ವಿಷಯಕ್ಕೆ ಹೋಗು

ಕನ್ನಡದ ಬಾವುಟ

ವಿಕಿಸೋರ್ಸ್ದಿಂದ

page -






THE BOOK WAS

DRENCHED________________

UNIVERSAL LIBRARY 200568

LIBRARY UNIVERSAL


ಕರ್ಣಾಟಕ ಸಾಹಿತ್ಯ ಪರಿಷತ್ತು

ಶ್ರೀ ಕೃಷ್ಣ ರಾಜೇಂದ್ರ ಪರಿಷನ್ಮಂದಿರ

ಚಾಮರಾಜಪೇಟೆ, ಬೆಂಗಳೂರು

l೧೯೩೮
ಒಂದು ರೂಪಾಯಿ





ಬೆಂಗಳೂರು ಪ್ರೆಸ್
ಮೈಸೂರು ರೋಡ್,ಬೆಂಗಳೂರು ಸಿಟಿ



ಮೈಸೂರು ಸಂಸ್ಥಾನದ ಶ್ರೀಮನ್ ಮಹಾರಾಜರವರಾದ
ಶ್ರೀ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಬಹದ್ದೂರ್, ಜಿ.ಸಿ.ಎಸ್.ಐ., ಜಿ.ಬಿ.ಇ.
ಮಹಾಸ್ವಾಮಿಯವರು
ರ್ಣಾಟಕ ಸಾಹಿತ್ಯ ಪರಿಷತ್ತಿನ ಮಹಾಪೋಷಕರು







*
ಮೈಸೂರು ಸಂಸ್ಥಾನದ
ಶ್ರೀ ಮನ್‌ ಮಹಾರಾಜರವರಾದ
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್,
ಜಿ.ಸಿ.ಎಸ್.ಐ., ಜಿ.ಬಿ.ಇ. ಮಹಾಸ್ವಾಮಿಯವರಿಗೆ

ಈ ಗ್ರಂಥವನ್ನು ಭಕ್ತಿಯಿಂದ
ಒಪ್ಪಿಸಿದೆ
*

ಮೈಸೂರು ಸಂಸ್ಥಾನದ ಶ್ರೀಮದ್ ಯುವರಾಜರವರಾದ
ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್
ಜಿ.ಸಿ.ಐ.ಇ. ಮಹಾಸ್ವಾಮಿಯವರು
ಕರ್ಣಾಟಕ ಸಾಹಿತ್ಯ ಪರಿಷತ್ತಿನ ಪೋಷಕರು ಮತ್ತು ಅಧ್ಯಕ್ಷರು

ಕನ್ನಡ ನಾಡು ಎಚ್ಚತ್ತು ಕೂಡಿಕೊಳ್ಳುತ್ತಿರುವ ದೊಡ್ಡ ಸಡಗರದಲ್ಲಿ

ಕನ್ನಡ ನಾಡಿನ ಹೆಮ್ಮೆಯನ್ನು ಹಾಡಿರುವ ಕವಿಗಳಿಂದ ಆಯ್ದ ತಿರಳೊಂದನ್ನು ಹಂಚಬೇಕೆಂಬ ಬಯಕೆ ಬಹು ಕಾಲದಿಂದ ಕಡೆದು ಕುದಿಯುತ್ತಿತ್ತು. ಕನ್ನಡ ತಾಯ ಪಾದದಲ್ಲಿ ಹಿಂದಿನ ಹಿರಿಯ ಕವಿಗಳೂ ಈಗಿನ ಕವಿಗಳೂ ಒಪ್ಪಿಸಿದ ಹೂವುಗಳನ್ನು ಬಾಚಿ ತೆಗೆದು, ಮೂವತ್ತು ವರ್ಷಗಳಿಂದ ನನ್ನ ಎದೆಯಲ್ಲಿ ತುಂಬಿ ಚಿಮ್ಮುತ್ತಿದ್ದುವುಗಳನ್ನು ಇಲ್ಲಿ ದಂಡೆಗಟ್ಟಿದ್ದೇನೆ. (ನನ್ನವೂ ಕೆಲವು ಹೂವನ್ನು ನನ್ನೊಡನೆ ಈ ಆಸೆಯನ್ನು ಕಾರ್ಯರೂಪಕ್ಕೆ ತಂದ ನನ್ನ ಕೆಳೆಯರು ಇದರಲ್ಲಿ ಸೇರಿಸಿದ್ದಾರೆ. ಅದು ಅವರ ಪ್ರೀತಿ.) ತಾಯಡಿಯ ಹೂವುಗಳಿವು : ನಾನು ನಾರು: ಕನ್ನಡದ ಸತ್ತ್ವವೂ ತಿರುಳೂ ಪೋಣಿಕೆಯ ಕಣ್ಣು, ಕನ್ನಡಿಗರ, ಅದರಲ್ಲೂ ಮಕ್ಕಳ, ಹೆಣ್ಣು ಮಕ್ಕಳ, ಒಕ್ಕಲು ಮಕ್ಕಳ ಮೆಚ್ಚುಗೆಯೇ ನಾನು ಎದಿರುನೋಡುವ ದೊಡ್ಡ ಫಲ. ಅವರಲ್ಲೆಲ್ಲಾ ಕನ್ನಡದ ಹೆಮ್ಮೆ ಹರಡಲಿ. ಅವರಿಂದ ಕನ್ನಡ ಬೆಳಗಲಿ.

೭ನೆಯ ಶತಮಾನದಿಂದ ೨೦ನೆಯ ಶತಮಾನದ ಇಂದಿನವರೆಗಿನ ಕನ್ನಡ ಬೆಳೆಯನ್ನು (೧) ಶಾಸನಗಳು, (೨) ಪೂರ್ವ ಸಾಹಿತ್ಯ, (೩) ನಾಡಪದಗಳು, (೪) ಇಂದಿನ ಹೊಸ ಕವಿತೆ-ಈ ನಾಲ್ಕು ತೆನೆಗಳಲ್ಲಿ ತೋರಿಸಿದ್ದೇನೆ. ಕಾಲ ಕಾಲದ ಭಾಷೆಯ ಮಾರ್ಪಾಟುಗಳು, ಛಂದಸ್ಸಿನ ಬಗೆಬಗೆಯ ಕುಣಿತ, ಕನ್ನಡ ನಾಡಿನ ಸೊಬಗು, ಹೃದಯ, ಧರ್ಮಗಳು, ಮಹಾವ್ಯಕ್ತಿಗಳು, ಜೀವಗುರಿಗಳು, ಬೇರೆ ಬೇರೆ ಪ್ರಾಂತಪ್ರೇಮಗಳು- ಒಂದು ಮಾತಿನಲ್ಲಿ, ಹಿಂದಿನ ಮಹತ್ತ್ವದ ಸಂಸ್ಕಾರ ಮತ್ತು ಸಂಸ್ಕೃತಿ, ಇಂದಿನ ಮಹತ್ವದ ಧ್ಯೇಯ ಮತ್ತು ಯೋಜನೆಗಳು, ನಾಡ ನಾಡಿಯ ಮಿಡಿತ- ನನಗೆ ತಿಳಿದಂತೆ ಯಾವ ಯಾವುದು ಕನ್ನಡ ಬಾವುಟ ದಡಿಯಲ್ಲಿ ಹೊಮ್ಮಿದ ಎರಡು ಸಾವಿರ ವರ್ಷದ ಜೀವಾಳವೋ ಅದನ್ನೆ ತೆನೆ ಗಳಾಗಿ ಆಯ್ದು ತೆಕ್ಕೆಮಾಡಿ ಕನ್ನಡಿಗರ ಕೈಗೆ ಒಪ್ಪಿಸಿದ್ದೇನೆ. ಇದರಲ್ಲಿ ಹೆಸರು ಹೇಳಬಹುದಾದ ಪ್ರತಿಯೊಬ್ಬ ಕನ್ನಡ ಕವಿಯೂ ಬಂದಿರುವನೆಂದಾಗಲಿ, ಬಂದಿರುವ ಕವಿಯ, ಇಲ್ಲ, ಕಾವ್ಯದ ಉತ್ತಮ ಭಾಗವನ್ನೆ ಎಲ್ಲ ಕಡೆಯೂ ಆಯ್ಕೆ ದೆಯೆಂದಾಗಲಿ ಹೇಳುವುದಕ್ಕಿಲ್ಲ. ಈ ವರ್ಷದ ಪರಿಷತ್ತಿನ ವಸಂತೋತ್ಸವದ ಹೊತ್ತಿಗೆ ಸಿದ್ದ ಪಡಿಸುವ ಆತುರದಿಂದಲೂ ಕಡಮೆ ತಿಳಿವಳಿಕೆಯ ದೋಷದಿಂದಲೂ ಬಗೆಬಗೆಯ ಕುಂದು ಕೊರತೆಗಳುಂಟೆಂಬುದನ್ನು ಬಲ್ಲೆ. ಅವನ್ನು ತಿದ್ದಿ ದಾರಿತೋರಬೇಕೆಂದು ಕನ್ನಡ ಪ್ರೇಮಿಗಳಲ್ಲಿ ಬಿನ್ನೈಸಿ ಕೊಳ್ಳುತ್ತೇನೆ.

ಈ ಸಂಗ್ರಹ ಕಾರ್ಯದಲ್ಲಿ ನೆರವಾದ ನನ್ನ ಶಿಷ್ಯರು ಶ್ರೀ||ವಿ. ಸೀತಾ ರಾಮಯ್ಯನವರನ್ನೂ ಶ್ರೀ|| ಕೆ. ವಿ. ರಾಘವಾಚಾರ್ಯರನ್ನು ಎಂದೆಂದೂ ಸಂತೋಷದಿಂದ ನೆನೆಯುತ್ತೇನೆ. ಅವರಿಲ್ಲದೆ ಇದು ನನ್ನ ಮನಸ್ಸಿನಲ್ಲಿಯೇ ಉಳಿಯುತ್ತಿತ್ತು. ತಮ್ಮ ಕವಿತೆಗಳನ್ನು ಸೇರಿಸಿಕೊಳ್ಳುವುದಕ್ಕೆ ಒಪ್ಪಿಗೆ ಕೊಟ್ಟ ಕವಿಗಳಿಗೂ, ಚೆಲುವಾದ ಮುಖಚಿತ್ರವನ್ನು ಬರೆದುಕೊಟ್ಟ ಶ್ರೀ|| ಎಂ. ವಿ. ಸೀತಾರಾಮಯ್ಯನವರಿಗೂ, ಶ್ರೀಮನ್ ಮಹಾರಾಜರವರ ಮತ್ತು ಕನ್ನಡ ನಾಡಿನ ಚಿತ್ರದ ಪಡಿಯಚ್ಚುಗಳನ್ನು ಕೊಟ್ಟ ಮೈಸೂರು ವಿದ್ಯಾಶಾಖೆಯ ಅಧಿಕಾರಿಗಳಾದ ಶ್ರೀ ಇ. ಜಿ.ಮೆಕಾಲ್ವೈನ್ ಅವರಿಗೂ, ಬೇಲೂರು ಶಿಲಾಬಾಲಿಕೆಯ ಚಿತ್ರದ ಪಡಿಯಚ್ಚನ್ನು ಕೊಟ್ಟ ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದವರಿಗೂ, ರನ್ನನ ಹೆಸರಿನ ಪಡಿಯಚ್ಚನ್ನು ಕೊಟ್ಟ ಶ್ರೀ|| ಜಿ. ಪಿ. ರಾಜರತ್ನಂ ಅವರಿಗೂ, ಮೈಸೂರು ಶಾಸನಗಳ ಸಂಕಲನದಿಂದ ಗಂಗರಾಜ ನೀತಿಮಾರ್ಗನ ಶಾಸನದ ಚಿತ್ರವನ್ನು ಉಪಯೋಗಿಸಿಕೊಳ್ಳಲು ಅನುಮತಿ ಕೊಟ್ಟ ಡಾಕ್ಟರ್ ಎಂ. ಎಚ್. ಕೃಷ್ಣ ಅವರಿಗೂ, ನಾನು ಕೊಟ್ಟ ತೊಂದರೆಗಳನ್ನೆಲ್ಲಾ ತಾಳಿಕೊಂಡು ಒಂದು ವಾರದಲ್ಲಿ ಅಂದವಾಗಿ ಅಚ್ಚು ಮಾಡಿಕೊಟ್ಟ, ಬೆಂಗಳೂರು ಪ್ರೆಸ್ಸಿನವರಿಗೂ, ಇನ್ನೂ ಹಲವು ಬಗೆಯಲ್ಲಿ ನನಗೆ ನೆರವಾದ ನನ್ನ ಇತರ ಮಿತ್ರರಿಗೂ ನನ್ನ ಉತ್ತಮ ವಂದನೆ ಗಳನ್ನು ಸಮರ್ಪಿಸುತ್ತೇನೆ.
ಕನ್ನಡದ ಬಾವುಟ ಎಂಬ ಕವಿತೆಯ ಅಚ್ಚಿನ ವಿಷಯದಲ್ಲಿ ಒಂದು ಮಾತು: ಕನ್ನಡ ಬರವಣಿಗೆಯಲ್ಲಿ ಈಗಿರುವ ಅಕ್ಷರ ಸಂಯೋಜನೆಯ ಕ್ರಮ ಹಲವು ದೃಷ್ಟಿಗಳಿಂದ, ಅದರಲ್ಲಿಯೂ ಮುದ್ರಣದೃಷ್ಟಿಯಿಂದ, ಬಲು ತೊಡಕಾದ್ದೆಂದೂ ಯಾವ ರೀತಿಯಲ್ಲಾದರೂ ಕೊಂಚಮಟ್ಟಿಗಾದರೂ ತೊಡಕು ಬಿಡಿಸಿ ಸರಳ ಮಾಡಬೇಕೆಂದೂ ಹಲವರು ಅಭಿಪ್ರಾಯಪಟ್ಟು, ಕರ್ಣಾಟಕ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಒಂದು ಸಮಿತಿಯನ್ನು ಏರ್ಪಡಿಸಿ ಆಗಬೇಕಾದ ಮಾರ್ಪಾಟುಗಳ ಪರ್ಯಾಲೋಚನೆಯನ್ನು ಆ ಸಮಿತಿಗೆ ವಹಿಸಿದರು. ಆ ಸಮಿತಿ ಚರ್ಚೆಗಳನ್ನು ನಡೆಸಿ ಕೆಲವು ತೀರ್ಮಾನಗಳಿಗೆ ಬಂತು. ಅದು ಸೂಚಿಸಿದ ಕೆಲವು ಮಾರ್ಪಾಟುಗಳನ್ನು ಇಲ್ಲಿ ಬಳಕೆಗೆ ತಂದಿದೆ. ಮುಖ್ಯವಾಗಿ ಮಾಡಿರುವ ಮಾರ್ಪಾಟುಗಳು ಮೂರು: (i) ದೀರ್ಘ ಚಿಹ್ನೆಯನ್ನು ಎಲ್ಲ ಕಡೆಯೂ ಒಂದೇ ರೀತಿ ಬರೆಯುವುದು - ಆ ಅ, ಬಾ ಒ, ಕೂ ಕು; (ii) ಒತ್ತಕ್ಷರವನ್ನು ಬಿಡಿಸಿ ಪಕ್ಕದಲ್ಲಿ ಬರೆಯುವುದು - ಕನ್ನಡ ಕನ್‌ನಡ, ಶ್ರೀ=ಶ್‌ರೀ; (iii) ಎಲ್ಲಾ ಮಹಾಪ್ರಾಣ ಚಿಹ್ನೆಗಳನ್ನೂ ಅಲ್ಪಪ್ರಾಣ ಚಿಹ್ನೆ ಗಳ ಹೊಕ್ಕುಳು ಸೀಳಿಯೆ ಮಾಡಿಕೊಳ್ಳುವುದು - ಛ ಚ ; ಭ ಬ. ಈ ಸಣ್ಣ ಮಾರ್ಪಾಟುಗಳನ್ನು ತಾಳ್ಮೆಯಿಂದಲೂ ದೂರದೃಷ್ಟಿಯಿಂದಲೂ ನೋಡಿ ಎಲ್ಲರೂ ಒಪ್ಪಿಕೊಂಡು ಆದಷ್ಟು ಬೇಗ ಬಳಕೆಗೆ ತಂದರೆ ಎಳೆಯ ಮಕ್ಕಳ ಹೊರೆ, ಅಚ್ಚು ಕೂಟಗಳ ತೊಡಕು ಅರ್ಧಕ್ಕರ್ಧ ಕಡಮೆಯಾಗುವುದೆಂದು ನಂಬಿದ್ದೇನೆ.

ಶ್ರೀ

ಬೆಂಗಳೂರು
೧೭-೪-೧೯೩೮

ಒಳಪಿಡಿ
ಒಂದನೆಯ ತೆನೆ

ಶಾಸನಗಳಿಂದ

ಎರಡನೆಯ ತೆನೆ

ಪೂರ್ವ ಕವಿಗಳಿಂದ

೧೫

ಮೂರನೆಯ ತೆನೆ

ನಾಡಪದಗಳಿಂದ

೨೧

ನಾಲ್ಕನೆಯ ತೆನೆ

ಹೊಸ ಕವಿತೆಗಳಿಂದ

೮೧

೧ ಮೈಸೂರು ಸಂಸ್ಥಾನದ ಶ್ರೀಮನ್ ಮಹಾರಾಜರವರು

iii

೨ ಮೈಸೂರು ಸಂಸ್ಥಾನದ ಶ್ರೀಮದ್ ಯುವರಾಜರವರು

1V

೩ ಕನ್ನಡ ನಾಡು

vii

೪ (i) ಗಂಗರಾಜ ನೀತಿಮಾರ್ಗನ ಶಾಸನ

(ii) ರನ್ನನ ಹೆಸರು

೫ ಗದುಗಿನ ಶ್ರೀ ವೀರನಾರಾಯಣ ಸ್ವಾಮಿ

೨೮

೬ ಶ್ರವಣಬೆಳೊಳದ ಶ್ರೀ ಗೊಮ್ಮಟೇಶ್ವರ

೩೨

೭ ಸಂಗಮದ ಮಂಟಪ

೩೮

೮ ಶ್ರೀ ಚಿಕದೇವರಾಜ ಒಡೆಯರವರು

೬೨

೯ ಹಂಪೆಯ ವಿರೂಪಾಕ್ಷ ದೇವಸ್ಥಾನದ ನೋಟ

೧೨೪

೧೦ ಬೇಲೂರಿನ ಶಿಲಾಬಾಲಿಕೆ

೧೩೬

ಏರಿಸಿ, ಹೇರಿಸಿ, ಕನ್‌ನಡದ ಬಾವುಟ!
ಓಹೋ ಕನ್ನಡ ನಡು, ಅಹ ಕನ್ನಡ ನುಡಿ!
ಹರಿಸಿ, ತೋರಿಸಿ, ಕೆಚ್ಚೆದೆಯ ಬಾವುಟ!
ಗಾಳಿಯಲಿ ಫಟಪಟ, ದಾಳಿಯಲಿ ಚಟಚಟ,
ಉರಿಯಿತೋ ಉರಿಯಿತು ಹಗೆದು ಹಟ ಮನೆ ನಟ,
ಹಳ್ ಹಳ್ ಸುರಿಯಿತು ಹಗೆದು ಬೀಡಕ್‌ಕಟ!
ಬಾಳ್ ಕನ್‌ನಡ ತೇಯ್
ಏಳ್ ಕನ್‌ನಡ ತೇಯ್!
ಆಳ್ ಕನ್‌ನಡ ತೇಯ್!
ಕನ್‌ನಡಿಗರೊಡತಿ, ಓ ರಾಜೇಶ್‌ವರೀ!
ಮೌರ್‌ಯ ಕಳಚುರ್‌ಯರು, ಗಂಗರು, ಕದಂಬರು,
ರಟ್‌ಟರು, ಚಳುಕ್‌ಯರು, ಹೊಯ್‌ಸಳರು, ಯಾದವರು,
ಇಳೆಗೆ ಮೇಲಾದವರು, ಬಾಣರು, ಜೀಣರು,
ಕೊಲೆಯ ಕಾಳ್‌ಕಿಚ್‌ಚಿಂಗೆ ತಂಪುಮಳೆ ತಳಿದು,
ಚೆಲುವು ನಲ ಸಾಲುತ್‌ತು, ಕಲೆಯ ಹೊಂಬೆಳೆಯಿಟ್‌ಟು,
ನಗಿಸಿದರು ನಾಡನು, ಕಡಿದು ಕಗ್‌ಗಾದನು:
ಮಾನವನ ದೇವತೆಗೆ ತಂದ ಜಿನಭಕ್ತರು.
ಹಂಪೆಯ ವಿರೂಪಾಕ್‌ಷಪುತ್‌ರರು, ವಿರಕ್‌ತರು,
ವೀರನಾರಾಯಣನ ಕೃಪೆಯೊಳಾಸಕ್‌ತರು.
ಶ್‌ರೀ ಗೌರಿ ಕಾವಲಿಹ ರಾಯರನುರಕ್‌ತರು,
ನಮ್‌ಮ ತಾಯ್ ಮಕ್‌ಕಳು-
ಬಾಳ ಬೆಳ್‌ದಿಂಗಳಲಿ ಒಲಿದು ನಲಿದವರು-
ಬೇವೊ ಬೆಲ್‌ಲವೊ ಒರಲಿ, ಮಲ್‌ಲಿಗೆಯೊ ಮುಳ್‌ಳೋ,
ಬಾನ ಬೆಳಕಿನಲಿ, ಮನದಳಕಿನಲಿ,
ಚೆನ್‌ನು ಬದುಕನ್ನು ಕುಣಿಸಿ, ಒಲಿದು ನಲಿದವರು-
ನಮ್‌ಮ ತಾಯಣುಗರು,
ಪಂಪನೋ, ರನ್‌ನನೋ, ಬಸವನೋ, ಮಾಧವನೋ,
ಆ ಅಕ್‌ಕಮಹದೇವಿ, ನಾರಣಪ, ಚಿಕದೇವ,
ಜಕ್‌ಕಣ, ಹೊನ್‌ನಮ್‌ಮ, ನಮ್‌ಮಮ್‌ಮನೆ‌ಳೆಯರು,
ಚೆಲುವ ಚೆಲುವೆಯರು-ಚಿನ್‌ನದ ಚಿಣ್‌ಣರು,
ಕಲಿಗಳು, ಕಿಡಿಗಳು, ಗ೦ಡರು, ಮೊಂಡರು,
ನಲಿದೊಲಿದು ಬೆಚ್‌ಚೊಂದು ನೆಚ್‌ಚಿ೦ಗೆ ಮೆಚ್‌ಚಿಂಗೆ
ಕಿಚ್‌ಚಿನಲಿ ಹೇಯ್‌ದು ನಲ್‌ಲನ ಹಿಡಿದ ಹೆಂಡಿರು,
ಸತಿಗಳು, ಯತಿಗಳು, ವ್‌ರತಿಗಳು, ಕೃತಿಗಳು-
ಕನ್‌ನಡದ ಬಾವುಟವ ಹಿಡಿದವರಾರು ?
ಕನ್‌ನಡದ ಬಾವುಟಕೆ ಮಡಿಯದವರಾರು ?
ನಮ್‌ಮ ಈ ಬಾವುಟಕೆ ಮಿಡಿಯದವರಾರುರು ?
ಹೇಳಿರೋ ಹೆಸರೊಂದು ನೆನಹಿನಲಿ ಸುಳಿದರೆ !
ಹುಡುಕಿರೋ ಹೇಡಿ ತಾನೊಬ್‌ಬ ಮನೆಗುಳಿದರೆ !
ಕನ್‌ನಡದ ನಾಡಲಾ,
ಕನ್‌ನಡದ ನುಡಿಯಲಾ,
ಕನ್‌ನಡಿಗನೆದೆ ಕಡೆದ ತೆನೆಯಲಾ ಕೆನೆಯಲಾ !
ಬೆಳಕು ಹರಿಯಿತು, ಏಳಿ,
ಇರುಳು ಸವೆಯಿತು ಏಳಿ,
ತಾಯ ಕರೆ ಕೇಳಿ,
ಏಳಿರೋ, ಏಳಿರೋ, ಬಾ ಳ ಬಲಿ ಬೇಳಿರೋ,
ಎಲ್ಲೊಲುಮೆಯೂ ಕೂಡಿದೊಂದೊಲುಮೆ ತಾಳಿರೋ,
ತಾಯುಳಿಯೆ ನೇನುಳಿದೆ,
ತಾಯಳಿಯೆ ನೇನಳಿದೆ,
ಮನೆ ಕಾಯಿ, ತುರು ಕಾಯಿ, ನಾಡ ಗುಡಿ ಗ ಕಾಯಿ,
ಕಾಯಲಾರೆಯ, ಸಾಯಿ,
ಎಂದೆಲ್‌ಲ ಏಳಿರೋ-
ಆಹ ಕನ್‌ನಡ ನುಡಿ, ಆಹ ಕನ್‌ನಡ ನೇಡು,
ಹಿರಿಯ ಕನ್‌ನಡ ಪಡೆ, ಮರಿಯ ಕನ್‌ನಡ ಪಡೆ,
ಏಳಿರೋ, ಬೀಳಿರೋ,
ಕನ್‌ನಡದ ಬಾವುಟವ ಹಿಡಿಯಿರೋ, ನಡೆಯಿರೋ !
ಏಳ್ ಕನ್‌ನಡ ತಾಯ್,
ಬಾಳ್ ಕನ್‌ನಡ ತಾಯ್,
ಆಳ್ ಕನ್ನಡ ತಾಯ್,
ಕನ್‌ನಡಿಗರೊಡತಿ, ಓ ರಾಜೇಶ್‌ವರೀ ! ಇಂದಿನದೆ ಹೇಳಿರೋ ಈ ನಮ್‌ಮ ಬಾವುಟ !
ಕುಂದಿಹುದೆ ನೋಡಿರೋ ಈ ನಮ್‌ಮ ಬಾವುಟ !
ಕಂದದಿದೆ ಇಂದಿಗೂ ಕನ್‌ನಡದ ಬಾವುಟ!
ಏನೇನ ಕಂಡುದೋ ಬಾನಾಡಿ ಬಾವುಟ ! .
ಆವುದನು ಕಾಣದೋ ಜೀವ ಕಳೆ ಬಾವುಟ !
ಕನ್‌ನಡದ ಬಾವುಟಗಳೊಂದಾದ ಬಾವುಟ !
ಏರಿಸಿ, ಹಾರಿಸಿ, ತೋರಿಸಿ ಬಾವುಟ !
ತೇಲಾಡು, ಮೇಲಾಡು, ಓಲಾಡು ಬಾವುಟ !
ಚೆಲುವಾಗು, ಗೆಲುವಾಗು, ಬಲವಾಗು ಬಾವುಟ !
ಹೊನ್‌ನಾಗಿ, ಹೆಣ್‌ಣಾಗಿ, ಹಸನಾದ ಮಣ್‌ಣಾಗಿ,
ಹೊಸಹೊಸತು ಕಣ್‌ಣಾಗಿ, ಬೆಳಕಾಗಿ, ಬೆಳೆಯಾಗಿ,
ಕೂಡುತಿಹ ಕನ್‌ನಡದ ಹೊಮ್‌ಮುಗೆಯ ಕಾವಾಗಿ,
ಪರಿಪರಿಯ ಹೊ೦ಬಗೆಯ ಹೆರಿಗೆಯಾ ನೋವಾಗಿ,
ನಾಲುಮಡಿ ಕೃಷ್‌ಣನೇ ಕಟ್‌ಟೊಲುಮೆ ಹೂವಾಗಿ,
ಬಾಳು ಎಲೆ ಬಾವುಟ !
ಬಾಳ್ ಕನ್‌ನಡ ತಾಯ್ ,
ಏಳ್ ಕನ್‌ನಡ ತಾಯ್,
ಆಳ್ ಕನ್‌ನಡ ತಾಯ್
ಕನ್‌ನಡಿಗರೊಡತಿ ಓ ರಾಜೇಶ್‌ವರೀ !

ಶ್‌ರೀ

ಒಂದನೆಯ ತೆನೆ

[ಸಂಪಾದಿಸಿ]

=== ಶಾಸನಗಳಿ೦ದ ===

ಒಳಪಿಡಿ
ಶ್ರವಣಬೆಳ್ಗೊ‌ಳದ ಯತಿಗಳು
ಗುಣಗಳ್ಳ (ಅದ್ವೈತ ಮುಸಿ)
ಗಂಗ ರಾಜ (ನೀತಿಮಾರ್ಗ)
ರಾಷ್ಟ್ರಕೂಟ ರಾಜ (ಇಂದ್ರ)
ದೇಕಬ್ಬೆ
ತುರುಗೋಳು – ಗಡಿವಾಳಗ ೧೦
ದೇವಾಲಯದ ದತ್ತಿ ೧೨
ಬುಕ್ಕರಾಯನ ಧರ್ಮ ಸಮದೃಷ್ಟಿ ೧೨

೧. ಶ್ರವಣಬೆಳದ ಯತಿಗಳು ಸು. ೭೦೦

(i)

ಶ್ರೀ ಭದ್ರಬಾಹು ಸಚಂದ್ರಗುಪ್ತ ಮುನೀಂದ್ರ ಯುಗ್ಮದಿನೊಪ್ಪೆ ವಲ್
ಭದ್ರಮಾಗಿದ ಧರ್ಮಮಂದುವಟಿಕ್ಕೆ ವಂದಿನಿಸಳ್ಳಲೋ
ವಿದ್ರುಮಾಧರ ಶಾಂತಿಸೇನ ಮುನೀಶನಾಕ್ಕಿಎ ವೆಳ್ಗೊಳ [ತ್]
ಅದ್ರಿ ಮೇಲಶನಾದಿವಿಟ್ಟ ಪುನರ್ಭವಕ್ಕೆ ಅತಿ ಆಗಿ [ದಾನ್]

(ii)

ಶ್ರೀ ಮಾಸೇನರ್ ಪರಮಪ್ರಭಾವ ಋಷಿಯರ್ ಕಪ್ಪಿನಾ ವೆಟ್ಟ ದುಳ್
ಶ್ರೀ ಸಂಗಂಗಳ ಪೇಟ್ಟಿ ಸಿದ್ಧಸಮಯಂ ತಪ್ಪಾದೆ ನೋನ್ತಿಂಬಿನಿನ್
ಪ್ರಾಸಾದಾಂತರಮಾನ್ ವಿಚಿತ್ರ ಕನಕ ಪ್ರಜ್ವಲ್ಯದಿನ್ ಮಿಕ್ಕುದಾನ್
ಸಾಸಿರ್ವ‌ರ್ ವರಪೂಚೆದಂದುಯೆ ಅವರ್ ಸ್ವರ್ಗಾಗ್ರಮಾನೇಜದಾರ್

(iii)

ನೆರೆದಾದ ವ್ರತಶೀಲನೋನ್ಪಿ ಗುಣದಿಂ ಸ್ವಾಧ್ಯಾಯ ಸಂಪತ್ತಿನಿಂ
ಕರೆಯಿಲ್ ನಲ್ ತಪ ಧರ್ಮದಾ ಸಸಿಮತಿ ಶ್ರೀಗಂತಿಯರ್ ವಂದು ಮೇಲ್
ಅರ್ದಾಯುಷ್ಯಮನೆಂತು ನೋಡೆನಗೆ ತಾನಿಂತೆಂದು ಕಪ್ಪಿನುಳ್
ತೊರ್‌ದಾರಾಧನೆ ನೋನ್ತು ತೀರ್ಥಗಿರಿಮೇಲ್ ಸ್ವರ್ಗಾಲಯಕ್ಕೇದಾರ್

(iv)

ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆರ್‌ವೋಲ್ ಮಂಜುವೋಲ್ ತೋಚಿ ಬೇಗಂ
ಸಿರಿಗುಂ ಶ್ರೀ ರೂಪ ಲೀಲಾ ಧನ ವಿಭವ ಮಹಾರಾಶಿಗಳ್ ನಿಲ್ಲವಾರ್ಗ೦
ಪರಮಾರ್ಥ೦ ಮೆಚ್ಚೆನಾನೀ ಧರಣಿಯುಳಿರವಾನೆಂದು ಸಂನ್ಯಾಸನಂ ಗೆ
ಯು ರುಸತ್ವನ್ ನಂದಿಸೇನಪ್ರವರ ಮುನಿವರನ್ ದೇವಲೋಕಕ್ಕೆ ಸಂದಾನ್

(v)

ಶ್ರೀ ಅಗಲಿಯ ಮೋನಿ ಗುರವರ ಶಿಷ್ಯ [ರ್] ಕೊಟ್ಟರದ ಗುಣಸೇನ
ಗುರವರ್ ನೋನ್ತು ಮುಡಿಪ್ಪಿದಾರ್

(vi)


ಅದೆಯಾರ್‌ನಾಡ ಚಿತ್ತೂರ ಮೋನಿಗುರವಡಿಗಳ ಶಿಷಿತ್ತಿಯರ್ ನಾಗಮತಿ
ಗನ್ತಿಯರ್ ಮೂರುತಿಂಗಳ್ ನೋನ್ತು, ಮುಡಿಪ್ಪಿ ದರ್ ಶ್ರೀಮನ್ ಮುಕ್ತಿ ವಧೂ ಲೀ
ಲಾ ಮಂಗಳ ತಿಳಕನೆಸೆದನ್ವಯ ಮಹಿಮೋ

ದ್ವಾ ಮಂ ಸಂಪೂರ್ಣಂ ವಿ
ದ್ಯಾಮೂರ್ತಿ ಜಿತಾತ್ಮನಕ್ಷರಂ ಗುಣಗಳ್ಳಂ
ಅಚಳನ ದೆಸೆಯಿಂದುದಯಿಸು
ನ ಚರಾಚರಮಚಳನಿಂದೆ ಪೊರಗಣವಲ್ತೆಂ
ದಚಳಿತಚಿತ್ತದಿನಿರ್ಪಂ
ಪ್ರಚಂಡನದ್ವೈತಿ ನಿರುಪಮಂ ಗುಣಗಳ್ಳ೦
ಜ್ಞಾನಮೆ ನಾಂ ನಿನಗೊಡಲೆಸ
ವಾನಂದಂ ತೋರ್ಪುವೆಲ್ಲಮೆನ್ನ ನೆವಿಲ್ ಮ
ತ್ತೇನುಂ ಬೇರೆಲ್ಲೆಂಬಸಿ
೪ಾನುತನದ್ವೈತಶೇಖರಂ ಗುಣಗಳ್ಳಂ
ಮುಕ್ತಿಶ್ರೀ ಸತಿಗನುರಕ್ತಂ ಸಂಸಾರ ವಿ
ರಕ್ತಂ ನಿರ್ವಿಷಯಂ ನಿರಪೇಕ್ಷ ಶುಚಿ ಜೀವ
ನ್ಮುಕ್ತಂ ನಿರ್ವಾಣಿ ಗುಣಗಳ್ಳ೦
ಅರವಣ್ಮು ವೈರಾಗ್ಯಂತರಸಲವಭ್ಯಾಸಂ
ನೆರ ಭಕ್ತೀ ಶಾಂತಿ ಧೃತಿ ತುಷ್ಟಿ ಯೆಂಬಿನ
ರ್ಕೆಟಿವಟ್ಟಾಗಿ೦ ಗುಣಗಳ್ಳಂ
ದೊರೆಕೊ೦ಡೀ ದೇಹದೊಳ್ ಮೋಹಮನೆಲೆ ಗುಣಗಳ್ಳಾರ್ಯ ನೀ೦ ಮಾಣ್ಪು

ಬೆಂಕೊಂ


ಡರಿಷಡ್ವರ್ಗ೦ಗಳ೦ ಭೇದಮನಿರಿಳಿಸಂ ಬಿಟ್ಟು ಕರ್ಮಂಗಳಲ್ಲಂ
ಬೆರಸಾನೆಂದಿರ್ಪಹಂಕಾರಮನವಯವದಿಂ ಸುಟ್ಟು, ಸಾನಂದದಿಂದಂ
ಪರಿಪೂರ್ಣಜ್ಯೋತಿ ನೀನಾಗಿರೆ ಬಿಡುವಳೆ ಸೇರ್ ಮುಕ್ತಿ ನಿನ್ನ೦ ಮುನೀಂದ್ರಾ

೩. ಗಂಗ ರಾಜ (ನೀತಿಮಾರ್ಗ)೯೨೧

,
ಸ್ವಸ್ತಿ ನೀತಿಮಾರ್ಗ ಕೊಂಗುಣಿವರ್ಮ ಧರ್ಮಮಹಾರಾಜಾಧಿರಾಜ ಕೋವ
ಳಾಲ ಪುರವರೇಶ್ವರ ನಂದಗಿರಿನಾಥ ಶ್ರೀಮತ್ ಪೆಮ್ಮ [೯] ನಡಿಗಳ್ ಸ್ವರ್ಗ
ಮೇರ್‌ದ [ರ್] ಏರ್ದೊಡೆ ಪೆಮ್ಮಾ[೯] ನಡಿಗಳ ಮನೆಮಗತ್ತಿನ್ ಅಗರಯ್ಯಂ
ನೀತಿಮಾರ್ಗ ಪೆಮ್ಮ[೯] ನಡಿಗೆ ಕಿರ್ಗುಂಠೆಯಾದಂ ಪೆಮ್ಮ [೯] ನಡಿಗಳ

ಗಂಗರಾಜ ನೀತಿಮಾರ್ಗನ ಶಾಸನ

ಶ್ರವಣಬೆಳ್ಗೊಳದ ಬೆಟ್ಟದಲ್ಲಿ ಕೆತ್ತಿರುವ
ರನ್ನನ ಹೆಸರು

ಸುಪುತ್ರ [ರ್] ಸತ್ಯವಾಕ್ಯ ಪೆಮ್ಮ[೯] ನಡಿಗಳ್ ಗುರ್ದಿ ವೀದಿಯ ಕಲ್ನಾಡ
ಕೊಟ್ಟದು ಕಪ್ಪ ಹಳ್ಳಿ, ಪರಿಹಾರ [ಂ] ಇದನನ್‌ದೊ [ನ್] ವಾರಣಾಸಿಯನೞಿದಂ
. . . .ಮಾಪಾತಗನ್.

೪. ರಾಷ್ಟ್ರಕೂಟ ರಾಜ (ಇಂದ್ರ) ೯೮೨


ಸಂಸಾರವನಮಧ್ಯೇಸ್ಮಿನ್ ಋಜೂಂಸ್ತದ್ಗಾನ್ ಜನುದ್ರುಮಾನ್
ಆಳೋಕ್ಯಾಳೋಕ್ಯ ಸದ್ವೃತ್ತಾನ್ ಭಿನತ್ತಿ ಯಮತಕ್ಷಕಃ

ಶ್ರೀ ರಾಜತ್ ಕೃಷ್ಣರಾಜೇಂದ್ರನ ಮಗನ ಮಗಂ ಸತ್ಯಶೌಚದ್ವಯಾಳಂ
ಕಾರಂ ಶ್ರೀ ಗಂಗ ಗಾಂಗೇಯನ ಮಗಳ ಮಗಂ ವೀರ ಲಕ್ಷ್ಮಿ ವಿಳಾಸಾ
ಗಾರಂ ಶ್ರೀ ರಾಜಚೂಡಾಮಣಿಯಳಿಯನಿದೇ೦ ಪೆಂಪೊ ಪೇಂೞೆಂದಲಂಪಿಂ
ಭೂರಿಕ್ಷ್ಮಾ ಚಕ್ರಮುಂ ಬಣ್ಣಿಸೆ ಸಲೆ ನೆಗೞ್ದಂ ರಟ್ಟ ಕಂದರ್ಮದೇವಂ
ಇಱಿಯಲ್ಕಣ್ಮುವರೀಯಲಾಱರರೆಂಬರ್ ಪೂಣ್ದೀವರಾರಾನುಮಾಂ
ತಿಱುಯಲ್ಕಣ್ಮರದಾವ ಗಂಡಗುಣವಾನೌದಾರ್ಯಮೆಂಳ್ಕದಾಂ
ತಿಱುವಣ್ಮುಂ ನಿರಿದೀವ ಪೆಂಪುಮೆಸದೊಪ್ಪಿಱ್ದಪ್ಪುನಾರ್ ಬಣ್ಣಿಸಲ್
ನೆಱೆವರ್ ಬೀರವ ಚಾಗದುನ್ನ ತಿಕೆಯಂ ಶ್ರೀ ರಾಜಮಾರ್ತ೦ಡನಾ
ಕೆಡದ ಜಸಕ್ಕೆ ತಾನೆ ಗುಱಿಯಾದ ಚಲಂ ನೆರೆದರ್ಥಿಗರ್ಥಮಂ
ಕುಡುವ ಚಲಂ ತೊದಳ್‌ನುಡಿಯದಿರ್ಪ ಚಲಂ ಪರವೆಣ್ಣೋಳೋತೊಡಂ
ಬಡದ ಚಲಂ ಶರಣ್ಗೆವರೆ ಕಾವ ಚಲಂ ಪರಸೈನ್ಯ ಮಂ ಪೆಱಂ
ಗೆಡೆಗುಡದಟ್ಟ ಕೊಲ್ವ ಚಲಮಾಳ್ದ ಚಲಂ ಚಲದಂಕಕಾಱನಾ
ಇರು ಪೆಱದೇನನಿನ್ ಪೊಗೞುತಿಱ್ದಪುದೀವ ನೆಗೞ್ತೆ ಕಲ್ಪ ಭೂ
ಮಿರುಹದಿನಗ್ನ ೪೦ ನುಡಿ ಸುರಾಚಳದಿಂದಚಳಂ ಪರಾಕ್ರಮಂ
ಖರಕರತೇಜದಿಂ ಬಿಸಿಮ ಚಾಗದ ನನ್ನಿ ಯ ಬೀರದಂದಮೀ
ದೊರೆತೆನೆ ಬಣ್ಣಿಸಲ್ ನಜವರಾರಳವಂ ಚಲದಂಕಕಾರಿನಾ
ಪುಸಿವುದೆ ತಕ್ಕು ಕೊಟ್ಟಳಿಸಿ ಕೊಳ್ವುದೆ ಮಂತಣಮನ್ಯನಾರಿಗಾ
ಟಿಸುವುದೆ ಚಿತ್ತಮೀದುವೆ ಬಿನ್ನಣಮಾರುಮನೆಯ್ದೆ ಕೂರ್ತು ಬಂ
ಚಿಸುವುದೆ ಕಲ್ತ ಕಲ್ಪಿಯೆನೆ ಮತ್ತವರಂ ಪೆಸರ್ಗೊ೦ಡದೆಂತು ಪೋ
ಲಿಸುವುದೊ ಸೇೞುಮೀಗಡಿನ ರಾಜತನೂಜರೊ೦ದ್ರರಾಜನಂ
ನುಡಿವರ್ ಬೀರನನೊಂದುಗಂಡು ಸೆಡೆವರ್ ಚಾಗಕ್ಕೆ ಮುಯ್ಯಾ೦ಪರೀ
ವಡೆ ಪಲ್ಗ ಚ್ಚು ವರಾಮೆ ಸೋಚಿಗಳೆಮೆಂದಿರ್ಪರ್ ಪರಸ್ತ್ರೀಯರೊಳ್
ಗಡಣಂ ನನ್ನಿ ಗೆ ಬೀಗುವ‌ರ್ ನುಡಿ ತೊದಳ್ ದೋಸಕ್ಕೆ ಪಕ್ಕಾದೊಡಂ
ಬಡ ಗಂಡರ್ ಕಲಿಕಾಲದೊಳ್ ಕಲಿಗಳೊಳ್ ಗಂಡಂಬರಂ ಗಂಡರೇ ಶ್ರೀಗೆ ವಿಜಯಕ್ಕೆ ನಿದ್ದೆಗೆ
ಚಾಗಕ್ಕದಟಂಗೆ ಜಸಕೆ ಪೆಂಪಿಂಗಿನಿತ
ರ್ಕಾಗರಮಿದೆಂದು ಕಂದುಕ
ದಾಗಮದೊಳೆ ನೆಗೞ್ಗು ಮಲ್ತೆ ಬೀರರ ಬೀರಂ
ಬಳಸುವೇಱುವ ಸುೞಿವಗಲ್ವಿಂತಪ್ಪ ಚಾರಣದೋಷವಲ್ಲದೆ ಪೊಟ್ಟ ವ
ಟ್ಟಳೆಗೆ ಸಮನಾಗೆ ಗಿರಿಗೆಯ ಕೋಲ್ ಮುಟ್ಟಿ ಮಿಗಲು೦ ನೇಲಲುಮಣ-

ಮೀಯದಿಂತೆಂ


ದಳವಿಯೊಳ್ ಬರೆ ಪೊಱಗೊಳಗೆಡದೊಳಂ ಬಲದೊಳಂ ಕಡುಗಡುಪಿಂದೆ ಬರ್ಪ
ವಳಯಂದಪ್ಪದೆ ಚಾರಿಸುವೋಜೆಯಂ ರಟ್ಟ ಕಂದರ್ಪನಂತಾವಂ ಬಲ್ಲ೦

ಮೆಳಸಿನನಿಲಿರಿದು ಗಿರಿಗೆಯ
ನಳೆದೊರ್ಗೆಣ್ ಕೊಲೊಳೊಳಗೆ ಪೊಱಗಣಿನೆೞೆವೊ
ಳ್ಪಳವಡೆ ಚಾರಿಪ ಬಹಲಿಕೆ
ಯಳವಿದು ಕೇವಳಮೆ ಕೀರ್ತಿನಾರಾಯಣನಾ
ಎಱಕಮಲ್ಲದೆ ಪೊಲ್ಲದಾಗೆಗಿ ದೊರೆಕೊಂಡೆ ಕೊಳ್ಳ ತೆಱನಲ್ಲದೆ
ನೆಱೆಯೆ ಬರಲೆ ತಕ್ಕಡಿಯಲ್ಲಿ ಬೀಸುವಲ್ಲಿಯೆ ಬೀಸಲಱಿದೆಯಿಲ್ಲ
ಪಱಿಯನಾದಿಟ್ಟೆ ಮುರಿವಲ್ಲಿ ಕಡುಪಿನೊಳ್ ಮುರಿದಯಲ್ಲಿಲ್ಲಿಯ ಬಿನ ಣವನ್
ನೆಱೆಯೆ ಕಲ್ಪದೆ ಬೀರರ ಬೀರನಂ ಗೆಡೆಗಳಾಭರಣನಂ ನೋಡಿ ಕಲ್ಲಾ
ಆಸುವನುಂ ಕೂಂಕುವನುಂ ಬೀಸುವನುಂ ಗೆಡೆಯೆ ನೆಗೞ್ದ ತಕ್ಕಡಿಯೊಳೆನು ತ್ಯಾಸದೆಯುಂ ಕೂಂಕದೆಯುಂ ಬೀಸದೆಯುಂ ಬಿದ್ದ ಮೆೞೆಗುಮೆೞೆತೆವಬೆಡಂಗಂ
ಕಾಲ್ಗಳ ಕಯ್ಗಳ ತುರಗದ
ಕಾಲ್ಗಳ ತಿಣಿವುಗಳೊಳಲ್ಲಿ ಬಂಚಿಸುತೆೞೆಗುಂ
ಗೆಲ್ಲು ಮೆನೆ ನೆಗೞ್ದ ಮಾರ್ಗದೆ

ಗೆಲ್ಗುಮೆ ಪೆಣೆದಲ್ಲಿ ಕೀರ್ತಿ ನಾರಾಯಣನಾ
ವನಧಿ ನಭೋನಿಧಿ ಪ್ರಮಿತ ಸಂಖ್ಯೆ ಶಕಾವನಿಪಾಲಕಾಲಮಂ
ನೆನೆಯಿಸೆ ಚಿತ್ರಭಾನು ಪರಿವರ್ತಿಸೆ ಚೈತ್ರಸಿತೇತರಾಷ್ಟಮೀ
ದಿನಯುತ ಭೌಮವಾರದೊಳನಾಕುಳಚಿತ್ತದೆ ನೋ೦ತು ತಾಳ್ದಿದಂ
ಜನನುತನಿಂದ್ರರಾಜನಖಿಳಾಮರ ರಾಜ ಮಹಾವಿಭೂತಿಯಂ

೫. ದೇಕಬ್ಬೆ ೧೦೫೭


ಮಾಸತಿಕಲ್ಲು

ಸ್ವಸ್ತಿ ಶ್ರೀ ಚೋಳರಾಜಂ ಸಕಲ ವಸುಧೆಯಂ ಕೊಂಡು ರಾಜೇ೦ದ್ರದೇವಂ <br/ದುಸ್ತಾರಿವ್ರಾತ ಘಾತಂ ನೆಗೞೆ ಬರಿಸಮಾಱಾಗೆ ಮತ್ತಂ ಶಕಾಬ್ದ೦
ವಿಸ್ತಾರಕ್ಕೊಂಬತ್ತೇೞೊಂಬತುಮೆನೆ ಬರಿಸಂ ಹೇವಿಳಂಬಿ ಪ್ರಸಿದ್ದ೦
ಸ್ವಸ್ತಂ ಮಾಸಂ ಗಡಂ ಕಾರ್ತಿಕಮಸಿತದಿನಂ ದ್ವಾದಶೀ ಸೋಮವಾರಂ
ಸ್ವಸ್ತಿ ಶ್ರೀಮತ್ ಸಕಲ ಜ
ಗತ್‌ಸ್ತುತ್ತರ ವಚೊಗ್ರಗಣ್ಯರೂರ್ಜಿತ ಪುಣ್ಯರ್‌
ವಿಸ್ತಾರ ಚಾರು ವೀರರ
ಸಸ್ಥಿತರಿಱುವೀವ ಕಾವ ನುಗುನಾಡಧಿಪರ್
ಎನಿಪ ಕುಲದಲ್ಲಿ ಪುಟ್ಟದ
ನನುಪಮನೆಱೆತೆಯಂಗನವನ ನಿಜಸುತನೇ ಚಂ
ಮನುನಿಭನವಂಗೆ ಪುಟ್ಟದ
ತನೂಭವಂ ಜನನಿಯಮ್ಮನಱುವಿಂಗಾರ್ಮಂ
ಅಂತಾ ಜವನಯ್ಯಂಗಂ
ಕಾಂತಾಜನ ತಿಲಕಮೆನಿಪ ಜಾಕಬ್ಬೆಗನೊ
ಳ್ಪ೦ ತಳೆಯೆ ಪುಟ್ಟ ದಂ ರಿಪು
ಸಂತಾನ ನಗೇಂದ್ರ ವಿಳಯ ಸವಿಗಂ ರವಿಗಂ
ರವಿಗಂ ಪುಟ್ಟದನೊಡನು
ದೃವಮಾಯ್ತಱುವಱುವಿನೊಡನೆ ಪುಟ್ಟ ದುದಾಯಂ
ಸವಸಂದಾಯದೊಡಂ ಸಂ
ಭವವಾದುದು ಚಾಗಮಿ೦ತುಟುಂ ಬಿರುದುಂಟೇ

ಕುಡಿಯರ ವಲ್ಲಭಂ ಕುಡಿಯರಾಭರಣಂ ನುಗುನಾಡ ರಾಮನೆಂ
ದಡೆ ಕಲಿಕಾಲ ಕರ್ಣನ ವಿನೋದದ ಚಾಗದ ಬೀರದಾರ್ಪನೀ
ಗಡಿನ ನಿಕೃಷ್ಟ ನಿರ್ಗುಣ ನಿಕೃತ್ಯ ನಿರಾಚರಟವೀಟರಂ
ಕಡುಜಡರೆಂತು ಪೋಲಿಪರೆ ಧನ್ಯನೆನಿಪ್ಪ ವಚೊಗ್ರ ಗಣ್ಯನಂ
ಚೋಳ ಪಲ್ಲವ ಪಾಂಡ್ಯ ಸಿಳಾ ಮೇಘ ಕೇರಳ ಸೊರಟ [ಗುರ್ಜರ ಕಾಂ] ಭೋಜ
ಲಾಳ ಗಜಪತಿ ಹಯಪತಿ ನರಸತಿಯೆನಿಪ ಮಹೀಪಾಳರಾಸ್ಥಾನದಲ್
ಕೇಳ ತನ್ನನೆ ನಟ ವಂದಿ ಮಾಗಧರ್ ಕೈಕೊಂಡು ಪೊಗೞಲ್ಕೆ ನೆಗೞೆ ಬಲ್ಲ
ಮೇಳಮಾಣಿಕವೆನಿಪ ಜಯಂಗೊಂಡ ಚೋಳ ಪೆರ್ಮಾಡಿಗಾವುಂಡಂ ತಕ್ಕಂ ಪಲ್ಲವ ಸತ್ತಿಗೆ ಸಂಕಂ
ಝಲ್ಲಳಿ ಜಯಮಂಗಳಂಗಳಂ ಚೋಳಮಹಿ:
ವಲ್ಲಭನಿತ್ತಡೆ ಕುಡಿಯರ
ವಲ್ಲಭನುಱೆ ಮಂಡಳೀಕಪದಮಂ ಪಡೆದಂ
ಕಡಕಡೆವರಮಜಾಂಡದ
ಕುಡಿವರಮಾಶಾಗಚೇ೦ದ್ರದಂತುವರಂ ತ
ಳ್ತೊಡನೊಡನೆ ಪರ್ವಿ ಬಳೆದುದು
ಕುಡಿಯರ ವಲ್ಲಭನ ಕೀರ್ತಿಲತೆ ಕೋಮಳದಿಂ
ಮನುನಿಭನೆಡೆನಾಡಧಿಪತಿ
ವಿನೇಯನಿಧಿಸತ್ಯವಾಕ್ಯನಾೞ್ಕೋಜನ ಮು
ಖ್ಯನ ಕುಲವಧು ಭೂತಬ್ಬೆಗೆ
ಜನಿಯಿಸಿ ಕಲಿಕಾಲ ಸೀತೆವೆಸರಂ ಪಡೆದಳ್
ವನಿತಾರನ್ನ೦ ಪೊನ್ನ
ಕ್ಕನನೞ್ತುಯೆ ಮದುವೆಗೊಂಡು ಬೆಳತೂರಧಿಪಂ
ಮನು ನಿಭನೆನೆ ನೆಗೞ್ತೇನ |
ವನಿತೆಗೆ ಭೂವನಿತೆಯೊಳಗೆ ಪೆಱರೆಣೆಯೊಳರೇ
ನಿರುಪಮ ಶೀಳದಿಂ ಗುಣದಿನುಮದಾನದಿನಾತ್ಮಭಕ್ತಿಯಿಂ
ಗಿರಿಸುತೆ ರಂಭೆ ಮೇನಕೆ ಸರಸ್ವತಿ ರುಕ್ಷ್ಮಿಣಿ ಸತ್ಯಭಾಮೆಯೊಳ್
ದೊರೆಯೆನಲೊಲ್ಲದೀಗಡಿನ ದುಷ್ಟಕನಿಷ್ಟ ಕುಶೀಲ ದುರ್ಗುಣಾ
ಧರೆಯರನೆಂತು ಪೋಲಿಪರೆ ನಿರ್ಮಳ ಚಿತ್ತದ ಪೊನ್ನ ಕಬ್ಬೆಯಂ
ಚಾರು ಚಾರಿತ್ರೆ ನಯ ವಿನಯಾಕರೆ ಗೋತ್ರ ಪವಿತ್ರೆ ಸುಶೀಲಯುಕ್ತೆ
ನಾರೀಜನರನ್ನ ಮೆನಿಪ ಪೊನ್ನ ಬ್ಬೆಗಂ ರವಿಗಂಗಂ ಪುಟ್ಟಿದ ದೇಕಬ್ಬೆ ಯಂ
[ವಿಂ]ರಂ ನವಲೆ ನಾಡಧಿಪತಿ ಕುಱುವಂದಗುಲದ ಪರ್ವಯಲಾತನೇ ಚ೦ಗೀಯೆ
ವಾರಿಜಾನನೆ ವಿನಯ ಚಿಂತಾಮಣಿ ಪತಿ ಹಿತೆಯೊಡಗೂಡಿ ಸುಖದಿನಿಱ್ದು
ಜೆಟ್ಟಿಗನೆನೆ ನೆಗಟ್ಟಿ ಹಿತಘ
ರಟ್ಟ೦ ಸುಖಮಿಱ್ದು ತನ್ನ ದಾಯಿಗರಂ ತ
ಳ್ತೊಟ್ಟಜೆಯಿನಿಱಿದಡವನಂ
ನೆಟ್ಟನೆ ತಲೆಕಾಡಲುಯ್ದು ಕೊಂದಂ ನರಸಂ
ಕಲಿಕಾಲನೇಳನೆನಿಸಿದ
ಕಲಿ ಚಾಗಿಯನಿಱಿದು ಕೊಂದರೆಂಬುದು ಮಾತಂ
ಲಲಿತಾಂಗಿ ಕೇಳ್ದು ರವಿಗನ
ಕುಲದೀಪಕಿ ಸಾಯಲೆಂದು ಕೊಂಡಕೆ ನಡೆದಳ್ ತಂದೆಯುಮಬ್ಬೆಯುಮೊಡನೆಯೆ
ಬಂಧುಗಳುಂ ಬ೦ದು ಮಗಳೆ ಸಾಯದೆ ಮಾಣ್ ನೀ
ನೆಂದೆಲ್ಲಂ ಕಾಲ್ವಿಡಿದಡ |
ನಿಂದಿತೆ ದೇಕಬ್ಬೆ ಮುನಿದು ಬಗ್ಗಿಸಿ ನುಡಿದಳ್
ನುಗುನಾಡಧಿಪತಿ ರವಿಗನ
ಮಗಳಾಗಿಯುಮಂತೆ ನವಿಲೆನಾಡಧಿಪತಿಗಾಂ
ನೆಗೞೆ ಸತಿಯಾಗಿ ಬಾೞ್ವುದು
ಬಗೆದರ್ಪೆನೆ ಕೊಟ್ಟ ಕೊಂಡ ಮನೆಯಸಮೞಿಯಲ್
ಎಂದು ಪರಿಚ್ಛೇದಿಸಿ ನಯ
ದಿಂದಂ ದೇವಂಗೆ ತೋಂಟಖಂಡದ ಮಣ್ಣ೦
ನಂದಾದೀವಿಗೆಗಿತ್ತರ
ನಿಂದಾನನೆ ಸಲೆ ನಿವೇದ್ಯಕ೦ವನುನಯದಿಂ
ಮಡದಿ ಸಲೆಗೇಳಿಗೞ್ದೆಯ
ಪಡುವಣ ಕಡೆಯಲ್ಲಿ ತೆಂಕಲಯೋ ಬೆಳೆಯಂ
ಕಡುಗರ್ತು ಕೊಟ್ಟು, ನುಗುನಾ
ಡೊಡೆಯನ ಕುಲಪುತ್ರಿ ಪೆೞ್ಚು ಮತ್ತಂ ಮತ್ತಂ
ನೆರೆವೆಲ್ಲಂ ಬೇಡ ಮಾಣೆಂದಡೆ ನುಡಿಯದಿರಿಂ ಪೋಗಿಮಾಂ ಮಾಣೆನೆಂದಾ
ದರದಿಂದ ಭೂಮಿ ಪೊ೦ಪುಟ್ಟಿಗೆ ಹಸುಧನನಂ ನೀಡು ತು೦.... ದೇ
ವರ ದೇವಂಗೞ್ತಿಯಿಂ ಪೊಕ್ಕು ದೇಕಬ್ಬೆ ತನ್ನಂ
ಧರೆಯೆಲ್ಲಂ ಮೆಚ್ಚಿ ನಿಚ್ಚಂ ಪೊಗೞೆ ನೆಗೞುತುಂ ದೇವಲೋಕಕ್ಕೆ ವೋದಳ್
ಶ್ರೀರಮಣಿ ಗೌರಿ ಶಚಿ ಧಾರಿಣಿಯ ಪುತ್ರಿ ರತಿ ಭೂರಮಣಿಯಂದದ

ಸರೂಪವಱಿವೊಳ್ಪಾ

ದಾರೆ ಜಯಧಾರೆ ಜಸಧಾರೆ ನಯಧಾರೆ ಭಯ ಹಾರೆ ಪತಿಭಕ್ತೆ

ಧೃತಶಕ್ತೆಯಿನೆ ಸಂದೀ


ವೀರನಿಧಿಯಂ ಚಲದ ನಾರಿನಿಧಿಯಂ ಗುಣದ ಚಾರುನಿಧಿಯ೦ ನೆಗೞ್ದದೇ

ಕಲೆಯನಿಂತೀ


ನಾರಿಜನರನ್ನ ಮನದಾರೊ ಮಱೆವರ್ ಸಕಳ ಧಾರಿಣಿಯೊಳಿಂತು ವರಕಾಂತೆ

ದೊರೆಯಾವಳ್


ಪಂಡಿತಾಶ್ರಯಂ ನುಗುನಾಡ ರಾಘವಂ ಮುನಿವರ ಸಿಂಗಮೋಚಕದಾವಳ೦
ಚಂಡವಿಕ್ರಮಂ ಕುಡಿಯರವಲ್ಲಭಂ ಕಲಿಕಾಲಕರ್ಣಂ ಮಚ್ಚರಿಪವರ
ಗಂಡಂ ನಂದಿ ಚಿಂತಾಮಣಿ ತಿವಪಾದ ಶೇಖರಂ ನಿಜಸುತೆಗನುರಾಗದಿಂ
ಮಂಡಲಕ್ಕೆಲ್ಲಂ ಪಡಿಛಂದವಾಗೆ ತಿಲಾಸ್ತಂಭಂ ಶಾಸನವಾಗೆ ನಟ್ಟಂ ಶ್ರೀ ದೇಕಬ್ಬೆ ಮಹಾದೇವರ್ಗೆ ಬಿಟ್ಟ ಪೂಂಬೊಲಂ ತೋಂಟಖಂಡ
ಮುಮಂ ನಿರ್ಮಾಣಮೞ್ತುಕೆಱೆಯ ತೆಂಕಣ ಕಡೆಯಲ್ ಅಯ್ದು ಕೊಳಗ

ಗೞ್ದೆಯುಮಂ ಈ ವಂಸದಲ್ ಪುಟ್ಟಿದವರ್ ಕಾದಿರಿಸುಗೆ ಸಲಿಸದವರ್
ನರಕಭಾಜನರಪ್ಪರ್

೬. ತುರುಗೋಳು- ಗಡಿಗಾಳಗ

ವೀರಗಲ್ಲು

(i) ಸು. ೯೦೦


ಸ್ವಸ್ತಿ ಶ್ರೀ ನಂದಿವೆಮ್ಮನ್ ಪೆರ್ಬಟ್ಟಮಾಳ ಎಲ್ತುನ ಪುಯ್ಯಲುಳ್
.... ಪುಣ್ಯ ಪವಿತ್ರನ್ ಎಱಿದು ವಿೞ್ದಾನ್.

(ii) ಸು. ೯೨೫


ಸ್ವಸ್ತಿ ಸಮಧಿಗತ ಪಂಚಮಾಶಬ್ದ ಪಲ್ಲವಕುಲಾನ್ವಯಂ ಶ್ರೀಮತ್
ಅಣ್ಣಯ್ಯ ಬೀರನೋಲಂಬಂ ರಾಜ್ಯಂಗೆಯ್ಯ ಪ್ರಚಂಡ ದಂಡನಾಯಕನ ಮಗ೦
ಗೊಗ್ಗಿ ಉೞಲ್‍ಮಱಿಯನಾಳುತ್ತಿರೆ ಊರ ಹರಿ ಬಂದು ಕಾದೆ ಮಱೆ
ವೊಕ್ಕೋನಂ ಕಾದು ಕುೞಿಪ್ಪಿ ವೈರಿಬಲಕ್ಕೆ ಇದಿರಂ ನಡೆದು ಸತ್ತು ಯಶವಂ
ಪಡೆದಂ.

ಒಡನೆಯವರೊಂದೆ ಮಾರ್ಬಲ
ಮಡೆಮಡಗದೆ ಪೊಗೞೆ ತಾಗಿ ತಳ್ತಿಱಿದು ಯಶಂ
ಬಡೆದಂ ಗೊಗ್ಗಿ ದಲೆಂಬುದು
ಪಡೆಮಾತೆನಲಾಯ್ತು, ಭುವನದೊಳಗುಂ ಪೊರಗುಂ

(iii) ೧೫೬

ಸ್ವಸ್ತಿ ಶ್ರೀಮಚ್ಚಾಳುಕ್ಯ ಚಕ್ರವರ್ತಿ ತ್ರೈಲೋಕ್ಯಮಲ್ಲದೇವಂ ಸುಖದಿಂ
ರಾಜ್ಯಂಗೆಯ್ಯುತ್ತಿರೆ ಶಕನ್ರಪ ಕಾಳಾತೀತ ಸಂವತ್ಸರಗಳು ೧೦೭೭ನೆಯ
ಯುವ ಸಂವತ್ಸರದಧಿಕ ಫಾಲ್ಗುಣ ಬಹುಳ೩ ಸೋಮವಾರದಂದು ಶ್ರೀಮನ್ಮಹಾ
ಮಂಡಳೇಶ್ವರಂ ಜಗದೇವರಸರ ಬೆಸದಿಂ ಮದಸಾಲೆಯ ಕಾಳರಸಂ ಸಮಸ್ತ
ಸಾಮಾತ್ತಿಯಂಬೆರಸು ಬಂದು ಶ್ರೀಮದನಾದಿಯಗ್ರಹಾರಂ ಕುಪ್ಪಗಡೆಯ
ಹಳ್ಳಿ, ಕೊರಕೊಡನಿಱಿದು ತುಱುವಂ ಕೊಂಡುಡೆಯುಚ್ಚಿ ಹೋಹಾಗಳಲ್ಲಿ
ಹುಟ್ಟಿದ ಬಾನಗಾವುಂಡನ ಮಗ೦ದಿರು ದೇವಗಾವುಂಡನುಂ ಮಲ್ಲ ಗಾವು೦ಡನುಂ
ಬಿಲ್ಲುಮಂಬುಮಂ ಕೊಂಡಿರ್ವರುಂ ಹೆಬ್ಬಾಗಿಲೊಳಡಂ ನಿಂದು ಗುಹೆಯ ಬಾಗಿ
ಲೊಳು ಸಿಂಹನಿರ್ಪಂತೆ ತಾಗಿ ತಳ್ತೆಸುವಾಗಳು ಕಾರಮಳೆ ಕಱೆದಂತೆಯುಂ
ಕಡಂದುಱ ಹುಟ್ಟಿಯ ಕೆಣಕಿದಂತೆಯುಂ ಕವಿದ ಕೋಲ ಬಾಯೊಳಂ ಕಾಲ
ಬಾಯೊಳಂ ಜವನೊಕ್ಕಲಿಕ್ಕಿದಂತೆ ತೊತ್ತಳದುಳಿದವೋಲು ತಂಕಯ್ಯ ಸರಮಂ ಬಿಲ್ಲ ತಿರುವಂ ಪಟವನ್ನ ವೆಚ್ಚು ನೆಱೆಯದೆ ಕಟ್ಟಿದಲಗಂ ಕಿತ್ತು.... ಕುಱಿಯ
ಹಿಂಡಂ ತೋಳಂ ಪೊಕ್ಕಂತೆಯುಂ
ಕರ್ಬುದೊ೦ಟವನಾನೆ ಪೊಕ್ಕಂತೆಯುಂ ಪೊಕ್ಕು ಕುತ್ತಿ ನೂಂಕುತ್ತ ಬಪ್ಪಾಗಳು
ಮಲೆದಿದಿರಾಂತ ಮಾರ್ವಲವನಳ್ಕುಱೆ ತಾಗಿ ಭುಜಪ್ರತಾಪದಿಂ
ದಲಗನೆ ಕಿರ್ತು ಪೊಯ್ಯೆ ನಿರತಂ ಕಣಕಾಲ್ ಮೊಳಕಾಲ್ ಮುಖಂ ಭುಜಂ
ತಲೆಬಳೆಯಾಗೆ ಸಂಬಳಿತ ವೋಪಿನಮೊಂದೆರಡಟ್ಟೆ ಯೋಡಲುಂ
ತೊಲಗದೆ ನಿಂದು ತಳ್ತಿಱಿದರಿರ್ಬರುಮಾಹನ ರಂಗಭೂಮಿಯೊಳ್

ಅಂತವರಿಬ್ಬರುಂ ಪೋಗದೆ ನಿಂದುದಂ ಕಂಡು ಪೊರಿದಾಳು ಕುದುರೆಯ
ಮೊರ್ಬ೦ ತಾಗಿಯೆಸಲ್ವಿಱಯಲು೦ (?) ಕೋಲ್ ಕೊಂತಂಗಳೂಡಾಗಿ ಬಿರ್ದು ಸುರಲೋಕಪ್ರಾಪ್ತರಾದಡವರಿರ್ಬರ ಪೆಣನಂ ಮೆಟ್ಟಿ ತುಱು ಪರಿಯಲವರಿಬ್ಬರಿಂ
ಕಿಱಿಯ ಬೊಪ್ಪಗಾವುಂಡ ತಮ್ಮಣ್ಣಂದಿರಿಬ್ಬರ ಕಳೇಬರವಂ ಕಂಡು ಸೈರಿಸ
ಲಾಱದೆ ನಿಮಾದುದನಪ್ಪೆನಲ್ಲದೊಡೇಂ ತುಱುವಂ ಬಪ್ಪೆನೆಂದೊಂದೆ
ಮೆಯ್ಯೋಳು ಹಿಂದ ಹತ್ತಲಾತಂಗೆ ಪಡಿಬಲದಾಗಿ ಮಂಡಳಿಕಂ ವುದ್ದರೆ ಯೆಕ್ಕ
ಲರಸನಾಳ್ಕುದುರೆಯಂ ಹೇಳಲಾ ನೆರವಂ ಕೂಡಿಕೊಂಡು ಹಾಲ್ಗಟ್ಟದ ಬಯಲ
ಲೊಡ್ಡನೊಡ್ಡಿದರಿಬಲವಂ ಬೊಪ್ಪಗವುಂಡ ಕೊಂದು ತುಱುವಂ ಮಗುಳ್ಚಿ
ಕೊಂಡು ಬಂದಣ್ಣಂದಿರಂ ಸಂಸ್ಕಾರಿಸಿ ಜಳದಾನಕ್ರಿಯೆಯಂ ಪರೋಕ್ಷ ವಿನಯ
ಮುಮಂ ಮಾಡಿ ಇರ್ಬರ್ಗಂ ಕಲ್ಲ೦ ನಿಱಿಸಿದಲ್ಲಿ ಮಂಗಳ ಮಹಾಶ್ರೀ ಶ್ರೀ

(iv) ೮೦೦


ಸ್ವಸ್ತಿ ಪ್ರಭೂತವರ್ಷ ಶ್ರೀ ಪೃಥಿವೀವಲ್ಲಭ ಮಹಾರಾಜಾಧಿರಾಜ ಪರಮೇ
ಶ್ವರ ಭಟ್ಟಾರಕ ಶ್ರೀ ಗೋ ಇಂದರಸರ್ ಚತುಸ್ಸಮುದ್ರಾ೦ತ ವಸುಧೆಯಾನ್
ಧವಳೈ ಕಛತ್ರಛಾಯೆಯಿಂದಾಳೆ | ಬನವಾಸಿಮಂಡಲಮಾನಾಸಮುದ್ರಾ೦ತಂ
ರಾಜಾದಿತ್ಯರಾಸರ್ ಆಳೆ ! ಆಳುವ ಖೇಡಮಱುಸಾಸಿರಮುಮಾನ್ ಚಿತ್ರವಾಹನ
ನಾಳುತ್ತುಂ ಬಾಯ್ಕೇಳದಿರೆ ಮುನಿದು ಕೊಲ್ಲಿ ಪಲ್ಲವನೊೞಂಬಂ ನೋೞಂಬರಾ
ದಿತ್ಯನನ್ ವೆಸಸಲಾ ಕಾಕರಾಸರುಮೆಟ್ಟು ಪೆರ್ಗುಂಜಿಯ ಕೋಟಿಯಾನ್
ರೋಹಿಸಿ ಬಿಟ್ಟು ಎರಡುಂ ಬಲದ ವೀರಭಟರ್ಕಳೊೞ್ದು ಪೊಱಮಟ್ಟು, ಬಿಲ್ವಲ್ಲೋಳ್ ಕುದುರೆ ಕುದುರೆಯೊಳ್ ಕಿಟ್ಟಿ, ಅತಿತುಮುಲಕಾಳಗಂ ಪೆೞ್ಚಿ ಬಲದ ಕಯ್ಯಂ ಚಿತ್ರವಾಹನನೊತ್ತಿ ಪುಗುತ್ತ೦ದು ಕಾದಿಸೆ ಕಂಡು ಕುಲಮುದ್ದ ನೀನೀ ಕಯ್ಯ ಪೊಕ್ಕು ಕಾದೆಂದು ಬೆಸಸೆ ಪ್ರಸಾದಮೆಂದೆಯ್ದಿ ಕಿಟ್ಟಿ ಕಾದಿ ಮಱುವಕ್ಕ ದವರ ಮೆಯ್ಮೆಯ್ಯಂಬಾಗೆ ಎಚ್ಚೋಡಿಸಿ ಆ ಕಯ್ಯಂ ಗೆಲ್ದು ತಾನುಂ ಪಲವುಂ ಎಸುವೆತ್ತು ಎಯ್ವೊದೆದಪ್ಪಿ ದಪ್ಪೊಲ್ ಕಣೆ ಪಂಜರದೊಳೆಱಗಿ ಭೀಷ್ಮನ್ ವಿೞ್ದಂತೆ ನೆಲ ಮುಟ್ಟದೆ ಬಿೞ್ದೋನಾನ್ ದೇವಗಣಿಕೆಯರರ್ಘಯಂಬಿಡಿದು ಬಂದಿದಿರ್ಗೊ೦ ಡುಯೆ ವೀರಲೋಕಕ್ಕೆ ಸಂದೋನ್ | ಅರಬದ್ದಗಿಯರವಾದ ಪುಲಿ ಮಾಡಿದಾನ್ ಪರಿಗೆಯ ಬಂಧುಗಿಯರ್‌ ಈ ಊರ್ಗೆ ಬಂದು ಆರಿದರೊಳ್ ಛಲಮೆನೆ ನಾಲ್ಕೆ ೞ್ತುನ ಬಲನ ಕಿಡಿಸಿ ಆೞ್ತೞ್ತು ಮಾಡಿ ಮತ್ತಂ ನಿಲಲಾಱದೆ ಓಡಿದ ಅದನ್ವೞಿಕೆ ಕುಲಮುದ್ದಗಾಮಿಗಾಗೆ ಅರಸರ್ ದಯೆಗೆಯ್ದು ಪೂರ್ವಾಚಾರದ ನಾಲ್ಕೆೞ್ತು ನೊಳ್ವೊೞಿಸಿ ಗೞ್ದೆಯನಳದು ದಯೆಗೆಯ್ದು ಬಿಟ್ಟ ಕುಂದಗೆ ಸೇವೆಯಕಲಿಯಮ್ಮ ಬೆಣ್ಮಣಿಯ ಪದುಮಣ್ಣನ್ ಕರ್ಬುರಸೋಮದಿ ಮಿಟ್ಟಿಸೆಯ ನರಸಿಂಗನ್ ಸಿಮ್ಮನೂರ ಕಿಳ್ಳಮ್ಮನ್ ಆ೦ಡುಗಿಯರಟ್ಟಿ ಗನ್ ಬೆದೆಮೆಟ್ಟಿ ಯಾಲಮ್ಮಾನ್ ಬಳ್ಳಿಗಾಮೆಯಗಾಮುಂಡನ್ ಗು೦ದುಗಡೆಯಾ ಸಾತ್ತುಗಾಮುಂಡ ಇಂತೀ ಎನೆಬರು ಶ್ರೀಕರಣ ಸಹಿತಂ ಬಿಟ್ಟಾರಿದನ್ ಕೆಡಿಪೋನುಂ ಕೆಡೆ ಬಾಲ್ವೋನುಂ ಪಂಚಮಹಾಪಾತಕಸಂಯುಕ್ತನಕ್ಕುಂ ಬಾರಣಾಸಿಯೊಳ್ ಸಾಸಿರ ಕವಿಲೆಯನ್ ಕೊಂದೋನ ಲೋಕಕ್ಕೆ ಸಂದೋನುಮಕ್ಕುಂ.

