ಜರಾಸಂಧ

ವಿಕಿಸೋರ್ಸ್ ಇಂದ
Jump to navigation Jump to search

ಜರಾಸಂಧ[ಸಂಪಾದಿಸಿ]

Indented line

ಚಿತ್ರ: ಜರಾಸಂಧ
ನಿರ್ದೇಶಕ: ಶಶಾಂಕ್ ರಾಜ್
ಸಂಗೀತ: ಅರ್ಜುನ್
ಸಾಹಿತ್ಯ: ಶಶಾಂಕ್ ರಾಜ್, ಯೋಗರಾಜ್ ಭಟ್
ಗಾಯನ : ಸೋನು ನಿಗಮ್, ಅನುರಾಧ ಭಟ್
ತಾರಾಗಣ: ದುನಿಯಾ ವಿಜಯ್, ಪ್ರಣಿತ, ರಂಗಾಯಣ ರಘು, ದೇವರಾಜ್, ರೂಪಾದೇವಿ, ಸ್ವಯಂವರ ಚಂದ್ರು, ಚೇತನ್

ಹಾಡುಗಳು[ಸಂಪಾದಿಸಿ]

Indented line

ಅವರಿವರ ಜೊತೆ[ಸಂಪಾದಿಸಿ]

ಅವರಿವರ ಜೊತೆ ಸೇರದೆ ಅವರಿವರ ನುಡಿ ಕೇಳದೆ
ಗೆಳತಿಯರ ಜೊತೆ ಹೋಗದೆ ಪರಿಚಿತರ ಬಳಿ ಕೂರದೆ
ನನ್ನನಷ್ಟೇ ಸಾಯೂ ಹಾಗೆ ನೀನು ಪ್ರೀತಿಸು
ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು

ಅವರಿವರ ಜೊತೆ ಸೇರದೆ
ಅವರಿವರ ನುಡಿ ಕೇಳದೆ

ನೀ ಹೇಳುವ ನಾ ಕೇಳುವ ಮಾತು ಒಂದೇ ಆಗಲಿ
ನೀನಾಡುವ ಸುಳ್ಳಲ್ಲಿಯು ನಾನೇ ಇರಲಿ
ನೀ ಸೋತರು ನಾ ಸೋತರು ಪ್ರೀತಿ ಎಂದೂ ಗೆಲ್ಲಲಿ
ನೀನೆನ್ನುವ ನಾನೆನ್ನುವ ಮಾತಿನೆಲ್ಲಿ

ನಗುವೆಲ್ಲ ನನಗಾಗೇ ಕೂಡಿ ಹಾಕು
ಮುನಿಸನ್ನು ಬರದಂತೆ ದೂರ ನೂಕು
ಮನಸಲ್ಲಿ ಮರೆಮಾಚಿ ಇಟ್ಟ ಎಲ್ಲಾ
ಗುಟ್ಟುಗಳ ನನ್ನೆದುರೇ ತೆರೆಯಬೇಕು

ಏನನ್ನೋ ಹುಡುಕುವ ಗಳಿಗೆ ನನ್ನ ನಗುವೇ ನಿನಗೆ ಸಿಗಲಿ
ಯಾರನ್ನೋ ಕರೆಯುವ ಕ್ಷಣದಿ ನನ್ನ ಹೆಸರೇ ಮೊದಲು ಬರಲಿ
ಬೇರೆ ಏನೂ ಯೋಚಿಸದೆ ನನ್ನ ಪ್ರೀತಿಸು
ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು

ನೀ ಹೇಳುವ ನಾ ಕೇಳುವ ಮಾತು ಒಂದೇ ಆಗಲಿ
ನೀನಾಡುವ ಸುಳ್ಳಲ್ಲಿಯು ನಾನೇ ಇರಲಿ
ನೀ ಸೋತರು ನಾ ಸೋತರು ಪ್ರೀತಿ ಎಂದೂ ಗೆಲ್ಲಲಿ
ನೀನೆನ್ನುವ ನಾನೆನ್ನುವ ಮಾತಿನೆಲ್ಲಿ

ನೆರಳಾಗಿ ಹಗಲೆಲ್ಲಾ ನೀನು ಬೇಕು
ಕನಸಾಗಿ ಇರುಳೆಲ್ಲ ಕಾಡಬೇಕು
ಬದುಕಲ್ಲಿ ಗುರಿಯಂತೆ ನನ್ನ ಸೇರಿ
ಅನುರಾಗ ಅನುಗಾಲ ನೀಡು ಸಾಕು

ಮುಂಜಾನೆ ಬೆಳಕಲಿ ಸ್ಮರಿಸು
ಸರಿ ರಾತ್ರಿ ಕನಸಲಿ ವರಿಸು
ಜಗವೆಲ್ಲಾ ಹೊಗಳುವ ವೇಳೆ
ಮನಸಲ್ಲಿ ನನ್ನನೆ ನೆನೆಸು

ದೇವರನ್ನೂ ಬೇಡುವಾಗ ನನ್ನ ಜಪಿಸು
ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು
ಅವರಿವರ ಜೊತೆ ಸೇರದೆ
ಅವರಿವರ ನುಡಿ ಕೇಳದೆ

"https://kn.wikisource.org/w/index.php?title=ಜರಾಸಂಧ&oldid=4259" ಇಂದ ಪಡೆಯಲ್ಪಟ್ಟಿದೆ