Library-logo-blue-outline.png
View-refresh.svg
Transclusion_Status_Detection_Tool

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   

ತನು
ಕರಗದವರಲ್ಲಿ
ಮಜ್ಜನವನೊಲ್ಲೆಯಯ್ಯಾ
ನೀನು.
ಮನ
ಕರಗದವರಲ್ಲಿ
ಪುಷ್ಪವನೊಲ್ಲೆಯಯ್ಯಾ
ನೀನು.
ಹದುಳಿಗರಲ್ಲದವರಲ್ಲಿ
ಗಂಧಾಕ್ಷತೆಯನೊಲ್ಲೆಯಯ್ಯಾ
ನೀನು.
ಅರಿವು
ಕಣ್ದೆರೆಯದವರಲ್ಲಿ
ಆರತಿಯನೊಲ್ಲೆಯಯ್ಯಾ
ನೀನು.
ಭಾವಶುದ್ಭವಿಲ್ಲದವರಲ್ಲಿ
ಧೂಪವನೊಲ್ಲೆಯಯ್ಯಾ
ನೀನು.
ಪರಿಣಾಮಿಗಳಲ್ಲದವರಲ್ಲಿ
ನೈವೇದ್ಯವನೊಲ್ಲೆಯಯ್ಯಾ
ನೀನು.
ತ್ರಿಕರಣ
ಶುದ್ಧವಿಲ್ಲದವರಲ್ಲಿ
ತಾಂಬೂಲವನೊಲ್ಲೆಯಯ್ಯಾ
ನೀನು.
ಹೃದಯಕಮಲ
ಅರಳದವರಲ್ಲಿ
ಇರಲೊಲ್ಲೆಯಯ್ಯಾ
ನೀನು.
ಎನ್ನಲ್ಲಿ
ಏನುಂಟೆಂದು
ಕರಸ್ಥಲವನಿಂಬುಗೊಂಡೆ
ಹೇಳಾ
ಚೆನ್ನಮಲ್ಲಿಕಾರ್ಜುನಯ್ಯಾ
?