೭. ದೇವಾಲಯದ ದತ್ತಿ ೧೦೨೧

ಶ್ರೀ ಸ್ವಸ್ತಿ ಸಕವರಿಷ ವೊಂಬಯ್ನೂಱ ನಾಲ್ವತ್ತಮೂಱನೆಯ ರೌದ್ರಿ ಸಂವತ್ಸರದ ಆಷಾಡಮಾಸದ ಪುಣ್ಣನೆ ಉತ್ತರಾಷಾಡ ನಕ್ಷತ್ರಂ, ಮಕರ ಚಂದ್ರಂ ಬೃಹಸ್ಪತಿವಾರಂ ಶ್ರೀ ಮುಡಿಗೊಂಡ ರಾಜೇಂದ್ರ ಚೋೞಂ ರಾಜ್ಯಂ ಗೆಯ್ಯುತ್ತಿರೆ ಇಯಾಂಡು ಒಂಬತ್ತಾವುದಱುಳ್ ನುಗುನಾಡ ಒಱೆಯ ಬೆಳತೂರ ಒಡೆದು ಬಿೞ್ದು ಭೂಮಿಲಬ್ಬವಾಗಿ ಕೆಟ್ಟ ದೇಗುಲಮಂ ಮಾಡಿಸಿ ಕಿೞ್ತು ಪಟ್ಟ ಲಿಂಗಮಂ ಪ್ರತಿಷ್ಠೆಗೆಯು ಮುರುಗಪೆಟ್ಟ ಯ ಮಗಂ ಬಸವಯ್ಯಂ ರುದ್ರ ಹೋಮಂ ಗೆಯ್ದು ಸಹಸ್ರ ಭೋಜನಂ ಮಾಡಿ ಬಲಿಯಂ ಕಳೆದು ಧರ್ಮಂ ಗೆಯ್ದು ಬೆಳತೂರ ಜವನಿಗಾವುಂಡನ ಮಗಂ ಜಯಂಗೊಂಡ ಚೋೞಪೆರ್ಮಾಡಿಗಾವುಂಡನಲ್ಲಿ ಮುರುಗಸೆಟ್ಟಯ ಮಾಗ್ಗ ಬ್ಬೆಯ ಮಗಂ ಸುಪುತ್ರಂ ಪುಟ್ಟಿದ ಬಸವಸೆಟ್ಟ ಪದಿನಯ್ಗುಳ ನೀರ್ಮಣ್ಣು ಅಯ್ಗು ಳ ಪೂಂಬೊಲನುಂ ಪೊನ್ನ ಆ ಕೊಟ್ಟು ಮಣ್ಣಱಂ ಕೊಂಡು ಧಾರಾಪೂರ್ವಕದಿಂದ ಮೂರುಂ ಅಯ್ಮಣ್ಣಿಗರುಮಱಿಯ ಈ ದೇಗುಲಕ್ಕೆ ಬಿಟ್ಟಂ ಬಸವಸೆಟ್ಟ ನಂದಾದೀವಿಗೆಗೆ ಕೊಟ್ಟಂ ಈ ದತ್ತಿಯನೞಿದವಂ ಈ ದೇಗುಲವುಂ ಕವಿಲೆಯುಂ ವಾರಣಾಸಿಯುಮನೞಿದ ಪಾತಕಕ್ಕೆ ಸಂದಂ.

೮. ಬುಕ್ಕರಾಯನ ಧರ್ಮ ಸಮದೃಷ್ಟಿ ೧೩೬೮

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ

ಪಾಷಂಡ ಸಾಗರ ಮಹಾಬಡವಾಮುಖಾಗ್ನಿ

ಶ್ರೀರಂಗರಾಜ ಚರಣಾಂಬುಜ ಮೂಲದಾಸಃ
ಶ್ರೀ ವಿಷ್ಣುಲೋಕ ಮುನಿಮಂಟಪ ಮಾರ್ಗದಾಯೀ
ರಾಮಾನುಜೋ ವಿಜಯತೇ ಯತಿರಾಜರಾಜ!

ಶಕವರ್ಷ ೧೨೯೦ನೆಯ ಕೀಲಕ ಸಂವತ್ಸರದ ಭಾದ್ರಪದ ಶು|| ೧೦
ಬೃ ಸ್ವಸ್ತಿ ಶ್ರೀಮನ್ಮಹಾಮಂಡಳೇಶ್ವರಂ ಅರಿರಾಯ ವಿಭಾಡ ಭಾಷೆಗೆ ತಪ್ಪುವ
ರಾಯರ ಗಂಡ ಶ್ರೀ ವೀರಬುಕ್ಕರಾಯನು ಪೃಥ್ವೀರಾಜ್ಯವ ಮಾಡುವ ಕಾಲದಲ್ಲಿ
ಜೈನರಿಗೂ ಭಕ್ತರಿಗೂ ಸಂವಾದವಾದಲ್ಲಿ ಆನೆಯಗೊಂದಿ ಹೊಸಪಟ್ಟಣ
ಪೆನುಗುಂಡೆ ಕಲ್ಲೆ ಹದಪಟ್ಟಣವೊಳಗಾದ ಸಮಸ್ತ ನಾಡ ಭವ್ಯಜನಂಗಳು
ಆ ಬುಕ್ಕರಾಯಂಗೆ ಭಕ್ತರು ಮಾಡುವ ಅನ್ಯಾಯಂಗಳನು ಬಿನ್ನ ಹಂ ಮಾಡಲಾಗಿ
ಕೋವಿಲ್ ತಿರುಮಲೆ ಪೆರುಮಾಳ್ ಕೋವಿಲ್ ತಿರುನಾರಾಯಣಪುರ ಮುಖ್ಯ
ವಾದ ಸಕಳಾಚಾರ್ಯರೂ ಸಕಳ ಸಮಯಿಗಳೂ ಸಕಳ ಸಾತ್ವಿಕರೂ ಮೋಷ್ಟಿ ಕರು
ತಿರುಪಣಿ ತಿರುವಿಡಿ ತಣ್ಣೀರವರು ನಾಲ್ವತ್ತೆಂಟು ಜನಂಗಳು ಸಾವಂತ
ಬೋವಕ್ಕಳು ತಿರಿಕುಲ ಜಾಂಬವಕುಲವೊಳಗಾದ ಹದಿನೆಂಟು ನಾಡ ಶ್ರೀವೈಷ್ಣ
ವರ ಕೈಯ್ಯಲು ಮಹಾರಾಯನು ವೈಷ್ಣವ ದರ್ಶನಕ್ಕೆಯೂ ಜೈನದರ್ಶನಕ್ಕೆಯೂ ಭೇದವಿಲ್ಲವೆಂದು ರಾಯನು ವೈಷ್ಣವರ ಕೈಯ್ಯಲು ಜೈನರ ಕೈವಿಡಿದುಕೊಟ್ಟು
ಈ ಜೈನದರ್ಶನಕ್ಕೆ ಪೂರ್ವ ಮರಿಯಾದೆಯಲು ಪಂಚಮಹಾವಾದ್ಯ೦ಗಳೂ
ಕಳಶವೂ ಸಲುವುದು ಚೈನದರ್ಶನಕ್ಕೆ ಭಕ್ತರ ದೆಸೆಯಿಂದ ಹಾನಿವೃದ್ಧಿಯಾ
ದರೂ ವೈಷ್ಣವ ಹಾನಿವೃದ್ಧಿಯಾಗಿ ಪಾಲಿಸುವರು ಈ ಮರ್ಯಾದೆಯಲು
ಎಲ್ಲಾ ರಾಜ್ಯದೊಳಗುಳ್ಳಂತಹ ಬಸ್ತಿಗಳಿಗೆ ಶ್ರೀವೈಷ್ಣವರು ಶಾಸನವ ನಟ್ಟು
ಪಾಲಿಸುವರು ಚಂದ್ರಾರ್ಕಸ್ಥಾಯಿಯಾಗಿ ವೈಷ್ಣವ ಸಮಯವೂ ಜೈನದರ್ಶನವೂ
ರಕ್ಷಿಸಿಕೊಂಡು ಬಹೆವು ವೈಷ್ಣವರೂ ಜೈನರೂ ಒ೦ದು ಭೇದವಾಗಿ ಕಾಣಲಾ
ಗದು ಶ್ರೀ ತಿರುಮಲೆಯ ತಾತಯ್ಯಂಗಳು ಸಮಸ್ತ ರಾಜ್ಯದ ಭವ್ಯಜನಂಗಳ
ಅನುಮತದಿಂದ ಬೆಳುಗುಳದ ತೀರ್ಥದಲ್ಲಿ ವೈಷ್ಣವ ಅಂಗರಕ್ಷೆಗೋಸುಕ ಸಮಸ್ತ
ರಾಜ್ಯದೊಳಗುಳ್ಳ೦ತಹ ಜೈನರ ಬಾಗಿಲುಗಟ್ಟಳೆಯಾಗಿ ಮನೆಮನೆಗೆ ವರ್ಷಕ್ಕೆ
೧ ಹಣ ಕೊಟ್ಟು ಆ ಎತ್ತಿದ ಹೊನ್ನಿ೦ಗೆ ದೇವರ ಅಂಗರಕ್ಷೆಗೆ ಯಿಪ್ಪತ್ತಾಳನೂ
ಸಂತವಿಟ್ಟು ಮಿಕ್ಕ ಹೊನ್ನಿ೦ಗೆ ಜೀರ್ಣ ಜಿನಾಲಯಂಗಳಿಗೆ ಸೊದೆಯನಿಕ್ಕುವುದು
ಈ ಮರಿಯಾದೆಯಲು ಚಂದ್ರಾರ್ಕರುಳ್ಳನ್ನಂ ತಪ್ಪಲೀಯದೆ ವರ್ಷ ವರ್ಷಕ್ಕೆ
ಕೊಟ್ಟು ಕೀರ್ತಿಯನೂ ಪುಣ್ಯವನೂ ಉಪಾರ್ಜಿಸಿಕೊಂಬುದು ಈ ಮಾಡಿದ
ಕಟ್ಟಳೆಯನು ಆವನೊಬ್ಬನು ಮಾಜವವನು ರಾಜದ್ರೋಹಿ ಸಂಘಸಮುದಾ ಯಕ್ಕೆ
ದ್ರೋಹಿ ತಪಸ್ವಿಯಾಗಲಿ ಗ್ರಾಮಿಣಿಯಾಗಲಿ ಈ ಧರ್ಮವ ಕೆಡಿಸಿದ
ರಾದಡೆ ಗಂಗೆಯ ತಡಿಯಲ್ಲಿ ಕಪಿಲೆಯನೂ ಬ್ರಾಹ್ಮಣನನೂ ಕೊಂದ ಪಾಪದಲ್ಲಿ
ಹೋಹರು.


ಸ್ವದತ್ತಂ ಪರದತ್ತಂ ವಾ ಯೋ ಹರೇತಿ ವಸುಂಧರಾಂ
ಷಷ್ಟಿ ವರ್ಷಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿಃ

ಎರಡನೆಯ ತೆನೆ


ಪೂರ್ವ ಕವಿಗಳಿ೦ದ

ಒಳಪಿಡಿ

1 ಕನ್ನಡನಾಡಿನ ಚೆಲುವು

೧೭


ನೃಪತುಂಗ-ಪಂಪ-ಆಂಡಯ್ಯ-ವಿರೂಪಾಕ್ಷ
ರತ್ನಾಕರ-ಸರ್ವಜ್ಞ

II ಕನ್ನಡ -ಸಕ್ಕದ

೨೦


ಕೇಶಿರಾಜ-ನಯಸೇನ-ಆಂಡಯ್ಯ -ಮುದ್ದಣ
ಮಹಲಿಂಗರಂಗ

III ಕಾವ್ಯದ ತಿರುಳು

೨೩


ನೃಪತುಂಗ-ಪಂಪ-ರನ್ನ-ನಯಸೇನ-ನೇಮಿಚ೦ದ್ರ
ಜನ್ನ - ಹರಿಹರ-ರಾಘವಾಂಕ-ಚಾಮರಸ-ಸರ್ವಜ್ಞ

IV ನಮ್ಮ ಕವಿಗಳ ಹೆಮ್ಮೆ

೨೭


ರನ್ನ ಷಡಕ್ಷರಿ-ಕುಮಾರವ್ಯಾಸ-ಲಕ್ಷ್ಮೀಶ ರತ್ನಾಕರ
V ಕನ್ನಡಿಗರುಸಿರು, ಕಣ್ಣು

ಪಂಪ: ಚಿನಸ್ತುತಿ

೩೧


ನಾಗಚಂದ್ರ: ಜಿನಸ್ತುತಿ

೩೨


ಬೊಪ್ಪಣ : ಗೊಮ್ಮಟನ ಸ್ತುತಿ{{ |೩೩}}

ರನ್ನ : ವೈರಾಗ್ಯ

೩೫


ರತ್ನಾಕರ: ಆತ್ಮ-ಕರ್ಮ-ಮುಕ್ತಿ

೩೬


ಬಸವಣ್ಣ: ಧರ್ಮದ ಕಚ್ಚು

೩೮


ಹರಿಹರ: ಸಂಗನು ಬಸವಣ್ಣನವರನ್ನು ಕಲ್ಯಾಣಕ್ಕೆ ಕಳುಹಿಸಿದ್ದು

೪೩


ಬಸವಣ್ಣನವರ ಗುಣ

೪೫


ಮಹಾದೇವಿಯಕ್ಕ: ಶಿವನೇ ನನ್ನ ಗಂಡ

೪೬


ಹರಿಹರ: ಭಕ್ತಿಯ ಆವೇಶ

೪೯


ಚಾಮರಸ: ಅಲ್ಲಮಪ್ರಭುವಿನ ಕರುಣೆ

೫೨


ಷಡಕ್ಷರಿ: ಶಿವಪೂಜೆ

೫೨


ದಾಸರ ಪದಗಳು:

ಪುರಂದರದಾಸರು

೫೪


ಕನಕದಾಸರು

೫೯


ಚಿಕದೇವರಾಜ : ಬಿನ್ನಪ

೬೨


ಗೀತಗೋಪಾಲ

೬೩


ಹೊನ್ನಮ್ಮ: ಹದಿಬದೆಯ ಧರ್ಮ

೬೬


ಶ್ರೀವಾಸ: ಮುಮ್ಮಡಿ ಕೃಷ್ಣರಾಜ ಒಡೆಯರ ವರ್ಧಂತಿ

೬೭


ಅಯ್ಯಶಾಸ್ತ್ರಿ: ನಾಲ್ವಡಿ ಕೃಷ್ಣರಾಜ ಒಡೆಯರವರು ರಾಜ್ಯಭಾರ ವಹಿಸಿದ್ದು

೬೮



I. ಕನ್ನಡ ನಾಡಿನ ಚೆಲುವು


ನೃಪತುಂಗ: ೮೧೪-೮೭೭ ಕವಿರಾಜಮಾರ್ಗ

 
ಕಾವೇರಿಯಿಂದಮಾ ಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್ಭಾ
ವಿಸಿದ ಜನಪದಂ......
ಅದಱೊಳಗಂ ಕಿಸುವೊೞಲಾ
ವಿದಿತ ಮಹಾಕೊಪಣ ನಗರದಾ ಪುರಿಗೆಱೆಯಾ
ಸದಭಿಸ್ತು ತಮಪ್ಪೊ೦ಕುಂ
ದದ ನಡುವಣ ನಾಡೆ ನಾಡೆ ಕನ್ನ ಡದ ತಿರುಳ್
ಪದನಱಿದು ನುಡಿಯಲುಂ ನುಡಿ
ದುದನಱಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುಱಿತೋ
ದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್

ಪಂಪ: ೯೪೧ ವಿಕ್ರಮಾರ್ಜುನ ವಿಜಯ

ಜಲ ಜಲನೊ[ೞ್ಕು]ತಿರ್ಸ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೆ
ಯ್ದಿ ಲ ಪೊಸವೂ ಪೊದೞ್ದ ಪೊಸನೆಯ್ದಿಲ ಕಂಪನೆ ಬೀಱಿ ಕಾಯ್ತ ಕೆಂ
ಗೊಲೆಯೊಳೆ ಜೋಲ್ಯ ಶಾಳಿ (ನವ) ಶಾಳಿಗೆ ಪಾಯ್ಕ ಶುಕಾಳಿ ತೋಱೆ ಕ
ಯೊಲಗಳಿನೊಪ್ಪಿ ತೋಱೆ ಸಿರಿ ನೋಡುಗುಮಾ ವಿಷಯಾಂತರಾಳದೊಳ್

ಬೆಳೆದೆಱಗಿರ್ದ ಕಲನೆ ಕಯ್ವೊಲನಂ ಬಳಸಿರ್ದ ಪೂತ ಪೂ
ಗೊಳ ಗಳೆ ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನಾ
ವಳಿಗಳೆ ನಂದನಾವಳಿಗಳ೦ ಬಳಸಿರ್ದ ಮದಾಳಿ ಸಂಕುಲಂ
ಗಳೆ ವಿಷಯಾಂಗನಾಲುಳಿತ ಕುಂತಳದಂತೆವೋಲೊಪ್ಪಿ ತೋಱುಗುಂ

ಲಳಿತ ವಿಚಿತ್ರ ಪತ್ರ ಫಲ ಪುಷ್ಟ ಯುತಾಟವಿ ಸೊರ್ಕಿದಾನೆಯಂ
ಬೆಳೆವುದು [ದೇ]ವಮಾತೃಕಮೆನಿಪ್ಪ ಪೊಲ೦ ನವಗಂಧ ಶಾಳಿಯಂ
ಬೆಳೆವುದು ರಮ್ಯ ನಂದನ ವನಾಳಿ ವಿಯೋಗಿ ಜನಕ್ಕೆ ಬೇಟಮಂ
ಬಳೆವುದು ನಾಡ ಕಾಡ ಬೆಳಸೀ ಬೆಳಸಾ ವಿಷಯಾಂತರಾಳದೊಳ್

ಆವಲರುಂ ಪಣುಂ ಬೀ
ತೋವವು ಗಡ ಬೀಯವಲ್ಲಿ ಮಲ್ಲಿಗೆಗಳುಮಿ
ಮ್ಮಾವುಗಳುಮೆಂದೊಡಿನ್ ಪೆಱ
ತಾವುದು ಸಂಸಾರಸಾರ ಸರ್ವಸ್ವ ಫಲಂ

೧೮

ಮಿಡಿದೊಡೆ ತನಿಗರ್ಬು ರಸಂ
ಬಿಡುವುವು ಬಿರಿದೊಂದು ಮುಗುಳ ಕಂಪಿನೊಳೆ ಮೊಗಂ
ಗಿಡುವುವು ತುಂಬಿಗಳೞ್ಕಮೆ
ವಡುವುವು ಕುಡಿದೊಂದು ಸಣ್ಣ ರಸದೊಳೆ ಗಿಳಿಗಳ್

ಸುತ್ತಿಱಿದ ರಸದ ತೊಱೆಗಳೆ
ಮುತ್ತಿನ ಮಾಣಿಕದ ಪಲವುಮಾಗರಮೆ ಮದೋ
ನ್ಮತ್ತ ಮದಕರಿ ವನಂಗ[ಳೆ]
ಸುತ್ತಲುಮಾ ನಾಡ ಸಿರಿಯನೇನಂ ಪೊಗೞ್ವೆಂ

ಬನವಾಸಿ

ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ
ನಗೆಮೊಗದೊಳ್‌ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ
ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
೪್ಗಾಗರವಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮನದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್

ತೆಂಕಣ ಗಾಳಿ ಸೋಂಕಿದೊಡಮೋಳ್ನುಡಿಗೇಳ್ಕೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆ೦ದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ

ಆಂಡಯ್ಯ: ಸು. ೧೨೩೫ ಕಬ್ಬಿಗರ ಕಾವ

ಪಲವುಂ ನಾಲಗೆಯುಳ್ಳ ವಂ ಬಗೆವೊಡೆಂದು ಬಣ್ಣಿಸಲ್ಕಾಱನಾ
ನೆಲನಂ ಮತ್ತಿನ ಮಾನಿಸರ್ ಪೊಗೞಲೇನಂ ಬಲ್ಲರೆಂಬೊಂದು ಬ
ಲ್ಲುಲ್ಲಿಯಂ ನೆಟ್ಟನೆ ತಾಳ್ದು ಕನ್ನ ಡಮೆನಿಪ್ಪಾ ನಾಡು ಚೆಲ್ವಾಯ್ತು ಮೆ
ಲ್ಲೆಲರಿಂ ಪೂತ ಕೊಳ೦ಗಳಿ೦ ಕೆಱೆತೆಗಳಿಂ ಕಾಲೂರ್ಗಳಿಂ ಕಯ್ಗಳಿ೦

ಇವು ಪಳ್ಳಿಗಳಿವು ಪಟ್ಟಣ
ಮಿವು ಕೆಱೆತಿಗಳಿವೆಱಗಿ ನಿಂದ ಮುಗಿಲೋಳಿಗಳಿಂ
ತಿವು ಕಾಡಿವು ಪೆಸರ್ವಡೆದೊ
ಪ್ಪುವ ಬನಮಂದಱಿದು ಪೇೞ್ವುದರಿದಾ ನಾಡೊಳ್



೧೯

ಮಲ್ಲಿಗೆಯಲ್ಲದೆ ಸಂಪಗೆ
ಯಲ್ಲದೆ ದಾಳಿಂಬವಲ್ಲದೊಪ್ಪುವ ಚೆಂದೆಂ
ಗಲ್ಲದೆ ಮಾವಲ್ಲದೆ ಕೌ೦
ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್

ಅಡರ್ದೇಱಿ ಕೋಡಗಂಗಳ್
ಕಡುಪಿಂದೀಡಾಡೆ ಗೞಿಲನೊಡೆದೆಳಗಾಯಿಂ
ದೆಡೆವಿಡಿದೊಸರ್ವೆಳನೀರ್ಗಲ್
ಮಡುಗೊಂಡೋವುತ್ತು ಮಿರ್ಪುವಲ್ಲಿಯ ಬನಮಂ
 
ಉಱಿ ಕಾಯ್ಕ, ಬಿಸಿಲೂಳೆಮ್ಮ
ಮಱೆದುಂ ಕೊರಗಿಸದೆ ಪೊರೆದುದೆಂದೋಲವಿಂ ಬ೦
ದೆಱಗುವವೋಲ್ ತೆನೆಯಂ ಕಾ
ಲೈಱಗುವ ಕೞವೆಗಳವೆಲ್ಲಿಯುಂ ಸೊಗಯಿಸುಗುಂ

ನೆಲ್ಗೊಳ೦ಗಳೆಡೆಯೊಳ್
ಕಾಯೋ ವದೆ ಪೋರ್ವ ಪಲವು ನೀರ್ವಕ್ಕಿಗಳಿಂ
ದೆಯು ಣುವ ಸೀರ್ಪನಿಯೋ೪೯
ತೊಯೊಯ್ಯನೆ ಗಾಳಿ ಕೂಡೆ ತೀಡುತ್ತಿರ್ಕು೦

ವಿರೂಪಾಕ್ಷ : ೧೫೮೪ ಚೆನ್ನಬಸವ ಪುರಾಣ

ಅಲ್ಲಿಗಲ್ಲಿಗೆ ಬೆಳೆದ ಬೆಳೆಗಳಿ೦ ಮಳೆಗಳಿಂ
ಮಲ್ಲಿಗಲ್ಲಿಗೆ ನನಸಳಗಿ೦ ಕೊಳಗಳಿ೦
ದಲ್ಲಿಗಲ್ಲಿಗೆ ರನ್ನದರೆಗಳಿ೦ ಕೆರೆಗಳಿ೦ ಪರಿವ ಪರಿಕಾಲ್ಗಳಿ೦ದೆ
ಅಲ್ಲಿಗಲ್ಲಿಗೆ ತೋರ್ಪ ಗಿರಿಗಳಿ೦ ಕರಿಗಳಿ೦
ವಲ್ಲಿಗಲ್ಲಿಗೆ ನೆರೆವ ಶುಕಗಳಿ೦ ಪಿಕಗಳಿ೦
ದಲ್ಲಿಗಲ್ಲಿಗೆ ಗವಾಸ್ಪದಗಳಿ೦ ನದಗಳಿ೦ದಾದೇಶವೊಪ್ಪಿರ್ದುದು

ಕಂಜ ಕುಮುದ೦ಗಳಿಲ್ಲದ ಸರಂ ಸರದಿಂದೆ
ರಂಜಿಸದ ಶುಕಸಿಕಂ ಶುಕಸಿಕಂಗಳ್ಗೆ ಫಲ
ಮಂಜರಿಯನೀಯದಿಹ ಮಾವು ಮಾವುಗಳನಪ್ಪದ ಬಳ್ಳಿ ಬಳ್ಳಿಗಳೊಳು
ಮಂಜುಳಧನಿಗುಡದ ಪರಮ ಪರಮೆಗೆ ಸಂತ
ಸಂ ಜನಿಸದರಲರಲ ನವಪರಿಮಳ೦ಗಳಿ೦
ದಂ ಜಡಿಯದೆಳಗಾಳಿ ಎಳಗಾಳಿಯಿಲ್ಲದಾ ಬನವಿಲ್ಲವಾ ನಾಡೊಳು

೨೦

ರತ್ನಾಕರ: ೧೫೫೭ ಭರತೇಶವೈಭವ

ಬಳಿಕ ಮೂರನೆಯ ಜಾವದೊಳವನೀಶನು
ನಳಿನಾಕ್ಷಿಯರು ಸಹವಾಗಿ
ನೆಲಮಾಡವೇರಿ ಮೇಲ್ಮನೆಯೊಳು ಕುಳಿತು ಪೆಂ
ಗಳಿಗಂಬುನಿಧಿಯ ತೋರಿದನು
ಕಡಲ ಮುನ್ನ ರಿಯೆದ ಸೆಂಗಳಚ್ಚರಿವಟ್ಟು
ನಿಡು ಬೆರಳಿಟ್ಟು ನಾಸಿಕಕೆ
ಮುಡಿಯೋಲೆದೊಲೆದು ನೋಡಿದರದರೊಂದು ಬ
ಲ್ಗಡಣೆಗೆ ಬಗೆಯೊಳು ಮೆಚ್ಚಿ
ದಿಟ್ಟಗೆ ಮಿಗೆ ಹಾಯ್ದು ತೋರ್ಪ ಸಮುದ್ರದ
ಕಟ್ಟಳಲಿಗೆ ಚೋದ್ಯವಟ್ಟು
ಅಟ್ಟಹಾಸವ ಮಾಡುತೊಬ್ಬರೊಬ್ಬರ ಮೈಯ
ತಟ್ಟುತ ತೋರಿ ನುಡಿದರು
ಅಟ್ಟುವ ತೆರೆಯ ಮುಂದೋಡುವ ತೆರೆಯ ಪೆ
ರ್ಬೆಟ್ಟದಂತೇಳ್ವ ತೆರೆಗಳಾ
ತೊಟ್ಟನೆ ಬಯಲಹ ತೆರೆಗಳನವರು ಕ
ಣ್ಣಿಟ್ಟು ನೋಡಿದರರ್ತಿವಡುತ
ಎಡೆಗುತ್ತಿಗಳನಲ್ಲಿಗಲ್ಲಿ ನಿಂದದ್ರಿಯ
ನಿಡುಗಲ್ಲುಗಳನದರೊಳಗೆ
ಎಡೆಯಾಡುತಿಹ ದೋಣಿ ದುಗ್ಗಿ ಕಪ್ಪಲು ದೊಡ್ಡ
ಹಡಗುಗಳಿರವ ನೋಡಿದರು
ತುಂತುರು ತೆರೆ ನೊರೆ ಸುಳಿ ಘುಳು ಘುಳು ರವ
ತೂಂತಿಟ್ಟು ಹೊಳೆವ ವಾರಿಧಿಯ
ಕಾಂತೆಯರೆಲ್ಲರೀಕ್ಷಿಸಿದರು. . . . . . . .

ಸರ್ವಜ್ಞ: ಸು. ೧೭೦೦ ವಚನಗಳು

ಜೋಳದಾ ಬೋನಕ್ಕೆ ಬೇಳೆಯಾ ತೊಗೆಯಾಗಿ
ಕಾಳೆಮ್ಮೆ ಕರೆದ- ಹೈನಾಗಿ ಬೆಳವಲದ
ಮೇಳ ನೋಡೆಂದ ಸರ್ವಜ್ಞ
ಕಿಚ್ಚು೦ಟು ಕೆಸರುಂಟು ಬೆಚ್ಚನಾ ಮನೆಯುಂಟು
ಇಚ್ಚೆಗೆ ಬರುವ- ಸತಿಯುಂಟು ಮಲೆನಾಡ
ಮೆಚ್ಚು ನೋಡೆಂದ ಸರ್ವಜ್ಞ

೨೧

II. ಕನ್ನಡ-ಸಕ್ಕದ

ಕೇಶಿರಾಜ: ಸು. ೧೨೮೦ ಶಬ್ದಮಣಿದರ್ಪಣ:ಉದಾಹರಣೆ

ಪೞಗನ್ನಡದೆ ಪುದುಂಗೊಳೆ
ಕೊೞೆ ಸಕ್ಕದಮಂ ತಗುಳ್ಚಿ ಜಾಣ್‌ ಕಿಡೆ ಮುತ್ತುಂ
ಮೆೞಸು೦ಗೋದಂತಿರೆ ಪೇ
ಳ್ವೞಿಗವಿಗಳ ಕವಿತೆ ಬುಧರನೆರ್ದೆಗೊಳಿಸುಗುಮೇ

ನಯಸೇನ: ೧೧೧೨ ಧರ್ಮಾಮೃತ

ಹೊಸಗನ್ನಡದಿಂ ವ್ಯಾವ |
ವರ್ಣಿಸುವೆಂ ಸತತಿಯನೆಂದು ಕನ್ನಡಮಂ ಚಿಂ
ತಿಸಿ ಕೂಡಲಾಅದಕ್ಕಟ |
ಮಿಸುಕದ ಸಕ್ಕದಮನಿಕ್ಕುವವನುಂ ಕವಿಯೇ

ಸಕ್ಕದಮಂ ಪೇಳ್ವೊಡೆ ನೆಱೆ
ಸಕ್ಕದಮಂ ಪೇಳ್ಗೆ ಶುದ್ಧ ಕನ್ನಡದೊಳ್ ತಂ
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರಸಿ ಕೃತಮುಮಂ ತೈಲಮುಮಂ

ಆಂಡಯ್ಯ: ಕಬ್ಬಿಗರ ಕಾವ

ಸೊಗಯಿಸ ಸಕ್ಕದಂ ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ
ಬಗೆಗೊಳೆ ಪೇಳಲಾ ಅರಿವಿತುಂ ಸಲೆ ಮುನ್ನಿನ ಪೆಂಪನಾಳ್ದ ಕ
ಬಿಗರದು ಮಾತನಾಡಿದವೊಲಂದವನಾಳ್ಳಿರೆ ಬಲ್ಪು ನೆ
ಟ್ಟಿಗೆ ದೊರೆಕೊಂಡುದಿಂತಿವನೊಳಲ್ಲದೆ ಕೇಳ್ ದೊರೆಕೊಳ್ಳದಾರೊಳಂ

ಎಂದು ತಮತಮಗೆ ಬಲ್ಲವ
ರೆಂದೊಡೆ ನಾನವರ ಬಯಕೆಯಂ ಸಲಿಸುವೆನಿ
ನೆ ದಚ್ಚಕನ್ನ ಡಂ ಬಿಗಿ
ವೊಂದಿರೆ ಕಬ್ಬಿಗರ ಕಾವನೊಲವಿಂದೊರೆದೆ೦

ಮುದ್ದಣ: ೧೮೬೯- ೧೯೦೧ ರಾಮಾಶ್ವಮೇಧ

 ಮುದ್ದಣಂ .. . ಇದು ಸಕ್ಕದದೊಂದು ಚೆಲ್ವು,
ಮನೋರಮ-ಲೇಸು, ಲೇಸು! ನೀರಿಳಿಯದ ಗಂಟಲೊಳ್ ಕಡುಬಂ ತುಜಕಿ
ದಂತಾಯ್ತು; ಕನ್ನಡದ ಸೊಗಸನಜಿಯಲಾರ್ತೆನಿಲ್ಲೆನಗೆ ಸಕ್ಕದದ
ಸೊಗಸಂ ಪೇೞ್ವುದು ಗಡ!
ಮುದ್ದಣಂ-ಅಪ್ರೊಡಿನ್ನೆಂತೊ ಒರೆವೆಂ?

ಮನೋರಮೆ-ತಿರುಳ್ಗನ್ನಡದ ಬೆಳ್ನುಡಿಯೊಳೆ ಪುರುಳೊಂದೆ ಪೇೞ್ವುದು.
ಕನ್ನಡಂ ಕತ್ತುರಿಯಲ್ತೆ!
ಮುದ್ದಣಂ-ಅಪ್ಪುದಪ್ಪುದು. ಆದೊಡಂ ಸಕ್ಕದಮೊಂದೆ ರನ್ನವಣಿಯಂ
ಪೊನ್ನಿ೦ ಬಿಗಿದಂತೆಸೆಗುಂ; ಅದರo ಕರ್ಮಣಿಸರದೊಳ್ ಚೆಂಬವಳಮಂ
ಕೋದಂತಿರೆ, ರಸಮೊಸರೆ, ಲಕ್ಕಣ೦ ಮಿಕ್ಕಿರೆ, ಎಡೆಯೆಡೆಯೊಳ್
ಸಕ್ಕದದ ನಲ್ಕುಡಿ ಮೆಱೆಯೆ, ತಿರುಳ್ಗನ್ನಡದೊಳೆ ಕತೆಯನುಸಿರ್ವೆ೦.

ಮಹಲಿಂಗರಂಗ: ಸು. ೧೭೦೦ ಅನುಭವಾಮೃತ

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊ ಳು ತನ್ನ ಮೋಕ್ಷವ
ಗಳಿಸಿಕೊಂಡರೆ ಸಾಲದೇ ಸಂಸ್ಕೃತದಲಿನ್ನೆನು ?



೨೩

III. ಕಾವ್ಯದ ತಿರುಳು

ನೃಪತುಂಗ

ಪಾಪಮಿದು ಪುಣ್ಯಮಿದು ಹಿತ
ರೂಪದಹಿತಪ್ರಕಾರಮಿದು ಸುಖಮಿದು ದುಃ
ಖೋಪಾತ್ತವಿದೆಂದಱಿಪುಗು
ಮಾ ಪರಮ ಕವಿಪ್ರಧಾನರಾ ಕಾವ್ಯಂಗಳ್

ಪಂಪ

ಪರಮ ಜಿನೇಂದ್ರ ವಾಣಿಯೆ ಸರಸ್ವತಿ ಬೇಱದು ಪೆಣ್ಣ ರೂಪಮಂ
ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ
ದರಿಸುವ ಭವ್ಯಕೋಟಿಗೆ ನಿರಂತರ ಸೌಖ್ಯಮನೀವುದಾನದ
ರ್ಕೆರೆದಪೆನಾ ಸರಸ್ವತಿಯ ಮಾೞ್ಕೆಮಗಿಲ್ಲಯೆ ವಾಗ್ವಿಳಾಸನಂ

ಇರು ಮರುಳೆ ಶುಷ್ಕ ವೈಯಾ
ಕರಣಂಗಂ ಶುಷ್ಕ ತಾರ್ಕಿಗಂಗಂ ಬೆಳ್ಳ
ಕರಿಗಂಗಂ ವಿಷಯವೆ ಕಾ
ವ್ಯರತ್ನ ಮತಿ ಚತುರ ಕವಿ ಕದಂಬಕ ವಿಷಯಂ

ಕವಿತೆಯೊಳಾಸಗೆಯ ಫಲವಾವುದೊ ಪೂಜೆ ನೆಗೞ್ತೆ ಲಾಭಮೆಂ
ಬಿವೆ ವಲವಿಂದ್ರ ಪೂಜೆ ಭುವನಸ್ತು ತಮಪ್ಪ ನೆಗೞ್ತೆ ಮುಕ್ತಿ ಸಂ
ಭವಿಸುವ ಲಾಭವೆಂಬಿವೆ ಜಿನೇ೦ದ್ರಗುಣಸ್ತುತಿಯಂದೆ ತಾಮೆ ಸಾ
ರವೆ ಪೆಱರೀವುದೇಂ ಪೆಱಱ ಮಾಡುವುದೇ ಪೆಱಱಿಂದಮಪ್ಪುದೇಂ

ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದೊಂದಿ ದೇಸಿಯೊಳ್
ಪುಗುವುದು ಪೊಕ್ಕು ಮಾರ್ಗದೊಳೆ ತಳ್ಳುದು ತಡೆ ಕಾವ್ಯಬಂಧಮೊ
ಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ಪೊಱೆಯಿಂ ಬುೞಲ್ದು ತುಂ
ಬಿಗಳಿನೆ ತುಂಬಿ ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್

ರನ್ನ ೯೯೩

ಕವಿಮಾರ್ಗದೊಳೊಳಪೊಕ್ಕುಂ
ನವರಸನಂ ತೆಱೆಯೆ ನುಡಿದನೆನಿಸಿದ ಕವಿ ಸ
ತೃ ವಿಯೆನಿಕುಂ ಗೂಡಾರದ
ಕವಿಯಂತಿರೆ ಮುಚ್ಚಿ ಪೋದ ಕವಿಯು೦ ಕವಿಯೇ



೨೪

ಸರಸತಿಯನಬಲೆಯಂ ಗೋಣ್
ಮುರಿಗೊಂಡರ್ಥಕ್ಕೆ ಕುದಿದು ನೋಯಿಸುವವನ
ಕೈರಿಗನೆ ಪಾತಕನಾತನೆ
ಸರಸ್ವತೀದ್ರೋಹನವನನಾರ್ ಮುಟ್ಟು ವರೋ

ಪೊಸ ದೇಸೆಯಂ ಬೆಡಂಗಂ
ರಸಘಟ್ಟಿಯನರ್ಥದೃಷ್ಟಿಯಂ ಬಗೆವರೊ ಭಾ
ವಿಸುವರೊ ಸಾರಣೆಯಂತಿರೆ
ಕಸಮಂ ಪಿಡಿವರ್ ಕೆಲರ್ ಮಹಾಪುರುಷ ರ್ಕಳ್

ನಯಸೇನ

ಮಳೆಯಿಲ್ಲದೆ ಪೊಯ್‌ನೀರಿಂ
ಬೆಳೆಗುಮೆ ಧರೆ ಮಱುಗಿ ಕುದಿದು ಶಾಸ್ತ್ರದ ಬಲದಿಂ
ದಳಿಸಿಂ ಪೇಳ್ದೊಡನದು ಕೋ
ಮಳಮಕ್ಕುಮೆ ಸಹಜಮಿಲ್ಲದಾತನ ಕಬ್ಬಂ

ನೇಮಿಚಂದ್ರ ಸು. ೧೧೭೦

ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿ ಸಂತತಿ ವಾಮನ ಕ್ರಮಂ
ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರನೊತ್ತಿ ಗಂಟಲಂ
ಮೆಟ್ಟುಗೆ ಮಟ್ಟದಿರ್ಕೆ ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್
ಮುಟ್ಟಿದರೊತ್ತಿ ಮೆಟ್ಟಿ ದರದೇನಳವಗ್ಗಳಮೋ ಕವೀಂದ್ರರಾ
ಬೆಲೆಯಿಂದಕ್ಕುಮೆ ಕೃತಿ ಗಾ
ವಿಲ ಭುವನದ ಭಾಗ್ಯದಿಂದಮಕ್ಕುಂ ನೋಳ್ಪಂ
ಬೆಲೆಗೊಟ್ಟು ತಾರ ಮಧುವಂ
ಮಲಯಾನಿಲನಂ ಮನೋಜನಂ ಕೌಮುದಿಯಂ

ಜನ್ಮ ೧೨೦೯- ೧೨೩೦

ಎನಿತನೊಱಲ್ದು ಪೇಳ್ವ ಕವಿಯೇ ವನದಂ ಪೆಸರಿಟ್ಟು ಮೆಚ್ಚ ಬ
ಲ್ಲನನಱಸಲ್ಕೆವೇಳ್ಪುದವನಂ ಜಗದೊಳ್ ಪಡೆಯಲ್ಕೆ ಬಾರದಾ
ತನ ಮುಖದಿಂದಮಲ್ಲದದು ಸಲ್ಲದು ಕಟ್ಟಿಯುಮೇನೊ ಮಾಲೆಗಾ
ಱನ ಪೊಸಬಾಸಿಗಂ, ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ

ಹರಿಹರ ಸು. ೧೨೦೦

ಹಱಿಗವಿಗಳ ಕಬ್ಬ೦ಗಳ
ಹೊಱಗಳಿಯಕ್ಕರದ ಹೊಲಿಗೆ ಬಿರ್ಚಿದೊಡೆಲ್ಲಂ
ಬಱಿ ತಾಱಿಗ ಬೀಱಿಗ ವೆ
ತ್ತಱ ತತ್ತಱ ವೆಕ್ಕಸಕ್ಕಮಸ್ತವ್ಯಸ್ತಂ

೨೫

ಕೇಳಲೊಡಂ ಕಿವಿ ಸವಿಯೊಳ
ಗಾಳದೊಡಂ ತನ್ಮನಂ ಮುಳುಂಗದೊಡಂ ಸೌ
ಖ್ಯಾಲಂಬಿಯೆನಿಪ ಚಿತ್ತಂ
ಲೀಲೆಯೊಳವಗಾಹಮಿರದೊಡದು ಸತ್ಕೃತಿಯೇ

ರಾಘವಾಂಕ (ರಾಘವ) ಸು. ೧೨೦೦

ನಡೆವರೆಡಹದೆ ಕುಳಿತರೆಡಹುವರೆ ಕಾವ್ಯಮಂ
ನಡಸುವಾತಂ ರಸಾವೇಶ ಮಹಾಲಸ್ಯ
ವಡೆಗೊಳಲು ತಪ್ಪುಗಲ್ಲದೆ ಕಾವ್ಯ ಕರ್ತೃ ತಪ್ಪುವನೆ ಒಂದೆರಡೆಡೆಯೊಳು
ಎಡವಾಯು ಬಂದ ತಪ್ಪ೦ ಹಿಡಿದು ಸಾಧಿಸದೆ
ಕಡೆತನಕ ಬಂದ ಲೇಸಿಂಗೆ ತಲೆದೂಗೆ ತಲೆ
ಯೊಡೆವುದೇ ಬೇನೆಯಜಯದ ನೀರಸರನೇಕೆ ಪುಟ್ಟಿಸಿದನಬುಜಭವನು

ರಸ ಜೀವ ಭಾವವೊಡಲರ್ಥವವಯವ ಶಬ್ದ
 ವಿಸರವೇ ನುಡಿಯಲ೦ಕಾರವೇ ತೊಡಿಗೆಯು ತ
ವೆ ಸುಲಕ್ಷಣವೆ ಲಕ್ಷಣ ವಿಮಳ ಪವನ್ಯಾಸ ನಡೆ ರೀತಿ ಸುಕುಮಾರತೆ
ರಸಿಕತನ ಸುಳಿ ಸುಖಂ ನಿಳಯವಂತಪ್ಪ ಈ
ಪೊಸ ಕಾವ್ಯ ಕನ್ನಿಕೆಯ ಪಡೆದು ಪಂಪಾಂಬಿಕೆಯ
ರಸ ವಿರೂಪಾಕ್ಷಂಗೆ ಕೊಟ್ಟು ಹಂಪೆಯ ರಾಘವಾಂಕನೇ೦ ಕೃತಕೃತ್ಯನೋ

ಚಾಮರಸ ಸು. ೧೪೩೦

ದೇಗುಲವೆ ಮಾತಾಡುವಂದದೊ
ಳಾಗಿರದೆ ಒಳಗಿರ್ದು ನುಡಿದಡೆ
ಲೋಗರಿಗೆ ಪ್ರತಿಶಬ್ದದಿಂದಾ ಪರಿಯಲೆಮ್ಮೊ ಳಗೆ
ಲಾಗಿನಿಂದಲಿ ಗುರುಗುಹೇಶ್ವರ
ನಾಗಳೆನ್ನ ನು ನುಡಿಸಿದಡೆ ನುಡಿ
ದಾಗುಮಾಡಿಯೆ ಪೇಳ್ವೆನೀ ಪ್ರಭುಲಿಂಗಲೀಲೆಯನು

ಬಾಯ ನುಡಿಗಳ ಕೇಳಿ ಕಿವಿಯೊಳ
ಗಾಯೆನುತ ಪರಿಣಮಿಸಿ ಹೋಹ ವಿ
ಡಾಯವಲ್ಲಿದು ತಮ್ಮ ತನು ಮನ ಧನವನೆಲ್ಲವನು
ಬೀ ಯಮಾಡಿಯೆ ಲಿಂಗದಲಿ ನಿಜ
ಕಾಯ ನಿಲುವಡೆ ನಿತ್ಯರಸ್ಪಡೆ
ದಾಯಿಗರು ಲಾಲಿಸುವುದೀ ಪ್ರಭುಲಿಂಗಲೀಲೆಯನು

೨೬

ಕುಱಿಗಳೋಪಾದಿಯಲಿ ಕಬ್ಬಿನ
ಹೊಱಗಣೆಲೆಯನು ಮೇದಕಟ ಮೇಲು
ಕಿಱಿವುತಲ್ಪ ಸುಖಕ್ಕೆ ಸೋಲದೆ ಕಬ್ಬಿನೊಳು ರಸವ
ನೆಱೆತೆ ಸವಿವ ಗಜದಂತೆ ಭಕ್ತಿಯ
ತೆಱನ ತಿಳಿದಾಚರಿಸಬೇಕೆಂ
ದಱಿವವರು ಲಾಲಿಸುವುದೀ ಪ್ರಭುಲಿಂಗಲೀಲೆಯನು

ಸರ್ವಜ್ಞ

ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು – ಬಲವಿಲ್ಲ ಸಾಹಿತ್ಯ
ವೆಲ್ಲರಿಗಿಲ್ಲ ಸರ್ವಜ್ಞ

<poem> ಹೇಳಿದ್ದೆ ಹೇಳುವರು ಕೇಳಿದ್ದೆ ಕೇಳುವರು
ಕೇಳಿದ್ದೆ ಕೇಳಿ- ಸುಖಿಸುವರು ಹಿರಿಯರ
ಹೇಳಿಕೆಯೆ ಬೇರೆ ಸರ್ವಜ್ಞ

೨೭

IV• ನಮ್ಮ ಕವಿಗಳ ಹೆಮ್ಮೆ

ರನ್ನ

ಬೆಳುಗಲಿಯಯ್ನೂಱಱೊಳ
ಗೃಳಮನಿಸುವ ಜಂಬುಖಂಡಿಯೆೞ್ಪತ್ತರ್ಕಂ
ತಿಳಕವೆನೆ ನೆಗೞ್ದ ಮುದುವೊೞ
ಲೋಳೆ ಪುಟ್ಟಿ ಸುಪುತ್ರನೆನಿಸಿದಂ ಕವಿರತ್ನಂ

ವಸುಧೆಯೊಳಗೊಂದು ರತ್ನ ಮಿ
ದೆಸದಿರ್ದುದು ಸಲವು ರತ್ನ ವಿಲ್ಲೆಂಬಿನಮೇಂ
ಮಸುಳಿಸಿದನೊ ಬಹುರತ್ನಾ
ವಸುಂಧರಾಯೆಂಬ ವಾಕ್ಯಮಂ ಕವಿರತ್ನಂ

ನೆಗಬ್ಬ ಕವಿರತ್ನ ನಂತೊಳ
ಪುಗುವುದು ಮೊಗ್ಯಾ ಹೈ ಜಿನಮತಾಂಬೋಧಿಯುಮಂ
ಪುಗದಾಗಮಮಅವರ ಬಗೆ
ವುಗದೆ ಕೆಲರ್ ಕವಿಗಳಾಡಿದರ್ ತಡಿದಡಿಯೊಳ್

ಪಡೆಯೆಡೆಯ ಕಡೆಯ ಬಡವರ್
ಕುಡೆ ಪಡೆದನೋ ಚಕ್ರವರ್ತಿಯೊಳ್ ತೆಲಸನೋಳ್
ಪಡೆವಂ ಮಹಿಮೋನ್ನತಿಯಂ
ಪಡೆದಂ ಕವಿಚಕ್ರವರ್ತಿವೆಸರಂ ರನ್ನಂ

ಆರಾತೀಯ ಕವೀಶ್ವರ
ರಾರುಂ ಮುನ್ನಾ ರ್ತರಿಲ್ಲ ನಾಗೇವಿಯ ಭಂ
ಡಾರದ ಮುದ್ರೆಯನೊಡೆದಂ
ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ

ಕನ್ನಡಮೆರಡಱುನೂಱಱ
ಕನ್ನಡಮಾ ತಿರುಳ ಕನ್ನಡಂ ಮಧುರಮ್ಮೊ
ತ್ಪನ್ನ೦ ಸಂಸ್ಯತಮೆನೆ ಸಂ
ಪನ್ನ೦ ನೆಗೞ್ದು ಭಯಕವಿತೆಯೊಳ್ ಕವಿರನ್ನಂ

ರತ್ನ ಪರೀಕ್ಷಕನಾಂ ಕೃತಿ
ರತ್ನ ಪರೀಕ್ಷಕನೆಂದು ಫಣಿಪತಿಯ ಫಣಾ
ರತ್ನ ಮುಮಂ ರನ್ನನ ಕೃತಿ
ರತ್ನ ಮುಮಂ ಪೇೞ್ ಪರೀಕ್ಷಿಪಂಗೆಂಟೆರ್ದೆಯೇ

೨೮

ಷಡಕ್ಷರಿ ೧೬೫೩

ಧರೆಯೊಳ್ ಮೇಣ್ ಪುಟ್ಟ ಪುಟ್ಟು ತ್ತುರುಳ್ವ ನಗರಮೇಲುರ್ಬಿ ಕಬ್ಬಂಗಳಂ ಬಿ
ತ್ತರಿಸುತ್ತುಂ ಸಪ್ರಯಾಸಂ ಕೆಲ ಕೆಲರಕಟಾ ಕಬ್ಬಿಗರ್ ಕೆಟ್ಟು ಪೋದರ್
ಹರಿದೇವಂ ದೇವದೇವೋತ್ತಮನ ಶರಣರಂ ಪಾಡಿ ಕೈವಲ್ಯ ಲಕ್ಷ್ಮಿ
ವರನಾದಂ ಮತ್ತವಂಗತ್ಯಧಿಕ ಶಿವಕವೀ೦ದ್ರ೦ಗದಾರ್ ಸಾಟಿಯಪ್ಪರ್

ರಸೆಯೊಳ್ ರಸವತ್ಯವಿತೆಯ
ನುಸಿರಲ್ ಪಡೆದಸಮನಯನನಂ ಪೊಗಳದೆ ನಾ
ನಿಸರ೦ ಸುರರಂ ಪೊಗಳ್ಳುದು
ಕಸವರಮಂ ಕಳೆದು ಕಸವನಾಂತವೊಲಕ್ಕುಂ

ಅದರಿಂದೆ ಮಹಿತ ಮಹಿಮಾ
ಸ್ಪದನಂ ಶಿವನಂ ತದೀಯ ಶರಣವ್ರಜನಂ
ಪದೆಮ ಮುಮೋದನವೆ ಬಲ್ಲ೦
ದದೆ ನುತಿ ಪೆಂ ನುತಿಸೆನುಳಿದ ಸುರರಂ ನರರಂ

ಆರಾರೇರರ್ ಶಾಸ್ತ್ರ
ಶ್ರೀರೋಹಣಗಿರಿಯನಲ್ಲಿ ನವಕವಿತಾ ಚಿಂ
ತಾರತ್ನ೦ ದೊರೆಗುಮೆ ಮಾ
ರಾರಿಯ ಕೃಪೆಯಿಲ್ಲದಂಗೆ ಧರಣೀತಳದೊಳ್

ಕುಮಾರವ್ಯಾಸ ಸು. ೧೪೩೦

ಶ್ರೀ ವನಿತೆಯರಸನೆ ವಿಮಲ ರಾ
ಜೀವಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ
ರಾವಣಾಸುರಮಥನ ಶ್ರವಣಸು
ಧಾ ವಿನೂತನ ಕಥನಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ

ವೀರನಾರಾಯಣನೆ ಕವಿ ಲಿಪಿ
ಕಾರ ಕುವರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು
ಚಾರು ಕವಿತೆಯ ಬಳಕೆಯಲ್ಲಿ ವಿ
ಚಾರಿಸುವೊಡಳವಲ್ಲ ಚಿತ್ರವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನ ಪವ



ಗದುಗಿನ ಶ್ರೀ ವೀರನಾರಾಯಣ ಸ್ವಾಮಿ

ಹಲಗೆ ಬಳಪವ ಹಿಡಿಯದೊಂದ
ಗ್ಗಳಿಕೆ ಪದವಿಟ್ಟಳಿಸದೊಂದ
ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ಉಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ

ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ
ಶ್ವರರ ತತ್ತ್ವವಿಚಾರ ಮಂತ್ರಿ ಜನಕ್ಕೆ ಬುದ್ದಿ ಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲ೦ಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ

ಲಕ್ಷ್ಮೀಶ ಸು. ೧೭೦೦

ಶ್ರೀ ವಧುವಿನ೦ಬಕಚಕೋರಕಂ ಪೊರೆಯೆ ಭ
ಕ್ತಾವಳಿಯ ಹೃತ್ಕುಮುದಕೊರಕಂ ಬಿರಿಯೆ ಜಗ
ತೀವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆಗರಿಯೆ
ಆವಗಂ ಸರಸ ಕರುಣಾಮೃತದ ಕಳೆಗಳಿ೦
ತೀನಿದೆಳನಗೆಯ ಬೆ೦ಗಳ೦ ಪಸರಿಸುವ
ದೇವಪುರ ಲಕ್ಷ್ಮಿ ರಮಣನಾಸ್ಯಚಂದ್ರನಾನಂದನಂ ನಮಗೀಯಲಿ

ಕೆನೆವಾಲ ಕಡೆದು ನವನೀತನಂ ತೆಗೆದು ಬಾ
ಯ್ಗಿನಿದಾಗಿ ಸವಿಯದವರೊಳಗೆ ಪುಳಿವಿಳಿದು ರಸ
ವನೆ ಕಿಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳ್ದು ಮಥಿಸಿ
ಜನಿಸಿದ ಪದಾರ್ಥಮಂ ತಿಳಿದು ನೋಡದೆ ವಿನೂ
ತನ ಕವಿತೆಯೆಂದು ಕುಂದಿಟ್ಟು, ಜರೆದೊಡೆ ಪೇಳ್ದ
ವನೊಳಾವುದೂಣೆಯಂ ಜಾಣರಿದನರಿದು ಮತ್ಸರವನುಳಿದಾಲಿಸುವುದು

ಜಾಣರಂ ತಲೆದೂಗಿಸದೆ ನುಡಿದೊಡಾ ಪದ
ಕ್ಕೂಣೆಯಂ ಬಹುದೆಂದು ಸರಸೋಕ್ತಿಯಂದೆ ಗೀ
ರ್ವಾಣಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಾ ನಿಪುಣನು
ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ
ವಾಣಿಯಿಂ ಕವಿತೆಯಂ ಪೇಳಿಸಿದನೆಂದರಿದು
ಕೇಣಮಂ ತೊರೆದು ಪುರುಡಿಸುವರಂ ಜರೆದು ಕಿವಿದೆರೆದು ಕೇಳುದು ಸುಜನರು

೩೦

ಪುಣ್ಯ ಮಿದು ಕೃಷ್ಣ ಚರಿತಾಮೃತಂ ಸುಕವೀಂದ್ರ
ಗಣ್ಯಮಿದು ಶೃ೦ಗಾರ ಕುಸುಮತರು ತುರುಗಿದಾ
ರಣ್ಯಮಿದು ನವರಸ ಪ್ರೌಢಿ ಲಾಲಿತ್ಯ ನಾನಾ ವಿಚಿತ್ರಾರ್ಥಂಗಳ
ಗಣ್ಯಮಿದು ಶಾರದೆಯ ಸಮ್ಮೋಹನಾಂಗ ಲಾ
ವಣ್ಯಮಿದು ಭಾವಕರ ಕಿವಿಗೊಡವಿಗೊದಗಿದ ಹಿ
ರಣ್ಯಮಿದು ಭೂತಳದೊಳೆನೆ ವಿರಾಜಿಪುದು ಲಕ್ಷ್ಮೀ ಪತಿಯ ಕಾವ್ಯ ರಚನೆ

ರತ್ನಾಕರ

ಕಬ್ಬಿಗರೋದು ಗಬ್ಬನ ಹಾಡುಗಬ್ಬವ
ಕಬ್ಬದೊಳೊರೆವರಿವೆರಡು
ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ
ಕಬ್ಬ ಹೇಳೆಲೆ ಸರಸ್ವತಿಯೆ

ಅಯ್ಯಯ್ಯಾ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚದಿಯೆನೆ ತೆಲುಗ
ಅಯ್ಯಯ್ಯ ಎಂಚಪೊರ್ಲಾ೦ಡೆ೦ದು ತುಳುವರು
ಮೆಯ್ಯುಬ್ಬಿ ಕೇಳಬೇಕಣ್ಣಾ

ರಳಕುಳ ಶಿಥಿಲ ಸಮಾಸ ಮು೦ತಾದವ
ರೊಳಗಿಲ್ಲಿ ಕೆಲವುಳ್ಳ ರುಂಟು
ಕೆಲವಿಲ್ಲಾದರು ಇಲ್ಲವೇಕೆ೦ದರವರ ಕೋ
ಟಲೆಯೇಕೆ ಹಾಡುಗಬ್ಬದೊಳು

ಸಕಲ ಲಕ್ಷಣವು ವಸ್ತುಕಕೆ ವರ್ಣಕಕಿಷ್ಟು
ವಿಕಳವಾದರು ದೋಷವಿಲ್ಲ
ಸಕಲ ಲಕ್ಷಣಕಾಗಿ ಬಿರುಸುಮಾಡಿದರೆ ಪು
ಸ್ತಕದ ಬದನೆಕಾಯಹುದು

೩೧

V. ಕನ್ನಡಿಗರುಸಿರು, ಕಣ್ಣು

೧. ಪಂಪ : ಜಿನಸ್ತುತಿ

ತ್ರಿದಶೇ೦ದ್ರಮೌಳಿ ಮಣಿ ಶೋ
ಣದೀಪ್ತಿಗಳ್ ಪುದಿದು ಪೊಳೆವಲಕ್ತಕ ರಸದಿಂ
ಪುದಿದಂತೊಪ್ಪಿರ್ಪರ್ಹ
ತ್ಪಗಳೆಮಗೀಗೆ ತಡೆಯದರ್ಹತ್ಪದಮಂ

ಭುವನೇಶ್ವರ ನಿಜರೂಪ
ಸ್ತವ ವಸ್ತುಸ್ತವ ಗುಣಸ್ತವಂಗಳನವಱಂ
ತುವರಂ ಬಣ್ಣಿಸಲಮರೇ೦
ದ್ರ ವಾಸುಕಿ ಪ್ರಭುಗರಾರ್ತರಿಲ್ಲೆನ್ನಳವೇ

ಅಳತೆಗೆ ತೂಕಕ್ಕಣಿಕೆಗೆ
ಒಳಗಾಗುವ ಸಕಳವಸ್ತುಗಳ್ ಭುವನಜನ
ಕ್ಕಳೆಯುಲ್ ತೂಗಲ್ಕೆಣಿಸ
ಲ್ಕಳುಂಬವೆನಿಸಿದುವು ನಿನ್ನ ಗುಣಗಣಮಾರ್ಹಾ

ತನ್ನಿರ್ದೆಡೆಯದೆ ಮೇರುವಿ
ನುನ್ನತಿ ಜಳನಿಧಿಯ ಗುಣ್ಪು ನಭದ ವಿಭುತ್ವಂ
ನಿನ್ನ ಗುಣೋನ್ನತಿ ಸಕಳ ಜ
ಗನ್ನುತ ಭುವನಾಂತರಾಳಮಂ ಪರ್ಬಿರ್ಕುಂ

ಆಕುನೆನಾಗಿ ಸುೞಿದೆನ
ನಾಕುಳಮಪ್ಪೆಡೆಯನಱಿಸಿ ಕಾಣೆ೦ ಮೂಱುಂ
ಲೋಕದೊಳಂ ನಿನ್ನಿರ್ಕೆಯೆ
ಲೋಕಾಗ್ರಮೆ ಸಂತಮದನೆ ಮಾಡೆನಗರ್ಹಾ

ಭವನಿಗಳದ ತೊಡರಂ ಕಳೆ
ಭವಜಳಧಿಯ ತಡಿಗೆ ಸಾರ್ಚು ಭವಗಹನದುಪ
ದ್ರವಮಂ ಕಿಡಿಸು ಭವಾಂತಕ
ಭವನಕ್ಕುಯ್ ತಡೆಯದೆನ್ನ ನೀ೦ ಭವಮಥನಾ

ಮರಣದ ಜನ್ಮದ ನಿಗಳ೦
ನಿರಾಕುಳಂ ಪತ್ತುವಿಡುವಿನಂ ಜಿನ ನಿನ್ನಂ
ಸ್ಮರಿಯಿಪುದನಣೋರಣ್ವಂ
ತರವ್ಯತಿಕ್ರಮಣ ಮಾತ್ರಮಂ ಮಱೆದಪನೇ

ತಿಳಕಂ ವಶ್ಯ ಮೆ ಜಡಜನ
ಮೊಳಗಜಿಯದು ಸಕಳ ಭವ್ಯ
ತಿಳಕ೦ಗೆ ಜಗ ತಿಳಕ ಭವತ್ವದ ಚಂದನ
ತಿಳಕಂ ತೈಲೋಕ್ಯವಶ್ಯಮಕ್ಕು ಮವಶ್ಯಂ

ಅಮರೇಂದ್ರೋನ್ನತಿ ಖೇಚರೇ೦ದ್ರ ವಿಭವಂ ಭೋಗೀಂದ್ರಭೋಗಂ ಮಹೇಂ
ದ್ರ ಮಹೈಶ್ವರ್ಯಮೀವೆಲ್ಲ ಮಧುವಮಿವಂ ಬೇ೦ತು ಬೆಳ್ಳಲ್ಲೆನು
ತಮ ದೀಕ್ಷಾವಿಧಿಯುಂ ಸಮಾಧಿ ಮರಣಂ ಕರ್ಮಕ್ಷಯಂ ಬೋಧಿಲಾ
ಭಮಮೋಘಂ ದೊರೆಕೊಳ್ಳುದಕ್ಕೆಮಗೆ ಮುಕ್ತಿಶ್ರೀ ಮನೋವಲ್ಲ ಭಾ

೨. ನಾಗಚಂದ್ರ: ಸು. ೧೧೧೦ ಜಿನಸ್ತುತಿ

ಜಯ ಜಿತವೃಜಿನ ಜಿನೇಶ್ವರ
ದಯಾನದೀ ಪುಳಿನ ರಾಜಹಂಸ ಭವಾಂಭೋ
ಧಿಯ ತಡಿಯನೆಯೇ ಸೆಮ್ಮ
ನಯ ನಿಕ್ಷೇಪ ಪ್ರಮಾಣ ಪಾತ್ರದಿನರುಹಾ

ನೇವಾಳವೆಂದು ಕೆಲಬರ್
ಪಾವಂ ಸಿಡಿವಂತೆ ದೇವ ನೀನಲ್ಲದರಂ
ದೇವರಿವರೆಂದು ಸಿಡಿದಿ
ನ್ನೇವಿಧಿವಟ್ಟ ಪರೊ ಮೋಹನೋರ್ಛೆಯನರುಹಾ

ನಿನಗೆ ರಸದೊಂದೆ ಶಾಂತವೆ
ಜಿನೇ೦ದ್ರ ಮನಮಾ ರಸಾ೦ಬನಿಧಿಯೊಳಗವಗಾ
ಹನಮಿರ್ದು ಮಿಕ್ಕ ರಸಮಂ
ಕನಸಿನೊಳಂ ನೆನೆಯದಂತು ಮಾಡೆಮಗರುಹಾ

ಮಣಿಭೂಷಣ ಭರದಿಂ ತನು
ಕಿಣಮಪುದದೇಕೆ ನಿನ್ನ ನಿರ್ಮಲ ಗುಣ ಭೂ
ಷಣಮಂ ದಯೆಗೆ ಪಡೆವೆಂ
ಪ್ರಣಯಮನಪವರ್ಗ ಲಕ್ಷ್ಮಿಗದe೦ದರುಹಾ

ಸಿ೦ಗದ ಮಾರ್ದನಿ ಮದಮಾ
ತಂಗಮನಳಿಱಿಸುವವೋಲ್ ನಿಜಪ್ರತಿಬಿಂಬಂ
ಪಿಂಗದೆ ಮನದೊಳ್ ನಿ೦ದಿರೆ
ಪಿಂಗಿಸುವುದು ಜನನ ಮರಣ ದುಃಖವನರುಹಾ

alt= ಶ್ರವಣಬೆಳದ ಶ್ರೀ ಗೊಮ್ಮಟೇಶ್ವರ

ಶ್ರವಣಬೆಳದ ಶ್ರೀ ಗೊಮ್ಮಟೇಶ್ವರ



ಮೆಚ್ಚೆ ಗಡ ಮುಳಿಯೆ ಗಡ ಬಗೆ
ಬೆಚ್ಚಿರೆ ಬೇಱಾಗೆ ನಿನ್ನ ಪದದೊಳ್ ಮನುಜಂ
ಗುಚ್ಛಗತಿ ನೀಚಗತಿವಡೆ
ವಚ್ಚರಿ ಕಣ್ದೆಱೆವ ತೆಱನನಱಿಪೆನುಗರುಹಾ

ಜ್ಯಾಯಂಗೆ ನೀನೆ ವಲಮಾ
ದೇಯಂ ನೀನಲ್ಲ ವನ್ಯ ವಸ್ತುಗಳೆಲ್ಲಂ
ಹೇಯಂಗಳೆಂಬ ತತ್ವೋ
ಸಾಯಮನೆಮಗೀವುದೇ ವೆವುಳಿದುವನರುಹಾ

ನಿತ್ಯಸುಖಮಾತ್ಮರೂಪನು
ನಿತ್ಯ ಸುಖಂ ಮೋಹರೂಪವೆಂಬ ವಿವೇಕಂ
ಸತ್ಯಸ್ವರೂಪಮದಱೊಳ
ಗತ್ಯ೦ತಾನುಭವ ವಿಭವನಕ್ಕೆಮಗರುಹಾ

೩. ಬೊಪ್ಪಣ: ಸು. ೧೧೮೦ ಗೊಮ್ಮಟನ ಸ್ತುತಿ

 ಶ್ರೀ ಗೊಮ್ಮಟ ಜಿನನ ನರ
ನಾಗಾಮರ ದಿತಿಜ ಖಚರಪತಿ ಪೂಜಿತನಂ
ಯೋಗಾಗ್ನಿಹತಸ್ಮರನಂ
ಯೋಗಿಧ್ಯೇ ಯನನನಯನಂ ಸ್ತುತಿಸುವೆಂ

ಕ್ರಮದಿಂ ಮೆಯ್ಯೋಣರ್ದಾದಕ್ರ ಮವೆ ಮಾತಂ ಬಿಟ್ಟು ತನ್ನಿಟ್ಟ
ಚ ಕ್ರಮದಂ ನಿಃಪ್ರಭಮಾಗೆ ಸಿಗೃನೊಳಕೊಂಡಾತ್ಮಾಗ್ರಸಂಗೊಳ್ಪುಗೆ
ಯ್ದು ಮಹೀರಾಜ್ಯಮನಿತ್ತು ಪೋಗಿ ತಪದಿಂ ಕರ್ಮಾರಿ ವಿಧ್ವಂಸಿಯಾ
ದ ಮಹಾತ್ಮ೦ ಪುರುಸೂನು ಬಾಹುಬಲಿ ವೋಲ್ ಮತ್ತಾರೊ ಮಾನೋನ್ನತರ್

ಶ್ರುತಮುಂ ದರ್ಶನಶುದ್ದಿ ಯುಂ ವಿಭವಮುಂ ಸದ್ವೃತ್ತ ಮುಂ ದಾನಮು೦
ಧೃತಿಯು೦ ತನ್ನೊಳೆ ಸಂದ ಗಂಗಕುಳ ಚಂದ್ರಂ ರಾಚಮಲ್ಲಂ ಜಗ
ನ್ನುತನಾ ಭೂಮಿ ಸನದ್ವಿತೀಯವಿಭವಂ ಚಾವುಂಡರಾಯಂ ಮನು
ಪ್ರತಿಮಂ ಗೊಮ್ಮಟಲ್ತೆ ಮಾಡಿಸಿದನಿಂತೀ ದೇವನಂ ಯತ್ರದಿಂ

ಅತಿತುಂಗಾಕೃತಿಯಾದೊಡಾಗದದಱೊಳ್ ಸೌ೦ದರ್ಯವನ್ನ ತ್ಯಮು೦
ನುತ ಸೌಂದರ್ಯಮುಮಾಗೆ ಮತ್ತತಿಶಯಂ ತಾನಾಗದೌನ್ನತ್ಯಮು೦
ನುತ ಸೌಂದರ್ಯಮುಮೂರ್ಜಿತಾತಿಶಯಮುಂ ತನ್ನಲ್ಲಿ ನಿಂದಿರ್ದುವೇ೦
ಕ್ಷಿತಿಸಂಪೂಜ್ಯಮೊ ಗೊಮ್ಮಟೇಶ್ವರ ಜಿನ ಶ್ರೀರೂಪಮಾತ್ಮೋಪಮಂ

ಅನುಪಮರೂಪನೇ ಸ್ಮರನುದಗ್ರನೆ ನಿರ್ಜಿತ ಚಕ್ರಿ ಮತ್ತುದಾ
ರನೆ ನೆಱೆ ಗೆಲ್ದುಮಿತ್ತನಖಿಳೊರ್ವಿಯನತ್ಯಭಿಮಾನಿಯೇ ತಪಃ
ಸ್ಟನುಮೆರಡಂಘ್ರಯಿತ್ತೆಳೆಯೊಳಿರ್ದಪುದೆಂಬನನೂನಬೋಧನೇ
ವಿನಿಹತ ಕರ್ಮಬಂಧನೆನೆ ಬಾಹುಬಲೀಶನಿದೇನುದುತ್ತಾನೋ

ಅಭಿಮಾನ ಸ್ಥಿರಭಾವಮಂ ನಮಗೆ ಮಾೞ್ಕೆತ್ಯುದ್ಘಮಾನೋನ್ನತಂ
ಶುಭ ಸೌಭಾಗ್ಯ ಮನಂಗಜಂ ಭುಜಬಳಾವಷ್ಟಂಭಮಂ ಚಕ್ರವ
ರ್ತಿ ಭುಜಾದರ್ಪವಿಲೋಸಿ ಬಾಹುಬಲಿ ತೃಷ್ಣಾಚ್ಛೇದಮಂ ಮುಕ್ತ ರಾ
ಜ್ಯಭರಂ ಮುಕ್ತಿಯನಾಪ್ತ ನಿರ್ವೃತಿಪದಂ ಶ್ರೀ ಗೊಮ್ಮಟೇಶಂ ಜಿನಂ

ಕೆಮ್ಮಗಿದೇಕೆ ನಾಡ ಪಲವಂದದ ನಂದಿದ ಬಿಂದಿಗರ್ಕಳ೦
ನೀ೦ ಮರುಳಾಗಿ ದೇವರಿವರೆಂದವರಂ ಮತಿಗೆಟ್ಟು ನಿನ್ನನೇ
ಕಮ್ಮ ತೊಳಲ್ಚಿದಪ್ಪೆ ಭವಕಾನನದೊಳ್ ಪರಮಾತ್ಮರೂಪನಂ
ಗೊಮ್ಮಟದೇವನಂ ನೆನೆಯ ನೀಗುವೆ ಜಾತಿ ಜರಾದಿ ದುಃಖಮಂ

ಸಮ್ಮದನಾಗಲಾಗ ಕೊಲೆಯುಂ ಪುಸಿಯುಂ ಕಳವುಂ ಪರಾಂಗನಾ
ಸಮ್ಮತಿಯುಂ ಪರಿಗ್ರಹದ ಕಾಂಕ್ಷೆಯುಮೆ೦ಬವಱಿ೦ದವಾದೊಡೆ೦
ದುಂ ಮನುಜಂಗಿಹತ್ರೆಯ ಪರತ್ರೆಯ ಕೇಡೆನುತುಂ ಮಹೋಚ್ಛದೊಳ್
ಗೊಮ್ಮಟದೇವನಿರ್ದು ಸಲೆ ಸಾಱುವವೋಲೆಸೆದಿರ್ದನೀಕ್ಷಿಸೈ

ಕಮ್ಮಿದುವಪ್ಪ ಕಾಡ ಪೊಸವೂಗಳಿನರ್ಚಿಸಿ ಪಾದಪದ್ಮಮಂ
ಸಮ್ಮದದಿಂದೆ ನೋಡಿ ಭವದಾಕೃತಿಯಂ ಬಲಗೊಂಡು ಬಲ್ಲ ಪಾಂ
ಗಿಂ ಮನವೊಲ್ದು ಕೀರ್ತಿಪವರೇ೦ ಕೃತಕೃತ್ಯರೊ ಶಕ್ರನಂದದಿಂ
ಗೊಮ್ಮಟದೇವ ನಿನ್ನ ನಜ ದರ್ಚಿಸುತಿ ರ್ಪವರೇ೦ ಕೃತಾರ್ಥರೋ

ಮನದಿಂ ನುಡಿಯಿಂ ತನುವಿಂ
ದೆನಸು ಮುನ್ನೆ ಆಸಿದಘಮನ ಸೆನೆಂಬೀ
ಮನದಿಂದಮೊಸೆದು ಗೊಮ್ಮಟ
ಜಿನನಂ ಸ್ತುತಿಸಿದನಿಂತು ಸುಜನೋತ್ತಂಸಂ

ಪೊಡವಿಗೆ ಸಂದ ಗೊಮ್ಮಟ ಜಿನೇಂದ್ರ ಗುಣಸ್ತವ ಶಾಸನಕ್ಕೆ ಕ
ನ್ನಡಗವಿ ಬಪ್ಪನೆಂದೆನಿಪ ಬೊಪ್ಪಣಪಂಡಿತನೊಲ್ಕು ಪೇೞ್ದುವಂ
ಕಡೆಯಿಸಿದಂ ಬಲಂ ಕವಡಮಯ್ಯನ ದೇವಣನೞ್ತಿಯಿ೦ದೆ ಬಾ
ಗಡಿಗೆಯ ರುದ್ರನಾದರದೆ ಮಾಡಿಸಿದಂ ವಿಳಸತ್ ಪ್ರತಿಷ್ಠೆಯಂ

೪.ರನ್ನ: ವೈರಾಗ್ಯ

ತನಗೆಲ್ಲದೊಡಲ್ಗೊಡಮೆಗೆ
ಮನವಿಟ್ಟ ಪವರ್ಗಮಾರ್ಗಮಂ ಪೊರ್ದದೆ ತ
ನ್ನನೆ ತಾನೆ ನಂಬಿಸುವೊಡಾ
ತ್ಮನಂತು ಪೇೞಾತ್ಮವಂಚಕರ್ ಪೆಱರೊಳರೇ?

