರೆಯುಂಟಾಗಲಾರದು, ಮಾತಿಗೆ ಮಾರಿ ನಡೆದರೆ ನಾನು ಬೆಂಕಿಯನ್ನು ಕಾರಿ ನಿಮ್ಮನ್ನೆಲ್ಲಾ ಸುಟ್ಟು ಬಿಡುವನು. ಇದಕ್ಕೆ ೬೪ ನೀವು ಒYವುದಾದರೆ, ನಾನು ನಿಮಗೆ ದೊರೆಯಾಗಲೂ ಒಪ್ಪವೆ ನು ” ಎಂದಿತು, ಬೆಂಕಿಯನ್ನು ಕಾರುವೆನೆಂದು ಬೆದರಿಸಿದ ಬಿದಿರಿಗೆ ಬೆದರಿ, ಅದರ ದೊರೆತನಕ್ಕೆ ಒಪ್ಪಿ ಎಲ್ಲವೂ ತಮ್ಮ ತಮ್ಮ ಸ್ಥಳಗಳಿಗೆ ಹೋಗಿ ನಿಂತವ. ೪೨, ಬಲಿ ಚಕ್ರವರ್ತಿ. ಬಹುಕಾಲದ ಹಿಂದೆ ಬಲಿಚಕ್ರವರ್ತಿ ಎಂಬ ರಾಜಾಧಿರಾಜನೊಬ್ಬನು ಬಹು ಧರದಿಂದ ರಾಜ್ಯವನ್ನಾಳುತ್ತಿದ್ದನು. ಇವನನ್ನು ಕಂಡರೆ ದೇವಾ ನುದೇವತೆಗಳೆಲ್ಲರೂ ಹೆದರುತ್ತಿದ್ದರು. ಸ್ವರ್ಗಕವನ್ಮಾ ಳುವ ಇಂದ್ರನೂ ತನ್ನ ಸಿಂಹಾಸನವನ್ನು ಬಲಿಚಕ್ರವರ್ತಿಗೆ ಬಿಟ್ಟುಕೊಡಬೇಕಾಗಿ ಬಂದಿತು. ಆಗ ದೇವತೆಗಳೆಲ್ಲರೂ ಜಗದ್ರಕ್ಷಕನಾದ ವಿಷ್ಣು ವಿನಲ್ಲಿ ಮೊರೆಯಿಟ್ಟರು. ಆಗ ವಿಷ್ಣುವ-ನಿಮ್ಮನ್ನೆಲ್ಲಾ ಕಾಪಾಡಿ ನಿಮ್ಮ ನಿಮ್ಮ ಪದವಿಯನ್ನು ನಿಮನಿಮಗೆ ಕೊಡಿಸುವೆನು-ಎಂದು ಧೈರ್ಯವನ್ನು ಕೊಟ್ಟು ಕಳುಹಿಸಿದನು. ಬಲಿ ಚಕ್ರವರ್ತಿಯು ಇ೦ದ್ರಪದವಿಯನ್ನು ಅನುಭವಿಸುತ್ತಿದ್ದರೂ ಅಧರ್ಮವನ್ನು ಮಾಡುತ್ತಿರಲಿಲ್ಲ; ಸುಳ್ಳು ಹೇಳುತ್ತಿರಲಿಲ್ಲ ; ದೇವರ ಭಕ್ತನಾಗಿದ್ದನು. ಇಂ ತಹ ಮಹಾನುಭಾವನನ್ನು ನಾಶಮಾಡುವುದಕ್ಕೆ ದೇವರು ತಾನೇ ಒಪ್ಪಾನೆ? ಆಗ ದೇವರು ಕಶ್ಯಪ ಋಷಿಗಳ ಮಗನಾಗಿ ಹುಟ್ಟಿ, ಬ್ರಹ್ಮಚಾರಿ ಯಂತೆ ಕೃವ್ಯಾಜಿನವನ್ನು ಹೊದೆದು, ದಂಡವನ್ನೂ ಕಮಂಡಲವನ ಹಿಡಿದುಕೊಂಡು, ಬಲಿಚಕ್ರವರ್ತಿಯು ಯಜ್ಞ ಮಾಡುತ್ತಿದ್ದ ಸ್ಥಳಕ್ಕೆ ಬಂದ ನು, ಯಜ್ಞ ಮಾಡತಕ್ಕ ರಾಜನು, ಬ್ರಾಹ್ಮಣರು ಬೇಡಿದುದನ್ನು ಕೊಡ ಬೇಕಾದುದು ಧರ್ಮವ್ಯ. ಹೀಗಿರುವಾಗ ವಾಮನಮೂರ್ತಿಯು ಬಂದು ಬಲಿಚಕ್ರವರ್ತಿಯನ್ನ ಮರು ಹಜ್ಜೆ ಭೂಮಿಯನ್ನು ಬೇಡಿದನು, ಬೇಡಿ ದುದನ್ನು ಕೊಡತಕ್ಕ ವ್ರತವುಳ್ಳ ಬಲಿಯು, “ ಅಗತ್ಯವಾಗಿ ಕೊಟ್ಟೆನು ತೆಗೆ ದು ಕೋ, ' ಎಂದನು. ಬಲಿಚಕ್ರವರ್ತಿಗೆ ಗುರುವಾದ ಶುಕ್ಕಾಚಾರರು, ಕೊಡಬೇಡವೆಂದು ಎಷ್ಟೋ ವಿಧವಾಗಿ ತಿಳಿಸಿದರು. ಬಲಿಚಕ್ರವರ್ತಿಯು, ತಾನು ಕೊಟ್ಟ ಭಾಷೆಯನ್ನು ತಪ್ಪೆನೆಂದು, ದಾನವನ್ನು ಕೊಟ್ಟೆ ಕೊಟ್ಟನು. ದೇವರಾದ ವಾಮನನು, ಅದು ತಾಕಾರವನ್ನು ತಾಳಿ, ಭೂಮಿಯ «ಲ್ಲಾ ಒಂದು ಹಜ್ಜೆಯೆಂದು ಅಳೆದನು ; ಆಕಾಶವನ್ನ ಲ್ಲಾ ಒಂದು ಹಜ್ಜೆ ೬೫ ಯು ಆವರಿಸಿತು, ಎರಡು ಹೆಜ್ಜೆ ಯಷ್ಟು ಸ್ಥಳವಂತೂ ಸಿಕ್ಕಿತು, ಇನ್ನೊಂದು ಹಚ್ಚೆ ಗೆ ಏನು ಹೇಳುತ್ತೀಯ ? ಎನಲು, ಸತ್ಯಸಂಧನಾದ ಬಲಿಯು, ನನ ತಲೆಯ ಮೇಲೆ ವಹಿಸುವೆನು ಎಂದು ತಲೆಯನ್ನು ಬಗ್ಗಿಸಿಕೊಡು, ಕೈಮು ಗಿದು ಕುಳಿತುಕೊಂಡನು, ದೇವರು ತನ್ನ ಪಾದವನ್ನು ಬಲಿಚಕ್ರವರ್ತಿಯ ತಲೆಯ ಮೇಲೆ ಇಟ್ಟು ಅವನನ್ನು ಪಾತಾಳಲೋಕಕ್ಕೆ ತುಳಿದು, ಅಲ್ಲಿ ಚಿರ ಕಾಲ ಆಳಿಕೊಂಡು ಸುಖವಾಗಿರು ಎಂದು ವರವನ್ನು ಕೊಟ್ಟು, ಭಕ್ತನಾದ ಬಲಿಯನ್ನು ಈ ರೀತಿಯಾಗಿ ಕಾಪಾಡಿ, ಇಂದ್ರಾದಿ ದೇವತೆಗಳನ್ನೂ ಸಂ ತೋಷ ಪಡಿಸಿ, ಮಾಯವಾದನು. ಈಗಲೂ ಬಲಿಪಾಡ್ಯಮಿ ಎಂದು ಹಬ್ಬ ವನ್ನು ಮಾಡಿ, ಅ೦ದು ಬಲಿಚಕ್ರವರ್ತಿಯನ್ನು ಪೂಜಿಸುವರು. ೪೩, ಟೀಪು ಸುರ್ಲ್ತಾ. ಸುಮಾರು ನೂರು ವರ್ಷಗಳ ಕೆಳಗೆ ಮೈಸೂರು ದೇಶವನ್ನು ಚೀಪು ಸುಲ್ತಾನನು ಆಳುತಿದ್ದನು. ಇವನು ದೊಡ್ಡ ನವಾಬ ಹೈದರನ ಮಗನು. ಹೈದರನು ಸತ್ತ ಮೇಲೆ ಇವನು ಸುಲ್ತಾನನೆಂಬ ಬಿರುದಿನಿಂದ ಪಟ್ಟಕ್ಕೆ ಬ೦ದನು. ಇವನ ರಾಜಧಾನಿ ಶ್ರೀರಂಗಪಟ್ಟಣ, ಈ ಶ್ರೀರಂಗಪಟ್ಟಣದ ಸುತ್ತಲೂ ಬಲವಾದ ಕಲ್ಲುಕೋಟೆಯಿದೆ. ಕೋಟೆಯ ಸುತ್ತಲೂ ಕಾವೇರೀ ನದಿ ಹರಿಯುತ್ತಿದೆ. ಸುಲ್ತಾನನ ಕಾಲದಲ್ಲಿ ಕೋಟೆಯೊಳಕ್ಕೆ ಹೊಸಬರು ಯಾರೂ ಅಪ್ಪಣೆ ಇಲ್ಲದೆ ಹೋಗಿ ಬರುವುದಕ್ಕೆ ಅವಕಾಶವಿರಲಿಲ್ಲ, ಜನರಿಗೆಲ್ಲಾ ಸುಲ್ತಾನನ ಹೆದರಿಕೆಯು ಬಹಳವಾಗಿದ್ದಿತು. ಇವನಿಗೆ ಮುಸಲ್ಮಾನರಲ್ಲಿ ಬಹಳ ಪ್ರೀತಿ; ಮಹಮ್ಮದೀಯ ಮತವನ್ನು ಹೆಚ್ಚಿಸಬೇಕೆಂಬುದು ಇವನ ಮನಸ್ಸು. ಇವನು ಓದು ಬರಹವನ್ನು ಚೆನ್ನಾಗಿ ಕಲಿತಿದ್ದನು. ಇವನು ಬಹು ಧೈರ್ಯ ಶಾಲಿ, ಯುದ್ಧದಲ್ಲಿ ಶರನು. ಹೀಗಿದ್ದ ಇವನಿಗೆ ಇಂಗ್ಲೀಷ್ ರಲ್ಲಿ ದ್ವೇಷವಿದ್ದಿತು ; ಇವನು ಕಾಲ ವನ್ನೆಲ್ಲಾ ಯುದ್ಧ ಮಾಡುವುದರಲ್ಲಿಯೂ, ಯುದ್ಧಕ್ಕೆ ಸಿದ್ಧನಾಗುವುದರಲ್ಲಿ ಯ ಕಳೆದು, ಕೊನೆಗೆ, ಶ್ರೀರಂಗಪಟ್ಟಣದ ಕೋಟೆಯ ಮೇಲೆ ಬಹು ೬೬ ಧೈರ್ಯವಾಗಿ ಇಂಗ್ಲಿಷ್‌ರ ಮೇಲೆ ಯುದ್ಧ ಮಾಡಿ ಸತ್ತನು. ಇವನು ಕುಳಿತುಕೊಳ್ಳುವದಕ್ಕಾಗಿ ಭಂಗಾರದ ವ್ಯಾಘಾಸನವನ್ನು ಮಾಡಿಸಿದ್ದನು. ಇವನನ್ನು 'ಮೈಸೂರು ಹುಲಿ' ಎಂದು ಕರೆಯುತ್ತಿದ್ದರು. ೪೪, ರಾಜನು