ಕಿಲಾಡಿ ಜೋಡಿ - ಆಡಬೇಕು ಊ ಕರಾಟೆ ಆಡಬೇಕು ಊ

ವಿಕಿಸೋರ್ಸ್ ಇಂದ
Jump to navigation Jump to search

ಚಿತ್ರ: ಕಿಲಾಡಿ ಜೋಡಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ


ಆ....ಅ.ಅ.ಅ.ಅ............ಆ....ಆ........
ಊ ಊ......ಆ............

ಆಡಬೇಕು ಊ...... ಆ ಆ.....
ಆಡಬೇಕು ಊ.....ಆಡಬೇಕು ಊ ಕರಾಟೆ ಆಡಬೇಕು...

ಎಡಬಿಡದೆ ಊ ಊ....
ನಡೆನುಡಿಯ ಆ...ಆ.....
ಕೆರಳಿಸುವ ಊ ಊ....
ಈ ಕಲೆಯ....ಆ..ಆ....

ನೋಡಬೇಕು ಊ..ನೋಡಿ ಕಲಿಯಬೇಕು...ಊ......
ಸಿಂಹ ನಾದಕೆ....ಸಿಡಿಲ ತಾಳಕೆ (೨)
ನಡೆಯಬೇಕು.....ಸಿಡಿಯಬೇಕು...
ಆಡಬೇಕು ಊ ಕರಾಟೆ ...ಆಡಬೇಕು.....

ಹೊಡೆಯಲು ಬೀಸು ಮಿಂಚಿನಂತೆ.....ಊ...ಹಾ.....
ಹಿಡಿಯಲು ತೋಳು ಕಂಚಿನಂತೆ.....ಹಾ...ಹಾ....

ಮಸೆಯಲು ಕತ್ತಿ ಅಂಚಿನಂತೆ.....ಊ...ಆ....
ತಡೆಯಲು ಕಾದ ಹೆಂಚಿನಂತೆ....ಹಾ..ಹಾ...
ಎಡ ಬಲ ಕೂಟ ಕುಹಕದಾ ನೋಟ ಅಡಚಣೆ ಮುರಿಯದ ಪಾಟವಾ<BR? ಅನಾದಿಕಾಲದ ಆಟವಾ............{ಪಲ್ಲವಿ}

ವೈರಿಗೆ ಸಿಂಹ ಸ್ವಪ್ನವಾಗಿ....ಊ ಆ....
ತಾಳಿಗೆ ಅಭಯ ಅಸ್ತ್ರವಾಗಿ ಆ..ಆ...

ತಿಳಿದರೆ ಸುಲಭ ತಂತ್ರವಾಗಿ.....ಊ...ಆ....
ಕಲಿತರೆ ಕಲೆಯ ಮಂತ್ರವಾಗಿ...ಆ...ಆ...
ಹುರುಪನು ತರುವ ಹರುಷವ ಕೊಡುವ
ಗೆಲುವನು ಕಲಿಸುವ ಪಾಟವಾ....
ಅನಾದಿಕಾಲದ ಆಟವಾ..........{ಪಲ್ಲವಿ}

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