ಸಾರದ ಸಾರಮಪ್ಪ ಜಿನಧರ್ಮವನಾತ್ಮನಸಾರನಪ್ಪು ದಂ
ಸಾರವಿದೆಂದು ನಂಬಿ ತನಗಲ್ಲ ದುದಂ ತನಗಪ್ಪುದೆಂದು ಕೇ
ವಾರ ವಿಹಾರ ಸೋದರ ಕೃಶೋಈದರ ಸುಂದರ ದಾರ ದಾರಕೋ
ದಾರ ವಿಮೋಹದೊಳ್ ತೊಡರ್ದು ದಾರುಣ ದುಃಖಮನೆಯ್ಪದಿರ್ಕುಮೇ?

ಮುನಿದುಯ್ವ, ಜನಂಗಂ ಮಾ
ಯೆನಣುವರಿಲ್ಲ ಬಗೆಯೆ ನಿನಗಿನ್ನಾ ರ್ಮ೦
ಜಿನಧರ್ಮಮೊಂದೆ ಜೀವನೆ
ನೆನೆ ಗಡ ಲೋಕತ್ರಯಕ್ಕೆ ದಿನನಂ ಜಿನನಂ!

ಮತಿಗೆಟ್ಟು ಜೀವ ಧರ್ಮಾ
ಮೃತಮಂ ಸೇವಿಸದಧರ್ಮಮಂ ಸೇವಿಸಿ ದು
ರ್ಗತಿ ಗಿದೀ ಜನನೆಂಬಱ
ಸಿ ತಿ೦ಬ ವೈವಕ್ಕೆ ಪೋಗಿ ಪಾಟಿ೦ ಬಿಡುವಯ್!

ಎನಿತೆನಿತು ಕ೨೨ ದ ಭವಮಂ
ನೆನದಪೆ! ಎನಿತೆನಿತು ಭವದ ಬಂಧುಗಳ೦ ನೀಂ
ನೆನೆದಪೆ! ಎನಿತೆನಿತೊಡಲಂ
ನೆನೆದಪೆ! ಎಲೆ ಜೀವ ನೀನೆ ಪೇೞ್ ಸವಣೋಳವೇ?

ಎನಿತಂ ಕುಕ್ಕುದಿಗುದಿದಪೆ ?
ಎನಿತಂ ಕಕ್ಕೞಗೞ್ದಲ್ಲಪಯ್ ? ಜೀವನೆ ನೀ
ನೆನಿತಂ ಮಲ ಮಱುಗುವೆ ?
ಎನಿತಂ ಸಂಸಾರದೊಳಗೆ ತಿಱ್ರನೆ ತಿರಿವಯ್ ?

ಕಡೆಯಿಲ್ಲದ ಸಂಸಾರದ
ಕಡೆಗಾಣಲ್ ಬಗೆವೆಯಪ್ಪೊಡೆನ್ನು ಕ್ತಿಗೊಂಡಂ
ಬಡು ಜೀವ ನಿನ್ನ೦ ಕಾಲಂ
ಪಿಡಿವೆಂ ಧರ್ಮಮನೆ ಮಗುಚಿ ಬಿಡಿಬಿಡಿಯಾ

ಜನನ ಮೃತಿ ದೇವ ನಾರಕ
ಮನುಷ್ಯ ತಿರ್ಯಗ್ವಿ ಕಲ್ಪಗತಿಗಳೊಳೆನಸುಂ
ನಿನಗೆ ಸುಖವಿಲ್ಲ ನೆಟ್ಟನೆ
ಮನದೊಳ್ ಭಾವಿಪೊಡಸಾರಮೀ ಸಂಸಾರಂ

ಈ ನಾರಕ ತಿರ್ಯಗ್ಗತಿ
ಗೀ ನರ ಸುರ ಗತಿಗೆ ಪೇಸಿದೆಂ ದರ್ಶನದಿಂ
ಜ್ಞಾನದಿನೊಪ್ಪುವ ಪರಮ
ಸ್ಥಾನಮನಾಂ ಪಡೆವೆನಕ್ಕೆ ಪಂಚನಗತಿಯಂ

ಶಿಷ್ಟ ಜನಾಶ್ಲಿಷ್ಟಂ ಬಹು
ಕಷ್ಟಂ ಬಹು ದುಷ್ಟ ಮಷ್ಟ ಕರ್ಮಾಗ್ನಿ ಪರಿ
ಪ್ಲುಷ್ಟಂ ಹಾ ಹಾ ಧಿಕ್ ಚಿಃ
ಕಷ್ಟ ಮವಶ್ಯಂ ನಿಕೃಷ್ಟ ಮಿಾ ಸಂಸಾರಂ

ದಿವಸ ದಿವಸಂಗಳಿಂ ಕುಂ
ದುವುವಲ್ಲದೆ ಬಳೆಯನಾಯುವುಂ ವಪುವುಂ ಪೆ
ರ್ಚುವುವಲ್ಲವು ವಿಷಯಸುಖ
ಕ್ಕವಚತ್ತೆಂ ಪಡೆದುಕೊಳ್ಳೆನಕ್ಷಯಸುಖಮಂ

ಅಂಗಜನ ಸುಖದ ಸಾಮ್ರಾ
ಜೈಂಗಳ್ ಶಾರೀರ ಮಾನಸಾಗಂತುಕ ದುಃ
ಖಂಗಳನೆ ನಾಲ್ಕು ವದಏ೦
ಸಿಂಗುವೆನಿನ್ನೆ ನಗೆ ಜಿನನ ಚರಣಂ ಶರಣಂ

೫. ರತ್ನಾಕರ: ಆತ್ಮ-ಕರ್ಮ-ಮುಕ್ಕಿ

 ಮುಕ್ತರಾದವರೆಲ್ಲ ಮುನ್ನ ಸಂಸಾರ ಸಂ
ಯುಕ್ತರಾಗಿರ್ದು ಕರ್ಮಗಳ
ಯುಕ್ತಿಯರಿದು ಶಕ್ತಿಗೆಡಿಸಿ ದೇಹವ ಬಿಟ್ಟು
ಮುಕ್ತಿಗೈದಿದರೆಲೆ ಭವ್ಯಾ

ಸುಖಕುಬ್ಬಿ ದುಃಖಕೆ ಮರುಗಿದರೊಡನೆ ಮುಂ
ದಖಿಳ ಕರ್ಮಗಳು ಕಟ್ಟುವುವು
ಸುಖದುಃಖಕತ್ತಿತ್ತಲಾಗದೆ ಧ್ಯಾನಾಭಿ
ಮುಖದೊಳಿದ್ದರೆ ಬಂಧವಿಲ್ಲ

ಕರ್ಮವ ಸುಡುವ ಸಾಮರ್ಥವುಂಟಾತ್ಮಗೆ
ಕರ್ಮದೊಳಡಗಿರುತಿಹನು
ಕರ್ಮವರಿದು ತಾನು ತನ್ನ ನೋಡಿದರೆಂಟು
ಕರ್ಮವ ಸುಟ್ಟುರುಹುವನು

ಧ್ಯಾನದಿಂದಲ್ಲದೆ ಕರ್ಮ ನಿರ್ಜರಿಸದಾ
ಧ್ಯಾನ ತಾನೆಂತುಟೆಮದೆನಲು
ನಾನಾಚಿಂತೆಯಳಿದು ಮನವಾತ್ಮಸ೦
ಧಾನದೊಳಿರಲದೆ ಧ್ಯಾನ

ಈ ಕಾಲನಾಕಾಲವೆನಬೇಡ ನಿಶ್ಚಯ -
ದೇಕ ಧರ್ಮನ ಮಾಡಿದವರು
ಲೌಕಾಂತಿಕ ದಕ್ಷಿಣೇ೦ದ್ರರೆನಿಸಿ ಪುನ -
ರೇಕ ಜನ್ಮಕೆ ಮುಕ್ತರಹರು

ನೋಡಿ ನೋಡದ ನುಡಿದಾಡಿ ನುಡಿಯದೆಡೆ
ಯಾಡಿ ನಡೆಯದ ಮಹಾತ್ಮಾ,
ಕೂಡೆ ಕೂಡೆನಗೆ ಚಿತ್ಕಳೆಯ ಬೆಳಕನುಂಟು
ಮಾಡು ನಿರಂಜನ ಸಿದ್ಧಾ

ನಿ೦ದಲ್ಲಿ ನಡೆದಲ್ಲಿ ಕುಳಿತಲ್ಲಿ ಸರ್ವತ್ರ
ಕುಂದದೆ ಕುಶಲ ಲೀಲೆಯೊಳು
ಸಂಧಿಸುವಭವ ನನ್ನೆದೆಯೊಳಗಿರು ಚಿದಾ
ನಂದ ಚಿದಂಬರ ಪುರುಷಾ

ತಿಳಿವೆಳಗಿನ ತೀರ್ಥರೂಪವೆ ತಿಂಗಳ
ಬೆಳಗಿನೋಳಾದ ಪುತ್ತಳಿಯೆ
ತಳುಮಾಡದೆನಗೆ ಸನ್ಮತಿ ದೋರು ಸುಜ್ಞಾನ
ನಿಳಯ ನಿರಂಜನ ಸಿದ್ಧಾ

ಹಿಂದು ಮುಂದೆಡಬಲ ಹೊರಗೊಳಗಡಿ ಕಡೆ
ಯೆಂದೆನ್ನದಮೃತ ಸ್ವರೂಪಾ
ಎಂದೆಂದು ಎನ್ನ ಚಿತ್ತದೊಳಿರು ಸಚ್ಚಿದಾ
ನಂದ ಚಿದಂಬರ ಪುರುಷಾ

ಉಸುರೆಂಬ ಕರಗಸದಿಂದ ದೇಹಾತ್ಮರ
ಬೆಸುಗೆಯ ಬಿಡಿಸಿ ನೋಡಿದರೆ
ಮಸುಳದೆ ತೋರ್ಪ ಮಹಾತ್ಮ ನೀನೆನಗೊಳ್ಪ
ನೆಸಗು ನಿರಂಜನ ಸಿದ್ಧಾ

ತೆರೆಯ ಮೇಲ್ ತೆರೆಗಳ ತೋರುವಿಂಗಡಲಂತೆ
ಸಿರಿಯ ಮೇಲ್ ಸಿರಿಯ ಸೂಚಿಸುವ
ಚರಿತಾರ್ಥ ನನ್ನ೦ತರ೦ಗದೊಳಿರು ಮನೋ
ಹರನೆ ಚಿದಂಬರ ಪುರುಷಾ

ಕಾಣದರ್ಥವ ಕಾಣಿಸುವ ಪರಂಜ್ಯೋತಿ ನೀ
ಮಾಣದೆ ನನ್ನೆದೆಯೆಂಬ
ಕೋಣೆಯೊಳಿರು ಹೋದೆಯಾದರೆ ನಿನಗೆ ನಿ
ನ್ನಾಣೆ ಚಿದಂಬರ ಪುರುಷಾ

೬. ಬಸವಣ್ಣ: ಸು. ೧೧೬೦ ಧರ್ಮದ ಕೆಚ್ಚು

ದೇವನೊಬ್ಬ, ನಾಮ ಹಲವು. ಪರಮ ಪತಿವ್ರತೆಗೆ ಗಂಡನೊಬ್ಬ, ಮತ್ತೊಂದಕ್ಕೆರಗಿದೊಡೆ ಕಿವಿ ಮೂಗ ಕೊಯ್ಯುವನು. ಹಲವು ದೈವದ ಎಂಜಲ ತಿ೦ಬವರನೇನೆಂಬೆನಯ್ಯ ಕೂಡಲಸಂಗಮದೇವ!

ನಂಬಿ ಕರೆದಡೆ ಓ ಎಂಬ ಶಿವನು, ನಂಬದೆ ಕರೆದಡೆ ಓ ಎಂಬನೆ ಶಿವನು? ನಂಬಲರಿಯರು, ನಚ್ಚಲರಿಯರು, ಡಂಬಿನ ಭಕ್ತರು ನಂಬದೆ ನಚ್ಚದೆ ಬರಿದೆ ಕರೆದಡೆ, ಶಂಭು ಮೌನದಲಿಪ್ಪ ಕೂಡಲಸಂಗಮದೇವ.

ಮಡಕೆಯೇ ದೈವವು, ಮರದಲ್ಲಿಯ ದೈವವು, ಬಿಲ್ಲ ನಾರಿ ದೈವವು ಕಾಣಿರಯ್ಯ, ಕೊಳಗನೇ ದೈವವು, ಗಿಣಿಲು ದೈವವು ಕಾಣಿರಯ್ಯ, ದೈವ ದೈವವೆಂದು ಕಾಲಿಡಲಿಂಬಿಲ್ಲ. ದೇವನೊಬ್ಬನೇ, ನಮ್ಮ ಕೂಡಲಸಂಗಮದೇವ.

ಅರ್ಥವಡಗದು, ಕ್ರೋಧ ತೊಲಗದು. ಕೂರ ಕುಹಕ ಕುಭಾಷೆ ಬಿಡದನ್ನಕ್ಕ, ನೀನೆ ಶಿವನೆತ್ತ, ಹೋಗತ್ಯ ಮರುಳೇ, ಭವರೋಗವೆಂಬ ತಿಮಿರ ತಿಳಿಯದನ್ನಕ್ಕ ಕೂಡಲಸಂಗಯ್ಯನೆತ್ತ, ನೀನೆತ್ತ, ಮರುಳೇ.

ಹೊತ್ತಾರೆ ಎದ್ದು, ಅಗ್ಗವಣಿ ಪತ್ತರೆಯ ತಂದು, ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ ಹೊತ್ತುಹೋದ ಬಳಿಕ ನಿನ್ನ ನಾರು ಬಲ್ಲರು? ಹೊತ್ತು ಹೋಗದ ಮುನ್ನ, ಮೃತ್ಯು ಒಯ್ಯದ ಮುನ್ನ, ತೊತ್ತುಗೆಲಸವ ಮಾಡು ಕೂಡಲಸಂಗಮದೇವನ.

ಹೊತ್ತಾರೆ ಎದ್ದು, ಕಣ್ಣಹೊಸೆವುತ್ತ, ಎನ್ನ ಒಡಲಿಂಗೆ ಎನ್ನ ಒಡವೆಗೆ ಎನ್ನ ಮಡದಿ ಮಕ್ಕಳಿಗೆಂದು ಕುದಿದೆನಾದರೆ, ಎನ್ನ ಮನಕ್ಕೆ ಮನವೇ ಸಾಕ್ಷಿ. " ಅಶನೇ ಶಯನೇ ಯಾನೇ ಸಂಪರ್ಕೆ ಸಹಭೋಜನೇ! ಸಂಚರಂತಿ ಮಹಾ ಘೋರೇ ನರಕೇ ಕಾಲಮಕ್ಷಯಂ " ಎಂಬ ಶ್ರುತಿಯ ಬಸವಣ್ಣನೋದುವನು. ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು ಓಲೈಸಿಹೆನೆಂದು ನುಡಿವರಯ್ಯ ಪ್ರಮಥರು. ಕೊಡುವೆನುತ್ತರವನವರಿಗೆ, ಕೊಡಲಮ್ಮೆ, ಹೊಲೆಹೊಲೆಯರ
ಮನೆಯ ಹೊಕ್ಕಾದರೆಯೂ, ಸಲೆ ಕೈಕೂಲಿಯ ಮಾಡಿಯಾದರೆಯೂ, ನಿಮ್ಮ ನಿಲವಿಂಗೆ ಕುದಿವೆನಲ್ಲದೆ, ಎನ್ನ ಒಡಲವಸರಕ್ಕೆ ಕುದಿದೆನಾದರೆ, ತಲೆದಂಡ, ಕೂಡಲಸಂಗಮದೇವ.

ಹುತ್ತವ ಬಡಿದಡೆ, ಹಾವು ಸಾಯಬಲ್ಲುದೇ ಅಯ್ಯ? ಘೋರ ತಪವ ಮಾಡಿದಡೇನು? ಅಂತರಂಗ ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯ ಕೂಡಲಸಂಗಮದೇವ?

ಒಲೆಯ ಬೂದಿಯ ಬಳಿಯಲು ಬೇಡ, ಒಲೆ ಯ೦ತೆ ಹೂ ಸಿ ಕೊಂಡಿಪ್ಪುದು ಹುಸಿ, ಏನು ಫಲ, ಮನದಲ್ಲಿ ಲೇಸಿಲ್ಲದನ್ನಕ್ಕ? ಒಂದನಾಡ ಹೋಗಿ ಒಂಬತ್ತನಾಡುವ ಡಂಬಕರ ಮೆಚ್ಚ ಕೂಡಲಸಂಗಮದೇವ.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ. ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ. ಇದೇ ನಮ್ಮ ಕೂಡಲ ಸಂಗಮದೇವನನೊಲಿಸುವ ಪರಿ,

ಎನ್ನ ನರೊಲಿದು ಹೊನ್ನ ಶೂಲದಲಿಕ್ಕಿದರು, ಎನ್ನ ಹೊಗಳಿ ಹೊಗಳಿ. ಎನ್ನ ಹೊಗಳೆ ಎನ್ನ ಮೈಗೊಂಡಿತಲ್ಲಾ! ಅಯ್ಯಾ ನಿಮ್ಮ ಮನ್ನಣೆಯೇ ಮಸೆದಲಗಾಗಿ ತಾಗಿತ್ತಲ್ಲಾ! ಅಯ್ಯಾ, ನೊಂದೆನು, ಸೈರಿಸಲಾರೆನು. ಕೂಡಲ ಸಂಗಮದೇವ, ನೀನೆನಗೊಳ್ಳಿ ದನಾದರೆ, ಎನ್ನ ಹೊಗಳತೆಗಡ್ಡ ಬಾರಾ, ಧರ್ಮೀ.

ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ, ಕೂಡಲಸಂಗಮದೇವಾ ಎನಗಿದೇ ದಿಬ್ಯ.

ಕಪ್ಪೆ ಸರ್ಪನ ನೆಳಲಲ್ಲಿ ಇಪ್ಪಂತೆ ಎನಗಾಯಿತ್ತಯ್ಯಾ, ಅಕಟಕಟ, ಸಂಸಾರ ವೃಥಾ ಹೋಯಿತ್ತಲ್ಲಾ! ಕರ್ತೃ ಕೂಡಲಸಂಗಮದೇವಾ, ಇವ ತಪ್ಪಿಸಿ ಎನ್ನ ನು ರಕ್ಷಿಸಯ್ಯಾ,

ಎನ್ನ ಚಿತ್ರ ಅತ್ತಿಯ ಹಣ್ಣು ನೋಡಯ್ಯಾ. ವಿಚಾರಿಸಿದರೆ ಏನೂ ಹುರುಳಿಲ್ಲವಯ್ಯಾ, ಪ್ರಪಂಚಿನ ಡಂಬಿನಲ್ಲಿ ಎನ್ನ ನೊಂದು ರೂಪುಮಾಡಿ, ನೀವಿರಿಸಿದಿರಯ್ಯಾ ಕೂಡಲಸಂಗಮದೇವ.

ನಾನೊಂದ ನೆನೆದರೆ ತಾನೊಂದ ನೆನೆವುದು. ನಾನಿತ್ತಲೆಳೆದರೆ ತಾನು ಲೆಳೆವುದು, ತಾ ಬೇರೆ ಎನ್ನ ನಳಲಿಸಿ ಕಾಡಿತ್ತು. ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು. ಕೂಡಲಸಂಗನ ಕೂಡಿಹೆನೆಂದರೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ.

ಶೂಲದ ಮೇಲಣ ಭೋಗವೇನಾದರೇನೋ?, ನಾನಾವರ್ಣದ ಸಂಸಾರ ಹಾವ ಹಾವಡಿಗನ ಸ್ನೇಹದಂತೆ, ತನ್ನ ತ್ಮವೇ ತನಗೆ ಹಗೆಯಾದ ಬಳಿಕ ಬಿನ್ನಾಣವುಂಟೆ, ಮಹಾದಾನಿ ಕೂಡಲಸಂಗಮದೇವ? ಅಕಟಕಟ, ಶಿವ ನಿನಗಿನಿತು ಕರುಣವಿಲ್ಲ. ಅಕಟಕಟ, ಶಿವ ನಿನಗಿನಿತು ಕೃಪೆಯಿಲ್ಲ. ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ, ಪರಲೋಕದೂರನ? ಏಕೆ ಹುಟ್ಟಿಸಿದೆ, ಕೂಡಲಸಂಗಮದೇವ ಕೇಳಯ್ಯಾ, ಎನಗಾಗಿ ಮತ್ತೊಂದು ತರುಮೃಗಾದಿಗಳಿದ್ದಿಲ್ಲವೇ?

ತಂದೆ ತಾಯಿ ನೀನು, ಬಂಧು ನೀನು, ಬಳಗ ನೀನು. ನೀನಲ್ಲದೆ ಮತ್ತಾರು ಇಲ್ಲವಯ್ಯಾ, ಕೂಡಲಸಂಗಮದೇವಾ, ಹಾಲಲದ್ದು, ನೀರಲದ್ದು.

ಎನಿಸುಕಾಲ ಕಲ್ಲು ನೀರೊಳಗಿದ್ದರೇನು? ನೆನೆದು ಮೃದುವಾಗಬಲ್ಲುದೆ? ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ, ಮನದಲ್ಲಿ ದೃಢವಿಲ್ಲದನ್ನಕ್ಕ? ನಿಧಾನವ ಕಾಯ್ತಿದ್ದ ಬೆಂತರನಂತೆ ಅದರ ವಿಧಿ ಎನಗಾಯಿತ್ತು ಕೂಡಲ ಸಂಗಮದೇವ.

ಆರಾಧ್ಯ ಪ್ರಾಣಲಿಂಗವೆಂದರಿದು, ಪೂರ್ವಗುಣವಳಿದು, ಪುನರ್ಜಾತ ನಾದ ಬಳಿಕ, ಸಂಸಾರ ಬಂಧುಗಳೆನ್ನ ವರೆ೦ದರೆ, ನಂಟುಭಕ್ತಿ, ನಾಯಕನರಕ ಇಂತೆಂದುದು ಕೂಡಲಸಂಗನ ವಚನ.

ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟ ತನದ ಹೊರೆಯ ಹೊರಿಸದಿರಯ್ಯ. ಕಕ್ಕಯ್ಯನೊಕ್ಕು ದನಿಕ್ಕ ನೋಡಯ್ಯಾ, ದಾಸಯ್ಯ ಶಿವದಾನವನೆರೆಯ ನೋಡಯ್ಯಾ! ಮನ್ನಣೆಯ ಚೆನ್ನಯ್ಯನೆನ್ನ ಮನ್ನಿಸ, ಉನ್ನತ ಮಹಿಮ, ಕೂಡಲಸಂಗಮದೇವ, ಶಿವಧೋ ಶಿವಧೋ.

ಅಪ್ಪನು ಡೋಹರ ಕಕ್ಕಯ್ಯನಾಗಿ, ಮುತ್ತಯ್ಯ ಚೆನ್ನಯ್ಯನಾದರೆ, ಆನು ಬದುಕುವೆನು. ಮತ್ತಾ ಶ್ವಪಚಯ್ಯನ ಸನ್ನಿ ಧಿಯಿಂದ ಭಕ್ತಿಯ ಸದ್ದು ಣವ ನಾನರಿವೆನಯ್ಯ, ಕಷ್ಟ ಜಾತಿ ಜನ್ಮದಲಿ ಜನಿಸಿದೆ. ಎನಗಿದು ವಿಧಿಯೇ ಕೂಡಲಸಂಗಮದೇವಾ? "

ಸೆಟ್ಟ ಎಂಬೆನೆ ಸಿರಿಯಾಳನ? ಮಡಿವಾಳನೆಂಬೆನೆ ಮಾಚಯ್ಯನ? ಡೋಹರ ನೆಂಬೆನೆ ಕಕ್ಕಯ್ಯನ? ಮಾದಾರನೆಂಬೆನೆ ಚೆನ್ನಯ್ಯನ? ಆನು ಹಾರುವ ನೆಂದಡೆ ಕೂಡಲಸಂಗಯ್ಯ ನಗುವನಯ್ಯ,

ಆರು ಮುನಿದು ಎಮ್ಮನೇನು ಮಾಡುವರು? ಊರು ಮುನಿದು ಎಮ್ಮ ನೆಂತು ಮಾಡುವರು.? ನಮ್ಮ ಕುನ್ನಿ ಗೆ ಕೂಸ ಕೊಡಬೇಡ. ನಮ್ಮ ಸೊಣಗಂಗೆ ತಳಿಗೆಯಲಿಕ್ಕ ಬೇಡ, ಆನೆಯಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ, ನಮಗೆ ನಮ್ಮ ಕೂಡಲಸಂಗಯ್ಯನುಳ್ಳನ್ನಕ್ಕ?

ಕೊಲ್ಲುವನೇ ಮಾದಿಗನು, ಹೊಲಸು ತಿ೦ಬುವನೇ ಹೊಲೆಯ. ಕುಲ ವೇನೋ, ಅವಂದಿರ ಕುಲವೇನೋ? ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು.

ಕಲ್ಲನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ! ಉಂಬ ಜಂಗಮ ಬಂದರೆ ನಡೆ ಎಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ! ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನಮಾಡಿದರೆ ಕಲ್ಲು ತಾಗಿದ ಮಿಟ್ಟ ಯಂತಪ್ಪರಯ್ಯ,

ಎರೆದರೆ ನೆನೆಯದು, ಮರೆದರೆ ಬಾಡದು. ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ, ಕೂಡಲಸಂಗಮದೇವ ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು.

ಉಳ್ಳವರು ಶಿವಾಲಯವ ಮಾಡುವರು. ನಾನೇನ ಮಾಡುವೆ ? ಬಡವ ನಯ್ಯ ! ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ, ಕೂಡಲಸಂಗಮದೇವ ಕೇಳಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ಆಡಿದರೇನು, ಹಾಡಿದರೇನು, ಓದಿದರೇನು, ತ್ರಿವಿಧ ದಾಸೋಹವಿಲ್ಲ ದನ್ನ ಕ್ಕ? ಆಡದೇ ನವಿಲು, ಹಾಡದೇ ತಂತಿ, ಓದದೇ ಗಿಣಿ? ಭಕ್ತಿಯಿಲ್ಲ ದವರನೆಲ್ಲ ಕೂಡಲಸಂಗಮದೇವ.

ವಚನದಲ್ಲಿ ನಾಮಾಮೃತ ತುಂಬಿ, ನಯನದಲ್ಲಿ ನಿಮ್ಮ ಮೂರುತಿ ತುಂಬಿ, ಮನದಲ್ಲಿ ನಿಮ್ಮ ನೆನಹು ತುಂಬಿ, ಕಿವಿಯಲ್ಲಿ ನಿಮ್ಮ ಕೀರ್ತಿ ತುಂಬಿ, ಕೂಡಲಸಂಗಮದೇವಾ, ನಿಮ್ಮ ಚರಣಕಮಲದೊಳಗಾನು ತುಂಬಿ.

ಎನ್ನ ಕಾಯವ ದಂಡಿಗೆಯ ಮಾಡಯ್ಯ, ಎನ್ನ ಶಿರವ ಸೋರೆಯ ಮಾಡಯ್ಯ, ಎನ್ನ ನರವ ತಂತಿಯ ಮಾಡಯ್ಯ, ಎನ್ನ ಬೆರಳ ಕಡ್ಡಿಯ ಮಾಡಯ್ಯ, ಬತ್ತೀಸ ರಾಗವ ಹಾಡಯ್ಯ, ಉರದಲೊ ಬಾರಿಸು ಕೂಡಲ ಸಂಗಮದೇವ.

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ, ಸತ್ಯವ ನುಡಿವುದೇ ದೇವಲೋಕ; ಮಿಥ್ಯವ ನುಡಿವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ; ಅನಾಚಾರವೇ ನರಕ. ಕೂಡಲಸಂಗಮದೇವ ನೀವೇ ಪ್ರಮಾಣ.

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ. ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ. ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ, ಕೂಡಲ ಸಂಗಮದೇವ.

ಪುಣ್ಯ ಪಾಪಗಳೆಂಬುವು ತಮ್ಮ ಇಷ್ಟ ಕಂಡಿರೆ. ಅಯ್ಯ ಎಂದಡೆ ಸ್ವರ್ಗ, ಎಲವೊ ಎಂದಡೆ ನರಕ. ದೇವ ಭಕ್ತ ಜಯ ಜೀಯಾ ಎಂಬ ನುಡಿಯೊಳಗೆ ಕೈಲಾಸವಿಹುದು ಕೂಡಲಸಂಗಮದೇವ.

ಪರಚಿಂತೆ ನಮಗೇಕಯ್ಯ ? ನಮ್ಮ ಚಿಂತೆ ನಮಗೆ ಸಾಲದೆ ? ಕೂಡಲ ಸಂಗಯ್ಯ ಒಲಿವನೋ ಒಲಿಯನೋ ಎಂಬ ಚಿಂತೆ ಹಾಸಲುಂಟು, ಹೊದೆಯಲುಂಟು.

ಎಲ್ಲರೂ ವೀರರು, ಎಲ್ಲರೂ ಧೀರರು, ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು, ಕಾಳಗದ ಮುಖದಲ್ಲಿ ಕಾಣಬಹುದು. ಓಡುವ ಮುಖದಲ್ಲಿ ಕಾಣಬಾರದು. ನಮ್ಮ ಕೂಡಲಸಂಗಮದೇವನ ಶರಣರು ಧೀರರು, ಉಳಿದವ ರೆಲ್ಲ ಅಧೀರರು. ನೆಚ್ಚಿದೆನೆಂದರೆ, ಮೆಚ್ಚಿದೆನೆಂದರೆ, ಸಲೆಮಾರುವೋದೆನೆಂದರೆ, ತನುವ ನಲ್ಲಾಡಿಸಿ ನೋಡುವೆ ನೀನು, ಮನವನಲ್ಲಾಡಿಸಿ ನೋಡುವೆ ನೀನು, ಧನವನಲ್ಲಾಡಿಸಿ ನೋಡುವೆ ನೀನು, ಇವೆಲ್ಲಕ್ಕಂಜದಿದ್ದರೆ, ಭಕ್ತಿ ಕ೦ಪಿತ ನಮ್ಮ ಕೂಡಲಸಂಗಮದೇವ.

ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ. ಒರೆಗೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯ. ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡಿಯಾಣಿಯ ಮಾಡಿ, ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು ಕೂಡಲ ಸಂಗಮದೇವ.

ಇರಿಸಿಕೊಂಡು ಭಕ್ತರಾದರೆಮ್ಮವರು. ತರಿಸಿಕೊಂಡು ಭಕ್ತರಾದರೆಮ್ಮ ವರು. ಜರಿಸಿಕೊಂಡು ಭಕ್ತರಾದರೆಮ್ಮವರು. ಕೊರಸಿಕೊಂಡು ಭಕ್ತರಾದರೆಮ್ಮವರು. ಕೂಡಲಸಂಗನ ಶರಣರಿಗೆ ಮುನಿಸ ತಾಳಿ ಎನ್ನ ಭಕ್ತಿ ಅರೆಯಾಯಿತ್ತು.

ಜಲವ ತಪ್ಪಿದ ಮತ್ತ್ವ ಬದುಕುವುದೇ ಸೋಜಿಗ. ಗಣ ತಿoತಿಣಿಯೊಳ ಗಿರಿಸೆನ್ನ ಲಿಂಗವೇ, ಶಿವ ಶಿವ ಕೂಡಲಸಂಗಮದೇವ ಸೆರಗೊಡ್ಡಿ ಬೇಡುವೆನು.

ಊರಮುಂದೆ ಹಾಲ ಹಳ್ಳ ಹರಿಯುತ್ತಿರಲಿ, ಓರೆಯಾವಿನ ಬೆನ್ನ ಹರಿಯಲದೇಕಯ್ಯ? ಲಜ್ಜೆಗೆಡಲೇಕೆ? ನಾಣುಗೆಡಲೇಕೆ? ಕೂಡಲಸಂಗಮ ದೇವಯ್ಯನುಳ್ಳನ್ನಕ್ಕ ಬಿಜ್ಜಳನ ಭಂಡಾರವೆನಗೇಕಯ್ಯ?

ದಯವಿಲ್ಲದ ಧರ್ಮವಾವುದಯ್ಯ? ದಯವೇ ಬೇಕು ಸಕಲ ಪ್ರಾಣಿ ಗಳೆಲ್ಲರಲ್ಲಿ. ದಯವೇ ಧರ್ಮದ ಮೂಲವಯ್ಯ, ಕೂಡಲಸಂಗಯ್ಯನಂತಲ್ಲ ದೊಲ್ಲನಯ್ಯ,

ಆನೆ ಅಂಕುಶಕ್ಕಲ್ಲದೆ ಅಂಜುವುದೇ ಅಯ್ಯ? ಮಾಣದೆ ಸಿಂಹದ ನಖ ವೆಂದು ಅಂಜುವುದಲ್ಲದೆ? ಆನೀ ಬಿಜ್ಜಳಂಗಂಜುವೆನೆ ಅಯ್ಯ? ಕೂಡಲ ಸಂಗಮದೇವ, ನೀನು ಸರ್ವಜೀವದಯಾಪಾರಿಯಾದ ಕಾರಣ ನಿಮಗಂಜುವೆ ನಲ್ಲದೆ?

ಜೋಳವಳೆಯುವವ ನಾನಲ್ಲಯ್ಯ, ವೇಳೆಯಳೆಯುವವ ನಾನಲ್ಲಯ್ಯ, ಹಾಳುಗೆಟ್ಟೋಡುವ ಆಳು ನಾನಲ್ಲಯ್ಯ, ಕೇಳು ಕೂಡಲಸಂಗಮದೇವ ಮರಣವೇ ಮಹಾನವಮಿಯೆನಗೆ,

ಆಯುಷ್ಯ ತೀರಿದಲ್ಲದೆ ಮರಣವಿಲ್ಲ. ಭಾಷೆ ತೀರಿದಲ್ಲದೆ ದಾರಿದ್ರ್ಯವಿಲ್ಲ. ಅಂಜಲೇಕೋ ಲೋಕವಿಗುರ್ಬಣೆಗೆ? ಅ೦ಜಲೇಕೊ ಕೂಡಲಸಂಗಮದೇವ ನಿಮ್ಮಾಳಾಗಿ?

ಕಲಿಯ ಕೈಯ ಕೈ ದುವಿನ೦ತಿರಬೇಕಯ್ಯ, ಎಲುದೋರ ಸರಸವಾಡಿದರೆ ಸೈರಿಸಬೇಕಯ್ಯ, ರಣದಲ್ಲಿ ತಲೆ ಹರಿದು ನೆಲಕ್ಕೆ ಬಿದ್ದು ಬೊಬ್ಬಿಡಲದಕ್ಕೆ ಒಲಿವ ಕೂಡಲಸಂಗಮದೇವ. "ಸಾಕುಮಾಡೆ ತಂದೆ ಲೋಕದಾಟವನಿನ್ನು, ತೆರಪುಗೊಡು ತಂದೆ ಬಂದಿಹೆನು ಬಸವನು ನೊಂದೆ, "

-ಹರಿಹರ: ಬಸವರಾಜದೇವ ರಗಳೆ

೭. ಹರಿಹರ: ಸಂಗನು ಬಸವಣ್ಣನವರನ್ನು ಕಲ್ಯಾಣಕ್ಕೆ ಕಳುಹಿಸಿದ್ದು

ಸಂಗಂ ಬಸವನೊ ಬಸವಂ
ಸಂಗನೊ ತಮ್ಮಿರ್ಬರೊರ್ಬರಂತೊರ್ಬರೊ ಮೇಣ್
ಸಂಗಂ ಬಸವನೋ ಬಸವ
ಸಂಗನೊ ಎನಿಪೊ೦ದಭೇದಭಾವದೊಳಿರ್ದರ್

ಇಪ್ಪಲ್ಲಿ ಕನಸಿನೋಳು.... ಎಳೆವಿಸಿಲ ಬೆಳಗಂ ತರುಣ ತರಣಿಗೆ ಕಡಂಗೊಡುವ ಪ್ರಭಾ ದುಕೂಲದಂತಿರ್ದ ಪುಲಿದೊಗಲಿಂದೊಪ್ಪಿ, ಪಶುಪತಿ ಬಸವನ ಮನದ ಮೊನೆಯೊಳೊಪ್ಪೆ ಮೂರ್ತಿಗೊಂಡು;

ಎಲೆ ಮಗನೆ ಬಸವ ಬಸವಣ್ಣ ಬಸವಿದೇವ, ನಿನ್ನ೦ ಮಹೀತಳದೊಳು ಮೆಆಲೆದಪೆವು, ನೀ೦ ಬಿಜ್ಜಳರಾಯನಿಪ್ಪ ಮಂಗಳವಾಡಕ್ಕೆ ಪೋಗು – ಎಂಬ ನುಡಿಯೊಡನೆ ಕನಸಿನ ಮಾತು ಮನವನಿಮ್ಮ ಗಂಡು, ನಿದ್ರೆ ತಿಳಿದು ಕಣ್ದೆ ಅದು ಕೆಲಬಲನಂ ನೋಡಿ ಬೆಚ್ಚಿ ಬಿಗಡುಗೊಂಡು ಅನುತಾಪವೇ ಅತಿ ವಿರಹಂ ಹೊಮ್ಮಿ ಕಣೆ ಟ್ರಗಲಲಾದೆ ರಂಗಮಂಟಪದ ಕಂಭಮಂ ಘಳಿಲನೆ ಹಾಯ್ದು- ದೇವ ದೇವ ಸಂಗ, ಕಂಡೈ, ಕೆಟ್ಟೆ, ಕೆಟ್ಟೆ೦. ತೋಟ ನಿಂತು ಕಣ್ ನೋಡದೆ ಹುಣ್ಣ ನೋಡದೆ ಹೋಗೆಂಬರೆ? ಗಗನದಿಂದಿಳಿವಂಗಾಧಾರವಾಗುತ್ತೆ ತಪ್ಪು ವರೆ? ಕಾಲ್ಕಿಚ್ಚಿನಿಂ ಬೇವಂಗೆ ತಂಪಿನ ಸೋನೆಯ ಮಳೆಯಾಗುತ್ತೆ ಮಾಣ್ಬರೆ ಇಂತು ನಡುಗಡಲೊಳಾಳುವಂಗೆ ತೆಪ್ಪವಾಗುತ್ತೆ ಹಿಂಗುವರೆ? ನರಲೋಕ ದೊಳಾಳಲೀಯದೆ ಚಂಡಿಕೆವಿಡಿದುದ್ದರಿಸಲೆಂದಾಳ್ಗೊಂಡ ಗುರುವೆ ಪರಮ ಬಂಧುವೆ ಪ್ರಾಣವೆ, ಬೆಳುದಿಂಗಳೇಕೆ ಬಿಸುಪೇಕೆ? ಅಮೃತವೇಕೆ ವಿಷವೇಕೆ? ಬೆಳಗೇಕೆ ತಮವೇಕೆ? ನೀನೇಕೆ ಈ ನುಡಿಯೇಕೆ? ಹೊದ್ದಿದರಂ ಹೋಗೆಂಬರೆ? ಸಾರ್ದರಂ ಸೈರಿಸೆಂಬರೆ? ನಂಬಿದವರ ಗೋಣಂ ಕೊಯ್ವರೆ? ಶಿಶುವನಿವರೆ? ಪಶುವಂ ಕೊಲುವರೆ? ಎನ್ನ೦ ಬಿಡುವರೆ? ಕರುಣಿ ಕರುಣಿ, ಕರುಣಂ ಲೇಸಾಯ್ತು, ಅರ್ಚಿಸಿತಕ್ಕೆ ಫಲವಾಯ್ತು. ಇನ್ನೇನು ಇನ್ನೇನು? - ಎಂದೊಟ್ಟಿ ಒಅಲಿ ಪರಿತಂದು ಸಂಗನಂ ತಕ್ಕೈಸಿ ಪಳವಿಸಿ ಪಲುಂಬಿ ಗೋಳಿಟ್ಟು, ಆಲಿಟ್ಟು ಸಿನದಿಟ್ಟು ಮೊಅಯಿಟ್ಟು ಮೂರ್ಛಿಸುತ್ತೆಂತಕ್ಕೆಚ್ಚನ್ನು ಮೆಲ್ಲ ಮೆಲ್ಲ ನಾಲಿಂಗನಮಂ ಸಡಿ ನಡೆತಂದು;

ಮನವಲ್ಲದ ಮನದೊಳಗ್ನವಣಿ ಹೂಗಳಂ ಬೇಗಂ ತಂದಂತಂತೆ ಪೂಜೆಗೆಲ್ಲಾ ರೋಗಣೆಗಿತ್ತು, ಮೋಹದ ಮುನಿಸು ಮನದೊಳ್ ತೀವಿ ಪ್ರಣಯ

ಕಲಹಂ ಬಲಿದು ಪ್ರಸಾದವನೊಲ್ಲದೆ ಬಸವಂ ಮುಸುಂಕಿಟ್ಟು ಪಶುಪತಿಯ ಪದದ ಕೆಳಗೆ ನಿರ್ವೇಗದಿಂ ಪಟ್ಟರ್ದಿರೆ; ರಾತ್ರಿಯೊಳು ನೇತ್ರತ್ರಯಂ ಭಕ್ತ ನಿರವಂ ನೋಡಿ ಕೊರಗಿ ಮೋಹದ ಮಹಿಮೆಗೆ ಮರವಟ್ಟು, ಭಕ್ತಿಯ ಭರಕ್ಕೆ ಕೌತುಕಂಗೊಂಡಗಲಲಾಅದ ಮಗಂಗೆ ಮಿಗೆ ಕರುಣಿಸಿ, ಮತ್ತೆ ಕನಸಿನೊಳು ಬಂದು - ಎಲೆ ಮಗನೆ ಎಲೆ ಕ೦ದ ಎಲೆ ಬಸವ, ನಿನ್ನ ನಗಲಿ ನಾನಿರಲಾರೆ. ನಿನಗಿನಿತು ನಿರೋಧವೇಕೆ? ಬೇಡಯ್ಯ ಬೇಡೆನ್ನ ರಸ, ಬೇಡೆನ್ನ ಭಕ್ತನಿಧಿಯೆ, ನಿನ್ನೊ ಡನೊಡನೆ ಬಿಡದೆ ಬಪ್ಪೆಂ.

ಇಂತು ಬೆಸಸುತ್ತಮಿರೆ ಬಸವನಾಗಳೆ ಕೇಳ್ದು
ಅಂತಸ್ಥ ದೊಳು ವಿರಹಚಿಂತೆಯಂ ಮಿಗೆ ತಾಳ್ದು
ಸಲೆ ಮತ್ತೆ ಮತ್ತೆ ಪೋಗೆಂದಪಂ ಸಂಗಮಂ
ನಲಿದು ಪೂಜಿಸಲೀಯನಕ್ಕಟಾ ಸಂಗಮಂ
ಆದಡಂ ಪೋಗಿ ನೋಡುವೆನೆಂದು ಬಗೆಗೊಂಡು
ಆದರಂ ಕುಂದುತ್ತೆ ಚಿ೦ತೆಯಂ ಕೈಕೊಂಡು
ಶಿವಭಕ್ತ ಸಂತತಿಗೆ ಬೆಸಕೆಯ್ಯುಪಾಯಮಂ
ಶಿವಭಕ್ತಿ ನೆಲೆಗೊಳ್ವ ಸಮಸುಖ ಸಹಾಯಮಂ
ನೆನೆದು ತನ್ನೊಳಗೊಳಗೆ ತಿಳಿದಂ ಶಿವಧ್ಯಾನಿ
ಅನುಪಮ ಶಿವೈಕ ಸಮ್ಯಗ್ಯಾನಿ ಕಡುಮಾನಿ
ಅಕ್ಷರ ಜ್ಞಾನಮು೦ಟದನೈದೆ ಮಾಜುವೆಂ
ತ್ರಕ್ಷನಣುಗರ್ಗಾದ ಹೊಂಗಳಂ ಬೀಱವೆಂ
ಅವರ ಪ್ರಸಾದಮಂ ನಲವಿಂದ ತಾಳುವೆಂ
ಅವರ ಕಾರುಣ್ಯರಸಜಲದೊಳೋಲಾಡುವೆಂ
ಎಂದಲ್ಲಿ ಗಣಕ ಕಾಯಕಮಂ ಮನಂಗೊಂಡು
ನಿಂದದಕ್ಕನುಕೂಲವೇಷಮಂ ಕೈಕೊಂಡು
ಸಂಗಂಗೆ ಬಿನೈಸಲೆಂದು ಹತ್ತಿರ ಬಂದು
ಹಿಂಗಲಾಱದೆ ಕಣ್ಣಲ್ಲಿಂ ಶೋಕಜಲಬಿಂದು
ತೆರಳೆ ಸೆರೆ ಬಿಗಿದು ಗದಗದಿಸಿ ಬಿಕ್ಕುತೆ ಬಿದ್ದು
ಹೊರಳುತ್ತಳುತ್ತಗಲಲಾಱದೋಳಲುತ್ತಿದ್ದು
ನಿಂದಿರುತ್ತೆಲೆ ಸಂಗ ಹೋಗಿಬಂದಪೆನಯ್ಯ
ತಂದೆ ನಿನ್ನ ೦ ನಂಬಿ ನಚ್ಚಿ ಹೋದಪೆನಯ್ಯ
ಅಗಲಲಾಱಂ ದೇವದೇವ ಕರುಣಿಪುದೆನುತೆ
ಬಗೆ ಹೆಚ್ಚಿ ತನು ಹೆಚ್ಚಿ ಕೊಟ್ಟಂತೆ ನಿಂದಿರುತೆ
ಮುಂದಿರ್ದ ಬಸವನಂ ಕಂಡು ಸಂಗಂ ಮಲಗಿ
ಬಂದಪ್ಪಿ ಕಣ್ಣ ನೀರಂ ತೊಡೆದು ಮಿಗೆ ಮಲಗಿ

ಬೇಡೆನ್ನ ಕಂದ ನಿನ್ನೊಡನೆ ಬಪ್ಪೆ೦ ಬಸವ
ನೋಡು ನಿನ್ನಾಣೆ ನಿನ್ನೊಡನೆ ಬಪ್ಪೆಂ ಬಸವ
ನಿನ್ನನಗಲಿರಲಾರ್ಪೆನೇ ಬಸವ ಬಸವಣ್ಣ
ನೀನಿಂತಳುಪ್ರಡೆನಗರಿದು ಬಸವಣ್ಣ
ಕಂದ ಬೇಡಯ್ಯ ಬೇಡಯ್ಯ ನೇಹದ ನಿಧಿಯೆ
ಹಿಂದುಗೊಂಡೇ ಬಪ್ಪೆನೆನ್ನ ಸುಕೃತದ ಸುಧೆಯೆ
ನೆನೆಯೆ ಮುಂದಿರ್ದಪೆಂ ಕರೆದೊಡೋ ಎಂದಪೆಂ
ಮನದೊಳಗೆ ಕರದೊಳಗೆ ತನುವಿನೊಳಗಿರ್ದವೆಂ
ನಿಂದಲ್ಲಿ ನಿಂದಪೆಂ ನಡೆದಲ್ಲಿ ನಡೆದಪೆಂ
ಬಂದಲ್ಲಿ ಬಂದಪೆಂ ನುಡಿದಲ್ಲಿ ನುಡಿದಪೆಂ
ಬಿಟ್ಟುದಂ ಬಿಟ್ಟಪೆಂ ಪಿಡಿದುದಂ ಪಿಡಿದನೆಂ
ನಟ್ಟುದಂ ನಟ್ಟಪೆಂ ಕೇಳುದಂ ಕೇಳಪೆಂ
ಆಡಿದುದನಾಡುವೆಂ ನೋಡಿತಂ ನೋಡುವೆಂ
ಮಾಡಿತಂ ಮಾಡುವೆ೦ ಕೂಡಿತಂ ಕೂಡುವೆಂ
ನಡೆಯಯ್ಯ ನಡೆ ಮಗನೆ ನಡೆ ಕಂದ ಬಸವಣ್ಣ
ಪೊಡವಿಗಧಿಪತಿಯಾಗಿ ಬಾಳೆನ್ನ ಬಸವಣ್ಣ

ಎಂದಲ್ಲಿ ಕರುಣಿಸಿದ ಮಾತು ಸಂಬಳವಾಗಿ
ಬಂದನೆಂತೆಂತಕ್ಕೆ ಅಗಲಲಾಜಿದೆ ರಾಗಿ
ಸಂಗಮನ ಕರುಣವೇ ತನಗೆ ಬೆಂಬಲವಾಗಿ
'ಸಂಗನ ಧ್ಯಾನವೇ ತನಗೆ ಸಂಗಡವಾಗಿ

೮. ಹರಿಹರ: ಬಸವಣ್ಣನವರ ಗುಣ

ಪುಣ್ಯಲೋಭಿ ಭಕ್ತರ ಬಾಕುಳಿ ಶರಣರ ಸೂಜತಿ ಸಜ್ಜನರ ಸಲೆಮಾ ಶರಣರ ಸಂಗದ ಶಾಶ್ವತನೆನಿಸ ಬಸವರಾಜಂ ಲಿಂಗ ಜಂಗಮ ಪ್ರಸಾದ ಹೃದಯ ನಾಗಿ ಶರಣರೊಳು ಸದ್ಗೋಷ್ಟಿಯಿಂದಿರ್ದು ಮತ್ತ ಮಿಂತೆಂದಂ

ದೇವದೇವ, ನಿಮ್ಮರ್ಥಮಂ ನಿಮಗೆ ತೊತ್ತುಗೆಲಸವಂ ಮಾಡಿ ಬೇಡಿತಂ ನೀಡುವ ಕಿಂಕರನೆಂದು ನೀವೆ ಕೊಂಡು ಕೊನೆದಾಡಿಸುವ ನಿಮ್ಮ ಕಣ್ಣ ಮೊದಲ ಕಪ್ಪಡದ ಹಾಹೆ ಆನೆಂಬುದು. ಹಲವ ನುಡಿವುದೆಲ್ಲಂ ಪುಸಿ, ನಡೆವುದೆಲ್ಲಂ ತಪ್ಪು, ನೇಮವಲಯದ ನೀರಸಂ ಪೂಜೆಯಜಿ ಯದ ಪುಣ್ಯ ದೂರಂ ಹಾಡ ಲಯದ ಹಸುಳೆಯಪ್ಪೆನ್ನೊ ಳು ಲೇಸನಸದೆ ತಪ್ಪಂ ನೋಡದೆ ಕರುಣಿಪುದು - ಎಂದು ಬಿನ್ನೆಸಿದ ಬಸವಂಗೆ ಮೆಚ್ಚಿ ಮಾಹೇಶ್ವರಕುಲಂ ಭೋರನೆ ಸರಸಿ ಹಾರೈಸಿ ಹಿಗ್ಗಿ ತಣಿದು ಕುಳ್ಳಿರ್ದ ಮೆಚ್ಚಿ ಮನಂತೀವಿದಾನಂದದಿಂ ಮಿಕ್ಕು ಏಾಯಿ ಎಲೆ ಬಸವ ಬಸವಣ್ಣ ಬಸವಯ್ಯ ಬಸವರಸ ಬಸವರಾಜ ಬಸವಿದೇವ, ಕೇಳಯ್ಯ, ನಿನ್ನ ನೇಮವಿದಾರ್ಗುಂಟು! ಗುರುಲಿಂಗದೊಳೆರಡಿಲ್ಲದಿಪ್ಪೆ. ಶರಣರ ಸಂಗನೆಂದೆ ಕಾಣ್ಬೆ. ಬಂದ ಭಕ್ತರನತ್ಯಾದರಿಪೆ. ಬಪ್ಪ ಭಕ್ತರಂ ಹರುಷದೊಳಿದಿರ್ಗೊ೦ಬೆ. ಬೇಡಿದುದ ಶರಣರ್ಗಿಲೈನ್ನ ದೀವೆ. ಬೇಡಲೊಲ್ಲ ದವರ್ಗೆ ಮಿಗಿಲಾಗಿ ಆರಾಧಿಪೆ. ಜಾಗ್ರತ್ ಸ್ವಪ್ನ ಸುಷುಪ್ತಿಯವಸ್ಥಾತ್ರಯಂ ಗಳೊಳು ಶರಣರಂ ಸಂಗನೆಂದಲ್ಲದೆ ಕಾಣೆ, ನಿಚ್ಚ ಶಿವರಾತ್ರಿಯನಚ್ಚರಿಯಿಂ ಮಾಳ್ಬೆ, ಜಂಗಮ ಪ್ರಾಣಿಯಾಗಿಪ್ಪೆ, ಶಿವಲಿಂಗಾರ್ಪಿತವಲ್ಲದುದನಾಘ್ರಾಣಿಸೆ, ನೋಡೆ, ನುಡಿಯೆ, ಮುಟ್ಟೆ, ಕೇಳೆ, ಶಿವಸಮಯವನುದ್ಭರಿಸುವೆ. ಲಿಂಗದಲ್ಲಿ ಕಠಿನಮಂ ಕೇಳೆ, ಜಂಗಮದಲ್ಲಿ ಜಾತಿಯನಅಸೆ, ಪ್ರಸಾದದಲ್ಲಿ ಅಪವಿತ್ರತೆಯ ನಟಿಯೆ, ಪರಾಂಗನೆಯರಂ ಹೆತ್ತ ತಾಯ್ಗಳೆಂಬೆ, ಪರದ್ರವ್ಯಮಂ ಕಿಲ್ಪಿಷ ವೆಂದು ಮುಟ್ಟಿ, ನಡೆದು ತಪ್ಪೆ, ನುಡಿದು ಹುಸಿಯೆ, ಹಿಡಿದು ಬಿಡೆ, ಬಿಟ್ಟು ಹಿಂಗಲೀಯೆ, ಕೊಟ್ಟು ನೆನೆಯೆ, ನಟ್ಟು ಕೀಳೆ, ಮುಟ್ಟ ಪೆಂಪಿಂಗೆ, ಕೂಡಿ ತಪ್ಪೆ, ನೋಡಿ ನಿರಾಕರಿಸೆ .ನೆನೆದು ಮನೆಯೆ. ಮನದೊಳೋವರಿಯಿಲ್ಲ, ಬುದ್ದಿಯೊಳು -ವಿಸಂಚವಿಲ್ಲ, ಅಹಂಕಾರದೊಳು ಗರ್ವವಿಲ್ಲ, ಚಿತ್ತದೊಳು ಹೊರೆಯಿಲ್ಲ. ಕಾಮವಿಲ್ಲ, ಕೋಪದ ಮಾತೇಕೆ? ಲೋಭದ ಗಾಳಿ ತೀಡದು, ಮೋಹಕೆ ತೆಅಹಿಲ್ಲ, ಮದದ ಸೊಗಡು ಹೊದ್ದದು, ಮತ್ಸರಕ್ಕಿಂಬಿಲ್ಲ. ಬಸವ ರಾಜ, ನಿನ್ನ ಗುಣಂಗಳಂ ಬಣ್ಣಿಸಲೆನ್ನಳವಲ್ಲ. ಈಶನ ಮಾಸಲಪ್ಪ ಭಕ್ತ, ನಿನಗೆಣೆಯಿಲ್ಲ ಪಡಿಯಿಲ್ಲ, ಪಾಸಟಿಯಾವಂ? ಪಾಷಂಡಿ ಭೂಮಿಯೊಳು ಶಿವ ಭಕ್ತಿಯನಾರಂಭಿಸಿ ಸಾಮರ್ಥ್ಯಮಂ ಬಿತ್ತಿ ಪ್ರತ್ಯಕ್ಷಂಗಳಂ ಬೆಳೆದು ಗಣಪರ್ವ೦ ಗಳಂ ಸುಫಲಂ ಮಾಡಲೆಂದು ಬಂದ ಕಾರಣಿಕ ಬಸವ, ನಿನ್ನ ದೆಸೆಯಿಂದೆಮ್ಮ ಭಕ್ತಿ, ಬಣ್ಣ ವೇಆ ತು-ಎಂದಡಿಗಡಿಗೆ ಮೆಚ್ಚಿ ತೂಗಾಡುವ ಗಣಂಗಳ ಚರಣಂ ಗಳಂ ಬಿಗಿಯಪ್ಪಿ ಬಸವರಾಜಂ ಪೊಗಳೆಗೆ ತಲ್ಲಣಿಸಿ ತಗ್ಗಿ ಮಲ್ಲಣಿಗೊಂಡಾಗ ಳಾಗಳಿನ ಸಂಗತಿಗೆ ಹೊಸ ಹೊಸ ಗೀತಮಂ ಕೇಳಿಸುತ್ತಿರ್ದ(ನ್)....

೯. ಮಹಾದೇವಿಯಕ್ಕ: ಸು. ೧೧೬೦ ಶಿವನೇ ನನ್ನ ಗಂಡ

ವನವೆಲ್ಲ ನೀವೆ. ವನದೊಳಗಣ ದೇವತರುವೆಲ್ಲ ನೀನೆ. ತರುವಿನೊಳ ಗಾಡುವ ಖಗಮೃಗವೆಲ್ಲ ನೀವೆ. ಚೆನ್ನಮಲ್ಲಿಕಾರ್ಜುನ ಸರ್ವಭರಿತನಾಗಿ ಎನಗೆ ಮುಖದೋರ.

ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ, ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ, ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ. ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ, ಜಗದ ಜಂಗುಳಿಗಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ. ಚೆನ್ನಮಲ್ಲಿಕಾರ್ಜುನ, ನೀನೊಡ್ಡಿದ ಮಾಯೆಯನಾರೂ ಗೆಲಲಾರರು.

ಪುರುಷನ ಮುಂದೆ ಮಾಯೆ ಸ್ತ್ರೀ ಎಂಬ ಅಭಿಮಾನವಾಗಿ ಕಾಡಿತ್ತು ನೋಡಾ! ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡಿತ್ತು ನೋಡಾ! ಲೋಕವೆಂಬ ಮಾಯೆಗೆ ಶರಣಚಾರಿತ್ರ ಮರುಳಾಗಿ ತೋರುವುದು ನೋಡಾ! ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆ ಇಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.

ಪಚ್ಚೆಯ ನೆಲಗಟ್ಟು, ಕನಕದ ತೋರಣ, ವಜ್ರದ ಕಂಭ, ಪವಳದ ಚಪ್ಪರವನಿಕ್ಕಿ ಮುತ್ತು ಮಾಣಿಕದ ಮೇಲುಕಟ್ಟೆ ಕಟ್ಟ ಮದುವೆಯ ಮಾಡಿದರು, ನಮ್ಮವರೆನ್ನ ಮದುವೆಯ ಮಾಡಿದರು. ಕಂಕಣ ಕೈದಾರ ಸ್ಥಿರ ಸೇಸೆಯನಿಕ್ಕಿ, ಚೆನ್ನ ಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರು.

ಜಲದ ಮಂಟಪದಮೇಲೆ ಉರಿಯ ಚಪ್ಪರವನಿಕ್ಕಿ, ಆಲಿಕಲ್ಲ ಹಸೆಯ ಹಾಸಿ, ಕಾಲಿಲ್ಲದ ಹೆಂಡತಿಗೆ, ತಲೆಯಿಲ್ಲದ ಗ೦ಡ ಬಂದು ಮದುವೆಯಾದನು. ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರು.

ಮಂಗಳವೇ ಮಜ್ಜನವೆನಗೆ, ವಿಭೂತಿಯೆ ಒಳುಗುಂದದರಿಸಿನವೆನಗೆ, ದಿಗಂಬರವೇ ದಿವ್ಯಾಂಬರವೆನಗೆ, ಶಿವಪಾದರೇಣುವೇ ಅನುಲೇಪನವೆನಗೆ, ರುದ್ರಾಕ್ಷಿಯೇ ಮೈ ದೊಡಿಗೆ ಎನಗೆ, ಶರಣರ ಪಾದಂಗಳೇ ತೊಂಡಿಲ ಬಾಸಿಗ ವೆನಗೆ, ಚೆನ್ನಮಲ್ಲಿಕಾರ್ಜುನನೇ ಗಂಡನೆನಗೆ, ಆನು ಚೆನ್ನಮಲ್ಲಿಕಾರ್ಜುನಂಗೆ ಮದುವಳಿಗೆ, ಎನಗೆ ಬೇರೆ ಶೃಂಗಾರವೇಕೆ ಹೇಳಿರಾ,

ಬೆಟ್ಟದಮೇಲೊಂದು ಮನೆಯ ಮಾಡಿ ಮೃಗಂಗಳಿಗಂಜಿದಡೆಂತಯ್ಯ! ಸಮುದ್ರದ ತಡೆಯಲ್ಲಿ ಮನೆಯ ಮಾಡಿ, ನೊರೆ ತೊರೆಗಳಿಗಂಜಿದಡೆಂತಯ್ಯ! ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯ! ಚೆನ್ನ ಮಲ್ಲಿಕಾರ್ಜುನದೇವ ಕೇಳಯ್ಯ! ಲೋಕದೊಳಗೆ ಹುಟ್ಟಿರ್ದ ಬಳಿಕ ಸ್ತುತಿ ನಿಂದೆಗಳು ಬಂದಡೆ, ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಅಯ್ಯಾ ನೀ ಕೇಳಿದರೆ ಕೇಳು, ಕೇಳದಿರ್ದೊಡೆ ಮಾಣು, ನಾನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ! ಅಯ್ಯ ನೀ ಒಲಿದರೆ ಒಲಿ, ಒಲಿಯದಿರ್ದೊಡೆ ಮಾಣು, ನಾ ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯ! ಅಯ್ಯಾ, ನೀ ಮೆಚ್ಚಿ ದರೆ ಮೆಚ್ಚು ಮೆಚ್ಚದಿರ್ದೊಡೆ ಮಾಣು, ನಾನಿನ್ನ ನಪ್ಪಿದಲ್ಲದೆ ಸೈರಿಸಲಾರೆ ನಯ್ಯಾ! ಅಯ್ಯ ನೀ ನೋಡಿದೊಡೆ ನೋಡು, ನೋಡದಿರ್ದೊಡೆ ಮಾಣು, ನಾನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯ! ಚೆನ್ನಮಲ್ಲಿಕಾರ್ಜು ನಯ್ಯ ನಾ ನಿನ್ನ ಪೂಜಿಸಿ ಹರುಷದೊಳೋಲಾಡುವೆನಯ್ಯ,

ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಚೆಲುವಂಗಾನೊಲಿದೆನವ್ವ, ಎಡೆ ಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ಚೆಲುವಂಗಾನೊಲಿದೆ ಎಲೆ ಅವ್ವಾ, ನೀನು ಕೇಳಾ ತಾಯೆ, ಭಯವಿಲ್ಲದ ನಿರ್ಭಯ ಚೆಲುವಂಗೊಲಿದೆ. ಇದು ಕಾರಣ ಚೆನ್ನ ಮಲ್ಲಿಕಾರ್ಜುನ ಚೆಲುವ ಗಂಡನೆನಗೆ ಈ ಸಾವ ಕೆಡುವ ಗಂಡರನೆಯು ಒಲೆಯೊಳಗಿಕ್ಕು. ವೇದಶಾಸ್ತ್ರ ಪುರಾಣಾಗಮಂಗಳೆಲ್ಲ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿ ಭೋ! ಇವ ಕುಟ್ಟಲೇಕೆ? ಅತ್ತಲಿತ್ತ ಹರಿವ ಮನದ ಶಿರವ ನರಿದಡೆ, ಬಚ್ಚ ಬರಿಯ ಬಯಲು ಚೆನ್ನಮಲ್ಲಿಕಾರ್ಜುನ.

ಗಿರಿಯಲ್ಲದೆ ಹುಲ್ಲುಮೊರಡಿಯಲ್ಲಾಡುವುದೇ ನವಿಲು? ಕೊಳನಲ್ಲದೆ ಕಿರಿವಳ್ಳಕ್ಕೆಳಸುವುದೆ ಹಂಸೆ? ಮಾಮರ ತಳಿತಲ್ಲದೆ ಸ್ವರಗೈವುದೆ ಕೋಗಿಲೆ? ಪರಿಮಳವಿಲ್ಲದ ಪುಷ್ಪಕ್ಕೆಳಸುವುದೇ ಭ್ರಮರ? ಎನ್ನ ದೇವ ಚೆನ್ನಮಲ್ಲಿಕಾರ್ಜುನ ನಲ್ಲದೆ, ಅನ್ಯಕ್ಕೆಳಸುವುದೇ ಎನ್ನ ಮನ ಕೇಳಿರೆ, ಕೆಳದಿಯರಿರಾ?