ಜೇಡರ ಹುಳುವಿನಿಂದ ಬದುಕಿದುದು. ಒಬ್ಬ ರಾಜನು ಯುದ್ಧದಲ್ಲಿ ಸೋತು ಒಂದು ಕಾಡನ್ನು ಹೊಕ್ಕನು. ಶತ್ರುಗಳು ಅವನನ್ನು ಬೆನ್ನಟ್ಟಿ ಕೊಂಡು ಬಹುದೂರ ಹೋದರು. ಅಷ್ಟರ ಲ್ಲಿಯೇ ಕತ್ತಲಾಯಿತು, ಬೆನ್ನಟ್ಟಿ ಬರುತ್ತಿದ್ದವರು ಅಲ್ಲಲ್ಲಿ ನಿಂತರು. ರಾಜನೂ ಒಂದು ಕಲ್ಲುಪೊಟರೆಯಲ್ಲಿ ರಾತ್ರಿಯನ್ನೆಲ್ಲಾ ಕಳೆದನು, ಆ ರಾತ್ರಿ ಒಂದು ಜೇಡರ ಹುಳುವು ಆ ಕಲ್ಲು ಪೊಟರೆಯ ಬಾಯಿಗೆ ದಾರವನ್ನು ಬೀಸಿ, ಒಂದು ದೊಡ್ಡ ಗೂಡನ್ನು ಕಟ್ಟಿ ತು. ಬೆಳಗಾಯಿತು. ರಾಜನು ಎದ್ದು ಮುಂದೆ ಹೊರಡಲು ಸಿದ್ಧನಾದನು. ಅಷ್ಟರಲ್ಲಿಯೇ ಕುದುರೆಯ ಓಟದ ಶಬ್ದವು ಕೇಳಿಸಿತು. ರಾಜನು ಅಲ್ಲಿಯೇ ಅಡಗಿಕೊಂಡನು, ಕುದುರೆಯ ಹಜ್ಜೆಯ ಶಬ್ಬಕ್ಕಿಂತ ಅವನ ಎದೆಯು ಹೊಡೆ ದುಕೊಳ್ಳುತ್ತಿದ್ದ ಶಬ್ದವೇ ಅವನಿಗೆ ಹೆಚ್ಚಾಗಿ ಕೇಳಿಸುತಿದ್ದಿತು, ಇಬ್ಬರು ಸವಾ ರರು ಪೊಟರೆಯ ಹತ್ತಿರಕ್ಕೆ ಬಂದರು. ಅವರಲ್ಲಿ ಒಬ್ಬನು, “ ಇಲ್ಲಿ ಏನಾದ ರೂ ಆ ರಾಜನು ಅವಿತುಕೊಂಡಿರುವನೋ, ನೋಡೋಣ, ಇಳಿ ” ಎಂದನು. ಆ ಮಾತನ್ನು ಕೇಳಿ ರಾಜನು ತನ್ನ ಕೊನೆಯ ಹತ್ತಿರವಾಯಿತೆಂದು ತಿಳಿದನು. ಅಷ್ಟರಲ್ಲಿ ಇನ್ನೊಬ್ಬನು ಪೊಟರೆಯ ಬಾಯನ್ನು ಚೆನ್ನಾಗಿ ನೋಡಿ, ರಾಜನು ಈ ಪೊಟರೆಯಲ್ಲಿ ಇರಲಾರನು. ಪೊಟರೆಯ ಬಾಗಿ ಲಲ್ಲಿರುವ ಜೇಡರ ಗೂಡನ್ನು ನೋಡು, ಆ ಗೂಡಿನ ಒಂದು ಎಳೆಯ ಕಿತ್ತು ಹೋಗಿಲ್ಲ, ರಾಜನು ಒಳಕ್ಕೆ ಹೋಗಿದ್ದರೆ ಗಡು ಹೀಗೆ ಇರುತ್ತಿದ್ದಿತೆ? ಮುಂದೆ ನಡೆ ' ಎಂದು ಕುದುರೆಯನ್ನು ಓಡಿಸಿದನು. ಜತೆಯಲ್ಲಿದ್ದವನ ಹೊರಟನು. ರಾಜನು ಬದುಕಿಕೊಂಡನು. ಈ ವಿಪತ್ತಿನಿಂದ ಕಾಪಾಡಿದುದ ಕ್ಯಾಗಿ ರಾಜನು ದೇವರನ್ನು ಬಹಳವಾಗಿ ಸ್ತೋತ್ರಮಾಡಿದನು. ೭ ೪೫, ಸಾವಿತ್ರಿಯ ಕಥೆ-೧ ನೆಯ ಭಾಗ, ಮದ್ರದೇಶವೆಂದು ಒಂದು ರಾಜ್ಯವಿದ್ದಿತು, ಆ ರಾಜ್ಯಕ್ಕೆ ಅಶ್ವಪತಿ ಎಂಬುವನು ದೊರೆಯಾಗಿದ್ದು, ಆತನಿಗೆ ಬಹುಕಾಲ ಮಕ್ಕಳೇ ಇರಲಿಲ್ಲ. ಆದುದರಿಂದ ಅವನು ಸಾವಿತ್ರಿದೇವಿಯನ್ನು ಕುರಿತು ತಪಸ್ಸು ಮಾಡಿದನು. ಸಾವಿತ್ರಿಯು ಮೆಚ್ಚಿ ಅವನಿಗೆ ಪತಿವ್ರತೆಯಾದ ಒಬ್ಬಳು ಹೆಣ್ಣುಮಗಳು ಜನಿಸುವಳೆಂದು ವರವನ್ನು ಕೊಟ್ಟಳು. ಹಾಗೆಯೆ ದೊರೆಯ ಹೆಂಡತಿಯು ಬಹು ಚೆನ್ನಾದ ಒಂದು ಹೆಣ್ಣು ಮಗುವನ್ನು ಹೆತ್ತಳು. ಆ ಮಗುವಿಗೆ ಸಾವಿ ತ್ರಿಯೆಂದು ದೇವಿಯ ಹೆಸರನ್ನೇ ಇಟ್ಟರು, ಸಾವಿತ್ರಿಯು ಸುಖವಾಗಿ ಬೆಳೆದಳು, ಚಿಕ್ಕ ವಯಸ್ಸಿನಲ್ಲೇ ವಿದ್ಯೆಯನ್ನು ಚೆನ್ನಾಗಿ ಕಲಿತಳು. ಸಾವಿತ್ರಿಗೆ ಮದುವೆ ಮಾಡಬೇಕೆಂದು ದೊರೆಯು ಯೋಚಿಸಿ, ವರ ನನ್ನು ಹುಡುಕಿಸಿದನು. ದೊರೆಯು ಎಷ್ಟು ಹುಡುಕಿದರೂ ಅನುಕೂಲ ನಾದ ವರನು ಸಿಕ್ಕಲಿಲ್ಲ. ಆದುದರಿಂದ ಬೇಕಾದ ವರನನ್ನು ಹುಡುಕುವು ದಕ್ಕೆ ಸಾವಿತ್ರಿಯನ್ನೇ ಕಳುಹಿಸಿದನು. ಸಾವಿತ್ರಿಯು ಬಹು ದೇಶಗಳನ್ನು ಸುತ್ತಿದಳು. ಎಲ್ಲಿಯ ಅನುಕೂಲನಾದ ವರನು ಸಿಕ್ಕದೆ ಇರಲು, ಕಾಡಿ ನಲ್ಲಿದ್ದ ಆಶ್ರಮಗಳಲ್ಲಿ ಹುಡುಕುವುದಕ್ಕೆ ಹೊರಟಳು. ಕೊನೆಗೆ ಒಂದು ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ ದ್ವು ಮತ್ತೇನನಂಬ ದೊರೆಯ ಮಗ ಸತ್ಯ ವಾನನನ್ನು ಮೆಚ್ಚಿ, ಹಿಂದಿರುಗಿ ಬಂದು ತನ್ನ ತಂದೆಗೆ ತಿಳಿಸಿದಳು. - ಇಷ್ಟರಲ್ಲಿಯೇ ಅಶ್ವಪತಿಯನ್ನು ನೋಡುವುದಕ್ಕೆ ನಾರದರು ಬಂದರು, ದೊ ರೆಯು ಅವರೊಡನೆ ಮಾತನಾಡುತ್ತಾ ಸಾವಿತ್ರಿಯು ಸತ್ಯವಾನನನ್ನು ಮೆಚ್ಚಿ ಬಂದಿರುವಳೆಂದು ತಿಳಿಸಿದನು. ನಾರದರು ಅಯ್ಯಾ, ಮಹಾರಾಜನೆ! ಸತ್ಯ ವಾನನು ಬಹು ಗುಣ ಸಂಪನ್ನನು, ಯೋಗ್ಯನು! ನಿಜ; ಆದರೆ ಅವನು ಬಹು ಕಾಲ ಬದುಕುವುದಿಲ್ಲ, ಇನ್ನೂಂದುವರಕ್ಕೆ ಸರಿಯಾಗಿ ಅವನುಸಾಯುವನು' ಎಂದು ಹೇಳಿದರು, ರಾಜನು, ಇದನ್ನು ಕೇಳೆ ವ್ಯಸನಪಟ್ಟು,ಮಗಳನ್ನು ಕರೆದು ಅಮ್ಮಾ ಮಗುವೇ! ನಿನ್ನನ್ನು ಆವರನಿಗೆ ಕೊಡುವದು ನನಗೆ ಇಷ್ಟವಿಲ್ಲ. ಬೇರೆ ವರನನ್ನು ಹುಡುಕು' ಎಂದು ಹೇಳಿದನು. ಅದಕ್ಕೆ ಸಾವಿತ್ರಿ'ಯು, 'ಸತ್ಯವಾನ ನನ್ನು ನೋಡಿದಂದಿನಿಂದಲೂ, ಮನಸ್ಸಿನಲ್ಲಿ ನಾನು ಆತನ ಹೆಂಡತಿಯೆಂದೇ ತಿಳಿದಿರುವನು. ಆತನಲ್ಲದೆ ಇತರರನ್ನು ನಾನು ಎಂದಿಗೂ ವರಿಸುವಳಲ್ಲ. ಆತ ೬೮ ನಿಗೇ ನನ್ನನ್ನು ಕೊಟ್ಟು ವಿವಾಹ ಮಾಡಬೇಕು' ಎಂದು ತಂದೆಯನ್ನು ಬೇಡಿ ಕೊಂಡಳು. ಕೊನೆಗೆ ಸಾವಿತ್ರಿಗೂ ಸತ್ಯವಾನನಿಗೂ ಮದುವೆಯಾಯಿತು. ಸಾವಿತ್ರಿಯು ಗಂಡನೊಡನೆ ಹೊರಟು ದು ಮತ್ತೇನನಿದ್ದ 'ಆಶ್ರಮಕ್ಕೆ ಹೋದಳು, ಅಲ್ಲಿ ಅತ್ತೆ ಮಾವಂದಿರನ್ನೂ, ಸತ್ಯವಾನನನ್ನೂ ಸೇವಿಸುತ್ತಾ ಆಶ್ರಮಕ್ಕೆ ಬಂದವರನ್ನೂ ಆದರಿಸುತ್ತಾ ಮಹಾ ಪತಿವ್ರತೆಯೆಂದು