ಕಾಯವಿಡಿದು ಸುಳಿದಾಡುವನ್ನಕ್ಕ, ಕರಣಂಗಳ

ವಿಕಿಸೋರ್ಸ್ದಿಂದ



Pages   (key to Page Status)   


ಕಾಯವಿಡಿದು ಸುಳಿದಾಡುವನ್ನಕ್ಕ
ಕರಣಂಗಳ ಮೀರುವರಾರೈ ಚೆನ್ನಬಸವಣ್ಣಾ ? ಕರಣಂಗಳಿಂದ ಕರ್ಮಂಗಳ ಮಾಡುತ್ತಿದ್ದಿತು. ಕರ್ಮವ ಕರ್ಮದಿಂದ ಅಳಿದು ಮಲವ ಜಲ ತೊಳೆದಂತೆ
_ ನಾನು ಕಾಯದ ಕರ್ಮ ಮಾಡುವಲ್ಲಿ
ಜೀವವಿಕಾರ ಬಿಡಿಸಿದೆಯಲ್ಲಾ ! ಗುಹೇಶ್ವರಲಿಂಗಕ್ಕೆ ಒಡಲಿಲ್ಲ ಎಂಬುದನು
ಅರುಹಿದೆಯಲ್ಲಾ ಚೆನ್ನಬಸವಣ್ಣಾ.