ಎನ್ನಂಗದಲ್ಲಿ ಆಚಾರವ ತೋರಿದನಯ್ಯ ಬಸವಣ್ಣನು. ಆಚಾರವೇ ಲಿಂಗವೆಂದರುಹಿದನಯ್ಯ ಬಸವಣ್ಣನು, ಎನ್ನ ಪ್ರಾಣದಲ್ಲಿ ಅರಿವ ತೋರಿದನಯ್ಯ ಬಸವಣ್ಣನು. ಅರಿವೇ ಜಂಗಮವೆಂದು ಅರುಹಿದನಯ್ಯ ಬಸವಣ್ಣನು. ಚೆನ್ನಮಲ್ಲಿಕಾರ್ಜುನಯ್ಯ, ಎನ್ನ ಹೆತ್ತ ತಂದೆ ಸಂಗನ ಬಸವಣ್ಣ ಎನಗೀ ಕ್ರಮವನರುಹಿದನಯ್ಯ,

ಕಾಮನ ಗೆಲಿದೆನು ಬಸವಾ ನಿಮ್ಮ ದಯದಿಂದ. ಸೋಮಧರನ ಹಿಡಿ ತಪ್ಪೆನು ಬಸವಾ ನಿಮ್ಮ ಕೃಪೆಯಿಂದ. ನಾಮದಲ್ಲಿ ಹೆಂಗುಸೆಂಬ ಹೆಸರಾದ. ರೇನು, ಭಾವಿಸಲು ಗಂಡುರೂಪು, ಬಸವಾ ನಿಮ್ಮ ದಯದಿಂದ, ಅತಿ ಕಾಮಿ ಚೆನ್ನಮಲ್ಲಿಕಾರ್ಜುನಯ್ಯ೦ಗೆ ತೊಡರನಿಕ್ಕಿ ಎರಡುವರಿಯದೆ ಕೂಡಿದೆನು. ಬಸವಾ ನಿಮ್ಮ ಕೃಪೆಯಿಂದ,

ಕಿಡಿ ಕಿಡಿ ಕೆದರಿದಡೆ, ಎನಗೆ ಹಸಿವು ತೃಷೆ ಅಡಗಿತೆಂಬೆನು. ಮುಗಿಲು. ಹರಿದುಬಿದ್ದರೆ, ಎನಗೆ ಮಜ್ಜನಕ್ಕೆರೆದರೆಂಬೆನು. ಗಿರಿ ಮೇಲೆ ಬಿದ್ದರೆ ಎನಗೆ ಪುಷ್ಪವೆಂಬೆನು ಚೆನ್ನಮಲ್ಲಿಕಾರ್ಜುನಯ್ಯಾ, ಶಿರ ಹರಿದು ಬಿದ್ದರೆ ಪ್ರಾಣ ನಿಮಗರ್ಪಿತವೆಂಬೆನು.

ಚಂದನವ ಕಡಿದು ಕೊರೆದು ತೇದೊಡೆ, ನೊಂದೆನೆಂದು ಕಂಪ ಬಿಟ್ಟತ್ತೆ? ತಂದು ಸುವರ್ಣವ ಕಡಿದೊರೆದೊಡೆ, ಬೆಂದು ಕಳಂಕ ಹಿಡಿದಿತೆ? ಸಂದು. ಸಂದು ಕಡಿದ ಕಬ್ಬನು ಗಾಣದಲಿಕ್ಕಿ ಬೆಂದು ಸಾಕಾಗುಳ್ಳ ಸಕ್ಕರೆಯಾಗಿ ನೊಂದೆನೆಂದು ಸವಿಯ ಬಿಟ್ಟಿತೆ? ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮು೦ದಿಳುಹಲು ನಿಮಗೆ ಹಾನಿಯೆ? ಎನ್ನ ತಂದೆ ಚೆನ್ನ ಮಲ್ಲಿಕಾರ್ಜುನ, ದೇವಯ್ಯ ಕೊಂದೊಡೆ ಶರಣೆಂಬುದ ಮಾಣೆ,

ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ? ಮನ ನಿಮ್ಮ ರೂಪಾದ ಬಳಿಕ ನಾನಾರ ನೆನೆವೆ? ಪ್ರಾಣ ನಿಮ್ಮ ರೂಪಾದ ಬಳಿಕ, ನಾನಾರ ನಾರಾಧಿಸುವೆ? ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ, ನಾನಾರನರಿವೆ? ಚೆನ್ನಮಲ್ಲಿಕಾರ್ಜುನಾ, ನಿಮ್ಮಲ್ಲಿ ನೀವಾಗಿ ನಿಮ್ಮಿಂದ ಮರೆದೆನಯ್ಯಾ,

ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲರೆ ಹಾವಿನ ಸಂಗವೇ ಲೇಸು. ಕಂಡಯ್ಯ, ಕಾಯದ ಸಂಗವೇ ಲೇಸು ಕಂಡಯ್ಯ, ತಾಯಿ ರಕ್ಕಸಿಯಾದಂತೆ ಕಾಯ ವಿಕಾರ. ಚೆನ್ನಮಲ್ಲಿಕಾರ್ಜುನಯ್ಯ ನೀನೊಲಿದವರು ಕಾಯಗೊಂಡಿ ದ್ದರೆನಬೇಡ.

ಬಂಜೆ ಬೇನೆಯನರಿಯಳು. ಬಲತಾಯಿ ಮುದ್ದ ಬಲ್ಲಳೆ? ನೊಂದ ನೋವ ನೋಯದವರೆತ್ತ ಬಲ್ಲರು? ಚೆನ್ನಮಲ್ಲಿಕಾರ್ಜುನ, ನೀನಿರಿದಲಗು ಒಡಲಲ್ಲಿ ಮುರಿದು ಹೊರಳುವಳ ನೀವೆತ್ತ ಬಲ್ಲರೆ ಎಲೆ ತಾಯಿಗಳಿರಾ?

ಅಳಿ ಸಂಕುಳವೇ, ಮಾಮರವೇ, ಬೆಳುದಿಂಗಳೇ, ಕೋಗಿಲೆಯೇ, ನಿಮ್ಮ ನಿಮ್ಮನೆಲ್ಲರನು ಒಂದ ಬೇಡುವೆನು. ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ಕಂಡರೆ ಕರೆದು ತೋರಿರೆ.

ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಸರವೆ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಎರಗಿ ಬ೦ದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಕೊಳನ ತಡಿಯೋಳಾಡುವ ಹಂಸಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಗಿರಿಗಹ್ವರ ದೊಳಗಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಚೆನ್ನ ಮಲ್ಲಿಕಾರ್ಜುನನೆಲ್ಲಿರ್ದಿಹನೆಂದು ನೀವು ಹೇಳಿರೆ, ನೀವು ಹೇಳಿರೆ.

ಆಕಾರವಲ್ಲದ ನಿರಾಕಾರದ ಲಿಂಗವ ಕೈಯಲ್ಲಿ ಹಿಡಿದು, ಕೊರಳಲ್ಲಿ ಕಟ್ಟಿದೆ ವೆಂದೆಂಬರು ನರಕಿ ಜೀವಿಗಳು. ಹರಿ ಬ್ರಹ್ಮರು ವೇದಶಾಸ್ತ್ರಂಗಳರಸಿ ಕಾಣದ ಲಿಂಗ, ಭಕ್ತಿಗೆ ಫಲಪದಂಗಳಲ್ಲದೆ ಲಿಂಗವಿಲ್ಲ. ಕರ್ಮಕ್ಕೆ ನರಕವಲ್ಲದೆ, ಲಿಂಗವಿಲ್ಲ. ವೈರಾಗ್ಯಕ್ಕೆ ಮುಕ್ತಿಯಲ್ಲದೆ, ಲಿಂಗವಿಲ್ಲ. ಜ್ಞಾನಕ್ಕೆ ಪರಿಭ್ರಮಣ ವಲ್ಲದೆ, ಲಿಂಗವಿಲ್ಲ. ಇದು ಕಾರಣ ಅದೈತದಿಂದ ತನ್ನ ತಾನರಿದು ತಾನಾದರೆ. ಚೆನ್ನಮಲ್ಲಿಕಾರ್ಜುನ ಲಿಂಗ ತಾನೆ ಬೇರಿಲ್ಲ.

ಹೊಳೆವ ಕೆಂಜೆಡೆಗಳ, ಮಣಿಮುಕುಟ ಒಪ್ಪುವ, ಸುಲಿಪಲ್ಲ, ನಗೆಮೊಗದ ಕಂಗಳ, ಕಾಂತಿಯಿಂ ಈರೇಳು ಭುವನಮಂ ಬೆಳಗುವ ದಿವ್ಯ ಸ್ವರೂಪನ ಕಂಡೆ ನಾನು, ಕಂಡೆನ್ನ ಕಂಗಳ ಬರ ಹಿಂಗಿಂದು, ಗಂಡ ಗಂಡರೆಲ್ಲ ಹೆಂಡ ಹೆಂಡಿರಾಗಿ ಆಳುವ ಗರುವನ ಕಂಡೆ ನಾನು. ಜಗದಾದಿಶಕ್ತಿಯೊಳು ಬೆರಸಿ ಯೊಡನಾಡುವ ಪರಮಗುರು ಚೆನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು.

೧೦. ಹರಿಹರ: ಭಕ್ತಿಯ ಆವೇಶ

ಕರೆವುದದೆಂದು ಕಾಲ್ವಡಿಸಿಕೊಳ್ಳುದದೆಂದು ದಯಾಕಟಾಕ್ಷದಿಂ
ಪೊರೆವುದದೆಂದು ಮೆಲ್ಕು ಡಿಗಳಿಂ ಮದವೇ ಆ ಪುದೆಂದು ಸೋ೦ಕಿನಿಂ
ಹರಿಪುದದೆಂದು ಸಂತಸದೆ ಪೆರ್ಚಿಪುದೆಂದು ಮನಸ್ವಿ ನೀಂ ಕರಂ
ಕರಗಿಪುದೆನ್ನ ನೆಂದೊಸೆದು ಪೇಳೆನಗಿಂದೆಲೆ ಹಂಪೆಯಾಳನೇ

ನೋಡದ ಕಣ್ಣಳೇಕೆ ಸಲೆ ಕೇಳದ ಕರ್ಣನದೇಕೆ ಭಕ್ತಿಯಿಂ
ಪಾಡದ ಬಾಯದೇಕೆ ಪೆಸರ್ಗೊಳ್ಳದ ಜಿಹ್ವೆಯದೇಕೆ ಪೂಜೆಯಂ
ಮಾಡದ ಕೈಗಳೇಕೆ ನೆಱೆ ಸೋ೦ಕದ ದೇಹಮದೇಕೆ ಕೂಡಿಯ
ಳ್ಕಾಡದ ಚಿತ್ರವೇಕೆನಗೆ ಹಂಪೆಯ ಲಿಂಗವೆ ನಿಮ್ಮೊಳಳ್ಕಱಿಂ

ಸತಿಪುತ್ರರ್‌ ಮಿತ್ರರಾಪ್ತರ್ ತನುಧನಮನವೆಂಬಂತಿವಂ ನಿತ್ಯಮೆಂದು
ಚ್ಚತರ ವ್ಯಾಸಂಗದಿಂ ಮೆಯ್ಯಱಿಯದೆ ಮರುಳಾಗಿರ್ದೆನೆನ್ನ೦ ದುರಾಶಾ
ವೃತನಂ ದುರ್ಮೋಹಿಯಂ ದುಸ್ತರವಿಷಯವ್ಯಾಪ್ತನಂ ದುರ್ಧರೈನೋ
ಹತನಂ ದುರ್ಬೋಧನಂ ರಕ್ಷಿಪುದೆಲೆ ಕೃಪೆಯಿಂದಂ ವಿರೂಪಾಕ್ಷಲಿಂಗಾ

ನಾನಾಜನ್ಮಂಗಳೊಳ್ ಬಾರದ ಪರಿಭವಮಂ ಬಂದ ತನ್ನ೦ದಮಂ ತಾ
ನೇನೆಂದೊಂದೆಳ್ಳನಿತ್ತಂ ನೆನೆಯದು ತನಗೆಂತಿಚ್ಚೆಯಂತಿರ್ದು ನಿನ್ನೀ
ಧ್ಯಾನಾರಂಭಕ್ಕಣಂ ಸಲ್ಲದು ಸುಡು ಸುಡು ಚಿಃ! ಮನ್ಮನೋವೃತ್ತಿ ನಿನ್ನಂ
ತಾನಾಱೆ೦ ನೀನೆ ಸಂತಂ ನಿಲಿಸಿದನೋಲವಿಂದಂ ವಿರೂಪಾಕ್ಷಲಿಂಗಾ

ಮೋಹಕ್ಕೋರೊರ್ಮೆ ಮಾಧುರದ ನುಡಿನೆಲೆಗೋರೊರ್ಮೆ ಸಂದಿರ್ದ ಕಾಮೋ
ತ್ಸಾಹಕ್ಕೋರೊರ್ಮೆ ಮೆಯ್ವೆರ್ವರ್ಚೊದವಿದ ಮದಕೋರೊರ್ಮೆ ಪೆರ್ಚಿರ್ದ ಲೋಭ
ವ್ಯೂಹಕ್ಕೋರೊರ್ಮೆ ಕೋಪೋನ್ನತಿಯನುಮತಿಗೋರೊರ್ಮೆ ಮೆಯ್ವರ್ಚಿ ಮದ್ದೇ
ಹೋಹಂ ಎಂದೆಂಬುದಂ ಮಾಣಿಸು ಮನಕಮಿದೊಂದಂ ವಿರೂಪಾಕ್ಷಲಿಂಗಾ

ನವನಿಧಿ ಬಾರ ಪುಣ್ಯನಿಧಿ ಬಾರ ಮಹಾನಿಧಿ ಬಾರ ಭಕ್ತರು
ತೃವನಿಧಿ ಬಾರ ಭಾಗ್ಯನಿಧಿ ಬಾರ ಕೃಪಾನಿಧಿ ಬಾರ ಕಾಂತಿಯು
ದೃನನಿಧಿ ಬಾರ ನಿತ್ಯನಿಧಿ ಬಾರ ಕೃಪಾನಿಧಿ ಬಾರ ಸತ್ಯಸಂ
ಭವನಿಧಿ ಬಾರ ತತ್ವನಿಧಿ ಬಾರೆಲೆ ಬಾರೆಲೆ ಹಂಪೆಯಾಳ್ದನೇ

ಹರಹರ ಕರ್ಮದೊಳ್ ಬಳಲದಿ೦ತು ಬರ್ದುಂಕಿದೆನೈ ಸದಾಶಿವಾ!
ನರಪರ ಸೇವೆಯೊಳ್ ಕುದಿಯದಿ೦ತು ಬರ್ದುoಕಿದೆನೈ ಮಖಾರಿ ಅ
ಸ್ಥಿರ ಪರದೈವದೊಳ್ ತೊಡರದಿಂತು ಬರ್ದುಂಕಿದೆನೈ ಮಹೇಶ! ಮ
ದ್ಗುರುವೆ ಪುರಾರಿ! ಪೂಜ್ಯನೆ ನಿಜಾಂಘ್ರಿಗೆ ಸಾರ್ದೆಲೆ ಹಂಪೆಯಾಳ್ದನೇ

ಹರನಂ ಶಂಕರನಂ ಶಶಾಂಕಧರನಂ ಕಾಪಾಲಿಯಂ ಕಾಲಸಂ
ಹರನಂ ಶೂಲಿಯನೀಶನಂ ಗಿರಿಶನಂ ಭಾಳಾಕ್ಷನಂ ನೀಲಕಂ
ಧರನಂ ಭರ್ಗನನುಗ್ರನಂ ಪರಮನಂ ಸರ್ವಜ್ಞನಂ ಶಂಭುವಂ
ಗಿರಿಜಾವಲ್ಲಭನಂ ಮನೋಜಹರನಂ ಕಂಡಂ ವಿರೂಪಾಕ್ಷನಂ

ಎನ್ನಾನಂದಸುಧಾಬ್ಧಿವರ್ಧನಕಳಾಸಂಪನ್ನನಂ ಚೆನ್ನನಂ
ಮುನ್ನಾರುಂ ನೆಱೆ ಕಾಣಬಾರದ ಲಸತ್‌ಕಾಪಾಲಿಯಂ ಶೂಲಿಯಂ
ಭಿನ್ನಾ ಭಿನ್ನಮೆನಲ್ಕೆ ಬಾರದ ಮಹಾನಿಸ್ಸೀಮನಂ ಭೀಮನಂ
ಚೆನ್ನಂಗಂದುಱೆ ತನ್ನನಿತ್ತ ವಿಭುವಂ ಕಂಡೆಂ ವಿರೂಪಾಕ್ಷನಂ

ಆನಂದಾಮೃತವಾರ್ಧಿಯಂ ಕೃಪೆಯೊಳೆನ್ನಂ ತೊಳ್ತುಗೊಂಡಾಳ್ದನಂ
ನಾನಾದೇವ ಕಿರೀಟಕೋಟ ವಿಲಸತ್ಪಾದಾಬ್ಜನಂ ಭೃತ್ಯಸಂ
ತಾನಾಂಭೋಧಿ ಸುಧಾಂಶುವಂ ದುರಿತ ಘೋರಧ್ಯಾ೦ತ ಮಾರ್ತಂಡನಂ
ಭಾನುಜ್ಯೋತಿಗತರ್ಕ್ಯಕಾಂತಿಯುತನಂ ಕಂಡೆಂ ವಿರೂಪಾಕ್ಷನಂ

ಪೆಜತೊಂದಂ ನುಡಿಯಂ ಪ್ರಪಂಚರಹಿತಂ ಕಾರ್ಪಣ್ಯಮಂ ಮಾಡನೊ
ಲ್ಪೆಱಗಂ ಕಾಮದ ಬಟ್ಟೆಯತ್ತಲೆಳಸಂ ತರ್ಕಕ್ಕೆ ಮಾತ್ಸರ್ಯವೆಂ
ದಱಿಯಂ ಲೋಕದ ಮಾನವರ್ಗೆ ಮಣಿಯಂ ಸದ್ಭಕ್ತ ಸತ್ಸಂಗಮಂ
ತೊಱೆತೆಯಂ ಸತ್ಯಮನಲ್ಲದಾಡನಚಲಂ ಭಕ್ತಂ ವಿರೂಪಾಕ್ಷನಾ

ನಿರಪೇಕ್ಷ ಕರುಣಾಕರಂ ಸುಖಮಯಂ ಶಾಂತಂ ಮಹೋತ್ಸಾಹಿ ಭ
ಕ್ತಿರತಂ ಮಂಗಳಮೂರ್ತಿ ಲಿಂಗಸುಲಭಂ ಸಂತೋಷಿ ಸತ್ಯಂ ವಿಮ
ತ್ಸರನುರ್ವಿಜನವಂದ್ಯನುನ್ನತನನೇಕಾಶ್ಚರ್ಯಯುಕ್ತಂ ಮಹೇ
ಶ್ವರನಾತಂಗರಿದುಂಟೆ ಹಂಪೆಯ ವಿರೂಪಾಕ್ಷ ಪ್ರಸಾದಾನ್ವಿತಂ

ಮನೆ ನೆಳಲಾಗೆ ಪೆಂಡಿರಿನಿದಾಗೆ ಸುತ‌ರ್ ಪಿರಿದಾಗೆ ಅರ್ಥದಾ
ರ್ಜನೆ ಘನವಾಗೆ ಯೌವನಮದಾಗೆ ಬಳಿಕ್ಕದನೇನನೆಂದಪೆಂ
ತನತನಗುಬ್ಬುತಂಕುರಿಸುತಂ ನೆಱೆ ಪಲ್ಲವಿಸುತ್ತೆಪರ್ವುತುಂ
ನನೆಕೊನೆವೋಗಿ ಮಾಯೆ ಕೊಱಚಾಡದೆ ಮಾಣ್ಬಳೆ ಹಂಪೆಯಾಳ್ದನೇ

ನರರಂ ಸೇವಿಪ ಜೀಯ ಜೀಯೆನುತುಮಿರ್ಪೆನೆಂದೊಡಂ ದೈನ್ಯಮು
ಬೃರಿಸುತ್ತುಂ ತನುಗುಂದಿಯುಂ ತನಗೆ ತಾನೆಂತಕ್ಕೆಯುಂ ಬೇಡುತಿ
ರ್ಪಿರವಂ ಸುಟ್ಟು ಬಿಸುಟ್ಟು ಭಕ್ತಿಯೊಳಗೋಲಾಡಲ್ ಮನಂದಂದು ಶಂ
ಕರನಂ ಶಾಶ್ವತನಂ ಕೃಪಾಜಲಧಿಯಂ ಕಂಡೆಂ ವಿರೂಪಾಕ್ಷನಂ

ಪೋಗೆನೆ ಪೋಪ ಬಾರೆಲವೊ ಬಾರೆನೆ ಜೀಯ ಹಸಾದವೆಂದು ಬೆ
ಳ್ಳಾಗುತೆ ಬರ್ಪ ಮಾಣೆಲವೊ ಸುಮ್ಮನಿರೆಂದೊಡೆ ಸುಮ್ಮನಿರ್ಪ ಮ
ತ್ತಾಗಳೆ ಬಗ್ಗಿಸಲ್‌ ನಡುಗಿ ಬೀಳುವ ಸೇವಿಪ ಕಷ್ಟವೃತ್ತಿಯಂ
ನೀಗಿದೆನಿಂದು ನಿಮ್ಮ ದಯೆಯಿಂ ಕರುಣಾಕರ ಹಂಪೆಯಾಳ್ದನೇ

ಸಡಿ ಫಡ ಮಾನವರ್ ಕುಡುವರೆಂಬುದನಾಡದಿರೆನ್ನ ಮುಂದೆ ಕ
ಪ್ಪಡದ ಶರೀರಗಳ್ ತೃಣದ ಹಾಹೆಗಳಕ್ಕಟ! ಮಣ್ಣ ಬೊಂಬೆಗಳ್
ಕುಡುವುವೆ ಬೇಡು ಬೇಡಿದುದನೀವ ಮಹಾನಿಧಿಯಂ ಮಹೇಶನಂ
ಮೃಡನನನೂನದಾನಿಯನಲಂಪಿನ ಪೆಂಪಿನ ಹಂಪೆಯಾಳ್ದನಂ

೧೧. ಚಾಮರಸ: ಅಲ್ಲಮಪ್ರಭುವಿನ ಕರುಣೆ

ದೀನ ಮನದವನಂತೆ ಕಂಡ ನಿ
ಧಾನವನು ತಾನೊಬ್ಬನುಂಬನೆ
ದಾನಿ ಲೇಸೈ ನಿನ್ನ ಪರಿ ನೀ ಕಂಡ ಶಿವಪಥವ
ಮಾನವರಿಗಱುಹೆಂಬ ಮಹದಭಿ
ಮಾನಿ ನೀನೇ ಜಗದ ಗುರುವೆಂ
ದಾ ನಿರುಪಮನನಲ್ಲಮನ ಹೊಗಳಿದನು ಗೊಗ್ಗಯ್ಯ

ಕೇಳಿದೌ ಶಿಶುಗಳಿಗೆ ಮಿಗೆ ಮೊಲೆ
ವಾಲೆ ಜೀವನವಾದಡೆಯು ಎಱೆ
ವಾಲನೆಱೆವುತ ಮೆಲ್ಲಮೆಲ್ಲನೆ ಅಶನವುಣ ಕಲಿಸಿ
ಬಾಲಕರ ಪಟುಮಾಡಬಲ್ಲ ಸ
ಕೀಲಕದವೊಲು ಹೊಱಗ ಮಱಿದು ನಿ
ರಾಳದಲಿ ನಿಲಲುಱಿವುದೌ ಮುಕ್ತಾಯಿ ಕೇಳೆಂದ
***
ಚಿಂತಿತಾರ್ಥವನಖಿಳ ಭಕ್ತರ
ತಿ೦ತಿಣಿಗೆ ಕೊಡುತ್ತಲ್ಲಮಪ್ರಭು
ಸಂತಸದಲಿರುತಿರ್ದನೆಲ್ಲರ ಹೃದಯಕಮಲದಲಿ

ಬಾಲರನು ವೃದ್ದರನು ಭೂಮಿ
ಪಾಲರನು ಬಡವರನು ಸದಮಲ
ಶೀಲರನು ಗುಣಿಗಳನು ಗೋಬ್ರಾಹ್ಮಣರನು ಭಕ್ತರನು
ಲೋಲತೆಯಲಿ ಸಮಸ್ತ ಜಾತಿಯ
ಜಾಲವನು ಸರ್ವರನು ಕರುಣಿಸಿ
ಪಾಲಿಸುತಲಿರುತಿರ್ದನೆಮ್ಮಯ ಗುರುಗುಹೇಶ್ವರನು

೧೨. ಷಡಕ್ಷರಿ: ಶಿವಪೂಜೆ

ಅನಂತರಮಾ ಭೂಮಿಪಲಲಾಮಂ ಮರ೦ದದೊಳ್ ಮುಳುಂಗುವ
ಮಧುಕರನಂತೆ ಪರಿಮಳೋದಕದಿಂ ಜಳಕಂಬೊಕ್ಕು, ಶಾರದಾಭ್ರಂ ತಳ್ತ
ಶಶಾಂಕನೆನಿಸಿ ಬೆಳ್ಳಟ್ಟೆಯಂ ಪೊದೆದುಟ್ಟು, ಶಶಿಕಳೆಯಂ ತುಳಿವ ಕೆಂದಾವರೆ
ಯೆನಿಸಿ ಪದತಳದಿಂ ಪಳಿಕುವಾವುಗೆಯಂ ಮೆಟ್ಟಿ, ಪಾಲ್ಗಡಲ ಡಲ ಪರ್ದೆರೆಯೊಳ್ಪು
ಗುವ ಮರಾಳನಂತೆ ಶಶಿಕಾಂತ ರಚಿತವಾದ ಪೂಜಾಗಾರಮಂ ಪೊಕ್ಕರ್ಚ
ನೋಚಿತಾಸನದೊಳುತ್ತರಾಭಿಮುಖಂ ಪ್ರಸನ್ನಮುಖಂ ಪದ್ಮಾಸನಮನ
ವಷ್ಟಂಭಿಸಿ ಋಜುಭಾವದಿಂ ಕುಳ್ಳಿರ್ದು

ಘನ ಸದ್ಯೋಜಾತ ಮುಖ್ಯ ಪ್ರಭವ ಮಹಿಮುಖೋತ್ಪನ್ನ ಸಂಪನ್ನಿವ್ಯತ್ಯಾ
ದಿ ನಿಯುಕ್ತೋತ್ಪತ್ತಿ ಭಾಸ್ವದ್ಗಣಯುತ ಕಪಿಲಾದ್ಯ ಪ್ರಭೂತಾವನೀ ಪಾ
ವನರೂಪ ಶ್ರೀ ವಿಭೂತಿ ಪ್ರಭೃತಿಯನುರೆ ಪತ್ಪೂರ್ವಕಂ ಲೇಪನಂ ಗೆ
ಯ್ದು ನಿತಾಂತಂ ತತ್ತ್ರಿಪುಂಡ್ರಂ ತೊಳಗೆ ತಳೆದು ವಿಧ್ಯುಕ್ತಮಂತ್ರಂಗಳಿಂದಂ

ಶಿವನೇತ್ರಾಂಭೋಜಮಂ ಪೂಜಿಸಿ ಸದವಳ ರುದ್ರಾಕ್ಷಮಂ ಭಕ್ತಿಯಿಂದು
ಕ್ತ ವಿಧಾನಂದಪ್ಪದಾ ತಾಣದೊಳೆ ಗಣನೆಯಂ ಮಿಾರದೋರಂತೆ ತಾಳ್ದೊ
ಪ್ಪುವ ಹೃತ್ಪ೦ಕೇಜದೊಳ್ ಜಾನಿಸಿದನಿನಘನದ್ಯೋತಿಯಂ ಸಾಂಬನಂ ಶಂ
ಭುವನಿಂದ್ವರ್ಧಾ೦ಕ ಕೋಟೀರನನನಘನನಾನಂದದಿಂ ತನ್ನೃಪಾಲಂ

ಅಂತು ಜಾನಿಸಿ ಜಲಕ್ಕನೆ ತೊಳಸ ಮೂರ್ತಿಯನೊಳಗೆ ಕಂಡು
ಕರಣಂಗಳ್ ಕಳೆಯೇರೆ ಮಾನವೇಶ್ವರಂ ಮಾನಸಪೂಜೆಯಂ ರಚಿಸಿ, ಬಾಹ್ಯ
ಪೂಜೆಗೆ ಮನಂದಂದು ನಿಜೇಷ್ಟಲಿಂಗಮಂ ಕರಾಬ್ಜಪೀಠದೊಳ್ ನೆಲೆಗೊಳಿಸಿ
ನಿರ್ನಿಮೇಷಾಕ್ಷಿಯಿಂ ನಿರೀಕ್ಷಿಸಿ

ಹೃದಯದೊಳೆ ಜಾನಿಸಿದ ಪರಿ
ಜದು ನಿಜಲಿಂಗದೊಳಭಿನ್ನಮೆನಿಸಿರೆ ಕಂಡೇ೦
ಮುದವಾಂತನೊ ನರಪತಿ ಬಗೆ
ಗೊದವಿದುದದು ತೋರೆ ಪೊರಗೆ ಸುಖಿಸದರೊಳರೇ


ಇದು ಮುನಿಗಳ ಮನದೊಳಬೆಳ
ಗಿದು ವಿಧಿ ವಿಷ್ಣುಗಳ ವಾದಮಂ ಮಾಣಿಸಿದ
ಗ್ಗದ ಪರಬೊಮ್ಮಂ ತಾನಿಂ
ತಿದು ಮೋಕ್ಷಾಮಳಫಳಪ್ರದಂ ಸುರಭೂಜಂ

ಎಂದು ಕಣ್ಣೀವಿ ನೋಡಿ, ಮನಂದೀವಿ ನೆನೆದು, ಭಾವಂದೀನಿ ಭಾವಿಸಿ, ಮತ್ತೆ
ಮತ್ತೆ ಮಾಣದೆ

ಸುರಿವ ಮುದಶುವೆ ಚಳೆಯಂ
ಶರೀರದೊಳ್ ಮೊಳೆವ ಪುಳಕವೇ ಗುಡಿ ಲಾಸ್ಯಂ
ಕರಕಂಪಂ ಗದ್ಗದರುತಿ
ವರವಾದ್ಯಮದಾಗೆ ಶಿವನನವನಿದಿರ್ಗೊಂಡಂ

ಅ೦ತಿದಿರ್ಗೊಂಡು

ಶ್ರುತಿಸತಿಯ ಶಿರೋಮಣಿ ಯತಿ
ಪತಿಗಳ ಹೃದಯಾಬ್ಜ ದಿವ್ಯ ದಿನಮಣಿ ನತಸಂ
ತತಿ ಚಿಂತಾಮಣಿ ಭುವನ
ಸ್ತುತಲಿಂಗಂ ತಾನಿದೆಂದು ಪೊಗಳ್ದಂ ಭೂಪಂ

ನಿರ್ವ್ಯಾಜ ಭಕ್ತಿಯಿನಿಂತು ಪೊಗಳ್ದನಂತರಂ ಪುರುಷಪುಂಗವಂ ಪುಂಗವ ಧ್ವಜಂಗಾತ್ಮಾರ್ಪಣಂ ಗೆಯ್ದಿನಿಸಾನುಂ ಪೊಳನಿಮಿಷಾಕ್ಷಿಯಿಂ ನಿರೀಕ್ಷಿಸಿ

ಪಳಿಕುಗೊಡದೊಳಗೆ ಪೊರಗು
ಜ್ವಳಿಪಂತರ್ಜ್ಯೋತಿಯಂತಿರೊಳಗಂ ಪೊರಗಂ
ಬೆಳಪ ಮನೋಮಧ್ಯ ಸಮು
ಜ್ವಲಿಂಗವನರಸನಳ್ಳರಿ೦ ಜಾನಿಸಿದಂ

ಅಣಿಯರನುಭವನ ಸುಗುಣನು
ನೆಣಿಪಂತಿರೆ ನಚ್ಚಿ ಮಚ್ಚಿ ತನ್ಮಹಿಮೆಗಳ೦
ಗುಣಿಪಂತಿರೆ ಜನಪಾಲಾ
ಗ್ರಣಿ ಪಂಚಾಕ್ಷರಮನಮಮ ಜಪಿಸಿದನಾಗಳ್


೧೩, ದಾಸರ ಪದಗಳು

ಪುರಂದರದಾಸರು ಸು. ೧೫೪೦

(i)

ಈ ಪರಿಯ ಸೊಬಗಾವ ದೇವರಲಿ ಕಾಣೆ
ಗೋಪೀಜನಪ್ರಿಯ ಗೋಪಾಲಗಲ್ಲದೆ ॥ ಪ ॥

ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೆ ಶ್ರೀಕಾಂತನು
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವತನದಲಿ ನೋಡೆ ಜಗದಾದಿ ಗುರುವು

ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತದಲಿ ನೋಡೆ ದಿವಿಜರೊಡೆಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಆವ ಧೈರ್ಯದಿ ನೋಡೆ ಅಸುರಾಂತಕ

ಗಗನದಲಿ ಸಂಚರಿಪ ಗರುಡದೇವನೆ ತುರಗ
ಜಗತೀಧರ ಶೇಷ ಪರಿಯಂಕಶಯನ
ನಿಗಮಗೋಚರ ಪುರಂದರವಿಠಲಗಲ್ಲದೆ
ಮಿಗಿಲಾದ ದೈವಗಳಿಗೀ ಭಾಗ್ಯವುಂಟೆ

(ii)

ಬಿನ್ನಹಕೆ ಬಾಯಿಲ್ಲವಯ್ಯಾ
ಅನಂತ ಅಪರಾಧ ಎನ್ನಲ್ಲಿ ಇರಲಾಗಿ ॥ ಪ ॥



ಶಿಶುಮೋಹ ಸತಿಮೋಹ ಜನನಿಜನಕರ ಮೋಹ
ರಸಿಕ ಮಿತ್ರರ ಮೋಹ ರಾಜಮೋಹ
ಪಶುಮೋಹ ಭೂಮೋಹ ಬಂಧುವರ್ಗದ ಮೋಹ
ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೆ

ಅನ್ನಮದ ಅರ್ಥಮದ ಅಖಿಲವೈಭವದ ಮದ
ಮುನ್ನ ಪ್ರಾಯದ ಮದವು ರೂಪಮದವು
ತನ್ನ ಸತ್ವದ ಮದ ಧಾತ್ರಿವಶವಾದ ಮದ
ಇನ್ನು ತನಗೆದುರಿಲ್ಲವೆಂದೆಂಬ ಮದದಿಂದ

ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ
ಅಷ್ಟು ದೊರಕಿದರು ಮತ್ತಷ್ಟರಾಸೆ
ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ
ನಷ್ಟ ಜೀವನದಾಸೆ ಪುರಂದರವಿಠಲ

(iii)


ಉದರವೈರಾಗ್ಯವಿದು ನಮ್ಮ
ಪದುಮನಾಭನಲಿ ಲೇಶ ಭಕುತಿಯಿಲ್ಲ ॥ಪ॥
ಉದಯಕಾಲದಲೆದ್ದು ಗಡಗಡ ನಡುಗುತ
ನದಿಯೊಳು ಮಿಂದೆವೆಂದು ಹೇಳುತಲಿ
ಮದ ಮತ್ಸರ ಮೋಹ ಒಳಗೆ ತುಂಬಿಟ್ಟುಕೊಂಡು
ಬದಿಯಲಿದ್ದವರಿಗಾಶ್ಚರ್ಯ ತೋರುವುದು

ಕಂಚುಗಾರರಾ ಅಂಗಡಿಯಂದದಿ
ಕಂಚು ಹಿತ್ತಾಳೆಯ ಪ್ರತಿಮೆಯ ನೆರಹಿ
ಮಿಂಚಲೆನುತೆ ಬಹು ಜೋತಿಗಳನೆ ಹಚ್ಚಿ
ವಂಚನೆಯಲಿ ಘನಪೂಜೆ ಮಾಡುವುದು

ಕರದೊಳು ಜಪಮಣಿ ಬಾಯೊಳು ಮಂತ್ರವು
ಅರಿವೆಯ ಮುಸುಕನು ಮೋರೆಗೆ ಹಾಕಿ
ಪರಸತಿ ಪರಧನಕಾಗಿ ಚಿಂತಿಸುತೆ
ಪರಮವೈರಾಗ್ಯದ ಮೂರ್ತಿಯೆನಿಸುವುದು

ಬೂಟಕತನದಲಿ ಬಹಳ ಬಕುತಿಮಾಡಿ
ನೋಟಕೆ ಇವನಿಗೆ ಸರಿಯಿಲ್ಲೆನಿಸಿ
ನಾಟಕ ಸ್ತ್ರೀಯಳಂತೆ ಬಯಲ ಡಂಬವ ತೋರೆ
ಊಟದ ಮಾರ್ಗದ ಜ್ಞಾನವಿದಲ್ಲದೆ

ನಾನು ಎಂಬುದ ಬಿಟ್ಟು ಜ್ಞಾನಿಗಳೊಡಗೂಡಿ
ಏನೆಲ್ಲಕೆ ದೇವಪ್ರೇರಣೆಯೆಂದು
ಧ್ಯಾನಿಸಿ ಮೌನದಿ ಪುರಂದರವಿಠಲನ
ಕಾಣದೆ ಮಾಡಿದ ಕಾರ್ಯಗಳೆಲ್ಲವು

(iv)


ಹುಚ್ಚು ಹಿಡಿಯಿತು ಎನಗೆ ಹುಚ್ಚು ಹಿಡಿಯಿತು
ಅಚ್ಯುತನ ನಾಮವೆಂಬ ಮೆಚ್ಚು ಮದ್ದು ತಲೆಗೆ ಏರಿ ॥ಪ॥
ವಾಸುದೇವನೆಂಬ ನಾಮ ವದನದಲಿ ಒದರುವೆ ಮಾಯಾ
ಪಾಶವೆಂಬ ಅಂಗಿಯನ್ನು ಹರಿದು ಹರಿದು ಬಿಸುಡುವೆ
ಕ್ಷೇಶವೆಂಬ ಮುಡಿದ ಹೂವ ಕಿತ್ತು ಕಿತ್ತು ಬಿಸುಡುವೆ ಕೆಟ್ಟ
ದೋಷವೆಂಬ ಗೋಡೆಯನ್ನು ಕೆರೆದು ಕೆರೆದು ಹಾಕುವಂಥ
ಕೃಷ್ಣ ನಂಘ್ರಿಕಮಲಕರಗಿ ಸೊರಗಿ ಸೊರಗಿ ಬೀಳುವೆ ಎನ್ನ
ಕಷ್ಟವೆಂಬ ಕುಂಭವನ್ನು ಒಡೆದು ಒಡೆದು ಹಾಕುವೆ
ನಿಷ್ಠರನ್ನು ಕಂಡರವರ ಹಿಂದೆ ಹಿಂದೆ ತಿರುಗುವ ಸಲೆ
ದುಷ್ಟರನ್ನು ಕಂಡ ಕಡೆ ಕಲ್ಲು ಕಲ್ಲು ಬೀಸುವಂಥ
ಮಂದಮತಿಗಳನ್ನು ಕಂಡಧರ್ಮವಕನಾಗುವೆನು ಹರಿಯ
ನಿಂದೆ ಮಾಡುವವರಮೇಲೆ ಮಣ್ಣತಂದು ಚೆಲ್ಲುವೆ
ತಂದೆ ಸಿರಿ ಪುರಂದರವಿಠಲನ ಪಾದವನ್ನು
ಹೊಂದಿಸುವ ಜನರ ಸೇರಿ ಹಾಡಿ ಹಾಡಿ ಕುಣಿಯುವಂಥ

(v)


ಮಾನವಜನ್ಮ ದೊಡ್ಡದು ಇದ
ಹಾನಿಮಾಡಲುಬೇಡಿ ಹುಚ್ಚಪ್ಪಗಳಿರ ॥ ಪ ॥
ಕಣ್ಣು ಕೈ ಕಾಲ್ ಕಿವಿ ನಾಲಗೆ ಇರಲಿಕ್ಕೆ
ಮಣ್ಣು ಮುಕ್ಕಿ ಮರುಳಾಗುವರೆ
ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ
ಉಣ್ಣದೆ ಉಪವಾಸ ಇರುವರೆ ಖೋಡಿ
ಕಾಲನ ದೂತರು ಕಾಲ್ಪಿಡಿದೆಳೆವಾಗ
ತಾಳು ತಾಳೆಂದರೆ ತಾಳುವರೆ
ದಾಳಿ ಬಾರದ ಮುನ್ನ ಧರ್ಮವ ಗಳಿಸಿರೋ
ಸುಳ್ಳಿನ ಸಂಸಾರ ಸುಳಿಗೆ ಸಿಕ್ಕಲು ಬೇಡಿ

ಏನು ಕಾರಣ ಯದುಪತಿಯನು ಮರೆತಿರಿ
ಧನ ಧಾನ್ಯ ಪುತ್ರರು ಕಾಯುವರೆ
ಇನ್ನಾದರು ಏಕೋಭಾವದಿ ಭಜಿಸಿರೊ
ಚೆನ್ನ ಶ್ರೀ ಪುರಂದರವಿಠಲರಾಯನ

(vi)


ಬೇವು ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದೇನು ಫಲ ॥ಪ॥

ಕುಟಿಲವ ಬಿಡದಿಹ ಕುಜನರು ಮಂತ್ರವ
ಪಠನೆಯ ಮಾಡಿದರೇನು ಫಲ
ಸಟೆಯನ್ನಾಡುವ ಮನುಜರು ಸಂತತ
ನಟನೆಯ ಮಾಡಿದರೇನು ಫಲ

ಕಪಟತನದಲಿ ಕಾಡುತ ಜನರನು
ಜಪವನು ಮಾಡಿದರೇನು ಫಲ
ಕುಸಿತತನವನು ಬಿಡದೆ ನಿರಂತರ
ಉಪವಾಸಮಾಡಿದರೇನು ಫಲ

ಮಾತಾಪಿತರನು ಬಳಲಿಸಿದಾತನು
ಯಾತ್ರೆಯ ಮಾಡಿದರೇನು ಫಲ
ಘಾತಕತನವನು ಬಿಡದೆ ನಿರಂತರ
ಗೀತೆಯನೋದಿದರೇನು ಫಲ

ಪತಿಗಳ ನಿ೦ದಿಪ ಸತಿಯರು ಬಹು ವಿಧ
ವ್ರತಗಳ ಮಾಡಿದರೇನು ಫಲ
ಅತಿಥಿಗಳೆಡೆಯಲಿ ಭೇದವ ಮಾಡುತ
ಗತಿಯನು ಬಯಸಿದರೇನು ಫಲ

ಹೀನಗುಣಂಗಳ ಹಿಂಗದೆ ಗಂಗೆಯ
ಸ್ನಾನವ ಮಾಡಿದರೇನು ಫಲ
ಶ್ರೀನಿಧಿ ಪುರಂದರವಿಠಲನ ನೆನೆಯದೆ
ಮೌನವ ಮಾಡಿದರೇನು ಫಲ

(vii)


ಕಂಡು ಕಂಡು ಎನ್ನ ಕೈ ಬಿಡುವರೆ
ಪುಂಡರೀಕಾಕ್ಷ ಪುರುಷೋತ್ತಮ ದೇವ ॥ಪ॥

ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈ ನೀರಜಾಕ್ಷ
ತಂದೆತಾಯಿಯು ನೀನೆ ಬಂಧು ಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣ

ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದ ಭವದಿ ನೊ೦ದೆ ನಾನು
ಸನಕಾದಿಮುನಿವಂದ್ಯ ವನಜಸಂಭವನ ಪಿತ
ಫಣಿಶಾಯಿ ಪ್ರಹ್ಲಾದವರದ ಶ್ರೀಕೃಷ್ಣ

ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ
ಭಕ್ತರಾಧೀನನಾಗಿರಬೇಡವೆ
ಮುಕ್ತಿದಾಯಕ ದೇವ ಪುರಂದರವಿಠಲನೆ
ಶಕ್ತ ನೀನಹುದೆಂದು ನಂಬಿದೆನೋ ಕೃಷ್ಣ

(viii)


ಅನುಭವದಡಿಗೆಯ ಮಾಡಿ ಅದ
ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ ॥ಪ॥

ತನುವೆಂಬ ಭಾಂಡವ ತೊಳೆದು ಕೆಟ್ಟ
ಮನದ ಚಂಚಲವೆಂಬ ಮುಸುರೆಯ ಕಳೆದು
ಘನವಾಗಿ ಮನೆಯನ್ನು ಬಳಿದು ಅಲ್ಲಿ
ಮಿನುಗುವ ತ್ರಿಗುಣದ ಒಲೆಗುಂಡನೆಡೆದು

ವಿರಕ್ತಿಯೆಂಬೋ ಮಡಿಯುಟ್ಟು ಪೂರ್ಣ
ಹರಿಭಕ್ತಿಯೆಂಬ ನೀರನ್ನೆ ಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು ಮಾಯಾ
ಮರವೆಂಬ ಕಾಷ್ಠವ ಮುದದಿಂದ ಸುಟ್ಟು

ಕರುಣೆಯೆಂಬೊ ಸಾಮಗ್ರಿ ಹೂಡಿ ಮೋಕ್ಷ
ಪರಿಕರವಾದಂಥ ಪಾಕವ ಮಾಡಿ
ಗುರು ಶರಣರು ಸವಿದಾಡಿ ನಮ್ಮ
ಪುರಂದರವಿಠಲನ ಬಿಡದೆ ಕೊಂಡಾಡಿ

(ix)


 ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ ॥ಪ॥

ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಣೆ

ತನು ಮನ ಧನದಲ್ಲಿ ವಂಚಕನಾದರೆ ಎನಗೆ ಆಣೆ ರಂಗ
ಮನಸು ನಿನ್ನಲ್ಲಿ ನಿಲಿಸದಿದ್ದರೆ ನಿನಗೆ ಆಣೆ

ಕಾಕುಮನುಜರ ಸಂಗವ ಮಾಡಿದರೆನಗೆ ಆಣೆ
ರಂಗ ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ

ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ

ಹರಿ ನಿನ್ನಾ ಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ

(x)


ಈಸಬೇಕು ಇದ್ದು ಜೈಸಬೇಕು
ಹೇಸಿಕೆ ಸಂಸಾರದಲ್ಲಿ ಆಶಾಲೇಶಮಾಡದಂತೆ ॥ಪ॥

ತಾವರೆಯ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಕೊಂಬರೆಲ್ಲ

ಗೇರುಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ
ಮಾರಿ ಆಸೆ ಮಾಡದಂತೆ ಧೀರ ಕೃಷ್ಣನ ನೆನೆವರೆಲ್ಲ

ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆಪಟ್ಟ ಪರಿಯಂ:
ಮೋಸಹೋಗದಂತೆ ಜಗದೀಶ ಪುರಂದರವಿಠಲನೆನುತ

ಕನಕದಾಸರು ಸು. ೧೫೫೦


(i)


ತಲ್ಲಣಿಸದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ॥ಪ॥

ಬೆಟ್ಟದಾ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆ ಯನು ಕಟ್ಟ ನೀರೆರೆದವರು ಯಾರೊ
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದಮೇಲೆ
ಘಟ್ಟಿಯಾಗಿ ಸಲಹುವನು ಇದಕೆ ಸಂಶಯ ಬೇಡ

ಅಡವಿಯೊಳಗಾಡುವಾ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನಿಯ ತೆರದೆ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಸನಿದಕೆ ಸಂದೇಹ ಬೇಡ
 
ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲಿಗಾಹಾರವಿತ್ತವರು ಯಾರೊ
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ

(ii)


ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೀ ದೇಹದೊಳಗೊ ನಿನ್ನೊಳು ದೇಹವೊ ॥ಪ॥
ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ

ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ ಮನಸು ಜಿಹೈಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ

ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ

(iii)


ಕುಲ ಕುಲ ಕುಲವೆನ್ನು ತಿಹರು
ಕುಲ ಯಾವುದು ಸತ್ಯ ಸುಖವುಳ್ಳ ಜನರಿಗೆ ॥ಪ॥
ಕೆಸರೊಳು ತಾವರೆ ಪುಟ್ಟಲು ಅದ ತಂದು
ಬಿಸಜನಾಭನಿಗರ್ಪಿಸಲಿಲ್ಲವೆ
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು
ವಸುಧೆಯೊಳಗೆ ಭೂಸುರರುಣ್ಣಲಿಲ್ಲವೆ

ಮೃಗಗಳ ಮೈಯಲ್ಲಿ ಪುಟ್ಟಲು ಕಸ್ತೂರಿ
ತೆಗೆದು ಪೂಸುವರು ದ್ವಿಜರೆಲ್ಲರು
ಒಗೆಯಿಂದ ನಾರಾಯಣನಾವ ಕುಲವಯ್ಯ
ಜಗವಲ್ಲಭನಾವ ಕುಲ ಪೇಳಿರಯ್ಯ

ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ವೇಂದ್ರಿಯಗಳ ಕುಲ ಪೇಳಿರಯ್ಯ
ಆತ ಮಹಾತ್ಮನು ನೆಲೆಯಾದಿಕೇಶವ
ಯಾತರ ಕುಲವಯ್ಯ ಆತನೊಲಿದಮೇಲೆ

(iv)


ದಾನ ಧರ್ಮವ ಮಾಡಿ ಸುಖಿಯಾಗು ಮನವೆ
ಹೀನವೃತ್ತಿಯಲಿ ನೀ ಕೆಡಬೇಡ ಮನವೆ ॥ಪ॥

ಎಕ್ಕನಾತಿ ಎಲ್ಲಮ್ಮ ಮಾರಿ ದುರ್ಗಿ ಚೌಡಿ
ಅಕ್ಕರಿಂದಲಿ ಪೂಜೆಮಾಡಲೇಕೆ
ಕಿಕ್ಕಿರಿದು ಯಮನ ದೂತರೆಳೆದೊಯ್ವಾಗ
ಶಕ್ತಿಯರು ಬಿಡಿಸಿಕೊಂಡಾರೇನೊ ಮರುಳೆ

ಸಂಭ್ರಮದಲ್ಲೊಂದು ಹೊತ್ತು ನೇಮದಲಿದ್ದು
ತಂಬಿಟ್ಟಿನಾ ದೀಪ ಹೊರಲೇತಕೆ
ಕೊಂಬು ಹೊತ್ತು ಕುರಿ ಕೋಣನಾ ಬಲಿಗೊಂಬ
ದೊಂಬಿ ದೈವಗಳ ಭಜಿಸದಿರು ಮನವೇ

ಚಿಗುರೆಲೆ ಬೇವಿನಸೊಪ್ಪು ನಾರಸೀರೆ
ಬಗೆ ಬಗೆಯಿ೦ದ ಶೃಂಗಾರಮಾಡಿ
ನೆಗೆನೆಗೆದು ಆಡಲು ಕುಣಿಯಲು ನಿನಗಿನ್ನು
ಮಿಗಿಲಾದ ಮುಕುತಿಯುಂಟೆ ಹುಚ್ಚು ಮನವೆ

ದಾನ ಧರ್ಮ ಪರೋಪಕಾರವ ಮಾಡು
ದೀನನಾಗಿ ನೀ ಕೆಡಬೇಡಿ
ಜ್ಞಾನವಿಲ್ಲದೆ ಹೀನ ದೈವನ ಭಜಿಸಲು
ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ

ನರಲೋಕದಿ ಯಮನ ಬಾಧೆಯ ಕಳೆಯಲು
ವರ ಪುಣ್ಯ ಕಥೆಗಳ ಕೇಳುತಲಿ
ಸಿರಿಯಾದಿಕೇಶವರಾಯನ ನೆರೆ ನಂಬಿ
ಸ್ಥಿರವಾದ ಪದವಿಯ ಪಡೆ ಹುಚ್ಚು ಮನವೆ

೧೪, ಚಿಕದೇವರಾಜ ೧೬೭೨-೧೭೦೪

ಬಿನ್ನಹ

ಒಂದು ದೆಸೆಯೊಳ್ ತುರುಕರೋಂದು ಕಡೆಯೊಳ್ ಮೋಱಸ
ರೋಂದೆಸೆಯೊಳಾರೆಯರ ಬಿಂದಮಳವಿಂ ಬೇ
ರೊಂದು ಬಳಿಯೊಳ್ ತಿಗುಳರೊ೦ದಿರವಿನೊಳ್ ಕೊಡಗು
ರೊಂದು ಕೆಲದೊಳ್ ಮಲೆವರೋಂದುವರೆದೆಲ್ಲರ್

ಸಂದಣಿಸಿ ಕಾಳಗಕೆ ಮುಂದುವರಿವನ್ನ ಮದ
ಟಂದವರ ತಟ್ಟುಗಳ ಪಂದಲೆಗಳಂ ದಿ
ಗ್ಬೃಂದ ಬಲಿಯಿತ್ತು ನಲವಿಂದೆ ಚಿಕದೇವನೃಪ
ನ೦ದಮಿಗೆ ಪೆರ್ಜಸಮನೊ೦ದಿ ಸೊಗವಾಳ್ಗುಂ

ಶ್ರೀ ಪತಿಯ ಸೇವೆಯೆಂದೇ
ಈ ಪರಿಯೊಳ್ ಕ್ಷಾತ್ರಧರ್ಮವೆಸಗುತೆ ಶಾಸ್ತ್ರಾ
ಲಾಪಂಗಳ ತತ್ತ್ವರ್ಥನಿ
ರೂಪಣದಿಂ ಪೊಳ್ತು ಗಳೆವನಪ್ರತಿನಾಂಕ

ಓದಿ ತಿಳಿದೊಳ್ಪಿನಿಂದಂ
ವೇದಾಂತದ ತತ್ವಗತಿಯನೆಲ್ಲ ರುಮುಅವಂ
ತಾದರದಿಂದ ಪ್ರತಿಮಂ
ಯಾದವಗಿರಿಯೊಡೆಯನಡಿಗೆ ಬಿನ್ನ ತಿಗೆಯ್ದುಂ

ಎಣ್ದೆ ಸೆಯ ಹಗೆಗಳಡಂಗಿದುದಱಿಂ ಪ್ರಜೆಗಳ್ಗೆ ರಾಜಕಭಯವಿಲ್ಲದೆಯುಂ
ದೇವತಾಪ್ರಸಾದದಿಂ ಮಳೆಬೆಳೆಗಳುಂಟಾದುದಱಿಂ ದೈವಿಕಭಯವಿಲ್ಲದೆಯು
ಮಿರ್ಪುದಱಿಂ ಪ್ರಜೆಗಳನಿಬರುಂ ಇಹದೊಳ್ ಸೊಗವಾಳ್ದಪರ್. ಇವರ್ಗೆ
ಪರಗತಿಯುಮಂ ಸಂಪಾದಿಸವೇಳ್ಪುದೆಂದಾರಯ್ದು

ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ
ಯೋಪಿ ಸ್ಯುಃ ಪಾಪಯೋನಯಃ
ಸ್ತ್ರೀಯೋ ವೈಶ್ಯಾಸ್ತಥಾ ಶೂದ್ರಾ
ಸ್ನೇಪಿ ಯಾನ್ತಿ ಪರಾಂ ಗತಿಮ್


ಎಂದು ಗೀತೆಯೊಳ್ ಶ್ರೀಕೃಷ್ಣ ತಾನೇ ನಿರೂಪಿಸಿದ ತೆಱದೊಳ್ ಪಿಂತ
ಣ್ಗೆನಿತಾನುಂ ಪಾಪಿಗಳಾದೊಡಂ ಆವ ಜಾತಿಯೊಳ್ ಪುಟ್ಟಿರ್ದೊಡಮೀಗಳುಂ
ತತ್ತ್ವಜ್ಞಾನದಿಂ ತನ್ನೊಳ್ ಭಕ್ತಿಗೆಯು ನಂಬಿದವರ್ಗೆ ಮುಕ್ತಿ ತಪ್ಪದೆಂದೆಣಿಸಿ,
ಅಕ್ಕರಮನಱಿದೊಕ್ಕಲಿಗರ್ಗ೦ ಪೆಣ್ಗಳ್ಗಂ ಸಕ್ಕದದಿಂ ತತ್ತ್ವಜ್ಞಾನಮಪ್ಪು
ದರಿದು ಎಂದು-ಎಲ್ಲರುಮಱಿವಂತೆ ಕನ್ನಡವಾತಿನೊಳಂ ಮೆಲ್ನುಡಿಗಳಿ೦ದೆ



ಶ್ರೀ ಚಿಕದೇವರಾಜ ಒಡೆಯರವರು

ಅಖಿಲ ತತ್ತ್ವಾರ್ಥಂಗಳಂ ಸಂಗತಿಗೊಳಿಸಿ, ತಾನ್ ತನ್ನ ಕುಲದೇವತೆಯಪ್ಪ

ಯಾದವಗಿರಿ ನಾರಾಯಣನಡಿದಾವರೆಗಳ್ಗೆ ಬಿನ್ನ ಪಂಗೆಯ್ವ ನೆವದೊಳ್
ಮೂವತ್ತು ಬಿನ್ನ ಪಂಗಳಂ ಪವಣ್ಗೆಯ್ದಂ.

ಗೀತಗೋಪಾಲ

(i)

ನೆವಮಿನಿತಿಲ್ಲದೊಲ್ಲು ಮೊಸೆಗುಂ ನೆನೆಗುಂ ಬರಿಕುಂ ದಯಾರಸಂ
ಕವಿತರೆ ನಿಟ್ಟಿ ಕುಂ ನಲಿಗುಮಾದರಿಕುಂ ಮನವಾರೆ ಮನ್ನಿ ಕುಂ
ಸವಿನುಡಿದೋಱುಗುಂ ತಿರುಮಲಾರ್ಯ ನೊಳಪ್ರತಿನು ಪ್ರಭಾವದಿಂ
ದವನಿಯನಾಳ್ಗೆ ಬಾಳ್ಗೆ ಸತತಂ ಚಿಕದೇವನರೇ೦ದ್ರ ಚಂದ್ರಮಂ

ಅನವಧಿ ದಯದಿಂದೀ ಪರಿ
ಜನಮನಿತುಮನರಸುಗೆಯ್ತದಿಂ ಪೊರೆದಿಹದೊಳ್
ನೆನೆದಂ ಪರಸುಖಮನವ
ರ್ಗನುಗೊಳಿಸಿರವಾವುದೆಂದು ಚಿಕದೇವೇ೦ದ್ರಂ

ಪರಿಕಿಸೆ ಪರಿಕಿಸೆ ಕಿವಿಯೊಳ್
ಪರಾಶರ ವ್ಯಾಸ ಮುಖ್ಯಮುನಿ ಸಮ್ಮತದಿಂ
ಹರಿಸಂಕೀರ್ತನವೊಂದೇ
ಪರಗತಿಗನುಕೂಲವೆಂದು ನಿರವಿಸಿ ನೆಗಳ್ದಂ

ಪಾಲಂ ಬಯಸಿದ ರೋಗಿಗೆ
ಪಾಲಿ೦ದೌಷಧವನೀವ ವೈದ್ಯನ ತೆಱದಿಂ
ದೀ ಲೋಗರೊಲ್ಯ ಗೀತದ
ಮೂಲದೋಳೇ ಮುಕ್ತಿಗತಿಯ ಮೊಗದೋಜಿಸಿದಂ

ತೊಡರ್ದಿರೆ ನುಡಿ ನುಣ್ಚರಗಳ
ಬೆಡಂಗು ಮನಮೋಲ್ದು ಗೀತಗೋಪಾಲವೆಸರ್‌
ವಡೆದೊಳ್ಗನ್ನಡಗಬ್ಬಮ
ನೊಡರಿಸಿ ಚಿಕದೇವರಾಯನುನ್ನತಿವೆತ್ತಂ


(ii)

ನಿನ್ನ ನಂಬಿದೆ : ನಿನ್ನ ನಂಬಿದೆ! ನಿನ್ನ ನಂಬಿದೆ ನಂಬಿದೆ ನೀ
ನೆನ್ನ ಸಲಹು ಬಿಡು ನಿನ್ನ ಚಿತ್ರವನ್ನು || ಪ ||

ನೀನಱಿಯದುದೆ ಪೇಳು
ನಿನ್ನ ವನೆಂಬೇಳ್ಗೆ ಯೊಂದೆನಗೆ
ನೀನಲ್ಲ ದನ್ಯವ ನೆನೆವನಲ್ಲ ಕರ್ಮ
ಜ್ಞಾನ ಭಕುತಿ ವೈರಾಗ್ಯವ ನಂಬಿದವನಲ್ಲ

ಎಳವೆಯೊಳ್ ಪರಿದಾಟ
ಯೌವನದೊಳು ಎಳವೆಣ್ಗಳೊಡನಾಟ
ಬಳಿಕ ವಾರ್ಧಿಕದೊಳು ಪಲವೆಡರಿನ ಕಾಟ
ತಿಳಿಯೆ ಕರ್ಮಯೋಗ ತೀರದೆಂದಿಗು ರ೦ಗ

ವೇದಾಂತಗಳು ಪಲವು
ಅವಱೋಳು ವಿವಾದಂಗಳವು ಕೆಲವು
ಭೇದಿಸಿ ನೋಡಲು ವೇದ್ಯವಾಗದು ತಲವು
ಓದುಗಳಿ೦ ಜ್ಞಾನಯೋಗ ಸಾಗದೆಂದಿಗು

ತನುವ ದಂಡಿಪುದರಿದು
ಕರಣಂಗಳ ತಡೆವುದು ಮಿಗೆಯರಿದು
ಮನವ ಬಲ್ವಿಡಿವುದು ಮತ್ತಮರಿದರಿದು
ನೆನಹಿನೊಳ್ ವೈರಾಗ್ಯ ನೆಲೆಗೊಳ್ಳದೆಂದಿಗು

ಸಿರಿಯಾಸೆ ಕಡುನಿಡಿದು
ಸಗ್ಗದ ನಾಡ ಸೆಱೆಯಾಸೆಯೆಡೆಗೂಡದು
ಮರಳಿ ಕೈವಲ್ಯದ ಮರುಳು ಬೆನ್ನ ಬಿಡದು
ಪರಮ ಭಕುತಿ ಯೋಗ ಬಲಿಯದೆಂದಿಗು ರಂಗ

(iii) ತಪ್ಪು ಯಾರದು?


ತಪ್ಪ ದಾರದು । ತಿಳಿದು ನೋಡೆ ತಪ್ಪದಾರದು । ತಪ್ಪು ನೆಪ್ಪುಗಳ
ವಿಕಲ್ಪಿಸದೆಲ್ಲವ । ನೊಪ್ಪುಗೆಯ್ದೆನ್ನ ನೋಲಿದು ಪಾಲಿಸು ಕೃಷ್ಣ ॥ಪ॥

ಆರಯ್ಯೆ ಮುಗ್ಗಿರಿವಂಧನ ತಪ್ಪೋ
ದಾಱಿದೊಱುವ ದಂಡಧಾರನ ತಪ್ಪೋ
ಮೇರೆಯಾ೦ಯದೆನ್ನಮೇಲಣ ತಪ್ಪೋ
ನಾರಾಯಣ ನಿನ್ನ ನಟನೆಯ ತಪ್ಪೋ
 
ತೊಂಡು ಮೇವ ಹಸುವಿಂಡಿನ ತಪ್ಪೋ
ಕಂಡು ಕಾಯದ ತುಱುಗಾವನ ತಪ್ಪೋ
ಗಂಡು ಮೀಱುವೆನ್ನ ಗೆಯ್ಮೆಯ ತಪ್ಪೋ
ಕೊಂಡಾಳುವ ನಿನ್ನ ಕೂರ್ಮೆಯ ತಪ್ಪೋ

ಬಾವಿಯ ಬಳಸುವ ಹಸುಳೆಯ ತಪ್ಪೋ
ತಾ ವಂದು ತಡೆಯದ ತಾಯದು ತಪ್ಪೋ
ಈ ವಿಷಯಕೆ ಮುಗ್ಗು ವೆನ್ನದು ತಪ್ಪೋ
ಆ ವೇಳೆಗಾಪುಗೆಯ್ಯದ ನಿನ್ನ ತಪ್ಪೋ

ಗುಱಿಸಿಯ ತಾಕದ ಮೊನೆಗೋಲಿನ ತಪ್ಪೋ
ಕುಱಿತೆಸೆಯದ ಬೀರಗುವರನ ತಪ್ಪೋ
ಬಱುಗೆಮ್ಮೆ ಗೆಯ್ದೆನ್ನ ಭಾವದ ತಪ್ಪೋ
ಅಱಿವುದೋಱಿಸದ ನಿನ್ನಾಟದ ತಪ್ಪೋ
ಓಜೆಗುಂದುವ ವೀಣೆಯುಲುಹಿನ ತಪ್ಪೋ
ಬಾಜಿಸುವನ ಕಯ್ಯ ಪವಣಿನ ತಪ್ಪೋ
ರಾಜ ಶ್ರೀ ಚಿಕದೇವರಾಯನಿಗೊಲಿದ ಶ್ರೀ
ರಾಜಗೋಪಾಲ ನಿರಾಕರಿಸದೆ ಪೇಳು

(iv) ಕೃಷ್ಣನ ಕೊಳಲು


ಕಂಗೊಳಿಸದಿರಲಾಱೆ ಕಣ್ಣ ಪುಣ್ಯದ ಬೆಳಸ । ಕಂಗೊಳಿಸದಿರಲಾಱೆನೆ
ಪೊಂಗೊಳಲ ನುಡಿಸುತಿಳಿ ಹೊತ್ತಿನೊಳು ಪುರವೀಧಿ ।
ಸಿಂಗರಿಸಿ ಮೆಱೆತೆವ ಹರಿಯ ಸಿರಿಯ ।।ಪ।।
ಕ್ರಮದಿ ನಡುತೋಳ್ಳುಡಿಗಳೊಂದಿನಿಸು ಕೊಂಕಿನೊಳು ಕಮನೀಯವೆಂದೆನಿಸಿ ಮೆಱೆತೆಯೆ
ಸಮತಳದಿ ನಿಂದಡಿಯ ಮುಂದೆ ಮತ್ತೊಂದಡಿಯ ಸಾರ್ಚಿಯು೦ಗುಟವ ನೂಱು
ರಮಣೀಯ ರೇಖೆಯೊಳು ನಿಂದು ಕೊಳಲುಲಿಗೊಳುವ
ರಾಯ ಗೋವಳನ ತೋಱೆ ನೀಱೇ
ಕಳೆವೆತ್ತ ಕತ್ತುರಿಯ ವೀಣೆಯೊಡನೊಡನುಣ್ಮಿ ಕವಿವ ತನಿಗಂಪಿನಂತೆ
ಬಳೆವ ತಾನದ ಗಮಕ ಗತಿಯ ಮೈಸಿರಿಗೆ ಮೊಗ ಬಗೆಬಗೆಯ ಭಾವವಡೆಯೆ
ಕೊಳಲಿಗಿಂದುಟಿಯ ಸವಿದೋಱಿ ಒಳುದನಿಗೊಳುವ
ಕೊನಬು ಗೋವಳನ ತೋಱೆ ನೀಱೇ
ಕವಿವ ಕಡೆಗಣೆ ಸೇರುವ ನೀಳ್ವ ನೆಲೆಗೊಳುವ ಕರಗುವರೆಮುಗಿವ ನಗುವ
ನೆವದಿ ತೆರೆಗೊಳುವ ತೇಲುವ ಪೊಳೆವ ಪೊಗರೊಗುವ ನೇಹದಿನಿರಸದಿ ನೆನೆವ
ಸವಿನೋಟದಿಂದ ಕಣ್ಮನವ ಕೈಸೆಱೆಗೊಳುವ
ಚದುರ ಗೋವಳನ ತೋಱೆ ನೀಱೇ
ಹರವಿರಿಂಚರ ಬಗೆಗೆ ಹವಣೆನಿಸದಾನಂದದಿರವ ಗೊಲ್ಲರ ಬೀಡಿನ
ನೆರೆಹೊರೆಯ ಪಲವು ಮರ ಮೊರಡಿ ಮಿಗ ಪಕ್ಕಿ ಕಮಿ ಕಱು ತುಱುಗಳಿಗೆ ಸೂಱೆಗೊಳಿಸಿ
ತಿರುಮಲಾರರ ಮನವ ನೆಲೆವೀಡುಗೊಂಡೆಸೆವ
ದೇವ ಗೋವಳನ ತೋಱೆ ನೀಱೇ

ಆದಿನಾರಾಯಣನಾ ಶೇಷನೊಡಗೂಡಿ! ಯಾದರದಿಂದವತರಿಸೆ
ಯಾದವಕುಲವೇಳೆಗೆವೆತ್ತಿರ್ಪುದು | ಮೇದಿನಿಯೊಳು ಮೈಮೆವಡೆದು
ಆ ಯಾದವರಿಗೆ ಕುಲದೇವರೆನಿಪ ನಾ | ರಾಯಣನಾದಿ ಕಾರಣನು
ಶ್ರೀಯೊಡಗೂಡೀ ಕರ್ಣಾಟದೇಶದೊ |ಳೀ ಯಾದವಾದ್ರಿಯೊಳಿಹನು
ಬಲಕೃಷ್ಣರಿಂದೆ ಹಲವು ಪೂಜೆಗೊಂಡಿರ್ಪ | ಕುಲದೇವರ ಸೇವೆಗೆಂದು
ಪಲವು ಯಾದವರಾಯರಾ ದ್ವಾರವತಿಯಿಂದೊ | ಲಿದೈತಂದರೀ ನೆಲಕೆ
ಶ್ರೀ ನಾರಾಯಣನಡಿಗಳಿಗೆರಗಿ ಮ | ಹಾನಂದರಸದ ಮೈಮೆಯೊಳು
ಆ ನೆಲೆಯನ್ನು ಬಿಟ್ಟಗಲಲಾರದೆ ತಾ | ವೀ ನಾಡೊಳು ನೆಲಸಿದರು
ಈ ಶೈಲಕೆರಡು ಗಾವುದ ತೆಂಕಣ ರಮ್ಯ | ದೇಶವ ನೆಲೆವೀಡುಗೊಳಿಸಿ
ಈ ಶೂರರು ನೆಲಸಿದರದರಿ೦ದೆ ಮ | ಹಿಶೂರಪುರವೆನಿಸಿದುದು
ಶ್ರೀರಂಗಪಟ್ಟಣದೊಳು ರತ್ನ ಸಿಂಹಾಸ | ನಾರೋಹಣವನಾಚರಿಸಿ
ಧಾರಿಣಿಯನು ಧರದೊಳು ಪಾಲಿಸುತ ಮಹಾರಾಜನೆನಿಸಿ ರಾಜಿಪನು
ಧರೆಯ ಪೊರೆವ ಧರ್ಮವ ಸಂಪಾದಿಪ | ಧುರವ ಗೆಲುವ ಗೈಮೆಯೊಳು
ನರಪತಿ ಚಿಕದೇವರಾಜೇ೦ದ್ರಗೆ ಶೌರಿ | ನೆರವಾಗಿಹನು ನೇಮದೊಳು
ಚಿಕದೇವರಾಜಚಂದ್ರಮನ ಪಟ್ಟದ ರಾಣಿ | ಸಕಲ ಸದ್ಗುಣಸಂಪನ್ನೆ
ಅಕಲುಕ್ಷೆಯೆಳವಂದೂರ ದೇವಮ್ಮನು |ಸಕಲ ಸಂಪದದೊಡನಿಹಳು
ಓಲಗಗೊಳುತೊಂದು ದಿನವೆಡಬಲದ ಸು| ಶೀಲೆಯರೊಳು ಕಡೆಗಣ್ಣ
ಸಾಲುವಿಡಿದು ಸುಳಿಸುಳಿಸಿಯೆನ್ನೊಳು ಸತ್ಕೃ | ಪಾಲೋಕನವನೆಸಗಿದನು
ಕರುಣಾಮೃತಾಭ್ದಿಯ ಕಲ್ಲೋಲಗಳಂತೆ | ತರತರದೊಳು ಕವಿತರುವ
ಸರಸಕಟಾಕ್ಷವನೆಸಗಿಯೆನ್ನೊಳು ಮನ | ಗರಗಿ ಮನ್ನಿಸಲೆಳಸಿದನು
ಅರಸಿ ಕೇಳೀ ಹೊನ್ನಿ ಸರಸ ಸಾಹಿತ್ಯದ | ವರದೇವತೆ ತಾನೆಂದು
ಪರಮಾರ್ಥವಾದಿಯಳಸಿಂಗರಾರ್ಯನು | ಪರಿಪರಿಯೊಳು ಬಣ್ಣಿಪನು
ಇವಳು ಕಾವ್ಯಾಲಂಕಾರ ನಾಟಕಗಳ | ಪವಣಿಗೆಯಿರವ ಬಲ್ಲವಳು
ಇವಳ ಸಾಹಿತ್ಯದ ಸವಿಗೆಳಸುತ್ತೆನ್ನ | ಕಿವಿಗಳು ಕದುಬುಗೊಂಡಿಹವು
ಪವಣಿಗೆಯೊಪ್ಪೆ ಪುರುಳು ಪೊಗೆ ರೀತಿಯಂ | ಗವಿಸೆಯಲಂಕಾರಗಳು
ಕವಿದು ಸರಿಯೆ ರಸದೊಳಂಪು ಘಮ್ಮನೆ | ಕವಿತೆಯೊಂದನು ಪೇಳಿಸಿಂದು
ಎಂದ ರಾಯನ ನುಡಿಗಾನು ವಿನಯಗೂಡಿ | ಸಿಂದೆಗೆದಿರೆ ಪಟ್ಟದರಸಿ
ಕಂದ ಬಾರೆನ್ನ ಕಟ್ಟಾಣಿ ಪೆಣ್ಮಣಿಯೆ ಬಾ | ರೆಂದು ಮುಂದಕೆ ಬರಿಸಿದಳು