ಹೆಸರಾ ಗಿದ್ದಳು, ಒಂದು ವರ್ಷವು ಆಗುತ ಬಂದಿತು, ನಾರದರ ಮಾತು ಸುಳ್ಳಾ ಗದು ಎಂದು, ಗಂಡನು ಸಾಯುವುದಕ್ಕೆ ಮರು ದಿವಸ ಮುಂಚಿನಿಂ ದಲೂ ಸಾವಿತ್ರಿಯು ಬಹು ಕಠಿನವಾದ ವ್ರತವನ್ನು ಹಿಡಿದಿದ್ದಳು, ಪತಿಯು ಸಾಯುವನೆಂದು ತಾನೊಬ್ಬಳು ತಿಳಿದು ಇದ್ದಳೇ ಹೊರತು, ಇತರ ಯಾರಿಗೂ ಅವಳು ಹೇಳಿರಲಿಲ್ಲ. ಆ ಕೊನೆಯ ದಿವಸ ಮಧ್ಯಾಹ್ನ ಸತ್ಯವಾನನು ಕೊಡಲಿಯನ್ನು ಹೆಗಲಿಗೆ ಹಾಕಿಕೊಂಡು ಸವ್ರದೆಯನ್ನು ತರುವುದಕ್ಕೆ ಕಾಡಿಗೆ ಹೊರಟನು. ಸಾವಿತ್ರಿ ಯ ಆದಿನ ಗಂಡನ ಜತೆಯಲ್ಲಿಯೇ ಹೊರಟಳು. ಬರಬೇಡವೆಂದು ಪತಿಯು ಎಷ್ಟು ಹೇಳಿದರೂ ಅಂದು ಕೇಳಲಿಲ್ಲ. ಇಬ್ಬರೂ ಹೊರಟರು. ಸತ್ಯವಾನನು ಬಹಳ ಹೊತ್ತು ಕಟ್ಟಿಗೆಯನ್ನು ಕಡಿದು ಆಯಾಸದಿಂದ ಕುಳಿತುಕೊಂಡನು. ಆಗ ಅವನಿಗೆ ತಲೆನೋಂದಹಾಗೆ ಆಯಿತು, ಹತ್ತಿರದಲ್ಲಿದ್ದ ಸಾವಿತ್ರಿಯನ್ನು ಕರೆದು, ಪ್ರಿಯಳೆ! ನನಗೆ ತಲೆನೋವು ಹೆಚ್ಚಾಗುತ ಇದೆ, ಏಕೋ ಬಹು ಸಂ ಕಟವಾಗುತ್ತಿದೆ; ಕುಳಿತುಕೊಳ್ಳಲಾರೆ' ಎಂದನು. ತನ ಪತಿಗೆ ಮರಣಕಾಲವು ಸವಿಾಪವಾಯಿತೆಂದು ತಿಳಿದು, ಸಾವಿತ್ರಿಯು, ಪತಿಯನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸತ್ಯವಾನನ ಮುಖವನ್ನೇ ನೋಡುತಿದ್ದಳು. ೪೬, ಸಾವಿತ್ರಿಯ ಕಥೆ-೨ ನೆಯ ಭಾಗ. ಒಂದು ಕ್ಷಣದಲ್ಲಿಯೇ ಯಮನು ಬಂದು ನಿಂತು, ಸತ್ಯವಾನನನ್ನು ದೃಷ್ಟಿಸಿ ನೋಡುತ್ತಿದ್ದನು. ಆಗ ಸಾವಿತ್ರಿಯು ಕತ್ತೆತ್ತಿ, ಯಮನನ್ನು ನೋಡಿ, “ ನಿಮ್ಮನ್ನು ನೋಡಿದರೆ ನೀವು ಮನುಷ್ಯರಂತೆ ಇಲ್ಲ. ಅಯ್ಯಾ! ನೀವು ಯಾರು ?” ಎಂದು ಕೇಳಿದಳು. ಯಮನು ಅದಕ್ಕೆ, ಅಮ್ಮಾ ! ರ್೬ ನಾನೇ ಯಮಧರರಾಯನು, ನನ್ನ ದೂತರಿಗೆ ಅಸಾಧ್ಯವಾದ ನಿನ್ನ ಗಂ ಡನ ಪ್ರಾಣವನ್ನು ನಾನೇ ತೆಗೆದುಕೊಂಡು ಹೋಗಲು ಬಂದಿರುವೆನು. ನೀನು ಮಹಾ ಪತಿವ್ರತೆಯಾದುದರಿಂದಲೂ, ನಿನ್ನ ಗಂಡನು ಧರ್ಮಿಷ್ಟನಾದುದ ರಿಂದಲೂ, ನನ್ನ ದೂತರು, ಅವನ ಪ್ರಾಣವನ್ನು ಎಳೆದು ತರಲಾರದೆ ಹೋ। ದರು' ಎಂದು ಹೇಳಿ ಸತ್ಯವಾನನ ಪ್ರಾಣವನ್ನು ತೆಗೆದುಕೊಂಡು ಹೊರಟನು' ಆಗ ಸಾವಿತ್ರಿಯು ಯಮನ ಹಿಂದೆಯೇ ಹೊರಟಳು. ಅವನು ಸಾವಿ ತಿಯನ್ನು ನೋಡಿ - ಅಮ್ಮಾ, ನೀನು ಬರಬಾರದು. ಹಿಂದಿರುಗು ' ಎಂದನು. ಸಾವಿತ್ರಿಯು ಅದಕ್ಕೆ ' ನನ್ನ ಪತಿಯನ್ನು ಬಿಟ್ಟು ನಾನೆಲ್ಲಿ ಹೋಗಲಿ ! ಅವ ನನ್ನು ಅಗಲಿ ನಾನು ಹೇಗೆ ಇರಲಿ! ಆ ಪ್ರಾಣವೇ ಹೋದಮೇಲೆ ನಾನು ಪ್ರಾಣದಿಂದ ಇದು ಏನು ಫಲ? ಈ ಪ್ರಪಂಚದಿಂದ ನನಗೇನು ಆಗಬೇಕು ? ಸ್ತ್ರೀಯರಿಗೆ ಸರಸ್ವವೂ ಪತಿಯೇ ಅಲ್ಲವೇ ? ಪತಿಯೇ ದೇವರು. ಅಂತಹ ದೇವರನ್ನು ಬಿಟ್ಟು ಜನರು ಇರುವುದು ಹೇಗೆ ? ಒಂದು ಕ್ಷಣವೂ ನಾನು ನನ್ನ ದೇವರನ್ನ ಗಲಿ ಇರಲಾರೆನು ' ಎಂದಳು. ಸಾವಿತ್ರಿಯ ಸಹಜವಾದ ಸಂಕಟವನ್ನು ಕೇಳಿ ಯಮನಿಗೂ ಕರುಣ ಹುಟ್ಟಿತು. ಆಗ ಯಮನು ಸಾವಿತ್ರಿಯನ್ನು ನೋಡಿ, " ನಿನ್ನ ಪತಿಭಕ್ತಿಗೆ ನಾನು ಮೆಚ್ಚಿದೆನು, ನಿನ್ನ ಪತಿಯ ಪ್ರಾಣ ಒ೦ದು ಹೋರತು, ನೀನು ಬೇಕಾದ ವರಗಳನ್ನು ಕೇಳು, ಕೊಡುವೆನು' ಎಂದನು. ಆಗ ಸಾವಿತ್ರಿಯು ಹಾಗಾದರೆ, ಕುರುಡನಾಗಿರುವ ನನ್ನ ಮಾವನಿಗೆ ಕಣ್ಣುಬರಲಿ ; ಶತ್ರು ಗಳ ವಶವಾಗಿರುವ ನಮ್ಮ ಮಾವನ ರಾಜ್ಯವು ಮತ್ತೆ ನಮ್ಮ ಮಾವನ ಕೈಸೇ ರಲಿ ; ನಮ್ಮ ತಂದೆಗೆ ಗಂಡುಮಕ್ಕಳಾಗಲಿ, ನನಗೆ ಸಂತಾನವೃದ್ಧಿಯಾಗಲಿ' ಈ ವರಗಳನ್ನು ಕೊಡಬೇಕೆಂದು ಬೇಡಿದಳು. ಯಮನು ಇವಳ ಗುಣಕ್ಕೆ ಮೆಚ್ಚಿ ನೀನು ಬೇಡಿದ ವರಗಳನ್ನೆಲ್ಲಾ ಕೊಟ್ಟಿರುವೆನು, ಇನ್ನು ಹೋಗು' ಎಂದನು. ಆದರೂ ಸಾವಿತ್ರಿಯು ಯಮನ ಬೆನ್ನು ಹತ್ತಿದಳು. ಯಮನು, ನೀನು ಬೇಡಿದ ವರಗಳನ್ನೆಲ್ಲಾ ಕೊಟ್ಟುದು ಆಯಿತು ; ಇನ್ನು ಸುಖವಾಗಿ ಹೋಗಬಹುದಲ್ಲವೆ ? ಹೋಗು' ಎಂದನು. ಅದಕ್ಕೆ ಸಾವಿತ್ರಿಯು " ಅಯ್ಯಾ! ಯಮಧರರಾಯನೇ ! ಪತಿಯನ್ನು ಕಳೆದುಕೊಂಡ ನನಗೆ ಸಂತಾನ ಹೆಚ್ಚು ವಬಗೆ ಯೆಲ್ಲಿ ? ನೀನು ಕೊಟ್ಟ ವರಕ್ಕೆ ಸಾರ್ಥಕ್ಯ ವೆಲ್ಲಿ ? ಪತಿಯು ಹೋದ ಮೇಲೆ ಸ್ತ್ರೀಯರಿಗೆ ಸುಖವೆಂದರೇನು ? ನನ್ನ ಪತಿಯನ್ನು ಬಿಡದಿದ್ದ ಮೇಲೆ ಅನ್ನ ವರಗಳು ಏತಕ್ಕೆ ? ಎಂದು ಬಾರಿಬಾರಿಗೂ ಹೇಳುತ್ತಾ ಹಿಂದೆಯೇ ರಟಳು. ಸಾವಿತ್ರಿಗೆ ಪತಿಯ ಮೇಲಿರುವ ಪ್ರೀತಿಗೆ ಯಮನು ಮೆಚ್ಚಿ, ' ನಿನಗೆ ತೀಕಾದ ಇನ್ನೊಂದು ವರವನ್ನೂ ಕೇಳು ' ಎಂದನು. ಸಾವಿತ್ರಿಯು, ಸ್ವಾಮಿ ! ನನ್ನ ಪತಿಯ ಪ್ರಾಣವನ್ನು ಉಳಿಸಬೇಕು ' ಎಂದು ಕೈಮು \ದು ಬೇಡಿದಳು. ಆಗ ಯಮಧರರಾಯನು ಸತ್ಯವಾನನನ್ನು ಬದುಕಿಸಿ ಗಂಡ ಹೆಂಡರಿಬ್ಬರನ್ನೂ ಹರಿಸಿ, ಹೊರಟುಹೋದನು, ಸಾವಿತ್ರಿಯು ಗಂಡನನ್ನು ಕರೆದುಕೊಂಡು, ಅತ್ತೆ ಮಾವಂದಿರ ಬಳಿಗೆ ಹೋಗಿ ಕಾಡಿನಲ್ಲಿ ತಡೆದ ಸಂಗತಿಯನ್ನೆಲ್ಲಾ ತಿಳಿಸಿದಳು. ಅವರಿಗೆ ಬಹಳ ಸಂತೋಷವಾಯಿತು. ಯಮಧರರಾಯನ ವರಗಳೆಲ್ಲವೂ ಕೈಗೂಡಿದುವು. ದ್ಯುಮತ್ತೇನನಿಗೆ ರಾಜ್ಯವೂ ಬಂದಿತು. ಅಶ್ವಪತಿಗೆ ಗಂಡು ಮಕ್ಕಳಾದರು. ಸತ್ಯವಾನನು ದೀರ್ಘಾಯವಾದನು, ಸಾವಿತ್ರಿಯು ಸುಖಿಯಾದಳು. ೪೭, ಕಂಠೀರವ ನರಸರಾಜ ಒಡೆಯರು. ಈ ಮೈಸೂರು ದೇಶವನ್ನು ಆಳಿ ಪ್ರಸಿದ್ಧಿಗೊಂಡ ರಾಜರಲ್ಲಿ ಕಂಠೀರವ ನರಸರಾಜ ಒಡೆಯರೊಬ್ಬರು. ಇವರು ಮಹಾಶೂರರು, ಇವರು ಸಿಂ ಹಕ್ಕೆ ಸಮಾನವಾದ ಬಲವನ್ನೂ ಧೈರ್ಯವನ್ನೂ ಪಡೆದಿದ್ದರು. ಮೈಸೂರ ಸಂಸ್ಥಾನಕ್ಕೆ ಸೇರಿದ ತೆರಕಣಾಂಬಿ ಎಂಬ ಊರಿನಲ್ಲಿ, ಪಟ್ಟ ವಾಗುವುದಕ್ಕೆ ಮುಂಚೆ ಇವರು ಇದ್ದರು. ಅಲ್ಲಿಗೆ ಒಂದು ದಿವಸ ಒಬ್ಬ ಬ್ರಾಹ್ಮಣನು ಬಂದನು, ಆ ಬ್ರಾಹ್ಮಣನು ತಾನು ನೋಡಿದ ಪಟ್ಟಣಗಳ ವಿಚಾರವನ್ನೆಲ್ಲಾ ನರಸರಾಜರ ಮುಂದೆ ಹೇಳಿ, ಕೊನೆಗೆ, ' ತಿರುಚನಾಪಳ್ಳಿ ಎಂದು ಒಂದು ಪಟ್ಟಣವಿದೆ. ಆ ಪಟ್ಟಣದ ಅರಸಿನ ಬಳಿ ಒಬ್ಬ ಜಟ್ಟಿ ಇರುತ್ತಾನೆ. ಅವನೂ ಡನೆ ಯಾರೂ ಕಾಳಗ ಮಾಡುವವರೇ ಇಲ್ಲ' ಎಂದು ಹೇಳಿದನು, ಅದನ್ನು ಕಂಠೀರವ ನರಸರಾಜರು ಕೇಳಿ, ತಿರುಚನಾಪಳ್ಳಿಗೆ ಗುಟ್ಟಾಗಿ ಬೇರೆ ವೇಷ ೭೧. ದಿಂದ ಹೋಗಿ, ಆ ಜಟ್ಟಿಯು ಊರು ಬಾಗಿಲಲ್ಲಿ ಕಟ್ಟಿದ್ದ ದಟ್ಟಿಯನ್ನು ಕಿತ್ತು ಊರೊಳಗೆ ನುಗ್ಗಿದರು. ಆಗ ಆ ಊರದೊರೆಯ ಇದಿರಿಗೆ ಇವ ರಿಗೂ ಆ ಜಟ್ಟಿಗೂ ದೊಡ್ಡ ಕಾಳಗವಾಯಿತು. ಆ ಕಾಳಗದಲ್ಲಿ ಗೆದ್ದು ಜಟ್ಟಿಯ ಬಿರುದುಗಳನ್ನೆಲ್ಲಾ ತೆಗೆದುಕೊಂಡು ಊರಿಗೆ ಬಂದು ಸೇರಿದರು. ಇವರಿಗೆ ಪಟ್ಟೆ ವಾದಮೇಲೂ, ಇವರನ್ನು ಕೊಲ್ಲಬೇಕೆಂದು ಏಳು, ಎಂಟು ಮಂದಿ ಶೂರರು, ರಾತ್ರಿಯ ವೇಳೆಯಲ್ಲಿ ಇವರ ಮನೆಗೆ ನುಗ್ಗಿ, ಇವರ ಮೇಲೆ ಬೀಳಲು, ಮಹಾ ಪರಾಕ್ರಮದಿಂದ ಅವರೆಲ್ಲರನ್ನೂ ಜಯಿಸಿ ದರು, ಇವರ ಕಾಲದಲ್ಲಿ ತುರುಕರು ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕಲು ದೊರೆಗಳು ತಾವೇ ಕತ್ತಿಯನ್ನು ಹಿರಿದುಕೊಂಡು ಶತ್ರುಗಳ ಮೇಲೆ ಬಿದ್ದರು. ತುರುಕರ ಸೇನಾಪತಿಯು, ದಿಗಿಲುಪಟ್ಟು, ಇವರೊ ಡನೆ ಸಮಾಧಾನವನ್ನು ಮಾಡಿಕೊಂಡು ಹೊರಟು ಹೋದನು. ಇವರು ಕುಣಿಗಲು, ಸತ್ಯಮಂಗಲ ಮುಂತಾದುವುಗಳನ್ನು ಮೈಸೂರು ಸೀಮೆಗೆ ಸೇರಿಸಿಕೊಂಡು, 'ಕಂಠರಾಯಿ ಹಣ, ಕಂಠೀರಾಯ ವರಹಾ' ಎಂಬ ಚಿನ್ನದ ನಾಣ್ಯಗಳನ್ನು ಹಾಕಿಸಿದರು. ಇವರು ಇರುವವರೆಗೂ ಮೈಸೂರ ಸಿಂಹ ವಾಗಿದ್ದರು. ೪೮, ಬೇಸಗೆ ಕಾಲ ಮಳೆಗಾಲ. ಉರಿ ಬೇಸಗೆ, ಮಟಮಟ ಮಧ್ಯಾಹ್ನ, ಗಿಡದ ಒಂದು ಸಣ್ಣ ಎಲೆ ಸಹಿತ ಅಲ್ಲಾಡುತ್ತಿರಲಿಲ್ಲ, ಬಿಸಲಿನ ತಾಪವನ್ನು ತಡೆಯಲಾರದೆ ದೊಡ್ಡದೊಡ್ಡ ಮನೆಗಳ ನೆಳಲಲ್ಲಿ ನಾಲಗೆಯನ್ನು ನೀಡಿಕೊಂಡು, ಹಾ,ಹ, ಎಂದು ನಾಯಿಗಳು ಮಂಕಾಗಿ ಬಿದ್ದಿದ್ದುವು. ಅಲ್ಲಲ್ಲಿ ಮರದ ನೆಳಲಲ್ಲಿ ದನ ಗಳು ಮೇಯುವುದಕ್ಕೆ ಹಸಿರಿಲ್ಲದೆ, ಕುಡಿವುದಕ್ಕೆ ನೀರಿಲ್ಲದೆ ಬೆಪ್ಪಾಗಿ ನಿಂತಿ ದ್ದುವು. ದಾರಿಹೋಕರು, ನಡೆಯಲಾರದೆ ನೆಳಲಿದ್ದ ಸ್ಥಳದಲ್ಲಿ, ಶಾ೦ತ ರಾಗಿ, ಮಲಗಿ ನಿದ್ದೆ ಹೋಗುತಿದ್ದರು, ಮನೆಗಳಲ್ಲಿ ಮುದುಕರೂ ಹುಡು. ಗರೂ ಬಿಸಿಲ ಬೇಗೆಯನ್ನು ತಡೆಯಲಾರದೆ ಮೈಮೇಲಿನ ಬಟ್ಟೆಯನ್ನು ಬಿಸಾಟು, ನೆಲದಮೇಲೆ ಬಿದ್ದು ಹೊರಳಾಡುತ್ತಿದ್ದರು, ಎಳೆ ಮಕ್ಕಳು. ಸೆಕೆಯನ್ನು ಸಹಿಸಲಾರದೆ ಚಂಡಿ ಹಿಡಿದಿದ್ದುವು. ಪಾಠಶಾಲೆಗಳಲ್ಲಿಯೂ ಕಛೇರಿಗಳಲ್ಲಿಯ, ಬಾಲಕರ, ಗುಮಾಸ್ತರೂ ತೂಕಡಿಸುತ್ತಿದ್ದರು. ಹಣಗಾರರು, ಅಧಿಕಾರಿಗಳು, ರಾಜಕುಮಾರರು, 'ಆ' ಎಂದು ಆಗುಳಿ ಸುತ ಗಾಳಿಯನ್ನು ಬಿಸಿಸಿಕೊಳ್ಳುತ ಕಾಲವನ್ನು ಕಳೆಯುತ್ತಿದ್ದರು. ವ್ಯಾಪಾರಿಗಳು ಅ೦ಗಡಿಯ ಮೇಲೆ ಕುಳಿತು, ಹಾಗೆ ನಿದ್ದೆ ಮಾಡಿ, ಆಗಾಗ ಬೆಚ್ಚಿ ಬಿದ್ದು ಎಚ್ಚರಗೊಳ್ಳುತಿದ್ದರು. ಅಲ್ಲಲ್ಲಿಯೆ ಅರವಟ್ಟಿಗೆಗಳಲ್ಲಿ ಪಾನಕ, ನೀರುಮಜ್ಜಿಗೆ, ತಣ್ಣನೆಯ ನೀರು, ಶ್ರೀಗಂಧ ಇವುಗಳನ್ನು ಕೊಡುತಿದ್ದರು. ನದಿಯ ತೀರಗಳಲ್ಲಿ, ತೋಪುಗಳಲ್ಲಿ, ತೋಟಗಳಲ್ಲಿ, ತಣ್ಣನೆಯ ನೆಳಲಲ್ಲಿ, ಅಲ್ಲೊಬ್ಬರು ಇಲ್ಲೊಬ್ಬರು ಪಕ್ಷಿಗಳ ಇಂಪಾದ ಧ್ವನಿಯನ್ನು ಕೇಳುತ್ತ, ಆನಂದ ಪಡುತ್ತಿದ್ದರು. ಪ್ರಯಾಣಿಕರ ಗಾಡಿಗಳು ಅಲ್ಲಲ್ಲಿಯೆ ನಿಲ್ಲುತ್ತಿ ದ್ದುವು, ಎತ್ತುಗಳನ್ನು, ಹುಸ್ ಎಂದು ಅಟ್ಟಿ, ಗಾಡಿ ಹೊಡೆವವನು ಹಾಗೆಯೆ ನಿದ್ದೆ ಹೋಗುತ್ತಿದ್ದನು. ಎತ್ತುಗಳು ಹಚ್ಚೆಯಮೇಲೆ ಹಜ್ಜೆಗ ಳನ್ನು ಹಾಕುತ, ಹಾಗೆಯೇ ತೂಕಡಿಸುತ ಮುಗ್ಗುರಿಸುತಿದ್ದುವು. ಪ್ರಾಣಿಗಳ ಈ ಕಷ್ಟವನ್ನು ಸಹಿಸಲಾರದೆ ಮಳೆಗಾಲವು ಆಕಾಶದಲ್ಲಿ ಕಪ್ಪು ಮೋಡವನ್ನು