ಕರ್ನಾಟಕ ಗತವೈಭವ/ಸರ್ವಭಕ್ಷಕನಾದ ಕಾಲನಿಗೆ ಪ್ರಾರ್ಥನೆ.

ವಿಕಿಸೋರ್ಸ್ದಿಂದ



೧೫೮

ಕರ್ನಾಟಕ-ಗತವೈಭವ.


ಶ್ರೀವಿದ್ಯಾರಣ್ಯರ ಇಷ್ಟ ದೇವತೆಯಾದ ಭುವನೇಶ್ವರಿ ಸ್ತುತಿ.

(ಧಾಟಿ – “ಜಯಮೋಹಿನೀ ಮಧುಸೂದನಜಯ” ಎಂಬ ಪದದಂತೆ).
           ಜಯ ಜಯ ಜಯ ಭುವನೇಶ್ವರೀ || ಪಲ್ಲ ||
           ಜಯ ಭುವನೇಶ್ವರಿ |
           ಜಯ ಮಾಹೇಶ್ವರಿ |
           ಜಯ ಕೃಪಾಕರೆ ಶುಭಕರೆ ಶ್ರೀಕರೆ || ಅನು ||
           ಭೂಸುರಮಾಧವ |
           ನಾಶಾ ಪಾಶವ |
           ನಾಶಗೊಳಿಸಿ ಸ |
           ನ್ಯಾಸಿಯ ಮಾಡಿದೆ ||೧||
           ವರ ವಿದ್ಯಾರ |
           ಣ್ಯರ ತಪಕೊಲೆದೌ |
           ಸುರಿಸಿದೆ ಚಿನ್ನದ |
           ಸರಿಯಂ ಧರೆಯೊಳು || ೨ ||
           ನೆರೆ ಕನ್ನಡದವರ |
           ಸರ ಬೆಳ್ ಜಸಮಂ |
           ಧರೆಯೊಳು ಸಲೆ ಸು |
           ಸ್ಥಿರಗೊಳಿಸಿದವಳೆ || ೩ ||
                                            ಸಕ್ಕರಿ ಬಾಳಾಚಾರ್ಯ ( ಶಾಂತಕವಿ).


ಸರ್ವಭಕ್ಷಕನಾದ 'ಕಾಲ' ನಿಗೆ ಪ್ರಾರ್ಥನೆ.

ತಾತ್ಪರ್ಯ:- ಸರ್ವಭಕ್ಷಕನಾದ ಕಾಲನೇ, ಕರ್ನಾಟಕ ವೈಭವವನ್ನು ತಿನ್ನುವಾಗ ನಿನ್ನ ಕಣ್ಣಿಗೆ ಬೀಳದಿದ್ದ ಶಿಲಾಲೇಖ ತಾಮ್ರ ಪಟಗಳನ್ನು ನಾವು ಬಳೆದು ಆರಿಸಿಕೊಂಡು, ಪುನಃ ನೀನು ತಿನ್ನಬಾರದೆಂದು ಕಹಿಪದಾರ್ಥಗಳಿಂದ

ಸರ್ವಭಕ್ಷಕನಾದ ಕಾಲನಿಗೆ ಪ್ರಾರ್ಥನೆ.

೧೫೯


ಮಾಡಿದ ಕಾಗದಗಳ ಮೇಲೆ ಕಹಿಯಾದ ಮಸಿಯಿಂದ ಬರೆದಿಡುವೆವು; ನೀನು ತಿನ್ನದಿರು ! ಎಚ್ಚರಿಕೆ ! ಅಥವಾ ಹೀಗೆ ನಿನಗೆ ಹೇಳುವವರು ನಾವೂ ದಡ್ಡರೇ ಸರಿ. ಏಕೆಂದರೆ, ಅವು ನಿನ್ನ ತುತ್ತಿನೊಳಗಿನ ಹರಳುಗಳೆಂದು ನೀನೇ ಅವನ್ನು ಉಗುಳಿರುವೆ. ಇನ್ನು ಆ ಉಚ್ಚಿಹವನ್ನು ನೀನು ತಿನ್ನುವುದು ಹೇಗೆ? ಆದರೆ, ನಾವು ಅವನ್ನು ನಿನ್ನ ಪ್ರಸಾದವೆಂದು ಸ್ವೀಕರಿಸಿ, ನಮ್ಮ ಪೂರ್ವವೈಭವವನ್ನು ಪ್ರತಿಪಾದಿಸುವೆವು.

     ಶ, ಷ, ಕನ್ನಡ ನಾಡೊಳು |
             ಮುನ್ನಾಳದ ನೃಪ |
             ರುನ್ನತವಿಭವಗಳಂ ನೀನು ||
             ತಿನ್ನುವ ನಿನ್ನಯ |
             ಕಣ್ಣಿಗೆ ಬೀಳದ |
          * ಲಿನ್ನು ಮುಳಿದುಕೊಂಡಿರುತಿರ್ದ ||೧||
             ಶಿಲಾಲೇಖಗಳ |
             ಸಲೆ ತಾಮ್ರದ ಸಟ |
             ಗಳ ಪಾಳ್ ದೇಗುಲಗೊಂಬೆಗಳ ||
             ಹಳೇ ಗ್ರಂಥಗಳ |
          ǂ ಪೊಳಲ್ ಗುರುಹುಗಳ |
             ಬಳೆದಾರಿಸಿ ಕೊಂಡಾವೀಗ || ೨ ||
             ಬಲು ಕಹಿ ವಸ್ತುಗ |
             ಳೊಳಕೊಂಡೋಲೆಕ
             ಳೊಳು ಕಹಿಯಾಗಿಹ ಮಸಿಯಿಂದ ||
             ಸಲೆ ನಿನ್ನಯ ಕೃತಿ |
             ಗಳ ಗುರುಮಹಿಮಾ |
             ವಳಿಗಳನ್ನು ಬರೆದಿಡುತಿಹೆವು || ೩ ||


*ಇನ್ನು=ಉಳಿದು, ǂ ಪೊಳಲ್ ಗುರುಹು= ಪಟ್ಟಣದ ಕುರುಹು. 

೧೬೦

ಕರ್ನಾಟಕ ಗತವೈಭವ


        ಎಲವೊ ಕಾಲ! ಭರ |
        ದೊಳುಂಬ ಸಮಯದೊ |
        ಳುಳಿ ನೆನಪಿಂದಿವುಗಳನು ಗಡ ||
        ಪಳ ವಿಶ್ರಾಂತಿಯ |
        ಗೊಳದೆ ಸಿಕ್ಕುದಂ |
        ಮೆಲುವಿ ಮೊದಲೆ ತಿಳಿಸಿಹೆವಾವು || ೪ ||
        ಎಂದೊರೆವುದು ಮತಿ |
        ಮಂದತೆಯದು ನೀ |
        ನಂದುಣ್ಣುವ ತುತ್ತುಗಳೊಳಗೆ ||
        ಬಂದವುಗಳ ಹರ |
        ಳೆಂದುಗುಳಿದೆಯ |
        ನೆಂದುಮಲ್ಲ ನಿನಗವು ಗ್ರಾಹ್ಯಂ||೫||
        ಸಕಲದೇವತಾ |
        ನಿಕರಶಿಖರ! ತವ |
        ಸುಖದುಚ್ಚಿಷ್ಟಂ ಲಭಿಸುವದು ||
        ಸುಖಪ್ರಸಾದದ |
        ಶಕುನವೆಂದು ನಾವ್ |
        ಕಕುಲತೆಯಿಂ ಸ್ವೀಕರಿಸವದಂ|| ೬ ||
        ಈ ಪ್ರಸಾದಬಲ |
      * ದಪ್ರತಿಮತಯಂ |
        ಕ್ಷಿಪ್ರದಿ ನೆರೆ ನಾಡಿಗರಂತೆ||
        ಸುಪ್ರಸಿದ್ಧ ಪೂ !
        ರ್ವ ǂ ಪ್ರಬಂಧಗಳ |
        ನು + ಪ್ರತಿಪಾದಿಸುವೆವು ನಾವು||೭||


* ಅಪ್ರತಿಮತ, ǂ ಕಥೆ, + ನಿಶ್ಚಯದಿಂದ ಹೇಳು. 

ಸರ್ವಭಕ್ಷಕನಾದ ಕಾಲನಿಗೆ ಪ್ರಾರ್ಥನೆ

೧೬೧


          ತಿಳಿಯುವ† ವಿದರಿಂ |
          ಸಲೆ ಪೂರ್ವದ ಸೂ |
          ಜ್ವಳ ಸಾಹಸಶೌರ್ಯಾದಿಗಳು ||
          ನೆಲದೊಡೆಯರ ಬಲು |
          ಬೆಳೆದ ವಿಭವಗಳು |
          ಕಲಾವಂತರತಿ ಕುಶಲತೆಯು || ೮ ||
          ಅಭೀಷ್ಟ ಸಾಧನ |
          ದಭಿಮಾನಂ ಮೇಣ್ |
          ಅಭೀರುತನದುತ್ಕರ್ಷತೆಯು ||
        + ಆಭರೂಪರ ಸು|
        § ಪ್ರಭವಫಲಂಗಳ |
        * ಪ್ರಬೋಧನಗಳಿಗಿನ ಜನಕೆ|| ೯ ||
          ಇವುಗಳ ಗುಣಗಳು |
          ಭುವನವಿದಿತಮಾ |
          ಗಿವೆ ಕಾಲಾಂತರದಿಂದಲಿವು ||
          ತವೆ ನಿಕೃಷ್ಟ ದೇ |
          ಶವನುದ್ಧರಿಸುವ |
          ರವತರಿಸುವವೊಲು ಮಾಡುವವು|| ೧೦ ||
                      -ಬಾಳಾಚಾರ್ಯ ಸಕ್ಕರಿ (ಶಾ೦ತಕವಿ).


+ಪ೦ಡಿತ, §ಪ್ರಭವ=ಜ್ಞಾನ, *ಎಚ್ಚರಿಕೆ ಹೇಳೋಣ.