ಕನ್ನಡ ಜಾಣೆ ನೀ ಬಾರೆಂದು ಕರವಿಡಿ|ದೆನ್ನ ತನ್ನೊತ್ತಿಗೆ ಬರಿಸಿ
ಎನ್ನೊಳು ನೆವಮಿನಿತಿಲ್ಲದೆರಕಗೂಡಿ | ಮನ್ನಿಸಿ ನುಡಿದಳಿಂತೆಂದು
ಕಲಿತ ಬಿಜ್ಜೆಯ ಬಲ್ಲರಿಗೆ ಕೇಳಿಸುದೈ ಸೆ | ಫಲವಿದನರಿತು ನೀನಿಂದು
ಅಲಸದೆ ನಾಣ್ಣ ದಂಜದೆಯಳುಕದೆ ಪೇಳು | ಪಲವಗೆ ಕಬ್ಬದೊಳ್ಳುಗಳಾ
ಇಂತು ನುಡಿದ ರಾಣಿಯ ನುಡಿಗೇಳಿಯೋ|ರಂತೆ ಚಿತ್ತವ ಬಲಿವಿಡಿದು
ಸಂತಸ ಮಿಗೆ ಸಭೆಯೊಳು ರಾಯಗೆ ಮಾ|ರಾಂತು ಬಿನ್ನವಿಸಿದೆನಿಂತು
ಅರಸ ಕೇಳೆನಗೆ ನಿನ್ನ ಡಿಯೂಳಿಗ ಮೊಂ|ದರಸಿಯರಡಿಯೊಲ್ಮೆಯೊಂದು
ಪರಿಕಿಪೊಡಖಿಳಾರ್ಥ ಸಾಧನಂಗಳಿಗಿವು ! ನೆರವಾಗಿಹವು ನೇಮದೊಳು
ನಿನ್ನ ಕೃಪಾರಸದಿಂದೈಸೆಯಾನು ಕ|ರ್ಬೋನ್ನು ಚೆಂಬೊನ್ನಾದಂತೆ
ಸನ್ನು ತಿವಡೆಗೊಳ್ಪುವತ್ತು ಸಕಲ ಭಾ|ಗ್ಯೋನ್ನತಿಯೊಡಗೂಡಿಹೆನು
ನಿನ್ನ ಡಿಸೋ೦ಕಿನೊಳಖಿಲದುರಿತಗಳ | ಸನ್ನಾಹವ ಸದೆದಟ್ಟ
ಚೆನ್ನಿಗ ಚಿಕದೇವರಾಯನ ಸಂಚಿಯ | ಹೊನ್ನಿ ಯೆಂಬೇಳ್ಗೆವೆತ್ತಿಹೆನು
ಒಡೆಯನಿರಿಸಿದಂತಿರ್ಪುವಲ್ಲದೆ ಪೇ|ಳೊಡವೆಗೆ ಬೇರಿರವುಂಟಿ
ಕಡುಗೂರೆಯಿಂದೆ ನಿನ್ನ ಡಿಯಾಣತಿಯನೆನ್ನ|ಮುಡಿಯೊಳಾಂತೆನು ಮತ್ತೇನು
ಪದಿನೆಂಟು ಬನ್ನಣೆಯೆಂದು ಬವಣಿಗೊ೦ಡು | ಪದಗೆಟ್ಟು ಬಯಲ ಬಣ್ಣಿಸದೆ
ಮುದದೊಡನಿಹಪರದೇಳ್ಗೆವಡೆಯ ಹದಿ|ಬದೆಯ ಧರ್ಮವ ಬಣ್ಣಿಪೆನು
ಪೆಣ್ಣ ಪೆತ್ತವರ ಬಳಗ ಬಳೆವುದು ಬೇಗ ! ಪೆಣ್ಣ ಪೆತ್ತವರು ಪೆರ್ಚುವರು ಸಣ್ಣ
ಪೆತ್ತುವರಿಂದೆ ಪೆಸರೆನಿಸಿತು ಮಿಗೆ | ಬಣ್ಣವೇರಿತು ಪಾಲ್ಗಡಲು
ಪೆಣ್ಣಿಂದೆ ಪೆರ್ಮೆಗೊಂಡನು ಹಿಮವಂತನು | ಪೆಣ್ಣಿಂದೆ ಬೃಗು ಪೆರ್ಚೆವನು
ಪೆಣ್ಣಿಂದೆ ಜನಕರಾಯನು ಜಸವಡೆದನು | ಪೆಣ್ಣ ನಿಂದಿಸಲೇಕೆ ಪೆರರು
ಸಿರಿರಾಣಿಯ ಸೀತೆಯ ರುಕ್ಮಿಣಿಯ ಶ್ರೀ|ಹರಿಯೊಡನೊಂದೆ ಹಂತಿಯೊಳು
ಇರಿಸಿ ಪೂಜೆಯನೊಡರಿಸುವರು ಪಿರಿಯರು |ಪರಿಕಿಪೊಡಿವರು ಪಸೆ
ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ | ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು | ಕಣ್ಣು ಕಾಣದ ಗಾವಿಲರು

೧೬, ಶ್ರೀನಾಸ ಸು. ೧೮೩೦

ಮುಮ್ಮಡಿ ಕೃಷ್ಣರಾಜ ಒಡೆಯರ ವರ್ಧಂತಿ

ಇಂತು ಸಂತರ್ಪಣೆಯ ಸೊಬಗನುರೆ ಬಣ್ಣಿಸುತ
ಸಂತಸದಿ ಮನೆಗೈದಿ ಮಾಧ್ಯಾಹ್ನಿಕಾದಿಗಳ
ನಂತೆಲ್ಲಮಂ ಗೈದು ಶುಚಿಯಾಗಿ ಸತಿ ಗೈದ ಸಾಕಮಂ ಹರಿಗರ್ಪಿಸಿ



ಅಂತರದಿ ಸುತರೊಡನೆ ರುಚಿಯಾಗಿ ಭುಂಜಿಸಿದ
ನಂತರದೊಳಾ ಸತಿಯು ಭೋಜನಂಗೈದ ಬಳಿ
ಕಂತರ ಹಿತಾಹ್ಲಾದದಿಂದ ಜನರಲ್ ಸುರಟ ನೋಡಲ್ಕೆ ಪೊರಮಟ್ಟನು

ಬಂದು ಸತಿಸುತರೊಡನೆಯರಮನೆಯ ಬಾಗಿಲೊಳ್
ನಿಂದಿರುವ ಗಜ ಹಯ ವರೂಥಾದಿ ರೋಹಕರ
ಸಂದಣಿಯ ಬಾಯ ಭಲ್ಲೆಗಳ ಪಿಡಿದಿರ್ಪವರನಿಂಗ್ಲೀಷು ವಾದ್ಯದವರ
ಚೆಂದದಿಂ ಶ್ರುತಿವಾರಿಕೊಳಲುಗಳ ನುಡಿಸುವರ
ಬಂದುರದಿ ಕಹಳೆ ತುತ್ತೂರಿಗಳನೂದುವರ
ನಿಂದು ಸಾನಂದದಿಂ ಭೇರೀನಗಾರಿಗಳ ಬಡಿವವರ ತೋರಿಸಿದನು

ಬಳಿಕ ಕೃಷ್ಟೆ೦ದ್ರನೃಪನಂಬಾವಿಲಾಸದೊಳ್
ತಳತಳಿಸುತಿರುವ ನವರತ್ನ ಭದ್ರಾಸನದಿ
ಕಲಿತ ಸಂತೋಷದಿಂ ಕುಳಿತಿರಲು ಸಕಲಾಧಿಕಾರಿಗಳ್ ಭಕ್ತಿಯಿಂದ
ನೆಲತನಕ ತಲೆಗಳಂ ಬಾಗಿಸುತ ಮುಜುರೆಯಂ
ಕಲಿಕಾಲ ಕೃಷ್ಣನಾದೀ ಕೃಷ್ಣರಾಜಂಗೆ
ನಿಲವಿಲ್ಲದೇಗೈದರೀ ಮಹಾವಿಭು ಸದೃಶರಾರುಂಟು ಲೋಕದೊಳಗೆ

ಇಂತು ಸಂಭ್ರಮದಿಂದ ಕೃಷ್ಣರಾಜೇಂದ್ರನೊ
ಡಂತಿಯುತ್ಸವವ ಕವಿ ಸತಿ ಸಹಿತ ನೋಡುತ್ತ
ಸಂತಸದಿ ಪೊಗಳುತ್ತ ನಲಿದು ಕುಣಿದಾಡುತ್ತ ಮಕ್ಕಳಿಗೆ ತೋರಿಸುತ್ತ
ಸಂತೋಷವಾಯಿತೇ ನಿಮಗೆಂದು ಕೇಳುತ್ತ
ಕಂತುಸನ ಕೃಷ್ಣೇ೦ದ್ರ ದರ್ಶನದ ಪುಣ್ಯಮೆಮ
ಗಂತವಿಲ್ಲದ ಸಕಲ ಸಂಪತ್ತುಗಳ ಕೊಡುವುದೆಂದು ತಾ ಪೇಳ್ದ ಸತಿಗೆ

೧೭. ಅಯ್ಯಶಾಸ್ತ್ರಿ ೧೮೫೩-೧೯೩೪


ಕೃಷ್ಣರಾಜ ಒಡೆಯರವರು ರಾಜ್ಯಭಾರ ವಹಿಸಿದ್ದು


ಘನ ತೇಜೋನಿಧಿ ಕರ್ಜನೆಂದೆನಿಸಿದಾ ಆ೦ಗ್ಲೇಯ ಸರ್ವಾಧಿಕಾ
ರಿ ನಿಜಾನೀಕ ಸಮೇತನಾಗಿ ಮುದದಿಂ ಶ್ರೀಮನ್ಮಹೀಶೂರ ಪ
ತ್ತನಮಂ ಸಾರ್ತರೆ ರಾಯವನ್ನಣೆಗಳ ಮಾರಾಣಿಯಾತಂಗೆ ನಂ
ದನನಿಂ ಮಾಡಿಸಿದಳ್ ಮಹಾವಿಭವದಿಂ ಶ್ರೀಕೃಷ್ಣ ರಾಜೇಂದ್ರನಿಂ

ಅಂತಾತಂ ಬಂದಾಂಗ್ಲೇ ಯ ಮಹಾಧಿಕಾರಿ ನಿವಾಸಾರ್ಥಮಪ್ಪ ಮಹಾ
ಸೌಧದೊಳ್ ಬೀಡಂ ಬಿಟ್ಟ ಸಮನಂತರಮೆ ಶಾಲಿವಾಹನ ಶಕದ ಶರ ನೇತ್ರ ವಸು
ಚಂದ್ರ ಮಿತ ಶುಭಕೃದ್ವತ್ಸರ ಶ್ರಾವಣ ಶುಕ್ಲ ಪಂಚಮಿಯ ಪೊಳ್ತಡಮೆ ನಿಜ
ವೈಭವ ಪರಾಜಿತ ವೈಜಯಂತಮಪ್ಪ ರಾಜಸಭಾಮಂಟಪದೊಳ್ ಪಲಬರ್

ಮಹಾಧಿಕಾರಿಗಳು ಪ್ರಮುಖರೆನಿಸಿದ ಪೌರರುಂ ನಾಡಿಗರುಂ ಪೆಸರ್ವೆತ್ತ
ಸುಧೀಮಣಿಗಳುಂ ಸಾಮಂತರಾಜರುಂ ತಮ್ತಮ್ಮ ಸಮುಚಿತ ಸ್ಥಾನಂಗಳೊಳ್ಮಂ
ಡಿಸಿರ್ಪಿನಂ ಮಹಾರಾಜ್ಞಿ ನಿಜಪರಿವಾರಂ ಬೆರಸಂತಃಪುರೋಚಿತಮಾದ
ಮೇಲುಪ್ಪರಿಗೆಯನಲಂಕರಿಸಿರ್ಪಿನೆಗಂ ಮಹಾವೀರರಪ್ಪ ಸೈನಿಕರ್ ತಮ್ಮಮ್ಮ
ಕೈದುಗಳಂ ಪಿಡಿದು ಗಂಡಭೇರುಂಡ ಧ್ವಜದಿಂದೊಡಗೂಡಿ ಮುಂಗಡೆಯಂಗಳ
ದೊಳ್ ವಂಗಡಂಗೊಂಡು ನಿಂದಿರ್ಪನ್ನ ಮೂಳಿಗದ ಜನಮಲ್ಲಲ್ಲಿ ಕಯ್ಗಳಂ ಕಟ್ಟಿ
ಕೊಂಡು ನಿಂದು ರಾಯಸಮಂ ಕಾದುಕೊಂಡಿರ್ಪನ್ನೆಗಂ
ಆ ರಾಜಸದಕ್ಕೆ ಶತ
ಘ್ನೀರವಮೆಣೆಸೆಯನೆಯ್ದಲೆಯ್ತಂದಂ ನಾ
ಲ್ವಾರುವದ ತೇರನಡರ್ದಾ
ಭಾರತ ಸರ್ವಾಧಿಕಾರಿಯಾಂಗ್ಲೇಯವರಂ
ಅಂತು ಬಂದಾತನಿದಿರ್ವಂದು ತನ್ನ೦ ಮನ್ನಿಸಿದ ಮಹಾರಾಜ ಶ್ರೀ
ಕೃಷ್ಣರಾಜೇಂದ್ರನೊಡನಾಸ್ಥಾನವನೊಳಪೊಕ್ಕು ಸಭಾಮಧ್ಯದೊಳ್ ನಿಂದು
ಸಭಾಸದರಂ ನೋಡಿ ಕೇಳಿರೆ ಮಹಾಶಯರಪ್ಪ ಸಾಮಾಜಿಕರಿರಾ ಮಹಾರಾಜನೀ
ಕೃಷ್ಣರಾಜಂ ಬಾಲ್ಯಮಂ ಕಳೆದು ಯೌವನಸ್ಥನಾಗಿರ್ಪನೆಂಬುದುಂ ಮುನ್ನಮೆ
ತನಗೆ ಪಟ್ಟಾಭಿಷೇಕ ಮಹೋತ್ಸವಂ ಬಳೆದಂದಿನಿ೦ದಿನ್ನೆವರಮೀತಂ ಸನ್ಮಾರ್ಗ
ವರ್ತಿಯಾಗಿ ನಿರವದ್ಯ ವಿದ್ಯಾಭ್ಯಾಸಂಗೆಯ್ದನೇಕ ರಾಜಧರ್ಮಂಗಳುಮಂ
ಸ್ವದೇಶದೊಳಮನ್ಯದೇಶಂಗಳೊಳಂ ಸಂಚಾರಂಗೆಯು ಸಮಂಚಿತ ಲೋಕ
ವ್ಯವಹಾರಮುಮಂ ತಿಳಿದು ರಾಜ್ಯಾಧಿಕಾರಕ್ಕೆ ತಕ್ಕ ತಕ್ಕುಮೆಯಂ ಪಡೆದಿರ್ಪ
ನೆಂಬುದುಂ ನಿಮ್ಮೆಲ್ಲರ್ಗ೦ ವಿದಿತವಾಗಿರ್ಪುದೈಸೆ, ರಾಜ್ಯಮಿದಾದೊಡಯ್ವತ್ತುಂ
ಲಕ್ಕದೆಣಿಕೆಯ ಜನಂಗಳನೊಳಕೊಂಡು ನೀಡುಂ ಪಿರಿದಾಗಿರ್ಪುದು ಸಾಮಾನ್ಯ
ಮಲ್ತು ಮತ್ತಂ ನಿರತಿಶಯ ಬುದ್ಧಿ ಪ್ರಾಚುರ್ಯನೆನಿಸಿದ ಶೇಷಾದ್ರಿಯಾರ್ಯನ
ಮಂತ್ರಿತ್ವದೊಳ್ ಪಿರಿದುಮೇಳ್ಗೆವಡೆದಿರ್ಪುದಿ೦ತಿದಂ ಬಾಲನಪ್ಪ ಕುವರಂಗೆ
ಪಡಿಯೆನಿಸಿ ಕಂದು ಕುಂದುಗಳೇನೊಂದುಮಿಲ್ಲದಿನ್ನೆವರಂ ಕಯ್ಯಾಯ್ದ ವಾಣಿ
ವಿಲಾಸದ ಮಾರಾಣಿಯ ಜಾಣ್ಮೆ ನಾಡೆ ಪೊಗಳ್ಕೆಗೆಡೆಯಾದುದಿಂತೀ ಮಹೀಶೂರ
ರಾಜ್ಯದಧಿಕಾರವನೀಗಳೀ ಮಹಾರಾಜ ಕೃಷ್ಣರಾಜೇಂದ್ರನಧೀನಮಂ
ಮಾಡಿರ್ಪೆನದನೀತಂ ನಿಜಧರ್ಮದಿಂ ಪಾಲಿಸುತ್ತೆ ಚಿರಕಾಲಂ ಸೊಗದಿಂದಿರ್ಕೆ೦ದು
ಜಗದೀಶನಂ ಪ್ರಾರ್ಥಿಸುವೆನೆಂದು ಘಂಟಾಘೋಷದಿಂ ನುಡಿವುದುಮೆಲ್ಲರುಂ
ಜಯಘೋಷಮಂ ಮಾಡಿದರಾ ಕ್ಷಣದೊಳ್
ದೊರೆವಡೆದ ಸತ್ಯಮೇವೋ
ದ್ಧರಾಮ್ಯಹಮೆನಿಪ್ಪ ಲೇಖನದ ಕನ್ನಡ ನಾ
ಡರಸರೆರಚ್ಚ ಲೆವಕ್ಕಿಯ
ಕುರುಪಿನ ಪಳವಿಗೆಯನೆತ್ತಿದರ್ ಪಡೆವಳ್ಳರ್

ನೆನಪಿದ ತಮ್ಮಾಳ್ದನ ಪಳ
ವಿಗೆಯಂ ಕಂಡೊಡನೆ ಪೊರಗೆ ನೆರೆದಿರ್ದ ಜನಂ
ಮುಗಿಲಂ ಮುಟ್ಟಿ ಜಯಧ್ವನಿ
ನೆಗಳ್ದುದು ಕರತಾಳ ಘೋಷಮಂ ಮುದದಿಂದಂ

ತೀವಿತ್ತು ಸೈನಿಕರ ಕ
ಯ್ಗೋವಿಗಳೊಗ್ಗೊಗ್ಗಿನುಣ್ಮಿದಬ್ಬರಮುಂ ಪೆ
ರ್ಗೋಗಳಿಂದಂ ಪೊಣ್ಮಿದ
ಗಾವರಮುಂ ಭೂ ನಭೋ೦ತರಾಳಮನೆಲ್ಲಂ

________________

ಮೂರನೆಯ ತೆನೆ ನಾಡಪದಗಳಿ೦ದ



ಒಳಪಿಡಿ
ಗರತಿ ಹಾಡುಗಳು ೭೩
ಗೋವಿನ ಹಾಡು ೭೪
ಮಾನವಮಿ ಪದ ೭೮

೧. ಗರತಿ ಹಾಡುಗಳು


ತಾವರಿಯ ಗಿಡ ಹುಟ್ಟಿ ದೇವರಿಗೆ ನೆರಳಾದಿ
ನಾ ಹುಟ್ಟಿ ಮನಿಗೆ ಎರವಾದೆ । ಹಡೆದವ್ವ
ನೀ ಕೊಟ್ಟ ಮನೆಗೆ ಹೆಸರಾದೆ

ಬ್ಯಾಸಗಿ ದಿವಸಕ ಬೇವಿನ ಮರ ತಂಪ
ಭೀಮರತಿಯೆಂಬ ಹೋಳಿ ತಂಪ । ಹಡೆದಮ್ಮ
ನೀ ತಂಪ ನನ್ನ ತವರೀಗಿ

ಹೆಣ್ಣು ಹಡೆಯಲಿ ಬ್ಯಾಡ ಹೆರವರಿಗಿ ಕೊಡಬ್ಯಾಡ
ಹೆಣ್ಣು ಹೋಗಾಗ ಅಳಬ್ಯಾಡ । ಹಡೆದವ್ವ
ಸಿಟ್ಟಾಗಿ ಶಿವಗ ಬೈಬ್ಯಾಡ

ತಾಯಿ ಮಕ್ಕಳ ದನಿಯು ತಾಳ ಬಾರಿಸಿದಾಗ
ಜೋಡ ಕಿನ್ನೂರಿ ನುಡಿದಾಂಗ । ಹಲಸಂಗಿ
ಹೊತ್ತೇರಿ ತಾಸೆ ಬಡೆದಾಂಗ

ತಾಯಿ ಕಾಣದ ಜೀವ ತಾವೂರಿ ಬಾವೂರಿ
ಭಾಳ ಬಿಸಲಾನ ಅವರೀಯ । ಹೂವಿನ್ಹಾಂಗ
ಬಾಡತೀನಿ ತಾಯಿ ಕರೆದೊಯ್ಯ
ಗಂಜೀಯ ಕುಡಿದರು ಗಂಡನ ಮನಿ ಲೇಸ
ಅ೦ದಣದ ಮ್ಯಾಲ ಚವುರವ । ಸಾರಿದರ
ಹಂಗಿನ ತವರ ಮನಿ ಸಾಕ

ತಾಯಿಲ್ದ ತವರೀಗಿ ಹೋಗದಿರು ನನ ಮನವ
ನೀರಿಲ್ದ ಕೆರಿಗಿ ಕರ ಬಂದು । ತಿರುಗಾಗ
ಆಗ ನೋಡದರ ದುಃಖಗಳ

ಅಡಗೀಯ ಮನಿಯಾಗ ಮಡದೀಯ ಸುಳುವಿಲ್ಲ
ಅಡಗಿ ಬಾಯಿಗೆ ರುಚಿಯಿಲ್ಲ । ಹಡೆದವ್ವ
ಮಡದಿ ತವರೀಗಿ ಹೋಗ್ಯಾಳ

ಹಚ್ಚಡದ ಪದರಾಗ ಅಚ್ಚಮಲ್ಲಿಗೆ ಹೂವ
ಬಿಚ್ಚಿ ನನಮ್ಯಾಲ ಒಗೆವಂಥ । ರಾಯರನ
ಬಿಟ್ಹ್ಯಾಂಗ ಬರಲೆ ಹಡೆದವ್ವ

ಬಟ್ಟಲಗಣ್ಣೀಲಿ ದಿಟ್ಟಿಸಿ ನೋಡ್ಯಾರ
ಸಿಟ್ಯಾಕೊ ರಾಯ ನನಮ್ಯಾಲ । ನಾ ಅಂಥ
ಹುಟ್ಟಿಸ್ಯಾಡವರ ಮಗಳಲ್ಲ

ರಾಯ ಬರತಾರಂತ ರಾತ್ರಿಯಲಿ ನೀರಿಟ್ಟ
ರನ್ನ ಬಚ್ಚಲಕ ಮಣಿಹಾಕಿ । ಕೇಳೇನ
ಸಣ್ಣವಳಮ್ಯಾಲ ಸಂವತ್ಯಾಕ

ಯಾಲಕ್ಕಿಕಾಯ್ ಸುಲಿದು ಯಾವಡಗಿ ಮಾಡಲಿ
ಊರಿಗೋಗ್ಯಾರ ರಾಯರು । ಬಾ
ರದೆ
ಯಾವಡಗಿ ಮಾಡಿ ಫಲವೇನ
ಅಳುವ ಕಂದನ ತುಟಿಯು ಹವಳದ ಕುಡಿಯಂಗ
ಕುಡಿಹುಬ್ಬು ಬೇವಿನೆಸಳಂಗ । ಕಣ್ಣೋಟ
ಸಿವನ ಕೈಯಲಗು ಹೊಳೆದಂಗ

ತಾಯಿದ್ರ ತವರ್ಹೆಚ್ಚು ತಂದಿದ್ರ ಬಳಗ್ಗೆಚ್ಚು
ಸಾವಿರಕೆ ಹೆಚ್ಚು ಪತಿಪುರುಷ । ಹೊಟ್ಟೀಯ
ಮಾಣಿಕದ ಹರಳು ಮಗ ಹೆಚ್ಚು

ನನ್ನ ಅಂಗಳದಾಗ ಮಲ್ಲಿಗಿ ಗಿಡ ಹುಟ್ಟಿ
ಝಲ್ಲೀಸಬ್ಯಾಡೊ ಗಿಣಿರಾಮಾ । ನಿಮ್ಮಂಥ
ಬಾಲರೋಗ್ಯಾರ ಝಳಕಾಕ

ಬಾಲಕರಿಲ್ಲದ ಬಾಲೀದ್ಯಾತರ ಜನ್ಮ
ಬಾಡೀಗಿ ಎತ್ತು ದುಡಿದಂಗ । ಬಾಳೆಲೆಯ
ಹಾಸ್ಯುಂಡು ಬೀಸಿ ಒಗೆದಂಗ

ಕಂದನ ಕುಡು ಶಿವನೆ ಬಂಧನ ಬಡಲಾರೆ
ಹಂಗಿನ ಬಾನ ಉಣಲಾರೆ! ಮರ್ತ್ಯದಾಗ
ಬಂಜೆಂಬ ಶಬುದ ಹೊರಲಾರೆ

೨. ಗೋವಿನ ಹಾಡು


ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು

ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೊಂಡು
ಮೆರೆವ ಕಾಳಿಂಗನೆಂಬ ಗೊಲ್ಲನ
ಸಿರಿಯ ನಾನೆಂತು ಪೇಳ್ವೆನು

ಗೊಲ್ಲದೊಡ್ಡಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲನೊಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ

ಕರುಗಳನ್ನು ನೆನೆನೆನೆದು ಹಸುಗಳು
ಕೊರಳ ಘಂಟೆ ಢಣಿರು ಢಣಿರೆನೆ
ಪರಿದು ಲಂಘಿಸಿ ಚಿಮ್ಮಿ ನೆಗೆಯುತ
ಮರಳಿ ಬಂದುವು ದೊಡ್ಡಿಗೆ

ತಮ್ಮ ತಾಯನು ಕಂಡು ಕರುಗಳು
ಅಮಾ ಎಂದು ಕೂಗಿ ನಲಿಯುತ
ಸುಮಾನದೊಳು ಮೊಲೆಯನುಂಡು
ನಿಲದೊಳು ಇದ್ದುವು

ಉದಯಕಾಲದೊಳೆದ್ದು ಗೊಲ್ಲನು
ನದಿಯ ಸ್ವಾನನ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚದುರ ಶಿಖೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರೆ ತಾಯಿ ಬಾರೇ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು

ಗೊಲ್ಲ ಕರೆದ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು
ಬೆಟ್ಟದ ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಮುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿಹೋದುವು ಹಸುಗಳು

ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆನ್ನಾಗಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆಯೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಸರ್ವ ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು


ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ

ಅಮ್ಮ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಲು

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ

ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರು ನನಗೆ ಹಿತವರು

ಅಮ್ಮಗಳಿರ ಅಕ್ಕಗಳಿರ
ನಮ್ಮ ತಾಯೊಡಹುಟ್ಟುಗಳಿರ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಕಟ್ಟ ಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟ ವ್ಯಾಘ್ರನು ಹೊಂಚುತಿರುವನು
ನಟ್ಟ ನಡುವಿರು ಕಂದನೆ

ತಬ್ಬಲಿ ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ


ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆ ಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನ ಪಡೆವೆನು
ಎನ್ನು ತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

೩.ಮಾನವಮಿ ಪದ


ಆಶ್ವಯುಜ ಶುದ್ದ ಮಾನವಮಿ ಬರಲೆಂದು
ಶಾಶ್ವತದಿ ಹರಸಿದೆವು ಬಾಲಕರು ಬಂದು
ಈಶ ನಿನಗತ್ಯಧಿಕ ಸುಖವ ಕೊಡಲೆಂದು
ಲೇಸಾಗಿ ಹರಸಿದೆವು ಬಾಲಕರು ಬಂದು

ಧನಕನಕ ವಸ್ತುವಾಹನವಾಗಲೆಂದು
ಕನಕದಂಡಿಗೆ ಚೌರಿ ನಿಮಗಾಗಲೆಂದು
ದಿನದಿನಕೆ ರಾಜಮನ್ನಣೆ ಹೆಚ್ಚಲೆಂದು
ಅನುದಿನವು ಹರಸಿದೆವು ಬಾಲಕರು ಬಂದು

ಛತ್ರ ಚಾಮರ ತೇಜಿ ನಿಮಗಾಗಲೆಂದು
ಅರ್ತಿಯಿಂ ಮಾಲಕುಮಿ ನಿಮಗೋಲಿಯಲೆಂದು
ಪುತ್ರಪೌತ್ರರು ನಿಮಗೆ ಹೆಚ್ಚುತಿರಲೆಂದು
ಅರ್ತಿಯಿಂ ಹರಸಿದೆವು ಬಾಲಕರು ಬಂದು

ಮಳೆ ಬಂದು ಬೆಳೆ ಬೆಳೆದು ಧರೆ ತಣಿಯಲೆಂದು
ತಿಳಿಗೊಳಗಳುಕ್ಕಿ ತುರುಗಳು ಕರೆಯಲೆಂದು
ನಳಿನಮುಖಿಯರು ಸುಪುತ್ರರ ಪಡೆಯಲೆಂದು
ಇಳೆಯೊಳಗೆ ಹರಸಿದೆವು ಬಾಲಕರು ಬಂದು

ಆಯುರಾರೋಗ್ಯಗಳು ನಿಮಗಾಗಲೆಂದು
ಶ್ರೇಯಸ್ಸು ಸಂಪತ್ತು ಹೆಚ್ಚುತಿರಲೆಂದು
ಆಯತದಿ ಜಗದೊಡೆಯನೊಲವಾಗಲೆಂದು
ಪ್ರೀಯದಿಂ ಹರಸಿದೆವು ಬಾಲಕರು ಬಂದು





ನಾಲ್ಕನೆಯ ತೆನೆ


ಹೊಸ ಕವಿತೆಗಳಿ೦ದ

ಒಳಪಿಡಿ
ಕಾಣಿಕೆ ೮೩
ಸ್ವಾಗತ ಗೀತ ೮೪
ಮೈಸೂರು ಮಕ್ಕಳು ೮೬
ಸ್ವಾಗತ (ಹೈದರಾಬಾದಿಗೆ) ೮೮
ಕನ್ನಡ ನುಡಿ ೮೯
ಕನ್ನಡ ೮೯
ಕನ್ನಡ್ ಪದಗೊಳು ೯೦
ಕನ್ನಡಿಗನ ಕೊರಗು ೯೧
ರಕ್ಷಿಸು ಕರ್ಣಾಟಕ ದೇವಿ ೯೨
೧೦ ಕನ್ನಡಿಗರ ತಾಯಿ ೯೩
೧೧ ತುಳುನಾಡ ರಾಣಿ ೯೫
೧೨ ಕನ್ನಡನಾಡ ರಾಣಿ ೯೬
೧೩ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ೯೭
೧೪ ಅರುಣೋದಯ ೯೭
೧೫ ನಾಡಿನ ಹಾಡು ೯೯
೧೬ ಕಾರ್ಗಾಲದ ವೈಭವ ೧೦೦
೧೭ ಹೈದರಾಬಾದು ೧೦೧
೧೮ ಕೊಡಗು ೧೦೨
೧೯ ಮಡಿಕೇರೀಲಿ ಮಂಜು ೧೦೪
೨೦ ಹುತ್ತರಿ ಹಾಡು ೧೦೫
೨೧ ತಂಕಣ ಗಾಳಿಯಾಟ ೧೦೬
೨೨ ಹಾವಿನ ಹಾಡು ೧೦೮
೨೩ ಕೊಂಬು ೧೦೯
೨೪ ಕೋಗಿಲೆ ೧೧೧
೨೫ ಶಿವನಸಮುದ್ರ ೧೧೨
೨೬ ಲಲಿತಾದ್ರಿ ೧೧೩
೨೭ ಲಾಲ್ ಬಾಗ್ ೧೧೭
೨೮ ಮಡಿಕೇರೀಲಿ ರತ್ನ ೧೧೮
೨೯ ಕುಮಾರವ್ಯಾಸ ೧೨೧
೩೦ ಕನ್ನಡನಾಡಿನ ಸ್ಥಿತಿ ಯನು ನೆನೆದು ೧೨೩
೩೧ ಎ೦ಥ ನಾಡಿದು ೧೨೪
೩೨ ಹಂಪೆಗೆ ೧೨೪
೩೩ ಹಂಪೀ-ವಿಜಯ ನಗರ ದರ್ಶನ ೧೨೫
೩೪ ಕನ್ನಡ ದಾಸಯ್ಯ ೧೨೬
೩೫ ತರುಣರ ದಸರೆ ೧೨೭
೩೬ ಶ್ರೀ ಕೃಷ್ಣರಾಜ ರಜತ ಮಹೋತ್ಸವ ಪ್ರಗಾಥ ೧೨೯
೩೭ ಕನಸಿನೊಳಗೊಂದು ಕಣಸು ೧೩೪
೩೮ ಭಾರತ ತಪಸ್ವಿನಿ ೧೩೫
೩೯ ಬೇಲೂರಿನ ಶಿಲಾ ಬಾಲಿಕೆಯರು ೧೩೬
೪೦ ವನಸುಮ ೧೩೮
೪೧ ತಂಗಾಳಿ ೧೩೯
೪೨ ಕಸ್ಮೈದೇವಾಯ ೧೪೦
೪೩ ಕೋಗಿಲೆ ೧೪೧
೪೪ ಅಭೀಃ ೧೪೩
೪೫ ನವೀನ ೧೪೪
೪೬ ಯುಗಾದಿಯ ಹಾಡು ೧೪೫
೪೭ ಕನ್ನಡತಾಯ ನೋಟ ೧೪೭

ಮೊದಲು ತಾಯ ಹಾಲ ಕುಡಿದು,
ಲಲ್ಲೆಯಿಂದ ತೊದಲಿ ನುಡಿದು,
ಕೆಳೆಯರೊಡನೆ ಬೆಳೆದು ಬಂದ
ಮಾತದಾವುದು-
ನಲ್ಲೆ ಯೊಲವ ತೆರೆದು ತಂದ
ಮಾತದಾವುದು-
ಸವಿಯ ಹಾಡ, ಕಥೆಯ, ಕಟ್ಟಿ,
ಕಿವಿಯಲೆರೆದು, ಕರುಳ ತಟ್ಟಿ,
ನಮ್ಮ ಜನರು, ನಮ್ಮ ನಾಡು,
ಎನಿಸಿತಾವುದು-
ನಮ್ಮ ಕವಿಗಳೆಂಬ ಕೋಡು
ತಲೆಗದಾವುದು-
ಕನ್ನಡ ನುಡಿ, ನಮ್ಮ ಹೆಣ್ಣು,
ನಮ್ಮ ತೋಟದಿನಿಯ ಹಣ್ಣು;
ಬಳಿಕ, ಬೇರೆ ಬೆಳೆದ ಹೆಣ್ಣು
ಬಳಿಗೆ ಸುಳಿದಳು;
ಹೊಸದು ರಸದ ಬಳ್ಳಿ ಹಣ್ಣು
ಒಳಗೆ ಸುಳಿದಳು.
ಪಡುವ ಕಡಲ ಹೊನ್ನ ಹೆಣ್ಣು,
ನನ್ನ ಜೀವದುಸಿರು, ಕಣ್ಣು,
ನಲಿಸಿ, ಕಲಿಸಿ, ಮನವನೊಲಿಸಿ
ಕುಣಿಸುತಿರುವಳು;
ಒಮ್ಮೆ ಇವಳು, ಒಮ್ಮೆ ಅವಳು,
ಕುಣಿಸುತಿರುವಳು.
ಹೀಗೆ ನನಗೆ ಹಬ್ಬವಾಗಿ,
ಇನಿಯರಿಬ್ಬರನ್ನು ತೂಗಿ,
ಇವಳ ಸೊಬಗನವಳು ತೊಟ್ಟು,
ನೋಡಬಯಸಿದೆ;
ಅವಳ ತೊಡಿಗೆ ಇವಳಿಗಿಟ್ಟು
ಹಾಡಬಯಸಿದೆ.

ಬಲ್ಲವರಿಗೆ ಬೆರಗೆ ಇಲ್ಲಿ ?
ಅರಿಯದವರು ನಾಲ್ವರಲ್ಲಿ
ಕಳೆಯ ಬೆಳಕು ಹೊಳೆಯಲಂದು
ದಣಿದುಹೋದೆನು.
ಬಡವನಳಿಲುಸೇವೆಯೆಂದು
ಧನ್ಯನಾದೆನು.

ಶ್ರೀ



೨. ಸ್ವಾಗತ ಗೀತ

ಗೆಳೆಯ ಕನ್ನಡಿಗರೇ, ಸ್ವಾಗತವು ನಿಮಗೆ!
ಬೆಳೆವ ಸಿರಿಗನ್ನಡದ ಬಳ್ಳಿ ಪಡೆದರಳುಗಳೆ,
ಸ್ವಾಗತವು ನಿಮಗೆ!

ಒಬ್ಬ ಕನ್ನಡ ದೇವಿಯುದರದಿಂದೊಗೆದು,
ಒಬ್ಬ ಕನ್ನಡ ಜನನಿಯೆದೆಹಾಲ ಮೊಗೆದು,
ಒಬ್ಬ ಮಾತೆಯ ಮಡಿಲು ತೊಡೆಗಳಲ್ಲಿ ಕುಣಿದು,
ಒಬ್ಬ ತಾಯುಲಿಗಳನೆ ತೊದಲಿ ನುಡಿದು,
ಬೆಳೆದ ಕನ್ನಡಿಗರೇ, ಬಂಧು ಕನ್ನಡಿಗರೇ
ಇನಿಯ ಕನ್ನಡಿಗರೇ, ಸ್ವಾಗತವು ನಿಮಗೆ!
ಪಡುಗಡಲ ತೆರೆ ಮೊಳಗಿ, ಹಲವು ಹೊಳೆಗಳು ಮಿನುಗಿ,
ಸೊಬಗು ಸುಳಿಯುವ, ಸುಖದ ಬೀಡಿನಿಂದ,
ತುಳು ನೆರೆಯ ನಾಡಿನಿಂದ-
ಕನ್ನಡದ ಕಲಿಗಳನು, ಕನ್ನಡದ ಕವಿಗಳನು
ತನ್ನ ಬಸಿರಲಿ ಮುನ್ನ ಹೊರೆದು, ಜಗದಲ್ಲಿ ಮೆರೆದು
ಮತ್ತೆ ಮಗುವುತ್ಸಹದ ಕೊಯಲಿನಿಂದ,
ಬೆಳವಲದ ಬಯಲಿನಿಂದ-
ವನದೇವಿ ಜಲದೇವಿಯರಿಗೆ ತೌರೂರೆನಿಸಿ,
ಜನದ ಕಣ್ ಮನಗಳನ್ನು ಸೆಳೆದು ಸೆರೆಸಿಕ್ಕಿಸುವ
ಪ್ರಕೃತಿರಚನೆಯ ಬೆಗಡು ಬೆಡಗಿನಿಂದ,
ಮಲೆನಾಡು ಕೊಡಗಿನಿಂದ-

ಹೆರರು ಕೊಡುವಟ್ಟುಳಿಗೆ ಹಿಮ್ಮೆಟ್ಟಿದೆಯೆ ನಿಂತು
ಸಿರಿಗನ್ನಡ ಧ್ವಜವನೆತ್ತಿ ಮೆರೆಯಿಸುತಿರುವ
ಗಂಡುಮೆಟ್ಟಿನ ನೆಲದ ತಡಿಗಳಿಂದ,
ಕನ್ನಡದ ಗಡಿಗಳಿಂದ-
ಬಂದಿಹಿರಿ, ಬಂದಿಹಿರಿ ಕನ್ನಡದ ಮಣಿಗಳಿರ,
ಬಂದಿಹಿರಿ, ಕನ್ನಡದ ದೇವಿಯಾರಾಧನೆಗೆ,
ಇಂದು ಸ್ವಾಗತವು ನಿಮಗೆ!
ತಂದಿಹಿರಿ ನೀವಿಂದು ಹೊಸದೊಂದು ಭಾಗ್ಯವನು
ಈ ನಮ್ಮ ಮೈಸೂರಿಗೆ!

ಬೆಟ್ಟ ತುದಿಯಲ್ಲಿ ನಿಂತು ಬೆಳಗಿ ದೆಸೆದೆಸೆಗೆ,
ಭಕ್ತರಳಲೆಲ್ಲವನು ತುಳಿದು ನೆಲದಡಿಗೆ,
ಒಲುಮೆಯಲಿ ನಲುಮೆಯಲಿ ಚಾಮುಂಡಿದೇವಿ,
ಕನ್ನಡಿಗರಧಿದೇವಿ ಶುಭಗಳನು ತೀವಿ
ಕಾಯುತಿರುವಿ ನಮ್ಮ ಮೈಸೂರಿಗೆ,
ಇಂದು ಸ್ವಾಗತವು ನಿಮಗೆ!

ಇಲ್ಲಿ ಕೆರೆ, ಅಲ್ಲಿ ಗಿರಿ; ಎಲ್ಲೆಲ್ಲಿ ನೋಡಿದರೆ
ಅಲ್ಲಲ್ಲಿ ತಂಪೆರಚುವು ಪವನಗಳು.
ಬನ್ನಿ, ವಿಶ್ರಮಿಸಿಕೊಳ್ಳಿ, ಬಳಲಿಕೆಯ ಹರಿಸಿಕೊಳಿ-
ಎಂದು ಅದೋ ಕರೆಯುತಿಹವು!
ತನ್ನಂತರಂಗವನು ತೆರೆದು ತೋರಿಸಿ ಬೆಳಗಿ
ತನ್ನ ನಲವನು ನಿಮಗೆ ಪುರವರುಹುವಂತಿರುವ
ಉರಿವ ದೀಪದ ಹಿರಿಯ ಬೀದಿ ಸಾಲು
ಸ್ವಾಗತವ ಬಯಸುತಿಹುದು!-ನಿಮಗಿದೋ
ಮೈಸೂರು ಬಯಸುತಿಹುದು!

ಕನ್ನಡದ ಸೇವೆಯಲಿ ನುರುಗಿ ಹಣ್ಣಾದವರೆ,
ಹಿರಿಯ ಕನ್ನಡ ಧೀರರೇ,
ಕನ್ನಡದ ಮೇಲೆಯಾ ಕನಸ ನನಸಾಗಿಸುವ
ತರುಣ ಕನ್ನಡ ವೀರರೇ,

ಕನ್ನಡದ ಸೊಂಪು ಸವಿಯುಗುವ ರಸ ಕಾವ್ಯಗಳ
ಬರೆವ, ಬರೆಯಿಸುತಿರುವ ಸುಂದರಿಯರೇ,
ಆರ್ಯ ಮಹಿಳೆಯರೇ,
ಸ್ವಾಗತವು ನಿಮಗಿಂದು ಮೈಸೂರಿಗೆ!

ನಾವೆಲ್ಲರೊಡಗೂಡಿ, ಒಡನಾಡಿ, ಕಲೆತು,
ಕನ್ನಡದ ಸೇವೆಯಲ್ಲಿ ನಮ್ಮ ಮೈ ಮರೆತು,
ಕುಂದು ಕೊರತೆಗಳೊಂದಕಿಂಬಿಲ್ಲದಂತೆ,
ನಮ್ಮ ಸಖ್ಯದ ಮೊಗ್ಗು ಬಿರಿದರಳುವಂತೆ,
ದೇವಿ ಕರುಣಿಸಲಿ ವರವ!- ಕನ್ನಡದ
ದೇವಿ ಕೈಕೊಳಲಿ ಫಲವ!

ಕನ್ನಡಿಗ ಸೋದರರೆ, ಸ್ವಾಗತವು ನಿಮಗೆ!
ಕನ್ನಡದ ಸಿರಿಬಳ್ಳಿ ಹೊಮ್ಮಿಸಿರುವರಳುಗಳೆ,
ಇಂದು ಸ್ವಾಗತವು ನಿಮಗೆ!-ನಿಮಗಾಗಿ
ಕಾದಿರುವ ಮೈಸೂರಿಗೆ!
ತೀ. ನಂ. ಶ್ರೀಕಂಠಯ್ಯ

೩. ಮೈಸೂರು ಮಕ್ಕಳು

ನಿಮ್ಮ ನಾಡಾವುದು?
ಮೈಸೂರು.
ನಿಮ್ಮೂರದಾವುದು?
ಮೈಸೂರು.
ಕನ್ನಡದ ಕಣ್ಣದು,
ಮೈಸೂರು.
ನಾಲುಮಡಿ ಕೃಷ್ಣನ
ಮೈಸೂರು.
ಅಲ್ಲೆಲ್ಲಿ ನೋಡಿದರು ಬಾನ ಕರೆಯಲ್ಲಿ ಹುದುಗಿ ಕಾರವುಗಿಲಂತಿಹುವು
ಬೆಟ್ಟ ಹಬ್ಬಿ;
ತೆರೆ ಎದ್ದು ಬಿದ್ದು ಬಹ ಬಯಲಲ್ಲಿ ಹಳ್ಳಿಗಳು, ತಾವರೆಯ ಕೆರೆ, ತೋಟ,
ಹೊಲದ ಹಸುರು;

ಕಾಡಿನಲಿ ನುಸಿಯುತ್ತ, ಕಲ್ಲಿನಲಿ ಮೊರೆಯುತ್ತ, ಮರಳಿನಲಿ ಸುಳಿಸುಳಿದು,

ಸರಿಯ ದುಮುಕಿ,


ಪಯಿರುಗಳ ಬದುಕಾಗಿ, ಹೊಳಲುಗಳ ಬೆಳಕಾಗಿ, ಕಣ್ಣುಗಳ ಬೆರಗಾಗಿ

ಹರಿವ ಹೊನಲು.


ಅಲ್ಲಿ ಅಲೆಯಲೆಯಾಗಿ ಬಂದು, ನೆಲೆ ನೆಲೆಯಾಗಿ ನಿಂದು, ಹಲತೆರದಿಂದ

ನುಡಿದು, ನಡೆದು,


ಕಡೆಗೆ ನಾಡೊಂದೆಂದು, ದೊರೆಯೊಬ್ಬ ನನಗೆಂದು, ಬಾಳ ಬೆಲೆ ಹುದುವೆಂದು

ಕಲಿತು, ಕಲೆತು,


ಜಾಣಿನಲಿ, ಚೆಲುವಿನಲಿ, ಸೊಗಸಿನಲಿ, ನಯದಲೌದಾರ್ಯದಲಿ, ಕಾರ್ಯದಲಿ

ಕಳಶವೆನಿಸಿ,


ಮೆರೆಯುತಿಹ ಜನನ ನಾನೇನೆಂಬೆ, ಎಂತು ನಾ ಕನ್ನಡಿಗರೈಸಿರಿಯ

ಬಣ್ಣಿಸುವೆನು.




ಚಿನ್ನದ ನಾಡದು,
ಮೈಸೂರು.
ಗಂಧದ ಗುಡಿಯದು,
ಮೈಸೂರು.
ವೀಣೆಯ ಬೆಡಗದು,
ಮೈಸೂರು.
ನಾಲುಮಡಿ ಕೃಷ್ಣನ
ಮೈಸೂರು.


ಅಲ್ಲೊಬ್ಬ ನನಗಿಹನು ನಾಯಕನು; ಭಕ್ತಿಯಲ್ಲಿ ನಿಲು ನಿಲುಕಿ ಕಣ್ ತುಂಬ

ನೋಡುತಿರಲು,


ಆನೆಯಂಬಾರಿಯಲಿ ನಸುನಗೆಯನಿಕ್ಕೆಲಕೆ ಬೀರಿ, ಜನರಕ್ಕರೆಯನುಕ್ಕಿಸುವನು.
ಧೀರನಾತನು; ತುಂಬು ಗಾಂಭೀರದಲ್ಲಿ ಸತ್ಯವನೆ ಎತ್ತಿ ನಿಲಿಸುವನು

ಪ್ರಜೆಯ ತಂದೆ;


ಮರೆತು ತನ್ನನು ರಾಜ್ಯ ಸೇವೆಯಲಿ, ಸಲಿಸುವನು ಧವನು ರಾಜರ್ಷಿ

ಕರ್ಮಯೋಗಿ.


ಬನ್ನಿ ಕೆಳೆಯರ, ನಮ್ಮ ಬಾಳಿಕೆಯ ಕಾಣಿಕೆಯನೊಪ್ಪಿಸುವ, ಕೈಕೊಳುವ

ದೊರೆಯ ಗುರಿಯ;


ಲೋಹಿಯಾತನದು- ತನ್ನರಮನೆಯ ಹಸಗೆಯು ಬೆಳಗಿದಂತೆಯೆ, ಬೆಳಗಿ

ಊರ, ನಾಡ,

ಹಸಗೆ, ಹೊಸಗೆಯ್ವೆನೆಂಬೊಲುಮೆ ; ನಾವೆಲ್ಲರಾ ನಾಯಕನ ದಳದಿ
ದೀಕ್ಷೆ ಪಡೆದು,
ಮಾರಿ ಬಳಸುವ ಬನ್ನಿ ಬುದ್ಧಿಯನು ಶ್ರದ್ಧೆಯನು, ಕನ್ನಡಿಗರೈಸಿರಿಯ
ಬೆಳೆಯ ಬೆಳಸಿ.



೪, ಸ್ವಾಗತ
(ಹೈದರಾಬಾದಿಗೆ)
ಈ ನಮ್ಮ ನಾಡಿಂಗೆ ಓಡಿಬನ್ನಿ,
ನಿಮ್ಮವರ ನೋಡಬನ್ನಿ.
ಕಕ್ಕುಲತೆಯಿಂದ ಮಾತಾಡಬನ್ನಿ,
ಎಮ್ಮೊಡನೆ ಕೂಡಬನ್ನಿ.
ತುಂಗನಾಳಿದ ತಿರುಳುಗನ್ನಡದ ನಾಡು,
ದಾಸರಿಂ ಪಾವನತೆಯೊಂದಿದೀ ನಾಡು,
ಇಕ್ಕೆಲದ ಸೆಳತಕ್ಕೆ ಸೀಳಾಗಿ ಪಾಡು
ವಿಂಗಡಿಸಿ ಹೇಗಾಗಿ ಹೋಗಿಹುದು ನೋಡು.
ಕಳೆದುದಕೆ ಅಳುತಳುತ ಕುಳಿತು ಫಲವೇನು?
ಮೊಳೆತಿರಲು ತನ್ನರಿವು ಸಾಲದೇನು?
ಮೊಳಕೆ ಕಮರದ ತೆರದಿ ಮಳೆಗರೆದು ನೀನು,
ಪಾಲಿಸೈ, ಲಾಲಿಸೈ, ಕೇಳಲಿನ್ನೇನು?
ಬಿಸಿಲ ಬೇಗೆಗೆ ಬೆಂದು ಬಾಡುತಿದೆ ನಾಡು
ಆಚಾರ್ಯ ನಿನಗೆ ಮರೆಹೊಗುತಲಿದೆ ಕಾಡು.
ಬೇಗ ಬಾ, ಬೇಗ ಬಾ, ಬಂದು ಕಾಪಾಡು.
ಶುಷ್ಕಹೃದಯಕೆ ತಂಪ-ಕಂಪ-ನೀಡು.

ಮಂದಮಾರುತವಾಗಿ ತೇಲಿ ಬಾರೈ
ಹರಿವ ಹೊಳೆಯಾಗಿ ನೀ ಸಾಗಿ ಬಾರೈ
ಭೋರ್ಗರೆವ ಮಳೆಯಾಗಿ ಮೊರೆದು ಬಾರೈ
ನಿನಗೆ ಸುಸ್ವಾಗತವು ಗುರುವೆ ಬಾರೈ.

ಜೆ. ಕೆ. ಪ್ರಾಣೇಶಾಚಾರ



೫. ಕನ್ನಡ ನುಡಿ

ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು !
ಗಾನವ ಬೆರೆಯಿಸಿ
ವೀಣೆಯ ದನಿಯೊಳು
ವಾಣಿಯ ನೇವುರ
ನುಡಿಸುತೆ ಕುಣಿಯಲು
ಮಾಣದೆ ಮರೆಯುವ ಮಂಜುಲ ರವವೋ ?
ಎನಿತು ಇನಿದು ಈ ಕನ್ನಡ ನುಡಿಯು !
ರಂಗನ ಮುರಲಿಯ
ಹಿಂಗದ ಸರದಲಿ
ಹೆಂಗಳೆಯರು ಬೆಳ
ದಿಂಗಳಿನಿರುಳಲಿ
ಸಂಗೀತವನೊರೆದಂಗವಿದೇನೋ ?
ಎನಿತು ಇನಿದು ಈ ಕನ್ನಡ ನುಡಿಯು !
ಗಿಳಿಗಳು ಉಲಿಯುವ
ಮೆಲುಮಾತುಗಳೋ ?
ಕಳಕಂಠಗಳಾ
ಚೆಲುವಿನ ಕುಕಿಲೋ ?
ಅಳಿಗಳ ಬಳಗದ ಬೆಳಗಿನ ಉಲಿಯೋ ?
ಎನಿತು ಇನಿದು ಈ ಕನ್ನಡ ನುಡಿಯು.

ಆನಂದಕಂದ

ಕೃಷ್ಣಶರ್ಮ ಬೆಟಗೇರಿ



೬. ಕನ್ನಡ

ತನ್ನದು ಎಂಬುದು ಏನಿಲ್ಲೆ
ಕನ್ನಡ ನುಡಿಯಲ್ಲಿ ಹುರುಳಿಲ್ಲೆ? । ಪ ।

ಮಾನವ ಜಾತಿಯ ಜೀವಾಳ । ಭಾಷಾದೇವಿಯೊಳಿಲ್ಲೇನು?
ಏನಿದು? ಐಕ್ಯದ ನಿಜಬೀಜ । ತಾಯ್ನು ಡಿಯೋಲವಿನೊಳಿಲ್ಲೇನು?
ಉನ್ನತ ಸಂಸ್ಕೃತಿಯೋಳ ಬೆಳಸು । ಕನ್ನ ಡ ತಾಯಿಗೆ ಇಲ್ಲೇನು?

ಜೀವಕೆ ಜೀವವ ಬೆರಸುತಿಹ
ಭಾವದ ಬೆಳಗನು ಬೀರುತಿಹ
ಸಾವಿಲ್ಲದೊಲವನುಣಿಸುತಿಹ

ತನ್ನಯ ಭಾಷೆಯೆ ತನಗಲ್ಲೆ; । ಅಂತಹ ಭಾಷೆಯು ನಮಗಿಲ್ಲೆ?
ನನ್ನೀ ಭಾಷೆಯ ನಂದನದಿ । ಸೊಗಸಿನ ಝರಿಗಳು ಹರಿದಿಲ್ಲೆ?
ಕನ್ನಡದಿರಿನುಡಿಗಡಲೊಳಗೆ । ವಿದ್ಯೆಯ ನದಿಗಳು ಕೂಡಿಲ್ಲೆ?
ಸನ್ನುತ ನಾಡಿನ ಗೂಡಿನಲಿ । ಧಾರ್ಮಿಕ ಶುಕಗಳು ಜನಿಸಿಲ್ಲೆ?

ಕವಿಕೋಕಿಲಗಳು ಉಲಿದಿಲ್ಲೆ?
ಸವಿಯರಸ೦ಚೆಯು ಚರಿಸಿಲ್ಲೆ?
ನವ ಸಾಧುವೃಕ್ಷ ಮೊಳೆತಿಲ್ಲೆ?

ನನ್ನಿಯ ಮೇಘವು ಕರೆದಿಲ್ಲೆ? । ಬನ್ನದ ಬೀಜವು ಹುರಿದಿಲ್ಲೆ?
ಗರ್ವದ ರಾವಣನಳಲಿಸಿದಾ । ಹನುಮಂತನಾವ ನುಡಿಗುಡಿಯು
ಪೂರ್ವದ ಹರ್ಷನ ಸೋಲಿಸಿದಾ । ಪುಲಿಕೇಶಿ ಯಾವ ನುಡಿಗುಡಿಯು
ಓರ್ವಳೆ ಶಿವರಾಜನ ತಡೆದಾ । ಮಲ್ಲವ್ವನಾವ ನುಡಿಗುಡಿಯು

ಕನ್ನಡಿಗರ ಕರವೀರರವು
ಕನ್ನಡಿಗರ ಶಿರಚದುರರವು
ಕನ್ನಡಿಗರ ಉರಭಕ್ತರವು
ಕನ್ನಡ ಕತ್ತುರಿ ಕಂಪಲ್ಲೆ? । ಕನ್ನಡಿಗರ ಸಿರಿ ಮೆರೆದಿಲ್ಲೆ?

ಹನುಮಂತ ಗೋವಿಂದ ಸೆಟ್ಟಿ

೭. ಕನ್ನಡ್ ಪದಗೊಳು

ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ
ತಕೊ! ಪದಗೊಳ್ ಬಾಣ!
ಬಗವಂತ್ ಏನ್ರ ಭೂಮಿಗ್ ಇಳದು
ನನ್‌ತಾಕ್ ಬಂದಾಂತ್ ಅನ್ನು;
ಪರ್‌ಗಿರೀಕ್ಷೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು!

'ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!'
ಅಂತ್ ಔನ್ ಏನಾರ್ ಅಂದ್ರೆ-
ಮೂಗ್ ಮೂರ್ ಚೂರಾಗ್ ಮುರಸ್ಕೋ೦ತೀನಿ
ದೇವರ್ ಮಾತ್ ಆಡ್ಬಂದ್ರೆ!
ಯೆಂಡ ಬುಟ್ಟೆ, ಯೆಡ್ತೀನ್ ಬುಟ್‌ಬುಡ್
ಅಂತ್ ಔನ್ ಏನಾರ್ ಅಂದ್ರೆ
ಕಳದೋಯ್ತ್ ಅಂತ ಕುಣದಾಡ್ತೀನಿ
ದೊಡ್ ಒಂದ್ ಕಾಟ! ತೊಂದ್ರೆ!
'ಕನ್ನಡ್ ಪದಗೋಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ!?
ಅಂತ್ ಔನ್ ಅಂದ್ರೆ - ದೇವ್ರ್ ಆದ್ರ್ ಏನು ?
ಮಾಡ್ತಿನ್ ಔನ್ಗೆ ಖತ್ನ!
ಆಗ್ನೆ ಮಾಡೋ ಐಗೊಳ್ ಎಲ್ಲಾ
ದೇವ್ರ ಆಗ್ಲಿ-ಎಲ್ಲ!
ಕನ್ನಡ್ ಸುದ್ದಿಗ್ ಏನ್ರ ಬಂದ್ರೆ-
ಮಾನಾ ಉಳಸಾಕಿಲ್ಲ!
ನರಕಕ್ಕ್ ಇಲ್ಲಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ್ ಪದವಾಡ್ತೀನಿ!
ನನ್ನ ಮನಸನ್ಸ್ ನೀ ಕಾಣೆ!
ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನಡ್ ಪದ್ಗೊಳ್ ನುಗ್ಲಿ!

ರತ್ನ


(ಜಿ.ಪಿ. ರಾಜರತ್ನಂ)


೮. ಕನ್ನಡಿಗನ ಕೊರಗು


ಸೊಕ್ಕಿನಲಿ ತಲೆಯ ಜೊತೆಯವರ ಕೂಟದಲಿ,
ನಾವು ಸಮ ನಿಮಗೆಂದು ನುಡಿವ ಬಲವಿಲ್ಲ!
ಮಿಕ್ಕವರು ಕಡೆಗಣಿಸಿ ನೂಕಿದಾ ಕಡೆ ಬಿದ್ದು,

{{Gap }ಯಾವ ಮಂಕೊ ಕವಿದು, ಹದುಗಿರುವೆವಲ್ಲ?
ರೊಕ್ಕ ಕೈಯೊಳಗಿಲ್ಲ, ಹುರುಡು ಮೈಯೊಳಗಿಲ್ಲ
{{Gap }ಹೆಮ್ಮೆಯೊಂದನು ನೆಚ್ಚಿ ದೆಸೆಗೆಟ್ಟೆ ನಲ್ಲ !
ಅಕ್ಕ ತಂಗಿಯರೆಲ್ಲ ಮುಂದು ಮುಂದಾಗಿರಲು
ನಮ್ಮ ತಾಯೊಬ್ಬಳೇ ಸೊರಗಿರುವಳಲ್ಲ !
ಅಮ್ಮನನು ಕೈಬಿಡದೆ ಇನ್ನು ಮೆರೆಸುವೆನೆ ?
ಹಿರಿಯ ಹೆಸರನು ತಿರುಗಿ ಗಳಿಸಿಕೊಳ್ಳುವೆವೆ ?
ಸರಿಯವರ ತಲೆಮೆಟ್ಟಿ ಮುಂದೆ ನಿಲ್ಲುವೆವೆ ?
ನೆಮ್ಮದಿಯ ಬೆಳಕಿನಲಿ ನಾವು ಬಾಳುವೆವೆ ?

ತೀ. ನಂ. ಶ್ರೀಕಂಠಯ್ಯ

೯. ರಕ್ಷಿಸು ಕರ್ಣಾಟಕ ದೇವಿ ರಕ್ಷಿಸು

ಕರ್ಣಾಟಕ ದೇವೀ, ಸಂ
ರಕ್ಷಿಸು ಕರ್ಣಾಟಕ ದೇವೀ || ಪ !!

ಕದಂಬಾದಿ ಸಂಪೂಜಿತ ಚರಣೆ
ಗಂಗಾರಾಧಿತ ಪದನಖ ಸರಣೆ
ಚಲುಕ್ಯರುತ್ತಮ ಕಾಂಚೀ ಕಿರಣೆ
ರಾಷ್ಟ್ರಕೂಟ ಮಣಿಕಂಠಾಭರಣೆ
ಚಾಲುಕ್ಯಾಂಶುಕ ಶೋಭಾವರಣೆ.

ಯಾದವಮಣಿ ಕಂಕಣಾಂಶು ಸುಂದರಿ
ಬಲ್ಲಾಳರ ಭುಜಭೂಷಣ ಬಂಧುರೆ
ವಿಜಯನಗರ ಮಂಗಲಮಣಿ ಕಂಧರೆ
ಮೈಸೂರೊಡೆಯರ ಸುಕೀರ್ತಿಮಂದಿರೆ
ಮಾಂಡಲಿಕಾವನ ಭಾರಧುರಂಧರೆ.

ಮತ ಸುಸ್ಥಾಪಕ ಸ್ಥಾಪಿತಪ್ರಾಣೆ
ಶಿಲ್ಪಕಲಾಮಂಟಪ ಸುಸ್ಥಾನೆ.
ಕವಿಜನ ಕೀರ್ತಿತ ಸುಯಸ್ತಾಣೆ
ಸಾಧು ಸತ್ಕಥಾ ಭೇರೀ ಧ್ವಾನೆ
'ಸ್ವೇತಿಹಾಸನೀರಾಜನ ರಾಣಿ.

ಶಾಂತಕವಿ

೧೦. ಕನ್ನಡಿಗರ ತಾಯಿ

ತಾಯೆ ಬಾರ ಮೊಗವ ತೋರ, ಕನ್ನಡಿಗರ ಮಾತೆಯೆ !
ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ !
ನಮ್ಮ ತಪ್ಪನೆನಿತೊ ತಾಳ್ವೆ,
ಅಕ್ಕರೆಯಿಂದೆಮ್ಮನಾಳ್ವೆ;
ನೀನೆ ಕಣ್ ನಮ್ಮ ಬಾಳ್ವೆ,
ನಿನ್ನ ಕರೆಯಲಮ್ಮೆವು
ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು.

ಹಣ್ಣನೀವ ಕಾಯನೀವ ಪರಿ ಪರಿಯ ಮರಂಗಳೊ,
ಪತ್ರಮಾವ ಪುಷ ಮೀವ ಲತೆಯ ತರತರಂಗಳೊ,
ತೆನೆಯ ಕೆನೆಯ ಗಾಳಿಯೊ,
ಖಗಮೃಗೋರಗಾಳಿಯೊ,
ನದಿ ನಗರ ನಗಾಳಿಯೊ !
ಇಲ್ಲಿಲ್ಲದುದುಳಿದುದೆ ?
ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ ?

ಬುಗರಿಯಾಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ?
ಕನ್ನ ಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ ?
ಪಾಂಡವರಜ್ಞಾತಮಿದ್ದ,
ವಲಲಂ ಕೀಚಕನ ಗೆದ್ದ,
ಕುರುಕುಲ ಮು೦ಗದನಮೆದ್ದ
ನಾಡು ನೋಡಿದಲ್ಲವೇ ?
ನಂದನಂದನನಿಲ್ಲಿ೦ದ ಸಂದಿಗಯ್ದನಲ್ಲವೇ ?
 
ಶಕವಿಜೇತನಮರ ಶಾತವಾಹನಾಖ್ಯನೀ ಶಕಂ
ನಿನ್ನೊಳಂದು ತೊಡಗಿ ಸಂದುದರ್ಧ ಭರತದೇಶಕಂ!
ಚಳುಕ್ಯ ರಾಷ್ಟ್ರಕೂಟರೆಲ್ಲಿ,
ಗಂಗರಾ ಕದಂಬರೆಲ್ಲಿ,
ಹೊಯ್ಸಳ ಕಳಚುರ್ಯರೆಲ್ಲಿ,
ವಿಜಯನಗರ ಭೂಪರು
ಆಳ್ದರಿಲ್ಲಿಯಲ್ಲದಲ್ಲಿ ತಾಯೇ ಮೆಣಲೂಪರು ?

ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ,
ಮಧ್ವಯತಿಯೆ ಬಸವಪತಿಯೆ ಮುಖ್ಯಮತಾಚಾರ್ಯರ,
ಶರ್ವ ಪಂಪ ರನ್ನ ರ,
ಲಕ್ಷ್ಮೀಪತಿ ಜನ್ನರ,
ಷಡಕ್ಷರಿ ಮುದ್ದಣ್ಣರ,
ಪುರಂದರವರೇಣ್ಯರ
ತಾಯೆ, ನಿನ್ನ ಬಸಿರೆ ಹೊನ್ನ ಗನಿ ವಿದ್ಯಾರಣ್ಯರ!

ಹಳೆಯಬೀಡ ಬೇಲನಾಡ ಮಾಡಮೆನಿತೋ ಸುಂದರಂ!
ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ!
ಇಲ್ಲಿಲ್ಲದ ಶಿಲ್ಪವಿಲ್ಲ ;
ನಿನ್ನ ಕಲ್ಲೆ ನುಡಿವುದಲ್ಲ!
ಹಿಂಗತೆಯಿನಿವಾಲ ಸೊಲ್ಲ
ನಮ್ಮ ತೃಷೆಗೆ ದಕ್ಕಿಸು-
ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು!

ಆರ್ಯರಿಲ್ಲಿ ಬಾರದಲ್ಲಿ ಬಾಸೆ ಎಲ್ಲಿ ಸಕ್ಕದಂ?
ನಿನ್ನ ನುಡಿಯಿನಚ್ಚು ಪಡಿಯನಾಂತರೆನಿತೊ ತಕ್ಕುದಂ!
ಎನಿತೋ ಹಳೆಯ ಕಾಲದಿಂದ
ಬರ್ದಿಲಮೀ ಬಾಸೆಯಿಂದ
ಕಾಲನ ಮೂದಲಿಸಿ ನಿಂದ
ನಿನಗೆ ಮರವೆ ಹೊದೆವುದೆ?
ನಿನ್ನ ನುಡಿಗೆ ನಿನ್ನ ನಡೆಗೆ ಮುದುಪುಮೆಂದುಮೊದೆವುದೆ?

ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ!
ಕನ್ನಡ ಕಸ್ತೂರಿಯನ್ನ
ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ ? ನೀನದನ್ನ
ನವಶಕ್ತಿಯನೆಬ್ಬಿಸು-
ಹೊಸ ಸುಗಂದದೊಸಗೆಯಿಂದ ಜಗದಿ ಹಸುರ ಹಬ್ಬಿಸು !

ನಿನ್ನ ಪಡೆಯ ಕತೆಯ ಕಡೆಯ ನುಡಿಯೆ ತಾಳಿಕೋಟೆಯು?
ಕಡಲಿನೊರತೆಗೊಳವೆ ಕೊರತೆ? ಬತ್ತದು ನಿನ್ನೂಟೆಯು!
ಸೋಲ ಗೆಲ್ಲವಾರಿಗಿಲ್ಲ?
ಸೋತು ನೀನೆ ಗೆದ್ದೆಯಲ್ಲ?
ನಿನ್ನ ನಳಿವು ತಟ್ಟಲೊಲ್ಲ!-
ತಾಳಿಕೋಟಿ ಸಾಸಿರಂ
ಬಾಹುಬಲದಿ ಮನೋಬಲದಿ ತಾಯೆ ಗೆಲುವೆ ಭಾಸುರಂ!
ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ,
ನೀಗದಂತೆ ಸಾಗಿ ಪಂತೆ ನಿನ್ನ ನುಡಿಯ ಢಕ್ಕೆಯಂ,
ನಮ್ಮೆದೆಯಂ ತಾಯೆ ಬಲಿಸು,
ಎಲ್ಲರ ಬಾಯಲ್ಲಿ ನೆಲಸು,
ನಮ್ಮ ಮನಮನೊಂದೆ ಕಲಸು!
ಇದನೊಂದನೆ ಕೋರುವೆ-
ನಿನ್ನ ಮೂರ್ತಿ ಜಗರ್ತಿ ಎಂದಿಗೆಮಗೆ ತೋರುವೆ?

ಮಂ. ಗೋವಿಂದ ಪೈ



೧೧. ತುಳುನಾಡ ರಾಣಿ
ಕೊಡಲಿ ರಾಮನ ಸಿಡಿಲಿಗಳುಕಿ ಹಿಂದೋಡಿ
ಕಡಲಾರೆ, - ನೀನಲೆಗಳನ್ನೊಡೆದು ಮೂಡಿ-
ಪಡೆದ ಶಾಸನದಾದೆ ತುಳುನಾಡ ರಾಣಿ'!
ಬೆಡಗಿಂದ ಧರೆಗಾದೆ ಕೊರಳ ಕಟ್ಟಾಣಿ'!
ಗಟ್ಟಗಳ ಮೆಟ್ಟಲಿನ ಅಟ್ಟಳಿಗೆ ಏರಿ,
ಸಾಟಿ ಇರದೊಡೋಲಗದ ಸೊಬಗು ಮಾರಿ,
ಅಟ್ಟಹಾಸದ ಕಡಲು ಕಾಲ್ ತೊಳೆಯುತಿರಲು,
ಒಟ್ಟಿರಿಸಿದಾ ಪುಣ್ಯರಜ ಎನಿಸೆ ಮಳಲು-
ಮಳೆ ಮುಗಿಲ ವೇಣಿಯಲಿ, ಮಳೆಬಿಲ್ಲ ಹಾರಂ,
ತಿಳಿಯ ಬೆಳದಿಂಗಳಿನ ಕವಚ ಸಿಂಗಾರ,
ಹೊಲದ ಹಸುರುಡಿಗೆ, ನೇತ್ರಾವತಿಯ ಮಾಲೆ-
ಮಲೆಗಾಳಿ ಸಾರುತಿಹುದಿಂತು ತವಲೀಲೆ.
ದುಡುಕಿದಾ ಸೂರೆಗರ ಹಾವಳಿಗೆ ನೊಂದೆ!
ಕಡಲಣುಗೆ! ಬಡವಾದೆ ಕಾವರಿಲ್ಲೆಂದೆ !
ಪಡುಗಡಲ ದಾಟಿ ಸೋದರಿಯೊದಗೆ ಮುನ್ನಾ
ಕೆಡುಗಾಲ ಅಡಗಿ ಬೀಸಿತು ಶಾಂತಿ ಪವನಾ.