ಕಟ್ಟಿ, ಕಠಿನವಾದ ಬಿಸಿಲುಗಾಲವನ್ನು ಹೊಡೆದು ಓಡಿ ಸಲು ಗುಡುಗು, ಮಿಂಚು, ಸಿಡಿಲುಗಳೊಡನೆ, ಮಳೆಯನ್ನು ಕರೆದು ಬಿಸಿಲ ಬೇಗೆಯನ್ನು ಆರಿಸಲು, ತಲೆದೋರುತಿರಲು ಬೇಸಗೆಗೆ ಕೋಪಬಂದು-ನೀ ನೇನು ಜನರಿಗೆ ಹಿತವನ್ನು ಮಾಡುವೆನೆಂದು ಬರುತ್ತೀಯೆ ? ನಿಲ್ಲು ! ನಿಲ್ಲು ! ಇಗೋ ನನ್ನ ಮಾಹಾತ್ಮವನ್ನು ತೋರಿಸುವೆನು, ಅಲ್ಲಿ ನೋಡು ತೂಕಡಿಸುತಿದ್ದ ಜನರು ಹೇಗೆ ಹೊರಟಿರುವರು. ಅವರ ನವಿರಾದ ಉಡಿಗೆ ಯನ್ನು ನೋಡು, ಅವರು ಮುಡಿದಿರುವ ಹೂವನ್ನು ನೋಡು, ಅವರು ತೊಡೆದಿರುವ ಗಂಧದ ವಾಸನೆಯು ಇಲ್ಲಿಗೆ ಬರುತಿರುವುದು, ನನ್ನ ಮಿತ್ರ ನಾದ ಮಂದಮಾರುತನು ಜನರೆಲ್ಲರನ್ನೂ ಈಚೆಗೆ ಕರತರುವನು. ಗಿಡ ಗಳೆಲ್ಲಾ ಹೇಗೆ ನಗುತಿರುವುವು, ಚಳಿಗಾಲದಲ್ಲಿ ನರಟಿ ಹೋಗಿದ್ದ ಗಿಡಗಳೆಲ್ಲಾ : ಈಗ ಒಡೆದು ಹೂ ಬಿಡುತಿರುವವ, ಆ ಮಾವಿನ ಚಿಗುರನ್ನು ನೋಡು! ಈ ಸಾಲುಮರದ ಕೆಂಪು ಹೂವನ್ನು ನೋಡು, ಪಕ್ಷಿಗಳ ಉಲ್ಲಾಸವನ್ನು ನೋಡು, ಕೋಗಿಲೆಯ ಧ್ವನಿಯನ್ನು ಕೇಳು. ನವಿಲ ಆಟವನ್ನು ನೋಡು, ಸ್ತ್ರೀಯರ ಸಡಗರವ ಹೇಗಿರುವುದು ? ಇಲ್ಲಿ ನೋಡು, ರಾಮಧ್ಯಾನಮಾಡು ೭೩ ತ್ಯ, ತಂಬೂರಿ, ಮೃದಂಗದೊಡನೆ ಜನರು ಗುಂಪಗುಂಪಾಗಿ ಹೊರಟಿರು ವರು, ಜನರಿಗೆ ಸೌಖ್ಯವೆಂಬುದು ನನ್ನ ಕಾಲದಲ್ಲಿ ಅಲ್ಲದೆ ಇನ್ನಾ ವಕಾ ಲದಲ್ಲಿ ಉಂಟು, ನಾನು ಬರುವುದಕ್ಕೆ ಮುಂಚೆ ಮೊದಲು ಮೊದಲಲ್ಲಿ ಚಳಿ ಯಲ್ಲಿ ನಡುಗಿ, ಹಿಮದಲ್ಲಿ ನೆನೆದು, ದವಸ ಧಾನ್ಯಗಳನ್ನು ತುಂಬಿ ಒದೆದಾ ಡುತಿದ್ದರು. ಒಂದು ಗಿಡದಲಾ ದರೂ ಎಲೆ ಇಲ್ಲ, ಚಿಗುರು ಇಲ್ಲ, ಹಣ್ಮನ ಹೆಸರೇ ಇಲ್ಲ. ಈಗ ನೋಡು ಹೇಗಿರುವುದು?-ಎನ್ನಲು, ಮಳೆಗಾಲವು ಒಂದು ಮಾತನ್ನೂ ಆಡದೆ ಆಕಾಶವನ್ನೆಲ್ಲಾ ಕರಿಯ ಮೋಡದಿಂದ ಮುಚ್ಚಿ ಗುಡುಗು ಮಿಂಚು ಸಿಡಿಲುಗಳೊಡನೆ ಆರ್ಭಟಿಸುತ್ತ ಪಟಪಟನೆ ಆಲಿಕಲ್ಲುಗಳನ್ನು ಬೀಸಿ ಭರಭರನೆ ಬಿರುಸಾಗಿ ಮಳೆಯನ್ನು ಕರೆಯಿತುಆಕಾಶವು ನಿರ್ಮಲವಾಯಿತು. ಗಿಡಗಳು ಮೈಯನ್ನೆಲ್ಲಾ ತೊಳದುಕೊಂ ಡಂತೆ ಕಂಗೊಳಿಸುತ್ತಿದ್ದುವು, ಊರಧಳು ಅಡಗಿತು, ಬೇಸಗೆಯ ಕೋ ಳೆಯಲ್ಲಾ ಕೊಚ್ಚಿ ಹೋಯಿತು, ಕೆರೆ ಬಾವಿಗಳಲ್ಲಿ ನೀರು ತುಂಬಿತು. ಕೆ ಟರಕೊಟರ, ಒಪ್ಪುಟ್ ಒಬಟ್, ಎಂದು ಕಪ್ಪೆಗಳು ಒರಳಲು ಆರಂಭಿಸಿದು ವು, ರೈತನು ನೇಗಿಲನ್ನು ಕಟ್ಟಿ ಕೊಂಡು, ಹೊಲವನ್ನು ಉಳಲಿಕ್ಕೆ ಹೊರ ಏನು, 'ಮಳೆ ಬಂದಿತು, ದೇಶಕೆ ತಂಪಾಯಿತು. ಇನ್ನು ಯೋಚನೆ ಇಲ್ಲ' ಎಂದು ಜನರು ಚಟುವಟಿಕೆಯಿಂದ ಕೆಲಸಮಾಡಲು ತೊಡಗಿದರು. ಮಳೆ ಗಾಲದ ಆರ್ಭಟದಿಂದ ಬೇಸಗೆಯು ಹಿಂಜರಿಯಿತು. ಎಲ್ಲೆಲ್ಲ ನೀರೂ, ಎಲ್ಲೆಲ್ಲೂ ಹಸಿರೂ ಮನಸ್ಸನ್ನು ಸಂತೋಷಪಡಿಸುತ್ತಿದ್ದು ವ. ೪೯, ಪುಷ್ಪಮಂಜರಿಯ ಕಥೆ-೧ ನೆಯ ಭಾಗ. ಪುಷ್ಟ ಪರಿಯೆಂದು ಒಂದು ಪಟ್ಟಣವಿದ್ದಿತು. ಆ ಪಟ್ಟಣದಲ್ಲಿ ಪ್ರಪ್ಪ ಶೇಖರನೆಂಬ ಒಬ್ಬ ದೊರೆಯು ಆಳುತ್ತಿದ್ದನು. ಅವನಿಗೆ ಮಕರಂದನೆಂಬ ಒಬ್ಬ ಮಗನಿದ್ದನು. ಅವನು ನೋಡುವುದಕ್ಕೆ ಬಹಳ ಚೆಲುವನಾಗಿಯೂ ಶಕ್ತಿ ಯುಕ್ತಿ ಯುಳ್ಳವನಾಗಿಯೂ ಇದ್ದನು. ೧೦ ೭೪ ಒಂದು ದಿವಸ ಆ ರಾಜಕುಮಾರನು ಬೇಟೆಗೆ ಹೋಗಿ ಒಂದು ಹುಲ್ಲೆ ಯನ್ನು ಅಟ್ಟಿ ಕೊಂಡು ಕಾಡಿನಲ್ಲಿ ಬಹುದೂರ ಹೋದನು ; ಜತೆಯಲ್ಲಿದ್ದ ಜನರೆಲ್ಲರೂ ಹಿಂದೆ ನಿಂತರು. ಹುಲ್ಲೆ ಯು ಸಿಕ್ಕಲಿಲ್ಲ, ಮಟಮಟ ಮಧ್ಯಾಹ್ನ ; ಹಸಿವು, ಬಾಯಾರಿಕೆ, ಆಯಾಸ, ಹೆಚ್ಚುತ್ತಾ ಬಂದುವು. ಆಗ ದೊರೆಯ ಮಗನು ದಿಕ್ಕು ಕಾಣದೆ ನಿಂತಿರಲು, ನಿಶ್ಯಬ್ದವಾಗಿದ್ದ ಆ ಕಾಡಿನಲ್ಲಿ ಎಲ್ಲೋ ಅತ್ರ ಶಬ್ಬ ವು ಕೇಳಬಂದಿತು. ಆ ಶಬ್ದವು ಬ೦ದೆಡೆಗೆ ಕಿವಿಗೊಟ್ಟು ಕೇಳಿ, ( ಇದೇನು ! ಈ ಅರಣ್ಯ ಮಧ್ಯದಲ್ಲಿ ಯಾರೋ ಹೆಂಗಸು ಅಳುತಿರುವಂತೆ ಕೇಳುತಿದೆ. ಅಯ್ಯೋ ಪಾಪ! ಏನು ಕಷ್ಟವೋ ವಿಚಾರಿಸೋಣ ” ಎಂದು ತನ್ನ ಆಯಾಸವನ್ನು ಮರೆತು ಒಡನೆಯೆ ಹೊರಟನು. ಮೆದೆ ಮಳೆಗಳಲ್ಲಿ ನುಗ್ಗಿ ಮುಳ್ಳು ಕಲ್ಲುಗಳನ್ನು ತುಳಿದು ಆತುರದಿಂದ ಹೋಗುವಾಗ ಬಹು ಹೊತ್ತಾಯಿತು. ಸೂರನು ಮುಳುಗುತ್ತಿದ್ದನು. ಅಳುವ ಶಬ್ದವ ಇನ್ನೂ ಹೆಚ್ಚಾಗಿ ಕೇಳಿಸುತ್ತಾ ಬಂದಿತು. ಕತ್ತಲೆ ಆಗುವುದರೊಳಗಾಗಿ ಹೇಗಾ ದರೂ ಆ ಸ್ಥಳವನ್ನು ಕಂಡು ಹಿಡಿಯಬೇಕೆಂದು, ಹತ್ತಿರವಿದ್ದ ಒಂದು ದೊಡ್ಡ ಮರವನ್ನೆ ರಿ ಸುತ್ತಲೂ ನೋಡಿದನು. ಆ ಮರಕ್ಕೆ ಸ್ವಲ್ಪ ದೂರ ದಲ್ಲಿಯೇ ಯಾರೋ ಇದ್ದಂತೆ ಕಾಣಬಂದಿತು, ಒಡನೆಯೆ ಮರವನ್ನು ಇಳಿದು, ಆ ಮಾರ್ಗವಾಗಿ ಹೊರಟು ನಡುವಾಗ ಮುದಕಿಯೊಬ್ಬಳು ಒಂದು ಹಳ್ಳದಲ್ಲಿ ಬಿದ್ದು ಗೋಳಿಡುತಿದ್ದಳು. ಒಡನೆಯೆ ಅವಳನ್ನು ಮೇಲಕ್ಕೆ ಎತ್ತಿದನು. ಆಗ ಮುದಕಿಯು ಉಸ್ಸಪ್ಪ ! ಎಂದು ನಿಟ್ಟುಸಿರುಬಿಟ್ಟು ಸ್ವಲ್ಪ ಚೇತ ರಿಸಿಕೊಂಡು : ಅಪ್ಪಾ. ನೀನು ಪ್ರಣ್ಯವಂತನಾಗಿ ಬದುಕು, ನನ್ನ ಗುಡಿಸಲು ಇಲ್ಲಿಯೇ ಇರುವುದು, ನೀನು ಹಸಿದು, ಆಯಾಸಪಟ್ಟಿರುವಂತಿದೆ. ನನ್ನ ಮನೆಯಲ್ಲಿ ಸ್ವಲ್ಪ ಊಟಮಾಡಿ, ತಳಾರಿಸಿಕೊ, ಬೆಳಿಗ್ಗೆ ನಾನು ಊರದಾ ರಿಯನ್ನು ತೋರಿಸುವೆನು, ನೀನು ಸುಖವಾಗಿ ಹೋಗಬಹುದು' ಎಂದಳು. ರಾಜಕುಮಾರನು ಬಹು ಸಂತೋಷಗೊಂಡು, ದೇವರನ್ನು ಸ್ತುತಿಸಿ, ಅವಳೊಡನೆ ಹೊರಟನು. ದಾರಿಯಲ್ಲಿ ಆಮುದುಕಿ ಇವನ ವೃತ್ತಾಂತವ ನ್ನೆಲ್ಲಾ ತಿಳಿದು-ನಿನಗೆ ತಕ್ಕ ಕನ್ನಿಕೆಯೊಬ್ಬಳು ಇರುವಳು, ಅವಳನ್ನು ಪ್ರಪ್ಪ ಮಂಜರಿಯೆಂದು ಕರೆಯುವರು. ಅವಳು ಒಬ್ಬ ರಾಕ್ಷಸನ ಕೈಗೆ ಸಿಕ್ಕಿರು ವಳು. ನೀನು ಅವಳನ್ನು ಬಿಡಿಸಿಕೊಂಡುಬಂದು ಮದುವೆಯಾಗು, ನನ್ನ ಪ್ರಾಣವನ್ನು ಉಳಿಸಿದುದಕ್ಕೆ ಪ್ರತಿಯಾಗಿ ನಿನಗೆ ಆ ಕನ್ಯಾರತ್ನವನ್ನು ಸಾಧಿಸಲು ಮಂತ್ರಿಸಿದ ಒಂದು ಕೈಗೋಲನ್ನು ಕೊಡುವೆನು ಎಂದು ಹೇಳುತಿರುವಷ್ಟರಲ್ಲಿಯೇ ಗುಡಿಸಲು ಸಿಕ್ಕಲು ಆ ರಾಜಕುಮಾರನಿಗೆ ತನ್ನ ಕೈಯಲಾದ ಉಪಚಾರಗಳನ್ನೆಲ್ಲಾ ಮಾಡಿದಳು. ಬೆಳಗಾಯಿತು. ರಾಜಕುಮರನು ಊರಿಗೆ ಹೊರಡುವುದಕ್ಕೆ ಸಿದ್ಧನಾದನು. ಆ ಮುದುಕಿಯು ಮಂತ್ರಸಿದ್ಧ ಕೋಲನ್ನು ಕೊಟ್ಟು, ಅದರ ರಹಸ್ಯವನ್ನು ತಿಳಿಸಿ, ಊರದಾರಿಯನ್ನು ತೋರಿಸಿ, ರಾಜಕುಮಾರನನ್ನು ಆಶೀರ್ವದಿಸಿ, ಕಳುಹಿಸಿಕೊಟ್ಟಳು.
೫೦ ಪುಷ್ಪಮಂಜರಿಯ ಕಥೆ-೨ ನೆಯ ಭಾಗ.
ರಾಜಕುಮಾರನು ಊರನ್ನು ಸೇರಿ, ಚಿಂತೆಯಲ್ಲಿ ಮುಳುಗಿದ್ದ ತಾಯಿತಂದೆಗಳನ್ನೂ, ಪರಜನರನ್ನೂ ಸಂತೋಷಪಡಿಸಿದನು. ಮರುದಿನ, ರಾಜಕುಮಾರನು ತಂದೆಯಬಳಿಗೆ ಹೋಗಿ, ನಮಸ್ಕಾರಮಾಡಿ, ಕಾಡಿನಲ್ಲಿ ನಡೆದುದನ್ನೆಲ್ಲಾ ತಿಳಿಸಿ, ಪುಷ್ಪಮಂಜರಿಯನ್ನು ಬಿಡಿಸಿ ಕರೆತರಲು ತನಗೆ ಆಪ್ಪಣೆಯಾಗಬೇಕೆಂದು ಕೇಳಿಕೊಂಡನು. ಮುದುಕನಾದ ದೊರೆಗೆ ಮಗನು ಹೊರಟುಹೋಗುವುದು ಬಹು ಯೋಚನೆಗೆ ಕಾರಣವಾಗಿದ್ದರೂ ಮಗನಿಗೆ ಅಪ್ಪಣೆಯನ್ನು ಕೊಟ್ಟನು. ರಾಜಕುಮಾರನು ಅಲ್ಲಿಂದ ಹೊರಟು ಊರೂರು ದೇಶದೇಶಗಳ ಇಲ್ಲಾ ಅಲೆದಲೆದು ಎಲ್ಲಿಯೂ ಪುಷ್ಪಮಂಜರಿಯ ವೃತ್ತಾಂತವನ್ನು ತಿಳಿಯದೆ, ಬೆಟ್ಟಗುಟ್ಟಿಗಳಲ್ಲಿಯಾದರೂ ಪುಷ್ಪಮಂಜರಿಯು ಸಿಕ್ಕಬಹುದೆಂದು ಕಾಡುವಾರ್ಗವಾಗಿ ಹೊರಟನು. ಕಾಡಿನಲ್ಲೆಲ್ಲಾ ಅಲೆದು ಬೆಟ್ಟಗಳಲ್ಲೆಲ್ಲಾ ಹುಡುಕಿದರೂ ಪುಷ್ಪಮಂಜರಿಯು ಸಿಕ್ಕಲಿಲ್ಲ; ಸುತ್ತಿ ಸುತ್ತಿ ಕಂಗೆಟ್ಟು ಒಂದು ಮರದಕೆಳಗೆ ಮಲಗಿಕೊಂಡನು.
ಅಲ್ಲಿಗೆ ಒಬ್ಬ ವೃದ್ಧನು ಬರಲು ರಾಜಕುಮಾರನು ಎಚ್ಚತ್ತು, ಈ ಮುದುಕನಿಗೇನಾದರೂ ಪುಷ್ಪಮಂಜರಿಯ ವೃತ್ತಾಂತವು ತಿಳಿದಿರಬಹುದೋ ೭೬ ಕೇಳೋಣವೆಂದು, ಆ ಮುದುಕನ ಹತ್ತಿರಕ್ಕೆ ಹೋಗಿ ನಮಸ್ಕಾರಮಾಡಿ, “ ಅಯ್ಯಾ, ನೀನು ಇಷ್ಪಮಂಜರಿಯ ಸಮಾಚಾರವನ್ನು ಬಲ್ಲೆ ಯಾ ?” ಎಂ ದು ಕೇಳಿದನು. ಅದಕ್ಕೆ ಆ ಮುದುಕನು 'ನನಗೆ ಸ್ವಲ್ಪ ಮಟ್ಟಿಗೆ ತಿಳಿದಿರು ವದು ; ನಾನು ತಿಳಿದಿರುವುದನ್ನು , ಮುಚ್ಚಿಡುವುದು ಏಕೆ : ವಂಚನೆಯಿ ಲ್ಲದೆ ನಿನಗೆ ಹೇಳುವೆನು, ಕೇಳು :- ಇಲ್ಲಿಗೆ ಕಾಣುವ ಮೂರನೆಯ ಬೆಟ್ಟದ ತುದಿಯಲ್ಲಿ ಒಂದು ಕೋಟೆ ಇರುವುದು, ಅಲ್ಲಿ ಒಬ್ಬ ರಾಕ್ಷಸನು ಅವಳನ್ನು ಸೆರೆಹಾಕಿಸಿರುವನು, ಆ ರಾ ಕ್ಷಸನು ಪುಷ್ಪಮಂಜರಿಯನ್ನು ಬಹು ಎಚ್ಚರಿಕೆಯಿಂದ ಕಾದುಕೊಂಡಿರು ವನು. ಕೋಟೆಯ ಸುತ್ತಲೂ ನೂರಾರುಮಂದಿ ರಾಕ್ಷಸರನ್ನು ಕಾವಲು ಇಟ್ಟಿರುವನು. ಎಷ್ಟೋಜನ ರಾಜಕುಮಾರರು ಬಂದು ಪ್ರಷ್ಪಮಂಜರಿ ಯನ್ನು ಬಿಡಿಸಿಕೊಂಡು ಹೋಗಲಾರದೆ ಅಲ್ಲಿಯೆ ಸತ್ತಿರುವರು. ನೀನು ಬಂದಿರುವ ಸಮಯವು ಬಹು ಅನುಕೂಲವಾದುದು. ಆ ರಾಕ್ಷಸಾಧ ಮನು ಈಗ ಮಲಗಿರುವನು. ಇನ್ನು ಹದಿನೈದು ದಿನಗಳು ಅವನು ಏಳು ವಂತೆ ಇಲ್ಲ, ಈಗ ಪಷ್ಪಮಂಜರಿಯು ಆ ರಾಕ್ಷಸನ ತಾಯಿಯ ವಶದ ಇರುವಳು. ಈಗ ಅವಳನ್ನು ಬಿಡಿಸಿಕೊಂಡರೆ ಸರಿ, ಇಲ್ಲದಿದ್ದರೆ, ನಿನ್ನ ಪ್ರಯತ್ನ ಎಂದಿಗೂ ಕೈಗೂಡುವುದಿಲ್ಲ, ನೀನು ಈಗಲೇ ಹೊರಡು. ನಿನಗೆ ಜಯವಾಗಲಿ' ಎಂದು ಹೇಳಿ ಹೊರಟುಹೋದನು. ರಾಜಕುಮಾರನು ಒಡನೆಯೆ ಹೊರಟನು. ಮೂರು ದಿವಸಗಳು ಹಗಲೂ ರಾತ್ರಿ ಒಂದೇ ಸಮನಾಗಿ ನಡೆದು ನಾಲ್ಕನೆಯ ರಾತ್ರಿ ಆಕೆ ಟೆಯ ಬಳಿಗೆ ಸೇರಿದನು. ಕೋಟೆಯ ಬಾಗಿಲಲ್ಲಿ, ಥಳಥಳಿಸುವ ಕತ್ತಿಗ ಳನ್ನು ಹಿಡಿದುಕೊಂಡು ಆರುಮಂದಿ ರಾಕ್ಷಸರು, ಕಾವಲುಕೊಡುತ್ತಿದ್ದರು. ' ನಾನು ಇವರೊಡನೆ ಸುಮ್ಮನೆ ಯುದ್ಧ ಮಾಡಿ ಇವರನ್ನು ಕೊಂದು, ಒಳಗೆ ಹೋಗುವುದಾದರೆ ಗಲಭೆಯು ಹೆಚ್ಚಿ, ತೊಂದರೆಗೆ ಗುರಿಯಾಗುವೆನು ? ಎಂದು ಯೋಚಿಸಿ ರಾಜಕುಮಾರನು ಆ ಮಾರ್ಗವನ್ನು ಬಿಟ್ಟು ಬೇರೆ ಎಲ್ಲಿ ಯಾದರೂ ದಿಡ್ಡಿ ಬಾಗಿಲಿದ್ದರೆ, ಅಲ್ಲಿಂದಾದರೂ ಒಳಹೋಗುವ ಪ್ರಯತ್ನ ಮಾ ಡಬೇಕೆಂದು ಅದನ್ನು ಹುಡುಕುವುದಕ್ಕೆ ಕೋಟೆಯ ಸುತ್ತಲೂ ಹೋದನು. وع ೫೧, ಪುಷ್ಪಮಂಜರಿಯ ಕಥೆ-೩ ನೆಯ ಭಾಗ. ಹಾಗೆ ರಾಜಕುಮಾರನು ಕೋಟಿಯಸುತ್ತಲ ಬರುತ್ತೆ ಅಲ್ಲಲ್ಲಿ ಕತ್ತಿಗಳನ್ನು ಹಿಡಿದುಕೊಂಡು ತೂಕಡಿಸುತ್ತಿದ್ದ ಭಯಂಕರರಾದ ರಾಕ್ಷ ಸರನ್ನು ನೋಡಿದನು. ಒಂದು ಕಡೇ ಮಾತ್ರ ಒಂದು ಸಣ್ಣ ಬಾಗಿಲು ಇದ್ದು ದನ್ನೂ, ಅಲ್ಲಿದ್ದ ಒಬ್ಬ ಕಾವಲುಗಾರನು ನಿದ್ದೆ ಹೋಗುತ್ತಿದ್ದುದನ್ನೂ ಕಂ ಡನು, ಆಗ ಸದ್ದಿಲ್ಲದೆ ಅವನ ಸವಿಾಪಕ್ಕೆ ಹೋಗಿ ನೋಡಲು, ಅವನು ಮೈ ಮರೆತು ಬಿದ್ದಿದ್ದನು, ಆಗ ಮೆತ್ತಗೆ ಆ ಬಾಗಿಲನ್ನು ತೆರೆದು ಒಳಕ್ಕೆ ಹೋ ದನು. ಕೋಟೆಯಲ್ಲಿ ನಿಶ್ಯಬ್ದವಾಗಿದ್ದಿತು. ಎಲ್ಲಿನೋಡಿದರೂ ಬಯಲು; ಮಧ್ಯದಲ್ಲಿ ಮಾತ್ರ ಒಂದು ದೊಡ್ಡ ಮನೆಯು ಇರುವಂತೆ ಕಾಣಿಸಿತು. ಆ ಮನೆಯ ಮಾರ್ಗವಾಗಿ ಹೊರಟು, ಕಾವಲು ಇಲ್ಲದ ಅರಮನೆ ಯನ್ನು ಪ್ರವೇಶಮಾಡಿ ದನು. ಅಷ್ಟು ಹೊತ್ತಿಗೆ ಸರಿಯಾಗಿ ಚಂದ್ರೋದಯ ವಾಗಿ ಬೆಳದಿಂಗಳು ಬಂದಿತು, ಅದು ಎಂತಹ ಅರಮನ ! ಎಲ್ಲೆಲ್ಲಿ ನೋಡಿ ದರೂ ಬೆಳ್ಳಿಯಗೊಡೆ, ಭ೦ಗಾರದ ಬಾಗಿಲು, ಸಜ್ಜೆಯ ಕಂಬ, ನೀಲದ ತೋರಣ, ಮುತ್ತಿನ ಜಾಲರಿ, ಕೆಂಪಿನ ಕಾರಣೆ ಆ ಐಶ್ವರ ವನ್ನೂ ಅಂದ ವನ್ನೂ ನೋಡಿ ರಾಜಕುಮಾರನು ಬೆರಗಾಗಿ ಒಂದು ಗಳಿಗೆ ನಿಂತಿದ್ದು ತರು ವಾಯ ಇನ್ನೇನು ಆಶ್ಚರವಿರುವ ದೋ ನೋಡಬೇಕೆಂದು ಮುಂದೆ ಒಂದೆ ರಡು ಹಜೆಗಳನ್ನು ಇಟ್ಟನು. ಅಲ್ಲಿ ಕಿವಿಗೆ ಇಂಪಾದ ಧ್ವನಿಯ ದಿವ್ಯವಾದ ಪ್ರಷ್ಟ ಪರಿಮಳವೂ ಬಂದುವು. ಅಷ್ಟರಲ್ಲಿ ಸಿಕ್ಕಿದ ಮೊಟ್ಟೆ ಯಬಾಗಿಲನ್ನು ತೆರೆ ದೊಡನೆ, ಒಳಗಿನ ಹೊಳಪು ಒಂದು ಕ್ಷಣಮಾತ್ರ ಇವನ ಕಣ್ಣುಗಳನ್ನು ಕೋರೈಸಿತು. ಆತೊಟ್ಟಿ ಯ ನಡುವೆ ನವರತ್ನ ಖಚಿತವಾದ ಸಿಂಹಾಸನ, ಆ ಸಿಂಹಾಸನದ ಮೇಲೆ ಥಳಥಳಿಸುತ್ತಿರುವ ಕನ್ಯಾರತ್ನ, ಆ ಕನ್ನಿಕೆಯ ಸಿಂಹಾಸನವೂ ಅಲ್ಲಿದ್ದ ಸಾಲದೀವಿಗೆಗಳೂ ನಾಲ್ಕು ಕಡೆಯ ರತ್ನಭಿತ್ತಿಗಳ ಲ್ಲಿಯ ಪ್ರತಿಬಿಂಬಿಸಿ ನೂರಾರು ಕನ್ನೆಯರು ನೂರಾರು ಸಿಂಹಾಸನಗಳೂ ಇರುವಂತೆ ಕಾಣುತ್ತಿದ್ದುವು. ಈ ಹೊಳಪಿನಲ್ಲಿ ಕಾಳರಾಕ್ಷಸಿಯಂತೆ ಕಪ್ಪಗೆ ಆ ರಾಕ್ಷಸನ ತಾಯಿಯು ಕುಳಿತಿರದಿದ್ದರೆ ಇವನು ಎಷ್ಟು ಹೊತ್ತು ನಿಂತಿ ದ್ದರೂ ಇವನ ಕಣ್ಣಿಗೆ ಪ್ರಕಾಶ ವಿನಾ ಇನ್ನೇನೂ ಕಾಣುತ್ತಿರಲಿಲ್ಲ. ೭ಳ ಅಲ್ಲಿಯೆ ಒಂದೆರಡು ನಿಮಿಷಕಾಲ ನಿಂತು ಸುತ್ತಲೂ ಚೆನ್ನಾಗಿ ನೋ ಡಲು ಆ ಪ್ರಷ್ಟ ಮಂಜರಿಯ ವೈಭವವು ಕಾಣಿಸಿತು, ಒಂದು ಕಡೆ ಸ್ತ್ರೀಯರು ನಾಟ್ಯವಾಡುತ್ತಿದ್ದರು ; ಒಂದುಕಡೆ ಗಾನಮಾಡುತ್ತಿದ್ದರು. ಇವುಗಳನ್ನೆಲ್ಲಾ ನೋಡಿ ಈ ರಾಜಕುಮಾರನು ಬೆಪ್ಪಾಗಿ ನಿಂತನು. ಅಷ್ಟ ರಲ್ಲಿಯೇ ಆ ರಾಕ್ಷಸಸ್ತ್ರೀಯ ಗರ್ಜನೆಯು ಕೇಳಿಸಿತು, ಅಲ್ಲಿದ್ದ ಹೆಂಗಸ ರೆಲ್ಲಾ ಒಂದು ಕ್ಷಣಮಾತ್ರದಲ್ಲಿ ಎಲ್ಲೋ ಮಾಯವಾದರು. ಈ ರಾಜಕು ಮಾರನಿಗೆ ಆ ಸ್ತ್ರೀಯರ ಕಾಲುಗೆಜ್ಜೆಯ ಧ್ವನಿಮಾತ್ರ ಕೇಳಿಸಿತಲ್ಲದೆ ಅವರು ಮಾಯವಾದ ಬಗೆ ಕಾಣಿಸಲಿಲ್ಲ. ಅಗ ಆ ರಾಕ್ಷಸಿಯು “ಎಲೈ ! ನರಾಧಮ, ನಿಲ್ಲು, ನಿಲ್ಲು. ನೀನು (ಯಾರು ? ಹೇಗೆ ಬಂದೆ ? ಒಂದು ನಿಮಿಷದಲ್ಲಿ ರಾಕ್ಷಸರು ಬಂದು ನಿನ್ನನ್ನು ಕಡಿದು ತಿಂದುಹಾಕುವರು, ಹಾ ! ಹೋ!” ಎಂದು, ಆರ್ಭಟಿ ಸಿದಳು. ಆಗ ರಾಜಕುಮಾರನು ಸ್ವಲ್ಪ ಧೈರ್ಯವನ್ನು ತಾಳಿ, ಒಂದೆ ರಡು ಹಜ್ಜೆ ಮುಂದೆ ಹೋಗಿ, ಕೈಮುಗಿದು, 'ತಾಯೆ | ಕ್ಷಮಿಸಿ, ನಾನು ನಿಮ್ಮ ಗು ಜ್ಞಾತಿಶಯಗಳನ್ನು ಕೇಳಿ ಆಶ್ಚರಯುಕ್ತನಾಗಿ ನಿಮ್ಮನ್ನು ಸೇವಿಸಿ ಕೊಂಡಿರಲು ಇಲ್ಲಿಗೆ ಬಂದಿರುವೆನು. ದಯಪಾಲಿಸಬೇಕು' ಎಂದು ಅವಳನ್ನು ಸ್ವಲ್ಪ ಸ್ತೋತ್ರಮಾಡಿದನು, ಸ್ತೋತ್ರಕ್ಕೆ ಒಳಗಾಗದಿರುವರು ಯಾರು ? ಇವನ ಸ್ತೋತ್ರಕ್ಕೆ ಆ ಮುದುಕಿಯು ಮೆಚ್ಚಿ, “ಒಳ್ಳೆಯದು ! ಹಾಗಾದರೆ, ನಮ್ಮದೊಂದು ಕುದುರೆ ಇರುವುದು, ಅದನ್ನು ನೀನು ಮೂರುದಿನಗಳು ಹೊರಕ್ಕೆ ತೆಗೆದುಕೊಂಡು ಹೋಗಿ ಮೇಯಿಸಿಕೊಂಡು ಬಂದಗೆ, ನಿನ್ನನ್ನು ಇಲ್ಲಿಯೇ ಇಟ್ಟು ಕೊಳ್ಳುವೆನು' ಎಂದಳು. ಅದಕ್ಕೆ ಆ ರಾಜಕುಮಾರನು ಸಂತೋಷದಿಂದ ಒಪ್ಪಲು ಅವನಿಗೆ ಆಗ ಆಹಾರವನ್ನು ಕೊಟ್ಟು, ಮರುದಿನ ಬೆಳಗ್ಗೆ ಕುದುರೆಯನ್ನು ಕೊಟ್ಟು ಕಳುಹಿಸಿದಳು, ಕುದುರೆಯನ್ನು ಮೇಯುವುದಕ್ಕೆ ಬಿಟ್ಟು ರಾಜಕುಮಾ ರನ್ನು ರಾತ್ರಿ ಕಂಡ ಸೊಬಗನ್ನೇ ಯೋಚಿಸುತ್ತಾ ಇರಲು, ಕುದುರೆಯು ಎಲ್ಲೋ ತಪ್ಪಿಸಿಕೊಂಡಿತು. ಎಲ್ಲೆಲ್ಲಿ ಹುಡುಕಿದರೂ ಸಿಕ್ಕಲಿಲ್ಲ, ರಾಜಕು
ಮಾರನಿಗೆ ಬಹುದುಃಖಬಂದಿತು. ೭೯
೫೨. ಪುಷ್ಪಮಂಜರಿಯ ಕಥೆ-೪ ನೆಯ ಭಾಗ.