ತಲೆದೂಗೆ ತೆಂಗು, ನೇಗಿಲು ನಗಲು, ಹೊಳೆಯು
ಸುಳಿದೋಡೆ, ತಲೆ ಎತ್ತಿ ಕಂಗೊಳಿಸೆ ಬೆಳೆಯು,
ಮಳಿಗೆ ತಕ್ಕಡಿ ಕುಣಿಯೆ, ಶಂಖ ದೇಗುಲದಿ
ಮೊಳಗೆ, ಮನೆ ಮಕ್ಕಳಿಂದುಲಿಯ ಗದ್ದಲದಿ-
ಮೆರೆಯಲಿಂತಾಂಗೈಯರೊಡೆತನದಿ ನಾಡು!
ಪರಮೇಶನೊಲುಮೆಯಿಂ; ಶಾಂತಿಗಿದು ಬೀಡು!
ಬರಲೆಮಗೆ ಜನ್ಮ ನಿನ್ನುದರದಲಿ, ತಾಯೆ!
ದೊರೆಯಲೆಮಗನುದಿನವು ನಿನ್ನಡಿಯ ಸೇವೆ!

ಎಂ. ಎನ್. ಕಾನುತ್


೧೨. ಕನ್ನಡನಾಡ ರಾಣಿ
ಏಳು ಶೂರರ ಖಣಿ ಏಳು ಶೂರರ ರಾಣಿ
ಏಳು ತೀರದ ವೀರರಸದ ವಾಣಿ
ಏಳು ಮಾರಿದ ಜಾನಿ ಏಳು ಈ ಸ್ಥಿತಿಗಾಣಿ
ಏಳು ವರ ವರದ ಪಾಣಿ.
ಶೂರ ಪುರುಷರ ಕೊನೆಯು ವೀರ ಕವಿಗಳ ಗೊನೆಯು
ಭೀರುತನವೆಂಬ ಶಲ್ಯಕ್ಕೆ ಮೊನೆಯು
ಧೀರ ಸತಿಯರ ತೆನೆಯು ವೀರರಸಗಳ ಸೊನೆಯು
ಈ ರೀತಿ ನಿನ್ನ ಮನೆಯು.
ಬರದೆ ಬೆಳೆಯುವ ಬೆಳೆಯು ತ್ವರದೆ ಹರಿಯುವ ಹೊಳೆಯು
ಇರದೆ ಪ್ರತಿಕಾಲಕ್ಕೆ ಬರುವ ಮಳೆಯು
ವರಲಕ್ಷಣದ ಕಳೆಯು ಸುರರ ಸೀಮೆಯ ಬೆಳೆಯು
ಇರುವಂಥ ನಿನ್ನ ಇಳೆಯು
ಸತ್ತಿರುವುದೆದೆ ಸೇರು ಸುತ್ತಿರುವ ವಿಷ ಹೀರು
ಬತ್ತಿರುವುದಮೃತ ಝರಿ ಮತ್ತೆ ತೋರು
ಸತ್ತುಳ್ಳ ನೂರಾರು ಬಿತ್ತುಗಳ ನೀನೂರು
ಕಿತ್ತು ಭಯಬಿಟ್ಟ ಬೇರು.
ಅಂದಿನಂತಹ ಧನವು ಅಂದಿನಂತಹ ತನುವು
ಅಂದಿನಂತವರ ಹಿರಿದಾದ ಮನವು
ಅಂದೆ ಅಂದಿನತನವು ಚಂದದಾಟಕೆ ಅನುವು
ಎಂದು ತಂದೀತು ದಿನವು!

ನೀನು ನೆಲಸಿದ ಕಾಡು ಮಾನಿಸುವ ನಾಡು
ಧ್ಯಾನಿಸುವರೈ ನಿನ್ನ ಹಾಡಿ ಹಾಡು
ಈ ನಾಡಿನೊಳು ಮಾಡು ಪ್ರಾಣಪುತ್ರರ ಬೀಡು
ಏನು ನಂದನದ ಪಾಡು!

ಅಂಬಿಕಾತನಯದತ್ತ

(ದ. ರಾ. ಬೇಂದ್ರೆ})

೧೩. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

(ರಾಗ: ಬಾಗೇಶ್ರೀ; ತಾಳ: ಝಂಪೆ)
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು॥ಪ॥
ರಾಜನ್ಯರಿಪು ಪರಶುಧರನ ಜನನಿಯ ನಾಡು
ಆ ಜಲಧಿಯನೆ ಜಿಗಿವ ಹನುಮನುದಿಸಿದ ನಾಡು
ಓಜೆಯಂ ಮಾರಿದರಸುಗಳ ಸಾಸದ ನಾಡು
ತೇಜವನು ನಮಗೀವ ವೀರವೃಂದದ ಬೀಡು
ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಿ ಕಲೆಯಚ್ಚರಿಯ ಕರುನಾಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜ ಜಯಸಿರಿಯು ನಲಿಯುವ ನಾಡು
ಪಾವನೆಯರಾ ಕೃಷ್ಣ ಭೀಮೆಯರ ತಾಯ್ತಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಬಗೆಯ ನಗಿಸುವ ಕಬ್ಬಿಗರ ಹಾಡು
ಕಾವ ಗದುಗಿನ ವೀರನಾರಾಯಣನ ಬೀಡು

ಹುಯಿಲಗೋಳ ನಾರಾಯಣರಾಯರು
೧೪. ಅರುಣೋದಯ

ಕನ್ನಡ ನಾಡಿನ ಮುಂಬಾನೊಳು ಚೆಂಬಣ್ಣದ ಬೆಳಕು ಇದೇ ತರದು?
ಹೊನ್ನ ಗದಿರ ಬರಲಿಹನೆಂದೊರೆಯಲು
ಮುನ್ನವೆ ಬಂದರುಣನದೆ ಇದು?
ನನ್ನಿ ಯು! ನಿಜ! ಅರುಣನದೆ ಇದು!

ಭಲೆ ಭಲೆ! ನಮ್ಮಯ ಬಳಿಯಿಹ ಬಾನೊಳೆ
ತೊಳಗುವ ನೇಸರು ಮೂಡುವನು,
ಹೊಳೆಯುವ ಕೈಗಳನೆಳೆದೆಲ್ಲೆಡೆಯಲಿ
ಬೆಳಕು ಬೆಳಕನೇ ಮಾಡುವನು;
ಹೊಳಪನು ಎಲ್ಲಕೆ ನೀಡುವನು.

ಬೆಳಕನು ಮಾಡಲು ಕಳೆದುಹೋಗದೆಯ
ಉಳಿಯುವುದೇ ಕೊಳೆಗತ್ತಲೆಯು?
ಮಲಗಿದ ಕನ್ನಡದೆಳೆಯರು ಏಳುತೆ
ಸುಳಿದಾಡುವ! ಎತ್ತೆತ್ತಲೆಯು;
ನಲಿದಾಡುವ! ಎತ್ತೆತ್ತಲೆಯು.

ಮಿರುಗುವ ಕಿರಣವ ಹರಡುತೆ ನೇಸರು
ನಡುಬಾನಿಗೆ ತಾನೇರುವನು,
ಬಿರಿಮುಗುಳೆಲ್ಲವನರಳಿಸಿ ಹುರುಳನು
ಹವೆಯೊಳಗೆಲ್ಲಿಯು ತೂರುವನು,
ಅವನಿಗೆ ಕಂಪನು ಬೀರುವನು.

ಕನ್ನಡ ನಾಡಿನ ಗುಡಿಗಳಸಕೆ ಹೊಸ
ಬಣ್ಣವನೀತನು ಹಾಕುವನು,
ಹೊನ್ನಿನ ಕಿರಣದ ಹಂದರ ಬಿಗಿಯುತೆ
ಕನ್ನಡಿಗರನಲ್ಲಿರಿಸುವನು,
ಎಲ್ಲರ ಎದೆಗಳ ಬೆರಸುವನು.

ಭಯವೇತರದಾವಾಗ ನಮಗೆ? ನಿ.
ರ್ಭಯರು! ನೆರೆದು ಕುಣಿ-ಕುಣಿದಾಡಿ,
'ಜಯ ಜಯ ಜಯ ಕರ್ಣಾಟಕ' ಎನ್ನುತೆ
ಹಾಡುವ ನಾವೆಲ್ಲರು ಕೂಡಿ;
ಕೂಗುವ ನಾವೆಲ್ಲರು ಕೂಡಿ.

ಕನಸಿನೊಳಗೆ ಕಣ್ಮುಚ್ಚಿಯೆ ನೋಡಿದ
ಇನಿನೋಟದ ಪಟಗಳ ಬರೆದು,
ನನಸಿನಲಿಯು ಕಾಣುವ ತೆರಮಾಡುತೆ
ಜನಕಚ್ಚರಿ ತೋರುವ! ನೆರೆದು
ಬೆರಗನುಗೊಳಿಸುವ ನಾವ್ ಬೆರೆದು.

ಕೇಳಿರಿ ಕೇಳಿರಿ ಕೋಳಿಯ ಕೂಗನು
ಕೇಳಿಸುವುದೆ ಬೆಳಗಿನ ಕಾಳಿ?
'ಏಳ್ಳೆ ಕನ್ನಡ ಭಾಗ್ಯವಿಧಾತನೆ'
ಎನುತೆ ಹಾಡುತಿಹ ವೈತಾಳಿ;
ಸುಳಿಯುತಿಹುದು ನಸುಕಿನ ಗಾಳಿ;
ಅಲಸಿಕೆಯುಳಿದೆಲ್ಲರು ಏಳಿ!

ಆನಂದಕಂದ

(ಕೃಷ್ಣ ಶರ್ಮ ಬೆಟಗೇರಿ)

೧೫. ನಾಡಿನ ಹಾಡು


ತಾರೆಗಳು ಮೇಳವಿಸಿ ಬಂದು ಬಿಟ್ಟಹ ಬೀಡು ನಮ್ಮ ಕನ್ನಡದ ನಾಡು
ತಾರೆಗಳ ಒಡಹುಟ್ಟು, ತಾರೆಗಳ ಒಡನಾಡಿ, ನಮ್ಮ ಕನ್ನಡದ ಹಾಡು.
ಭೂಪತಿಯು ಕವಿಯಾಗಿ ಕವಿ ಚಮ್ರಪತಿಯಾಗಿ ಮೆರೆದಿರುವ ನಮ್ಮ ನಾಡು,
ಪತಿಯಿಲ್ಲದವಳಂತೆ ಗತಿಯಿಲ್ಲದಾಗಿಹುದು, ಹೀನವಾಗಿಹುದು ನೋಡು!
ಧವಲಗಿರಿ ಗಂಗೆಯನು ಆಮಂತ್ರಿಸಲು ನಡೆದ ನಮ್ಮ ಕನ್ನಡದ ತಾಯಿ
ಕಳೆದುಕೊಂಡಿಹಳಿ೦ದು ಕೃಷ್ಣಗಿಹ ಸೌಹಾರ್ದವನ್ನು ಸಹ, ಇಲ್ಲ ಬಾಯಿ!
ಸಾಮ್ರಾಜ್ಯಗಳನಾಳಿ ಮೆಯ್ಯುಂಡ ಕನ್ನಡರು ಹೆಸರಾದ ಸಾಹಸಿಗರು-
ಕೊಳೆಯುತಿಹರಲ್ಲೇನೋ! ಅಲ್ಲಲ್ಲಿ ಈಗಾಗಿ ಹೊರಮನೆಯ ಬಾಣಸಿಗರು!
ಸುಲಿದ ಹಣ್ಣಂತೆ ಮಧುಮಧುರವಾಗಿಹ ನುಡಿಯು ಸುಲಿದ ಹೆಣ್ಣಿಹುದು ನೋಡು
ಸಲಿಗೆಯನ್ನು ಬೆಳೆಸುತ್ತ ಸುಲಿಗೆಯನ್ನು ಮಾಡಿದರು ಕನ್ನಡಕೆ ಬಂತು ಕೇಡು!
ಗ್ರೀಷ್ಮಕಿಹ ಮುಂಬೆಳಗು ಸಹ ತೋರುತಿಹುದೀಗ ಮುಂಗಾರ ಸಂಜೆಯಂತೆ.
ಭೀಷ್ಮರಂತಹ ಸುತರ ತಾಯಿ ಚಿಂತೆಯಲಿಹಳು ವಿಧವೆಯಿಹ ಬಂಜೆಯಂತೆ.
ಚಿಂತೆಯಾ ಬೆಂತರವು ಬೇಡವ್ವ ನಾಯಿ! ಈ ನಿನ್ನ ಅಧರದಲ್ಲಿ,
ಮುತ್ತೊಂದು ಕಾಣುವುದು ದೇವನಿತ್ತಿಹುದಿಂದು ಮತ್ತೆ ನಿನ್ನುದರದಲ್ಲಿ.
ಬೆಳಗುವುದು ಹೊಸಹುಟ್ಟು, ಬರಲಿಹನು ಸುಕುಮಾರ, ಬರಲಿಹನು
ಪರಮಪುರುಷ
ಪುಲಕೇಶಿ ಮಾಧವರ ಬರವಿನಂತಾದೀತು ಮತ್ತಿನ್ನು ನಿನ್ನ ಹರುಷ!
ಅವನೊಂದು ಹೆಜ್ಜೆಯದು ಬಿಜ್ಜೆ, ಪದ ಸಂಪದವು, ಇನ್ನೊಂದು ಮುಕ್ತಿ ಪದವು!
ಒಂದಡಿಯು ಬಿಡುಗಡೆಯು, ಇನ್ನೊಂದು ಹತ್ತುಗಡೆ- ಇಂತಿಹುದು
ಅವನ ಒದವು!
"ಕಣೆ ಕಾಮನ ರಕ್ಷಿ, ಬೆನ್ನೆ ಭೀಮನ ರಕ್ಷಿ, ಮುಂಗೈ ಮುರಾರಿ ರಕ್ಷಿ"
ಎಂದು ಸಂತಸವುಕ್ಕಿ ಒರೆಯುತಿದೆ ಹಾಲಕ್ಕಿ, ಹೇಳುವೆನು ನಿನ್ನ ಸಾಕ್ಷಿ!

ನಿನ್ನ ಬೇಸರ ಬೇನೆ ಬಲು ಹಿರಿದು ನಲ್ಲಾಯಿ ! ಪಡೆವ ಫಲವದಕು ಹಿರಿದು.
ಬಾಳೋಣ ಏಳಿನ್ನು ! ಅರಸಾಗಿ ಆಳೋಣ ! ಮುನೆಮುರುಕರನ್ನು ಮುರಿದು !
ನಿನ್ನ ನಗೆಯೇ ಬೆಳ್ಳಿ, ನಿನ್ನ ಮೊಗ ಚಂದ್ರಮನು, ನಿನ್ನ ಮಗ ಸೂರ್ಯನಿರಲಿ !
ನಿನ್ನವರನುದ್ಧರಿಸಿ ಮನುವಂಶವನು ಹರಿಸಿ ಬೆಳಗುತಿಹ ಆರ್ಯನಿರಲಿ !

ವಿನಾಯಕ
ಗೋಕಾಕ್


೧೬. ಕಾರ್ಗಾಲದ ವೈಭವ

ಪಡುವಣತೀರದ
ಕನ್ನಡ ನಾಡಿನ
ಕಾರ್ಗಾಲದ ವೈಭವವೇನು?
ಚೆಲ್ಲಿದರನಿತೂ
ತೀರದ ನೀರಿನ
ಜಡದೇಹದ ಕರ್ಮುಗಿಲೇನು ?
ಕೆರೆಗಳನುಕ್ಕಿಸಿ
ತೊರೆಗಳ ಸೊಕ್ಕಿಸಿ
ಗುಡ್ಡವ ಬೆಟ್ಟವ ಕೊರೆ ಕೊರೆದು
ಕಡಲಿನ ತೆರೆಗಳ
ರಿಂಗಣ ಗುಣಿಯಿಸಿ
ಮೊರೆ ಮೊರೆವುದದೊ ಸರಿ ಸುರಿದು.
ಕುದುರೆಮೊಗದ ಕಡಿ-
ವಾಣದ ತೆರದಲಿ
ಮಿಂಚುಗಳವು ಥಳ ಥಳಿಸುವುವು.
ಗೊರಸಿನ ಘಟ್ಟನೆ
ಯಂತಿರೆ ಥಟ್ಟನೆ
ಗುಡುಗುಗಳವು ಗುಡುಗಾಡಿಸುವು.
ಆವೇಶದ ವೇ
ಷವ ಬಿರುಸುಟ್ಟುರೆ
ಊರೂರಲಿ ಹಾರೋಡುವುದು
ಮರಗಳ ಕೀಳುತ
ಬಂಡೆಯ ಹೋಳುತ
ಜಗಜಟ್ಟಿಯ ತೆರನಾಡುವುದು.

ಹಗಲಿರುಳೆನ್ನದೆ
ಹೊಡೆಯುವ ಜಡಿಮಳೆ
ಬಡಿಕೋಂಚಿನ ಲಾಗುಗಳು
ಮನೆಗಳ ಮನಗಳ
ಒಳಗೂ ಹೊರಗೂ
ಜಿನುಗುತಿರುವ ಹನಿಸೋನೆಗಳು.

ಮುಗಿಲಿನ ಹುಬ್ಬಿನ
ಗಂಟಿಕ್ಕುತ ಬಿರು
ದನಿಯಲಿ ಬೆದರಿಸುತಿಹನಲ್ಲ
ನಲ್ಲನೆನುತೆ ಆ
ಗಸವೆಣ್ಣೂಗುತೆ
ಸುರಿಸದ ಕಣ್ಣೀನಲಿಲ್ಲ.

ಕ.ಶಂಕರಭಟ್ಟ

೧೭. ಹೈದರಾಬಾದು

ಸರ ಸರನೆ ಪರಿ ಪರಿದು ನೆರೆಯೆದ್ದು ತೆರೆಬಿದ್ದು ಸುಳಿ ಸುಳಿಯುತಿದೆ ಮಾಸಿ
ಹೊನಲು
ಇಕ್ಕೆಲದೆ ಪವಡಿಸಿದೆ ಕಣೆಲೆಗೆ ಸಿಕ್ಕದೆಯೇ ಬಿತ್ತರದಿ ಹೈದರಾಬಾದು.
ಇಂತೆಂದು ತನ್ನೆರೆಯನೊಂದೆದೆಯ ವೈಶಾಲ್ಯವೆಂಬುದನ್ನು ಉಗ್ಗಡಿಪ ತೆರದಿ
ಬಾನುದಿಯ ಮುದ್ದಿಡುವ ಸೌಧಾಳಿ ಸಾರುತಿದೆ ದೊರೆಯ್ಕೆಸಿರಿಯ ಪರಿ
ಸರಿಯಲಿ
ರಾಜ್ಯದಧಿದೇವತೆಯ ಕರುಮಾಡದಂದದಲ್ಲಿ ಬಿಮ್ಮನಿದೆ ಚಾರುಮಾನಾರು
ನಾಡ ಸಿರಿವೆಣ್ಣಿಲ್ಲಿ ಹಗಲಿರುಳು ಎನಗೆಯರಳು ಸೂಸಿ ನಲಿ ನಲಿಯುತಿಹಳು
ಆಗಸದಿ ನೇಸರನು ಬಳಸಿರುವ ಗರಗಳೆನೆ ಹೊಳಲ ಸುತ್ತಲಿವೆ ತುಂಬುಕೆರೆ
ಬೀದಿಯಿತ್ತಂಡದಲಿ ಸಾಲ್ಗೊಂಡ ವೃಕ್ಷಗಳು ತಣ್ಣೆಳಲುಗಳನೆರಚುತಲಿವೆ
ತಾರಗೆಗಳಂದದಲಿ ಬೆಳಕುಗಳು ಇರುಳಿನೊಳು ಬಾಂದಳವ ನೆರೆವೆಗ್ಗಳಿಸಿವೆ
ಸಿಂಗರದ ಸದನಂಗಳೋರಣದಿ ಚೆಂದಳಿರ ಚಮನುಗಳ ಮಾಲೆಯಲಿ ಭರದಿ
ಹರಿದಾಡುತಿಹ ವಾಹನಗಳೋಟದಲಿ ನೋಟದಲಿ ರಂಜಿಸಿದೆ ರಾಜಧಾನಿ
ಹೊಳಲೊಡತಿಯೊಡಲೊಳಡಗಿರುವುದೇಂ?
ಆಡಳತೆ ಕೊರತೆಗೆಡೆ ಯಾಗದಂದದಿ ನಡೆದ ಮಂತ್ರಿ ಮಂಡಲವು
ಪ್ರಭುವಿನಾಣತಿಗೆ ತಲೆವಾಗುತಲಿ ಪ್ರಜೆಗಳೊಲುಮೆಯನಾಂತಿರುವುದು
ಮನ್ನೆಯರ ಹೆಕ್ಕಳಿಕೆ ವಂಶದೌನ್ನತ್ಯ ದಗ್ಗಳಿಕೆ ಬೀರುತಿದೆ

ರಾಜನಿಷ್ಠೆ ಯಲಿ ಭಕ್ತಿಯಲಿ ವಿನಯದಲಿ ಸರಿದೊರೆಯಿಲ್ಲವರಿಗೆ
ಸಾಮಂತರೋಳಿಯಲ್ಲಿ ಕವಿ ಗಮಕಿ ವಾಗ್ರಿಗಳ ಗಡಣದಲಿ ನೆರೆದು
ಸೊಡರುಗಳ ಸಡಗರದಿ ಗುಡಿಗಳಿಟ್ಟಣದಿ ಮರೆಯುತಿದೆಯೋಲಗವು
ಒಮ್ಮನದಿ ಕಲೆತಿಹರು ವಿಧ ವಿಧದ ಭಾಷೆಗಳನಾಡುತಿಹ ಜನರು
ಕನ್ನಡ ತನುಗು ಮರಾಠಿ ನುಡಿಗಳು ಬೆಳೆದಿಲ್ಲಿ' ಬಲಗೊಂಡಿರುವುವು
ಬೆಂಗಾಡ ಮಂಗಳವ ಮಸಗಿದುಸ್ಮಾನಿಯಾ ವಿದ್ಯಾನಿಲಯವು
ವಾಣಿಗಾಡುಂಬೊಲವು ಭಾರತದಿ ತಾಯ್ತು ಡಿಗಿದುವೆ ಮಾದಲ ತವರು

ಚಿತ್ರದ ಬೆಸನದು
ಹೈದರಾಬಾದು
ಹೊನ್ನಿನ ಹೊಳಪದು
ಹೈದರಾಬಾದು
ಕಂಗಳ ಬೆಳಕದು
ಹೈದರಾಬಾದು
ಮಂಗಳ ರೂಪದು
ಹೈದರಾಬಾದು
ಉಸ್ಮಾನಲಿಯದು
ಹೈದರಾಬಾದು
ಎಂತೆನಿತು ಎಮ್ಮ ಪ್ರಭುವಿನ ಭಾಗ್ಯವು!

ಡಿ. ಕೆ. ಭೀಮಸೇನರಾವ್


೧೮. ಕೊಡಗು

ಕೊಡಗು ಬೆಡಗಿನ ಬೀಡು! ಸೌಂದರ್ಯದಮೃತಮಂ
ಕುಡಿಯಿಮೆಲೆ ಕಣ್ಣಳಿರ! ಇದೊ ಮಂಜು ಬಿತ್ತರಿಸಿ
ಕಡಲವೋಲ್ ತೋರ್ದಪುದು ಮೇಲೆಳ ಗಿರಿಸಾನುಗಳ್ ದ್ವೀಪನಿವಹವಾಗೆ
ಅಡಿಯಿಂದ ಮುಡಿವರಂ ಬೆಟ್ಟುಗಳ್ ನೀಳೆಸೆವ
ಗಿಡಗಳಿಂ ಪಸುರೇರಿ ಸೌಂದರ್ಯದಧಿದೇವಿ
ಯೆಡೆಯಾಡುವೊಳ್ಳುವೆತ್ತೆಡೆಗಳಾಗಿತ್ತಲಿದೆ ಸೊಗಯಿಸುವು ಸೊಂಪುವೆತ್ತು
ಬಿಸಿಲೆಲೆಗಳೊಳಗಿರದೆ ಸೋಸಿ ಬರ್ಪುದು ಮತ್ತೆ
ಪಸುರಮೇಲ್ ನೀರಮೇಲಲೆವೆಲರ್ ಸುಳಿದುದು
ಬಿಸುಪಳಿಯ ಬಿರ್ದಪುದೆ? ಕೊಡಗು ತಣ್ಣೆಳಲ ತವರೂರಲೇ ತಿನಿಂಬು

ಪೊಸತೆರದ ಬಗೆವಗೆಯ ವಿಹಗಂಗಳೆತ್ತಲುಂ
ಮಿಸುಪಮೆ
ಬಣ್ಣದಿಂ ಮನವೊಲಿಪ ಮಾಟದಿಂ
ದೆಸೆದು ನುಣ್ಣನಿಗುಡುತೆ ನಲಿದಪುವು ಮನವಿಲ್ಲಿ ನಗೆಗಳೆಡೆಯಾದುದು
ಪರಿವ ಕಾಲ್ಪುರದ ಮೆಲ್ಲುಲಿಯಿಂದೆ ಬಗೆಗೊಳಿಸ
ದರಿಯಿ,ಲುತ್ತುಂಗಶಿಖರಂಗಳಿಂದೆಸೆವ
ಗಿರಿಯತ್ತಲೇಂ ಪೆಂಪೋ! ತಂಬೆಲರ ಸೊಗಯಿಸುವ ಸೋ೦ಕಿನಿಂ
ಬಿರಿವೂಗಳಿನಿಗಂಪಿಗೆನಿತೊಂದು ತುಂಬಿಗಳೊ
ಸುರಯುವತಿಯ‌ ನಲ್ಲರೊಡನಿಲ್ಲಿ ಸಾರ್ತ೦ದು
ಸೊಗವಿದೆನಿತೋ
ಸರಸವಾಡಲು ಚಿತವಾದ ನೆಲಮಿದು ಕೊಡಗು ಕರುನಾಡ ಮುದ್ದು ಗೂಸು
ಚೆಲುವಿನೀ ಕಡಲೊಳಗೆ ಸಾಲ್ವಿಡಿದು ಸೊಂಪೆಸೆವ
ಮಲೆಗಳಿವು ಸವಿಕಂಪ ತರುರಾಜಿಗಳಿನದೇ
ನಲೆವಲೆವ ತೆರೆಗಳಂತೆಸೆದಪುವೊ! ನವವೃಷ್ಟಿಯಂ ಸೃಷ್ಟಿಗೇ ಕಾಂತಿಯೋ
ನೆಲಮಾಗಸಂ ದಿಕ್ಕುಗಳ ರಾಮಣೀಯಕದ
ನಿಲಯಂಗಳಿವನೆನಿತು ನೋಡಿದೊಡಮಕ್ಷಿಗಳ
ತೊಲಗಲೊಲ್ಲವು ಮನಂ ತಣಿಯದೋಲಾಡಿಯಾ ಸೌಂದರ್ಯ ಜಳಧಿಯಲ್ಲಿ
ಬಂದೆ ನಾನಿಲ್ಲಿಗೆನ್ನಕ್ಕರದ ತಾಯೆಲದ
ಚೆಂದಮಂ ನೋಡುತುಂ ಶ್ರೀನಿವಾಸನ ನಿ
ಯಿಂದ ಸುಖದಿಂದೆ ಸಂಚರಿಸುತುಂ ಬಹುಕಾಲದಿಚ್ಚೆ ಕೈಗೂಡಿತಿಂದು
ಎಂದು ಕಣ್ಣುಂಬೆ ಕರುನಾಡ ಚೆಲುವಂ ಕಾ
ನೆಂದು ಮನದೊಳಗನಿಶವಾಗಿ ಚಿಂತಿಸುತಿರ್ದೆ
ನಂದು ತಿಳಿದಿರ್ದರಾರಿಂತು ಸೊಬಗಿನ ಸುಗ್ಗಿಯಿದಿರೊಳಾಂ ನಿಲ್ವೆನೆಂದು
ಎನ್ನ ನಾಡ೦ದಮಿಂತೆಂದು ಭಾವಿಸಿದೆನಿ
ಇನ್ನೆಗಂ! ಭಾವನೆಗೆ ಚೆಂದವಿದು ನಿಲುಕುವುದೆ?
ನಿನ್ನ ಸೌಂದರ್ಯಮಿದು ನಿನ್ನ ಪೆರ್ಮೆಯ ಕುರುಪು! ಕರುನಾಡೆ,
ಇನ್ನರಿವುದರಿದಲು ನಿರ್ಮಳಾಂತಃಕರಣ
ರುನ್ನ ತಗುಣೋದಯ‌ ಮಂಗಳನಿಕೇತನ‌
ಪುಣ್ಯಭೂಮಿ!
ನಿನ್ನೊಡಲೊಳೆಂತುದಯಿಸಿದರೆಂದು! ಕರುನಾಡು ದೇವರಳರಿನ ನಾಡು
ದರಿಗಳಿರ, ಗಿರಿಗಳಿರ, ಝರಿಗಳಿರ, ಮೃಗಪಕ್ಷಿ
ತರುಗಳಿರ, ಪೂಗಳಿರ, ತಂಬೆಲರೆ, ಬೆಳ್ಳಂಜೆ,
ನುರಗಂಪೆ, ಇಂಚರವೆ, ಬೀಳ್ಕೊಳೋ! ನಮೋ! ನಿಮ್ಮ ಸೌಹಾರ್ದವೆನಿತೊ

ಇರಿಸಿದಿ‌ ಸೌಂದರ್ಯಸಾರಸರ್ವಸ್ವಮಂ
ತೆರೆದೆನ್ನ ಮುಂದೆ ನೀಮ್ ! ಪೊರಗಣೆ ನೀಮಿನ್ನು
ಮರೆಯಾದೊಡಂ ಹೃದಯಭಿತ್ತಿಯೊಳ್ ಚಿತ್ರಿತರ್ ! ನಿಮ್ಮನಾಂ
ಮರೆವುದೆಂತು?
ಸಾಲಿ ರಾಮಚಂದ್ರರಾಯ

೧೯. ಮಡಿಕೇರೀಲಿ ಮಂಜು

ಬೂಮಾನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ಲಂಗೆ
ಮಡಿಕೇರೀಲಿ ಮಂಜು!
ಮಡಗಿದ್ ಅಲ್ಲೇ ಮಡಗಿದಂಗೆ
ಲಂಗರ್ ಬಿದ್ದಿದ್ ಅಡಗಿದ್ದಂಗೆ
ಸೀತಕ್ ಸಕ್ತಿ ಉಡಗೋದಂಗೆ
ಅಳ್ಳಾ ಡಾಲ್ಕು ಮಂಜು!
ತಾಯಿ ಮೊಗೀನ್ ಎತ್ಕಂಡಂಗೆ
ಒಂದಕ್ಕೊಂದು ಅಡ್ಕೊಂಡಂಗೆ
ಮಡಿಕೇರೀನ ಎದೆಗೊತೊಂಡಿ
ಜೂಗೀಡ್ಲಿತ್ತು ಮಂಜು!
ಮಲಗಾಕ್ ಸೊಳ್ಳೆ ಪರದೆ ಕಟ್ಟಿ
ಒದಿಯಾಕ್ ಒಗದಿದ್ ದುಪಡಿ ಕೊಟ್ಟ
ಪಕ್ಷಾಗ್ ಗಂದದ್ ದೂಪ ಆಕದಂಗ್
ಮಡಿಕೇರೀಮೇಲ್ ಮಂಜು!
ಮಂಜಿನ ಮಸಕಿನ್ ಕಾವಲ್ನಲ್ಲಿ
ಒಣಗಿದ್ ಉದ್ದಾನೆ ಉಲ್ನಲ್ಲಿ
ಒಳಗೇ ಏನೋ ಸರದೊದಂಗೆ
ಅಲಗಾಡ್ತಿತ್ತು ಮಂಜು!
ನಡಿಯೋ ದೊಡೊಡ್ಡ ದೇವಂಗೆ
ಪಟ್ಟದ ಸುತ್ತಿನ್ ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ
ಗಸ್ತಾಕ್ಕಿತ್ತು ಮಂಜು!

ಸೂರನ್ ಕರೆಯೋಕ್ ಬಂದ್ ನಿಂತೋರು
ಕೊಡಗೀನ್ ಎಲ್ಲಾ ಪೂವನ್ನೋರು
ತೆಳ್ಳೆ ಬೆಳ್ಳೆ ಬಟ್ಟೆನಾಕಿ
ಬಂದಂಗಿತ್ತು ಮಂಜು.
ಚಿಮ್ರಾನಿದ್ರೆ ಎಳಬಿಸಿಲಿನ್ ಕೆಂಪು
ಮಂಜಿನ್ ಬಣ್ಣ ಕಣ್ಗೆ ತಂಪು!
ಕೊಡಗಿನ್ ಲಸ್ಮೀರ್ ಪೂವನ್ನೋರ್ಗೆ
ಆಲೀನ್ ಸೌಂದ್ರೀ ಮಂಜು!
ಅಗಲೇ ಬರಲಿ ರಾತ್ರಿ ಬರಲಿ
ಬಿಸಲು ನೆರಳು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ ಕೊಡಾಲ್ಕು
ಮಡಿಕೇರಿಗೆ ಮಂಜು!
ತೈಲ ನೀರಿನ್ ಮೇಗಿದ್ದಂಗೆ
ಪೂವಮ್ಮ- ನನ್ ತಂಗೀ ದ್ದಂಗೆ
ಬಿಟ್ಟೂ ಬಿಡದಂಗ್ ಇಡಕೊ೦ತಿತ್ತು
ಮಡಿಕೇರಿಗೆ ಮಂಜು!

ರತ್ನ
(ಜಿ. ಪಿ. ರಾಜರತ್ನ:)


೨೨. ಹುತ್ತರಿ ಹಾಡು


ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ?
ಅಲ್ಲಿ ಆ ಕಡೆ ನೋಡಲಾ!
ಅಲ್ಲಿ ಕೊಡಗರ ನಾಡಲಾ!
ಅಲ್ಲಿ ಕೊಡವರ ಬೀಡಲಾ!
ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?
ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು?
ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್ ಭೋರ್ಗರೆದರೋ?

ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ?
ಅವರು ಸೋಲ್ ಸಾವರಿಯರು!
 ಅವರು ಕಡುಗಲಿ ಗರಿಯರು!
ಅವರೆ ಕೊಡಗಿನ ಹಿರಿಯರು!

 ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್,
 ಹೆಮ್ಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗ ದೋಲ್,
 ಬೊಮ್ಮಗಿರಿಯಿಂ ಪುಷ್ಪಗಿರಿ ಪರ್ಯ೦ತ ಬೆಳೆದೀ ದೇಶವು
 ಧರ್ಮ ದಾನದ ಕಟ್ಟು ಕಟ್ಟಳೆ ರೀತಿ ನೀತಿಯ ಕೋಶವು!
ನಮ್ಮ ಕೊಡಗಿದು ಜಮ್ಮದು;
ಜಮ್ಮ ಕೊಡಗಿದು ನಮ್ಮದು;
ನಮ್ಮೊಡಲ್ ಬಿಡಲಮ್ಮದು!

 ಇದು ಅಗಸ್ತ್ಯನ ತಪದ ಮಣೆ, ಕಾವೇರಿ ತಾಯ ತವರ್ಮನೆ,
 ಕದನ ಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದರವರ್ಮನೆ!
 ಇದಕೊ! ಚೆಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು!
 ಇದೋ! ಇದೋ! ಇಲ್ಲುರುಳ್ದ ಹಾಲೇರಿಯರ ಬಲಗಿರಿಶೃಂಗವು!
ವಿದಿಯ ಮಾಟದ ಕೊಡಗಿದು!
ಮೊದಲೆ ನಮ್ಮದು, ಕಡೆಗಿದು
ಕದಲದೆಮ್ಮನು; ಬೆಡಗಿದು.

 ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?
 ಸುಮ್ಮನಿತ್ತರೊ ದಟ್ಟ ಕುಪ್ಪಸ? ಹಾಡುಹುತ್ತರಿಗೇಳಿರಿ!
 ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ!
 ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!

ನೆಮ್ಮದಿಯನಿದು ತಾಳಲಿ!
 ಅಮ್ಮೆಯಾ ಬಲ ತೋಳಲಿ!
ನಮ್ಮ ಕೊಡಗಿದು ಬಾಳಲಿ!

ಕವಿಶಿಷ್ಯ
(ಪಂಜೆ ಮಂಗೇಶರಾವ್)

೨೧. ತೆಂಕಣ ಗಾಳಿಯಾಟ

 ಬರಲಿದೆ! ಅಹಹಾ! ದೂರದಿ ಬರಲಿದೆ
 ಬುಸುಗುಟ್ಟುವ ಪಾತಾಳದ ಹಾವೊ?
 ಹಸಿವಿನ ಭೂತವು ಕೂಯುವ ಕೂವೊ?

 ಹೊಸದು ಕಾಲನ ಕೋಣನ - ಓವೊ?
 ಉಸಿರಿನ ಸುಯ್ಯೋ? – ಸೂಸೂಕರಿಸುತ,
ಬರುವುದು! ಬರಬರ ಭರದಲಿ ಬರುವುದು
ಬೊಬ್ಬೆಯ ಹಬ್ಬಿಸಿ, ಒಂದೇ ಬಾರಿಗೆ
 ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ,
 ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ,
 ಅಬ್ಬರದಲಿ ಭೊರ್ ಭೋರೆನೆ ಗುಮ್ಮಿಸಿ,
ಬರುತದೆ! ಮೈ ತೋರದೆ ಬರುತದೆ! ಅದೆ-
 ನಡು ಮುರಿಯುತ ನಗನಾವೆಗೆ, ಕೂವೆಗೆ
 ಉಡಿಸಿದ ಹಾಯಿಯ ಹರಿಯುತ ಬಿರಿಯುತ,
 ಹಡಗನು ಕೀಲಿಸಿ, ತುಮುರನು ತೇಲಿಸಿ,
 ದಡದಲಿ ಝಾಡಿಸಿ, ದೋಣಿಯನಾಡಿಸಿ,
ಇದೆ! ಇದೆ! ಇದೆ! ಇದೆ! ಬರುತಿದೆ-
ಹಕ್ಕಿಯ ಕಣ್ಣಿಗೆ ಧೂಳಿನ ಕಾಡಿಗೆ
 ಇಕ್ಕುತ, ಹೊಲದೆತ್ತಿಗೆ ದನಕಾಡಿಗೆ
 ಫಕ್ಕನೆ ಹಟ್ಟಿಗೆ ಅಟ್ಟಿಸಿ, ಕಾಡಿಗೆ
 ಸಿಕ್ಕಿದ ಕಿಚ್ಚನು ಊದಲು ಹಾರುತ,
ಬರುತಿದೆ! ಇದೆ! ಇದೆ! ಇದೆ! ಇದೆ! ಬರುತಿದೆ
 ಸಡಿಲಿಸಿ ಮಡದಿಯರುಡಿಯನು ನುಡಿಯನು,
 ಬಡ ಮುದುಕರ ಕೊಡೆಗರಿ ಹರಿದಾಡಿಸಿ,
 ಹುಡುಗರ ತಲೆ ತಲೆ ಟೊಪ್ಪಿಯ ಆಟವ
 ದಡಬಡನಾಡಿಸಿ, ಮನೆ ಮನೆ ತೋಟವ
 ಅಡಿಮೇಲಾಗಿಸಿ, ತೆಂಗನು ಲಾಗಿಸಿ,
 ಅಡಕೆಯ ಬಾಗಿಸಿ, ಪನೆ ಇಬ್ಭಾಗಿಸಿ,
 ಬುಡದೂಟಾಡಿಸಿ, ತಲೆ ತಾಟಾಡಿಸಿ,
 ಗುಡಿಸಲ ಮಾಡನು ಹುಲುಹುಲುಮಾಡಿಸಿ,
ಬಂತೈ! ಬಂತೈ! ಇದೆ! ಇದೆ! ಬಂತೈ!
ಗಿಡ ಗಿಡದಿ೦– ಚೆಲುಗೊಂಚಲು ಮಿಂಚಲು-
ಮಿಡಿಯನು ಹಣ್ಣನು, ಉದುರಿಸಿ ಕೆದರಿಸಿ
ಎಡದಲಿ ಬಲದಲಿ ಕೆಲದಲಿ ನೆಲದಲಿ, -
ಪಡುವಣ ಮೋಡವ ಬೆಟ್ಟಕೆ ಗಟ್ಟಕೆ

 ಹೊಡೆದಟ್ಟುತ, ಕೋಲ್ ಮಿಂಚನು ಮಿರುಗಿಸಿ,
 ಗುಡುಗನು ಗುಡುಗಿಸಿ, ನೆಲವನು ನಡುಗಿಸಿ,
 ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿ,
 ಜಡಿಮಳೆ ಸುರಿವೋಲ್, ಬಿರುಮಳೆ ಬರುವೋಲ್,
 ಕುಡಿ ನೀರನು ಒಣಗಿದ ನೆಲ ಕೆರೆವೋಲ್
 ಬಂತೈ ಬೀಸುತ! ಬೀಸುತ ಬಂತೈ!
 ತೆಂಕಣ ಗಾಳಿಯು ಕೊಂಕಣ ಸೀಮೆಗೆ
 ಬಂತೈ! ಬಂತೈ! ಬಂತೈ! ಬಂತೈ!

ಕವಿಶಿಷ್ಯ

(ಪಂಜೆ ಮಂಗೇಶರಾವ್)

೨೨. ಹಾವಿನ ಹಾಡು

 ನಾಗರಹಾವೆ! ಹಾವೊಳು ಹೂವೆ!
 ಬಾಗಿಲ ಬಿಲದಲಿ ನಿನ್ನಯ ಠಾವೆ?
 ಕೈಗಳ ಮುಗಿವೆ, ಹಾಲನ್ನೀವೆ
 ಬಾ ಬಾ ಬಾ ಬಾ ಬಾ ಬಾ ಬಾ ಬಾ

 ಹಳದಿಯ ಹೆಡೆಯನು ಬಿಚ್ಚೋ ಬೇಗಾ
 ಹೊಳಹಿನ ಹೊಂದಲೆ ತೂಗೋ, ನಾಗಾ!
 ಕೊಳಲನ್ನೂ ಮನೆ ಲಾಲಿಸು ರಾಗಾ
 ನೀ ನೀ ನೀ ನೀ ನೀ ನೀ ನೀ ನೀ

 ಎಲೆ ನಾಗಣ್ಣ, ಹೇಳೆಲೊ ನಿನ್ನಾ
 ತಲೆಯಲಿ ರನ್ನ ವಿಹ ನಿಜವನ್ನಾ
 ಬಲು ಬಡವಗೆ ಕೊಪ್ಪರಿಗೆಯ ಚಿನ್ನಾ
 ತಾ ತಾ ತಾ ತಾ ತಾ ತಾ ತಾ ತಾ

 ಬರಿಮೈ ತಣ್ಣಗೆ, ಮನದಲಿ ಬಿಸಿ ಹಗೆ,
 ಎರಡೆಳೆ ನಾಲಗೆ ಇದ್ದರು ಸುಮ್ಮಗೆ
 ಎರಗುವೆ ನಿನಗೆ, ಈಗಲೆ ಹೊರಗೆ
 ಪೋ ಪೋ ಪೋ ಪೋ ಪೋ ಪೋ ಪೋ ಪೋ

ಕವಿಶಿಷ್ಯ

( ಪಂಜೆ ಮಂಗೇಶರಾವ್)

೨೩. ಕೊಂಬು

 
ಅರಳು ಮಲ್ಲಿಗೆ, ಮಲ್ಲಿಗೆವಾಳು,
ಮಲ್ಲಿಗೇನಹಳ್ಳಿ;
ಸಿರಸಿ, ಸಂಪಿಗೆ, ಕೂಡುಮಲ್ಲಿಗೆ,
ಹುಲ್ಲೆ ಹಳ್ಳಿ, ಹರವು.
ಮೇಲು ಹುಲುವತಿ, ಕೀಳು ಹುಲುವತಿ
ಮಾದಲ, ಮುತ್ತೋಣಿ;
ತಾಳಕುಂಟೆ, ತಾವರೆಕೆರೆ, ಹಿಪ್ಪಲ,
ಕೂದವಳ್ಳಿ, ಕೊಪ್ಪ,
ಸಿರಿಯೂರು, ಸಿರಿಯಂಗಳ, ಬೆಳವಲ,
ಸೊಗದವಾಣಿ, ತೆರವಿ;
ಮರಳವಾಡಿ, ಮಧುಗಿರಿ, ಬನವಾಸಿ,
ಅಗಳಿ, ಅಮೃತೂರು.
ಬೆಳಧರ, ಬೆಳ್ಳಿಯ ಬಟ್ಟಲು, ಬೆಳವಿ,
ನೆಲಮಾವು, ಹಗರಿ;
ತಳುಕು, ಬೆಳುಗೊಳ, ಕಿರಿಜಾಜಿಯರು,
ಬಿಳಿಗೆರೆ, ಹೆಬ್ಬಾಲೆ;
ಪೂನಾಡು, ಸಿರಿವಾಸಿ, ಸಕ್ಕರೆ,
ನಿಶನ, ತಿ೦ಗಳೂರು;
ಮಾಣಿಕಧರ, ಮಂಜೇಶ್ವರ, ಕೋಗಿಲೆ,
ಎಸಳೂರು, ಕಳಸ.
ಏನು ಹೆಸರು ಇವು, ನಮ್ಮ ತಾತದಿರು
ನಾಡೊಳಿಟ್ಟ ಹೆಸರು;
ಜೇನಸರಿಯವೊಲು ಇನಿದು, ಬಲ್ಲವರ
ಹಾಡಿನವೋಲು ಮೇಲಿತು.
ಕೇಳುವ ಕಿವಿ ನಲಿಯುತಲಿದೆ, ನುಡಿಯುವ
ನಾಲಗೆ ನಲಿಯುತಿದೆ;
ಬಾಳೆ೦ತಿರೆ ಹೆಸರಿಂತಾಯ್ತೆಂಬೆನೆ
ಸೋಲುತಲಿದೆ ನೆನಸು.
ನಾಡೊಳ೦ದೊಗೆದ ಸೊಗದರವಿಂದದ
ಮಾಧುರ ಮಕರಂದ



ಕೋಡಿಯಿ೦ದುದುರಿ ಹನಿ ಹರಳಾಯಿತು
ಮೋದವೀಯಲಿಂದು.
ಅಣ್ಣ ತಮ್ಮದಿರೆ, ಅಕ್ಕ ತಂಗಿಯರೆ,
ಹೇಳುವಿರೀ ಹೆಸರ;
ಚೆನ್ನವಾಗಿಹುದು ಈಗಳು ಹೆಸರು;
ಬಾಳು ಅಂತೆ ಇಹುದೇ?
ಚೆಲುವು ಹೆಸರುಗಳ ನುಡಿವ ನಾಲಗೆಯ
ಬಾಳುವೆ ಬರಿದಾಯ್ತೇ.
ಕಳೆದುಕೊಂಡೆವೇ ಹಿರಿಮೆಯ ಚಂದ್ರನ,
ಮೂಳವಾಯ್ತೆ, ಬದುಕು.
ಬನ್ನಿ ಅಣ್ಣದಿರೆ ಬನ್ನಿ ತಮ್ಮದಿರೆ
ಬನ್ನಿ ಸೋದರಿಯರೆ;
ಬನ್ನಿರಿ ಎಲ್ಲರು ಆಣೆ ಇಟ್ಟುಕೊಳ್ಳಿ
ಚೆನ್ನ ಮಾಡಿ ಬಾಳ,
ಹೆಸರಿನ ಚೆಲುವನು ನಾಡಿನ ಬದುಕಲಿ
ಮರಳಿ ತೊಳೆಯಿಸಿರಿ;
ಒಸಗೆಯ ತನ್ನಿರಿ ತಾಯ್ಯಾ ಡಿರವಿಗೆ,
ತರಿಸಿ ನಗೆಯ ಮೊಗಕೆ.
ದುಡಿಯುವೆವೆನ್ನಿರಿ ದುಡಿಯಿರಿ ಬನ್ನಿರಿ
ನಾಡಿಗೆ ನುಡಿಗಾಗಿ;
ತೊಡಿರಿ ಹಟವನು ಕೊಡಿ ಕೈಯಾಣೆಯ;
ಆಡುವ ನುಡಿ ನಡೆಸಿ,
ಕತ್ತಲು ಮುಚ್ಚಿಹ ಬಾಳಿರುಳಾಳಕೆ
ಆಸೆಯ ಚಂದ್ರನನು
ಮತ್ತೆ ತನ್ನಿರಿ, ಬೆಳಕಲಿ ನಡೆಯಿರಿ;
ಹೇಸಿ ಸೋ೦ಬತನವ.
ಮುತ್ತು ಮಾಣಿಕವ ಜೋಳದ ತೆರದಲಿ
ಹರಿಯಿಸಿ ನಾಡಿನಲಿ;
ಉತ್ತಮ ಚರಿತೆಯ ಚಿತ್ರ ಪತಾಕೆಯ
ಮೆರೆಯಿಸಿ ಬಾನಿನಲಿ.

ಶ್ರೀನಿವಾಸ (ಮಾಸ್ತಿ ವೆಂಕಟೇಶ ಐಯಂಗಾರ್)



೨೪. ಕೋಗಿಲೆ

ಕೋಗಿಲೆ! ಕೋಗಿಲೆ!
ಎಂತ ಹೆಸರು ಊರಿಗೆ!
ಹೇಗೆ ಇಹುದೊ, ಎನಿತು ಸೊಗಸೊ,
ಇಂತ ಹೆಸರ ಊರದು!

ಕೊಟಗೆಹರ ತೆರುವಿಗೆ
ಏಳು ಕೂಗು ದೂರದೆ,
ಎಟುಕಿಸಿಕೊಳಬಹವೊಲಿರುವ
ಮಾಲೆಯಾದ ಮಲೆಯೆಡೆ;

ಮೂರು ನೀರನುಳಿಯುತ
ಮಲೆಯ ತಲೆಯ ಮುಟ್ಟುತ
ಧೀರವಾಗಿ ಪಡುವಣಿಂದ
ಸುಳಿಯುವೆಲರೊಳಾಡುತ;

ತಳಿರು ಹೂವು ಸೊಗಯಿಸೆ
ಪರಿಮಳಿಸುವ ವನದಲಿ;
ಮಲೆಯ ನೀರು ಸೇರಿ ನಡೆವ
ಸರಳಿನೊಂದು ಬದಿಯಲಿ;

ಅಲ್ಲಿ ಇಹುದು ಕೋಗಿಲೆ
ಎಂತ ಸೊಗಸ ಊರದು!
ಮೆಲ್ಲನುಸುರು ಹೆಸರನು;
ಅಂತ ಸೊಗಸು ಹೆಸರದು.

ತಳಿರ ಮರೆಯೊಳಿರುತ ಕರೆದು
ಕಾಣದಿಹುದೆ ಕೋಗಿಲೆ;
ಸಲುವುದಿದೇ ಬಣ್ಣನೆ
ಜಾಣು ನಮ್ಮ ಊರಿಗೆ.

ಉಳಿದ ಊರು ಮನೆಯ ಗುಂಪು,
ಕಡೆಗೆ ಎರಡು ಮರಗಳು;
ಮಲೆಯೆ ವನವೆ ಊರು ಇಲ್ಲಿ;
ನಡುವೆ ಎಲ್ಲೊ ಮನೆಗಳು.

ಉಳಿದ ಊರು ಬರಿಯ ಜನದ
ಬಾಳು ಬೀಳು, ಕೋಗಿಲೆ
ಎಲರ ಮಲರ ಕಂಪು ಸೊಂಪು
ಮೇಳವಿಸಿದ ತೋ೦ಟವು.

ಪಾರಿವಗಳ ಕೂಜನದ
ಗಿಳಿಯ ನಲವ ಕೂಗಿನ,
ನೂರು ತೆರನ ಹಕ್ಕಿಯ
ಉಲಿವ ಮೇಳ ಕೋಗಿಲೆ.

ಹೇರಿಳೆ ಮಲ್ಲಿಗೆ
ಜೇನುಹೂವ ಬಳ್ಳಿಯ
ಬೇರಿನಿಂದ ಕಾವ ಹಲಸ
ತಾಣ ನಮ್ಮ ಕೋಗಿಲೆ.

ನನ್ನ ಜನದ ಮನದ ನಯ
ಸಂತಸವನು ಸಾರುವ
ಚಿನ್ನದಂತ ಹೆಸರ ಮೆರೆವ
ಶಾಂತಿಯೋಣಿ ಕೋಗಿಲೆ.

ಕೋಗಿಲೆ! ಕೋಗಿಲೆ!
ಎಂತ ಹೆಸರು ಊರಿಗೆ!
ಹೋಗಿ ನೋಡು, ಊರನು,
ಶಾಂತಿಯೊಂದು ನೆಲೆಯನು.

ಶ್ರೀನಿವಾಸ
(ಮಾಸ್ತಿ ವೆಂಕಟೇಶ ಐಯಂಗಾರ್)



೨೫. ಶಿವನಸಮುದ್ರ


ಗಿರಿಯ ಕೆಲದಿ ಬನದ ನಡುವೆ ಝರಿಯ ತೆರದಿ ಸುಳಿದು ಬರುತೆ
ತಲದ ಶಿಲೆಯನಿರಿದು ಕೊರೆದು ಕೆಲದ ನೆಲವನರೆದು ಮುರಿದು
ವಿಮಲ ಜಲದ ವಿಪುಲಧಾರೆಯಮ್ರ ತಲಹರಿಯಂತೆ ತೋರೆ
ದಣಿವ ಕಳೆಯುವೆಲರ ಬೀರಿ ಮೃದುಲ ರವದಿ ಮುಂದೆ ಸಾರಿ
ಅತ್ತಲತ್ತ ಸುಳಿದು ಸುತ್ತಿ ಇತ್ತಲಿತ್ತ ಮೆಲ್ಲನೊತ್ತಿ
ಅಲ್ಲಿ ಬಳುಕುತಿಲ್ಲಿ ಬಾಗಿ ಅಲ್ಲಿ ಬಳಸುತಿಲ್ಲಿ ಸಾಗಿ

ನೊರೆಯ ಸೇಸೆಗಳನು ಸೂಸಿ ತೆರೆಯ ಚವರಗಳನೆ ಬೀಸಿ
ಬಾಲೆಯಂತೆ ನಲಿದು ಕುಣಿದು ಕಾಳಿಯಂತೆ ಕನಲಿ ಮೊರೆದು
ಉರಗಿಯಂತೆಯುರುಗಿ ತಿರುಗಿ ಛಲದ ಭರದಿ ಸರಿದು ಮಸಗಿ
ಬೆಟ್ಟದಿಂದಲುರುಳಿ ಹೊರಳಿ ದಿಟ್ಟತನದಿ ತೊಳಗಿ ಮೊಳಗಿ
ಘೋರ ವೇಗದಿಂದ ನೆಗೆದು ಭೋರೆನುತ್ತೆ ಮಂಜನೆಸೆದು
ಪನಿಯ ಮುಗಿಲ ಕವಿಸಿ ಸರಿದು ಮನುಜಸೇವೆಯಿಂದಲೊಲಿದು
ಬಲವ ಬೆಳಕ ನೀಡುತುಂ ನಿಲದೆ ನಾಟ್ಯವಾಡುತುಂ
ನುಗ್ಗಿ ಬೀಳುತೇಳುತುಂ ನೆಗೆದು ಪಾರುತೋಡುತುಂ
ಭುವನರಚನೆಯೆನಿತು ಕುತುಕಮೆನುತ ಜನಕೆ ಸಾರುತುಂ
ಭುವನಜನನಿಯೆನಿತು ಚತುರಳೆನುತ ಕಣ್ಗೆ ತೋರುತುಂ
ಪುರುಷಬಲವ ಬೆಳಗಿರೆನುತ ಜಡರ ಪಳಿದು ಮೊಳಗುತುಂ
ಪರಿವಳೀ ಕವೇರ ತನಯೆ ಧೀರಜನನಿಯೆನಿಸುತುಂ

ಕನ್ನಡ ನಾಡಿನ ಕುತುಕಂ
ಕನ್ನಡಿಗರ ಸಾಹಸಕ್ಕೆ ಕನ್ನಡಿ ಮೇಣೀ
ಕನ್ನಡಿಗರ ಭಾಗ್ಯದ ನಿಧಿ
ಯುನ್ನತಿಯಂ ಪಡೆದು ಬಾಳ್ಗೆ ಶಿವನಸಮುದ್ರಂ

ಡಿ.ವಿ.ಗುಂಡಪ್ಪ


೨೬. ಲಲಿತಾದ್ರಿ


ತಿರೆಯ ಹೋರಾಟದಲಿ
ಬಗೆ ಕದಡಿ ಕಂಗೆಡಲು,
ನೇಹಿಗನೆ, ಬಾ, ಇಲ್ಲಿ
ಶಾಂತಿಯಿಹುದು!
ತಂಬೆಲರ ತೀಟವಿದೆ
ಬಳಲಿಕೆಯ ಪರಿಹರಿಸೆ;
ಮೋಹಿಸಲು ಕಂಗಳನು
ಪರಮ ಸೌಂದರ್ಯವಿದೆ;
ಜೀವವನು ಸಂತವಿಸೆ
ದೇವಸಾನ್ನಿಧ್ಯವಿದೆ!
ಸೋದರನೆ, ಬಾ, ಇಲ್ಲಿ;
ಧನ್ಯನಾಗುವೆ ಇಲ್ಲಿ.

ಪುಣ್ಯನಾಗುವೆ ಇಲ್ಲಿ;
ಪೂರ್ಣನಾಗುವೆ ಇಲ್ಲಿ;
ಬೆಟ್ಟದಲ್ಲಿ.

ಬೆಂಗದಿರ ಮುಳುಗುತಿರೆ
ಬೈಗುಗೆಂಪಳಿಯುತಿರೆ,
ಮುಚ್ಚಂಜೆ ಮುಸುಗುತಿರೆ
ಕತ್ತಲೆಯು ಕವಿದುಬರೆ
ಪಯಣಿಗನೆ, ಬಾ, ಇಲ್ಲಿ
ನಿಂತು ನೋಡು!

ಮೂಡಲನು, ಪಡುವಲನು,
ತೆಂಕಲನು, ಬಡಗಲನು,
ಗಗನವನು, ಭೂಮಿಯನು,
ಮನದಣಿಯೆ, ಕಣ್ ತಣಿಯೆ,
ಎದೆಯರಳಿ ಮೈಮರೆಯೆ,
ತೂಣಗೊಂಡವನಂತೆ
ನಿಂತು ನೋಡು!

ಕಂಬನಿಗಳಿಳಿಯುತಿರೆ,
ಮೈನವಿರು ನಿಮಿರುತಿರೆ,
ಎದೆಯಲರು ಅರಳುತಿರೆ,
ಮೇಣಂತರಂಗದಲಿ
ಹೊಸ ಬೆಳಕು ಮೂಡಿಬರೆ,
ಬಣ್ಣನೆಗೆ ಬಾರದಿಹ
ಚೆಲುವನವಲೋಕಿಸಲು
ಮಾತು ಮೈದೆಗೆಯುತಿರೆ,
ಬಾಳೆಲ್ಲ ಹಿಗ್ಗಿ ಬರೆ,
ದೇಹಪಂಜರದಲ್ಲಿ
ಜೀವ ಹೋರಾಡುತಿರೆ,
ಬಾ ಇಲ್ಲಿ, ನೇಹಿಗನೆ,
ಮೌನದಲಿ ಮಮತೆಯಲಿ
ನಿಂತು ನೋಡು!

 ಹುಣ್ಣಿಮೆಯ ದಿನದಲ್ಲಿ
 ಪೂರ್ವ ದಿಗ್ಗೇಶದಲಿ,
 ದೂರ, ಬಹು ದೂರದಲಿ
 ಮಬ್ಬಿನ ದಿಗಂತದಲಿ
 ದುಂಡಾಗಿ, ಕೆ೦ಪಾಗಿ,
 ಸುಂದರ ಸುಧಾಕರನು
 ಮೂಡಿ ಮೇಲೇಳುತಿರೆ,
 ಸುತ್ತಲಿಹ ಬಯಲುಗಳ
 ಹಸುರಾದ ಹೊಲಗಳನು
 ಅಲ್ಲಲ್ಲಿ ಮೆರೆಯುತಿಹ
 ಬಿತ್ತರದ ಜಲಗಳನು
 ಕೌಮುದಿಯು ಮುತ್ತುತಿರೆ,
 ಚಂದಿಕೆಯು ಬೆಳಗುತಿರೆ,
 ಬೆಳ್ದಿಂಗಳೆಸೆಯುತಿರೆ,
 ಮೌನ ಮಿತಿಮಾರುತಿರೆ,
 ಧ್ಯಾನ ಬಗೆವುಗುತಲಿರೆ,
 ನಿಂತಿಲ್ಲಿ ನೇಹಿಗನೆ
ಚೆಲುವ ನೋಡು!

 ತಾರೆಗಳ ದಿಬ್ಬಣವು
 ಗಗನದಿಂದೈ ತಂದು
 ಬೆಟ್ಟ ದುದಿಯಲಿ ತಳುವಿ
 ಸೋಪಾನಗಳನಿಳಿದು
 ತಪ್ಪಲಲಿ ಮೇಳವಿಸಿ
 ಕವಿದು ಕಿಕ್ಕಿರಿದಂತೆ,
 ಬುವಿ ಬೆಸಲೆಯಾದಂತೆ
 ಚುಕ್ಕಿಗಳ ತಿಂತಿಣಿಯ
 ತೆಕ್ಕನೆಯೆ ಪೆತ್ತಂತೆ,
 ಸಗ್ಗ ನೆಲಕಿಳಿದಂತೆ,
 ಬಾನಿಳೆಗೆ ಬಿದ್ದಂತೆ
 ನೂರಾರು ದೀಪಗಳು
 ಮಿಣುಕುತಿಹ ಸೊಡರುಗಳು,
 ಸಾಲಾಗಿ, ಡೊಂಕಾಗಿ,

 ಗುಡಿಗಟ್ಟ, ಕೊಂಕಾಗಿ,
 ಗೊಂಚಲಲಿ ಗುಂಪಾಗಿ,
 ತೆಕ್ಕನೆಯೆ ಹುಟ್ಟಿ ಬರೆ,
 ಪತ್ತನದಿ ಮಿಂಚಿದರೆ,
 ಬೆರಗಾಗಿ, ಮರುಳಾಗಿ
 ಬಾ ನೋಡು ನಿಂತಿಲ್ಲಿ
ಮೂಕನಾಗಿ!

 ತಾರೆಗಳ ತವರೂರು
 ಸಿಂಗರದ ಮೈಸೂರು!
 ಕನ್ನಡದ ಕುಶಲತೆಗೆ
 ಕನ್ನಡದ ರಸಿಕತೆಗೆ
 ಕನ್ನಡದ ನಿಪುಣತೆಗೆ,
 ಕನ್ನಡಿಯು ಮೈಸೂರು!
 ಕನ್ನಡಿಗರೆದೆಯರಿಯೆ,
 ಕನ್ನಡಿಗರೋಲರಿಯೆ,
 ಕನ್ನಡಿಗರಿಂಪರಿಯೆ,
 ಸೋದರನೆ, ನೇಹಿಗನೆ,
 ಲಲಿತ ಲಲಿತಾದ್ರಿಯಲಿ
ನಿಂತು ನೋಡು!

 ಕಬ್ಬಗಳ ಕಟ್ಟು ವೊಡೆ
 ಕಬ್ಬಿಗನೆ, ಬಾ ಇಲ್ಲಿ;
 ಗಾನವನು ಹಾಡುವೊಡೆ
 ಗಾಯಕನೆ, ಬಾ ಇಲ್ಲಿ;
 ವೀಣೆಯನು ಮಿಡಿಯುವೊಡೆ
 ಬಾ ಇಲ್ಲಿ ವೈಣಿಕನೆ;
 ಧ್ಯಾನವನು ಮಾಡುವೊಡೆ
ಬಾ ಇಲ್ಲಿ ತಾಪಸನೆ;
 ಬಣ್ಣದಲಿ ಭಾವಗಳ
 ಬಣ್ಣಿ ಪೊಡೆ ಬಾ ಇಲ್ಲಿ
  ವರ್ಣಶಿಲ್ಪಿ!

 ದೇಗುಲವು ಭಕ್ತರಿಗೆ,
 ಉಪವನವು ರಸಿಕರಿಗೆ,
 ಲೌಕಿಕರಿಗಿದು ಸಗ್ಗ
 ವೈದಿಕರಿಗಿದು ಮುಕ್ತಿ
 ಲಲಿತಗಿರಿಯು!

ಕೆ. ವಿ. ಪುಟ್ಟಪ್ಪ

೨೭. ಲಾಲ್‌ಬಾಗ್

ಕೆಂಪುವೂ ಸಾಲ್ಮರನ ದಾರಿಯಲಿ ನಡೆ ನಡೆದು
ಕೆಂಪು ತೋಟಕೆ ಬನ್ನಿ ವಿಶ್ರಾಂತಿಗೆ;
 ಒಮ್ಮೆಗೇ ಕಾಣುವುವು ಬಿಳಿ ಹಸುರು ಕೆಂಪುಗಳು
ಕಣ್ಣ ರಂಜಿಸಿ ಕೊಳುವ ಎಲ್ಲ ರಂಗುಗಳು.
 ಎಲ್ಲೆಲ್ಲು ತಳಿರು ಹೂ ಎಲ್ಲೆಲ್ಲು ಹಸುರುಗಳು
ಹಸುರು ಹೊಂಗೆಂಪುಗಳ ಮೇಲಾಟವು
 ಮರದ ಇಂಬಿಗೆ ಬಾಗಿ ಬಳುಕುತಿರುವೆಳಲತೆಯು
ತಳಿರ ತೂಗುಯ್ಯಾಲೆ ಹೂ ತೊಂಗಲು.
 ನಾ ಮುಂದೆ ತಾ ಮುಂದೆ ಎಂಬ ಆತುರದಿಂದ
 ಹೋದ ತಿಂಗಳೆ ತೋಟ ಚಿಗುರಿಟ್ಟಿತು;
 ಮಾವು ಹೊಂಗೆಯು ಬೇವು ಮಾಧವೀಲತೆ ಬೇಲ
ದೂರದೇಶದ ಸುಳಿಯ ನೂರು ಜಾತಿಗಳು,
 ಒಂದೊಂದೆ ಸೊಗವೆತ್ತಿ ತಂಪೆ ಚಿಗುರಿದುವು
ಬರಲು ಕೊಂಬೆಗಳೆಲ್ಲ ಹಸುರುಟ್ಟವು
 ತಳಿರ ಮೈ ಯನು ತೆರೆದು ನಿನ್ನೆ ಕಾಣಿಸುತಿದ್ದ
ಈ ಮರನು ಮೈ ತುಂಬ ಅರಳಿರುವುದು
 ಅಡಿಯಿಂದ ತುದಿವರೆಗು ಎಲೆಯೆ ಕಾಣಿಸದಂತೆ
ಕಿಕ್ಕಿರಿವ ಹೂವಿನಲಿ ನಗುತಲಿಹುದು;
 ಒಂದು ರಾತ್ರಿಯ ಸುಖದ ಸದನದಲಿ ಲಲ್ಲೆ ಯಲಿ
ಬಂದ ಪುಳಕಗಳಿದನು ಬಿರಿಯಿಸಿಹವು.
 ನೆಲದ ಆಳದಲೆಲ್ಲೊ ಒಡಲಿನಾಳದಲೆಲ್ಲೊ
ಕಾಣದೆಡೆಯಲಿ ಹುದುಗಿ ಕಾಪಾಡಿದ
 ತಂಪನ್ನು ಕಂಪನ್ನು ಜೀವವನು ರಸವನ್ನು
ಕೊಂಬೆ ಕೊಂಬೆಗು ಇಡಿದು ಅರಳಿಸಿಹುದು.

ಇದರ ಮಡಿಲೊಳಗಿಂದ ಅದರ ತುದಿಯೆಲೆಯಿಂದ
ತೂಗಿ ಜೋಲಾಡುತಿಹ ಹೂ ಗೊಂಚಲಿಂದ
ಕೈನೀರ ಹುಯ್ಯುತ್ತೆ ಬೆಳಸಿರುವ ಲತೆಯಿಂದ
ಪರದೇಶಗಳ ಹೂವು ಕಾವಣಗಳಿ೦ದ
ಉಲಿಯುತಿವೆ ನಲಿಯುತಿವೆ ಚೀರುತಿವೆ ಕೂಗುತಿವೆ
ಕಣ್ಮುಚ್ಚಿ ಕೊರಲೆತ್ತಿ ಹಿಗ್ಗಿ ಹಾಡುತಿವೆ
ನೂರಾರು ದನಿಗಳಲಿ ಏರಿನಲಿ ತಗ್ಗಿನಲಿ
ಷಡ್ಜದಲಿ ಮಂದರದಿ ತಾರ ಮೂರರಲಿ.
ಗಿಳಿಯು ಸ೦ಪಿಗೆಯಿಂದ ಕೋಗಿಲೆಯು ಮಾವಿಂದ
ತುಂಬಿಗಳು ಕತ್ತಲೆಯ ಸುರಹೊನ್ನೆಯಿಂದ
ಹಸುಳೆ ಚೆ೦ಗುಡಿಗೈಯ ಮೃದುಲತೆಯ ಮೀರಿಸುವ
ನರೆಮೈಯ ಕೆಂಗಣ್ಣ ಹಕ್ಕಿ ಕೊಳದಿಂದ.
ಹೊಂಬಕ್ಕಿ ಕೆಂಬಕ್ಕಿ ಪಚ್ಚೆನಣ್ಣದ ಹಕ್ಕಿ
ಲೆಕ್ಕವಿಲ್ಲದ ರಂಗು ಚುಕ್ಕೆವಕ್ಕಿ
ಕಿರಿಗೊರಲ ಹೆಗ್ಗೊರಲ ಸವಿಗೊರಲ ಕಟುಗೊರಲ
ಬಿರಿಗೊರಲ ಕಿರಿಚಿನಲಿ ಕೀರ್ವ ಹಕ್ಕಿ.
ಮಧುಮಾಸವೆಲ್ಲಿದ್ದರಲ್ಲೋಡಿ ಕೆಲೆಯುತ್ತೆ
ಇಲ್ಲಿ ಚೈತ್ರವು ಬರಲು ಬರುವ ಹಕ್ಕಿ
ಸುಗ್ಗಿ ಸೊಬಗನ್ನುಳಿದು ಇರಲಾರೆನೆನ್ನುತ್ತೆ
ದೇಶ ದೇಶಗಳ ಲೆವ ವಲಸೆವಕ್ಕಿ,

ಎಲ್ಲವೂ ಕರೆಯುತಿವೆ ವನಕೆ ನೆಳಲಾಸರೆಗೆ
ನೆಲದಲ್ಲಿ ಸುರಿದಿರುವ ಹೂವು ಹಾಸುಗೆಗೆ
ಮೇಲಿಂದ ಬೇಯಿಸುವ ಬೇಸಗೆಯ ನೇಸರಿನ
ಹಿಂಸೆಗಳ ನೀಗಿಕೊಳಿರೆನ್ನುತ್ತಿವೆ.
ಕೇಳಿ, ಕೇಳಿರಿ ಅವನು, ಹುಯಿಲು ಮಾರುಲಿಗಳನು
ಓಡಲ ಸಂತಸ ಸೂಸಿ ಸಾರ್ವ ಕೆಲೆಗಳನ್ನು
ದಿನದುಣಿಸ ತರುವುದಕೆ ಹೋಹುದನು ಮರೆತಿಲ್ಲೆ
ಹುರುಡಿನಲಿ ಹಬ್ಬವನ್ನು ನಡೆಸುತ್ತಿವೆ.
ಎಳೆಯ ಮಾವಿನ ಚಿಗುರನಗಿದಿರುವ ಕೋಗಿಲೆಯು
ಮದದೊಂದೆ ಉಸಿರಲ್ಲಿ ಒರಲುತ್ತಿದೆ;
ಗೋಣಿಯಿಂದಾಲಕ್ಕೆ ಆಲದಿಂ ಬೂರುಗಕೆ
ಹಾರಾಡಿ ಗಿಳಿಮರಿಯು ಮುದ್ದಿಡುತಿವೆ.

 ಹಕ್ಕಿ ಹೂತಳಿರುಗಳ ಹರಡು ಸೌಂದರ್ಯಗಳ
ಸುಗಿ ಸಂಭ್ರಮದೊಳಾಳಿ ಬನ್ನಿ
 ಮಧುಮಾಸದೀ ಸವಿಯ ಬೆಡಗು ಹೋಹುದು ಬೇಗ
ನಡೆವಾಗ ಇದನುಣಲು ಓಡಿಬನ್ನಿ.
ವಿ. ಸೀ.
(ವಿ. ಸೀತಾರಾಮಯ್ಯ)

೨೮. ಮಡಿಕೇರೀಲಿ ರತ್ನ



ಮಡಿಕೇರೀಲಿ ರತ್ನ
ಕಂಡಾ ಒಸಾ ಮತ್ನ,
 ' ಮಡಿಕೇರೀಲಿ ಮಡಿಕೆ ಯೆಂಡ
 ಈರ್ದಿದ್ರ್ ಅಲ್ಲೀಗ್ ಓದ್ದೂ ದಂಡ '
 ಅ೦ದಿ ರತ್ನ ಪಡಕಾನೇಗೆ
 ಒಂಟ, ಬೆಟ್ಟದ ನೆತ್ತಿ ಮೇಗೆ
ಓಯ್ತಿದ್ದ೦ಗೆ ನಿಂತ!
ಕಲ್ಲಾದಂಗೆ ಕುಂತ!

 ಸುತ್ತ ಸಾಯೋ ಬಿಸಿಲಿನ್‌ ಚಾಪೆ!
 ಅಲ್ಲಲ್ಲೆ ಒಸಿ ನೆರಳಿನ್ ತೇಪೆ!
 ಅಲೆಯಲೆಯಾಗಿ ಬಿಸಿಲಿನ್ ಜೊತೆಗೆ
 ಸುತ್ತಿನ್ ಗುಡ್ಡಗೊಳ್ ಕುಣದ‌ರ್ ಮೆತ್ಗೆ
ಮನಸೀಗ್ ಅರ್ಸ ತರ್ತ
ರತ್ನ ಯೆಂಡ ಮರ್ತ!
 ' ಮುದುಕರ್ ಸಾವೇ ನೋಡಾಕ್, ಚಂದ!
 ಅಂದ್ರೆ ಸೂರ್ಯ ಸಾಯಾಲ್ಲೇಂದ;'
 ' ಸಾಯೋ ಮುದಕ ಸಂಜೆ ಸೂರ್ಯ
 ನೆಗತ ನಿಲ್ಲೋಕ್ ಇವ್ಗೇನ್ ಕಾರ್ಯ?'
ಅ೦ತ ಇ೦ದಕ್ ತಿರ್ಗಿ
ನೋಡೋ - ಬತ್ತು ಗಿರ್ಕಿ!
 ದೇವರದೊಂದು ಚೆಂದದ್ ಸೋತ್ರ
 ಕೊಡಗಿನ್ ಮೇಗಿನ್ ಒಂದ್ ನಕ್ಸತ್ರ
 ಕೊಡಗಿನ್ ಒಂದ್ ಊಗಾಳೀಲ್ ತೇಲ್ತ
 ಬಂದಂಗಿದ್ಲು ಚಿತ್ರ ಕಾಲ್ತಾವ್

ಒಂದು ಕೊಡಗೀನುಡಗಿ!
ಐದಾರೊರಸದ್ ಉಡಗಿ!
 ಕೊಡಗಿನ್ ತೋಟದ್ ಕಾಪೀ ಅಣ್ಣು
 ತುಟಿಗೊಳ್! ಇಳ್ಳಿನ್ ಬೆಳಕೆ ಕಣ್ಣು!
 ಕೆನ್ನೆ ಅನಕ ಕೊಡಗಿನ್ ಕಿತ್ಲೆ!
 ಔಳೇಳಿದ್ದು ನಾ ಕೇಳೂತ್ಲೆ:
'ನಿಂಗೆ ಯೆಸರೇನಮ್ಮ? '
'ನನ್ನೆಸರು ಪೂವಮ್ಮ!'
 
'ಪೂವಮ್ಮ!" ಹಾ! ಎಂತಾ ಯೆಸರು!
 ಕಣ್ಣಿಗ್ ಚಿತ್ರ ಕಟ್ಟೋ ಯೆಸರು!
 ರೂಪು ರಾಗಕ್ ತಕ್ಕಂತ್ ಯೆಸರು!
 ಎಂಗ್ ನೋಡಿದ್ರು ಒಪ್ಪೋ ಯೆಸರು!
' ಪೂವಮ್ಮಾ! ಪೂವಮ್ಮಾ!'
' ಪೂವಮ್ಮಾ! ಪೂವಮ್ಮಾ!'
 
'ಔಳ್ ನೋಡೂತ್ಲೆ ನಂಗ್ ಮತ್ತಾಯ್ತು!
 ಔಳ್ ಮಾತ್ಕೇಳಿ ಒ೦ದ್ ಅತ್ತಾಯ್ತು!
 ಔಳ್ ಮಾತ್ ಇನ್ನಾ ಕೇಳ್ಬೇಕೂಂತ
 'ನಾನ್ಯಾರ್ ಗೊತ್ತೆ?' ಅಂದ್ರೆ ' ಹ್ಞೂ 'ತ
'ನೀ ಯೆಂಡಕುಡಕ' ಅಂದ್ಲು
ನೆಗ್ತ ಅತ್ರ ಬಂದ್ಲು.

 'ನೀ ನಾ ಕುಡಿಯೋದ್ನ್ ಎಲ್ ನೋಡ್ದೇ ಮ್ಮ? '
 ಅಂದ್ರೆ, 'ಯಾವೋನ್ಗೈತೆ ಜಮ್ಮ
 ಔನ್ಗೆ ಯೇಳ್ತಿವ್ ಕೊಡವಾಂತ೦ದಿ!
 ಕುಡದಂಗ್ ಆಡೋನ್ ಕುಡಕಾ೦ತ್ ಅಂದಿ
ತೊಡೇನ್ ಅತ್ತಿದ್ಲು ಮೆಲ್ಗೆ!
ಕುಡದೋನ್ ಅಂದ್ರೆ ಸಲ್ಗೆ!
 ಕತ್ತಿನ್ ಸುತ್ತ ಕೈ ಆಕ್ಕೊಂಡಿ
' ಅಣ್ಣ ರತ್ನ' ಅಂತ್ ನೆಕ್ಕೊಂಡಿ
' ಯೆಂಡದ ಪದಗೊಳ್ ಏಳ್ ನೋಡಾನೆ!
 ನಾನೂ ನಿನ್ನ೦ಗ್ ಕಲ್ತ್ ಆಡಾನೆ! '
ಅಂದು ಮೊಕಾನ್ ನೋಡಿ
ಕಣ್ಣ ದೊಡ್ದು ಮಾಡಿ!

ಇಲ್ಲಿದ್ ತಂಗಿ ಆಗ್ ವುಟ್ಟಿದ್ಲು
ಪೂವಮ್ಮಾನೆ ನಂಗೆ ಮೊದಲು!
ತಂಗಿ ವುಟ್ಟಿದ್ ದಿವಸಾಂತೇಳಿ
ಆಡ್ಡೆ ಯೆಂಗೀಸ್ ಇಡದಂಗ್ ತಾಲಿ-
ಸೂರ್ಯ ಮುಳಗಿದ್ ಕಾಣ್ದೆ!
ಯೆಂಡ ಬೇಕಂತ್ ಅನ್ದೆ!

ರತ್ನ

(ಜಿ. ಪಿ. ರಾಜರತ್ನಂ)

೨೯. ಕುಮಾರವ್ಯಾಸ

ಕುಮಾರವ್ಯಾಸನು ಹಾಡಿದನೆಂದರೆ,
ಕಲಿಯುಗ ದ್ವಾಪರವಾಗುವುದು!
ಭಾರತ ಕಣ್ಣಲಿ ಕುಣಿವುದು; ಮೆಯ್ಯಲಿ
ಮಿಂಚಿನ ಹೊಳೆ ತುಳುಕಾಡುವುದು!
ಆ ಕುರುಭೂಮಿಯು ತೋರುವುದು;
ಆ ರಣರಂಗದಲಿ,
ಆ ಸಂಗ್ರಾಮದಲಿ,
ಪಟುಭಟರಾರ್ಭಟ ಕೇಳುವುದು!
ಮೈ ನವಿರೇಳುವುದು!
ಹೊಳೆಯುವ ಕೈದುಗಳಾಟದಲಿ,
ಕಲಿಗಳ ಕದನದ ಕೂಟದಲಿ,
ತಾಗುವ ಗದೆಗಳ ಸಂಘಟ್ಟಣೆಯಲಿ,
ರಥಚಕ್ರಧ್ವನಿ ಚೀತ್ಕಾರದಲಿ,
ಸಾಯ್ವರ ಶಾಪದಲಿ,
ಬೀಳ್ವರ ತಾಪದಲಿ
ನಸುಸೋತಿರುವರ ಕೋಪದಲಿ,
ನೆರೆ ಗೆದ್ದಿಹರಾಟೋಪದಲಿ,
ಕೆನೆಯುವ ಹಯಗಳ ಹೇಷಾರವದಲಿ,
ಕಿವಿ ಬಿರಿಯುವುದು !
ಎದೆ ಮುರಿಯುವುದು !
ಬಸಿಯುವ ಮಜ್ಜೆಯ ಪಂಕದೊಳೂಡಿ

ಚಿಮ್ಮುವ ರಕ್ತನ ಬುಗ್ಗೆ ಯ ನೋಡಿ
ಕಣ್ಣೊಡೆಯುವುದು!
ಮೈ ನಡುಗುವುದು!

ಕೇಳಿರಿ ! ಪಾರ್ಥನ ಸಾರಥಿಯು
ರಣ ಗೀತೆಯನು,
ರಣ ನೀತಿಯನು,
ಬೋಧಿಸುವನು ನಿರ್ಭೀತಿಯನು!
ಕುರುರಂಗದ ಶರಶಯ್ಕೆಯಲಿ!
ಭೀಷ್ಮನು ಮಲಗಿಹನು!
ಹೆಣಗಳ ಬಣಬೆಯ ಮಂಚದಲಿ
ದ್ರೋಣನು ಬಿದ್ದಿಹನು!
ನೆತ್ತರವೀ೦ಟುತಲಿರುವನು ಭೀಮನು
ಅಯ್ಯೋ, ನೋಡಲ್ಲಿ!
ರಥದಿಂದುರುಳುತಲಿರುವನು ಕರ್ಣನು,
ಹಾ! ಹಾ! ನೋಡಿಲ್ಲಿ!
ರಣಚಂಡಿಯು ಆ ಬೆಂಕಿಯ ಮಗಳು
ಹೆಣ್ಣಿನ ರೂಪದ ಬರಸಿಡಿಲವಳು!
ಮುಗುಳ್ಳಗೆ ಬೀರುತ ನೋಡಲ್ಲಿ
ನಿಂತಿರುವಳು ರಣರಂಗದಲಿ
ದ್ರೌಪದಿ ಮುಡಿಗೆದರಿ!

ವೈಶಂಪಾಯನ ಸರಸಿಯ ತೀರದಿ
ತೋರುವರಾರಲ್ಲಿ!
ಕೌರವದೇವನು ಸಿಡಿಲಾಗಿರುವನು
ಭೀಮನ ಸರಿಸದಲಿ!
ವೈರಿಯ ಎದೆಯನು
ಒಡೆಯುವ ಗದೆಯನು
ಮೇಲೆತ್ತಿರುವನು ನೋಡಲ್ಲಿ!
ಭೀಮನು ಬಿದ್ದನೆ!
ಕೌರವ ಗೆದ್ದನೆ!
ಮುಂದಾಗುವುದನು ಕಾಣಲ್ಲಿ!
ಇದಾವ ನ್ಯಾಯ!
ಏನನ್ಯಾಯ!

ಕೃಷ್ಣನ ಕುಹಕವ ನೋಡಲ್ಲಿ !
ಏನನು ನೋಡುವೆ ? ತಡೆಯುವೆ ಏಕೆ ?
ಕೌರವರಾಯನು ಮಡಿಯಲೆ ಬೇಕೆ ?
  ಯುವಕನೆ ತುಡುಕು ಕಠಾರಿಯನು !
    ಹೊಡೆ ರಣಭೇರಿಯನು !
ನಡೆ, ನಡೆ, ಊದು ತುತ್ತೂರಿಯನು !
   ಕರೆ, ರಣಮಾರಿಯನು !

ಕುಮಾರವ್ಯಾಸನು ಹಾಡಿದನೆಂದರೆ,
ಕಲಿಯುಗ ದ್ವಾಪರವಾಗುವುದು !
ಭಾರತ ಕಣ್ಣಲಿ ಕುಣಿವುದು ; ಮೆಯ್ಯಲಿ
ಮಿಂಚಿನ ಹೊಳೆ ತುಳುಕಾಡುವುದು !
   ಕಲಿ ಕೆಚ್ಚಾಗುವನು !
   ಕವಿ ಹುಚ್ಚಾಗುವನು !

ಕೆ. ವಿ. ಪುಟ್ಟಪ್ಪ

೩೦. ಕನ್ನಡನಾಡಿನ ಸ್ಥಿತಿಯನ್ನು ನೆನೆದು

ಹರಿದು ತುಂಡಾಗಿಹುದು ಇಂದು ಕನ್ನಡನಾಡು ;
ಅಣ್ಣ ತಮ್ಮದಿರು ತಾವಣ್ಣ ತಮ್ಮದಿರೆಂದು
ತಿಳಿಯಲಾರರು ನಡೆಯಲಾರರು; ಬಾ ಬಂಧು
ಎಂದು ಕರೆಯಲು, ಸ್ವಾಮಿ ನನ್ನೂರು ಧಾರ್ವಾಡ
ನನ್ನೂರು ಮೈಸೂರು, ನನ್ನೂರು ಎರಕಾಡು
ಮರ್ಯಾದೆಯಿಂದ ಕರೆಯಿರಿ ನನ್ನ ಎನ್ನುವರು,
ಕನ್ನಡದ ನಾಡ ಜನವೆಲ್ಲವೂ ನನ್ನವರು,
ಬಡಗ ತೆಂಕಣ ಮೂಡ ಕೊಡಗ ತೌಳವ ತೋಡ
ಇನ್ನೆಲ್ಲ ಕನ್ನಡಿಗರೆನ್ನವರು ಎನ್ನುಸಿರು,
ನಾವೆಲ್ಲ ಒಂದು ಮನೆಯವರಣ್ಣ ತಮ್ಮದಿರು,
ನಮ್ಮೆಲ್ಲರನು ಪಡೆದುದೊಂದೆ ನಾಡಿನ ಬಸಿರು,
ಎಂದು ನಾವರಿದೆವೇ ನಮಗೆ ಇನ್ನಾರೆದುರು !
ಹಾ ನನ್ನ ಸೋದರರೆ ಬನ್ನಿ ಒಂದಾಗಿ ;
ಜಯವಧುವ ನಿಮ್ಮ ತೋಳಿನೊಳಿಟ್ಟು ತೂಗಿ.

ಶ್ರೀನಿವಾಸ
(ಮಾಸ್ತಿ ವೆಂಕಟೇಶ ಐಯಂಗಾರ್)

೩೧.ಎಂಥ ನಾಡಿದು

ಎಂಥ ನಾಡಿದು ಎಂಥ ಕಾಡಾಯಿತೋ!
ಹುಲುಸಾದ ಬೆಳೆ ಹೋಗಿ ಹುಲ್ಲುಕೊಳೆ ತುಂಬಿಹುದೊ!

ಹಗೆಯ ಹೆಸರನ್ನು ಕೇಳಿ ಹುಲಿಯಂತೆ ಹಸುಗೂಸು
ನೆಗೆದು ತೊಟ್ಟಿಲ ತುಳಿದು ಮೆಟ್ಟುತಿಹ ನಾಡಿನಲಿ
ಹಗೆಯ ಊಳಿಗಗೊಂಡು ನಾಯಿ ಬಾಳುಗಳೀಗ
ಬಗೆ ಬಗೆಯ ಬಾಯ್ದೆರೆದು ಹೇಡಿ ನುಡಿ ಬೊಗುಳುತಿಹವೋ!

ನೂರು ರಾಜ್ಯವ ಕಟ್ಟಿ ಬಾನ ಛತ್ರವ ಹಿಡಿದು
ಸಾರಿ ಬನ್ನಿರಿ ಸರುವ ಜನಮನವೆ ಮತಗಳೇ?
ಸಾರಿ ಈ ಪರಿ ಬಾಳ್ದ ಸೀಮೆಯಲಿ ಇದುವೀಗ
ಹರಿದು ಹಂಚುವ ಕಲಹ ಕುಲದೈವವಾಗಿಹುದೆ!
 
ಇಲ್ಲಿಯೇ ಈಸುವುದು ಇದ್ದು ಜೈಸುವುದೆಂಬ
ಎಲ್ಲರೊಡೆಯನ ನಂಬಿ ನಡೆವುದು ಎಂಬ ಆ
ಸೊಲ್ಲೀಗ ಗಾಳಿಯುಯ್ಯಲೆಯಲ್ಲಿ ತೂಗುತಿರೆ
ಒಲ್ಲೆ ಬಾಳನು ಎಂಬ ಗೋಳುಗಳು ಕೇಳುತಿಹವೋ!

ನೆಲದ ಒಳ ಉರಿಯನ್ನು ತೂರಿರುವ ಮೊರಟಾದ
ಸಿಲೆಯ ಸಾವಿರದಿ ಗುಡಿ ಬಸದಿ ರಥ ಗೊಮ್ಮಟರ
ಚೆಲುವು ನನೆಕೊನೆಯಾಗಿ ನಿಲ್ಲಿಸಿದ ನಾಡಿನಲಿ
ಚೆಲುವು, ಕಲೆ, ಹಾಡು, ನುಡಿ ಹೂವುಗಳ ತುಳಿಯುತಿಹರೊ!
 
ಕಾಲಭೂತದ ಕಠಿಣ ಕತ್ತಲೆಯ ಸೆರೆಯಲ್ಲಿ
ಸಿಲುಕಿರುವ ಪುಲಿಕೇಶಿ ನೃಪತುಂಗ ಬಲ್ಲಾಳ ಹರಿಹರರೆ
ಇಲ್ಲಿಯೇ ಉಸಿರಾಡಿ ಈ ನಾಡು ಕಟ್ಟಿದಾ
ಎಲ್ಲರೇ ಮರಳುವುದು ನಿಮ್ಮ ಸಿರಿ ಸೂರೆಗೈಯೆ.

ರಂಗನಾಥ ಶ್ರೀನಿವಾಸ ಮುಗಳಿ


೩೨.ಹಂಪೆಗೆ


ನಿದ್ದೆ ಬಾರದು ಇನ್ನು ಈ ಜನ್ಮಕೆ
ಬಿದ್ದ ಹಂಪೆಯ ಕಂಡು ಕಂಗೆಟ್ಟೆನು
ಕನ್ನಡದ ತಾಯ ಬೇರು ನೀರಡಿಸಿದೆ
ಹೊನ್ನು ಹೊಳೆ ಅದರ ಬಳಿ ತಾಳೊಣಗಿದೆ
ಚೆನ್ನು ಚೆಲುವಿನ ಹಂಪೆ ಹೆಳವಾಗಿದೆ
ಎನ್ನ ತಾಯ್ ಮನೆಧೇನು ಬರಡಾಗಿದೆ

 ತುಂಗಭದ್ರೆಯ ಕೂಸಿನುಸಿರಡಗಿದೆ
 ಮಂಗಳದ ಆ ಹೆಸರು ಹದಗೆಟ್ಟಿದೆ.
 ಸಂಗಡಿ ಬನ್ನಿ ರೈ! ಕನ್ನಡಿಗರೆ!
 ಹಿಂಗದಿರೆ! ಪ್ರೇಮದೊರೆ ಕನ್ನಡಿಗರೆ

 ಶತಮಾನ ನಾಲ್ಕಾಯ್ತು ವಿಜಯನಗರಿ
 ಅತಿ ನಿದ್ದೆ ಗತಿಹೊಂದಿ ಅಮರ ನಗರಿ
 ಮತಿಯಿತ್ತು ಧೃತಿಯಿತ್ತು. ಕನ್ನಡಿಗರೆ
 ಗತಿಸಿರುವ ಕೀರ್ತಿಪದ ಗಳಿಸಿಕೊಳ್ಳಿರಿ

 ಗಾಯವನೆ ಮಾಡಿದನು ಮುಸಲಬಂಧು
 ಕಾಯದಲೆ ಕೊಲ್ಲಿಸಿದ ಕನ್ನಡಿಗನೆಂದು |
 ತಾಯೆ ಈ ನುಡಿ ಸಲ್ಲ! ಬಲ್ಲ ವಿಧಿಯು!
 ಈ ಯುಗಕೆ ಅವರನ್ನು ಮನ್ನಿಸವ್ವ

 ಭಿನ್ನ ಮೂರ್ತಿಗಳನ್ನು ನಿನ್ನಂಕದಲ್ಲಿ
 ಇನ್ನೆ ಷ್ಟು ದಿನವಿಟ್ಟು ಗೋಳಾಡುವಿ?
 ಮುನ್ನಿ ನಾ ನೆನಹಿನಲಿ ಹೊನ್ನು ಹೊಳೆಯ
 ಕನ್ನಡಿಗ ಹರಿಸುವನು ಕಣ್ಣೊರಸಿಕೊ.

ಹೊಯಿಸಳ

( ಎ. ಲಕ್ಷ್ಮಣರಾವ್)

೩೩. ಹಂಪಿ- ವಿಜಯನಗರ ದರ್ಶನ

 ತಾಳವಿಲ್ಲದಲೆ ಬೇತಾಳನಂದದಿ ಕುಣಿವ
 ಕಾಳ ನರ್ತಕನ ಕಾಲೆಳಗೆ ತೊತ್ತುಳಿಗೊಂಡು
 ಹಾಳಾಗಿ ಹುಡಿಗೂಡಿ ಹೋದ ಕನ್ನಡನಾಡಿ.
ಗಿದಿರಾಗಿ ಬಂದು ನಿಂದು.
 ಹಾಳುಗಳ ಹೊರವೊಳಗೆ ಹಾಳುಗಳ ಸಾಲುಗಳು
 ಬೀಳುಗಳ ಬದಿ ಬದಿಗೆ ಬೀಳುಗಳ ಬಾಳುಗಳು
 ಕಾಳ ರಕ್ಕಸನ ಕಡೆಕೂಳು- ಬಾಳಕವಾದ
ನಾಡ ನಡುಮನೆಯ ಕಂಡೆ.

 ಕನಸೆನಲೊ, ಕಾಡುಪಾಲಾದ ಭೂಪಾಲಕನ
 ಮನಸೆನಲೊ, ಮೋಡದೊಳು ಮೂಡಿ ಮಸುಳುವ ಚಿತ್ರ
 ವೆನಲೊ, ಕಂಪಡಗಿ ಪೆಂಪುಡುಗಿ ಬಣ್ಣವು ಕೆಟ್ಟ
ನಿರ್ಮಾಲ್ಯ ಮಾಲೆಯೆನಲೊ?

 ನೆನಸಿ ಕೃತಕರ್ಮ ಪಶ್ಚಾತ್ತಾಪದಿಂ ಬೆಂದು
 ಜನಿಸಿ ಸುಜ್ಞಾನ, 'ಉದ್ಧಾರಮಾಡಿರಿ' ಎಂದು
 ಮನಸಿನಿಂದೆರಗಿರುವನೆನಲೊ, ಪಾತಕಿ ಬಂದು
 ಪಾವನನ ಚರಣಗಳಿಗೆ.

 ಬಿದ್ದ ರಾಜ್ಯ ವಿದಲ್ಲ ಉದ್ಬುದ್ಧವಾಗಿದ್ದು
 ಎದ್ದ ರಾಜ್ಯದ ಮೊಳಕೆಯಿದು, ಇದರ ಬಳಿಯಲ್ಲಿ
 ಇದು ಸ೦ಜೀವನವ ಜಪಿಸುವಂತಹ ಯೋಗಿ
ಕೊಂಪೆಹಂಪೆಯು ಇದಲ್ಲ
 ಬುದ್ದಿ ಯೆಣಿಸಿತು, ಅಂತರಂಗದಧಿನಾಯಕನು
 ಸುದ್ದಿಯನು ಸೂರುವೊಲು ಬುದ್ದಿಯನು ಮೀರುವೊಲು
 ಎದ್ದು ಹೇಳಿದನೊ ತಾ ಕನಕನೊಡೆಯನು ಪೇಳ್ದ
ಶುದ್ಧ ಮುಂಡಿಗೆಯಿದೆಂದು

 ಕರ್ಮಯೋಗಿಯ ಬಳಿಗೆ ಯೋಗೀಶ್ವರನು ನಿಂದು
 ಕರ್ಮದ ಅಕರ್ಮದೊಳ ಮರ್ಮಮಂ ತಿಳಿಸಿ ಸದ್
ಧರ್ಮಮಂ ಸತತ ನಡೆಸಿದರೆ ಧ್ರುವವಿಜಯವೆಂ
ದಂದು ತೋರಿಸಿದ ತೆರದಿ.
 ಧರ್ಮ ಕರ್ಮದ ಪುರಾತನ ಪುರಗಳಿವು ಪೂರ್ವ
 ಧರ್ಮ ಬಲದಿಂದೇರಿ ಕರ್ಮ ಬಲದಿಂದಿಳಿದು
 ಮರ್ಮದೊಳು ನೆಡುವಂತೆ ಸಪ್ರಯೋಗಿಕವಾಗಿ
ಕಲಿಸುವುವು ತತ್ವವೆಂದು.

- ದ. ರಾ. ಬೇಂದ್ರೆ



೩೪. ಕನ್ನಡ ದಾಸಯ್ಯ



 ಬೇಡಲು ಕನ್ನಡ ದಾಸಯ್ಯ ಬಂದಿಹ "
 ನೀಡಿರಮಾ! ತಡಮಾಡದಲೇ ॥ ಪ ॥
 ಹಾಡೊಂದನಾತನು ಹೊಸದಾಗಿ ಮಾಡಿಹ
 ಕೊಡಿರಿ ಕೇಳಿರಿ ಹಾಡುವನು ॥ ಅನು ॥

 ಕನ್ನಡ ಮಾತಿನ ತಂದೆತಾಯಿಗಳಿಂದ
 ಚೆನ್ನ ಚೆನ್ನೆ ಯರೆಲ್ಲ ಹುಟ್ಟದಿರಿ.
 ಕನ್ನಡ ಮಾತಿನ ಜೋಗುಳವನು ಕೇಳಿ
 ಕನ್ನಡ ತೊಟ್ಟಿಲೊಳಾಡಿದಿರಿ.

 ಕನ್ನಡ ದೇಶದೆ ದೊಡ್ಡವರಾದಿರಿ
 ಕನ್ನಡ ವಿದ್ಯೆಯ ಗಳಿಸಿದಿರಿ
 ಕನ್ನಡದಿಂದಲೆ ಸಿರಿವಂತರಾದಿರಿ
 ಕನ್ನಡ ದೇಶದೆ ಹೆಸರಾದಿರಿ.
 ಅನ್ಯಭಾಷೆಗಳಂತೆ ಕನ್ನಡ ಭಾಷೆಗೆ
 ಉನ್ನತಿಕೆಯ ತರಬೇಕೆಂದು
 ಹೊನ್ನು ಕೂಡಿಸಲಿಕ್ಕೆ ಬಂದಿಹನಾತನು
 ಮನ್ನಿಸಿ ಹಣವನು ಕೊಡಿರಮ್ಮ.
 ಹೊಟ್ಟೆಗಿಲ್ಲದೆ ಬಂದ ದಾಸಯ್ಯನಿವನಲ್ಲ
 ಕೊಟ್ಟುದ ಬಿಟ್ಟು ಹೋಗುವನಲ್ಲವು
 ದಿಟ್ಟಿಸಿ ದಿಟ್ಟಿಸಿ ಕೊಡಬಂದ ಕೈಗಳ
 ನೊಟ್ಟುಗೂಡಿಸಿ ಪದ ಕಟ್ಟುವನು.
 ಚಿನ್ನದ ಕಡಗದ ಕೈಕಾಸನಿತ್ತಿತು
 ರನ್ನದುಂಗುರದ ಕೈ ಇಲ್ಲೆಂದಿತು
 ಹೊನ್ನ ವಂಕಿಯ ಕೈ ಸುಮ್ಮನೆ ಕುಳಿತಿತು
 ಇನ್ನೊಂದು ಬಳೆಗೈ ಹಣಕೊಟ್ಟಿತು.
 ಕೊಟ್ಟರೆ ಹಿಗ್ಗುವ ಕೊಡದಿರೆ ಕುಗ್ಗುವ
 ಕೆಟ್ಟ ಮನದ ಗುರುತಿನಗಿಲ್ಲವು
 ಕೊಟ್ಟ ಕಾಸುಗಳೆಲ್ಲ ಹೆಡಿಗೆ ತುಂಬುವ ಹೊನ್ನು
 ಇಟ್ಟಂಥ ನಿಧಿ ಕೊಡದಿಹ ದ್ರವ್ಯವು.
 ಕಾಸಿಗಲ್ಲವು ನಿಮ್ಮ ಸೋಸಿಗೆ ಬೆಲೆಯಿದೆ
 ಕಾಸಲ್ಲವೇ ಕೋಟಿಯ ಮೂಲವು
 ಈ ಶಾಸ್ತ್ರವ ಶಾಂತವಿಟ್ಟಲನೋಳ್
 ಕಲಿತನು ಸಾಸಿರವಿದರಂತೆ ತಂದಿಹನು.

ಶಾಂತಕವಿ

೩೫. ತರುಣರ ದಸರೆ

 ಹೆಜ್ಜೆಯ ಹಾಕುತ ಬನ್ನಿರಿ ಮುಂದೆ
ನೋಡಲು ದಸರೆಯ ಹಬ್ಬವನು
 ಉತ್ಸಾಹದ ಕಿರುಗೆಜ್ಜೆಯ ಕಟ್ಟಿ
ಹಾಡಿರಿ ನಾಡಿನ ಕಬ್ಬವನು.
 ಹಬ್ಬಗಳೆಲ್ಲಾ ದಸರೆಯ ಹಬ್ಬ;

{{C|

 ಕಬ್ಬಗಳೆಲ್ಲಾ ರನ್ನನ ಕಬ್ಬ;
 ತಿಂಡಿಗಳೆಲ್ಲಾ ಬುಂದಿಯ ಲಾಡು
 ಧರೆಯೊಳೆಗೆಲ್ಲಾ ಕನ್ನಡನಾಡು
 ನಾಡಿನ ಹಾಡನು ಹಾಡುತ ಬನ್ನಿ!
 ದಸರೆಯ ಹಬ್ಬವ ನೋಡಲು ತನ್ನಿ!

 ಮೋಡಗಳೆಲ್ಲವು ಸರಿದುವು ಹಿಂದೆ
 ಆಗಸವೆಲ್ಲಾ ಬಿಳುಪಾಯ್ತು.
 ಚಳಿಗಾಲೆಂಬೋ ಸಗ್ಗ ದ ಅಗಸ
 ಗಗನವ ತೊಳೆದನು! ನೆನಪಾಯ್ತು!
 ಬೆಳಕೇ ಇಲ್ಲದ ಮಳೆಗಾಲ
 ಹಿಂದಕೆ ಸರಿಯಿತು ಆ ಕಾಲ
 ಮೂಡಿದೆ ಬೆಳಕಿನ ಚಳಿಗಾಲ
 ಜ್ಞಾನವ ಬೀರುವ ನವಕಾಲ
 'ಮುಗಿಲಿನ ಮಳೆ ಮುಗಿಯಿತು' ಅನ್ನಿ
ನಗುಮಳೆಯನು ಸುರಿಯುತ ಬನ್ನಿ!

 'ಸೀಮೋಲ್ಲಂಘನ ಮಾಡಿರಿ ಇಂದು
 ಭೀತಿಯ ಸೀಮೆಯ ದಾಟುತಲಿ,
 ಧೈರ್ಯಧ್ವಜವನು ಮೆರಸುತ ಮುಂದು
 ನಡೆಯಿರಿ ನೀತಿಯ ನಾಡಿನಲಿ,
 ಧರ್ಮದ ಗಡಿಯನ್ನು ದಾಟಲು ಬೇಡಿ
 ಕರ್ಮದ ಕೊಲನು ಬಿಡದಲೆ ಓದಿ,
 ಮರ್ಮವ ತಿಳಿದೆಲ್ಲರು ಹಾರಾಡಿ
 ಚರ್ಮದ ದೇಹದ ಸಾರ್ಥಕ ಮಾಡಿ,
 'ಬನ್ನಿ ಯ ಗಿಡ ಬಂದಿತು' ಅನ್ನಿ
 ಚಿಣ್ಣರೆ, ನೀವೆಲ್ಲರು ತನ್ನಿ,
 'ಹಿಂದಿನ ಕಾಲವು ಹಿಂದಕೆ' ಅನ್ನಿ,
 ಮುಂದಿನ ಕಾಲವು ನಮ್ಮುಂದೆ,
 ನಾಡಿನ ಯುವಕರೆ, ಮುಂದಕೆ ಬನ್ನಿ
 ಮುದುಕರು ನಿಲ್ಲಲಿ ಹಿಂದ್‌ಹಿಂದೆ,
 ಹೊಸ ಹೊಸ ಮತಗಳ ಬಗೆಬಗೆ ಹುರುಪಿನ
 ಚೆನ್ನ ಚಟಾಕಿಯ ಹಾರಿಸುವ
 ಕೆಂಪಿನ ವರ್ಣದ ಕೆಚ್ಚೆದೆ ಬಣ್ಣದ
 ಕಿಡಿಗಳನವರಿಗೆ ತೋರಿಸುವ.

 ಮುದುಕರು ನಿಲ್ಲಲಿ ತುಸು ಹಿಂದೆ
 ಹುಡುಗರ ಸಾಹಸ ಏನೆಂಬೆ!
 ಮುದುಕರು ಪಾಪ! ಕಂಗಳು ಮಂದ
 ಮುಂದಿನ ನೋಟವ ನೋಡಲು ಅಂಧ,
 ಹೊಸ ಹೊಸ ರೀತಿಯ ದೂರುವರು
 ಹಳೆಯ ಪುರಾಣವ ಹೇಳುವರು.
 ಅಂಧ ಭಕ್ತಿಗೆ ಉರಿಯನು ಒಡ್ಡಿ
 ನಿಲ್ಲಿರಿ ಎಲ್ಲರು ಗೋಲಾಗಿ,
 ಚ೦ದದಿಂದ ಚಪ್ಪಾಳೆಯ ತಟ್ಟುತ
 ಮುಂದಕೆ ನಡೆಯಿರಿ ಸಾಲಾಗಿ
 ದೊಡ್ಡ ಮನಸಿನ ಕುದುರೆಯ ಹತ್ತಿ,
 ಕೈಯಲ್ಲಿ ಹಿಡಿಯಿರಿ ಧೈರ್ಯದ ಕತ್ತಿ;
 ಹಿಂದು ಧರ್ಮದಾ ಫೇಠಾ ಸುತ್ತಿ
 'ಆತ್ಮಸಂಯಮನ' - ಲಗಾಮು ಜಗ್ಗಿ,
 ದುಗುಡವ ಬಗ್ಗಿಸಿ, ಹಿರಿ ಹಿರಿ ಹಿಗ್ಗಿ,
 ಎಲ್ಲ ಜಾತಿಗಳ ಗುಂಪನು ನುಗ್ಗಿ,
 ಭೇದವನೊಡೆಯಿರಿ ತಲೆಯನು ಬಗ್ಗಿ;
 ಆಗ ನಲಿಯುವುದು ಸಂತಸ ಸುಗ್ಗಿ
 ಭಾರತಭೂಮಿಯ ಅಬಲತೆ ಕುಗ್ಗಿ,
 ಅ೦ದು ಮೂಡುವನು ದಸರೆಯ ಅರುಣ
 ಅಜ್ಞಾನದ ಕತ್ತಲೆಗದು ಮರಣ.
 ಮಾನವ ಧರ್ಮದ ದಸರೆಯ ಮಾಡಿ
 ಕನ್ನಡನಾಡಿನ ಹಾಡನು ಹಾಡಿ.

ದಿನಕರ ದೇಸಾಯಿ

೩೬. ಶ್ರೀ ಕೃಷ್ಣ ರಾಜ ರಜತಮಹೋತ್ಸವ ಪ್ರಗಾಥ

 ಕಾಯಿ, ತಾಯಿ, ಕೃಪೆಯ ತೋರಿ
ನಮ್ಮ ಕೃಷ್ಣನ;
 ಬೆಳ್ಳಿ ಬೆಟ್ಟ ದೊಡತಿ ಗೌರಿ,
 ಬೆಳ್ಳಿಯೊಸಗೆಗೊಸಗೆ ಬೀರಿ
ಕಾಯಿ ಕೃಷ್ಣನ.

 ಏಳು, ವಾಣಿ, ವೀಣೆದಾಳು,
 ಅಮೃತವಾಣಿಯಿಂದ ಹೇಳು
 ಪುಣ್ಯದರಸು, ಧರ್ಮದಾಳು,
ದೊರೆಯ ಕೃಷ್ಣನ.
 ಹೊನ್ನು ನಡೆಯ, ಹೊನ್ನು ನುಡಿಯ,
 ಕನ್ನಡಿಗರ ವಯಿರಮುಡಿಯ,
ಒಡೆಯ ಕೃಷ್ಣನ.

 ಏನು ಲಲಿತಾದ್ರಿಯಲಿ ಬೆಳಕುಗಳುಷೆಗೆ ಕಾಂತಿಯನೀವುವು?
 ಮೇಲಕೇರುವ ಬೆಳಕದಾವುದು? ಇಳಿವ ಬೆಳಕುಗಳಾವುವು?
 ಆವ ದೇವಿಯರಿವರು ಮೂವರು? - ಕನ್ನಡದ ಸಿರಿಯೊಬ್ಬಳು.
 ಅಕ್ಕತಂಗಿಯರಂತೆ ತಬ್ಬುತ, ಕಡಲ ರಾಣಿಯದೊಬ್ಬಳು,
ಶ್ರೀ ಭರತಮಾತೆಯರೊಬ್ಬಳು:
 ತನ್ನ ಮಕ್ಕಳ ಬೀರಗನಸುಗಳುಬ್ಬುತಿರೆ ನಸುನಗುವಳು;
ಭರತಮಾತೆ! ಪ್ರೇಮಮಾತೆ!
ಮಹಿಮೆಯಲಿ ಕಳೆ ಮಿಗುವಳು.
 ಗೌರಿಯೋಲಗದಿಂದ ಬಂದಳು, ಪೂರ್ಣಕುಂಭವ ತಂದಳು;
 ದೂರ ವಿನಯದಿ ನಿಂದ ಕನ್ನಡ ಹೆಣ್ಣ ಬಳಿಯಲಿ ನಿಂದಳು;
ಕಳಶವಿತ್ತಿಂತೆಂದಳು
"ಬಾಳು, ಕನ್ನಡದರಸಿ, ಗೌರಿಯ ಕೃಪೆಯ ಸುಧೆಯನು ಚೆಲ್ಲಿಸು.
 ಕೃಷ್ಣರಾಜನ ಕೀರ್ತಿ ಹಬ್ಬಿದ ಚೆಲುವು ನಾಡನು ಗೆಲ್ಲಿಸು.
 ಕೃಷ್ಣರಾಜನ ಸಿರಿಯ ಮುಡಿಯಲಿ ಸಕಲ ಭಾಗ್ಯವ ಸಲ್ಲಿಸು.
 ತನ್ನ ಬಾಳನು ನಾಡ ಮೇಲ್ಮೆಗೆ ಮುಡಿಪು ಕಟ್ಟಿದ ಧೀರನು.
 ತನ್ನ ಗುರಿಯನು ಬಿಡದೆ ಕೊಳುವನು, ಆತ್ಮಗುಣದಲಿ ವೀರನು.
ಹೋಗು, ಸೊಬಗಿಯೆ, ಬಾಳು?"' - ಎಂದಳು.
ಬಳಿಯ ಕೆಳದಿಯ ಕೈಯ ಕೊಂಡಳು;
ಮುಗಿಲ ಮರೆಯಲಿ ಸಂದಳು.

ಮಂಗಳ ಮಸಗಿತು ಮೈಸೂರರಮನೆ; ಸಿ೦ಗರವಾಯಿತು ಮೈಸೂರು.
 ಕೃಷ್ಣನ ವೈಭವವೆಲ್ಲವ ತೋರುವ, ಸಾರುವ ಮಾರುವ ಮೈಸೂರು,
ನಾಲ್ಮಡಿ ಕೃಷ್ಣನ ಮೈಸೂರು.

 ಬೆಟ್ಟವೊ, ಕೆರೆಯೋ, ಬೀದಿಯೊ, ಬನವೋ, ಮನೆಯೋ, ಮಹಲೋ, ಎಲ್ಲೆಲ್ಲು,
 ದಟ್ಟಿಗೆ ಕೂಡುವ, ಭಕ್ತಿಯನಾಡುವ, ಹರ್ಷವ ತೋಡುವ ಸವಿಸೊಲ್ಲು,
ನಾಲ್ಮಡಿ ಕೃಷ್ಣನ ಸವಿಸೊಲ್ಲು.
 ಎಳೆಯರು ನಾಡಿನ ಬೆಳೆಸಿರಿಮೊಳೆಗಳು, ಆಡಿ, ಪಾಡಿ, ಕುಣಿಕುಣಿದಾಡಿ,
 ಓದುವ ಹೆಣ್ಗಳು ಗಂಡುಗಳುಲಿವರು, ಸಸಿಯನು ನೆಡುವರು, ಕೊಂಡಾಡಿ,
ನಾಲ್ಮಡಿ ಕೃಷ್ಣನ ಕೊಂಡಾಡಿ.
 ಅರಿವನು ಹರಡುವ, ಸಿರಿಯನು ಬೆಳಸುವ, ಪರಿಪರಿ ಕೃಷಿಯನು ರೂಡಿಸುವ,
 ತನ್ನೊಂದೊಲುಮೆಗೆ ಮರುಗಿಸಿ ಹಲಬಗೆ ನಾಡಿಗರೊಂದೆನೆ ಕೂಡಿಸುವ,
 ಆಡುವ, ಹಾಡುವ, ಬರೆಯುವ, ಕೊರೆಯುವ, ಕಟ್ಟುವ ಕಳೆಗಳ ಹೂಡಿಸುವ,
 ಹೊಸ ಹೊಸ ತೆರದಲಿ ಮನವನು ಮುಟ್ಟುವ ಕವಿಗಳಿಗುತ್ಸವ ಮಾಡಿಸುವ,
 ಪ್ರೇಮದ ಸ್ವಾಮಿಗೆ, ಕೃಷ್ಣಗೆ, ಹಿರಿಯರು ಬಿನ್ನ ಹಗೈವರು ತಲೆಬಾಗಿ,
 ನೆಚ್ಚಿನ ಮೆಚ್ಚಿನ ಬಿನ್ನಹ ಕರಗಿಸೆ, ಹೃದಯವನೆರೆವನು ಮುಡಿಪಾಗಿ,
ನಾಲ್ಮಡಿ ಕೃಷ್ಣನ ಮುಡಿಪಾಗಿ,
 ಕನ್ನಡ ದೇವಿಯ ಬಯಕೆಯ ಕಳಶದ ಸುಧೆ ಸುರಿದೆತ್ತಲು ಚೆನ್ನಾ ಯ್ತು;
 ಪ್ರೇಮದ ಸ್ವಾಮಿಯ ಕೃಷ್ಣನ ಭಕ್ತಿಯ ರಸ ಹರಿದೆತ್ತಲು ಹೊನ್ನಾ ಯ್ತು.
ಮಂಗಳಮಯವಾಯಿತು ನಾಡು;
ಸಿಂಗರದಾ ಕನ್ನಡನಾಡು.
 ಪಡುಗಡಲಿನ ತೆರೆ ಮುದ್ದಾಡುವ ಕರೆ, ಹೊಳೆ ಹಾಲಿಳಿಯುವ ಘಟ್ಟದೆರೆ,
 ಪಂಪನ ರನ್ನನ ಪುಟವಿಡಿಸಿದ ಕಡೆ, ಹಂಪೆಯ ತಾಂಡವವಾಡಿದೆಡೆ,
 ಹೊಯ್ಸಳರೆತ್ತಲು ಕಡೆಯಿಸಿ ನಿಲಿಸಿದ ಗುಡಿಗಳ ಸೊಬಗಿನ ಕಣ್ಣ ಸೆಳೆ,
 ಜಲಜಲನು ಕುವ ಕಾಲುವೆ ಬಯಲಲಿ ಪಚ್ಚೆಯ ಪಯಿರಿನ ತುಂಬು ಬೆಳೆ
ಮಂಗಳಮಯ ತಾನೆತ್ತಲು ನಾಡು,
ಸಿಂಗರದಾ ಸಿರಿಗನ್ನಡನಾಡು.
 ಅತ್ತಲು, ತಾನೆತ್ತೆತ್ತಲು, ಒಮ್ಮನ, ಒಕ್ಕೊರಲಾಗುತ ಜನ ಕೂಡಿ,
 ನಿರ್ಮಲ ಚಿತ್ತನ, ಪುಣ್ಯ ಚರಿತ್ರನ, ಕೃಷ್ಣನ ಹರಸುತ ಜನ ಹಾಡಿ,
ಜಯ ಜಯ ಎಂಬರು, ಬೆಳೆ ಬಾಳೆಂಬರು,
ನಿನ್ನ ದು ಕನ್ನಡದೆದೆಯೊಲವೆಂಬರು
 ಮಂಗಳ ಮಸಗಿತು ಮೈಸೂರರಮನೆ; ಧನ್ಯತೆ ಪಡೆಯಿತು ಮೈಸೂರು,
 ಕನ್ನಡನಾಡಿನ ಮನ್ನಣೆ ಪಡೆಯಿತು ನಾಲ್ಮಡಿ ಕೃಷ್ಣನ ಮೈಸೂರು,

 ಎಂತೆನ್ನ ಬಗೆ ಹಾರುವುದು ನೆಗೆದು ಸಂದು
 ಮೈಸೂರ ಮೊತ್ತಮೊದಲೊಸಗೆ ಬೆಳೆದಂದು!

ಸೆರೆಯಿಟ್ಟು ಕಾಡಿದಾ ಖೂಳನನು ಕೊಂದು,
ಅರಸರರಸಿಯರೆಲ್ಲ ಹರಸುತಿರೆ, ಬಂದು,
ಕೈ ಹಿಡಿದ ರಾಣಿಯನು ನಗುತ ಕರೆತಂದು,
ಮುದ್ದಾದ ಮೈಸೂರ ತಾವರೆಯ ತಂದು,
ದೇವಿ ಚಾಮುಂಡಾಂಬೆಯೆದಿರಿನಲಿ ನಿಂದು,
ಕೈ ಮುಗಿದು ಬೇಡಿದನು ಯದುರಾಯನಂದು :
ಕಾಯಿ, ತಾಯಿ, ಕೃಪೆಯ ತೋರಿ,
ನಿನ್ನ ಮಗನನು;
ನಲುಗಿ, ನಿನ್ನ ನೆರಳ ಸೇರಿ
ನಲಿವ ಹೆಣ್ಣನು.
ಧರದೊಲವ ನಮಗೆ ನೀಡು,
ಸತ್ಯ ನಿಲಿಸುವಂತೆ ಮಾಡು,
ಹಿರಿಯ ಮೈತ್ರಿಗಳನ್ನು ಕೂಡು,
ಕರುಣದಿಂದ ಬಿಡದೆ ನೋಡು,
ಕಾಯಿ, ತಾಯಿ, ನಮ್ಮ ನಾಡು,
ನಮ್ಮ ಮನೆಯನು,
ನಡಸಿ, ಬೆಳಸಿ, ಹಿರಿಮಮಾಡು
ನಮ್ಮ ಮನೆಯನು.


ಇಂತೆಂದು ಬೇಡಿದನು ಮೈಸೂರ ಮನೆತನದ ಮೊದಲಿಗನು ಬಾಗಿ,
ಮನಮುಳುಗಿ ಭಕ್ತಿಯಲಿ. ಚಿತ್ರದಾಳುಗಳಂತೆ ನಿಶ್ಯಬ್ದವಾಗಿ,
ಮೂಡುವಚ್ಚರಿ ಹದವ ಹಾರುತ್ತ, ಸಭೆಯೆಲ್ಲ, ಎವೆ ಹೊಯ್ಯದಲ್ಲಿ
ನಿಂದಿಹುದು, ಅಹ! ಅಲುಗಿತಭಯಹಸ್ತದ ಹೂವು; ಸಿಡಿದು ಮುಡಿಯಲ್ಲಿ
ನೆಲಸಿದುದು, ಯದುರಾಯ ಮಕುಟದಲಿ, ದೇವಿಕೆರೆ ಸಂಪಗೆಯದೊಂದು.
ಕೂಗಿದಳು ನೆರವಿಯಲಿ ಮುತೈದೆ, ಬೆದರಿದಳು ಮೈ ಮೇಲೆ ಬಂದು,
ಕೆದರಿದಳು ಬಿರಿದಲೆಯ ನರೆನವಿರ, ಬಿರುಬಿರನೆ ಕಿರುಹಿ, ನಕ್ಕು,
ಕದಡುಬಗೆ ತಿಳಿಯಾಗಿ, ದೂರದೆಸೆ ಬಳಿಯಾಗಿ, ಮು೦ದಹುದ ಹೊಕ್ಕು,
ನುಡಿದಳವಳಂದು-
ಹಣುದುಕಿ ನೋಟವನು ನುಡಿದಳವಳಿಂದು-
ಗಿರಿಯ ನೆತ್ತಿಯ ಮೇಲೆ ಗಂಭೀರ ಘೋಷದಲಿ ಗುಂಪಿನಲಿ ಬಂದು
ಮಳೆ ಕುಡಿವ ಹಕ್ಕಿವೊಲು ಕುಡಿಯುತಿರೆ ಕನ್ನಡದ ಕಲಿಗಳಾ ಸಿರಿಯ,
ಸಾವನದ ಮುತ್ತೈದೆ ಸವಿಗರೆದು ನುಡಿದಳಾ ಮೈಸೂರ ಸಿರಿಯ,
ಕನ್ನಡದ ನಾಡ ಸಿರಿಯ.

" ಮೆಚ್ಚಿದೆನು, ಮೆಚ್ಚಿದೆನು, ವಿನಯನಿಧಿ; ನನ್ನೊಲುಮೆಗುವರಿ, ಈ ಅರಸಿ,
 ಚಿಕ್ಕದೇವಾಂಬೆಯನು ದುಃಖವಾವರಿಸುತಿರೆ, ಅದ ನಿನ್ನ ಕರಸಿ,
 ಪರಿಹರಿಸಿ, ರಾಜ್ಯವನು ನಿನ್ನ ತೋಳಿನಲಿರಿಸಿ ಕಾಯುವೆನು, ಬಾಳು.
 ಕೃಷ್ಣ ದೇವನ ಕುಲದ ನೆಲದರಿಕೆಯಾಳಿಕೆಯ ಹೆಮ್ಮೆಯಿಂದಾಳು.
 ನಿನ್ನ ಮಕ್ಕಳ ಸಾಲು ಕುಡಿಯೊಡೆದು ಹಬ್ಬುವುದು, ಬೆಳಗುವುದು ಬೀಡು;
 ಕಡೆಗಾಣದಂತೆಂತು ನಿಮಿರುವುದು ಯಾದವರ ಸಂತಾನ, ನೋಡು;
 ಕರ್ಣಾಟ ಚಕ್ರವರ್ತಿಗಳು, ಹೊಳೆಹೊಳೆಯುತಿಹರೆಂತು ಹೆಸರಾಂತು!
 ರಾಜೊಡೆಯ, ನರಸಿಂಹ, ಚಿಕದೇವ, ಮುಮ್ಮಡಿ ಕೃಷ್ಣೇ೦ದ್ರನಿ೦ತು,
 ಹೊಸಯುಗದ ಚಾಮೇ೦ದ್ರ- ಹಿರಿಯರೆಲ್ಲರ ಪುಣ್ಯ ಫಲಿಸಿ ಬಂದಂತೆ,
 ನಿರ್ಮಲದ ಗಗನದಲಿ ನೆಲಸಿ ಶಾಂತಿಯೊಳಿರುವ ಚಂದ್ರನೆಂಬಂತೆ,
 ನಾಲ್ಮಡಿಯ ಶ್ರೀ ಕೃಷ್ಣ - ಶ್ರೀ ಕೃಷ್ಣ- ಸಾಕೆನಿತು ಮಾತಿನಿತು ಸಾಕು.
 ಪರಮತೇಜಸ್ವಿಗಳು, ರಣಧೀರರಪ್ರತಿಮವೀರರಾಗಿದ್ದು,
 ಚಕ್ರವನ್ನು ತಡೆಯಿಲ್ಲದೋಡಿಸುತ, ಆಡು, ದುರ್ಗಗಳ ಗೆದ್ದು,
 ಯುದ್ದ ಕಾನ೦ದಿಸರು; ಕತ್ತಿಹೊಳಪನು ಚಿನ್ನ ದೊರೆಯೊಳಗೆ ಮರಸಿ,
 ತೊಡವೆನಿಸಿ ಮಡಗಿಹರು, ಶಾಂತಿಯಲಿ ಮನಸೋತು ಸಾತ್ವಿಕವನರಸಿ.
 ಸೌಮ್ಯ ಮೂರ್ತಿಗಳವರು, ಸಾಧುಗಳು, ಪ್ರೇಮಿಗಳು, ಭಕ್ತಿಬೋಧಕರು,
 ಕಾವ್ಯ ರಸಿಕರು, ಗಾನ ಕೌಶಲರು, ಕಲ್ಯಾಣಕಾರ್ಯ ಸಾಧಕರು.
 ಗುರುಗಳನು ಹಲವರನು ಸೇವಿಸುತ, ಧರ್ಮಸಾರವನು ಕಡೆಯುವರು,
 ಸ್ವಾಮಿಭಕ್ತಿಯೊಳೆರಡನೆಣಿಸದೆಯೆ, ತನ್ನೊಡೆಯ ತನವ ನಡೆಯುವರು.
 ಬ್ರಹ್ಮದಲಿ, ಕ್ಷಾತ್ರದಲ್ಲಿ, ನೀತಿಯಲಿ, ನೆರೆ ಪಳಗಿ ಮೈಮೆವೆತ್ತಿಹರು.
 ಒಮ್ಮೆ ನಾಡನು ತಿರುಗಿ ಹಳ್ಳಿಗರ ನೆಮ್ಮದಿಯ ನೇರ್ಪಡಿಸುತಿಹರು.
 ಒಮ್ಮೆ ಹೊಳಲನು ಮೆರೆದು ಮಿತ್ರರಾಜರ ಬರಿಸಿ ಸುಖಗೊಳಿಸುತಿಹರು.
 ಹೊಳೆಗಳನು ತಡೆಗಟ್ಟಿ ಬೆಂದ ಕಾಡನು ಬೆಳಸಿ ಹಸುರೆರಚುತಿಹರು.
 ಬೆಟ್ಟದಲ್ಲಿ ವಿಹರಿಸುತ ಜಾತ್ರೆಗಳ ಸಂಭ್ರಮಕೆ ಸಡಗರಿಸುತಿಹರು.
 ಜ್ಞಾನಿಗಳ ಗೋಷ್ಠಿಯಲ್ಲಿ ಕೇಳುವರು, ಬರಸುವರು, ತಾವೆ ಬರೆಯುವರು.
 ಪ್ರಜೆಗಳೊಲುಮೆಯ ಸೆಳೆದು, ರಾಜರಲಿ ಗಣ್ಯತೆಯ ಪಡೆದು ಮೆರೆಯುವರು.

ಮೈಸೂರರಸರ ಮೊದಲಿಗ, ನೋಡು,
ಇಂತಹ ದೊರೆಗಳ ಸೇರಿದ ನಾಡು,
ಸಿ೦ಗರದಾ ಸಿರಿಗನ್ನಡನಾಡು,
 ಮಂಗಳಮಯದಾ ನನ್ನೀ ನಾಡು,
ಕಂದಮ್ಮು, ಕುಂದದು, ಕೊರಗದು, ನೋಡು,
ಮೈಸೂರರಸರ ಅರಮನೆ, ನೋಡು

 ಉರಿ ಕೊಳೆ ಸಗ್ಗದೆ ಶಿಲೆಯಲ್ಲಿ ಬೀಡು
 ಉರಿಯನೆ ಹೊದೆಯುತ ನಗುವುದು ನೋಡು,
 ಹೊಳೆವುದು, ಬೆಳೆವುದು, ಸೆಳೆವುದು, ನೋಡು,
 ಸುಖದಲಿ ನೆರೆದಾ ಜನವನು ನೋಡು,
 ನಾಲ್ಮಡಿ ಕೃಷ್ಣನ ಹರಸುವರು;
 ಆತನ ಸುಖದಲಿ ಬೆರಸುವರು;
 ಇಂತಹ ಜನವನು, ನಾಡನು, ದೊರೆಯನು
 ನಾನೆಂದೆಂದೂ ಹರಸುವೆನು,
 ನಾನೆಂದೆಂದೂ ಕಾಯುವೆನು,
 ಕಾಯುವೆನು.”


ಕಾಯಿ, ತಾಯಿ, ಗೌರಿದೇವಿ, ಕೃಷ್ಣರಾಜನ!
ಬೆಳ್ಳಿ ಬೆಟ್ಟದೊಡತಿ, ಗೌರಿ,
 ಬೆಳ್ಳಿಯೊಸಗೆಗೊಸಗೆ ಬೀರಿ
ಕಾಯಿ ಕೃಷ್ಣನ.
 ಕನ್ನಡಿಗರ ವಯರಮುಡಿಯ ರಾಯ ಕೃಷ್ಣನ!

ಶ್ರೀ

೩೭. ಕನಸಿನೊಳಗೊಂದು ಕಣಸು

'ಯಾರು ನಿಂದವರಲ್ಲಿ ತಾಯೆ!” ಎಂದೆ!

'ಯಾರು ಕೇಳುವರೆನಗೆ ಯಾಕೆ ತಂದೆ?'
'ಬೇಸರದ ದನಿಯೇಕೆ ಹೆಸರ ಹೇಳಲ್ಲ.'
'ಹೆಸರಾಗಿಯೂ ಕೂಡ, ಹೇಳಹೆಸರಿಲ್ಲ.'
'ನೀನಾರ ಮನೆಯವಳೊ ಮುತ್ತೈದೆ ಹೇಳು.'
'ನಾನಾರ ಮನೆಯವಳೊ ಬಯಲನ್ನೆ ಕೇಳು.'
'ಆಪ್ತರಿಲ್ಲವೆ ನಿನಗೆ ಇಷ್ಟರಿಲ್ಲೇ?'
'ಗುಪ್ತರಾದರೊ ಏನೊ ಇಷ್ಟರಲ್ಲೇ!'
'ಇರುವರೇ ಇದ್ದರೇ ಮಕ್ಕಳೆಂಬವರು?'
'ಇರುವರೆಂದರು ಕೂಡ ಯಾರು ನಂಬುವರು?'
'ಮನೆಯಿಲ್ಲವೇ ಇರಲು ಪರದೇಶಿಯೇನು?)'
'ಮನೆಯ ಮುನಿದೆದ್ದಿರಲು ಯಾ ದೇಶವೇನು?'
</poem>

'ನಿನ್ನ ಮಾತಿನಲಿಹುದು ಒಡಪಿನಂದ.'
'ನನ್ನ ಹತ್ತಿರದೊಂದೆ ಉಳಿದಿಹುದು ಕ೦ದ.'
'ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು? '
'ಸಾಜವಾದರು ಪಕ್ಷವಿದು ವದ್ಯವಹುದು.'
'ಯಾವುದಾದರ ನಾಡದೇವಿಯೇ ನೀನು?'
'ಭಾವುಕರ ಕಂಗಳಿಗೆ ದೇವಿಯೇ ನಾನು.'
'ಈಗ ಬ೦ದಿಹುದೇಕೆ ಏನು ಬೆಸನ?'
'ಯೋಗವಿಲ್ಲದೆ ತಿಳಿಯದೆನ್ನ ವೆಸನ!?'
'ಹಾದಿ ಯಾವುದು ಹೇಳು ಯಾವ ಯೋಗ?'
'ಆದಿ ಅಂತವು ಇಲ್ಲದಂಥ ತ್ಯಾಗ!'
'ಬೇಡ ಬಂದಿಹೆ ಏನು ಏನಾದರೊಂದು?'
'ಬೇಡಿದರೆ ಬೇಡಿದುದ ಕೊಡುವೆಯಾ ಇಂದು?'
'ಅಹುದು ಕೊಡುವೆನು ಎಂದು ನಾನೆನ್ನಬಹುದೇ?'
'ಬಹುದುಗಿಹುದಿನ ಶಂಕಿ ವೀರನಹುದೇ?'
'ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ.?'
'ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ.'
'ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ,'
'ಬಲ್ಲವರು ದೈವವನು ಪರಿಕಿಸುವರೊಮ್ಮೆ.'
'ಚಂಡಿ ಚಾಮುಂಡಿ ಪೇಳ್ ಬೇಕಾದುದೇನು?'
'ಗಂಡುಸಾದರೆ ನಿನ್ನ ಬಲಿಕೊಡುವೆಯೇನು?'
***
ಮನವು ನಡುಗಿತು ತನುವು ನವಿರಿಗೊಳಗಾಯ್ತು;
ನೆನವು ನುಗ್ಗಿತು-ಹೊರಗೆ ಕಂಡೆ– ಬೆಳಗಾಯ್ತು.

ಅಂಬಿಕಾತನಯದತ್ತ


(ದ. ರಾ. ಬೇಂದ್ರೆ)


೩೮.ಭಾರತ ತಪಸ್ವಿನಿ
ವೇದಋಷಿ ಭೂಮಿಯಲಿ ನಾಕನರಕಗಳೆಂದು
ಸಾವು ಬದುಕಿನ ಕಟ್ಟಕಡೆಯ ಹೋರಾಟದಲಿ
ಸಂಧಿಸಿವೆ. ಮಾನವನೆದೆಯ ಕಾಳಕೂಟದಲಿ
ಅಮೃತವನೆ ಹಾರೈಸಿ ಬಲಿರಕ್ತದಲಿ ಮಿಂದು

ಕಾದಿಹೆವು ಕಣ್ಣೀರು ತುಂಬಿ. ನಾಗರಿಕತೆಯ
ನಾಗಿನಿಯು ಪ್ರಗತಿನಾಮಕ ಫಣೆಯಮೇಲೆತ್ತಿ
ಚುಂಬಿಸಿಯೇ ಕೊಲ್ಲಲೆಳಸುತಿದೆ. ಹಿಂದಿನ ಬುತ್ತಿ
ಸವೆಯುತಿದೆ. ಇಂದಿಹ ಮಹಾತಪಸ್ಸಿನ ಚಿತೆಯ
ರಕ್ತಿಮ ವಿಭೂತಿ ಯೊಳೆ ಮುಂದಿನ ನವೋದಯದ
ಧವಳಿಯ ಪಿನಾಕಧರನೈ ತಹನು: ಮತ್ತೊಮ್ಮೆ
ಭಾರತಾಂಬೆಯು ಜಗದ ಬೆಳಕಾಗುವಳು;
ಹೆಮ್ಮೆ ಗೌರವಗಳಿಂದ ಜನಗಣದ ಕಟುನಿರ್ದಯವ
ಲೋಭ ಬುದ್ದಿಯ ಹೀನ ಕುಟಿಲತೆಯನುರೆ ನೀಗಿ
ಮೆರೆವಳು ತಪಸ್ವಿನಿಯೆ ಚಕ್ರವರ್ತಿನಿಯಾಗಿ!

ಕೆ.ವಿ.ಪುಟ್ಟಪ್ಪ


೩೯. ಬೇಲೂರಿನ ಶಿಲಾಬಾಲಿಕೆಯರು

ಶ್ರವಣಕೆ ಸಿಲುಕದ ಲಲಿತಾ
ರವ ಸುಖವಂ ರಸನೆಗೊದನವದನ್ನತ ದ್ರವಮಂ
ಎವೆಯಿಕ್ಕದ ನಯನಗಳಿಂ
ಸವಿವುದು ನೀವೆಂಬ ಮಾಯಗಾತಿಯರಿವರಾರ್

ಶೃಂಗಾರ ವಲ್ಲರಿಯೆ ಲತೆಯೊಡನೆ ಬಳುಕಿ ನೀ೦
ನ್ನತ್ಯಲಾಸ್ಯದಿನಾರನೋಲಿಸುತಿರುವೆ
ಮಾಧುರ್ಯ ಮಂಜೂಷೆ ಮಧುರತರ ಮೌನದಿಂ
ದಾರ ಚರಿತೆಗಳ ಶುಕಿಗುಸಿರುತಿರುವೆ
ಮುಗ್ಧ ಮೋಹನವದನೆ ಮುಕುರದೊಳ್ ನೋಡಿ ನೀ
ನಾರ ನೆನೆದಿಂದು ನಸುನಗುತಲಿರುವೆ
ಪ್ರಣಯಪ್ರರೋಹೆ ನೀ೦ ಪ್ರಿಯತರಾಕೃತಿಯಿಂದೆ
ರುಷೆನಿಂತಾರೊಳಭಿನಯಿಸುತಿರುವೆ
ಶಿಲ್ಪಿ ವರ ಕುವರಿಯರೆ ಸೌಂದರ್ಯ ಮುದ್ರಿಕೆಯರೆ
ದೇವ ದೇವನ ಸೇವೆಗೈ ತರ್ಪ ಸಾಧುಕುಲಮಂ
ಭಾವ ವಿನ್ಯಾಸ ವೈಕೃತಿಗಳಿಂ ಬೆರಗುವಡಿಸಿ
ಚಂಚಲತೆಗೆಡೆಯೆನಿಸಿ ನೀವಿಂತು ನಿಲುವುದೇಕೆ?

ಇನ್ನೆವರನೊಲಿದು ಬಾರದ ನಿಮ್ಮ ಮನದಿನಿಯ
ನಿನ್ನು ಬಹನೆಂದು ನೀ೦ ತಿಳಿವುದೆಂತು
ಅಗಣಿತ ಪ್ರೇಕ್ಷಕರೊಳಿಲ್ಲದಾ ಪ್ರೇಮಿ ಯಾ
ವಿಷಮ ಸಮಯದಿ ನಿಮಗೆ ದೊರೆವುದೆಂತು

ನಿಮ್ಮ ವದನದ್ಯುತಿಗೆ ಮರುಳಾಗಿ ಸೋಲದನ
ರಸಜೀವಿಯನ್ನು ತಾದರಿಪುದೆಂತು
ನಿಮ್ಮ ನೂಪುರರವಕೆ ಬೆರಗಾಗಿ ನಿಲ್ಲದನ
ಭಾವಜ್ಞನೆಂದು ನೀ೦ ಬಗೆವುದೆಂತು?
ರೂಪವಿಲ್ಲದನೇನೊ ನಿಮ್ಮಿನಿಯನಲ್ಲದಿರೆ ತಾಂ
ರೂಪವಿಭವದಿನಿತ್ತಲೈತಂದು ಮೆರೆಯೆ ನಿಮ್ಮ
ಲಾಸ ಲಾವಣ್ಯಗಳ ಧರೆಯಿಂದೆ ಸಾರ್ವುವೆನುತೆ
ಮರೆಯಿಂದ ಕಂಡು ನಿಮ್ಮೊಲಪಿಂದೆ ನಲಿವನೇನೋ

ಶ್ರುತಗಾನಮಭಿರಾಮವಾದೊಡಶ್ರುತಗಾನ
ಮಭಿರಾಮ ತರವೆನುತೆ ರಸಿಕರೊಸೆವರ್
ರಾಮಣೀಯಕ ಕುಲಮೆ ನಿಮ್ಮೆದೆಯ ನುಡಿ ಕಿವಿಯ
ನಾನದೊಡಮೆಮ್ಮೆದೆಯ ಸೇರಲರಿಗುಂ
ಅದರಿಂದಮಿ ನಿಮ್ಮಭಿಮತಂಗಳನರಿತು
ಜಾಣರೆನಿಬರೊ ನಿಮ್ಮ ಪೊಗಳಿ ನಲಿವರ್
ವರ್ಷಶತಕಗಳಿ೦ದೆ ಕುಂದದಿಹ ಲಾವಣ್ಯ
ದಂತರಂಗವನಿಂತು ಬಗೆವೆನೀಗಳ್
ಬಿದಿಯ ಕರಚಾತುರಿಯೊಳನಿತಿನಿತು ಸುಳಿದು ಸರಿವ
ಮನುಜ ಮಾನಸದೊಳತಿ ಚಿತ್ರದಿಂ ಚರಿಸಿ ಮೆರೆವ
ಭುವನ ಜೀವನ ಸಸ್ಯಕಮೃತಬಿಂದುಗಳನೆರೆವ
ಪರತತ್ತ್ವ ಮಾಧುರಿಯನಿನಿಸು ನೀ೦ ತೋರ್ಪಿರಲ್ತೆ

ಆನಂದನಿಧಿಯಾ ಪರಾತ್ಪರನೆನಲ್ ಜಗದೊ
೪ಾನಂದವೀವರಂ ಕಳೆಯಬಹುದೇ
ಪ್ರೇಮಮಯ ಮೂರ್ತಿಯಾಪರದೇವನೆನುತಿರಲ್
ಪ್ರೇಮಾಂಕುರಂಗಳಂ ಮುರಿಯಲಹುದೇಂ
ಸೌಂದರ್ಯ ಸರ್ವಸ್ವ ನಿಧಿಯಾತನೆನುತಿರಲ್
ಸುಂದರಾಕಾರರೊಳ್ ಮುಳಿಯಲಹುದೇಂ
ಜೀವನಾಧಾರನವನೆನುತೆ ಪೊಗಳುತ್ತಿರಲ್
ಜೀವನೋಲೆಯರಂ ಪಳಿಯಲಹುದೇ೦
ಜಗದುದಯ ಕಾರಣನ ಮೈ ಮೆಗಳನರಿತು ನೆನೆದು
ಜಗದ ಯಾತ್ರೆಯ ನಡೆವ ಜನಕೆ ನಿಮ್ಮಂದದಿಂದಂ
ಸೊಗಮಿನಿಸು ತೋರಿ ಸಂಸ್ಕೃತಿ ಪಥಂ ಸುಗಮವೆನಿಸಲ್
ಅದುವೆ ದೇವಂಗೆ ನೀಮೆಸಗುವಾ ಸೇವೆಯಲ್ತೆ



ವಿಶ್ವ ತಂತ್ರ ರಹಸ್ಯ ಬೋಧನೋತ್ಸಾಹಮಿದು
ವಿಶ್ವ ಶಿಲ್ಪಿಯ ಸಭೆಯೊಳುಚಿತಮೆನಿಕುಂ
ವಿಗತ ಸೌಮನಸರುಂ ವಿಪರೀತ ಚರಿತರುಂ
ವಿಮುಖತೆಯನಾನಲದರಿಂದ ನಿಮಗೇ೦
ಮೊಳಗುಗೆಲೆ ಸರಳೆಯರೆ ನಿಮ್ಮ ಮೃದು ಪದವನನು
ಕರಿಪ ನಾದಿತ್ರಗಳ ಸೂಕ್ಷ್ಮದಿಂದೆ
ನೆಳಲನಿತ್ತೀ ಲತಾವಳಿ ನಿಮ್ಮ ನಾದರಿಸು
ಗೆಂದಿಗುಂ ತಂಬೆಲರ ಸುರಭಿಯಿ೦ದೆ

ನಗುತ ನಲಿಯುತ ಮೆರೆದು ಹಾವಭಾವಗಳನೆಸೆದು
ಮಂಜು ಜಲ್ಪವ ತೋರಿ ಮುಗ್ಗ ವೀಕ್ಷಣವ ಬೀರಿ
ಕಠಿನರಾಗದೆ ಕಾಲದೌ ಷ್ಟದಿಂ ಕುಂದುವಡದೆ
ಶುಷ್ಕ ಹೃದಯರ್ಗೆ ನೀಂ ಸೌಹೃದನ ನೀಡುತಿಹುದೌ

ಅವ್ಯಕ್ತ ನಿನದದಿ೦ದಕಲಂಕಿತಾಂಗದಿಂ
ದನ್ಯೂನ ತರುಣತೆಯಿನಮಿತಯಶದಿಂ
ಚಿರಕಾಲಮೆಸೆವುದೇ ಚಿತ್ರವೇಧನಿಯರಿರ
ಕುದಿವ ಲೋಕಕೆ ಮುದದ ತಣಿವ ಬೀರಿ

ಸೌಂದರ್ಯವೇ ವಿಶ್ವತಮಾ ಪರತತ್ವ.
ಭಾಸವೇ ಸೌ೦ದರ್ಯಮೆನುತ ಸಾರಿ
ನಿಮಗೆ ಜನ್ಮವನಿತ್ತ ಚಿತ್ರ ಚತುರರ ಚಿತ್ತ
ದೇಕಾಗ್ರ ಭಕ್ತಿ ದೀಪಿಕೆಯ ಬೆಳಗಿ

ಪೊಳೆಯಿರೌ ಸರಸ ಜೀವನಮಂತ್ರ ಗುರುಗಳೆನಿಸಿ
ಪಳಿಯಿರೌ ಮಧುರಭಾವವ ಪಳಿನ ವಿಕೃತಮತಿಯಂ
ಕಳೆಯಿರೌ ರಸಕಲಾ ವಿಮುಖತೆಯ ಜನದ ಮನದಿಂ
ಬೆಳೆಯಿರೌ ಪ್ರೇಮ ಧರ್ಮೊದ್ಭರಣ ವಿಧಿಯೊಳೆಂದುಂ

ಡಿ. ವಿ. ಗುಂಡಪ್ಪ



೪೦. ವನಸುಮ


ವನಸುಮದೊಲೆನ್ನ ಜೀ
ವನವು ವಿಕಸಿಸುವಂತೆ |
ಮನವನನುಗೊಳಿಸು ಗುರುವೇ ಹೇ ದೇವ ||ಪ||
ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯಿ ಬಿಡದೆ ||ಅನು||

 ಕಾನನದಿ ಮಲ್ಲಿಗೆಯು
 ಮೌನದಿಂ ಬಿರಿದು ನಿಜ
 ಸೌರಭವ ಸೂಸಿ ನಲವಿಂ
 ತಾನೆಲೆಯ ಪಿಂತಿರ್ದು
 ದೀನತೆಯ ತೋರಿ ಅಭಿ
 ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

 ಉಪಕಾರಿ ನಾನು ಎ
 ನ್ನುಪಕೃತಿಯು ಜಗಕೆಂಬ
 ವಿಪರೀತ ಮತಿಯನುಳಿದ
 ವಿಪುಲಾಶ್ರಯವನೀವ
 ಸುಫಲ ಸುಮಭರಿತ ಪಾ
 ದಪದಂತೆ ನೈಜಮಾದೊಳ್ಪಿನಿಂ ಬಾಳ್ವೊವೊಲು

ಡಿ. ವಿ. ಗುಂಡಪ್ಪ


೪೧. ತೆಂಗಾಳಿ


 ಬಾರ ಮು೦ಬೇಸಗೆಯ ಮೆಲುನಡೆಯ ಮಾರುತ
 ಬಾರಯ್ಯ ಮಧುಮಾಸದೈತರವ ಸಾರುತ
 ಬಾರ ಲೋಕಕೆ ಹರಿಸದೈಸಿರಿಯ ಬೀರುತ
 ಬಾರ ಸೊಗಸಿನ ತೆರನ ಜನಕೆಲ್ಲ ತೋರುತ.