ರಾಜಕುಮಾರನು ಮಾಯವಾದ ಆ ಕುದುರೆಯನ್ನು ಬಲವಾಗಿ ಹುಡು ಕಾಡಿದನು. ಎಲ್ಲಿಯೂ ಸಿಕ್ಕಲಿಲ್ಲ. ಆಗ ಅದುವರೆಗೂ ತಾನು ಪಟ್ಟ ಶ್ರಮ ವೆಲ್ಲವೂ ವ್ಯರ್ಥವಾಯಿತೆಂದು ಚಿಂತಿಸುತ ಕುಳಿತಿರುವಾಗ ತನ್ನ ಹತ್ತಿರದ ಲ್ಲಿದ್ದ ಆ ಕೈಗೊಲು ಕೆಳಕ್ಕೆ ಬಿದ್ದಿತು. ಆಗಲೆ ನೂರಾರು ಪಕ್ಷಿಗಳು ಬಂದುವು, ಪಕ್ಷಿರಾಜನಾದ ಗರುಡನು ಬಂದು, 'ನನ್ನಿ೦ದ ತಮಗೆ ಏನು ಆಗಬೇಕು ?' ಎಂದು ಕೇಳಿದನು.
ಆಗ ರಾಜಕುಮಾರನಿಗೆ, ಆ ಕೋಲನ್ನು ನೆಲಕ್ಕೆ ಗಟ್ಟಿಯಾಗಿ ಒಂದಾವೃತ್ತಿ ತಗುಲಿಸಿದರೆ, ಪಕ್ಷಿಗಳು ಬರುವುವು ಎಂದೂ, ಎರಡಾವೃತ್ತಿ ಹೊಡೆದರೆ ಮೃಗಗಳು ಬರುವುವೆಂದೂ, ಮೂರಾವೃತ್ತಿ ಹೊಡೆದರೆ ಮೋಸಳೆಗಳು ಬರುವುವೆಂದೂ, ಕಾಡಿನಲ್ಲಿ ಆ ಮುದುಕಿಯು ಅಂದು ಹೇಳಿದುದು ಜ್ಞಾಪಕಕ್ಕೆ ಬಂದಿತು, ಆಗ ಅವನು, ಎಲೈ ! ಪಕ್ಷಿರಾಜನೇ ! ನನ್ನ ಕುದುರೆಯು ಎಲ್ಲೋ ಮಾಯವಾಗಿರುವುದು, ನೀನು ಹುಡುಕಿಕೊಟ್ಟರೆ, ನಿನ್ನ ಉಪಕಾರವನ್ನು ನಾನು ಎಂದಿಗೂ ಮರೆಯೆನು' ಎಂದನು. ಗರುಡನು ಪಕ್ಷಿಸಮೂಹದೊಡನೆ ಹೊರಟು, ಸ್ವಲ್ಪ ಕಾಲದಲ್ಲಿಯೇ ಆ ಕುದುರೆಯನ್ನು ಹಿಡಿದು ತಂದುಕೊಟ್ಟನು. ರಾಜಕುಮಾರನು ಗರುಡನಿಗೆ ವಂದಿಸಿ, ಆ ಕುದುರೆಯನ್ನು ಹಿಡಿದುಕೊಂಡು ಹೋಗಿ ರಾಕ್ಷಸಿಗೆ ಕೊಟ್ಟನು. ಆ ರಾಕ್ಷಸಿಯು ಆಶ್ಚರ್ಯಪಟ್ಟಳು.
ಮಾರನೆಯ ಬೆಳಗ್ಗೆ,ಕುದುರೆಯನ್ನು ತೆಗೆದುಕೊಂಡು ಹೊರಟನು. ಕುದುರೆಯು ಅಂದೂ ಅದೃಶ್ಯವಾಯಿತು, ಆಗ ಮೃಗಗಳ ಸಹಾಯದಿಂದ ಕುದುರೆಯನ್ನು ಪಡೆದು ರಾಕ್ಷಸಿಗೆ ಒಪ್ಪಿಸಿದನು.
೮೦
ಳೆಯ ಸಹಾಯದಿಂದ ಕುದುರೆಯನ್ನು ಹಿಡಿದು ತಂದನು, ಆಗ ರಾಕ್ಷಸಿಯು ಸಂತೋಷಪಟ್ಟು, 'ನಿನಗೆ, ಏನು ಬೇಕು ? ಕೇಳು,” ಎಂದಳು. ರಾಜಕುಮಾರನು, ಇಲ್ಲಿಯೆ ಈ ಕುದುರೆಯ ಮರಿಯ ಕೆಲಸವನ್ನು ಮಾಡಿ ಕೊಂಡು ಇರುವೆನು; ಅಪ್ಪಣೆಯಾಗಬೇಕು ” ಎಂದನು, ರಾಕ್ಷಸಿಯು ಒಪ್ಪಿ ಕುದುರೆಯ ಮರಿಯನ್ನು ಇವನ ವಶಕ್ಕೆ ಬಿಟ್ಟಳು.
ಆ ಬೆಳಗ್ಗೆ, ರಾಜಕುಮಾರನು ಮರಿಯನ್ನು ನೋಡುತಿದ್ದಾಗ ಇವನ ಸಾಹಸವನ್ನೂ, ಇವನ ಧೈರ್ಯವನ್ನೂ, ಇವನ ರೂಪಲಾವಣ್ಯವನ್ನೂ ನೋಡಿ ಮೆಚ್ಚಿದ ಪ್ರಷ್ಟಮಂಜರಿಯು ಬಂದು 'ಬೇಗ ಕುದುರೆಯನ್ನೇರಿ, ನಾನೂ ಬರುವೆನು, ತಡಮಾಡಬೇಡಿ, ರಾಕ್ಷಸರೆಲ್ಲರೂ ನಿಮ್ಮನ್ನು ಕೊಲ್ಲಲು ಯೋಚಿಸುತ್ತಿರುವರು' ಎಂದು ಕುದುರೆಯನ್ನು ತಾನೇ ಮುಂದಾಗಿ ಹತ್ತಿದಳು. ಒಡನೆಯೆ ರಾಜಕುಮಾರನ ಹತ್ತಿದನು. ಪ್ರಪ್ಪಮಂಜರಿಯು ಆ ಕುದುರೆಯನ್ನು ತಟ್ಟಲು, ಕುದುರೆಯು ಆಕಾಶಮಾರ್ಗವಾಗಿ ಹೊರಟಿತು.
ಕಾವಲಿದ್ದ ರಾಕ್ಷಸರು, ಪುಷ್ಪಮಂಜರಿಯು ರಾಜಕುಮಾರನೊಡನೆ ಹೋಗುತ್ತಿದ್ದುದನ್ನು ನೋಡಿ, ಮಲಗಿದ್ದ ರಾಕ್ಷಸಾಧಿಪನನ್ನು ಎಚ್ಚರಿಸಲು ಬೊಬ್ಬೆ ಯಿಟ್ಟರು. ಅವನಿಗೆ ಗಾಢನಿದ್ರೆ. ಅವನು ಏಳುವುದರಲ್ಲಿ ಇವರು ನೂರುಗಾವದ ದೂರ ಹೋಗಿದ್ದರು. ಅವನೆದ್ದು ವರ್ತಮಾನನನ್ನು ಕೇಳುವುದರಲ್ಲಿ ಇವರು ತಮ್ಮ ಪಟ್ಟಣವನ್ನ ಸೇರಿದ್ದರು. ನಿದ್ರೆ ಗೆಟ್ಟು ಎದ್ದ ರಾಕ್ಷಸನಿಗೆ ಕೋಪಬಂದು, ಕಾವಲಿದ್ದ ರಾಕ್ಷಸರನ್ನೆಲ್ಲಾ ಕೊಂದನು ಪುಷ್ಪಮಂಜರಿಯು ಹೊರಟುಹೋದಳೆಂಬ ದುಃಖದಲ್ಲಿ ತಾನೂ ಪ್ರಾಣವನ್ನು ಬಿಟ್ಟನು. ಮಗನು ಸತ್ತನೆಂದು ಆ ರಾಕ್ಷಸಿಯ ಸತ್ತಳು.
ಇತ್ತಲಾಗಿ ರಾಜಕುಮಾರನ ವೃದ್ದ ಮಾತಾಪಿತೃಗಳು ಬಹುಕಾಲ ಅಗಲಿದ್ದ ಮಗನನ್ನೂ ಬಲು ಚಲುವೆಯಾದ ಪುಷ್ಪಮಂಜರಿಯನ್ನೂ ನೋಡಿ ಸಂತೋಷಗೊಂಡರು. ಅಂದು ಕಾಡಿನಲ್ಲಿ ಕಂಡ ಮುದುಕಿಯೇ ಪುಷ್ಪ ಮಂಜರಿಯ ತಾಯಿ. ಮಗಳು ಬಂದ ವರ್ತಮಾನವನ್ನು ಕೇಳಿ, ಅವಳೂ ಬಂದಳು. ಪುಷ್ಪಮಂಜರಿಯನ್ನು ರಾಜಕುಮಾರನು ಮದುವೆಯಾಗಿ ಬಹುಕಾಲ ಸುಖವಾಗಿದ್ದನು.