 ಮೊದಲ ವತ್ಸರದ ಹಣ್ಣೆಲೆ ಬಣ್ಣ ಮಾಸಿ
 ಉದುರ್ವ ದಿನ ಬಹುದನರೆಭಯದಿ ಹಾರೈಸಿ
 ಇದಿರ್ನೋಳ್ಪದರ ಮೇಲೆ ಮೆಲುಮೆಲನೆ ಬೀಸಿ
 ಸದಯ ಬೆಸುಗೆಯ ಬಿಡಿಸಿ ಅದನು ಕಡೆಹಾಯ್ಸು.

 ತರುಲತಾರಾಜಿಗಳ ಬಾಡಿರುವ ಮೆಯ್ಯ
 ಕರುಣಿ ಕೂರ್ಮೆಯ ತೋರುವೀ ನಿನ್ನ ಕೈಯ
 ಸರಸ ಸಂಪರ್ಕದಿಂ ನಲಿಸುತಕ್ಷಯ್ಯ
 ಪರಸತ್ತ್ವಲ್ಲಿ ತಳಿರ್ವಂತೆ ಹರಸಯ್ಯ

 ಎಲ್ಲ ಲತೆಗಳ ನೋಳ್ಪ ಮೊದಲಿಲ್ಲಿ ಬಂದು
 ನಲ್ಲ ನೀ ಮರೆದಿರಲು ವಿರಹದಲಿ ನೊಂದು
 ತಲ್ಲಣಿಸುವೀ ಮಲ್ಲಿಗೆಯನು ತರಿಸಂದು
 ಲಲ್ಲೆಯಿಂ ಸಂತೈಸಿ ಪೊರೆ ದೀನಬಂಧು.

ಎನ್ನ ಜೀವನ ನಿನ್ನ ಸೊಗದಿನಾವರಿಸು
ಹಣ್ಣೆಲೆವೊಲೆನ್ನ ಹಳೆಗನಸುಗಳ ಹರಿಸು
ಚೆನ್ನ ಹೊಸಬಾಳ ಹೊಸ ರಸಗಳನೊಸರಿಸು
ಚೆನ್ನ ಹೊಸ ತಳಿರು ಸುಮಫಲಗಳನು ತರಿಸು.

ಅರಿಯದವರಾವು ಎಮ್ಮಯ ಮನದ ನೂರು
ವಿರಸತೆಯ ತೊಟ್ಟುಗಳ ಕಳಚಿ ಅವ ತೂರು
ಮರಣದಲಿ ಜೀವನದ ಮೊಳೆಯಿಹುದ ತೋರು
ಪರಮಾತ್ಮನುಂಟು ಸುಖದೊಳಮೆಂದು ಸಾರು.

ಮೆಲುಮೆಲನೆ ಪಸರಿಸುತ ತೆಂಕಣಿಂ ಬಾರ
ಪಲವಿಧದ ಸಿಂಗರವ ವನಗಳಿಗೆ ತಾರ
ನಲವಿನಂಕೆಯ ನಿತ್ಯತೆಯ ತೋರು ಧೀರ
ಚೆಲುವು ದೊರೆಯಾಳ್ವುದನು ಸಾರೈ ಸಮೀರ.

ಶ್ರೀನಿವಾಸ
(ಮಾಸ್ತಿ ವೆಂಕಟೇಶ ಐಯಂಗಾರ್)


೪೨. ಕಸ್ಮ್ಯೆ ದೇವಾಯ?


ಅಂದಿನಾ ದೇವರುಗಳೆಲ್ಲ ಮಡಿದುರುಳಿಹರು
ಇಂದ್ರ ವರುಣರು ಧನದ ಮಿತ್ರ ಪೂಷಣರು-
ಸಂದಿದ್ದ ದೈವತ್ವದಗ್ಗಳಿಕೆ ಹೋಗಿಹುದು
ಅಂದಿನವರುನ್ನತಿಯ ಕಳಶ ಕೂಲಿಹುದು

ಮಾನವರ ಸುಪ್ರಖರ ಮನದ ಮೊನೆಯಲುಗಿನ
ಘಾತದಲಿ ಕಡುನೊಂದು ಸೋಲನೊಸ್ಸಿವರು
ಧ್ಯಾನ ಪೂಜೆಗಳನ್ನು ತಮಗೆ ಸಲ್ಲವು ಎಂದು
ಮಾತಿನೊಪ್ಪಿಗೆಯಿತ್ತು ಶರಣು ಬೇಡಿದರು

ಅಚ್ಚರಿಯ ಮೋಹದಲಿ ಆಗಸವ ನೋಡುತ್ತೆ
ಉಚ್ಚ ಕಂಠದಿ ಹಾಡಿದಾ ಭಕ್ತರಳಿದಿಹರು
ನಯದಿಂದ ಭಯದಿ೦ದಲವರನೊಲಿಸುವ ಪಾಡು
ಭುವಿಯಿಂದ ಜನದಿಂದ ತೊಲಗಿ ಹೋಗಿಹುದು

ಸಾಗರನ ಸುರನೀಲ ನೀಲಿಮತೆಯನು ನೋಡಿ
ಭೋರ್ಗರೆಯುತುರ್ಕುಮಾರ್ಭಟೆಯ ಕೇಳಿ
ನಾಲ್ದೆಸೆಯೊಳೊಡಿರುವಪಾರ ಗಂಭೀರತೆಗೆ
ಬಾಗಿಗೈಯುವ ವರುಣ ಪೂಜೆ ಕಾಣಿಸದು

 ನಭದೆಡೆಗೆ ಮೊಗವೆತ್ತಿ ಪೂಪತ್ರವೆರಚುತ್ತೆ
 ಕರುಣಿಸೈ ಪರ್ಜನ್ಯ ಎಂಬುದಿಲ್ಲಾಯ್ತು
 ಗುಡುಗು ಗರ್ಜನೆ ಕೇಳಿ ನಡುಗಿ ಬಲಿಯೊಪ್ಪಿಸುತೆ
 ಒಡೆಯ ರುದ್ರನ ರೌದ್ರವಿಳಿದ ಪರಿ ಪೋಯ್ತು

 ಗೋಧನವನುಳುಹಯ್ಯ ಹೆಚ್ಚಿಸೈ ಹೇ ಪೂಷ!
 ದವಸಧಾನ್ಯಗಳೀಯೊ ದೇವ ದೇವೇಶ!
 ಧನಕನಕ ವಾಹನವ ಕರುಣಿಸ್ಯೆ ಧನದ, ಭೋ
 ಘನರನರ್ಘರೆ, ಎಂಬ ಮೊರೆಯು ಕೇಳಿಸದು.

 ಅನ್ಯ ದೇವರ್ಕಳು ದಾಳಿಟ್ಟರೇರಿದರು
 ಸುಮನಸರು ಪರಬ್ರಹ್ಮ ಹರಿಹರಾದಿಗಳು
 ಇನ್ನೈದು ಸಾವಿರ ವರುಷವಾಳಿದರಿವರು
 ಇಂದಿವರ ಆಳಿಕೆಗು ಚ್ಯುತಿಯು ಬಂದಿಹುದು.

 ಹಳೆಯಕಾಲದ,-ತಂದೆತಾತದಿರ ದೇವರುಗ
 ಳಳಿದು ಹೋಗುವ ಕಡಿದು ಕಾಲ ಬರುತಿಹುದು
 ಇಳಿದಿಹುದು ಕಡುನಿಡಿದು ನೆಳಲೊಂದು ಮೇಲಿಂದ
 ಅಳಿಸಿಹೋಗುತಲಿಹುವು ಅವರ ಮೂರ್ತಿಗಳೂ.

 ಪೋಪವರ ಪದವಿಗಳಿಗಿನ್ನಾರು ಬಂದಪರೊ
 ಕೋಪಿಗಳೊ ಕರುಣಿಗಳೊ ತಿಳಿಸ ಕೋವಿದರೊ
 ಆರನರಸುತೆ ಹೋಗಿ ಹವಿಸನೀಯಲು ಬೇಕೊ
 ಆವ ಶೀಲವನವರು ಜಗದಿ ಬಿತ್ತುವರೊ.

 ಇಲ್ಲದಿರೆ ಬೇರಾವ ದೇವರೇ ಬಾರರೋ
 ಇಲ್ಲದೊಂದಕೆ ಹೆಸರನ್ನು ಕರೆಯುವೆವೋ
 ಇಲ್ಲದಿರೆ ಮಾನವನ ಸುಗುಣವೇ ದೈವವೋ
 ಎಲ್ಲಿಗೂ ಹರಿಯದಿಹ ಸಂಶಯವೆ ಕೊನೆಯೊ!

ವಿ. ಸೀ.


(ವಿ. ಸೀತಾರಾಮಯ್ಯ)


 

೪೩. ಕೋಗಿಲೆ


ಹಿರಿಮಂಜು ಬಿಟ್ಟಿಲ್ಲ
 ಚಳಿಗಾಳಿ ನಿಂತಿಲ್ಲ
 ಮೈ ನಡುಕ ಪೋಗಿಲ್ಲ
 ಇಬ್ಬನಿಯು ಸುರಿಮಳೆಯ ನಿಲ್ಲಿಸಿಲ್ಲ;

 ಶಿಶಿರ ಸಾಮ್ರಾಜ್ಯಕ್ಕೆ ಚ್ಯುತಿಯು ಬಂದಿಲ್ಲ;
 ಚ್ಯುತಿ ಬರುವುದೆಂಬೊಂದು ಚಿಹ್ನೆಯಿಲ್ಲ.
ತರಗೆಲೆಗಳುದಿರಿಲ್ಲ
 ತಾರೆಮೊಗವರಳಿಲ್ಲ
ತರುವೊಂದು ಚಿಗುರಿಲ್ಲ
 ಚಿಗುರ್ವಿಡಿವುದೆಂಬೊಂದು ಚಿಹ್ನೆಯಿಲ್ಲ;
 ಹಿಮಕರನ ಬಿಳಿ ಕಿರಣ ನಗುಬೀರುವಂತಿಲ್ಲ,
 ಬೆಳುದಿಂಗಳುಂಡಾರು ಆಡುವವರಿಲ್ಲ.
ಹಸುರಿನಿಸು ಕಾಣದಿಹ
 ಬರಲು ಕೊಂಬೆಗಳೇರಿ
ಮರದ ತುದಿಯನ್ನು ಸಾರಿ
 ಏಕಾಂಗಿ ನೀನೇಕೆ ಉಲಿಯುತಿಹೆ ಇ೦ತು?
 ಆವ ಸಂತಸ ನಿನದು ಹೇಳು ಕೋಗಿಲೆಯೇ!
 ಏಂ ಪ್ರಮತ್ತತೆ ಇಂದು ನಿನ್ನ ಕೂಗಿನಲಿ!
ಎತ್ತಲೇ೦ ಚೆಲುವಿಲ್ಲ
 ಸಂಗಡಿಗರಾರಿಲ್ಲ
 ಗಿಳಿವಿಂಡು ಗೊರವಂಕ
 ಹೋ೦ಬಕ್ಕಿ ಹಾಡುತಿಹ ಸರ ಕೇಳುತ್ತಿಲ್ಲ;
 ಆವ ಸೊಗ ಬರುವುದನು ನೀನಲ್ಲಿ ಕಾಣುತಿಹೆ,
 ನಡುಚೈತ್ರವೆಂಬಂತೆ ಉಲಿಯುತಿಹೆಯೇ!
ನಿಡುಬಯಲನಿರಿಯುತಿಹೆ
ದೆಸೆಗಳನು ತುಂಬುತಿಹೆ
ಕಿವಿಗಳನು ಬಿರಿಸುತಿಹೆ
 ಎದೆವೊಕ್ಕು ಆಸೆಗಳ ಕೆರಳಿಸುತ್ತಿದೆಯೇ!
 ಬಂದೀತು ಬಂದೀತು ನಗುಗಾಲ, ಅಕ್ಕ ಓ
 ಎಂದು ಕಂಠವನೆತ್ತಿ ಹಾಡುತಿಹೆಯೇ!
ನಮಗೆ ಗೋಚರಿಸದಿಹ
ಪರರಾರು ಅರಿಯದಿಹ
ನೀನೊರ್ವ ಕಾಣುತಿಹ
 ಹೊಸಜೀವ ಸಂಚಾರವಾವುದಿಹುದೊ!
 ನೆಲದಿಂದ ಬೇರಿಂಗೆ, ಬೇರಿ೦ದ ತರುವಿಂಗೆ
 ಜೀವರಸವೇರುವುದ ಕಾಣುತಿಹೆಯಾ!

ಒಣಗಿರುವ ಶಾಖೆಗಳ
 ಶಾಖೆಯುಪಶಾಖೆಗಳ
ನಾಳನಾಳದಿ ಹರಿದು
 ಎಳೆಗೆಂಪು ಮೋಸುಗಳು ಕುಡಿಯಿಟ್ಟವೇನು ?
 ಹಸುಳೆಕುಡಿ ಮೈಗಂಧ ನೀ ಸವಿದೆಯೇನು ?
 ಶಿಶಿರವಳಿವುದು ಚೈತ್ರ ಬಹುದೆಂಬೆಯೇನು ?

ವಿ. ಸೀ.
(ವಿ. ಸೀತಾರಾಮಯ್ಯ)



೪೪. ಅಭೀಃ


ಕಾಡ ಮೌನವ ಸೀಳಿ ಹಬ್ಬುತಿದೆ ಕೇಳುತಿದೆ
 ಬಿತ್ತರದ ದಿಕ್ತಟಗಳಡ್ಡಿ ದಾಟುತಿದೆ!
 ಉಳಿದೆಲ್ಲ ನುಡಿಗಳನ್ನು ಮುಳುಗಿಸುತೆ ಮೊಳಗುತಿದೆ
 ಬಾಳ ಹೆದ್ದಾರಿಯನು ಹಿಡಿದೆತ್ತಿ ತೋರುತಿದೆ
 - ಅಭೀಃ...! ಅಭೀಃ! ಅಭೀಃ! ಎಂಬಮೃತವಾಣಿಯಿದು
 ಮೂವತ್ತು ಶತಮಾನಗಳ ಮೆಟ್ಟಿ ಕೇಳುತಿದೆ
 ಕಾಲದಾ ಕರೆಯಂಚಿನಾಚೆಯಿಂದ.

 ಯಜ್ಞಶಾಲೆಗಳಿ೦ದ ಬಲಿಯಿಂದ ಸೆರೆಯಿಂದ
 ತೋಂಡು ಮಲೆತೆಲ್ಲವನು ತುಳಿದತ್ತಣಿಂದ
 ಕಲ್ಲುಗಾಣಗಳಿಂದ ಸಿಲುಬೆಗಳ ನೋವಿಂದ
 ವಿಷ ಪಾತ್ರೆಯೊಡಲಿಂದ ಸುಡುವುರಿಯ ಮಡಿಲಿಂದ
 - ಅಭೀಃ! ಅಭೀಃ...! ಅಭೀಃ! ಎಂಬ ನುಡಿ ಏಳುತಿದೆ
 ಹೇಡಿತನದಳುಕುಗಳ ಓಡಿಸಿದೆ ಚೆದರಿಸಿದೆ
 ವೀರಸಂಜೀವನವ ಊಡಿಸುತಿದೆ!

 ಬಲಹೀನರೆಂದೆತ್ತಲಾತ್ಮವನು ಗಳಿಸಿದರು?
 ಬಲಕಾಗಿ ಕಾಯ್ದವರು ಏಗೈವರು?
 ಚಲಿವೊತ್ತ ಅಧಿಕಾರದ೦ಡಲೆಗೆ ಬೆದರುವರು
 ಎಂದೇನ ಸಾಧಿಸುವರೆಂದೆನ್ನ ಕೇಳುತಿದೆ
 - ಅಭೀಃ! ಅಭೀಃ! ಅಭೀಃ! ಎಂಬ ಸಗ್ಗದ ಬಿತ್ತು
 ನರರ ಎದೆವೊಲಗಳಲಿ ಬೇರಿಟ್ಟು ಮೊಳೆಯುತಿದೆ!
 ಬಲದ ತಿರುಳನು ಬಲಿಸಿ ಬೆಳಸುತ್ತಿದೆ!
 ನಿಲ್ಲಿಸದು ಕೂಡಿಸದು ಮಲಗಿಸದು ಕೆರಳಿಪುದು
 ಆಡುವಾಟದ ನಡುವೆ ಕೂಟಗಳ ನಡುವೆ!

ಆಸರಲಿ ಕಣ್ಣೆವೆಯು ಮುಚ್ಚಿ ಬರುತಿರಲತ್ತ
ಹೊಸತವಕದೊತ್ತಿನಲಿ ಮೇಲೆತ್ತಿದೆ!
- ಅಭೀಃ! ಅಭೀಃ! ಅಭೀಃ! ಇದೆ ಮಂತ್ರವೆನ್ನುತ್ತೆ
ಎಂಟು ದಿಕ್ಕಿನ ಗಾಳಿಗುಸಿರೆತ್ತಿ ಊದುತಿದೆ!
ನೀಳ್ಗೊರಲ ತುತ್ತುರಿಯನೂದಿಸುತಿದೆ!
ಯುಗದಗಲ ಜಗದಗಲ ಎಡರೆದ್ದು ನಿಂತಾವು!
ಸಂರಾಜರಬ್ಬರವು ನಡುಗಿಸೀತು!
ಕುಲವೆಂಬ ಮತವೆಂಬ ಕೆಳೆಯೆಂಬ ನಾಡೆಂಬ
ಮಮತೆಗಳು ದಾರಿಯಲಿ ಕತ್ತಲಿಟ್ಟಾವು!
- ಅಭೀಃ! ಅಭೀಃ! ಅಭೀಃ! ಎಂಬ ಧುವ ತಾರಗೆಯು
ಕತ್ತಲಲಿ ತವಿಲಲ್ಲಿ ದಿಕ್ಕನ್ನು ಕಾಣಿಪುದು
ನಿಜಕಿಟ್ಟ ಮುಸುಕೆತ್ತಿ ಮರೆ ತೆರೆವುದು
ಮಣಿಯದಿಹ ಮನವೊಂದು ಸಾಧಿಸುವ ಹಟವೊಂದು
ನಿಜದ ನೇರಕೆ ನಡೆವ ನಿಶ್ಚಲತೆಯೊಂದು
ಅನ್ಯಾಯಕೆಂದೆಂದು ಬಾಗದೆಚ್ಚರವೊಂದು
ಮರುಕಕ್ಕೆ ಪ್ರೇಮಕ್ಕೆ ಚಿರ ತೆರೆದ ಎದೆಯೊಂದು
- ಅಭೀಃ! ಅಭೀಃ! ಅಭೀಃ! ಎಂಬ ತಾರಕವಾಕ್ಯ
ನಾಡಿಯನು ನಡಸುತಿರೆ, ಬಾಳನ್ನು ತಿದ್ದುತಿರೆ
ನಡೆ ಮುಂದಕೆನ್ನು ತ್ತೆ, ಕೂಗುತಿವೆ ನುಗ್ಗಿಸುತಿವೆ.

ವಿ. ಸೀ.

(ವಿ. ಸೀತಾರಾಮಯ್ಯ)

೪೫. ನವೀನ

ನಾಡಿನ ಪುಣ್ಯದ ಪೂರ್ವದಿಗಂತದಿ
ನವ ಅರುಣೋದಯ ಹೊಮ್ಮು ತಿದೆ!
ಚಿರ ನೂತನ ಚೇತನದುತ್ಸಾಹದಿ
ನವೀನ ಜೀವನ ಚಿಮ್ಮುತಿದೆ!
ಅಭಿನವ ಮಧುಕೋಕಿಲ ಕಲಕಂಠದಿ
ಸ್ವರಸುರಚಾಪಗಳುಣ್ಮುತಿವೆ!
ಶ್ಯಾಮಲ ಕಾನನ ಸುಮಸಮ್ಮೇಲದಿ
ಇಂಚರ ಸಾಸಿರ ಪೊಣ್ಮುತಿವೆ!
ಕಿವಿ ಕಣ್ಣಾಗುತಿದೆ!
ಕಣ್ ಕಿವಿಯಾಗುತಿದೆ!

ಭೂಮವ್ಯೋಮದ ನೀಲಾಂಗಣದಲಿ
ಕೆಂದರೆ ಮುಗಿಲಿನ ರಂಗೋಲಿ
ರಂಜಿಸುತಿದೆ ಹೊಳೆ ತೆರೆಯಚ್ಚೊತ್ತಿದ
ಕೆಂಪಗೆ ನುಣ್ಳಲನು ಹೋಲಿ!
ಹಿಮಮಣಿ ಸಿಂಚಿತ ತೃಣವಿಸ್ತಾರದಿ
ನೇಸರು ಕಿಡಿಬಲೆ ನೆಯ್ಯುತಿದೆ;
ವಿಹಂಗ ದಂಪತಿ ತರುಶಾಖಾಗ್ರದಿ
ಪ್ರೇಮಾಲಾಪನೆ ಗೈಯುತಿದೆ;
ನವೀನ ಹೃದಯಗಳೇಳಿ,
ನವೀನ ಗಾನವ ಕೇಳಿ!
ನಾಡಿನ ಪುಣ್ಯದ ಪೂರ್ವ ದಿಗಂತದಿ
ನವ ಅರುಣೋದಯ ಹೋಮ್ಮುತಿದೆ!
ಚಿರ ನೂತನ ಚೇತನದುತ್ಸಾಹದಿ
ನವೀನ ಜೀವನ ಚಿಮ್ಮುತಿದೆ!

ಕ. ವಿ. ಪುಟ್ಟಪ್ಪ

೪೬. ಯುಗಾದಿಯ ಹಾಡು

ಏಳಿ ರವಿಯು ಮೂಡುವೊಳಗೆ
ಬಾನ ತಳಿರು ಬಾಡುವೊಳಗೆ
ಇಂದು ಮಧುರ ಜನವ,ಜಗವ
ಮುದದಿ ತೇಲಿಸುತ್ತ ಬರುವ!
ಇಂದು ಯು- ಗಾದಿಯು,
ಹೊಸ ವರ್ಷದಾದಿಯು!

ಬೇವು ಚಿಗುರ, ಹೂವು ಹಣ್ಣ,
ಮಾವು ತಳಿರ ತನ್ನಿರಣ್ಣ
ದಿಟ್ಟ ಕಚ್ಚೆ ಹಾಕಿ, ಶಿಖೆಗೆ
ದವನ ಸುರಗಿ ಸೆಕ್ಕಿರಣ್ಣ.
ಹಹ್ಹೊ! ಯುಗಾದಿಯು,
ಹರುಷಕೆಲ್ಲ ಗಾದಿಯು!
ಹಳೆಯದೆಲ್ಲ ಮರೆಯಿರೈ,
ಹೊಸದು ಬಾಳ ತೆರೆಯಿರೈ,
ಕಳೆದ ವರುಷಕಿಂದು ಒಂದೆ
ಕಣ್ಣ ಹನಿಯ ಸಲಿಸಿರೈ.

ಮುಪ್ಪು ಹರೆಯ ಮರೆಯುತ,
ಬೆಪ್ಪ, ಜಾಣ ಬೆರೆಯುತ-
ಲಗ್ಗೆ ಚೆಂಡು, ಚಿಣ್ಣಿ ಕೋಲು,
ಏಣಿ ಉಯ್ಯಲಾಡಿರೈ,

ಹಬ್ಬದೂಟ ಉಣುವ ಮುನ್ನ
ಬೇವು ಬೆಲ್ಲ ಸವಿಯಿರಣ್ಣ:
'ನೂರು ವರುಷ ಬಾಳುವ,
ಸಾವ ದೂರ ಮಾಡುವ,
ವಜ್ರಕಾಯರಾಗುವ,
ಸಿರಿಯ ಸುಖವ ಕಾಣುವ
ಎಂದು ಬೆಲ್ಲ ಮು೦ದು ಮಾಡಿ
ಬೇವು ಬೆಲ್ಲ ಮೆಲ್ಲಿರಣ್ಣ.

ಹಿರಿಯ ಜನಕೆ ನಮಿಸಿರಯ್ಯ,
ಹರಸಿ 'ಸುಖಿಸಿ' ಎಂಬರಯ್ಯ
ಗಂಟೆನಾದ ಕೇಳಿರೈ,
ಗುಡಿಗೆ ನಡೆವ ಬನ್ನಿ ರೈ.
ಭಕ್ತಿಗೂಡಿ ನಲವನದುಮಿ,
ಆಸೆ ಸಲಿಸು, ಭಯವನೊರಸು,
ಇಂಥ ಹಬ್ಬ ನೂರ ಕರೆಸು
ಎಂದು ಕರವ ಮುಗಿಯರೈ.

ಅಕ್ಕ! ಬಲ್ಲೆ ನಿಮ್ಮ ಮನವ
ಹಳೆಯ ವರುಷದಳಲ ನಲವ
ನಿಂದು ನೆನೆದುಕೊಳ್ಳಿರಯ್ಯ,
ಮುಂದ ನೋಡಿ ಇರುಳ ಕಂಡು,
ಬೆಳಕನರಸಿ ದುಗುಡಗೊಂಡು
ಅಳಲಿ, ಬೆದರಿ, ಸುಯ್ವಿರಯ್ಯ,
ಬೆದರಲೇಕೆ?
ಸುಯ್ಯಲೇಕೆ?
ಭುಜವ ತಟ್ಟಿ ನಿಲ್ಲಿರಯ್ಯ.
ನಮ್ಮ ಹಕ್ಕು ಹರುಷವಯ್ಯ,
ಹೋದುದೆಲ್ಲ ಹೋದುದೈ.

ಹೊಸದು ಬಾಳು ನಮ್ಮದೈ,
ಇಂದು ಯು-ಗಾದಿಯು,
ನಮ್ಮ ಒಸಗೆಯಾದಿಯು!

ಪು. ತಿ. ನರಸಿಂಹಾಚಾರ್



೪೭. ಕನ್ನಡತಾಯ ನೋಟ


ಹಿರಿಯರಿರ, ಕೆಳೆಯರಿತ, ಅಕ್ಕತಂಗಿಯರಾ, ಅಣ್ಣತಮ್ಮದಿರಾ,
ಒಸಗೆನುಡಿ ತಂದಿಹೆನು ನಾನೊಂದ, ತಾಯಿಂದ, ಸಿರಿಯ ತಾಯಿಂದ
ಕೇಳುವಿರ ಕಿವಿಗೊಟ್ಟು, ತಾಳುವಿರ ಎದೆನೆಟ್ಟು, ತಾಳಿ ಬಾಳುವಿರಾ?
ಕಣ್ಣಾರ ಕಂಡೆನವಳನು ಕಂಡು, ತಂದಿಹೆನು, ಕೇಳಿ,
ಅವಳೆನ್ನೋಳಾಡಿದುದನಾಡುವೆನು ನಿಮ್ಮಲ್ಲಿ, ಕೇಳಿ,

ಬಳಸಿ ಬಂದೆನು ಸುತ್ತ ಕನ್ನಡದ ನಾಡುಗಳ ಸಿರಿಯ ನೋಡುತ್ತ,
 ತಾಯಡಿಯ ಹುಡಿಯ ತಲೆಗಾನುತ್ತ, ಹರಕೆಯ ಪವಿತ್ರ ಯಾತ್ರೆಯಲಿ.
 ಏನು ಚೆಲುವಿನ' ನಾಡು! ಚೆಲುವು ಚೆಲ್ಲುವ ನಾಡು! ಕನ್ನಡದ ನಾಡು!
 ಏನು ಚಿನ್ನದ ನಾಡು! ನಮ್ಮೊಲುಮೆಯಾ ನಾಡು! ನಮ್ಮಿನಿಯ ನಾಡು!
 ಕಾವೇರಿಯಿಂದಮಾ ಗೋದಾವರಿಯ ವರೆಗೆ ಚಾಚಿರುವ ನಾಡು!
 ಬಳಸಿದೆನು, ಸುತ್ತಿದೆನು, ಕಣ್ದಣಿಯ ನೋಡಿದೆನು, ಕುಣಿದು ಹಾಡಿದೆನು:
 ಕೆಳಗೆ ಬೆಳೆಹೊಲ ಕಪ್ಪು, ಮೇಲೆ ಬಾಂಬೊಲ ಕಪ್ಪು, ಬೆಟ್ಟಗಳು ಕಪ್ಪು,
 ಕಾರ್‌ಮೋಡಗಳು ಕಪು, ಹೊಳೆ ಕೆರೆಯ ಮಡು ಕಪು, ತಾಯ ಕಾಲ್ ತೊಳೆವ
 ಉಪ್ಪು ಕಡಲದು ಕಪ್ಪು, ಜನ ಕಪ್ಪು- ಏನೆಂದೆ? ತಪ್ಪು, ತಪ್ಪು!
 ಮೂಡ ಪಡುವಲು ತಿರುಗು, ಬಡಗ ತೆಂಕಲು ತಿರುಗು, ಕರ್-ನಾಟದಲ್ಲಿ,
 ನಿಮ್ಮೂರ ಹೆಣ್ಣುಗಳ ಕಣ್-ನೋಟ, ತಣ್-ನೋಟ ಕರ್ಪು, ಬಲು ಕರ್ಪು!
 ಕರ್ಪೊ, ಬೆಳ್ಪೋ ಕಾಣೆ, ಕನ್ನಡದ ಕಣ್ಣೋಟ- ಕೂರ್ಪು, ಆರ್ಪು!
 ಓ ತಾಯೆ, ಕನ್ನಡದ ಪೆರ್‌ - ತಾಯೆ, ನಮ್ಮಮ್ಮ, ದೇವಿ, ಸಾಮ್ರಾಜ್ಞಿ,
 ಸುಳಿಗುರುಳು, ನಗೆಗಣ್ಣು ಏನು ಕಪ್ಪೆ ನಿನಗೆ - ಮುತ್ತಿಡುವ ಕಪ್ಪು!
 ನಿನ್ನ ಕಲಿಗಳ ಕೂರ್ಪು, ಕೆಚ್ಚೆದೆಯ ಕಟ್ಟಾಳ ಕೂರ್ಪು, ನೆಚ್ಚಾರ್ಪು,
 ಆರು ತಡೆಯಲುಬಹುದು- ಪುಲಕೇಶಿ ಹರ್ಷರೇ ಹೊಯ್ತು ಸಾರುವರು.
 ಕರ್ಪಿರಲಿ, ಕೂರ್ಪಿರಲಿ, ನಿನ್ನ ಬೆಳ್ಪನು ಹೇಳು- ಕೂರಸಿಯ ಮಿಂಚು,
 ಕಾರ್-ಮಿಂಚು, ಪೆಣ್ಮಣಿಗಳಾ ಕಣ್ಣ ನುಣ್ಮೆಂಚು, ಅರಿದರಾ ಕೂರ್-ನೋಟ

ಮಿಂಚು!

ಮೆಲ್ಲ ಮೆಲ್ಲನೆ ತೇಲಿ, ಆಳದಲಿ ಮಲೆಯೆಡೆಯೊಳಲುಗದೆಯೆ ಅಲುಗಿ,
ಕಡಿದು ಬಂಡೆಗೆ ಬಂದು, ನೆಗೆದು ಬೆಳ್ಳ೦ಗೆಡೆವ ನೀರ್-ಬೀಳ ಬೆಳ್ಪು!
ಕಡೆದ ನೊರೆ, ಚಿಗಿನ ನೊರೆ, ತೂರು ನೊರೆ, ಕುದಿವ ನೊರೆ, ಬೆಳ್ಪಿನೊಳ್ ಬೆಳ್ಪು!
ಆ ಬೆಳ್ಪು, ಆ ತೆಳ್ಪು, ಆ ಮೆಲ್ಕು-ನಿನ್ನ ಮಕ್ಕಳ ಬಾಳಿನೊಳ್ಪು;
ನೀರ್-ಬೀಳ ಬೆಳ್ನೊರೆಯ ಬಿಸಿಲ ಬೆಳ್ದಿಂಗಳಾ ಮಳೆಬಿಲ್ಲ ತಳ್ಪು!
ಬೆಳ‍ಗೊಳವೊ, ತೀರ್ಥಗಳೊ, ಧರ್ಮಧರ್ಮದ ತಿರುಳೊ, ಪಾಡುವರ ಪುರುಳೋ,
ಒಳ್ಗನಡದ ಕಲೆಯೊ, ಕುಸುರಿಗೆಲಸದ ಸಿಲೆಯೊ, ಆ ನಯವೊ, ಮೆರುಗೋ!
ನಿನ್ನ ಚಿಣ್ಣರ ಸೊಬಗೊ, ಬೆಡಗೊ, ಮೆಲ್ಲೆದೆ ತಣ್ಪೊ, ಕೊಡುಗೈಯ ಬಿಣ್ಪೋ!
ಓ ಎನ್ನ ತಾಯಿ, ಕನ್ನಡ ತಾಯಿ, ನಮ್ಮವ್ವ, ದೇವಿ, ಸಾಮ್ರಾಜ್ಞಿ,
ನಿನ್ನನರಸುತ ಸುಳಿವ, ನೋಂಪಿಯೆನೆ ನಿನ್ನೊಲುಮೆ-ನಾಡನೊಳಕೊಳುವ,
ನಿನ್ನ ಚೆಲುವನು ಸವಿವ ಮಗುವಾರು ತಣಿಯದನು, ಹಾಡಿ ಕುಣಿಯದನು.
ಭಕ್ತಿಯಲಿ ತಲೆದೂಗಿ ಬಾಗಿ ಮಣಿಯದನು!


ಚೆಲುವು ಕಣಿ ಕಾರ್ವಾರವೆದೆ ತುಂಬಿ, ಗೋಕರ್ಣದಲ್ಲಿ ಮಿಂದು, ಸಂದು,
ಉಡುಪಿಯಲ್ಲಿ ಕೃಷಂಗೆ ಕೈ ಮುಗಿದು, ಮಂಗಳೂರಿನ ಒಂದು ನಂಟರಲಿ ನಿಂದು,
ಚಾರ್ಮಾಡಿ ಘಾಟಿಯನು ಬಳಬಳಸಿ ಮೇಲೇರಿ ಬಂದವನು ಕಂಡೆ, ಕಂಡೆ!
ಮೇಲೆ ತಿಳಿಯಾಕಾಶ, ಸುತ್ತಲೂ ಬೆಟ್ಟ-ಸಾಲ್-ತೋಳ ತೆಕ್ಕೆಯಲಿ
ಕಣಿವೆಯೇರುವ ಕಾಡು, ದಟ್ಟಡವಿ, ಒಮ್ಮೊಮ್ಮೆ ಹಕ್ಕಿಗಳ ಹಾಡು,
ಮರದ ಮರೆಯಲಿ ದುಮುಕುವಬ್ಬಿಗಳ ದಬ್ಬಿ ಹರಡಿದ ಕೂಗು ಕೊರಲು
ಕಂಡೆನಾಕೆಯನಲ್ಲಿ, ದೂರದಲಿ, ಕಣ್-ಪುಣ್ಯ ಮಿಂಚಿ ಮರೆಯಾಯ್ತು!
ಕನ್ನಡದ ಆ ನೋಟ, ದೇವಿಯಾ ದರ್ಶನಂ ಪೊಳೆದು ಬಯಲಾಯ್ತು!
ಎವೆ ಹೊತ್ತಿನಾ ನೋಟ, ಸವಿನೋಟ, ಸವೆಯದೆದೆ-ಚಿಮ್ಮುತಿಹುದಿನ್ನೂ!
ಅಮೃತಲೋಕದ ಮಾತೆ, ಅಳಿಯದಳ್, ಬಾನ್-ಬಾಳ ಪೆರ್ಮೆಗಳ ತಾಯಿ,
ತಲೆಯಲ್ಲಿ ಪೊನ್ನ ಮುಡಿ, ಪದಿದರಿಲ ಪೆಂಪು, ಬೆಳ‍್ದಾವರೆಯು ಪೊಂಗಯ್!
ಸುತ್ತಲುಂ ಪೊನ್ನಾಡ ಕನ್ನಡದ ಪರ್ಮೆನಡಿಗಳ್, ಸಾವನೊದೆದು ಬೆಳಗಿ,
ಕನ್ನಡದ ಮಕ್ಕಳೆ ಕನ್ನಡದ ಪಾಲೆರೆದು ಬಾಳ‍ಗೆ ಬಾಳ್ ಪೊಯ್ದು,
ಬಾಳ್ವವರು, ಮೆರೆವವರು, ಪೆರ್-ನೋಟ! ಪಿರಿಯ ತಾಯ್, ಪಿರಿಯ ಮಕ್ಕಳ್!
ಕಪ್ಪು ಹೆಪ್ಪಿನ ಕುರುಳ ಕರ್ಮುಗಿಲ ಬಸಿರಿಂದ ತೊಟ್ಟನೊಡೆಹೊಮ್ಮಿ,
ಬಾನ ಈ ಕರೆಯಿ೦ದ ಆ ಕರೆಗೆ ಚಿಮ್ಮಿ, ಒಡನಡಗುವುದೆ ತೇಜಂ,
ಆ ತೇಜುದುರಿಯಂತೆ ಕಣ್ಣುಳ‍್ಕಿ, ಹೊರಗಡಗಿ, ಒಳಗಿರ್ದಿಪುನ್ನುಂ.
ಇದೊ ಬಂದೆನೀ ಹಾಳು ಹಂಪೆಗಿಂದರಸುತ್ತ,ಒಳಗಿರ್ಪುದಿನ್ನುಂ
ಒಳಗಿದ್ದು ಹೊರಗಣ್ಗೆ ಕಾಣಿಪುದು ಮತ್ತೊಮ್ಮೆ ಆ ತಾಯ ನೋಟಂ.

ತುಂಗಭದ್ರೆಯ ತಡಿಯ ಚೆದರಿರುವ ಮೊರಡಿಗಳ ಕೊರಕಲಿನ ಬಿಸಿಲ
ಬೇಗುದಿಯ ಬಿರುಕಿನಲಿ ಮುಳೆಡೆಯ ಕಲ್ಲುಹೂವಿಡಿದರೆಯ ಮೇಲೆ,
ಕುಳಿತಿದ್ದಳಾ ತಾಯ, ಕೈ ಮೇಲೆ ತಲೆಯೂರಿ, ಅಳಲಿನಾಳದಲಿ!
-"ಯಾರವ್ವ, ನೀ ತಾಯಿ? ಏತಕಿಂತೊಬ್ಬಳೇ ಕುಳಿತೆ ಕಾಡಿನಲಿ?
ಏಕೆ ಮೊಗ ಬಾಡಿಹುದು, ಕಂದಿಹುದು, ನೊಂದಿಹುದು, ಕಾಂತಿಗುಂದಿಹುದು?"
ಕಂಬನಿಗಳೊರುತಿಹ, ಕಳವಳದ, ಕೂರೆ ನಡುಗಿಪ ನುಡಿಯ ಕೇಳಿ,
ಕತ್ತೆ, ಪಳಮೆಯಾಳದ ಕಣ್ಣ ನನ್ನ ಕಣ್ಣಲಿ ನೆಟ್ಟು, ಕಯ್ಯ
ಕುಳ್ಳಿರಲು ಸನ್ನೆ ಗೈದೀ ಪರಿಯೊಳಾಡಿದಳು, ತೋಡಿದಳು ತೊಳಲ
ಕಣ್ಣಾರ ಕಂಡುದನು, ತಾಯೆನ್ನೊಳಾಡಿದುವನಾಡುವೆನು, ಕೇಳಿ,
ಕಿವಿಗೊಟ್ಟು ಕೇಳಿ:
ಎದೆಗೊಟ್ಟು ಕೇಳಿ:
ಏಳಿ, ಎಚ್ಚರವಾಗಿ, ಅರಳ ಬಾಳಿ!


"ಕೇಳಣ್ಣ, ನಾನೊಬ್ಬ ಹಳೆಯ ಮುತ್ತೆದೆ- ಹಿರಿದಾಗಿ ಬಾಳಿದವಳೊಮ್ಮೆ:
ಈಗ ಬಡತನ, ಬಡವೆ, ಬಡವಾದೆ: ಬಡವಾದ ಮಕ್ಕಳನ್ನು ನೋಡಿ,
ಬತ್ತಿ, ಮಮ್ಮಡಿಯ ಸೊರಗಿನಲಿ ಬಡವಾದೆ- ಸಾವಿಲ್ಲ ನನಗೆ!
ಸಾವಿಲ್ಲ – ಸಾಯುತಿಹೆ: ಹೊಸ ಮಳೆಗಳಾಗಿ, ನೆಲ ಹೊಸ ಹೊನಲು ಹರಿದು,
ಹೊಸ ಹವು ಹಮ್ಮುತ, ಎಲ್ಲರೂ ನನ್ನ ಕತಂಗಿಯರು- ಚಿಗುರಿ
ಎಲ್ಲರೂ ಚೆಲುವಾದರೆಲ್ಲರೂ ಚಿನ್ನ ವಾದರು- ನೋಡು, ನೋಡು-
ಆ ಕಡೆಗೆ, ಈ ಕಡೆಗೆ ತೂಗುವರು ತೊನೆಯುವರು, ಆ ಪೋ೦ಕ, ಬಿಂಕ!
ಪೇರೊಕ್ಕಲಾಗಿ ಹಾಡುವರು;
ಅವರ ಮಕ್ಕಳು ಬೆಳೆದು ಕಳೆಗೂಡಿ ಮನೆ ಬೆಳಗಿ ಹಬ್ಬ ಮಾಡುವರು-
ತಾವ್ ಮೊದಲು ಬದುಕಿ,
ತಾಮ್ ಮೊದಲು ಬದುಕಿ,
ಹೆರರ ಹೊರೆಗಳನಿಳಿಸೆ, ಹೆರರ ಸೆರೆಗಳ ಬಿಡಿಸೆ, ಕಯ್ಯ ನೀಡುವರು.
ಆ ಸೈಪು, ಆ ಪುಣ್ಯ, ನನಗಿಲ್ಲ: ನನ್ನ ಮಕ್ಕಳಿಗಿಲ್ಲ ಹಬ್ಬ-
ನನ್ನ ಮಕ್ಕಳಿಗಿಲ್ಲ ಹಬ್ಬ:
ಮಳೆ, ಸುಗ್ಗಿ; ಬೆಳೆ, ಬೆಳಕು; ಹಾಡು, ಹಸೆ; ಕೂಗಾಟ, ಕುಣಿದಾಟ, ಪಾಟ;
ಒಲೆದಾಟ, ನಲಿದಾಟ, ಒಲುಮೆ ಬೀರಾಟ,
ನನ್ನ ಮಕ್ಕಳಿಗಿಲ್ಲ-ನನಗಿಲ್ಲ–ಬಾಳೆ ಆ ಅಕ್ಕ ತಂಗಿಯರು!
ನಮಗಿಲ್ಲ ಬಾಳು.

ಎಲ್ಲರೂ ಬಾಳುವೆಡೆ ನಮಗೆ ಸಾವೆ?
ಎಲ್ಲರೂ ನಲಿವ ಕಡೆ ನಮಗೆ ನೋವೆ?
ಏನು ಕವಿಯಿತೊ ಮಂಕು, ಮಕ್ಕಳಿಗೆ! ಯಾರೆರಚಿದರೊ ಬೂದಿ, ಕಾಣೆ,
ನನ್ನನೊಲ್ಲರು ನನ್ನ ಮಕ್ಕಳೇ! ತಾವೆ ಬಾಳಿ, ತಾಯ ಬಾಳಿಸರು.
ಹೆರರ ನುಡಿ, ಹೆರರ ನಡೆ, - ಹೆರರ ಕೂಗೇ, ಕೂಗು; ಹೆರರದೇ ಹೆಮ್ಮೆ!
ನನ್ನ ಮನೆ ಹಾಳು!
ನನ್ನ ನುಡಿ ಬೀಳು!
ನನ್ನ ನಾಡಿನಲಿರುಳು : ನನ್ನ ತೋಟವನಗೆವ, ತೆಂಗಡಕೆಯಿಡುವ,
ತಾವರೆಯ ಕಾಸಿಡುವ, ಮೊಲೆ ಮಲಿಗೆ ನೆಡುವ,ಆನಂದ ಕೊಡುವ
ಮಕ್ಕಳೆಲ್ಲಿಹರೆನಗೆ - ಹೆರರೊತ್ತೆ ಗಡಿಬಿಡುತ ಹದುಗುತ್ತ, ನುಗ್ಗೆ ಕುಗ್ಗುತ್ತ,
ಹೆರರ ಕೈ ಕಾಯುತ್ತ, ಸಾಯದೆಯೆ ಬದುಕದೆಯೆ ಬಾಳ ನೂಕುವೆನು."


ಅರಿದೆನರಿದೆನು ಮಾತನಾಡುವಳದಾರೆಂದು : ಕನ್ನಡದ ತಾಯಿ!
ನಮ್ಮ ಕನ್ನಡ ತಾಯಿ, ತನ್ನ ಹೊಂಬಸಿರಿಂದ ನಮ್ಮನ್ನು ತಂದು,
ನಾವು ಬಿಟ್ಟೋಡೆ ಬಿಡದೆ, ಹಂಬಲಿಸಿ, ಮರುಹುಟ್ಟ, ಹಾರೈಸುತಿಹಳು-
ನಾನೆಂದೆ, ಅಳಲನಾರಿಸ ಬಯಸಿ,-“ಏಕಮ್ಮ , ಇನಿಸೆಂದು ಕೊರಗು?
ಬೇಡಮ್ಮ ಮಕ್ಕಳಲಿ ಇನಿಸೊಂದು ಕಡುಮುನಿಸು- ಬಾರಮ್ಮ, ಹರಸು.
ನಿನ್ನ ನಾಡಿನೊಳದೆಕೊ ಬೆಳಕು ಮೂಡಿಹುದು- ಜೀವ ಕೂಡಿಹುದು.
ನಿನ್ನ ಮಕ್ಕಳು ನಿದ್ದೆಗಳೆದೆದ್ದ ಸಿಂಹದಂತೇಳುತ, ಮೊಳಗಿ,
ಕಣಕಿಳಿದು ಪಂಪ ನೃಪತುಂಗರಾ ಮಾತುಗಳು ದಿಟವೆನಿಸುತಿಹರು.
ಸೆರೆಯನೊಕ್ಕಡೆಗೊಗೆದು, ಬಿಡುಗಡೆಯ ಕೈಕೊಂಡು, ಹಳ ನೆನಪು ನೆನೆದು,
ಹೊಸ ಕಾಣೆಗಳ ಕಂಡು, ಸಾಮ್ರಾಜ್ಯಗಳ ಮತ್ತೆ ಕಟ್ಟುತಿಹರು.
ನಿನ್ನ ನಾಡೊಂದಾಗಿ, ನಿನ್ನ ನುಡಿ ಮೇಲಾಗಿ, ಮನೆ ಮಕ್ಕಳೆಲ್ಲ
ಪೇರೊಕ್ಕಲಾಗಿ ಪಾಡುವರು:
ತಾಯ್ ಬದುಕಿ, ತಾವ್ ಬದುಕಿ, ಹೆರರ ಬದುಕಿದರು:
ಹಾಳು ಹಂಪೆಯ ನಡುವೆ, ನಡುಕಟ್ಟಿ ಮತ್ತೊಮ್ಮೆ ಮುಡಿಪಾಗಿ ತಾಯ್ಗೆ
ಭಕ್ತಿಯಲಿ ಜೀವವನು ಸಲಿಸುವರು-ಏಳು!
ಸಡಗರದ ಆ ಕೂಗ ಕೇಳು:
ನಾಡು ಸಿಂಗರವಾಯ್ತು, ಬೀಡು ಹೆಬ್ಬೆಳಕಾಯ್ತು, ಅದೊ ಹಬ್ಬ ಮೆರೆತ!
ಹೆಣ್ಣ ಚೆಲುವನು ನೋಡು-ಗಂಡುಗಲಿಗಳ ನೋಡು-ಕಟ್ಟಾಳುಗಳನು.
ರಾಜರನು, ಋಷಿಗಳನು, ಕವಿಗಳನು, ಧೀರರನು, ಕರ್ಮವೀರರನು-

ಹೊಸತ ಹಳದನು ಮಾಡಿ, ಹಳದ ಹೊಸತನು ಮಾಡಿ, ನಾಡೊಂದು ಮೂಡಿ,
 ಧರ ಸತ್ಯಗಳಿಂದ, ಪ್ರೇಮ ಶಾಂತಿಗಳಿಂದ, ಸ್ವಾತಂತ್ರದಿಂದ,
 ಸುಖದಿಂದ, ಸೌ೦ದಯ್ಯದಾನಂದದಿಂದೆಲ್ಲ ಸಮದೃಷ್ಟಿಯಿಂದ
 ಬಾಳರೇ ನೀ ಬಂದು ನಲಿಸಿದೊಡೆ, ಹರಸಿದೊಡೆ– ಬಾ ತಾಯಿ, ಹರಸು.
 ತೇರೇರು, ಬಾ ತಾಯಿ, ನಿನ್ನ ಸಿಂಹಾಸನವನೇರು ಮತ್ತೊಮ್ಮೆ,
 ಪಳಮೆದಲಿ ಪೇರಾಲವನು ನೀನು ಬಿತ್ತಲದು ಮೊಳೆತು, ಮರವಾಗಿ,
 ಪಡುವ ಮೂಡಲು ತೆಂಕ ಬಡಗಲೆಡೆ ಕೊಂಬೆಗಳನೆಸೆದೆಸೆದು ಬೀಗಿ,
 ಈ ಕೊಂಬೆ ಕರಗಿದೊಡೆ ಆ ಕೊಂಬೆ ಬಿಳಿಲಿಳಿದು ಬೇರೂರಿ ತಾಗಿ
 ಒಂದೆ ಮರವಮರವಾಗಿರ್ಪಂತೆ, ಅಮರವಾಗಿನ್ನುಮದೆ ಇಹುದು
 ನಿನ್ನೊಂದು ಕರ್ನಾಟರತ್ನ ಸಿಂಹಾಸನಂ- ಬಾಳೆ, ಅದು ಬೆಳೆಗೆ
 ಕನ್ನಡದ ಮುಡಿಯಾಗಿ, ಕನ್ನಡದ ನುಡಿಯಾಗಿ, ಕನ್ನಡದ ಬಾಳ ಕುಡಿಯಾಗಿ!
- ಬಾರಮ್ಮ, ಹರಸು."

ನಕ್ಕಳಾ ತಾಯಿ.
ಮುದುಕಿ ಎಳೆಯವಳಾಗಿ, ಮಾಸು ಮಿಂಚೆಳೆಯಾಗಿ, ಸವೆದ ಮೈ ತುಂಬಿ,
 ಕಡಲ ತೆರೆಗಳನುಟ್ಟು, ಬೆಟ್ಟ ಬಯಲನು ತೊಟ್ಟು, ಅರಿಲ ಮುಡಿಗಿಟ್ಟು,
 ಮುಗುಳ್-ನಗೆಯ ನಸುನಕ್ಕಳಾ ತಾಯಿ, ನನ್ನ ತಲೆಯಲಿ ಕಯ್ಯ ತಾವರೆಯ

ನಿಟ್ಟು;



ಸುತ್ತಲುಂ ಕಾಣಿಸಿದರೊಡನೆ
ಕನ್ನಡದ ಪೊನ್ನಾ ಡ ಪೆರ್ಮನಡಿಗಳ್!
ಸಾವನೊವೆನಾ ಪಾಲ ಸೂಸು ಕಿಡಿಗಳ್!
 ಹಿಂದೆ ನೀಡಿದ ಸಾಲು, ಮುಂದೆ ನೀಡಿದ ಸಾಲು, ಕನ್ನಡದ ಕರುಳುಗಳು

- ನಡುವೆ, ಸಿರಿ ತಾಯ್



ಭುವನೇಶ್ವರೀ ದೇವಿ ರಥವನೇರಿದಳು.
ಕೂಗಿದರು ಎಲ್ಲರೂ ಒಕ್ಕೊರಲ್!-
 "ತಾಯ್ ಬಿಜಯಮಾಡುವಳು, ದಾರಿ ಬಿಡಿ, ದಾರಿ ಬಿಡಿ, ಅಡ್ಡ ಬಾರದಿರಿ.
 ಭಾರತಾಂಬೆಯ ಹಿರಿಯ ಹೆಣ್‌ಮಗಳೆ, ದಾರಿ ತೋರುವ ಹಿರಿಯ ಸೊಡರೆ
ಬಾಳಮ್ಮ, ಬಾಳು!
 ನೀನ್ ಬಾಳೆ, ಏನ್ ಬಾಳು ನಿನ್ನ ಮಕ್ಕಳದು!– ಬಾನ್‌ಬಾಳು, ತಾಯೆ
ಬಾಳಮ್ಮ, ಬಾಳು!??

ಚೆಲುವೆಯರ, ಚೆನ್ನಿಗರ, ಹಿರಿಯ ತಾಯಮ್ಮಕ್ಕಳಿರ, ಒಡಹುಟ್ಟಿದವರಾ,
ಒಸಗೆನುಡಿ ಕೇಳಿದಿರ, ತಾಳಿದಿರ ಎದೆಯಲ್ಲಿ, ತಾಳಿ ಬಾಳುವಿರಾ,
ನಾಡು ನುಡಿ ನಡೆಗಳನು ಮನ್ನಡಗೆ ನಡಸುತ್ತ, ಮುಂದೆ ಸಾಗುವಿರಾ?
ಭಾರತದ, ಲೋಕದಾ ಮಕ್ಕಳಲ್ಲಿ ಹಿರಿದಾಗಿ ತೂಕ ತೂಗುವಿರಾ?
ಬನ್ನಿ, ಓ ಮಕ್ಕಳಿರ,
ಒಕ್ಕೊರಲಿಲ್ಲರೂ ಕೂಗಿ ಈ ಒಕ್ಕೂಗ- ಈ ಹಿರಿಯ ಕೂಗ-
ಸಿರಿಗನ್ನಡಂ ಗೆಲ್ಗೆ, "ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ,ಬಾಳ್ಗೆ-
ಕನ್ನಡದ ತಾಯ್ ಗೆಲ್ಗೆ,ಬಾಳ್ಗೆ ."

ಶ್ರೀ

ಕವಿಗಳ ಆಕಾರಾದಿ
ಅಂಬಿಕಾತನಯದತ್ತ (ದ. ರಾ. ಬೇಂದ್ರೆ) ೯೬, ೧೨೫, ೧೩೪ ೩೦ ಮಹಾದೇವಿಯಕ್ಕ ೪೬
ಅಯ್ಯಶಾಸ್ತ್ರಿ ೬೮ ೩೧ ಮುದ್ದಣ (ನಂದಳಿಕೆ ಲಕ್ಷ್ಮಿ ನಾರಣಪ್ಪ) ೨೧
ಆಂಡಯ್ಯ ೧೮, ೨೧ ೩೨ ರಂಗನಾಥ ಶ್ರೀನಿವಾಸ ಮುಗಳಿ ೧೨೪
ಆನಂದಕಂದ (ಕೃಷ್ಣಶರ್ಮ ಬೆಟಗೇರಿ) ೮೯, ೯೭ ೩೩ ರತ್ನ (ಜಿ. ಪಿ. ರಾಜರತ್ನಂ)

೯೦, ೧೦೪, ೧೧೯

ಕನಕದಾಸ ೫೯ ೩೪ ರತ್ನಾಕರ ೨೦, ೩೦, ೩೬
ಕವಿಶಿಷ್ಯ (ಪಂಜೆ ಮಂಗೇಶರಾವ್) ೧೦೫, ೧೦೬, ೧೦೮ ೩೫ ರನ್ನ ೨೩, ೨೭, ೩೫
ಕಾಮತ್ ಎಂ. ಎನ್. ೯೫ ೩೬ ರಾಘವಾಂಕ ರಾಜರತ್ನಂ, ಜಿ.ಪಿ. (ರತ್ನ) ೨೫
ಕುಮಾರವ್ಯಾಸ (ನಾರಣಪ್ಪ)
ಕೃಷ್ಣಶರ್ಮ ಬೆಟಗೇರಿ (ಆನಂದಕಂದ)
೨೮ ೩೭ ರಾಮಚಂದ್ರರಾಯ, ಸಾಲಿ
ಲಕ್ಷ್ಮಣರಾವ್, ಎ. (ಹೊಯಿಸಳ)
ಲಕ್ಷ್ಮೀನಾರಣಪ್ಪ ನಂದಳಿಕೆ(ಮುದ್ದಣ)
೧೦೨
ಕೇಶಿರಾಜ ೨೧
೧೦ ಗುಂಡಪ್ಪ, ಡಿ, ವಿ, ೧೧೨, ೧೩೬, ೧೩೮ ೩೮ ಲಕ್ಷ್ಮೀಶ
ವಿನಾಯಕ (ಗೋಕಾಕ್, ವಿ. ಕ.)
೨೯
೧೧ ಗೋಕಾಕ್, ವಿ. ಕ. (ವಿನಾಯಕ) ೯೯ ೩೯ ವಿರೂಪಾಕ್ಷ ೧೯
೧೨ ಗೋವಿಂದ ಪೈ, ಮ೦. ೯೩ ೪೦ ವಿ. ಸಿ. (ವಿ. ಸೀತಾರಾಮಯ್ಯ)
ವೆಂಕಟೇಶ ಐಯಂಗಾರ್, ಮಾಸ್ತಿ (ಶ್ರೀನಿವಾಸ)
೧೧೭, ೧೪೦, ೧೪೧, ೧೪೩
೧೩ ಚಾಮರಸ ೨೫, ೫೨
೧೪ ಚಿಕದೇವರಾಜ ೬೨
೧೫ ಜನ್ನ ೨೪
೧೬ ದಿನಕರ ದೇಸಾಯಿ ೧೨೭ ೪೧ ಶಂಕರಭಟ್ಟ, ಕಡಂಗೋಡು ೧೦೦
೧೭ ನಯಸೇನ ೨೧, ೨೪ ೪೨ ಶಾಂತಕವಿ ೯೨, ೧೨೬
೧೮ ನರಸಿಂಹಾಚಾರ್, ಪು. ತಿ. ೧೪೫ ೪೩ ಶ್ರೀ (ಶ್ರೀಕಂಠಯ್ಯ, ಬಿ.ಎಂ.) ix, ೮೩, ೮೬, ೧೨೯, ೧೪೭
೧೯ ನಾಗಚಂದ್ರ
ನಾರಣಪ್ಪ (ಕುಮಾರವ್ಯಾಸ)
೩೨ ೪೪ ಶ್ರೀಕಂಠಯ್ಯ, ತೀ. ನಂ. ೮೪, ೯೧
೨೦ ನೃಪತುಂಗ ೧೭, ೨೩ ೪೫ ಶ್ರೀನಿವಾಸ (ಮಾಸ್ತಿ ವೆಂಕಟೇಶ ಐಯಂಗಾರ್) ೧೧೯, ೧೧೧, ೧೨೩, ೧೨೯
೨೧ ನೇಮಿಚಂದ್ರ ೨೪
೨೨ ಪಂಪ ೧೭, ೨೩, ೩೧
೨೩ ಪುಟ್ಟಪ್ಪ, ಕೆ, ವಿ. ೧೧೩, ೧೨೧, ೧೩೫, ೧೪೪ ೪೬ ಶ್ರೀವಾಸ ೬೭
೪೭ ಷಡಕ್ಷರಿ ೨೮, ೫೨
೨೪ ಪುರಂದರದಾಸ ೫೪ ೪೮ ಸರ್ವಜ್ಞ
ಸೀತಾರಾಮಯ್ಯ, ವಿ. (ವಿ, ಸೀ.)
೨೦, ೨೬
೨೫ ಪ್ರಾಣೇಶಾಚಾರ್, ಜೆ. ಕೆ. ೮೮
೨೬ ಬಸವಣ್ಣ
ಬೇ೦ದ್ರೆ, ದ. ರಾ. (ಅ೦ಬಿಕಾತನಯದತ್ತ)
೩೮ ೪೯ ಹನುಮಂತ ಗೋವಿ೦ದ ಸೆಟ್ಟ ೮೯
೫೦ ಹರಿಹರ ೨೪, ೪೩, ೪೫, ೪೯
೨೭ ಬೊಪ್ಪಣ ೩೩ ೫೧ ಹುಯಿಲಗೋಳ ನಾರಾಯಣ ರಾವ್ ೯೭
೨೮ ಭೀಮಸೇನರಾವ್ ಡಿ. ಕೆ.
ಮಂಗೇಶರಾವ್ ಸಂಜೆ (ಕವಿಶಿಷ್ಯ)
೧೦೧ ೫೨ ಹೊನ್ನಮ್ಮ ೬೬
೨೯ ಮಹಲಿಂಗರಂಗ ೨೨ ೫೩ ಹೊಯಿಸಳ (ಎ. ಲಕ್ಷ್ಮಣ ರಾವ್) ೧೨೪
ಕಾವ್ಯಗಳ ಅಕಾರಾದಿ
ಅಜಿತನಾಥಪುರಾಣ ೨೩, ೨೭, ೩೫ ೨೩ ಪುರಂದರದಾಸರ ಪದಗಳು ೫೪
ಅನಂತನಾಥಪುರಾಣ ೨೪ ೨೪ ಪ್ರಭುಲಿಂಗಲೀಲೆ ೨೫, ೫೨
ಅನುಭವಾಮೃತ ೨೨ ೨೫ ಬಸವಣ್ಣನವರ ವಚನಗಳು ೩೮
ಆದಿಪುರಾಣ (ಪಂಪ) ೨೩, ೩೧ ೨೬ ಬಸವರಾಜದೇವ ರಗಳೆ ೪೩, ೪೫
ಕನಕದಾಸರ ಪದಗಳು ೫೯ ೨೭ ಭರತೇಶ ವೈಭವ ೨೦, ೩೦, ೩೬
ಕಬಿಗರ ಕಾವ ೧೮, ೨೧ ೨೮ ಮಹೀಶರ ಮಹಾರಾಜ ಚರಿತ್ರಂ ೬೮
ಕವಿರಾಜ ಮಾರ್ಗ ೧೭, ೨೩
ಗದಾಯುದ್ಧ (ಸಾಹಸ ಭೀಮ ವಿಜಯ) ೨೭ ೨೯ ಮಹಾದೇವಿಯಕ್ಕನ ವಚನಗಳು ೪೬
ಗದುಗಿನ ಭಾರತ ೨೮ ೩೦ ಮಾನವಮಿಯ ಪದ ೭೮
೧೦ ಗರತಿ ಹಾಡುಗಳು ೭೩ ೩೧ ರಾಜಶೇಖರವಿಳಾಸ
ರಾಮಚಂದ್ರ ಚರಿತ ಪುರಾಣ (ಪಂಪ ರಾಮಾಯಣ)
೨೮, ೫೨
೧೧ ಗಿರಿಜಾಕಲ್ಯಾಣ ೨೪
೧೨ ಗೀತಗೋಪಾಲ ೬೩
೧೩ ಗೊಮ್ಮಟನ ಸ್ತುತಿ ೩೩ ೩೨ ರಾಮಾಶ್ವಮೇಧ
ವಿಕ್ರಮಾರ್ಜುನ ವಿಜಯ ( ಪಂಪ ಭಾರತ)
೨೧
‍೧೪ ಗೋವಿನ ಹಾಡು ೭೪
೧೫ ಚಿಕದೇವರಾಜ ಬಿನ್ನಹ ೬೨
೧೬ ಚನ್ನ ಬಸವಪುರಾಣ ೧೯ ೩೩ ಶಬ್ದಮಣಿದರ್ಪಣ ೨೧
೧೭ ಜೈಮಿನಿ ಭಾರತ ೨೯ ೩೪ ಶಾಸನಗಳು
೧೮ ಧರ್ಮಾಮೃತ ೨೧, ೨೪ ೩೫ ಶ್ರೀ ಕೃಷ್ಣರಾಜ ವರ್ಷವರ್ಧ೦ತೀ ಶತಕ ೬೭
೧೯ ನೇಮಿನಾಥಪುರಾಣ ೨೪
೨೦ ಪಂಪ ಭಾರತ (ವಿಕ್ರಮಾರ್ಜುನ ವಿಜಯ) ೧೭, ೧೮, ೨೩ ೩೬ ಸರ್ವಜ್ಞ ವಚನಗಳು
ಸಾಹಸಭೀಮ ವಿಜಯ (ಗದಾ ಯುದ್ದ)
೨೦,೨೬
೨೧ ಪಂಪ ರಾಮಾಯಣ (ರಾಮಚಂದ್ರ ಚರಿತ ಪುರಾಣ) ೩೨ ೩೭ ಹದಿಬದೆಯ ಧರ್ಮ ೬೬
೨೨ ಪಂಪಾ ಶತಕ ೪೯ ೩೮ ಹರಿಶ್ಚಂದ್ರ ಕಾವ್ಯ ೨೫
ಹೊಸ ಕವಿತಗಳ ಅಕಾರಾದಿ
ಅಭೀಃ ೧೪೩ ೨೫ ತುಳುನಾಡ ರಾಣಿ ೯೫
ಅರುಣೋದಯ ೯೭ ೨೬ ತಂಕಣ ಗಾಳಿಯಾಟ ೧೦೬
ಉದಯವಾಗಲಿ ನಮ್ಮ ಚೆಲುವು ಕನ್ನಡನಾಡು ೯೭ ೨೭ ತೆಂಗಾಳಿ ೧೩೯
೨೮ ನವೀನ ೧೪೪
ಎಂಥ ನಾಡಿದು ೧೨೪ ೨೯ ನಾಡಿನ ಹಾಡು ೯೯
ಕನಸಿನೊಳಗೊಂದು ಕಣಸು ೧೩೪ ೩೦ ಬೇಲೂರಿನ ಶಿಲಾ ಬಾಲಿಕೆಯರು ೧೨೬
ಕನ್ನಡ ೮೯
ಕನ್ನಡತಾಯ ನೋಟ ೧೪ ೩೧ ಭಾರತ ತಪಸ್ವಿನಿ ೧೩೫
ಕನ್ನಡದ ಬಾವುಟ ix ೩೨ ಮಡಿಕೇರೀಲಿ ಮ೦ಜು ೧೦೪
ಕನ್ನಡ ದಾಸಯ್ಯ ೧೨೬ ೩೩ ಮಡಿಕೇರೀಲಿ ರತ್ನ ೧೧೯
೧೦ ಕನ್ನಡನಾಡ ರಾಣಿ ೯೬ ೩೪ ಮೈಸೂರು ಮಕ್ಕಳು ೮೯
೧೧ ಕನ್ನಡನಾಡಿನ ಸ್ಥಿತಿಯನ್ನು ನೆನೆದು ೧೨೩ ೩೫ ಯುಗಾದಿಯ ಹಾಡು ೧೪೫
೩೬ ರಕ್ಷಿಸು ಕರ್ಣಾಟಕ ದೇವಿ ೯೨
೧೨ ಕನ್ನಡನುಡಿ ೮೯ ೩೭ ಲಲಿತಾದ್ರಿ ೧೧೨
೧೩ ಕನ್ನಡಿಗನ ಕೊರಗು ೯೧ ೩೮ ಲಾಲ್‌ ಬಾಗ್ ೧೧೭
೧೪ ಕನ್ನಡಿಗರ ತಾಯಿ ೯೩ ೩೯ ವನಸುಮ ೧೩೮
೧೫ ಕನ್ನಡ ಪದಗೊಳು ೯೦ ೪೦ ಶಿವನ ಸಮುದ್ರ ೧೧೨
೧೬ ಕಸ್ಮೈ ದೇವಾಯ ೧೪೦ ೪೧ ಶ್ರೀ ಕೃಷ್ಣರಾಜ ರಜತ ಮಹೋತ್ಸವ ಪ್ರಗಾಥ ೧೨೯
೧೭ ಕಾಣಿಕೆ ೮೩
೧೮ ಕಾರ್ಗಾಲದ ವೈಭವ ೧೦೦ ೪೨ ಸ್ವಾಗತ ಗೀತ ೮೪
೧೯ ಕುಮಾರವ್ಯಾಸ ೧೨೧ ೪೩ ಸ್ವಾಗತ (ಹೈದರಾಬಾದಿಗೆ) ೮೮
೨೦ ಕೊಡಗು ೧೦೨ ೪೪ ಹ೦ಪಿ ವಿಜಯನಗರ ದರ್ಶನ ೧೨೫
೨೧ ಕೊ೦ಬು ೧೦೯ ೪೫ ಹಂಪಗೆ ೧೨೪
೨೨ ಕೂಗಿಲೆ (ವಿ. ಸೀ.) ೧೪೧ ೪೬ ಹಾವಿನ ಹಾಡು ೧೦೮
೨೩ ೨೨ ಕೂಗಿಲೆ (ಶ್ರೀನಿವಾಸ) ೧೧೧ ೪೭ ಹುತ್ತರಿ ಹಾಡು ೧೦೫
೨೪ ತರುಣರ ದಸರೆ ೧೨೭ ೪೮ ಹೈದರಾಬಾದು ೧೦೧

572_38._ ಗಳೂರು ಸಿಟಿ ಬೆಂಗಳೂರು ಪ್ರೆಸ್ಸಿನಲ್ಲಿ ಸೂಪರಿಂಟೆಂಡಂಟರಾದ
ಜಿ. ಶ್ರೀನಿವಾಸರಾಯರವರು ಮುದ್ರಿಸಿರುವರು